ವಿಷಯಕ್ಕೆ ಹೋಗು

ರಾಮಫಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Annona reticulata
Custard apple
Conservation status
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಮ್ಯಾಗ್ನೋಲಿಯೀಡ್ಸ್
ಗಣ: ಮ್ಯಾಗ್ನೋಲಿಯೇಲ್ಸ್
ಕುಟುಂಬ: ಅನೋನೇಸೀ
ಕುಲ: ಅನೋನಾ
ಪ್ರಜಾತಿ:
A. reticulata
Binomial name
Annona reticulata
Native range of A. reticulata
Synonyms

Annona lutescens Saff.[]
Annona excelsa Kunth
Annona laevis Kunth
Annona longifolia Sessé & Moc.
Annona riparia Kunth

Custard apple at fruit vendor, Sangareddi, India

ರಾಮಫಲ (Bullock's Heart) ಮೂಲತಃ ವೆಸ್ಟ್ ಇಂಡೀಸ್ ದ್ವೀಪ ಸಮೂಹಗಳ ನಿವಾಸಿ.[][] ಈಗ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಬೆಳೆಯಲ್ಪಡುತ್ತಿದೆ.[] ಸೀತಾಫಲ, ಹನುಮಾನ್ ಫಲ ಮುಂತಾದ ಸಸ್ಯಗಳಿಗೆ ಹತ್ತಿರದ ಸಂಬಂಧಿ.

ಸಸ್ಯಶಾಸ್ತ್ರೀಯ ವರ್ಗೀಕರಣ

[ಬದಲಾಯಿಸಿ]

ಇದು ಅನೋನಾಸಿ (Anonaceae) ಕುಟುಂಬಕ್ಕೆ ಸೇರಿದ್ದು,[] ಅನೋನ ರೆಟಿಕುಲೇಟ (Anona reticulata) ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ.

ಸಸ್ಯದ ಗುಣಲಕ್ಷಣಗಳು

[ಬದಲಾಯಿಸಿ]

ಇದೊಂದು ಪರ್ಣಪಾತಿ ಅಥವಾ ಅರ್ಧಪರ್ಣಪಾತಿ ಮರ. ಎಲೆ ಉದುರಿಸುವಂತಹ ರಾಮಫಲದ ಗಿಡವು ಸಾಮಾನ್ಯವಾಗಿ 6-10 ಮೀ.ವರೆಗೆ ಬೆಳೆಯುತ್ತದೆ.[] ರಾಮಫಲ ಹಣ್ಣಿನ ಮೇಲೈಯು ನುಣುಪಾಗಿದ್ದು, ಸೀತಾಫಲದ ಹೊರಮೈ ಒರಟಾಗಿರುತ್ತದೆ. ಇದೇ ರೀತಿ ಲಕ್ಷ್ಮಣಫಲವೂ ಇದ್ದು, ಇದರ ಮೈ ಮುಳ್ಳುಗಳಿಂದ ಕೂಡಿರುತ್ತದೆ. ಕಾಂಡ ಗಟ್ಟಿಯಾಗಿದೆ. ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಬಲಿತ ರೆಂಬೆಯ ಕಕ್ಷದಲ್ಲಿ 2-4 ಹೂಗಳು ಪುಟ್ಟಗೊಂಚಲಿನ ರೂಪದಲ್ಲಿ ಅರಳುವುವು. ಹೂ ಬಿಡುವ ಶ್ರಾಯ ಫೆಬ್ರವರಿ-ಮಾರ್ಚ್ ತಿಂಗಳುಗಳು. ಹಣ್ಣು, ಮಾಸಲು ಬಣ್ಣದ್ದು. ಹೆಚ್ಚು ಕಡಿಮೆ ಮನುಷ್ಯನ ಹೃದಯದ ಆಕಾರದಲ್ಲಿದೆ. ಹಣ್ಣಿನ ಒಳಗೆ ತಿರುಳು ಹೆಚ್ಚಾಗಿರುತ್ತದೆ. ರಾಮಫಲ ಒಂದು ಸಮೂಹ ಫಲ; ಹಲವಾರು ಬೆರಿಗಳು ಕೂಡಿಕೊಂಡು, ಮೃದುವಾದ ಹೂಗೊಂಚಲಿನ ಪೀಠದೊಂದಿಗೆ ಸೇರಿಕೊಂಡು ಮಾಂಸಲವಾದ ತಿರುಳಿನಿಂದ ಕೂಡಿದ ರಚನೆ; ತಿರುಳಿನಲ್ಲಿ ಸಕ್ಕರೆ, ಪಿಷ್ಠ ಅಧಿಕ ಪ್ರಮಾಣದಲ್ಲಿವೆ. ಹಣ್ಣಿನ ಮೇಲಿನ ಸಿಪ್ಪೆ ಬಲೆಬಲೆಯಂತೆ ಹುರುಪೆಯುಳ್ಳದ್ದಾಗಿರುತ್ತದೆ. ಹಣ್ಣು ಮಾಗಿದಾಗ ತಿನ್ನಬಹುದು. ರುಚಿ ಅಷ್ಟಾಗಿರದು. ರಾಮಫಲದ ಬೀಜಗಳು ಹಣ್ಣಿನಲ್ಲಿ ಹುದುಗಿದ್ದು, ಒಳ್ಳೆಯ ಔಷಧೀಯ ಗುಣವನ್ನು ಹೊಂದಿರುತ್ತದೆ. ರಾಮಫಲವು ಹೆಚ್ಚು ಆರೈಕೆ ಇಲ್ಲದೆ, ಗೊಬ್ಬರವನ್ನು ಅರಸದೆ, ರೋಗಬಾಧೆ ಇಲ್ಲದೆ ಬೆಳೆಯುತ್ತದೆ.[]

ಇದು ಹೆಚ್ಚು ಕಾಂಡಗಳನ್ನು ಹೊಂದಿದ ಸಾಧಾರಣ ಎತ್ತರದ ಗಿಡ. ಅರೆ ನಿತ್ಯಹರಿದ್ವರ್ಣ ಮರ.

ಬೇಸಾಯ

[ಬದಲಾಯಿಸಿ]

ರಾಮಫಲವನ್ನು ಬೀಜದಿಂದ ಅಭಿವೃದ್ಧಿ ಮಾಡುತ್ತಾರೆ. ಇದು ಎಲ್ಲ ಬಗೆಯ ಮಣ್ಣುಗಳಲ್ಲೂ ಹುಲುಸಾಗಿ ಬೆಳೆಯಬಲ್ಲುದು.

ರಾಮಫಲವನ್ನು ಉದ್ಯಾನಗಳಲ್ಲಿ, ಶಾಲೆ, ಕಛೇರಿ ಮತ್ತು ಬಂಗಲೆಯ ಆವರಣಗಳಲ್ಲಿ ಬೆಳೆಸುತ್ತಾರೆ. ರೈತಾಪಿಜನ ತೋಪುಗಳಲ್ಲಿ, ಹೊಲಗದ್ದೆಗಳ ಅಂಚಿನಲ್ಲಿ ಮತ್ತು ಮನೆಯ ಹಿತ್ತಲುಗಳಲ್ಲಿ ಬೆಳೆಸುತ್ತಾರೆ. ರಾಮಫಲದ ಇನ್ನೊಂದು ಹತ್ತಿರ ಸಂಬಂಧಿ ಮುಳ್ಳುರಾಮಫಲ.

ಉಪಯೋಗಗಳು

[ಬದಲಾಯಿಸಿ]

ಇದರ ಹಣ್ಣು ರುಚಿಕರ. ಒಳ್ಳೆಯ ಬೇಡಿಕೆ ಹೊಂದಿದೆ. ಇದರ ಬೀಜದಲ್ಲಿ ಸಿ ವಿಟಮಿನ್‌, ಕ್ಯಾಲ್ಸಿಯಂ, ಫಾಸ್ಪರಸ್‌, ಪೊಟಾಷಿಯಂ, ಮೆಗ್ನೇಷಿಯಂಗಳು ಇರುತ್ತವೆ. ರಾಮಫಲದ ತಿರುಳಿನ ರಸ ಶಕ್ತಿವರ್ಧಕ.[] ಇದರ ಬೀಜದ ಎಣ್ಣೆಯನ್ನು ಕ್ರಿಮಿನಾಶಕವಾಗಿಯೂ ಉಪಯೋಗಿಸುತ್ತಾರೆ.

ಇದರ ತೊಗಟೆಯಲ್ಲಿ ಅನೋನೇನ್ ಎಂಬ ಆಲ್ಕಲಾಯ್ಡ್ ಇದೆ : ಇದು ತುಂಬ ಶಕ್ತಿಶಾಲಿ ಪ್ರತಿಬಂಧಕ (ಅಸ್ಟ್ರಿಂಜೆಂಟ್) ಎನಿಸಿದೆ. ಅನೇಕ ತರದ ಖಾಯಿಲೆಗಳನ್ನು ತಡೆಗಟ್ಟುವ ಸಾಮರ್ಥ್ಯ ಈ ಪ್ರತಿಬಂಧಕಕ್ಕೆ ಇದೆ. ಪಕ್ವವಾಗದ ಮತ್ತು ಒಣಗಿದ ಹಣ್ಣು ಆಮಶಂಕೆ ಭೇದಿ ನಿವಾರಣೆಗೆ ಒಳ್ಳೆಯ ಮದ್ದು ಮತ್ತು ಜಂತುನಾಶಕವೂ ಹೌದು. ಬೀಜದ ಪೊಪ್ಪು ಬಹಳ ವಿಷಭರಿತವಾದುದು.

ಆಧಾರ ಗ್ರಂಥಗಳು

[ಬದಲಾಯಿಸಿ]
  • 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.

ಉಲ್ಲೇಖಗಳು

[ಬದಲಾಯಿಸಿ]
  1. Verspagen, N. & Erkens, R.H.J. (2020). "Annona reticulata". IUCN Red List of Threatened Species. 2020: e.T136996530A142422959. doi:10.2305/IUCN.UK.2020-2.RLTS.T136996530A142422959.en. Retrieved 10 December 2022.
  2. ೨.೦ ೨.೧ "Annona reticulata". Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved 16 April 2008.
  3. "Annona reticulata (bullock's heart)". CABI. 31 October 2019. Retrieved 13 November 2019.
  4. "ರಾಮಫಲ". sobagu.com. Retrieved 8-2-2014. {{cite web}}: Check date values in: |accessdate= (help)
  5. Natural Resources Conservation Service. "Plants Profile, Annona reticulata L." The Plants Database. United States Department of Agriculture. Retrieved 16 April 2008.
  6. Julia F. Morton (1987). "Custard apple, Annona reticulata". From Fruits of Warm Climates, 1987; republished by NewCROP, the New Crop Resource Online Program, Center for New Crops & Plant Products, Purdue University. Retrieved 13 November 2019.
  7. "ಚಳಿಗಾಲದ ಹಣ್ಣು-ರಾಮಫಲ". udayavani.com/. Archived from the original on 2013-03-08. Retrieved 8-2-2014. {{cite web}}: Check date values in: |accessdate= (help)
  8. Subhadra Bandhu, S. (2001). Underutilized tropical fruits of Thailand.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರಾಮಫಲ&oldid=1169000" ಇಂದ ಪಡೆಯಲ್ಪಟ್ಟಿದೆ