ಬ್ರಿಕ್ಸ್ ಸಂಘಟನೆ
ಬ್ರಿಕ್ಸ್ ಅಥವಾ ಬ್ರಿಕ್ಸ್ ಸಂಘಟನೆ – ಬ್ರೆಜಿಲ್, ರಶಿಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ ಐದು ರಾಷ್ಟ್ರಗಳನ್ನು ಒಳಗೊಂಡ ಒಂದು ಸಂಘಟನೆ. ಈ ದೇಶಗಳ ಮೊದಲಕ್ಕರಗಳಾದ (ಅಕ್ರೊನಿಮ್ ಅಥವಾ ಪ್ರಥಮಾಕ್ಷರ) B –ಬ್ರೆಜಿಲ್, R-ರಶಿಯ, I –ಭಾರತ ಅಥವಾ ಇಂಡಿಯಾ, C- ಚೀನಾ ಮತ್ತು S- ದಕ್ಷಿಣ ಆಫ್ರಿಕ (ಸೌತ್ ಆಫ್ರಿಕಾ) ಸೇರಿಸಿದ ಹೆಸರು BRICS. ಮೊದಲು ಈ ಮೊದಲಕ್ಕರವನ್ನು ಗೋಲ್ಡ್‌ಮನ್ ಸ್ಯಾಕ್ಸ್ (ಒಂದು ಜಾಗತಿಕ ಹಣಕಾಸು ಕಾರ್ಪರೇಶನ್) 2001ರಲ್ಲಿ (ನಾಲ್ಕು ದೇಶಗಳನ್ನು ಒಳಗೊಂಡ ಬ್ರಿಕ್ ಆಗಿ) ಬಳಸಿತು. 2009ರಲ್ಲಿ ನಾಲ್ಕು ದೇಶಗಳ BRIC ಸಂಘಟನೆಯಾಗಿ ಆರಂಭಗೊಂಡ ಇದು 2010ರಲ್ಲಿ ದಕ್ಷಿಣ ಆಫ್ರಿಕವೂ ಸೇರಿದ ನಂತರ ಬ್ರಿಕ್ಸ್ ಆಯಿತು. 2009ರಿಂದಲೂ ಈ ಸಂಘಟನೆ ವಾರ್ಷಿಕವಾಗಿ ಶೃಂಗಸಭೆ ಸೇರುತ್ತಾ ಬಂದಿದೆ.
2015ರಂತೆ ಬ್ರಿಕ್ಸ್‌ನ ಜನಸಂಖ್ಯೆ 3.6 ಲಕ್ಷ ಕೋಟಿ (ಟ್ರಿಲಿಯನ್) ಅಥವಾ ಜಾಗತಿಕ ಜನಸಂಖ್ಯೆಯ ಅರ್ಧ ಮತ್ತು ಈ ದೇಶಗಳ ಒಟ್ಟಾರೆ ನಾಮಮಾತ್ರ ಜಿಡಿಪಿ ಅಥವಾ ಒಟ್ಟಾರೆ ಅಂತರಿಕ ಉತ್ಪಾದನೆ (ನಾಮಿನಲ್ ಅಥವಾ ಇಂದಿನ ಬೆಲೆಯಲ್ಲಿನ ಜಿಡಿಪಿ) 16.6 ಲಕ್ಷಕೋಟಿ ಅಮೆರಿಕನ್ ಡಾಲರ್ ಆಗಿದ್ದು ಇದು ಜಾಗತಿಕ ಒಟ್ಟಾರೆ ಉತ್ಪಾದನೆಯ ಶೇ 22ರಷ್ಟು. ಈ ಸಂಘಟನೆ ಹೊಗಳಿಕೆ ಮತ್ತು ತೆಗಳಿಕೆಗಳೆರಡಕ್ಕೂ ಗುರಿಯಾಗಿದೆ.
