ವಿಷಯಕ್ಕೆ ಹೋಗು

ಸದಸ್ಯ:LipthiKolliraD1940553/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[][]

==ಪರಿವಿಡಿ=
       ನಾನು ಲಿಪ್ತಿ,ನಾನು ಅತಿ ಸುಂದರವಾದ ಕೊಡಗಿನಲ್ಲಿ ಜನಿಸ್ಸಿದು. ನನಗೆ ತುಂಬಾ ಇಷ್ಟವಾಗಿರುವವರು ಯಾರೆಂದರೆ ನನ್ನ ತಂದೆ ಮತ್ತು ತಾಯಿ. ನನ್ನ ತಂದೆಯ ಹೆಸರು ಧರ್ಮಜ ಮತ್ತು ತಾಯಿಯ ಹೆಸರು ಗಂಗಮ್ಮ. ನನಗೆ ಒಬ್ಬ ತಮ್ಮನು ಕೂಡ ಇದ್ದಾನೆ. ನಾನು ರೈತಾಪಿ ಕುಟುಂಬದಲ್ಲಿ ಜನಿಸಿದವಳು , ನನ್ನ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ್ದು ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ . ಅದು ಗೋಣಿಕೊಪ್ಪದಲ್ಲಿ ಇದೆ. 
       ನಾನು ನನ್ನ ಕುಟುಂಬದ ಮೊದಲನೆಯ ಹೆಣ್ಣು ಮಗು .ನನಗೆ ಇಡೀ ಕುಟುಂಬದ ವಾತ್ಸಲ್ಯ ಹಾಗು ಮಮಕಾರವನ್ನು ನೀಡುತ್ತಾ ಬೆಳೆಸಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಅಜ್ಜ-ಅಜ್ಜಿ,ಅತ್ತೆ-ಮಾವಂದಿರರು ನನ್ನನು ತುಂಬಾ ಕನಿಕರದಿಂದ ಹಾಗು ಮಮತೆಯಿಂದ ಬೆಳೆಸಿದ್ದಾರೆ .ನನಗೆ ಬೇಕಾಗಿರುವುದನ್ನೆಲ್ಲ ನನ್ನ ತಂದೆ-ತಾಯಿ ನನಗೆ ಕೊಡಿಸಿದ್ದಾರೆ. ಈ ರೀತಿ ಬೆಳೆದಿರುವುದರಿಂದ ನಾನು ತುಂಬಾ ಕೋಮಲ ಸ್ವಭಾವವುಳ್ಳವಳಾಗಿದ್ದಿನಿ. ನನ್ನ ಜೀವನದಲ್ಲಿ ನನಗೆ ಯಾವಗೆಲ್ಲ ಧೈರ್ಯ ಬೆಕಾಗಿತ್ತೊ ಆಗೆಲ್ಲ ನನಗೆ ಧೈರ್ಯವನ್ನು ತುಂಬಿರುವವರೆಂದರೆ ನನ್ನ ತಂದೆ.  
ನನಗೆ ಪ್ರಯಾಣವೆಂದರೆ ತುಂಬ ಇಷ್ಟ ,ನಾನು ಮಡಿಕೇರಿಗೆ ಮೊದಲ ಬಾರಿ ಹೋದಾಗ ನನಗೆ ಅಲ್ಲಿನ ಪ್ರದೇಶ ತುಂಬ ಮನೋಹರವಾಗಿ ಕಾಣಿಸಿತ್ತು ,ನನಗೆ ಪಕ್ಷಿಗಳೆಂದರೆ ತುಂಬ ಇಷ್ಟ,ಅಲ್ಲಿ ನಾನು ಮೊದಲ ಬಾರಿ ವಿದ-ವಿದವಾದ ಪಕ್ಷಿಗಳನ್ನು ನೋಡಿದೆ. ಅಲ್ಲಿನ ವಾತಾವರಣ ನನಗೆ ತುಂಬ ಇಷ್ಟ. ನಮ್ಮ ಶಾಲೆಯಿಂದ ಒಮ್ಮೆ ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ಕಲೆ ಮತ್ತು ಅಲ್ಲಿನ ಆಚರವನ್ನು ನಮಗೆ ತಿಳಿಸಿದರು. ಅಲ್ಲಿನ ಬೆಟ್ಟಗಳು ನನ್ನ ಮನವನ್ನು ಆಕರ್ಷಿಸಿತು ಹಾಗೂ ನನ್ನ ಮನಸ್ಸಿಗೆ ಸಂತಸವನ್ನು ಮೂಡಿಸಿತು.
==ವಿಧ್ಯಾಭ್ಯಾಸ==
 ನಮ್ಮ ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿತ್ತು. ಅದರಲ್ಲಿರುವ ಎಲ್ಲ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದೇನೆ. ನಮ್ಮ ಶಾಲೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ನನ್ನ ಸ್ನೇಹಿತರ ಜೊತೆಯಲ್ಲಿ ನಾನು ಕೂಡ ಭಾಗವಹಿಸಿ ತುಂಬ ಖುಷಿ ಪಡುತ್ತಿದ್ದೆ. ನನ್ನ ಅಧ್ಯಪಕರು ನನನ್ನು ಎಲ್ಲಾ ಕಾರ್ಯಕ್ರಮಗಳಲ್ಲಿಯು ಭಾಗವಹಿಸಿದ್ದಕ್ಕೆ ನನ್ನನ್ನು ಹೊಗಳುತ್ತಿದ್ದರು.
       ನನ್ನನು  ಸೈನ್ಯಕ್ಕೆ ಸೇರಿಸಬೇಕೆಂಬ ಹಂಬಲ ನನ್ನ ತಂದೆಗೆ ಇತ್ತು. ನನಗೆ ನನ್ನ ಕುಟುಂಬವೆಂದರೆ ಪ್ರಾಣ, ಅದರಲ್ಲಿಯು ನನ್ನ ತಮ್ಮನೆಂದರೆ ತುಂಬಾ ಪ್ರೀತಿ, ನಾವಿಬ್ಬರು ಚಿಕ್ಕಂದಿನಿದಲೂ ಆಟವಾಡುತ್ತಾ ಬೆಳೆದವರು. ಈಗ ನಾನು ಬೆಂಗಳೂರಿನಲ್ಲಿ ವಾಸಮಾಡುತಿದ್ದಿನಿ,ನನ್ನ ಎಲ್ಲಾ ಕುಟ್ಟುಂಬದವರು ನನ್ನ ಗ್ರಾಮದಲ್ಲಿ ವಾಸ ಮಾಡುತ್ತಿದ್ದರೆ. ನನ್ನ ಅಣ್ಣ-ತಮ್ಮಂದಿರು ಹಾಗು ಅಕ್ಕ-ತಂಗಿಯರು ನನನ್ನು ತುಂಬಾ ವಾತ್ಸಲ್ಯದಿಂದ ನೋಡಿಕೋಂಡಿದ್ದರೆ. ನಾನು ಸಾಯಂಕಾಲದಲ್ಲಿ ಆಟವಾಡಲು ಆಟದ ಮೈದಾನದಲ್ಲಿ ಹೋಗಿ ಶಟಲ್ ದಿನ ನಿತ್ಯ ಆಡುತ್ತೆನೆ.
==ಆಸಕ್ತಿ==
 ನನಗೆ ಚಿತ್ರಕಲೆಯೆಂದರೆ ತುಂಬಾ ಆಸಕ್ತಿ ,ನಾನು ಬಿಡಿಸಿದ್ದ ಚಿತ್ರಗಳಿಗೆಲ್ಲ ನನಗೆ ಹಳವಾರು ಪ್ರಶಸ್ತಿ ದೊರಕಿವೆ ಮತ್ತೆ ಅವುಗಳನ್ನೆಲ್ಲ ನಾನು ಶೇಕರಿಸಿ ಇಟ್ಟಿದ್ದೇನೆ. ನನಗೆ ಇನ್ನು ಪ್ರಿಯಕರವಾದದು ಪದ್ಯವನ್ನು ಹೇಳುವುದು ಮತ್ತೆ ಅದರಲ್ಲಿ ನನಗೆ ಹಲವಾರು ಬಹುಮಾನಗಳೂ ಸಹ ನೀಡಾಲಾಗಿದೆ. ನನಗೆ ಇಂತಹ ಪ್ರಶಸ್ತಿ ದೊರಕುವಾಗ ನನಗೆ ತುಂಬಾ ಸಂತೋಶವಾಗುತ್ತದೆ, ನನಗೆ ಶಟಲ್  ಮಿಟನ್ಯೆಂದರೆ ತುಂಬಾ ಪ್ರೀತಿ ಆದುದರಿಂದ ನಾನು ನನ್ನ ಅಮ್ಮನ ಜೊತೆಯಲ್ಲಿ ಆಡುತ್ತೆನೆ.
