ಮಂಡ್ಯ (ಲೋಕ ಸಭೆ ಚುನಾವಣಾ ಕ್ಷೇತ್ರ)
Jump to navigation
Jump to search
ಮಂಡ್ಯ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು.
ದಾಖಲೆ[ಬದಲಾಯಿಸಿ]
2ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ 1957ರಲ್ಲಿ ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ದಿಂದ ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪಕ್ಷೇತರವಾಗಿ ಆಯ್ಕೆಯಾಗಿ ಸಂಸದರಾಗದ ದಾಖಲೆ ಬರೆದಿದ್ದಾರೆ. ನಂತರ 1967ರಲ್ಲಿ ಉತ್ತರ ಕನ್ನಡ (ಲೋಕ ಸಭೆ ಚುನಾವಣಾ ಕ್ಷೇತ್ರ) (ಹಳೆಯ ಕೆನರಾ) ಲೋಕಸಭೆ ಕ್ಷೇತ್ರದಿಂದ ದಿನಕರ ದೇಸಾಯಿ(ದಿನಕರ ದತ್ತಾತ್ರೇಯ ದೇಸಾಯಿ) ಪಕ್ಷೇತರವಾಗಿ ಆಯ್ಕೆಯಾದ ಎರಡನೇಯ ಸಂಸದರಾಗಿದ್ದರು. ಅದರಂತೆ ಮಂಡ್ಯ (ಲೋಕ ಸಭೆ ಚುನಾವಣಾ ಕ್ಷೇತ್ರ)ದಿಂದ 2019ರಲ್ಲಿ ಸುಮಲತಾ ಅಂಬರೀಶ್ ಪಕ್ಷೇತರವಾಗಿ ಆಯ್ಕೆಯಾದ ಮೂರನೇಯ ಸಂಸದರಾಗಿದ್ದಾರೆ.
ಮಂಡ್ಯ (ಲೋಕ ಸಭೆ ಚುನಾವಣಾ ಕ್ಷೇತ್ರ)ದಿಂದ 2019ರಲ್ಲಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಮಹಿಳೆಯಾಗಿ ಆಯ್ಕೆಯಾಗಿ ಸಂಸದರಾಗದ ದಾಖಲೆ ಬರೆದಿದ್ದಾರೆ.
ಸಂಸತ್ತಿನ ಸದಸ್ಯರು[ಬದಲಾಯಿಸಿ]
ಮೈಸೂರು ರಾಜ್ಯ:
- 1951: ಎಂ.ಕೆ. ಶಿವನಂಜಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1957: ಎಂ.ಕೆ. ಶಿವನಂಜಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1962: ಎಂ.ಕೆ. ಶಿವನಂಜಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1967: ಎಂ.ಕೆ. ಶಿವನಂಜಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1971: ಎಸ್.ಎಂ. ಕೃಷ್ಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಕರ್ನಾಟಕ ರಾಜ್ಯ:
- 1977: ಕೆ. ಚಿಕ್ಕಲಿಂಗಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1980: ಎಸ್.ಎಂ. ಕೃಷ್ಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1984: ಕೆ.ವಿ. ಶಂಕರಗೌಡ, ಜನತಾ ಪಕ್ಷ
- 1989: ಜಿ. ಮಾದೇಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1991: ಜಿ. ಮಾದೇಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1996: ಎಸ್.ಎಂ. ಕೃಷ್ಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1998: ಕೆ.ಕೃಷ್ಣ, ಜನತಾ ದಳ
- 1999: ಅಂಬರೀಷ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2004: ಅಂಬರೀಷ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2009: ಚೆಲುವರಾಯಸ್ವಾಮಿ ,ಜನತಾ ದಳ (ಜಾತ್ಯಾತೀತ)
- 2013: ರಮ್ಯಾ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2014: ಸಿ.ಎಸ್.ಪುಟ್ಟರಾಜು,ಜನತಾ ದಳ (ಜಾತ್ಯಾತೀತ)
- 2018: ಎಲ್.ಆರ್.ಶಿವರಾಮೇಗೌಡ್, ಜನತಾ ದಳ (ಜಾತ್ಯಾತೀತ)
- 2019: ಸುಮಲತಾ ಅಂಬರೀಶ್, ಪಕ್ಷೇತರ
ಉಲ್ಲೇಖಗಳು[ಬದಲಾಯಿಸಿ]
- ಭಾರತದ ಚುನಾವಣಾ ಆಯೋಗ Archived 2008-12-18 at the Wayback Machine.
ಇದನ್ನೂ ನೋಡಿ[ಬದಲಾಯಿಸಿ]