ಕೊಡಗು
Wikipedia ಇಂದ
ಈ ಲೇಖನ ಆಂಗ್ಲ ಭಾಷೆ ವಿಕಿಪೀಡಿಯಾ ಲೇಖನದ ಕೇವಲ ಭಾಷಾಂತರ. ಲೇಖನದಲ್ಲಿರುವ ಮಾಹಿತಿ ಸರಿಯಿದೆಯೋ ಇಲ್ಲವೋ ಎನ್ನುವುದು ತಿಳಿದಿಲ್ಲ. ಈ ವಿಷಯದ ಬಗ್ಗೆ ತಿಳಿದಿರುವ ಸದಸ್ಯರು ಲೇಖನವನ್ನು ಸೂಕ್ತವಾಗಿ ತಿದ್ದಬೇಕಾಗಿ ವಿನಂತಿ
ಕೊಡಗು (ಕೂರ್ಗ್ ಎಂಬ ಬಳಕೆಯೂ ಇದೆ) ಕರ್ನಾಟಕದ ಒಂದು ಜಿಲ್ಲೆ. 'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಿವುದೆಂದು ಹೇಳಿಕೆ. ಕೊಡಗು ಕರ್ನಾಟಕದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ದಕ್ಷಿಣ ಕನ್ನಡದ ಸೀಮೆಗೆ ಹೊಂದಿಕೊಂಡಂತೆ ಇದೆ, ಇದರ ಪಕ್ಕದ ಜಿಲ್ಲೆಗಳು - ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆ. ಈ ಜಿಲ್ಲೆಯಲ್ಲಿ ಕಾಫಿ ಬಹಳವಾಗಿ ಬೆಳೆಯಲಾಗುತ್ತದೆ. ಇಲ್ಲಿಯ ಜನಸಂಖ್ಯೆ ೫೪೫,೩೨೨ (೨೦೦೧ ರಲ್ಲಿ) ಇತ್ತು. ಈ ಜಿಲ್ಲೆಯ ರಾಜಧಾನಿ ಮಡಿಕೇರಿ (ಮರ್ಕೆರಾ ಎಂದೂ ಕರೆಯಲಾಗುತ್ತದೆ). 'ದುಂಬಿಗಳ ಮನೆ' - ಮಡಿಕೇರಿಯ ತಾತ್ಪರ್ಯ. ಭಾರತದ ಸ್ಕೋಟ್ ಲ್ಯಾಂಡ್ ಎಂಬ ಹೆಸರೂ ಕೊಡಗಿಗೆ ಇದೆ.ಕೊಡಗು ಮೊದಲು ಬ್ರಿಟಿಷರ ಕಾಲದಲ್ಲಿ ರಾಜ್ಯವಾಗಿತ್ತು.ಕ್ರಮೇಣ ಬ್ರಿಟಿಷರು ಕೊಡಗನ್ನು ಮೈಸೂರು ರಾಜ್ಯಕ್ಕೆ ಜಿಲ್ಲೆಯಾಗಿ ಸೇರಿಸಿದರು.ಈ ಜಿಲ್ಲೆಯಲ್ಲಿ ಕಾಫಿ ಯಲ್ಲದೆ ಕರಿ ಮೆಣಸು,ಏಲಕ್ಕಿ,ಕಿತ್ತಳೆ,ಮತ್ತು ಭತ್ತ ಪ್ರಮುಖ ಬೇಸಾಯ.ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಭಾರತದಲ್ಲೆ ಹೆಸರಾಗಿತ್ತು.ಅದರೆ ಇಂದು ಅದು ಕೊಡಗಿನಲ್ಲಿಯೆ ಅಪರೂಪವಾಗಿದೆ.ಮೊದಲು ಕೊಡಗಿನಿಂದ ಕರ್ನಾಟಕ ರಾಜ್ಯಕ್ಕೆ ೩/೧ ಪಾಲು ಆದಾಯ ತೆರಿಗೆಯಾಗಿ ಹೋಗುತ್ತಿತ್ತು.ಕೊಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರವಿದೆ, ಮುಖ್ಯವಾಗಿ ಮಡಿಕೇರಿಯಲ್ಲಿ: ಅಬ್ಬಿ ಜಲಪಾತ, ಓಂ ಕಾರೇಶ್ವರ ದೇವಸ್ಥಾನ, ಗದ್ದಿಗೆ, ಅರಮನೆ, ರಾಜಸೀಟ್,ತಲ ಕಾವೇರಿ, ಸೊಮವಾರಪೇಟೆ ತಾಲುಕಿನಲ್ಲಿ: ಕಾವೇರಿ ನಿಸರ್ಗಧಾಮ, ಕೊಪ್ಪದ ಗೊಲ್ದನ್ ದೇವಸ್ಥಾನ, ವೀರಭೂಮಿ,ದುಭಾರೆ, ಹಾರಂಗಿ ಜಲಾಶಯ, ಚಿಕ್ಲಿ ಹೊಳೆ,ಹೊನ್ನಮನ ಕೆರೆ,ಮಲ್ಲಳ್ಳಿ ಜಲಪಾತ, ವಿರಾಜಪೇಟೆಯಲ್ಲಿ: ನಾಗರಹೊಳೆ,ಇರ್ಪು,ಕುಂದ,ಟೀ ಏಸ್ಟೇಟ್
"http://kn.wikipedia.org/wiki/%E0%B2%B5%E0%B2%BF%E0%B2%B0%E0%B2%BE%E0%B2%9C%E0%B2%AA%E0%B3%87%E0%B2%9F%E0%B3%86" ಇಂದ ಪಡೆಯಲ್ಪಟ್ಟಿದೆ
ಪರಿವಿಡಿ |
[ಬದಲಾಯಿಸಿ] ಇಲ್ಲಿಯ ಜನ
ಕೊಡವ ಥಕ್ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ ಕನ್ನದ, ರಾವುಲ ಮತ್ತು ತುಳು ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ. ಎಲ್ಲಾ ದ್ರಾವಿಡ ಭಾಷೆಗಳು.
ಕೊಡವ ಭಾಷೆ ಅಥವಾ ಕೊಡವ ಥಕ್‌ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧೨೦,೦೦೦ ಮಾತನಾಡಲಉ ಬಳಸುತ್ತಾರೆ. ಆದರೆ ಅದರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.
ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು.

