ಸಮುಚ್ಚಯ ಪದಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಳಬಾಯಿ ಪದದ ಅರ್ಥ ಏನು

ಪೀಠಿಕೆ :[ಬದಲಾಯಿಸಿ]



ಸಮುಚ್ಚಯ ಪದಗಳು ಇದು ಚತುರ್ವೇದ, ಅಷ್ಟದಿಕ್ಪಾಲಕರು, ಏಕಾದಶ ರುದ್ರರು ಮೊದಲಾದ ಸಮೂಹ ಪದಗಳ ಪಟ್ಟಿ (ಕೋಶ) ; ವಾಸ್ತವವಾಗಿ ಕನ್ನಡ ವ್ಯಾಕರಣದಲ್ಲಿ ಬರುವುದಿಲ್ಲ. ಆದರೆ ಇಂಗ್ಲಿಷ್ ವ್ಯಾಕರಣ ದಲ್ಲಿ ಸಮೂಹ ಪದಗಳ ವಿಭಾಗವಿದೆ. (ಕಲೆಕ್ಟಿವ್ ನೌನ್ಸ್ ). ಈ ಬಗೆಯ ಪದಗಳನ್ನು ಹೊಸದಾಗಿ ನಾಮಪದಗಳ ಗುಂಪಿಗೆ ಸೇರಿಸ ಬಹುದು. "ತ್ರಿಕಾಲ" ; "ಚತುರ್ವಿಧ ಪುರುಷಾರ್ಥ"; "ದ್ವಾದಶ ಆದಿತ್ಯರು" ಇತ್ಯಾದಿ ಸಮೂಹ ಪದಗಳನ್ನು ಹುಡುಕಲು ಈ ತಾಣ ಅನುಕೂಲ .

ಏಕಮ್[ಬದಲಾಯಿಸಿ]


  • ಏಕಮ್ ಸತ್ (ಇದು ಸಮುಚ್ಚಯ ಪದಕ್ಕೆ ಸೇರದು)

ದ್ವಯ[ಬದಲಾಯಿಸಿ]


  • ೧. ತತ್ವ ದ್ವಯ  :- ೧.ಜೀವ ,೨. ಆತ್ಮ . ( ಜೀವಾತ್ಮ ; ಪರಮಾತ್ಮ); ೧)ಕ್ಷೇತ್ರ ; ೨) ಕ್ಷೇತ್ರಜ್ಞ
  • ೨. ಪಕ್ಷ ದ್ವಯ - ೧) ಶುಕ್ಲ ೨) ಕೃಷ್ಣ
  • ೩. ವಚನ ದ್ವಯ -೧) ಏಕ ೨) ಬಹು
  • ೪. ಸೂತಕ ದ್ವಯ - ೧) ಜಾತ ೨) ಮರಣ (ಮೃತ)
  • ೫. ಅಯನ ದ್ವಯ - ೧) ಉತ್ತರ, ೨) ದಕ್ಷಿಣ
  • ೬.ಮಾಯಾ ಶಕ್ತಿ ದ್ವಯ :- ೧) ಆವರಣ ; ೨. ವಿಕ್ಷೇಪ

ತ್ರಯ ಗಳು[ಬದಲಾಯಿಸಿ]


  • ೧. ಅಧ್ಯಾತ್ಮ ಶಾಸ್ತ್ರ ತ್ರಯ :- ೧. ಸಾಂಖ್ಯ ; ೨.ವೇದಾಂತ; (೩. )ಮೀಮಾಂಸ
  • ೨. ಸೂತ್ರ ತ್ರಯ  :- ೧. ಸಾಂಖ್ಯ ೨. ಯೋಗ ೩. ಬ್ರಹ್ಮ
  • ೩. ಪರಿಚ್ಛೇದ ತ್ರಯ  :- ೧. ದೇಶ; ೨. ಕಾಲ ೩. ವಸ್ತು
  • ೪. ಆತ್ಮ ತ್ರಯ  :- ೧. ಪರಮಾತ್ಮ; ೨. ಅಂತರಾತ್ಮ ೩. ಜೀವಾತ್ಮ
  • ೫. ಗುಣ ತ್ರಯ :- ೧.ಸತ್ವ ಗುಣ; ೨. ರಜೋ ಗುಣ ೩. ತಮೋ ಗುಣ.
  • ೬. ತ್ರಿ ಮೂರ್ತಿ  :- ೧.ವಿಷ್ಣು, ೨. ಬ್ರಹ್ಮ,೩.ಶಿವ.
  • ೭. ತ್ರಿಕರಣ  :-೧. ಕಾಯ.೨.ವಾಕ್ಕು, ೩.ಮನಸ್ಸು, (ಕಾಯಾ- ವಾಚಾ -ಮನಸಾ)
  • ೮. .ತ್ರಿಪುಟ ತ್ರಯ  : ೧. ಜ್ಞಾತೃ (ಅರಿಯುವವನು)೨. ಜ್ಞಾನ ೩ (ಅರಿವು). ಜ್ಞೇಯ (ಅರಿಯಲ್ಪಡುವುದು)
  • ೯. ತ್ರಿಜಗ  :- ೧.ಸ್ವರ್ಗ, ೨. ಮರ್ತ್ಯ; ಭೂಮಿ, ೩.ಪಾತಾಳ.
  • ೧೦. ತ್ರಿ ಪಥ :- ತ್ರಿಜಗ- ೧.ಸ್ವರ್ಗ, ೨.ಭೂಮಿ, ೩.ಪಾತಾಳ.
  • ೧೧. ತ್ರಿಭುವನ, :- (ಭುವನ ತ್ರಯ) ೧.ಸ್ವರ್ಗ, ೨.ಭೂಮಿ, ೩.ಪಾತಾಳ.
  • ೧೨. ಉಪಾದಿ ತ್ರಯ : ಕರ್ತೃ ; ೨ ಭೋಕ್ತೃ ;೩ ವಿಭೂತಿಗಳು; ೧. (ಅವಿಚ್ಚಿನ್ನ ?) ವಿಶ್ಚಿನ್ನ  ; ೨. ಪ್ರತಿಬಿಂಬ. ೩.ವಿಕ್ಷೇಪ
  • ೧೩. ತ್ರಿದಶ ೧..ಬಾಲ್ಯ, ೨.ಕೌಮಾರ, ೩.ಯೌವನ (ದೇವತೆಗಳಿಗೆ) ; ಕೌಮಾರ‍್ಯ, ಯೌವನ , ಮುಪ್ಪು. (ಮಾನವರಿಗೆ)
  • ೧೪.ಅಧ್ಯಾಸತ್ರಿರತ್ನ (ಬೌದ್ಧ ಧರ್ಮ) :- ೧..ಬುದ್ಧ, ೨.ಸಂಘ, ೩.ಧಮ್ಮ.
  • ೧೫.ಕಾಲ ತ್ರಯ  : - ೧. ಭೂತ. ೨. ವರ್ತಮಾನ ೩. ಆಗಾಮಿ (ಭವಿಷ್ಯ)
  • ೧೬. ಕಾವ್ಯ ರೀತಿ :- ೧. ಗೌಡಿ ೨. ವೈದರ್ಭಿ ೩.ಪಾಂಚಾಲಿ.
  • ೧೭. ಈಷಣ ತ್ರಯ :- ೧.ಅರ್ಥ, ೨. ಪುತ್ರ. ೩.ದಾರಾ
  • ೧೮. ತಾಪ ತ್ರಯ ;- ೧. ಆಧ್ಯಾತ್ಮಿಕ ೨. ಆಧಿಭೌತಿಕ ೩. ಅಧಿದೈವಿಕ
  • ೧೯. ತ್ರಿದೋಷ :- ವಾತ ೨. ಪಿತ್ಥ ೩.ಕಫ (ಶ್ಲೇಷ್ಮ)
  • ೨೦. ಪ್ರಸ್ಥಾನ ತ್ರಯ :- ೧) ಉಪನಿಷತ್ ; ೨) ಭಗವದ್ಗೀತೆ ; ೩.ಬ್ರಹ್ಮ ಸೂತ್ರ ( ಶ್ರೀ ಶಂಕರರ ಭಾಷ್ಯ ಗಳು)
  • ೨೧.ವರ್ಗ ತ್ರಯ :- ೧. ಕ್ಷಯ ೨. ಸ್ಥಾನ ೩. ವೃದ್ಧಿ
  • ೨೨.ಅವಸ್ಥಾತ್ರಯ :- ೧,ಕಾಶ್ಯ ೨. ಜಾಗರಣೆ ೩ ಸಂತಾಪ|| ೧. ಜಾಗರ ೨. ಸ್ವಪ್ನ ೩. ಸುಷುಪ್ತಿ ಅವಸ್ಥೆ
  • ೨೩. ಪ್ರಾರಬ್ಧ ತ್ರಯ :- ೧. ಇಚ್ಛಾ ೨. ಆನಿಚ್ಛಾ ೩. ಪರೇಚ್ಛಾ
  • ೨೪.ಶಕ್ತಿ ತ್ರಯ :- ೧. ಪ್ರಭು ೨. ಮಂತ್ರ. ೩. ಉತ್ಸಾಹ
  • ೨೫. ಶಕ್ತಿ ಪೀಠ ತ್ರಯ  :- ೧. ದಾಹಶಕ್ತಿ (ಜ್ವಾಲಾ ಮುಖಿ) ೨. ಕಾಳೀ ಶಕ್ತಿ(ಉಜ್ಜಯನಿ) ೩. ರಾಹುಶಕ್ತಿ (ಧರ್ಮಸ್ಥಳ)
  • ೨೬. ಸ್ಥಾನ ತ್ರಯ (ಸ್ವರ) ೧. ಕಲ ೨. ಮಂದ್ರ ೩. ತಾರ ( ಮೃದು , ಮಧುರ , ಕಾಠಿಣ್ಯ)
  • ೨೭. ಕಾಲ ತ್ರಯ :- ೧. ವರ್ತಮಾನ, ೨. ಭೂತ ೩. ಭವಿಷ್ಯ
  • ೨೮. ವಾಗರ್ಥ ತ್ರಯ  :- ೧. ನಾಮ ಪದ ೨. ಕ್ರಿಯಾಪದ ೩. ಅವ್ಯಯ. (ವ್ಯಾಕರಣ)
  • ೨೯. ವ್ಯುತ್ಪತ್ತಿ ಬೇಧ ತ್ರಯ  :- ೧. ಸಿದ್ಧ ೨. ವ್ಯುತ್ಪನ್ನ ೩. ಸಮಾಸ
  • ೩೦. ಧಾತ್ವರ್ಥ ತ್ರಯ  :- ೧. ಸಕರ್ಮ ೨. ಅಕರ್ಮ ೩. ಪ್ರಯೋಜಕ
  • ೩೧. ರೂಪ ತ್ರಯ  :- ೧. ಅವ್ಯಾತ್ಮಕ ೨. ನಾಮಾತ್ಮಕ ೩. ಪುರುಷಾತ್ಮಕ
  • ೩೨. ಆರ್ಥ ವಿಶೇಷ :- ೧. ಸಂಭವ ೨. ಅಭಾವ ೩. ವಿಧಿ
  • ೩೩. ಪುರುಷ ತ್ರಯ :-೧ ಉತ್ತಮ ೨. ಮಧ್ಯಮ ೩. ಪ್ರಥಮ
  • ೩೪. ಲಿಂಗ ತ್ರಯ :- ೧. ಪುಲ್ಲಿಂಗ, ೨. ಸ್ತ್ರೀಲಿಂಗ ೩. ನಪುಂಸಕ ಲಿಂಗ
  • ೩೫. ತ್ರಿಫಲ :- ೧. ಶಾಂತಿ (ತಾರಿ) ೨. ಅಣಿಲೆ ೩. ನೆಲ್ಲಿ
  • ೩೬. ತ್ರ್ಯೂಷಣ  :- ೧. ಹಿಪ್ಪಲಿ ೨. ಮೆಣಸು ೩.ಶುಂಠಿ
  • ೩೭. ರಾಜ ತೇಜಸ್ತ್ರಯ :- ೧. ಯುದ್ಧದಲ್ಲಿ ಹಿಂತಿರುಗದ ಗುಣ ೨.ಯುದ್ಧಕ್ಕೆ ಕರೆದರೆ ಹೋಗುವುದು. ೩.ಭಾರ‍್ಯಾ ಸಂರಕ್ಷಣ (ಧರ್ಮಶಾಸ್ತ್ರದಲ್ಲಿ ದೇವಲ ವಚನ ಸಂ.ಪ.೧೦೬ ಅಧ್ಯಾಯ.
  • ೩೮. ತ್ರಿಕರ್ಮ :- ೧. ಯಜನ ೨. ಅಧ್ಯಯನ ೩. ದಾನ
  • ೩೯. ತ್ರಿಕಾಲ :- ೧.. ಪ್ರಾತ: ೨. ಸಾಯಂ. ೩. ಸಂಧ್ಯಾ (ಕಾಲತ್ರಯ-ನೋ.)
  • ೪೦. ತ್ರಿಗಣ :- (ತ್ರಿವರ್ಗ) ೧. ದೇವ, ೨. ಮಾನವ. ೩. ರಾಕ್ಷಸ.
  • ೪೧. ತ್ರಿದಂಡ :- ೧. ವಾಗ್ದಂಡ ೨. ಅರ್ಥ(ಧನ) ದಂಡ ೩. ಕಾಯ ದಂಡ.
  • ೪೨. ತ್ರಿಪಥ ೧. :- ೧.ಭೂಮಿ ೨. ಆಕಾಶ ೩. ಸ್ವರ್ಗ / ವಾಯು ಮಂಡಲ/ಭೂ ವ್ಯೋಮ ಪಾತಾಲ
  • ೪೩. ತ್ರಿಲೋಹ :- ೧. ಚಿನ್ನ ೨. ಬೆಳ್ಳಿ ೩. ತಾಮ್ರ
  • ೪೪. ತ್ರಿ ಸ್ಥಲೀ :- ೧.ಕಾಶಿ ೨.ಪ್ರಯಾಗ ೩. ಗಯಾ
  • ೪೫. ತ್ರಿವೇಣಿ ೧. :- ಗಂಗಾ ೨.ಯಮುನಾ ೩.ಸರಸ್ವತಿ
  • ೪೬. ಕಥಾತ್ರಯ :- ೧. ರಾಜ. ೨.ಭೋಗ ೩.ಚೋರ
  • ೪೭. ವಾತ ತ್ರಯ :- ೧. ಘನ ೨. ಲಿಂಬು. ೩. ತನುವಾತ
  • ೪೮. ಅಜ್ಞಾನ ತ್ರಯ :- ೧. ಮತ್ಯ ೨. ಶ್ರುತ ೩. ಅವಧ್ಯ
  • ೪೯. ತ್ರಿ ಜ್ಞಾನ :- ೧. ಮತಿ ೨. ಶ್ರುತ ೩. ಅವಧಿ.
  • ೫೦. ತ್ರಿಕಟುಕ  :- ತ್ರ್ಯೂಷಣ
  • ೫೧. ತ್ರಿದೋಷ  :- ತ್ರಿಧಾತು
  • ೫೨. ಮಂಡಲ ತ್ರಯ :- ೧. ಸೂರ್ಯ ೨.. ಚಂದ್ರ ೩. ಅಗ್ನಿ
  • ೫೩. ತ್ರಿನಾಡಿ :- ೧. ಇಡಾ ೨. ಪಿಂಗ ಳ ೩. ಸುಷುಮ್ನಾ
  • ೫೪. ಶಾಸ್ತ್ರ ತ್ರಯ :- ೧. ಶ್ರುತಿ. ೨. ಯುಕ್ತಿ. ೩.ಸ್ವಾನುಭವ (ಪ್ರಮಾಣ ತ್ರಯ ?)
  • ೫೫. ತನು ತ್ರಯ :- ೧. ಸ್ಥೂಲ ೨. ಸೂಕ್ಷ್ಮ ೩.ಕಾರಣ
  • ೫೬. ಮಂತ್ರ ಮಲ ತ್ರಯ :- ೧. ಅನದ್ಧ (ಮಾನಸಂ) ೨. ಮಾಯಿಕ (ಮಾಯಾಭೂತಂ) ೩.ಕಾರ್ಮಣ
  • ೫೭. ವಿಕೃತಿಭಾವ ತ್ರಯ :- ೧. ಭಾವನಾ ವಿಕೃತಿಭಾವ ೨. ವರ್ತನ ವಕೃತಿ ಭಾವ ೩.ಮೋಹನ ವಿಕೃತಿಭಾವ

-

ಚತುಷ್ಠಯಂ[ಬದಲಾಯಿಸಿ]


  • ೧. ಚತುರ್ವರ್ಣ :-೧.ಬ್ರಹ್ಮ ೨. ಕ್ಷತ್ರಿಯ . ೩.ವೈಶ್ಯ ೪. ಶೂದ್ರ
  • ೨. ಸಾಧನಾ ಚತುಷ್ಠಯ :- ೧.ನಿತ್ಯಾನಿತ್ಯ ವಿವೇಕ. ೨. ಇಹಾಮುತ್ರ ಫಲ ಭೋಗ ವಿರಾಗ. ೩. ಸಮಾಧಿ ಷಟ್ಕ ಸಂಪತ್ತಿ. ೪. ಮುಮುಕ್ಷತ್ವ.
  • ೩. ಚತುರ್ ಧರ್ಮಲಕ್ಷಣ :- ೧.ವೇದ, ೨.ಸ್ಮೃತಿ, ೩.ಸದಾಚಾರ, ೪.ಆತ್ಮಕ್ಕೆ ಪ್ರಿಯವಾದುದು. (ವೇದಃ ಸ್ಮೃತಿಃ ಸದಾಚಾರಃ ಸ್ವಸ್ಯಚ ಪ್ರಿಯಮಾತ್ಮನಃ | ಏತಚ್ಚತುರ್ವಿಧಂ ಪ್ರಾಹುಃ ಸಾಕ್ಷಾತ್ ಧರ್ಮಸ್ಯ ಲಕ್ಷಣಂ || ಮನು ಸ್ಮೃತಿ)
  • ೪. .ಚತ್ತಿನ (ಚಿತ್ತದ) ಚತುರ್ವಿಧ ಬೇಧಗಳು :- ೧. ಜೀವ ೨. ಈಶ್ವರ. ೩. ಕೂಟಸ್ಥ. ೪. ಬ್ರಹ್ಮ.
  • ೫. ಚತುರ್ದ್ರಾವಿಡ :- ೧. ಕಮ್ಮೆ ೨. ಕನ್ನಡಿಗ ೩. ಆಂದ್ರ ೪. ದ್ರಾವಿಡ
  • ೬. ಚತುರ್ವೇದ :- ೧. ಋಕ್ ೨. ಯಜು ೩. ಸಾಮ ೪.ಅಥರ್ವ
  • ೭. ವೇದಾಂಗ ಚತುಷ್ಠಯ :- ೧. ಮೀಮಾಂಸ. ೨. ನ್ಯಾಯ. ೩. ಪುರಾಣ. ೪. ಸ್ಮ ತಿ
  • ೮. ಉಪವೇದ ಚತುಷ್ಠಯ, :- ೧.. ಆಯುರ್ವೇದ, ೨.ಅರ್ಥವೇದ, ೩. ಧನುರ್ವೇದ, ೪. ಗಾಂಧರ್ವವೇದ,
  • ೯. ವೇದಾಂಗ ಚತುಷ್ಟಯ :- ೧.ವೇದ, ೨.ಬ್ರಾಹ್ಮಣ, ೩.ಅರಣ್ಯಕ, ೪.ಉಪನಿಷತ್ತು
  • ೧೦. . ಆಂತಃಕರಣಚತುಷ್ಠಯ, :- ೧. ಮನಸ್ಸು., ೨. ಬುದ್ಧಿ., ೩. ಅಹಂಕಾರ, ೪.ಚಿತ್ತ.
  • ೧೧. ಪ್ರಕೃತಿ ಧರ್ಮ ಚತುಷ್ಟಯ :- ೧) ಆಹಾರ (ಹಸಿವು), ೨) ನಿದ್ರಾ, ೩) ಭಯ (ಪ್ರಾಣರಕ್ಷಣೆಗಾಗಿ ಭಯಪಡುವುದು, ಆತ್ಮ ರಕ್ಷಣೆ ಮಾಡಿಕೊಳ್ಳುವುದು), ೪) ಮೈಥುನ (ವಂಶಾಭಿವೃದ್ಧಿ ಕ್ರಿಯೆ)
  • ೧೨. ಶ್ರೀಕೃಷ್ಣನ ರಥ ಹಯ ಚತುಷ್ಟಯ :- ೧. ಶೈಬ್ಯ, ೨. ಮೇಘ ಪುಷ್ಪ, ೩. ಸುಗ್ರೀವ, ೪. ವಲಾಹಕ
  • ೧೩. ಅನಂತ ಚತುಷ್ಟಯ :- ೧. ಅನಂತ ಜ್ಞಾನ, ೨. ಅನಂತವೀರ್ಯ, ೩. ಅನಂತ ದರ್ಶನ ?, ೪. ಅನಂತ ಸುಖ
  • ೧೪. ಚತುರ್ದಿಕ್ಕು :- ೧. ಪೂರ್ವ , ೨.ಪಶ್ಚಿಮ, ೩. ದಕ್ಷಿಣ , ೪. ಉತ್ತರ.
  • ೧೫. ಆಶ್ರಮ ಚತುಷ್ಠಯ :- ೧. ಬ್ರಹ್ಮಚಾರಿ, ೨. ಗ್ರಹಸ್ಥ, ೩.ವಾನಪ್ರಸ್ಥ, ೪.ಯತಿ (ಸಂನ್ಯಾಸ)
  • ೧೬. ಚತುರ್ವರ್ಗ :- ೧. ಧರ್ಮ, ೨. ಅರ್ಥ ೩. ಕಾಮ, ೪. ಮೋಕ್ಷ
  • ೧೭. ಚತುರ್ಯುಗ :- ೧ಕೃತ, ೨. ತ್ರೇತಾ, ೩. ದ್ವಾಪರ, ೪. ಕಲಿ. (೪,೩೨,೦೦೦ವರ್ಷ-ವಿ.ಪು.) ೧೮. ಚತುರ್ವಿಧ ಮಹಾನಾಯಕರು :- ೧. ಧೀರೋದಾತ್ತ, ೨. ಧೀರೋದ್ಧತ, ೩. ಧೀರ ಲಲಿತ, ೪.ಧೀರಶಾಂತ.
  • ೧೯. ಚತುರ್ವಿಧ ಶೃಂಗಾರ ನಾಯಕರು :- ೧. ಅನುಕೂಲ, ೨.ದಕ್ಷಿಣ, ೩. ದೃಷ್ಟ, ೪. ಶಠ
  • ೨೦. ಮೋಹ ಚತುಷ್ಟಯ :- ೧. ಲಜ್ಜಾ ಮೋಹ, ೨.ವಿಭವ ಮೋಹ, ೩. ಕರುಣಮೋಹ, ೪. ನಿಜ ಮೋಹ.
  • ೨೧. ಚತುರ್ವಿಧ ಭೋಗ ಸುಖಿಗಳು :- ೧. ವಿಟ, ೨. ವಿದೂಶಕ, ೩. ಪೀಠಮರ್ದಕ, ೪. ನಾಗರಿಕ
  • ೨೨. ವಿಯೋಗ ಚತುಷ್ಟಯ :- ೧. ಪುನರ್ವಾನುರಾಗ, ೨. ಮಾನಾಖ್ಯ. ೩.ಪ್ರವಾಸ, ೪ಕರುಣಾತ್ಮಕ
  • ೨೩. ಚತುರಂಗ ಬಲ :- ೧, ಹಸ್ತಿ (ಆನೆಯ ಸೈನ್ಯ) , ೨.ಆಶ್ವ. ೩. ರಥ. ೪. ಪದಾತಿ.
  • ೨೪. ಚತುರೋಪಾಯ :- ೧. ಸಾಮ (ಸಮಾಧಾನ ಪಡಿಸುವುದು) ೨.ದಾನ (ಲಂಚ ಕೊಡುವುದು) .೩ ಬೇಧ (ಕಲಹ ಹುಟ್ಟಿಸುವುದು) .೪. ದಂಡ (ಶಿಕ್ಷಿಸುವುದು)
  • ೨೫. ಚತುರ್ವಿಧ ವಾದ್ಯ  :-೧. ತತ (ತಂತಿಯುಳ್ಳದ್ದು), ೨.ಆನದ್ಧ (ಚರ್ಮವುಳ್ಳದ್ದು), ೩.ಘನ (ಕಂಚು ಮೊದಲಾದ ಲೋಹದ್ದು. ೪. ಸಶಿರ (ಊದಿ ಬಾರಿಸುವುದು).
  • ೨೬. ಚತುರ್ವಿಧ ಕಾರ್ಯ  :- ೧. ವೃತ್ತಿ, ೨. ಪರಿಣಾಮ, ೩.ಆರಂಭ, ೪. ವಿವರ್ತ
  • ೨೭. ಜ್ಞಾನ ಫಲ ಚತುಷ್ಠಯ :- ೧. ದುಃಖಾಪಸರ್ಪ ೨.ಕಾಮಾಪ್ತಿ, ೩.ಕೃತಕೃತ್ಯತ್ವ , ೪.ಪ್ರಾಪ್ಯ ಪ್ರಾಪ್ತಿ
  • ೨೮. ಅಭಾವ ಚತುಷ್ಠಯ :- ೧.ಪ್ರಾಗಭಾವ ೨. ಪ್ರಧ್ವಂಸಭಾವ. ೩. ಆನ್ಯೋನ್ಯಭಾವ. ೪.ಅತ್ಯಂತಭಾವ

ಪಂಚ[ಬದಲಾಯಿಸಿ]


  • ೧. ಪಂಚ ಭೂತಗಳು  : ೧.ಪೃಥ್ವಿ, ೨.ಆಪ, ೩.ತೇಜ, ೪.ವಾಯು, ೫.ಆಕಾಶ.