ಇತಿಹಾಸ
[ಬದಲಾಯಿಸಿ]ಗೋಲ್ಡ್‌ಮನ್ ಸ್ಯಾಕ್ಸ್ ತನ್ನ 2001ರ ಒಂದು ಜಾಗತಿಕ ಆರ್ಥಿಕತೆಯ ಮೇಲಿನ ಪ್ರಬಂಧದಲ್ಲಿ ಬ್ರಿಕ್ ಮೊದಲಕ್ಕರಗಳನ್ನು ಬಳಸಿತು. ಈ ಪ್ರಬಂಧದ ಪ್ರಕಾರ ಬೆಳೆಯುತ್ತಿರು ಆರ್ಥಿಕತೆಗಳಾದ ಬ್ರೆಜಿಲ್, ರಶಿಯ, ಭಾರತ ಮತ್ತು ಚೀನಾ 2050ರ ಸುಮಾರಿಗೆ ಬಿಡಿಬಿಡಿಯಾಗಿ ಮತ್ತು ಒಟ್ಟಾರೆಯಾಗಿ ಹೆಚ್ಚಿನ ಆರ್ಥಿಕ ಅವಕಾಶಗಳನ್ನು ಪಡೆದುಕೊಳ್ಳುತ್ತವೆ ಮತ್ತು ಜಗತ್ತಿನ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿರುತ್ತವೆ ಎಂದು ಅಭಿಪ್ರಾಯ ಪಟ್ಟಿತು. ಜೂಲೈ 2006ರ ಸೇಯಿಂಟ್ ಪೀಟರ್ಸ್‌ರ್ಬರ್ಗ್ ಜಿ-8 ಗುಂಪಿನ (ಸದ್ಯ ರಶಿಯದ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿದೆ ಹೀಗಾಗಿ ಜಿ-7) ಹಿನ್ನೆಯಲ್ಲಿ ಸೇರಿದ ಹಿಗ್ಗಿಸಲ್ಪಟ್ಟ ಜಾಗತಿಕ ನಾಯಕರುಗಳ ಬೇಟಿಯಲ್ಲಿ ಮೊದಲು ಬ್ರಿಕ್ ಬಗೆಗೆ ರಶಿಯ, ಭಾರತ ಮತ್ತು ಚೀನಾ ಮಾತುಕತೆ ನಡೆಸಿದವು.
ಆರಂಭಿಕ ದೇಶಗಳಾದ ಬ್ರೆಜಿಲ್, ರಶಿಯ, ಭಾರತ ಮತ್ತು ಚೀನಾಗಳ ವಿದೇಶಾಂಗ ಸಚಿವರುಗಳು ನ್ಯೂಯಾರ್ಕಿನಲ್ಲಿ ಸೆಪ್ಟೆಂಬರ್ 2006ರಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಸಾಮಾನ್ಯ ಸಭೆಯ ಚರ್ಚೆಯ ಸಂದರ್ಭದಲ್ಲಿ ಬೇಟಿಯಾಗಿ ಈ ಬಗೆಗೆ ಚರ್ಚಿಸಿದರು.
