"ಹೃಷಿಕೇಶ್ ಮುಖರ್ಜಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
replaced [[Category: → [[ವರ್ಗ: , general fixes enabled
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
ಚು (replaced [[Category: → [[ವರ್ಗ: , general fixes enabled)

==ಹೃಷಿದಾ ನಿರ್ದೇಶಿಸಿದ ಹಲವು ಚಿತ್ರಗಳಲ್ಲಿ, ಜನರ ಮನ್ನಣೆ ಗಳಿಸಿದ ಚಿತ್ರಗಳು ==

[[ರಾಜೇಶ್ ಖನ್ನ]] ಮತ್ತು [[ಅಮಿತಾಭ್ ಬಚ್ಚನ್]] ನಟಿಸಿದ್ದ ' ಆನಂದ್', ಅಮಿತಾಬ್, [[ಸಂಜೀವ್ ಕುಮಾರ್]] ಮತ್ತು [[ಜಯಾ ಬಚ್ಚನ್| ಜಯಾ ಭಾದುರಿ]] ನಟಿಸಿದ 'ಅಭಿಮಾನ್' , ಅಮಿತಾಭ್, ಜಯಾ ಭಾದುರಿ ಮತ್ತು [[ಧರ್ಮೇಂದ್ರ]] ನಟಿಸಿದ `ಚುಪ್ಕೆ ಚುಪ್ಕೆ' ಹಾಗೂ [[ರೇಖಾ (ಹಿಂದಿ ಚಿತ್ರನಟಿ)|ರೇಖಾ]] ನಟಿಸಿದ್ದ [[ಖೂಬ್ ಸೂರತ್]] ಸೇರಿದಂತೆ ಅನೇಕ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

''ಹೃಷಿದಾ'' ಎಂದೇ ಚಿತ್ರರಂಗದಲ್ಲಿ ಖ್ಯಾತರಾಗಿದ್ದ ಹೃಷಿಕೇಶ್ ಮುಖರ್ಜಿ ಹುಟ್ಟಿದ್ದು [[೧೯೨೨]]ರ [[ಸೆಪ್ಟೆಂಬರ್ ೩೦]]ರಂದು, ಕಲ್ಕತ್ತಾದಲ್ಲಿ. ತಮ್ಮ ಗುರು ಬಿಮಲ್ ರಾಯ್ ಅವರ ಸಹಾಯಕರಾಗುವ ಮೂಲಕ [[೧೯೫೧]]ರಲ್ಲಿ ಚಿತ್ರಲೋಕಕ್ಕೆ ಅಡಿಯಿರಿಸಿದರು. [[೧೯೫೭]]ರಲ್ಲಿ ನಿರ್ದೇಶಿಸಿದ '''ಮುಸಾಫಿರ್'''' ಹೃಷಿಕೇಶ್ ಅವರ ಮೊದಲ ಚಿತ್ರ.

[[೧೯೬೦]]ರಲ್ಲಿ ನಿರ್ಮಾಣಗೊಂಡ 'ಅನುರಾಧ' ಚಿತ್ರದೊಂದಿಗೆ ಮುಖರ್ಜಿ ಯಶಸ್ಸಿನ ದಾರಿ ಹಿಡಿದರು. ಕರ್ತವ್ಯವನ್ನೇ ದೇವರು ಎಂದು ಭಾವಿಸುವ ವೈದ್ಯನೊಬ್ಬ ತನ್ನ ಕುಟುಂಬವನ್ನೇ ಕಡೆಗಣಿಸುವ ಕತೆ 'ಅನುರಾಧ'ದಲ್ಲಿತ್ತು. ಈ ಚಿತ್ರಕ್ಕೆ ರಾಷ್ಟ್ರಪತಿಗಳ ಚಿನ್ನದ ಪದಕವೂ ಲಭಿಸಿತು. ಈ ಚಿತ್ರಕ್ಕೆ ಜಗದ್ವಿಖ್ಯಾತ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರು ಸಂಗೀತ ಸಂಯೋಜಿಸಿದ್ದರು.

