ವಿಷಯಕ್ಕೆ ಹೋಗು

ಅಂಬಿಕಾ (ಚಿತ್ರನಟಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಬಿಕಾ
ಜನನ06 ನವೆಂಬರ್, 1963
ಕಲ್ಲಾರ, ತಿರುವನಂತಪುರಮ್, ಕೇರಳ, ಭಾರತ
ವೃತ್ತಿನಟಿ
ಸಕ್ರಿಯ ವರ್ಷಗಳು1978-present
ಸಂಗಾತಿ(s)ಶಿನು ಜೋನ್(ವಿಚ್ಛೇದಿತ),ರವಿಕಾಂತ್
ಪೋಷಕ(ರು)ಎ.ಈ.ರಾಮ ಕುರುಪ್, ಎಮ್.ಕೆ.ಜಾನಕಿ.
ಸಂಬಂಧಿಕರುರಾಧಾ (ಸಹೋದರಿ)

ಅಂಬಿಕಾ (ಜನನ: ನವಂಬರ್ ೬ ೧೯೬೩) ಭಾರತದ ಒಬ್ಬ ಚಿತ್ರನಟಿ. ಅವರು ಹಲವಾರು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ೧೯೭೯ರ ಮಲಯಾಳಮ್ ಚಲನಚಿತ್ರ ಮಾಮಂಗಮ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೆಲವೇ ವರ್ಷಗಳಲ್ಲಿ ಅವರು, ಮಲಯಾಳಮ್ ಅಲ್ಲದೆ ತಮಿಳು ಮತ್ತು ಕನ್ನಡ ಚಿತ್ರರಂಗಗಳಲ್ಲೂ ಬಿಡುವಿಲ್ಲದ ನಟಿಯಾದರು.ಕನ್ನಡದಲ್ಲಿ ಅವರು ಡಾಕ್ಟರ್ ರಾಜ್ ಕುಮಾರ್ ಅವರ ಜೊತೆ ನಟಿಸಿದ ಚಿತ್ರ "ಚಲಿಸುವ ಮೋಡಗಳು" ಬಹಳ ಜನಪ್ರಿಯವಾಗಿತ್ತು.ಅಂಬರೀಶ್ ಅಂಬಿಕಾ ಕನ್ನಡ ಚಿತ್ರ ರಂಗದ ಯಶಸ್ವೀ ಜೋಡಿಗಳು, ಇವರಿಬ್ಬರ ನಟನೆಯ "ಚಳಿ ಚಳಿ" ಹಾಡು ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು. []

ವೈಯಕ್ತಿಕ ಜೀವನ

[ಬದಲಾಯಿಸಿ]

ಅಂಬಿಕಾ ೧೯೬೨ರಲ್ಲಿ ತಿರುವನಂತಪುರಮ್ ಜಿಲ್ಲೆಯಲ್ಲಿರುವ ಕಲ್ಲಾರ ಗ್ರಾಮದಲ್ಲಿ ಕುಂಜನ್ ನಾಯರ್ ಮತ್ತು ಸರಸಮ್ಮ ದಂಪತಿಗೆ ಜನಿಸಿದರು. ಅವರ ತಾಯಿ ಕಲ್ಲಾರ ಸರಸಮ್ಮ ೨೦೧೪ ರಲ್ಲಿ ಮಹಿಳಾ ಕಾಂಗ್ರೆಸ್ ನ ನಾಯಕಿರಾಗಿದ್ದರು. ಅವರಿಗೆ ಇಬ್ಬರು ಕಿರಿಯ ಸಹೋದರಿಯರು, ರಾಧಾ ಮತ್ತು ಮಲ್ಲಿಕಾ, ಮತ್ತು ಇಬ್ಬರು ಕಿರಿಯ ಸಹೋದರರಾದ ಅರ್ಜುನ್ ಮತ್ತು ಸುರೇಶ್ ಇದ್ದಾರೆ. ಅಂಬಿಕಾ ೧೯೮೮ ರಲ್ಲಿ ಎನ್‌ಆರ್‌ಐ ಪ್ರೇಮ್‌ಕುಮಾರ್ ಮೆನನ್‌ರನ್ನು ವಿವಾಹವಾದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಮತ್ತು ಅಮೆರಿಕದಲ್ಲಿ ನೆಲೆಸಿದರು. ಅವರು ೧೯೯೭ ರಲ್ಲಿ ವಿಚ್ಛೇದನೆ ಪಡೆದ ನಂತರ ಅವರು ೨೦೦೦ ರಲ್ಲಿ ನಟ ರವಿಕಾಂತ್ ಅವರನ್ನು ವಿವಾಹವಾದರು,[] []ಆದರೆ ಅವರು ೨೦೦೨ ರಲ್ಲಿ ವಿಚ್ಛೇದನೆ ಪಡೆದರು. ಪ್ರಸ್ತುತ ಅವರು ತಮ್ಮ ಪುತ್ರರೊಂದಿಗೆ ಚೆನ್ನೈನಲ್ಲಿ ನೆಲೆಸಿದ್ದಾರೆ.[]