ಬೆಳವಣಿಗೆಗಳು
[ಬದಲಾಯಿಸಿ]ಮೊದಲ ಶೃಂಗಸಭೆ
[ಬದಲಾಯಿಸಿ]ಬ್ರಿಕ್‌ನ (ನಂತರದಲ್ಲಿ ಬ್ರಿಕ್ಸ್) ಮೊದಲ ಶೃಗಸಬೆ ಜೂನ್ 16, 2009ರಲ್ಲಿ ರಶಿಯದ ಯಕಟೇನ್ಬರ್ಗನಲ್ಲಿ ನಡೆಯಿತು. ಮೊದಲ ಶೃಂಗ ಸಭೆಯಲ್ಲಿ ಬ್ರೆಜಿಲ್ ಅಧ್ಯಕ್ಷರಾದ ಲುಯಿಜ್ ಇನಾಸಿಯೊ ಲುಲ ಡ ಸಿಲ್ವ, ರಶಿಯದ ಅಧ್ಯಕ್ಷ ದಿಮಿತ್ರಿ ಮೆಡ್ವಡೇವ್, ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಚೀನಾದ ಅಧ್ಯಕ್ಷ ಹು ಜಿಂಟಾವೊ ಹಾಜರಿದ್ದರು. ಇಲ್ಲಿ ಚರ್ಚಿಸಿದ ಅಂಶಗಳು ಆರ್ಥಿಕ ಸುಧಾರಣೆಗಳು, ಸಂಯುಕ್ತ ರಾಷ್ಟ್ರ ಸಂಸ್ಥಾನದ ಸುಧಾರಣೆ ಮತ್ತು 2007-2008 ರ ಜಾಗತಿಕ ಆಹಾರ ಬೆಲೆಯ ಬಿಕ್ಕಟ್ಟನ್ನು ಚರ್ಚಿಸಿತು.
ದಕ್ಷಿಣ ಆಫ್ರಿಕದ ಸೇರ್ಪಡೆ
[ಬದಲಾಯಿಸಿ]ದಕ್ಷಿಣ ಆಫ್ರಿಕ|ದಕ್ಷಿಣ ಆಫ್ರಿಕವು ಈ ಸಂಘಟನೆಯನ್ನು ಸೇರುವ ಪ್ರಯತ್ನ 2010ರಲ್ಲಿ ಆರಂಭಿಸಿತು. ಆ ವರುಷದ 15 ಏಪ್ರಿಲ್ 2010ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ಎರಡನೆಯ ಶೃಂಗಸಭೆಯಲ್ಲಿ ದಕ್ಷಿಣ ಆಫ್ರಿಕದ ಅಧ್ಯಕ್ಷ ಜಾಕೊಬ್ ಜುಮಾ ಮತ್ತು ರಿಯದ್ ಅಲ್ ಮಲ್ಕಿ (ಪ್ಯಾಲಸ್ಟೈನ್ ನ್ಯಾಶನಲ್ ಅಥಾರಿಟಿಯ, ವಿದೇಶಾಂಗ ಸಚಿವ) ಇಬ್ಬರೂ ಅತಿಥಿಗಳಾಗಿ ಭಾಗವಹಿಸಿದ್ದರು. ದಕ್ಷಿಣ ಆಫ್ರಿಕ 24 ಡಿಸೆಂಬರ್ 2010ರಂದು ಸಂಘಟನೆಯ ಸದಸ್ಯ ರಾಷ್ಟ್ರವಾಯಿತು ಮತ್ತು ಸಂಘಟನೆ ಹೆಸರಿಗೆ 'ಎಸ್' ಸೇರಿ ಬ್ರಿಕ್ಸ್ ಆಯಿತು. ಏಪ್ರಿಲ್ 2011ರ ಚೀನಾದ ಸಾನ್ಯದಲ್ಲಿ ನಡೆದ ಶೃಂಗಸಭೆಯಲ್ಲಿ ದಕ್ಷಿಣ ಆಫ್ರಿಕದ ಅದ್ಯಕ್ಷ ಜಾಕೋಬ್ ಜುಮಾ ಭಾಗವಹಿಸಿದರು.