* ಗೋಲ್-ಮಾಲ್ --- [[ಆಸೆಗೊಬ್ಬ ಮೀಸೆಗೊಬ್ಬ]]

* ಚುಪ್ಕೆ-ಚುಪ್ಕೆ --- [[ಜೋಕ್-ಫಾಲ್ಸ್]]

* ಬಾವರ್ಚಿ --- [[#೭೩, ಶಾಂತಿ ನಿವಾಸ]]

== ಹೃಷಿದಾರವರ ಕಲಾವಂತಿಕೆ, ಹಾಗೂ ಸಾಮಾಜಿಕ ಪ್ರಜ್ಞೆಗೆ ಕನ್ನಡಿಹಿಡಿದ ಪ್ರಭಾವಿ ದೃಷ್ಯಮಾಧ್ಯಮ-[[ಬಾವರ್ಚಿ]] ಚಿತ್ರ ==
ಚಿತ್ರದ ಮೊದಲು, ಪರಿಚಯವನ್ನು [[ಅಮಿತಾಬ್ ಬಚ್ಚನ್ ]] ಮಾಡುತ್ತಾರೆ. ಕೊನೆಗೆ ಚಿತ್ರದ ಅಂತ್ಯವೂ ಅಮಿತಾಬ್ ರವರ ಧ್ವನಿ '[[ಐಸ ರಹ ರಘು ನಂದನ್ ಕೀ ಯಾತ್ರ]], [[ಎಕ್ ಸೆ ಅನೇಕ್ ನಜಾನೆ ಔರ್ ಕಿತನೆ ಲೋಗೋಂ ಕೊ ಇನ್ ಕ ಜರುರತ ಹೊ]]' ! ಈ ಚಿತ್ರದಲ್ಲಿ ಬರುವ ಹಾಡುಗಳು : '[[ಭೊರ್ ಆಯಿಗಯ ಅಂಧಿಯಾರ]]', (ಮನ್ನಾಡೆ, ಕಿಶೊರ್ ಕುಮಾರ್, ಲಕ್ಷ್ಮೀ ಶಂಕರ್ ), '[[ಕಾಹೆ ಕಾನ್ಹ ಕರತ್ ]]' (ಲಕ್ಷ್ಮಿಶಂಕರ್), '[[ಮೊರೆ ನೈನ ಬಹಾಯೆ ನೀರ್]]' ( ಲತಾ), '[[ತುಮ್ ಬಿನ್ ಜೀವನ್ ಕೈಸಾ]]' ( ಮನ್ನಾಡೆ)

