ಹೆಚ್ಚಿನ ಸಹಾಯ ಪಡೆಯಲು ಅಂಚೆಪೆಟ್ಟಿಗೆಗೆ ನೋಂದಾಯಿಸಿಕೊಂಡು wikikn-l@lists.wikimedia.org ವಿಳಾಸಕ್ಕೆ ಇ-ಮೇಲ್ ಕಳುಹಿಸಬಹುದು.
ಕನ್ನಡ ವಿಕಿಪೀಡಿಯದ ಐ.ಆರ್.ಸಿ#wikimedia-knಸಂಪರ್ಕ ಸಾಧಿಸಿ ಚಾನಲ್ ಮುಖಾಂತರ ಸಂಪರ್ಕ ಸಾಧಿಸಬಹುದು.
ವಿಶೇಷ ಲೇಖನ
ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.
ಈ ತಿಂಗಳ ವಿಕಿಪೀಡಿಯ ಸಂಪಾದಕರು ಶ್ರೀಕಾಂತ ಮಿಶ್ರಿಕೋಟಿ. ಇವರು ವಿಕಿಪೀಡಿಯದಲ್ಲಿ Shreekant.mishrikoti ಎಂದು ಪರಿಚಿತ. ಶ್ರೀಕಾಂತ ಮಿಶ್ರಿಕೋಟಿಯವರು ಮಾರ್ಚ್ ೨೦೦೬ರಿಂದ ವಿಕಿಪೀಡಿಯದಲ್ಲಿ ಸಂಪಾದನೆಯನ್ನು ಆರಂಭಿಸಿದ್ದಾರೆ. ಇವರು ಕನ್ನಡ ವಿಕಿಪೀಡಿಯಕ್ಕಿಂತ ಕನ್ನಡ ವಿಕಿಸೋರ್ಸ್‍ನಲ್ಲಿ ಹೆಚ್ಚು ಕೆಲಸ ಮಾಡಿದಾರೆ.
ಪರಿಚಯ
ಶ್ರೀಕಾಂತ ಮಿಶ್ರಿಕೋಟಿ ಅವರು ಮೂಲತಃ ಕರ್ನಾಟಕದಧಾರವಾಡದವರು. ಪ್ರಸ್ತುತ ಇವರು ಮುಂಬೈನಲ್ಲಿ ನೆಲೆಸಿದ್ದಾರೆ. ಇವರು ಮುಂಬೈಯಲ್ಲಿಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಕಚೇರಿಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ, ಕಂಪ್ಯೂಟರ್, ಓದು, ಸಂಗೀತ ಇವರ ಆಸಕ್ತಿಯ ಕ್ಷೇತ್ರ. ತಾವು ಓದಿದ ಒಳ್ಳೆಯ ಸಂಗತಿಗಳನ್ನು sampada.net ತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹರಿದಾಸ ತಾಣಕ್ಕಾಗಿ ಸಾವಿರಕ್ಕೂ ಹೆಚ್ಚು ದಾಸರ ಪದಗಳನ್ನು, ಚಿಲುಮೆ ತಾಣದಲ್ಲಿ ಆರುನೂರಕ್ಕೂ ಹೆಚ್ಚು ಶಿಶುನಾಳ ಶರೀಫರ ತತ್ವಪದಗಳನ್ನು ಕೀ ಇನ್ ಮಾಡಿದ್ದಾರೆ. ಕನ್ನಡ ಭಾಷೆಗೆ ಸ್ಪೆಲ್ ಚೆಕ್ಕರಾಗಿಯೂ ಲಿನೆಕ್ಸ್ ಕನ್ನಡ ಆವೃತ್ತಿಗಾಗಿಯೂ ಶ್ರಮಿಸಿದ್ದಾರೆ. ಕನ್ನಡ ವಿಕಿಪೀಡಿಯಕ್ಕಾಗಿ ಅನೇಕ ಲೇಖನಗಳನ್ನು ಇಂಗ್ಲಿಷ್‌ನಿಂದ ಅನುವಾದಿಸಿದ್ದಾರೆ. ಸದ್ಯಕೆ ಮೈಸೂರು ವಿಶ್ವವಿದ್ಯಾಲಯದವಿಶ್ವಕೋಶದ ಸುಮಾರು ೭೦೦೦ ಲೇಖನಗಳನ್ನು ಕನ್ನಡ ವಿಕಿಸೋರ್ಸ್‍ಸಿಗೆ ಸೇರಿಸಿದ್ದಾರೆ. ಕನ್ನಡ ವಿಕಿಪೀಡಿಯವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಡಿಜಿಟಲೀಕರಿಸಿ ಕನ್ನಡ ವಿಕಿಸೋರ್ಸ್ ತಾಣಕ್ಕೆ ಅಪ್ಲೋಡ್ ಮಾಡುವ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ.
ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಆತಿಥೇಯವಹಿಸಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದಯವಿಟ್ಟು ದೇಣಿಗೆ ನೀಡಲು ಈ ಪುಟಕ್ಕೆ ಭೇಟಿ ನೀಡಿ (ದೇಣಿಗೆ ಲಿಂಕ್ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ & ಜಾಲತಾಣ ಆಂಗ್ಲ ಭಾಷೆಯಲ್ಲಿದೆ).