ಸಹಕಾರದ ಸ್ವರೂಪ
[ಬದಲಾಯಿಸಿ]ಬ್ರಿಕ್ಸ್ ದೇಶಗಳ ನಡುವೆ ವಾಣಿಜ್ಯ, ರಾಜಕೀಯ ಮತ್ತು ಸಾಂಸ್ಕೃತಿಕ ಸಹಕಾರಗಳನ್ನು ಹೆಚ್ಚಿಸಲು ಬ್ರಿಕ್ಸ್ ಪೋರಮ್ ಎಂಬ ಸ್ವತಂತ್ರ ಅಂತರರಾಷ್ಟ್ರೀಯ ಸಂಸ್ಥೆಯನ್ನು 2011ರಲ್ಲಿ ಹುಟ್ಟುಹಾಕಲಾಯಿತು. ಜೂನ್ 2012ರಲ್ಲಿ ಈ ದೇಶಗಳು ಜಂಟಿಯಾಗಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಮ್ಎಫ್)ಗೆ $75 ಶತಕೋಟಿ (ಬಿಲಿಯನ್)ಯನ್ನು ಅದರ ಸಾಲ ಕೊಡುವ ಶಕ್ತಿಯ ಹೆಚ್ಚಳಕ್ಕಾಗಿ ಕೊಡುಗೆ ಮೀಸಲಿಡುವುದಾಗಿ ಹೇಳಿದವು. ಆದರೆ ಇದು ಐಎಮ್ಎಫ್ ಮತ ಚಾಲಿಯಿಸುವ ವ್ಯವಸ್ಥೆಯ ಸುಧಾರಣೆಯ ಮೇಲೆ ಇದು ಆಧಾರ ಪಟ್ಟಿತ್ತು. 2013ರಲ್ಲಿ ಐದನೆಯ ಬ್ರಿಕ್ಸ್ ಶೃಂಗಸಭೆ (ದಕ್ಷಿಣ ಆಫ್ರಿಕ, ಡರ್ಬಾನ್)ಯಲ್ಲಿ ಪಶ್ಚಿಮದ ಪ್ರಭಾವದಲ್ಲಿರುವ ಐಎಮ್‌ಎಫ್ ಮತ್ತು ವಿಶ್ವ ಬ್ಯಾಂಕ್‌ಗಳಿಗೆ ಪ್ರತಿಸ್ಪರ್ಧಿಯಾದ ಜಾಗತಿಕ ಹಣಕಾಸು ಸಂಸ್ಧೆಯೊಂದನ್ನು ಹುಟ್ಟುಹಾಕಲು ನಿರ್ಣಯಿಸಲಾಯಿತು.
ಜೂಲೈ 2014ರ 6ನೆಯ ಬ್ರಿಕ್ಸ್ ಶೃಂಗಸಭೆಯಲ್ಲಿ (ಫೋರ್ಟಾಲೆಜ, ಬ್ರೆಜಿಲ್) ನೂರು ಶತಕೋಟಿ ಡಾಲರ್‌ಗಳ ಬ್ರಿಕ್ಸ್ ಬ್ಯಾಂಕ್ ಸ್ಥಾಪನೆಗೆ ದಾಖಲೆ ಸಹಿ ಮಾಡಲಾಯಿತು. 2012ರಿಂದಲೂ ಬ್ರಿಕ್ಸ್ ದೇಶಗಳು ಬ್ರಿಕ್ಸ್ ಕೇಬಲ್ ಎಂದು ಕರೆಯಲಾದ ಆಫ್ಟಿಕಲ್ ಫೈಬರ್ ಸಬ್‌ಮೆರಿನ್ ಸಂವಹನ ಕೇಬಲ್ ವ್ಯವಸ್ಥೆಯನ್ನು ತಮ್ಮ ನಡುವಿನ ದೂರಸಂವಹನ ವ್ಯವಸ್ಥೆಗೆ ಜೋಡಿಸಲು ಪ್ರಯತ್ನಿಸುತ್ತಿವೆ. ಇದಕ್ಕೆ ಭಾಗಶ ಪ್ರೇರಣೆ ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯಾಶನಲ್ ಸೆಕ್ಯುರಿಟಿ ಏಜೆನ್ಸಿಯು ಅಸಂಸ್ಥದಲ್ಲಿ ಹರಿಯುವ ಎಲ್ಲಾ ದೂರಸಂವಹನಗಳ ಮೇಲೂ ಬೇಹುಗಾರಿಕೆ ನಡೆಸುವುದು ಕಾರಣವಾಗಿದೆ.
