ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳು
ಕರ್ನಾಟಕ ವಿಧಾನಸಭೆ | |
---|---|
ಕರ್ನಾಟಕದ ಹದಿನೈದನೇ ವಿಧಾನಸಭೆ | |
Type | |
Type | ಕರ್ನಾಟಕ ಶಾಸಕಾಂಗದ ಕೆಳಮನೆ |
Term limits | ಐದು ವರ್ಷಗಳು |
Elections | |
Last election | ಮೇ ೨೦೨೩ |
Next election | ಮೇ ೨೦೨೮ |
Meeting place | |
ವಿಧಾನಸೌಧ, ಬೆಂಗಳೂರು, ಕರ್ನಾಟಕ, ಭಾರತ (ದೈನಂದಿನ ಕಲಾಪ) | |
ಸುವರ್ಣ ವಿಧಾನಸೌಧ, ಬೆಳಗಾವಿ, ಕರ್ನಾಟಕ, ಭಾರತ (ಚಳಿಗಾಲದ ಅಧಿವೇಶನ) | |
Website | |
ಕರ್ನಾಟಕ ವಿಧಾನಸಭೆ | |
Footnotes | |
೧೮೮೧ರಲ್ಲಿಯೇ ಮೈಸೂರು ಸಂಸ್ಥಾನದಲ್ಲಿ "ಪ್ರಜಾಪ್ರತಿನಿಧಿ ಸಭೆ" ಎಂಬ ಹೆಸರಿನಲ್ಲಿ ಪರಿಷತ್ತನ್ನು ಸ್ಥಾಪಿಸಲಾಗಿತ್ತು. ಈ ಮೈಸೂರು ರಾಜ್ಯವು ೧೯೪೭ರಲ್ಲಿ ಸ್ವತಂತ್ರ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು; ವಿಭಿನ್ನ ಪ್ರಾಂತ್ಯ, ರಾಜ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ೧೯೫೬ರಲ್ಲಿ ಒಟ್ಟುಗೂಡಿ ವಿಶಾಲ ಮೈಸೂರು ರಾಜ್ಯ ಏಕೀಕರಣವಾಯಿತು. ಮುಂದೆ ೧೯೭೩ರ ನವೆಂಬರ್ ೧ರಂದು ಈ ರಾಜ್ಯಕ್ಕೆ "ಕರ್ನಾಟಕ" ಎಂದು ಮರುನಾಮಕರಣ ಮಾಡಲಾಯಿತು. |
ಕರ್ನಾಟಕ ವಿಧಾನಸಭೆ ಕರ್ನಾಟಕ ಶಾಸಕಾಂಗದ ಕೆಳಮನೆ. ಭಾರತದಲ್ಲಿ ದ್ವಿಸದನ (ವಿಧಾನಸಭೆ ಮತ್ತು ವಿಧಾನ ಪರಿಷತ್) ಹೊಂದಿರುವ ಆರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ.
ದೈನಂದಿನ ಕಲಾಪಗಳು, ವಿವಿಧ ರೀತಿಯ ಅಧಿವೇಶನಗಳು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದರೆ, ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಜರುಗುತ್ತದೆ. ವಿಧಾನಸಭೆಯ ಅವಧಿ ಐದು ವರ್ಷಗಳು. ಪ್ರಸ್ತುತ ಏಕಸದಸ್ಯ ಪ್ರಾತಿನಿಧ್ಯ ಹೊಂದಿರುವ ೨೨೪ ವಿಧಾನಸಭಾ ಕ್ಷೇತ್ರಗಳು ನಮ್ಮ ರಾಜ್ಯದಲ್ಲಿವೆ. ಒಬ್ಬ ಆಂಗ್ಲೋ ಇಂಡಿಯನ್ ಸದಸ್ಯರನ್ನು ರಾಜ್ಯಪಾಲರು ನಾಮಕರಣ ಮಾಡುತ್ತಾರೆ.