'''[[ಬಾವರ್ಚಿ]] ಚಿತ್ರ, ಸಾಮಾನ್ಯಜನರ ಮನಮುಟ್ಟಲು ಸಾಧ್ಯವಾಗಿದೆ.'''
ಚಿತ್ರದ ಬಗ್ಗೆ ಹೇಳಲೇಬೇಕಾದ ಹಲವಾರು ವಿಷಯಗಳಿವೆ. [[ಮನಮುಟ್ಟುವ ಸಂಭಾಷಣೆ]], [[ಪೂರಕವಾದ ಸಂಗೀತ]], ಎಲ್ಲಾ, ಇನ್ನೂ ಹೆಸರು ಗಳಿಸದ ಉದ್ಯೋನ್ಮುಖ ಕಲಾವಿದರು. ರಾಜೇಶ್ ಖನ್ನ, ಮತ್ತು ಜಯ ಬಾಧುರಿ ಜನಪ್ರಿಯತೆಯ ಶಿಖರಕ್ಕೆ ತಲುಪಿದ್ದೂ ಇಲ್ಲಿಂದಲೆ. ಸಿಕ್ಕ ಚಿಕ್ಕ ಪುಟ್ಟ ಸಂದರ್ಭಗಳನ್ನು ಸೊಗಸಾಗಿ ಉಪಯೋಗಿಸಿರುವ ತಂತ್ರ, ಕಲಾತ್ಮಕತೆ ! ಉದಾ: ಪಾತ್ರೆತೊಳೆಯುವ ಕಲ್ಲಿನ, ಅಥವ ಬಟ್ಟೆಒಗೆಯುವ ಕಲ್ಲಿನ ಬಳಿ ಮನೆಮಂದಿಯೆಲ್ಲಾ ಆನಂದದಿಂದ ಹಾಡಿ ಮಾಡಿದ ನೃತ್ಯಕ್ಕೆ ಸರಿಸಾಟಿಯಾದ ಸಾಮ್ಯತೆ ಚಿತ್ರ ಜಗತ್ತಿನಲ್ಲಿ ಕೇವಲ ಹೃಷಿದಾ ಮಾತ್ರ ಮಾಡಬಲ್ಲರು ! " [[ಓ ರಾಹಿ ಗಯ ಅಂಧಿಯಾರಾ]]....ಹಾಡಿನ ಕೊನೆಗೆ [[ಹರೀಂದ್ರನಾಥ ಚಟ್ಟೋಪಾಧ್ಯಾಯ]] ಅಲ್ಲಿಗೆ ಬರುತ್ತಾರೆ. ಅವರು ತಮ್ಮದೇ ಆದ ಶೈಲಿಯಲ್ಲಿ [[ದೇತಾ ಹೈ ಕಿತನಾ]] ....[[ಉತನಾ ಫಲ್ ಪಾತಾ ಹೈ]]....ನಂತರ ಅಸ್ರಾನಿ, ಗಿಟಾರ್ ಬಾರಿಸುತ್ತಾ, [[ಗುಡ್ ಮಾರ್ನಿಂಗ್]], [[ಗುಡ್ ಮಾರ್ನಿಂಗ್ ದಾದಾಜಿ]]...[[ಹ್ಯಾಪಿ ಡೇಸ್ ಆರ್ ಕಾಮಿಂಗ್]]....ಇತ್ಯಾದಿ. ಹಿರಿಯ ಸೊಸೆಯರು ಒಬ್ಬರನ್ನೊಬ್ಬರು ಮುಖ ಕೊಟ್ಟು ಮಾತನಾಡದ ಮನೆಯಲ್ಲಿ ಅವರು ನೃತ್ಯ ಮಾಡುತ್ತಾರೆ. ರಾಜೇಶ್ ಖನ್ನಾ ಅವರ ಹೆಜ್ಜೆಗಳನ್ನು ನಿಯಂತ್ರಿಸುತ್ತಾರೆ. ಒಂದು ಕ್ಷಣದಲ್ಲಿ ಮನೆ [[ಸ್ವರ್ಗ]]ವಾಗುತ್ತದೆ !

'''ಚಿತ್ರಕೊಡುವ ಸಂದೇಶ, ಬಹಳ ಹೃದಯಂಗಮವಾಗಿದೆ.'''

ಒಂದು ಅಂಶ ಹೇಳಬೇಕೆಂದರೆ, ಚಿತ್ರ ನೋಡಿ ಹಲವು ದಿನಗಳ ನಂತರವೂ ನಮ್ಮಮೇಲೆ ಬೀರಿದ ಅದರ ಛಾಪು ! "[[ ಸಬ್ ಲೊಗ್ ಅಪ್ನ ಕಾಮ್ ಕರ್ತೆಹೈ]] ; [[ಲೆಕಿನ್, ದೂಸ್ರೋಂಕ ಕಾಮ್ ಕರ್ನೆಮೆ ಕಿತನ ಮಜಾ ಹೈ]], [[ವಹ್ ಔರ್ ಭಿ ದುಗನಾ ಹೈ]] " ಇಂತಹ ಅನೇಕ ನೀತಿಯುತ ವಾಕ್ಯಗಳು ಯಾರಿಗೂ ಬೇಸರ ತರದೆ, ಮನರಂಜನೆಯ ಪ್ರಮುಖ ವಾಹಿನಿಯಲ್ಲಿ ಸೇರಿ ಹೋಗುತ್ತವೆ ! ಪ್ರಖ್ಯಾತ ನಿರ್ದೇಶಕ ಬಿಮಾಲ್ ದ ಬಳಿ ಸಹಾಯಕರಾಗಿ ಕಲ್ಕತ್ತಾ ದಲ್ಲಿ ಕೆಲಸಮಾಡಿ ನುರಿತು, ಅವರು ಮಾಡಿದ ಮೊದಲ ಚಿತ್ರ 'ಮುಸಾಫಿರ್' ಇದು ಅಷ್ಟೊಂದು ಜನಪ್ರಿಯತೆಗಳಿಸಲಿಲ್ಲ.ರಾಜ್ ಕಪೂರ್ ಅವರಿಗೆ ತಮ್ಮ 'ಅನಾಡಿ' ಚಿತ್ರದ ನಿರ್ದೇಶನವನ್ನು ವಹಿಸಿದರು.(೧೯೫೯) ಅನುರಾಧ (೧೯೬೦) ಅವರ ಚಿತ್ರಗಳಾದ ಆನಂದ್(೧೯೭೦), ಅಭಿಮಾನ್(೧೯೭೩), ಬಾವರ್ಚಿ(೧೯೭೨), ಸತ್ಯಕಾಂ(೧೯೬೯), ನಮಕ್ ಹರಾಮ್(೧೯೭೩), ಚುಪ್ ಕೆ ಚುಪ್ ಕೆ(೧೯೭೫), ಬೇಮಿಸಾಲ್, ಗೋಲ್ ಮಾಲ್ (೧೯೭೯) ಅಪಾರ ಜನಪ್ರಿಯ ತೆಯನ್ನು ಗಳಿಸಿದವು. ಸುಮಾರಾಗಿ ಅವರ ಕೆಲವು ಚಿತ್ರಗಳಿಗೆ ಎಸ್. ಡಿ. ಬರ್ಮನ್ ರ ಸುಶ್ರಾವ್ಯ ಸಂಗೀತ. ೧೯೪೭ ರಿಂದ ಅವರು ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಗಳ ಸಂಪರ್ಕದಲ್ಲಿದ್ದು ಅನೇಕ ಚಿತ್ರಗಳಲ್ಲಿ ನವ ಕಲ್ಪನೆ,ವಿಚಾರಧಾರೆಗಳಿಂದ ವಿಶಿಷ್ಟ ಕಲೋಪಾಸಕರಾಗಿ ಗುರುತಿಸಲ್ಪಟ್ಟಿದ್ದಾರೆ. ಇಂತಹ ಪಾತ್ರಗಳು ಅವರ ಯಶಸ್ಸನ್ನು ಹೆಚ್ಚಿಸಿದವು. ಫಿಲ್ಮ್ಸ್ ಸೆನ್ಸಾರ್ ಬೋರ್ಡಿನ ಛೇರ್ಮನ್ ಆಗಿಯೂ, ಎನ್.ಎಫ್,ಡಿ.ಸಿ.ಛೇರ್ಮನ್ ಆಗಿಯೂ ಕೆಲಸ ಮಾಡಿದ್ದಾರೆ.

ಸ್ವಲ್ಪ ಸಮಯ ಅವರು ತಮ್ಮ ಕೆಲಸ ನಿಲ್ಲಿಸಿದ್ದು ಮತ್ತೆ 'ಝೂಟ್ ಬೋಲೆ ಕವ್ವಾ ಕಾಟೆ' ಎಂಬ ಚಿತ್ರ ತಯಾರಿಸಿದರು. ಅಮೊಲ್ ಪಲೇಕರ್ ಅದರಲ್ಲಿ ಕೆಲಸ ಮಾಡಬೇಕಾಗಿತ್ತು. ಆದರೆ ಅವರಿಗೆ ಸ್ವಲ್ಪ ವಯಸ್ಸಾದಂತೆ ತೋರಿ, ಆ ಪಾತ್ರಕ್ಕೆ ಅನಿಲ್ ಕಪೂರ್ ನನ್ನು ತೆಗೆದುಕೊಂಡರು. ಮುಖರ್ಜಿಯವರು 'ತಲಾಶ್' ಎಂಬ ಟಿ.ವಿ.ಸೀರಿಯಲ್ ಮಾಡಿದ್ದರು. ನೇಮಿಸಲ್ಪಟ್ಟಿದ್ದರು.ಮೌಲ್ಯಗಳನ್ನು ಪ್ರತಿಪಾದಿಸುವ ಚಿತ್ರಗಳನ್ನು ನಿರ್ಮಿಸಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ.ನಕ್ಕು ನಲಿಸುವ ಚಿತ್ರಗಳಾದ, ಚುಪ್ ಕೆ ಚುಪ್ ಕೆ,ಯಲ್ಲಿ ನಟ ಓಂಪ್ರಕಾಶ್ ನ ಕೇಂದ್ರವಾಗಿ ದ್ದರೆ ಖುಬ್ ಸೂರತ್ ನಲ್ಲಿ (೧೯೮೦) ನಟಿ ದೀನಾಪಾಠಕ್, ಗೋಲ್ ಮಾಲ್ ನಲ್ಲಿ ನಟ ಉತ್ಪಲ್ ದತ್ 'ಪಾತ್ರ' ಗಳು ಅದ್ಭುತವಾಗಿವೆ.
೭. ಗೊಲ್ ಮಾಲ್ : ಆನೆವಾಲ ಪಲ್........ (ಕಿಶೋರ್)

೮. ಖೂಬ್ ಸೂರತ್ : ಸುನ್ ಸುನ್ ಸುನ್ ದೀದಿ....(ಆಶಾ ಭೋಸ್ಲೆ)

೯. ಅಸ್ಲಿ ನಕ್ಲಿ : ತುಝೇ ಜೀವನ್ ಕಿ ಡೋರ್ ಸೆ ಬಾಂಧ್ ಲಿಯಾ ಹೈ.....(ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್)
ಹೃಷಿಕೇಶ್ ಮುಖರ್ಜಿಯವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ಆಗಸ್ಟ್ ೬ನೆ ತಾರೀಖು ಸೇರಿಸಲ್ಪಟ್ಟಿದ್ದು ಅಲ್ಲಿನ ಐ.ಸಿ.ಯು. ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾದರು. ಮತ್ತೆ ಅವರು 'ಲೀಲಾವತಿ ಆಸ್ಪತ್ರೆಗೆ' ಭರ್ತಿಯಾದರು. ಈ ಬಾರಿ 'ನ್ಯುಮೋನಿಯ ಜ್ವರ' ಅವರನ್ನು ಆವರಿಸಿತ್ತು. 'ಡಯಾಲಿಸಿಸ್' ಗೋಸ್ಕರ ಸದಾ ಅವರು ಅಲ್ಲಿಗೆ ಹೋಗುತ್ತಲೇ ಇದ್ದರು. ಹೀಗೆ ನರಳುತ್ತಿದ್ದ ಹೃಷಿದಾ ಅವರು ೨೭ ನೆಯ ತಾರೀಖು ಕೊನೆಯುಸಿರೆಳೆದರು ! ಇಹ ಲೋಕದ ದುಃಖವನ್ನು ಸಾಕಷ್ಟು ಅನುಭವಿಸಿ ಸೋತಿದ್ದರು. ಮೃತರಿಗೆ ೮೪ ವರ್ಷ ವಯಸ್ಸಾಗಿತ್ತು. ವೃದ್ಧಾಪ್ಯದಲ್ಲಿ ಅವರ ಬಳಿ ಯಾರೂ ಇರಲಿಲ್ಲ. ಅವರ ಕಿರಿಯ ಮಗ 'ಟೂಟು' ನ ಅಕಾಲಿಕ ಸಾವಿನಿಂದ ನೊಂದಿದ್ದರು. ಹೆಂಡತಿ ಮೊದಲೇ ಗತಿಸಿದ್ದರು. ಅವರಿಗೆ ಜೊತೆಯೆಂದರೆ ೪-೫ ಸಾಕು [[ನಾಯಿಗಳು]], ಹಳೆಯ ನಂಬಿಕಸ್ತ [[ಕಾರ್ ಡ್ರೈವರ್]], [[ವಾಚ್ ಮನ್ ]]! '[[ಚಾರ್ಲಿ ಚಾಪ್ಲೈನ್ ಡಿವಿಡಿ]]' ಗಳೇ ಅವರಿಗೆ ದಿನಪುರ್ತಿ ಒದಗಿಸುತ್ತಿದ್ದ ಮನರಂಜನೆಯ ಸಾಮಗ್ರಿಗಳು. ಒಂಟಿತನ ಅವರ ತಲೆಗೆ ಚಿಟ್ಟು ಹಿಡಿಸಿತ್ತು.

