ಮೇಘನಾದ್ ಸಹಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Meghnad Saha
Meghnad Saha
ಜನನ(೧೮೯೩-೧೦-೦೬)೬ ಅಕ್ಟೋಬರ್ ೧೮೯೩
Shaoratoli, Dhaka (Present day Bangladesh)
ಮರಣ16 February 1956(1956-02-16) (aged 62)
ವಾಸಸ್ಥಳIndia
ರಾಷ್ಟ್ರೀಯತೆIndian
ಕಾರ್ಯಕ್ಷೇತ್ರPhysics
ಸಂಸ್ಥೆಗಳುAllahabad University
University of Calcutta
ಅಭ್ಯಸಿಸಿದ ವಿದ್ಯಾಪೀಠDhaka College
Presidency College of the University of Calcutta
ಪ್ರಸಿದ್ಧಿಗೆ ಕಾರಣThermal ionisation

ಮೇಘನಾದ್ ಸಹಾ FRS (ಬಾಂಗ್ಲಾ:মেঘনাদ সাহা) (ದೇವನಾಗರಿ: मेघनाद साहा) (6 ಅಕ್ಟೋಬರ್‌ 1893 – 16 ಫೆಬ್ರವರಿ 1956) ಒಬ್ಬ ಭಾರತೀಯ ಖಭೌತಿಕ ವಿಜ್ಞಾನಿಯಾಗಿದ್ದು, ಆತ ಸಹಾ ಸಮೀಕರಣವನ್ನು ಅಭಿವೃದ್ಧಿಪಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಸಮೀಕರಣವನ್ನು ನಕ್ಷತ್ರಗಳಲ್ಲಿ ರಾಸಾಯನಿಕ ಮತ್ತು ಭೌತಿಕ ಸ್ಥಿತಿಗಳನ್ನು ವಿವರಿಸಲು ಬಳಸಲಾಗುತ್ತದೆ.

ಆರಂಭಿಕ ಜೀವನ[ಬದಲಾಯಿಸಿ]

ಮೇಘನಾದ್ ಸಹಾ ಢಾಕಾದಿಂದ (ಈಗ ಬಾಂಗ್ಲಾದೇಶದಲ್ಲಿದೆ) ಸುಮಾರು 40 ಕಿಮೀ ದೂರದಲ್ಲಿರುವ ಸಿಯೊರತಲಿ ಹೆಸರಿನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದರು. ಜಗನ್ನಾಥ್ ಸಹಾ ಮತ್ತು ಭುಬನೇಶ್ವರಿ ದೇಬಿ ದಂಪತಿಗಳ ಐದು ಗಂಡು ಮಕ್ಕಳಲ್ಲಿ ಕೊನೆಯವರಾದ ಮೇಘನಾದ್ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆತ ಜೀವನದಲ್ಲಿ ಮುಂದೆ ಬರಲು ಸಾಕಷ್ಟು ಶ್ರಮಪಟ್ಟಿದ್ದಾರೆ. ಅವರ ತಂದೆಗೆ ಅವರು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುವುದು ಇಷ್ಟವಿರಲಿಲ್ಲ; ಆತ ಅಂಗಡಿ ನಡೆಸುವುದರಲ್ಲಿ ತನಗೆ ಸಹಾಯ ಮಾಡಬೇಕೆಂದು ಬಯಸಿದ್ದರು. ಹಿರಿಯ ಮಗ ಜಯಂತ್‌ ಮತ್ತು ಮೇಘನಾದ್‌ರ ಪ್ರಾಥಮಿಕ ಶಾಲೆಯ ಶಿಕ್ಷಕರು ಮನವೊಲಿಸಿದರಿಂದ ಆತ ತನ್ನ ಪಟ್ಟು ಸಡಿಲಿಸಿದರು, ಇದರಿಂದಾಗಿ ಮೇಘನಾದ್ ಹತ್ತಿರದ ಹಳ್ಳಿಗೆ ಹೋಗಿ ಅಲ್ಲಿಯೇ ತಂಗಿ, ಆಂಗ್ಲ-ಮಾಧ್ಯಮ ಶಾಲೆಗೆ ಸೇರಿಕೊಂಡರು. ಅಲ್ಲಿ ಒಬ್ಬ ವೈದ್ಯ ಶ್ರೀ ಅನಂತ ಕುಮಾರ್ ದಾಸ್ ಮೇಘನಾದ್‌ರ ಬಗ್ಗೆ ಆಸಕ್ತಿ ತೋರಿಸಿ ಆತನಿಗೆ ಉಚಿತ ವಸತಿ ಮತ್ತು ಊಟದ ಸೌಲಭ್ಯವನ್ನು ಒದಗಿಸಿದರು. 1905ರಲ್ಲಿ ಅವರು ಢಾಕಾ ಕಾಲೇಜಿಯೇಟ್ ಸ್ಕೂಲ್ ಸೇರಿಕೊಂಡರು. ಅಲ್ಲಿ ಆತ ಉಚಿತ ವಿದ್ಯಾರ್ಥಿವೇತನವನ್ನು ಮಾತ್ರವಲ್ಲದೆ ಸ್ಟೆಪೆಂಡ್ಅನ್ನೂ ಪಡೆದರು. ಆದರೆ ಆತ ಆಗಿನ ಬಂಗಾಳದ ಬ್ರಿಟಿಷ್ ಗವರ್ನರ್ ಸರ್ ಬ್ಯಾಂಫಿಲ್ಡೆ ಫುಲ್ಲರ್ ಢಾಕಾಗೆ ಭೇಟಿನೀಡಿದಾಗ ಸಂಭವಿಸಿದ ಅವರ ವಿರುದ್ಧದ ಬಹಿಷ್ಕಾರದಲ್ಲಿ ಭಾಗವಹಿಸಿದರಿಂದ ಆ ಉಚಿತ ವಿದ್ಯಾರ್ಥಿವೇತನ ಮತ್ತು ಸ್ಟೆಪೆಂಡ್ಅನ್ನು ಕಳೆದುಕೊಂಡರು. ಆದರೆ ಇದರಿಂದ ಸುರಕ್ಷಿತವಾಗಿ ಪಾರಾಗಿ ಆತ ಕಿಶೋರಿಲಾಲ್ ಜುಬ್ಲಿ ಸ್ಕೂಲ್ ಸೇರಿಕೊಂಡರು, ಅಲ್ಲಿ ಮತ್ತೆ ಉಚಿತ ವಿದ್ಯಾರ್ಥಿವೇತನ ಮತ್ತು ಸ್ಟೆಪೆಂಡ್ಅನ್ನು ಪಡೆದರು. ಆ ಸಂದರ್ಭದಲ್ಲಿ ಸಹಾ ಢಾಕಾ ಬ್ಯಾಪ್ಟಿಸ್ಟ್ ಸೊಸೈಟಿ ನಡೆಸುತ್ತಿದ್ದ ಬೈಬಲ್ ತರಗತಿಗಳಿಗೆ ಸೇರಿಕೊಂಡರು. ಅಲ್ಲಿ ನಡೆದ ಪರೀಕ್ಷೆಯೊಂದರಲ್ಲಿ ಸಹಾ ಮೊದಲನೇ ಸ್ಥಾನ ಗಳಿಸಿದರು ಹಾಗೂ ಅದಕ್ಕಾಗಿ 100 ರೂಪಾಯಿ ಬಹುಮಾನವನ್ನು ಮತ್ತು ಸುಂದರವಾಗಿ ಬೈಂಡು ಮಾಡಿದ ಒಂದು ಬೈಬಲ್ ಪ್ರತಿಯನ್ನು ಗೆದ್ದರು. 1909ರಲ್ಲಿ ಸಹಾ ಪೂರ್ವ ಬಂಗಾಳದ ವಿದ್ಯಾರ್ಥಿಗಳಲ್ಲೇ ಮೊದಲ ಸ್ಥಾನಗಳಿಸಿ ಹಾಗೂ ಗಣಿತಶಾಸ್ತ್ರ, ಇಂಗ್ಲಿಷ್, ಸಂಸ್ಕೃತ ಮತ್ತು ಬಂಗಾಳಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವುದರೊಂದಿಗೆ ಕಾಲೇಜಿನ ಪ್ರವೇಶ ಪರೀಕ್ಷೆಯನ್ನು ಪಾಸುಮಾಡಿದರು. ಇದರಿಂದ ಅವರು ಇಂಟರ್‌ಮೀಡಿಯೇಟ್ ಢಾಕಾ ಕಾಲೇಜ್‌ಗೆ ಪ್ರವೇಶವನ್ನು ಪಡೆದರು, ಅಲ್ಲಿ ಆತ ಎರಡು ವರ್ಷಗಳ ಕಾಲ ವಿದ್ಯಾಭ್ಯಾಸವನ್ನು ಮಾಡಿದರು. ಅದೇ ಸಂದರ್ಭದಲ್ಲಿ ಅವರು ಜರ್ಮನ್ ಭಾಷೆಯಲ್ಲೂ ಖಾಸಗಿ ಪಾಠಗಳನ್ನು ತೆಗೆದುಕೊಂಡರು, ಅದು ನಂತರ ಅವರ ನೆರವಿಗೆ ಬಂದಿತು.
1911ರಲ್ಲಿ ಆತ ISC ಪರೀಕ್ಷೆಯಲ್ಲಿ ಮೂರನೇ ಸ್ಥಾನಗಳಿಸಿದರು. ಅದೇ ವರ್ಷದಲ್ಲಿ ಸಹಾ ಕಲ್ಕತ್ತಾಕ್ಕೆ ಬಂದರು ಮತ್ತು ಅನ್ವಯಿಕ ಗಣಿತಶಾಸ್ತ್ರದಲ್ಲಿ B.Sc. ಪದವಿಯನ್ನು ಪಡೆಯುವುದಕ್ಕಾಗಿ ಪ್ರೆಸಿಡೆನ್ಸಿ ಕಾಲೇಜ್ ಸೇರಿಕೊಂಡರು. ಪ್ರೆಸಿಡೆನ್ಸಿ ಕಾಲೇಜ್ ಅದಾಗಲೇ ಅಸಂಖ್ಯಾತ ಪ್ರತಿಭಾಶಾಲಿಗಳನ್ನು ಬೆಳಕಿಗೆ ತಂದಿತ್ತು. ಸಹಾ ಒಂದಿಗೂ ಹಲವಾರು ಪ್ರತಿಭಾವಂತರು ವಿದ್ಯಾಭ್ಯಾಸ ಮಾಡಿದ್ದಾರೆ: ಸತ್ಯೇಂದ್ರ ನಾಥ್ ಬೋಸ್, ಜ್ಞಾನ್ ಘೋಶ್, N.R. ಸೇನ್ ಮತ್ತು J. N. ಮುಖರ್ಜಿ ಮೊದಲಾದವರು ಆತನ ಸಹಪಾಠಿಯಾಗಿದ್ದರು, P.C. ಮಹಾಲನೋಬಿಸ್ ಆತನಿಗೆ ಒಂದು ವರ್ಷ ಹಿರಿಯ ಸಹಪಾಠಿಯಾಗಿದ್ದರು, N. R. ಧರ್ ಎರಡು ವರ್ಷ ಹಿರಿಯ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಒಂದು ವರ್ಷ ಕಿರಿಯ ಸಹಪಾಠಿಯಾಗಿದ್ದರು. ಅವರಿಗೆ ಕಲಿಸಿದ ಅಧ್ಯಾಪಕರೆಂದರೆ ಭೌತಶಾಸ್ತ್ರದಲ್ಲಿ ಜಗದೀಶ್ ಚಂದ್ರ ಬೋಸ್, ರಸಾಯನಶಾಸ್ತ್ರದಲ್ಲಿ ಪ್ರಫುಲ್ಲಾ ಚಂದ್ರ ರಾಯ್ ಹಾಗೂ ಗಣಿತಶಾಸ್ತ್ರದಲ್ಲಿ D.N. ಮಲ್ಲಿಕ್ ಮತ್ತು C. E. ಕುಲ್ಲಿಸ್.[೧] ಅವರು B.Sc. ಮುಗಿಸಿದ ನಂತರ M.Sc.ಗೆ ಸೇರಿಕೊಂಡರು, ಅಲ್ಲಿಯೂ S.N. ಬೋಸ್ ಅವರಿಗೆ ಸಹಪಾಠಿಯಾಗಿದ್ದರು. M.Sc. ಮತ್ತು B.Sc.ಯಲ್ಲಿ ಸಹಾ ಎರಡನೇ ಸ್ಥಾನವನ್ನು ಗಳಿಸಿದರು ಹಾಗೂ ಬೋಸ್ ಮೊದಲನೇ ಸ್ಥಾನವನ್ನು ಪಡೆದರು. ಅದೇ M.sc. ಪರೀಕ್ಷೆಯಲ್ಲಿ ಇಬ್ಬರೂ ಮೊದಲನೇ ಸ್ಥಾನ ಗಳಿಸಿದರು, ಬೋಸ್ ಶುದ್ಧ ಗಣಿತಶಾಸ್ತ್ರದಲ್ಲಿ ಮತ್ತು ಸಹಾ ಅನ್ವಯಿಕ ಗಣಿತಶಾಸ್ತ್ರದಲ್ಲಿ.[೨]
1913ರಿಂದ 1915ರವರೆಗಿನ ಕಾಲೇಜು ದಿನಗಳಲ್ಲಿ ಮೇಘನಾದ್ ಸ್ವಾತಂತ್ರ್ಯಾ ಹೋರಾಟ ಚಳವಳಿಯಲ್ಲಿ ಭಾಗವಹಿಸುವುದಕ್ಕಾಗಿ ಅನುಶಿಲನ್ ಸಮಿತಿಯನ್ನು ಸೇರಿಕೊಂಡರು. ಪ್ರಸಿದ್ಧ ಸ್ವಾತಂತ್ರ್ಯಾ ಹೋರಾಟಗಾರ ಬಾಘ ಜತಿನ್ ವಿದ್ಯಾರ್ಥಿ ಸಂಘಟನೆಯನ್ನು ಕಟ್ಟುವುದಕ್ಕಾಗಿ ಸಹಾರವರ ವಿದ್ಯಾರ್ಥಿ ನಿಲಯಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ಸಹಾ ಬ್ರಿಟಿಷ್ ವಿರುದ್ಧದ ಹೋರಾಟದಲ್ಲಿ ಕ್ರಾಂತಿಕಾರಿಗಳೊಂದಿಗೆ ಕೈಜೋಡಿಸುವ ಯೋಚನೆಯನ್ನು ಸ್ವಲ್ಪ ಲಘುವಾಗಿ ತೆಗೆದುಕೊಂಡರು. ಆದರೆ ಅವರು ಶೀಘ್ರದಲ್ಲಿ ಆ ಯೋಚನೆಯನ್ನು ಬಿಟ್ಟುಬಿಟ್ಟರು. ಉದ್ಯೋಗವನ್ನು ಪಡೆಯುವುದು, ಹಣ ಸಂಪಾದಿಸುವುದು ಮತ್ತು ಕುಟುಂಬಕ್ಕೆ ನೆರವಾಗುವುದು ಅವರ ಮುಖ್ಯ ಗುರಿಯಾಗಿುತ್ತು. ಕಾಲೇಜು ಮುಗಿದ ನಂತರ ಅವರು ಭಾರತೀಯ ಹಣಕಾಸು ಸೇವೆಯನ್ನು ಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಕ್ರಾಂತಿಕಾರಿಗಳೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆಂಬ ಸಂಶಯದಿಂದಾಗಿ ಅವರಿಗೆ ಪರೀಕ್ಷೆಯಲ್ಲಿ ಕುಳಿತುಕೊಳ್ಳಲು ಅನುಮತಿಯನ್ನು ನೀಡಲಿಲ್ಲ; ಅದಲ್ಲದೆ ಅವರು ಶಾಲಾ ವಿದ್ಯಾರ್ಥಿಯಾಗಿ ಬಹಿಷ್ಕಾರದಲ್ಲಿ ಭಾಗವಹಿಸಿದುದುನ್ನೂ ಪರಿಗಣಿಸಲಾಯಿತು. ಸಂಪಾದನೆಗಾಗಿ ಅವರು ಖಾಸಗಿಯಾಗಿ ಮನೆಪಾಠ ಹೇಳಿಕೊಡಲು ಆರಂಭಿಸಿದರು. ಆ ಸಂದರ್ಭದಲ್ಲಿ ಸರ್ ಅಶುತೋಶ್ ಮುಖರ್ಜಿಯವರು ಕಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಾಧಿಪತಿಯಾದರು ಹಾಗೂ ಅವರು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆಗಾಗಿ ಹೊಸ ವಿಜ್ಞಾನ ಕಾಲೇಜೊಂದನ್ನು ಆರಂಭಿಸಿದರು. ಇದು ಕಲ್ಕತ್ತಾದ ಇಬ್ಬರು ಶ್ರೇಷ್ಠ ವಕೀಲರಾದ ತಾರಕ್ ನಾಥ್ ಪಾಲಿಟ್ ಮತ್ತು ರಾಸ್ ಬೆಹಾರಿ ಘೋಶ್‌ರವರ ಭಾರಿ ಪ್ರಮಾಣದ ಕೊಡುಗೆಯಿಂದ ಸುಲಭವಾಗಿ ಪ್ರಾರಂಭವಾಯಿತು.[೧] ಅವರು ಸಹಾ ಮತ್ತು ಬೋಸ್ ಇಬ್ಬರಿಗೂ ಈ ಕಾಲೇಜಿನಲ್ಲಿ ಗಣಿತಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗುವ ಅವಕಾಶವನ್ನು ನೀಡಿದರು. ಆದರೆ ಅವರಿಗೆ ಪ್ರಾಧ್ಯಾಪಕರಾದ ಡಾ. ಗಣೇಶ್ ಪ್ರಸಾದ್ ಒಂದಿಗೆ ಸಾಧ್ಯವಾಗದಿದ್ದುದರಿಂದ ಅವರನ್ನು ಆತ C.V. ರಾಮನ್ ಪಾಲಿಟ್ ಪ್ರಾಧ್ಯಾಪಕರನ್ನು ನೇಮಿಸಿದ್ದ ಭೌತಶಾಸ್ತ್ರ ವಿಭಾಗಕ್ಕೆ ವರ್ಗಾಯಿಸಿದರು. ನಂತರ ಸಹಾ ಅಲಹಾಬಾದ್ ವಿಶ್ವವಿದ್ಯಾನಿಲಯದ ಹೆಸರಾಂತ ಗಣಿತಶಾಸ್ತ್ರಜ್ಞ ಅಮಿಯ ಚರಣ್ ಬ್ಯಾನರ್ಜಿಯವರ ಸ್ನೇಹವನ್ನು ಸಂಪಾದಿಸಿದರು.

ವೈಜ್ಞಾನಿಕ ವೃತ್ತಿಜೀವನ[ಬದಲಾಯಿಸಿ]

ಆಯ್ದ ವಿಕಿರಣ ಒತ್ತಡ[ಬದಲಾಯಿಸಿ]

