ಗದೆ
ಗೋಚರ
ಗದೆಯು ಭಾರತೀಯ ಉಪಖಂಡದ ಒಂದು ದೊಣ್ಣೆ ಅಥವಾ ಮೊಂಡಾಗಿರುವ ದಂಡ. ಕಟ್ಟಿಗೆ ಅಥವಾ ಲೋಹದಿಂದ ತಯಾರಾಗುವ ಇದು, ಮೂಲಭೂತವಾಗಿ ಒಂದು ಹಿಡಿಕೆಯ ಮೇಲೆ ಕೂಡಿಸಲಾದ ಗೋಳಾಕಾರದ ಶಿರವನ್ನು ಹೊಂದಿದ್ದು, ಮೇಲಕ್ಕೆ ಮೇಕನ್ನು ಹೊಂದಿರುತ್ತದೆ. ಭಾರತದ ಹೊರಗೆ, ಗದೆಯನ್ನು ಆಗ್ನೇಯ ಏಷ್ಯಾದಲ್ಲಿ ಕೂಡ ಅಳವಡಿಸಿಕೊಳ್ಳಲಾಯಿತು. ಇಲ್ಲಿ ಈಗಲೂ ಇದನ್ನು ಸಿಲ್ಲಟ್‍ನಲ್ಲಿ ಬಳಸಲಾಗುತ್ತದೆ.
ಗದೆಯು ಹಿಂದೂ ದೇವತೆಯಾದ ಹನುಮಂತನ ಮುಖ್ಯ ಆಯುಧವಾಗಿದೆ. ತನ್ನ ಶಕ್ತಿಗೆ ಪರಿಚಿತನಾಗಿರುವ ಹನುಮಂತನನ್ನು ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಸಾಂಪ್ರದಾಯಿಕವಾಗಿ ಕುಸ್ತಿಪಟುಗಳು ಆರಾಧಿಸುತ್ತಾರೆ. ವಿಷ್ಣು ಕೂಡ ತನ್ನ ನಾಲ್ಕು ಕೈಗಳ ಪೈಕಿ ಒಂದರಲ್ಲಿ ಕೌಮೋದಕಿ ಎಂಬ ಗದೆಯನ್ನು ಹೊರುತ್ತಾನೆ. ಮಹಾಭಾರತ ಮಹಾಕಾವ್ಯದಲ್ಲಿ, ಭೀಮಸೇನ, ದುರ್ಯೋಧನ, ಜರಾಸಂಧ ಮತ್ತು ಇತರ ಯೋಧರು ಗದಾನಿಪುಣರು ಎಂದು ಹೇಳಲಾಗಿದೆ.