ಕಡಿದಾಳ್ ಮಂಜಪ್ಪ
ಗೋಚರ
ಕಡಿದಾಳ್ ಮಂಜಪ್ಪ | |
---|---|
ಅಧಿಕಾರ ಅವಧಿ ೧೯ ಆಗಸ್ಟ್ ೧೯೫೬ – ೩೧ ಒಕ್ಟೋಬರ್ ೧೯೫೬ | |
ರಾಜ್ಯಪಾಲ | ಜಯಚಾಮರಾಜ ಒಡೆಯರ್ |
ಪೂರ್ವಾಧಿಕಾರಿ | ಕೆಂಗಲ್ ಹನುಮಂತಯ್ಯ |
ಉತ್ತರಾಧಿಕಾರಿ | ಎಸ್.ನಿಜಲಿಂಗಪ್ಪ |
ವೈಯಕ್ತಿಕ ಮಾಹಿತಿ | |
ಜನನ | ೧೯೦೮ ಹರೋಗೊಳಿಗೆ, ತೀರ್ಥಹಳ್ಳಿ, ಶಿವಮೊಗ್ಗ, ಕರ್ನಾಟಕ,ಭಾರತ |
ಮರಣ | ೧೯೯೨ |
ರಾಜಕೀಯ ಪಕ್ಷ | ಭಾರತ ರಾಷ್ಟ್ರೀಯ ಕಾಂಗ್ರೆಸ್ |
ಇವರು ೧೯೦೭ ರಲ್ಲಿ ಜನಿಸಿದರು. ಶ್ರೀ ಕಡಿದಾಳ್ ಮಂಜಪ್ಪನವರು ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು. ತೀರ್ಥಹಳ್ಳಿ,ಶಿವಮೊಗ್ಗ,ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿಧ್ಯಾಭ್ಯಾಸ ಮಾಡಿ ಬಿ,ಎ.ಪದವಿ ಪಡೆದರು.ಪೂನಾದಲ್ಲಿ ಕಾನೂನು ಪದವಿ ಪಡೆದರು.೧೯೨೭ರಲ್ಲಿಯೇ ಗಾಂಧೀಜಿಯವರ ದರ್ಶನ ಪಡೆದು ಅವರ ತತ್ವಗಳಿಗೆ ಮಾರು ಹೋಗಿ ಅಂದಿನಿಂದಲೇ ಗಾಂದೀವಾದಿಯಾದರು.
- ೧೯೩೫ರಲ್ಲಿ ಶಿವಮೊಗ್ಗದಲ್ಲಿ ವಕೀಲಿ ವೃತ್ತಿ ಆರಂಭಿಸಿದರು.
- ೧೯೩೮ರಲ್ಲಿ ವಕೀಲಿ ವೃತ್ತಿಯನ್ನು ತೊರೆದು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಮದೂರಿನ ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹದಲ್ಲಿ ಪಾಲುಗೊಂಡರು.ವಕೀಲಿ ವೃತ್ತಿಯಿಂದ ತಾವು ಗಳಿಸಿದ ಹಣವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಖರ್ಚು ಮಾಡಿದರು.೧೯೩೯ರಲ್ಲಿ ಅರಣ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.೧೯೪೧ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಮೈಸೂರು ಪ್ರಜಾ ಪ್ರತಿನಿದಿ ಸಬೆಗೆ ಆಯ್ಕೆಗೊಂಡರು.
- ೧೯೪೨ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದರು.
- ೧೯೪೫ರಲ್ಲಿ ನ್ಯಾಯವಿಧಾಯಕ ಸಬೆಗೆ ಅವಿರೋಧವಾಗಿ ಆಯ್ಕೆಯಾದರು.೧೯೪೭ರಲ್ಲಿ ರಾಜ್ಯದಲ್ಲಿ ಜವಾಬ್ದಾರಿ ಸರಕಾರ ಸ್ತಾಪನೆಗೆ ನಡೆದ ಚಳವಳಿಯಲ್ಲಿ ಭಾಗವಹಿಸಿ ಮತ್ತೆ ಸೆರೆಮನೆವಾಸ ಅನುಭವಿಸಿದರು.
- ೧೯೫೨ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿ ಕೆಂಗಲ್ ಹನುಮಂತಯ್ಯ ನವರ ಮಂತ್ರಿ ಮಂಡಲದಲ್ಲಿ ಕಂದಾಯ ಮತ್ತು ಲೋಕೋಪಯೋಗಿ ಸಚಿವರಾದರು.
- ೧೯೫೬ರರ ಆಗಸ್ಟ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ೭೫ ದಿನಗಳವರೆಗೆ ರಾಜ್ಯದ ಮುಖ್ಯ ಮಂತ್ರಿಯಾದರು.ಸ್ವಾತಂತ್ರ್ಯ ಹೋರಾಟ ಮತ್ತು ರೈತ ಹೋರಾಟದ ವಸ್ತುಗಳುಲ್ಲ ಕೆಲವು ಕಾದಂಬರಿಗಳನ್ನೂ ಇವರು ಬರೆದಿದ್ದಾರೆ.ನಮನ
- ಇವರ ಕಾದ೦ಬರಿಗಳು:ಪ೦ಜರವಲಳ್ಳಿ ಪ೦ಜು,ನಾಳೆಯ ನೆಳಲು,ಕ್ರಾಂತಿ ಕೂಟ.
- ಆತ್ಮಕಥನ :ನನಸಾಗದ ಕನಸು.
ಮಾನ್ಯ ಕಡಿದಾಳ್ ಮಂಜಪ್ಪನವರ ಪತ್ನಿ ಶ್ರೀಮತಿ ಲಕ್ಶ್ಮೀದೇವಿಯವರು ಸಹ ಲೇಖಕಿಯಾಗಿದ್ದರು.