ಮೊದಲನೇ ವಿಶ್ವ ಸಮರವು ಕೊನೆಗೊಂಡ ಸ್ವಲ್ಪ ದಿನಗಳ ನಂತರ, ಐನ್‌ಸ್ಟೈನ್‌ನ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತವನ್ನು ದೃಢಪಡಿಸುವ ಸೂರ್ಯನ ಗುರುತ್ವಾಕರ್ಷಣೆಯಿಂದ ನಕ್ಷತ್ರಗಳ ಬೆಳಕು ವಿಚಲನೆಯಾಗುತ್ತದೆಂಬ ಮಹತ್ವಪೂರ್ಣ ಆವಿಷ್ಕಾರವನ್ನು ಮಾಡಲಾಯಿತು. ಇದರಿಂದಾಗಿ ಸಹಾ ಸಾಪೇಕ್ಷತಾ ಸಿದ್ಧಾಂತದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದರು. ಅವರು S. N. ಬೋಸ್ ಒಂದಿಗೆ ಜಂಟಿಯಾಗಿ ಐನ್‌ಸ್ಟೈನ್‌ನ ಸಂಶೋಧನಾ ಪ್ರಬಂಧಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದರು ಹಾಗೂ ನಂತರ ಅವನ್ನು ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಒಂದು ಪುಸ್ತಕದ ರೂಪದಲ್ಲಿ ಪ್ರಕಟಿಸಿದರು. ಸಾಪೇಕ್ಷತಾ ಸಿದ್ಧಾಂತದ ಅಧ್ಯಯನವು ಸಹಾರವರಿಗೆ ವಿದ್ಯುತ್ಕಾಂತ ಸಿದ್ಧಾಂತದಲ್ಲಿ ಕೆಲವು ಸಂಶೋಧನೆಗಳನ್ನು ಮಾಡಲು ಅನುವು ಮಾಡಿಕೊಟ್ಟಿತು ಹಾಗೂ ಅವರ ಮೊದಲ ಮೂಲ ಪ್ರಬಂಧವು ಆನ್ ಮ್ಯಾಕ್ಸ್‌ವೆಲ್ಸ್ ಸ್ಟ್ರೆಸ್ಸಸ್‌ ಎಂಬ ಶೀರ್ಷಿಕೆಯೊಂದಿಗೆ ಫಿಲಸೋಫಿಕಲ್ ನಿಯತಕಾಲಿಕ ದಲ್ಲಿ 1917ರಲ್ಲಿ[೩][೪] ಪ್ರಕಟವಾಯಿತು. ನಂತರದ ವರ್ಷಗಳಲ್ಲಿ ಇನ್ನಷ್ಟು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡವು. ಇದರ ನಂತರ ಅವರು ಎಲೆಕ್ಟ್ರಾನ್‌ನ ಚಲನಶಾಸ್ತ್ರದ ಬಗೆಗಿನ ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಿದರು. ಆತ ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತದ ಆಧಾರದಲ್ಲಿ ಬಿಂದು-ಆವೇಶದಿಂದ ಉಂಟಾಗುವ ಲಿನಾರ್ಡ್-ವಿಚರ್ಟ್ ವಿಭವವನ್ನು ಕಂಡುಹಿಡಿದರು. ಈ ಸಮಯದಲ್ಲಿ ಆತ ವಿಕಿರಣ ಒತ್ತಡದ ಬಗ್ಗೆಯೂ ಸಂಶೋಧನೆ ಮಾಡಿದರು ಹಾಗೂ 1918ರಲ್ಲಿ (S. ಚಕ್ರವರ್ತಿ ಒಂದಿಗೆ) ಅನುರಣನ ವಿಧಾನವನ್ನು ಬಳಸಿಕೊಂಡು ಬೆಳಕಿನ ಒತ್ತಡವನ್ನು ಅಳತೆ ಮಾಡುವ ಬಗೆಗಿನ ಸಂಶೋದನಾ ಪ್ರಬಂಧವೊಂದನ್ನು ಜರ್ನಲ್ ಆಫ್ ರಾಯಲ್ ಏಷ್ಯಾಟಿಕ್ ಸೊಸೈಟಿ ಆಫ್ ಬಂಗಾಳ್‌ನಲ್ಲಿ (ಕಲ್ಕತ್ತಾ) ಪ್ರಕಟಿಸಿದರು.[೪] ಇವರ ಈ ಗಮನಾರ್ಹ ಸಾಧನೆಗಳಿಂದಾಗಿ ಕಲ್ಕತ್ತಾ ವಿಶ್ವವಿದ್ಯಾನಿಲಯವು ಅವರಿಗೆ 1918ರಲ್ಲಿ D.Sc. ಪದವಿಯನ್ನು ನೀಡಿ ಗೌರವಿಸಿತು. ಈ ಮಧ್ಯೆ ಸಹಾ ರಾಧಾರಾಣಿಯನ್ನು ವಿವಾಹವಾದರು (ಮದುವೆಯಾಗುವಂತೆ ಪ್ರೇರೇಪಿಸಿದ ದಿ ಕ್ಲಾಯ್ಸ್ಟರ್ ಆಂಡ್ ದಿ ಹಾರ್ತ್ಅನ್ನು ಓದುವವರೆಗೆ ಅವರು ಅವಿವಾಹಿತ ಜೀವನವು ತನಗೆ ಹೆಚ್ಚು ಸೂಕ್ತವಾದುದೆಂದು ನಂಬಿದ್ದರು). ಈ ಸಂದರ್ಭದಲ್ಲಿ ಆತ ಆಯ್ದ ವಿಕಿರಣ ಒತ್ತಡದ ವಿಷಯದಲ್ಲಿ ಆಸಕ್ತಿ ಹೊಂದಿದರು. ಕ್ಯಾಲ್ಸಿಯಂನಂತಹ ಭಾರ ಲೋಹವು ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಜಲಜನಕದಂತಹ ಹಗುರ ಲೋಹಕ್ಕಿಂತಲೂ ಹೆಚ್ಚು ಎತ್ತರದಲ್ಲಿ ಹೇಗೆ ಇದೆ ಎಂಬ ಪ್ರಶ್ನೆಯು ಆತನ ಕುತೂಲಹವನ್ನು ಕೆರಳಿಸಿತು. ಅವರು ಆಗ್ನೆಸ್ ಕ್ಲರ್ಕ್‌ನ ಪುಸ್ತಕದಲ್ಲಿ 'ಗಾಳಿಯಲ್ಲಿ ತೇಲುವಂತೆ ಮಾಡುವ ಕಾಲ್ಪನಿಕ ಬಲ'ದ ಬಗ್ಗೆ ಓದಿದರು, ಇದು ಕ್ಯಾಲ್ಸಿಯಂನಂತಹ ಕೆಲವು ಲೋಹಗಳ ಪರಮಾಣುಗಳ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಈ ಅಸಂಗತತೆಯ ಬಗ್ಗೆ ವಿವರಿಸಿದ ಎಲ್ಲಾ ಮಾದರಿಗಳು ಎತ್ತರ ಹೆಚ್ಚಾದಂತೆ ಸಾಂದ್ರತೆಯಲ್ಲಾಗುವ ಇಳಿತವು ಲೋಹದ ಹೆಚ್ಚಿನ ಭಾರದ ಪರಿಣಾಮವನ್ನು ಅಲ್ಲಗಳೆಯಬಹುದೆಂಬ ಸಂಭಾವ್ಯತೆಯನ್ನೇ ಕಾರಣವನ್ನಾಗಿ ಸೂಚಿಸಿದವು. ಸ್ಕ್ವಾರ್ಜ್ಸ್‌ಚೈಲ್ಡ್ ಪ್ರಸ್ತಾಪಿಸಿದ ಅಂತಹ ಒಂದು ಮಾದರಿಯು ಸುಮಾರು 3500 ಕಿಮೀ ಎತ್ತರದಲ್ಲಿ ಶತಕೋಟಿ ಘನ ಮೀಟರ್‌ಗಳಲ್ಲಿ ಕೇವಲ ಒಂದು ಪರಮಾಣು ಇರಬಹುದೆಂದು ಹೇಳಿದೆ. ಆದರೆ ಮಿಂಚುರೋಹಿತವು ಅತ್ಯಂತ ಎತ್ತರದಲ್ಲಿ ಬಹಳಷ್ಟು ಪರಮಾಣುಗಳಿವೆ ಎಂಬುದನ್ನು ತೋರಿಸಿಕೊಡುವುದರೊಂದಿಗೆ ಇಂತಹ ಊಹೆಗಳ ನಿರಾಧಾರತೆಯನ್ನು ಪ್ರಕಟಿಸಿದೆ. ಸಹಾ ಈ ವಿಷಯದ ಬಗ್ಗೆ ಅತೀವ ಚಿಂತಿಸಿದ್ದಾರೆ ಮತ್ತು ಹೀಗೆಂದು ಹೇಳಿದ್ದಾರೆ - "ಸೂರ್ಯನಲ್ಲಿ ಒಂದು ರೀತಿಯ ವಿಕರ್ಷಕ ಬಲವಿದೆ, ಇದು ಗುರುತ್ವಾಕರ್ಷಣದ ಹೆಚ್ಚಿನ ಭಾಗವನ್ನು ತಟಸ್ಥಗೊಳಿಸುತ್ತದೆ ಎಂಬುದು ಖಭೌತಿಕ ವಿಜ್ಞಾನಿಗಳ ಸಾರ್ವತ್ರಿಕ ಅಭಿಪ್ರಾಯವಾಗಿದೆ. " 1919ರಲ್ಲಿ ಆಸ್ಟ್ರೊಫಿಸಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಆನ್ ರೇಡಿಯೇಶನ್-ಪ್ರೆಶರ್ ಆಂಡ್ ದಿ ಕ್ವಾಂಟಮ್ ಥಿಯರಿ "[೫] ಎಂಬ ಶೀರ್ಷಿಕೆಯ ಒಂದು ಸಣ್ಣ ಸಂಶೋಧನಾ-ಪ್ರಬಂಧದಲ್ಲಿ ಸಹಾ ಗುರುತ್ವಾಕರ್ಷಣೆಯನ್ನು ವಿರೋಧಿಸುವುದೇ ಆಯ್ದ ವಿಕಿರಣ ಒತ್ತಡವೆಂದು ತೋರಿಸಿದರು.[೬]
ವಿಕಿರಣ ಒತ್ತಡದ ಕಲ್ಪನೆಯು ಹೊಸತಾದುದಲ್ಲ. ಅದು ಮ್ಯಾಕ್ಸ್‌ವೆಲ್‌ನ ಬೆಳಕಿನ ವಿದ್ಯುತ್ಕಾಂತ ಸಿದ್ಧಾಂತದ ಪರಿಣಾಮವಾಗಿದೆ ಮತ್ತು ವಿಕಿರಣ ಒತ್ತಡದ ಅಸ್ತಿತ್ವವನ್ನು ತೋರಿಸುವ ಪ್ರಯೋಗಗಳನ್ನು ಮಾಡಲಾಗಿದೆ. ಆದರೆ ಮ್ಯಾಕ್ಸ್‌ವೆಲ್‌ನ ಸಿದ್ಧಾಂತವು ವಸ್ತುವಿನ ಗಾತ್ರವು ಕಡಿಮೆಯಾದಾಗ ಒತ್ತಡವೂ ಸಹ ಕಡಿಮೆಯಾಗುತ್ತದೆಂದು ಹೇಳುತ್ತದೆ, ವಸ್ತುವಿನ ಗಾತ್ರವು ಪರಮಾಣುವಿನಷ್ಟು ಕಿರಿದಾಗಿದ್ದರೆ ಒತ್ತಡವು ಶೂನ್ಯವಾಗುವಷ್ಟು ಸಣ್ಣದಾಗುತ್ತದೆ. ಸಹಾರವರ ಸಿದ್ಧಾಂತವು ಇದನ್ನು ಅಲ್ಲಗಳೆಯುತ್ತದೆ ಏಕೆಂದರೆ ವಿಕಿರಣವು ಸೂರ್ಯನ ಗುರುತ್ವಾಕರ್ಷಣೆಯನ್ನು ವಿರೋಧಿಸಿ ಪರಮಾಣುಗಳನ್ನು ವರ್ಣಗೋಳದವರೆಗೆ ಕೊಂಡೊಯ್ಯುತ್ತದೆಂದು ಅವರ ಸಿದ್ಧಾಂತವು ವಾದಿಸುತ್ತದೆ. ಸಹಾ ಈ ವ್ಯತ್ಯಾಸವನ್ನು ಹೀಗೆಂದು ವಿವರಿಸಿದ್ದಾರೆ: "ಅಣುಗಳ ಮೇಲೆ ವಿಕಿರಣ-ಒತ್ತಡದ ಅಸ್ತಿತ್ವದ ಬಗ್ಗೆ ವಿವರಣೆಯನ್ನು, ಹಳೆಯ ಬೆಳಕಿನ-ನಿರಂತರ-ಸಿದ್ಧಾಂತದ ಬದಲಿಗೆ ಕ್ವಾಂಟಮ್ ಸಿದ್ಧಾಂತವನ್ನು ಬಳಸಿದರೆ ಒದಗಿಸಬಹುದು."
ಐನ್‌ಸ್ಟೈನ್ ಮತ್ತು ಪ್ಲ್ಯಾಂಕ್‌ರ ಸಿದ್ಧಾಂತವನ್ನು ಅನುಸರಿಸುವ ಸಹಾರವರ ಪ್ರಕಾರ, ಗೋಚರಿಸುವ ಬೆಳಕಿನ ಶಕ್ತಿಯು ‘ಸೀಮಿತ ಶಕ್ತಿಯ ಪ್ಯಾಕೆಟ್ಟು hν’ಯಿಂದ ರಚಿತವಾಗಿದೆ. ಈಗ M ಸಾಂದ್ರತೆಯ ಪರಮಾಣು ಹೀರಿಕೊಂಡ ಅಂತಹ ಒಂದು ಬೆಳಕಿನ ಕಂಪನವನ್ನು ಊಹಿಸೋಣ. ಆ ಬೆಳಕಿನ ಕಂಪನವು ಆವೇಗದೊಂದಿಗೆ (hν/c) ಚಲಿಸುತ್ತದೆ ಮತ್ತು ಅದು ಹೀರಲ್ಪಟ್ಟಾಗ ಆ ಆವೇಗವು ಪರಮಾಣುವಿಗೆ ವರ್ಗಾಯಿಸಲ್ಪಡುತ್ತದೆ, ಅನಂತರ ಅದು ವೇಗ v = (hν/cM) ಒಂದಿಗೆ ಚಲಿಸುತ್ತದೆ. ಆದರೆ ನಿಜವಾದ ಮೌಲ್ಯಗಳನ್ನು ಆದೇಶಿಸಿದಾಗ ಬರುವ ವೇಗವು ಸ್ವಲ್ಪ ಕಡಿಮೆಯಾಗಿರುತ್ತದೆ. ಸಹಾ ಹೀಗೆಂದು ಹೇಳಿದ್ದಾರೆ: "v ಎಂಬುದು ನಿಜವಾಗಿ ಕಂಪನಾತ್ಮಕ ವೇಗ ಮತ್ತು ವೇಗೋತ್ಕರ್ಷದ ಒಂದು ಗುಣವೆಂಬುದನ್ನು ನೆನಪಿಡಬೇಕು. ಪ್ರತಿ ಸೆಕೆಂಡಿನಲ್ಲಿ ಒಂದು ಜಲಜನಕ ಪರಮಾಣು ಗಳಿಸುವ ಒಟ್ಟು ವೇಗವು ಪ್ರತಿ ಸೆಕೆಂಡಿಗೆ ಬೆಳಕು ಪಡೆಯುವ ಚೇತರಿಕೆ ಶಕ್ತಿಯ ಸಂಖ್ಯೆಯನ್ನು ಅವಲಂಬಿಸಿರುತ್ತದೆ ಹಾಗೂ ಗಳಿಸಿದ ವೇಗವು ಅತಿ ಹೆಚ್ಚಿನ ಮೌಲ್ಯವನ್ನು ಪಡೆಯಬಹುದು. " ಅಂತಹ ವೇಗವು ಪರಮಾಣುಗಳನ್ನು ವರ್ಣಗೋಳದಿಂದ ಬಹುದೂರಕ್ಕೆ ಕೊಂಡೊಯ್ಯಬಹುದು ಹಾಗೂ ಸ್ಕ್ವಾರ್ಜ್ಸ್‌ಚೈಲ್ಡ್‌ನ ಸಿದ್ಧಾಂತ ಮತ್ತು ಅದರ ಸಹವರ್ತಿಗಳು ಊಹಿಸಿದುದಕ್ಕಿಂತ ಹೆಚ್ಚು ದಪ್ಪವಾದ ಪರಮಾಣುಗಳ ರಚನೆಯನ್ನು ಉಂಟುಮಾಡಬಹುದು. ಆದರೆ ಪರಮಾಣು ಯಾವುದೇ ಅನಿಯಂತ್ರಿತ ಆವರ್ತನ ν ಅನ್ನು ಹೊಂದಿರುವ ಬೆಳಕಿನ ಕಂಪನವನ್ನು ಹೀರಿಕೊಳ್ಳುವುದಿಲ್ಲ, ಬದಲಿಗೆ ಸಮ್ಮತಿಸುವ ಸ್ಥಾನಾಂತರಗಳಲ್ಲಿ ಒಂದಕ್ಕೆ ಹೊಂದಿಕೆಯಾಗುವ ಆವರ್ತನವನ್ನು ಹೊಂದಿರುವ ಬೆಳಕಿನ ಕಂಪನವನ್ನು ಹೀರಿಕೊಳ್ಳುತ್ತದೆ. ಇದಕ್ಕೆ ಸಂಬಂಧಿಸಿದಂತೆ ಪರಮಾಣು ಆಯ್ಕೆಯನ್ನು ಹೊಂದಿರುತ್ತದೆ ಮತ್ತು ಆದ್ದರಿಂದ ಅದು ಆರಿಸಿಕೊಳ್ಳುತ್ತದೆ . ಒತ್ತಡದ ಮೌಲ್ಯದ ಮೇಲೆ ಪ್ರಭಾವ ಬೀರುವ ಇತರ ಅಂಶಗಳೆಂದರೆ:

  1. ದ್ಯುತಿಗೋಳದಿಂದ ಹೊರಬರುವ ರೋಹಿತದಲ್ಲಿ ν ಆವರ್ತನದಲ್ಲಿ ಎಷ್ಟು ಫೋಟಾನ್‌ಗಳಿರುತ್ತವೆ.
  2. ಪರಮಾಣುವಿಗೆ ಯಾವ ಪ್ರಕಾರದ ಹೀರಿಕೊಳ್ಳುವ ಆವರ್ತನಗಳು ಲಭ್ಯಯಿರುತ್ತವೆ.
  3. ಆ ಆವರ್ತನಗಳಲ್ಲಿ ಕಪ್ಪು ಕಾಯ ರೋಹಿತವು ಎಷ್ಟು ತೀವ್ರವಾಗಿರುತ್ತದೆ.

ಈ ರೀತಿಯಲ್ಲಿ ನಾವು ಜಲಜನಕಕ್ಕಿಂತ ಕ್ಯಾಲ್ಸಿಯಂ ಏಕೆ ಹೆಚ್ಚು ಎತ್ತರದಲ್ಲಿದೆ ಎಂಬುದನ್ನು ತಿಳಿಯಬಹುದು, ಏಕೆಂದರೆ ಕ್ಯಾಲ್ಸಿಯಂನ ಮೇಲಿನ ವಿಕಿರಣ ಒತ್ತಡವು ಜಲಜನಕದ ಮೇಲಿನದಕ್ಕಿಂತ ಹೆಚ್ಚಾಗಿರುತ್ತದೆ. ಆತ ತನ್ನ ಈ ಆವಿಷ್ಕಾರಗಳನ್ನು ದಿ ಸ್ಟೇಶನರಿ H- ಆಂಡ್ K-ಲೈನ್ಸ್ ಆಫ್ ಕ್ಯಾಲ್ಸಿಯಂ ಇನ್ ಸ್ಟೆಲ್ಲಾರ್ ಅಟ್ಮೋಸ್ಫಿಯರ್ ಎಂಬ ಶೀರ್ಷಿಕೆಯ ಸಂಶೋಧನಾ-ಪ್ರಬಂಧದಲ್ಲಿ ವಿವರಿಸಿದ್ದಾರೆ, ಇದನ್ನು 1921ರಲ್ಲಿ ನೇಚರ್ ನಿಯತಕಾಲಿಕದಲ್ಲಿ ಪ್ರಕಟಿಸಿದರು."[೭]

ವರ್ಣಗೋಳದ ಸಮಸ್ಯೆ[ಬದಲಾಯಿಸಿ]

1915ರಲ್ಲಿ ನಕ್ಷತ್ರದ ರೋಹಿತ ದರ್ಶನ ವಿಷಯವು ಹೆಚ್ಚು ಗಮನವನ್ನು ಸೆಳೆಯಿತು, ಆದ್ದರಿಂದ ಹೆಚ್ಚಿನ ವಿಜ್ಞಾನಿಗಳು ಅದರ ನಿಗೂಢ ವಿಷಯವನ್ನು ತಿಳಿಯಲು ಪ್ರಯತ್ನಿಸಿದರು. ಆ ವಿಷಯದ ಮೂಲಾಧಾರವನ್ನು ಫ್ರಾನ್‌ಹೋಫರ್ ಮತ್ತು ಕಿರ್ಚಾಫ್ ನಿರ್ವಹಿಸಿದರು. ನಂತರದ ಹೆಚ್ಚು ಗಮನಾರ್ಹವಾದ ಕೆಲಸವೆಂದರೆ ಹಿಗ್ಗಿನ್ಸ್ ಮತ್ತು ಮಿಲ್ಲರ್‌ರವರ ಕಾರ್ಯ, ಅವರು ಸುಮಾರು ಐವತ್ತು ಅಧಿಕ ಪ್ರಜ್ವಲಿಸುವ ನಕ್ಷತ್ರಗಳ ಫ್ರಾನ್‌ಹಾಫರ್ ರೋಹಿತವನ್ನು ವಿವರಿಸಿದರು. ಅವರು ತಾವು ಪರೀಕ್ಷಿಸಿದ ಎಲ್ಲಾ ನಕ್ಷತ್ರಗಳು ಸೂರ್ಯನಂತಹುದೇ ರಾಸಾಯನಿಕ ಸಂಯೋಜನೆಯನ್ನು ಹೊಂದಿವೆಯೆಂದು ತರ್ಕಿಸಿದರು. 1920ರಲ್ಲಿ ಸರಿಸುಮಾರು ಎರಡು ನೂರು ಸಾವಿರ ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡಲಾಯಿತು ಮತ್ತು ವರ್ಗೀಕರಿಸಲಾಯಿತು. ಸೂರ್ಯನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ತಿಳಿದುಕೊಂಡರೆ ನಕ್ಷತ್ರಗಳಲ್ಲಿ ಏನು ಸಂಭವಿಸುತ್ತಿದೆ ಎಂಬುದನ್ನು ಅಂದಾಜು ಮಾಡಬಹುದೆಂಬ ಒಂದು ಸಾರ್ವತ್ರಿಕ ಒಮ್ಮತವನ್ನು ಇದು ಉಂಟುಮಾಡಿತು. ಆದರೆ ಇದಕ್ಕೆ ಸಂಬಂಧಿಸಿದ ಮಾಹಿತಿಯಲ್ಲಿ ಗೊಂದಲವಿದ್ದರೂ, ಸೂರ್ಯನು ಒಂದು ಒಗಟಾಗಿಯೇ ಉಳಿದನು. ಲಾಕ್ಯರ್ ಹೀಗೆಂದು ಹೇಳಿದ್ದಾರೆ - (ಮಿಂಚುರೋಹಿತದಲ್ಲಿ) ವರ್ಣಗೋಳದ ಮೇಲ್ಭಾಗದಲ್ಲಿ ಹುಟ್ಟಿಕೊಳ್ಳುವ ರೇಖೆಗಳು ಕಿಡಿ ರೋಹಿತದಲ್ಲಿ ಕಾಣಿಸುವ ರೇಖೆಗಳಂತೆಯೇ ಇರುತ್ತವೆ. ಕಿಡಿ ರೇಖೆಗಳು ವರ್ಧಿಸಲ್ಪಟ್ಟಿರುತ್ತವೆ , ಆ ವರ್ಧನೆಯು ತಾಪಮಾನದಂತಹ ಪ್ರಚೋದಕದಿಂದ ಉಂಟಾಗುತ್ತದೆಂದೂ ಆತ ಹೇಳಿದ್ದಾರೆ. ಆದರೆ ಈ ಸಿದ್ಧಾಂತವು ಅದರ ಮೌಲ್ಯವನ್ನು ಕುಂಠಿತಗೊಳಿಸುವ ಅಂಶಗಳನ್ನೂ ಹೊಂದಿದೆ. ವರ್ಧನೆಯು ಹೆಚ್ಚಿನ ತಾಪಮಾನದಿಂದ ಉಂಟಾಗುವುದು ಮಾತ್ರವಲ್ಲದೆ ಇದಕ್ಕೆ ಇತರ ಕೆಲವು ಅಂಶಗಳೂ ಪ್ರಚೋದಕಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಊಹಿಸಲಾಗಿದೆ. ಸಹಾ ನಂತರ ಹೀಗೆಂದು ಹೇಳಿದ್ದಾರೆ:

I was a regular reader of German journals which had which had just started coming after four years of First World War, and in the course of these studies I came across a paper by J.Eggert....in which he applied Third Law of Thermodynamics to explain high ionisation in stars due to high temperatures, postulated by Arthur Stanley Eddington in the course of his studies on stellar structures....While reading Eggert's paper I saw at once the importance of introducing the value of the ionisation potential in the formula of Eggert, for calculating accurately the ionisation, single or multiple, of any particular element under any combination of temperature and pressure. I thus arrived at a formula which now goes by my name. Owing to my previous acquaintance with chromospheric and stellar problems, I could at once see its application...

ಯುರೋಪಿನ ಪ್ರವಾಸ ಮತ್ತು ಉಷ್ಣದ ಅಯಾನೀಕರಣ[ಬದಲಾಯಿಸಿ]

ಸಹಾ ಈ ವಿಷಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ತಾನು ಯುರೋಪಿಗೆ ಹೋಗಬೇಕೆಂದು ಮತ್ತು ತನ್ನ ಸಂಶೋಧನೆಗೆ ನೆರವಾಗುವ ಇತರ ಉನ್ನತ ಖಭೌತಿಕ ವಿಜ್ಞಾನಿಗಳನ್ನು ಭೇಟಿಯಾಗಬೇಕೆಂದು ನಿರ್ಧರಿಸಿದರು. ಆತ ಆಗ್ನೆಸ್ ಕ್ಲರ್ಕ್‌ರಿಂದ ಖಗೋಳ ವಿಜ್ಞಾನದ ಬಗೆಗಿನ ಎರಡು ಪುಸ್ತಕಗಳನ್ನು ಪಡೆದರು, ಅವು ಆ ವಿಷಯದ ಮೇಲಿನ ಅವರ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿದವು. ಆದರೆ ಅವರಲ್ಲಿ ಹಣದ ಕೊರತೆಯಿತ್ತು, ಆದ್ದರಿಂದ ವಿದ್ಯಾರ್ಥಿವೇತನ ಮತ್ತು ಫೆಲೊಷಿಪ್‌ಗಳಿಗಾಗಿ ಪೈಪೋಟಿ ನಡೆಸಬೇಕಾಯಿತು. ಆ ಪೈಪೋಟಿಗೆ ಆತ ತಾಂತ್ರಿಕ ಪ್ರಬಂಧವೊಂದನ್ನು ಸಲ್ಲಿಸಬೇಕಾಯಿತು. ಆದ್ದರಿಂದ ಆತ ಆನ್ ದಿ ಹಾರ್ವರ್ಡ್ ಕ್ಲಾಸಿಫಿಕೇಶನ್ ಆಫ್ ಸ್ಟೆಲ್ಲಾರ್ ಸ್ಪೆಕ್ಟ್ರಾ ಎಂಬ ಶೀರ್ಷಿಕೆಯ ಒಂದು ಪ್ರಬಂಧವನ್ನು ಬರೆದರು. ಸಹಾರವರ ಪ್ರಬಂಧವು ಇತರ ಪ್ರಬಂಧಗಳಿಗಿಂತ ಅತ್ಯುತ್ತಮವಾದುದರಿಂದ ಅವರಿಗೆ ಪ್ರೇಮ್‌ಚಂದ್ ರಾಯ್‌ಚಂದ್ ವಿದ್ಯಾರ್ಥಿವೇತನ ಮತ್ತು ಗುರು ಪ್ರಸನ್ನಾ ಘೋಶ್ ಫೆಲೊಷಿಪ್‌ಗಳೆರಡೂ ಲಭಿಸಿದವು.[೮] ಜೇಬಿನಲ್ಲಿ ಸ್ವಲ್ಪ ಹಣವನ್ನಿಟ್ಟುಕೊಂಡು ಆತ 1919ರ ಸೆಪ್ಟೆಂಬರ್‌ನಲ್ಲಿ ಯುರೋಪಿಗೆ ಹಡಗಿನಲ್ಲಿ ಪ್ರಯಾಣ ಬೆಳೆಸಿದರು. ಲಂಡನ್‌ಗೆ ತಲುಪಿದ ನಂತರ ಸಹಾ ತನ್ನಲ್ಲಿ ಮತ್ತೆ ಹಣದ ಕೊರೆತೆಯಿರುವುದನ್ನು ಕಂಡುಕೊಂಡು, ಆರ್ಥಿಕವಾಗಿ ಮತ್ತು ವೈಜ್ಞಾನಿಕವಾಗಿ ಎರಡೂ ಬದಿಗಳಲ್ಲೂ ತಾನು ಅತಿ ಶೀಘ್ರದಲ್ಲಿ ಏನಾದರು ಮಾಡಬೇಕೆಂದು ನಿರ್ಧರಿಸಿದರು. ಅದೃಷ್ಟವಶಾತ್ ಅವರು ಆ ಸಂದರ್ಭದಲ್ಲಿ ಇಂಪೀರಿಯಲ್ ಕಾಲೇಜಿನಲ್ಲಿದ್ದ ತನ್ನ ಮಾಜಿ-ಸಹಪಾಠಿಯಲ್ಲಿಗೆ ಧಾವಿಸಿದರು. ಆತ ಸಹಾರವರನ್ನು ಪ್ರಾಧ್ಯಾಪಕ A.ಫೌಲರ್‌ಗೆ ಪರಿಚಯ ಮಾಡಿಕೊಟ್ಟರು, ಫೌಲರ್ ಒಬ್ಬ ಪ್ರಸಿದ್ಧ ನಕ್ಷತ್ರದ ಖಭೌತಿಕ ವಿಜ್ಞಾನಿ ಮತ್ತು ಲಾಕ್ಯರ್‌‌ನ ಮಾಜಿ ಸಹಾಯಕ. ಫೌಲರ್ ಸಹಾರವರ ಪ್ರಶಸ್ತಿ-ವಿಜೇತ ಪ್ರಬಂಧದಿಂದ ಹೆಚ್ಚು ಪ್ರಭಾವಿತರಾದರು ಮತ್ತು ಅವರನ್ನು ತನ್ನ ಮಾರ್ಗದರ್ಶನದಡಿಯಲ್ಲಿ ತನ್ನದೇ ಪ್ರಯೋಗಾಲಯದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಅವರ ಮಾರ್ಗದರ್ಶನದಡಿಯಲ್ಲಿ ಸಹಾ ಆ ಪ್ರಬಂಧವನ್ನು ಮತ್ತೆ ಬರೆದು, ಅದಕ್ಕೆ ಹೊಸತೊಂದು ಶೀರ್ಷಿಕೆಯನ್ನು ನೀಡಿದರು: ಆನ್ ಎ ಫಿಸಿಕಲ್ ಥಿಯರಿ ಆಫ್ ಸ್ಟೆಲ್ಲಾರ್ ಸ್ಪೆಕ್ಟ್ರಾ .[೯][೧೦] ಫೌಲರ್ ಈ ಪ್ರಬಂಧವನ್ನು ರಾಯಲ್ ಸೊಸೈಟಿಗೆ ಸಲ್ಲಿಸಿದರು, ಅದು ಕೂಡಲೇ ಅದನ್ನು ಅದರ ವರದಿಗಳಲ್ಲಿ ಪ್ರಕಟಿಸಿತು; ಆ ಪ್ರಬಂಧವು ಅಮೆರಿಕಾದಲ್ಲಿ ವ್ಯಾಪಕ ಗಮನವನ್ನು ಸೆಳೆಯಿತು. ಈ ಪ್ರೌಢ ಪ್ರಬಂಧವು ಅವರಿಗೆ 1920ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಗ್ರಿಫ್ಫಿತ್ ಪ್ರಶಸ್ತಿಯನ್ನು ತಂದುಕೊಟ್ಟಿತು."[೧೧] ಸಹಾ ನಂತರ ಹೀಗೆಂದು ಸ್ಮರಿಸಿಕೊಂಡಿದ್ದಾರೆ:

