ಸಿಕ್ಕಿಲ್ ಮಾಲಾ ಚಂದ್ರಶೇಖರ್
ಸಿಕ್ಕಿಲ್ ಮಾಲಾ ಚಂದ್ರಶೇಖರ್ | |
---|---|
ಹಿನ್ನೆಲೆ ಮಾಹಿತಿ | |
ಜನನ | ೨೩ನೇ ಆಗಸ್ಟ್ ೧೯೬೩ |
ಸಿಕ್ಕಿಲ್ ಮಾಲಾ ಚಂದ್ರಶೇಖರ್‌ರವರು ದಕ್ಷಿಣ ಭಾರತದ ಕೊಳಲು ವಾದಕರು.ಮಾಲಾ ಚಂದ್ರಶೇಖರ್ ಸಂಗೀತ ಕುಟುಂಬದಲ್ಲಿ ಜನಿಸಿದರು. ಇವರು ತಮ್ಮ ತಾಯಿ ಮತ್ತು ಚಿಕ್ಕಮ್ಮರವರಿಂದ ಸಂಗೀತವನ್ನು ಕಲಿತರು. ಇವರ ತಾಯಿ ಮತ್ತು ಚಿಕ್ಕಮ್ಮ ಸಿಕ್ಕಿಲ್ ಸಹೋದರಿಯರೆಂದು ಬಿರುದು ಪಡೆದಿದ್ದಾರೆ.[೧]
ಜನನ
[ಬದಲಾಯಿಸಿ]ಇವರು ೨೩ನೇ ಆಗಸ್ಟ್ ೧೯೬೩ ರಂದು ಹೆಸರಾಂತ ಸಂಗೀತ ಕುಟುಂಬದಲ್ಲಿ ಜನಿಸಿದರು.
ಆರಂಭಿಕ ಜೀವನ
[ಬದಲಾಯಿಸಿ]ಇವರು ತಮ್ಮ ಐದನೇ ವಯಸ್ಸಿನಲ್ಲಿ ಸಂಗೀತವನ್ನು ಗುರುಗಳಾದ ಪದ್ಮಶ್ರೀ ಸಂಗೀತ ಕಲಾನಿಧಿ ಶ್ರೀಮತಿ ಸಿಕ್ಕಿಲ್ ನೀಲಾ (ತಾಯಿ) ಮತ್ತು ಶ್ರೀಮತಿ ಸಿಕ್ಕಿಲ್ ಕುಂಜುಮಣಿ (ಚಿಕ್ಕಮ್ಮ) ರವರ ಬಳಿ ಕಲಿತರು.
ನಂತರ ೧೫ ವರ್ಷವಾಗುವವರೆಗೂ ಸಂಗೀತ ಅಭ್ಯಾಸವನ್ನು ಮಾಡಿ ತಮ್ಮ ರಂಗ ಪ್ರವೇಶಕ್ಕೆ ತಯಾರಾದರು[೨]. ಇದಾದ ನಂತರ ಮಾಲಾರವರು ಭಾರತೀಯ ಆಕಾಶವಾಣಿಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ೧೯೮೦ರಲ್ಲಿ ದೂರದರ್ಶನದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆರಂಭಿಸಿದ್ದರು.
ವಿದ್ಯಾಭ್ಯಾಸ
[ಬದಲಾಯಿಸಿ]ಇವರು ಚೆನ್ನೈನ ರೋಸರಿ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಅಧ್ಯಯನ ಮಾಡಿದರು. ಮಾಲಾರವರು ಏಳನೇ ತರಗತಿಗೆ ಬರುವವರೆಗೂ ಕೊಳಲು ನುಡಿಸುತ್ತಾರೆ ಎಂದು ಯಾರಿಗೂ ತಿಳಿದಿರಲಿಲ್ಲ. ಇವರು ಶಾಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ಇವರ ಶಾಲಾ ಶಿಕ್ಷಕರು ಈ ವಿಚಾರವನ್ನು ಗಣನೀಯವಾಗಿ ಪರಿಗಣೀಸಿದ್ದರು. ಮಾಲಾರವರು ನಂತರದ ದಿನಗಳಲ್ಲಿ ಶಾಲಾ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದರು. ಶಾಲೆಯಲ್ಲಿ ಮಾಲಾರವರ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಜೀವಶಾಸ್ತ್ರವಾಗಿತ್ತು. ಇದು ಮುಂದೆ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ಸಸ್ಯಶಾಸ್ತ್ರವನ್ನು ತೆಗೆದುಕೊಳ್ಳಲು ಪ್ರೋತ್ಸಾಹವನ್ನು ನೀಡಿತು. ಇವರ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಇದರ ಪರಿಣಾಮವಾಗಿ, ಸಂಗೀತದ ಬಗ್ಗೆ ಅವರಿಗೆ ಆಸಕ್ತಿ ಮುಡಿತು ಮತ್ತು ಸಂಗೀತ ವೃತ್ತಿಜೀವನವನ್ನು ಮುಂದುವರಿಸಲು ಅವರಿಗೆ ಹೆಚ್ಚಿನ ವಿಶ್ವಾಸವನ್ನು ನೀಡಿತು. ಅದೇ ಅವಧಿಯಲ್ಲಿ, ಅವರು ಚೆನ್ನೈ ಮತ್ತು ಹೊರಗಿನ ಸಭೆಗಳಲ್ಲಿ ಸಂಗೀತ ಕಚೇರಿಗಳನ್ನು ನೀಡಲು ಪ್ರಾರಂಭಿಸಿದರು. ಪದವಿಯ ನಂತರ, ಅವರು ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಾಗಿ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು.
ಪ್ರಶಸ್ತಿ
[ಬದಲಾಯಿಸಿ]- ೨೦೦೬ರ, ಬಾಂಬೆ ಷಣ್ಮುಖಾನಂದ ಸಂಗೀತ ಸಭೆಯಲ್ಲಿ ಷಣ್ಮುಖ ಸಂಗೀತ ಶಿರೋಮಣಿ ಬಿರುದು ದೊರೆತಿದೆ.
- ೨೦೦೩ರ ಅಕ್ಟೋಬರ್‌ನಲ್ಲಿ ದುಬೈ ತಮಿಳು ಕುಟುಂಬದಿಂದ , ದುಬೈನಲ್ಲಿ ವೇಣುಗಾನ ಶಿರೋಮಣಿ ಬಿರುದು ದೊರೆತಿದೆ.
- ೨೦೦೦ರಲ್ಲಿ ಕಾರ್ತಿಕ ಫೈನ್ ಆರ್ಟ್‌ನಿಂದ ಇಸಾಯ್ ಪೆರೋಲಿ ಎಂಬ ಬಿರುದನ್ನು ವೈಜಯಂತಿ ಮಾಲಾರವರಿಂದ ಪಡೆದಿದ್ದಾರೆ.
- ೨೦೦೧ರಲ್ಲಿ ಹಿರಿಯ ಕೊಳಲು ವಾದಕರಾಗಿ ಸಂಗೀತ ಅಕಾದೆಮಿಯ ಎಂಡಿ ರಾಮನಾಥನ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ https://www.flutemala.com/family.php[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on 2020-01-12. Retrieved 2020-01-12.