ಅಂಬಿಕಾ ಅಭಿನಯದ ಕೆಲವು ಚಿತ್ರಗಳು

[ಬದಲಾಯಿಸಿ]

ಕನ್ನಡ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೧ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆ ಹುಣಸೂರು ಕೃಷ್ಣಮೂರ್ತಿ ಲೋಕೇಶ್
೧೯೮೨ ಗರುಡರೇಖೆ ಪಿ.ಎಸ್.ಪ್ರಕಾಶ್ ಶ್ರೀನಾಥ್, ಮಾಧವಿ
೧೯೮೨ ಚಲಿಸುವ ಮೋಡಗಳು[] ಸಿಂಗೀತಂ ಶ್ರೀನಿವಾಸ ರಾವ್ ಡಾ.ರಾಜ್ ಕುಮಾರ್, ಸರಿತಾ
೧೯೮೩ ಅವಳ ನೆರಳು ಎ. ಟಿ. ರಘು ಅಂಬರೀಶ್
೧೯೮೩ ಎರಡು ನಕ್ಷತ್ರಗಳು ಸಿಂಗೀತಂ ಶ್ರೀನಿವಾಸ ರಾವ್ ಡಾ.ರಾಜ್ ಕುಮಾರ್
೧೯೮೩ ಗಾಯತ್ರಿ ಮದುವೆ ಬಿ.ಮಲ್ಲೇಶ್ ಅನಂತ್ ನಾಗ್, ರೂಪಾದೇವಿ
೧೯೮೩ ಚಕ್ರವ್ಯೂಹ [] ವಿ.ಸೋಮಶೇಖರ್ ಅಂಬರೀಶ್
೧೯೮೩ ಭಕ್ತ ಪ್ರಹ್ಲಾದ ವಿಜಯ್ ಡಾ.ರಾಜ್ ಕುಮಾರ್, ಸರಿತಾ
೧೯೮೪ ಅಪೂರ್ವ ಸಂಗಮ ವೈ.ಆರ್.ಸ್ವಾಮಿ ಡಾ.ರಾಜ್ ಕುಮಾರ್, ಶಂಕರ್ ನಾಗ್
೧೯೮೪ ಇಂದಿನ ಭಾರತ[] ಟಿ.ಕೃಷ್ಣ ಶಂಕರ್ ನಾಗ್
೧೯೮೪ ಒಂದೇ ರಕ್ತ [] ಶ್ರೀಕುಮಾರನ್ ತಂಬಿ ಅಂಬರೀಶ್
೧೯೮೪ ನಾನೇ ರಾಜ ವಿ.ರವಿಚಂದ್ರನ್
೧೯೮೪ ಪ್ರಳಯಾಂತಕ ಅತಿಥಿ ನಟಿ ಬಿ.ಸುಬ್ಬರಾವ್ ವಿ.ರವಿಚಂದ್ರನ್, ಭವ್ಯಾ
೧೯೮೪ ಮೂರು ಜನ್ಮ ಭಾರ್ಗವ ಅಂಬರೀಶ್
೧೯೮೫ ಚದುರಂಗ ಅಂಬರೀಶ್
೧೯೮೬ ಅಸಂಭವ ಡಿ.ರಾಜೇಂದ್ರ ಬಾಬು ವಿ.ರವಿಚಂದ್ರನ್
೧೯೮೬ ಬೇಟೆ ವಿ.ಸೋಮಶೇಖರ್ ಅಂಬರೀಶ್
೧೯೮೬ ಸತ್ಕಾರ ರೇಣುಕಾ ಶರ್ಮ ಅಂಬರೀಶ್
೧೯೮೭ ಅತಿರಥ ಮಹಾರಥ ಪೇರಾಲ ಅನಂತ್ ನಾಗ್, ಟೈಗರ್ ಪ್ರಭಾಕರ್
೧೯೮೭ ಆಪದ್ಭಾಂಧವ ಎ.ಟಿ.ರಘು ಅಂಬರೀಶ್
೧೯೮೭ ಜೀವನ ಜ್ಯೋತಿ ಪಿ.ವಾಸು ವಿಷ್ಣುವರ್ಧನ್, ನಳಿನಿ
೧೯೮೭ ದಿಗ್ವಿಜಯ ಸೋಮು ಅಂಬರೀಶ್, ಶ್ರೀನಾಥ್, ಶಂಕರ್ ನಾಗ್, ರಾಧ
೧೯೮೭ ನ್ಯಾಯಕ್ಕೆ ಶಿಕ್ಷೆ ಪಿ.ಶ್ರೀನಿವಾಸ್ ಭಾರತಿ, ಚರಣ್ ರಾಜ್, ಶ್ರೀಧರ್
