ಜ್ಯೋತಿಕಾ (ನಟಿ)
ಜ್ಯೋತಿಕಾ | |
---|---|
ಜನನ | ಜ್ಯೋತಿಕಾ ಸರಾವಣನ್ ೧೮-೧೦-೧೯೭೭ |
ವೃತ್ತಿ | ಬಹುಭಾಷಾ ನಟಿ |
ಸಂಗಾತಿ | ಸೂರ್ಯ |
ಮಕ್ಕಳು | ಮಗಳು ದಿಯಾ ಮತ್ತು ಮಗ ದೇವ್ |
ತಮಿಳು ಚಲನಚಿತ್ರಗಳಲ್ಲಿ ಪ್ರಧಾನವಾಗಿ ನಟಿಸುವ ಭಾರತೀಯ ನಟಿ. ಅವರು ಕೆಲವು ಕನ್ನಡ, ಮಲಯಾಳಂ, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇವರನ್ನು ಜ್ಯೋತಿಕಾ ಸರಾವಣನ್ ಎಂದು ಕೆಲವರು ಕರೆಯುತ್ತಾರೆ.
ಜನನ
[ಬದಲಾಯಿಸಿ]ಇವರು ೧೮ನೇ ಅಕ್ಟೋಬರ್ ೧೯೭೭ರಂದು ಜನಿಸಿದರು.[೧]
ಆರಂಭಿಕ ಜೀವನ
[ಬದಲಾಯಿಸಿ]ಜ್ಯೋತಿಕಾರ ತಂದೆ ಪಂಜಾಬಿ ಮತ್ತು ತಾಯಿ ಮಹರಾಷ್ಟ್ರದವರು. ಇವರ ತಂದೆ ಚಂದರ್ ಸದನಾಹ್ ಮತ್ತು ತಾಯಿ ಸೀಮಾ ಸದನಾಹ್. ಚಂದರ ಸದನಾಹ್ ರವರು ಚಲನಚಿತ್ರ ನಿರ್ಮಾಪಕರು.
ವಿದ್ಯಾಭ್ಯಾಸ
[ಬದಲಾಯಿಸಿ]ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಂಬೈನ ಲರ್ನರ್ಸ್ ಅಕಾದೆಮಿಯಲ್ಲಿ ಪೂರ್ಣಗೊಳಿಸಿದರು.
ವಯಕ್ತಿಕ ಜೀವನ
[ಬದಲಾಯಿಸಿ]11 ಸೆಪ್ಟೆಂಬರ್ 2006 ರಂದು ಜ್ಯೋತಿಕಾ ನಟ ಸೂರ್ಯನನ್ನು ಮದುವೆಯಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ದಿಯಾ ಮತ್ತು ಮಗ ದೇವ್.[೨]
೧೯೯೮ ರಿಂದ ೨೦೦೨
[ಬದಲಾಯಿಸಿ]ವೃತ್ತಿ ಜೀವನ
[ಬದಲಾಯಿಸಿ]ಅವರ ಮೊದಲ ತಮಿಳು ಚಿತ್ರ ವಾಲಿ, ಮತ್ತು ತೆಲುಗಿನಲ್ಲಿ ಚಿರಂಜೀವಿಗೆ ನಾಯಕಿಯಾಗಿ ಟ್ಯಾಗೊರ್ ನಲ್ಲಿ ನಟಿಸಿದರು. ಕನ್ನಡದಲ್ಲಿ ಉಪೇಂದ್ರರಿಗೆ ನಾಯಕಿಯಾಗಿ ದ್ವಿಪಾತ್ರದಲ್ಲಿ ನಾಗರಹಾವು(೨೦೦೨) ಚಿತ್ರದಲ್ಲಿ ನಟಿಸಿದ್ದಾರೆ.