I took about four months in rewriting the paper, and all the time I had the advantage of Professor Fowler's criticism, and access to his unrivalled stock of knowledge of spectroscopy and astrophysics. Though the main ideas and working of the paper remained unchanged, the substance matter was greatly improved on account of Fowler's kindness in placing at my disposal fresh data, and offering criticism whenever I went a little astray out of mere enthusiasm.


ಸಂಬಂಧದ ಬಗ್ಗೆ ಅಭಿಪ್ರಾಯ ತಿಳಿಸುತ್ತಾ ಒಮ್ಮೆ ಖಗೋಳ ವಿಜ್ಞಾನಿ ಡಿಂಗಲ್ ಹೀಗೆಂದು ಹೇಳಿದ್ದಾರೆ: "ಸಹಾ ಮತ್ತು ಫೌಲರ್ ಮಧ್ಯೆ ಇರುವ ಸ್ನೇಹದ ಬಗ್ಗೆ ಯೋಚಿಸುವಾಗ ನಾನು ಅದನ್ನು ಮ್ಯಾಕ್ಸ್‌ವೆಲ್‌ ಮತ್ತು ಫ್ಯಾರಡೆಯ ನಡುವೆ ಇದ್ದ ಸ್ನೇಹಕ್ಕೆ ಹೋಲಿಸಲು ಇಷ್ಟಪಡುತ್ತೇನೆ." ಈ ಪ್ರಬಂಧಕ್ಕೆ ಹೆಚ್ಚುವರಿಯಾಗಿ ಆತ ತನ್ನ ಖಭೌತಿಕ ಸಂಶೋಧನೆಯ ಬಗೆಗಿನ ಇನ್ನಿತರ ಮೂರು ಪ್ರಬಂಧಗಳನ್ನು 1920ರ ಮೊದಲ ಆರು ತಿಂಗಳಲ್ಲಿ ಫಿಲಸೋಫಿಕಲ್ ನಿಯತಕಾಲಿಕದಲ್ಲಿ ಪ್ರಕಟಿಸಿದರು, ಅವುಗಳೆಂದರೆ - ಅಯನೈಸೇಶನ್ ಆಫ್ ದಿ ಸೋಲಾರ್ ಕ್ರೋಮೋಸ್ಫಿಯರ್ (ಮಾರ್ಚ್ 4, 1920)[೧೨], ಆನ್ ಎಲಿಮೆಂಟ್ಸ್ ಇನ್ ದಿ ಸನ್ (22 ಮೇ 1920)[೧೩] ಮತ್ತು ಆನ್ ದಿ ಪ್ರಾಬ್ಲೆಮ್ಸ್ ಆಫ್ ಟೆಂಪರೇಚರ್-ರೇಡಿಯೇಶನ್ ಆಫ್ ಗ್ಯಾಸಸ್ (25 ಮೇ 1920)[೧೪]. ಈ ಪ್ರಬಂಧಗಳಲ್ಲಿ ಸಹಾ ನಂತರ ಉಷ್ಣದ ಅಯನೀಕರಣ ಸಿದ್ಧಾಂತವೆಂದು ತಿಳಿಯಲಾದುದರ ಮೂಲಾಧಾರವನ್ನು ತಿಳಿಸಿದ್ದಾರೆ. ನಕ್ಷತ್ರದ ರೋಹಿತದ ಹೀರಿಕೆಯ ರೇಖೆಗಳು ವ್ಯಾಪಕವಾಗಿ ವ್ಯತ್ಯಾಸಗೊಳ್ಳುತ್ತವೆ, ಕೆಲವು ನಕ್ಷತ್ರಗಳು ವಾಸ್ತವಿಕವಾಗಿ ಕೇವಲ ಜಲಜನಕ ಮತ್ತು ಹೀಲಿಯಂ ರೇಖೆಗಳನ್ನು ತೋರಿಸುತ್ತಿದ್ದರೆ, ಇತರ ಕೆಲವು ವಿವಿಧ ಲೋಹಗಳ ಅಸಂಖ್ಯಾತ ರೇಖೆಗಳನ್ನು ತೋರಿಸುತ್ತವೆ. ಈ ಎಲ್ಲಾ ರೋಹಿತ ರೇಖೆಗಳನ್ನು ಅಯನೀಕರಣದ ಪರಿಣಾಮವಾಗಿ ಸೂಚಿಸಬೇಕೆಂಬುದು ಸಹಾರವರ ಒಳನೋಟವಾಗಿತ್ತು. ಅಯನೀಕರಣದ ಪ್ರಮಾಣವು ಅಂದರೆ ನ್ಯೂಕ್ಲಿಯಸ್‌ನಿಂದ ಹೊರಹೋದ ಎಲೆಕ್ಟ್ರಾನ್‌ಗಳ ಸಂಖ್ಯೆಯು ಪ್ರಾಥಮಿಕವಾಗಿ ತಾಪಮಾನವನ್ನು ಅವಲಂಬಿಸಿರುತ್ತದೆಂದು ಆತ ತಿಳಿದರು. ಉಷ್ಣವು ಹೆಚ್ಚಾದಂತೆ ಅಯನೀಕರಣಗೊಳ್ಳುವ ಪರಮಾಣುಗಳ ಪ್ರಮಾಣವೂ ಹೆಚ್ಚಾಗುತ್ತದೆ. ಆದ್ದರಿಂದ ಉಳಿದ ತಟಸ್ಥ ಪರಮಾಣುಗಳು ಕೇವಲ ದುರ್ಬಲ ಹೀರಿಕೆ ರೇಖೆಗಳನ್ನು ಉಂಟುಮಾಡುತ್ತವೆ. ಉಷ್ಣವು ಹೆಚ್ಚಾದಾಗ ಆ ರೇಖೆಗಳು ಸಂಪೂರ್ಣವಾಗಿ ಮರೆಯಾಗುತ್ತವೆ. ಆದರೆ ಒಂದು ಬಾರಿ, ಎರಡು ಬಾರಿ ಮತ್ತು ಮೂರು ಬಾರಿ ಅಯನೀಕರಣಗೊಂಡ ಪರಮಾಣುಗಳು ವಿವಿಧ ತರಂಗದೂರಗಳಲ್ಲಿ ಹೀರಿಕೊಳ್ಳುತ್ತವೆ ಮತ್ತು ನಕ್ಷತ್ರದ ರೋಹಿತದಲ್ಲಿ ವಿವಿಧ ರೇಖೆಗಳು ಕಾಣಿಸುತ್ತವೆ, ಅವು ಈ ಅಯಾನುಗಳ ಪ್ರಮಾಣವು ಹೆಚ್ಚಾದಂತೆ ಪ್ರಬಲವಾಗುತ್ತವೆ.[೧೫] ಆತ ಸಹಾ ಸಮೀಕರಣವೆಂದು ಕರೆಯಲ್ಪಡುವ ಸೂತ್ರವನ್ನೂ ನಿರೂಪಿಸಿದ್ದಾರೆ. ಈ ಸಮೀಕರಣವು ಖಭೌತಿಕದಲ್ಲಿ ನಕ್ಷತ್ರಗಳ ರೋಹಿತದ ಅರ್ಥ ವಿವರಣೆಯನ್ನು ನೀಡುವ ಮೂಲಭೂತ ಸಾಧನವಾಗಿದೆ. ವಿವಿಧ ನಕ್ಷತ್ರಗಳ ರೋಹಿತವನ್ನು ಅಧ್ಯಯನ ಮಾಡುವ ಮೂಲಕ ಅವುಗಳ ಉಷ್ಣವನ್ನು ಕಂಡುಹಿಡಿಯಬಹುದು ಮತ್ತು ಅದರಿಂದ ಸಹಾ ಸಮೀಕರಣವನ್ನು ಬಳಸಿಕೊಂಡು ಆ ನಕ್ಷತ್ರವನ್ನು ರಚಿಸಿದ ವಿವಿಧ ಅಂಶಗಳ ಅಯನೀಕರಣ ಸ್ಥಿತಿಯ ಬಗ್ಗೆ ತಿಳಿಯಬಹುದು.ಖಭೌತಿಕ ವಿಜ್ಞಾನದಲ್ಲಿ ತನ್ನ ಸಂಶೋಧನೆಯನ್ನು ಮುಂದುವರಿಸುವುದರೊಂದಿಗೆ ಸಹಾ, ಉಷ್ಣದ ಅಯನೀಕರಣ ಸಿದ್ಧಾಂತವನ್ನು ರುಜುವಾತುಪಡಿಸುವ ಪ್ರಯೋಗಗಳನ್ನು ಮಾಡಲೂ ಆಸಕ್ತಿಯನ್ನು ಹೊಂದಿದ್ದರು, ಆದರೆ ಅಂತಹ ಪ್ರಯೋಗಗಳಿಗೆ ಹೆಚ್ಚು-ತಾಪಮಾನ ಸೌಕರ್ಯಗಳನ್ನು ಹೊಂದಿರುವ ಉನ್ನತ ದರ್ಜೆಯ ಪ್ರಯೋಗಾಲಯಗಳ ಅವಶ್ಯಕತೆ ಇತ್ತು. ಅಂತಹ ಪ್ರಯೋಗಾಲಯಗಳು ಇಂಗ್ಲೆಂಡ್‌ನಲ್ಲಿ ಇಲ್ಲದಿದ್ದುದರಿಂದ ಫೌಲರ್‌ರ ಸಲಹೆಯ ಮೇರೆಗೆ ಸಹಾರವರು ನರ್ನ್ಸ್ಟ್‌ಗೆ ಪತ್ರ ಬರೆದರು. ಆತ ಸಹಾರವರನ್ನು ಕೂಡಲೇ ತನ್ನ ಪ್ರಯೋಗಾಲಯಕ್ಕೆ ಬಂದು ಪ್ರಯೋಗಗಳನ್ನು ಮಾಡಬೇಕೆಂಬ ಆಹ್ವಾನವನ್ನು ನೀಡಿದರು. ಸಹಾ ನರ್ನ್ಸ್ಟ್‌ರ ಪ್ರಯೋಗಾಲಯದಲ್ಲಿ ಸುಮಾರು ಒಂದು ವರ್ಷ ಕಾಲ ಕಳೆದರು ಮತ್ತು ಇದು ಅವರಿಗೆ ಅಪಾರ ಬೇಡಿಕೆಯನ್ನು ತಂದುಕೊಟ್ಟಿತು. ಆ ಪ್ರಯೋಗಾಲಯದ ಬಲಭಾಗದಲ್ಲಿ ಪ್ರತಿ ವಾರ ವಿಶ್ವವಿದ್ಯಾನಿಲಯದ ವಿಚಾರಗೋಷ್ಠಿ ನಡೆಯುತ್ತಿತ್ತು. ಆ ಎಲ್ಲಾ ವಿಚಾರಗೋಷ್ಠಿಯಲ್ಲಿ ಸಹಾರವರು ಹಾಜರಿದ್ದರು. ಇದು ಅವರಿಗೆ ಮ್ಯಾಕ್ಸ್ ಪ್ಲ್ಯಾಂಕ್, ಮ್ಯಾಕ್ಸ್ ವನ್ ಲಾಯ್ ಮತ್ತು ಐನ್‌ಸ್ಟೈನ್ ಮೊದಲಾದ ಹಲವಾರು ಶ್ರೇಷ್ಠ ಜರ್ಮನ್ ಭೌತಶಾಸ್ತ್ರಜ್ಞರನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟಿತು. ಅದೇ ಸಂದರ್ಭದಲ್ಲಿ ಸಹಾ ತನ್ನ ನಕ್ಷತ್ರ ರೋಹಿತದ ಬಗೆಗಿನ ಸಂಶೋಧನೆಯ ಪ್ರತಿಯೊಂದನ್ನು ಸೊಮ್ಮರ್‌ಫೆಲ್ಡ್‌ಗೆ ಕಳುಹಿಸಿದರು, ಆತ ತಕ್ಷಣವೇ ವಿಚಾರಸಂಕಿರಣವನ್ನು ನಡೆಸಿಕೊಡುವುದಕ್ಕಾಗಿ ಅವರನ್ನು ಮುನಿಚ್‌ಗೆ ಆಹ್ವಾನಿಸಿದರು. ಇದು ಮೇ ತಿಂಗಳಲ್ಲಿ ನಡೆಯಿತು ಮತ್ತು ಆ ಉಪನ್ಯಾಸವು ಜೈಟ್ಸ್‌ಕ್ರಿಫ್ಟ್ ಫರ್ ಫಿಸಿಕ್ ಸಂಪುಟ 6ರಲ್ಲಿ ಪ್ರಕಟವಾಯಿತು.[೮] ಈ ಭೇಟಿಯಲ್ಲಿ ಅವರು ರಬೀಂದ್ರನಾಥ್ ಟಾಗೋರ್‌ರವರನ್ನು ಸಂಧಿಸಿದರು, ಆದರೆ ಆ ಸಂದರ್ಭದಲ್ಲಿ ಸಹಾರವರಿಗೆ ಟಾಗೋರ್‌ರ ಬಗ್ಗೆ ತಿಳಿದಿರಲಿಲ್ಲ. ಸೊಮ್ಮರ್‌ಫೆಲ್ಡ್ ಅವರಿಬ್ಬರನ್ನು ಪರಿಚಯ ಮಾಡಿಸಿದರು; ಟಾಗೋರ್‌ರವರು ಸಹಾರವರನ್ನು ತುಂಬಾ ಪ್ರೀತಿಯಿಂದ ಮಾತನಾಡಿಸಿದರು, ಅವರ ಸಂಶೋಧನೆಯ ಬಗ್ಗೆ ಕೇಳಿದರು ಮತ್ತು ಭಾರತಕ್ಕೆ ಹಿಂದಿರುಗುವಾಗ ಶಾಂತಿನಿಕೇತನಕ್ಕೆ ಭೇಟಿನೀಡುವಂತೆ ಆಹ್ವಾನವನ್ನಿತ್ತರು.
ಜರ್ಮನಿಯಿಂದ ಸಹಾ ಸ್ವಿಟ್ಜರ್‌ಲ್ಯಾಂಡ್‌ಗೆ ಹೋದರು, ನಂತರ ಮತ್ತೆ ಇಂಗ್ಲೆಂಡ್ಗೆ ಬಂದರು, ಅಲ್ಲಿ ಅವರು ಕೇಂಬ್ರಿಡ್ಜ್‌ನಲ್ಲಿ ಎಡ್ಡಿಂಗ್ಟನ್‌ರನ್ನು ಭೇಟಿ ಮಾಡಿದರು. ಎಡ್ಡಿಂಗ್ಟನ್ ಅವರನ್ನು ಮನೆಗೆ ಆಮಂತ್ರಿಸಿದರು ಮತ್ತು ಅಲ್ಲಿ ಅವರಿಗೆ ಮಿಲ್ನೆಯನ್ನು ಪರಿಚಯಿಸಿದರು, ಆತ ಆಗ ಎಡ್ಡಿಂಗ್ಟನ್‌ನ ಸಹಾಯಕರಾಗಿದ್ದರು. ಮಿಲ್ನೆ ಸಹಾರವರಿಗೆ ತಾನು ಅವರ ವಿಕಿರಣ ಒತ್ತಡದ ಬಗೆಗಿನ ಪ್ರಬಂಧವನ್ನು ನೇಚರ್‌ನಲ್ಲಿ ನೋಡಿದುದಾಗಿ ಮತ್ತು ಆ ವಿಷಯದ ಬಗ್ಗೆ ಇನ್ನಷ್ಟು ಸಂಶೋಧನೆಯನ್ನು ಮಾಡಿದುದಾಗಿ ಹೇಳಿದರು. ಸಹಾರವರ ಸಂಶೋಧನೆಯನ್ನು ವಿಸ್ತರಿಸಲು R.H.ಫೌಲರ್‌ ಒಂದಿಗೆ ಜತೆಗೂಡಿ ಕೆಲಸ ಮಾಡುತ್ತಿರುವುದಾಗಿಯೂ ಮಿಲ್ನೆ ಹೇಳಿದರು. (ವಾಸ್ತವವಾಗಿ ಈ ಸಿದ್ಧಾಂತವು ಮಿಲ್ನೆಯ ಆಯ್ದ ವಿಕಿರಣ ಒತ್ತಡ ಸಿದ್ಧಾಂತವೆಂಬುದಾಗಿ ಹೆಸರು ಪಡೆದುಕೊಂಡಿತು.) ಸಹಾರವರು ನಂತರ ಹೀಗೆಂದು ತಮ್ಮ ವಿಷಾದವನ್ನು ವ್ಯಕ್ತಪಡಿಸಿದ್ದಾರೆ: "ನಾನು ಆಯ್ದ ವಿಕಿರಣ ಒತ್ತಡ ಸಿದ್ಧಾಂತದ ಸೃಷ್ಟಿಕರ್ತನೆಂದು ವಾದಿಸಬಹುದಿತ್ತು.ಮಿಲ್ನೆ ನೇಚರ್ ಪತ್ರಿಕೆಯಲ್ಲಿನ ನನ್ನ ವಿವರಣೆಯನ್ನು ಓದಿದರು ಮತ್ತು ಆತನ ಪ್ರಬಂಧದಲ್ಲಿ ಆತ ನನ್ನ ಕೊಡುಗೆಯ ಬಗ್ಗೆ ಅಡಿಟಿಪ್ಪಣಿಯಲ್ಲಿ ಸೂಚಿಸಿದ್ದಾರೆ, ಆದರೂ ಯಾರೂ ಅದನ್ನು ಗಮನಿಸಿದಂತೆ ಕಂಡುಬರುವುದಿಲ್ಲ."