ಸಂಭಾವ್ಯ ಹೆಚ್ಚುವರಿ ದೇಶಗಳು
[ಬದಲಾಯಿಸಿ]ಅಫಘಾನಿಸ್ತಾನ್, ಅರ್ಜೆಂಟೀನಾ, ಇಂಡೊನೇಶಿಯಾ, ಪಾಕಿಸ್ತಾನ್ ಮತ್ತು ಟರ್ಕಿ ದೇಶಗಳು ಪೂರ್ಣ ಸದಸ್ಯತ್ವ ಪಡೆಯಲು ಆಸಕ್ತಿ ತೊರಿವೆ. ಈ ಪಟ್ಟಿಗೆ ಈಜಿಪ್ಟ್, ಇರಾನ್, ನೈಜೀರಿಯ, ಸುಡಾನ್, ಸಿರಿಯ, ಬಾಂಗ್ಲಾದೇಶ ಮತ್ತು ಗ್ರೀಸ್ ಸಹ ಸೇರಿವೆ.
ಶೃಂಗಸಭೆಗಳು
[ಬದಲಾಯಿಸಿ]ಈ ಕೆಳಗೆ ಇದುವರೆಗೂ ನಡೆದ (ಇತ್ತೀಚಿನದು 2016ರದು) ಬ್ರಿಕ್ಸ್ ಶೃಂಗಸಭೆಗಳ ಪಟ್ಟಿಯನ್ನು ಕೋಷ್ಟಕದಲ್ಲಿ ಕೊಡಲಾಗಿದೆ.
ಕ್ರಮ ಸಂಖ್ಯೆ | ದಿನಾಂಕ/ಗಳು | ಅತಿಥೇಯ ದೇಶ | ಅತಿಥೇಯ ನಾಯಕ | ಸ್ಥಳ |
---|---|---|---|---|
1ನೇ | 16 ಜೂನ್ 2009 | ರಷ್ಯಾ | ದಿಮಿತ್ರಿ ಮೆಡ್ವಡೇವ್ | ಯಕಟೇನ್ಬರ್ಗ್ |
2ನೇ | 15 ಏಪ್ರಿಲ್ 2010 | ಬ್ರೆಜಿಲ್ | ಲುಯಿಜ್ ಇನಾಸಿಯೊ ಲುಲ ಡ ಸಿಲ್ವ |
ಬ್ರೆಸಿಲಿಯಾ |
3ನೇ | 14 ಏಪ್ರಿಲ್ 2011 | ಚೀನಾ | ಹು ಜಿಂಟಾವೊ | ಸಾನ್ಯ |
4ನೇ | 29 ಮಾರ್ಚ್ 2012 | ಭಾರತ | ಮನಮೋಹನ್ ಸಿಂಗ್ | ನವ ದೆಹಲಿ |
5ನೇ | 26-27 ಮಾರ್ಚ್ 2013 | ದಕ್ಷಿಣ ಆಫ್ರಿಕ | ಜಾಕೋಬ್ ಜುಮಾ | ಡರ್ಬಾನ್ |
6ನೇ | 14-16 ಜೂಲೈ 2014 | ಬ್ರೆಜಿಲ್ | ದಿಲ್ಮಾ ರೌಸೆಫ್ | ಫೋರ್ಟಲೆಜ ಬ್ರೆಸಿಲಿಯಾ |
7ನೇ | 8-9 ಜೂಲೈ 2015 | ರಷ್ಯಾ | ವ್ಲಾದಿಮಿರ್ ಪುತಿನ್ | ಉಫ |
8ನೇ | 15-16 ಅಕ್ಟೋಬರ್ 2016 | ಭಾರತ | ನರೇಂದ್ರ ಮೋದಿ | ಗೋವ |
9ನೇ | 2017 | ಚೀನಾ | ಕ್ಸಿ ಜಿನ್‌ಪಿಂಗ್ | Xiamen ಚೀನಾ |
ಆರ್ಥಿಕ ರಚನೆ
[ಬದಲಾಯಿಸಿ]ಬ್ರಿಕ್ಸ್ ಆರ್ಥಿಕ ರಚನೆಯಲ್ಲಿ ಹೊಸ ಅಭಿವೃದ್ಧಿ ಬ್ಯಾಂಕ್ (ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಅಥವಾ ಎನ್‌ಡಿಬಿ) ಅನಿಶ್ಚತೆಯ ಮೀಸಲು ವ್ಯವಸ್ಥೆ (ಕಾಂಟಿಂಜೆಟ್ ರಿಸರ್ವ್ ಅರೇಂಜ್‌ಮೆಂಟ್) ಪ್ರಮುಖವಾದವು. ಇವುಗಳ ಬಗೆಗೆ 2014ರಲ್ಲಿ ಸಹಿಯಾಯಿತು ಮತ್ತು 2015ರಿಂದ ಇವು ಸಕ್ರಿಯವಾಗಿವೆ.