ಚಲನಚಿತ್ರಗಳು
[ಬದಲಾಯಿಸಿ]ಕಿರುಚಿತ್ರಗಳು
[ಬದಲಾಯಿಸಿ]ಜ್ಯೋತಿಕಾರವರು ನಟಿಸಿದ ಕಿರುಚಿತ್ರಗಳು ಇಂತಿವೆ,
ವರ್ಷ | ಚಲನಚಿತ್ರ | ಪಾತ್ರ | ಭಾಷೆ |
---|---|---|---|
೨೦೦೬ | ನಿಮಿಷಂ | ನಿಮಿಷ | ಮಲಯಾಳಂ |
೨೦೦೮ | ಹೀರೋವಾ?ಜೀರೋವಾ? | ತಮಿಳು | |
೨೦೧೭ | ಮನಧಾಲ್ ಇನೈವೊಮ್, ಮಾತ್ರಥೈ ವರವರ್ಪ್ಪೋಮ್ | ಜೋ | ತಮಿಳು |
ಪ್ರಶಸ್ತಿಗಳು
[ಬದಲಾಯಿಸಿ]ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು
[ಬದಲಾಯಿಸಿ]ವರ್ಷ | ಪ್ರಶಸ್ತಿ | ಚಲನಚಿತ್ರ |
---|---|---|
೨೦೦೪ | ಅತ್ಯುತ್ತಮ ನಟಿ | ಪೆರಾಜ್ಹಾಗನ್ |
೨೦೦೫ | ಅತ್ಯುತ್ತಮ ನಟಿ | ಚಂದ್ರಮುಖಿ |
೨೦೦೭ | ಅತ್ಯುತ್ತಮ ನಟಿ | ಮೋಜಿ |
ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿ
[ಬದಲಾಯಿಸಿ]೨೦೦೫ರಲ್ಲಿ ಚಂದ್ರಮುಖಿ ಚಲನಚಿತ್ರಕ್ಕೆ ಅತ್ಯುತ್ತಮ ನಟಿ ಎಂದು ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಫಿಲ್ಮ್‌ಫೇರ್ ಪ್ರಶಸ್ತಿ
[ಬದಲಾಯಿಸಿ]ಗೆದ್ದ ಪ್ರಶಸ್ತಿಗಳು
[ಬದಲಾಯಿಸಿ]ವರ್ಷ | ಪ್ರಶಸ್ತಿ | ಚಲನಚಿತ್ರ |
---|---|---|
೧೯೯೯ | ಅತ್ಯುತ್ತಮ ನಟಿ (ಪ್ರಥಮ ಚಲನಚಿತ್ರಕ್ಕೆ) | ವಾಲಿ |
೨೦೦೦ | ಅತ್ಯತ್ತಮ ನಟಿ | ಖುಷಿ (ತಮಿಳು) |
೨೦೧೫ | ಅತ್ಯತ್ತಮ ನಟಿ (ವಿಮರ್ಶಕರ ಆಯ್ಕೆ) | ೩೬ ವಯಧಿನಿಲೆ |
ನಾಮನಿರ್ದೇಶನ
[ಬದಲಾಯಿಸಿ]ವರ್ಷ | ಪ್ರಶಸ್ತಿ | ಭಾಷೆ | ಚಲನಚಿತ್ರ |
---|---|---|---|
೨೦೦೧ | ಅತ್ಯುತ್ತಮ ನಟಿ | ತಮಿಳು | ಪುವೆಲ್ಲಂ ಅನ್ ವಾಸಂ |
೨೦೦೩ | ಅತ್ಯುತ್ತಮ ನಟಿ | ತಮಿಳು | ಧೂಳ್ |
೨೦೦೩ | ಅತ್ಯುತ್ತಮ ನಟಿ | ತಮಿಳು | ಕಾಕಾ ಕಾಕಾ |
೨೦೦೪ | ಅತ್ಯುತ್ತಮ ನಟಿ | ತಮಿಳು | ಪೆರಾಜ್ಹಾಗನ್ |
೨೦೦೫ | ಅತ್ಯುತ್ತಮ ನಟಿ | ತಮಿಳು | ಚಂದ್ರಮುಖಿ |
೨೦೦೬ | ಅತ್ಯುತ್ತಮ ನಟಿ | ತಮಿಳು | ವೆಟ್ಟೈಯಾಡು ವಿಲ್ಲಿಯಾಡು |
೨೦೦೭ | ಅತ್ಯುತ್ತಮ ನಟಿ | ತಮಿಳು | ಮೋಜಿ |
೨೦೧೫ | ಅತ್ಯುತ್ತಮ ನಟಿ | ತಮಿಳು | ೩೬ ವಯಧಿನಿಲೆ |
೨೦೧೭ | ಅತ್ಯುತ್ತಮ ನಟಿ | ತಮಿಳು | ಮಗಾಲಿರ್ ಮಟ್ಟಮ್ |
೨೦೧೯ | ಅತ್ಯುತ್ತಮ ನಟಿ | ತಮಿಳು | ಕಾಟ್ರಿನ್ ಮೋಜಿ |
ದಿನಕರ ಚಲನಚಿತ್ರ ಪ್ರಶಸ್ತಿ
[ಬದಲಾಯಿಸಿ]ಜ್ಯೋತಿಕಾರವರಿಗೆ ೧೯೯೯ರಲ್ಲಿ ಹೊಸ ನಟಿ ಎಂದು ಅವರ ವಾಲಿ ಚಿತ್ರದ ಅಭಿನಯಕ್ಕೆ ದಿನಕರ ಚಲನಚಿತ್ರ ಪ್ರಶಸ್ತಿ ದೊರೆತಿದೆ.
ದಕ್ಷಿಣ ಭಾರತ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
[ಬದಲಾಯಿಸಿ]ನಾಮನಿರ್ದೇಶನ
[ಬದಲಾಯಿಸಿ]ವರ್ಷ | ಪ್ರಶಸ್ತಿ | ಭಾಷೆ | ಚಲನಚಿತ್ರ |
---|---|---|---|
೨೦೧೫ | ಅತ್ಯುತ್ತಮ ನಟಿ | ತಮಿಳು | ೩೬ ವಯಧಿನಿಲೆ |
೨೦೧೭ | ಅತ್ಯುತ್ತಮ ನಟಿ | ತಮಿಳು | ಮಗಾಲಿರ್ ಮಟ್ಟಮ್ |
೨೦೧೮ | ಅತ್ಯುತ್ತಮ ನಟಿ | ತಮಿಳು | ಕಾಟ್ರಿನ್ ಮೋಜಿ |