ವಿಷಯಕ್ಕೆ ಹೋಗು

ಹಣ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಹಣ್ಣುಗಳು ಇಂದ ಪುನರ್ನಿರ್ದೇಶಿತ)
Culinary fruits
Several culinary fruits
Mixed fruit
The Medici citrus collection by Bartolomeo Bimbi, 1715

ಹಣ್ಣು[೧] ಎಂಬ ಪದವು ಸಸ್ಯಶಾಸ್ತ್ರದಲ್ಲಿ ಮತ್ತು ಸಾಮಾನ್ಯ ಬಳಕೆಯಲ್ಲಿ ಸ್ವಲ್ಪ ವ್ಯತ್ಯಾಸ ಇರುವ ಅರ್ಥಗಳನ್ನು ಹೊಂದಿದೆ. ಸಸ್ಯಶಾಸ್ತ್ರದಲ್ಲಿ ಹೂಬಿಡುವ ಸಸ್ಯಗಳು ತಮ್ಮ ಬೀಜಗಳನ್ನು ಪಸರಿಸಲು ಬೆಳೆಸಿಕೊಳ್ಳುವ ಅಂಗಗಳು. ಸಾಮಾನ್ಯ ಬಳಕೆಯಲ್ಲಿ ಸಸ್ಯಶಾಸ್ತ್ರದ ಪ್ರಕಾರದ ಹಣ್ಣುಗಳಲ್ಲಿ ಕೇವಲ ಆಹಾರವಾಗಿ ಉಪಯೋಗಕ್ಕೆ ಬರುವ, ಸಿಹಿ ರುಚಿಯುಳ್ಳವನ್ನು ಹಣ್ಣುಗಳೆಂದು ಪರಿಗಣಿಸಲಾಗುತ್ತದೆ.

ಇತಿವೃತ್ತ[ಬದಲಾಯಿಸಿ]

 • ಪ್ರಕೃತಿ ನಮಗೆ ನೀಡಿರುವ ಅಮೂಲ್ಯಗಳಲ್ಲಿ 'ಹಣ್ಣು' [೨]ಒಂದು ವಿಷೇಶ.ಹಣ್ಣುಗಳು ಮನುಷ್ಯ ಜೀವನದಲ್ಲಿ ಬಹಳ ಪಾತ್ರಗೊಂಡಿವೆ.ಹಣ್ಣು ಎಂದರೇನು? ಅವು ಜೀಜ ಹೊಂದಿದ ಮತ್ತು ಆಹಾರ ಸೇವಿಸುವ; ಮರ ಅಥವಾ ಇತರ ಸಸ್ಯ ಸಿಹಿ ಹಾಗೂ ತಿರುಳಿನಿಂದ ಕೂಡಿದ ಉತ್ಪನ್ನ. ಹಣ್ಣು ರುಚಿಕರವಾದ ಮತ್ತು ಪೌಷ್ಟಿಕ ಆಹಾರ. ಇದು ತೋಟಗಳು, ಗಿಡ-ಮರಗಳ ಮೇಲೆ ಬೆಳೆಯುತ್ತದೆ.
 • ಮಾವಿನಹಣ್ಣು, ಸೇಬುಗಳು, ಪಪ್ಪಾಯಿ, ಕಿತ್ತಳೆ, ದ್ರಾಕ್ಷಿ, ದಾಳಿಂಬೆ, ನಿಂಬೆ, ಮುಂತಾದ ಹಣ್ಣುಗಳು ನಮಗೆ ಪರಿಸರದಲ್ಲಿ ಸಿಗುತ್ತದೆ. ಅವು ವರ್ಷದ ವಿವಿಧ ಋತುಗಳಲ್ಲಿ ಬೆಳೆಯುತ್ತದೆ. ಹಣ್ಣುಗಳು ದೈನಂದಿನ ತಿನ್ನುವುದರಿಂದ ಬಹಳ ಪ್ರಯೋಜನಗಳಿವೆ. ಈ ದಿನಗಳಲ್ಲಿ ನಮ್ಮ ಶರೀರಕ್ಕೆ ಹಿಂದೆಂದಿಗಿಂತ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳ ಅಗತ್ಯವಿದೆ.
 • ಪ್ರತಿದಿನ ಹಣ್ಣು ತಿನ್ನುವುದರಿಂದ ಜೀವನದ ಒತ್ತಡಗಳು, ಕಾಯಿಲೆಗಳನ್ನು ಎದುರಿಸಬಹುದು. ಒಂದು ಸಮತೋಲನ ಆಹಾರಕ್ಕಾಗಿ ಹಣ್ಣುಗಳನ್ನು ತಿನ್ನುವುದು ಅಗತ್ಯ. ಅವುಗಳಿಂದ ಉಪ್ಪಿನಕಾಯಿ, ಸೌಂದರ್ಯವರ್ಧಕಗಳು, ಜಾಮ್, ಶಕ್ತಿ ಪಾನೀಯಗಳು, ಆರೋಗ್ಯ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಭಾರತದ ರಾಷ್ಟ್ರೀಯ ಹಣ್ಣು[ಬದಲಾಯಿಸಿ]

