ಸೀತಾಫಲ
ಸೀತಾಫಲ | |
---|---|
![]() | |
ಸೀತಾಫಲ | |
Egg fossil classification | |
Kingdom: | plantae
|
Division: | |
Class: | |
Order: | |
Family: | |
Genus: | |
Species: | A. squamosa
|
Binomial nomenclature | |
ಅನೋನ ಸ್ಕ್ವಾಮೋಸ (Annona squamosa} |
ಸೀತಾಫಲ (Custard Apple) ಮೂಲತ: ವೆಸ್ಟ್ ಇಂಡೀಸ್ ದ್ವೀಪ ಸಮೂಹಗಳ ನಿವಾಸಿ. ಈಗ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಬೆಳೆಸಲ್ಪಡುತ್ತಿದೆ.
ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]
ಇದು ಅನೋನಾಸಿ (Anonaceae)ಕುಟುಂಬಕ್ಕೆ ಸೇರಿದ್ದು, ಅನೋನ ಸ್ಕ್ವಾಮೋಸ (Anona squamosa)ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ. ಆಂಗ್ಲ ಭಾಷೆಯಲ್ಲಿ ಕಸ್ಟರ್ಡ್ ಅಪಲ್ ಎಂಬ ಬಳಕೆಯ ಹೆಸರೂ ಇದೆ.
ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]
ಇದು ಹೆಚ್ಚು ಕಾಂಡಗಳನ್ನು ಹೊಂದಿದ ಸಾಧಾರಣ ಎತ್ತರದ ಗಿಡ.ಹೆಚ್ಚಾಗಿ ಶುಷ್ಕ ಪ್ರದೇಶದಲ್ಲಿ ಕಂಡು ಬರುವುದು.ಹಣ್ಣು ರುಚಿಕರವಾಗಿದೆ.
ಉಪಯೋಗಗಳು[ಬದಲಾಯಿಸಿ]
ಇದರ ಹಣ್ಣು ರುಚಿಕರ ಹಾಗೂ ಪಚನಕಾರಿಯಾಗಿ ಒಳ್ಳೆಯ ಬೇಡಿಕೆ ಹೊಂದಿದೆ.ಇದರ ಬೀಜ ಹಾಗೂ ಎಲೆಗಳು ಕೀಟನಿರೋಧಕ ಗುಣಗಳನ್ನು ಹೊಂದಿದೆ. ಇದು
ಔಷದೀಯ ಗುಣಗಳು[ಬದಲಾಯಿಸಿ]
ಸೀತಾಫಲದ ಎಲೆಗಳನ್ನು ನುಣ್ಣಗೆ ಅರೆದು ಕುರು, ಗಡ್ಡೆ(ಗ್ರಂಥಿ)ಗಳಿಗೆ ಹಚ್ಚಿದರೆ ಆರಿ ಅಥವಾ ಸಣ್ಣದಾಗಿ ಸೋರಿಹೋಗುತ್ತದೆ. ಇದೇ ಎಲೆಗಳನ್ನು ಅರೆದು ಹಚ್ಚಿದರೆ ಬೆಂಕಿ ಬರುವುದು. ನವೆ(ದಡಿಕೆ) ಗುಣವಾಗುತ್ತದೆ. ೩ ರಿಂದ ೬ ದಿವಸ.
ಜ್ವರ, ಕೆಮ್ಮುದಮ್ಮಿಗೆ: ಸೀತಾಫಲದ ಗಿಡದ ತೊಗಟೆ ೧ ತೊಲೆ ಜಜ್ಜಿ ೪ ಕುಡ್ತೆ ನೀರು ಬತ್ತಿಸಿ ೧ ಕುಡ್ತೆ ಮಾಡಿ ಆರಿಸಿ ಇಟ್ಟುಕೊಂಡು ದಿನಕ್ಕೆ ೩-೪ ಸಲ ಜೇನು ಕುಡಿದರೆ ಜ್ವರ, ಕೆಮ್ಮ, ಗೂರಲು(ಉಬ್ಬಸ) ಗುಣವಾಗಿ ನಿತ್ರಾಣ ಕಮ್ಮಿಯಾಗುತ್ತದೆ. ರೋಗಕ್ಕನುಸರಿಸಿ ಕೆಲವು ದಿವಸಗಳ ವರೆಗೆ ಸೇವಿಸುತ್ತಾ ಬರುವುದು.
ಹುಣ್ಣು, ಗಾಯಗಳಿಗೆ: ಸೀತಾಫಲದ ಎಲೆ ತಂದು ಒಣಗಿಸಿ ಬಾಣಲೆಯಲ್ಲಿ ಹಾಕಿ ಕರಕಾಗುವಂತೆ ಹುರಿದು ಹುಡಿಮಾಡಿಟ್ಟುಕೊಡು ಗಾಯಕ್ಕೆ ಹಾಕಿದರೆ, ಗುಣವಾಗುತ್ತದೆ. ಹುಡಿಯನ್ನು ವ್ಯಾಸಲೀನ್ ಹಾಕಿ ಮುಲಾಮಿನಂತೆ ಮಾಡಿಟ್ಟು ಹುಣ್ಣುಗಳಿಗೆ ಹಚ್ಚುತ್ತ ಬಂದರೆ ಹುಣ್ಣುಗಳು ಮಾಯುತ್ತವೆ.
ಮೈಯಲ್ಲಿ ಹುಣ್ಣುಹುಳ ಆದರೆ; ದನಗಳ ಹುಳಕ್ಕೂ[ಬದಲಾಯಿಸಿ]
ಸೀತಾಫಲದ ಎಲೆಗಳನ್ನು ತಂದು ಒಣಗಿಸಿ ಸಮಭಾಗ ಹೊಗೆ ಸಪ್ಪು ಸೇರಿಸಿ ಬಾಣಲೆಯಲ್ಲಿ ಹಾಕಿ ಬೂದಿ ಆಗುವ ವರೆಗೆ ಹುರಿದು ೧/೩ ಭಾಗದಷ್ಟು ಸುಣ್ಣದ ಹುಡಿ
ಆಧಾರ ಗ್ರಂಥಗಳು[ಬದಲಾಯಿಸಿ]
- 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.