ನಕ್ಷತ್ರದ ರೋಹಿತ ದರ್ಶನ[ಬದಲಾಯಿಸಿ]

ಜರ್ಮನಿಗೆ ಹೋಗುವುದಕ್ಕಿಂತ ಮೊದಲು ಸಹಾರವರಿಗೆ ಆಕ್ಸ್‌ಫರ್ಡ್‌‌ನ ಪ್ರಾಧ್ಯಾಪಕ H.H.ಟರ್ನರ್ ಅಮೆರಿಕಾದಲ್ಲಿರುವ ಮೌಂಟ್ ವಿಲ್ಸನ್ ವೀಕ್ಷಣಾಲಯವು ಆತನ ಪ್ರಕಾರದ ಸಂಶೋಧನೆಗೆ ಸೂಕ್ತ ಸ್ಥಳವೆಂದು ಹೇಳಿದರು ಹಾಗೂ ಮೌಂಟ್ ವಿಲ್ಸನ್ ವೀಕ್ಷಣಾಲಯದ ನಿರ್ದೇಶಕ ಜಾರ್ಜ್ ಎಲ್ಲರಿ ಹ್ಯಾಲೆಗೆ ಪತ್ರ ಬರೆಯುವಂತೆ ಸಲಹೆ ನೀಡಿದರು. 1921ರ ಜುಲೈ 9ರಂದು ಸಹಾರವರು ಹ್ಯಾಲೆಗೆ ಹೀಗೆಂದು ಬರೆದರು: "ಮೌಂಟ್ ವಿಲ್ಸನ್ ಸೋಲಾರ್ ವೀಕ್ಷಣಾಲಯದ ಯಾರಾದರೂ ಈ ಪತ್ರದ ಇನ್ನೊಂದು ಪುಟದಲ್ಲಿ ಸೂಚಿಸಲಾದ ಕಾರ್ಯವನ್ನು ವಹಿಸಿಕೊಂಡರೆ ನನಗೆ ತುಂಬಾ ಸಂತೋಷವಾಗುತ್ತದೆ. ನನ್ನಲ್ಲಿರುವ ಸಾಧನಗಳು ತುಂಬಾ ಪರಿಮಿತ ಸಂಖ್ಯೆಯಲ್ಲಿವೆ ಮತ್ತು ನನ್ನ ವಿಶ್ವವಿದ್ಯಾನಿಲಯದಲ್ಲಿ ಖಭೌತಿಕ ಸಂಶೋಧನೆಗೆ ಬೇಕಾದ ಸೌಕರ್ಯಗಳ ಕೊರತೆಯಿದೆ, ಇಲ್ಲಿ ನನ್ನ ಪ್ರಬಂಧದಲ್ಲಿರುವ ಸಂಶೋಧನೆಗಳನ್ನು ಮಾಡಬಹುದೆಂಬ ನಿರೀಕ್ಷೆಯನ್ನು ನಾನು ಹೊಂದಿಲ್ಲ. ನನ್ನ ಪ್ರಯತ್ನಗಳು ಖಭೌತಿಕ ವಿಜ್ಞಾನದಲ್ಲಿನ ಕೆಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಷ್ಟು ಸಮರ್ಥವಾದರೆ ನಾನು ತುಂಬಾ ಸಂತಸ ಪಡುತ್ತೇನೆ."[೧೬] ಈ ಪತ್ರದೊಂದಿಗೆ ಹಿಂದಿನ ವರ್ಷ ಫಿಲಸೋಫಿಕಲ್ ನಿಯತಕಾಲಿಕದಲ್ಲಿ ಪ್ರಕಟವಾದ ಆತನ ನಾಲ್ಕು ಪ್ರಬಂಧಗಳಲ್ಲಿ ಮುನ್ನುಡಿದ ಸಂಗತಿಗಳನ್ನೂ ಸೇರಿಸಿದರು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದರೆ ಅದೇ ಸಂದರ್ಭದಲ್ಲಿ ಪ್ರಿನ್ಸೆಟನ್ ವಿಶ್ವವಿದ್ಯಾನಿಲಯದ ಹೆನ್ರಿ ನೋರಿಸ್ ರಸ್ಸೆಲ್ ಸಹಾರವರ ಸಂಶೋಧನೆಯ ಬಗ್ಗೆ ಅತಿ ಶೀಘ್ರದ ಮತ್ತು ಗಂಭೀರವಾದ ಗಮನವನ್ನು ನೀಡಿದರು. ಅವರು ಸಹಾರವರ ಸಂಶೋಧನೆಯ ರುಜುವಾತಾಗಿರುವ ಹ್ಯಾಲೆಯವರ ಮನವೊಪ್ಪಿಸಿದರು ಹಾಗೂ ಅವರ ಸಹಯೋಗದಡಿಯಲ್ಲಿ ಮೌಂಟ್ ವಿಲ್ಸನ್ ವೀಕ್ಷಣಾಲಯದಲ್ಲಿ ರೋಹಿತದ ಬಗ್ಗೆ ಸಾರ್ವತ್ರಿಕ ಸಂಶೋಧನೆಯು ಆರಂಭವಾಯಿತು. ಆದರೆ ಸಹಾರವರು ಅವರಿಗೆ ಸೇರಿಕೊಳ್ಳುವಂತೆ ಕೇಳಿರಲಿಲ್ಲ. ಆದ್ದರಿಂದ ಅವರು ಸೀಮಿತ ಮಾಹಿತಿ ಮ್ತತು ವೈಜ್ಞಾನಿಕ ಸಾಧನಗಳೊಂದಿಗೆ ಕೆಲಸ ಮಾಡಲು ಒಪ್ಪದೆ ಬಿಟ್ಟುಬಿಟ್ಟರು, ಆದರೂ ಅವು ಅವರಿಗೆ ಸ್ವಲ್ಪವೂ ಅಡ್ಡಿಯನ್ನುಂಟುಮಾಡಿರಲಿಲ್ಲ. ಅದೇ ಸಂದರ್ಭದಲ್ಲಿ ಹಾರ್ವರ್ಡ್ ಕಾಲೇಜ್ ವೀಕ್ಷಣಾಲಯವು ಸಾಕಷ್ಟು ಮಾಹಿತಿಯನ್ನು ಕಲೆಹಾಕಿತು ಮತ್ತು ರಸ್ಸೆಲ್ ಇವೆಲ್ಲವೂ ಏನು ಎಂಬುದರ ಬಗ್ಗೆ ಆಸಕ್ತಿ ವಹಿಸಿದರು. 1908 ಮತ್ತು 1913ರ ಮಧ್ಯೆ ಆತ ಹುರುಪಿನಿಂದ ಈ ಸಮಸ್ಯೆಯ ಬಗ್ಗೆ ಚಿಂತಿಸಿದರು ಮತ್ತು ಈ ಮಾಹಿತಿಯನ್ನು ಸಮಗ್ರವಾಗಿ ಒಂದು ನಕ್ಷೆಯಾಗಿ ರೂಪಿಸಬಹುದೆಂಬ ನಿರ್ಧಾರಕ್ಕೆ ಬಂದರು. ಅಂತಹ ಒಂದು ನಕ್ಷೆಯನ್ನು ಸ್ವತಂತ್ರವಾಗಿ ಹರ್ಟ್ಜ್‌ಸ್ಪ್ರಂಗ್ ಮಾಡಿದರು ಮತ್ತು ಆದ್ದರಿಂದ ಅದನ್ನು ಹೆಚ್ಚಾಗಿ ಹರ್ಟ್ಜ್‌ಸ್ಪ್ರಂಗ್–ರಸ್ಸೆಲ್ ನಕ್ಷೆ ಎಂದು ಕರೆಯಲಾಗುತ್ತದೆ. ನಕ್ಷೆಯನ್ನು ಮಾಡುವಾಗ ಆತ ಹೆಚ್ಚಿನ ನಕ್ಷತ್ರಗಳು ಪಟ್ಟಿಯೊಂದರಲ್ಲಿ ಗುಂಪುಗೂಡಿದುದನ್ನು ಗಮನಿಸಿದರು. ಅಕ್ಷರಸಂಕೇತಗಳು ನಕ್ಷತ್ರದ ಕೆಲವು ಭೌತಿಕ ಅಂಶಗಳಿಗೆ ಸಂಬಂಧಿಸಿದ ಕೆಲವು ರಹಸ್ಯಪೂರ್ಣ ಮಾರ್ಗದಲ್ಲಿಲ್ಲದಿದ್ದರೆ ಇದು ಸಂಭವಿಸುವುದಿಲ್ಲ. ಪಿಕರಿಂಗ್ ಮತ್ತು ಕ್ಯಾನನ್ ಹಾರ್ವರ್ಡ್ ಕ್ಲಾಸಿಫಿಕೇಶನ್ ಸ್ಕೀಮ್ಅನ್ನು ಪ್ರಸ್ತಾಪಿಸಿದರು ಏಕೆಂದರೆ ಅವರು ರೋಹಿತವು ಸರಣಿಯಾದ್ಯಂತ ನಿರಂತರವಾಗಿ ಬದಲಾದುದನ್ನು ಗಮನಿಸಿದರು. ಆದರೆ ಈ ಬದಲಾವಣೆಗೆ ಕಾರಣವೇನು ಎಂಬುದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ನಕ್ಷತ್ರದ ವಾತಾವರಣದ ತಾಪಮಾನವು ಈ ಬದಲಾವಣೆಯನ್ನು ಮಾಡಿರಬಹುದೆಂದು ರಸ್ಸೆಲ್ ಊಹಿಸಿದರು; ಆದರೂ ಅವರಿಗೆ ಹೇಗೆ ತಾಪಮಾನದ ವ್ಯತ್ಯಾಸವು ಹೀರಿಕೆಯ ರೋಹಿತದಲ್ಲಿ ನಿಧಾನವಾದ ಬದಲಾವಣೆಯನ್ನು ಉಂಟುಮಾಡಿತು ಎಂಬುದರ ಬಗ್ಗೆ ವಿವರಿಸಲಾಗಲಿಲ್ಲ.
ಆದರೆ ಸಹಾ ಅದಾಗಲೇ ತನ್ನ ಪ್ರಶಸ್ತಿ-ವಿಜೇತ ಪ್ರಬಂಧದಲ್ಲಿ (A.ಫೌಲರ್‌ನ ಮಾರ್ಗದರ್ಶನದಡಿಯಲ್ಲಿ) ಈ ವಿಷಯದ ಬಗ್ಗೆ ಮೊದಲ ಹೆಜ್ಜೆಯನಿಟ್ಟಿದ್ದಾರೆಂದು ರಸ್ಸೆಲ್‌ಗೆ ತಿಳಿದಿರಲಿಲ್ಲ. ಸಹಾ ರಸ್ಸೆಲ್‌ರನ್ನು ಉಲ್ಲೇಖಿಸಿ ಆ ಪ್ರಬಂಧವನ್ನು ಈ ಕೆಳಗಿನಂತೆ ಆರಂಭಿಸಿದರು: "ನಕ್ಷತ್ರಗಳ ರೋಹಿತವು ಗಮನಾರ್ಹವಾಗಿ ಅವುಗಳ ಪ್ರಕಾರದಲ್ಲಿ ಕೆಲವು ಮೂಲಭೂತ ವ್ಯತ್ಯಾಸಗಳನ್ನು ತೋರಿಸುತ್ತವೆ. ಅವುಗಳಲ್ಲಿ 99%ಗಿಂತಲೂ ಹೆಚ್ಚಿನವು ಆರು ಶ್ರೇಷ್ಠ ಗುಂಪುಗಳಲ್ಲಿ ಯಾವುದಾದರೊಂದರಲ್ಲಿ ಬರುತ್ತವೆ, ಈ ಗುಂಪುಗಳು ಹಾರ್ವರ್ಡ್ ಕಾಲೇಜ್ ವೀಕ್ಷಣಾಲಯದ ಮೂಲಭೂತ ಸಂಶೋಧನೆಯ ಸಂದರ್ಭದಲ್ಲಿ B A F G K M ಮೊದಲಾದ ಅನಿಯಂತ್ರಿತ ಅಕ್ಷರಗಳಿಂದ ಸ್ಥಾನಗಳನ್ನು ಪಡೆದಿದ್ದಾವೆ. ಅವುಗಳಲ್ಲಿ ಕೆಲವು ಪ್ರಕಾರಗಳು ಮಾತ್ರ ಗಮನಾರ್ಹವಾದುದಾಗಿವೆ, ಆದರೆ ಅವು ನಿರಂತರ ಸರಣಿಯನ್ನು ಉಂಟುಮಾಡುತ್ತವೆ ಎಂಬುದು ಹೆಚ್ಚು ಪ್ರಮುಖವಾದ ಸಂಗತಿಯಾಗಿದೆ. ನಕ್ಷತ್ರದ ರೋಹಿತದಲ್ಲಿನ ಮುಖ್ಯ ವ್ಯತ್ಯಾಸಗಳು ನಕ್ಷತ್ರದ ಪರಿಸರದಲ್ಲಿ ಒಂದು ಭೌತಿಕ ಅಂಶದಲ್ಲಾಗುವ ಬದಲಾವಣೆಯಿಂದಾಗಿ ಉಂಟಾಗುತ್ತದೆಂಬ ಅಭಿಪ್ರಾಯವನ್ನು ರಸ್ಸೆಲ್ ವ್ಯಕ್ತಪಡಿಸಿದ್ದಾರೆ." ತನ್ನ ಪ್ರಬಂಧದಲ್ಲಿ ಸಹಾ ಹೀಗೆಂದು ತೋರಿಸಿದ್ದಾರೆ -

  1. ವಿವಿಧ ಪ್ರಕಾರದಲ್ಲಿನ ನಕ್ಷತ್ರದ ರೋಹಿತದ ನಿರಂತರ ಬದಲಾವಣೆಯು ಏಕ ಪರಿಮಾಣದ ವ್ಯತ್ಯಾಸದಿಂದಾಗಿ ಉಂಟಾಗುತ್ತದೆಂಬ ರಸ್ಸೆಲ್‌ನ ಅಭಿಪ್ರಾಯವನ್ನು ಆತನ ವಿಶ್ಲೇಷಣೆಯು ರುಜುವಾತುಪಡಿಸುತ್ತದೆ.
  2. ಉಲ್ಲೇಖಿಸಲಾದ ಆ ಪರಿಮಾಣವೆಂದರೆ ತಾಪಮಾನ.
  3. ಆತ ಮಾರ್ಜಿನಲ್ ಡಿಸ್‌ಪ್ಲೇಸ್ಮೆಂಟ್(ಅಂಚಿನ ಪಲ್ಲಟನ) ವಿಧಾನದ ಮೂಲಕ ರೋಹಿತದ ಮಾಹಿತಿಯ ಆಧಾರದಲ್ಲಿ ಅನಿಯಂತ್ರಿತ ಅಕ್ಷರಸಂಕೇತಗಳ ಹಾರ್ವರ್ಡ್ ಪರಿಮಾಣವನ್ನು ತಾಪಮಾನ ಪರಿಮಾಣಕ್ಕೆ ಪರಿವರ್ತಿಸಬಲ್ಲವರಾಗಿದ್ದರು.

ಹಾರ್ವರ್ಡ್ ಪರಿಮಾಣವನ್ನು ತಾಪಮಾನ ಪರಿಮಾಣಕ್ಕೆ ಪರಿವರ್ತಿಸುವ ಯೋಚನೆಯನ್ನು ಬೆಳಕಿಗೆ ತಂದವರಲ್ಲಿ ಸಹಾ ಮೊದಲಿಗರಾಗಿದ್ದಾರೆ, ಆದರೆ ಅದರಲ್ಲಿ ಕೆಲವು ಪ್ರಾಯೋಗಿಕ ಸಮಸ್ಯೆಗಳಿದ್ದವು, ಪ್ರಮುಖವಾದುದೆಂದರೆ ರೇಖೆಯು ಯಾವಾಗ ಕಣ್ಮರೆಯಾಗುತ್ತದೆ ಎಂಬುದನ್ನು ಕರಾರುವಾಕ್ಕಾಗಿ ಕಂಡುಹಿಡಿಯುವುದು. ಫೌಲರ್‌ ಮತ್ತು ಮಿಲ್ನೆಯವರು ರೇಖೆಯ ತೀವ್ರತೆಯು ಯಾವಾಗ ಗರಿಷ್ಠವಾಗುತ್ತದೆಂದು ಗಮನಿಸಿದ ನಂತರ ತಾಪಮಾನವನ್ನು ಸ್ಥಿರಪಡಿಸುವ ಮೂಲಕ ಸಮೀಕರಣವನ್ನು ವಿಸ್ತರಿಸಿದರು. ಆದ್ದರಿಂದ ಈ ಇಬ್ಬರು ವಿಜ್ಞಾನಿಗಳು ಈ ಸಾಧನೆಯನ್ನು ಮಾಡಿದ ಕೀರ್ತಿಗೆ ಪಾತ್ರರಾದರು. ಆಗ ಹಾರ್ವರ್ಡ್ ಕಾಲೇಜ್ ವೀಕ್ಷಣಾಲಯದಲ್ಲಿ ಕೆಲಸ ಮಾಡುತ್ತಿದ್ದ ಸೆಸಿಲಿಯ ಪೇನ್-ಗ್ಯಾಪೋಸ್ಚ್ಕಿನ್ ಹೀಗೆಂದು ಹೇಳಿದ್ದಾರೆ:

In my last year at Cambridge, I had come to know E.A.Miles, who with Ralph Fowler had just published the historic paper on stellar atmospheres. They in turn had been inspired by the brilliant idea with which Meghnad Saha had applied the principles of physical chemistry to the ionisation of stellar material, the idea that gave birth to modern astrophysics...

ಭಾರತಕ್ಕೆ ಹಿಂದಿರುಗುವಿಕೆ[ಬದಲಾಯಿಸಿ]

ಅಲಹಾಬಾದ್‌ನಲ್ಲಿ[ಬದಲಾಯಿಸಿ]