ಅಧಿದೇವತೆಗಳು ೧.ಬ್ರಹ್ಮ , ೨. ವಿಷ್ಣು, ೩.ರುದ್ರ, ೪.ಈಶ್ವರ, ೫. ಸದಾಶಿವ.

ಇವುಗಳ ವ್ಯಾಪಾರಗಳು ೧.ದಾರಣ, ೨. ಪಿಂಡೀಕರಣ, ೩.ಪಾಕ, ೪.ವ್ಯೂಹಕರಣ, ೫.ಅವಕಾಶ

ಪಂಚ ಪ್ರಾಣ

  • ೨. (ವಾಯುಪಂಚಕ) :- ೧.ಪ್ರಾಣ ,೨.ಅಪಾನ, ೩. ಉದಾನ, ೪.ವ್ಯಾನ, ೫. ಸಮಾನ
  • ೩. ಆತ್ಮನ ಪಂಚ ಸ್ವರೂಪ ಲಕ್ಷಣ :- ೧.ಸತ್, ೨. ಚಿತ್, ೩. ಆನಂದ, ೪. ನಿತ್ಯ, ೫. ಪರಿಪೂರ್ಣ.
  • ೪. ಪಂಚ ಕೃತ್ಯಗಳು :- ೧. ಸೃಷ್ಟಿ, ೨. ಸ್ಥಿತಿ, ೩. ಸಂಹಾರ, ೪. ನಿಯಮನ, ೫. ಅನುಪ್ರವೇಶ.
  • ೫. ಮಾಯಾಪಂಚ ಲಕ್ಷಣ :- ೧.ಅಸತ್ತು, ೨.ಜಡ, ೩.ದಃಖ, ೪. ಅನಿತ್ಯ, ೫. ಖಂಡಿತ.
  • ೬. ಮಾಯಾ ಪಂಚಕ :- ೧. ತಮಸ್ಸು, ೨ಮಾಯೆ, ೩. ಮೋಹ, ೪. ಅವಿದ್ಯೆ., ೫. ಅನೃತಾತ್ಮಿಕೆ
  • ೭. ಜ್ಞಾನೇಂದ್ರಿಯ ಪಂಚಕ :- ೧. ಶ್ರೋತೃ, ೨. ತ್ವಕ್, ೩. ಚಕ್ಷು, ೪. ರಸನ (ಜಿಹ್ವಾ) , ೫. ಘ್ರಾಣ
  • ೮. ಕರ್ಮೇಂದ್ರಿಯ ಪಂಚಕ :- ೧. ವಾಕ ೨. ಪಾಣಿ, ೩. ಪಾದ, ೪ ಉಪಸ್ಥ,.೫. ಪಾಯು. -> ಅಧಿದೇವತೆಗಳು: ೧. ಅಗ್ನಿ, ೨. ಇಂದ್ರ, ೩.ರವಿ, ೪.ಪ್ರಜಾಪತಿ, ೫.ಮೃತ್ಯು
  • ೯. ಪಂಚಾಧಿಕಾರಿಗಳು :- ೧. ಕರ್ಮಿ, ೨. ಮುಮುಕ್ಷು, ೩. ಅಬ್ಯಾಸಿ, ೪. ಅನುಭವಿ, ೫. ಅಮೂಢ
  • ೧೦. ಉಪವಾಯು ಪಂಚಕ :- ೧. ನಾಗ, ೨.ಕೂರ್ಮ, ೩.ಕೃಕರ, ೪.ದೇವಗತ್ತ, ೫.ಧನುಂಜಯ.
  • ೧೧. ಪಂಚ ಶಾಸ್ತ್ರ :- ೧. ಲೌಕಿಕ, ೨. ವೈದಿಕ, ೩. ಆದ್ಯಾತ್ಮಿಕ, ೪. ಅತಿ ಮಾರ್ಗಿಕ, ೫.ಮಂತ್ರ
  • ೧೨. ಪಂಚಾವಸ್ಥೆಗಳು :- ೧. ಜಾಗರ, ೨.ಸ್ವಪ್ನ, ೩.ಸುಷುಪ್ತಿ, ೪.ತುರ್ಯ(ತುರೀಯ) ೫.ತುರ್ಯಾತೀತ
  • ೧೩. ಪಂಚ ಕೋಶಗಳು :- ೧. ಅನ್ನಮಯ, ೨.ಪ್ರಾಣಮಯ, ೩.ಮನೋಮಯ, ೪ವಿಜ್ಞಾನ ಮಯ, ೫. ಆನಂದ ಮಯ.
  • ೧೪. ಜೀವನ್ಮುಕ್ತ ಪ್ರಾಯೋಜಕ ಪಂಚಕ :-೧. ಜ್ಞಾನ ರಕ್ಷೆ, ೨.ತಪಸ್ಸು, ೩.ಸರ್ವಸಂವಾದ, ೪. ದಃಖಕ್ಷಯ, ೫.ಸುಖವಿರ್ಭಾವ
  • ೧೫. ಪಂಚ ಮಹಾಪಾತಕ :-೧. ಬ್ರಹ್ಮ ಹತ್ಯ, ೨. ಸರಾಪಾನ, ೩. ಸ್ವರ್ಣಸ್ತೇಯ, ೪.ಗುರುತಲ್ಪ ಗಮನ, ೫. ತತಸಂಯೋಗಿ (ಅವರ ಸಹವಾಸ ಮಾಡುವವನು).
  • ೧೬. ಪಂಚ ಕ್ಲೇಶಗಳು :- ೧. ಅವಿದ್ಯೆ, ೨ಆಸ್ಮಿತ೩. ರಾಗ, ೪.ದ್ವೇಷ, ೫.ಅಭಿನಿವೇಶ
  • ೧೭. ಪಂಚ ದುರ್ಗ ಗಳು :- ೧.ಗಿರಿದುರ್ಗ, ೨.ಜಲದುರ್ಗ. ೩.ಅಗ್ನಿ ದುರ್ಗ, ೪.ಶಸ್ತ್ರ ದುರ್ಗ, ೫.ವಾಯುದುರ್ಗ
  • ೧೮. ಪಂಚ ತಂತ್ರ :- ೧.ಭೇದ ತಂತ್ರ, ೨. ಪರೀಕ್ಷಾತಂತ್ರ, ೩. ವಿಶ್ವಾಸತಂತ್ರ, ೪. ವಂಚನಾತಂತ್ರ, ೫. ಮಿತ್ರಕಾರ್ಯ ತಂತ್ರ
  • ೧೯. ಪಂಚ ಬ್ರಹ್ಮ ಪುತ್ರರು :-೧. ಸನಕ, ೨. ಸನಂದನ, ೩. ಸನಾತನ, ,೪. ಸನತ್ಸುಜಾತ ೫.ಸನತ್ಕುಮಾರ .

-

  • ೨೦. ಪಂಚ ಮಂತ್ರಬಾಣ :-
    1. ೧)೧. ಉನ್ಮಾದನ, ೨. ಮದನ, ೩, ಮೋಹನ. ೪.ಸಂತಾಪನ, ೫. ವಶೀಕರಣ.
    2. ೨)(ತಂತ್ರ), ದೇವಿಯ ಪಂಚ ಬಾಣಗಳು :- ೧.ಶಬ್ದ, ೨. ಸ್ಪರ್ಶ, ೩ ರೂಪ .೪ರಸ, .೫.ಗಂಧ (ಮನಸ್ಸೇ ಅವಳ ಬಿಲ್ಲು)
    3. ೩)೧.ಕಮಲ,,೨.ಕೈರವ, ೩.ರಕ್ತಕಲ್ಹಾರ, ೪.ಇಂದೀವರ, ೫.ಚೂತ,(ಈ ೫ ಪುಷ್ಪಗಳು,ದೇವಿಯ ಸ್ಥೂಲ ಬಾಣಗಳು)
    4. ೪)೧.ಹರ್ಷಣ, ೨.ರೋಚನ, ೩.ಮೋಹನ, ೪.ಶೋಷಣ, ೫.ಮಾರಣ, (ಅವಳ ಆಯುಧಗಳು)
    5. ೫)೧.ಕ್ಷೋಭಣ, ೨.ದ್ರಾವಣ, ೩.ಆಕರ್ಷಣ, ೪.ವಶ್ಯ, ೫.ಉನ್ಮಾದ, (ದೇವಿಯ ಐದು ಬಾಣಗಳು :ಜ್ಞಾನಾರ್ಣವ),
    6. ೬)೧.ಮದನ, ೨.ಉನ್ಮಾದನ, ೩.ಮೋಹನ, ೪.ದೀಪನ, ೫.ಶೋಷಣ, (ದೇವಿಯ ಪಂಚ ಬಾಣಗಳು : (ತಂತ್ರ ಲಲಿತ ಸ.)

-

  • ೨೧. ಪಂಚ ಸರೋವರ :-೧.ಬಿಂದು ಸರೋವರ (ಸಿದ್ದಪುರ), ೨.ನಾರಾಯಣ ಸರೋವರ (ಕಚ್ಛ), ೩.ಪಂಪಾ ಸರೋವರ (ಕರ್ನಾಟಕ), ೪.ಪಷ್ಕರ ಸರೋವರ , (ರಾಜಸ್ಥಾನ), ೫.ಮಾನಸ ಸರೋವರ, (ತಿಬೆಟ್)
  • ೨೨. ಕುಸುಮಾಸ್ತ್ರ ಪಂಚಕ :- ೧. ಅರವಿಂದ, ೨. ಅಶೋಕ, ೩.ಚೂತ, ೪. ಮಲ್ಲಿಕಾ, ೫. ನೀಲೋತ್ಪಲ
  • ೨೩. ನಿಧಿಧ್ಯಾಸನ ಯೋಗ ಪಂಚಕ :- ೧. ಮಂತ್ರ ಯೋಗ, ೨. ಸ್ಪರ್ಶ ಯೋಗ, ೩. ಭಾವ ಯೋಗ, ೪.ಅಭಾವ ಯೋಗ, ೫.ಮಹಾಯೋಗ
  • ೨೪. ಪಂಚ ಕನ್ಯೆಯರು :- ೧) ಅಹಲ್ಯಾ . ೨) ದ್ರೌಪದಿ . ೩).ತಾರಾ (ವಾಲಿಯ ಪತ್ನಿ), ೪) ತಾರಾ (ಚಂದ್ರನ ಪತ್ನಿ) . ೫). ಮಂಡೋದರಿ . (ಕೆಲವರು ಸೀತಾ ಸೇರಿಸುತ್ತಾರೆ -ಅದು ಸರಿಯಲ್ಲ ;- ಈ ಮೇಲಿನವರಿಗೆಲ್ಲಾ ಎರಡು ಸಂಬಂಧವಿದೆ -ಆದರೂ ಕನ್ಯೆಯರು- ಸೀತೆ ಹಾಗಲ್ಲ)
  • ೨೫. ಪಂಚ ರತ್ನ  :-
    1. (ನಾಲ್ಕು ಬಗೆ) . ೧.ಸ್ವರ್ಣ ೨.ರಜತ, ೩. ಮುಕ್ತ, ೪. ರಾಜಾವರ್ತ, ೫.ಪ್ರವಾಳ..
    2. . ೧.ನೀಲ, ೨.ಪದ್ಮರಾಗ,೩. ವಜ್ರ, ೪. ಮೌಕ್ತಿಕ, ೫. ಪ್ರವಾಳ
    3. ೧. ಸ್ತ್ರೀ, ೨.ಖಡ್ಗ, ೩. ಅಶ್ವ, ೪, ಭೂ, ೫.ವಿದ್ಯಾ,
    4. . ೧. ಕನಕ, ೨. ಹೀರಕ, ೩. ನೀಲ, ೪. ಪದ್ಮ ರಾಗ, ೫. ಮೌಕ್ತಿಕ.
  • ೨೬. .) ಪಂಚವರ್ಣ :- ೧. ಬಿಳುಪು, ೨.ಕೆಂಪು, ೩. ಕಪ್ಪು, ೪. ಹಳದಿ, ೫.ಪಚ್ಚೆ(ಹಸಿರು). (ರೂಢಿಗತ)
  • ೨೭. ಪಂಚ ವರ್ಗ :- ೧. ಕ, ೨.ಚ, ೩. ಟ, ೪ತ, ೫. ಪ. ವರ್ಗಗಳು (ವ್ಯಂಜನಗಳು)
  • ೨೮. ಪಂಚ ಲೋಹ  :-೧.ತಾಮ್ರ, ೨. ಹಿತ್ತಾಳೆ ?, ೩. ತವರ, ೪. ಸೀಸ, ೫. ಕಬ್ಬಿಣ. (ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ
  • ೨೯. . ಪಂಚ ಸೂನಗಳು :- ೧. ಒಲೆ, ೨. ತಿರುಕಲ್ಲು, ೩. ಕಸಬರಿಗೆ, ೪.ಒನಿಕ-ಒರಳು, ೫.ನೀರಗಡಿಗೆ
  • ೩೦. ಪಂಚ ಶಿಖೆ ೧. ಜುಟ್ಟು,, :- ೨. ಕಂಕಳ ಕೂದಲು, ೩. ರೆಪ್ಪೆ,ಯ ಕೂದಲು, ೪. ಹುಬ್ಬಿನ ರೋಮ, ೫. ಬೆನ್ನಿನ ರೋಮ
  • ೩೧. ಪಂಚಾಂಗ (ಮೂರು ಬಗೆ) :-
    1. ೧.ತಿಥಿ, ೨. ವಾರ, ೩. ನಕ್ಷತ್ರ, ೪. ಯೋಗ, ೫. ಕರಣ.
    2. . ೧. ತ್ವಕ್, ೨. ಪತ್ರ, ೩. ಕುಸುಮ, ೪. ಮೂಲ, ೫. ಫಲ
    3. . .೧. ಬಾಹು, ೨.ಜಾನು, ೩.ಶಿರ, ೪. ವಕ್ಷಸ್ಸು, ೫. ದೃಕ್
  • ೩೨. ಪಂಚಾಗ್ನಿ ಗಳು (ಮೂರು ವಿಧ)
    1. . ೧.ಪೂರ್ವ, ೨.ದಕ್ಷಿಣ, ೩.ಪಶ್ಚಿಮ, ೪.ಉತ್ತರ, ೫.ಮೇಲೆ-ಸೂರ್ಯ.
    2. . ೧.ದಕ್ಷಿಣ, ೨.ಅನ್ವಾಹರ್ಯಪೂನ, ೩.ಗಾರ್ಹಪತ್ಯ, ೪.ಆಹವನೀಯ, ೫.ಸಬ್ಯ,-ಅವಪತ್ಯ.
    3. . ೧. ದ್ಯು, ೨.ಪರ್ಜನ್ಯ, ೩.ಪೃಥಿವೀ, ೪.ಪುರುಷ, ೫.ಯೋಷಿತ್. (ಛಾಂದೊಗ್ಯ,ಮುಂಡಕ)
  • ೩೩. ಪಂಚಾಮೃತ  :-. ೧. ಹಾಲು, ೨.ತುಪ್ಪ, ೩. ಮೊಸರು, ೪.ಮಧು, ೫.ಶರ್ಕರ.
  • ೩೪. ಪಂಚ ಕ್ಲೇಶಗಳು :- ೧.ಅವಿದ್ಯೆ, ೨.ಅಸ್ಮಿತೆ, ೩.ರಾಗ, ೪.ದ್ವೇಷ, ೫.ಆಭಿನಿವೇಶ. (ಮುಂಡಕ)
  • ೩೫. ಪಂಚ ಪತ್ರ :- ೧. ಬರೆದು ಕೊಡುವವ, ೨. ಬರಕೊಂಬವ, ೩&೪.ಎರಡು ಸಾಕ್ಷಿ, .೫. ಬರೆವವ (ಬರೆದವ, ಬಿಕ್ಕಲಮು-ರೈಟರ್)
  • ೩೬. ಪಂಚ ಗವ್ಯ  :-೧. ಹಾಲು, ೨.ತುಪ್ಪ, ೩. ಮೊಸರು, ೪. ಗೋಮೂತ್ರ, ೫.ಗೋಮಯ
  • ೩೭. ಪಂಚತರು :- ೧.ಮಂದಾರ, ೨.ಪಾರಿಜಾತ, ೩.ಸಂತಾನ, ೪.ಕಲ್ಪವೃಕ್ಷ, ೫.ಹರಿಚಂದನ.
  • ೩೮. ಪಂಚ ಪಾಂಡವ :- ೧. ಧರ್ಮ, ೨. ಭೀಮ, ೩.ಅರ್ಜುನ, ೪. ನಕುಲ, ೫.ಸಹದೇವ
  • ೩೯. ಪಂಚ ಇಂದ್ರರು :- ೧.ವಿಶ್ವಭುಕ್, ೨.ಭೂತಧಾಮ, ೩.ಶಿಬಿ, ೪. ಶಾಂತಿ, ೫.ತೇಜಸ್ವಿ. (ಇವರೇ ಪಂಚ ಪಾಂಡವರಾಗಿ ಹುಟ್ಟಿ ಹಿಂದಿನ ಜನ್ಮದಲ್ಲಿ ಮೋಹಿಸಿದ ದ್ರೌಪದಿಯನ್ನು ವಿವಾಹವಾದರು.)
  • ೪೦. .ಪಂಚ ಯಜ್ಞ  :-೧. ಬ್ರಹ್ಮಯಜ್ಞ (ಅದ್ಯಾಪನ) ೨.ಪಿತೃಯಜ್ಞ (ತರ್ಪಣ) ೩.ದೇವಯಜ್ಞ (ಹೋಮ), ೪.ಭೂತಯಜ್ಞ (ಬಲಿ), ೫. ನೃಪಯಜ್ಞ (ಮನುಷ್ಯಯಜ್ಞ ) (ಅಥಿತಿ ಪೂಜನ).,
  • ೪೧. ಪಂಚಮುದ್ರೆ :- ೧.ಶಂಖ, ೨.ಚಕ್ರ, ೩.ಗದಾ, ೪.ಪದ್ಮ, ೫.ನಂದಕ
  • ೪೨. ಪಂಚ ಲವಣ :- ೧. ಕಾಚ, ೨.ಸೈಂಧವ, ೩.ಸಾಮುದ್ರ, ೪.ಬಿಡ, ೫.ಸೌವರ್ಚ,
  • ೪೩. ಪಂಚ ರಂಗ :- ೧. ಅಂತರಂಗ, ೨.ರಣರಂಗ, ೩.ಮಧ್ಯರಂಗ, ೪.ನಾಟ್ಯರಂಗ, ೫.ಮಲ್ಲರಂಗ,
  • ೪೪. ಮಂತ್ರಾಂಗ ಪಂಚಕ :- ೧.ಕರ್ಮಾರಂಗೋಪಾಯ, ೨. ಪುರುಷ ದ್ರವ್ಯ ಸಂಪತ್ತಿ, ೩.ದೇಶಕಾಲ ವಿಭಾಗ, ೪.ವಿನಿಪಾತ್ರ ಪ್ರತಿಕಾಲ, ೫.ಕಾರ್ಯಸಿದ್ಧಿ
  • ೪೫. .ವಾಕ್ಯ ಪಂಚಾವಯವ :- ೧.ಸೂಕ್ಷ್ಮ, ೨.ಸಂಖ್ಯೆ, ೩.ಕ್ರಮ, ೪.ನಿರ್ಣಯ, ೫. ಪ್ರಯೋಜನ.
  • ೪೬. ಪಂಚಾಂಗಾಭಿನಯ :-೧. ಚಿತ್ತ, ೨. ಅಕ್ಷಿ, ೩.ಭ್ರೂ, ೪.ಹಸ್ತ, ೫.ಪಾದ,
  • ೪೭. ಪಂಚಕರ್ಮ(ವೈದ್ಯಕ) :-೧.ವಮನ ೨. ವಿರೇಚನ, ೩ನಸ್ಯ, ೪.ಅನುವಾಸನ, ೫.ನಿರೂಹ
  • ೪೮. .ಪಂಚಾವಯುವ (ತರ್ಕ? :- ೧. ಪ್ರತಿಜ್ಞಾ, ೨,ಹೇತು, ೩. ಉದಾನರಣ, ೪.ಉಪನಯ,೫.ನಿಗಮನ
  • ೪೯. ಪಂಚ ಮಕಾರ(ತಂತ್ರ) :- ೧. ಮದ್ಯ, ೨. ಮಾಂಸ, ೩.ಮತ್ಯ, ೪.ಮುದ್ರಾ, ೫.ಮೈಥುನ.
  • ೫೦. ಪಂಚನದ :- ೧. ಶತದ್ರು, ೨.ವಿಪಾಶ, ೩.ಇರಾವತಿ, ೪.ಚಂದ್ರಭಾಗ, ೫.ವಿತಸ್ತಾ
  • ೫೧. ಪಂಚ ದೇವತೆ  :- ೧. ಆದಿತ್ಯ, ೨.ಅಂಬಿಕೆ, ೩.ಗಣಪತಿ, ೪,ರುದ್ರ (ಶಿವ), ೫.ವಿಷ್ಣು.
  • ೫೨. .ಪಂಚ ತಿಕ್ತ  :-೧. ನಿಂಬಾ, ೨ಅಮೃತ, ೩.ವೃಷ, ೪. ಪಟೋಲ, ೫.ನಿದಿಗ್ದಕ.
  • ೫೩. ಪಂಚ ಪರ್ವ  :-೧.ಚತುರ್ದಶಿ,೨.ಅಷ್ಟಮಿ, ೩.ಅಮಾವಾಸ್ಯೆ, ೪.ಪೂರ್ಣಿಮೆ, ೫.ರವಿ ಸಂಕ್ರಾತಿ
  • ೫೪. ಪಂಚ ಪಿತೃ  :- ೧. ಜನಕ, ೨.ಉಪನೀತ, ೩.ಕನ್ಯಾದಾತ, ೪.ಅನ್ನದಾತ, ೫.ಭಯತ್ರಾತ
  • ೫೫. ಪಂಚ ಲಕ್ಷಣ (ಪುರಾಣ):- ೧.ಸರ್ಗ, ೨.ಉಪಸರ್ಗ, ೩.ವಂಶ, ೪.ಮನ್ವಂತರ, ೫.ವಂಶಾನುಚರಿತ.
  • ೫೬. ಪಂಚಾಚಾರ :- ೧.ಜ್ಞಾನ, ೨.ದರ್ಶನ, ೩.ವೀರ್ಯ ೪.ಚಾರಿತ್ರ್ಯ ೫.ಉಪಚಾರ
  • ೫೭. ಪಂಚ ವಲ್ಕಲ :- ನ್ಯಗ್ರೋಧ  :-೧.೨.೩.೪.೫.
  • ೫೮. ಪಂಚ ಸುಗಂಧ :- ೧.ಕರ್ಪೂರ, ೨.ಕಕ್ಕೊಲ,? ೩.ಲವಂಗ ಪುಷ್ಪ, ೪.ಗುವಾಕ, ೫.ಜಾತಿ ಫಲ
  • ೫೯. . ಪಂಚವಟೀ  :-೧.ಅಶ್ವತ್ಥ ೨.ಬಿಲ್ವ ೩.ವಟ ೪.ಧಾತ್ರ (ನೆಲ್ಲಿ ?) ೫.ಅಶೋಕ.
  • ೬೦. ಪಂಚ ಗೌಡ (ಗೌಳ) :- ೧.ಕನ್ಯಾಕುಬ್ಜ,(ಅಥವಾ ಬಂಗಾಳ) ೨.ಸಾರಸ್ವತ, ೩.ಗೌಡ, ೪.ಮಿಥಿಲಾ, ೫.ಉತ್ಕಲ.
  • ೬೧. ಪಂಚ ದ್ರಾವಿಡ :- ೧.ಮಹಾರಾಷ್ರ, ೨.ತೆಲಿಂಗ, ೩.ದ್ರಾವಡ (ತಮಿಳ), ೪.ಕರ್ನಾಟಕ, ೫.ಗುರ್ಜರ
  • ೬೨. ಪಂಚ ದ್ರಾವಿಡ ಭಾಷೆಗಳು :- ೧.ತೆಲಗು, ೨.ತಮಿಳು, ೩.ಕನ್ನಡ, ೪.ಮಲೆಯಾಳ, ೫.ತುಳು.
  • ೬೩. ಪಂಚೋಪಚಾರ  :- ೧.ಗಂಧ, ೨.ಪುಷ್ಪ, ೩.ಧೂಪ, ೪ದೀಪ,.೫. ನೈವೇದ್ಯ.
  • ೬೪. ಪಂಚ ಮುಖ :- ೧.ಸದ್ಯೋಜಾತ, ೨.ಅಘೋರ, ೩.ತತ್ಪುರುಷ, ೪.ವಾಮದೇವ, ೫.ಈಶಾನ.
  • ೬೫. ಪಂಚ ಕಾರುಕ :- ೧.ಬಡಗಿ, ೨.ಜೇಡ ?(ಬೇಡ) ೩.ನಾವಿಕ, ೪.ಅಗಸ, ೫. ಸಮಗಾರ.
  • ೬೬. ಪಂಚ ಮಹಾಯಜ್ಞ  :- ೧.ಆತ್ಮ ಪೂಜೆ, ೨.ಪಿತೃ ಪೂಜೆ, ೩.ದೇವ ಪೂಜೆ, ೪.ವೇದಪೂಜೆ ೫.ಮನುಷ್ಯ ಪೂಜೆ
  • ೬೭. ಪಂಚ ಲಕ್ಷಣ :- ೧.ಉತ್ಪತ್ತಿ, ೨.ಪ್ರತ್ಯುತ್ಪತ್ತಿ, ೩.ವಂಶ, ೪.ಮನ್ವಂತರ, ೫.ವಂಶಜರ ಚರಿತ್ರ.
    1. :-(ಉಪಪುರಾಣಗಳಲ್ಲಿ :-ಸರ್ಗ, ಪ್ರತಿ ಸರ್ಗ, ವಂಶ, ಮನ್ವಂತರ, ವಂಶಾನುಚರಿತೆ.)
  • ೬೮. ಪಂಚ ಕಾಶಿ :- ೧.ವಾರಣಾಶಿ, ೨.ಗುಪ್ತ ಕಾಶಿ, ೩.ಉತ್ತರಕಾಶಿ, ೪.ದಕ್ಷಿಣಕಾಶಿ, ೫.ಶಿವಕಾಶಿ.
  • ೬೯. ಪಂಚನಳೀಯ :- (ನಳರು -ವೇಶಧರರು) ಇಂದ್ರ, ೨.ಅಗ್ನಿ, ೩.ಯಮ, ೪.ವರುಣ, ೫.ನಳ
  • ೭೦. ಪಂಚ ಭೂತಗಳು :- ೧.ಪೃಥ್ವಿ, ೨.ಆಪ, ೩.ತೇಜ, ೪.ವಾಯು, ೫.ಆಕಾಶ
  • ೭೧. ಪಂಚ ತತ್ವಗಳು ೫.೧.ಪ್ಲಥ್ವಿ .೨.ಆಪ, ೩.ತೇಜ, ೪.ವಾಯು, ೫.ಆಕಾಶ
    1. ಕರ್ಮೇಂದ್ರಿಯಗಳು :- ೧. ವಾಕ ೨. ಪಾಣಿ, ೩. ಪಾದ, ೪ ಉಪಸ್ಥ,.೫. ಪಾಯು. -
    2. ೫ತನ್ಮಾತ್ರೆಗಳು :-೧. ಗಂಧ, ೨.ರಸ, ೩. ರೂಪ, ೪. ಸ್ಪರ್ಶ,೫. ಶಬ್ದ,
    3. ೫ಜ್ಞಾನೇಂದ್ರಿಯಗಳು :-ಶ್ರೋತೃ (ಕಿವಿ) 2 ತ್ವ ಕ್ (ಚರ್ಮ) ;ಚಕ್ಷು (ಕಣ್ಣು) ಜಿಹ್ವಾ (ನಾಲಿಗೆ) ;ಘ್ರಾಣ (ಮೂಗು)
    4. ೫ ಪ್ರಾಣಗಳು :- ೧.ಪ್ರಾಣ ,೨.ಅಪಾನ, ೩. ಉದಾನ, ೪.ವ್ಯಾನ, ೫. ಸಮಾನ
    5. ೪.ಅಂತಃಕರಣ+ಆತ್ಮ
  • 72. ಪಂಚ ಮಹಾವಾದ್ಯ  :- ೧. ಶೃಂಗಾರ ವಾದ್ಯವೆಂಬ ಕೊಂಬು, ೨. ತಮ್ಮಟೆಯೆಂಬ ಹಲಗೆ, ೩.ಶಂಖವೆಂಬ ಹವಳ, ೪.ಭೇರಿಯೆಂಬ ಬಾಜಾ, ೫.ಜಯಘಂಟೆಯೆಂಬ ಜಾಗಟೆ.
  • ೭೩.ಪಂಚ ಮಹಾಕಾವ್ಯಗಳು :-೧.೨..ಕಾಳಿದಾಸನ ಕುಮಾರಸಂಭವಮ್ ಹಾಗೂ ರಘುವಂಶಮ್,;.೩. ಭಾರವಿಯ ಕಿರಾತಾರ್ಜುನೀಯಮ್, ೪. ಮಾಘನ ಶಿಶುಪಾಲವಧಮ್ ;೫. ಹಾಗೂ ಶ್ರೀಹರ್ಷನ ನೈಷಧೀಯಚರಿತಮ್ ಇವುಗಳು

