ವಿಷಯಕ್ಕೆ ಹೋಗು

ದಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಂಡ ಅಥವಾ ಅರ್ಥದಂಡ ಒಂದು ಅಪರಾಧ ಅಥವಾ ಇತರ ಕಾನೂನುಬಾಹಿರಕಾರ್ಯಕ್ಕಾಗಿ ಒಂದು ನ್ಯಾಯಾಲಯ ಅಥವಾ ಇತರ ಪ್ರಾಧಿಕಾರವು ನಿರ್ಧರಿಸಿದ, ಶಿಕ್ಷೆಯಾಗಿ ಪಾವತಿಸಬೇಕಾದ ಹಣ. ದಂಡದ ಮೊತ್ತವನ್ನು ಪ್ರಕರಣ ಆಧರಿಸಿ ನಿರ್ಧರಿಸಲಾಗುತ್ತದೆ, ಆದರೆ ಅದನ್ನು ಹಲವುವೇಳೆ ಮುಂಚಿತವಾಗಿ ಘೋಷಿಸಲಾಗುತ್ತದೆ.[೧]

ಈ ಪದದ ಅತ್ಯಂತ ಸಾಮಾನ್ಯ ಬಳಕೆಯು ಅಪರಾಧವೆಸಗಿದ್ದಕ್ಕೆ, ವಿಶೇಷವಾಗಿ ಸಣ್ಣ ಅಪರಾಧವೆಸಗಿದ್ದಕ್ಕೆ, ಅಥವಾ ಹಕ್ಕಿನ ಪಾವತಿಗೆ ಮಾಡುವ ಹಣಕಾಸಿನ ಶಿಕ್ಷೆಗಳಿಗಾಗಿ ಆಗುತ್ತದೆ. ನಾಗರಿಕ ಕಾನೂನು ಕ್ರಿಯೆಗಳಲ್ಲಿ ಸಾಮಾನ್ಯವಾಗಿ ಬಳಸಲಾದ ಒಂದು ಸಮಾನಾರ್ಥಕ ಪದವೆಂದರೆ ಅರ್ಥದಂಡ.

ದಂಡದ ಒಂದು ಸಾಮಾನ್ಯ ಉದಾಹರಣೆಯೆಂದರೆ ಸಂಚಾರ ಕಾನೂನುಗಳ ಉಲ್ಲಂಘನೆಗಳಿಗಾಗಿ ಪಾವತಿಸಲಾದ ಹಣ. ಆಂಗ್ಲ ಸಾಮಾನ್ಯ ಕಾನೂನಿನಲ್ಲಿ ಪ್ರಸ್ತುತ, ಕೆಳಮಟ್ಟದ ದಂಡನೀಯ ಅಪರಾಧಗಳಿಗೆ ತುಲನಾತ್ಮಕವಾಗಿ ಸಣ್ಣ ದಂಡಗಳನ್ನು ಸ್ಥಳದಲ್ಲೇ ಅಥವಾ ಸಮುದಾಯ ಸೇವಾ ಆದೇಶಗಳ ಜೊತೆಗೆ ಬಳಸಲಾಗುತ್ತದೆ. ಹೆಚ್ಚು ದೊಡ್ಡ ದಂಡಗಳನ್ನೂ ಸ್ವತಂತ್ರವಾಗಿ ಅಥವಾ ಅಲ್ಪಾವಧಿಯ ಜೈಲು ಶಿಕ್ಷೆಯ ಜೊತೆಗೆ ನೀಡಲಾಗುತ್ತದೆ. ಇದನ್ನು ನ್ಯಾಯಾಧೀಶರು ಅಥವಾ ಮ್ಯಾಜಿಸ್ಟ್ರೇಟ್ ಗಣನೀಯ ಪ್ರಮಾಣದ ಶಿಕ್ಷೆ ಅವಶ್ಯವೆಂದು ಪರಿಗಣಿಸಿದಾಗ, ಆದರೆ ಸಾರ್ವಜನಿಕರಿಗೆ ಗಮನಾರ್ಹವಾದ ಅಪಾಯ ಅಸಂಭವವೆಂದು ಪರಿಗಣಿಸಲಾದಾಗ ನೀಡಲಾಗುತ್ತದೆ.[೨] ಉದಾಹರಣೆಗೆ, ವಂಚನೆಯನ್ನು ಹಲವುವೇಳೆ ದೊಡ್ಡ ದಂಡಗಳಿಂದ ಶಿಕ್ಷಿಸಲಾಗುತ್ತದೆ ಏಕೆಂದರೆ ವಂಚಕರು ತಮ್ಮ ಅಪರಾಧಗಳನ್ನು ಎಸಗಲು ತಪ್ಪುಬಳಕೆ ಮಾಡಿಕೊಂಡ ಸ್ಥಾನ ಅಥವಾ ವೃತ್ತಿಯಿಂದ ಸಾಮಾನ್ಯವಾಗಿ ಪ್ರತಿಬಂಧಿಸಲ್ಪಟ್ಟಿರುತ್ತಾರೆ.

ದಂಡಗಳನ್ನು ತೆರಿಗೆಯ ಒಂದು ರೂಪವಾಗಿಯೂ ಬಳಸಬಹುದು. ಜಾಮೀನಿಗಾಗಿ ಬಳಸಿದ ಹಣವನ್ನು ದಂಡದ ಕಡೆಗೆ ಅನ್ವಯಿಸಬಹುದು.

ಕೆಲವು ದಂಡಗಳು ಸಣ್ಣದಾಗಿರುತ್ತವೆ, ಉದಾ. ಅಲೆದಾಡಿ ಕಾಲಕಳೆಯುವುದಕ್ಕೆ ದಂಡಗಳು ಸುಮಾರು $25 ರಿಂದ $100 ವರೆಗೆ ಇರುತ್ತವೆ. ಅಮೇರಿಕಾದ ಕೆಲವು ಪ್ರದೇಶಗಳಲ್ಲಿ (ಉದಾ. ಕ್ಯಾಲಿಫ಼ೋರ್ನಿಯಾ, ನ್ಯೂ ಯಾರ್ಕ್, ಟೆಕ್ಸಸ್ ಮತ್ತು ವಾಷಿಂಗ್ಟನ್ ಡಿ.ಸಿ.) ಆಪರಾಧಿಕ ಕಿಡಿಗೇಡಿತನದಂತಹ (ಸಾರ್ವಜನಿಕ ಸ್ಥಳಗಳಲ್ಲಿ ಕೂಗುವುದು, ಪೋಲಿಸ್ ಕಾರ್‍ನತ್ತ ವಸ್ತು ಎಸೆಯುವುದು) ಸಣ್ಣ ಅಪರಾಧಗಳಿಗೆ ದಂಡಗಳು $2500 ರಿಂದ $5000 ವರೆಗೆ ಇರುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Bray, Samuel (2012). "Announcing Remedies". Cornell Law Review. 97. SSRN 1967184.
  2. "Alabama Criminal Lawyer | Criminal Defense | Polson & Polson, P.C." Alabama Criminal Lawyer | DUI Defense Attorney | Polson & Polson (in ಅಮೆರಿಕನ್ ಇಂಗ್ಲಿಷ್). Retrieved 2017-01-05.
"https://kn.wikipedia.org/w/index.php?title=ದಂಡ&oldid=1033262" ಇಂದ ಪಡೆಯಲ್ಪಟ್ಟಿದೆ