ಡಾ.ವಿಷ್ಣುವರ್ಧನ್
ಡಾ. ವಿಷ್ಣುವರ್ಧನ್ (ಜನನ: ಸೆಪ್ಟೆಂಬರ್ ೧೮ ೧೯೫೨ | ಮರಣ :ಡಿಸೆಂಬರ್ ೩೦ ೨೦೦೯) ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು.
ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು.
ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಇದುವರೆಗೆ ಒಟ್ಟು ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಮೊದಲ ಚಿತ್ರ ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ವಹಿಸಿದ್ದರು.
ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ ೧೯೭೨ ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು.
ಬೆಂಗಳೂರು ವಿಶ್ವವಿದ್ಯಾಲಯವು ೨೦೦೫ನೇ ವರ್ಷದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿದೆ.
ನಟನೆಯಲ್ಲದೇ,ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿ೦ಹ , ಜಿಮ್ಮಿಗಲ್ಲು, ಖೈದಿ ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆಗಾಯನವನ್ನೂ ಕೂಡ ಮಾಡಿದ್ದಾರೆ,ವಿಷ್ಣುವರ್ಧನ್ - ಸುಹಾಸಿನಿ ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಯಾಗಿ ಹೆಸರಾಗಿದೆ. ಹಾಗೆಯೇ ವಿಷ್ಣು ಅವರ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ನಟಿ ಆರತಿಗೆ ಅವರಿಗೆ ಸಲ್ಲುತ್ತದೆ.
ಬಂನ್ನಂಜೆ ಗೋವಿಂದಾಚಾರ್ಯಾರು ಇವರ ಆದ್ಯಾತ್ಮಿಕ ಗುರುವಾಗಿದ್ದರು,ಸಂಖ್ಯಾಭವಿಷ್ಯಶಾಸ್ತ್ರವನ್ನು ನಂಬುತ್ತಿದ್ದ ಇವರು ತಮ್ಮ ಕಾರಿನ ನಂಬರಾಗಿ ಮತ್ತು ಮೊಬೈಲ್ನ ನ ಕೊನೆಯ ಸಂಖ್ಯೆಯಾಗಿ "೩೨೧" ಬಳಸುತ್ತಿದ್ದರು."ನಮನ"
೧೯೮೦ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ ಶಂಕರ್ ನಾಗ್ ನಿರ್ದೇಶನದ ಜನಪ್ರಿಯ ಧಾರಾವಾಹಿ 'ಮಾಲ್ಗುಡಿ ಡೇಸ್'ನ ಕಂತೊಂದರಲ್ಲಿ (ರುಪೀಸ್ ಫಾರ್ಟಿ-ಫೈವ್ ಎ ಮಂತ್) ವಿಷ್ಣುವರ್ಧನ್ ನಟಿಸಿದ್ದರು.
ಪರಿವಿಡಿ |
ಬಾಲ್ಯ ಜೀವನ [ಬದಲಾಯಿಸಿ]
ಡಾ. ವಿಷ್ಣುವರ್ಧನ್ರವರು ಮೈಸೂರಿನಲ್ಲಿ ಹೆಚ್.ಎಲ್.ನಾರಾಯಣ ರಾವ್ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗಳಿಗೆ ಜನಿಸಿದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬ ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು. ಇವರಿಗೆ ೬ ಸಹೋದರ/ಸಹೋದರಿಯರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದುಕೊಂಡರು.
ಡಾ. ವಿಷ್ಣುವರ್ಧನ್ ಅಭಿನಯದ ಸಂಪೂಣ೯ ಚಿತ್ರಗಳು [ಬದಲಾಯಿಸಿ]
ಕನ್ನಡ [ಬದಲಾಯಿಸಿ]
ಹಿಂದಿ [ಬದಲಾಯಿಸಿ]
| ಸಂಖ್ಯೆ | ಚಿತ್ರದ ಹೆಸರು | |
|---|---|---|
| ೧ | ಏಕ್ ನಯಾ ಇತಿಹಾಸ್ | |
| ೨ | ಇನ್ಸ್ ಪೆಕ್ಟರ್ ಧನುಷ್ | |
| ೩ | ಖಾಖಿ ವರ್ಧಿ | |
| ೪ | ಜಾಲೀಮ್ |
ತಮಿಳು [ಬದಲಾಯಿಸಿ]
| ಸಂಖ್ಯೆ | ಚಿತ್ರದ ಹೆಸರು | |
|---|---|---|
| ೧ | ಮಳಲೈ ಪಟ್ಟಾಳಂ | |
| ೨ | ವಿಡುದಲೈ | |
| ೩ | ಅಲೈಗಳ್ | |
| ೪ | ಗುರು ರಾಘವೇಂದ್ರರ್ | |
| ೫ | ಮರುದ ನಾಯಗನ್ |
ತೆಲುಗು [ಬದಲಾಯಿಸಿ]
| ಸಂಖ್ಯೆ | ಚಿತ್ರದ ಹೆಸರು | |
|---|---|---|
| ೧ | ಸರ್ದಾರ್ ಧರ್ಮನ್ನ | |
| ೨ | ಲಕ್ಷ್ಮಿ ನಿರ್ದೋಷಿ | |
| ೩ | ಒಕ್ಕಡುಚಾಲು |
ಮಲಯಾಳಂ [ಬದಲಾಯಿಸಿ]
| ಸಂಖ್ಯೆ | ಚಿತ್ರದ ಹೆಸರು | |
|---|---|---|
| ೧ | ಅಡಿಮೈ ಚಂಗಲ | |
| ೨ | ಕೌರವರ್ | |
| 3 | ಈಟಿ |
ಹೊರಗಿನ ಕೊಂಡಿಗಳು [ಬದಲಾಯಿಸಿ]
- ವಿಷ್ಣುವರ್ಧನ್ ವೆಬ್ ಸೈಟ್
- ಚಿತ್ರಲೋಕದಲ್ಲಿ ವಿಷ್ಣುವರ್ಧನ್ ಬಗ್ಗೆ ಮಾಹಿತಿ
- ಕನ್ನಡದ ಮೇರು ನಟ ವಿಷ್ಣುವರ್ಧನ್ ಡಿಸೆಂಬರ್ ೩೦,೨೦೦೯ ರಂದು ದೈವಾದೀನರಾದರು
- ಗಿರೀಶ್ ಕಾಸರವಳ್ಳಿ ಅಂತಿಮ ನಮನ
|
|||||||