ಹೊಸ ಅಭಿವೃದ್ಧಿ ಬ್ಯಾಂಕ್
[ಬದಲಾಯಿಸಿ]ಮೊದಲು ಬ್ರಿಕ್ಸ್ ಡೆವಲೆಪ್‌ಮೆಂಟ್ ಬ್ಯಾಂಕ್ ಎಂದು ಕರೆಯಲಾಗುತ್ತಿದ್ದು ನಂತರ ಅದಕ್ಕೆ ಹೊಸ ಅಭಿವೃದ್ಧಿ ಬ್ಯಾಂಕ್ (ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್) ಎಂದು ಹೆಸರಿಸಲಾಯಿತು. ಇದು ಮೂಲಭೂತ ವ್ಯವಸ್ಥೆ (ಇನ್‌ಫ್ರಾಸ್ಟ್ರಕ್ಚರಲ್) ಪ್ರಾಜೆಕ್ಟ್‌ಗಳಿಗೆ ಧನಸಹಾಯ ಒದಗಿಸುತ್ತದೆ. ಅದನ್ನು ಇದಕ್ಕೆ ಎಲ್ಲಾ ಬ್ರಿಕ್ಸ್ ದೇಶಗಳೂ ತಲಾ 10 ಶತಕೋಟಿ ಡಾಲರ್ ($) ಆರಂಭಿಕ ಬಂಡವಾಳ (ಸ್ಟಾರ್ಟಪ್ ಕ್ಯಾಪಿಟಲ್) ಹೂಡಿ ಆರಂಭಿಕ 50 ಶಕತೋಟಿ ಡಾಲರನ್ನು ನೂರು ಶಕಕೋಟಿ ಡಾಲರ್‌ಗೆ ಹೆಚ್ಚಿಸುವ ಉದ್ಧೇಶ ಹೊಂದಲಾಗಿದೆ. ಸಧ್ಯಕ್ಕೆ ಅದು ವಾರ್ಷಿಕವಾಗಿ 34 ಶತಕೋಟಿ ಡಾಲರ್‌ಗಳ ಸಾಲ ಕೊಡಲಿದೆ.