1921ರ ನವೆಂಬರ್‌ನಲ್ಲಿ ಸಹಾ ಭಾರತಕ್ಕೆ ಹಿಂದಿರುಗಿ, ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಖೈರಾ ಪ್ರಾಧ್ಯಾಪಕರಾಗಿ ಸೇರಿಕೊಂಡರು, ಇದು ಖೈರಾದ ಕುಮಾರ್ ಗುರುಪ್ರಸಾದ್ ಸಿಂಗ್‌ರ ಕೊಡುಗೆಯಿಂದ ರಚಿತವಾದ ಒಂದು ಹೊಸ ಪ್ರಾಧ್ಯಾಪಕ ಸ್ಥಾನವಾಗಿದೆ. ಆದರೆ ಆ ವಿಶ್ವವಿದ್ಯಾನಿಲಯವು ತೀವ್ರ ಹಣಕಾಸಿನ ತೊಂದರೆಯಿಂದ ನಡೆಯುತ್ತಿತ್ತು. ಆ ವಿಶ್ವವಿದ್ಯಾನಿಲಯದ ಉಪ ಕುಲಾಧಿಪತಿಯಾಗಿ ಎರಡನೇ ಅವಧಿಯ ಸೇವೆಯಲ್ಲಿದ್ದ ಸರ್ ಅಶುತೋಶ್ ಮುಖರ್ಜಿ ಒಂದಿಗೆ ಬಂಗಾಳದ ಆಗಿನ ಗವರ್ನರ್ ಲಾರ್ಡ್ ರೊನಾಲ್ಡ್‌ಶೇ ದ್ವೇಷವನ್ನು ಹೊಂದಿದ್ದರು. ಸಹಾ ಈ ಗಲಭೆಯಲ್ಲಿ ಸಿಕ್ಕಿಬಿದ್ದರು ಮತ್ತು ಅವರಿಗೆ ಒಬ್ಬ ಸಹಾಯಕನನ್ನು ಪಡೆಯಲು ಸಾಧ್ಯವಾಗಲಿಲ್ಲ, ಸಾಧನಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ ಮತ್ತು ಪ್ರಯೋಗಾಲಯದ ಸ್ಥಳಾವಕಾಶದ ಸಮಸ್ಯೆಗಳನ್ನೂ ಎದುರಿಸಿದರು. ಕಲ್ಕತ್ತಾವನ್ನು ಎಷ್ಟು ಇಷ್ಟಪಟ್ಟರೂ ಅಲ್ಲಿ ತನ್ನ ಸಂಶೋಧನೆಯನ್ನು ಮುಂದುವರಿಸಲು ಸಾಧ್ಯವಿಲ್ಲವೆಂಬುದನ್ನು ಸಹಾರವರು ಕಂಡುಕೊಂಡರು ಮತ್ತು ಕಲ್ಕತ್ತಾ ಬಿಟ್ಟುಬರಲು ನಿರ್ಧರಿಸಿದರು. ಆಲಿಗರ್ ಮುಸ್ಲಿಂ ವಿಶ್ವವಿದ್ಯಾನಿಲಯ ಮತ್ತು ಬನಾರಸ್ ಹಿಂದು ವಿಶ್ವವಿದ್ಯಾನಿಲಯಗಳಿಂದ ಅವಕಾಶಗಳು ಬಂದರೂ ಸಹಾರವರು ಅಲಹಾಬಾದ್ ವಿಶ್ವವಿದ್ಯಾನಿಲಯದೆಡೆಗಿನ ಆಸಕ್ತಿಯಿಂದಿಂದಾಗಿ ಅವುಗಳನ್ನು ನಿರಾಕರಿಸಿದರು, ಮುಖ್ಯವಾಗಿ ಏಕೆಂದರೆ ಅವರ ಸ್ನೇಹಿತರಲ್ಲಿ ಕೆಲವರು ಆ ವಿಶ್ವವಿದ್ಯಾನಿಲಯದ ಕಾರ್ಯನಿರ್ವಾಹಕ ಸಲಹಾಮಂಡಳಿಯಲ್ಲಿದ್ದುದರಿಂದ, ಅವರು ತನ್ನ ಸಂಶೋಧನೆಗಳಿಗೆ ಆರ್ಥಿಕವಾಗಿ ಸಹಾಯ ಮಾಡಬಹುದೆಂಬ ಆಶಯವನ್ನು ಆತ ಹೊಂದಿದ್ದರು. ಅಲಹಾಬಾದ್‌ನಲ್ಲಿ ಅವರು ತಮ್ಮ ಸಂಶೋಧನಾ ಕಾರ್ಯವನ್ನು ಆರಂಭಿಸುವುದಕ್ಕಿಂತ ಮೊದಲು ಅದಕ್ಕೆ ಸಹಕರಿಸುವವರ ಗುಂಪು, ಪ್ರಯೋಗಾಲಯ ಮತ್ತು ಗ್ರಂಥಾಲಯವನ್ನು ಸುಧಾರಿಸಬೇಕಾಗಿತ್ತು. ಅದಲ್ಲದೆ ಅವರ ಹೆಚ್ಚಿನ ಸಮಯವು ಬೋಧನೆಗೆ ಹೋಗಿ, ತಮ್ಮ ಸಂಶೋಧನೆಗೆ ಸ್ವಲ್ಪ ಕಾಲ ಮಾತ್ರ ಸಿಗುತ್ತಿತ್ತು. ಆದರೆ ಸಹಾರವರು ಪ್ರತಿಕೂಲ ಪರಿಸ್ಥಿತಿಗಳಿಂದ ಹಿಂಜರಿಯಲಿಲ್ಲ. ಅತಿ ಶೀಘ್ರದಲ್ಲಿ ಸಹಾ ಮತ್ತು ಅವರ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಿದರು. ಅಲಹಾಬಾದ್‌ನಲ್ಲಿ ಅವರಿಗೆ ಸಹಕಾರ ನೀಡಿದವರೆಂದರೆ - N.K. ಸುರ್, P.K. ಕಿಚ್ಲು, D.S. ಕೊಠಾರಿ, R.C. ಮಜುಮ್ದಾರ್, K.B. ಅತ್ಮಾರಮ್ ಮತೂರ್ ಮತ್ತು B.D. ನಾಗ್ ಚೌಧರಿ. 1927ರಲ್ಲಿ ಇಟಲಿಯ ಸರ್ಕಾರವು ಅಲೆಸ್ಸಾಂಡ್ರೊ ವೋಲ್ಟರ ನೂರನೇ ವರ್ಷದ ಜನ್ಮದಿನವನ್ನು ಕೊಂಡಾಡಲು ಒಂದು ಭಾರಿ ಅಂತಾರಾಷ್ಟ್ರೀಯ ಸಭೆಯನ್ನು ಆಯೋಜಿಸಿತು, ಇದು ಕೋಮೊ ಎಂಬ ಸ್ಥಳದಲ್ಲಿ ನೆರವೇರಿತು ಹಾಗೂ ಇದರ ಪ್ರಮುಖ ಆಯೋಜಕರೆಂದರೆ ಫರ್ಮಿ. ಸಹಾರವರು ಇದರ ಆಮಂತ್ರಣವನ್ನು ಪಡೆದರು ಮತ್ತು ಅಲ್ಲಿ ಅವರು ಆ ಸಂದರ್ಭದಲ್ಲಿ ಅವರ ಆಸಕ್ತಿಯ ವಿಷಯವಾಗಿದ್ದ ಸಂಕೀರ್ಣ ರೋಹಿತದ ವಿಶ್ಲೇಷಣೆಯ ಬಗ್ಗೆ ಒಂದು ಪ್ರಬಂಧವನ್ನು ಮಂಡಿಸಿದರು. ಕೋಮೊದಿಂದ ಸಹಾ ಮುಂಬರುವ ಸಂಪೂರ್ಣ ಸೂರ್ಯ ಗ್ರಹಣವನ್ನು ವೀಕ್ಷಿಸುವುದಕ್ಕಾಗಿ ಓಸ್ಲೊ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ L. ವಿಗಾರ್ಡ್ ಆಯೋಜಿಸಿದ ವಿಶೇಷ ದಂಡಯಾತ್ರೆಯಲ್ಲಿ ಭಾಗವಹಿಸುವುದಕ್ಕಾಗಿ ನಾರ್ವೆಯ ಓಸ್ಲೊಗೆ ಹೋದರು. ಈ ಕಾರಣಕ್ಕಾಗಿ ಆ ಗುಂಪು ರಿಂಗೆಬುಗೆ ಪ್ರಯಾಣ ಬೆಳೆಸಿತು.
ಅದೇ ವರ್ಷದಲ್ಲಿ ಅವರು ರಾಯಲ್ ಸೊಸೈಟಿ ಆಫ್ ಲಂಡನ್‌ನ ಪೆಲೋ ಆದರು.[೧೭]. ಅವರು ಫ್ರಾನ್ಸ್‌ನ ಆಸ್ಟ್ರೊನೊಮಿಕಲ್ ಸೊಸೈಟಿಯ ಸದಸ್ಯರಾಗಿ ಚುನಾಯಿತರಾದರು ಮತ್ತು ಲಂಡನ್‌ನ ಭೌತಶಾಸ್ತ್ರ ಸಂಸ್ಥೆಯ ಆಧಾರ ಫೆಲೋ ಆದರು.[೧೭] ಇದರಿಂದಾಗಿ ಅವರು ಆಗಿನ ಯುನೈಟೆಡ್ ಪ್ರೊವಿನ್ಸಸ್‌ನ ಗವರ್ನರ್ ಆಗಿದ್ದ ಸರ್ ವಿಲಿಯಂ ಸಿಂಕ್ಲೇರ್ ಮೋರಿಸ್‌ರನ್ನು ಭೇಟಿಯಾಗುವ ಅವಕಾಶವನ್ನು ಪಡೆದರು ಹಾಗೂ ಅವರು ಒಂದು ಕಾಲದಲ್ಲಿ ಅರ್ನೆಸ್ಟ್ ರುದರ್‌ಫೋರ್ಡ್‌ನ ತರಗತಿ-ಸಹಪಾಠಿಯಾಗಿದ್ದರೆಂದು ಗವರ್ನರ್‌ಗೆ ತಿಳಿದುದರಿಂದ, ಸಹಾರವರು ತಮ್ಮ ಪ್ರಯೋಗಾಲಯದ ಕಳಪೆ ಸ್ಥಿತಿಯ ಬಗ್ಗೆ ತಿಳಿಸುವ ಅವಕಾಶವನ್ನು ಪಡೆದರು. ಗವರ್ನರ್ ತಕ್ಷಣವೇ ಪ್ರತಿಕ್ರಿಯಿಸಿ ಪ್ರತಿ ತಿಂಗಳಿಗೆ 5000 ರೂಪಾಯಿಯ ಸಂಶೋಧನಾ ಕೊಡುಗೆಯನ್ನು ಮಂಜೂರು ಮಾಡಿದರು. ಇದು ಖಂಡಿತವಾಗಿಯೂ ಸಾಕಾಗುವುದಿಲ್ಲವೆಂದು ಕಂಡುಕೊಂಡ ಅವರು ದೆಹಲಿಯಲ್ಲಿರುವ ಕೇಂದ್ರ ಸರ್ಕಾರಕ್ಕೆ ಒಂದು ಸಂಶೋಧನಾ ಕೊಡುಗೆಯನ್ನು ಶಿಫಾರಸು ಮಾಡಬೇಕಾಗಿ ಕೇಳಿ ಬರೆಯುವಂತೆ ಸರ್ ತೇಜ್ ಬಹಾದುರ್ ಸ್ಯಾಪ್ರುರವರಿಗೆ ಪತ್ರ ಬರೆದರು. ಆದರೆ ಅವರ ಕೋರಿಕೆಯನ್ನು ಯಾರೂ ಆಲಿಸಲಿಲ್ಲ. ಆದ್ದರಿಂದ ಅವರು ರಾಯಲ್ ಸೊಸೈಟಿದೆ ಹಿಂದಿರುಗಿದರು. ಆತನ ಸ್ಥಿತಿಯನ್ನು ಗಮನಿಸಿದ ಸೊಸೈಟಿಯು ಕೂಡಲೇ ಆತನಿಗೆ ವಾರ್ಷಿಕವಾಗಿ 1500 ರೂಪಾಯಿಯನ್ನು ಕೊಡುಗೆಯಾಗಿ ಮಂಜೂರು ಮಾಡಿತು. ಇದರಿಂದಾಗಿ ಅವರು ಯಾವುದೇ ಹಣಕಾಸಿನ ಸಮಸ್ಯೆಯಿಲ್ಲದೆ ತಮ್ಮ ಸಂಪೂರ್ಣ ಗಮನವನ್ನು ಸಂಶೋಧನಾ ಕಾರ್ಯಕ್ಕೆ ಹರಿಸುವಂತೆ ಆಯಿತು. ಮುಂದಿನ ವರ್ಷ 1932ರಲ್ಲಿ ಅವರು ಆ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರಾದರು.
ಈ ಸಮಯದಲ್ಲಿ ಸಹಾ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ಇತರ ನವೀನ ಕಾರ್ಯಗಳನ್ನು ಮಾಡುವ ಆಸಕ್ತಿಯನ್ನು ಹುಟ್ಟಿಸುವ ಒಂದು ವಿಜ್ಞಾನ ಅಕಾಡೆಮಿಯನ್ನು ಅಭಿವೃದ್ಧಿಪಡಿಸುವುದು ಅವಶ್ಯಕವಾಗಿದೆಯೆಂದು ಭಾವಿಸಿದರು. ಅವರು ತಮ್ಮ ಈ ಯೋಚನೆಗೆ ಇಂಗ್ಲೆಂಡ್‌ನ ರಾಯಲ್ ಸೊಸೈಟಿ, ಪ್ಯಾರಿಸ್‌ನ ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್, ಬರ್ಲಿನ್‌ನ ಪ್ರಶ್ಶಿಯನ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಮೋಸ್ಕೊದ ರಷ್ಯಿಯನ್ ಅಕಾಡೆಮಿ ಆಫ್ ಸೈನ್ಸಸ್ ಮೊದಲಾದ ಅಂತಹುದೇ ಅಕಾಡೆಮಿಗಳ ಯಶಸ್ವಿ ಕಾರ್ಯದಿಂದ ಪ್ರೇರೇಪಣೆಯನ್ನು ಪಡೆದರು. ಅವರಿಗೆ ಈ ಯೋಚನೆಯು 1930ರಲ್ಲಿ C. S. ಕ್ರಿಸ್ಟೋಫರ್‌ರ ಅಧ್ಯಕ್ಷತೆಯಡಿಯಲ್ಲಿ ಅಲಹಾಬಾದ್‌ನಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಕೂಟವು ಸೇರಿದಂದಿನಿಂದ ಮನಸ್ಸಿಗೆ ಬಂದಿತ್ತು. ಆ ಕಾರ್ಯಕ್ರಮದಲ್ಲಿ ಭಾಷಣವನ್ನು ಮಾಡುವಾಗ, ಗವರ್ನರ್ ಮಾಲ್ಕೋಲ್ಮ್ ಹೈಲಿ ಹೀಗೆಂದು ಹೇಳಿದರು - ವೈಜ್ಞಾನಿಕ ಸಂಸ್ಥೆಯೊಂದು ಸಂಶೋಧನೆಯನ್ನು ವಿಶ್ವವಿದ್ಯಾನಿಲಯದ ಆಡಳಿತ ವಿಭಾಗಗಳಲ್ಲಿ ಪ್ರಚೋದಿಸಿ, ಅದನ್ನು ಸಾರ್ವಜನಿಕ ಪ್ರಯೋಜನಕ್ಕಾಗಿ ನಿರ್ದೇಶಿದರೆ, ಸರ್ಕಾರಕ್ಕೆ ಸಂಶೋಧನೆಗಾಗಿ ಕೊಡುಗೆಗಳನ್ನು ನೀಡಲು ಸಾಧ್ಯವಾಗಬಹುದು. ಸಹಾರವರು ಈ ಸುಳಿವನ್ನು ಪಡೆದುಕೊಂಡು, ಅಂತಹ ಸಂಸ್ಥೆಯೊಂದನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಅದರ ಪರಿಣಾಮವೇ U.P. ಅಕಾಡೆಮಿ ಆಫ್ ಸೈನ್ಸಸ್ ಅಸ್ತಿತ್ವಕ್ಕೆ ಬಂದಿತು. ಅದರ ಹೆಸರು ಹಾಗಿದ್ದರೂ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಮೂಲಭೂತವಾಗಿ ಪ್ರಾದೇಶಿಕ ಸಂಸ್ಥೆಯಾಗಿ ಕೆಲಸ ಮಾಡಿತು. ಇದು ಅವರಿಗೆ ಭಾರತದ-ಎಲ್ಲಾ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸಂಘಟನೆಯೊಂದನ್ನು ರೂಪಿಸುವಂತೆ ಪ್ರೇರೇಪಿಸಿತು. ಆದ್ದರಿಂದ ಸಹಾರವರು 1934ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಸ್ಥಾಪನೆಯನ್ನು ಪ್ರಸ್ತಾಪಿಸಿದರು. ಇದರ ಬಗ್ಗೆ ಸಹಾ ಮತ್ತು ರಾಮನ್‌ರ ನಡುವೆ ಪ್ರಬಲ ಭಿನ್ನಾಭಿಪ್ರಾಯವೆದ್ದಿತು. ಅಂತಿಮವಾಗಿ ರಾಮನ್ ಬೆಂಗಳೂರಿನಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ಅನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಆದರೆ ಇದನ್ನು ಸಹಾರವರು ಒಪ್ಪದೆ ತಮ್ಮ ಪ್ರಯತ್ನಗಳನ್ನು ಮುಂದುವರಿಸಿದರು. ಅದರ ಪರಿಣಾಮವಾಗಿ 1935ರಲ್ಲಿ ಕಲ್ಕತ್ತಾದಲ್ಲಿ ಪ್ರಧಾನ ಕಛೇರಿಯನ್ನು ಹೊಂದುವುದರೊಂದಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಸ್ ಅಸ್ತಿತ್ವಕ್ಕೆ ಬಂದಿತು. ಈ ಸ್ಥಾಪನೆಯ ಬಗ್ಗೆ ಜನವರಿ 7ರಂದು ಕಲ್ಕತ್ತಾ ವಿಶ್ವವಿದ್ಯಾನಿಲಯದ ಸೆನೆಟ್ ಹಾಲ್‍ನಲ್ಲಿ J.H. ಹಟ್ಟನ್‌ರ ಅಧ್ಯಕ್ಷತೆಯಡಿಯಲ್ಲಿ ವಿಧ್ಯುಕ್ತವಾಗಿ ಘೋಷಿಸಲಾಯಿತು. L.L. ಫರ್ಮರ್ ಈ ಸಂಸ್ಥೆಯ ಮೊದಲ ಅಧ್ಯಕ್ಷರಾಗಿ ಚುನಾಯಿತರಾದರು. ಅದೇ ವರ್ಷದಲ್ಲಿ ಅವರು ಕಲ್ಕತ್ತಾದಲ್ಲಿ ಇಂಡಿಯನ್ ಸೈನ್ಸ್ ನ್ಯೂಸ್ ಅಸೋಸಿಯೇಶನ್ಅನ್ನೂ ಸ್ಥಾಪಿಸಿದರು. ವಿಜ್ಞಾನವನ್ನು ಸಾರ್ವಜನಿಕರಲ್ಲಿ ಹರಡುವುದು ಇದರ ಪ್ರಮುಖ ಉದ್ದೇಶವಾಗಿತ್ತು.ಈ ಸಂಘಟನೆಯು ಸೈನ್ಸ್ ಆಂಡ್ ಕಲ್ಚರ್ ಎಂಬ ಅದರ ಪತ್ರಿಕೆಯನ್ನು ಪ್ರಕಟಿಸಲು ಆರಂಭಿಸಿತು. ಈ ಪತ್ರಿಕೆಯ ಮೊದಲ ಪ್ರತಿಯನ್ನು ಪಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರಭಾವಿತರಾದರು ಮತ್ತು ಅವರು ಹೀಗೆಂದು ಬರೆದಿದ್ದಾರೆ: "ಸೈನ್ಸ್ ಆಂಡ್ ಕಲ್ಚರ್‌ನ ಪ್ರಕಟನೆಯು ಪ್ರಾಯೋಗಿಕವಲ್ಲದ ವಿಜ್ಞಾನದಲ್ಲಿ ಆಸಕ್ತಿಹೊಂದಿದವರಿಂದ ಮಾತ್ರವಲ್ಲದೆ ಪ್ರಾಯೋಗಿಕವಾಗಿ ರಾಷ್ಟ್ರ ಕಟ್ಟುವುದಕ್ಕೆ ಸಂಬಂಧಿಸಿದವರಿಂದಲೂ ಸೌಹಾರ್ದಯುತವಾಗಿ ಸ್ವೀಕರಿಸಲ್ಪಡುತ್ತದೆ. ನಮ್ಮ ಹಿಂದಿನ "ರಾಷ್ಟ್ರ ನಿರ್ಮಾಪಕ"ರ ಉದ್ದೇಶಗಳು ಏನಿದ್ದರೂ, ನಾವು ಕಿರಿಯರು ರಾಷ್ಟ್ರವನ್ನು ಕಟ್ಟುವ ಕಾರ್ಯವನ್ನು ಸಂಪೂರ್ಣವಾಗಿ ವೈಜ್ಞಾನಿಕ ಮನೋಭಾವದಿಂದ ಮಾಡಬೇಕು ಹಾಗೂ ಆಧುನಿಕ ವಿಜ್ಞಾನ ಮತ್ತು ಸಂಸ್ಕೃತಿಯು ನಮಗೆ ನೀಡುವ ಎಲ್ಲಾ ಜ್ಞಾನದೊಂದಿಗೆ ಸಿಧ್ದರಾಗಲು ನಾವು ಬಯಸಬೇಕು. ಆದರೆ ರಾಜಕೀಯ ಕಾರ್ಯಕರ್ತರಿಗೆ ಆ ಜ್ಞಾನವನ್ನು ಶೇಖರಿಸುವ ಬಗೆಗಿನ ಅನ್ಯಮನಸ್ಕತೆಯಿಂದಾಗಿ ಇದು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ವಿಜ್ಞಾನಿಗಳು ಮತ್ತು ವೈಜ್ಞಾನಿಕ ಅನ್ವೇಷಕರು ಅವರದೇ ರಕ್ಷಣೆಯಲ್ಲಿ ಮುಂದುವರಿಯಬೇಕಾಗುತ್ತದೆ." ಸಹಾ ಸೈನ್ಸ್ ಆಂಡ್ ಕಲ್ಚರ್‌ನಲ್ಲಿ ಹಲವಾರು ವಿಷಯಗಳ ಬಗ್ಗೆ 200ಕ್ಕಿಂತಲೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ, ಅಂತಹ ವಿಷಯಗಳೆಂದರೆ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆಯ ಸಂಘಟನೆ, ಪರಮಾಣು ಶಕ್ತಿ ಮತ್ತು ಅದರ ಕೈಗಾರಿಕಾ ಬಳಕೆ, ನದಿ ಕಣಿವೆಗಳ ಅಭಿವೃದ್ಧಿ ಯೋಜನೆಗಳು, ರಾಷ್ಟ್ರೀಯ ಆರ್ಥಿಕತೆಯ ಯೋಜನೆಗಳು, ಶೈಕ್ಷಣಿಕ ಸುಧಾರಣೆಗಳು ಮತ್ತು ಭಾರತೀಯ ಕ್ಯಾಲೆಂಡರಿನ ಬದಲಾವಣೆ. ಈ ಪತ್ರಿಕೆಯು ಪ್ರಸ್ತುತ ಅದರ 76ನೇ ಸಂಪುಟದಲ್ಲಿ ಪ್ರಕಟವಾಗುತ್ತಿದೆ. ನಂತರ ಅವರ ತೊಡಗುವಿಕೆಯೊಂದಿಗೆ 1946ರ ಮೇಯಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಸ್‌ನ ಪ್ರಧಾನ ಕಛೇರಿಯು ದೆಹಲಿಗೆ ಸ್ಥಳಾಂತರವಾಯಿತು ಹಾಗೂ ಅದರ ಹೆರಸರು ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯಾಗಿ ಬದಲಾಯಿತು.[೧೮]
1936ರಲ್ಲಿ ಸಹಾರವರು ಕಾರ್ನೆಗೈ ಟ್ರಸ್ಟ್ ಆಫ್ ದಿ ಬ್ರಿಟಿಷ್ ಎಂಪೈರ್‌ನಿಂದ ಫೆಲೊಷಿಪ್ಅನ್ನು ಪಡೆದರು ಹಾಗೂ ಅವರು ನಂತರ ವಿಹಾರ-ಪ್ರವಾಸಕ್ಕೆ ಹೋದರು, ಆ ಸಂದರ್ಭದಲ್ಲಿ ಅವರು ಇರಾಕ್, ಸಿರಿಯಾ, ಜೋರ್ಡಾನ್, ಇಸ್ರೇಲ್ ಮೊದಲಾದ ರಾಷ್ಟ್ರಗಳಿಗೆ ಭೇಟಿ ನೀಡಿದರು. ಮುನಿಚ್‌ನಲ್ಲಿ ಅವರು ಸೊಮ್ಮರ್‌ಫೆಲ್ಡ್ ಒಂದಿಗೆ ಸಂತೋಷದಿಂದ ಮತ್ತೆ ಒಂದುಗೂಡಿದರು. ನಂತರ ಅವರು ಭೌತಶಾಸ್ತ್ರ ಸಮಾಜದ ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿ ಭಾಗವಹಿಸುವುದಕ್ಕಾಗಿ ಲಂಡನ್‌ಗೆ ಹೋದರು, ಆ ಕಾರ್ಯಕ್ರಮದಲ್ಲಿ ಮ್ಯಾಕ್ಸ್ ಪ್ಲ್ಯಾಂಕ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಲಂಡನ್‌ನಿಂದ ಸಹಾ ಆಕ್ಸ್‌ಫರ್ಡ್‌‌ಗೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು ಮಿಲ್ನೆಯವರ ಜೊತೆಯಲ್ಲಿ ಒಂದು ತಿಂಗಳ ಕಾಲ ಕಳೆದರು. ನಂತರ ಅವರು ಬೋಸ್ಟನ್‌ನ ಹಾರ್ವರ್ಡ್ ಕಾಲೇಜ್ ವೀಕ್ಷಣಾಲಯಕ್ಕೆ ಸೇರಿದರು. ಅಲ್ಲಿ ಅವರು ಹ್ಯಾರ್ಲೊ ಶೇಪ್ಲಿ, ಡೊನಾಲ್ಡ್ ಮೆಂಜೆಲ್ ಮತ್ತು ಸೆಸಿಲಿಯ ಪೇನೆ-ಗ್ಯಾಪೋಸ್ಚ್ಕಿನ್ ಮೊದಲಾದ ಪ್ರಸಿದ್ಧ ವಿಜ್ಞಾನಿಗಳನ್ನು ಭೇಟಿಯಾದರು. ನಂತರ ಅವರು ಪಶ್ಚಿಮದೆಡೆಗೆ ತಿರುಗಿ ಅನೇಕ ವೀಕ್ಷಣಾಲಯಗಳಿಗೆ ಭೇಟಿ ನೀಡಿದರು ಹಾಗೂ ಹಬಲ್, ವಾಲ್ಟರ್ ಆಡಮ್ಸ್, ಮತ್ತು ಕೊನೆಯದಾಗಿ ಬರ್ಕೆಲಿಯಲ್ಲಿ ಲಾರೆನ್ಸ್ ಮೊದಲಾದವರನ್ನು ಸಂಧಿಸಿದರು. ಸಹಾ ಮತ್ತು ಲಾರೆನ್ಸ್ ಈ ಹಿಂದೆ 1927ರಲ್ಲಿ ಕೊಪೆನ್‌ಹ್ಯಾಗನ್‌ನಲ್ಲಿ ಭೇಟಿಯಾಗಿದ್ದರು, ಆದರೆ ಮತ್ತೊಮ್ಮೆ ಸಂಧಿಸುವಾಗ ಲಾರೆನ್ಸ್ ಸೈಕ್ಲೊಟ್ರಾನ್‌ನ ಅನ್ವೇಷಕರಾಗಿ ಪ್ರಸಿದ್ಧರಾಗಿದ್ದರು. ಈ ಭೇಟಿಯು ಪ್ರಯೋಜನಕಾರಿಯಾಯಿತು ಮತ್ತು ನಂತರ ಲಾರೆನ್ಸ್ ಕಲ್ಕತ್ತಾದಲ್ಲಿ ಸೈಕ್ಲೊಟ್ರಾನ್ಅನ್ನು ರೂಪಿಸಲು ಸಹಾರವರಿಗೆ ಸಹಾಯ ಮಾಡಿದರು. ಅಲ್ಲಿಂದ ಅವರು ಯರ್ಕ್ಸ್ ವೀಕ್ಷಣಾಲಯಕ್ಕೆ ಭೇಟಿ ನೀಡುವುದಕ್ಕಾಗಿ ಚಿಕಾಗೊಗೆ ಹೋದರು. ಹಾರ್ವರ್ಡ್‌ಗೆ ಹಿಂದಿರುಗಿದ ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಶತಮಾನದಿನೋತ್ಸ ಆಚರಣೆಯಲ್ಲಿ ಭಾಗವಹಿಸಿದರು. ನಂತರ ಅವರು ಎ ಸ್ಟ್ರಾಟೊಸ್ಫಿಯರ್ ಸೋಲಾರ್ ಅಬ್ಸರ್ವೇಟರಿ [೧೯] ಎಂಬ ಶೀರ್ಷಿಕೆಯ ಒಂದು ಸಣ್ಣ ಟಿಪ್ಪಣಿಯನ್ನು ಬರೆದರು, ಅದು ಹಾರ್ವರ್ಡ್ ಕಾಲೇಜ್ ಅಬ್ಸರ್ವೇಟರಿ ಬುಲೆಟಿನ್‌ನಲ್ಲಿ ಪ್ರಕಟವಾಯಿತು. ಅದರಲ್ಲಿ ಅವರು 40 ಕಿಮೀಗಿಂತಲೂ ಹೆಚ್ಚಿನ ಎತ್ತರದಲ್ಲಿ ಸೂರ್ಯನ ರೋಹಿತದ ವೀಕ್ಷಣೆಯ ಬಗ್ಗೆ ಸೂಚಿಸಿದ್ದಾರೆ. ಅದನ್ನು UVನ ಬರಿದಾಗುವಿಕೆಯನ್ನು ತಡೆಯಲು ಮತ್ತು ಪರಿಸರದಿಂದ ಹೊರಗೆಡವಲು ಹೆಚ್ಚು ಸಂಭವನೀಯ ಮಾರ್ಗವೆಂದು ಭಾವಿಸಿದ್ದಾರೆ. ಬೋಸ್ಟನ್‌ನಲ್ಲಿರುವಾಗ ಅವರು ಮಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಭೇಟಿನೀಡಿದರು, ಅದರ ಆಗಿನ ಅಧ್ಯಕ್ಷರಾಗಿದ್ದವರೆಂದರೆ ಕಾರ್ಲ್ ಟೈಲರ್ ಕಾಂಪ್ಟನ್. ಯುರೋಪಿಗೆ ಹಿಂದಿರುಗಿದಾಗ ಅವರು ಕೊಪೆನ್‌ಹ್ಯಾಗನ್‌ನ ನೈಲ್ಸ್ ಬಾಹ್ರ್ ಸಂಸ್ಥೆಯಲ್ಲಿ ನಡೆದ ಬೈಜಿಕ(ನ್ಯೂಕ್ಲಿಯರ್) ಭೌತಶಾಸ್ತ್ರದ ಬಗೆಗಿನ ಅಂತಾರಾಷ್ಟ್ರೀಯ ಸಮಾಲೋಚನೆಯೊಂದರಲ್ಲಿ ಭಾಗವಹಿಸಿದರು. ಇದು ಆತನ ಗಮನವನ್ನು ನಂತರ ಬೈಜಿಕ(ನ್ಯೂಕ್ಲಿಯರ್) ವಿಜ್ಞಾನಕ್ಕೆ ತಿರುಗಿಸಲು ಪ್ರಮುಖ ಕಾರಣವಾಯಿತು. ದೀರ್ಘ ಆದರೆ ವೈಚಾರಿಕವಾಗಿ ಪೂರ್ಣವಾಗಿ ಸಾಧಿಸಿದ ಪ್ರವಾಸವನ್ನು ಮುಗಿಸಿದ ನಂತರ ಸಹಾ 1937ರಲ್ಲಿ ಅಲಹಾಬಾದ್‌ಗೆ ಹಿಂದಿರುಗಿದರು. 1938ರಲ್ಲಿ ಅವರು ಅಕಾಡೆಮಿಯ ಆಶ್ರಯದಲ್ಲಿ "ವಿದ್ಯುತ್ ಪೂರೈಕೆ"ಯ ಬಗ್ಗೆ ವಿಚಾರ ಸಂಕಿರಣವೊಂದನ್ನು ಆಯೋಜಿಸಿದರು ಹಾಗೂ ನೆಹರುರವರಲ್ಲಿ ಅದನ್ನು ಉದ್ಘಾಟಿಸುವಂತೆ ಕೇಳಿದರು. ಆ ಸಂದರ್ಭದಲ್ಲಿ ನೆಹರು ಮತ್ತು ಸಹಾರವರು ಸೌಹಾರ್ದದ ಸಂಬಂಧವನ್ನು ಹಂಚಿಕೊಂಡರು. ಆದರೆ ನಂತರ ಈ ಸಂಬಂಧವು ಹಾಳಾಯಿತು, ಇದು ಬೈಜಿಕ ವಿಜ್ಞಾನವನ್ನು ಸಾರ್ವಜನಿಕ ಪ್ರಯೋಜನಕ್ಕಾಗಿ ಬಳಸುವ ಅವರ ಯೋಜನೆಗಳಿಗೆ ಮತ್ತು ಸೂಚನೆಗಳಿಗೆ ಗಮನಾರ್ಹವಾಗಿ ಅಡ್ಡಿಯನ್ನುಂಟುಮಾಡಿತು.
ಆ ಸಂದರ್ಭದಲ್ಲಿ ಅಲಹಾಬಾದ್‌ನಲ್ಲಿ ಅವರು ಕಾಂತೀಯ ಏಕಧ್ರುವಕ್ಕಾಗಿ ದಿರಾಕ್‌ರ ಕ್ವಾಂಟೀಕರಣ ಸ್ಥಿತಿಯನ್ನು ಮತ್ತೆಪಡೆದರು.[೨೦]. ದಿರಾಕ್ ಒಬ್ಬ ಕಾಂತೀಯ ಏಕಧ್ರುವದ ಅಧ್ಯಯನದ ಬಗ್ಗೆ ಹೆಚ್ಚು ಗಮನವನ್ನು ಹರಿಸಿದ ಮೊದಲ ವಿಜ್ಞಾನಿಯಾಗಿದ್ದಾರೆ. ಇದರಿಂದಾಗಿ ಸಹಾ ಮೂಲಭೂತ ತತ್ತ್ವದ ದೃಷ್ಟಿಯಿಂದ ಒಂದು ಅಂಶವು ವಿದ್ಯುದಾವೇಶ ಮತ್ತು ಕಾಂತೀಯ ಆವೇಶಗಳೆರಡನ್ನೂ ಹೊಂದಿರುತ್ತದೆಂಬ ಅಭಿಪ್ರಾಯಕ್ಕೆ ಬಂದರು. ಅಂತಹ ಅಂಶವನ್ನು (ಕಾಲ್ಪನಿಕ) ಡೈಯಾನ್ ಎಂದು ಕರೆಯಲಾಗುತ್ತದೆ. ಸಹಾರವರು ಊಹಿಸಿದ ಅದರ ಆವೇಶಗಳಲ್ಲಿನ ಈ ಕ್ವಾಂಟೀಕರಣ ಸ್ಥಿತಿಯು ದಿರಾಕ್ ಪ್ರಸ್ತಾಪಿಸಿದ ಮೂಲಭೂತ ತತ್ತ್ವದ ಅತ್ಯುತ್ತಮ ಸಾಮಾನ್ಯೀಕರಣವಾಯಿತು.[೨೧] ಈ ಸಮಯದಲ್ಲಿ ಅವರು ತಾನು ಅಲಹಾಬಾದ್‌ನಲ್ಲೇ ತಡೆಹಿಡಿಯಲ್ಪಟ್ಟಿದ್ದೇನೆಂದು ಭಾವಿಸಿ, ವಿಜ್ಞಾನವನ್ನು ಎಲ್ಲೆಡೆಯೂ ಹರಡಲು ಕಲ್ಕತ್ತಾ ಉತ್ತಮ ಅವಕಾಶಗಳನ್ನು ಒದಗಿಸುತ್ತದೆಂದು ಅಭಿಪ್ರಾಯ ಪಟ್ಟು 1938ರಲ್ಲಿ ಕಲ್ಕತ್ತಾಕ್ಕೆ ಹಿಂದಿರುಗಿದರು.

