ತ
ಗೋಚರ
|
ತ, ಕನ್ನಡ ವರ್ಣಮಾಲೆಯ ವರ್ಗೀಯ ವ್ಯಂಜನ ಶ್ರೇಣಿಯಲ್ಲಿ ತ-ವರ್ಗದ ಮೊದಲನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.ಅಲ್ಪಪ್ರಾಣ.
ಚಾರಿತ್ರಿಕ ಹಿನ್ನೆಲೆ
[ಬದಲಾಯಿಸಿ]ಅಶೋಕನ ಕಾಲದಲ್ಲಿ ಎರಡು ಸರಳರೇಖೆಗಳಿಂದ ಕೂಡಿದ ಈ ಅಕ್ಷರ ಕ್ರಿ. ಶ. ಎರಡನೆಯ ಶತಮಾನದಲ್ಲಿ ಅಗಲವಾಗಿಯೂ ದುಂಡಾಗಿಯೂ ಪರಿವರ್ತನೆ ಹೊಂದುತ್ತದೆ. ಕದಂಬ ಕಾಲದಲ್ಲಿ ಬಲಭಾಗದ ರೇಖೆ ಸ್ವಲ್ಪ ಎಡಗಡೆಗೆ ಬಾಗುತ್ತದೆ. ಒಂಭತ್ತನೆಯ ಶತಮಾನದಲ್ಲಿ, ಈ ಬಾಗಿದ ರೇಖೆ ಇನ್ನೂ ಉದ್ದವಾಗಿ ದುಂಡಾಗುತ್ತದೆ. ಹದಿಮೂರನೆಯ ಶತಮಾನದ ಶಾಸನಗಳಲ್ಲಿ ಇದೇ ಪ್ರವೃತ್ತಿ ಮುಂದುವರಿಯುತ್ತದೆ. ಈ ರೂಪ ವಿಶೇಷ ಬದಲಾವಣೆಯಿಲ್ಲದೆ ವಿಜಯನಗರ ಮತ್ತು ಅದರ ಮುಂದಿನ ಕಾಲಗಳಲ್ಲಿ ಉಳಿಯುತ್ತದೆ. ಈ ಅಕ್ಷರದಂತ್ಯ ಅಘೋಷ ಸ್ಪರ್ಶ ಧ್ವನಿಯನ್ನು ಸೂಚಿಸುತ್ತದೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: