ಪ್ಯಾಟ್ ಬ್ಯೂಕ್ಯಾನನ್
Pat Buchanan | |
---|---|
ಜನನ | Washington, D.C., United States | ನವೆಂಬರ್ ೨, ೧೯೩೮
ವೃತ್ತಿ(ಗಳು) | Writer, political commentator |
ರಾಜಕೀಯ ಪಕ್ಷ | Republican (1960s–1999, 2004–present) Reform (1999–2000) |
ಸಂಗಾತಿ | Shelley Ann Scarney |
ಪೋಷಕ(ರು) | William Baldwin Buchanan II and Catherine Elizabeth Crum Buchanan |
ಪ್ಯಾಟ್ರಿಕ್ ಜೋಸೆಫ್ "ಪ್ಯಾಟ್" ಬ್ಯೂಕ್ಯಾನನ್ ಒಬ್ಬ ಅಮೆರಿಕದ ಕನ್ಸರ್ವೇಟಿವ್ ಪತ್ರಿಕೆಯ ರಾಜಕೀಯ ವಿವರಣಕಾರರು, ಲೇಕಕರು, ಸಾಂಘಿಕ ಅಂಕಣಕಾರರು, ರಾಜಕಾರಣಿ ಹಾಗೂ ಪ್ರಸರಣಕಾರರು. ಬ್ಯೂಕ್ಯಾನನ್ ಅಮೆರಿಕದ ಅಧ್ಯಕ್ಷರುಗಳಾದ ರಿಚರ್ಡ್ ನಿಕ್ಸನ್, ಜೆರಾಲ್ಡ್ ಫೋರ್ಡ್ ಮತ್ತು ರೊನಾಲ್ಡ್ ರೇಗನ್ ರವರಿಗೆ ಹಿರಿಯ ಸಲಹೆಗಾರರಾಗಿದ್ದರು ಮತ್ತು CNN ನ ಕ್ರಾಸ್ ಫೈರ್ ಕಾರ್ಯಕ್ರಮವನ್ನು ಮೊದಲಿಗೆ ನಡೆಸಿಕೊಡುತ್ತಿದ್ದವರಾಗಿದ್ದರು. 1992 ಮತ್ತು 1996ರಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷಸ್ಥಾನಕ್ಕೆ ಏರಬಯಸಿದರು. 2000ದ ಅಧ್ಯಕ್ಷೀಯ ಚುನಾವಣೆಯಲ್ಲಿ ಇವರು ರಿಫಾರ್ಮ್ ಪಕ್ಷದ ಟಿಕೆಟ್ ಮೂಲಕ ಕಣದಲ್ಲಿ ಸ್ಪರ್ಧಿಸಿದರು.
ಅವರು ದ ಅಮೆರಿಕನ್ ಕನ್ಸರ್ವೇಟಿವ್ ಪತ್ರಿಕೆಯ ಸಹಸಂಸ್ಥಾಪಕರಾಗಿದ್ದರು ಮತ್ತು ಅಮೆರಿಕನ್ ಕಾಝ್ ಎಂಬ ಸಂಸ್ಥೆಯನ್ನೂ ಆರಂಭಿಸಿದರು.