ಭಾರತದ ರಾಷ್ಟ್ರೀಯ ಹಣ್ಣು 'ಮಾವು'[೩].ಸಹ ಹಣ್ಣುಗಳ ರಾಜ ಎಂದು ಕರೆಯಲಾಗಿದೆ. ಭಾರತದಲ್ಲಿ ನೂರಕ್ಕೂ ಹೆಚ್ಚು ಮಾವಿನಹಣ್ಣು ವಿಧಗಳಿವೆ. ಅವು ವಿವಿಧ ಬಣ್ಣಗಳಲ್ಲಿ,ಗಾತ್ರಗಳಲ್ಲಿ ಮತ್ತು ಆಕಾರಗಳಲ್ಲಿ ಲಭ್ಯವಿದೆ. ಇದು ಯುಗದಿಂದ ಭಾರತದಲ್ಲಿ ಬೆಳೆಸಲಾಗುತ್ತದೆ. ಸಾಮಾನ್ಯ ಮಾವಿನ ಮರದ ಎತ್ತರ ೧೫-೩೦ ಮೀಟರ್ ಹೊಂದಬಹುದು. ಬೇಸಿಗೆಯಕಾಲದಲ್ಲಿ ಹಣ್ಣುಗಳು ಬೆಳೆಯಲು ವಾತಾವರಣ ಬೆಚ್ಚಗಿರುತ್ತದೆ.ಜನರು ಮಾವಿನಹಣ್ಣಿನ ಸಿಪ್ಪೆಯನ್ನು ತೆಗೆದು,ಸಿಪ್ಪೆ ತೆಗೆಯದೆಯೂ ತಿನ್ನುತ್ತಾರೆ, ಅಥವಾ ಉಪ್ಪಿನಕಾಯಿ, ಸಾಸ್ ತಯಾರಿಸುತ್ತಾರೆ.ಮಿಡಿ ಮಾವಿನಕಾಯಿಯ ಉಪ್ಪಿನಕಾಯಿ ತುಂಬಾ ರುಚಿಕರವಾಗಿರುತ್ತದೆ.

ಹಣ್ಣಿನ ಬಳಕೆ[ಬದಲಾಯಿಸಿ]

 • ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಹಣ್ಣುಗಳು[೪] ಸರಳ-ಶರ್ಕಗಳನ್ನು ಹೊಂದಿದೆ, ಇದು ದೇಹದಲ್ಲಿ ಸಂಪೂರ್ಣವಾಗಿ ಹೀರಿಕೊಳ್ಳಲು ಸಮಯ ಅಗತ್ಯವಿದೆ. ಆದಾಗ್ಯೂ,ಊಟವನ್ನು ತಿನ್ನಿದ ತಕ್ಷಣ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ. ಊಟದ ನಂತರ ಕನಿಷ್ಟ ೩೦ ನಿಮಿಷಗಳ ಅಂತರ ಇರಬೇಕು. ಮಲಗುವ ವೇಳೆ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ ಏಕೆಂದರೆ ರಕ್ತದ ಸಕ್ಕರೆ ಮತ್ತು ಇನ್ಸುಲಿನ್ ಮಟವನ್ನು ಹೆಚ್ಚಳು ಉಂಟುಮಾಡುತ್ತದೆ ಮತ್ತು ನಿದ್ರೆಯು ಕಷ್ಟವಾಗುತ್ತದೆ.
 • ಹಣ್ಣುಗಳು ಸರಿಯಾದ ಜೀರ್ಣಿಸುವಿಕೆಯಲ್ಲಿ ನೆರವಾಗುತ್ತದೆ. ಅವುಗಳನ್ನು ನಿಯಮಿತವಾಗಿ ಬಳಸುವ ವ್ಯಕ್ತಿಗಳಿಗೆ ದೀರ್ಘ ಆಯುಷ್ಯವಿರುತ್ತದೆ. ಹಣ್ಣುಗಳಿಂದ ಅನೇಕ ಉಪಾಯಗಳಿವೆ, ಅದನ್ನು ನಾವು ಸರಿಯಾಗಿ ಉಪಯೋಗಿಸಬೇಕು. ಹಣ್ಣುಗಳು ವಿಟಮಿನ್‌, ಖನಿಜಾಂಶ, ಪೋಷಕಾಂಶಗಳನ್ನು ಹೊಂದಿರುವ ಉತ್ತಮ ಆಹಾರ. ಹೀಗಾಗಿ ಗರ್ಭಿಣಿ ಸ್ತ್ರೀಯರಿಗೂ ಕೂಡ ಹಣ್ಣುಗಳನ್ನು ನಿಯಮಿತವಾಗಿ ತಿನ್ನಲು ಸಲಹೆ ನೀಡುತ್ತಾರೆ.
 • ಹೊಟ್ಟೆಯಲ್ಲಿರುವ ಮಗುವಿಗೆ ಬೆಳವಣಿಗೆಗೆ ಬೇಕಾದ ಜೀವಸತ್ವಗಳು ನೈಸರ್ಗಿಕವಾಗಿ ಸಿಗಬೇಕೆಂದರೆ ಹಣ್ಣುಗಳನ್ನು ಸೇವಿಸಲೇ ಬೇಕು. ಮಗುವಿನ ಮೂಳೆ ಹಾಗೂ ಹಲ್ಲುಗಳು ಆರೋಗ್ಯಕರವಾಗಿ ರೂಪುಗೊಳ್ಳಲು, ದೃಷ್ಟಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ನರವ್ಯೂಹದ ನಳಿಕೆಗಳ ನ್ಯೂನತೆಗಳಿಂದ ಮಗುವನ್ನು ತಡೆಯಲು ಮತ್ತು ಆರೋಗ್ಯಕರ ತೂಕ ಹೊಂದಲು ಸಹಕಾರಿಯಾಗುವಂತಹ ಗುಣಗಳು ಹಣ್ಣುಗಳಿಂದ ಮಗುವಿಗೆ ಸಿಗಲು ಸಾಧ್ಯ. ಗರ್ಭಿಣಿಯರಿಗೆ ಸಾಮಾನ್ಯವಾಗಿ ಕಾಡುವ ಮಲಬದ್ಧತೆ ಮತ್ತು ಮೂಲವ್ಯಾಧಿಯಂತಹ ತೊಂದರೆಗಳಿಗೆ ಹಣ್ಣುಗಳೇ ಔಷಧಿಯಾಗಿವೆ.

ಹಣ್ಣುಗಳು[ಬದಲಾಯಿಸಿ]

 1. ಮಾವು[೫]/ಸಿಹಿ,ಹುಳಿ,ಗಿಣಿ,ಬಾದಾಮಿ,ತೋತಾಪುರಿ
 2. ದ್ರಾಕ್ಷಿ/ಕಪ್ಪು,ಬಿಳಿ,ಸಿಡ್‍ಲೆಸ್
 3. ದಾಳಿಂಬೆ
 4. ಪಪ್ಪಾಯಿ
 5. ಕಿತ್ತಳೆ
 6. ಮೋಸಂಬಿ
 7. ಸೇಬು
 8. ಸಪೋಟ
 9. ಸೀಬೆ/ಪೇರಲೆ
 10. ಅನಾನಾಸು
 11. ಬಾಳೆಹಣ್ಣು[೬]/ಪಚ್ಚಬಾಳೆ/ಏಲಕ್ಕಿ/ರಸಬಾಳೆ
 12. ಕರಬೂಜ
 13. ಕಲ್ಲಂಗಡಿ
 14. ತುಪ್ಪದಹಣ್ಣು
 15. ಹಿಪ್ಪುನೇರಳೆ ಹಣ್ಣು ಮತ್ತು ಸ್ಟ್ರಾಬೆರಿ
 16. ಹಲಸಿನ ಹಣ್ಣು[೭]
 17. ಅಂಜೂರ
 18. ಖರ್ಜೂರದ ಹಣ್ಣು
 19. ಸೀತಾಫಲ
 20. ರಾಮಫಲ
 21. ಮುರುಗಲು ಹಣ್ಣು
 22. ಒಣ ಹಣ್ಣುಗಳು (ಡ್ರೈ ಫ್ರುಟ್ಸ್‌)
 23. ಬೇಲದ ಹಣ್ಣು[೮]

ಆರೋಗ್ಯ ನೀಡುವ ವಿವಿಧ ಹಣ್ಣುಗಳು[ಬದಲಾಯಿಸಿ]

 1. ಅನಾನಾಸು : ರೋಗ ನಿರೋಧಕ ಶಕ್ತಿ ಹೆಚ್ಚಳ, ಬೊಜ್ಜು ಕರಗುವಿಕೆ
 2. ಹಿಪ್ಪುನೇರಳೆ ಹಣ್ಣು ಮತ್ತು ಸ್ಟ್ರಾಬೆರಿ : ನೆನಪಿನ ಶಕ್ತಿಯನ್ನು ವೃದ್ಧಿಸುತ್ತವೆ. ವಯಸ್ಸಾಗುತ್ತಾ ಹೋದಂತೆ ನೆನಪಿನ ಶಕ್ತಿಯ ಕೊರತೆಯಿಂದ, ಮರೆಗುಳಿಗಳಾಗುವ ಹಿರಿಯರಿಗೆ ಈ ಹಣ್ಣುಗಳು ಒಳ್ಳೆಯದು.
 3. ಕಿತ್ತಳೆ, ಮೋಸಂಬಿ ಹಣ್ಣುಗಳು : ಮೂಳೆಯ ಕೀಲುಗಳಿಗೆ ಶಕ್ತಿತುಂಬಲು ಸಹಕಾರಿ
 4. ಒಣ ಹಣ್ಣುಗಳು (ಡ್ರೈ ಫ್ರುಟ್ಸ್‌): ಇವು ಹಲವು ಪೋಷಕಾಂಶಗಳನ್ನು ಹೊಂದಿರುವ ಆರೋಗ್ಯದ ಆಹಾರ. ಬಹಳ ಪ್ರಮಾಣದಲ್ಲಿ ಖನಿಜಾಂಶ, ವಿಟಮಿನ್‌ಗಳನ್ನು ಹೊಂದಿರುವ ಒಣ ಹಣ್ಣುಗಳನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಅತೀ ಉತ್ತಮ
 5. ಸೇಬು : ದೊಡ್ಡಕರುಳಿನ ಕಾನ್ಸರ್‌ ತಡೆಯಲು ಸಹಕಾರಿ. ಮಲಬದ್ಧತೆಯಂತಹ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ನ್ಯೂಟ್ರಿಶನ್‌ ಹಣ್ಣು ಸೇಬು. ದೇಹಕ್ಕೆ ಬೇಕಾಗಿರುವ ಉತ್ತಮ ಕೊಬ್ಬನ್ನು ಒದಗಿಸುತ್ತದೆ.
 6. ದ್ರಾಕ್ಷಿ ಹಣ್ಣು : ರಕ್ತದೊತ್ತಡವನ್ನು ಹತೋಟಿಗೆ ತರಲು ಸಹಕಾರಿ
 7. ಬಾಳೆ ಹಣ್ಣು :[೯] ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಹಣ್ಣು. ಕಿಡ್ನಿಯ ತೊಂದರೆ ಇದ್ದವರು ಮತ್ತು ಮಲಬದ್ಧತೆಯ ತೊಂದರೆಯುಳ್ಳವರು ಬಾಳೆಹಣ್ಣನ್ನು ದಿನವೂ ಉಪಯೋಗಿಸಬೇಕು.
 8. ಕಲ್ಲಂಗಡಿ ಹಣ್ಣು : ರಕ್ತವೃದ್ಧಿಗೆ ಸಹಕಾರಿ, ಕಜ್ಜಿ ತುರಿಕೆಯಂತಹ ಸಮಸ್ಯೆಗಳಿಗೆ ಕಲ್ಲಂಗಡಿ ಪರಿಹಾರ ನೀಡುತ್ತದೆ.
 9. ಮಾವಿನ ಹಣ್ಣು : ನಿದ್ರಾಹೀನತೆಗೆ ಪರಿಹಾರ ನೀಡಬಲ್ಲದು, ಮೂಲವ್ಯಾಧಿ, ವಾತ-ಪಿತ್ತ, ಮಲಬದ್ಧತೆ, ಅಜೀರ್ಣ ಸಮಸ್ಯೆಗಳಿಗೆ ರಾಮಬಾಣ
 10. ದಾಳಿಂಬೆ ಹಣ್ಣು : ಹಲ್ಲುಗಳ ಸುರಕ್ಷತೆಗೆ ಬೇಕಾದ ವಿಟಾಮಿನ್‌ಗಳನ್ನು ಒದಗಿಸುತ್ತದೆ, ಖನಿಜಾಂಶಗಳನ್ನು ಹೊಂದಿರುವ ಹಣ್ಣು
 11. ಹಲಸಿನ ಹಣ್ಣು : ಪಿತ್ತವಿಕಾರಗಳನ್ನು ದೂರಮಾಡಬಲ್ಲದು, ಪೌಷ್ಠಿಕಾಂಶಯುಕ್ತ ಹಣ್ಣು, ನರಗಳ ದೌರ್ಬಲ್ಯಕ್ಕೆ ಪರಿಹಾರ ನೀಡಬಲ್ಲದು
 12. ಮುರುಗಲು ಹಣ್ಣು (ಪುನರ್ಪುಳಿ): ಪಿತ್ತ ಸಮಸ್ಯೆಗೆ ರಾಮಬಾಣವಾಗಿರುವ ಹಣ್ಣು.
 13. ಪಪ್ಪಾಯ : ವಿಟಮಿನ್‌ ಎ ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
 14. ಅಂಜೂರ : ಒತ್ತಡ, ಮಲಬದ್ಧತೆ, ಮೂಲವ್ಯಾಧಿ ಸಮಸ್ಯೆಗಳನ್ನು ಶಮನ ಮಾಡಬಲ್ಲ ಶಕ್ತಿ ಅಂಜೂರದ ಹಣ್ಣಿಗೆ ಇದೆ.
 15. ಖರ್ಜೂರದ ಹಣ್ಣು : ಜಂತುಹುಳು ಸಮಸ್ಯೆ ಹಾಗೂ ಬೇದಿ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವ ಹಣ್ಣು, ಪೌಷ್ಠಿಕ ಆಹಾರಗಳಲ್ಲೊಂದು
 16. ನಿಂಬೆಹಣ್ಣು ಬಹಳ ಪ್ರಸಿದ್ಧ. ಹಿಂದೆ (15ನೆಯ ಶತಮಾನದಲ್ಲಿ) ರಷ್ಯನ್ನರು ಜಪಾನೀ ಸೈನಿಕರಿಗೆ ಸೋತಿದ್ದರಂತೆ. ಅದಕ್ಕೆ ಮುಖ್ಯ ಕಾರಣ ಅವರಿಗೆ ಉಂಟಾದ ಸ್ಕರ್ವಿ ರೋಗ. ಈ ರೋಗಕ್ಕೆ ಜೀವಸತ್ವ ಸಿ ಕೊರತೆಯೇ ಕಾರಣ. ನಿಂಬೆಯ ರಸದಿಂದ ಸ್ಕರ್ವಿ ರೋಗ ಗುಣಪಡಿಸಬಹುದೆಂದು ಆಗ ಕಂಡುಹಿಡಿಯಲಾಯಿತು. ಅಜೀರ್ಣ, ಎದೆಯುರಿ, ಮಲಬದ್ಧತೆಗೆ ನಿಂಬೆ ರಸ ಒಳ್ಳೆಯದು. ವಾಂತಿಗೆ, ಗಂಟಲ ನೋವಿಗೆ ಉಪಶಮನಕಾರಿ. ಒಂದು ಲೋಟ ನೀರಿಗೆ ಒಂದು ನಿಂಬೆರಸ ಬೆರಸಿ ಎರಡು ಚಮಚೆ ಜೇನುತುಪ್ಪ ಬೆರಸಿ ಖಾಲಿಹೊಟ್ಟೆಯಲ್ಲಿ ಮೂರು ತಿಂಗಳಕಾಲ ಸೇವಿಸಿದರೆ ಬೊಜ್ಜು ಕರಗುವುದು. ಅತಿಸಾರ, ಆಮಶಂಕೆಗೆ ನಿಂಬೆರಸದ ಪಾನಕ ಒಳ್ಳೆಯದು.


ಉಲ್ಲೇಖ[ಬದಲಾಯಿಸಿ]

 1. http://kannada.boldsky.com/topic/%E0%B2%B9%E0%B2%A3%E0%B3%8D%E0%B2%A3%E0%B3%81
 2. https://www.ishs.org/fruits
 3. https://www.nutrition-and-you.com/mango-fruit.html
 4. http://kannada.oneindia.com/column/gv/2009/0801-food-for-good-health-vasundhara-bhupathi.html
 5. http://www.prajavani.net/news/article/2015/05/16/321210.html[ಶಾಶ್ವತವಾಗಿ ಮಡಿದ ಕೊಂಡಿ]
 6. https://kn.wikipedia.org/wiki/%E0%B2%AC%E0%B2%BE%E0%B2%B3%E0%B3%86_%E0%B2%B9%E0%B2%A3%E0%B3%8D%E0%B2%A3%E0%B3%81
 7. "ಆರ್ಕೈವ್ ನಕಲು". Archived from the original on 2018-04-21. Retrieved 2016-11-24.
 8. https://honalu.net/2015/01/21/%e0%b2%ac%e0%b3%87%e0%b2%b2%e0%b2%a6-%e0%b2%b9%e0%b2%a3%e0%b3%8d%e0%b2%a3%e0%b3%81/
 9. http://kannada.webdunia.com/miscellaneous/health/tips/0904/02/1090402037_1.htm
"https://kn.wikipedia.org/w/index.php?title=ಹಣ್ಣು&oldid=1091960" ಇಂದ ಪಡೆಯಲ್ಪಟ್ಟಿದೆ