2ನೇ ಬ್ರಿಕ್ ಶೃಂಗಸಭೆ
ಅಧಿಕೃತ ಲಾಂಚನ (ಲೋಗೋ) | |
---|---|
ಅತಿಥೇಯ ದೇಶ | ಬ್ರೆಜಿಲ್ |
ತಾರೀಕು | 16 ಏಪ್ರಿಲ್ 2010 |
ನಗರ(ಗಳು) | ಬ್ರೆಸಿಲಿಯಾ |
ಭಾಗವಹಿಸಿದವರು | ಬ್ರಿಕ್ |
ಮುಂಚಿನದು | 1ನೇ ಬ್ರಿಕ್ ಶೃಂಗಸಭೆ |
ನಂತರದ್ದು | 3ನೇ ಬ್ರಿಕ್ಸ್ ಶೃಂಗಸಭೆ |
2ನೇ ಬ್ರಿಕ್ ಶೃಂಗಸಭೆ ಬ್ರಿಕ್ ಸಂಘಟನೆಯ (ನಂತರದಲ್ಲಿ ಇದೇ ಬ್ರಿಕ್ಸ್ ಆಯಿತು) ಎರಡನೆಯ ಶೃಂಗಸಭೆ ಮತ್ತು ಇದು 16 ಏಪ್ರಿಲ್ 2010ರಲ್ಲಿ ಬ್ರೆಸಿಲಿಯಾದಲ್ಲಿ ನಡೆಯಿತು. ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಅಲ್ಲದೆ ಅತಿಥಿಗಳಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಮತ್ತು ಪ್ಯಾಲಸ್ಟೈನಿಯನ್ ಅಥಾರಿಟಿಯ ವಿದೇಶಾಂಗ ಮಂತ್ರಿ ಇದರಲ್ಲಿ ಭಾಗವಹಿಸಿದರು.
ಭಾಗವಹಿಸಿದವರು
[ಬದಲಾಯಿಸಿ]ನಾಲ್ಕೂ ದೇಶದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಅತಿಥಿಗಳಾಗಿ ದಕ್ಷಿಣ ಆಫ್ರಿಕಾ ಮತ್ತು ಪ್ಯಾಲಸ್ಟೈನಿಯನ್ ಅಥಾರಿಟಿ ವಿದೇಶಾಂಗ ಸಚಿವರೂ ಸಹ.
ಸದಸ್ಯರು | ಪ್ರತಿನಿಧಿ | ಹುದ್ಧೆ |
---|---|---|
ಬ್ರೆಜಿಲ್ | ಲೂಯಿಜ್ ಇನಸಿಯೊ ಲುಲ ಡ ಸಿಲ್ವ | ಅಧ್ಯಕ್ಷರು |
ರಶಿಯ | ದಿಮಿತ್ರಿ ಮೆಡ್ವಡೇವ್ | ಅಧ್ಯಕ್ಷರು |
ಭಾರತ | ಮನಮೋಹನ್ ಸಿಂಗ್ | ಪ್ರಧಾನ ಮಂತ್ರಿ |
ಚೀನಾ | ಹು ಜಿಂಟಾವೊ | ಅಧ್ಯಕ್ಷರು |
ಅತಿಥಿಗಳು
- ದಕ್ಷಿಣ ಆಫ್ರಿಕಾ: ಜಾಕೋಬ್ ಜುಮಾ, ಅಧ್ಯಕ್ಷರು, ದಕ್ಷಿಣ ಆಫ್ರಿಕಾ
- ಪ್ಯಾಲಸ್ಟೈನ್ ಅಥಾರಿಟಿ: ರಯಾದ್ ಅಲ್-ಮಲ್ಕಿ, ವಿದೇಶಾಂಗ ಮಂತ್ರಿ, ಪ್ಯಾಲಸ್ಟೈನಿಯನ್ ಅಥಾರಿಟಿ
ವಾಸ್ತವದಲ್ಲಿ ಐಬಿಎಸ್ಎ (ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾಗಳ ಸಂಘಟನೆ)ಯ ನಾಲ್ಕನೆಯ ಶೃಂಗಸಭೆಯನ್ನು ಅಂದೇ ಆಯೋಜಿಸಲಾಗಿದ್ದು ಅದು ಬ್ರಿಕ್ ಶೃಂಗಸಭೆಯ ಅಂಚಿನಲ್ಲಿ ನಡೆಯಿತು. ಅದಕ್ಕೆ ಪ್ಯಾಲಸ್ಟೈನ್ ಅಥಾರಿಟಿಯ ವಿದೇಶಾಂಗ ಮಂತ್ರಿಗಳು ಅತಿಥಿಗಳಾಗಿದ್ದರು.