[೧] ಇವರ ಲೇಖನಗಳು ಹ್ಯೂಮನ್ ಈವೆಂಟ್ಸ್, ನ್ಯಾಷನಲ್ ರಿವ್ಯೂ, ದ ನೇಷನ್ ಮತ್ತು ರೋಲಿಂಗ್ ಸ್ಟೋನ್ ಗಳಲ್ಲಿ ಪ್ರಕಟವಾಗಿವೆ. ಈಗ ಅವರು MSNBC ಕೇಬಲ್ ನೆಟ್ ವರ್ಕ್ ನಲ್ಲಿ, ಮಾರ್ನಿಂಗ್ ಜೋ ಕಾರ್ಯಕ್ರಮವನ್ನೂ ಒಳಗೊಂಡಂತೆ, ರಾಜಕೀಯ ವಿವರಣಾಕಾರರಾಗಿರುವುದಲ್ಲದೆ ಮೆಕ್ ಲಾಲಿನ್ ಗ್ರೂಪ್ ನಲ್ಲಿ ಖಾಯಂ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಬ್ಯೂಕ್ಯಾನನ್ ವಾಷಿಗ್ಟನ್, ಡಿ.ಸಿ.ಯಲ್ಲಿ ಒಂದು ಅಕೌಂಟಿಂಗ್ ಸಂಸ್ಥೆಯಲ್ಲಿ ಪಾಲುದಾರರಾಗಿದ್ದ ವಿಲಿಯಂ ಬಾಲ್ಡ್ ವಿನ್ ಬ್ಯೂಕ್ಯಾನನ್(ವರ್ಜೀನಿಯಾ, ಆಗಸ್ಟ್ 15, 1905-ವಾಷಿಂಗ್ಟನ್, ಡಿ.ಸಿ., ಜನವರಿ 1988) ಮತ್ತು ನರ್ಸ್ ಹಾಗೂ ಗೃಹಿಣಿಯಾದ ಅವರ ಪತ್ನಿ ಕ್ಯಾಥರೀನ್ ಎಲಿಝಬೆತ್ (ಕ್ರಮ್) ಬ್ಯೂಕ್ಯಾನನ್ (ಚಾರ್ಲೆರಾಯ್, ವಾಷಿಂಗ್ಟನ್ ಕೌಂಟಿ, ಪೆನ್ಸಿಲ್ವೇನಿಯಾ, ಡಿಸೆಂಬರ್ 23, 1911-ಓಕ್ ಟನ್, ಫೇರ್ ಫಾಕ್ಸ್ ಕೌಂಟಿ, ವರ್ಜೀನಿಯಾ, ಸೆಪ್ಟೆಂಬರ್ 18, 1995)ಯ ಮಗನಾಗಿ ಜನಿಸಿದರು.[೨][೩]
ಬ್ಯೂಕ್ಯಾನನ್ ಗೆ ಆರು ಸಹೋದರರು(ಬ್ರಿಯಾನ್, ಹೆನ್ರಿ, ಜೇಮ್ಸ್, ಜಾನ್, ಥಾಮಸ್ ಮತ್ತು ವಿಲಿಯಂ ಜೂನಿಯರ್) ಮತ್ತು ಇಬ್ಬರು ಸಹೋದರಿಯರು(ಕ್ಯಾಥ್ಲೀನ್ ಥೆರೇಸಾ ಮತ್ತು ಬೇ ಎಂಬ ಅಡ್ಡಹೆಸರಿನ ಏಂಜೆಲಾ ಮೇರಿ).[೪] ಬೇ ರೋನಾಲ್ಡ್ ರೇಗನ್ ರ ಸಂಪುಟದಲ್ಲಿ ಯು.ಎಸ್. ಖಜಾಂಚಿಯಾಗಿ ಕಾರ್ಯನಿರ್ವಹಿಸಿದರು. ಬ್ಯೂಕ್ಯಾನನ್ ರ ವಂಶಾವಳಿಯಲ್ಲಿ ಇಂಗ್ಲಿಷ್, ಜರ್ಮನ್, ಸ್ಕಾಟ್ಸ್ ಐರಿಷ್ ಮತ್ತು ಐರಿಷ್ ಮನೆತನಗಳು ಒಳಗೊಂಡಿವೆ.[೨] ಅವರ ಮುತ್ತಾತ ಅಮೆರಿಕದ ನಾಗರಿಕ ಯುದ್ಧದಲ್ಲಿ ತೊಡಗಿದ್ದ ಕಾನ್ಫೆಡರೇಟ್ ಸೇನೆಯಲ್ಲಿ ಒಬ್ಬರಾಗಿದ್ದರು. ಅವರು ಸನ್ಸ್ ಆಫ್ ಕಾಂಫೆಡರೇಟ್ ವೆಟರನ್ಸ್[೫] ನ ಸದಸ್ಯರಾಗಿದ್ದಾರೆ ಮತ್ತು ರಾಬರ್ಟ್ ಇ, ಲೀ ಯೆಂದರೆ ಇವರಿಗೆ ಬಹಳ ಅಚ್ಚುಮೆಚ್ಚು.[೬]