ಷಟ್[ಬದಲಾಯಿಸಿ]


  • ೧. ಷಟ್ಕರ್ಮ:-
    1. (|) ವೈದಿಕ : ೧.ಯಜನ, ೨.ಯಾಜನ, ೩.ಆದ್ಯಯನ ೪.ಅದ್ಯಾಪನ, ೫.ದಾನ ೬.ಪ್ರತಿಗ್ರಹ.
    2. (||) ಮಾಂತ್ರಿಕ:- ೧.ಮಾರಣ, ೨.ಮೋಹನ, ೩.ಸ್ತಂಬನ, ೪.ಉಚ್ಛಾಟನ, ೫.ಆಕರ್ಶಣ, ೬.ಪ್ರತಿಗ್ರಹ.
    3. (|||) ವಾರ್ತಿಕ: - ೧.ಉ೦ಛ (ಊ೦ಛ), ೨.ಪ್ರತಿಗ್ರಹ, ೩.ಭಿಕ್ಷಾ, ೪.ವಾಣಿಜ್ಯ, ೫.ಪಶುಪಾಲನ, ೬.ಕೃಷಿ ಕರ್ಮ.
    4. (||||) ಯೋಗ :- ೧.ದೌತಿ, ೨.ನೇತಿ, ೩.ವಸ್ತಿ, ೪.ನಿಲಿಕೀ, ೫.ತ್ರಾಟಕೀ. ೬.ಕಪಾಲಭಾತಿ
  • ೨. ಷಟ್ ಧರ್ಮ:- ಆಧಾರ ೧.ಸತ್ಯ, .೨.ದೀಕ್ಷಾ, ೩.ಬ್ರಹ್ಮ, ೪.ಋತ, ೫.ತಪ, ೬.ಯಜ್ಞ. (ಸತ್ಯಂ ಬೃಹದ್ ಋತಮ್ ಉಗ್ರಂ| ದೀಕ್ಷಾ ತಪೋ ಬ್ರಹ್ಮಯಜ್ಞಃ ಪೃಥಿವೀಂ ಧಾರಯಂತಿ || ಋಗ್ವೇದ)
  • ೩. ಷಡಂಗಗಳು ಷಟ್ ವೇದಾಂಗಗಳು :-
    1. (|). ೧.ಛಂದಸ್ಸು, ೨.ಕಲ್ಪ, ೩.ವ್ಯಾಕರಣ, ೪.ಸ್ಮೃತಿ ಶಿಕ್ಷಾ, ೫.ಜ್ಯೋತಿಷ, ೬.ನಿರುಕ್ತ .
    2. (||)ಉತ್ಪತ್ತಿಸ್ಥಾನ:- ೧.ಪಾದ, ೨.ಹಸ್ತ, ೩.ಮುಖ, ೪.ಘ್ರಾಣ, ೫.ನೇತ್ರ, ೬.ಶ್ರೋತ.
  • ೪. ಷಟ್ಸಮಾದಿ :-೧.ಅಭ್ಯಂತರ ದೃಶ್ಯಾನುವಿದ್ಧ .೨ಬಾಹ್ಯ ಶಬ್ದಾನುವಿದ್ಧ, .೩.ಅಬ್ಯಂತರನಿರ್ವಿಕಲ್ಪ, ೪.ಬಾಹ್ಯದೃಶ್ಯಾನುವಿದ್ಧ,
  • ೫.ಬಾಹ್ಯಶಬ್ದಾನುವಿದ್ಧ,, ೬.ಬಾಹ್ಯನಿರ್ವಿಕಲ್ಪ.
  • ೫.. ಷಟ್ಚಕ್ರವರ್ತಿಗಳು:- ೧.ಹರಿಶ್ಚಂದ್ರ, ೨.ನಳ, ೩.ಪುರುಕುತ್ಸ.೪. ಪುರೂರವ ೫.ಸಗರ, ೬.ಕಾರ್ತವೀಚಿi.
  • ೬. ಷಟ್ ಭ್ರಮೆಗಳು :- ೧.ಜಾತಿ, ೨.ವರ್ಣ, ೩.ಆಶ್ರಮ, ೪.ಕುಲ, ೫.ಗೋತ್ರ, ೬.ನಾಮ.
  • ೭. ಷಡ್ವಿಧಾನ್ನ ೧.ಭಕ್ಷ್ಯ, :- ೨.ಭೋಜ್ಯ, ೩.ಲೇಹ್ಯ, ೪.ಚೋಹ್ಯ, ೫.ಪಿಚ್ಛಲ, ೬.ಪಾನೀಚಿi.
  • ೮. ಷಡ್ರಸ :- ೧.ಮಧುರ, ೨ ಆಮ್ಲ, .೩ ತಿಕ್ತ, .೪.ಕಟು, ೫.ಕಷಾಚಿi, ೬.ಲವಣ.(ಸಿಹಿ, ಹುಳಿ, ಉಪ್ಪು, ಖಾರ, ಒಗರು, ಕಹಿ) ಇವೇ ಆರು ರಸಗಳು. [೧]
  • ೯. ಷಟ್‌ಕೋಶ :- ೧.ರೋಮ, ೨.ನಾಡಿ, ೩.ಆಸ್ತಿ ೪.ರಕ್ತ, ೫.ಮಾಂಸ, ೬.ತ್ವಕ್.
  • ೧೦. ಷಡ್ವರ್ಣ:- ೧.ಶ್ವೇತ, ೨.ಪೀತ, ೩.ಕಪಿಲ, ೪.ಹರಿತ, ೫.ಕೃಷ್ಣ, ೬.ಮಾಂಜಿಷ್ಠ (?)
  • ೧೧. ಷಡ್ಭಾವವಿಕಾರ :- ೧.ಜಾಯಕೆ, ೨.ಅಸ್ಥಿತೆ, ೩.ಪರಿಣಮತೆ, ೪.ಪ್ರವರ್ಧತೆ, ೫.ಅಪೇಕ್ಷೀಯತೆ, ೬.ವಿನಶ್ಯತೆ.
  • ೧೨. ಷಡ್ವಿಸರ್ಗ:- ೧.ಪ್ರತಿಭಾ, ೨.ಶ್ರವಣ, ೩.ವಾರ್ತೆ, ೪.ದರ್ಶನ, ೫.ಅಸ್ವಾದನ, ೬.ಆಘ್ರಾಣ.
  • ೧೩. ಷಡಿಂದ್ರಿಯ:- ೧.ಚಕ್ಷು, ೨.ಶ್ರೋತ್ರ, ೩.ರಸನ, ೪.ಘ್ರಾಣ, ೫.ತ್ವಕ್ಕು, ೬.ಮನಸ್ಸು.
  • ೧೪. ಷಡ್ವಿಷಯ :- ೧.ರೂಪ, ೨.ಶಬ್ದ, ೩.ರಸ, ೪.ಗಂಧ, ೫.ಸ್ಪರ್ಶ, ೬.ಜ್ಞಾನ.
  • ೧೫. ಷಟ್ಪದಿ :- ೧.ಶರ, ೨.ಕುಸುಮ, ೩.ಭೋಗ, ೪.ಭಾಮಿನಿ, ೫.ಪರಿವರ್ಧನಿ, ೬.ವಾರ್ಧಿಕ್ಯ.
  • ೧೬. ಷಡಗ್ನಿ  :-೧.ಗಾರ್ಹಪತ್ಯ, ೨.ಆಹವನೀಯ, ೩.ದಕ್ಷಿಣಾಗ್ನಿ, ೪.ಸಭ್ಯ, ೫.ಅವಸಬ್ಯ, ೬.ಔಪಾಸನಾಗ್ನಿ.
  • ೧೭. ಷಟ್ಶಾಸ್ತ್ರ :- (ಶಾಸ್ತ್ರ) ೧.ವ್ಭೆದಾಂತ, ೨.ವೈಶೇಷಿಕ, .೩.ಭಾಟ್ಟ,. ೪.ಪಿರಪಾರಕ, ೫.ಮೀಮಾಂಸ, ೬.ಉತ್ತರ ಮೀಮಾಂಸ.
  • ೧೮. ಷಡ್ದರ್ಶನ :- ೧.ಸಾಂಖ್ಯ, ೨.ಯೋಗ, ೩.ನ್ಯಾಯ, ೪.ವೈಶೇಷಿಕ, ೫.ಮೀಮಾಂಸ, ೬.ಉತ್ತರ ಮೀಮಾಂಸ.
  • ೧೯. ಷಟ್ ದುರ್ಗ :- ೧.ಧನ್ವ ದುರ್ಗ ೨ ಮಹೀ ದುರ್ಗ., ೩.,ಗಿರಿದುರ್ಗ ೪ ಮನುಷ್ಯ ದುರ್ಗ, ೫. ಮೃದ್ದುರ್ಗ., ೬.ವನದುರ್ಗ.
  • ೨೦. ಗೋಷಡಂಗ:- ಪಂಚ ಗವ್ಯ ಮತ್ತು ಗೋರೋಜನ. (೫+೧)
  • ೨೧. ಷಟ್ ಋತುಗಳು :- ೧.ವಸಂತ, ೨.ಶರದೃತು, ೩.ಗ್ರೀಷ್ಮ ಋತು, ೪.ಹೇಮಂತಋತು ೫.ವರ್ಷಋತು, ೬. ಶಿಶಿರಋತು,
  • ೨೨. ಷಟ್ ಚಕ್ರಗಳು ಇವುಗಳ :
    1. ಹೆಸರುಗಳು :- ೧.ಮೂಲಾಧಾರ., ೨.ಸ್ವಾಧಿಷ್ಟಾನ, ೩.ಮಣಿಪರ, ೪.ಅನಾಹತ, ೫.ವಿಶುದ್ಧ, ೬. ಆಜ್ಞಾ
    2. ಸ್ಥಾನಗಳು :- ೧.ಬೆನ್ನೆಲುಬಿನ ತಲ, ೨.ಲಿಂಗ, ೩.ನಾಭಿ ೪.ಹೃದಯ, ೫.ಕಂಠತಾಲು, ೬.ಭ್ರೂ ಮಧ್ಯ.
    3. ಆಕಾರ(ಬೇರೆಬಗೆ ಇದೆ) :- ೧.ಚತುರಸ್ರ, ೨.ಅರ್ಧಚಂದ್ರ, ೩.ತ್ರಿಕೋಣ ೪.ಷಟ್ಕೋಣ, ೫.ವೃತ್ತ, ೬.ಚಿತ್ರ.
    4. ಭೂತಗಳು :- ೧.ಪೃಥ್ವಿ, ೨.ಆಪ, ೩.ತೇಜ, ೪.ವಾಯು, ೫.ಆಕಾಶ, ೬.ಮನಸ್ಸು.
    5. ವರ್ಣಗಳು :- ೧. ಪೀತ, ೨.ಶ್ವೇತ, ೩.ರಕ್ತ, ೪.ನೀಲ, ೫.ಸ್ಪಟಿಕ, ೬.ಮಾಣಿಕ್ಯ.
    6. ಕಮಲ ದಳಗಳು :- ೧.ನಾಲ್ಕು, ೨.ಆರು, ೩.ಹತ್ತು, ೪.ಹನ್ನೆರಡು, ೫.ಹದಿನಾರು, ೬.ಎರಡು
    7. ಅಕ್ಷರಗಳು :- ೧.ವಾದಿಸಾಚಿತ, ೨.ಬಾದಿಲಾಚಿತ, ೩.ಡಾದಿಫಾಂತ, ೪.ಕಾದಿಠಾಂತ, ೫.ಅಆದಿಔ ಅಚಿತ, ೬.ಹಂ P
  • ೨೩.ಷಡ್ದ್ರವ್ಯ (ದ್ರವ್ಯ) :- ೧.ಜೀವ, ೨.ಪುದ್ಗಲ, ೩.ಧರ್ಮ, ೪.ಅಧರ್ಮ, ೫.ಆಕಾಶ, ೬.ಕಾಲ.
  • ೨೪. ಹಾವ ಭಾವ ಷಟ್ಕ :- ೧.ವಿಲಾಸ, ೨.ಬಿಬ್ಬೋಕ ೩.ವಿಭ್ರಮ ೪.ಲಲಿತ, ೫.ಹೇಲಾ, ೬.ಲೀಲೆ.
  • ೨೫. ಷಡಂಗ ಧೂಪ:- ೧.ಸಿತ, ೨.ಆಜ್ಯ, ೩.ಮಧೂ, ೪.ಗುಗ್ಗುಲ, ೫.ಅಗರು, ೬.ಚಂದನ.
  • ೨೬. ಷಡ್ವರ್ಗ :-ಅರಿಷಡ್ವರ್ಗ-ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ;

೨೭.ಷಡ್ಯಂತ್ರ : ೧.ಜಾರಣ,೨.ಮಾರಣ,೩.ಉಚ್ಛಾಟನ,೪.ಮೋಹನ,೫. ಸ್ತಂಭನ, ೬. ವಿಧ್ವಂಸನ. ವಶ್ಯಾಕರ್ಷಣಯೋ ರಕ್ತಾ ಶ್ಯಾಮಾ ಸ್ತಂಭವಿರೋಧ್ಯೋ| ನಿಗ್ರಹೋಚ್ಚಾಟಯೋಃ ಕೃಷ್ಣಾ ಶ್ವೇತಾ ಮೋಕ್ಷಪರೋಕ್ಷಯೋಃ॥’ ಎಂಬ ಶ್ಲೋಕವೊಂದಿದೆ. ಇದು ಷಡ್ಯಂತ್ರದ ಆರು ರೂಪಗಳನ್ನು ಹೇಳುತ್ತಿರುವಂತಿದೆ. ವಶ್ಯ (ಆಕರ್ಷಣೆ), ಸ್ತಂಭ (ನಿಲ್ಲಿಸುವುದು), ವಿರೋಧ (ಪ್ರತಿಭಟಿಸುವುದು), ನಿಗ್ರಹ (ಕೊಲೆ, ಅಂತ್ಯಗೊಳಿಸುವುದು), ಉಚ್ಚಾಟನ (ದಾರಿಯಿಂದ ಸರಿಸುವುದು), ಮೋಕ್ಷ/ಶಾಂತಿ (ಶಾಂತಿಯಿಂದಿರುವುದು). ಈ ಆರು ರೀತಿಯ ಬಲಗಳನ್ನು ವಿರೋಧಿಯ ಮೇಲೆ ಪ್ರಯೋಗಿಸುವುದೇ ಷಡ್ಯಂತ್ರ.