ವಿಧಾನಸಭಾ ಕ್ಷೇತ್ರ ಮತ್ತು ಚುನಾವಣೆಗಳ ಸಂಕ್ಷಿಪ್ತ ವಿವರ
[ಬದಲಾಯಿಸಿ]೧೯೫೧
[ಬದಲಾಯಿಸಿ]ಮೈಸೂರು ರಾಜ್ಯದ ಚೊಚ್ಚಲ ವಿಧಾನಸಭಾ ಚುನಾವಣೆ ನಡೆದದ್ದು ೧೯೫೧ರಲ್ಲಿ. ಮೈಸೂರು ರಾಜ್ಯದ ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಮಂಡ್ಯ, ಕೋಲಾರ, ಚಿಕ್ಕಮಗಳೂರು, ತುಮಕೂರು, ಚಿತಾಲದುರ್ಗ (ಚಿತ್ರದುರ್ಗ) ಜಿಲ್ಲೆಗಳನ್ನು ೭೧ ವಿಧಾನಸಭಾ ಕ್ಷೇತ್ರಗಳಾಗಿ ವಿಭಜಿಸಲಾಗಿತ್ತು. ಎಲ್ಲಾ ಕ್ಷೇತ್ರಗಳೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದವು. ಇವುಗಳಲ್ಲಿ ೧೯ ದ್ವಿಸದಸ್ಯ ಕ್ಷೇತ್ರಗಳಾಗಿದ್ದವು.
ಜಿಲ್ಲೆಯ ಹೆಸರು | ಕ್ಷೇತ್ರಗಳು |
---|---|
ಕೋಲಾರ | ಮಾಲೂರು |
ಬಂಗಾರಪೇಟೆ | |
ಕೆಜಿಎಫ್ | |
ಮುಳಬಾಗಿಲು–ಶ್ರೀನಿವಾಸಪುರ | |
ಚಿಂತಾಮಣಿ | |
ಕೋಲಾರ | |
ಶಿಡ್ಲಘಟ್ಟ–ಚಿಕ್ಕಬಳ್ಳಾಪುರ | |
ಗೌರಿಬಿದನೂರು | |
ತುಮಕೂರು | ಪಾವಗಡ |
ಕೊರಟಗೆರೆ–ಮಧುಗಿರಿ | |
ಹುಲಿಯೂರುದುರ್ಗ | |
ಕುಣಿಗಲ್ | |
ತುಮಕೂರು | |
ಕೋರಾ | |
ಶಿರಾ | |
ಗುಬ್ಬಿ | |
ತಿಪಟೂರು | |
ಚಿಕ್ಕನಾಯಕನಹಳ್ಳಿ | |
ಬೆಂಗಳೂರು | ಮಲ್ಲೇಶ್ವರಂ |
ಗಾಂಧಿನಗರ | |
ಚಾಮರಾಜಪೇಟೆ | |
ಬಸವನಗುಡಿ | |
ಕಬ್ಬನ್‌ಪೇಟೆ | |
ಹಲಸೂರು | |
ಸೇಂಟ್ ಜಾನ್ಸ್ ಹಿಲ್ಸ್ | |
ಬೆಂಗಳೂರು ಉತ್ತರ | |
ದೊಡ್ಡಬಳ್ಳಾಪುರ | |
ನೆಲಮಂಗಲ | |
ಮಾಗಡಿ | |
ಬೆಂಗಳೂರು ದಕ್ಷಿಣ | |
ಹೊಸಕೋಟೆ–ಆನೇಕಲ್ | |
ರಾಮನಗರಂ | |
ಕಾನಕನಹಳ್ಳಿ | |
ವಿರೂಪಾಕ್ಷಪುರ | |
ಚನ್ನಪಟ್ಟಣ | |
ಮಂಡ್ಯ | ಮಳವಳ್ಳಿ |
ಮದ್ದೂರು | |
ಮಂಡ್ಯ | |
ಶ್ರೀರಂಗಪಟ್ಟಣ | |
ಪಾಂಡವಪುರ | |
ನಾಗಮಂಗಲ | |
ಕೃಷ್ಣರಾಜಪೇಟೆ | |
ಮೈಸೂರು | ಮೈಸೂರು ನಗರ ಉತ್ತರ |
ಮೈಸೂರು ನಗರ ದಕ್ಷಿಣ | |
ಮೈಸೂರು ತಾಲೂಕು | |
ನಂಜನಗೂಡು | |
ಯಳಂದೂರು | |
ಹುಣಸೂರು | |
ಗುಂಡ್ಲುಪೇಟೆ–ಹೆಗ್ಗಡದೇವನಕೋಟೆ | |
ಕೃಷ್ಣರಾಜನಗರ | |
ಪಿರಿಯಾಪಟ್ಟಣ | |