ಬ್ಯೂಕ್ಯಾನನ್ ರ ಕ್ರೈಸ್ತಸ್ನಾನವು ಕ್ಯಾಥೋಲಿಕ್ ಚರ್ಚ್ ನಲ್ಲಿ ನಡೆಯಿತು ಮತ್ತು ಅವರು ಬ್ಲೆಸ್ಡ್ ಸಾಕ್ರಮೆಂಟ್ ಶಾಲೆ ಹಾಗೂ ಜೆಸ್ಯೂತ್ ಗಳು ನಡೆಸುತ್ತಿದ್ದ ಗೋಂಗಾಝಾ ಕಾಲೇಜ್ ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಜಾರ್ಜ್ ಟೌನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾಗ ಅವರು ROTC ಯಲ್ಲಿದ್ದರು, ಆದರೆ ಆ ಓದನ್ನು ಅವರು ಪೂರ್ಣಗೊಳಿಸಲಾಗಲಿಲ್ಲ. 1960ರಲ್ಲಿ ಅವರು ಪದವಿ ಪಡೆದ ನಂತರ ಅವರಿಗೆ ಡ್ರಾಫ್ಟ್ ನೋಟೀಸ್ (ಸೇನೆಗೆ ಸೇರಲು ಆದೇಶ) ನೀಡಲಾಯಿತು. ಆದರೆ ಕೊಲಂಬಿಯಾ ಜಿಲ್ಲೆಯ ಸೇನಾ ಮಂಡಳಿಯು ಬ್ಯೂಕ್ಯಾನನ್ ರಿಗೆ ರಿಯಾಕ್ಟಿವ್ ಆರ್ಥ್ರೈಟಿಸ್ ಎಂಬ ಖಾಯಿಲೆ ಇದ್ದುದರಿಂದ ಅವರನ್ನು 4-F ಶ್ರೇಣಿಗೆ ನೋದಾಯಿಸುವುದರ ಮೂಲಕ ಅವರು ಸೇನೆಯನ್ನು ಸೇರುವುದರಿಂದ ಮುಕ್ತಗೊಳಿಸಿತು.ನಂತರ, 1962ರಲ್ಲಿ, ಕ್ಯೂಬಾ ಮತ್ತು ಕೆನಡಾಗಳ ನಡುವೆ ವೃದ್ಧಿಸುತ್ತಿರುವ ವ್ಯಾಪಾರೋದ್ಯಮದ ಬಗ್ಗೆ ಸಿದ್ಧಾಂತವನ್ನು ಮಂಡಿಸುವುದರ ಮೂಲಕ ಅವರು ಪತ್ರಿಕೋದ್ಯಮದ ವಿಷಯದಲ್ಲಿ ಕೊಲಂಬಿಯಾದಿಂದ ಮಾಸ್ಟರ್ಸ್ ಪದವಿ ಹೊಂದಿದರು.
ಬ್ಯೂಕ್ಯಾನನ್ ವೈಟ್ ಹೌಸ್ ನ ಉದ್ಯೋಗಿ ಷೆಲಿ ಆನ್ ಸ್ಕಾರ್ನೀಯವರನ್ನು 1971ರಲ್ಲಿ ವಿವಾಹವಾದರು.[೭]
ವೃತ್ತಿಜೀವನ
[ಬದಲಾಯಿಸಿ]ಸೇಂಟ್ ಲೂಯಿಸ್ ಗ್ಲೋಬ್-ಡೆಮೋಕ್ರಾಟ್ ಸಂಪಾದಕೀಯ ಬರಹಗಾರ