ಸಪ್ತ[ಬದಲಾಯಿಸಿ]


  • ೧. ಸಪ್ತ ಸ್ವರ ಇವುಗಳ :-
    1. . ಹೆಸರುಗಳು :-೧.ಷಡ್ಜ, ೨.ಋಷಭ, ೩.ಗಾಂಧಾರ, ೪.ಮಧ್ಯಮ, ೫.ಪಂಚಮ, ೬.ದೈವತ, ೭.ನಿಷಾಧ,
    2. . .ಉತ್ಪತ್ತಿ ಸ್ಥಾನ :- ೧.ಈಶ್ವರ ಮುಖ, ೨.ಸದ್ಯೋಜಾತ ಮುಖ, ೩.ವಾಮದೇವ ಮುಖ, ೪.ಅಘೋರ ಮುಖ, ೫.ತತ್ಪು ರುಷ ಮುಖ, ೬.ಈಶಾನ ಮುಖ,೭.ನಿರಂಗ ಮುಖ
    3. . .ಸ್ಥಾನಗಳು :- ೧.ಕಂಠ, ೨.ಶಿರ, ೩.ನಾಸಿಕ, ೪ಹೃದಯ, ೫.ಮುಖ, ೬.ಪಾದ, ೭.ಪೂರ್ವಾಂಗ.
    4. . ರಂಜನ ಕಾಲಗಳು :- ೧.ಸೂರ್ಯೋದಯ, ೨.ಮದ್ಯಾಹ್ನ, ೩.ಅಪರಾಹ್ನ, ೪.ಸಾಚಿiiಹ್ನ, ೫.ಪೂರ್ವರಾತ್ರಿ, ೬.ಅಪರಾತ್ರಿ, ೭.ನಿಶಾವಸಾನ.
    5. . ಅನುಕರಣ ಧ್ವನಿ :-೧.ನವಿಲ ಕೂಗು, ೨.ಗೂಳಿ ಗುಟರು, ೩.ಅಜ ಧ್ವನಿ, ೪.ಕ್ರೌಂಚ ಧ್ವನಿ, ೫.ಕೋಗಿಲೆ ಹಾಡು, ೬.ಜಾತ್ಯಶ್ವದ ಹಲಹಲ ಧ್ವನಿ, ೭.ಮತ್ತಗಜ ಬೃಂಹಿತ.
    6. . ನಕ್ಷತ್ರಗಳು :- ೧.ಆರ್ದ್ರೆ, ೨.ಪೂರ್ವಾಷಾಢ, ೩.ರೇವತಿ, ೪.ವಿಶಾಖೆ, ೫.ಮೂಲಾ, ೬.ಅನುರಾದೆ, ೭.ಮಘ.
    7. . ತಿಥಿಗಳು :- ೧.ಅಮಾವಾಸ್ಯೆ, ೨.ತ್ರಯೋದಶಿ, ೩.ಪಂಚಮಿ, ೪.ಅಷ್ಟಮಿ, ೫.ಸಪ್ತಮಿ, ೬.ತದಿಗೆ, ೭.ನವಮಿ.
    8. . .ಋಷಿಗಳು :- ೧.ಅಂಗಿರ, ೨.ಬೃಗು, ೩.ಕಶ್ಯಪ, ೪.ವಶಿಷ್ಠ, ೫.ನಾರದ, ೬.ಅತ್ರಿ, ೭.ಕಪಿಲ.
    9. . ದೇವತೆಗಳು:- ೧.ಬ್ರಾಹ್ಮಿ, ೨.ಮಾಹೇಶ್ವರಿ, ೩.ಕೌಮಾರಿ, ೪.ವೈಷ್ಣವಿ, ೫.ವರಾಹಿ, ೬.ಇಂದ್ರಾಣಿ, ೭.ಚಾಮುಂಡಿ.
    10. . ವರ್ಣಗಳು :- ೧.ಅರುಣಾಲ್ಜ, ೨.ಕಪಲ, ೩.ಹೇಮ, ೪.ನೀಲೋತ್ಪಲ, ೫..ಕೃಷ್ಣ, ೬.ಶ್ವೇತ, ೭.ಚಿತ್ರ.
    11. . ಸ್ವರ ಫಲಗಳು :- ೧.ಶೃಂಗಾರ, ೨.ಹಾಸ್ಯ, ೩.ಕರುಣ, ೪.ರೌದ್ರ, ೫.ವೀರ, ೬.ಭಯಾನಕ, ೭.ಭೀಬತ್ಸ.
    12. . ಸ್ವರ ಸಂಜ್ಞೆಗಳು :- ೧.ಸ, ೨.ರಿ, ೩.ಗ, ೪.ಮ, ೫.ಪ, ೬.ದ, ೭.ನಿ.
  • ೨. ಸಪ್ತ ಸಂತಾನ :- ೧.ತಟಾಕ, ೨.ಧನನಿಕ್ಷೇಪ, ೩.ಬ್ರಹ್ಮಸ್ಥಾಪನ, ೪.ದೇವಾಲಯ ಪ್ರತಿಷ್ಠಾ, ೫.ವನಪ್ರತಿಷ್ಠಾ, ೬.ಸದ್ಗ್ರಂಥ ರಚನಾ, ೭.ಪುತ್ರೋತ್ಪಾದನ,
  • ೩. ಸಪ್ತ ಪದಾರ್ಥ :- ೧.ಜೀವ, ೨.ಸಜೀವ, ೩.ನಿರ್ಜೀವ, ೪.ನಿರ್ಜರ, ೫.ಆಶ್ರಮ, ೬.ಬಂಧ, ೭.ಮೋಕ್ಷ.
  • ೪. ಸಪ್ತಾವಸ್ಥೆ  :- ೧.ಅಜ್ಞಾನ, ೨.ಆವರಣ, ೩.ವಿಕ್ಷೇಪ, ೪.ಪರೋಕ್ಷ ಜ್ಞಾನ, ೫.ಶೋಕ ನಿವೃತ್ತಿ, ೬.ಅಪರೋಕ್ಷ ಜ್ಞಾನ (?)೭.ನಿರಂಕು ಶ ವೃತ್ತಿ.
  • ೫. ಸಪ್ತ ಜ್ಞಾನ ಭೂಮಿಕೆ :- ೧.ಸುಖೇಚ್ಛೆ, ೨.ವಚಾರಣೆ, ೩.ತನು ಮಾನಸ, ೪.ಸತ್ವಾಪತ್ತಿ, ೫.ಸಂಸಕ್ತಿ, ೬.ಪದಾರ್ಥ ಬಾವನೆ, ೭. ತೂರ್ಯಗಾಮಿ
  • ೬. ಸಪ್ತ ಪಾತಾಳ -ಅವುಗಳ-
    1. ಹೆಸರುಗಳು :- ೧.ಪಾತಾಳ, ೨.ಮಹಾಪಾತಾಳ, ೩.ರಸಾತಲ, ೪.ತಲಾತಳ, ೫.ಸುತಳ, ೬.ವಿತಳ, ೭.ಅತಳ.
    2. ..ಭೂಮಿಗಳು :- ೧.ಸುವರ್ಣ, ೨.ರಜತ, ೩.ತಾಮ್ರ, ೪.ಕಾಂಸ್ಯ, ೫.ಲೋಹ, ೬.ವಾಲುಕೆ, ೭.ಮೃತ್ತಿಕೆ.
    3. .ಕರ್ತೃ ಗಳು :- ೧.ಬಲ, ೨.ಅತಿಬಲ, ೩.ಬಲವಾನ್, ೪.ಬಲವಿಕ್ರಮ, ೫.ಬಲೇಶ, ೬.ಬಲಶಾಲಿ, ೭.ಬಲಾಢ್ಯ.
    4. .ಅಧಿಪತಿಗಳು :- ೧.ಶಂಖಕರ್ಣ, ೨.ಪ್ರಹ್ಲಾದ, ೩.ಶಿಶುಪಾಲ, ೪.ಕರ್ಕಂಧಕ, ೫.ಹಿರಣ್ಯಾಕ್ಷ, ೬.ಬೃಹದ್ಗರ್ಭ, ೭.ಬಲಿ.
    5. .ಸರ್ಪಗಳು :- ೧.ಕುಟಿಲ, ೨.ವಾಸುಕಿ, ೩.ಕಂಬಳ, ೪.ಕರ್ಕೋಟಕ, ೫.ಕಾಲಿಂಗ, ೬.ದುರ್ದರ್ಶನ,೭.ತಕ್ಷಕ.
    6. .ಲಿಂಗಗಳು :- ೧.ಶಿವಲಿಂಗ, ೨.ಶಂಭುಲಿಮಗ, ೩.ಶಂಕರಲಿಂಗ, ೪.ನೀಲಕಂಠಲಿಂಗ, ೫.ಉಮಾಪತಿ ಲಿಂಗ, .೬.ಸರ್ವೇಶ್ವರ ಲಿಂಗ, ೭ಶ್ರೀಕಂಠಲಿಂಗ.

೧೧. ಸಪ್ತ ಋಷಿಗಳು ೧. ಮರೀಚಿ, ೨.ಅತ್ರಿ, ೩.ಅಂಗಿರ, ೪.ಪುಲಹ, .ಪುಲಸ್ತ್ಯ, ೫.ಕ್ರತು, ೬.ಅಗಸ್ತ್ಯ, ೭.ವಸಿಷ್ಠ (ಸ್ವಾಯಂಭುವ ಮನುವಿನ ಕಾಲದ ಸಪ್ತರ್ಷಿಗಳು )

  • ಬೇರೆಬೇರೆ ಕಲ್ಪಗಳಲ್ಲಿದ್ದವರು) :-
    1. . ೧. ಮರೀಚಿ, ೨.ಅತ್ರಿ, ೩.ಅಂಗೀರಸ, ೪.ಪುಲಸ್ತ್ಯ, ೫.ಪುಲಹ, ೬.ಕೃತು, ೭.ವಸಿಷ್ಠ.
    2. . (ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ, :
    3. . ಭಾರ ಕಲ್ಯರ್ಶ/ ಚಿತ್ರ ಶಿಖಂಡಿಗಳು ಎಂದರೆ ವಿಚಿತ್ರ ಜುಟ್ಟುಳ್ಳವರು -ಮರೀಚಿ, ಅತ್ರಿ, ಅಂಗಿರಸ್ಸು, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ, ಇವರು ಬೇರೆಬೇರೆ ಕಲ್ಪಗಳಲ್ಲಿದ್ದವರು)
  • ೧೨. ಸಪ್ತ ಋಷಿಗಳು - ವೈವಸ್ವತ ಮನ್ವಂತರ :- ೧.ವಸಿಷ್ಟ, ೨.ಕಶ್ಯಪ, ೩.ಗೌತಮ, ೪.ವಿಶ್ವಾಮಿತ್ರ, ೫.ಭರದ್ವಾಜ, ೬.ಜಮದಗ್ನಿ, ೭.ಅತ್ರಿ.
  • ೧೩. ಸಪ್ತ ಧಾತುಗಳು :- ೧.ರುಧಿರ, ೨.ಮಾಂಸ, ೩.ಮೇದಸ್ಸು, ೪.ಸ್ನಾಯು, ೫.ಅಸ್ತಿ, ೬.ಮಜ್ಜೆ, ೭.ಶುಕ್ಲ.
  • ೧೪. ಸಪ್ತ ತಾಳಗಳು :- ೧.ಧೃವ, ೨.ಮಟ್ಟ, ೩.ರೂಪಕ, ೪.ಜಂಪೆ, ೫.ತ್ರಿಪುಟ, ೬.ಅಷ್ಟ, ೭.ಏಕ.
  • ೧೫. ತ್ಯಾಗಾಂಗ ಸಪ್ತಕ :- ೧.ಆಂದೋಲನ, ೨.ವಸ್ತ್ರ, ೩.ಆಭರಣ, ೪.ವಾಹನ, ೫.ರಾಜ್ಯ, ೬.ವಧೂ, ೭.ಕರ್ಪೂರವೀಳ್ಯ,
  • ೧೬. ಸಪ್ತ ಕುಲಶೈಲ :- ೧.ಮಾಹೇಂದ್ರ, ೨.ಮಲಯ, ೩.ಸಹ್ಯ, ೪.ಶುಕ್ತಿ, (?), ೫.ಋಕ್ಷ, ೬.ವಿಂಧ್ಯ, ೭.ಪಾರಿಯಾತ್ರ.
  • ೧೭. ಸಪ್ತ ಕುಲಾಚಲ :- ೧.ಹಿಮವತ್, ೨.ನಿಷಧ, ೩.ವಿಂಧ್ಯ, ೪.ಮಾಲ್ಯವಚಿತ, ೫.ಪಾರಿಯಾತ್ರಕ, ೬.ಗಂಧಮಾಧನ, ೭.ಹೇಮಕೂಟ.
  • ೧೮. ಸಪ್ತ ಮುಕ್ತಿಕ್ಷೇತ್ರ :- ೧.ಅಯೋಧ್ಯಾ, ೨.ಮಥುರಾ, ೩.ಮಾಯಾ, ೪. ಕಾಶಿ, ೫ ಕಾಂಚೀ, ೬. .ಅವಂತಿ, ೭. ದ್ವಾರಾವತಿ
  • ೧೯. ಸಪ್ತ ಪ್ರಕೃತಿ, :- ೧.ಸ್ವಾಮಿ, ೨. ಅಮಾತ್ಯ, ೩.ಸುಹೃತ್, ೪.ಕೋಶ, ೫.ರಾಷ್ಟ್ರ,, ೬.ದುರ್ಗ, ೭.ಬಲ.
  • ೨೦. ಸಪ್ತ ರಕ್ತ,  :- ೧ಪಾಣಿ ತಲ,,.೨ಪಾದ ತಲ, .೩ನ್ಭೆತ್ರಾಂತರ, .೪ ನಖ, .೫ತಾಲು, .೬.ಅಧರ, ೭.ಜಿಹ್ವ.
  • ೨೧. ಸಪ್ತ ಕಾಂಡಗಳು :- ೧.ಬಾಲ, ೨.ಅಯೋಧ್ಯಾ, ೩.ಅರಣ್ಯ, ೪.ಕಿಷ್ಕಿಂಧ, ೫.ಸುಂದರ, ೬.ಯುದ್ಧ, ೭.ಉತ್ತರ.
  • ೨೨. ಸಪ್ತ ದ್ವೀಪಗಳು :- ೧.ಜಂಬೂ, ೨.ಪ್ಲಕ್ಷ ೩.ಕುಶ, ೪.ಕ್ರೌಂಚ, ೫.ಶಾಖ, ೬.ಶಾಲ್ಮಲಿ,೭.ಪುಷ್ಕಲ.
  • ೨೩. ಸಪ್ತ ಲೋಕಗಳು :- ೧.ಭೂ, ೨.ಭುವ, ೩.ಸ್ವ (ಸುವ), ೪.ಮಹ, ೫.ಜನ, ೬.ತಪ, ೭.ಸತ್ಯ,
  • ೨೪. ಸಪ್ತ ಸಮುದ್ರಗಳು :- ೧.ಲವಣ, ೨.ಇಕ್ಷು, ೩.ಸುರೆ, ೪.ಸರ್ಪಿ, ೫.ದಧಿ, ೬.ಕ್ಷೀರ, ೭.ಶುದ್ಧೋದಕ.
  • ೨೫. ರಾಜ್ಯಾಂಗ ಸಪ್ತಕ ಸಪ್ತ ಪ್ರಕೃತಿಗಳು. :- ೧.ಸ್ವಾಮಿ, ೨. ಅಮಾತ್ಯ, ೩.ಸುಹೃತ್, ೪.ಕೋಶ, ೫.ರಾಷ್ಟ್ರ,, ೬.ದುರ್ಗ, ೭.ಬಲ.
  • ೨೬. ಸಪಾರ್ಚಿ :- ೧.ಕಾಳಿ, ೨.ಕರಾಳಿ, ೩.ಮನೋಜವ, ೪.ಸುಲೋಹಿತ, ೫.ಸುಧೂಮ್ರವರ್ಣ, ೬.ಸ್ಫುಲಿಂಗಿನಿ, ೭.ವಿಶ್ವದಾಸಾ.
  • ೨೭. ಸಪ್ತ ಜಿಹ್ವಾಃ (ಅಗ್ನಿ) :- ೧.ಕಾಲಿ (ಕರಿದು) , ೨. ಕರಾಲಿ (ಭಯಂಕರ), ೩.ಮನೋಜವೆ (ಮನೋವೇಗದ್ದು), ೪.ಸುಲೋಹಿತೆ (ಕೆಂಪು), ೫.ಸುಧೂಮ್ರವರ್ಣಿ (ಹೊಗೆಬಣ್ಣದ್ದು), ೬.ಸ್ಫುಲಿಂಗಿನಿ (ಕಿಡಿಯುಳ್ಳದ್ದು), ೭.ವಿಶ್ವರುಚಿ (ಹೊಳೆಯುತ್ತಿರುವುದು).
  • ೨೮. ಸಪ್ತ ಮಾರುತಗಳು :- ೧.೨.೩.೪.೫.೬.೭.
  • ೨೯. ಸಪ್ತ ಪ್ರಲಯ ಮೇಘಗಳು  :- ೧) ಸಂವರ್ತ; ೨) ಭೀಮನಾದ ; ೩) ದ್ರೋಣ; ೪) ಚಂಡ; ೫) ಬಲಾಹಕ; ೬) ವಿದ್ಯುತ್ ಪತಾಕ; ೭) ಶೋಣ;
  • ೩೦. ಸಪ್ತ ವ್ಯಸನಗಳು:- ಸ್ತ್ರೀ,ಅಕ್ಷ, ಮೃಗಯೆ, ಪಾನ, ವಾಕ್ಪಾರುಷ್ಯ ,ದಂಡಪಾರುಷ್ಯ, ಅರ್ಥದೂಷಣೆ .

ಅಷ್ಟ[ಬದಲಾಯಿಸಿ]


  • ೧. ಅಷ್ಟ ಪ್ರಮಾಣಗಳು :- ೧.ಪ್ರತ್ಯಕ್ಷ, ೨.ಅನುಮಾನ, ೩.ಆಗಮ, ೪.ಅರ್ಥಾಪತ್ತಿ, ೫.ಉಪಮನ, ೬.ಅನುಪಲಬ್ಧ ೭.ಸಂಭವ, ೮.ಐತಿಹ್ಯ
  • ೨.ಅಷ್ಟ ವಸುಗಳು :- ೧.ದೇವ, ೨.ಧೃವ, ೩.ಸೋಮ, ೪.ವಿಷ್ಣು, ೫.ಅನಿಲ, ೬.ಅನಲ, ೭.ಪ್ರಭೂಷ, ೮.ಪ್ರಭಾವ.
  • ೩ ಅಷ್ಟ ಗುರು :- ೧.ಬೋಧಕ, ೨.ವೇಧಕ, ೩.ನಿಷಿದ್ಧ ೪.ಕಾಮ್ಯ, ೫.ಸೂಚಕ, ೬.ವಾಚಕ, ೭.ಕಾರಣ, ೮.ವಿಹಿತ.
  • ೪ ಅಷ್ಟಾಂಗ:೧:  : - ೧.೨.ಪಾದ ದ್ವಯ, ೩.೪ಭುಜ ದ್ವಯ, ೫.೬.ಹಸ್ತ ದ್ವಯ. ೭ ವಕ್ಷ,.೮.ಲಲಾಟ.
೨. ಅಷ್ಟಾಂಗ  : - ೧.ಉರಸ್ಸು, ೨.ಶಿರಸ್ಸು, ೩.ದೃಷ್ಟಿ, ೪,ಮನಸ್ಸು,೫. ಶ್ರದ್ಧೆ, ೬.ಪಾದಗಳು, ೭.ಕೈಗಳು, ೮.ಕರ್ಣಗಳು

೪.ಅ. ಅಷ್ಟತನು: ಪಂಚಭೂತಗಳು( ಪೃಥ್ವಿ,ಆಪ್,ತೇಜ,ವಾಯು,ಆಕಾಶ), ಸೂರ್ಯ,ಸೋಮ(ಚಂದ್ರ),ಯಜ್ಞ ಹೋತ್ರ/ಜೀವಾತ್ಮ.

  • ೫. ಆನಂದಾಷ್ಟ ಬೇಧಗಳು:- ೧.ವಿಷಯಾನಂದ, ೨.ನಿಂದ್ಯಾನಂದ, ೩.ವಾಸನಾನಂದ, ೪.ಬ್ರಹ್ಮಾನಂದ, ೫.ಮುಖ್ಯಾನಂದ, ೬.ನಿಜಾನಂದ, ೭.ಆತ್ಮಾನಂದ, ೮.ಅದ್ವೈತಾನಂದ.
  • ೬. ಅಷ್ಟಾಂಗ ಯೋಗ :- ೧.ಯಮ, ೨.ನಿಯಮ, ೩.ಆಸನ, ೪.ಪ್ರಾಣಾಯಾಮ, ೫.ಪ್ರತ್ಯಾಹಾರ, ೬.ಧ್ಯಾನ, ೭.ಧಾರಣ, ೮.ಸಮಾಧಿ.
  • ೭. ಅಷ್ಟ ದಿಗ್ಗಜಗಳು :- ೧.ಐರಾವತ, ೨.ಪುಂಡರೀಕ, ೩.ವಾಮನ, ೪.ಕುಮುದ, ೫.ಅಚಿಜನ, ೬.ಪುಷ್ಪದಂತ, ೭.ಸಾರ್ವಭೌಮ, ೮.ಸುಪ್ರತೀಕ,
    1. ಇವುಗಳ ಪತ್ನಿಯರು: :- ೧.ಅಭ್ರಮು, ೨.ಕಪಿಲೆ, ೩.ಪಿಂಗಳೆ, ೪.ಅನುಪಮೆ, ೫.ತಾಮ್ರಪರ್ಣಿ, ೬.ಸ್ಮದಂತಿ, ೭.ಅಚಿಜನೆ, ೮.ಅಚಿಜನಾವತಿ.
  • ೮. ಅಷ್ಟ ಕುಲಫಣಿಗಳು :-(ನಾಗಗಳು) ೧.ಅನಚಿತ, ೨.ತಕ್ಷಕ, ೩.ವಾಸುಕಿ, ೪.ಶಂಖಪಾಲ, ೫.ಪದ್ಮ. ೬.ಕರ್ಕೋಟಕ, ೭.ಕ್ರೋಡ, ೮.ಕಾಲ.
  • ೯. ನರಕಾಷ್ಟಕ, :- ೧.ರೌರವ, ೨.ದ್ವಾಂತ, ೩.ಶೀತ, ೪ಉಷ್ಣ, .೫.ಸಚಿತಾಪ, .೬. ಅಂಬುಜ, ೭.ಮಹಾಂಬುಜ, ೮.ಕಾಲಸೂತ್ರ.
    1. . ಮಹಾ ನರಕಾಷ್ಟಕ :- ೧.ಸ್ರಚಿಮುಖ, ೨.ಕಾಲ, ೩.ಖಡ್ಗ, ೪.ಕ್ಷುರಧಾರೆ, ೫.ಅಂಬರೀಷಕ, ೬.ತಪ್ತಾಂಗಾರ, ೭.ಮಹಾಧಾರಾ, ೮.ಸಚಿತಾಪ.
    2. . ರಾಜ ನರಕಾಷ್ಟಕ :- ೧.ಲಾಕ್ಷಾಪ್ರತೀಪ, , ೨ ಮಂಸಾರ. ೩.ನಿರುಚ್ಛ್ವಾಸ.ನಿಶ್ವಾಸ, ೪ ಯುಗ್ಮಾದಿ, ೫.ಶಾಲ್ಮಲಿ, ೬.ಮೋಹ ಪ್ರದೀಪಕ. ೭.ಕ್ಷುತ್ಪಿಪಾಸಕ, ೮.ಕ್ರಿಮಿಕುಲ.
    3. . ರಾಜ ರಾಜ ನರಕಾಷ್ಟಕ :- ೧.ಲೋಹಸ್ತಂಭ, ೨.ವಿಣ್ಮೂತ್ರ, ೩.ವೈತರಣೀನದಿ, ೪.ತಾಮಿಶ, ೫.ಅಚಿಧತಾಮಿಶ್ರ, ೬.ಕುಂಭೀಪಾಕ, ೭.ಮಹಾರೌರವ, ೮.ಮಹಾಪಾದಾನುಗವೀಚಿ.
  • ೧೦. ಅಷ್ಟೈಶ್ವರ್ಯ :- ೧.ದಾಸೀಜನ, ೨.ಭೃತ್ಯ, ೩.ಪುತ್ರ, ೪.ಬಂಧುವರ್ಗ, ೫.ವಸ್ತ್ರ, ೬.ವಾಹನ, ೭.ಧನ, ೮.ಧಾನ್ಯ.
  • ೧೧. ಅಷ್ಟ ಭೋಗ :- ೧.ಸ್ನಾನ, ೨.ಪಾನ, ೩.ಭೋಜನ, ೪.ವಸ್ತ್ರ, ೫.ಗಂಧ, ೬.ಪುಷ್ಪ, ೭.ತಾಂಬೂಲ, ೮.ಸಂಯೋಗ,
    1. . ಇನ್ನೊಂದು ವಿಧ :- ೧.ಮನೆ, ೨.ಹಾಸಿಗೆ, ೩.ವಸ್ತ್ರ, ೪.ಆಭರಣ, ೫.ಸ್ತ್ರೀ, ೬.ಪುಷ್ಪ, ೭.ಗಂಧ, ೮.ತಾಂಬೂಲ
  • ೧೨. ರಸಾಷ್ಟಕ :-೧.ಹಸಿತವ್ಯ, ೨.ಶೋಚ್ಯ, ೩. ದ್ವೇಷ್ಯ, ೪.ಪ್ರತಿಭಟ, ೫.ಭೀಷಣ, ೬., ಜಿಗುಪ್ಸನೀಚಿi, ೭ ಆಶ್ಚರ್ಯ ೮. .ಸಾಮ್ಯಾಸ್ಪದ
  • ೧೩. ಅಷ್ಟ ವಿದರದ ನಕ್ಷತ್ರ, :- ೧.ಪರೋಪ ಗೂಢ, ೨.ಅಂಕುಶಚಿiiನಕ, ೩.ಪ್ರವಾಳ ಮಣಿ, ೪.ಸ್ಪುಟ ಮಾಲಿಕೆ, ೫.ಖಚಿಡಾಬ್ರಕ, ೬.ಮಂಡಲಾಕೃತಿ೭.ಕ್ರೋಧ ಚರ್ವಿತ, ೮.ವರಾಹ ಚರ್ವಿತ.
  • ೧೪. ಅಷ್ಟ ಮದ, :- ೧.ಕುಲ, ೨.ಬಲ, ೩.ಧನ, ೪.ರೂಪ, ೫.ಯೌವನ, ೬.ವಿದ್ಯೆ, ೭.ರಾಜ್ಯ, ೮.ತಪ್ಪದೇಳ್ಗೆ.
    1. ಇನ್ನೊಂದು ವಿಧ :- ೧. ಅನ್ನ, ೨.ಅರ್ಥ, ೩.ಯೌವನ, ೪.ಸ್ತ್ರೀ, ೫. ವಿದ್ಯಾ, ೬.ಕುಲ, ೭.ರೂಪ, ೮.ಉದ್ಯೋಗ.
  • ೧೫. . ಪಾಶಾಷ್ಟಕ :- ೧.ತೃಷೆ, ೨.ಶಂಕೆ, ೩.ಭೀತಿ, ೪.ಲಜ್ಜೆ, ೫.ಜಿಗುಪ್ಸೆ, ೬.ಕುಲ, ೭.ಶೀಲ, ೮.ಗರ್ವ.
  • ೧೬. ಅಷ್ಟ ಪ್ರಕೃತಿ :-೧.ಭೂ, ೨.ಜಲ, ೩.ವಹ್ನಿ, ೪.ವಾಯು, ೫.ನಭ, ೬.ಮನಸ್ಸು ೭.ಬುದ್ಧಿ, ೮.ಅಹಂಕಾರ,
  • ೧೭. ಅಷ್ಟ ಪುರ :- ೧.ವಿಯದಾದಿ ಭೂತಿ (?), ೨.ತನ್ಮಾತೃ, , ೩.ಶ್ರೋತ್ರಾದಿ ಜ್ಞಾನೇಂದ್ರಿಯ, ೪.ವಾಗಾದಿ ಕರ್ಮೇಂದ್ರಿಯ, ೫.ಪ್ರಾಣಾದಿ ವಾಯು, ೬.ಮನಸಾದ್ಯಂತಃಕರಣ, ೭.ಕಾಮ ಕರ್ಮ, ೮.ತಮ.
  • ೧೮. ಅಷ್ಟ ಸಿದ್ಧಿಗಳು :- ಅವುಗಳಲ್ಲಿ
    1. . ಅಷ್ಟ ಪಾರ್ಥಿವ ಸಿದ್ಧಿಗಳು :- ೧.ಸ್ಥೂಲವಗುವುದು, ೨.ಸೂಕ್ಷ್ಮವಾಗುವುದು, ೩.ಬಾಲಕನಾಗುವುದು, ೪.ಯುವಕನಾಗುವುದು, ೫.ವೃದ್ಧನಾಗುವುದು, ೬.ನಾನಾಜಾತಿ ರೂಪವೈದುವುದು, ೭.ಪ್ಲಥ್ವಿ ಹೊರತಾಗಿ ನಾಲ್ಕು ಭೂತಗಳಿಂದಲೇರೂಪ ಧರಿಸುವುದು,೮.ನಿತ್ಯ ಸುಗಂಧ ಸೇವಿಸುವುದು.
    2. . ಅಷ್ಟ ಆಪ್ತತ್ವ ಸಿದ್ಧಿಗಳು:- ೧.ಜಲದೊಳ್ ನೀರಸತೆ ಯುಂ ಮಾಳ್ಪುದು, ೨.ಭೂ ಸದೃಶ ಜಲ ಗಮನಮಂ ಮಾಳ್ಪುದು, ೩.ಅನಾತುರ ಸಮದ(ಸಮುದ್ರ ?) ಪಾನ ಮಾಳ್ಪುದು, ೪.ನಿರ್ಜರಸ್ಥಾನದಲ್ಲಿ ಜಲ ದರ್ಶನಗೋಲಿಪುದು, ೫.ಶಿಲಾದಿ ತಾನದಿಂದ, ವೃಣವಿಲ್ಲದಿರ್ಪುದು, ೬.ಕರಪುಟದಲ್ಲಿ ಸಮುದ್ರ ಧರಿಪುದು, ೭.ನಿರಸ ವಸ್ತುವಚಿರಸವತ್ತಾಗಿ ಮಾಳ್ಪುದು, .೮.ಮೇಲಣ ವಸ್ತುಗಳಿಂದಲೇ ದೇಹ ಧರಿಸುವುದು..
    3. . ಅಷ್ಟ ತೇಜಸ ಸಿದ್ಧಿಗಳು :- ೧.ಶರೀರದೊಳಗೆ ಅಗ್ನಿ ನಿರ್ಮಾಣ, ೨.ಅಗ್ನಿ ಭಯವರ್ಜನ, ೩.ಜಲದಲ್ಲಿ ಅಗ್ನಿ ಸ್ಥಾಪನ, ೪.ಪಾಣಿಯಲ್ಲಿ ಪಾವಕ ಧಾರಣ, ೫.ಅನ್ನಾದಿ ಪಚನದೊಳ್ ಅಪ್ರಯತ್ನ, ೬.ಜಗದ್ದಹನ, ೭.ಅಗ್ನಿಹೊರತಾಗಿ ಮೇಲಣ ಭೂತದಿಂದಲೇ ದೇಹ ಧಾರಣ, ೮. ಷಡ್ ವಿಸರ್ಗಗಳಲ್ಲಿ ಒಂದುಗೂಡುವಿಕೆ,
    4. . ಅಷ್ಟ ವಾಯು ಸಿದ್ಧಿಗಳು :- ೧.ಮನೋಜವತ್ವ, ೨.ಭೂತಾಂಶ ಪ್ರವೇಶನ, ೩.ಪರ್ವತಾದಿ ಭಾರ ಧಾರಣ, ೪.ಗುರುತ್ವ, ೫.ಲಘುತ್ವ, ೬.ಹಸ್ತಾನಿಲ ಧಾರಣ,೭.ಆಗ್ರಾಂಗುಲಿ ಭೂಕಂಪನ, ೮೦.ವಾಯು ಹೊರತಾಗಿ ಗಗನ ಮಾತ್ರದಿಂದಲೇ ದೇಹ ಧಾರಣ.
    5. . ಅಷ್ಟ ಅಂಬರ ಸಿದ್ಧಿಗಳು :- (ಇವು ಸೇರಿ ನಾಲ್ವತ್ತು ಇಚಿದ್ರನ ಗುಣಗಳು) ೧.ಛಾಯಾ ವಿಹೀನತೆ, ೨.ಇಂದ್ರಿಯಾದೃಶ್ಯತೆ, ೩.ಖೇಚರತೆ, ೪ಯಥೇಷ್ಟವಿಷಚಿiಸಂಗತಿ, .೫.ಶೈಲ ಲಂಘನ, ೬.ಆಕಾಶ ಪಿಂಡೀಕರಣ, . ೭.ಶೈಲ ಗರ್ಭೀಕರಣ,.೮.ಅಶರೀರತ್ವ. // ಅಂಬಿಕಾಯೋಗಿ ಗುಣಗಳು :-೧.ನಾದಾನುಭೂತಿ, ೨.ನಾದಲಯ, ೩.ನಿರವಕಾಶ ಪೂರ್ಣತೆ, ೪.ಅವಕಾಶ ಕಲ್ಪನೆ, ೫.ಬಯಲಾಗುವಿಕೆ, ೬.ನಿರೂಪ ದರ್ಶನ, ೭.ವಾಯು ಪರಿಕಲ್ಪ, ೮.ಸ್ವರ ರೂಪತೆ,
    6. . ಅಷ್ಟ ಮಾನಸ ಸಿದ್ಧಿಗಳು :- ೧.ಯಥಾಕಾಮೋಪಲಬ್ಧ, ೨.ಯಥಾಕಾಮ ನಿUಮನ, ೩.ಸರ್ವ ಕಾಮ ತಿರಸ್ಕರಣ, ೪.ಸಕಲಗುಹ್ಯಾರ್ಥ ದರ್ಶನ, ೫.ಕರ್ಮಾನುಗುಣ ನಿರ್ಮಾಣ, ೬.ವಶಿತ್ವ, ೭.ಪ್ರಿಯ ದರ್ಶನ, ೮.ಸಂಸಾರ ದರ್ಶನ,
      1. . ಇನ್ನೊಂದು ಬಗೆ :-೧.ಶಮ, ೨.ದಮ, ೩.ಉಪರತಿ, ೪.ತಿತಿಕ್ಷೆ, ೫.ಸಮಾಧಾನ, ೬.ಇಚ್ಛಾ ಪ್ರಾಪ್ತಿ, ೭.ಅನಿಚ್ಛೆ, ೮.ಸರ್ವಜ್ಞತೆ.
    7. . ಅಣಿಮಾದಿ ಅಷ್ಟ ಸಿದ್ಧಿಗಳು :- ೧.ಅಣಿಮಾ, ೨.ಮಹಿಮಾ, ೩.ಲಘಿಮಾ, ೪.Uರಿಮಾ, ೫.ಪ್ರಾಪ್ತಿ, ೬.ಪ್ರಾಕಾಮ್ಯ, ೭.ಈಶ್ವರತ್ವ, ೮.ವಶಿತ್ವ.
    8. . ಅಷ್ಟ ಅಹಂಕಾರ ಸಿದ್ಧಿಗಳು, :-(ಒಟ್ಟು ೫೬ ಸಿದ್ಧಿಗಳು ಪ್ರಜಾಪತಿಯ ಗುಣಗಳು.) ೧.ಬೇಧನ, ೨.ತಾಡನ, ೩.ಬಂಧನ, ೪.ಮೋಹನ, ೫.Uಹಣ, ೬.ಸಂಸಾರ ಪರಿವರ್ತನ, ೭.ಪ್ರಸಾದ, ೮.ಮೃತ್ಯಕಾಲ ಜಯ.
      1. ದ್ವೈತಿ ಗುಣಗಳು :- ೧.ಸ್ವತಂತ್ರ ಸಿದ್ಧಿ, ೨.ಇತರ ನಿಯಾಮಕತೆ, ೩.ಯತೇಚ್ಛಾ ವರ್ತನೆ, ೪.ಸ್ವಚ್ಛಂದ ವ್ರತ, ೫.ಅಗ್ರ ಭಾಗ ಹಾರಿತ್ವ, ೬.ಅನಿರತ ಸೇವೆ, ೭.ಅಹಂಭಾವ, ೮.ಧರ್ಮ ವೀರತ್ವ.
    9. . ಅಷ್ಟ ಬುದ್ಧಿ ಸಿದ್ಧಿಗಳು, :- ೧.ಜಗಜ್ಜನನ, ೨.ಜಗದ್ರಕ್ಷಣ, ೩.ಜಗತ್ಸಂಹರಣ, ೪.ಇಷ್ಟ ಕರಣ, ೫.ಅಭಿಮತ ಲೋಕಾಪ್ರವರ್ತನ, ೬.ಅಸದೃಶ ಲೋಕ ನಿರ್ಮಾಣ, ೭.ಅಶುಭಕರಣ, ೮.ಶುಭ ಕರಣ.
      1. ವ್ಭೆದಾಂತಿ ಗುಣಗಳು :-೧.ನಿತ್ಯಾನಿತ್ಯ ವಿವೇಕ, ೨.ಸಕಲ ಭೋಗವಿರಕ್ತಿ, ೩.ಪರಮಶಾಚಿತಿ, ೪.ಅನ್ಯಾಭಿಚರಿತ ಭಕ್ತಿ, ೫.ಧೃಡತರ ಶ್ರದ್ಧೆ, ೬.ವೇದಿಕಾಸ್ತಿಕ್ಯ, ೭.ಬ್ರಹ್ಮ ಜ್ಞಾನ, ೮.ಬ್ರಹ್ಮಾನಂದ. (ಇವು ಒಟ್ಟು ೬೪ ಸಿದ್ಧಿಗಳು ಬ್ರಹ್ಮ ರುದ್ರ ವಿಷ್ಣು ಶಿವಯೋಗಿ ಗುಣಗಳು :ಮೊದಲನೆಯ ಪಾರ್ಥಿವ ಸಿದ್ಧಿಯನ್ನು ಬಿಡಬೇಕಾಗುವುದು) )
  • ೧೯. ವೈದ್ಯ ಅಷ್ಟ ಅಂಗ (ವೈದ್ಯಾಷ್ಟಾಂಗ) :- ೧.ಶಲ್ಯ, ೨.ಶಾಲಕ್ಯ, ೩.ಕಾಯ ಚಿಕಿತ್ಚಾ, ೪.ಭೂತ ವಿದ್ಯಾ, ೫.ಕೌಮಾರ ಬೃತ್ಯ, ೬.,ಅಗದ ತಂತ್ರ, ೭,ರಸಾಚಿiನ ತಂತ್ರ, ೮. .ವಾಜೀಕರಣ
  • ೨೧. ಅಷ್ಟಾದಿಶಾಬ್ದಕರು :- ೧.ಇಂದ್ರ, ೨.ಚಂದ್ರ, ೩.ಕಾಶ ಕೃತ್ನ, ೪.ಪಿಶಲೀ, ೫.ಶಕಟಾಯನ, ೬.ಪಾಣಿನಿ, ೭.ಅಮರಜಿನೇಂದ್ರ, ೮.ಜಯಂತಿ.
  • ೨೨. ಮೈಥುನಾಷ್ಟಂಗ :- ೧.ಸ್ಮರಣ, ೨.ಕೀರ್ತನ, ೩.ಕೇಳಿ, ೪.ಪ್ರೇಕ್ಷಣ, ೫.ಗುಹ್ಯ ಭಾಷಣ, ೬.ಸಂಕಲ್ಪ, ೭ ಅಧ್ಯವಸಾಯ, ., ೮.ಕ್ರಿಯಾನಿಷ್ಪತ್ತಿ
  • ೨೩. ಅಷ್ಟ ವಿವಾಹ :- ೧.ಬ್ರಹ್ಮ, (ಏನೂ ತೆಗೆದುಕೊಳ್ಳದೆ ಹುಡುಗಿಯನ್ನು ಕೊಡುವುದು.), ೨.ದೈವ (ಯಜ್ಞದಳ್ಲಿ ದಕ್ಷಿಣೆಯಾಗಿ ಕೊಡುವುದು,), ೩.ಆರ್ಷ (ಒಂದುಹೋರಿ / ಒಂದುದನ ಪ್ರತಿ ಫಲವಾಗಿ ತೆಗೆದುಕೊಂಡು ಕೊಡುವುದು), ೪.ಪ್ರಜಾಪತ್ಯ,(ಹುಡುಗಿಯ ಮನಸ್ಸುಳ್ಳವನಿಗೆ ಏನೂ ತೆಗೆದುಕೊಳ್ಳದೆ ಕೊಡುವುದು,) , ೫.ಗಾಂಧರ್ವ (ತಾವು ತಾವೇ ತೀರ್ಮಾನಿಸಿ ಪತಿ ಪತ್ನಿಯರಾಗುವುದು.) ೬.ಆಸುರ,(ಹೆಣ್ಣಿ ನ ತಂದೆ ತಾಯಿ, ಬಂಧುಗಳಿಗೆ ಹಣ ಕೊಟ್ಟು ವಿವಾಹವಾಗುವುದು,) ೭.ಪೈಶಾಚ (ಹೆಣ್ಣನ್ನು ಕದ್ದು ಕೊಂಡು ಹೋಗಿ ಮದುವೆಯಾಗುವುದು,), ೮.ರಾಕ್ಷಸ, (ಬಲಾತ್ಕಾರದಿಂದ ಮದುವೆಯಾಗುವುದು)
  • ೨೪. ಸೈನ್ಯ ಅಷ್ಟಾಂಗಗಳು :- ೧.ಆನೆ, ೨.ಕುದುರೆ, ೩.ಫಿರಂಗಿ ಮೊದಲಾದ ಯಂತ್ರ ವಿಶೇಷ, ೪.ಕೋಟೆ ಕೊತ್ತಲು, ೫.ಆಯುಧ, ೬.ಪದಾತಿ, ೭.ಧನ, ೮.ರಥ.
  • ೨೫. ಅಷ್ಟ ವರ್ಗಗಳು,:- ೧.ಪರರಸ್ವರೂಪ ತಿಳಿದು ಆಚಿiiರೀತಿಯಿಂ ಕಾರ್ಯ ನಡೆಸುವುದು, ೨.ಕೃಷಿ ವಾಣಿಜ್ಯ, ೩.ದುರ್ಗಗಳು, ೪.ಬೇಕಾದ ಠಾವುಗಳಲ್ಲಿ ಸೇತು ಕಟ್ಟುವುದು, ೫.ಆನೆ ಕೊಪ್ಪಲುಗಳನ್ನು ಸವರಿಸುವುದು, ೬.ನವ ರತ್ನಗಳನ್ನು ಶೋಧಿಸುವುದು, ೭.ಅರಸುಗಳಿಂದ ಕಪ್ಪ ಕೊಂಬುದು, ೮.ಪಾಳು ಭೂಮಿಗಳಲ್ಲಿ Uಮ ಕಟ್ಟುವುದು.
  • ೨೬. ಅಷ್ಟ ಮಾ ಸ್ತ್ರೀಯರು :- ೧.ರುಕ್ಮಿಣಿ, ೨.ಸತ್ಯಭಾಮಾ, ೩.ಜಾಂಬವತಿ, ೪.ಸುಕೇಶಿ (ಗಾಂಧಾರ ರಾಯನ ಮಗಳು,) ೫.ಪ್ರಭೆ ಅಥವಾ ಸುಮಿತ್ರೆ, ೬.ಲPಣೆ, ೭.ಮಿತ್ರವಿಂದೆ, ೮.ಪದ್ಮಿನಿ-ಸ್ಮದಂತೆ.
  • ೨೭. ಶಬ್ದಾಷ್ಟ ದೋಷಗಳು:- ೧.ಶಬ್ದ ಪನರುಕ್ತಿ, ೨.ಅರ್ಥ ಪನರುಕ್ತಿ, ೩.ಅರ್ಥ ಲೋಪ, ೪.ವಿರುದ್ದಾರ್ಥ, ೫.ಚುತಕ್ರಮ, ೬.ವ್ಯವಹಿತ, ೭.ವಿಸಂಧಿ, ೮.ನೇಯಾರ್ಥ
  • ೨೮. , ಅಷ್ಟ ದ್ರವ್ಯ ಹೋಮಕ್ಕೆ :-೧.ಅಶ್ವತ್ಥ, ೨.ಉದುಂಬರ, ೩.ಪ್ಲಕ್ಷ, ೪.ನ್ಯಗ್ರೋಧ, ೫.ತಿಲ, ೬.ಸಿದ್ಧಾರ್ಥ, ೭.ಪಾಚಿiಸ, ೮.ಆಜ್ಯ,;
    1. . Uಣಪತಿಹೋಮದ ಪಂಚ ಕಜ್ಜಾಯಕ್ಕೆ :-೧.ಎಳ್ಳು,, ೨.ತೆಂಗಿನಕಯಿ, ೩.ಬೆಲ್ಲ, ೪.ಅರಳು, ೫.ಅವಲಕ್ಕಿ, ೬.ಬಾಳೇಹಣ್ಣು, ೭.ಕಬ್ಬು, ೮.ಅರಳು ಹಿಟ್ಟು
  • ೨೯. ಅಷ್ಟ ತಾರಿಣೀ :- ೧.ತಾರಾ, ೨.ಉಗ್ರಾ, ೩.ಮಹೋಗ್ರಾ, ೪.ವಜ್ರಾ, ೫,ಕಾಲೀ, ೬..ಸರಸ್ವತೀ, ೭.ಕಾಮೇಶ್ವರೀ, ೮.ಚಾಮುಂಡಾ.
  • ೩೦. ಅಷ್ಟ ಧಾತು :- ೧.ಸ್ವರ್ಣ, ೨.ರೂಪ್ಯ, ೩.ತಾಮ್ರ, ೪.ರಂಗಂ, ೫.ಯಶದಂ, ೬.ಸೀಸಂ, ೭.ಲೋಹಂ, ೮.ಪರಾದಂ.
  • ೩೧. ಅಷ್ಟ ಗುಣ :- ೧.ಭೂತ ದಯಾ, ೨ Pಂತಿ,.೩.ಅನಸೂಯಾ, ೪.ಶೌಚ, ೫.ಅನಾಚಿiiಸ, ೬.ಮಂಗಲ, ೭.ಅಕಾರ್ಪಣ್ಯ, ೮. ಅಸ್ಪೃಹಾ.
  • ೩೨. ಅಷ್ಟ ಮೂರ್ತಿ :-೧.ಪ್ಲಥ್ವಿ, ೨.ಆಪ, ೩.ತೇಜ, ೪.ವಾಯು, ೫.ಆಕಾಶ, ೬.ಸೂರ್ಯ, ೭.ಚಂದ್ರ, ೮.ಆತ್ಮ.
  • ೩೩. ಅಷ್ಟ ಮಂಗಲ :- ೧.ಮೃಗರಾಜ, ೨.ವೃಷ, ೩.ಆನೆ, ೪.ಕಲಶ, ೫.ವ್ಯಜನ, ೬.ವೈಜಯಂತಿ (ಮಾಲೆ), ೭.ಭೇರಿ, ೮.ದೀಪ,
    1. ಇನ್ನೊಂದು ವಿಧ :- ೧.ಬ್ರಾಹ್ಮಣ, ೨.ಗೋವು, ೩.ಹುತಾಶನ, ೪.ಹಿರಣ್ಯ, ೫.ಸರ್ಪಿ, ೬.ಆದಿತ್ಯ, ೭.ಆಪ, ೮.ರಾಜ.
  • ೩೪. ಅಷ್ಟ ಏನ ಸಂತಾನಗಳು, (?) (ಅಷ್ಟ ಭ್ರಮೆ ?)  :-೧.ಜ್ಞಾನಾವರಣೀಯ, ೨.ದರ್ಶನಾವರಣೀಯ ೩.ವೇದನೀಯ ( ಚಿi_), ೪.ಮೋಹನೀಯ (ಚಿ) i, ೫.ಆಯುಷ್ಯ, ೬.ನಾಮ, ೭.ಗೋತ್ರ, ೮.ಅಂತರಾಯ.
  • ೩೫. ಅಷ್ಟ ನಿಜಗುಣಗಳು :- ೧.ಸಿದ್ಧ ಸಮ್ಯಕ್ತ್ವ, ೨.ಸಿದ್ಧ ದರ್ಶನ, ೩.ಸಿದ್ಧ ವೀಚಿi, ೪.ಸಿದ್ಧ ಜ್ಞಾನ, ೫.ಸಿದ್ಧ ಸೂಕ್ಷ್ಮ, ೬.ಸಿದ್ಧಾವಗಹನ, ೭.ಸಿದ್ಧಗುರುಲಘು, ೮.ಸಿದ್ಧಾವ್ಯಬಾಧ,
  • ೩೬. ಅಷ್ಟ ವಿಧ ಧರ್ಮ :- ೧.ಇಚ್ಛಾ, ೨.ಅಧ್ಯಯನ, ೩.ದಾನ , ೪.ತಪಸ್ಸು, ೫.ಸತ್ಯ, ೬.ದೃತಿ, ೭.ಕ್ಷಮಾ, ೮.ಅಲೋಭಾ,
  • ೩೭. ಅಘ್ಯ ಅಷ್ಟ ಗಂಧ  :- (ಅಘ್ಯಾಷ್ಟಗಂಧ)
    1. ಶಕ್ತಿ ಸಂಬಂಧ ::-೧.ಚಂದನ, ೨.ಅಗರು, ೩.ಕರ್ಪೂರ, ೪.ಕಚೋರ, ೫.ಕುಂಕುಮ, ೬.ರೋಚನ, ೭.ಜಟಾಮಾಂಸಿ ೮.ಕಪಿ.
    2. ವಿಷ್ಣು ಸಂಬಂಧ:- ೧.ಚಂದನ ೨.ಅಗರು, ೩.ಹ್ರೀವೇದ, ೪ಕುಶ, .೫ಕುಂಕುಮ, .೬.ಸೇವ್ಯಕ, ೭.ಜಟಾಮಾಂಸಿ, ೮. ದೇವದಾರು,
    3. ಶಿವ ಸಂಬಂಧ, :- ೧.ಚಂದನ, ೨.ಅಗರು, ೩.ಕರ್ಪೂರ, ೪.ತಮಾಲ, ೫.ಜಲ, ೬.ಕುಂಕುಮ, ೭.ಉಶೀರ, ೮.ಕುಷ್ಟ.
  • ೩೮. ಅಷ್ಟ ಕಷ್ಟಗಳು ೧.ದೇಶಾಚಿತರ, ೨.ಭಾರ್ಯಾ ವಿಯೋಗ ೩.ಕಷ್ಟ ಕಾಲದಲ್ಲಿ ಪ್ರಿಯ ಬಂಧು ದರ್ಶನ,೪.ಬಿಟ್ಟೆಂಜಲು ತಿನ್ನುವುದು, ೫.ಶತ್ರುವನ್ನು ಸ್ನೇಹಿಸುವುದು ೬.ಪರಾನ್ನಕ್ಕೆ ಕಾಯುವುದು, ೭.ಸಭೆಯಲ್ಲಿ ಅಪ್ರೆತಿಷ್ಟೆ, ಹೊಂದುವುದು, ೮.ದಾರಿದ್ರ್ಯವನ್ನು ಅನುಭವಿಸುವುದು.
  • ೩೯. ಅಷ್ಟ ದಿಕ್ಕುಗಳು:- ೧.ಪೂರ್ವ, ೨.ಆಗ್ನೇಯ, ೩.ದಕ್ಷಿಣ, ೪.ನೈರುತ್ಯ, ೫.ಪಶ್ಚಿಮ, ೬.ವಾಯವ್ಯ, ೭.ಉತ್ತರ, ೮.ಈಶಾನ್ಯ.
  • ೪೦.. ಅಷ್ಟ ದಿಕ್ಪಾಲಕರು, ಅವರ- ನಗರಗಳು :- ವರ್ಣಗಳು :- ವಾಹನಗಳು :- ಆಯುಧಗಳು :- ಪತ್ನಿಯರು :-
    1. ಅಷ್ಟ ದಿಕ್ಪಾಲಕರು,೧.ಇಂದ್ರ, ೨.ಅಗ್ನಿ, ೩.ಯಮ, ೪.ನಿIತಿ,(ನೈರುತಿ), ೫.ವರುಣ, ೬.ವಾಯು, ೭.ಕುಬೇರ, ೮.ಈಶಾನ.
    2. ನಗರಗಳು :-೧.ಅಮರಾವತಿ, ೨.ತೇಜೋವತಿ, ೩.ಸಂಯಮ (ಜೈಮಿನಿ), ೪.ರಕ್ಷೋವತಿ, ೫.ಶುದ್ಧವತಿ, ೬.ಗಂಧವತಿ, ೭.ಮಹೋದಯ, ೮.ಯಶೋವತಿ.
    3. ವರ್ಣಗಳು :-೧.ಶುಕ್ಲ, ೨.ರಕ್ತ, ೩.ಕೃಷ್ಣ, ೪.ಧೂಮ್ರ, ೫.ಹರಿತ, ೬ ಕಪಿಲ,೭.ಚಿತ್ರ, ೮.ಧವಳ.
    4. ವಾಹನಗಳು :-೧.ಆನೆ ೨.ಟಗರು,೩.ಕೋಣ,೪.ನರ, ೫.ಮೊಸಳೆ,೬.ಹುಲ್ಲೆ,೭.ಕುದುರೆ,೮.ಎತ್ತು.
    5. ಆಯುಧಗಳು :-೧.ವಜ್ರ, ೨.ಶಕ್ತಿ, ೩.ದಂಡ,.೪.ಖಡ್ಗ, ೫.ಪಾಶ, ೬.ಅಂಕುಶ,೭.ಗದಾ, ೮.ಶೂಲ
    6. ಪತ್ನಿಯರು :-೧.೨.೩.೪.೫.೬.೭.೮.
  • .೪೧.ಅಷ್ಟ ಭೈರವರು ಇನ್ನೊಂದು ಬಗೆ; ಅವರ ಶಕ್ತಿಗಳು :- ವಾಹನಗಳು :- ಇವರಿರುವ ಬಾಗಿಲು :-
    1. . ೧.ಅಸಿತಾಂಗ, ೨.ರುರು, ೩.ಚಂಡ, ೪.ಕ್ರೋಧ, ೫.ಉನ್ಮತ್ತ, ೬.ಕಪಾಲ, ೭.ಭೀಷಣ, ೮.ಸಂಹಾರ.
    2. . ಇನ್ನೊಂದು ಬಗೆ :- (೧.ಅಸಿತಾಂಗ, ೨.ಸಂಹಾರ ೩. ರುರು, ೪.,ಕಪಾಲ, ೫ ಕ್ರೋಧ., ೬.ತಾಮ್ರಚೂಡ, ೭.ಚಂದ್ರಚೂಡ, ೮ಮಹಾಭೈರವ.)
    3. . ಅವರ ಶಕ್ತಿಗಳು :೧.ಬ್ರಾಹ್ಮೀ, ೨.ಮಾಹೇಶ್ವರಿ, ೩.ಕೌಮಾರಿ, ೪.ವೈಷ್ಣವೀ, ೫.ವರಾಹಿ, ೬.ಮಾಹೇಂದ್ರಿ, ೭.ಚಾಮುಂಡಿ, ೮.ಮಹಾಕಾಳೀ.
    4. . ವಾಹನಗಳು :- ೧.ಹಂಸ, ೨.ಅಜ, ೩.ಮಯೂರ, ೪.Uರುಡ, ೫.ಮಹಿಷ, ೬.Uಜ, ೭.ಸಿಂಹ, ೮.ವೃಷಭ.
    5. . ಇವರಿರುವ ಬಾಗಿಲು :-೧.ಮೂಡು (ಪೂರ್ವ), ೨.ಆಗ್ನೇಯ, ೩.ತೆಂಕು (ದಕ್ಷಿಣ), ೪.ನೈರುತ್ಯ, ೫.ಪಡು (ಪಶ್ಚಿಮ), ೬.ವಾಚಿiವ್ಯ, ೭.ಬಡಗು (ಉತ್ತರ), ೮.ಈಶಾನ್ಯ.

