ಬೀಜಗಣಿತ

ಬೀಜಗಣಿತ(algebra)ವು ಗಣಿತಶಾಸ್ತ್ರದ ಒಂದು ಪ್ರಮುಖ ಅಂಗ.ಬೀಜಗಣಿತದ ಜ್ಞಾನವಿಲ್ಲದೆ ಗಣಿತದ ಪರಿಪೂರ್ಣ ಅರಿವಾಗಲು ಸಾದ್ಯವಿಲ್ಲ.ವಿಜ್ಞಾನಿಗಳು,ತಂತ್ರಜ್ಞರು ದಿನನಿತ್ಯ ಬೀಜಗಣಿತವನ್ನು ಉಪಯೋಗಿಸುತ್ತಾರೆ.ವಾಣಿಜ್ಯ ಹಾಗೂ ಕೈಗಾರಿಕೋದ್ಯಮದಲ್ಲಿಯೂ ಬೀಜಗಣಿತ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಬಳಕೆಯಾಗುತ್ತದೆ.ಇದರ ಪ್ರಾಮುಖ್ಯತೆಯಿಂದ ಪ್ರಪಂಚದಾದ್ಯಂತ ಶಾಲಾ ಕಾಲೇಜುಗಳಲ್ಲಿ ಬೀಜಗಣಿತವನ್ನು ಕಲಿಸಲಾಗುತ್ತಿದೆ.ಸಾಮಾನ್ಯವಾಗಿ ೫ ನೇ ತರಗತಿಯಿಂದ ಬೀಜಗಣಿತದ ಅಭ್ಯಾಸ ಪ್ರಾರಂಭ ಮಾಡುವರು.ನಂತರದ ತರಗತಿಗಳಲ್ಲಿ ಬೀಜಗಣಿತದ ಅಧ್ಯಯನ ಬಹು ಮುಖ್ಯ ಪಾತ್ರವಹಿಸುತ್ತದೆ.
ಬೀಜಗಣಿತದ ವರ್ಗೀಕರಣ[ಬದಲಾಯಿಸಿ]
ಬೀಜಗಣಿತವನ್ನು ಸ್ಥೂಲವಾಗಿ ಈ ಕೆಳಗಿನಂತೆ ವರ್ಗೀಕರಿಸಬಹುದಾಗಿದೆ.
- ಪ್ರಾಥಮಿಕ ಬೀಜಗಣಿತ
- ಸಂಕೀರ್ಣ ಬೀಜಗಣಿತ
- ರೇಖೀಯ ಬೀಜಗಣಿತ (Linear algebra)
- ಸಾರ್ವತ್ರಿಕ ಬೀಜಗಣಿತ
- ಬೀಜಗಣಿತೀಯ ಸಂಖ್ಯಾ ಸಿದ್ಧಾಂತ
- ಬೀಜಗಣಿತೀಯ ಜ್ಯಾಮಿತಿ
- ಸಂಯೋಜನಾತ್ಮಕ ಬೀಜಗಣಿತ (Algebraic combinatorics)
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- 4000 Years of Algebra Archived 2007-10-04 ವೇಬ್ಯಾಕ್ ಮೆಷಿನ್ ನಲ್ಲಿ., lecture by Robin Wilson, at Gresham College, 17th October 2007 (available for MP3 and MP4 download, as well as a text file).