ಕಲ್ಕತ್ತಾದಲ್ಲಿ[ಬದಲಾಯಿಸಿ]

ಸಹಾರವರು 1938ರ ಜುಲೈನಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯಕ್ಕೆ ಹಿಂದಿರುಗಿದರು. ಅಲ್ಲಿ ಅವರು ಪಾಲಿಟ್ ಪ್ರಾಧ್ಯಾಪಕರಾದರು ಮತ್ತು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದರು. ಆ ಸಂದರ್ಭದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿಯವರು ಈ ವಿಶ್ವವಿದ್ಯಾನಿಲಯದ ಉಪ ಕುಲಾಧಿಪತಿಗಳಾಗಿದ್ದರು. ಅವರು ಅತಿ ಶೀಘ್ರದಲ್ಲಿ ನಿವೃತ್ತಿಹೊಂದಿ ಸರ್ ಮೊಹಮ್ಮದ್ ಅಜಿಜುಲ್ ಹಕ್ ಆ ಸ್ಥಾನಕ್ಕೆ ಬಂದರು. ಅಲ್ಲಿಗೆ ಸೇರಿಕೊಂಡ ನಂತರ ಸಹಾರವರು ತಕ್ಷಣವೇ ಪಾಲಿಟ್ ಪ್ರಯೋಗಾಲಯದಲ್ಲಿ ಸಂಶೋಧನೆಯನ್ನು ಮಾಡಲು ತೊಡಗಿದರು. ಅಲ್ಲದೆ ಅವರು ಭೌತಶಾಸ್ತ್ರದಲ್ಲಿನ MSc ಪಠ್ಯಕ್ರಮವನ್ನು ಪುನಃರೂಪಿಸುವ ಕಾರ್ಯವನ್ನು ಕೈಗೆತ್ತಿಕೊಂಡರು. ನಂತರ ಸಹಾರವರು 1940ರಲ್ಲಿ ಬೈಜಿಕ ಭೌತಶಾಸ್ತ್ರದಲ್ಲಿ ಒಂದು ಸಾಮಾನ್ಯ ಮತ್ತು ಒಂದು ವಿಶೇಷ ಪ್ರಬಂಧವನ್ನು ಹಾಗೂ ಕ್ವಾಂಟಂ ಮೆಕ್ಯಾನಿಕ್ಸ್‌ನಲ್ಲಿ ಒಂದು ಸಾಮಾನ್ಯ ಪ್ರಬಂಧವನ್ನು ಮಂಡಿಸಿದರು.

ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್[ಬದಲಾಯಿಸಿ]

ಹಿಂದೆ ಸೂಚಿಸಿದಂತೆ ಸಹಾರವರ ಬೈಜಿಕ ಭೌತಶಾಸ್ತ್ರದ ಬಗೆಗಿನ ಆಸಕ್ತಿಯು 1936-37ರಲ್ಲಿನ ಅವರ ವಿದೇಶಿ ಪ್ರವಾಸದಿಂದ ಹುಟ್ಟಿಕೊಂಡಿತು. ಬರ್ಕೆಲಿಯಲ್ಲಿ ನೋಡಿದುದರಿಂದ ಪ್ರಭಾವಿತರಾದ ಸಹಾರವರು 1938ರಲ್ಲಿ ತಮ್ಮ ವಿದ್ಯಾರ್ಥಿ B.D. ನಾಗ್ ಚೌಧರಿಯನ್ನು ಲಾರೆನ್ಸ್‌‌ರವರಡಿಯಲ್ಲಿ ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಬರ್ಕೆಲಿಗೆ ಕಳುಹಿಸಿದರು ಹಾಗೂ ಸೈಕ್ಲೊಟ್ರಾನ್‌ನ ಬಗ್ಗೆ ಎಲ್ಲಾ ತಿಳಿದುಕೊಂಡರು. ಸಹಾರವರು ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಒಂದು ಸೈಕ್ಲೊಟ್ರಾನ್ಅನ್ನು ಹೊಂದಲು ತೀವ್ರಾಸಕ್ತಿಯನ್ನು ಹೊಂದಿದ್ದರು. ಅದನ್ನು ರಚಿಸುವುದಕ್ಕಾಗಿ ಕೊಡುಗೆಯನ್ನು ನೀಡಲು ಟಾಟಾದವರ ಮನವೊಪ್ಪಿಸುವಂತೆ ನೆಹರುರವರೊಂದಿಗಿನ ತಮ್ಮ ಪ್ರಭಾವವನ್ನು ಬಳಸಿಕೊಂಡರು. ಟಾಟಾದವರು 60,000 ರೂಪಾಯಿ ಮೌಲ್ಯವನ್ನು ನೀಡಿ ಸಹಾಯ ಮಾಡಿದರು, ಆದರೆ ಅಷ್ಟು ಹಣ ಸೈಕ್ಲೊಟ್ರಾನ್ಅನ್ನು ರಚಿಸಲು ಸಾಕಾಗುತ್ತಿರಲಿಲ್ಲ. 1941ರಲ್ಲಿ ನಾಗ್ ಚೌಧರಿ ಹಿಂದಿರುಗಿದರು. ಅಮೆರಿಕಾದಲ್ಲಿನ ಅವರ ಪ್ರಯತ್ನಗಳಿಗಾಗಿ ಸಹಾರವರು ಧನ್ಯವಾದಗಳನ್ನು ಅರ್ಪಿಸಿದರು. ಅತಿ ಶೀಘ್ರದಲ್ಲಿ ಸೈಕ್ಲೊಟ್ರಾನ್‌ನ ಭಾಗಗಳನ್ನು (ಮುಖ್ಯವಾಗಿ ಕಾಂತವನ್ನು ತಯಾರಿಸಲು) ವಶಪಡಿಸಿಕೊಳ್ಳಲಾಯಿತು. ಆದರೆ ಅದೇ ಸಂದರ್ಭದಲ್ಲಿ ಅಮೆರಿಕಾ ವಿಶ್ವ ಸಮರವನ್ನು ಪ್ರವೇಶಿಸಿದರಿಂದ, ಉಪಕರಣಗಳ ನಂತರದ ಸಮೂಹವನ್ನು (ಮುಖ್ಯವಾಗಿ ವ್ಯಾಕ್ಯೂಮ್ ಪಂಪುಗಳು) ಕೊಂಡೊಯ್ಯುತ್ತಿದ ಹಡಗನ್ನು ಜಪಾನಿಯರು ಮುಳುಗಿಸಿದರು. ಇದೊಂದು ಪ್ರಮುಖ ತಡೆಯಾಗಿತ್ತು. ನಂತರ ಅಮೆರಿಕಾದಿಂದ ಯಾವುದೇ ಭಾಗಗಳನ್ನು ಪಡೆಯುವ ಆಶಯವಿರಲಿಲ್ಲ; ಲಾರೆನ್ಸ್ ಮೊದಲಾದ ಅಮೆರಿಕಾದ ವಿಜ್ಞಾನಿಗಳು ಮ್ಯಾನ್‌ಹ್ಯಾಟನ್ ಯೋಜನೆಯೆಡೆಗೆ ಹೆಚ್ಚು ಗಮನ ಹರಿಸಿದರು. ಇದರಿಂದಾಗಿ ಎಲ್ಲಾ ಭಾಗಗಳನ್ನು ಕಲ್ಕತ್ತಾದಲ್ಲೇ ತಯಾರಿಸಬೇಕಾಯಿತು ಹಾಗೂ ಇದು ದೀರ್ಘಕಾಲದ ಕಾರ್ಯವಾಯಿತು. ಅಂತಿಮವಾಗಿ ಇದು ಪೂರ್ಣಗೊಳ್ಳಲು ಅನೇಕ ವರ್ಷಗಳನ್ನು ತೆಗೆದುಕೊಂಡಿತು (ಸಹಾ ನಿಧನಹೊಂದಿದ ನಂತರ ಇದು ಕೆಲಸ ಮಾಡಲು ಆರಂಭಿಸಿತು). ಇದನ್ನು ಹೊರತುಪಡಿಸಿ ಸಹಾರವರು ಡಾರ್ಜೆಲಿಂಗ್‌ನಲ್ಲಿ ಸಾಧಾರಣ ಪರಿಮಾಣದಲ್ಲಿ ಕೆಲವು ಕಾಸ್ಮಿಕ್-ಕಿರಣ ವೀಕ್ಷಣೆಗಳನ್ನೂ ಆರಂಭಿಸಿದರು. ಜಪಾನಿನ ಮೇಲೆ ನಡೆದ ಪರಮಾಣು ಬಾಂಬ್‌ ದಾಳಿಯ ಘಟನೆಯಿಂದ ಸಹಾರವರು ಬೈಜಿಕ ಶಕ್ತಿಯ ಪ್ರಾಮುಖ್ಯತೆಯ ಬಗ್ಗೆ ಇನ್ನಷ್ಟು ತಿಳಿದುಕೊಂಡರು. ಆದ್ದರಿಂದ ಅವರು ಬೈಜಿಕ ವಿಜ್ಞಾನ ಮತ್ತು ಅದರ ನಿರೀಕ್ಷೆಗಳಿಗೆ ಮೀಸಲಾದ ವಿಶ್ವವಿದ್ಯಾನಿಲಯದ ಆಶ್ರಯದಡಿಯಲ್ಲಿ ಸ್ವಾಧಿಕಾರದ ಸಂಸ್ಥೆಯೊಂದನ್ನು ಸ್ಥಾಪಿಸಲು ನಿರ್ಧರಿಸಿದರು. ಅದರ ಪರಿಣಾಮವಾಗಿ 1948ರಲ್ಲಿ ಸಹಾ ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್ ಅಸ್ತಿತ್ವಕ್ಕೆ ಬಂದಿತು. ಇದನ್ನು 1950ರಲ್ಲಿ ಇರೆನಿ ಜೂಲಿಯಟ್-ಕ್ಯೂರಿಯವರು ಉದ್ಘಾಟಿಸುವುದಾಗಿ ಘೋಷಿಸಲಾಯಿತು. ವಿಶ್ವವಿದ್ಯಾನಿಲಯದ ನಿಬಂಧನೆಗಳಿಗೆ ಅನುಗುಣವಾಗಿ ಸಹಾರವರು 1952ರಲ್ಲಿ ತಮ್ಮ ಪಾಲಿಟ್ ಪ್ರಾಧ್ಯಾಪಕತ್ವದಿಂದ ಮತ್ತು ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್‌ನ ನಿರ್ದೇಶಕ ಸ್ಥಾನದಿಂದ ನಿವೃತ್ತಿ ಹೊಂದಬೇಕಾಗಿತ್ತು. ಆದರೂ ಅವರು ಎರಡೂ ಸಂಸ್ಥೆಗಳೊಂದಿಗೆ ಗೌರವ ಸ್ಥಾನದಿಂದ ಸಂಪರ್ಕವನ್ನು ಇಟ್ಟುಕೊಂಡಿದ್ದರು.

ಇಂಡಿಯನ್ ಅಸೋಸಿಯೇಶನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸ್[ಬದಲಾಯಿಸಿ]

ಮೂವತ್ತರ ದಶಕದ ಆರಂಭದಿಂದ ಸಹಾರವರು IACSನಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದರು. 1944ರಲ್ಲಿ ಅವರು ಅದರ ಗೌರವ ಕಾರ್ಯದರ್ಶಿಯಾದರು ಮತ್ತು 1946ರಲ್ಲಿ ಅದರ ಅಧ್ಯಕ್ಷರು ಸಾವನ್ನಪ್ಪಿದರಿಂದ ಅವರೇ ಅಧ್ಯಕ್ಷರಾದರು. ಆ ಸಂದರ್ಭದಲ್ಲಿ IACS ಬೌಬಜಾರ್‌ನಲ್ಲಿತ್ತು. ರಾಮನ್‌ರವರು ಅಲ್ಲಿ ತಮ್ಮ ಸಂಶೋಧನೆಯನ್ನು ನಡೆಸಿದ ಸ್ವರ್ಣಯುಗದ ನಂತರ ಆ ಸಂಸ್ಥೆಯು ಸ್ವಲ್ಪ ಮಟ್ಟಿಗೆ ಕಷ್ಟಪಟ್ಟು ಸಾಗಿತು. ಸಹಾರವರು ಹಲವಾರು ಹೊಸ ಸಂಶೋಧನಾ ಕಾರ್ಯಗಳನ್ನು ಆರಂಭಿಸುವ ಮೂಲಕ ಸಂಸ್ಥೆಗೆ ಒಂದು ನೂತನ ಅಸ್ತಿತ್ವವನ್ನು ಕೊಡಬೇಕೆಂದು ಬಹಳ ಉತ್ಸುಕರಾಗಿದ್ದರು. ಇದಕ್ಕೆಲ್ಲಾ ಬಹಳಷ್ಟು ಸಮಯ ಮತ್ತು ಹಣದ ಅವಶ್ಯಕತೆ ಇತ್ತು. ಅಂತಿಮವಾಗಿ ಅವರು ಜಾದವ್‌ಪುರದಲ್ಲಿ ಹತ್ತು ಎಕರೆ ಜಾಗವನ್ನು ಖರೀದಿಸಿದ ನಂತರ ಸಂಸ್ಥೆಯನ್ನು ಅಲ್ಲಿಗೆ ಸ್ಥಳಾಂತರಿಸುವಂತೆ ಪಶ್ಚಿಮ ಬಂಗಾಳದ ಸರ್ಕಾರವನ್ನು ಪ್ರೇರೇಪಿಸಿದರು. ಸಂಸ್ಥೆಯ ನಿಯಮಗಳನ್ನು ಪಾಲಿಸಿ ಸಹಾರವರು 1950ರಲ್ಲಿ ಅಧ್ಯಕ್ಷ ಸ್ಥಾನವನ್ನು ಪಡೆದರು. ಆ ಸಂದರ್ಭದಲ್ಲಿ, 1920ರಲ್ಲಿ ಲಂಡನ್‌ನಲ್ಲಿ ಭೇಟಿಯಾದಂದಿನಿಂದ ಸೌಹಾರ್ದಯುತ ಸಂಬಂಧವನ್ನು ಬೆಳೆಸಿಕೊಂಡು ಬಂದಿದ್ದ ಶಾಂತಿ ಸ್ವರೂಪ್ ಭಟ್ನಾಗರ್ IACS ಪೂರ್ಣಾವಧಿಯ ನಿರ್ದೇಶಕರನ್ನು ಹೊಂದುವ ಸಮಯವಾಗಿದೆಯೆಂದು ಸೂಚಿಸಿದರು. ಸಹಾರವರಿಗೆ ನೀಡಲಾದ ಅಧಿಕಾರದಿಂದಾಗಿ ಅವರು ಮೊದಲೇ ಆರಂಭಿಸಿದ್ದ ಸಂಸ್ಥೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಯಿತು ಎಂದೂ ಅವರು ಹೇಳಿದ್ದಾರೆ. ಆದ್ದರಿಂದ 1953ರಲ್ಲಿ ಸಹಾರವರು IACSಯ ಮೊದಲ ನಿರ್ದೇಶಕರಾದರು. ಈ ಅಧಿಕಾರವನ್ನು ಅವರು 1956ರಲ್ಲಿ ಸಾವನ್ನಪ್ಪುವವರೆಗೂ ಹೊಂದಿದ್ದರು.

ಸಹಾ ಮತ್ತು ಪರಮಾಣು ಶಕ್ತಿ[ಬದಲಾಯಿಸಿ]

ಸಹಾರವರು 1939ರಲ್ಲಿ ಹ್ಯಾನ್ ಮತ್ತು ಮೈಟ್ನರ್ ನಡೆಸಿದ ಬೈಜಿಕ ವಿದಳನ(ನ್ಯೂಕ್ಲಿಯರ್ ಫಿಜನ್)ದ ಅನ್ವೇಷಣೆಯನ್ನು ಹೆಚ್ಚಿಸುವ ಬಗ್ಗೆ ಹೆಚ್ಚು ಗಮನ ಹರಿಸಿದರು ಹಾಗೂ ಈ ಅನ್ವೇಷಣೆಯು ನಿಬ್ಬೆರಗಾಗಿಸುವ ಸಾಧ್ಯತೆಗಳನ್ನು ಒಳಗೊಂಡಿತ್ತು. ಅದೇ ಸಂದರ್ಭದಲ್ಲಿ 1940ರಲ್ಲಿ ದೆಹಲಿಯ ಬ್ರಿಟಿಷ್ ಆಡಳಿತಗಾರರು ಭಟ್ನಾಗರ್‌ರ ಅಧ್ಯಕ್ಷತೆಯಲ್ಲಿ ಬೋರ್ಡ್ ಫಾರ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ (BSIR)ಅನ್ನು ರಚಿಸಿದರು. ಸಹಾರವರು ಅದರ ಸದಸ್ಯರಾಗುವಂತೆ ಆಹ್ವಾನವನ್ನು ಪಡೆದರು. 1942ರಲ್ಲಿ ಸರ್ಕಾರವು CSIR ಎಂಬ ಶ್ರೇಷ್ಠ ಸಂಸ್ಥೆಯೊಂದನ್ನು ಸ್ಥಾಪಿಸಿತು, ಮತ್ತೆ ಸಹಾರವರು ಅದರ ಸದಸ್ಯರಾದರು.
1944ರಲ್ಲಿ ವಿಶ್ವ ಸಮರದಲ್ಲಿನ ಗೆಲುವು ಜರ್ಮನಿ ಮತ್ತು ಜಪಾನಿಗೆ ವಿರುದ್ಧವಾಗಿರುವುದು ಸ್ಪಷ್ಟವಾಯಿತು. ಗೆಲುವಿನ ನಿರೀಕ್ಷೆಯಲ್ಲಿ ಬ್ರಿಟಿಷ್ ಸರ್ಕಾರವು ಯುದ್ಧಾ-ನಂತರದ ಪುನಃರಚನಾ ಕಾರ್ಯಗಳಿಗಾಗಿ ಯೋಜನೆಗಳನ್ನು ರೂಪಿಸಲು ಆರಂಭಿಸಿತು. ಈ ಕಾರ್ಯದ ಭಾಗವಾಗಿ ಅದು ಪ್ರಾಧ್ಯಾಪಕ A.V. ಹಿಲ್‌ರನ್ನು ಸರ್ಕಾರಕ್ಕೆ ಸಲಹೆ ನೀಡುವುದಕ್ಕಾಗಿ ಭಾರತಕ್ಕೆ ಕಳುಹಿಸಿಕೊಡುವಂತೆ ರಾಯಲ್ ಸೊಸೈಟಿಗೆ ಕೇಳಿತು. ಹಿಲ್ ಬಂದು ಅನೇಕ ವಿಜ್ಞಾನಿಗಳನ್ನು ಭೇಟಿಯಾದರು, ಅವರಲ್ಲಿ ಸಹಾರವರೂ ಒಳಗೊಂಡಿದ್ದರು. ಅವರು ನಂತರ ವೈಜ್ಞಾನಿಕ ಮತ್ತು ಕೈಗಾರಿಕಾ ಪ್ರಗತಿಯನ್ನು ಗಮನಿಸಲು ಹಾಗೂ ಯುದ್ಧಾ-ನಂತರದ ಯೋಜನೆಗಳನ್ನು ರೂಪಿಸಲು ಇಂಡಿಯನ್ ಸೈಂಟಿಫಿಕ್ ಮಿಶನ್ಅನ್ನು (ISM) ವಿದೇಶಕ್ಕೆ ಕಳುಹಿಸುವಂತೆ ಶಿಫಾರಸು ಮಾಡಿದರು. ಈ ಶಿಫಾರಸು ಅಂಗೀಕರಿಸಲ್ಪಟ್ಟಿತು ಮತ್ತು ನಿಯೋಗವೊಂದು 1944ರ ಅಕ್ಟೋಬರ್‌‌‍ನಲ್ಲಿ ಭಾರತವನ್ನು ಬಿಟ್ಟಿತು; ಸಹಾರವರು ISMನ ಸದಸ್ಯರಾಗಿದ್ದರು.
ಆ ಪ್ರವಾಸವು ಆ ನಿಯೋಗವನ್ನು ಅಮೆರಿಕಾವನ್ನೂ ಒಳಗೊಂಡಂತೆ ಹಲವಾರು ರಾಷ್ಟ್ರಗಳಿಗೆ ಕೊಂಡೊಯ್ಯಿತು. ಅಲ್ಲಿರುವಾಗ ಸಹಾರವರು ಪರಮಾಣು ಶಕ್ತಿಯ ಸಂಶೋಧನೆಯ ಬಗ್ಗೆ ವಿಚಾರಿಸಿದರು, ಆದರೆ ಯಾವ ಮಾಹಿತಿಯೂ ಸಿಗಲಿಲ್ಲ. ಮ್ಯಾನ್‌ಹ್ಯಾಟನ್ ಯೋಜನೆಯು ರಭಸದಿಂದ ನಡೆಯುತ್ತಿತ್ತು ಮತ್ತು ಪರಮಾಣು ಶಕ್ತಿ ಸಂಶೋಧನೆಯು ಬಹು ಹತ್ತಿರದಲ್ಲಿ ನಿಯಂತ್ರಿಸಲ್ಪಟ್ಟಿದ್ದ ರಹಸ್ಯವಾಗಿತ್ತು ಎಂಬುದರ ಬಗ್ಗೆ ಅವರಿಗೆ ಆ ಸಂದರ್ಭದಲ್ಲಿ ತಿಳಿದಿರಲಿಲ್ಲ. ಸಹಾರವರ ವಿಚಾರಣೆಗಳು FBIಗೆ ಅದರ ಯೋಜನೆಯ ಬಗ್ಗೆ ನಿಜವಾಗಿ ಸಹಾರವರಿಗೆ ಎಷ್ಟು ತಿಳಿದಿದೆ ಎಂಬುದನ್ನು ಗ್ರಹಿಸುವುದಕ್ಕಾಗಿ ಅವರನ್ನು ಪ್ರಶ್ನಿಸುವಂತೆ ಪ್ರೇರೇಪಿಸಿದವು. ಸಹಾರವರಿಗೆ ಏನೂ ತಿಳಿದಿಲ್ಲವೆಂದು FBI ಸಮಾಧಾನಗೊಂಡರೂ, ಆ ವಿಷಯದ ಬಗೆಗಿನ ಅವರ ಜ್ಞಾನ ಮತ್ತು ಪರಿಣತಿಯು ಅದನ್ನು ದಿಗ್ಭ್ರಮೆಗೊಳಿಸಿತು. ಭಾರತಕ್ಕೆ ಹಿಂದಿರುಗಿದ ನಂತರ ISM ಒಂದು ಅಧಿಕೃತ ವರದಿಯನ್ನು ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿತು; ಆ ವರದಿಯನ್ನು ಸಹಾರವರು ಸಿದ್ಧಮಾಡಿದ್ದರು. 1947ರಲ್ಲಿ ಭಾರತವು ಸ್ವತಂತ್ರವಾಯಿತು ಮತ್ತು ನೆಹರುರವರು ಭಾರತದ ಪ್ರಧಾನ ಮಂತ್ರಿಯಾದರು. ಪರಮಾಣು ಶಕ್ತಿಯು ಹೊಸ ನಿರೀಕ್ಷೆಯಾಗಿದ್ದುದರಿಂದ ಮತ್ತು BSIRನ ಸದಸ್ಯರಾಗಿದ್ದುದರಿಂದ ಸಹಾರವರಿಗೆ ಭಾರತದಲ್ಲಿ ಪರಮಾಣು ಶಕ್ತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ತಾನು ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗಬಹುದೆಂದು ನಿರೀಕ್ಷಿಸಲು ಎಲ್ಲಾ ಕಾರಣಗಳಿದ್ದವು. ಭಾಭಾ ಕೂಡ ಅಂತಹುದೇ ಯೋಚನೆಗಳನ್ನು ಹೊಂದಿದ್ದರು ಮತ್ತು ಅವರೂ ಈ ವಿಷಯದ ಬಗೆಗಿನ ಚಿಂತನೆಗಳನ್ನು ನೆಹರುರವರಿಗೆ ನೀಡಲು ಆರಂಭಿಸಿದರು. 1948ರಲ್ಲಿ ಭಾಭಾರವರು ಸೂಚಿಸಿದ ಪರಮಾಣು ಶಕ್ತಿ ಆಯೋಗವನ್ನು ರೂಪಿಸುವ ಬಗ್ಗೆ ನೆಹರುರವರ ಸಮರ್ಥನೆಯಲ್ಲಿ ಭಾರತ ಸರ್ಕಾರವು ಸಹಾರವರನ್ನು ಕೇಳಿತು. ಭಾರತದಲ್ಲಿ ಇದನ್ನು ವರ್ಧಿಸಲು ಬೇಕಾದ ಕೈಗಾರಿಕಾ ಆಧಾರದ ಕೊರತೆಯಿದೆ ಮತ್ತು ಇಲ್ಲಿ ತರಬೇತಿ ಪಡೆದ ಜನಬಲವೂ ಲಭ್ಯವಿಲ್ಲ ಎಂದು ಹೇಳುವ ಮೂಲಕ ಸಹಾರವರು ಇದನ್ನು ದೃಢವಾಗಿ ವಿರೋಧಿಸಿದರು. ಅವರ ದೃಷ್ಟಿಯಲ್ಲಿ ಸಂಪೂರ್ಣ-ಸಮರ್ಥವಾದ ಪರಮಾಣು ಶಕ್ತಿ ಯೋಜನೆಯನ್ನು ಆರಂಭಿಸುವುದಕ್ಕಿಂತ ಮೊದಲು ಆ ಉದ್ಯಮವು ಬೆಳೆಯಬೇಕು ಮತ್ತು ಸ್ಪರ್ಧಾತ್ಮಕ ಜನಬಲವನ್ನು ಪಡೆಯುವುದಕ್ಕಾಗಿ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಬೈಜಿಕ ಭೌತಶಾಸ್ತ್ರ-ಆಧಾರಿತ ಕೋರ್ಸುಗಳನ್ನು ಆರಂಭಿಸಬೇಕು. ಅವರು ಪ್ರಬಲವಾಗಿ ಪರಮಾಣು ಶಕ್ತಿ ಅಭಿವೃದ್ಧಿಯ ಫ್ರೆಂಚ್ ಮಾದರಿಯನ್ನು ಸೂಚಿಸಿದರು, ಅದು ವಾಸ್ತವವಾಗಿ ಅವರ ಸ್ನೇಹಿತ ಫ್ರೆಡೆರಿಕ್ ಜೂಲಿಯಟ್-ಕ್ಯೂರಿಯವರ ಚಿಂತನೆಯ ಫಲವಾಗಿತ್ತು. ಮತ್ತೊಂದು ಕಡೆಯಲ್ಲಿ, ಭಾಭಾರವರು ಬಹು ವೇಗದ ಮತ್ತು ಹೆಚ್ಚು ಉತ್ಸಾಹದ ಅಭಿವೃದ್ಧಿ ಯೋಜನೆಯ ಪ್ರತಿಪಾದಕರಾಗಿದ್ದರು, ಅವರು ನೆಹರುರವರಿಗೆ ಮೇಲರ್ಜಿ ಸಲ್ಲಿಸಿದರು. ಅದರ ಪರಿಣಾಮವಾಗಿ 1948ರಲ್ಲಿ ಪರಮಾಣು ಶಕ್ತಿ ಆಯೋಗವು ಮತ್ತು 1954ರಲ್ಲಿ ಟ್ರಾಂಬೆಯಲ್ಲಿ ಪರಮಾಣು ಶಕ್ತಿ ಸಂಸ್ಥೆಯು ರಚಿತವಾಯಿತು.

ಸಹಾ ಮತ್ತು ಕ್ಯಾಲೆಂಡರ್ ಪುನಃರಚನೆ[ಬದಲಾಯಿಸಿ]

ಭಾರತದ ಕ್ಯಾಲೆಂಡರಿನ ಪುನಃರಚನೆಗೆ ಸಂಬಂಧಿಸಿದ ಸಹಾರವರ ಕಾರ್ಯವು ತುಂಬಾ ಪ್ರಮುಖವಾದುದು. ಸಹಾರವರು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಲಹಾಮಂಡಳಿಯ ಆಶ್ರಯದಡಿಯಲ್ಲಿ 1952ರಲ್ಲಿ ಭಾರತ ಸರ್ಕಾರದಿಂದ ಕ್ಯಾಲೆಂಡರ್ ಪುನಃರಚನಾ ಸಮಿತಿಯ ಅಧ್ಯಕ್ಷರಾದರು. ಆ ಸಮಿತಿಯ ಇತರ ಸದಸ್ಯರೆಂದರೆ: A. C. ಬ್ಯಾನರ್ಜಿ, K. K. ದಫ್ತರಿ, J. S. ಕರಂದಿಕಾರ್, ಗೊರಾಖ್ ಪ್ರಸಾದ್, R. V. ವೈದ್ಯ ಮತ್ತು N. C. ಲಾಹಿರಿ. ಸಹಾರವರ ಪ್ರಯತ್ನದಿಂದ ಈ ಸಮಿತಿಯ ರಚನೆಯಾಯಿತು. ಈ ಸಮಿತಿಯ ಮುಂದಿದ್ದ ಕಾರ್ಯವೆಂದರೆ ವೈಜ್ಞಾನಿಕ ಅಧ್ಯಯನದ ಆಧಾರದಲ್ಲಿ ಭಾರತದಾದ್ಯಂತ ಏಕರೀತಿಯಲ್ಲಿ ಬಳಸಬಹುದಾದ ನಿಖರವಾದ ಕ್ಯಾಲೆಂಡರನ್ನು ತಯಾರಿಸುವುದಾಗಿತ್ತು. ಇದೊಂದು ಬಹುದೊಡ್ಡ ಕೆಲಸವಾಗಿತ್ತು. ಈ ಸಮಿತಿಯು ರಾಷ್ಟ್ರದ ವಿವಿಧ ಭಾಗಗಳಲ್ಲಿ ಚಾಲ್ತಿಯಲ್ಲಿದ್ದ ವಿವಿಧ ಕ್ಯಾಲೆಂಡರುಗಳ ವಿವರಾತ್ಮಕ ಅಧ್ಯಯನ ಮಾಡಬೇಕಾಗಿತ್ತು. ಆಗ ಮೂವತ್ತು ಪ್ರಕಾರದ ಕ್ಯಾಲೆಂಡರುಗಳಿದ್ದವು. ಕ್ಯಾಲೆಂಡರಿನಲ್ಲಿ ಧಾರ್ಮಿಕ ಮತ್ತು ಸ್ಥಳೀಯ ಭಾವನೆಗಳು ಒಳಗೊಂಡಿರುವುದರಿಂದ ಈ ಕಾರ್ಯವು ಮತ್ತಷ್ಟು ಜಟಿಲವಾಯಿತು. 1955ರಲ್ಲಿ ಪ್ರಕಟವಾದ ಸಮಿತಿಯ ವರದಿಯ ಪೀಠಿಕೆಯಲ್ಲಿ ನೆಹರುರವರು ಹೀಗೆಂದು ಬರೆದಿದ್ದಾರೆ: "ಅವು (ವಿವಿಧ ಕ್ಯಾಲೆಂಡರುಗಳು) ರಾಷ್ಟ್ರದಲ್ಲಿನ ಕಳೆದುಹೋದ ರಾಜಕೀಯ ವಿಭಾಗಗಳನ್ನು ಸೂಚಿಸುತ್ತವೆ. ಈಗ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ನಮ್ಮ ನಾಗರಿಕರಿಗಾಗಿ, ಸಮಾಜಕ್ಕಾಗಿ ಮತ್ತು ಇತರ ಕಾರಣಗಳಿಗಾಗಿ ಕ್ಯಾಲೆಂಡರಿನಲ್ಲಿ ಏಕರೂಪತೆಯಿರುವುದು ಸ್ಪಷ್ಟವಾಗಿ ಅಪೇಕ್ಷಣೀಯವಾಗಿದೆ ಹಾಗೂ ಇದನ್ನು ವೈಜ್ಞಾನಿಕ ಮಾರ್ಗದಲ್ಲಿ ಮಾಡಬೇಕು." ಈ ಸಮಿತಿಯ ಕೆಲವು ಪ್ರಮುಖ ಶಿಫಾರಸುಗಳೆಂದರೆ:

  1. ಏಕಪ್ರಕಾರದ ರಾಷ್ಟ್ರೀಯ ಕ್ಯಾಲೆಂಡರಿನಲ್ಲಿ ಶಕ ಯುಗವನ್ನು ಸೇರಿಸಬೇಕು. (2002ರ ವರ್ಷವು 1923-24ರ ಶಕ ಯುಗವನ್ನು ಹೋಲುತ್ತದೆ.)
  2. ವರ್ಷವು ಮೇಷ ಸಂಕ್ರಾಂತಿಯ (ಸುಮಾರು ಮಾರ್ಚ್ 21ರಂದು ಕಂಡುಬರುತ್ತದೆ) ದಿನದ ನಂತರದ ದಿನದಿಂದ ಆರಂಭವಾಗಬೇಕು.
  3. ಸಾಮಾನ್ಯ ವರ್ಷವು 365 ದಿನಗಳನ್ನು ಹೊಂದಿದ್ದರೆ, ಅಧಿಕ ವರ್ಷವು 366 ದಿನಗಳನ್ನು ಹೊಂದಿರಬೇಕು. ಎಪ್ಪತ್ತೆಂಟನ್ನು ಶಕ ಯುಗಕ್ಕೆ ಸೇರಿಸಿದ ನಂತರ ಸಿಗುವ ಮೊತ್ತವು ನಾಲ್ಕರಿಂದ ಭಾಗಿಸಲ್ಪಟ್ಟರೆ, ಅದು ಅಧಿಕ ವರ್ಷವಾಗಿರುತ್ತದೆ. ಆದರೆ ಆ ಮೊತ್ತವು 100ರ ಅಪವರ್ತ್ಯವಾಗಿದ್ದಾಗ ಅದು ಅಧಿಕ ವರ್ಷವಾಗಬೇಕಾದರೆ ಆ ಮೊತ್ತವು 400ರಿಂದ ಭಾಗಿಸಲ್ಪಡಬೇಕು, ಇಲ್ಲದಿದ್ದರೆ ಅದು ಸಾಮಾನ್ಯ ವರ್ಷವಾಗುತ್ತದೆ.
  4. ಚೈತ್ರವು ವರ್ಷದ ಮೊದಲ ತಿಂಗಳಾಗಿರಬೇಕು. ಚೈತ್ರದಿಂದ ಭಾದ್ರದವರೆಗೆ ಪ್ರತಿ ತಿಂಗಳೂ ಮೂವತ್ತೊಂದು ದಿನಗಳನ್ನು ಮತ್ತು ಉಳಿದ ತಿಂಗಳು ಮೂವತ್ತು ದಿನಗಳನ್ನು ಹೊಂದಿರಬೇಕು.

ಸಹಾ ಮತ್ತು ನದಿ ಭೌತವಿಜ್ಞಾನ[ಬದಲಾಯಿಸಿ]

ಸಹಾರವರು ಭಾರತದ ಅನೇಕ ನದಿಗಳಲ್ಲಿನ ಹಾನಿಕಾರಿ ಪ್ರವಾಹಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿದರು. 1923ರಲ್ಲಿ ಉತ್ತರ ಬಂಗಾಳದಲ್ಲಿ ಪ್ರವಾಹದಿಂದ ಉಂಟಾದ ಹಾನಿಯು ಆಚಾರ್ಯ ಪ್ರಫುಲ್ಲ ಚಂದ್ರ ರೇಯರವರಿಗೆ ಉತ್ತರ ಬಂಗಾಳ ಪರಿಹಾರ ಸಮಿತಿಯ ಆಶ್ರಯದಡಿಯಲ್ಲಿ ಪರಿಹಾರ ಕಾರ್ಯವನ್ನು ಆಯೋಜಿಸುವಂತೆ ಪ್ರೇರೇಪಿಸಿತು. ರೇಯವರು ಪರಿಹಾರ ಕಾರ್ಯಕ್ಕಾಗಿ ಸಾರ್ವಜನಿಕರಿಂದ ಬಹಳಷ್ಟು ಹಣವನ್ನು ಸಂಗ್ರಹಿಸಲು ಸಮರ್ಥರಾದರು ಹಾಗೂ ಅವರಿಗೆ ಸುಭಾಷ್ ಚಂದ್ರ ಬೋಸ್, ಮೇಘನಾದ್ ಸಹಾ ಮತ್ತು ಸತೀಶ್ ಚಂದ್ರ ದಾಸ್‌ಗುಪ್ತ ಮೊದಲಾದವರು ತಮ್ಮ ಸಹಕಾರವನ್ನು ನೀಡಿದರು. ಪರಿಹಾರ ಕಾರ್ಯದಲ್ಲಿ ತೊಡಗಿರುವಾಗ ಸಹಾರವರು ಪ್ರವಾಹದ ವಿನಾಶಕಾರಿ ಶಕ್ತಿಯ ಬಗ್ಗೆ ಮೊದಲ ಅನುಭವವನ್ನು ಪಡೆದರು. ಸಹಾರವರು ತಮ್ಮ ಈ ಅನುಭವದ ಬಗ್ಗೆ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಬರೆದರು. 1934ರಲ್ಲಿ ಮುಂಬೈಯಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್‌ ನಡೆಸಿದ ಕಾರ್ಯಕ್ರಮದಲ್ಲಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರವಾಹದಿಂದ ಉಂಟಾದ ಗಂಭೀರ ಸಮಸ್ಯೆಗಳ ಬಗ್ಗೆ ವಿಶೇಷ ಗಮನ ಸೆಳೆದರು. ಅವರು ಒಂದು ನದಿ ಸಂಶೋಧನಾ ಪ್ರಯೋಗಾಲಯದ ಅಗತ್ಯವಿರುವುದಾಗಿ ಒತ್ತಿ ಹೇಳಿದರು. 1938ರಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಸ್‌ನ ಅಧ್ಯಕ್ಷೀಯ ಭಾಷಣದಲ್ಲಿ ಅವರು ಈ ವಿಷಯವನ್ನು ತಮ್ಮ ಸಂವಾದದ ಮುಖ್ಯ ಅಂಶವಾಗಿ ತೆಗೆದುಕೊಂಡರು ಹಾಗೂ ಮುಖ್ಯವಾಗಿ ನದಿಮುಖ ಭೂಮಿಯಲ್ಲಿ ಭಾರತೀಯ ನದಿಗಳಲ್ಲಿನ ಪ್ರವಾಹದಿಂದ ಉಂಟಾಗುವ ಅಪಾಯದ ಬಗ್ಗೆ ಒತ್ತಿ ಹೇಳಿದರು. 1923ರ ಪ್ರವಾಹದ ನಂತರ ಸಹಾರವರು 1931 ಮತ್ತು 1935ರ ಪ್ರಮುಖ ಎರಡು ಪ್ರವಾಹಗಳನ್ನು ಕಂಡರು. 1943ರಲ್ಲಿನ ಬಂಗಾಳದ ಪ್ರವಾಹವು ಕಲ್ಕತ್ತಾವನ್ನು ಭಾರತದ ಉಳಿದ ಭಾಗದಿಂದ ಪ್ರತ್ಯೇಕಿಸಿತು ಹಾಗೂ ಸಹಾರವರು ಈ ಸಮಸ್ಯೆಯ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. ಸಹಾರವರ ಬರಹಗಳು ಮತ್ತು ಭಾಷಣಗಳು ಸರ್ಕಾರಕ್ಕೆ ಪರಿಸ್ಥಿತಿಯ ತೀವ್ರತೆಯ ಬಗ್ಗೆ ಸ್ಪಷ್ಟವಾಗಿ ಅರಿಯುವಂತೆ ಮಾಡಿದವು. ಅದರ ಪರಿಣಾಮವಾಗಿ 1943ರಲ್ಲಿ ದಾಮೋದರ್ ವ್ಯಾಲಿ ಎಂಕ್ವೈರಿ ಕಮಿಟಿಯು ಅಸ್ತಿತ್ವಕ್ಕೆ ಬಂದಿತು. ಆ ಸಮಿತಿಯ ಅಧ್ಯಕ್ಷತೆಯನ್ನು ಬರಡ್ವಾನ್‌ನ ಮಹಾರಾಜ ವಹಿಸಿಕೊಂಡರು. ಸಹಾರವರೂ ಕೂಡ ಆ ಸಮತಿಯ ಸದಸ್ಯರಾಗಿದ್ದರು. ಸಹಾರವರು ದಾಮೋದರ್ ನದಿ ವ್ಯವಸ್ಥೆಯನ್ನು ನಿರ್ವಹಿಸುವ ಬಗೆಗಿನ ಯೋಜನೆಯೊಂದನ್ನು ಸಮಿತಿಯ ಮುಂದಿರಿಸಿದರು. ಅವರು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಆಧಾರದಲ್ಲಿ ನದಿ ನಿಯಂತ್ರಣದ ಬಗ್ಗೆಯೂ ವ್ಯಾಪಕವಾಗಿ ಬರೆದರು. ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಟೆನ್ನೆಸ್ಸೀ ವ್ಯಾಲಿ ಅಥೋರಿಟಿ (TVA) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟೆನ್ನೆಸ್ಸೀ ನದಿ ವ್ಯವಸ್ಥೆಯ ಮಾದರಿಯನ್ನು ದಾಮೋದರ್ ಕಣಿವೆಗೆ ಬಳಸಬಹುದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು 1945ರಲ್ಲಿ ಶ್ರೀ H.M. ಮ್ಯಾಥಿವ್ಸ್‌ರ‌ ಅಧ್ಯಕ್ಷತೆಯಡಿಯಲ್ಲಿ ಒಂದು ತಾಂತ್ರಿಕ ಸಲಹಾ ಸಮಿತಿಯನ್ನು ರಚಿಸಿತು. ಆ ಸಮಿತಿಯ ಮತ್ತೊಬ್ಬ ಸದಸ್ಯರೆಂದರೆ ಶ್ರೀ W.L. ವೂರ್ಡುಯಿನ್, ಅವರು ಹಿಂದೆ TVAಯಲ್ಲಿ ಕಾರ್ಯನಿರ್ವಹಿಸಿದ್ದರು. ಸಮಿತಿಯು ಸಹಾರವರ ಹೇಳಿಕೆಯನ್ನು ಬೆಂಬಲಿಸಿತು ಹಾಗೂ ಆಗ ವೈಸ್‌ರಾಯ್ ಕ್ಯಾಬಿನೆಟ್‌ನ ಅಧಿಕಾರ ಮತ್ತು ಕಾರ್ಯಗಳ ಹೊಣೆಹೊತ್ತ ಸದಸ್ಯರಾಗಿದ್ದ ಡಾ. B. R. ಅಂಬೇಡ್ಕರ್‌ರ ಸೂಚನೆಯಂತೆ ಸರ್ಕಾರವು TVAಯ ಮಾದರಿಯ ನಂತರ ದಾಮೋದರ್ ವ್ಯಾಲಿ ಕಾರ್ಪೊರೇಶನ್ (DVC)ಅನ್ನು ಅಸ್ತಿತ್ವಕ್ಕೆ ತರುವ ತೀರ್ಮಾನಕ್ಕೆ ಬಂದಿತು. DVC 1948ರ ಮಾರ್ಚ್‌ನಲ್ಲಿ ಕಾರ್ಯರೂಪಕ್ಕೆ ಬಂದಿತು.

