ಶಶಿಕಲಾ ಶ್ರೀಕಾಂತ ಕುಲಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ವಿದುಷಿ, ಶಶಿಕಲಾ ಶ್ರೀಕಾಂತ ಗುರುವ ಕುಲಹಳ್ಳಿ ',ಆಕಾಶವಾಣಿ ಮತ್ತು ದೂರದರ್ಶನದ 'ಎ ದರ್ಜೆ ಕಲಾವಿದೆ'. ಕಿರಾಣಾ ಘರಾನದ ಖ್ಯಾತ ಗಾಯಕ, 'ಪಂ. ಸಂಗಮೇಶ್ವರ್ ಗುರವ' ಅವರ ಮಗಳು. ತಂದೆಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪಾಠ ಕಲಿತರು. ಕಿರಾಣ ಘರಾನದ ಮತ್ತೊಬ್ಬ ಶ್ರೇಷ್ಠ ಕಲಾವಿದ, 'ಪಂ. ಕೈವಲ್ಯ ಕುಮಾರ ಗುರವ 'ಪ್ರಭಾವವೂ ಅವರಿಗಾಯಿತು. ಶಶಿಕಲಾರವರು, ವಿಜಯಪುರದ ನಿವಾಸಿ, ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರಪದವಿ ಗಳಿಸಿದರು. ಶಶಿಕಲಾರವರು ನಾಡಿನಾದ್ಯಂತ ಸಂಗೀತ ಕಚೇರಿಗಳನ್ನು ನೀಡಿದ್ದಾರೆ.

ದೂರದರ್ಶನದ ಪ್ರಸ್ತುತಿ[ಬದಲಾಯಿಸಿ]

ಮೇರಿ ಆವಾಜ್ ಸುನೋ ಎನ್ನುವ ದೆಹಲಿ ದೂರದರ್ಶದ ಪ್ರಸ್ತುತಿಯಲ್ಲಿ ಅವರು ಹಾಡಿದ್ದಾರೆ.

ಕನ್ನಡ ಚಲನ ಚಿತ್ರದಲ್ಲಿ[ಬದಲಾಯಿಸಿ]

  • 'ಲಡ್ಡು ಮುತ್ಯಾ' ಎಂಬ ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.
  • 'ಕೆಚ್ಚೆದೆಯ ಗಂಡು' ಚಿತ್ರಕ್ಕೆ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

  • ಹುಬ್ಬಳ್ಳಿ-ಧಾರವಾಡ ಮಹಾನಗರಸಭೆಯ ರಾಜ್ಯೋತ್ಸವ ಪ್ರಶಸ್ತಿ
  • ಸವದತ್ತಿ ಪ್ರಶಸ್ತಿ
  • ವಿಜಯಪುರದ ಸಿದ್ಧೇಶ್ವರ ಸಂಸ್ಸ್ಥೆ ಪ್ರಶಸ್ತಿ,
  • ಕರ್ನಾಟಕ ಯುವ ಪ್ರಶಸ್ತಿ
  • ಬಿಜಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  • ಕರ್ನಾಟಕ ಸರಕಾರದ ಕ್ರೀಡಾ ಇಲಾಖೆ ಉದಯೋನ್ಮುಖ ಕಲಾವಿದರಿಗೆ ನೀಡುವ ರಾಜ್ಯ ಪ್ರಶಸ್ತಿ, ಪ್ರಮುಖವಾದವುಗಳು.

ಸಂಗೀತ ಪಾಠ[ಬದಲಾಯಿಸಿ]

ಶಶಿಕಲಾರವರು ಹಾಡಿದ ಹಿಂದೂಸ್ತಾನಿ ಸಂಗೀತದ ಸಿ.ಡಿಗಳು ಬಹಳ ಪ್ರಸಿದ್ಧವಾಗಿದೆ. ಹೀಗೆ ಹಲವಾರು ವೇದಿಕೆಗಳಲ್ಲಿ ತಮ್ಮ ಕಾರ್ಯ ಕ್ರಮಗಳನ್ನು ನಡೆಸಿ ಕೊಡುವುದರ ಜೊತೆಗೆ ಬಿಜಾಪುರ ಮತ್ತು ಬೆಂಗಳೂರಿನ ಮಲ್ಲೇಶ್ವರದಲ್ಲಿ ನೂರಾರು ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದಾರೆ.

ಉಲ್ಲೇಖ[ಬದಲಾಯಿಸಿ]

  1. ಉಮಾ ಅನಂತ್, ಸುಧಾ, ೧೨, ಸೆಪ್ಟೆಂಬರ್, ೨೦೧೩, ಪು. ೫೭