ಶೃಂಗಸಭೆ ಮುಂಚೆ
[ಬದಲಾಯಿಸಿ]ಶೃಂಗಸಭೆಯ ತುಸು ಮುಂಚೆ (ಸೆಪ್ಟಂಬರ್ 2009ರಲ್ಲಿ) ನಾಲ್ಕನೆ ಐಎಬಿಸ್‌ಎ ಸಂಘಟನೆಯ (ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾಗಳ ಸಂಘಟನೆ ) ಪೂರ್ವಭಾವಿ ತಯಾರಿಯ ಅಂಗವಾಗಿ ವಿದೇಶಾಂಗ ಸಚಿವರ ಬೇಟಿ ನಡೆದಿತ್ತು. ಈ ಸಂದರ್ಭದಲ್ಲಿ ಮೂರು ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಎಮ್ ಕೃಷ್ಣ ಅವರು "ದಕ್ಷಿಣ-ದಕ್ಷಿಣಗಳ ನಡುವಿನ ಸಹಕಾರ ಮನೋಭಾವದ" ಬಗೆಗೆ ಗಮನ ಸೆಳೆಯುತ್ತಾ ಈ ಮೂರು ದೇಶಗಳ ನಡುವಿನ "ವೈಮಾನಿಕ ಕೊಂಡಿಗಳು ಮತ್ತು ಹೂಡಿಕೆ ಹೆಚ್ಚಳಕ್ಕೆ" ಕರೆ ನೀಡಿದರು.[೧]
ಶೃಂಗಸಭೆಯ ಒಂದು ದಿನ ಮುಂಚೆ ಬ್ರೆಜಿಲ್ ಮತ್ತು ಭಾರತ ಹಾಗೂ ಭಾರತ ಮತ್ತು ಚೀನಾಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆದವು. ಇದರಲ್ಲಿ ಭಾರತ ಮತ್ತು ಚೀನಾಗಳು ಎರಡು ದೇಶಗಳಿಗೂ ಬೆಳೆಯಲು ಅವಕಾಶವಿದೆ ಎಂಬುದನ್ನು ಗುರುತಿಸಿ ಸ್ಪರ್ಧೆಯ ಬದಲು ಸಹಕಾರಕ್ಕೆ ಒತ್ತು ಕೊಟ್ಟವು.[೨] ಅಲ್ಲದೆ ಎರಡೂ ದೇಶಗಳ ನಡುವಿನ ಉತ್ಪಾದನೆಗಳಿಗೆ ಹೆಚ್ಚು ಮಾರುಕಟ್ಟೆ ಲಭ್ಯವಾಗುವಂತೆ ಮಾಡಲು ಒಪ್ಪಿಕೊಳ್ಳಲಾಯಿತು. ಅಲ್ಲದೆ ಏಪ್ರಿಲ್ 13 ರಿಂದ 16ರ ವರೆಗೂ ಐಬಿಎಸ್ಎ/ಬ್ರಿಕ್ ಬುಸಿನೆಸ್ ಫೋರಂ, ಅಭಿವೃದ್ಧಿ ಬ್ಯಾಂಕಗಳ ಸಭೆ, ವಾಣಿಜ್ಯ ಬ್ಯಾಂಕುಗಳ ಸಭೆ ಮುಂತಾದವು ನಡೆದವು.
