ಗಂಗಾ
Wikipedia ಇಂದ
| ಗಂಗಾ ನದಿ | |
| ನದಿ | |
|
ವಾರಾಣಸಿಯಲ್ಲಿ ಗಂಗೆ
|
|
| ರಾಷ್ಟ್ರಗಳು | ಭಾರತ, ನೇಪಾಳ, ಬಾಂಗ್ಲಾದೇಶ |
|---|---|
| ಉಪನದಿಗಳು | |
| - ಎಡಬದಿಯಲ್ಲಿ | ಮಹಾಕಾಳಿ, ಕರ್ನಾಲಿ, ಕೋಸಿ, ಗಂಡಕಿ, ಘಾಘ್ರಾ |
| - ಬಲಬದಿಯಲ್ಲಿ | ಯಮುನಾ, ಸೋನ್, ಮಹಾನಂದಾ |
| ನಗರಗಳು | ಹರಿದ್ವಾರ, ಸೊರೊನ್, ಕನ್ನೋಜ್, ಕಾನ್ಪುರ, ಅಲಹಾಬಾದ್, ವಾರಾಣಸಿ, ಪಾಟ್ನಾ, ರಾಜ್‌ಶಾಹಿ |
| ಮೂಲ | ಗಂಗೋತ್ರಿ ಹಿಮನದಿ |
| - ಸ್ಥಳ | ಉತ್ತರಾಖಂಡ, ಭಾರತ |
| - ಸಮುದ್ರ ಮಟ್ಟದಿಂದ ಎತ್ತರ | ೭,೭೫೬ m (೨೫,೪೪೬ ft) |
| - ಅಕ್ಷಾಂಶ-ರೇಖಾಂಶ | |
| ಸಾಗರಮುಖ | ಗಂಗಾ ಮುಖಜಭೂಮಿ |
| - ಸ್ಥಳ | ಬಂಗಾಳ ಕೊಲ್ಲಿ, ಬಾಂಗ್ಲಾದೇಶ |
| - ಸಮುದ್ರ ಮಟ್ಟದಿಂದ ಎತ್ತರ | ೦ m (೦ ft) |
| - ಅಕ್ಷಾಂಶ-ರೇಖಾಂಶ | |
| ಉದ್ದ | ೨,೫೧೦ km (೧,೫೬೦ mi) |
| ಜಲಾನಯನ | ೯೦೭,೦೦೦ km² (೩೫೦,೧೯೫ sq mi) |
| ನೀರಿನ ಬಿಡುಗಡೆ | for ಸಾಗರಕ್ಕೆ |
| - ಸರಾಸರಿ | ೧೨,೦೧೫ m³/s (೪೨೪,೩೦೬ cu ft/s) |
ಗಂಗಾ ನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದುದು. ಗಂಗಾನದಿಯು ಭಾರತದ ಪುರಾಣ ಮತ್ತು ಮಹಾಕಾವ್ಯಗಳಲ್ಲಿ "ದೇವನದಿ" ಎಂದು ವರ್ಣಿಸಲ್ಪಟ್ಟಿದೆ. ಭಾರತ ದೇಶದ ಉದ್ದಗಲಕ್ಕೂ ಗಂಗಾನದಿಯನ್ನು ಮಾತೃ ದೇವತೆಯ ರೂಪದಲ್ಲಿ ಪೂಜಿಸುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಇದೆ.
ಗಂಗಾನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟಿ ೧೫೫೮ ಮೈಲಿಗಳಷ್ಟು (೨೫೦೭ ಕಿ.ಮಿ) ದೂರವನ್ನು ಕ್ರಮಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.