ಅರುಂಧತಿ ನಾಗ್
ಅರುಂಧತಿನಾಗ್ - ಮರಾಠಿ ಮೂಲದ ಕನ್ನಡ ರಂಗಭೂಮಿ ಕಲಾವಿದೆ, ಮತ್ತು ಕನ್ನಡ ಚಿತ್ರರಂಗದ ಹೆಸರಾಂತ ನಟಿಯರಲ್ಲೊಬ್ಬರು.
ಖ್ಯಾತ ನಟ, ನಿರ್ದೇಶಕ ಶಂಕರನಾಗ್ ಅವರ ಪತ್ನಿ ಅರುಂಧತಿನಾಗ್. ಈ ದಂಪತಿಗಳ ಮಗಳ ಹೆಸರು ಕಾವ್ಯ. ೧೯೯೦ರಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಅರುಂಧತಿನಾಗ್ ಅವರ ಪತಿ ಶಂಕರನಾಗ್ ಮೃತರಾದರು.
ಪರಿವಿಡಿ |
[ಬದಲಾಯಿಸಿ] ಅರುಂಧತಿನಾಗ್ ಅಭಿನಯದ ಕನ್ನಡ ಚಲನಚಿತ್ರಗಳು
[ಬದಲಾಯಿಸಿ] ರಂಗಶಂಕರ
ರಂಗಶಂಕರ - ಕನ್ನಡ ರಂಗಭೂಮಿಗೆ ಶಂಕರನಾಗ್ ಕಂಡ ಕನಸು. ನಾಟಕರಂಗದಲ್ಲಿಯೇ ಪ್ರಾರಂಭದಿಂದ ಒಡನಾಟ ಬೆಳೆಸಿಕೊಂಡಿದ್ದ ಶಂಕರನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ನಾಟಕಗಳ ಪ್ರದರ್ಶನ ಸುಗಮವಾಗಿರುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂದಿದ್ದರು. ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರನಾಗ್ ದುರ್ಮರಣಕ್ಕೀಡಾದರು. ಅವರ ಪತ್ನಿ ಅರುಂಧತಿನಾಗ್ ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದಿದ್ದಾರೆ. ರಂಗಶಂಕರ, ಬೆಂಗಳೂರಿನ ಪ್ರಮುಖ ಸ್ಥಳವೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ.
೨೦೧೦ರಲ್ಲಿ 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ನಿರ್ದೇಶಕ ಆರ್.ಬಾಲಕೃಷ್ಣನ್ ಅವರ'ಪಾ'(ಹಿಂದಿ) ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಅರುಂಧತಿ ನಾಗ್ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ನೀಡಲಾಗಿದೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
[ಬದಲಾಯಿಸಿ] ಈ ಪುಟಗಳನ್ನೂ ನೋಡಿ
|
|||||||