ಎಂ.ವಿ.ರಾಜಮ್ಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕನ್ನಡ ವೃತ್ತಿ ರಂಗಭೂಮಿಯ "ಅಭಿನಯ ಶಾರದೆ" ಎಂದೇ ಖ್ಯಾತರಾಗಿದ್ದ ಎಂ.ವಿ.ರಾಜಮ್ಮ ಜನಿಸಿದ್ದು (೧೦.೦೩.೧೯೨೧ - ೦೬.೦೭.೨೦೦೦) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ.ತಂದೆ ನಂಜಪ್ಪ ಜಮೀನ್ದಾರರು.ತಾಯಿ ಸುಬ್ಬಮ್ಮ.ಬಾಲ್ಯದಿಂದಲೇ ಅಭಿನಯದಲ್ಲಿ ಆಸಕ್ತಿ.ಮಹಮದ್ ಪೀರ್‌ರವರ ಚಂದ್ರಕಲಾ ನಾಟಕ ಮಂಡಳಿಯ ಸಂಸಾರ ನೌಕ,ಗೌತಮಬುದ್ಧ ನಾಟಕಗಳ ಅಭಿನಯದಿಂದ ಜನ ಮೆಚ್ಚುಗೆ ಗಳಿಸಿದರು.

೧೯೩೬ರಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.ಸಂಸಾರ ನೌಕೆ ಕನ್ನಡ ಚಲನಚಿತ್ರದಲ್ಲಿ ಅಭಿನಯ.ಅನೇಕ ಚಲನಚಿತ್ರಗಳಲ್ಲಿ ನಾಯಕಿಯಾಗಿ,ಪೋಷಕ ನಟಿಯಾಗಿ ಅಭಿನಯಿಸಿದ್ದಾರೆ.ಅಂದಿನ ಜನಪ್ರಿಯ ನಟರುಗಳಾದ ಬಿ.ಆರ್.ಪಂತುಲು,ಹೆಚ್.ಎಲ್.ಎನ್.ಸಿಂಹ,ಡಿಕ್ಕಿ ಮಾಧವರಾವ್,ಜಿ.ವಿ.ಕೃಷ್ನ ಮೊದಲಾದವರೊಂದಿಗೆ ಅಭಿನಯಿಸಿದ್ದಾರೆ.ಎಂ.ವಿ. ರಾಜಮ್ಮ ಕನ್ನಡದ ಮೊದಲ ಮಹಿಳಾ ಚಿತ್ರ ನಿರ್ಮಾಪಕಿ. ನಮನ.

ಪರಿವಿಡಿ

[ಬದಲಾಯಿಸಿ] ಇವರ ಅಭಿನಯದ ಕೆಲವು ಜನಪ್ರಿಯ ಕನ್ನಡ ಚಿತ್ರಗಳು

ರತ್ನಗಿರಿ ರಹಸ್ಯ

ಸ್ಕೂಲ್ ಮಾಸ್ಟರ್

ಚಿನ್ನದ ಗೊಂಬೆ

ಮಕ್ಕಳ ರಾಜ್ಯ

ಕಿತ್ತೂರು ಚೆನ್ನಮ್ಮ

ಸತೀ ಶಕ್ತಿ

ತಾಯಿ ದೇವರು

ಶ್ರೀಕೃಷ್ಣದೇವರಾಯ

[ಬದಲಾಯಿಸಿ] ಚಿತ್ರ ನಿರ್ಮಾಣ

೧೯೪೩ ರಲ್ಲಿ ರಾಧಾರಮಣ ಎಂಬ ಚಿತ್ರವನ್ನು ಸ್ವತಃ ನಿರ್ಮಿಸಿ,ಈ ಮೂಲಕ ಕಲಾವಿದರಾದ ಜಿ.ವಿ.ಅಯ್ಯರ್,ಬಾಲಕೃಷ್ಣರವರನ್ನು ಬೆಳಕಿಗೆ ತಂದರು.

[ಬದಲಾಯಿಸಿ] ಇತರ ಭಾಷಾ ಚಿತ್ರಗಳು

ಇವರು ತೆಲುಗು ಚಿತ್ರ "ಕೃಷ್ಣ ಜರಾಸಂಧ" ಹಾಗೂ ತಮಿಳು ಚಿತ್ರ "ಯಯಾತಿ"ಯಲ್ಲಿ ಅಭಿನಯಿಸಿದ್ದಾರೆ.

[ಬದಲಾಯಿಸಿ] ಪ್ರಶಸ್ತಿ,ಪುರಸ್ಕಾರಗಳು

ಸ್ಕೂಲ್ ಮಾಸ್ಟರ್,ಕಿತ್ತೂರು ಚೆನ್ನಮ್ಮ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ.

ರಾಷ್ಟ್ರಾಧ್ಯಕ್ಷರ ಪದಕ ದೊರಕಿದೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