ಹಾಸನ | ಹೊಳೆನರಸೀಪುರ |
ಅರಕಲಗೂಡು | |
ಚನ್ನರಾಯಪಟ್ಟಣ | |
ಜಾವಗಲ್ | |
ಅರಸೀಕೆರೆ | |
ಹಾಸನ | |
ಬೇಲೂರು | |
ಚಿಕ್ಕಮಗಳೂರು | ಚಿಕ್ಕಮಗಳೂರು–ಮೂಡಿಗೆರೆ |
ಕಡೂರು | |
ಶಿವಮೊಗ್ಗ | ಭದ್ರಾವತಿ |
ತೀರ್ಥಹಳ್ಳಿ–ಕೊಪ್ಪ | |
ಶಿವಮೊಗ್ಗ | |
ಹೊನ್ನಾಳಿ | |
ಸೊರಬ–ಶಿಕಾರಿಪುರ | |
ಚಿತಾಲದುರ್ಗ | ಹರಿಹರ |
ದಾವಣಗೆರೆ | |
ಹೊಸದುರ್ಗ | |
ಮೊಳಕಾಲ್ಮೂರು | |
ಹಿರಿಯೂರು | |
ಹೊಳಲ್ಕೆರೆ |
• ೧೯೫೬ರಲ್ಲಿ ವಿಶಾಲ ಮೈಸೂರು ರಾಜ್ಯ ಏಕೀಕರಣದ ಬಳಿಕ ಮರುವರ್ಷವೇ ಅಂದರೆ ೧೯೫೭ರಲ್ಲಿ ದ್ವಿತೀಯ ವಿಧಾನಸಭಾ ಚುನಾವಣೆ ಜರುಗಿತು. ಮೈಸೂರು ರಾಜ್ಯದ ಒಂಭತ್ತು ಜಿಲ್ಲೆಗಳ ಜೊತೆಯಲ್ಲಿ
- ಮದರಾಸು ಪ್ರಾಂತ್ಯದಲ್ಲಿದ್ದ ಬಳ್ಳಾರಿ, ದಕ್ಷಿಣ ಕನ್ನಡ (ಕೆನರಾ), ಕೊಳ್ಳೇಗಾಲ
- ಕೊಡಗು ರಾಜ್ಯ (ಈಗ ಅದು ಕೊಡಗು ಜಿಲ್ಲೆಯಾಗಿತ್ತು)
- ಬಾಂಬೆ ಪ್ರಾಂತ್ಯದಲ್ಲಿದ್ದ ಉತ್ತರ ಕನ್ನಡ, ಬಿಜಾಪುರ, ಬೆಳಗಾವಿ, ಧಾರವಾಡ
- ಹೈದರಾಬಾದ್ ಪ್ರಾಂತ್ಯದಲ್ಲಿದ್ದ ಗುಲಬರ್ಗಾ, ರಾಯಚೂರು, ಬೀದರ್
ಹಾಗೂ ಸಂಡೂರು, ಸವಣೂರು, ಜಮಖಂಡಿ ಮುಂತಾದ ಹಲವಾರು ಚಿಕ್ಕಪುಟ್ಟ ಸಂಸ್ಥಾನಗಳು ಕರ್ನಾಟಕದಲ್ಲಿ ವಿಲೀನವಾಗಿದ್ದರಿಂದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹಿರಿದಾಯಿತು. ಹಾಗಾಗಿ ಈ ಬಾರಿ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ೧೭೯ಕ್ಕೇರಿತು. ಇವುಗಳಲ್ಲಿ ೨೯ ದ್ವಿಸದಸ್ಯ ಕ್ಷೇತ್ರಗಳಾಗಿದ್ದರೆ, ೨೭ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮತ್ತು ೧ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದವು.
• ೧೯೬೨ರ ಚುನಾವಣೆಯಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿ ಒಟ್ಟು ೨೦೮ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು. ಈ ಚುನಾವಣೆಯಲ್ಲಿ ಆದ ಅತಿಮುಖ್ಯ ಬದಲಾವಣೆ ಎಂದರೆ, ದ್ವಿಸದಸ್ಯ ಕ್ಷೇತ್ರಗಳ ರದ್ದು.
• ೧೯೬೭ರ ಚುನಾವಣೆಯಲ್ಲಿ ಕ್ಷೇತ್ರಗಳ ಸಂಖ್ಯೆ ೨೧೬ಕ್ಕೇರಿತು. ಇವುಗಳಲ್ಲಿ ೧೮೫ ಸಾಮಾನ್ಯ, ೨೮ ಪರಿಶಿಷ್ಟ ಜಾತಿ ಮತ್ತು ೩ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಾಗಿದ್ದವು.
• ೧೯೭೨ರ ಚುನಾವಣೆ ಅಷ್ಟೇನು ಪ್ರಮುಖ ಬದಲಾವಣೆ ತರಲಿಲ್ಲವಾದರೂ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರ ಹೆಚ್ಚಾಗಿ, ಪರಿಶಿಷ್ಟ ಪಂಗಡದ ಕ್ಷೇತ್ರಗಳಲ್ಲಿ ಒಂದು ಕಡಿಮೆಯಾಯಿತು.
• ೧೯೭೮ರ ಚುನಾವಣೆ ಈವರೆಗಿನ ಎಲ್ಲಾ ಚುನಾವಣೆಗಳಲ್ಲಿಯೇ ಅತ್ಯಂತ ವಿಶಿಷ್ಟ ಚುನಾವಣೆ ಎನ್ನಬಹುದು. ಕರ್ನಾಟಕದ ವಿಧಾನಸಭೆಗೆ ನಡೆದ ಮೊತ್ತಮೊದಲ ಚುನಾವಣೆಯಾಗಿ ಇದು ದಾಖಲಾಯಿತು. ಈ ಚುನಾವಣೆಯಲ್ಲಿ ಕ್ಷೇತ್ರಗಳ ಸಂಖ್ಯೆ ೨೨೪ಕ್ಕೆ ಏರಿಕೆಯಾಯಿತು. ಇವುಗಳಲ್ಲಿ ೧೮೯ ಸಾಮಾನ್ಯ ಅಭ್ಯರ್ಥಿಗಳಿಗೆ ಮೀಸಲಾಗಿದ್ದರೆ, ೩೩ ಕ್ಷೇತ್ರಗಳಿಂದ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ಗೆದ್ದುಬಂದರು. ಜೊತೆಯಲ್ಲಿ, ಇಬ್ಬರು ಪರಿಶಿಷ್ಟ ಪಂಗಡದ ಜನಪ್ರತಿನಿಧಿಗಳೂ ವಿಧಾನಸೌಧ ಪ್ರವೇಶಿಸಿದ್ದು ಈ ಚುನಾವಣೆಯಲ್ಲಿ.
• ೩೦ ವರ್ಷಗಳ ನಂತರ ಅಂದರೆ ೨೦೦೮ರಲ್ಲಿ ಮತ್ತೆ ಕ್ಷೇತ್ರ ಪುನರ್ವಿಂಗಡಣೆ ಮಾಡಿ ಹಲವಾರು ಕ್ಷೇತ್ರಗಳನ್ನು ರದ್ದು ಮಾಡಲಾಯಿತು. ಅವುಗಳ ಜಾಗದಲ್ಲಿ ಹಲವಾರು ಹೊಸ ಕ್ಷೇತ್ರಗಳನ್ನು ರಚಿಸಿ ೧೭೩ ಕ್ಷೇತ್ರಗಳನ್ನು ಸಾಮಾನ್ಯ ಅಭ್ಯರ್ಥಿಗಳಿಗೆ, ೩೬ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗೆ ಸೇರಿದವರಿಗೆ, ೧೫ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅನುವು ಮಾಡಿಕೊಡಲಾಗಿದೆ.
ಹೊರ ಕೊಂಡಿಗಳು
[ಬದಲಾಯಿಸಿ]- Election Commission of India Archived 2017-12-05 ವೇಬ್ಯಾಕ್ ಮೆಷಿನ್ ನಲ್ಲಿ.
- Karnataka Assembly Factbook: Assembly Level Socio-Economic Data Archived 2017-09-26 ವೇಬ್ಯಾಕ್ ಮೆಷಿನ್ ನಲ್ಲಿ.
- http://www.kla.kar.nic.in/assembly/member/membersaddress_kan.pdf
- http://www.kla.kar.nic.in/assembly/member/members.htm