       ನನಗೆ ಊಟವೆಂದರೆ ತುಂಬಾ ಇಷ್ಟ ಹಾಗೆಯೆ ಅಡುಗೆ ಮಾಡುವುದೆಂದರು ತುಂಬ ಇಷ್ಟ.ನಾನು ಅಡುಗೆ ಮಾಡಲು ಕಲಿತ್ತಿದ್ದು ನನ್ನ ತಾಯಿಯ ಮೂಲಕ.ನಾನು ಹಾಗು ನನ್ನ ಅಮ್ಮ ಇಬ್ಬರು ಸೇರಿ ರುಚಿಯಾದ ಕೇಕುಗಳನ್ನು ಮಾಡುತ್ತೆವೆ. ನಾನು ಅಡುಗೆ ಮನೆಯಲ್ಲಿ ಹೋಗಿ ವಿಧವಿಧವಾದ ಆಹಾರ ಮಾಡಲು ಪ್ರಯತ್ನಿಸುತ್ತೆನೆ.
       ನನಗೆ ನನ್ನ ಶಾಲೆಯೆಂದರೆ ತುಂಬಾ ಇಷ್ಟ ಮತ್ತು ನಮ್ಮ ಶಾಲೆಯಲ್ಲಿ ತಯಾರಿಸುವ ಊಟವೆಂದರೆ ಬಹಳ ಇಷ್ಟ. ನಾನು ನನ್ನ ಮನೆಯಲ್ಲಿ ತಿನ್ನುವ ಊಟಕ್ಕಿಂತ ಶಾಲೆಯಲ್ಲಿ ಊಟ ಮಾಡಿರುವುದೆ ಹೆಚ್ಚು, ಶಾಲೆಯಲ್ಲಿ ಆಗುವ ಎಲ್ಲ ಕಾರ್ಯಕ್ರಮದಲ್ಲಿಯು ಭಾಗವಹಿಸುತ್ತಿದೆ,ಅದರಲ್ಲಿಯು ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಳವಾರು ಪ್ರಶಸ್ತಿಯನ್ನು ಗೆದ್ದಿದಿನಿ.
       ನಾನು ಹತ್ತನೆಯ ತರಗತಿಯನಂತರ ನಮ್ಮ ಶಾಲೆಯದೆಯದಾ ವಿದ್ಯನಿಕೆತನ್ ಕಾಲೆಜಿನಲ್ಲಿ ಸೆರಿಕೊಂಡೆ ಅಲ್ಲಿ ನನಗೆ ಹಳವರು ಸ್ನೇಹಿತರು ಸಿಕ್ಕಿದರು, ನನ್ನ ಜೀವನದಲ್ಲಿ ಅವರ ಕೊಡುಗೆ ಹಳವಾರು  ,ನನ್ನ ಕಾಲೆಜೀನ ವಾತಾವರಣ ನನಗೆ ತುಂಬ ಇಷ್ಟ ಆದರೆ ನನ್ನನು ಆಟವಾಡಲು ಅವರು ಬಿಡುತ್ತಿರಲಿಲ್ಲ.
       ನಾನು ಈಗ ಕ್ರೈಸ್ಟ್  ಕಾಲೆಜಿನಲ್ಲಿ ಓದುತ್ತಿದ್ದೆನೆ, ನನಗೆ ಇಲ್ಲಿ ಹಳವರು ಸ್ನೇಹಿತರು ದೋರಕ್ಕಿದ್ದರೆ ,ನಾನು ನನ್ನ ಜೀವನದಲ್ಲಿ ಹಳವಾರು ಪ್ರತಿಭಾವಂತ ವ್ಯಕ್ತಿಗಳನ್ನು ಇಲ್ಲಿ ನೊಡಲು ಸಾದ್ಯವಾಯಿತು, ನಾನು ನನ್ನ ತಂದೆ ಹಾಗು ತಾಯಿಗೆ ನನ್ನ ಕೃತಜ಼ತೆಯನ್ನು ಸಲ್ಲಿಸುತ್ತೆನೆ.ನಾನು ನನ್ನ ಜೀವನದಲ್ಲಿ ಎಲ್ಲರಿಗು ಸಹಾಯಕಾರಿಯಗಬೇಕೆಂದು ಆಸೆಪಡುತ್ತೆನೆ.


