ಶುಂಠಿ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶುಂಠಿ
secure
Koeh-146.jpg
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: Plantae
(unranked) Monocots
(unranked) Commelinids
ವರ್ಗ: Zingiberales
ಕುಟುಂಬ: Zingiberaceae
ಪ್ರಜಾತಿ: Zingiber
ಜಾತಿ: Z. officinale
ದ್ವಿಪದಿ ನಾಮ
Zingiber officinale
Roscoe


ಶುಂಠಿ ಆಹಾರದಲ್ಲಿ ಬಳಸಲಾಗುವ ಒಂದು ಸಂಬಾರ ವಸ್ತು. ಶುಂಠಿಯನ್ನು ಔಷಧಿಗಳಲ್ಲಿ ಸಹ ಬಳಸುವರು. ಶುಂಠಿಯ ಗಿಡದ ನೆಲದೊಳಗಿನ ಭಾಗದ ಕಾಂಡವು ಶುಂಠಿಯೆನಿಸಿಕೊಳ್ಳುತ್ತದೆ.ಶುಂಠಿಯ ಕೃಷಿಗೆ ಸುದೀರ್ಘ ಇತಿಹಾಸವಿದೆ. ಏಷ್ಯಾ ಮೂಲದ ಶುಂಠಿಯನ್ನು ಭಾರತ, ಆಗ್ನೇಯ ಏಷ್ಯಾ, ಪಶ್ಚಿಮ ಆಫ್ರಿಕಾ ಮತ್ತು ಕೆರಿಬ್ಬಿಯನ್ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಶುಂಠಿಯ ತೀಕ್ಷ್ಣ ಘಾಟು ಮತ್ತು ರುಚಿಗಳು ಅದರಲ್ಲಿನ ಜಿಂಜೆರೋಲ್‌, ಶೊಗಾಲ್‌ ಮತ್ತು ಜಿಂಜೆರೋನ್‌ಗಳೆಂಬ ಸಸ್ಯತೈಲಗಳ ಮಿಶ್ರಣದಿಂದ ಉಂಟಾಗುತ್ತದೆ. ಈ ತೈಲಗಳು ತಾಜಾ ಶುಂಠಿಯ ಒಟ್ಟು ತೂಕದ ೧ ರಿಂದ ೩ ಶೇಕಡಾದಷ್ಟು ಇರುತ್ತವೆ. ಜಿಂಜೆರೋಲ್‌ಗಳು ನೋವುನಿವಾರಕ, ಉದ್ವೇಗಶಾಮಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಜೊತೆಗೆ ಇವು ಜೀರ್ಣಶಕ್ತಿಯನ್ನು ಹೆಚ್ಚಿಸುವ ವಿಶೇಷ ಗುಣವನ್ನು ಸಹ ಹೊಂದಿವೆ. ಸುಮಾರು ೩ ರಿಂದ ೪ ಅಡಿ ಎತ್ತರಕ್ಕಿರುವ ಶುಂಠಿಯ ಗಿಡವು ತೆಳ್ಳಗೆ ನೇರವಾಗಿರುತ್ತದೆ. ಗಿಡದ ಬಿಳಿ ಮತ್ತು ರೋಜಾ ಬಣ್ಣದ ಮೊಗ್ಗುಗಳು ಹಳದಿ ಬಣ್ಣದ ಹೂವಾಗಿ ಅರಳುತ್ತವೆ. ಹಸಿ ಶುಂಠಿ ಮತ್ತು ಒಣಶುಂಠಿಗಳನ್ನು ಅಡುಗೆಯಲ್ಲಿ ಸಂಬಾರ ಪದಾರ್ಥವನ್ನಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಶುಂಠಿಯು ಕೆಲ ಬಗೆಯ ಅತಿಸಾರಕ್ಕೆ ಪರಿಣಾಮಕಾರಿ ಔಷಧಿಯೆಂದು ಕಂಡುಕೊಳ್ಳಲಾಗಿದೆ. ಅಲ್ಲದೆ ಸಮುದ್ರಯಾನದಿಂದ ಉಂಟಾಗುವ ತಲೆಸುತ್ತುವಿಕೆ, ಹೊಟ್ಟೆ ತೊಳಸುವಿಕೆಗಳಿಗೆ ಉತ್ತಮ ಶಮನವೆಂದು ಸಿದ್ಧವಾಗಿದೆ.

ಶುಂಠಿಯ ದೊಡ್ಡದೊಂದು ತುಣುಕು

[ಬದಲಾಯಿಸಿ] ಶುಂಠಿಯ ಉತ್ಪಾದನೆ

ಜಗತ್ತಿನ ಒಟ್ಟು ಶುಂಠಿಯ ಉತ್ಪಾದನೆಯ ೩೦% ಪಾಲನ್ನು ಬೆಳೆಯುವ ಭಾರತ ಮೊದಲ ಸ್ಥಾನದಲ್ಲಿದೆ.

ವಿಶ್ವದ ಮೊದಲ ಹತ್ತು ಶುಂಠಿ ಉತ್ಪಾದಕ ದೇಶಗಳು — 11 ಜೂನ್ 2008ರಂತೆ
ದೇಶ ಉತ್ಪಾದನೆ (ಟನ್ನುಗಳಲ್ಲಿ)
ಭಾರತ 420000
ಚೀನಾ 285000
ಇಂಡೋನೇಷ್ಯಾ 177000
ನೇಪಾಳ 158905
ನೈಜೀರಿಯ 138000
ಬಾಂಗ್ಲಾದೇಶ 57000
ಜಪಾನ್‍‍ 42000
ಥೈಲ್ಯಾಂಡ್‍‍ 34000
ಫಿಲಿಪ್ಪೀನ್ಸ್‍‍ 28000
ಶ್ರೀಲಂಕಾ 8270
ಒಟ್ಟು ವಿಶ್ವ 1387445

[ಬದಲಾಯಿಸಿ] ಬಾಹ್ಯ ಸಂಪರ್ಕಕೊಂಡಿಗಳು

Commons logo
Wikimedia Commons has media related to:
"http://kn.wikipedia.org/wiki/%E0%B2%B6%E0%B3%81%E0%B2%82%E0%B2%A0%E0%B2%BF" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು