ವಿಷಯಕ್ಕೆ ಹೋಗು

ದಿಕ್ಪಾಲಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ರಹ್ಮ ಮತ್ತು ನಾಲ್ಕು ಪ್ರಮುಖ ದಿಕ್ಕುಗಳ ದಿಕ್ಪಾಲಕರು

ಹಿಂದೂ ಪುರಾಣಗಳ ಪ್ರಕಾರ ಪ್ರತಿಯೊಂದು ದಿಕ್ಕಿಗೂ ಒಬ್ಬ ಅಧಿಪತಿಯಿದ್ದಾರೆ. ಅವರನ್ನು ದಿಕ್ಪಾಲಕರೆಂದು ಕರೆಯುತ್ತಾರೆ. ಎಂಟು ದಿಕ್ಕುಗಳ ಅಧಿಪತಿಗಳನ್ನು ಒಟ್ಟಾಗಿ ಅಷ್ಟದಿಕ್ಪಾಲಕರೆಂದು ಕರೆಯುತ್ತಾರೆ. ಜೊತೆಗೆ ಮೇಲೆ ಮತ್ತು ಕೆಳಗೆ - ಇವೆರಡನ್ನು ಸೇರಿಸಿ ದಶದಿಕ್ಪಾಲಕರೆಂದೂ ಹೇಳುವುದುಂಟು.

ದಿಕ್ಪಾಲಕರು

[ಬದಲಾಯಿಸಿ]
ಹೆಸರು ದಿಕ್ಕು ಮಂತ್ರ ಆಯುಧ ಒಡನಾಡಿ ಗ್ರಹ ವಾಹನ
ಕುಬೇರ ಉತ್ತರ ಓಂ ಶಂ ಕುಬೇರಾಯ ನಮಃ ಗದೆ ಕೌಬೇರಿ ಚಂದ್ರ ಆನೆ
ಯಮ ದಕ್ಷಿಣ ಓಂ ಮಂ ಯಮಾಯ ನಮಃ ದಂಡ ಯಮಿ ಬೃಹಸ್ಪತಿ ಕೋಣ
ಇಂದ್ರ ಪೂರ್ವ ಓಂ ಲಂ ಇಂದ್ರಾಯ ನಮಃ ವಜ್ರಾಯುಧ ಶಚಿ ಸೂರ್ಯ ಐರಾವತ
ವರುಣ ಪಶ್ಚಿಮ ಓಂ ವಂ ವರುಣಾಯ ನಮಃ ಪಾಶ ವರುಣಿ ಶುಕ್ರ ಮೊಸಳೆ
ಈಶಾನ ಈಶಾನ್ಯ ಓಂ ಹಂ ಈಶಾನಾಯ ನಮಃ ತ್ರಿಶೂಲ ಪಾರ್ವತಿ ರಾಹು ನಂದಿ
ಅಗ್ನಿ ಆಗ್ನೇಯ ಓಂ ರಂ ಅಗ್ನಯೇ ನಮಃ ಶಕ್ತಿ ಸ್ವಾಹ ಮಂಗಳ ಟಗರು
ವಾಯು ವಾಯುವ್ಯ ಓಂ ಯಂ ವಾಯವೇ ನಮಃ ಅಂಕುಶ ಭಾರತೀ ದೇವಿ ಶನಿ ಸಾರಂಗ
ನಿರೃತಿ ನೈರೃತ್ಯ ಓಂ ಕ್ಷಂ ರಕ್ಷಸಾಯ ನಮಃ ಖಡ್ಗ ಖಡ್ಗಿ ಬುಧ ಮನುಷ್ಯ
ವಿಷ್ಣು ಊರ್ಧ್ವ ಓಂ ಅಂ ಅನಂತಾಯ ನಮಃ ಚಕ್ರಾಯುಧ ಲಕ್ಷ್ಮಿ ಲಗ್ನ ಗರುಡ
ಬ್ರಹ್ಮ ಅಧಃ ಓಂ ಹ್ರೀಂ ಬ್ರಹ್ಮಣೇ ನಮಃ ಪದ್ಮ ಸರಸ್ವತಿ ಕೇತು ಹಂಸ