ಅಂಬಿಕಾ (ಚಿತ್ರನಟಿ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಅಂಬಿಕಾ (ಮಲಯಾಳಮ್: അംബിക) (ಜನನ: ನವಂಬರ್ ೬ ೧೯೬೩) ಭಾರತದ ಒಬ್ಬ ಚಿತ್ರನಟಿ. ಅವರು ಹಲವಾರು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ೧೯೭೯ರ ಮಲಯಾಳಮ್ ಚಲನಚಿತ್ರ ಮಾಮಂಗಮ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೆಲವೇ ವರ್ಷಗಳಲ್ಲಿ ಅವರು, ಮಲಯಾಳಮ್ ಅಲ್ಲದೆ ತಮಿಳು ಮತ್ತು ಕನ್ನಡ ಚಿತ್ರರಂಗಗಳಲ್ಲೂ ಬಿಡುವಿಲ್ಲದ ನಟಿಯಾದರು.ಕನ್ನಡದಲ್ಲಿ ಅವರು ಡಾಕ್ಟರ್ ರಾಜ್ ಕುಮಾರ್ ಅವರ ಜೊತೆ ನಟಿಸಿದ ಚಿತ್ರ "ಚಲಿಸುವ ಮೋಡಗಳು" ಬಹಳ ಜನಪ್ರಿಯವಾಗಿತ್ತು.ಅಂಬರೀಶ್ ಅಂಬಿಕಾ ಕನ್ನಡ ಚಿತ್ರ ರಂಗದ ಯಶಸ್ವೀ ಜೋಡಿಗಳು, ಇವರಿಬ್ಬರ ನಟನೆಯ ಛಳೀ ಛಳೀ ಹಾಡು ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತ್ತು.