ಕಾನ್ಪುರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಟೆಂಪ್ಲೇಟು:Otherplaces

Kanpur
India-locator-map-blank.svg
Red pog.svg
Kanpur
ರಾಜ್ಯ
 - ಜಿಲ್ಲೆ
Uttar Pradesh
 - Kanpur Nagar District
Kanpur Dehat District
ನಿರ್ದೇಶಾಂಕಗಳು 26.460738° N 80.333405° E
ವಿಸ್ತಾರ
 - ಎತ್ತರ
1640 km²
 - 126 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2009)
 - ಸಾಂದ್ರತೆ
4,864,674
 - 1366/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 2080xx
 • 2092xx
  • 2093xx
  • 2094xx
 - +0512
 - UP-78
ಅಂತರ್ಜಾಲ ತಾಣ: www.kanpurnagar.nic.in

ಕಾನ್ಪುರ pronunciation ಹಿಂದಿ:कानपुर, ಉರ್ದು: کان پورವನ್ನು 1948ಕ್ಕೂ ಮುಂಚೆ ಕಾನ್‌ಪೋರ್ ಎಂದು ಕರೆಯಲಾಗುತ್ತಿತ್ತು, ಇದು ಭಾರತದ ಒಂಬತ್ತನೆಯ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರವಾಗಿದೆ ಮತ್ತು ಉತ್ತರಪ್ರದೇಶ ರಾಜ್ಯದಲ್ಲಿನ ಅತ್ಯಂತ ದೊಡ್ಡದಾದ ನಗರವಾಗಿದೆ. ಇದು ದೆಹಲಿಯ ನಂತರ ಹಿಂದಿ ಭಾಷೆ ಮಾತನಾಡುವ ಎಲ್ಲಾ ನಗರಗಳಲ್ಲಿ ಎರಡನೆಯ ದೊಡ್ಡ ನಗರವಾಗಿದೆ. ಇದು ಈ ಹಿಂದೆ ಪೂರ್ವದ ಮ್ಯಾಂಚೆಸ್ಟರ್ ಎಂದು ಪರಿಚಿತವಾಗಿತ್ತು, ಮತ್ತು ಇದು ಉತ್ತರಪ್ರದೇಶದ ಆರ್ಥಿಕ ರಾಜಧಾನಿಯಾಗಿತ್ತು. ಕಾನ್ಪುರ ಗಂಗಾ ನದಿಯ ದಡದ ಮೇಲೆ ನೆಲೆಸಿದೆ ಮತ್ತು ಇದು ಒಂದು ಅತ್ಯಂತ ಪ್ರಮುಖವಾದ ಕೈಗಾರಿಕಾ ಕೇಂದ್ರವಾಗಿದೆ. ಇದು ಸುಮಾರು 1300 km²ನಷ್ಟು ಭೂಪ್ರದೇಶವನ್ನು ಹೊಂದಿದೆ ಮತ್ತು 4,864,674 ಜನಸಂಖ್ಯೆಯನ್ನು ಹೊಂದಿದೆ[೧]. ನಗರದ ಔದ್ಯಮಿಕ ಪ್ರಾಮುಖ್ಯತೆಯನ್ನು ಗಮನಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇನ್ಸಿಟ್ಯಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಟ್ಸ್ ಆಫ್ ಇಂಡಿಯಾದ ಶಾಖೆಗಳನ್ನು ನಗರದಲ್ಲಿ ಪ್ರಾರಂಭಿಸಲಾಯಿತು. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಐಐಟಿ ಕಾನ್ಪುರ್, ಹಾರ್ ಕೋರ್ಟ್ ಬಟ್ಲರ್ ಟೆಕ್ನಾಲಾಜಿಕಲ್ ಇನ್ಸಿಟ್ಯಿಟ್ಯೂಟ್ (ಎಚ್ ಬಿಟಿಐ) ಮತ್ತು ಜಿಎಸ್ ವಿಎಂ ಮೆಡಿಕಲ್ ಕಾಲೇಜ್‌‍ನಂತಹ ಹಲವಾರು ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.

ಪರಿವಿಡಿ

[ಬದಲಾಯಿಸಿ] ಇತಿಹಾಸ

ಗಂಗಾ ನದಿ ತೀರದಲ್ಲಿರುವ, ಕಾನ್ಪುರ್, ತನ್ನದೆ ಆದ ಐತಿಹಾಸಿಕ, ಧಾರ್ಮಿಕ ಮತ್ತು ವಾಣಿಜ್ಯಿಕ ಪ್ರಾಮುಖ್ಯತೆ ಪಡೆದುಕೊಂಡು ಉತ್ತರ ಭಾರತದ ಪ್ರಮುಖ ಕೇಂದ್ರವಾಗಿದೆ. ಸಂಚೆಂದಿ ರಾಜ್ಯದ ಹಿಂದೂ ರಾಜ ಚಂದೇಲನಿಂದ ನಿರ್ಮಿಸಲ್ಪಟ್ಟಿದೆ ಎಂಬ ನಂಬಿಕೆಯಿದೆ. ಶ್ರೀಕೃಷ್ಣನ ಪಟ್ಟಣ ಕನ್ಹಯ್ಯಾ, ನಗರದ ಹೆಸರು ಕನ್ಹಯ್ಯಾಪುರದಿಂದ ವ್ಯುತ್ಪತ್ತಿಯಾಗಿದೆ ಎಂಬ ನಂಬಿಕೆ ಇದೆ. ಕಾಲಾನಂತರದಲ್ಲಿ ಕನ್ಹಯ್ಯಾಪುರ, ಕನ್ಹಪುರ ಮತ್ತು ನಂತರ ಕಾನ್ಪುರ್ ಆಗಿ ಪರಿವರ್ತಿತಗೊಂಡಿತು. ಬ್ರಿಟಿಷ್ ಆಡಳಿತಾವಧಿಯಲ್ಲಿ "Cawnpore" ಆಂಗ್ಲಭಾಷೆಯ ಕಾಗುಣಿತವಾಗಿತ್ತು.

ಮಹಾಭಾರತದಲ್ಲಿ ನಾಯಕರುಗಳ ಪೈಕಿ ಓರ್ವನಾಗಿರುವ ಕರ್ಣನೊಂದಿಗೆ ಇದು ಸಂಬಂಧ ಹೊಂದಿದ್ದು, ಕರ್ಣಪುರ ಎಂಬ ಹೆಸರಿನಿಂದ ಇದು ವ್ಯುತ್ಪತ್ತಿಯಾಗಿದೆ ಎನ್ನುವುದು ಇತರರ ನಂಬಿಕೆ. ಅರ್ಜುನನಿಗೆ ಸರಿಸಮನನಾಗಿ ಮಾಡುವುದಕ್ಕೆ ದುರ್ಯೋಧನನು ಕರ್ಣನನ್ನು ರಾಜನನ್ನಾಗಿ ಮಾಡಿ , ಈ ಪ್ರದೇಶವನ್ನು ಆತನಿಗೆ ನೀಡಿದನು. ಹೀಗಾಗಿ ಈ ಪ್ರದೇಶಕ್ಕೆ ತನ್ನ ಪ್ರಥಮ ರಾಜನ ಹೆಸರನ್ನು ನೀಡಲಾಯಿತು. ಇನ್ನೊಂದು ನಂಬಿಕೆಯ ಪ್ರಕಾರ ಇದು ಹತ್ತಿರದ ಪಟ್ಟಣ ಮಾಕನ್‌‌ಪುರದ ಕಾರಣ ಬಂದಿರಬಹುದು ಎಂದು ಸೂಚಿಸುತ್ತದೆ. ಮದರಿಯಾ ಸೂಫಿ ತತ್ವದ ಅನುಯಾಯಿ ಸೂಫಿ ಸಂತ ಬದಿವುದ್ದೀನ್ ಝಿಂದಾ ಶಹಾ ಮದರ , (d.1434) ಖೈರಾಬಾದ್ ಎಂದು ಈ ಮೊದಲು ಕರೆಯಲ್ಪಡುತ್ತಿದ್ದ ಇಲ್ಲಿ ವಾಸ್ತವ್ಯ ಮಾಡಿದ್ದನು.[೨] ಐತಿಹಾಸಿಕವಾಗಿ, ಇಂದಿನ ಕಾನ್ಪುರ್‌‌‍ನ ಪೂರ್ವಭಾಗದಲ್ಲಿರುವ ಜಾಜಮು ಕಾನ್ಪುರ್ ಜಿಲ್ಲೆಯಲ್ಲಿನ ಮೂಲ ನಿವಾಸ ಸ್ಥಾನ ಎಂದು ಹೇಳಲಾಗುತ್ತಿದೆ.

13ನೇ ಶತಮಾನದವರೆಗೆ ಕಾನ್ಪುರ್ ಅಭಿವೃದ್ಧಿ ಅಸ್ಪಷ್ಟವಾಗಿತ್ತು. ಕಾನ್ಪುರ್ ಕುರಿತು ಇತಿಹಾಸದಲ್ಲಿ ಯಾವುದೇ ದಾಖಲೆ ಲಭ್ಯವಾಗದಿದ್ದರೂ, ಇದರ ಎರಡು ಉಪನಗರಗಳಾದ ಜಾಜಮೌ ಮತ್ತು ಬಿಥೂರ್ ಕುರಿತ ಕುರುಹುಗಳನ್ನು ಪೌರಾಣಿಕ ಕಾಲದಲ್ಲಿ ಗುರುತಿಸಬಹುದಾಗಿದೆ. ನದಿಯ ಮೇಲ್ಬಾಗದಲ್ಲಿ ನಗರದಿಂದ ಅಂದಾಜು 20 ಕಿ.ಮೀ ಮತ್ತು ಐಐಟಿ ಕಾನ್ಪುರ್ ಕ್ಯಾಂಪಸ್ ನಿಂದ 10 ಕಿ. ಮೀ ದೂರದಲ್ಲಿ ಬಿಥೂರ್ ಇದೆ. ಕಾನ್ಪುರ್ ನಗರದಿಂದ 8 ಕಿ. ಮೀ ಮತ್ತು ಐಐಟಿ ಕ್ಯಾಂಪಸ್ ಕೆಳ ಪ್ರದೇಶದಲ್ಲಿ ಸರಿಸುಮಾರು 20 ಕಿ. ಮೀ. ಅಂತರದಲ್ಲಿ ಜಾಜಮೌ ಇದೆ. ಹಿಂದು ಪೌರಾಣಿಕ ಕಥೆಯ ಪ್ರಕಾರ ವಿಶ್ವವನ್ನು ಸೃಷ್ಟಿಸಿದ ಕೂಡಲೆ ಬ್ರಹ್ಮದೇವ ಅಶ್ವಮೇಧ ಯಾಗವನ್ನು (ಯಜ್ಞದಲ್ಲಿ ಬಿಡುಗಡೆ ಮಾಡಲಾದ ಕುದುರೆಯ ಸ್ವಚ್ಛಂದಕ್ಕೆ ತಡೆ ಹಾಕುವವರ ವಿರುದ್ಧ ಹೋರಾಡುವುದಕ್ಕೆ ಬೆಂಗಾವಲು ಇರುತ್ತಿತ್ತು.) ಬಿಥೂರ್‌‌‌ನಲ್ಲಿ(ಬ್ರಹ್ಮಾವರ್ತ ಎಂದೂ ಕರೆಯಲಾಗುತ್ತದೆ) ಮಾಡಿ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದನು. ಬಿಥೂರ್‌ನಲ್ಲಿರುವ ಇನ್ನೊಂದು ಪ್ರಖ್ಯಾತ ಸ್ಥಳ ಎಂದರೆ, ರಾಮಾಯಣ ಮಹಾಕಾವ್ಯವನ್ನು ಸಂಸ್ಕೃತದಲ್ಲಿ ಬರೆದ ಎಂದು ಹೇಳಲಾಗುವ ಪ್ರಖ್ಯಾತ ಋಷಿ ವಾಲ್ಮಿಕಿಯ ಆಶ್ರಮ. ಆಯೋಧ್ಯೆಯ ರಾಜ ರಾಮಚಂದ್ರನಿಂದ ಪರಿತ್ಯಕ್ತಳಾದ ರಾಣಿ ಸೀತೆಯು ಈ ಆಶ್ರಮದಲ್ಲಿ ತನ್ನ ದಿನಗಳನ್ನು ಎಕಾಂತವಾಗಿ ಕಳೆಯುತ್ತ ತನ್ನ ಅವಳಿ ಮಕ್ಕಳಾದ ಲವ ಮತ್ತು ಕುಶರನ್ನು ಬೆಳೆಸಿದಳು ಎಂದು ಮಹಾಕಾವ್ಯದ ಪ್ರಕಾರ ಹೇಳಲಾಗುತ್ತದೆ.

ಜಾಜಮೌದಲ್ಲಿ ಪ್ರಾಚೀನ ಕಾಲದ ಕೋಟೆಯ ಪಳೆಯುಳಿಕೆಗಳು ಇದ್ದು, ಸದ್ಯ ಮಣ್ಣಿನ ದಿಬ್ಬವಾಗಿ ಉಳಿದುಕೊಂಡಿದೆ. ಈ ಮಣ್ಣಿನ ದಿಬ್ಬದ ಇತ್ತೀಚಿನ ಉತ್ಖನನಗಳು ಈ ಸ್ಥಳವು ಅತ್ಯಂತ ಪ್ರಾಚೀನವಾಗಿದ್ದು, ವೇದಗಳ ಕಾಲದ್ದು ಎಂದು ಸೂಚಿಸುತ್ತಿದೆ. ಬ್ರಹ್ಮದೇವನ ಎಂಟನೇ ಉತ್ತರಾಧಿಕಾರಿ, ಜನಮಾನಸದಲ್ಲಿ ಬೇರೂರಿರುವ ಚಂದ್ರವಂಶದ ರಾಜ ಯಯಾತಿಗೆ ಈ ಕೋಟೆ ಸೇರಿತ್ತು. ಜಾಜಮೌದಲ್ಲಿರುವ ಬೌದ್ಧ ಕಾಲದ ಶಿವ ಮತ್ತು ಸಿದ್ಧಾದೇವಿಗೆ ಸೇರಿರುವ ಸಿದ್ಧನಾಥ ದೇವಸ್ಥಾನ ಇಲ್ಲಿದೆ. ಕೆಲವು ಅವಧಿಯವರೆಗೆ ಈ ಸ್ಥಳವನ್ನು ಸಿದ್ಧಪುರಿ ಎಂದು ಕರೆಯಲಾಗುತ್ತಿತ್ತು. ಕಾನ್ಪುರ್ ರೈಲ್ವೆ ಸ್ಟೇಷನ್‌ನಿಂದ‍ 20 ಕಿ.ಮೀ ದೂರದಲ್ಲಿರುವ ಶಿವರಾಜಪುರದಲ್ಲಿ ಚಂದೇಲ್ ರಾಜ ಸತಿಪ್ರಸಾದ್‌‍ನಿಂದ ತನ್ನ ರಾಣಿಯ ಸ್ಮರಣಾರ್ಥ ನಿರ್ಮಿಸಲ್ಪಟ್ಟ ಪ್ರಾಚೀನ ಕಾಲದ ದೇವಸ್ಥಾನ ಇದೆ. ಗಂಗಾ ನದಿ ತೀರದಲ್ಲಿರುವ ಈ ದೇವಸ್ಥಾನವನ್ನು ರಾತ್ರಿ ನಿರ್ಮಿಸಲಾಗಿದೆ ಎಂಬ ನಂಬಿಕೆಟೆಂಪ್ಲೇಟು:By whomಇದೆ. ಸುಂದರವಾದ ಶಿಲ್ಪಕಲೆ ಕೆಲಸ ಮತ್ತು ವಿಶಿಷ್ಟ ವಿನ್ಯಾಸದ ಕೆತ್ತನೆಗಳಿಂದಾಗಿ ಈ ದೇವಸ್ಥಾನ ಪ್ರಸಿದ್ಧವಾಗಿದೆ. ಮೊಘಲ್‌‍ ಶಕೆ ಪ್ರಾರಂಭವಾಗುವುದಕ್ಕಿಂತ ಮುನ್ನ ಇತಿಹಾಸದ ಪ್ರಮುಖ ಕಾಲಾವಧಿಯಲ್ಲಿ ಕನೌಜ್‌‍ನ ’ಪರಿಹಾರ’ರು ಈ ಪ್ರದೇಶವನ್ನು ಆಳಿದರು ಎನ್ನಲಾಗಿದೆ. ಪರಿಹಾರರ ರಾಜಧಾನಿ ಕನೌಜ್‌‍ಗೆ ಕಾನ್ಪುರ್ ಹತ್ತಿರವಾಗಿರುವ ಕಾರಣ ಈ ನಗರವನ್ನು ಪರಿಹಾರ ವಂಶದ ರಾಜರಾದ ಭೋಜ ಮತ್ತು ಮಿಹೀರ್ ಆಳಿದ್ದಾರೆ ಎಂದು ಕೆಲ ಐತಿಹಾಸಿಕ ಘಟನೆಗಳು ಸೂಚಿಸುತ್ತವೆ.

