ಮಲ್ಲಳ್ಳಿ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಲ್ಲಳ್ಳಿ ಜಲಪಾತವು ಸೋಮವಾರಪೇಟೆಯಿಂದ ಸುಮಾರು ೨೫ ಕಿ.ಮೀ ದೂರದಲ್ಲಿದೆ.


ಮಲ್ಲಳ್ಳಿ.jpg


ಮಲ್ಲಳ್ಳಿ ಜಲಪಾತ ಈ ಅದ್ಭುತವಾದ ಜಲಪಾತವು ಸ್ವರ್ಗದಿಂದ ಧರೆಗೆ ಇಳಿಯುತ್ತಿರುವ ಗಂಗಾ ಮಾತೆಯಂತೆ ಕಾಣುತ್ತದೆ. ಕೊಡಗು ಜಿಲ್ಲೆಯಲ್ಲಿರುವ ಈ ಸುಂದರವಾದ ಜಲಪಾತವನ್ನು ಕಾಣಲು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪುಷ್ಪಗಿರಿ ಬೆಟ್ಟಗಳ ತುದಿಯಲ್ಲಿ ಈ ಜಲಪಾತವಿದ್ದು, ಸೋಮವಾರ ಪೇಟೆಯಿಂದ ಸುಮಾರು ೨೫ ಕಿ.ಮೀ ಗಳಷ್ಟು ಅಂತರದಲ್ಲಿದೆ.