[ಬದಲಾಯಿಸಿ]ಬ್ಯೂಕ್ಯಾನನ್ ತಮ್ಮ 23ರ ಹರೆಯದಲ್ಲಿ ಸೇಂಟ್ ಲೂಯಿಸ್ ಗ್ಲೋಬ್-ಡೆಮೋಕ್ರಾಟ್ ಅನ್ನು ಸೇರಿದರು. ಕ್ಯೂಬಾದೊಡನೆ ಯುನೈಟೆಡ್ ಸ್ಟೇಟ್ಸ್ ಹಡಗಿನ ಮೂಲಕ ವ್ಯಾಪಾರವನ್ನು ರದ್ದುಗೊಳಿಸಿದ ಮೊದಲವರ್ಷವಾದ 1961ರಲ್ಲಿ ಕೆನಡಾ-ಕ್ಯೂಬಾ ವ್ಯಾಪಾರವು ತ್ರಿಗುಣವಾಯಿತು. ಬ್ಯೂಕ್ಯಾನನ್ ಪತ್ರಿಕೆಗೆ ಕೆಲಸ ಮಾಡಲಾರಂಭಿಸಿದ ಎಂಟು ವಾರಗಳ ನಂತರ, ಬ್ಯೂಕ್ಯಾನನ್ ಕೊಲಂಬಿಯಾ ಮಾಸ್ಟರ್ಸ್ ಯೋಜನೆಗೆಂದು ಬರೆದಿದ್ದ ಲೇಖನವನ್ನೇ ದ ಗ್ಲೋಬ್-ಡೆಮೋಕ್ರಾಟ್ ತನ್ನ ಎಂಟು ಅಂಕಣಗಳ ವಿಸ್ತಾರದ "ಕೆನಡಾ ಸೆಲ್ಸ್ ಟು ರೆಡ್ ಕ್ಯೂಬಾ - ಎಂಡ್ ಪ್ರಾಸ್ಪೆರ್ಸ್" ತಲೆಬರಹದಡಿಯಲ್ಲಿ ಪ್ರಕಟಿಸಿತು. ಬ್ಯೂಕ್ಯಾನನ್ ರ ವೃತ್ತಾಂತ ರೈಟ್ ಫ್ರಂ ದ ಬಿಗಿನಿಂಗ್ ಪ್ರಕಾರ ಈ ಲೇಖನವು ತಮ್ಮ ವೃತ್ತಿಜೀವನದ ಒಂದು ಮೈಲಿಗಲ್ಲಾಗಿತ್ತು. ಆದರೆ, ಆ ನೌಕಾಧಾರಿತ ವ್ಯಾಪಾರವು ಕಮ್ಯುನಿಸ್ಟ್ ಆಡಳಿತವನ್ನು ಪ್ರಬಲವಾಗಿಸಿತು ಎಂದ ಬ್ಯೂಕ್ಯಾನನ್ ಅದರಿಂದ ವಿಮುಖರಾದರು.[೮] ಬ್ಯೂಕ್ಯಾನನ್ ರನ್ನು ಉಪ ಸಂಪಾದಕೀಯ ಪುಟ ಸಂಪಾದಕ ಹುದ್ದೆಗೆ ಏರಿಸಲಾಯಿತು ಮತ್ತು ಅವರು ಬ್ಯಾರಿ ಗೋಲ್ಡ್ ವಾಟರ್ ರ ಅಧ್ಯಕ್ಷೀಯ ಚುನಾವಣಾ ಪ್ರಣಾಳಿಕೆಯನ್ನು ಬೆಂಬಲಿಸಿದರು. ಆದರೆ, ಗ್ಲೋಬ್-ಡೆಮೋಕ್ರಾಟ್ ಗೋಲ್ಡ್ ವಾಟರ್ ರನ್ನು ಬೆಂಬಲಿಸಲಿಲ್ಲ ಮತ್ತು ಬ್ಯೂಕ್ಯಾನನ್ ಈ ಪತ್ರಿಕೆಗೂ ಮತ್ತು ಅಧ್ಯಕ್ಷ ಜಾನ್ಸನ್ ರಿಗೂ ಗುಪ್ತವಾದ ಒಪ್ಪಂದವೇನಾದರೂ ಇರಬಹುದೇ ಎಂಬ ಶಂಕೆ ಹೊಂದಿದರು. ಬ್ಯೂಕ್ಯಾನನ್ ಸ್ಮರಿಸಿಕೊಳ್ಳುತ್ತಾರೆ: "ಕನ್ಸರ್ವೇಟಿವ್ ಚಳುವಳಿಯು ಅದರ ಸೋಲುಗಳ ಮೂಲಕವೇ ಮುಂದುವರೆದದ್ದು. . . ಗೋಲ್ಡ್ ವಾಟರ್ ರ ಪ್ರಣಾಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಒಬ್ಬ ಕನ್ಸರ್ವೇಟಿವ್ ಸಹ ನನಗೆ ನೆನಪಾಗುತ್ತಿಲ್ಲ."