==ಕೊಡಗು==
[ಬದಲಾಯಿಸಿ]


ನನ್ನ ಹೆಸರು ಲಿಪ್ತಿ. ನನ್ನ ತಂದೆಯ ಹೆಸರು ಧರ್ಮಜ. ನಾನು ಹುಟ್ಟಿದ್ದು ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ. ಕೊಡಗು ಪ್ರಕೃತಿ ಸೌಂದರ್ಯದ ಬೆಡಗು. ಕೊಡಗಿನ ಪ್ರಕೃತಿ ಸೌಂದರ್ಯವನ್ನು ನೋಡುತ್ತ ಕವನ ಸಂಕಲನವನ್ನು ಮಾಡಬಹುದು. ಕೊಡಗನ್ನು ಕುರಿತು ಕವಿ ಪಂಚೆ ಮಂಗೇಶರಾಯರು ಈಗೆನ್ನುತ್ತರೆ.

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ

ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ

ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ

ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ

ಅಲ್ಲೆ ಆ ಕಡೆ ನೋಡಲಾ

ಅಲ್ಲೆ ಕೊಡಗರ ನಾಡಲಾ

ಅಲ್ಲೆ ಕೊಡಗರ ಬೀಡಲಾ

ಭೂಲಕ್ಷ್ಮಿಯು ದೇವರ ಸನ್ನಿಧಾನದಲ್ಲಿರಬೇಕೆಂಬ ಬಯಕೆಯಿಂದ ಗಂಭೀರ-ವೈಯಾರದಿಂದ ಬಂದು ನೆಲೆಸಿದ ಕ್ಷೇತ್ರ; ಭೂಮಿಯನ್ನು ತಣಿಸಿ ಜನರಿಗೆ ಅನ್ನವನ್ನೀಯುವ ಕಾವೇರಿ ಹುಟ್ಟಿ ಹರಿಯಲಾರಂಭಿಸುವ ಪ್ರದೇಶ ಕೊಡಗು.

ಕೊಡಗಿಗೆ ಕೂರ್ಗ್ (Coorg) ಎಂಬ ಆಂಗ್ಲೀಯ ಬಳಕೆಯೂ ಇದೆ. ಭಾರತದ 'ಸ್ಕಾಟ್ ಲ್ಯಾಂಡ್' ಎಂಬ ಹೆಸರೂ ಇದಕ್ಕಿದೆ.

ಕೊಡವರು ಇಲ್ಲಿಯ ಮುಖ್ಯ (ಮೂಲ) ಜನರು. ಕೊಡವ ತಕ್ಕ್ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ಅರೆಗನ್ನಡ, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು ೫೦೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವರು (ಅಥವಾ ರಾವುಲರು), ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಅಡಿಯರು ಎಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.


ಕೊಡಗಿನಲ್ಲಿ ಮೂರು ತಾಲೂಕುಗಳಿವೆ. ಕೊಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರಗಳಿವೆ.

  1. ಮಡಿಕೇರಿ
  2. ವಿರಾಜಪೇಟೆ
  3. ಸೋಮವಾರಪೇಟೆ

ಮಡಿಕೇರಿ ತಾಲುಕಿನ ಪ್ರೇಕ್ಷಣೀಯ ಸ್ಥಳಗಳು

[ಬದಲಾಯಿಸಿ]

ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಖ್ಯವಾಗಿ ಮಡಿಕೇರಿ ತಾಲೂಕಿನಲ್ಲಿ

  1. ಅಬ್ಬಿ ಜಲಪಾತ,

  2. ಓಂಕಾರೇಶ್ವರ ದೇವಸ್ಥಾನ,

  3. ಗದ್ದಿಗೆ,

  4. ಅರಮನೆ,
  5. ರಾಜಸೀಟ್,

  6. ತಲಕಾವೇರಿ, ಇತ್ಯಾದಿಗಳಾದರೆ,

ವಿರಾಜಪೇಟೆ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು

[ಬದಲಾಯಿಸಿ]

ವಿರಾಜಪೇಟೆ ತಾಲೂಕಿನಲ್ಲಿ-

  1. ನಾಗರಹೊಳೆ ,
  2. ಇರ್ಪು,
  3. ಕುಂದ,
  4. ಟೀ ಏಸ್ಟೇಟ್,
  5. ಸೈಂಟ್ ಏನ್ಸ್ ಚರ್ಚ್,
  6. ಇಗ್ಗುತ್ತಪ್ಪ ದೇವಸ್ಥಾನ,
  7. ನಾಲ್ಕುನಾಡು ಅರಮನೆ, ಮುಂತಾದವು ಇವೆ.

ಸೋಮವಾರಪೇಟೆ ತಾಲುಕಿನ ಪ್ರೇಕ್ಷಣೀಯ ಸ್ಥಳಗಳು

[ಬದಲಾಯಿಸಿ]

ಸೋಮವಾರಪೇಟೆ ತಾಲೂಕಿನಲ್ಲಿ-

  1. ಕಾವೇರಿ ನಿಸರ್ಗಧಾಮ,
  2. ಟಿಬೆಟ್ಟಿನ ಸ್ವರ್ಣದೇಗುಲ,
  3. ವೀರಭೂಮಿ,
  4. ದುಬಾರೆ ಅರಣ್ಯ,
  5. ಹಾರಂಗಿ ಜಲಾಶಯ,
  6. ಚಿಕ್ಲಿ ಹೊಳೆ,
  7. ಹೊನ್ನಮ್ಮನ ಕೆರೆ,
  8. ಮಲ್ಲಳ್ಳಿ ಜಲಪಾತ, ಮೊದಲಾದವಿವೆ.


  1. https://en.wikipedia.org/wiki/Madikeri
  2. https://www.tourmyindia.com/states/karnataka/madikeri.html