೪೨. ೧.೨.೩.೪.೫.೬.೭.೮.

ನವ[ಬದಲಾಯಿಸಿ]

______________

  • ೧. ನವ ಗುಣಗಳು :-೧.ಬುದ್ದಿ, ೨.ಸುಖ, ೩.ದಃಖ, ೪.ರಾಗ, ೫.ದ್ವೇಷ, ೬.ಪ್ರಯತ್ನ, ೭.ಧರ್ಮ, ೮.ಅಧರ್ಮ, ೯.ಭಾವನೆ,
  • ೨. ನವ ರಸಗಳು,:- ೧.ಶೃಂಗಾರ, ೨.,ವೀರ, ೩ಕರುಣ, ೪.ಅದ್ಭುತ, ೫.ಹಾಸ್ಯ. ೬.ಭಯಾನಕ ೭.ಭೀಭತ್ಸ, ೮.ರೌದ್ರ, ೯.ಶಾಂತ, (ವಾತ್ಸಲ್ಯ ಸೇರಿ ನಾಟಕದ ರಸ ಹತ್ತು)
  • .೩ ನವನಾಥ ಸಿದ್ಧರು :- ೧.ಸತ್ಯ ನಾಥ ೨.ಸತೇಕನಾಥ (ಸತೋಕನಾಥ) ೩.ಆದಿನಾಥ, ೪.ಅನಾದಿನಾಥ ೫.ಅಕುಳನಾಥ, ೬.ಮಾತಂತ ನಾಥ, ೭.ಮಚ್ಚೇಂದ್ರ ನಾಥ, ೮.ಘಟಯಂತ್ರನಾಥ, ೯.ಗೋರಕ್ಷ ನಾಥ.
  • ೪. ನವ ಬ್ರಹ್ಮರು :- ೧.ಮರೀಚಿ- ಬ್ರಹ್ಮನ ನೇತ್ರದಲ್ಲಿ ಹುಟ್ಟಿದ್ದು, ೨.ಬೃಗು-ಹೃದಯದಲ್ಲಿ.., ೩.ಅಂಗೀರಸ-ಶಿರದಲ್ಲಿ.., ೪.ಪುಲಸ್ತ್ಯ-ಉದಾನ ವಾಯುವಿನಲ್ಲಿ, ೫.ಪುಲಹ-ವ್ಯಾನ ವಾಯುವಿನಲ್ಲಿ..,.೬.ಕ್ರತು-ಅಪಾನ ವಾಯುವಿನಲ್ಲಿ..,, ೭.ದಕ್ಷ-ಪ್ರಾಣ ವಾಯುವಿನಲ್ಲಿ.., ೮.ಅತ್ರಿ,-ಶ್ರೋತ್ರ ವಾಯುವಿನಲ್ಲಿ.., ೯.ವೃದ್ಧ ವಸಿಷ್ಟ,- ಸಮಾನ ವಾಯುವಿನಲ್ಲಿ
  • ೫. ಶೃಂಗಾರ ಸಂಪನ್ನ ನವಕ :- ೧.ಪಚ್ಚೆ ಕರ್ಪೂರ, ೨.ಪುನುಗು, ೩.ಜವಾರಿ, ೪.ಕಸ್ತೂರಿ, ೫.ಕುಂಕುಮ ಕೇಸರ, ೬.ನಖ, ೭.ಕಚೋರ, ೮.ಗಂಧ, ೯.ಚಂದನ.
  • ೬. ನವ ನಿಧಿಗಳು :-೧.ಮಹಾಪದ್ಮ, ೨.ಪದ್ಮ, ೩.ಶಂಖ, ೪.ಮಕರ, ೫.ಕಚ್ಪಪ (ಆವೆ ) ೬..ಮುಕುಂದ, ೭.ಕುಂದ, .೮.ನೀಲ, .೯.
  • ೭. ನವ ಧಾನ್ಯಗಳು :- ೧.ಭತ್ತ, ೨.ಗೋಧಿ, ೩.ಕಡಲೆ, ೪.ತೊಗರಿ, ೫.ಹುರುಳಿ, ೬.ಎಳ್ಳು, ೭.ಅವರೆ, ೮.ಉದ್ದು, ೯.ಹೆಸರು.
  • ೮. ನವ ರತ್ನಗಳು :- ೧.ವಜ್ರ, ೨.ವೈಡೂರ್ಯ, ೩.ಗೋಮೇಧಿಕ, ೪.ಪಷ್ಯರಾಗ, ೫.ನೀಲ, ೬.ಮರಕತ, ೭.ಮಾಣಿಕ್ಯ, ೮.ವಿದ್ರುಮ, *೯. ಮೌಕ್ತಿಕ.
    1. . ಇನ್ನೊಂದು ಬಗೆ :- (ವಜ್ರ, ಮಾಣಿಕ್ಯ, ಮರಕತ, ಪುಷ್ಯರಾಗ, ನೀಲ, ಗೋಮೇಧಿಕ, ವೈಢೂರ್ಯ, ಮುತ್ತು, ಹವಳ.)
  • ೯. ನವ ರತ್ನಗಳು ವಿಕ್ರಮಾದಿತ್ಯನ ಆಸ್ಥಾನದವರು :- ೧.ಧನ್ವಂತರಿ, ೨.ಕ್ಷಪಣಕ, ೩.ಅಮರಸಿಂಹ, ೪.ಶಂಕು, ೫.ವೇತಾಲ ಭಟ್ಟ,(ಭಟ್ಟಿಣಿ) ೬.ಘಟಕರ್ಪರ, ೭.ಕಾಲಿದಾಸ, ೮.ವರಾಹಮಿಹಿರ, ೯.ವರರುಚಿ.
  • ೧೦. ನವ ದ್ರವ್ಯಗಳು, :- ೧.ಪೃಥ್ವಿ, ೨.ಆಪ, ೩.ತೇಜ, ೪.ವಾಯು, ೫.ಆಕಾಶ. (ಪಂಚ ಭೂತಗಳು), ೬.ಕಾಲ, ೭.ಸ್ಥಲ, ೮.ಆತ್ಮ, ೯.ಬುದ್ಧಿ.
  • ೧೧. ನವ ಶಾಯತರು :- ೧.ಗೋಪ, ೨.ಮಾಲಿ, ೩.ತೈಲಿ, ೪.ತಂತ್ರಿ, ೫.ಮೋದಕ, ೬.ವಾರುಜಿ, ೭.ಕುಲಾಲ, .೮.ಕರ್ಮಕಾರ, ೯.ನಾಪಿತ. ( ನಿಮ್ನ ವರ್ಗದವರು ಅಥವಾ ಕೀಳು ಜಾತಿಯವರೆಂದು ಹಿಂದೆತಿಳಿಯಲ್ಪಡುತ್ತಿದ್ದವರು.)
  • ೧೨. ನವಖಂಡಗಳು :-೧.ಭಾರತ, ೨.ನರಭೂ, ೩.ಕಿಂಪುರುಷ, ೪.ಹರಿವರ್ಷ, ೫.ಭದ್ರಾಶ್ವ, ೬.ಹಿರಣ್ಮಯ, ೭.ಇಳಾವೃತ್ತ, ೮.ಕೇತುಮಾಲ, ೯. ಉತ್ತರಕುರು,(ಸಿರಿಗನ್ನಡ ಅರ್ಥಕೋಶ)
  • ೧೩. ನವ ವಿಧ ಭಕ್ತಿ ೧.ಪೂಜೆ, ೨.ಸ್ಮರಣೆ ೩.ಸಖ್ಯ ೪.ಕಾಂತಾಭಾವ, ೫.ವಾತ್ಸಲ್ಯ, ೬.ಮಾzಧುರ್ಯ, ೭.ಆತ್ಮ ನಿವೇದನ, ೮.ತನ್ಮಯ, ೯.ವಿರಹ. (ನಾರದ ಭಕ್ತಿ ಸೂತ್ರ) ;
    1. . ಇನ್ನೊಂದು ಬಗೆ, :- ೧.ಶ್ರವಣ, ೨.ಕೀರ್ತನ, ೩.ಸ್ಮರಣ, ೪.ಪಾದ ಸೇವನ, ೫.ಅರ್ಚನ, ೬.ವಂದನ.೭.ದಾಸ್ಯ, ೮.ಸಖ್ಯ, ೯.ಆತ್ಮನಿವೇದನ.

ದಶ[ಬದಲಾಯಿಸಿ]


  • ೧. ದಶ ವಾದ್ಯಗಳು :- ೧.ಭದ್ರ ವೆಂಬ ಕರಾಡಿ ೨.ಶಾಸಕವೆಂಬ ನಗಾರಿ, ೩.ಭೀಷಣವೆಂಬ ತ್ರಾಸಾ, ೪.ಘೋಷಣ ವೆಂಬ ಹುಡುಕ್ಕಾ, ೫.ಡಿಂಡಿಮ ವೆಂಬ ಡಿಕ್ಕಿ, ೬.ಡಮರುವೆಂಬ ಡೋಲು, ೭.ಜರ್ಝರ ವೆಂಬ ಝಾಯಿ, ೮.ಕಾಹಳ ವೆಂಬ ಕಹಳೆ, ೯.ದುಂದುಭಿ ಎಂಬ ಧೋರ, ೧೦.ಘಂಟಿಕೆಯೆಂಬ ಗಂಟೆ.
  • ೨. ದಶ ವಿದ ಪಾಪಗಳು :-೧.ಮಹಾ ಪಾತಕ, ೨.ಅತಿ ಪಾತಕ, ೩.ಪ್ರಾಸಂಗಿಕ, ೪.ಪಾತಕ, ೫.ಉಪ ಪಾತಕ, ೬.ಜಾತಿ ಬ್ರಂಶಕ, ೭.ಸಂಕೀರ್ಣಕ, ೮.ಅಪಾತ್ರ ಕರಣ,೯.ಮಲಾವಹ, ೧೦.ಪ್ರಕೀರ್ಣಕ.
  • ೩. ದಶ ವಿಧ ಕೇಳೀ ಭಾವಗಳು :- ೧.ಬಿಬ್ಬೊಕ, ೨.ಮೊಟ್ಟಯಿತ, ೩.ಲಲಿತ, ೪.ಕಿಲಕಿಚಿಚಿತ, ೫.ವಿಜಿತ, ೬.ವಿಲಾಸ, ೭.ವಿಮೃದಿತ, ೮.ವಿಬ್ರಮ, ೯.ವಿಹೃತಿ, ೧೦.ಕುಟ್ಟಿಮ.
  • ೪. ದಶ ಲೋಕೇಶ್ವರರು :- ೧.ಪ್ರಶ್ನ, ೨.ಅನಚಿತ, ೩.ಈಶ್ವರ, ೪.ಪಿಂಗಳ, ೫.ಕಾಲ, ೬.ಕ್ರೋಧೇಶ. ೭.ಜಲದ, ೮.ಬಲ, ೯.ದನದ, ೧೦.ಶಂಕರ.
  • ೫. ದಶ ಕಾಮಾವಸ್ಥೆಗಳು :- ೧.ಅಭಿಲಾಷೆ, ೨.ಚಿಂತೆ, ೩.ಸಂಸೃತಿ, ೪.ವಿಭುಗುಣ ಸ್ಮೃತಿ, ೫.ಸಚಿತಾಪನ, ೬.ಕ್ರಿಯಾದ್ವೇಶ, ೭.ವಿಕಲ, ೮.ಮೌನ, ೯.ಮೂರ್ಛೆ, ೧೦.ಮರಣ.
  • ೬. ದಶ ವಿಧ ನಾದಗಳು :- ೧.ಸ್ವರ ನಿಘೋಶ, ೨.ನಿರ್ಣಯ ಧ್ವನಿ, ೩.ಘಂಟಾಧ್ವನಿ, ೪.ಕಹಳ ಧ್ವನಿ, ೫.ಶಂಖಧ್ವನಿ, ೬.ಮೇಘ ಧ್ವನಿ, ೭.ಮೃದಂಗ ಧ್ವನಿ, ೮.ಭೇರಿಧ್ವನಿ. ೯.ಮಂತ್ರಧ್ವನಿ, ೧೦.ಅವ್ಯಕ್ತ ಪ್ರಣವ ಧ್ವನಿ.
  • ೭. ದಶ ಕಾಮಜ ವ್ಯಸನಗಳು :-೧.ಮೃಗಯೆ, ೨.ದ್ಯೂತ, ೩.ದಿವಾನಿದ್ರ, ೪.ವ್ಯರ್ಥ ವಿಹಾರ, ೫.ವಿಷಚಿi ಲಂಪಟತ್ವ, ೬.ಮತ್ತತೆ, ೭.ನಾಟ್ಯ, ೮.ಗಾಯನ, ೯.ಕೇಳಿ, ೧೦.ಕಪಟ.
  • ೮. ದಶ ಅಂಗಗಳು :- (ದಶಾಂಗಗಳು) ೧.ಧೂಪ ೨.ರಾಳ, ೩.ಚಂದನ, ೪.ಕಚೂರ, ೫.ಗೌಲ, ೬.ನಖ, ೭ತುಂಗಿ, .೮.ಗುಗ್ಗಿಲ, ೯.ಘೃತ, ೧೦ಗಂಧ.
    1. . ಇನ್ನೋದು ವಿಧ :- ೧.ಜೇನು, ೨.ಮುಸ್ತೆ, .೩.ತುಪ್ಪ, ೪.ಗಂಧ, ೫.ಗಗ್ಗುಲ, ೬.ಅಗರು, ೭.ಶೈಲಜ, ೮.ಸರಲ, ೯.ಸಿಂಹಿ, ೧೦.ಸಿದ್ಧಾರ್ಥ,.
  • ೯. ದಶೇಂದ್ರಿಯಗಳು :- ೧.೨.೩.೪.೫ ಐದು ಕರ್ಮೇಂದ್ರಿಯಗಳು, ೬.೭.೮.೯.೧೦.ಜ್ಞಾನೇಂದ್ರಿಯ ಪಂಚಕ (೧. ಶ್ರೋತೃ, ೨. ತ್ವಕ್, ೩. ಚಕ್ಷು, ೪. ರಸನ (ಜಿಹ್ವಾ) , ೫. ಘ್ರಾಣ ೮. ಕರ್ಮೇಂದ್ರಿಯ ಪಂಚಕ ೧. ವಾಕ ೨. ಪಾಣಿ, ೩. ಪಾದ, ೪ ಉಪಸ್ಥ,.೫. ಪಾಯು)
  • ೧೦. ದಶಾವತಾರ, :-೧.ಮತ್ಸ್ಯ, ೨.ಕೂರ್ಮ, ೩.ವರಾಹ, ೪.ನಾರಸಿಂಹ, ೫.ವಾಮನ, ೬.ಪರಷು ರಾಮ, ೭.ರಘುರಾಮ, ೮.ಕೃಷ್ಣ, ೯.ಬೌದ್ಧ, ೧೦.ಕಲ್ಕಿ .
  • ೧೧. ದಶ ದಿಕ್ಕುಗಳು :- ೧.ರಿಂದ ೮. ಅಷ್ಠ ದಿಕ್ಕುಗಳು, ೯.ಊರ್ಧ್ವ ೧೦.ಅಧ.
  • ೧೨. ಕಾವ್ಯ ದಶ ಪ್ರಾಣಗಳು :- ೧.ಶ್ಲೇಷ, ೨.ಪ್ರಸಾದ, ೩.ಸಮತೆ, ೪.ಮಾಧುರ್ಯ, ೫.ಸುಕುಮಾರತೆ, ೬.ಅರ್ಥ ವ್ಯಕ್ತಿ, ೭.ಉದಾತ್ತತೆ, ೮.ಓಜಸ್ಸು, ೯.ಕಾಂತಿ, ೧೦.ಸಮಾಧಿ.
  • ೧೩. ದಶ ಧರ್ಮ ಲಕ್ಷಣ :-೧.ಧೃತಿ, ೨.ಕ್ಷಮಾ, ೩ದಮ, .೪ಆಸ್ತೇಯ, .೫.ಶೌಚ, .೬.ಇಂದ್ರಿಯ ನಿUಹ, ೭.ಧೀ, ೮.ವಿದ್ಯಾ, ೯.ಸತ್ಯ, ೧೦.ಅಕ್ರೋಧ.
  • ೧೪. ದಶಸಂಸ್ಕಾರ, (ಮಂತ್ರಕ್ಕೆ) :-೧.ಜನನ, ೨.ಜೀವನ, ೩.ತಾಡನ, ೪.ಬೋಧನ, ೫.ಅಭಿಷೇಕ, ೬.ವಿನಲೀಕರಣ, ೭.ಆಪ್ಯಾಯನ, ೮.ತರ್ಪಣ, ೯.ದೀಪನ, ೧೦.ಗುಪ್ತಿ,
  • ೧೫. ದಶೋಪಚಾರ :- ೧.ಪಾದ್ಯ, ೨.ಅರ್ಘ್ಯ, ೩.ಆಚಮನ, ೪.ಗಂಧ, .೫.ಪುಷ್ಪ, ೬.ಧೂಪ, ೭.ದೀಪ, ೮.ನೈವೇದ್ಯ, ೯.ಪುನರಾಚಮನ, ೧೦.ತಾಂಬೂಲ.
  • ೧೬. ದಶದಾನಗಳು :- ೧.ಗೋ, ೨.ಭೂ, ೩.ತಿಲ, ೪.ಹಿರಣ್ಯ, ೫.ಆಜ್ಯ, ೬.ವಸ್ತ್ರ, ೭.ಭತ್ತ, ೮.ಬೆಲ್ಲ, ೯.ಬೆಳ್ಳಿ, ೧೦.ಉಪ್ಪು,
  • ೧೭.ಮಹಾ ಪುರಾಣ ದಶ ಲಕ್ಷಣಗಳು :- ೧.ಸರ್ಗ, ೨.ವಿಸರ್ಗ, ೩.ವೃತ್ತಿ ೪.ರಕ್ಷಾ, ೫.ಅಚಿತರ, ೬.ವಂಶ, ೭.ವಂಶಾನು ಚರಿತ, ೮.ಸಂಸ್ಥಾ, ೯.ಹೇತು, ೧೦.ಅಪಾಶ್ರಯ,
  • ೧೮.

ಏಕಾದಶ[ಬದಲಾಯಿಸಿ]


  • ೧. ಏಕಾದಶ ರುದ್ರರು :- ೧.ವೀರಭದ್ರ, ೨.ಶಂಭು, ೩.ಗಿರೀಶ, ೪.ಅಜೈಕಪಾತ, ೫.ಅಂಬುಗದ್ನ್ಯ ? (ಅಹಿರ್ಬದ್ಧ್ಯ) ೬.ಪಿನಾಕಿ, ೭.ಸ್ಥಾಣು, ೮.ಪಶುಪತಿ, ೯.ಭವ, ೧೦.ಉಗ್ರ, ೧೧. ನಿಋತಿ (ತ್ವಿ ಟ್ಪ ತಿ?) ;
    1. . ೧.ಮೃಗವ್ಯಾಧ, ೨.ಸರ್ಪ, ೩.ನಿಋತಿ, ೪.ಅಜೈಕಪಾತ್, ೫.ಅಹಿರ್ಬುದ್ಧ್ಯ ೬.ಪಿನಾಕಿ, ೭.ದಹನ, ೮.ಈಶ್ವರ, ೯.ಕಪಾಲಿ, ೧೦.ಸ್ಥಾಣು, ೧೧.ಭಗ. (ಮ.ಆಪ.):
    2. . ೧.ಅಜೈಕಪಾತ್, ೨.ಅಹಿರ್ಬುದ್ಧ್ಯ, ೩.ವಿರೂಪಾಕ್ಷ, ೪.ರೈವತ, ೫.ಹರ, ೬.ಬಹುರೂಪ, ೭. ತ್ರ್ಯಂಬಕ, ೮.ಸುರೇಶ್ವರ, ೯.ಸಾವಿತ್ರ, ೧೦.ಜಯಂತ, ೧೧.ಪಿನಾಕಿ. (ಮ.ಶಾಂ.) :
    3. . ೧.ಅಜೈಕಪಾತ್, ೨.ಅಹಿರ್ಬದ್ಧ್ಯ, ೩.ಪಿನಾಕಿ, ೪.ಋತ, ೫.ಪಿತೃರೂಪ, ೬.ತ್ರ್ಯಂಬಕ, ೭.ಮಹೇಶ್ವರ, ೮.ವೃಷಾಕಪಿ, ೯.ಶಂಭು, ೧೦.ಹವನ, ೧೧.ಈಶ್ವರ. (ವಿ. ಪು.; ಭಾಗ,;ಹರಿ.)
  • ೨. ಏಕಾದಶ ಕರಣಗಳು, (ಜ್ಯೋತಿಷ್ಯ) :-೧.ಬವ, ೨.ಬಾಲವ, ೩.ಕೌಲವ, ೪.ತೌತಲೆ (ತೈತಿಲ), ೫.Uರಜೆ,(Uರಜ) ೬.ವಣಜೆ, (ವಣಿಜ) ೭.ಭದ್ರೆ, ೮.ಶಕುನಿ, ೯.ಚತುಷ್ಪಾತ್, ೧೦.ನಾಗವಾನ್, .೧೧.ಕಿಂಸುಘ್ನ
  • ೩. ಏಕಾದಶ ಅಂಗಧಾರಿಗಳು :- ೧.ಆಚಾರಾಂಗ, ೨.ಕೃತಾಂಗ, ೩.ಸ್ಥಾನಾಂಗ, ೪..ಸಮವಾಯಾಂಗ, ೫.ವ್ಯಾಖ್ಯಾಪ್ರಜ್ಞಾಪ್ತಿ, ೬..ಜ್ಞಾತೃಧರ್ಮಕಥಾ, ೭.ಉಪಾತಕಾಧ್ಯಯನಾಂಗ, ೮.ಅಚಿತ ಕೃದ್ದಶಾಂಗ, ೯.ಅನುತ್ತರೋಪಪಾದಿಕ ದಶಾಂಗ, ೧೦..ಪ್ರಶ್ನವ್ಯಾಕರಣಾಂಗ, ೧೧.ವಿಪಾಕಸೂತ್ರಂಗ.

೪. ಏಕಾದಶ ೧.೨.೩.೪.೫.೬.೭.೮.೯.೧೦.೧೧.

ದ್ವಾದಶ (೧೨)[ಬದಲಾಯಿಸಿ]


  • ೧. ದ್ವಾದಶಾದಿತ್ಯರು  :- ೧.ಧಾತಾ, ೨.ಆಚಿiಮಾ, ೩.ಮಿತ್ರ, ೪.ವರುಣ, ೫.ಇಚಿದ್ರ, ೬.ವಿವಸ್ವಾನ್, ೭.ಪರ್ಜನ್ಯ, ೮.ಪೂಷ, .೯.ಅಂಶುಮಾನ್, ೧೦.ಗಭಸ್ತಿಮಾನ್, ೧೧.ತ್ವಷ್ಟಾ, ೧೨.ವಿಷ್ಣು.
    1. .(ಧಾತಾ, ಮಿತ್ರ, ಆಚಿiಮ, ಶಕ್ರ, ವರುಣ, ಅಂಶ, ಭಗ, ವಿವಸ್ವಾನ್, ಪೂಷ, ಸವಿತಾ, ತ್ವಷ್ಟಾ, ವಿಷ್ಣು- ಭಾರತ)
    2. .(ಅಂಶ, ಭಗ, ಮಿತ್ರ, ವರುಣ, ಧಾತ, ಆಚಿiಮ, ಜಯಂತ, ಭಾಸ್ಕರ, ತ್ವಷ್ಟಾ, ಪೂಷ, ಇಚಿದ್ರ, ವಿಷ್ಣು, :- ವಿಷ್ಣು ಪು.)
  • ಇವರಿಗೆ ಕ್ರಮವಾಗಿ :-
    1. . ಋಷಿಗಳು :- ೧.ಪುಲಸ್ತ್ಯ, ೨.ಪುಲಹ, ೩.ವಸಿಷ್ಟ, ೪.ಅಂಗಿರಸ, ೫.ಭ್ರಗು, ೬.ಭರದ್ವಾಜ, ೭.Uತಮ, ೮.ಕಶ್ಯಪ, ೯.ದಕ್ಷ, ೧೦.ಕ್ರತು, ೧೧ಜಮದಗ್ನಿ,, .೧೨.ಕೌಶಿಕ.
    2. .ಸರ್ಪಗಳು :- ೧.ವಾಸುಕಿ, ೨.ಕಂಕವೀರ, ೩.ತಕ್ಷಕ, ೪.ನಾಗ, ೫.ಇಳಾಪುತ್ರ, ೬.ಶಂಖಪಾಲ, ೭.ಐರಾವತ, ೮.ಧನಚಿಜಯ, ೯.ಮಹಾಪದ್ಮ, ೧೦.ಕಾರ್ಕೋಟಕ, ೧೧.ಕಂಬಳ, ೧೨.ಅಶ್ವತರ.
    3. . ಗಂಧರ್ವರು :- ೧.ತುಂಬರ, ೨.ನಾರದ, ೩.ಹಾಹಾ, ೪.ಹೂಹೂ, ೫.ವಿಶ್ವಾವಸು, ೬.ಉಗ್ರಸೇನ, ೭.ವಸ್ಮರುಚಿ, ೮.ಸರ್ವಾಸು, ೯.ಚಿತ್ರಸೇನ, ೧೦.ಊರ್ಣಾಹ, ೧೧.ದೃತರಾಷ್ಟ್ರ,, ೧೨.ಸೂರ್ಯವರ್ಚ.
    4. . ಅಪ್ಸರ ಸ್ತ್ರೀಯರು :-೧.ಕೃತಸ್ತಲೆ, ೨.ಮಂಜುಕಸ್ತಲೆ, ೩.ಮೇನಕೆ, ೪.ಸಹಕನ್ಯೆ, ೫.ಪ್ರಮೋಚಂತಿ, ೬.ವಿಶ್ವಾಚಿ, ೭.ಘೃತಾಚಿ, ೮.ಊರ್ವಸಿ,(ಉರ್ವಸಿ) ೯.ಪೂರ್ವಚಿತ್ತಿ, ೧೦.ತಿಲೋತ್ತಮೆ, ೧೧.ರಂಭೆ, ೧೨.ಭದ್ರೆ. (ಒಟ್ಟು ೪೦ ಅಪ್ಸರೆಯರಿದ್ದಾರೆ)
    5. . ಸಾರಥಿಗಳು, :-೧..ರಥಬೃತ್, ೨.ರಥಜ, ೩.ರಥಚಿತ್ರ, ೪.ರಥಾಶ್ವ, ೫.ಅರುಣ, ೬.ಸುಷೇಣ, ೭.ಸೇನಜಿತ್, ೮.ಕಾರ್ಷ್ಯ, ೯.ವ್ರತ್ತ, ೧೦.ಅರಿಷ್ಟನೇಮಿ, ೧೧ರುತಜಿತ್, ೧೨.ಕುತ್ಯಜಿತ್..
    6. . ರಾಕ್ಷಸರು :- ೧.ಪ್ರಹೇತಿ, ೨.ಪೌರುಷೇಯ, ೩.ವಧ, ೪.ದರ್ಪ, ೫.ವ್ಯಾಘ್ರ, ೬.ಕ್ರೂರ, ೭.ಆಪಸ್ಸು, ೮.ವಾತ, ೯.ವಿದ್ಯುತ್, ೧೦.ದಿವಾಕರ, ೧೧.ಬ್ರಹ್ಮ ವೇತ್ತ, ೧೨.ಯಜ್ಞವೇತ್ತ .
  • ೨. ದ್ವಾದಶ ರವಿಕಲಾ :- ೧.ತಪಿನೀ, ೨.ತಾಪಿನೀ, ೩.ಧೂಮ್ರ, ೪.ವ್ಮರೀಚಿ, ೫.ಜ್ವಾಲಿನಿ, ೬.ರುಚಿ, ೭.ಸುಷುಮ್ನಾ, ೮.ಭೋಗದಾ, ೯.ವಿಶ್ವಬೋಧಿನಿ, ೧೦.ಧರಣಿ, ೧೧.ಕ್ಷಮಾ, ೧೨.ಪ್ರಭಾ.
  • ೩.ದ್ವಾದಶ ಜ್ಞಾನ ಚಿಹ್ನೆಗಳು :- ೧.ಕಾಮಾದಿ ಷಡ್ವೈರಿಗಳನ್ನು, ಗೆಲ್ಲುವಿಕೆ (ನಟಿಸುವಿಕೆ), ೨.ಸ್ವಭಾವಸಿದ್ಧವಾದ ದೃಢವಾದ ಶಾಂತಿ, ೩.ಸಾತ್ವಿಕ ಸಂಪತ್ತು, ೪.ಸರ್ವ ಭೂತ, ಸಮತ್ವ, ೫.ವೈರಾಗ್ಯ, ೬.ಅಧ್ಯಾತ್ಮ ನಿಷ್ಠೆ, ೭.ನಿಶ್ಚಲ ಸ್ಥಿತಿ, ೮.ಅಹಂಕಾರ ಮಮಕಾರ ವರ್ಜ್ಯ, ೯.ನಿತ್ಯ ಸಂತುಷ್ಠಿ, ೧೦.ಭಯಶೋಕ ರಾಹಿತ್ಯ, ೧೧.ಪಾರಿಶುದ್ಧ್ಯ, ೧೨.ತನ್ನಂತೆ ಶಿಷ್ಯನನ್ನೂ ಮಾಡುವ ಶಕ್ತಿ.
  • ೪. ದ್ವಾದಶ ವಿಧಾಲಿಂಗನಗಳು :- ೧.ಪುಷ್ಕರ, ೨.ವಿವಿಧಕ, ೩.ದೃಷ್ಟಕ, ೪.ಪೀಡನ, ೫.ವೃಕ್ಷಾರೋಹಣ, ೬.ಲತಾವೇಷ್ಟನ, ೭.ತಿಲ ತುಂಡಲತೆ, ೮.ಕ್ಷೀರ ನಿರಾಯಿತ, ೯.ಉಪರೂಪ ಗೂಹನ,,೧೦.ಜಘನೋಪಗೂಹನ, ೧೧.ಸ್ಥನಾಶ್ಲೇಷ, ೧೨.ಲಲಾಟಕ.
  • ೫. ದ್ವಾದಶ ವಿಧ ಚುಂಬನಗಳು :-೧.ನಿಮಿತ್ತಕ, ೨.ಸಂಘಟಕ, ೩.ಸ್ಪರಿತಕ, ೪.ಭ್ರಾಂತಿಕ, ೫.ತಿರ್ಯಗಾಯಿತ, ೬.ಅತಿ ದೃಷ್ಟಕ, ೭.ಉತ್ತರ ಸಂಘತಿತ, ೮.ಜಿಹ್ಹಾ ಮೇಳನಕ, ೯.ಜಿಹ್ಹಕ, ೧೦.ಅತಿಜಿಹ್ವಾಯೋಗ, ೧೧.ಸೀತ್ಕಾರ, ೧೨.ದಂಶನಕ.
  • ೬. ದ್ವಾದಶ ಪಿತೃಗಳು :- ೧. ಪಿತ (ತಂದೆ); ೨,ಪಿತಾಮಹ (ತಾತ-ಅಜ್ಜ), ೩. ಪ್ರಪಿತಾಮಹ (ಮುತ್ತಾತ-ಮುತ್ತಜ್ಜ), ೪,ಮಾತರಂ ; ಮಾತೃ (ತಾಯಿ) ೫, ಪಿತಾಮಹೀ (ತಾಯಿಯ ಅತ್ತೆ- ಮನೆ ಅಜ್ಜಿ-ತಂದೆಯ ತಾಯಿ) ; ೬, ಪ್ರಪಿತಾಮಹೀಂ ( ತಾಯಿಯ ಅತ್ತೆಯ ಅತ್ತೆ- ಮನೆ ಮುತ್ತಜ್ಜಿ- ಮುತ್ತಜ್ಜನ ಪತ್ನಿ) ; ೭, ಮಾತಾಮಹಂ , ತಾಯಿಯ ತಂದೆ- ತಾಯಿಯಕಡೆ ಅಜ್ಜ ) ೮. ಮಾತುಃ ಪಿತಾಮಹಂ (ತಾಯಿಯ ಅಜ್ಜ /ತಾತ) ; ೯, ಮಾತುಃ ಪ್ರಪಿತಾಮಹಂ (ತಾಯಿಯ ಮುತ್ತಾತ) ; ೧೦, ಮಾತಾ ಮಹೀಂ (ತಾಯಿಯ ತಾಯಿ - ತಯಿ ಕಡೆ ಅಜ್ಜಿ); ೧೧, ಮಾತುಃ ಪಿತಾಮಹೀ (ತಾಯಿಯ ತಾಯಿಯ ಅತ್ತೆ?/ ತಾಯಿಯಕಡೆ ಮುತ್ತಜ್ಜಿ; ೧೨, ಮಾತುಃ ಪ್ರಪಿತಾಮಹೀಂ ( ತಾಯಿಯ ಕಡೆ ಮರಜ್ಜಿ / ಮುತ್ತಜ್ಜಿಯ ತಾಯಿ?)
  • ೭. ದ್ವಾದಶ ಮಾಸಗಳು (ಚಂ ದ್ರಮಾನ) :-
  • ೮. ದ್ವಾದಶ ಸೌರ ಮಾಸಗಳು :- ೧) ಮೇಷ; ೨) ವೃಷಭ; ೩) ಮಿಥುನ; ೪) ಕರ್ಕಾಟಕ; ೫) ಸಿಂಹ; ೬) ಕನ್ಯಾ; ೭) ತುಲಾ; ೮) ವೃಶ್ಚಿಕ; ೯) ಧನು೧೦) ಮಕರ; ೧೧) ಕುಂಭ; ೧೨)ಮೀನ
  • ೯.ದ್ವಾದಶ ಜ್ಯೋತಿರ್ ಲಿಂಗಗಳು |ದ್ವಾದಶ ಜ್ಯೋತಿರ್ಲಿಂಗಗಳು :- ೧) ಸೋಮನಾಥಪುರದಲ್ಲಿರುವ ಸೋಮನಾಥ ;೨) ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ ; ೩) ಉಜ್ಜಯನಿಯಲ್ಲಿರುವ ಮಹಾಕಾಳ ; ೪) ಓಂಕಾರ್ ನಲ್ಲಿರುವ ಪರಮೇಶ್ವರ ; ೫) ಹಿಮಾಲಯಗಲ್ಲಿರುವ ಕೇದಾರೇಶ್ವರ ; ೬) ಡಾಕಿನೀ ಕ್ಷೇತ್ರದಲ್ಲಿರುವ ಭೀಮಾ ಶಂಕರ ; ೭) ಕಾಶಿಯಲ್ಲಿರುವ ವಿಶ್ವೇಶ್ವರ ; ೮) ಗೌತಮೀ ಕ್ಷೇತ್ರದಲ್ಲಿರುವ ತ್ರ್ಯಂಬಕೇಶ್ವರ; ೯) ಚಿತಾಭೂಮಿಯಲ್ಲಿನ ವೈದ್ಯನಾಥ ; ೧೦) ದ್ವಾರಕಾ ವನದಲ್ಲಿರುವ ನಾಗೇಶ್ವರ ೧೧) ಸೇತು ಬಂಧನ ಪ್ರಾಂತದಲ್ಲಿರುವ ರಾಮೇಶ್ವರ ; ೧೨) ಶಿವಾಲಯ ಕ್ಷೇತ್ರದಲ್ಲಿರುವ ಧುಶ್ಮೇಶ್ವರ ಜ್ಯೋತಿರ್ಲಿಂಗ.
  • ೧೦).ದ್ವಾದಶ ಮೂರ್ತಿಗಳು : ಸಂಕರ್ಷಣ, ವಾಸುದೇವ, ಪ್ರದ್ಯುಮ್ನ, ಅನಿರುದ್ಧ, ಪುರುಷೋತ್ತಮ, ಅಧೋಕ್ಷಜ, ನಾರಸಿಂಹ, ಅಚ್ಯುತ, ಜನಾರ್ದನ, ಉಪೇಂದ್ರ, ಹರಿ, ಕೃಷ್ಣ

ತ್ರಯೋದಶ[ಬದಲಾಯಿಸಿ]


  • ೧.
  • ೨.
  • ೩.

ಚತುರ್ದಶ[ಬದಲಾಯಿಸಿ]


  • ೧. ಚತುರ್ದಶ ಮನುಗಳು :- ೧.ಸ್ವಾಯಂಭುವ, ೨.ಸ್ವಾರೋಚಿಷ, ೩.ಉತ್ತಮ, ೪.ತಾಮಸ, ೫.ರೈವತ, ೬.ಚಾಕ್ಷುಷ, ೭ವೈವಸ್ವತ, .೮.ಸೂರ್ಯ ಸಾವರ್ಣಿಕ, ೯.ದಕ್ಷ ಸಾವರ್ಣಿಕ, ೧೦.ಬ್ರಹ್ಮ ಸಾವರ್ಣಿಕ, ೧೧.ಧರ್ಮಸಾವರ್ಣಿಕ, ೧೨.ರುದ್ರ ಸಾವಣಿಕ, ೧೩.ರೌಚ್ಯ, ೧೪.ಇಂದ್ರ ಸಾವರ್ಣಿಕ. (ಈಗ ನೆಡೆಯುತ್ತಿ ರುವುದು ವೈವಸ್ವತ ಮನ್ವಂತರ) (ವೈವಸ್ವತನ ನಂತರ -ಸಾವರ್ಣಿ, ಭೌತ್ಯ, ರೌಚ್ಯ, ಬ್ರಹ್ಮಸಾವರ್ಣಿ, ರುದ್ರಸಾವರ್ಣಿ, ಮೇರುಸಾವರ್ಣಿ, ದಕ್ಷಸಾವರ್ಣಿ, ಎಂದೂ ಇದೆ)
  • ೨. ಚತುರ್ದಶ ಇಂದ್ರರು :- ೧.ಯಜ್ಞ ೨.ರೋಚನ, ೩.ಸತ್ಯಜಿತ್, ೪.ತ್ರಿಶಿಖ, ೫.ವಿಭು, ೬.ಮಂತ್ರದ್ರುಮ, ೭.ಪುರಂಧರ, ೮.ಬಲಿ, ೯.ಅದ್ಭುತ, ೧೦.ಶಂಭು, ೧೧.ವೈವೃತಿ, ೧೨.ಋತಧಾಮ, ೧೩.ದಿವಸ್ಪತಿ, ೧೪.ಶುಚಿ. (ಪುರಂಧರನು ಈಗಿನ ಇಂದ್ರ, ಕಶ್ಯಪನ ಮಗ)
  • ೩. ಚತುರ್ದಶ ತೀರ್ಥಂಕರರು :- ೧.ಹೇಮಚಂದ್ರ, ೨.ನಾಗ ಚಂದ್ರ, ೩.ನೇಮಿಚಂದ್ರ, ೪.ಮೇಘಚಂದ್ರ, ೫.ಮಾಗ ಚಂದ್ರ, ೬.ಅರ್ಹತ, ೭.ಆದಿನಾಥ, ೮.ಅಗ್ಗಳ, ೯.ಪಾರ್ಶ್ವನಾಥ, ೧೦.ಸೌಗತ, ೧೧.ಶ್ರುತಕೀರ್ತಿ, ೧೨.ಶ್ರೀಮತಿ, ೧೩.ಕಾಮ ರಹಿತ, ೧೪.ಮುನಿಸ್ವಾಮಿ. ( ಮಹಾವೀರ ೨೪ನಯ ತೀರ್ಥಂಕರ ?)
  • ೪. ಚತುರ್ದಶ ವಿದ್ಯೆಗಳು :- ೧.೨.೩.೪.ನಾಲ್ಕು ವೇದಗಳು (ಋಕ್ಯಜುಸ್ಸಾಮಥರ್ವ),೫.೬.೭.೮.೯.೧೦.ಆರು ವೇದಾಂಗಗಳು-ಛಂದಸ್ಸು, ಕಲ್ಪ, ವ್ಯಾಕರಣ, ಶಿಕ್ಷೆ, ಜ್ಯೋತಿಷ್ಯ, ನಿರುಕ್ತ, ೧೧.ಧರ್ಮಶಾಸ್ತ್ರ, ೧೨.ಪುರಾಣ, ೧೩.ಮೀಮಾಂಸ, ೧೪.ತರ್ಕ.
  • ೫. ಚತುರ್ದಶ ರತ್ನಗಳು :-(ಸಮುದ್ರ ಮಂಥನದಲ್ಲಿ ಬಂದಿದ್ದು) ೧.ಲಕ್ಷ್ಮಿ, ೨.ಕೌಸ್ತುಭ, ೩.ಪಾರಿಜಾತ, ೪.ಸುರಾ, ೫.ಧನ್ವಂತರಿ, ೬.ಚಂದ್ರಮಾ, ೭.ಕಾಮಧೇನು, ೮.ಐರಾವತ, ೯.ಅಪ್ಸರ ಸ್ತ್ರೀಯರು ೧೦.ಉಚ್ಛೈಶ್ರವ,(ಕುದುರೆ) ೧೧.ಹಾಲಾಹಲ, ೧೨.ಶಾರ್ಙ (ವಿಷ್ಣುವಿನ ಧನುಸ್ಸು), ೧೩.ಪಾಂಚಜನ್ಯ, ೧೪.ಅಮೃತ.
  • ೬. ಚತುರ್ದಶ ಲೋಕಗಳು :- ಭೂ ಭುಃ ಮೊzಲಾದ ೭ಮೇಲಿನ ಲೋಕಗಳು ಮತ್ತು ೭ ಪಾತಾಳ ಮೊದಲಾದ ಅಧೋಲೋಕಗಳು (ಒಟ್ಟು ೧೪ ಲೋಕಗಳು)

ಪಂಚ ದಶ[ಬದಲಾಯಿಸಿ]


  • ೧. ಪಂಚದಶ ಕಲಾ ಸ್ಥಾನಗಳು :- ೧.ಬೆಟ್ಟು, (ಬೆರಳು) ೨.ಅಡಿ (ಪಾದ) ೩.ಹರಡು, ೪.ಮೊಣಕಾಲು, ೫.ಜಘನ, ೬.ಹೊಕ್ಕಳು, ೭.ಎದೆ, ೮.ಕುಚ, ೯.ಕಕ್ಷ, ೧೦.ಕೊರಳು, ೧೧.ಕದಪು, ೧೨.ತುಟಿ, ೧೩.ಕಣ್ಣು, ೧೪.ಹಣೆ, ೧೫.ನೆತ್ತಿ,
  • ೨. ಪಂಚದಶ ತಿಥಿಗಳು :- ಪಾಡ್ಯ, ಬಿದಿಗೆ, ತದಿಗೆ, ಚೌತಿ ಯಿಂದ - ಚತುರ್ದಶಿ ಹುಣ್ಣಿಮೆ,/ಅಮಾವಾಸ್ಯೆ .
  • ೩.