[೬] ಕಾಂಷೈನ್ಸ್ ಆಫ್ ಎ ಕನ್ಸರ್ವೇಟಿವ್ ನ ಇತ್ತೀಚಿನ ಆವೃತ್ತಿಯ (ಪ್ಯಾಟ್ ಬ್ಯೂಕ್ಯಾನನ್ ಬರೆದ) ಮುನ್ನುಡಿಯಲ್ಲಿ, ಬ್ಯೂಕ್ಯಾನನ್ ಯಂಗ್ ಅಮೆರಿಕನ್ಸ್ ಫಾರ್ ಫ್ರೀಡಂ ಸಂಸ್ಥೆಯ ಸದಸ್ಯರಾಗಿದ್ದರೆಂದೂ, ಆ ಸಂಸ್ಥೆಗಾಗಿ ಮಾಧ್ಯಮಕ್ಕೆ ನೀಡಬೇಕಾದ ಪ್ರಕಟಣೆಗಳನ್ನು ಬರೆದುಕೊಡುತ್ತಿದ್ದರೆಂದೂ ಉಲ್ಲೇಖಿತವಾಗಿದೆ. ಅವರು ನಿಕ್ಸನ್, ಮಡ್ಜ್, ರೋಸ್, ಗಂಥ್ರೀ, ಅಲೆಕ್ಸಾಂಡರ್ ಮತ್ತು ಮಿಚೆಲ್ ರ ನ್ಯೂ ಯಾರ್ಕ್ ನಗರದಲ್ಲಿನ ಕಾನೂನು ಕಚೇರಿಗಳಲ್ಲಿ 1965ನೆಯ ಇಸವಿಯಲ್ಲಿ ಉಪಕಾರ್ಯನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ನಿಕ್ಸನ್ ರ ವೈಟ್ ಹೌಸ್ ನಲ್ಲಿ ಸೇವೆ
[ಬದಲಾಯಿಸಿ]ಮರುವರ್ಷ ನಿಕ್ಸನ್ ರ ಚುನಾವಣಾ ಪ್ರಚಾರಕ್ಕೆಂದು ಸಲಹೆಗಾರರಾಗಿ ಆಯ್ಕೆಯಾದವರಲ್ಲಿ ಇವರು ಮೊದಲಿಗರಾದರು;[೯] ಅವರು ಪ್ರಮುಖವಾಗಿ ವಿರೋಧಿಗಳ ಸಂಶೋಧಕರಾಗಿ ಕಾರ್ಯ ನಿರ್ವಹಿಸಿದರು. ಅವರ ಭಾಷಣಗಳು ಬೆಂಬಲಿಗರಿಗಾಗಿಯೇ ಮೀಸಲಾಗಿದ್ದಂತಹ ರೀತಿಯಲ್ಲಿದ್ದುದರಿಂದ ಅವರಿಗೆ "ಮಿಸ್ಟರ್ ಇನ್ ಸೈಡ್" ಎಂಬ ಅಡ್ಡಹೆಸರು ಪ್ರಾಪ್ತವಾಯಿತು.[೧೦]
ಬ್ಯೂಕ್ಯಾನನ್ 1966 ಮತ್ತು 1968ರ ಇಡೀ ಚುನಾವಣಾ ಪ್ರಚಾರ ಕಾಲದಲ್ಲಿ ನಿಕ್ಸನ್ ರೊಡನೆ ಪ್ರಯಾಣದಲ್ಲಿ ತೊಡಗಿದ್ದರು. ಅವರು ಪಶ್ಚಿಮ ಯೂರೋಪ್ ಮತ್ತು ಆಫ್ರಿಕಾದ ಪ್ರವಾಸ ಕೈಗೊಂಡದ್ದೇ ಅಲ್ಲದೆ, ಆರು-ದಿನದ ಯುದ್ಧ ಮುಗಿಯುತ್ತಿದ್ದಂತೆಯೇ ಮಧ್ಯ ಪೂರ್ವಕ್ಕೂ ಪ್ರಯಾಣ ಬೆಳೆಸಿದರು. 