೧೯೮೭ ಪೂರ್ಣಚಂದ್ರ ಸಿ.ವಿ.ರಾಜೇಂದ್ರನ್ ಅಂಬರೀಶ್, ರೇಖಾ
೧೯೮೭ ಬಜಾರ್ ಭೀಮ ಪೇರಾಲ ಅಂಬರೀಶ್, ಗೀತಾ
೧೯೮೭ ಶುಭಮಿಲನ ಭಾರ್ಗವ ವಿಷ್ಣುವರ್ಧನ್
೧೯೮೮ ಕಿರಾತಕ ವಿ.ಸೋಮಶೇಖರ್ ಟೈಗರ್ ಪ್ರಭಾಕರ್
೧೯೮೮ ಧರ್ಮಾತ್ಮ ಎ.ಜಗನ್ನಾಥನ್ ಶಂಕರ್ ನಾಗ್, ಟೈಗರ್ ಪ್ರಭಾಕರ್
೧೯೮೮ ವಿಜಯ ಖಡ್ಗ ವಿ.ಸೋಮಶೇಖರ್ ಅಂಬರೀಶ್, ಶ್ರೀನಾಥ್
೧೯೮೯ ಹಾಂಗ್‍ಕಾಂಗ್‍ನಲ್ಲಿ ಏಜೆಂಟ್ ಅಮರ್ ಜೋಸೈಮನ್ ಅಂಬರೀಶ್
೧೯೯೭ ಸಿಂಹದ ಮರಿ ಓಂಪ್ರಕಾಶ್ ರಾವ್ ಶಿವರಾಜ್ ಕುಮಾರ್, ಕೃಷ್ಣಂ ರಾಜು
೧೯೯೯ ಜನುಮದಾತ ಟಿ.ಎಸ್.ನಾಗಾಭರಣ ಶಿವರಾಜ್ ಕುಮಾರ್, ಶರತ್ ಬಾಬು
೨೦೦೦ ಸುಲ್ತಾನ್ ಕುಮಾರ್ ಜಗ್ಗೇಶ್


ಉಲ್ಲೇಖಗಳು

[ಬದಲಾಯಿಸಿ]
  1. http://chiloka.com/celebrity/ambika
  2. "Ambika (Actress) Biography, Age, Husband, Height, Net Worth, Height, Interview". InformationCradle. 25 June 2019. Archived from the original on 20 ಮಾರ್ಚ್ 2020. Retrieved 20 March 2020.
  3. "Ambika - Malayalam actors who have married more than once". The Times of India. Retrieved 20 March 2020.
  4. "Ambika (actress): Indian actress - Biography and Life". peoplepill.com. Retrieved 20 March 2020.
  5. https://www.youtube.com/watch?v=sG5_BZv7n2k
  6. "ಆರ್ಕೈವ್ ನಕಲು". Archived from the original on 2020-03-20. Retrieved 2020-03-20.
  7. https://kannadamoviesinfo.wordpress.com/2013/06/21/indina-bharatha-1984/
  8. https://www.youtube.com/watch?v=MfoKQKG32c8