ಚರ್ಚಾಂಶಗಳು
[ಬದಲಾಯಿಸಿ]2ನೆಯ ಶೃಂಗಸಭೆಯ ಘೋಷಣೆಯು ಜಾಗತಿಕ ಆರ್ಥಿಕ ಹಣಕಾಸು ಅಂಶಗಳು, ಅಂತರರಾಷ್ಟ್ರೀಯ ವ್ಯಾಪಾರ, ಅಭಿವೃದ್ಧಿ, ವ್ಯವಸಾಯ, ಭಯೋತ್ಪಾದನೆ ಮುಂತಾದ ಹಲವು ಅಂಶಗಳನ್ನು ಒಳಗೊಂಡಿದ್ದವು. ಜಾಗತಿಕ ಆರ್ಥಿಕ ಹಣಕಾಸು ಅಂಶಗಳ ಬಗೆಗಿನ ಹೇಳಿಕೆಯು "ಹಿಂದಿನ ಯೆಕಟನ್ಬರ್ಗ್‌ನ ಜೂನ್ 2009ರ ಸಭೆಯ ನಂತರ ಜಾಗತಿಕ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಹೊರಹೊಮ್ಮುತ್ತಿರುವ ಮಾರುಕಟ್ಟೆ ಆರ್ಥಿಕತೆಗಳು ಪ್ರಮುಖ ಪಾತ್ರ ವಹಿಸುತ್ತಿರುವ ಆರ್ಥಿಕ ಬೆಳವಣಿಗೆಯ ಪುನರಾರಂಭವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಜಾಗತಿಕ ಆರ್ಥಿಕತೆಯ ಪುನಶ್ಚೇತನದ ಬುನಾದಿ ಭದ್ರವಾಗಿಲ್ಲ, ಇನ್ನೂ ಅನಿಶ್ಚತೆಗಳಿವೆ ಎಂಬುದನ್ನು ನಾವು ಗುರುತಿಸುತ್ತೇವೆ…" ಎಂದು ಹೇಳುತ್ತಾ ಆರ್ಥಿಕ ಪುನಶ್ಚೇತನಕ್ಕಾಗಿ ಎಲ್ಲಾ ಸರಕಾರಗಳೂ ಸಹಕರಿಸುವಂತೆ ಕರೆ ನೀಡಿದವು.[೩]
ಸಭೆಯಲ್ಲಿ ಚರ್ಚಿಸಿದ ವಿಷಯಗಳಲ್ಲಿ ಇರಾನ್‌ನ ನ್ಯೂಕ್ಲಿಯಾರ್ ಅಂಶ ಬಗೆಗಿನ ಅಂಶವೂ ಒಂದು. ಸಭೆಯ ಒಂದು ದಿನ ಮುಂಚೆ ಬ್ರೆಜಿಲ್‌ನ ವಿದೇಶಾಂಗ ಸಚಿವ ಸೆಲ್ಸೊ ಅಮೊರಿಮ್ ಇಕಾನ್ ನ್ಯೂಕ್ಲಿಯಾರ್ ಅಂಶದ ಬಗೆಗಿನ ಚೀನದ ನಿಲುವಿಗೆ "ಒಲವು" ವ್ಯಕ್ತಪಡಿಸುತ್ತಾರೆ. ನಿರ್ಬಂಧಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂದು ಅವರು ಅನುಮಾನ ವ್ಯಕ್ತಪಡಿಸುತ್ತಾರೆ. ಇದೇ ದಾಟಿಯಲ್ಲಿ ಮಾತನಾಡುವ ಐಬಿಎಸ್‌ಎ ಶೃಂಗಸಭೆ ಇರಾನಿನ ಅಂಶಗಳ ಬಗೆಗೆ ಹೆಚ್ಚಿನ ಚರ್ಚೆಗೆ ಕರೆಕೊಡುತ್ತದೆ.[೪]
ಚೀನಾದ ಅಧ್ಯಕ್ಷ ಹು ಜಿಂಟಾವ್ ಜಾಗತಿಕ ಅಭಿವೃದ್ಧಿಯಲ್ಲಿ ಧನಾತ್ಮಕವಾಗಿ ಭಾಗಿಯಾಗಿಯುವಾಗಿ ಹೇಳಿದರೆ ಭಾರತದ ಪ್ರದಾನ ಮಂತ್ರಿ ಮನಮೋಹನ್ ಸಿಂಗ್ ಈ ದೇಶಗಳ ನಡುವೆ ಶಕ್ತಿ ಮತ್ತು ಆಹಾರ ಭದ್ರತೆ ಕ್ಷೇತ್ರಗಳಲ್ಲಿಯೂ ಅಲ್ಲದೆ ವ್ಯಾಪಾರ, ಹೂಡಿಕೆ, ವಿಜ್ಞಾನ ತಂತ್ರಜ್ಞಾನ ಮತ್ತು ಮೂಲಭೂತ ಸೌಕರ್ಯಗಳ ಬಗೆಗೂ ಹತ್ತಿರದ ಸಹಕಾರ ಅಗತ್ಯವಿದೆ ಎನ್ನುತ್ತಾರೆ.[೫]
ವಿಮರ್ಶೆ ಮತ್ತು ಪ್ರತಿಕ್ರಿಯೆ