ವಿಪರ್ಯಾಸವೆಂದರೆ, ಇಂತಹ ಮಹಾನ್ ಕಲಾವಿದನಿಗೆ 'ಬಾಲಿವುಡ್' ನಲ್ಲಿ ಸರಿಯಾದ ಸನ್ಮಾನ ದೊರೆಯಲಿಲ್ಲ. ಮರಣದ ಸಮಯದಲ್ಲಿ ಅವರ ಮಗ [[ಪ್ರದೀಪ್ ]] ಅಮೆರಿಕೆಯಲ್ಲಿದ್ದರು. ಅವರು ಬರುವ ವರೆಗೆ ಅಂತ್ಯ ಕ್ರಿಯೆಗಳನ್ನು ಮಾಡಲಾಗಲಿಲ್ಲ. ೨ ಹೆಣ್ಣು ಮಕ್ಕಳು ಮುಂಬೈನಲ್ಲಿದ್ದಾರೆ. ಒಬ್ಬ ಮಗಳು ಕೊಲ್ಕತ್ತಾ ದಲ್ಲಿದ್ದಾಳೆ. ಚಿಕ್ಕ ಮಗ [[ಸಂದೀಪ್]] (ಟೂಟು) ಅಕಾಲಮರಣಕ್ಕೆ ತುತ್ತಾದನು. ಮೊಮ್ಮಗಳ ಹೆಸರು ಪ್ರೀತ. ಅವನು ಅಸ್ಥಮಾ ದಿಂದ ನರಳುತ್ತಿದ್ದ. ದೆಹಲಿಯಲ್ಲಿದ್ದಾಗ ಅಲ್ಲಿ ಮರಣ ಹೊಂದಿದನು. ಅವರ ತಮ್ಮ [[ಕಾಳಿಕಾಪ್ರಸಾದ ಮುಖರ್ಜೀ]]. (ನೆನೋ) ಅಣ್ಣ [[ದ್ವಾರಕಾ ಪ್ರಸಾದ್ ಮುಖರ್ಜಿ]] ತೀರಿಹೋದರು. ಒಬ್ಬ ಅಡುಗೆಯವರು [[ಕಾರ್ತಿಕ್]], ಸುಮಾರು ೪೫ ವರ್ಷಗಳಿಂದ ಅವರ ಬಳಿ ಸೇವೆ ಸಲ್ಲಿಸುತ್ತಿದ್ದಾರೆ. ಸದಾ ಅವರ ಹಾಸಿಗೆಯ ಬಳಿ ೪-೫ ಸಾಕು ನಾಯಿಗಳು ; ಇವೇ ಅವರ ಆಪ್ತ ಬಂಧುಗಳು ! ದಿನವೆಲ್ಲಾ ಚಾರ್ಲಿ ಚಾಪ್ಲಿನ್ ರ ಡಿವಿಡಿಗಳನ್ನು ನೋಡಿಕೊಂಡು ಅಥವಾ '[[ಕ್ರಾಸ್ ವರ್ಡ್ಸ್]]' ಮಾಡಿಕೊಂಡೋ ದಿನ ನೂಕುತ್ತಿದ್ದರಂತೆ. ಇಲ್ಲವಾದರೆ ದೂರ ದಿಗಂತದಲ್ಲಿ, ಕಡಲಿನಾಚೆಯ ಲೋಕದಲ್ಲಿ ಮೈ ಮರೆಯುತ್ತಿದ್ದರಂತೆ ! ಹೀಗೆಯೇ ಹಾಸಿಗೆಯಮೇಲೆ ಮಲಗಿಕೊಂಡೊ, ಅಥವಾ ಗಾಲಿಚಕ್ರದ ಮೇಲೆ ಕುಳಿತುಕೊಂಡೊ ತಮ್ಮ ಕೊನೆಗಾಲದ ಹಲವು 'ವಸಂತ' ಗಳನ್ನು ಕಳೆದ 'ಹೃಷಿದ' ಒಬ್ಬ ಅಪರೂಪದ ವ್ಯಕ್ತಿ ! '[[ಬಾಬು ಮೊಷಾಯ್]]' ಇನ್ನಿಲ್ಲವಾದರು ! ರಾಜ್ ಕಪೂರ್ ಅವರನ್ನು ಯಾವಾಗಲೂ ಹೀಗೆಯೇ ಸಂಬೊಧಿಸುತ್ತಿದ್ದದ್ದು ! ಅದರ ಅರ್ಥ- ಸಂಭಾವಿತ, ಮೃದು ಮಧುರ ಭಾಷಿ, ಗೌರವಾನ್ವಿತ, ಒಳ್ಳೆ ಮನೆತನದವ ಇತ್ಯಾದಿ ; ಅದೇ ಪದವನ್ನು ಅವರು ತಮ್ಮ '[[ಆನಂದ್]]' ಚಿತ್ರದಲ್ಲಿ ಬಳಸಿಕೊಂಡರು !