(ಕನೌಜ್ ಸಿಂಹಾಸನಕ್ಕೆ ಸಂಬಂಧ ಹೊಂದಿದ್ದ) ಪ್ರಯಾಗದ ರಾಜಾ ಕಾಂತಿದೇವ, ಕ್ರಿ.ಶ 1207ರಲ್ಲಿ ಕೊಹ್ನಾ ಎಂಬ ಗ್ರಾಮವನ್ನು ನಿರ್ಮಿಸಿದನು. ನಂತರ ಇದೇ ಕಾನ್ಪುರ್ ಎಂದು ಗುರುತಿಸಲ್ಪಟ್ಟಿತು. ಹರ್ಷವರ್ಧನ, ಭೋಜ, ಮಿಹೀರ್ ಜಯಚಂದ್ ಮತ್ತು ಸೂರ್‌‍ ವಂಶದ ಮುಸ್ಲಿಂ ದೊರೆಗಳ ಅವಧಿಯಲ್ಲಿ ಕಾನ್ಪುರ್, ಕನೌಜ್‌‍ನೊಂದಿಗೆ ಸಂಬಂಧ ಹೊಂದಿತ್ತು. 1579ರ ಅವಧಿಯ ಶೇರ್‌‍ಶಹಾ ಆಡಳಿತಾವಧಿಯಲ್ಲಿ ಮೊದಲ ಬಾರಿಗೆ ಕಾನ್ಪುರ್ ಉಲ್ಲೇಖಿಸಲ್ಪಟ್ಟಿದೆ. 18ನೇ ಶತಮಾನದ ಮೊದಲಾರ್ಧದವರೆಗೆ ಕಾನ್ಪುರ್ ಪ್ರಾಮುಖ್ಯತೆ ಇಲ್ಲದ ಗ್ರಾಮವಾಗಿ ಅಸ್ತಿತ್ವ ಕಾಪಾಡಿಕೊಂಡಿತು. ಆದರೆ ಇದರ ಅದೃಷ್ಟ 18ನೇ ಶತಮಾನದ ದ್ವಿತೀಯಾರ್ಧದಲ್ಲಿ ಹೊಸ ದಿಕ್ಕಿನತ್ತ ಬದಲಾವಣೆ ತೆಗೆದುಕೊಂಡಿತು. ಮೇ 1765ರಲ್ಲಿ ಜಾಜಮೌ ಬಳಿ ಅವದ್‌‍ನ ನವಾಬ್ ಶುಜಾ-ಉದ್-ದೌಲಾ ಬ್ರಿಟಿಷರಿಂದ ಪರಾಭವಗೊಳಿಸಲ್ಟಟ್ಟನು. 1773ರಿಂದ 1801ರವರೆಗೆ ಅವಧ್ ರಾಜ್ಯದ ಭಾಗವಾಗಿದ್ದ ಇದು, ನಂತರ ಬ್ರಿಟಿಷ್‌‍ರ ಕೈಯಲ್ಲಿ ಆಡಳಿತಕ್ಕೆ ದೊರೆಯಿತು. ಈ ಅವಧಿಯಲ್ಲಿ ಕಾನ್ಪುರ್ ಸ್ಥಳದ ಪ್ರಾಮುಖ್ಯತೆಯನ್ನು ಬ್ರಿಟಿಷರು ಮನಗಂಡರು. ಈ ಅವಧಿಯಲ್ಲಿ ಯುರೋಪಿನ ವ್ಯಾಪಾರಿಗಳು ಕಾನ್ಪುರ್‌‍ದಲ್ಲಿ ತಮ್ಮ ವ್ಯವಹಾರ ಸ್ಥಾಪಿಸಲು ಪ್ರಾರಂಭಿಸಿದರು. ಸ್ಥಳಾಂತರೊಂಡ ಯುರೋಪಿಯನ್ ಮೂಲದ ವ್ಯಾಪಾರಿಗಳ ಜೀವ ಮತ್ತು ಅವರ ಆಸ್ತಿಯ ಸಂರಕ್ಷಣೆಗೆ 1778ರಲ್ಲಿ 'ಅವಧ್ ಸ್ಥಳೀಯ ಪಡೆಗಳನ್ನು' ಸ್ಥಳಾಂತರಿಸಲಾಯಿತು. 1801ರಲ್ಲಿ ಅವಧ್ ನವಾಬ್ ಸಾದತ್ ಅಲಿಯೊಂದಿಗೆ ಆದ ಒಪ್ಪಂದ ಪ್ರಕಾರ ಬ್ರಿಟಿಷರಿಗೆ ಹಸ್ತಾಂತರಿಸಲಾಯಿತು. ಕಾನ್ಪುರ್ ಇತಿಹಾಸದಲ್ಲಿ ಇದು ಬದಲಾವಣೆಯ ದಿಕ್ಕು ಗುರುತಿಸಲಾಯಿತು. ಎಕೆಂದರೆ, ಬ್ರಿಟಿಷ್ ಇಂಡಿಯಾದ ಅವಧಿಯಲ್ಲಿ ನಂತರ ಇದು ಅತ್ಯಂತ ಪ್ರಮುಖ ಮಿಲಿಟರಿ ಕೇಂದ್ರವಾಗಿ ರೂಪುಗೊಂಡಿತು. ಮಾರ್ಚ್ 24, 1803ರಲ್ಲಿ ಇದನ್ನು ಜಿಲ್ಲೆ ಎಂದು ಘೋಷಿಸಲಾಯಿತು. ದಕ್ಷಿಣ ಪರ್ಮತ್ ಭಾಗವು ಬ್ರಿಟಿಷ್ ಪದಾತಿದಳ ಮತ್ತು ಪೆರೇಡ್ ಮೈದಾನವಾಗಿದ್ದವು. ಭಾರತೀಯ ಪದಾತಿದಳವು ಚುನ್ನಿಗಂಜ್‌‍ನಿಂದ ಕ್ರೈಸ್ಟ್ ಚರ್ಚ್ ಕಾಲೇಜಿನವರೆಗೆ ಇದ್ದ ಸ್ಥಳವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. 1847ರಲ್ಲಿ ಕಂಪನಿ ಬಾಗ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಮತ್ತು 1854ರಲ್ಲಿ ಗಂಗಾ ಕಾಲುವೆ ನಿರ್ಮಾಣ ಕಾಮಗಾರಿ ಪ್ರಾರಂಭವಾಯಿತು. ಕಾನ್ಪುರ್ ವಸ್ತು ಸಂಗ್ರಹಾಲಯದಲ್ಲಿ ವಸಾಹತುಶಾಹಿ ಪೂರ್ವ ಮತ್ತು ವಸಾಹತುಶಾಹಿ ಅವಧಿಯಲ್ಲಿನ ಅತ್ಯಂತ ಹೆಚ್ಚಿನ ಮೌಲ್ಯದ ಕಲೆ ವಸ್ತುಗಳನ್ನು ಕಾನ್ಪುರ್‌‍ ಸಂಗ್ರಹಾಲಯದಲ್ಲಿ ಸಂಗ್ರಹಿಸಲಾಗಿದ್ದು, ಕೆಇಎಂ ಹಾಲ್‌ನ ಫೂಲ್‌ಭಾಗ್ ಮೈದಾನದಲ್ಲಿ ಇದನ್ನು 1999ರಲ್ಲಿ ಸ್ಥಾಪಿಸಲಾಗಿದೆ.

[ಬದಲಾಯಿಸಿ] ಶ್ರೆಷ್ಠ ಆಟ ಮತ್ತು ಕೌನ್‌ಪುರ್ ಮೂಲ

ಆಂತರಿಕವಾಗಿ ಬ್ರಿಟನ್‌‍ನಲ್ಲಿ, ಅದರಲ್ಲೂ ವಿಕ್ಟೋರಿಯಾ ಶಕೆಯು ಬ್ರಿಟಿಷ್ ನಾಗರಿಕರು ಮತ್ತು ಬ್ರಿಟಿಷ್ ಸರ್ಕಾರದಲ್ಲಿ ಬ್ರಿಟನ್‌‍ನ ಸಾಮ್ರಾಜ್ಯ ವಿಸ್ತರಣಾ ನೀತಿ ಮತ್ತು ಭಾರತ (ಕಿರೀಟದಲ್ಲಿನ ರತ್ನ)ವನ್ನು ವಶಪಡಿಸಿಕೊಳ್ಳುವುದು ಜಗತ್ತಿನ ಶಕ್ತಿಯಾಗಿ ಉಳಿಯುವುದಕ್ಕೆ ಸಾಮ್ರಾಜ್ಯ ಅಸ್ತಿತ್ವ ಮತ್ತು ಉಳಿವಿಗಾಗಿ ಬೇರ್ಪಡಿಸಲಾಗದ ಕಾರಣಗಳು ಆಗಿವೆ ಎಂಬ ಗಾಢ ನಂಬಿಕೆ ಇತ್ತು. 1798ರಲ್ಲಿ ಫ್ರಾನ್ಸ್ನೆಪೋಲಿಯನ್ ಬೋನಾಪಾರ್ಟ್, ಇಂಗ್ಲೆಂಡಿನ ಮುಖ್ಯ ಸಂಪತ್ತಿನ ಮೂಲ ಇಜಿಪ್ಟ್‌ ಅನ್ನು ಫ್ರಾನ್ಸ್ ಆಕ್ರಮಿಸಿ ಭಾರತಕ್ಕೆ ಇರುವ ವ್ಯಾಪಾರಿ ಮಾರ್ಗವನ್ನು ಸ್ಥಗಿತಗೊಳಿಸಬೇಕು ಎಂದು ಫ್ರೆಂಚ್ ನಿರ್ದೇಶನ ಮಂಡಳಿಯ ಎದುರು ಸೂಚಿಸಿದನು. ಇದರಿಂದ ಎಚ್ಚೆತ್ತುಕೊಂಡ ಬ್ರಿಟಿಷ್ ರಾಜನೀತಿಜ್ಞರು ಈಜಿಪ್ಟ್‌‍ನಿಂದ ಭಾರತಕ್ಕೆ ಇರುವ ಸಂಪರ್ಕ ಮಾರ್ಗದ ಪ್ರಾಮುಖ್ಯತೆಯನ್ನು ಮನಗಂಡರು. ಇದೇ ರೀತಿ, ನಾರ್ಥ್ ವೆಸ್ಟ್ ಫ್ರಾಂಟಿಯರ್ ಫ್ರಾಂಟಿಯರ್ ಪ್ರಾವಿನ್ಸ್ (ಎನ್ ಡಬ್ಲ್ಯೂಎಫ್ ಪಿ- ಆಫ್ಘನ್ - ಪಾಕ್ ವ್ಯೂಹಾತ್ಮಕವಾಗಿ ಭಾರತದ ಮೇಲೆ ರಷಿಯನ್‌‍ರು ನಡೆಸಬಹುದಾದ ದಾಳಿಗೆ ಬ್ರಿಟಿಷರಿಗೆ ರಕ್ಷಣೆ ನೀಡುವಂತಿತ್ತು.ಆದರೆ, ರಷಿಯಾ ಕೂಡ ಭಾರತವನ್ನು ಜಯಿಸಬೇಕು ಎನ್ನುವ ಲಕ್ಷಣಗಳನ್ನು ಬಹಿರಂಗಪಡಿಸಲಿಲ್ಲ. ಏಕೆಂದರೆ ಬ್ರಿಟಿಷರು ಇದು ಸಂಭವಿಸದಂತೆ ತಡೆಯುವದಕ್ಕೆ ತಮ್ಮ ಶಕ್ತಿ ಪ್ರದರ್ಶಿಸಿದ್ದರು ಎಂದು ಘಟನಾವಳಿಗಳ ನಂತರದ ಮಾಹಿತಿ ಸೂಚಿಸುತ್ತದೆ.[೩] ಕಾಲಾನಂತರದಲ್ಲಿ ವಿಕ್ಟೋರಿಯಾಳ ಕನಸಿನ ಪರಿಣಾಮವಾಗಿ ಅವಧ್ ಮತ್ತು ಕಾನ್ಪುರ್ ಬ್ರಿಟಿಷರ ತಂತ್ರ ವಿನ್ಯಾಸದ ಕೇಂದ್ರ ಸ್ಥಾನವನ್ನು ವಹಿಸಿದವು. ಸಶಸ್ತ್ರ ಪಡೆಯ ಕೇಂದ್ರ ಸ್ಥಾನ ಮತ್ತು ಅದರ ಸಾಮ್ರಾಜ್ಯ ವಿಸ್ತರಣೆಯ ಗುರಿಗಳ ಉತ್ಪಾದನಾ ಕೇಂದ್ರವಾಗಿ ಪರಿವರ್ತಿತಗೊಂಡವು.

[ಬದಲಾಯಿಸಿ] 1857ರ ಬಂಡಾಯ

ಮುಖ್ಯ ಲೇಖನ: Indian Rebellion of 1857
ಇವನ್ನೂ ನೋಡಿ: Siege of Cawnpore
ಚಿತ್ರ:Kanpur 1857.jpg
ಭಾರತೀಯ ಹೋರಾಟಗಾರರಿಂದ ಹಿಡಿಯಲ್ಪಟ್ಟಿದ್ದ ಸಣ್ಣ ಬ್ರಿಟೀಷ್‌ ತುಕಡಿಗಳನ್ನು ಬಿಡಿಸಲು ಜನರಲ್‌ ಹ್ಯಾವ್‌ಲಾಕ್‌ರ ನಡೆಸಲ್ಪಟ್ಟ ಹೈಲ್ಯಾಂಡರ್‌ಗಳ ದಾಳಿ.

19ನೇ ಶತಮಾನದಲ್ಲಿ ಕಾನ್ಪುರ್ 7,000 ಸೈನಿಕರನ್ನು ಒಳಗೊಂಡಿದ್ದ ಬ್ರಿಟಿಷ್ ರ ಪ್ರಮುಖ ಕೋಟೆಯಾಗಿತ್ತು. 1857ರ ಭಾರತೀಯ ಬಂಡಾಯದ ಅವಧಿಯಲ್ಲಿ 900 ಬ್ರಿಟಿಷರನ್ನು ಅವರ ಕೋಟೆಯಲ್ಲಿ ನಾನಾ ಸಾಹಿಬ್ ನೇತೃತ್ವದ ಬಂಡುಕೋರರು 22 ದಿನಗಳ ಕಾಲ ಸುತ್ತುವರಿದಿದ್ದರು. ಒಪ್ಪಂದದ ಪ್ರಕಾರ ಅವರು ಹತ್ತಿರದ ಸತ್ತಿ ಚೌರಾ ಘಾಟ್‌‍ವರೆಗೆ ಸುರಕ್ಷಿತ ಮಾರ್ಗವನ್ನು ಕಲ್ಪಿಸಬೇಕು ಮತ್ತು ಅಲ್ಲಿ ಅಲಹಾಬಾದ್ಗೆ ಬಾರ್ಜ್ ಮೂಲಕ ತೆರಳುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಶರಣಾಗತರಾದರು. ಸತ್ತಿಚೌರಾ ಘಾಟ್‌‍ನಲ್ಲಿ ಯಾರು ಮೊದಲು ಗುಂಡು ಹಾರಿಸಿದರು ಎನ್ನುವ ವಿಷಯ ವಿವಾದಾತ್ಮಕವಾಗಿದ್ದು, ನಂತರ ತೆರಳುತ್ತಿರುವ ಬ್ರಿಟಿಷರ ಮೇಲೆ ಬಂಡುಕೋರ ಸೈನಿಕರಿಂದ ಗುಂಡು ಹಾರಿಸಲಾಯಿತು. ಮತ್ತು ಅವರು ಕೊಲ್ಲಲ್ಪಟ್ಟು ಅಥವಾ ಬಂಧಿಸಲ್ಪಟ್ಟರು. ವಿಳಂಬ ಮಾಡುವ ಉದ್ದೇಶದಿಂದ ಬಂಡುಕೊರರು ನಾವೆಯನ್ನು ಸಾದ್ಯವಾದಷ್ಟು ಎತ್ತರವಾದ ಮಣ್ಣಿನಲ್ಲಿ ಇರಿಸಿದ್ದರು ಎಂದು ಕೆಲ ಬ್ರಿಟಿಷ್ ಅಧಿಕಾರಿಗಳು ನಂತರ ಹೇಳಿದರು. ಅದು ಅಲ್ಲದೆ, ನಾನಾಸಾಹಿಬನ ಗುಂಪು ಎಲ್ಲ ಇಂಗ್ಲಿಷರನ್ನು ಕೊಲ್ಲವುದಕ್ಕೆ ಈ ಮೊದಲೇ ಬಂಡುಕೊರರನ್ನು ವ್ಯವಸ್ಥೆ ಮಾಡಿತ್ತು ಎಂದು ವಾದಿಸಿದರು. ನಂತರ ಈಸ್ಟ್ ಇಂಡಿಯಾ ಕಂಪನಿಯು ನಾನಾ ಸಾಹಿಬ ದ್ರೋಹ ಎಸಗಿದ್ದಾನೆ ಮತ್ತು ಮುಗ್ಧ ಜನರ ಕೊಲೆ ಮಾಡಿದ್ದಾನೆ ಎಂದು ಆಪಾದಿಸಿತು. ಆದರೆ, ನಾನಾ ಸಾಹಿಬ್ ಮೊದಲೇ ಯೋಜನೆ ರೂಪಿಸಿದ್ದ ಮತ್ತು ಸಾಮೂಹಿಕ ಕೊಲೆಗೆ ಆದೇಶಿಸಿದ್ದ ಎಂದು ಸಾಬೀತುಪಡಿಸುವುದಕ್ಕೆ ಕೊನೆಯವರೆಗೆ ಸಾಕ್ಷಿ ದೊರೆಯಲಿಲ್ಲ. ಸತಿಚೌರಾ ಘಾಟ್‌ನಲ್ಲಿ ನಡೆದ ಸಾಮೂಹಿಕ ಕೊಲೆಯು ಗೊಂದಲದ ಪರಿಣಾಮವಾಗಿ ಆಗಿದೆ ವಿನಃ ನಾನಾ ಸಾಹಿಬ್ ಮತ್ತು ಆತನ ಸಹವರ್ತಿಗಳ ಯೋಜನೆಯಿಂದಾಗಿ ಅಲ್ಲ ಎಂದು ಕೆಲ ಇತಿಹಾಸ ತಜ್ಞರು ವಾದಿಸುತ್ತಾರೆ. ಹತ್ಯಾಕಾಂಡದಲ್ಲಿ ಬದುಕುಳಿದ ನಾಲ್ವರು ಪುರುಷರ ಪೈಕಿ ಒಬ್ಬರಾಗಿರುವ ಲೆಪ್ಟಿನೆಂಟ್ ಮೌವ್‌‍ಬ್ರೇ ಥಾಮ್ಸನ್ ಅವರು, ತಾವು ಮಾತನಾಡಿದ ಸೈನಿಕ ಅಧಿಕಾರಿಗಳು ಮತ್ತು ಸೈನಿಕರು ಕೂಡ ಕೊಲೆ ನಡೆದಿದೆ ಎಂದು ಗೊತ್ತಿರಲಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಹಲವಾರು ಜನರನ್ನು ಕೊಲೆ ಮಾಡಲಾಯಿತು. ಮತ್ತು ಉಳಿದ 200 ಬ್ರಿಟಿಷ್ ಮಹಿಳೆಯರು ಮತ್ತು ಮಕ್ಕಳನ್ನು ತೀರಕ್ಕೆ ಕರೆ ತಂದು ಬಿಬಿಘರ್ (ಸ್ತ್ರೀಯರ ಮನೆ)ಗೆ ಕಳುಹಿಸಿಕೊಡಲಾಯಿತು. ಕೆಲವು ಸಮಯದ ನಂತರ ಜನರಲ್ ಹೆನ್ರಿ ಹ್ಯಾವಲಾಕ್ ನೇತೃತ್ವದಲ್ಲಿ ಬ್ರಿಟಿಷರು ಕಾನ್ಪುರ್ ಅನ್ನು ಮರಳಿ ಪಡೆಯಲಿದ್ದಾರೆ ಎಂದು ಅರಿವಾಗುತ್ತಲೇ ಬಂಡುಕೊರರ ನಾಯಕರು ಒತ್ತೆಯಾಳುಗಳ ಕೊಲೆ ಮಾಡುವುದಕ್ಕೆ ವಿಚಾರ ಮಾಡಿದರು. ಆದರೆ, ಬಂಡುಕೊರ ಸೈನಿಕರು ಆಜ್ಞೆ ಪಾಲಿಸುವುದಕ್ಕೆ ನಿರಾಕರಿಸಿದರು ಮತ್ತು ಜೂನ್ 18ರಂದು ಬ್ರಿಟಿಷರು ನಗರವನ್ನು ಪ್ರವೇಶಿಸುವ ಮೂರು ದಿನ ಮೊದಲೇ ಹತ್ತಿರದ ಪಟ್ಟಣಗಳನ್ನು ಕಟುಕರನ್ನು ಕರೆಸಿ ಒತ್ತೆಯಾಳುಗಳ ಕೊಲೆ ಮಾಡಲಾಯಿತು. ನಂತರ ಕೊಲೆಯಾದವರ ದೇಹಗಳನ್ನು ಹತ್ತಿರದಲ್ಲಿದ್ದ ಆಳವಾದ ಬಾವಿಯಲ್ಲಿ ಎಸೆಯಲಾಯಿತು. ಜನರಲ್ ನೇಲ್ ನೇತೃತ್ವದ ಬ್ರಿಟಿಷರ "ಆರ್ಮಿ ಆಫ್ ರಿಟ್ರಿಬ್ಯೂಷನ್" ನಗರವನ್ನು ಪುನಃ ತನ್ನ ವಶಕ್ಕೆ ತೆಗೆದುಕೊಂಡು ಬಂಡುಕೊರ ಸೈನಿಕರ ಮೇಲೆ ದುರಾದೃಷ್ಟವಾಗಿ ಆ ಪ್ರದೇಶದಲ್ಲಿ ಸಿಕ್ಕ ನಾಗರಿಕ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲೂ ಅವ್ಯಾಹತವಾಗಿ ಅಮಾನವೀಯ ಕೃತ್ಯಗಳನ್ನು ಎಸಗಿತು. ಕಾನ್ಪುರ್ ಹತ್ಯಾಕಾಂಡ, ಇದೇ ರೀತಿಯ ಬೇರೆ ಸ್ಥಳಗಳಲ್ಲಿ ನಡೆದ ಘಟನೆಗಳು ಬ್ರಿಟಿಷರಿಂದ ಮಿತಿಯಿಲ್ಲದ ದ್ವೇಷದ ಪ್ರಸಂಗ ಎಂದು ನೋಡಲ್ಪಟ್ಟಿವೆ.[೪] ಬಿಬಿಘರ್ ಅನ್ನು ಬ್ರಿಟಿಷರು ನಾಶಪಡಿಸಿದರು ಮತ್ತು ಬಾವಿಯ ಸ್ಥಳದಲ್ಲಿ ಸ್ಮಾರಕವನ್ನು ಮತ್ತು ಕ್ರಾಸ್ ಅನ್ನು ನಿರ್ಮಿಸಿದರು. ಕೊಲೆಯಾದವರ ಸ್ಮರಣಾರ್ಥವಾಗಿ ಅವರು, 1862ರಲ್ಲಿ ಆಲ್‌ಸೌಲ್ಸ್ ಕ್ಯಾಥೆಡ್ರಲ್ ಚರ್ಚ್ ಅನ್ನು ನಿರ್ಮಿಸಿದರು. ನಂತರ ಕಾನ್ಪುರ್ ಮೆಮೋರಿಯಲ್ ಚರ್ಚ್ ಎಂದು ಪುನರ್ ನಾಮಕರಣ ಮಾಡಲಾಯಿತು. ವ್ಹೀಲರ್ಸ್‌‍ ಎಂಟ್ರಾಂಚ್‌‍ಮೆಂಟ್ ಈಶಾನ್ಯ ಭಾಗದಲ್ಲಿ ಇಂದಿಗೂ ಈ ಚರ್ಚ್ ಇದೆ. 1947ರಲ್ಲಿ ಸ್ವಾತಂತ್ರ್ಯಾನಂತರ ಪ್ರಖ್ಯಾತ 'ಮೌರ್ನ್ ಫುಲ್ ಸೆರಾಫ್' ನ ಮಾರ್ಬಲ್ ಗೊಥಿಕ್ ಸ್ಕ್ರೀನ್ ಅನ್ನು ಚರ್ಚ್ ಯಾರ್ಡ್‌‍ಗೆ ವರ್ಗಾಯಿಸಲಾಯಿತು. ನಾನಾರಾವ್ ಪಾರ್ಕ್‌‌ನಲ್ಲಿದ್ದ ಅದರ ಜಾಗೆಯಲ್ಲಿ ಎದೆಮಟ್ಟದ ತಾಂತ್ಯಾಟೋಪಿಯ ಮೂರ್ತಿಯನ್ನು ನಿರ್ಮಿಸಲಾಯಿತು. ಬಾವಿಯನ್ನು ಈಗ ಕಲ್ಲಿನಿಂದ ಮುಚ್ಚಲಾಗಿದೆ ಆದರೆ, ಸುತ್ತಲಿನ ಅಂಚು ಮತ್ತು 'ಬೂಧಾ ಬರ್ಗಡ್' (ಹಳೇಯ ಆಲದ ಮರ) ಇನ್ನೂ ಇವೆ.

[ಬದಲಾಯಿಸಿ] ಉದ್ಯಮಗಳ ಅಭಿವೃದ್ಧಿ

ಲಾಲ್‌ ಇಮ್ಲಿ ಕಾರ್ಖಾನೆಯ ಒಂದು ನೋಟ.

1857ರ ನಂತರ ಇದು, ಜವಳಿ ಮತ್ತು ಚರ್ಮೋದ್ಯಮ ಉದ್ದಿಮೆಯ ಪ್ರಮುಖ ಕೇಂದ್ರವಾಯಿತು. ಸೈನ್ಯಕ್ಕೆ ಚರ್ಮದ ಉತ್ಪನ್ನಗಳನ್ನು ಪೂರೈಸುವುದಕ್ಕೆ ಸರ್ಕಾರ, 1860ರಲ್ಲಿ ಹಾರ್ನೆಸ್ ಆಂಡ್ ಸ್ಯಾಡ್ಲರ್ ಫ್ಯಾಕ್ಟರಿಯನ್ನು ಪ್ರಾರಂಭಿಸಿತು. ನಂತರ ಕೂಪರ್ ಅಲೆನ್‌‍ & ಲೀ 1880ರಲ್ಲಿ ಪ್ರಾರಂಭಿಸಿತು. ಹತ್ತಿ ಬಟ್ಟೆಯ ಕಾರ್ಖಾನೆಯನ್ನು ಎಲ್ಜಿನ್ ಮಿಲ್ಸ್ 1862ರಲ್ಲಿ ಪ್ರಾರಂಭಿಸಿತು, ಮತ್ತು 1882ರಲ್ಲಿ ಮುಯಿರ್ ಮಿಲ್ಸ್ ಮತ್ತು ನಂತರದ 40 ವರ್ಷಗಳ ಅವಧಿಯಲ್ಲಿ ವಿಕ್ಟೋರಿಯಾ ಮಿಲ್ಸ್ ಮತ್ತು ಅಥರ್ಟನ್ ವೆಸ್ಟ್ & ಕಂಪನಿ (ಅಥರ್ಟನ್ ಮಿಲ್ಸ್) ಸೇರಿದಂತೆ ಹಲವಾರು ಮಿಲ್‌‍ಗಳು ಪ್ರಾರಂಭವಾಗುವ ಮೂಲಕ ಕೌನ್‌‍ಪುರ್ ಅನ್ನು ಪ್ರಮುಖ ಜವಳಿ ಉತ್ಪಾದನಾ ಕೇಂದ್ರವನ್ನಾಗಿ ಮಾಡಿತು. ಕೇಂದ್ರ ಕಚೇರಿಯನ್ನು ಇಲ್ಲಿ ಹೊಂದಿದ್ದ ದಿ ಬ್ರಿಟಿಷ್‌‍ ಇಂಡಿಯಾ ಕಾರ್ಪೋರೇಷನ್ ಹಲವಾರು ಉದ್ದಿಮೆಗಳ ಅಭಿವೃದ್ಧಿಗೆ ಬುನಾದಿ ಹಾಕಿತು. ಭಾರತೀಯ ಮೂಲದ ಪ್ರಥಮ ವ್ಯವಹಾರಿಕ ಸಂಸ್ಥೆ ನಿಖಲ್‌ಚಂದ್ ಕಿಶೋರಿಲಾಲ್, 1857ರಲ್ಲಿ ಇಲ್ಲಿ ವ್ಯಾಪಾರಿ ಕೇಂದ್ರವನ್ನು ಪ್ರಾರಂಭಿಸಿತು. ಸಂಸ್ಥೆಯು ಆಯಿಲ್‌‍ಮಿಲ್ಲಿಂಗ್‌‍ನಲ್ಲಿ ಪ್ರಮುಖವಾಗಿತ್ತು ಮತ್ತು ಉತ್ತರ ಭಾರತದಾದ್ಯಂತ ಹಲವಾರು ಆಯಿಲ್‌‍ಮಿಲ್‌ಗಳನ್ನು ಹೊಂದಿದೆ. 1930 ಮತ್ತು 1970ರ ಅವಧಿಯಲ್ಲಿ ಜುಗ್ಗಿಲಾಲ್ ಕಮಲ್‌ಪತ್ ಸಿಂಘಾನಿಯಾ ಕುಟುಂಬವು ಇಲ್ಲಿ ಹಲವಾರು ಉದ್ದಿಮೆಗಳನ್ನು ಪ್ರಾರಂಭಿಸಿತು. ಇಲ್ಲಿನ ವಾಸಿಗಳಿಗೆ ಬಟ್ಟೆಯನ್ನು ಹಿಂತಿರುಗಿ ಮಾರುವುದಕ್ಕೆ ಮಾತ್ರ ವಿದೇಶಿ ದೊರೆಗಳು ಭಾರತದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂಬ ಆಪಾದನೆಗೆ ಪ್ರತ್ತ್ಯುತ್ತರವಾಗಿ ಮತ್ತು ದೇಶಾಭಿಮಾನದ ಪ್ರತೀಕವಾಗಿ ಜೈಪುರಿಯಾ ಕುಟುಂಬವು ಸ್ವದೇಶಿ ಕಾಟನ್ ಮಿಲ್ ಪ್ರಾರಂಭಿಸಿತು. 20ನೇ ಶತಮಾನದ ಅವಧಿಯಲ್ಲಿ ಕಾನ್ಪುರ್ "ಭಾರತದ ಮ್ಯಾಂಚೆಸ್ಟರ್ " ಎಂದು ಗುರುತಿಸಿಕೊಂಡಿತು. ನಿಖಲ್‌ಚಂದ್ ಕಿಶೋರಿಲಾಲ್ ಗ್ರೂಪ್ (ಕೆಜ್ರಿವಾಲ ಗ್ರೂಪ್ ಎಂದು ಕರೆಯಲ್ಪಡುವ) ಕಾಲಾನಂತರದಲ್ಲಿ ಹಿಟ್ಟಿನ ಗಿರಣಿ, ಟೀ ತೋಟ ಮತ್ತು ಸ್ಟೀಲ್ ಉದ್ದಿಮೆಗಳನ್ನು ಪ್ರಾರಂಭಿಸಿತು. ಸ್ಕಾಟ್ ಮೂಲದ ಎಡ್ವರ್ಡ್ ಫಾಯ್ ಅವರಿಂದ 1886ರಲ್ಲಿ ಸ್ಥಾಪಿಸಲಾಗಿದ್ದ ಕೌನ್‌‍ಪುರ್ ಫ್ಲೋರ್‌‍ಮಿಲ್ ಅನ್ನು ಅವರು 1942ರಲ್ಲಿ ಪ್ರಾರಂಭಿಸಿದರು. ಹೊಸ ಕೌನ್‌‍ಪುರ್ ಫ್ಲೋರ್‌‍ಮಿಲ್‌‍ಗಳು ಇನ್ನೂ ಇದ್ದು, ಉತ್ತರ ಭಾರತದ ಅತಿದೊಡ್ಡ ಫ್ಲೋರ್‌‍ಮಿಲ್ ಎಂದು ಹೆಸರುಗಳಿಸಿದೆ. ಈಗಲೂ ಅದೇ ಕುಟುಂಬದಿಂದ ನಿರ್ವಹಿಸಲ್ಪಡುತ್ತಿದೆ.ಸಿಂಗ್ ಎಂಜಿನಿಯರಿಂಗ್ ಅವರಿಂದ ಮೊದಲ ಬಾರಿಗೆ ಕಾನ್‌‍ಪುರ್‌ಗೆ ಸ್ಟೀಲ್ ಉದ್ದಿಮೆ ಬಂದಿತು. ಕಾನ್‌‍ಪುರ್‌‍ನ ಹೊರಭಾಗದಲ್ಲಿ ಕೆಜ್ರಿವಾಲಾಗಳು ಮಿನಿಸ್ಟೀಲ್ ಮಿಲ್ ಪ್ರಾರಂಭಿಸಿದರು. ಈಗ ಅದು ಉದ್ದದ ಉತ್ಪನ್ನಗಳ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕಾನ್‌‍ಪುರ್ ಭಾರತದ ಪ್ರಮುಖ ಚರ್ಮೋದ್ಯಮ ಕೈಗಾರಿಕೆ ಕೇಂದ್ರವಾಗಿದೆ. ಆದು ಅಲ್ಲದೇ, ಉತ್ತರ ಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಕೇಂದ್ರಗಳಲ್ಲಿ ಒಂದಾಗಿದೆ. ಸದ್ಯ ಇದೀಗ ನಗರದಲ್ಲಿ ಹಲವಾರು ಚರ್ಮ ಸಂಸ್ಕರಣ ಘಟಕಗಳು ಇದ್ದು, ಡಜನ್‌‌ಗಿಂತಲೂ ಹೆಚ್ಚು ಸಶಸ್ತ್ರ ಸೇನಾ ಪಡೆಯ ಕಾರ್ಖಾನೆಗಳು ಇವೆ. ಪ್ರದೇಶದ ಉದ್ದಿಮೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬದಲಾವಣೆಯಾಗಿದ್ದು. LML ಘಟಕಗಳು ಗಮನಾರ್ಹ ಪ್ರಮಾಣದಲ್ಲಿ ಉತ್ಪಾದನೆಯನ್ನು ಕಡಿತಗೊಳಿಸಿವೆ. ಪ್ಲಾಸ್ಟಿಕ್ ಮತ್ತು ಅಟೋಮೆಟಿವ್ ಉದ್ದಿಮೆಗಳು ಕೆಲಮಟ್ಟಿಗೆ ಬೆಳವಣಿಗೆಯಾಗಿವೆ. ಅರ್ಥವ್ಯವಸ್ಥೆಗೆ ಗಣನೀಯ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದ್ದರೂ ಕಾನ್ಪುರ್, ಸ್ಥಳೀಯ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ಅದು ತನ್ನ ಪ್ರಾಚೀನ ಕಾಲದ ಗತವೈಭವವನ್ನು ಮರಳಿ ಪಡೆಯಬೇಕಾದರೆ ಅನುದಾನದ ನೆರವು ಮತ್ತು ಬೆಂಬಲದ ಅಗತ್ಯವಿದೆ. ಉರ್ಸುಲಾ ಹಾರ್ಸಮನ್ ಆಸ್ಪತ್ರೆ, ಹ್ಯಾಲೆಟ್ ಆಸ್ಪತ್ರೆ ಹಾರಕೋರ್ಟ್ ಬಟ್ಲರ್ ಟೆಕ್ನಾಲಾಜಿಕಲ್ ಇನ್ಸಿಟ್ಯಿಟ್ಯೂಟ್ ಸ್ಥಾಪನೆ ಮತ್ತು ಅಲ್ಲೇನ್ ಅರಣ್ಯ (ಇದೀಗ ಪ್ರಾಣಿ ಸಂಗ್ರಹಾಲಯ)ವನ್ನು ಸಂರಕ್ಷಿಸುವ ಕಾರ್ಯಗಳ ಮೂಲಕ ಬ್ರಿಟಿಷರು ನಗರದಲ್ಲಿ ಧರ್ಮಾರ್ಥ ಕಾರ್ಯಗಳಿಗೆ ಕೊಡುಗೆ ನೀಡಿದರು. ಬಹುತೇಕ ಹೆಚ್ಚಿನವುಗಳಿಗೆ ಈಗ ಪುನರ್‌‍ನಾಮಕರಣ ಮಾಡಲಾಗಿದ್ದರೂ ಬಹಳಷ್ಟು ನಿವಾಸಿಗಳು ಇಂದಿಗೂ ಅವುಗಳನ್ನು ಹಳೇ ಹೆಸರಿನಿಂದಲೇ ಸಂಬೋಧಿಸುತ್ತಾರೆ. ಹೆಸರುಗಳನ್ನು ವಿರೂಪಗೊಳಿಸಿದ್ದಕ್ಕೆ ಉದಾಹರಣೆಯು ರೈಲ್ವೆ ಸ್ಟೇಷನ್ ಮುಂದಿನ ಭಾಗದಲ್ಲಿರುವ ರೈಲ್ವೆ ಕ್ರಾಸಿಂಗ್ ಬ್ರಿಡ್ಜ್ ಹತ್ತಿರ ಕಾಣಸಿಗುತ್ತದೆ. ಇದೀಗ ಮುಚ್ಚಲ್ಪಟ್ಟಿರುವ ಮುರ್ರೆ ಕಂಪನಿಯನ್ನು ಮರಿ (ಸತ್ತ) ಕಂಪನಿ ಎಂದು ಕರೆಯಲಾಗುತ್ತದೆ. ಚರ್ಮೋದ್ಯಮ ಕೈಗಾರಿಕೆಗಳ ಬೆಳವಣಿಗೆಯ ಕಾರಣದಿಂದಾಗಿ ಪರಿಸರ ಮಾಲಿನ್ಯದ ಮಟ್ಟವು ಅಪಾಯಕಾರಿಯಾಗಿ ಏರಿಕೆಯಾಗಿದೆ. ಯೋಜನೆಯ ಕೊರತೆಯ ಕಾರಣದಿಂದಾಗಿ ನಗರವು ದೆಹಲಿಯ ಹಾಗೆ ಅತಿಯಾದ ದಟ್ಟಣೆ ಮತ್ತು ಅತಿಯಾದ ಜನಸಾಂದ್ರತೆಗೆ ಬಲಿಪಶುವಾಗುತ್ತಿದೆ. ನಗರ ಯೋಜನೆ ಇನ್ನೂ ವಿಕಸಿತವಾಗಬೇಕಿದೆ. ಪ್ಲಾಟ್‌‍ಗೆ ಜಮೀನು ಮಾರುವುದರಿಂದ ಅಧಿಕೃತ ಪ್ರಾಧಿಕಾರವು ಸಾಕಷ್ಟು ಮುಂದೆ ಸಾಗಿ ಸಮಗ್ರ ಯೋಜನೆಯವರೆಗೆ ಸಾಗಬೇಕಾದ ಅಗತ್ಯವಿದೆ. ನಗರಾಭಿವೃದ್ದಿ ಜವಾಬ್ದಾರಿ ವಹಿಸಿಕೊಂಡಿರುವ ಪ್ರಾಧಿಕಾರವು, ಜಮೀನನ್ನು ಪ್ಲಾಟ್‌‍ಗಳಾಗಿ ಮಾರುವುದರಿಂದ ಸಾಕಷ್ಟು ಮುಂದೆ ಸಾಗಿ ಸಮಗ್ರ ಯೋಜನೆ ತಯಾರಿಸುವ ಹಂತಕ್ಕೆ ತಲುಪಬೇಕಾದ ಅಗತ್ಯವಿದೆ. ಟೈಮ್ ಎಷಿಯಾ ನಿಯತಕಾಲಿಕೆ[೫] ಯಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನವು ನಗರದಲ್ಲಿನ ಮಾಲಿನ್ಯದ ಕುರಿತು ವಿವರಿಸುತ್ತದೆ. ಹೊಸ ಕೈಗಾರಿಕೆಗಳಾದ ಡಿಟರ್ಜಂಟ್, ಸ್ಯಾಡ್ಲರಿ, ಫುಡ್ ಪ್ರೊಸೆಸಿಂಗ್, ಪಾನ್ ಮಸಾಲಾ, ಟೀ ಪ್ಯಾಕೆಜಿಂಗ್, ಪ್ಲ್ಯಾಸ್ಟಿಕ್ಸ್ ಮತ್ತು ಪ್ಯಾಕೆಜಿಂಗ್, ಆಭರಣ ತಯಾರಿಕೆ ಮತ್ತು ರಪ್ತು, ಚರ್ಮದ ವಸ್ತುಗಳ ತಯಾರಿಕೆ ಮತ್ತು ಪ್ರಕ್ರಿಯೆ ಮುಂತಾದವುಗಳು ಈ ನಗರದಲ್ಲಿ ಅಭಿವೃದ್ಧಿ ಹೊಂದಿವೆ.

ಪಾನ್‌ ಮಸಾಲಾ ಉದ್ಯಮವು ಅತಿಹೆಚ್ಚು ಕೆಲಸಗಾರರನ್ನು ಹೊಂದಿರುವ ಅದರಂತೆ ಸರ್ಕಾರಕ್ಕೆ ಅತಿಹೆಚ್ಚು ತೆರಿಗೆ ಕಟ್ಟುವ ಉದ್ಯಮವಾಗಿ ಬೆಳೆದಿದೆ.  ವಿಶ್ವವಿಖ್ಯಾತಿ ಪಡೆದಿರುವ "ಪಾನ್ ಬಹಾರ್" ಮತ್ತು "ಪಾನ್ ಪರಾಗ್ " ಈ ನಗರದಲ್ಲಿ ಉತ್ಪನ್ನವಾಗುತ್ತಿರುವುಗಳಲ್ಲಿ ಪ್ರಮುಖವಾದವು.;ಇದೀಗ ಕಾನ್ಪುರ್ 'ರಪ್ತು ಉದ್ಯಮದ ಶ್ರೇಷ್ಠ ಪಟ್ಟಣ' ಸಾಧಿಸಿದೆ.ಈ ಕೇಂದ್ರವು ಕಾನ್ಪುರವನ್ನು ’ರಪ್ತು ಶ್ರೇಷ್ಠ ಪಟ್ಟಣವನ್ನಾಗಿ’ ಘೋಷಿಸಿತು.  
ಈ ಪ್ರಕಟಣೆಯು ನಗರದ ರಪ್ತುದಾರರಿಗೆ ಹೆಚ್ಚುವರಿ ಸೌಲಭ್ಯ ಮತ್ತು ರಿಯಾಯಿತಿ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ಚರ್ಮೋದ್ಯಮ ಮತ್ತು ರಪ್ತುದಾರರು ಈ ಸುದ್ದಿಯನ್ನು ಸ್ವಾಗತಿಸಿದರು.

[ಬದಲಾಯಿಸಿ] ಸಾಂಸ್ಕೃತಿಕ ಇತಿಹಾಸ

ಗಂಗಾ ನದಿ ತೀರದ ಮೇಲೆ ನಿಂತಿರುವ ಕಾನ್ಪುರ್, ತನ್ನದೇ ಆದ ಐತಿಹಾಸಿಕ, ಧಾರ್ಮಿಕ ಮತ್ತು ವಾಣಿಜ್ಯಿಕ ಮಹತ್ವವನ್ನು ಹೊಂದಿರುವ ಉತ್ತರ ಭಾರತದ ಪ್ರಮುಖ ಔಧ್ಯಮಿಕ ಕೇಂದ್ರಗಳಲ್ಲಿ ಒಂದು. ಸಂಚೇಂದಿ ರಾಜ್ಯದ ರಾಜ ಸಿಂಗ್ ನಿಂದ ಸ್ಥಾಪಿಸಲ್ಪಟ್ಟ ಕಾನ್ಪುರ್ ನ್ನು ಮೊದಲು 'ಕನ್ಹಪುರ' ಎಂದು ಕರೆಯಲಾಗುತ್ತಿತ್ತು. ಐತಿಹಾಸಿಕವಾಗಿ ಇಂದಿನ ಕಾನ್ಪುರ್ ನಗರ ಪೂರ್ವ ಭಾಗದಲ್ಲಿರುವ ಜಾಜಮೌ, ಕಾನ್ಪುರ್ ಜಿಲ್ಲೆಯಲ್ಲಿರುವ ಅತ್ಯಂತ ಪುರಾತನ ಪಟ್ಟಣಗಳಲ್ಲಿ ಒಂದು ಎಂದು ಗುರುತಿಸಿಕೊಳ್ಳುತ್ತದೆ. 18ನೇ ಶತಮಾನದ ಪೂರ್ವಾರ್ಧದವರೆಗೆ ಕಾನ್ಪುರ್ ಒಂದು ಗಣನೆಗೆ ಬಾರದ ಹಳ್ಳಿಯಾಗಿ ಉಳಿದುಕೊಂಡಿತ್ತು. ಆದರೆ, ಇದರ ಅದೃಷ್ಟ, ಮೇ. 1765ರಲ್ಲಿ ಅವಧ್ ನ ನವಾಬ್ ಶುಜಾ-ಉದ್-ದೌಲಾ ಬ್ರಿಟಿಷರಿಂದ ಪರಾಭವಗೊಂಡ ನಂತರ ಇದರ ಹೊಸ ದಿಕ್ಕಿಗೆ ತೆರೆದುಕೊಂಡಿತು. ಬಹುಶಃ ಇದೇ ಅವಧಿಯಲ್ಲಿರಬೇಕು. ಕಾನ್ಪುರ್ ಕೇಂದ್ರ ಸ್ಥಾನದಲ್ಲಿದೆ ಎನ್ನುವುದನ್ನು ಬ್ರಿಟಿಷರು ಮನಗಂಡಿರಬೇಕು. ಈ ವೇಳೆಗಾಗಲೇ ಯುರೋಪಿಯನ್ ವ್ಯಾಪಾರಿಗಳು ನಿಧಾನವಾಗಿ ತಮ್ಮನ್ನು ಕಾನ್ಪುರ್‌ನಲ್ಲಿ ಸ್ಥಾಪಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದರು. ಹೀಗೆ ವಾಸಿಸುತ್ತಿದ್ದ ಅವರ ಜೀವ ಮತ್ತು ಅವರ ಆಸ್ತಿಗಳನ್ನು ರಕ್ಷಿಸುವುದಕ್ಕೆ "ಅವಧ್ ಸ್ಥಳೀಯ ಪಡೆ"ಗಳನ್ನು 1778ರಲ್ಲಿ ಇಲ್ಲಿಗೆ ಸ್ಥಳಾಂತರಿಸಲಾಯಿತು. ಅವಧ್‌‍ನವಾಬ್, ಸಾದತ್ ಅಲಿಖಾನ್ ಮತ್ತು ಬ್ರಿಟಿಷರ್ ನಡುವೆ 1801ರಲ್ಲಿ ಎರ್ಪಟ್ಟ ಒಪ್ಪಂದದ ಪ್ರಕಾರ ಕಾನ್ಪುರ್ ಅನ್ನು ಬ್ರಿಟಿಷರಿಗೆ ಹಸ್ತಾಂತರಿಸಲಾಯಿತು. ಈ ಘಟನೆಯೇ ಕಾನ್ಪುರ್ ಇತಿಹಾಸದ ಬದಲಾವಣೆಗೆ ದಿಕ್ಸೂಚಿಯಾಯಿತು. ಇದಾದ ಕೆಲವೇ ದಿನಗಳಲ್ಲಿ ಕಾನ್ಪುರ್ ಬ್ರಿಟಿಷ್ ಇಂಡಿಯಾದ ಅತ್ಯಂತ ಪ್ರಮುಖವಾದ ಮಿಲಿಟರಿ ಕೇಂದ್ರವಾಯಿತು. ಮಾರ್ಚ್ 24, 1803ರಲ್ಲಿ ಜಿಲ್ಲೆ ಎಂದು ಘೋಷಿಸಲ್ಪಟ್ಟಿತು.

ಕಾನ್ಪುರ್ ಸಂಗ್ರಹಾಲಯ

1900-1950 ಅವಧಿಯಲ್ಲಿ ಕಾನ್ಪುರ್ ಸ್ವಾತಂತ್ರ್ಯ ಮತ್ತು ಸಾಕ್ಷರತಾ ಅಂದೋಲನ ಬದಲಾವಣೆಯ ಕೇಂದ್ರವಾಗಿತ್ತು. "ನವೀನ್" ಕಾವ್ಯನಾಮದೊಂದಿಗೆ ಪರಿಚಿತವಾಗಿರುವ ಕವಿ ಬಾಲಕೃಷ್ಣ ಶರ್ಮಾ ಅವರ ನೆನಪಿಗಾಗಿ ನಗರದ ಅತಿದೊಡ್ಡ ಶಾಪಿಂಗ್ ಕೇಂದ್ರಕ್ಕೆ ನವೀನ್ ಮಾರ್ಕೆಟ್ ಎಂದು ಹೆಸರಿಸಲಾಗಿದೆ. ಬಾಲಿವುಡ್ ಚಲನಚಿತ್ರಗಳಿಗಾಗಿ ಹಾಡುಗಳನ್ನು "ನೀರಜ್" ಗೋಪಾಲದಾಸ್ ಹೆಸರನ್ನು ಸೇರ್ಪಡೆ ಮಾಡಲಾಯಿತು. ಪ್ರಖ್ಯಾತ ದೇಶಭಕ್ತಿಗೀತೆ ವಿಜಯಿ ವಿಶ್ವ ತಿರಂಗಾ ಪ್ಯಾರಾ ಅನ್ನು ರಚಿಸಿದ 'ಪರಶಾದ್ ' ಶ್ಯಾಮಲಾಲ್ ಗುಪ್ತಾ ಅವರ ಜನ್ಮಸ್ಥಾನವು ಹೌದು. ಹಿಂದಿ ಸಾಹಿತಿಗಳಾದ ಆಚಾರ್ಯ ಮಹಾವೀರ ಪ್ರಸಾದ್ ದ್ವಿವೇದಿ, ಗಣೇಶ ಶಂಕರ ವಿದ್ಯಾರ್ಥಿ, ಪ್ರತಾಪ್ ನಾರಾಯಣ ಮಿಶ್ರಾ ಮತ್ತು ಆಚಾರ್ಯ ಗಯಾ ಪ್ರಸಾದ ಶುಕ್ಲಾ 'ಸನೇಹಿ' ಮುಂತಾದವರಿಂದಾಗಿ ಹಿಂದಿ ಭಾಷೆಯ ಹರಡುವಿಕೆ ಮತ್ತು ಜನಪ್ರಿಯಗೊಳಿಸುವಲ್ಲಿ ನಡೆದ ಪ್ರಯತ್ನದಲ್ಲಿ ನಗರ ಸಿಂಹಪಾಲು ಹೊಂದಿದೆ. ಕಾನ್ಪುರ್ ನಗರದಲ್ಲಿ ಸಾಕಷ್ಟು ಸಮಯವನ್ನು ಕಳೆದ ಇಬ್ಬರು ಕ್ರಾಂತಿಕಾರಗಳಾದ ಚಂದ್ರಶೇಖರ್ ಆಜಾದ್ ಮತ್ತು ಗಣೇಶ ಶಂಕರ್ ವಿದ್ಯಾರ್ಥಿಯ ಹೆಸರುಗಳನ್ನು ಕ್ರಮವಾಗಿ ಕೃಷಿ ವಿಶ್ವವಿದ್ಯಾಲಯಕ್ಕೆ ಮತ್ತು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಇಡಲಾಗಿದೆ. ಅಲಹಾಬಾದ್‌‍ನ ಅಲ್ಫ್ರೇಡ್‌‍ಪಾರ್ಕ್‌‍ನಲ್ಲಿ ಬ್ರಿಟಿಷ್ ಪೊಲೀಸರು ಸುತ್ತುವರೆದ ಸಂದರ್ಭದಲ್ಲಿ ತನಗೆ ತಾನೇ ಗುಂಡು ಹೊಡೆದುಕೊಂಡು ಚಂದ್ರಶೇಖರ್ ಆಜಾದ್‌‍ ಮೃತಪಟ್ಟರೆ, 1931ರಲ್ಲಿ ಕಾನ್ಪುರ್ ನಗರದಲ್ಲಿ ಹರಡಿದ ಹಿಂದು-ಮುಸ್ಲಿಂ ಕೋಮು ಗಲಭೆಯಲ್ಲಿ ಕಾನ್ಪುರ್ ನ ಮಚಲಿ ಬಜಾರ್ ನಲ್ಲಿ ಗಣೇಶ ಶಂಕರ ವಿದ್ಯಾರ್ಥಿಯು ಕೊಲ್ಲಲ್ಪಟ್ಟನು.

ಕಾನ್ಪುರ್‌‌‍ನಿಂದ 25 ಕಿ.ಮೀ. ದೂರದಲ್ಲಿರುವ ಬಿಥೂರ್ ಆಯೋಧ್ಯೆಯಿಂದ ರಾಮನಿಂದ ಹೊರ ಹಾಕಿಸಿಕೊಂಡ ನಂತರ ರಾಮನ ಪತ್ನಿ ಸೀತೆಯು ಇಲ್ಲಿದ್ದ ವಾಲ್ಮೀಕಿ ಋಷಿಯ ಆಶ್ರಮದಲ್ಲಿ ಜೀವನ ಕಳೆದಳು ಎಂಬ ಖ್ಯಾತಿಯನ್ನು ಪಡೆದಿದೆ. ಇಲ್ಲಿಯೇ ಅವಳು ಅವಳಿಗಳಾದ ಲವ ಮತ್ತು ಕುಶನಿಗೆ ಜನ್ಮ ನೀಡಿದಳು. ಪರಿತಪಿಸುತ್ತಿದ್ದ ರಾಮನನ್ನು ಭೇಟಿಯಾದ ವೇಳೆ ಇಲ್ಲಿಯೇ ಭೂಮಿಯಲ್ಲಿ ಐಕ್ಯಳಾದಳು (ಎಲ್ಲಿಂದ ಜನಿಸಿದ್ದಳೋ ಅಲ್ಲಿಗೆ). ಬ್ರಿಟಿಷರು ಕಾನ್ಪುರ್ ಪುನಃ ವಶಪಡಿಸಿಕೊಂಡ ನಂತರ ಇಲ್ಲಿನ ನಾನಾ ಸಾಹಿಬ್ ಪರಾರಿಯಾದ ಕೋಟೆಯು ಕೂಡ ಬಿಥೂರ್‌‍ನಲ್ಲಿದೆ. ಇಂದು ಬಿಥೂರ್, ಗಂಗೆಯ ತೀರದಲ್ಲಿರುವ ಪ್ರವಾಸಿ ತಾಣವಾಗಿದ್ದು, ಎಲ್ಲೆಡೆ ಜನವಸತಿಗಳು ವಿಸ್ತರಿಸುತ್ತಿರುವ ಕಾನ್ಪುರ ಅತ್ಯಂತ ವೇಗವಾಗಿ ವಿಸ್ತಾರಗೊಳ್ಳುತ್ತಿದೆ. ಹಬ್ಬಗಳ ಪೈಕಿ, ಹೋಳಿ ಹಬ್ಬದ 7 ದಿನಗಳ ನಂತರ ಆಚರಿಸಲಾಗುವ ಗಂಗಾ ಮೇಳಾ ವಿಶಿಷ್ಟವಾದ ಹಬ್ಬವಾಗಿದ್ದು ಕಾನ್ಪುರ್‌ನಲ್ಲಿ ಮಾತ್ರ ಆಚರಿಸಲಾಗುತ್ತದೆ. 1857ರ ಕ್ರಾಂತಿಯ ವೇಳೆ ಬ್ರಿಟಿಷ್ ಸರ್ಕಾರದಿಂದ ಬಂಧಿತರಾಗಿದ್ದ ಬಿಡುಗಡೆಯಾದ ಕ್ರಾಂತಿಕಾರಿಗಳ ಸವಿನೆನಪಿಗಾಗಿ ಹಬ್ಬವನ್ನು ಕೂಡ ಇಲ್ಲಿ ಆಚರಿಸಲಾಗುತ್ತದೆ.

[ಬದಲಾಯಿಸಿ] ಭೂಗೋಳ

ನಗರವು 26.4670° ಅಕ್ಷಾಂಶ ಮತ್ತು 80.3500° ರೇಖಾಂಶದಲ್ಲಿದ್ದು , ಲಖನೌದಿಂದ 83 ಕಿ.ಮೀ. ದೂರದಲ್ಲಿದೆ. ಅಲಹಾಬಾದ್ ಮತ್ತು ಫತೇಹಪುರ್‌ದೊಂದಿಗೆ ಕಾನ್ಪುರ್ ಕೆಳದೋಅಬ್ ಪ್ರದೇಶದಲ್ಲಿದ್ದು. ಪ್ರಾಚೀನ ಕಾಲದಲ್ಲಿ ಇದು. ವತ್ಸದೇಶ ಎಂದು ಕರೆಯಲ್ಪಡುತ್ತಿತ್ತು. ಭಾರತದ ಎರಡು ಪ್ರಮುಖ ನದಿಗಳಾದ ಗಂಗೆ, ಈಶಾನ್ಯ ದಿಕ್ಕಿನಲ್ಲಿ, ಮತ್ತು ಪಾಂಡು ನದಿ ಯಮುನಾ ದಕ್ಷಿಣ ದಿಕ್ಕಿನಲ್ಲಿ ಸುತ್ತುವರೆದಿದೆ. ಕಾನ್ಪುರ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಹಮೀರ್‌‌ಪುರ್ ಮತ್ತು ಈಶಾನ್ಯ ದಿಕ್ಕಿನಲ್ಲಿ ಉನ್ನಾವು ಜಿಲ್ಲೆಗಳು ಸುತ್ತುವರೆದಿವೆ.

[ಬದಲಾಯಿಸಿ] ಸಸ್ಯ ಮತ್ತು ಜೀವ ವೈವಿಧ್ಯ

ಹಲವಾರು ವಲಸೆ ಮತ್ತು ಇಲ್ಲಿನ ಮೂಲ ಹಕ್ಕಿಗಳಿಗೆ ಕಾನ್ಪುರ್ ವಾಸಸ್ಥಾನವಾಗಿದ್ದು, ಹೆಚ್ಚಿನವುಗಳನ್ನು ಬಿಥೂರ್, ಐಐಟಿ ಕಾನ್ಪುರ್ ಕ್ಯಾಂಪಸ್ ಅಲ್ಲದೇ ಗಂಗಾ ಕೆನಾಲ್‌‍ನ ಉದ್ದಕ್ಕೂ ನೋಡಬಹುದಾಗಿದೆ. ನಗರವು (ಪ್ರದೇಶವಾರು) ಏಷಿಯಾದ ಅತಿದೊಡ್ಡ ಪ್ರಾಣಿ ಸಂಗ್ರಹಾಲಯವನ್ನು ಹೊಂದಿದೆ. ವಿಲಕ್ಷಣ ಗುಣಗಳನ್ನು ಉಳ್ಳ ಸಸ್ಯಸಂಪತ್ತು ಸಿಎಸ್ಎ ಕ್ಯಾಂಪಸ್‌‍ನಲ್ಲಿದೆ. ಕಾನ್ಪುರ್ ಪ್ರಾಣಿ ಸಂಗ್ರಹಾಲಯದಲ್ಲಿ ವಿನ್ಯಾಸಗೊಳಿಸಲಾಗಿರುವ ಬೋನುಗಳ ವಿನ್ಯಾಸಗಳು ಪ್ರಾಣಿಗಳಿಗೆ ನೈಸರ್ಗಿಕ ವಾಸಸ್ಥಾನ ಒದಗಿಸುವ ಮೂಲಕ ಪ್ರಖ್ಯಾತಿ ಪಡೆದಿವೆ. ಸಾಕಷ್ಟು ವೈವಿಧ್ಯಮಯ ಪ್ರಾಣಿಗಳನ್ನು ಹೊಂದಿದೆ. ಆ ಸಮಯದಲ್ಲಿ ಸಿಂಚಾಯಿ ಇಲಾಖೆಯಲ್ಲಿದ್ದ ಕಲಾವಿದ ಎಂಜಿನಿಯರ್‌‍ ಆಗಿದ್ದ ಮುರಳಿ ಶರಣ್ ಸಕ್ಸೆನಾ ಅವರು ಪ್ರಾಣಿ ಸಂಗ್ರಹಾಲಯದಲ್ಲಿರುವ ನೀರು ಸರಬರಾಜು ವ್ಯವಸ್ಥೆಯನ್ನು ಒಂದು ಕಲಾಕೃತಿಯಂತೆ ಸಿದ್ಧಗೊಳಿಸಿದ್ದಾರೆ. ಪ್ರಾಣಿ ಸಂಗ್ರಹಾಲಯವು ನವಾಬ್‌‌ಗಂಜ್‌‍ನ ಹಚ್ಚ ಹಸಿರಿನ ಅಲೆನ್ ಅರಣ್ಯದ ಒಂದು ಭಾಗ ಕೂಡ ಆಗಿದೆ. ಪ್ರವೇಶ ಶುಲ್ಕವು ಅತ್ಯಂತ ಕಡಿಮೆಯಿರುವ ಕಾರಣ ಕಾನ್ಪುರ್ ಪ್ರದೇಶದಲ್ಲಿ ಪ್ರಮುಖ ವಿಹಾರಿ ಕೇಂದ್ರವನ್ನಾಗಿ ಮಾಡಿದೆ. ನಗರದ ಇಂದಿರಾ ನಗರ ಪ್ರದೇಶವು ಹಸಿರಿನ ಮತ್ತು ಮಾಲಿನ್ಯ ರಹಿತ ಜನವಸತಿ ಪ್ರದೇಶವಾಗಿದೆ.

[ಬದಲಾಯಿಸಿ] ಜನಸಾಂದ್ರತೆ

ಟೆಂಪ್ಲೇಟು:IndiaCensusPop 2001ರ ಜನಗಣತಿಯ ಪ್ರಕಾರ 2,551,337 ಜನಸಂಖ್ಯೆಯನ್ನು ಹೊಂದಿರುವ ಕಾನ್ಪುರ್ ಗಂಗಾ ನದಿ ತೀರದ ಮೇಲಿದೆ. ಕಳೆದ ದಶದಲ್ಲಿ ಜನಸಂಖ್ಯೆಯು ಅತ್ಯಂತ ವೇಗವಾಗಿ ಬೆಳೆದಿದ್ದು, ಈ ರೀತಿಯ ಬೆಳವಣಿಗೆಯಾಗಲು ಇತರ ಪ್ರದೇಶಗಳಿಂದ ಕಾನ್ಪುರ್ ನಗರಕ್ಕೆ ವಲಸೆ ಬರುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಒಂದು ಕಾರಣವಾಗಿದೆ. 1901ರಲ್ಲಿ ಲಖನೌ ಮತ್ತು ವಾರಾಣಾಸಿ ನಂತರದ ಮೂರನೇ ಸ್ಥಾನ ಹೊಂದಿದ್ದ ಇದು, 1961ರ ಹೊತ್ತಿಗೆ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿತು. ಆರು ದಶಕಗಳ ಅವಧಿಯಲ್ಲಿ ಇದು ಐದು ಪಟ್ಟು ಹೆಚ್ಚಳವನ್ನು ದಾಖಲಿಸಿದ್ದು, 1901ರಲ್ಲಿ 197, 170 ಇದ್ದ 1961ರಲ್ಲಿ 883,815ಕ್ಕೆ ತಲುಪಿತು.[೬] ಕಾನ್ಪುರ್ ವಿಸ್ತೀರ್ಣವು 1640 ಚದರ ಕಿ.ಮೀ. ಪ್ರದೇಶವನ್ನು ಹೊಂದಿದ್ದು, ಸಮುದ್ರ ಮಟ್ಟದಿಂದ 126 ಮೀಟರ್ ಎತ್ತರದಲ್ಲಿದೆ. ಕಾನ್ಪುರ್ ಮತ್ತು ಸುತ್ತಲಿನ ಪ್ರದೇಶದಲ್ಲಿ ಹಿಂದಿ, ಇಂಗ್ಲಿಷ್, ಉರ್ದು, ಬಂಗಾಲಿ ಮತ್ತು ಪಂಜಾಬಿ ಭಾಷೆಗಳನ್ನು ಮಾತನಾಡುತ್ತಾರೆ. ಹಿಂದು ಧರ್ಮವು ಇಲ್ಲಿನ ನಗರದ ಪ್ರಮುಖ ಧರ್ಮವಾಗಿದೆ. ಈದ್ಗಾ ಕಾಲನಿ, ಪರೇಡ್, ಬೆಕನಗಂಜ್ ಮತ್ತು ಕಾನ್ಪುರ್ ಸೆಂಟ್ರಲ್ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಂರಿದ್ದಾರೆ. 1947ರಲ್ಲಿ ಭಾರತದ ವಿಭಜನೆ ನಂತರ, ವಲಸೆ ಬಂದಿರುವ ಸಿಖ್ರನ್ನು ಸಮುದಾಯ ಒಳಗೊಂಡಿದೆ. ಗೋವಿಂದ ನಗರ, ಗುಮ್ಟಿ ನಂ.5 ಅಶೋಕ ನಗರ ಮತ್ತು 80 ಅಡಿ ರಸ್ತೆಯ ಬಳಿ, ನಗರದಲ್ಲಿ ಅವರು ಅತ್ತ್ಯುತ್ತಮ ವಹಿವಾಟು ನಡೆಸುತ್ತಿರುವ ವ್ಯಾಪಾರವನ್ನು ಅವರು ಹೊಂದಿದ್ದಾರೆ. ಕಾನ್ಪುರ್‌‍ನಲ್ಲಿ ಸಣ್ಣ ಸಂಖ್ಯೆಯಲ್ಲಿ ಕ್ರಿಶ್ಚಿಯನ್ರು ಕೂಡ ಇದ್ದಾರೆ. ಕ್ರೈಸ್ಟ್‌‍ಚರ್ಚ್ ಮತ್ತು ಮೆಥೋಡಿಸ್ಟ್ ಚರ್ಚ್ ಬ್ರಿಟಿಷ್ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ.

[ಬದಲಾಯಿಸಿ] ಆರ್ಥಿಕತೆ

ಜವಳಿ ಮತ್ತು ಚರ್ಮ ಉತ್ಪನ್ನಗಳನ್ನು ಕಾನ್ಪುರ್‌‍ನಲ್ಲಿ[೭] ಅತಿ ಹೆಚ್ಚು ಉತ್ಪಾದಿಸಿ ಅವುಗಳನ್ನು ಸಗಟಿನಲ್ಲಿ ರಪ್ತು ಮಾಡಲಾಗುತ್ತದೆ. ಜವಳಿ ಮತ್ತು ಚರ್ಮೋದ್ಯಮ ಅಲ್ಲದೆ, ಗೊಬ್ಬರ, ರಾಸಾಯನಿಕ, ದ್ವಿಚಕ್ರ ವಾಹನ, ಸೋಪ್, ಪಾನ್‌‍ಮಸಾಲಾ, ಸಿದ್ಧ ವಸ್ತು ಮತ್ತು ಎಂಜಿನಿಯರಿಂಗ್ ಉದ್ಯಮಗಳು ನಗರದಲ್ಲಿವೆ. ಜೆಕೆ ಇಂಡಸ್ಟ್ರೀಸ್ ಗ್ರೂಪ್, ಲೋಹಿಯಾ ಮಶಿನ್ಸ್ ಮತ್ತು ಡಂಕನ್ಸ್ ಇತ್ಯಾದಿ ಖಾಸಗಿ ವಲಯದ ಕಂಪನಿಗಳು ಕೂಡ ಬೃಹತ್ ಪ್ರಮಾಣದ ಘಟಕಗಳನ್ನು ಇಲ್ಲಿ ಸ್ಥಾಪಿಸಿವೆ.ಭಾರತೀಯ ದ್ವಿದಳ ಸಂಶೋಧನಾ ಸಂಸ್ಥೆ (ಐಸಿಎಆರ್ ನ ಸಂಸ್ಥೆ) ಮತ್ತು ರಾಷ್ಟ್ರೀಯ ಸಕ್ಕರೆ ಸಂಸ್ಥೆಯ ಮೂರು ಘಟಕಗಳ ಪೈಕಿ ಒಂದು ಕಾನ್ಪುರ್‌‍ದಲ್ಲಿ ಇದೆ. ಇದು, ಪ್ರಬಲವಾದ ಕೃಷಿ ಆಧಾರಿತ ಉದ್ದಿಮೆಗಳನ್ನು ಪ್ರತಿಬಿಂಬಿಸುತ್ತದೆ. ಭಾರತದ ಅತಿದೊಡ್ಡ ಚರ್ಮ ಸಂಸ್ಕರಣಾ ಘಟಕಗಳನ್ನು ಹೊಂದಿರುವ ಕಾನ್ಪುರ್ ಅದರಿಂದಾಗುವ ಮಾಲಿನ್ಯಕ್ಕೂ ಕುಖ್ಯಾತಿಯನ್ನು ಕೆಲಮಟ್ಟಿಗೆ ಪಡೆದಿದೆ. ವಸಾಹತುಶಾಹಿ ಅವಧಿಯಲ್ಲಿ ಈ ಚರ್ಮ ಸಂಸ್ಕರಣಾ ಘಟಕಗಳು ಕಾನ್ಪುರ್‌‍ನ ಕೈಗಾರಿಕೀಕರಣಕ್ಕೆ ಬುನಾದಿಯಾಗಿದ್ದವು. ಆದರೆ ಕಳೆಪೆ ಮಾಲಿನ್ಯದ ದಾಖಲೆ, ತಂತ್ರಜ್ಞಾನದ ಕೊರತೆ ಮತ್ತು ಇತರ ಕ್ಷೇತ್ರಗಳಲ್ಲಿ ತೆರೆದುಕೊಂಡ ಉದ್ಯೋಗವಕಾಶಗಳು ಇದರ ಬೆಳವಣಿಗೆಗೆ ತಡೆಯಾದವು ಮತ್ತು ನಂತರ ನಿಧಾನವಾಗಿ ಈ ಘಟಕಗಳು ಸಾವನ್ನಪ್ಪಿದವು.
ಅತ್ಯಂತ ಕಡಿಮೆ ವೆಚ್ಚ ಮತ್ತು ಸುಲಭವಾಗಿ ಲಭ್ಯವಿರುವ ಪ್ರತಿಭೆಗಳ ಕಾರಣದಿಂದಾಗಿ ಹಲವಾರು ಸಂಸ್ಥೆಗಳು ಪ್ರಾಧಾನ್ಯತೆಯ ಸ್ಥಳ ಎಂದು ಹೊರಗುತ್ತಿಗೆ ಕ್ಷೇತ್ರದಿಂದ ಗುರುತಿಸಲ್ಪಡುವ ಮೂಲಕ ಕಾನ್ಪುರ್ ಗಮನ ಸೆಳೆಯಲು ಪ್ರಾರಂಭಿಸಿದೆ. ರಾಷ್ಟ್ರೀಯ ಹೆದ್ದಾರಿ 2 ಮತ್ತು ರಾಷ್ಟ್ರೀಯ ಹೆದ್ದಾರಿ 25ಕ್ಕೆ ಹತ್ತಿರವಾಗಿರುವ ಆಯಕಟ್ಟಿನ ಸ್ಥಳದಲ್ಲಿದೆ. ಚರ್ಮ, ಆಹಾರ ಸಂಸ್ಕರಣೆ, ಪ್ಲಾಸ್ಟಿಕ್ ಇತ್ಯಾದಿ ಉದ್ಯಮಗಳಿಗೆ ಲಭ್ಯವಾಗುವ ಕಚ್ಚಾವಸ್ತು, ದೊಡ್ಡ ಮಾರುಕಟ್ಟೆಗಳಿಗೆ ಸಮೀಪವಾಗಿರುವುದು ಮತ್ತು ಐಐಟಿ, ಚಂದ್ರಶೇಖರ್ ಆಝಾದ್ ಕೃಷಿ ವಿಶ್ವವಿದ್ಯಾಲಯ, ಕೇಂದ್ರೀಯ ದ್ವಿದಳ ಸಂಶೋಧನಾ ಸಂಸ್ಥೆ, ಕೇಂದ್ರಿಯ ಚರ್ಮ ಸಂಶೋಧನಾ ಸಂಸ್ಥೆಯಂತಹ ಹಲವಾರು ಶೈಕ್ಷಣಿಕ ಸಂಸ್ಥೆಗಳಿರುವ ಕಾರಣ ಲಭ್ಯವಾಗುವ ಸುಶಿಕ್ಷಿತ ಮಾನವ ಸಂಪನ್ಮೂಲದಿಂದಾಗಿ ಸಾಕಷ್ಟು ಸ್ಥಳೀಯ ಸೌಲಭ್ಯಗಳನ್ನು ಹೊಂದಿರುವ ನಗರವಾಗಿದೆ.(2001ರ ಜನಗಣತಿ ಪ್ರಕಾರ) ಕಾನ್ಪುರ್‌‍(MC)ನಲ್ಲಿ ಕೇವಲ ಶೇ. 61ರಷ್ಟು ಮನೆಗಳು ಬ್ಯಾಂಕಿಂಗ್ ಸೇವೆಯನ್ನು ಪಡೆದಿವೆ. ಅಂದಾಜು ಶೇ.8ರಷ್ಟು ಮನೆಗಳು ಮುಖ್ಯ ವಸ್ತುಗಳಾದ ವಾಹನ (ಬೈಸಿಕಲ್, ಸ್ಕೂಟರ್, ಮೊಪೆಡ್. ಕಾರು, ಜೀಪ್ ಇತ್ಯಾದಿ)ಗಳನ್ನು ಹೊಂದಿಲ್ಲ JNNURMಗೆ ಇತ್ತೀಚೆಗೆ ಸಿದ್ದಪಡಿಸಲಾಗಿರುವ ನಗರಾಭಿವೃದ್ಧಿ ಯೋಜನೆಯಲ್ಲಿ.[೬] ಕಾನ್ಪುರ್ ನಗರವು ಈ ಕೆಳಗಿನ ಕಾರಣಗಳಿಂದಾಗಿ ಉಳಿದುಕೊಂಡಿದೆ ಎಂದು ವಿವರಿಸಲಾಗಿದೆ.ಓಇಎಫ್, ಎಸ್ಎಎಫ್ ಮತ್ತು ಆರ್ಡಿನನ್ಸ್ ಫ್ಯಾಕ್ಟರಿ ಇತ್ಯಾದಿ ರಕ್ಷಣಾ ಇಲಾಖೆಯ ಘಟಕಗಳಿಂದಾಗಿ 1995ರಲ್ಲಿ 300 ಇದ್ದು 2006ರಲ್ಲಿ 170ಕ್ಕೆ ಇಳಿದಿರುವ ಚರ್ಮ ಸಂಸ್ಕರಣಾ ಘಟಕಗಳು ಐಐಟಿ, ಜೆಇಇ, ಐಎಎಸ್/ಐಪಿಎಸ್ ಇತ್ಯಾದಿಗಳಿಗಾಗಿ ಇರುವ ಬೋಧನಾ ಸಂಸ್ಥೆಗಳು ವ್ಯಾಪಾರಿ ಚಟುವಟಿಕೆಗಳು

[ಬದಲಾಯಿಸಿ] ಹವಾಗುಣ

ಟೆಂಪ್ಲೇಟು:Climate chart

ಕಾನ್ಪುರ್ ಹವಾಗುಣವು ಆರ್ದತೆಯಿಂದ ಕೂಡಿರುವ ಉಷ್ಣ ವಾತಾವರಣವನ್ನು ಹೊಂದಿದ್ದು, ಕೆಲಪ್ರದೇಶದಲ್ಲಿ ದೆಹಲಿಯ ಹವಾಗುಣದಂತೆ ಇದೆ. ಉತ್ತರ ಭಾರತದ ಬಯಲು ಪ್ರದೇಶದಲ್ಲಿ ಕಾನ್ಪುರ್ ಉಷ್ಣತೆಯ ಅತ್ತ್ಯುನ್ನತೆಗೂ ಸಾಕ್ಷಿಯಾಗುತ್ತದೆ. ಚಳಿಗಾಲದಲ್ಲಿ ಶೂನ್ಯ ಡಿಗ್ರಿ ಸೆಲ್ಸಿಯಸ್‌‍ವರಗೆ ಇಳಿಯುವ ಉಷ್ಣತೆಯು, ಬೆಸಿಗೆಯಲ್ಲಿ 47 ಡಿಗ್ರಿ ಸೆಲ್ಸಿಯಸ್‌‍ವರೆಗೆ ಏರುತ್ತದೆ. ಡಿಸೆಂಬರ್ ಮತ್ತು ಜನವರಿಗಳಲ್ಲಿ ದಟ್ಟವಾಗಿ ಮಂಜು ಕವಿಯುವ ವಾತಾವರಣವಿರುವುದರಿಂದ ಈ ದಿನಗಳಲ್ಲಿ ಟ್ರಾಫಿಕ್ ಮತ್ತು ಪ್ರಯಾಣದ ವಿಳಂಬ ಇಲ್ಲಿ ಸರ್ವೆ ಸಾಮಾನ್ಯ. ಬೇಸಿಗೆಯಲ್ಲಿ ಶುಷ್ಕ ಬಿಸಿಯೊಂದಿಗೆ ಸೇರಿರುವ ಸುಂಟರಗಾಳಿ ಮರುಭೂಮಿ ವಾತಾವರಣದಲ್ಲಿ ಸಾಮಾನ್ಯವಾಗಿರುತ್ತದೆ. ಜುಲೈ ಮತ್ತು ಸೆಪ್ಟೆಂಬರ್‌‍ನಲ್ಲಿ ಮಳೆ ಬರುತ್ತದೆ ಮತ್ತು ಬಹುತೇಕ ನಿಯಮಿತ ಮಾನ್ಸೂನ್ ಅವಧಿಯೊಂದಿಗೆ ಮುಕ್ತಾಯವಾಗುತ್ತದೆ. ಮಾರ್ಚ್, ಏಪ್ರಿಲ್ ಅವಧಿಯಲ್ಲೂ ಕೂಡ ಕೆಲವು ಬಾರಿ ಮಳೆಯಾಗಿರುವ ದಾಖಲೆ ಇದೆ. ಆದರೆ,ಈ ರೀತಿಯ ವಿಚಿತ್ರಗಳು ಕೆಲ ಬಾರಿ ಈ ಪ್ರದೇಶಕ್ಕೆ ವೈವಿದ್ಯಮಯ ಉತ್ಪನ್ನಗಳನ್ನು ಮೂರು ಬಾರಿ ತೆಗೆಯುವುದಕ್ಕೆ ಅನುಕೂಲ ಕಲ್ಪಿಸುತ್ತವೆ. ಫೆಬ್ರವರಿ ಮತ್ತು ಮಾರ್ಚ್ ಅವಧಿಯಲ್ಲಿ ಕಾನ್ಪುರ್‌‍ಗೆ ಭೇಟಿ ನೀಡುವುದು ಅತ್ತ್ಯುತ್ತಮ.

[ಬದಲಾಯಿಸಿ] ಶಿಕ್ಷಣ

ಕಾನ್ಪುರವು ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದ್ದು, ಅದನ್ನು ಪ್ರಸಿದ್ಧ ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಲಾಗಿದೆ. ನಗರದ ಕೆಲವು ವಿಭಾಗ-ಆಧಾರಿತ ಪ್ರಸಿದ್ಧ ಕಾಲೇಜುಗಳ ಪಟ್ಟಿ ಈ ಕೆಳಕಂಡಂತಿವೆ:-

ತಾಂತ್ರಿಕ ಅಧ್ಯಯನ ಸಂಸ್ಥೆಗಳು:

ವೈದ್ಯಕೀಯ ಮತ್ತು ಸಂಯುಕ್ತ ಕಾಲೇಜುಗಳು:

ವಿಶ್ವವಿದ್ಯಾಲಯಗಳು

ಚಿತ್ರ:Kanpur univ auditorium.JPG
ಕಾನ್ಪುರ್ ವಿಶ್ವವಿದ್ಯಾಲಯದ ಸಭಾಂಗಣ

ಇತರೆ:

ಕಾನ್ಪುರ್‌ದ ಕಕಡಿಯೊವು ಉತ್ತರ ಭಾರತದಲ್ಲಿನ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಸಿದ್ಧತಾ ತರಬೇತಿ ಕೇಂದ್ರಗಳಿಗೆ ಹೆಚ್ಚು ಪ್ರಸಿದ್ಧಿ. ಕಾನ್ಪುರದ ಸಾಕ್ಷರತಾ ಪ್ರಮಾಣ 77.63%ಇದೆ, ಅದು ರಾಷ್ಟ್ರೀಯ ಸಾಮಾನ್ಯ ಮಟ್ಟಕ್ಕಿಂತಲೂ ಅಧಿಕವಾಗಿದೆ.

[ಬದಲಾಯಿಸಿ] ಕ್ರೀಡೆ

ಚಿತ್ರ:Green Park Stadium Kanpur.jpg
ಗ್ರೀನ್ ಪಾರ್ಕ್ ಸ್ಟೇಡಿಯಂ, ಕಾನ್ಪುರ್, ಉತ್ತರ ಪ್ರದೇಶ.ಹಿಂಭಾಗದಲ್ಲಿ ಗಂಗಾನದಿಯನ್ನು ಕಾಣಬಹುದು.

ಕ್ರಿಕೇಟ್ ಕಾನ್ಪುರ‍ದ ಅತ್ಯಂತ ಹೆಸರುವಾಸಿಯಾದ ಆಟವಾಗಿದೆ.45,000 ವೀಕ್ಷಕರು ಕೂರಬಹುದಾದ ಸಾಮರ್ಥ್ಯವನ್ನು ಹೊಂದಿರುವ, ಪ್ಲಡ್‌ಲೈಟ್ ಒಳಗೊಂಡಂತೆ ಬಹುಮುಖ-ಉಪಯೋಗವನ್ನು ಹೊಂದಿರುವ ಗ್ರೀನ್ ಪಾರ್ಕ್ ಸ್ಟೇಡಿಯಂ ಕಾನ್ಪುರದಲ್ಲಿ ಸ್ಥಾಪಿತವಾಗಿದೆ. ಆದಾಗ್ಯೂ, ರಾಜಕೀಯ ಮತ್ತು ಹಣಕಾಸಿನ ಕಾರಣದಿಂದಾಗಿ ಈ ಮೈದಾನವು ಬಹು ಅಪರೂಪವಾಗಿ ಉಪಯೋಗಿಸಲ್ಪಡುತ್ತಿದೆ. ಈ ನಗರದಲ್ಲಿ, ಹಾಕಿ ಮತ್ತು ಪುಟ್‌ಬಾಲ್ ಇವು ಶಾಲೆ/ಕಾಲೆಜು ಮಟ್ಟಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಇತರ ಆಟಗಳಾಗಿವೆ.

IPLನ ಎರಡು ವರ್ಷಗಳ ಸಾಫಲ್ಯತೆಯ ನಂತರ, ತಂಡಗಳ ಮೊತ್ತವನ್ನು 10ಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ, 2010-11ರಲ್ಲಿ ಎರಡು ಹೊಸ ತಂಡಗಳು IPLಅನ್ನು ಸೇರ್ಪಡೆಗೊಳ್ಳಲಿವೆ ಎಂದು ವರದಿಯಾಗಿದೆ. ನಿರ್ಧಿಷ್ಟಪಡಿಸಿದ ಹೊಸ ಪೌರತಂಡಗಳು ಮೂಲತಹಃ ಅಹಮದಾಬಾದ್‌ ಮತ್ತು ಕಾನ್ಪುರದಲ್ಲಿ ನೆಲೆಸಿವೆ, ಕಾನ್ಪುರ ತಂಡವನ್ನು ಕೊಳ್ಳಲು ಸಹಾರಾ ಗುಂಪು ಇವುಗಳ ಮಧ್ಯವರ್ತಿಯ ರೂಪದ ಸಾದ್ಯತಾ ಕಕ್ಷಿದಾರನಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅಹಮದಾಬಾದ್ ತಂಡದ ಮಾಲಿಕರಾಗಿ ಅನಿಲ್‌ ಅಂಬಾನಿಯವರ ಹೆಸರು ಸಂಯೋಗಗೊಂಡಿದೆ. (ಭಾರತೀಯ ಪ್ರೀಮಿಯರ್ ಲೀಗ್‌ನ #2010-11ರ ವಿಸ್ತರಣೆಯನ್ನು ನೋಡಿ)

[ಬದಲಾಯಿಸಿ] ಹೆಸರಾಂತ ಸ್ಥಳಗಳು

  • ಗ್ರೀನ್ ಪಾರ್ಕ್ ಸ್ಟೇಡಿಯಂ ಮತ್ತು ಮೋದಿ ಸ್ಟೇಡಿಯಂ, ಇದೊಂದು ಕ್ರಿಕೆಟ್ ಸ್ಟೇಡಿಯಂ
  • ರಾಧಾ-ಕೃಷ್ಣ ಮಂದಿರ್, ಅಥವಾ ಜೆ ಕೆ ಟೆಂಪಲ್, ಆ ದೇವಸ್ಥಾನವನ್ನು ಬಿಳಿ ಮಾರ್ಬಲ್‌ಗಳನ್ನು ಬಳಸಿ ಕಟ್ಟಲಾಗಿದೆ.
  • ಖೇರೆಪತಿ ಟೆಂಪಲ್, ವಿಷ್ಣು ದೇವ ಮತ್ತು ಶೇಷನಾಗ ದೇವಸ್ಥಾನವೆಂದು ಬಹುಪ್ರಸಿದ್ಧಿ.
  • ಆನಂದೇಶ್ವರ್ ಟೆಂಪಲ್, ಪಾರ್ಮಟ್‌ನ ಗಂಗಾನದಿ ದಂಡೆಯಲ್ಲಿದೆ.
  • ಬಿಥೂರ್,ಇದೊಂದು ಹಿಂದೂ ಯಾತ್ರಾ ಸ್ಥಳ.
  • ಅಲೆನ್ ಫಾರೆಸ್ಟ್ ಜೂ, ಉತ್ತರ ಭಾರತದಲ್ಲಿನ ಅತಿದೊಡ್ಡ ನೈಸರ್ಗಿಕ ತಾಣಗಳಲ್ಲಿ ಒಂದು.
  • ಮೋತಿ ಜೀಲ್, ಜಿಎಸ್‌ವಿಎಮ್ ವೈದ್ಯಕೀಯ ಕಾಲೇಜು ಸಮೀಪವಿರುವ ಒಂದು ಸರೋವರ.
  • ಲವ ಕುಶ ಆಣೆಕಟ್ಟು, ಗಂಗಾನದಿಗೆ ನಿರ್ಮಿಸಲಾಗಿರುವ ಅಣೆಕಟ್ಟು, ಇದು ಗಂಗಾ ಬ್ಯಾರೆಜ್‌ (ಅಣೆಕಟ್ಟು) ಅಂತಲೇ ಚಿರಪರಿಚಿತ.
  • ಕಾನ್ಪುರ್ ಮೆಮೊರಿಯಲ್ ಚರ್ಚು
  • ಗಾಂಧಿ ಸಭಾಂಗಣ
  • ಕಾನ್ಪುರ್ ಸಂಗ್ರಹಾಲಯ, ಇದೊಂದು ವಸ್ತು ಸಂಗ್ರಹಾಲಯವಾಗಿದೆ.
  • ಬೋಧ ಬಾರ್ಗಾದ್ (ಆಲದ) ಮರ, 1857ರ ಭಾರತದ ದಂಗೆಯ ನಂತರದಲ್ಲಿ 144 ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ನೇಣುಹಾಕಲ್ಪಟ್ಟ ಮರ.[ಉಲ್ಲೇಖದ ಅಗತ್ಯವಿದೆ]

[ಬದಲಾಯಿಸಿ] ಕಾನ್ಪುರದ ಪ್ರಸಿದ್ಧ ವ್ಯಕ್ತಿಗಳು

  • ಅಟಲ್ ಬಿಹಾರಿ ವಾಜಪೇಯಿ, ಸಿವಿಲ್ ಲೈನ್‌ನ ಡಿಎವಿ ಕಾಲೇಜಿನ ವಿದ್ಯಾರ್ಥಿ, ಅವರು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು, ಅವರು ಭಾರತದ 11ನೇ ಪ್ರಧಾನಮಂತ್ರಿ.
  • ಪೂನಂ ದಿಲಾನ್, ಪ್ರಸಿದ್ಧ ಹಿಂದಿ ಚಿತ್ರನಟಿ, ಕೆಲವು ವರ್ಷಗಳವರೆಗೆ ಏರ್ ಪೋರ್ಸ್ ಸ್ಕೂಲ್ ಕಾನ್ಪುರ್‌ದಲ್ಲಿ ವ್ಯಾಸಂಗ ಮಾಡಿದರು.
  • ಶ್ರೀಪ್ರಕಾಶ್ ಜೈಸ್ವಾಲ್, ಭಾರತ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.
  • ಗಣೇಶ್ ಶಂಕರ್ ವಿದ್ಯಾರ್ಥಿ,ಸ್ವಾತಂತ್ರ ಹೋರಾಟಗಾರ ಮತ್ತು ಸಮಾಜ ಸೇವಕ, ಅವರ ಹೆಸರನ್ನೇ ವೈದ್ಯಕೀಯ ಕಾಲೇಜಿಗೆ ಇಡಲಾಗಿದೆ.
  • ಅಪೂರ್ವ ಅಗ್ನಿಹೋತ್ರಿ, ಪರ್ದೇಸ್ ಚಿತ್ರ ಖ್ಯಾತಿಯ ಚಿತ್ರನಟಿ.
  • ಪದ್ಮ ವಿಭೂಷಣ್ ಕ್ಯಾಪ್ಟನ್‌‍ ಲಕ್ಷ್ಮಿ ಸೆಹಗಲ್‌‍‌ನ, ಒಮ್ಮೆ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಿದ್ದರು ಮತ್ತು ನೇತಾಜಿಯ ಆಜಾದ್ ಹಿಂದ್‌‍ ಫೌಜ್ ಸಂಘಟನೆಯ ನಾಯಕರಾಗಿದ್ದರು.
  • ಸುಭಾಷಿಣಿ ಅಲಿ, ಸಾಂದರ್ಭಿಕ ವಾಸಿ, ವ್ಯಾಪಾರ ಒಕ್ಕೂಟದ ಸದಸ್ಯೆ ಮತ್ತು ಕಮ್ಯೂನಿಸ್ಟ್ ನಾಯಕಿ ಮತ್ತು ಚಿತ್ರನಟಿ (ಅಶೋಕ ಚಿತ್ರದ ಖ್ಯಾತಿ), ಚಿತ್ರ ನಿರ್ದೇಶಕ ಮುಜಾಫರ್ ಅಲಿಯ ಪತ್ನಿ ಮತ್ತು ಶಾದ್ ಅಲಿಯ ತಾಯಿ.
  • ರಾಜು ಶ್ರೀವಾತ್ಸವ್‌‍, ಹಾಸ್ಯ ನಟ. ಅವರು ಕಾನ್ಪುರದಲ್ಲೇ ಹುಟ್ಟಿ ಬೆಳೆದದ್ದು.
  • ಬಾಬ್ ವೂಲ್ಮರ್, ಕಾನ್ಪುರದಲ್ಲಿ ಜನನ. ಕ್ರಿಕೆಟ್‌ ಆಡುವುದಕ್ಕಾಗಿ ಇಂಗ್ಲೆಂಡಿಗೆ ಹೋದರು. ದಕ್ಷಿಣ ಆಪ್ರಿಕಾ ಮತ್ತು ಪಾಕಿಸ್ತಾನ ತಂಡಗಳಿಗೆ ಕೋಚ್‌ ಆಗಿಯೂ ಸೇವೆ ಸಲ್ಲಿಸಿದರು.
  • ಆಲ್ತಾಫ್‌‍ ರಾಜಾ, ತುಮ್ ತೊ ಟೆಹೆರೊ ಪರ್ದೇಸಿ ಗೀತೆಯ ಖ್ಯಾತಿಯ ಬಾಲಿವುಡ್ ಗಾಯಕ
  • ಅಭಿಜಿತ್ ಭಟ್ಟಾಚಾರ್ಯ,ಖ್ಯಾತ ಬಾಲಿವುಡ್ ಗಾಯಕ, ಕಾನ್ಪುರದಲ್ಲಿ ಹುಟ್ಟಿ ಬೆಳೆದಿದ್ದು.
  • ಪದ್ಮಶ್ರೀ ಗೋಪಾಲ್ ದಾಸ್ ನೀರಜ್, ಪ್ರಸಿದ್ಧ ಕವಿ.
  • ಸರ್ ಪೀಟರ್ ಡೆ ನೊರೊನ್ಹ, ಪ್ರಮುಖ ವ್ಯಾಪಾರಸ್ಥ, ಲೋಕೋಪಯೋಗಿ ಕಾರ್ಯಗಳನ್ನು ಮಾಡುವವರು ಮತ್ತು ಜನಸೇವಕ. ಅವರು ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯದ ತಮ್ಮ ಕೆಲಸಕ್ಕಾಗಿ 1965ರಲ್ಲಿ ಪೋಪ್ ಪಾಲ್‌ VI ನಿಂದ ನೈಟ್ ಬಿರುದನ್ನು ಸಹ ಪಡೆದರು.
  • ಅಭಿಷೇಕ್ ಯಾದವ್, ಭಾರತದ ವೃತ್ತಿಪರ ಫುಟ್‌ಬಾಲ್ ಆಟಗಾರ.
  • ಸೇಥ್ ಜಗ್ಗಿ ಲಾಲ್ ಕಮಲಾಪತ್‌‍ ಸಿಂಘಾನಿಯ, ಜಿಕೆ ಗ್ರೂಪ್‌ ಸಂಸ್ಥಾಪಕ.
  • ವೈಸಿ ಸೇಥ್‌‍(ಯಾದವೇಂದ್ರ ಚಂದ್ರ ಸೇಥ್), ಮಾಜಿ ವೆಲ್‌ಹ್ಯಾಮ್‌ ವಾಸಿ ಮತ್ತು ಪ್ರಸಿದ್ಧ ಕವಿ.

[ಬದಲಾಯಿಸಿ] ಸಾರಿಗೆ

[ಬದಲಾಯಿಸಿ] ಸ್ಥಳೀಯ

ನಗರದೊಳಗಿನ ಸಂಚಾರದಟ್ಟಣೆಯ ತೊಂದರೆಯನ್ನು ಸರಿಪಡಿಸುವ ಸಲುವಾಗಿ ರಾಜ್ಯ ಸರ್ಕಾರವು ರಿಂಗ್ ರೋಡ್‌ನ ನಿರ್ಮಾಣಕ್ಕೆ ಪ್ರಸ್ಥಾವನೆಯನ್ನು ನೀಡಿದೆ. ಆರ್ಟಿಯಲ್ ರಸ್ತೆಯು ಪಂಕಜ್ ಭಾವು ಸಿಂಗ್ ಅನ್ನು ಸರ್ಸಿಯಾ ಘಾಟ್ ಮುಖಾಂತರ ಸಾರಾಯಿ ಭೌತಿಗೆ ಸಂಪರ್ಕ ಕಲ್ಪಿಸುವುದಕ್ಕೆ ತೀರ್ಮಾನಿಸಲಾಯಿತು. ಕಾನ್ಪುರ್ ಮೆಟ್ರೊಪಾಲಿಟಿನ್ ಬಸ್ ಸರ್ವಿಸ್ ನಗರದ ವ್ಯಾಪ್ತಿಯಲ್ಲಿ ಪ್ರಯಾಣಿಸುವುದಕ್ಕೆ ಅತ್ಯಂತ ಕಡಿಮೆ ವೆಚ್ಚದ ಪ್ರಯಾಣ ಸೌಲಭ್ಯವಾಗಿದೆ. ಆದರೆ, ಇದು ನಗರದ ಬಹುತೇಕ ಪ್ರದೇಶಗಳಿಗೆ ಸೇವೆ ಸಲ್ಲಿಸುವ ಹಾಗೆ ಯೋಜನೆ ಮಾಡಿಲ್ಲ. ಮತ್ತು ಕೆಲವೇ ಆಯ್ದ ಮಾರ್ಗಗಳಲ್ಲಿ ಈ ಸೌಲಭ್ಯವಿದೆ. ಜೆಎನ್ಎನ್ ಯುಎನ್ಆರ್ಎಂ ಯೋಜನೆಯಡಿಯಲ್ಲಿ ಕಾನ್ಪುರ್ ನಗರಕ್ಕೆ ಕೇಂದ್ರ ಸರ್ಕಾರ 300 ಬಸ್ ಗಳನ್ನು ನೀಡುವ ಮೂಲಕ ಪರಿಸ್ಥಿತಿ ಬದಲಾಗುವ ಸ್ಥಿತಿಗೆ ತಲುಪಿದೆ. ಕೇಂದ್ರ ಸರ್ಕಾರವು ಶೇ.50, ರಾಜ್ಯಸರ್ಕಾರ ಮತ್ತು ನಗರ ನಿಗಮವು ಕ್ರಮವಾಗಿ ಶೇ.20 ಮತ್ತು ಶೇ.30ರಷ್ಟು ವೆಚ್ಚವನ್ನು ಭರಿಸಲಿದೆ.
ಇತರ ಎಲ್ಲ ನಗರಗಳಲ್ಲಿ ಇರುವ ಹಾಗೆಯೇ ಇಲ್ಲಿಯೂ ತ್ರಿಚಕ್ರ ಟೆಂಪೋಗಳು ಇನ್ನೊಂದು ಜನಪ್ರಿಯತೆಗಳಿಸಿರುವ ಪ್ರಯಾಣ ಸೌಲಭ್ಯವಾಗಿದೆ. ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಂಪ್ರೆಸ್ ನ್ಯಾಚುರಲ್ ಗ್ಯಾಸ್ ಚಾಲಿತ ಟೆಂಪೋಗಳನ್ನು ಇತ್ತೀಚೆಗೆ ಪರಿಚಯಿಸಲಾಗಿದೆ. ಒಂದು ದಶಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ಮೇಟ್ರೊ ರೈಲ್ವೆ ಇರಬೇಕು ಎನ್ನುವ ಅದರ ಕಾರ್ಯಸೂಚಿ ಅಂಗವಾಗಿ ಸರ್ಕಾರವು ನಗರದಲ್ಲಿ ಮೆಟ್ರೊ ರೈಲ್ವೆ ಸೇವಾ ವ್ಯವಸ್ಥೆಯನ್ನು ಕಾನ್ಪುರ್ ನಗರದಲ್ಲಿ ಪರಿಚಯಿಸುವುದಕ್ಕೆ ಪ್ರಸ್ತಾವನೆಯನ್ನು ಗಮನಕ್ಕೆ ತೆಗೆದುಕೊಂಡಿದೆ.

[ಬದಲಾಯಿಸಿ] ರೈಲುಮಾರ್ಗ

ಚಿತ್ರ:Kanpur Central.jpg
ಕಾನ್ಪುರ್ ಸೆಂಟ್ರಲ್ (ಸಿಎನ್‌ಬಿ) ನಾರ್ಥ್ ಸೆಂಟ್ರಲ್ ರೈಲ್ವೇಸ್‍ನ ಅತಿದೊಡ್ಡ ರೈಲ್ವೆ ನಿಲ್ದಾಣ

ಭಾರತೀಯ ರೈಲ್ವೆಯಿಂದ ದೆಹಲಿ, ಮುಂಬಯಿ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಬೆಂಗಳೂರು, ಅಹ್ಮದಾಬಾದ್, ಇಂದೋರ್, ಭೋಪಾಲ್, ಗ್ವಾಲಿಯರ್, ಪುಣೆ, ಸೂರತ್, ಲಖನೌ ಮತ್ತು ನಾಗ್ಪುರ್ ನಿಂದ ಸಂಪರ್ಕಿಸಲ್ಪಟ್ಟಿದೆ.ಕಾನ್ಪುರ್ ನಗರದ ವ್ಯಾಪ್ತಿಯಲ್ಲಿ 11 ರೈಲ್ವೆ ನಿಲ್ದಾಣಗಳನ್ನು ಹೊಂದಿದ್ದು, ಕಾನ್ಪುರ್ ಸೆಂಟ್ರಲ್, ಕಾನ್ಪುರ್ ಅನ್ವರ್ ಗಂಜ್, ಗೋವಿಂದಪುರಿ, (ಕಾನ್ಪುರ್ ದಕ್ಷಿಣ), ಪಂಕಿ, ಚಕೇರಿ, ಚಂದಾರಿ, ರಾವತಪುರ್, ಕಲಿಯಾನಪುರ, (ಕಲ್ಯಾಣಪುರ), ಮಂಧಾನಾ ಜಂಕ್ಷನ್, ಕಾನ್ಪುರ್ ಬ್ರಿಡ್ಜ್ ಲೆಫ್ಟ್ ಬ್ಯಾಂಕ್ (ಶುಕ್ಲಗಂಜ್) ಮತ್ತು ಕಾನ್ಪುರ್ ಎಸ್ಎಂಯು, ಸಿಬಿಎಸ್ಎ ಕಾನ್ಪುರ್ ಸೆಂಟ್ರಲ್ ಕಾನ್ಪುರ್ ದ ಮುಖ್ಯ ಸ್ಟೇಷನ್ ಆಗಿದ್ದು, ಮತ್ತು ಉತ್ತರ ಕೇಂದ್ರ ರೈಲ್ವೆ ವಲಯದ ಅತಿ ದೊಡ್ಡ ನಿಲ್ದಾಣವಾಗಿದೆ. ಭಾರತೀಯ ರೈಲ್ವೆಯ ದೆಹಲಿ ಹೌರಾ ಟ್ರಂಕ್ ಲೈನ್ ನಲ್ಲಿ ಬರುವ ಅತ್ಯಂತ ಪ್ರಮುಖವಾದ ರೈಲ್ವೆ ನಿಲ್ದಾಣಗಳಲ್ಲಿ ಕಾನ್ಪುರ್ ಸೆಂಟ್ರಲ್ ಒಂದು. ಭಾರತದ ಮೊದಲ ರಾಜಧಾನಿ ಎಕ್ಸಪ್ರೆಸ್ ಈ ನಿಲ್ದಾಣದ ಮುಖಾಂತರವೇ ಸಾಗುತ್ತದೆ.

[ಬದಲಾಯಿಸಿ] ರಸ್ತೆ ಮಾರ್ಗಗಳು

ಕಾನ್ಪುರದ ಅಂತರರಾಜ್ಯ ಬಸ್ ನಿಲ್ದಾಣ(ಐಎಸ್‌ಬಿಟಿ)ವನ್ನು "ಶಹೀದ್‌ ಮೇಜರ್ ಸಲ್ಮಾನ್ ಖಾನ್ ಬಸ್ ಸ್ಟೇಷನ್" ಎಂದು ಅಧಿಕೃತವಾಗಿ ಹೆಸರಿಸಲಾಗಿದೆ. ಇದು ಸ್ಥಳೀಯವಾಗಿ "ಜಕಾರ್ಕತಿ ಬಸ್ ಸ್ಟೇಷನ್" ಎಂದು ಚಿರಪರಿಚಿತ. ಇದು ನಗರದ ಎಲ್ಲಾ ಪ್ರಮುಖ ಸ್ಥಳಗಳಿಗೆ ಬಸ್ಸುಗಳನ್ನು ಒದಗಿಸುತ್ತದೆ. ಈ ನಗರದ ಮೂಲಕ ಅನೇಕ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳು ಹಾದು ಹೋಗುತ್ತವೆ.

ಎನ್‌ಹೆಚ್ ನಂ ಮಾರ್ಗ ಒಟ್ಟು ಉದ್ದ
ಎನ್‌ಹೆಚ್ 2 ದೆಹಲಿ » ಮಥುರಾ » ಆಗ್ರಾ » ಕಾನ್ಪುರ್ » ಅಲಹಬಾದ್ » ವಾರಣಾಸಿ » ಮೋಹಾನಿಯಾ » ಬಾರ್ಹಿ » ಪಾಲ್ಸಿಟ್ » ಡಾಂಕುಣಿ (ಕೊಲ್ಕತ್ತಾ ಸಮೀಪ) 2542
ಎನ್‌ಹೆಚ್ 25 ಲಕ್ನೋ » ಕಾನ್ಪುರ್ » ಝಾನ್ಸಿ » ಶಿವಪುರಿ 352
ಎನ್‌ಹೆಚ್ 86 ಕಾನ್ಪುರ್ » ಹಮೀರ್‌ಪುರ್ » ಛತರ್‌ಪುರ್ » ಸಾಗರ್ » ಭೂಪಾಲ್ » ದೇವಾಸ್ 674
ಎನ್‌ಹೆಚ್ 91 ಘಾಜಿಯಾಬಾದ್ » ಆಲಿಗರ್ » ಇಟಾ » ಕನೌಜ್‌‍ » ಕಾನ್ಪುರ್ 405

[ಬದಲಾಯಿಸಿ] ವಾಯುಮಾರ್ಗಗಳು

ಉತ್ತರ ಪ್ರದೇಶದ ಈ ಪ್ರದೇಶಕ್ಕೆ ಮತ್ತು ಕಾನ್ಪುರ್ ನಗರಕ್ಕೆ ಕಾನ್ಪುರ್ ವಿಮಾನ ನಿಲ್ದಾಣವೊಂದೇ ವಿಮಾನ ನಿಲ್ದಾಣವಾಗಿದೆ. ಈ ಮೊದಲು ಇಂಡಿಯನ್ ಏರಲೈನ್ಸ್ ಎಂದು ಕರೆಯಲ್ಪಡುತ್ತಿದ್ದ ಏರ್ ಇಂಡಿಯಾ 48 ಸೀಟುಗಳ ಸಾಮರ್ಥ್ಯದ ಎಟಿಆರ್ 42 ಟರ್ಬೋಟ್ರಾಪ್ ಮಾದರಿಯ ವಿಮಾನವನ್ನು ಉಪಯೋಗಿಸಿಕೊಂಡು ಪ್ರತಿದಿನ ಸೋಮವಾರದಿಂದ ಶನಿವಾರದವರೆಗೆ ಕಾನ್ಪುರ್ ಮತ್ತು ದೆಹಲಿ ನಡುವೆ ಸೌಲಭ್ಯ ನೀಡುತ್ತದೆ. ಕಾನ್ಪುರ್‌‍ನಿಂದ ಭಾರತದ ಇತರ ಪ್ರದೇಶಗಳಿಗೆ ವಾಯುಯಾನ ಸೌಲಭ್ಯ ವೇಗ ಪಡೆಯಬೇಕಾದ ಅಗತ್ಯವಿದೆ.

[ಬದಲಾಯಿಸಿ] ಟ್ರ್ಯಾಮ್‌

ಚಿತ್ರ:Tram in Kanpur.jpg
ಕಾನ್ಪುರದಲ್ಲಿರುವ ಟ್ರ್ಯಾಮ್‌ಗಳು

ಟ್ರಾಮ್‌ಗಳು ಭಾರತದ ಇತರ ನಗರಗಳಾದ ದೆಹಲಿ, ಮುಂಬೈ ಮತ್ತು ಚೆನ್ನೈ) ನಂತೆ ಕಾನ್ಪುರ್ ನಗರದಲ್ಲಿ ಕೂಡ ಪ್ರಾರಂಭದಲ್ಲಿ ಪರಿಚಯಿಸಲಾದ ಟ್ರಾಮ್‌ಗಳು ಸಿಂಗಲ್ ಕೋಚ್‌ಗಳಾಗಿದ್ದವು. ಏಕೆಂದರೆ ಈ ಮಾದರಿಯ ಪ್ರಯಾಣ ಸೌಲಭ್ಯವನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು. ಅವುಗಳು ಎಲೆಕ್ಟ್ರಿಕ್ ಟ್ರ್ಯಾಕ್ಷನ್ ಮಾದರಿಯದ್ದಾಗಿದ್ದವು.1955ರಲ್ಲಿ ಟ್ರಾಮ್ ವಿರೋದವು ಪ್ರಾರಂಭವಾಗಿ, ವೇಗವಾಗಿ ಜಗತ್ತಿನಾದ್ಯಂತ ಹರಡಿತು. ಹಲವಾರು ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟ್ರಗಳು ಟ್ರಾಮ್ ವ್ಯವಸ್ಥೆಯನ್ನು ಮುಚ್ಚಲು ಪ್ರಾರಂಭಿಸಿದವು. ಇದಕ್ಕೆ ಭಾರತ ಕೂಡ ಹೊರತಾಗಿರಲಿಲ್ಲ. 1933ರ ಹೊತ್ತಿಗೆ ನಿಧಾನವಾಗಿ ಕಾನ್ಪುರ್‌‍ದಲ್ಲಿ ಟ್ರಾಮ್ ಸೇವೆಯನ್ನು ಹಿಂಪಡೆಯಲಾಯಿತು. ಅಲ್ಲಿ 4 ಮೈಲ್ ಉದ್ದದ ರೈಲು ಟ್ರ್ಯಾಕ್ ಮತ್ತು 20 ತೆರೆದ ಸಿಂಗಲ್-ಡೆಕ್ ಟ್ರ್ಯಾಮ್‌ಗಳು ಇದ್ದವು. ಗಂಗಾ ನದಿ ತೀರದ ಸರ್ಸಿಯಾ ಘಾಟ್- ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ಒಂದೇ ಲೈನ್ ಇತ್ತು.[೮]

[ಬದಲಾಯಿಸಿ] ಇದನ್ನೂ ಗಮನಿಸಿ

[ಬದಲಾಯಿಸಿ] ಉಲ್ಲೇಖಗಳು

  1. http://world-gazetteer.com/wg.php?x=1240848680&men=gpro&lng=en&des=wg&geo=419318033&srt=npan&col=adhoq&msz=1500&geo=-7835
  2. Suvorova, Anna Aronovna (2004). Muslim saints of South Asia: the eleventh to fifteenth centuries- Volume 14 of RoutledgeCurzon Sūfī series. Routledge.
  3. ಖಾಕಿ & ರೆಡ್ : ಸೊಲ್ಜರ್ಸ್‌ ಆಫ್ ದಿ ಕ್ವೀನ್ ಇನ್ ಇಂಡಿಯಾ ಆ‍ಯ್‌೦ಡ್ ಆಫ್ರಿಕಾ ಬೈ ಡೊನಾಲ್ಡ್ ಫೀದರ್‌ಸ್ಟೋನ್, ಆರ್ಮ್ಸ್ ಆ‍ಯ್‌೦ಡ್ ಆರ್ಮರ್ ಪ್ರೆಸ್, ಲಂಡನ್, 1997 - ISBN 1-85409-425-4
  4. ಡಾಲ್ರಿಂಪಲ್, ಡಬ್ಲ್ಯೂ. 2007. ದಿ ಲಾಸ್ಟ್ ಮುಘಲ್‌ ದ ಪಾಲ್ ಆಫ್ ಎ ಡೈನಾಸ್ಟಿ : ಡೆಲ್ಲಿ, 1857, ಆಲ್‌ಫ್ರೆಡ್ ನಾಫ್, ನ್ಯೂಯಾರ್ಕ್
  5. ರನ್ನಿಂಗ್ ಔಟ್ ಆಫ್ ಬ್ರೀದ್‌‍. ಟೈಮ್ ಏಷಿಯಾ , ಅಕ್ಟೋಬರ್ 2, 2006
  6. Cite error: Invalid <ref> tag; no text was provided for refs named Kanpur_City_Development_Plan_Under_JNNURM
  7. 3
  8. ಟ್ರ್ಯಾಮ್ಸ್ ಇನ್ ಕಾನ್ಪುರ್. http://www.tramz.com/tva/in.html

[ಬದಲಾಯಿಸಿ] ಬಾಹ್ಯ ಕೊಂಡಿಗಳು


ಟೆಂಪ್ಲೇಟು:Kanpur ಟೆಂಪ್ಲೇಟು:Million-plus cities in India ಟೆಂಪ್ಲೇಟು:Kanpur district ಟೆಂಪ್ಲೇಟು:Hindi Speaking Areas of India ಟೆಂಪ್ಲೇಟು:Uttar Pradesh

"http://kn.wikipedia.org/w/index.php?title=ಕಾನ್ಪುರ&oldid=272463" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು