ಅಲಹಾಬಾದ್
ಅಲಹಾಬಾದ್ ([ಇಲಾಹಾಬಾದ್]; ಹಿಂದಿ:इलाहाबाद; ಉರ್ದು: الہ آباد), ಅಥವಾ ಪರ್ಷಿಯಾ ಭಾಷೆಯಲ್ಲಿ ದೇವರು ನೆಲೆಸಿದ ಸ್ಥಳ ಎಂಬ ಈ ನಗರವು ಉತ್ತರ ಪ್ರದೇಶದಲ್ಲಿರುವ ಒಂದು ಪ್ರಮುಖ ಪಟ್ಟಣ ಹಾಗೂ ಹಿಂದೂಗಳಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಇದರ ಮೂಲ ಹೆಸರು ಪ್ರಯಾಗ (ಹಿಂದಿ:प्रयाग), ಮೊಘಲ್ ದೊರೆ ಅಕ್ಬರನು ಈ ನಗರಕ್ಕೆ ಅಲಹಾಬಾದ್ ಎಂಬ ಹೆಸರಿಟ್ಟನು. ಇದು ಉತ್ತರಪ್ರದೇಶದ ರಾಜಧಾನಿ ಲಕ್ನೋಗೆ ದಕ್ಷಿಣಕ್ಕೆ ಸುಮಾರು ೨೦೫ ಕಿಲೋಮೀಟರ್ ( ಮೈಲಿ) ದೂರದಲ್ಲಿದೆ. ಅಲಹಾಬಾದ್ ಜಿಲ್ಲೆಯ ಆಡಳಿತ ಕೇಂದ್ರವಾಗಿರುವ ಈ ನಗರವು ಪ್ರಪಂಚದ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ೧೩೦ನೆಯದಾಗಿದೆ.(೨೦೧೧ರಲ್ಲಿನ ಬೆಳವಣಿಗೆಯ ಪ್ರಮಾಣ ಶೇ.೨.೦೯) ಗಂಗಾ, ಯಮುನಾ ಮತ್ತು ಪುರಾತನ ಸರಸ್ವತಿ ನದಿಗಳ ಸಂಗಮಸ್ಥಳವಾದುದರಿಂದ ಹಿಂದೂಗಳಿಗೆ ಇದು ಪ್ರಮುಖ ತೀರ್ಥಸ್ಥಳವಾಗಿದೆ. [೧] ಅಲ್ಲದೆ ಇದು ಕುಂಭ ಮೇಳ ನಡೆಯುವ ನಾಲ್ಕು ಸ್ಥಳಗಳಲ್ಲಿ ಒಂದಾಗಿದೆ. ಇತರ ಮೂರು ಸ್ಥಳಗಳು ಹರಿದ್ವಾರ, ಉಜ್ಜಯಿನಿ ಮತ್ತು ನಾಶಿಕ್. ರಾಜ್ಯಸರ್ಕಾರೀ ಮತ್ತು ಕೇಂದ್ರಸರ್ಕಾರಗಳ ಅನೇಕ ಕಚೇರಿಗಳು ಇಲ್ಲಿದ್ದು ಅಲಹಾಬಾದ್ ನಗರವು ದೇಶದ ನಾಲ್ಕನೇ ಹಳೆಯ ವಿಶ್ವವಿದ್ಯಾಲಯವನ್ನು ಹಾಗೂ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಹೊಂದಿದೆ. ದೇಶದ ೧೪ ಪ್ರಧಾನಮಂತ್ರಿಗಳಲ್ಲಿ ೭ ಮಂದಿಗೆ ಅಲಹಾಬಾದ್ ಸ್ವಂತನೆಲೆಯಾಗಿದೆ. ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರೀ, ಇಂದಿರಾಗಾಂಧಿ, ರಾಜೀವ್ ಗಾಂಧಿ, ಗುಲ್ಜರಿಲಾಲ್ ನಂದಾ, ವಿಶ್ವನಾಥಪ್ರತಾಪ್ ಸಿಂಗ್ ಹಾಗೂ ಚಂದ್ರಶೇಖರ್ ಇವರು ಅಲಹಾಬಾದಿನಲ್ಲೇ ಹುಟ್ಟಿದವರು ಅಥವಾ ಅಲಹಾಬಾದ್ ವಿವಿಯ ವಿದ್ಯಾರ್ಥಿಗಳು ಅಥವಾ ಅಲಹಾಬಾದ್ ಕ್ಷೇತ್ರದಿಂದ ಆಯ್ಕೆಯಾದವರು. ಇತರ ಪ್ರಮುಖ ನಗರಗಳಾದ ಕಾನ್ಪುರ, ಲಕ್ನೋ, ವಾರಣಾಸಿ ಮತ್ತು ಮಧ್ಯಪ್ರದೇಶದ ರೇವಾಗಳು ಅಲಹಾಬಾದಿನ ನೆರೆಹೊರೆಯಲ್ಲಿವೆ.
ಪರಿವಿಡಿ |
ಇತಿಹಾಸ [ಬದಲಾಯಿಸಿ]
ಈ ಪ್ರದೇಶವು ಕನೌಜ್ ಸಾಮ್ರಾಜ್ಯಕ್ಕೆ ಸೇರುವ ಮುನ್ನ ಮೌರ್ಯರ ಗುಪ್ತರ ಹಾಗೂ ಕುಶಾನರ ಆಳ್ವಿಕೆಯಲ್ಲಿತ್ತು. ೧೫೨೬ರ ಮೊಘಲ್ ದಾಳಿಯ ನಂತರ ಅಲಹಾಬಾದು ಮೊಘಲ್ ಸಾಮ್ರಾಜ್ಯಕ್ಕೆ ಸೇರಿತು. ಮೊಘಲ್ ದೊರೆ ಅಕ್ಬರನು ಬಲು ಅಮೋಘವಾದ ಅಲಹಾಬಾದ್ ಕೋಟೆಯನ್ನು ಕಟ್ಟಿಸಿದನು. ವಸಾಹತು ಆಡಳಿತಕ್ಕೆ ಮುನ್ನ ಅಲಹಾಬಾದು ಮರಾಠಾ ಆಳ್ವಿಕೆಗೆ ಒಳಪಟ್ಟಿತ್ತು. ಕ್ರಿಸ್ತಶಕ ೧೭೬೫ರಲ್ಲಿ ಬ್ರಿಟಿಷರು ಅಲಹಾಬಾದ್ ಕೋಟೆಯಲ್ಲಿ ಸೇನೆಯಿರಿಸಿದರು. ೧೮೫೭ರ ಸಿಪಾಯಿದಂಗೆಯಲ್ಲಿ ಅಲಹಾಬಾದು ಕ್ರಿಯಾಶೀಲವಾಗಿತ್ತು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನ ವಾರ್ಷಿಕ ಅಧಿವೇಶನವು ೧೮೮೮ ಮತ್ತು ೧೮೯೨ರಲ್ಲಿ ಅಲಹಾಬಾದಿನ ದರ್ಬಾಂಗ ಅರಮನೆಯಲ್ಲಿ ನಡೆಯಿತು. [೨][೩] ೧೯೩೧ರಲ್ಲಿ ಬ್ರಿಟಿಷ್ ಪಡೆಗಳು ಅಲಹಾಬಾದಿನ ಆಲ್ಫ್ರೆಡ್ ಪಾರ್ಕ್ನಲ್ಲಿ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ರನ್ನು ಸುತ್ತುವರಿದಾಗ ಅವರು ಸ್ವಯಂ ಗುಂಡು ಹಾರಿಸಿಕೊಂಡು ಸತ್ತರೆಂದು ಹೇಳಲಾಗುತ್ತದೆ. ಅಲಹಾಬಾದಿನಲ್ಲಿರುವ ನೆಹರೂ ಕುಟುಂಬದ ನಿವಾಸಗಳಾದ ಆನಂದ ಭವನ ಮತ್ತು ಸ್ವರಾಜ್ ಭವನಗಳು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ರಾಜಕೀಯ ಚಟುವಟಿಕೆಗಳ ತಾಣಗಳಾಗಿದ್ದವು.
ಭೂಸಮೀಕ್ಷೆ [ಬದಲಾಯಿಸಿ]
ಅಲಹಾಬಾದು ಉತ್ತರಪ್ರದೇಶದ ದಕ್ಷಿಣಭಾಗದಲ್ಲಿ ರೇಖೆಗಳಲ್ಲಿ ಸಮುದ್ರ ಮಟ್ಟದಿಂದ 98 metres (322 ft) ಎತ್ತರದಲ್ಲಿ ಗಂಗೆ ಯಮುನೆಯರು ಕೂಡುವಲ್ಲಿ ನೆಲೆಗೊಂಡಿದೆ. ಇದರ ಆಗ್ನೇಯ ದಿಕ್ಕಿನಲ್ಲಿ ಬಘೇಲ್ ಖಂಡ್ ಪ್ರದೇಶವಿದ್ದು, ಮೂಡಣದ ಕಡೆ ಪೂರ್ವಾಂಚಲ್ ಎನ್ನುವ ಗಂಗಾ ಕಣಿವೆಯಿದೆ, ನೈರುತ್ಯದಲ್ಲಿ ಬುಂದೇಲ್ ಖಂಡವಿದ್ದರೆ ಉತ್ತರದ ಕಡೆಗೆ ಅವಧ್ ಇದ್ದು, ಪಡುವಣದಲ್ಲಿ ಕೌಶಾಂಬಿಯೊಂದಿಗೆ ದೋ ಆಬ್ ಕೆಳಪ್ರದೇಶವನ್ನು ಹೊಂದಿದೆ. ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಲಹಾಬಾದು ಗಂಗೆ ಮತ್ತು ಯಮುನಾ ನದಿಗಳ ನಡುವೆ ಒಳ್ಳೆಯ ಆಯಕಟ್ಟಿನ ತಾಣದಲ್ಲಿದೆ. ಯಮುನಾ ನದಿಯೊಂದಿಗೆ ಇಂಡಿಯಾದ ಪಶ್ಚಿಮ ಭಾಗವೂ ಇಲ್ಲಿ ಕೊನೆಯಾಗುತ್ತದೆ. ಅಲಹಾಬಾದಿನ ದೋಆಬ್ ಪ್ರದೇಶದ ನೆಲವು ಹೆಚ್ಚು ತೇವವಿಲ್ಲದೆ ಫಲವತ್ತಾಗಿದ್ದು ಗೋಧಿ ಬೆಳೆಗೆ ಅತ್ಯಂತ ಸೂಕ್ತವಾಗಿದೆ. ಇನ್ನು ಬುಂದೇಲಖಂಡ ಮತ್ತು ಬಾಗೆಲಖಂಡಗಳಿಗೆ ಹೊಂದಿಕೊಂಡ ನೆಲವು ಒಣಗಿದ್ದು ಕಲ್ಲುಬಂಡೆಗಳಿಂದ ಕೂಡಿದೆ. ಅಲಹಾಬಾದು ಜಬಲ್ಪುರಕ್ಕೆ ೩೪೩ ಕಿ.ಮಿ ( ಮೈಲಿ) ಉತ್ತರದಲ್ಲಿ ಅದೇ ರೇಖಾಂಶದಲ್ಲಿದ್ದು ಸಮೀಪದ ಮಿರ್ಜಾಪುರ ಪಟ್ಟಣಕ್ಕೆ ಪಡುವಣದಲ್ಲಿರುವ ೮೨.೫ ಡಿಗ್ರಿ ಪೂರ್ವ ರೇಖಾಂಶದಲ್ಲಿ ಇಂಡಿಯಾದ ಮಾನಕ ಸಮಯವನ್ನು ಲೆಕ್ಕಿಸಲಾಗುತ್ತದೆ.
![]() |
ರಾಯ್ ಬರೇಲಿ | ಪ್ರತಾಪಗಡ | ಜಾವುನ್ ಪುರ | ![]() |
| ಕೌಶಾಂಬಿ | ಸಂತ ರವಿದಾಸ್ ನಗರ(ಭದೋಹಿ) | |||
| ಚಿತ್ರಕೂಟ | ರೇವಾ | ಮಿರ್ಜಾಪುರ |
ಧುರೀಣರು [ಬದಲಾಯಿಸಿ]
ಅಲಹಾಬಾದು ಹಲವಾರು ಧುರೀಣರ ಪ್ರಾತಿನಿಧಿಕ ಕ್ಷೇತ್ರವಾಗಿದೆ. ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರೀ, ಇಂದಿರಾಗಾಂಧಿ, ರಾಜೀವ್ ಗಾಂಧಿ, ವಿಶ್ವನಾಥಪ್ರತಾಪ್ ಸಿಂಗ್, ಎಚ್ ಎನ್ ಬಹುಗುಣ, ಅಮಿತಾಭ್ ಬಚ್ಚನ್, ಮುರ್ಲಿ ಮನೋಹರ ಜೋಷಿ ಇವರೆಲ್ಲ ಇಲ್ಲಿಂದಲೇ ಉಗಮಿಸಿದವರು.
ಜನಸಂಖ್ಯಾ ಲೆಕ್ಕಾಚಾರ [ಬದಲಾಯಿಸಿ]
೨೦೧೧ರ ಜನಗಣತಿಯ ಪ್ರಕಾರ ಅಲಹಾಬಾದಿನ ಜನಸಂಖ್ಯೆಯು ೧೨,೧೬,೭೧೯.[೪] ಇದು ಇಂಡಿಯಾದ ಅತಿ ಜನನಿಬಿಡ ಪಟ್ಟಣಗಳಲ್ಲಿ ೩೨ನೆಯದು. ಇದರ ಲಿಂಗಾನುಪಾತವು ೮೮೮ ಇದ್ದು ೬ಕ್ಕಿಂತ ಕಡಿಮೆ ವಯಸ್ಸಿನವರು ಶೇ.೧೨.೪ ಇದ್ದಾರೆ. ಸಾಕ್ಷರತಾ ಪ್ರಮಾಣವು ಶೇ.೭೮.೨೯ ಅಲಹಾಬಾದಿನಲ್ಲಿ ಹಿಂದೀ, ಉರ್ದು ಮತ್ತು ಇಂಗ್ಲಿಷ್ ಮಾತುಗಾರಿಕೆಯಿದೆ. ನಗರಪ್ರದೇಶದಲ್ಲಿ ಹಿಂದೀಯ ಖಡೀಬೋಲಿಯಲ್ಲಿ ಜನ ಮಾತನಾಡುತ್ತಾರಾದರೂ ಉಳಿದಂತೆ ಎಲ್ಲರೂ ಅವಧೀ ಪ್ರಕಾರದ ಹಿಂದೀಯನ್ನು ಆಡುತ್ತಾರೆ. ದೋಆಬಿ ಅಲ್ಲದ ಪೂರ್ವಭಾಗದಲ್ಲಿ ಬಘೇಲಿ ಉಪಭಾಷೆಯು ಸಾಮಾನ್ಯ. ಕೆಲ ಪ್ರದೇಶಗಳಲ್ಲಿ ಬಂಗಾಳಿ ಮತ್ತು ಪಂಜಾಬಿಯೂ ಚಲಾವಣೆಯಲ್ಲಿದೆ. ಅಲಹಾಬಾದಿನಲ್ಲಿ ಎಲ್ಲ ಪ್ರಮುಖ ಧರ್ಮಗಳೂ ಇವೆ. ಹಿಂದೂಗಳು ಶೇ ೮೬.೮೧, ಮುಸ್ಲಿಮರು ಶೇ ೧೨.೭೨, ಕ್ರೈಸ್ತರು ಶೇ ೦.೧೮, ಸಿಖ್ಖರು ಶೇ ೦.೧೩ ಮತ್ತು ಬೌದ್ಧರು ಶೇ ೦.೦೪ ಇದ್ದಾರೆ.
Cite error: <ref> tags exist, but no <references/> tag was found
