ಹರಿಣಿ
ವಿಕಿಪೀಡಿಯ ಇಂದ
ಹರಿಣಿ ಕನ್ನಡ ಚಿತ್ರರಂಗದ ಒಬ್ಬರು ನಟಿ.
ಹರಿಣಿಯವರು ಹುಟ್ಟಿದ್ದು ಉಡುಪಿಯಲ್ಲಿ .ತಂದೆ ಪಣಿಯಾಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮಿ.ಕಾಂಗ್ರೆಸ್ ಕಾರ್ಯಕರ್ತ.ಉದ್ಯಮದಲ್ಲಿ ನಷ್ಟ ಅನುಭವಿಸಿ ಉಡುಪಿ ಬಿಟ್ಟು ಮಧುರೆಗೆ ಹೋಗಿ ನೆಲೆಸಿದಾಗ ಹರಿಣಿ ಐದು ವರ್ಷದ ಬಾಲೆ.ಮಧುರೆಯಲ್ಲಿ ರಾಯಲ್ ಟಾಕೀಸ್ ಸಂಸ್ಥೆಯ ಮಾಲೀಕರು "ಹರಿದಾಸ್" ಚಿತ್ರ ತೆಗೆಯುತ್ತಿದ್ದಾಗ ನಿರ್ದೇಶಕ ಸುಂದರರಾವ್ ನಾಡಕರ್ಣಿ ಹರಿಣಿಗೆ ಆ ಚಿತ್ರದಲ್ಲಿ ಬಾಲಕನ ಪಾತ್ರ ನೀಡಿದರು.ಹೀಗೆ ಚಿತ್ರ ರಂಗಕ್ಕೆ ಕಾಲಿಟ್ಟ ಹರಿಣಿ,೧೯೪೬-೪೯ ರ ಅವಧಿಯಲ್ಲಿ ಮೂರು ತಮಿಳು ಚಿತ್ರಗಳಲ್ಲಿ ಅಭಿನಯಿಸಿದರು.ನಮನ.
ಪ್ರತಿಮಾದೇವಿ ನಾಯಕಿಯಾಗಿ ಅಭಿನಯಿಸಿರುವ ಜಗನ್ಮೋಹಿನಿ ಚಿತ್ರದ ಎರಡನೆ ನಾಯಕಿಯಾಗಿ ಚಿತ್ರರಂಗವನ್ನು ಪ್ರವೇಶಿಸಿದರು.
ರಾಜಕುಮಾರ್ ಜೊತೆಯಲ್ಲಿ ಇವರು ನಟಿಸಿದ ನಾಂದಿ ಕನ್ನಡ ಚಿತ್ರ ಅಪಾರ ಮೆಚ್ಚುಗೆಯನ್ನು ಪಡೆಯಿತು.
ಇವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಮತ್ತು ನಿರ್ದೇಶಕ ವಾದಿರಾಜ್ ಅವರ ಸಹೋದರಿ. ಪ್ರಸಿದ್ಧ ವಿಜ್ಞಾನಿ ಡಾ. ಯು. ಆರ್. ರಾವ್ ಇವರ ಪತಿಯಾಗಿದ್ದಾರೆ.