1969ರಲ್ಲಿ ನಿಕ್ಸನ್ ಓವಲ್ ಕಚೇರಿಯನ್ನು ಪ್ರವೇಶಿಸಿದಾಗ ಬ್ಯೂಕ್ಯಾನನ್ ನಿಕ್ಸನ್ ಹಾಗೂ ಉಪಾಧ್ಯಕ್ಷ ಸ್ಪೈರೋ ಆಗ್ನ್ಯೂರಿಗೆ ವೈಟ್ ಹೌಸ್ ನ ಸಲಹೆಗಾರರು ಹಾಗೂ ಭಾಷಣಬರಹಗಾರರಾಗಿ ಕಾರ್ಯನಿರ್ವಹಿಸಿದರು. ಬ್ಯೂಕ್ಯಾನನ್ ಮೌನ ಬಹುಸಂಖ್ಯಾತ ಎಂಬ ನುಡಿಗಟ್ಟನ್ನು ಹುಟ್ಟುಹಾಕಿ ಒಂದು ನವೀನ ಯೋಜನೆಯನ್ನು ರೂಪಿಸುವುದರ ಮೂಲಕ ಮಿಲಿಯನ್ ಗಟ್ಟಲೆ ಡೆಮೋಕ್ರಾಟ್ ಗಳನ್ನು ನಿಕ್ಸನ್ ರತ್ತ ಆಕರ್ಷಿತರಾಗುವಂತೆ ಮಾಡಿದರು; 1972ರಲ್ಲಿ ಹೊರಡಿಸಿದ ಒಂದು ಸುತ್ತೋಲೆಯಲ್ಲಿ ವೈಟ್ ಹೌಸ್ "ಅಮೆರಿಕದ ರಾಜಕೀಯದ ಆಡಳಿತಪಕ್ಷವಿರೋಧಿ ಸಂಪ್ರದಾಯ ಅಥವಾ ಸಿದ್ಧಾಂತವನ್ನು ಮತ್ತೆ ಗಳಿಸಲು ಯತ್ನಿಸಬೇಕು" ಎಂದು ಸಲಹೆಯಿತ್ತರು.[೧೧] ಅವರ ದೈನಂದಿನ ಕಾರ್ಯಗಳು ರಾಜಕೀಯ ತಂತ್ರಗಳ ವೃದ್ಧಿ, ಅಧ್ಯಕ್ಷರ ದೈನಂದಿನ ವಾರ್ತಾ ಸಾರಾಂಶ ಪ್ರಕಟಣೆ ಮತ್ತು ವಾರ್ತಾ ಗೋಷ್ಠಿಗಳಿಗೆ ನಿರ್ದೇಶಿಸಬೇಕಾದ ಪುಸ್ತಕಗಳನ್ನು ತಯಾರಿಸುವುದು, ಇವುಗಳನ್ನು ಒಳಗೊಂಡಿತ್ತು. ಅವರು 1972ರಲ್ಲಿ ನಿಕ್ಸನ್ ರೊಡನೆ ಚೀನಾದ ಪ್ರವಾಸದಲ್ಲಿ ಜೊತೆಯಾಗಿದ್ದರು ಮತ್ತು 1974ರಲ್ಲಿ ಮಾಸ್ಕೋ, ಯಾಲ್ಟಾ ಮತ್ತು ಮಿನ್ಸ್ಕ್ ಗಳ ಶೃಂಗಸಭೆಗಳಲ್ಲಿಯೂ ಅವರೊಡನಿದ್ದರು. ಅವರು ನಿಕ್ಸನ್ ರ ಡೆಮೋಕ್ರಾಟಿಕ್ ಪ್ರತಿಸ್ಪರ್ಧಿ ಜಾರ್ಜ್ ಮೆಕ್ ಗೋವರ್ನ್ ರನ್ನು ತೀವ್ರಗಾಮಿಯೆಂದು ಪರಿಗಣಿಸಿ ಅವರ ಸಂಬಂಧಿತವಾದ ವೈಟ್ ಹೌಸ್ ಟೇಪ್ ಗಳನ್ನು ಸುಟ್ಟುಬಿಡಲು ನಿಕ್ಸನ್ ರಿಗೆ ಸಲಹೆಯಿತ್ತರು.[೧೦]
ಬ್ಯೂಕ್ಯಾನನ್ ಅಧ್ಯಕ್ಷರ ವಾಟರ್ ಗೇಟ್ ಹಗರಣದ ಕೊನೆಯ ದಿನಗಳವರೆಗೂ ಅವರ ವಿಶೇಷ ಸಹಾಯಕರಾಗಿ ಕಾರ್ಯವಹಿಸಿದರು. ಕೆಲವರು ