ವಿರಾಜಪೇಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊಡಗು ತಾಲ್ಲೂಕುಗಳು
ಮಡಿಕೇರಿ | ಸೋಮವಾರಪೇಟೆ | ವಿರಾಜಪೇಟೆ
ವಿರಾಜಪೇಟೆ (ವೀರರಾಜೇಂದ್ರಪೇಟೆ)

ವಿರಾಜಪೇಟೆ (ವೀರರಾಜೇಂದ್ರಪೇಟೆ)
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಕೊಡಗು ಜಿಲ್ಲೆ
ನಿರ್ದೇಶಾಂಕಗಳು 12.2° N 75.8° E
ವಿಸ್ತಾರ
 - ಎತ್ತರ
 km²
 - 909 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೧೫,೨೦೬
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೧ ೨೧೮
 - +೦೮೨೭೪
 - ಕೆಎ-೧೨
ಅಂತರ್ಜಾಲ ತಾಣ: www.virajpettown.gov.in

ವೀರರಾಜೇಂದ್ರಪೇಟೆ (ವಿರಾಜಪೇಟೆ) ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಇದು ಕೊಡಗಿನ ದೊರೆ ವೀರರಾಜೇಂದ್ರ ಅವರು ೧೭೯೨ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ[೧]. ವಿರಾಜಪೇಟೆಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಭ ಮತ್ತು ಅದರ ಪಕ್ಕದಲ್ಲಿ ಗಣೇಶನ ಗುಡಿಯಿದೆ. ೨೫೦ ವರ್ಷಗಳಿಗೂ ಹಿಂದೆ ಕಟ್ಟಿಸಿದ ಸೈಂಟ್ ಏನ್ಸ್ ಚರ್ಚ್ ಇದೆ. ಅಲ್ಲಿಂದ ಸುಮಾರು ೧ ಕಿ. ಮೀ ಅಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ.

ಗಡಿಯಾರ ಕಂಬ, ವಿರಾಜಪೇಟೆ
ಸೈಂಟ್ ಏನ್ಸ್ ಚರ್ಚ್, ವಿರಾಜಪೇಟೆ

ವಿರಾಜಪೇಟೆಯಿಂದ ಸುಮಾರು ೨೦ ಕಿ. ಮೀ ಅಂತರದಲ್ಲಿ ಕುಂದ ಬೆಟ್ಟವಿದೆ. ಕೊಡಗಿನಲ್ಲಿ ಈಗ ೬, ೭ ವರ್ಷಗಳಿಂದ ಸಾಂಪ್ರಾದಾಯಿಕ ಕ್ರೀಡೆಯಾದ ಹಾಕಿ, ಉತ್ಸವವಾಗಿ ನಡೆಯುತ್ತಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಗೌರಿ ಗಣೇಶ ಉತ್ಸವವು, ಕೊಡಗಿನಲ್ಲಿಯೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಈ ಹಬ್ಬವನ್ನು ವೀಕ್ಷಿಸಲು ಯಾವುದೇ ಜಾತಿ ಮತದ ಭೇದವಿಲ್ಲದೆ ಜನರು ಬಂದು ಸೇರುತ್ತಾರೆ. ಈ ತಾಲ್ಲೂಕಿನ ಗೋಣಿಕೊಪ್ಪಲದಲ್ಲಿ ನಡೆಯುವ ದಸರಾ ಉತ್ಸವವು ಸಹ ಅತೀ ಪ್ರಸಿದ್ಧ. ಶ್ರೀ ಮಂಗಲ ಗ್ರಾಮದ ಸಮೀಪದ ಇರ್ಪುವಿನಲ್ಲಿರುವ ಶ್ರೀ ರಾಮೇಶ್ವರ ದೇವಾಸ್ಥಾನ ಮತ್ತು ಇರ್ಪು ಜಲಪಾತ,ಮತ್ತು ಅಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಅಕರ್ಷಿಸುತ್ತದೆ. ಈ ಜಲಪಾತವು ಮುಂದೆ ಲಕ್ಷ್ಮಣ ತೀರ್ಥ ನದಿಯಾಗಿ ಹರಿದು ಕೊನೆಗೆ ಕೇರಳವನ್ನು ಸೇರುತ್ತದೆ.


ಉಲ್ಲೇಖ[ಬದಲಾಯಿಸಿ]

  1. ಕೊಡಗಿನ ಇತಿಹಾಸ - ಡಿ ಎನ್ ಕೃಷ್ಣಯ್ಯ - ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ - ಮೊದಲನೆಯ ಮುದ್ರಣ ೧೯೭೪ - ಪುಟ ೨೪೪