==ಪ್ರಶಸ್ತಿಗಳು==
* [[ಫಿಲ್ಮ್ ಫೇರ್ ಪ್ರಶಸ್ತಿಗಳು]]
==ನಿಧನ==
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹೃಷಿಕೇಶ ಮುಖರ್ಜಿಯವರು [[ಆಗಸ್ಟ್ ೨೭]], [[೨೦೦೬]]ರ [[ ಭಾನುವಾರ]] [[ಮುಂಬಯಿ|ಮುಂಬಯಿಯಲ್ಲಿ]] ನಿಧನರಾದರು. ಮಂಗಳವಾರ ೨೯ ನೆಯ ತಾರೀಖು ಮಧ್ಯಾನ್ಹ ೨ ಘಂಟೆಗೆ, ಮುಂಬೈನ ಶಿವಾಜಿ ಪಾರ್ಕಿನ 'ಶವಾಗಾರ'ದಲ್ಲಿ ದಹನಕ್ರಿಯೆಯನ್ನು ಮಾಡಲಾಯಿತು.

==ಹೃಷಿಕೇಶ್ ಮುಖರ್ಜಿ ನಿರ್ದೇಶನದ ಚಿತ್ರಗಳು==

''[[ನೌಕ್ರಿ]]'' ([[೧೯೭೮]])

''[[ಕೊತ್ವಾಲ್ ಸಾಬ್]]'' ([[೧೯೭೭]])

''[[ಆಲಾಪ್]]'' ([[೧೯೭೭]])

''[[ಅರ್ಜುನ್ ಪಂಡಿತ್]]'' ([[೧೯೭೬]])

''[[ಚೈತಾಲಿ]]'' ([[೧೯೭೫]])

''[[ಚುಪ್ಕೆ ಚುಪ್ಕೆ]]'' ([[೧೯೭೫]])

''[[ಮಿಲಿ]]'' ([[೧೯೭೫]])

''[[ಫಿರ್ ಕಬ್ ಮಿಲೋಗಿ]]'' ([[೧೯೭೪]])

''[[ನಮಕ್ ಹರಾಮ್]]'' (೧೯೭೩)

''[[ಅಭಿಮಾನ್]]'' ([[೧೯೭೩]])

''[[ಬಾವರ್ಚಿ]]'' ([[೧೯೭೨]])

''[[ಸಬ್‍ಸೆ ಬಡಾ ಸುಖ್]]'' ([[೧೯೭೨]])

''[[ಗುಡ್ಡೀ]]'' ([[೧೯೭೧]])

''[[ಆನಂದ್ (ಹಿಂದಿ ಚಿತ್ರ)|ಆನಂದ್]]'' ([[೧೯೭೦]])

''[[ಪ್ಯಾರ್ ಕಾ ಸಪ್ನಾ]]'' ([[೧೯೬೯]])

''[[ಸತ್ಯಕಾಮ್]]'' ([[೧೯೬೯]])

''[[ಆಶೀರ್ವಾದ್]]'' ([[೧೯೬೮]])

''[[ಮಂಜಿಲ್ ದೀದಿ]]'' ([[೧೯೬೭]])

''[[ಅನುಪಮ್]]'' ([[೧೯೬೬]])

''[[ಬೀವ್ ಔರ್ ಮಕಾನ್]]'' ([[೧೯೬೬]])

''[[ಗಬನ್]]'' ([[೧೯೬೬]])

''[[ದೋ ದಿಲ್]]'' ([[೧೯೬೫]])

''[[ಸಾಂಜ್ ಔರ್ ಸವೇರಾ]]'' ([[೧೯೬೪]])

''[[ಆಶಿಕ್]]'' ([[೧೯೬೨]])

''[[ಅಸ್ಲಿ-ನಕ್ಲಿ]]'' ([[೧೯೬೨]])

''[[ಛಾಯಾ]]'' ([[೧೯೬೧]])

''[[ಮೆಹಂದಿ]]'' ([[೧೯೬೧]])

''[[ಅನುರಾಧ (ಹಿಂದಿ ಚಿತ್ರ)| ಅನುರಾಧ]]'' ([[೧೯೬೦]])

''[[ಅನಾರಿ]]'' ([[೧೯೫೯]])

''[[ಮುಸಾಫಿರ್]]'' ([[೧೯೫೭]])

{{ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತರು}}

[[ವರ್ಗ: ಚಿತ್ರರಂಗ]]
[[ವರ್ಗ: ನಿರ್ದೇಶಕರುಚಿತ್ರರಂಗ]]
[[ವರ್ಗ:ನಿರ್ದೇಶಕರು]]
[[Category:ಬಾಲಿವುಡ್]]
[[ವರ್ಗ: ೧೯೨೨ ಜನನಬಾಲಿವುಡ್]]
[[ವರ್ಗ:೧೯೨೨ ೨೦೦೬ ನಿಧನಜನನ]]
[[ವರ್ಗ:೨೦೦೬ ನಿಧನ]]
[[ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಫಿಲ್ಮ್‌ಫೇರ್ ಪ್ರಶಸ್ತಿ ವಿಜೇತರು]]
"https://kn.wikipedia.org/wiki/ವಿಶೇಷ:MobileDiff/1047391" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