ಮರಣ[ಬದಲಾಯಿಸಿ]

1956ರ ಆರಂಭದಲ್ಲಿ ಹೆಚ್ಚಿನ ರಕ್ತದೊತ್ತಡದ ಕಾರಣದಿಂದ ಸಹಾರವರು ಗಂಭೀರವಾದ ಆರೋಗ್ಯ ತೊಂದರೆಗಳಿಗೆ ಸಿಲುಕಿದರು. ವೈದ್ಯರು ಅವರ ಕೆಲಸ ಕಾರ್ಯಗಳನ್ನು ಕಡಿಮೆ ಮಾಡಬೇಕೆಂದು ಹೇಳಿದರೂ ಅವರು ಮಾತ್ರ ತಮ್ಮ ಕೆಲಸವನ್ನು ಮುಂದುವರಿಸಿದರು. ಫೆಬ್ರವರಿ 16ರಂದು ಅವರಿಗೆ ತಮ್ಮ ಹಳೆಯ ಸ್ನೇಹಿತ P.C. ಮಹಾಲನೋಬಿಸ್‌ರನ್ನು ಭೇಟಿಯಾಗುವ ಕಾರ್ಯಕ್ರಮವೊಂದಿತ್ತು. ಮಹಾಲನೋಬಿಸ್‌ರವರು ನೆಹರುರವರ ಅಚ್ಚುಮೆಚ್ಚಿನವರಾಗಿದ್ದರು ಮತ್ತು ಯೋಜನಾ ಆಯೋಗಕ್ಕೆ ಹತ್ತಿರದಿಂದ ಸಂಬಂಧಿಸಿದವರಾಗಿದ್ದರು. ಕಛೇರಿಯ ದಾರಿಮಧ್ಯೆ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾದರು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಅಭಿಪ್ರಾಯ[ಬದಲಾಯಿಸಿ]

ಜೀವನದ ಗುಣಮಟ್ಟವನ್ನು ಸುಧಾರಿಸಲು ದೊಡ್ಡ-ಪ್ರಮಾಣದ ಕೈಗಾರಿಕೀಕರಣವೇ ಏಕೈಕ ಮಾರ್ಗವಾಗಿದೆ ಎಂಬುದು ಸಹಾರವರು ಅಭಿಪ್ರಾಯವಾಗಿತ್ತು. ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ವಿಫಲವಾದರೆ ಅದಕ್ಕೆ ಯಾವುದೇ ನಿರೀಕ್ಷೆಯಿಲ್ಲವೆಂದು ಅವರು ಯೋಚಿಸಿದ್ದರು. ಸಹಾರವರು ಹೀಗೆಂದು ಬರೆದಿದ್ದಾರೆ: "ನಮ್ಮ ಸಂಗಡಿಗರಿಗೆ ಕರುಣೆಯನ್ನು ತೋರಿಸುವ ಮತ್ತು ಸಹಾಯವನ್ನು ಮಾಡುವ ತತ್ತ್ವಚಿಂತನೆಯನ್ನು ಶ್ರೇಷ್ಠ ಧರ್ಮಗಳ ಎಲ್ಲಾ ಸಂಸ್ಥಾಪಕರು ಪ್ರತಿಪಾದಿಸಿದ್ದಾರೆ ಹಾಗೂ ಪ್ರತಿಯೊಂದು ರಾಷ್ಟ್ರದ ಮತ್ತು ಎಲ್ಲಾ ಯುಗಗಳ ಕೆಲವು ಶ್ರೇಷ್ಠ ರಾಜರು ಮತ್ತು ಧಾರ್ಮಿಕ ಪಂಡಿತರು ಈ (ಪರೋಪಕಾರದ) ತತ್ತ್ವಚಿಂತನೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅಂತಹ ಪ್ರಯತ್ನಗಳು ಸಾಮಾನ್ಯ ಕಾರಣದಿಂದಾಗಿ ಯಶಸ್ವಿಯಾಗಲಿಲ್ಲ, ಪರೋಪಕಾರ ಮಾಡಲು ಅವಶ್ಯ ಅಂಶವಾದ ಎಲ್ಲರಿಗೂ ನೀಡುವುದಕ್ಕೆ ಉಪಯುಕ್ತ ವಸ್ತುಗಳನ್ನು ಪಡೆದುಕೊಳ್ಳುವ ವಿಧಾನಗಳು ನಿಜವಾಗಿಯೂ ಕೆಟ್ಟದ್ದಾಗಿದೆ. ಆದ್ದರಿಂದ ವೈಯಕ್ತಿಕ ವ್ಯಕ್ತಿಗಳು ಆಸಕ್ತಿ ವಹಿಸುವವರೆಗೆ, ಪ್ರಪಂಚದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಧರ್ಮಗಳ ಶ್ರೇಷ್ಠ ಸಂಸ್ಥಾಪಕರು ಗುರಿಯಾಗಿಟ್ಟುಕೊಂಡಿದುದನ್ನು ವಿಜ್ಞಾನವು ಸಾಧಿಸುತ್ತದೆ. ಐತಿಹಾಸಿಕ ಕಾರಣದಿಂದ ಆದ ಸಂಪತ್ತಿನ ಕೆಟ್ಟ ಹಂಚಿಕೆಯ ಪರಿಣಾಮಗಳು ಸಾಮಾಜಿಕ ಕಾನೂನುಗಳಿಂದಾಗಿ ಶೀಘ್ರವಾಗಿ ಪರಿಹಾರವಾಗಿವೆ." ದೇಶಪ್ರೇಮವಿದ್ದರೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಹಿಂದುಳಿದರು. ಕೌಟುಂಬಿಕ ಜವಾಬ್ದಾರಿಗಳು ಅವರಿಗೆ ಉದ್ಯೋಗವನ್ನು ಹುಡುಕುವಂತೆ ಒತ್ತಾಯಪಡಿಸಿದವು ಹಾಗೂ ಅವರಿಗೆ ಸಿಕ್ಕ ಉದ್ಯೋಗವು ಅವರನ್ನು ವಿಜ್ಞಾನದ ಮಾತಿಗೆ ಮೀರಿದ ಪ್ರಪಂಚಕ್ಕೆ ಕೊಂಡೊಯ್ಯಿತು. ಸಂಶೋಧನೆಯಲ್ಲಿ ಪೂರ್ತಿಮಗ್ನರಾಗಿ ಅವರು ಆಡುಮಾತಿನಲ್ಲಿ ಹೇಳುವ ದಂತ ಗೋಪುರವನ್ನು ಪ್ರವೇಶಿಸಿದರು. ಆದರೂ ಅದರಿಂದ ಹೊರಬರುವುದು ತಾತ್ಕಾಲಿಕವಾಯಿತು ಮತ್ತು ಅವರು ನಿಧಾನವಾಗಿ ನಿಷ್ಕ್ರಿಯವಾಗುತ್ತಾ ಸಾಗಿದರು. ಒಮ್ಮೆ ಅವರು ಹೀಗೆಂದು ಹೇಳಿದ್ದಾರೆ: "ವಿಜ್ಞಾನಿಗಳು "ದಂತ ಗೋಪುರ"ದಲ್ಲಿ ಜೀವಿಸುತ್ತಾರೆ ಮತ್ತು ನೈಜತೆಯಿಂದ ಅವರ ಮನಸ್ಸಿಗೆ ತೊಂದರೆ ಮಾಡಬಾರದೆಂದು ಹೆಚ್ಚಿನವರು ಹೇಳುತ್ತಾರೆ. ನನ್ನ ಎಳೆಯ ವಯಸ್ಸಿನಲ್ಲಿ ರಾಜಕೀಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಆ ದಿನಗಳನ್ನು ಹೊರತುಪಡಿಸಿ, ನಾನು 1930ರವರೆಗೆ ದಂತ ಗೋಪುರದಲ್ಲಿ ಜೀವಿಸಿದೆನು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನಗಳು ಈಗ ಆಡಳಿತಕ್ಕೆ ಕಾನೂನು ಮತ್ತು ಆದೇಶದಷ್ಟೇ ಮುಖ್ಯವಾಗಿವೆ. ನಾನು ಕ್ರಮೇಣ ರಾಜಕೀಯದಲ್ಲಿ ಮುಂದುವರಿದೆನು ಏಕೆಂದರೆ ನಾನು ನನ್ನದೇ ಸ್ವಂತ ಪ್ರಾಮಾಣಿಕ ಮಾರ್ಗದಲ್ಲಿ ರಾಷ್ಟ್ರಕ್ಕೆ ಸ್ವಲ್ಪ ಸಹಾಯವಾಗಬೇಕೆಂದು ಬಯಸಿದೆನು."[೨೨]. 1952ರಲ್ಲಿ ವಾಯುವ್ಯ ಕಲ್ಕತ್ತಾ ಚುನಾವಣಾಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸತ್ತಿನ ಸದಸ್ಯರಾಗಿ ಚುನಾಯಿತರಾದರು. ಶರತ್ ಚಂದ್ರ ಬೋಸ್‌ರ ಕೋರಿಕೆಯ ಮೇರೆಗೆ ಅವರು ಕಲ್ಕತ್ತಾದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ನಿಲ್ಲಲು ನಿರ್ಧರಿಸಿದರು. ಆದರೆ ಸಹಾರವರ ಮತ್ತು ಕಾಂಗ್ರೆಸ್‌ನ ಮಧ್ಯೆ ಒಡಕುಗಳಿದ್ದವು ಏಕೆಂದರೆ ಅವರು ಕಾಂಗ್ರೆಸ್ ಚಟುವಟಿಕೆಯ ಅತ್ಯಂತ ಮುಖ್ಯ ಅಂಶಗಳಾದ ಚರಕ ಮತ್ತು ಖಾದಿಯ ವಿರುದ್ಧವಾಗಿ ಮಾತನಾಡಿದ್ದರು. ಆದರೂ ಇದು ಅವರು ತಮ್ಮ ಕಾಂಗ್ರೆಸ್ ಪ್ರತಿಸ್ಪರ್ಧಿಯನ್ನು ಪ್ರಚಂಡ ಬಹುಮತದೊಂದಿಗೆ ಸೋಲಿಸದಂತೆ ಮಾಡಲಿಲ್ಲ. ಸಹಾರವರ ಚುನಾಯಿತರಾದುದನ್ನು ಸ್ವಾಗತಿಸುತ್ತಾ JBS ಹ್ಯಾಲ್ಡೇನ್ ಹೀಗೆಂದು ಹೇಳಿದ್ದಾರೆ: "ಅವರ ಇತ್ತೀಚಿನ ರಾಜಕೀಯ ಪ್ರವೇಶಕ್ಕಾಗಿ ನಾನೂ ಅವರನ್ನು ಅಭಿನಂದಿಸುತ್ತೇನೆ. ಭಾರತಕ್ಕೆ (ಮತ್ತು ಬ್ರಿಟನ್‌ಗೂ ಕೂಡ) ರಾಷ್ಟ್ರದ ಸರ್ಕಾರಕ್ಕೆ ವಿಜ್ಞಾನದ ಜ್ಞಾನವನ್ನು ತರಬಲ್ಲ ವ್ಯಕ್ತಿಯ ಅಗತ್ಯವಿದೆ. ರಾಜಕೀಯ ಅಭಿಪ್ರಾಯಗಳನ್ನು ಹಂಚಿಕೊಳ್ಳದವರೂ ಸಹ ಜನರ ಆಡಳಿತ ಮಂಡಳಿಯಲ್ಲಿ ತಾನೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದೆಂದು ಆನಂದಿಸಬಹುದು." ಅವರು ನಾಲ್ಕು ಬಾರಿ ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದಾರೆ - 1930, 1937, 1939, 1940."[೨೩]

ಸಹಾರವರಿಗೆ ಸಂದ ಗೌರವ ಕಾಣಿಕೆಗಳು[ಬದಲಾಯಿಸಿ]

  • "ನಕ್ಷತ್ರದ ಖಭೌತ ವಿಜ್ಞಾನಕ್ಕೆ ದಾರಿಮಾಡಿಕೊಟ್ಟ ಮೇಘನಾದ್ ಸಹಾರವರ ಅಯನೀಕರಣ ಸಮೀಕರಣವು (ಸುಮಾರು 1920) 20ನೇ ಶತಮಾನದ ಭಾರತೀಯ ವಿಜ್ಞಾನದ ಪ್ರಮುಖ ಹತ್ತು ಸಾಧನೆಗಳಲ್ಲಿ ಒಂದಾಗಿದೆ ಹಾಗೂ ಇದನ್ನು ನೋಬೆಲ್ ಪ್ರಶಸ್ತಿಯ ವರ್ಗದಲ್ಲಿ ಪರಿಗಣಿಸಬಹುದು. " - ಜಯಂತ್ ವಿಷ್ಣು ನಾರ್ಲಿಕಾರ್[೨೪]
  • "ಸಹಾರವರ ಕಾರ್ಯವು ಖಭೌತ ವಿಜ್ಞಾನಕ್ಕೆ ನೀಡಿದ ಪ್ರಚೋದನೆಯನ್ನು ಅತಿ ಮಹತ್ವದೆಂದು ಹೇಳಬಹುದು ಏಕೆಂದರೆ ನಂತರ ಈ ಕ್ಷೇತ್ರದಲ್ಲಾದ ಪ್ರಗತಿಯು ಇದರಿಂದ ಪ್ರಭಾವಿತವಾಗಿದೆ ಮತ್ತು ಹೆಚ್ಚಿನ ಅನಂತರದ ಸಂಶೋಧನೆಗಳು ಸಹಾರವರ ಕಲ್ಪನೆಗಳ ಪರಿಷ್ಕರಣೆಯಾಗಿವೆ." - S. ರೋಸ್‌ಲ್ಯಾಂಡ್[೨೫]
  • "ಅವರು (ಸಹಾ) ತಮ್ಮ ಹವ್ಯಾಸಗಳಲ್ಲಿ ಮತ್ತು ವೈಯಕ್ತಿಕ ಅವಶ್ಯಕತೆಗಳಲ್ಲಿ ನಿಜವಾಗಿಯೂ ಸರಳ, ಹೆಚ್ಚುಕಡಿಮೆ ಕಟ್ಟುನಿಟ್ಟಿನ ಮನುಷ್ಯರಾಗಿದ್ದರು. ಮೇಲ್ನೋಟಕ್ಕೆ ಅವರು ಕೆಲವೊಮ್ಮೆ ಸ್ನೇಹಪರನಲ್ಲದ ಮತ್ತು ಒರಟು ಸ್ವಭಾವವನ್ನು ತೋರಿಸುತ್ತಿದ್ದರು. ಆದರೆ ಒಮ್ಮೆ ಹೊರಮೇಲ್ಮೆಯು ಕಳಚಿದಾಗ ಅವರು ಒಬ್ಬ ಅತಿ ಹೆಚ್ಚಿನ ಸೌಹಾರ್ದದ, ಅತೀವ ಮಾನವೀಯತೆಯ, ಕರುಣೆಯ ಮತ್ತು ಇನ್ನೊಬ್ಬರ ಭಾವನೆಗಳನ್ನು ಬಲುಬೇಗ ಅರ್ಥಮಾಡಿಕೊಳ್ಳಬಲ್ಲ ವ್ಯಕ್ತಿಯಾಗಿ ಗೋಚರಿಸುತ್ತಾರೆ; ತನ್ನ ವೈಯಕ್ತಿಕ ಸೌಕರ್ಯಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸದಿದ್ದರೂ, ಅವರು ಇತರರ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದಾರೆ. ಇತರರೊಂದಿಗೆ ರಾಜಿಮಾಡಿಕೊಳ್ಳುವುದು ಅವರ ಸ್ವಭಾವವಲ್ಲ. ಅವರೊಬ್ಬ ಧೈರ್ಯಗೆಡದ ಮನೋಭಾವದ, ದೃಢನಿಶ್ಚಯದ, ದಣಿವಿಲ್ಲದ ಚೈತನ್ಯ ಮತ್ತು ತೊಡಗಿಸಿಕೊಳ್ಳುವಿಕೆಯ ವ್ಯಕ್ತಿ" - D. S. ಕೊಠಾರಿ[೨೬]
  • "ನಿಮ್ಮ ಅರವತ್ತನೇ ಜನ್ಮದಿನದ ಈ ಶುಭ ಸಂದರ್ಭದಲ್ಲಿ ವಿಶೇಷವಾಗಿ ಉಷ್ಣಬಲ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಅದ್ಭುತ ಸಾಧನೆಗಳಿಗಾಗಿ ನಿಮ್ಮನ್ನು ಅಭಿನಂದಿಸುವ ಅವಕಾಶವನ್ನು ಪಡೆದುದಕ್ಕಾಗಿ ನಾನು ಸಂತೋಷಿಸುತ್ತೇನೆ. ನಿಮಗೆ ತಿಳಿದಂತೆ, ನಾನು ಒಂದು ಬಾರಿ ಈ ಕ್ಷೇತ್ರದಲ್ಲಿನ ನಿಮ್ಮ ಕೆಲಸಕ್ಕಾಗಿ ನಿಮ್ಮನ್ನು ನೋಬೆಲ್ ಪ್ರಶಸ್ತಿಗೆ ನಾಮನಿರ್ದೇಶಗೊಳಿಸುವ ವಿಶೇಷ ಅಧಿಕಾರವನ್ನು ಹೊಂದಿದ್ದೆ." - ಅರ್ತುರ್ ಕಾಂಪ್ಟನ್"[೨೭]
  • "ಅನಿಲ ಅಯನೀಕರಣ ಸಿದ್ಧಾಂತಕ್ಕೆ ಪ್ರಾಧ್ಯಾಪಕ ಮೇಘನಾದ್ ಸಹಾರವರ ಮೂಲಭೂತ ಕೊಡುಗೆಗಳ ಬಗ್ಗೆ ಓದುವಾಗ ಪಡೆದುಕೊಂಡ ಸ್ಪೂರ್ತಿಯನ್ನು ನಾನು ಈಗಲು ಜ್ಞಾಪಿಕೊಳ್ಳುತ್ತೇನೆ." - ಎನ್ರಿಕೊ ಫರ್ಮಿ"[೨೭]
  • "ನಕ್ಷತ್ರದ ಪರಿಸರದಲ್ಲಿನ ಅಯನೀಕರಣದ ಬಗೆಗಿನ ಅವರ ಆರಂಭಿಕ ಮತ್ತು ಪ್ರಮುಖ ಪ್ರಬಂಧದ ಪ್ರಕಟಣೆಯ ಸಂದರ್ಭದಲ್ಲಿ, ದಿವಂಗತ ಪ್ರಾಧ್ಯಾಪಕ ಆಲ್ಫ್ರೆಡ್ ಫೌಲರ್‌‌ರವರು ಹೇಗೆ ಅದರ ಬಗ್ಗೆ ನನ್ನ ಗಮನವನ್ನು ಸೆಳೆದರು ಮತ್ತು ಅದರ ಮೂಲಭೂತ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು ಎಂಬುದನ್ನು ನಾನು ಈಗಲೂ ನೆನೆಪಿಸಿಕೊಳ್ಳುತ್ತೇನೆ. ಆ ಪ್ರಬಂಧವು ಮಿಲ್ನೆ, R.H. ಫೌಲರ್‌ ಮತ್ತು ಅನಂತರ ವರ್ಷದ ಇತರರ ಸಂಶೋಧನೆಗಳಿಗೆ ಪ್ರೇರಕ ಶಕ್ತಿಯಾಯಿತು. ನಕ್ಷತ್ರದ ಪರಿಸರದ ಬಗೆಗಿನ ಹೆಚ್ಚುಕಡಿಮೆ ಎಲ್ಲಾ ಸಂಶೋಧನೆಗಳು ಇದನ್ನು ಆಧರಿಸಿವೆ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ. ಆ ಪ್ರಬಂಧವು ಕಾರ್ಯಾರಂಭದ ಒಂದು ಹೊಸ ವಿಧಾನವನ್ನು ನೀಡಿತು ಮತ್ತು ಗೊಂದಲಗೊಳಿಸುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಮಾರ್ಗವನ್ನು ಒದಗಿಸಿತು." - ಹ್ಯಾರೋಲ್ಡ್ ಸ್ಪೆನ್ಸರ್ ಜೋನ್ಸ್"[೨೮]
  • "ನಾನು ಅವರ ಬಗ್ಗೆ ಹಲವಾರು ವರ್ಷಗಳಿಂದ ತಿಳಿದಿದ್ದೇನೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ. ನಾನು ಪದವಿ ವಿದ್ಯಾರ್ಥಿಯಾಗಿದ್ದಾಗ "ಸಹಾರವರ ಅಯನೀಕರಣ ಸಮೀಕರಣ"ದ ಬಗ್ಗೆ ಕಲಿಯುವಾಗ ಪಡೆದ ಬೌದ್ಧಿಕ ರೋಮಾಂಚನವನ್ನು ನಾನು ಎಂದಿಗೂ ಮರೆಯಲಾರೆ." - ಅರ್ನೆಸ್ಟ್ ಲಾರೆನ್ಸ್"[೨೭]
  • "ಹಾರ್ವರ್ಡ್ ವೀಕ್ಷಣಾಲಯವು ಮೇಘನಾದ್ ಸಹಾರವರಿಗೆ ಋಣಿಯಾಗಿದೆ. ಅವರ ಮೂವತ್ತು ವರ್ಷಗಳ ಹಿಂದಿನ ಸೂರ್ಯ ಮತ್ತು ನಕ್ಷತ್ರಗಳಲ್ಲಿನ ತಾಪಮಾನ ಅಯನೀಕರಣದ ಬಗೆಗಿನ ಸಂಶೋಧನೆಯು ಬ್ರಿಟಿಷ್ ವಿಜ್ಞಾನಿಗಳ ಚಟುವಟಿಕೆಗಳಿಗೆ ಸ್ಪೂರ್ತಿಯನ್ನು ನೀಡಿತು, ಅವರು ಮತ್ತೆ ಹಾರ್ವರ್ಡ್‌ನ ಶ್ರೀಮತಿ ಸೆಸಿಲಿಯಾ ಪ್ಯಾನೆ-ಗ್ಯಾಪೋಸ್ಚ್ಕಿನ್, ಡೊನಾಲ್ಡ್ M. ಮೆಂಜೆಲ್ ಮತ್ತು ಫ್ರ್ಯಾಂಕ್ ಹಾಗ್ ಮೊದಲಾವರಿಗೆ ಉತ್ತೇಜನವನ್ನು ನೀಡಿದರು." - ಹ್ಯಾರ್ಲೊ ಶೇಪ್ಲಿ"[೨೭]
  • "ಹಲವಾರು ವರ್ಷಗಳ ಹಿಂದೆ ಕ್ಯಾಲಿಫೋರ್ನಿಯಾದಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ, ಕ್ಷಾರದ (ಆಲ್ಕಲೈ) ಅಯನೀಕರಣಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಕೆಲಸ ಮಾಡುತ್ತಿದ್ದೆ - ಕೊನೆಗೂ ನಾನು ಯಶಸ್ಸು ಕಾಣದ ಒಂದು ಸಮಸ್ಯೆ. ಈ ಕೆಲಸದ ಸಂದರ್ಭದಲ್ಲಿ ನಕ್ಷತ್ರದ ರೋಹಿತದ ಮೇಲೆ ಪರಿಣಾಮ ಬೀರಿದ ಅಯನೀಕರಣದ ಬಗೆಗಿನ ನಿಮ್ಮ ಬಹು ಮುಖ್ಯ ಪ್ರಬಂಧವನ್ನು ನಾನು ತುಂಬಾ ಆಸಕ್ತಿಯಿಂದ ಓದಿದೆ. ನಿಜವಾಗಿ ಇದು ನಾನು ಪದವಿ ವಿದ್ಯಾರ್ಥಿಯಾಗಿ ಹೆಚ್ಚು ಗಮನವಿಟ್ಟು ಓದಿದ ಮೊದಲ ವೈಜ್ಞಾನಿಕ ಪ್ರಬಂಧವಾಗಿದೆ.ನಾನು ಈ ಪ್ರಬಂಧವನ್ನು ಬಹಳವಾಗಿ ಮೆಚ್ಚಿಕೊಂಡಿದ್ದೇನೆ ಮತ್ತು ಇದುವರೆಗೆ ಹಲವಾರು ಬಾರಿ ಅವಲೋಕಿಸಿದ್ದೇನೆ" - ಹ್ಯಾರೋಲ್ಡ್ ಉರೆ"[೨೭]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "Meghnad Saha". Retrieved 2010-06-13.
  2. "Meghnad Saha Biography". Archived from the original on 2001-06-27. Retrieved 2010-06-14.
  3. "Meghnad Saha" (PDF). Retrieved 2010-06-13.
  4. ೪.೦ ೪.೧ "Meghnad Saha". Retrieved 2010-06-13.
  5. "On Radiation-Pressure and the Quantum Theory" (PDF). Retrieved 2010-06-13.
  6. Venkatraraman,G. (1995). Saha And His Formula. University Press. p. 57.
  7. "The Stationary H- and K-lines of Calcium in Stellar Atmosphere" (PDF). Retrieved 2010-06-13.
  8. ೮.೦ ೮.೧ "Meghnad Saha". Retrieved 2010-06-14.
  9. "On a Physical Theory of Stellar Spectra". Retrieved 2010-06-13.
  10. "Meghnad Saha" (PDF). Retrieved 2010-06-13.
  11. "Meghnad Saha". Retrieved 2010-06-13.
  12. "Meghnad Saha" (PDF). Retrieved 2010-06-13.
  13. "Meghnad Saha" (PDF). Retrieved 2010-06-13.
  14. "Meghnad Saha" (PDF). Retrieved 2010-06-13.
  15. "Meghnad Saha". Retrieved 2010-06-13.
  16. "Meghnad Saha" (PDF). Retrieved 2010-06-13.
  17. ೧೭.೦ ೧೭.೧ "Meghnad Saha". Retrieved 2010-06-14.
  18. "History of INSA". Retrieved 2010-06-13.
  19. "A Stratosphere Solar Observatory" (PDF). Retrieved 2010-06-13.
  20. "Meghnad Saha" (PDF). Retrieved 2010-06-13.
  21. "Meghnad Saha" (PDF). Retrieved 2010-06-13.
  22. "Meghnad Saha". Retrieved 2008-05-31.
  23. "Meghnad Saha". Retrieved 2010-06-13.
  24. Narlikar, Jayant (2003). The Scientific Edge. Penguin Books. p. 127.
  25. Rosseland, S. (1939). Theoretical Astrophysics. Oxford: Oxford University Press.
  26. Kothari, D. S. (1970). Biographical Memoirs of Fellows of the National Institute of Sciences of India. Vol. 2. New Delhi.{{cite book}}: CS1 maint: location missing publisher (link)
  27. ೨೭.೦ ೨೭.೧ ೨೭.೨ ೨೭.೩ ೨೭.೪ Venkatraraman,G. (1995). Saha And His Formula. University Press. p. 188.
  28. Venkatraraman,G. (1995). Saha And His Formula. University Press. p. 190.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]