ಅನಿಶ್ಚತೆಯ ಮೀಸಲು ವ್ಯವಸ್ಥೆ
[ಬದಲಾಯಿಸಿ]ದೊಡ್ಡ ಮಟ್ಟದಲ್ಲಿ ಉದಾರೀಕಣದ ಆರ್ಥಿಕ ಸುಧಾರಣೆಗಳನ್ನು ಒಳಗೊಂಡ ಬದಲಾವಣೆಗಳು ಆ ದೇಶಗಳಲ್ಲಿ ಆರ್ಥಿಕ ಅಸ್ಥಿರತೆಯನ್ನು ಮತ್ತು ಬೃಹತ್‌ಆರ್ಥಿಕತೆಯ ರಂಗದಲ್ಲಿ (ಮ್ಯಾಕ್ರೊಎಕಾನಮಿ) ಅನಿಶ್ಚಯತೆಯನ್ನು ಹುಟ್ಟುಹಾಕುವುದನ್ನು ಬ್ರಿಕ್ಸ್ ಗಮನಿದೆ. ಇಂತಹ ಸಂದರ್ಭದಲ್ಲಿ ದೇಶಗಳು ದ್ರವತೆಯ ಬಿಕ್ಕಟ್ಟು (ಲಿಕ್ಟಿಡಿಟಿ ಕ್ರೈಸಿಸ್) ಮತ್ತು ಪಾವತಿಗಳ ಸಮತೋಲನ (ಬ್ಯಾಲೆನ್ಸ್ ಆಫ್ ಪೆಯ್‌ಮೆಂಟ್) ಒತ್ತಡ ಎದುರಿಸುತ್ತವೆ. ಇಂತಹ ಬಿಕ್ಕಟ್ಟಿನಿಂದ ಹೊರಬರಲು ಸಹಾಯವನ್ನು ಈ ವ್ಯವಸ್ಥೆಯಲ್ಲಿ ರೂಪಿಸಲೆಳಸಲಾಗಿದೆ. ಇದು ಅಲ್ಪಕಾಲಾವಧಿಯ ಪಾವತಿಗಳ ಅಸಮತೋಲನ ಒತ್ತಡಗಳನ್ನು ಎದುರಿಸಲು ಅಥವಾ ಅಂತಹ ಸಾಧ್ಯತೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಇದಕ್ಕೆ ಕಾನೂನಾತ್ಮಕ ಆಧಾರವನ್ನು ಟ್ರೀಟಿ ಫಾರ್ ಎಸ್ಟಾಬ್ಲಿಶ್ಮೆಂಟ್ ಆಫ್ ಬ್ರಿಕ್ಸ್ ಕಾಂಟಿಜೆಂಟಿ ರಿಸರ್ವ್ ಅಗ್ರಿಮೆಂಟ್‌ನ್ನು 15 ಜೂಲೈ 2014ರಂದು ಬ್ರೆಜಿಲ್‌ನ ಫಾರ್ಟಿಲೆಜದಲ್ಲಿ ಸಹಿ ಮಾಡಲಾಯಿತು. ಬ್ರಿಕ್ಸ್ ಸಿಆರ್‌ಎ ಗೌವರ್ನಿಂಗ್ ಕೌನ್ಸಿಲ್ ಮತ್ತು ಸ್ಟಾಂಡಿಗ್ ಕಮಿಟಿಯ ಮೊದಲ ಸಭೆಯನ್ನು ಟರ್ಕಿಯ ಅಂಕಾರದಲ್ಲಿ ಸೆಪ್ಟಂಬರ್ 4 2015ರಂದು ನಡೆಸಲಾಯಿತು. ಇದನ್ನು ಏಳನೆಯ ಬ್ರಿಕ್ಸ್ ಶೃಂಗಸಭೆ ಒಪ್ಪವುದರೊಂದಿಗೆ ಆಸ್ತಿತ್ವಕ್ಕೆ ಬಂತು.
ನೋಡಿ
[ಬದಲಾಯಿಸಿ]ಆಧಾರ
[ಬದಲಾಯಿಸಿ]- w:BRICS English Wikipedia, retrieved on 2016-10-16
- about BRICS Archived 2016-10-22 ವೇಬ್ಯಾಕ್ ಮೆಷಿನ್ ನಲ್ಲಿ., retrieved on 2016-10-16
- Treaty for the Establishment of a BRICS Contingent Reserve Arrangement – Fortaleza, July 15 Archived 2016-09-12 ವೇಬ್ಯಾಕ್ ಮೆಷಿನ್ ನಲ್ಲಿ. retrieved on 2016-10-2016