[ಬದಲಾಯಿಸಿ]ಚೀನಾದ ಅಧ್ಯಕ್ಷ ಹು ಜಿಂಟಾವ್ ಕ್ವಿನ್‌ಘೈನಲ್ಲಿನ ಭೂಕಂಪದಿಂದಾಗಿ ಏಪ್ರಿಲ್ 17ರ ಬದಲು ಏಪ್ರಿಲ್ 15ರಂದೇ ಹಿಂದಿರುಗಬೇಕಾಯಿತು. ಆದಾಗ್ಯೂ ಅವರು ಸಭೆಯೊಂದಿಗೆ ಕೆಲಸ ಮಾಡಿದರು ಮತ್ತು ನಾಲ್ಕು ದೇಶಗಳ ನಡುವೆ ದ್ವಿಪಕ್ಷಿಯ ಒಪ್ಪಂದಗಳಿಗೆ ಸಹಿ ಹಾಕಿದರು.
ಕನಿಷ್ಠ ಭಾರತದ ಒಂದು ಪತ್ರಿಕೆ (ಇಂಗ್ಲೀಶ್ ಪತ್ರಿಕೆ ದಿ ಹಿಂದೂ) ಈ ಬಗೆಗಿನ ಬೆಳವಣಿಗೆಯನ್ನು "ದೊಡ್ಡ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜಿ-7ಗೆ ಉತ್ತರ" ಎಂದು ಭಾವಿಸಿತು. ಈ ಪತ್ರಿಕೆಯು "ಈಗ ಇರುವ ಜಾಗತಿಕ ಸಂಸ್ಥೆಗಳ ಅಪ್ರಸ್ತುತೆಯಲ್ಲದಿದ್ದರೂ ಬಲಹೀನತೆಯನ್ನು ತೆರದಿಟ್ಟ ಜಾಗತಿಕ ಹಣಕಾಸು ಬಿಕ್ಕಟ್ಟು ಹೊಸ ವ್ಯವಸ್ಥೆಯ ವೇಗವರ್ಧಕಗಳಾಗುವ ಸಾಧ್ಯತೆಯ ಹಿನ್ನಲೆಯಲ್ಲಿ ಐಬಿಎಸ್‌ಎ ಮತ್ತು ಬ್ರಿಕ್ ಹೆಚ್ಚು ಹೆಚ್ಚು ಆಕರ್ಷಿಸುತ್ತವೆ" ಎಂದು ವಾದಿಸುತ್ತದೆ.[೬]
ಉಲ್ಲೇಖಗಳು
[ಬದಲಾಯಿಸಿ]- ↑ Krishna meets Brazil president ahead of IBSA summit Archived 2014-07-14 ವೇಬ್ಯಾಕ್ ಮೆಷಿನ್ ನಲ್ಲಿ., 1 September 2009
- ↑ "India, China to become equal partners". Presstv.ir. 2010-04-16. Retrieved 2010-08-11.
- ↑ BRICS 2nd Second Summit Archived 2016-10-14 ವೇಬ್ಯಾಕ್ ಮೆಷಿನ್ ನಲ್ಲಿ., INTERNATIONAL ECONOMIC AND FINANCIAL ISSUES, access date 2016-10-18
- ↑ "Brazil, India, S Africa urge talks on Iran". Presstv.ir. 2010-04-16. Archived from the original on 2012-09-29. Retrieved 2010-08-11.
- ↑ PTI (2010-04-16). "PM pitches for close cooperation among BRIC nations - India - The Times of India". The Times of India. Retrieved 2010-08-11. •
- ↑ *India pitches for greater IBSA, BRIC role The Hindu, April 16, 2010, access date 2016-10-18
ಆಧಾರ
- 2nd BRIC Summit Wikipedia English, access date 2016-10-18