ಷೋಡಷ (೧೬)[ಬದಲಾಯಿಸಿ]


೧.ಗರ್ಭಾದಾನ, ೨.ಪುಂಸವನ, ೩.ಸೀಮಂತ, ೪ ವಿಷ್ಣುಬಲಿ, ೫.ಜಾತಕರ್ಮ, ೬ .ನಾಮಕರಣ, ೭, ಉಪನಿಷ್ಕ್ರಮಣ ೮,.ಅನ್ನಪ್ರಾಶನ, ೯,.ಚೌಲ, ೧೦,.ಉಪನಯನ, ೧೧, ಹೋತೃ , ೧೨. ಶುಕ್ರೀಯ ೧೩, ಉಪನಿಷದ್, ೧೪. ಗೋದಾನ, ೧೫. ಸಮಾವರ್ತನ, ೧೬. ವಿವಾಹ

  • ಷೋಡಶ ಇನ್ನೊಂದು ಬಗೆ :೧]ಗರ್ಭಾದಾನ ೨]ಪುಂಸವನ ೩)ಸೀಮಂತೋನ್ನಯನ; ೪]ವಿಷ್ಣು ಬಲಿ ೫]ಜಾತಕರ್ಮ ೬]ನಾಮಕರಣ ,೭]ನಿಷ್ಕ್ರಮಣ ೮] ಅನ್ನಪ್ರಾಶನ , ೯]ಚೌಲ, ೧೦]ಉಪನಯನ , ೧೦]ಮಹಾನಾಮ್ನೀ ,೧೨]ಮಹಾವೃತ, ೧೩]ಉಪನಿಷತ್ ವ್ರತ ,೧೪] ಗೋದಾನ ವ್ರತ, ೧೫] ಸಮಾವರ್ತನ , ೧೬]ವಿವಾಹ,
  • ೪. ಷೋಡಷ ಮಹಾರಾಜರು :- ೧.ಗಯ, ೨.ಅಂಬರೀಷ, ೩.ಶಶಿಬಿಂದು, ೪.ದಂತಿ, ೫.ಪೃಥು, ೬.ಮರುತ್ವಂತ, ೭.ಭರತ, ೮.ಸುಹೋತ್ರ, ೯.ರಾಮ, ೧೦.ದಿಲೀಪ, ೧೧.ರಘು, ೧೨.ರಂತಿದೇವ, ೧೩.ಯಯಾತಿ, ೧೪.ಮಾಂಧಾತೃ , ೧೫.ನೃಗ, ೧೬.ಭಗೀರಥ.
  • ೫. ಷೋಡಷ ಉಪಚಾರ ಪೂಜೆ :- ಆಸನಂ ಸ್ವಾಗತಂಚಾರ್ಘ್ಯಂಪಾದ್ಯಮಾಚಮನೀಯಕಂ| ಮಧುಪರ್ಕಾರ್ಪಣಂ ಸ್ನಾನವಸನಾಭರಣಾನಿ ಚ|| ಸುಗಂಧಃ ಸುಮನೋ ಧೂಪೋ ದೀಪಮನ್ನೇನಭೋಜನಂ| ಮಾಲ್ಯಾನುಲೇಪನಂ ಚೈವ ನಮಸ್ಕಾರ ಇತಿಕ್ರಮಾತ್ || (೧. ಧ್ಯಾನ), ೧.ಆಸನಂ ೨.ಸ್ವಾಗತಂ, ೩.ಅರ್ಘ್ಯಂ, ೪.ಪಾದ್ಯಂ,(ಆಚರಣೆಯಲ್ಲಿ ಪಾದ್ಯ ಆದ ಮೇಲೆ ಅರ್ಘ್ಯ), ೫.ಆಚಮನೀಯಕಂ| ೬.ಮಧುಪರ್ಕಾರ್ಪಣಂ, ೭.ಸ್ನಾನಂ, ೮.ವಸನ, ೯.ಆಭರಣಾನಿ ಚ|| ೧೦.ಸುಗಂಧಃ, ೧೧.ಸುಮನೋ ಧೂಪೋ, ೧೨.ದೀಪಂ, ೧೩.ಅನ್ನೇನಭೋಜನಂ|೧೪.ಮಾಲ್ಯಾ ನುಲೇಪನಂ ಚೈವ, ೧೫.ನಮಸ್ಕಾರ ಇತಿಕ್ರಮಾತ್ (ಪ್ರಾರಂಭದಲ್ಲಿ ಧ್ಯಾನ ಸೇರಿಸಿಕೋಡರೆ ೧೬ ಆಗುತ್ತೆ, ಅಥವಾ ಮಾಲ್ಯಾ, ಆನುಲೇಪನ, ಬೇರೆ ಬೇರೆ ಮಾಡಬೇಕು.) || ಆದರೆ ರೂಢಿ ಪೂಜಾ ಕ್ರಮದಲ್ಲಿ ಬೇರೆ ರೀತಿ ಅನಸರಣೆ ಇದೆ. (ಚತುರ್ವಿಂಶತಿ ಉಪಚಾರ ಪೂಜೆ ಯಲ್ಲಿ ಸ್ವಲ್ಪ ಬೇರೆ ಕ್ರಮ ಇದೆ )೧.ಧ್ಯಾನ, ೨. ಆವಾಹನ, ೩ ಆಸನ, ೪.ಪಾದ್ಯ ೫. ಅಘ್ಯ, , ೬ ಆಚಮನ, ೭.ಸ್ನಾನ (ಮಲಾಪಕರ್ಷಣ, ಪಂಚಾಮೃತ, ಮಹಾಭಿಷೇಕ) ೮.ವಸ್ತ್ರ, ೯. ಆಭರಣ ೧೦ ಉಪವೀತ, ೧೧..ಗಂಧ, ೧೨. ಅಕ್ಷತಾ, ೧೩ ,ಪುಷ್ಪ, ೧೪, .ದ್ವಾದಶ ನಾಮ ಪೂಜಾ, ೧೫. ಧೂಪ, ೧೬.ದೀಪ, ೧೭. ನೈವೇದ್ಯ, ೧೮.ಮಂಗಲ ನೀರಾಜನ, ೧೯.ತಾಂಬೂಲ, ೨೦. ಮಂತ್ರ ಪುಷ್ಪ, ೨೧.ಪ್ರದಕ್ಷಿಣ ೨೨. ನಮಸ್ಕಾರ, ೨೨.ಪ್ರಸನ್ನಾರ್ಘ್ಯ ೨೩..ಪ್ರಾರ್ಥನೆ, ೨೪.ವಿಸರ್ಜನ.
  • ೬. ಷೋಡಶ ದಾನಗಳು :-
  • ೭.
  • ೮.

ಅಷ್ಟಾದಶ (೧೮)[ಬದಲಾಯಿಸಿ]


ಅಷ್ಟಾದಶ (ಹದಿನೆಂಟು) ಪುರಾಣಗಳು

  • ೧. ಅಷ್ಟಾದಶ ಮಹಾ ಪುರಾಣಗಳು ೧) ಬ್ರಹ್ಮ ಪುರಾಣ, ೨.ಪದ್ಮ ಪುರಾಣ, ೩. ವಿಷ್ಣು ಪುರಾಣ, ೪. ಶಿವ ಪುರಾಣ, ೫. ಭಾಗವತ ಪುರಾಣ,(ದೇವೀಭಾಗವತ), ೬. ನಾರದೀಯ ಪುರಾಣ, ೭. ಮಾರ್ಕಾಂಡೇಯ ಪುರಾಣ, ೮. ಅಗ್ನಿ ಪುರಾಣ, ೯.ಭವಿಷತ್ ಪುರಾಣ, ೧೦.ಬ್ರಹ್ಮ ವೈವರ್ತ ಪುರಾಣ, ೧೧.ಲಿಂಗ ಪುರಾಣ, ೧೨. ವರಾಹ ಪುರಾಣ, ೧೩. ಸ್ಕಾಂದ ಪುರಾಣ, ೧೪. ವಾಮನ ಪುರಾಣ, ೧೫. ಕೂರ್ಮ ಪುರಾಣ, ೧೬. ಮತ್ಸ್ಯ ಪುರಾಣ, ೧೭. ಗರುಡ ಪುರಾಣ, ೧೮. ಬ್ರಹ್ಮಾಂಡ ಪುರಾಣ,
  • ೨. ಅಷ್ಟಾದಶ ಉಪ ಪುರಾಣಗಳು :- ೧) ಸನತ್ಕುಮಾರ ಪುರಾಣ, ೨.ನಾರಸಿಂಹ ಪುರಾಣ, ೩. ನಂದಿ ಪುರಾಣ, ೪. ಶಿವಧರ್ಮ ಪುರಾಣ, ೫. ದುರ್ವಾಸ ಪುರಾಣ ೬. ನಾರದೀಯ ಪುರಾಣ, ೭. ಕಪಿಲ ಪುರಾಣ, ೮. ಮಾನವ ಪುರಾಣ, ೯.ಉಷನಃ ಪುರಾಣ, ೧೦.ಬ್ರಹ್ಮಾಂಡ ಪುರಾಣ, ೧೧. ವಾರಣ ಪುರಾಣ, ೧೨. ಕಾಳೀ ಪುರಾಣ, ೧೩. ವಾಪಿಷ್ಠ ಲೈಂಗ ಪುರಾಣ, ೧೪. ಸಾಂಬ ಪುರಾಣ, ೧೫. ಸೌರ ಪುರಾಣ, ೧೬. ಪರಾಶರ ಪುರಾಣ, ೧೭. ಮರೀಚಿ ಪುರಾಣ, ೧೮. ಭಾರ್ಗವ ಪುರಾಣ,
  • ೩. ಮಹಾಬಾರತದ ಅಷ್ಟಾದಶ ಪರ್ವಗಳು :- ೧.ಆದಿ ಪರ್ವ೨ಸಭಾ ಪರ್ವ.೩. ವನ ಪರ್ವ ೪. ವಿರಾಟ ಪರ್ವ ೫. ಉದ್ಯೋಗ ಪರ್ವ ೬. ಭೀಷ್ಮ ಪರ್ವ ೭. ದ್ರೋಣ ಪರ್ವ ೮. ಕರ್ಣ ಪರ್ವ ೯.ಶಲ್ಯ ಪರ್ವ ೧೦. ಸೌಪ್ತಿಕ ಪರ್ವ ೧೧. ಸ್ತ್ರೀ ಪರ್ವ ೧೨. ಶಾಂತಿ ಪರ್ವ ೧೩.ಅನುಶಾಸನ ಪರ್ವ ೧೪. ಅಶ್ವಮೇಧಿಕ ಪರ್ವ ೧೫. ಆಶ್ರಮವಾಸಿಕ ಪರ್ವ ೧೬. ಮೌಸಲ ಪರ್ವ ೧೭. ಮಹಾಪ್ರಸ್ಥಾನಿಕ ಪರ್ವ ೧೮. ಸ್ವರ್ಗಾರೋಹಣ ಪರ್ವ
  • ೪.

ಚತುರ್ವಿಂಶತಿ (೨೪)[ಬದಲಾಯಿಸಿ]


  • ೫ ಚತುರ್ವಿಂಶತ್ಯುಪಚಾರ :- (೨೪ ಪೂಜಾ ಕ್ರಿಯೆ ) ಧ್ಯಾನಮಾವಾಹನಂ ಚೈವ ಸ್ವಾಗತಾದಿ ಪ್ರದರ್ಶನಂ | ಆಸನಂಪಾದ್ಯಮರ್ಘ್ಯಂ ಚ ತತಸ್ತ್ವಾಚಮನೀಯಕಂ || ಮಧುಪರ್ಕಂ ತತಃ ಸ್ನಾನಂ ವಸ್ತ್ರಂ ಗಂಧಸ್ತಥಾಕ್ಷತಾಃ | ಭೋಷಣಂ ಚೋಪವೀತಂ ಚ ಪುಷ್ಪಂ ಧೂಪಃ ಪ್ರದೀಪಕಃ || ಭೋಜನಂಚೈವ ಪಾನೀಯಂ ದಕ್ಷಿಣಾರ್ತಿಕಂ ತಥಾ | ತತಃ ಪುಷ್ಪಾಂಜಲಿಃ ಪ್ರೋಕ್ತೋ ಪ್ರದಕ್ಷಿಣ ನಮಸ್ಕೃತೀ || ೧.ಧ್ಯಾನ(೨)ಮಾವಾಹನಂ ಚೈವ (೩)ಸ್ವಾಗತಾದಿ ಪ್ರದರ್ಶನಂ | (೪)ಆಸನಂ(೫)ಪಾದ್ಯ(೬)ಮರ್ಘ್ಯಂ ಚ (೭)ತತಸ್ತ್ವಾಚಮನೀಯಕಂ || (೮)ಮಧುಪರ್ಕಂ ತತಃ(೯)ಸ್ನಾನಂ(೧೦)ವಸ್ತ್ರಂ (೧೧-೧೨)ಗಂಧಸ್ತಥಾಕ್ಷತಾಃ | (೧೩)ಭೂಷಣಂ (೧೪) ಚೋಪವೀತಂ ಚ (೧೫)ಪುಷ್ಪಂ (೧೬)ಧೂಪಃ (೧೭ಪ್ರದೀಪಕಃ || (೧೮)ಭೋಜನಂ ಚೈವ (೧೯)ಪಾನೀಯಂ (೨೦-೨೧)ದಕ್ಷಿಣಾರ್ತಿಕಂ ತಥಾ| ತತಃ (೨೨) ಪುಷ್ಪಾಂಜಲಿಃ ಪ್ರೋಕ್ತೋ (೨೩) ಪ್ರದಕ್ಷಿಣ (೨೪)ನಮಸ್ಕೃತೀ||
  • ೬. ಚತುರ್ವಿಂಶ ತತ್ವಗಳು :- (೫-ಕರ್ಮೇಂದ್ರಿಯ ಗಳು ತತ್ವಗಳಲ್ಲಿ ಸೇರಿಲ್ಲ. ) (ಯೋಗ ದರ್ಶನ) ಪಂಚ ತನ್ಮಾತ್ರೆ ಗಳು, ಪಂಚ ಭೂತಗಳು, ಪಂಚ ಪ್ರಾಣಗಳು, ಪಂಚೇಂದ್ರಿಯಗಳು
  1. ~ಶಬ್ದ --ಆಕಾಶ-- ವ್ಯಾನ --ಶ್ರೋತೃ
  2. ~ಸ್ಪರ್ಶ --ವಾಯು-- ಪ್ರಾಣ-- ತ್ವಕ್
  3. ~ರೂಪ --ಅಗ್ನಿ --ಸಮಾನ --ಚಕ್ಷು
  4. ~ರಸ—ಅಪ್ --ಉದಾನ --ಜಿಹ್ವಾ
  5. ~ಗಂಧ --ಪೃಥವೀ-- ಅಪಾನ --ನಾಸಿಕ
  • ೫ ೫ ೫ ೫ =ಒಟ್ಟು ೨೦ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, (೪) ಒಟ್ಟು = ೨೪ ತತ್ವ
  • ೭.
  • ೮.

ಪಂಚ ವಿಂಶ (೨೫)[ಬದಲಾಯಿಸಿ]


  • ೨೫ ತತ್ವಗಳು.
  • ೧. ಪಂಚ ವಿಂಶ ತತ್ವಗಳು  :- ಚತುರ್ವಿಂಶ ತತ್ವಗಳು ೨೪ + (೧)ಪರಮೇಶ್ವರ,(ಮನಷ್ಯನಲ್ಲಿ ಪರುಷ ಚೈತನ್ಯ ೧ ) ಒಟ್ಟು =೨೫ ತತ್ವಗಳು.

ಸಪ್ತವಿಂಶತಿ (೨೭)[ಬದಲಾಯಿಸಿ]


  • ೧. ೨೭ ನಕ್ಷತ್ರಗಳು  :- ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರಾ, ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಘಾ, ಹುಬ್ಬಾ, ಉತ್ತರಾ, ಹಸ್ತಾ, ಚಿತ್ತಾ, ಸ್ವಾತಿ, ವಿಶಾಖಾ, ಅನೂರಾಧಾ, ಜ್ಯೇಷ್ಠಾ, ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರವಣ, ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರಾ, ಉತ್ತರಾಭಾದ್ರಾ, ರೇವತಿ.
  • ೨. ೨೭ ಯೋಗಗಳು :- .ವಿಷ್ಕಂಭ, ಪ್ರೀತಿ, ಆಯುಷ್ಮಾನ್, ಸೌಭಾಗ್ಯ, ಶೋಭನಾ, ಅತಿಗಂಡ, ಸುಕರ್ಮ, ಧೃತಿ, ಶೂಲಿ, ಗಂಡ, ಔಋದ್ಧಿ, ಧೃವ, ವ್ಯಾಘಾತಾ, ಹರ್ಷಣ, ವಜ್ರ, ಸಿದ್ಧಿ, ವ್ಯತೀಪಾತ, ವರೀಯಾನ್, ಪರಿಘ, ಶಿವ, ಸಿದ್ಧ, ಸಾಧ್ಯ, ಶುಭ, ಶುಕ್ಲ, ಬ್ರಹ್ಮ,, ಐಂದ್ರ, ವೈಧೃತಿ.
  • ೩.

ದ್ವಾತ್ರಿಂಶ (೩೨)[ಬದಲಾಯಿಸಿ]


  • ೧. ದ್ವಾತ್ರಿಂಶ (೩೨) ಉಪಚಾರ ಪೂಜಾ :- ೧.ಧ್ಯಾನ(೨) ಆವಾಹನಂ, (೩)ಸ್ವಾಗತ, (೪)ಆಸನಂ (೫)ಪಾದ್ಯ (೬). ಅರ್ಘ್ಯಂ, (೭) ಆಚಮನ, (೮). ಮಧುಪರ್ಕಂ, (೯). ಸ್ನಾನಂ, (೧೦). ವಸ್ತ್ರಂ, (೧೧). ಗಂಧ, (೧೨). ಅಕ್ಷತಾ, (೧೩). ಭೂಷಣಂ, (೧೪) ಉಪವೀತ, (೧೫). ಪುಷ್ಪಂ, (೧೬). ಧೂಪ, (೧೭). ದೀಪ, (೧೮).ಭೋಜನಂ (೧೯).ಪಾನೀಯಂ, (೨೦) ಆಚಮನ, (೨೧) ಕರೋದ್ವರ್ತನ, (೨೨) ತಾಂಬೂಲ, (೨೩) ಅನುಲೇಪನ, (೨೪) ಗೀತ, (೨೫) ವಾದ್ಯ, (೨೬).ನೃತ್ಯ, (೨೭) ಸ್ತುತಿ, (೨೮) ದಕ್ಷಿಣೆ, (೨೯). ಆರತಿ, (೩೦) ಪುಷ್ಪಾಂಜಲಿ (೩೧) ಪ್ರದಕ್ಷಿಣ (೩೨) ನಮಸ್ಕೃತೀ||
  • ೨.

ಷಟ್ಪಂಚಶತ್ (೫೬)[ಬದಲಾಯಿಸಿ]


  • ೧. ಚಪ್ಪನ್ನ - ಐವತ್ತಾರು ದೇಶಗಳು :-
  • ೧. ಚಪ್ಪನ್ನ ದೇಶಗಳು :- ಅಂಗ , ವಂಗ, ಕಳಿಂಗ, ಕಾಶ್ಮೀರ, ಕಾಂಬೋಜ, ಕಾಮರೂಪ, ಕೇರಳ, ಕೇಕಯ, ಕೋಸಲ, ಕುಂತಲ, ಮೈಥಿಲ, ಕುಂತಲ, ಕುರಂಗ, ಕುರವಕ, ಸೌವೀರ, ಸೌರಾಷ್ಟ್ರ, ಮಹಾರಾಷ್ಟ್ರ, ಮತ್ಸ್ಯ, ಮಾಗಧ, ಮಾಳವ, ಮರಾಳ, ಸಿಂಹಳ, ಮಲೆಯಾಳ, ಚೋಳ, ಬಂಗಾಳ, ಪಾಂಚಾಲ, ಸಾಳ್ವ, ಪುಳೀಂದ್ರ, ಕರ್ಣಾಟಕ, ವರಾಟಕ, ಸಿಕ್ಕ, ಸಿಂಧ, ಪಂಜಾವಿಕಾ, ಪಾವಕಾ, ಪಾಂಡ್ಯ, ದ್ರವಿಡ, ಯವನ, ಶೂರಸೇನ, ಘೂರ್ಜರ, ಕುಕ್ಕುರ, ಪರಾಶರ, ಗಾಂಧಾರ, ವಿದರ್ಭ , ಬರ್ಬರ, ಬರಮಾ, ಭೋಜ, ಬಾಹ್ಲೀಕ, ಕೊಂಕಣ, ಟೆಂಕಣ, ಚೀಣಾ, ಹೂಣ, ದಶಾರ್ಣ, ಸೌರ, ನೇಪಾಳ, ಆಂದ್ರ, ಆವಂತಿ.

೨.

ಷಷ್ಠಿ (೬೦)[ಬದಲಾಯಿಸಿ]

  • ೧. ಷಷ್ಟಿ ಸಂವತ್ಸರಗಳು :- ಪ್ರಭವ , ವಿಭವ, ಶುಕ್ಲ, ಪ್ರಮೋದೂತ, ಪ್ರಜಾಪತಿ, ಅಂಗಿರಸ, ಶ್ರೀಮುಖ, ಭಾವ, ಯುವ, ಧಾತೃ, ಈಶ್ವರ, ಬಹುಧಾನ್ಯ, ಪ್ರಮಾಥಿ, ವಿಕ್ರಮ, ವೃಷ, ಚಿತ್ರಭಾನು, ಸುಭಾನು, ತಾರಣ, ಪಾರ್ಥಿವ, ವ್ಯಯ, ಸರ್ವಜಿತ್ ಸರ್ವಧಾರಿ, ವರೋಧಿ, ವಿಕೃತಿ, ಖರ, ನಂದನ, ವಿಜಯ, ಜಯ, ಮನ್ಮಥ, ದುರ್ಮುಖ, ಹೇಮಲಂಬಿ, ವಿಲಂಬಿ, ವಿಕಾರಿ, ಶಾರ್ವರಿ, ಪ್ಲವ, ಶುಭಕೃತು, ಶೋಭಕೃತ್, ಕ್ರೋಧಿ, ವಿಶ್ವಾವಸು, ಪರಾಭವ, ಪ್ಲವಂಗ, ಕೀಲಕ, ಸೌಮ್ಯ, ಸಾಧಾರಣ, ವಿರೋಧಿಕೃತ್, ಪರಿಧಾವಿ, ಪ್ರಮಾದಿ, ಆನಂದ, ರಾಕ್ಷಸ, ನಲ, ಪಿಂಗಲ, ಕಾಲಯುಕ್ತ, ಸಿದ್ಧಾರ್ಥಿ, ರೌದ್ರಿ, ದುರ್ಮತಿ, ದುಂದುಭಿ, ರುದಿರೋದ್ಗಾರಿ, ರಕ್ತಾಕ್ಷಿ, ಕ್ರೋಧನ, ಕ್ಷಯ.
  • ೨.

ಚೌಷಷ್ಠಿ (೬೪ )[ಬದಲಾಯಿಸಿ]


[೨] [೩] [೪] [೫]

ಆಧಾರ[ಬದಲಾಯಿಸಿ]

ಪುರಾಣಗಳು | ದರ್ಶನಗಳು |ತತ್ವಶಾಸ್ತ್ರ | ಧರ್ಮಶಾಸ್ತ್ರ | ಸ್ಮೃತಿಗಳು | ಸೂತ್ರಗಳು

ಉಲ್ಲೇಖ[ಬದಲಾಯಿಸಿ]

  1. https://kannada.oneindia.com/column/gv/2009/0725-food-and-health-book-by-vasundhara-bhupathi.html
  2. ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು
  3. ಅಷ್ಟಾದಶ ಪುರಾಣಗಳು
  4. ಭಾರತೀಯ ತತ್ವ ಶಾಸ್ತ್ರ ಪರಿಚಯ - ಎಂ. ಪ್ರಭಾಕರ ಜೋಷಿ ಮತ್ತು ಪ್ರೊ.ಎಂ.ಎ.ಹೆಗಡೆ, ಸಂಸ್ಕೃತ ವಿಭಾಗದ ಮುಖ್ಯಸ್ಥರು, ಎಂ.ಜಿ.ಸಿ. ಕಾಲೇಜು, ಸಿದ್ದಾಪುರ, ಕಾರವಾರ ಜಿಲ್ಲೆ. ಪ್ರಕಾಶಕರು: ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.
  5. ಪುರಾಣ ಭಾರತ ಕೋಶ- ಯಜ್ಞನಾರಾಯಣ ಉಡುಪ- ಕರ್ನಾಟಕ ಸರ್ಕಾರ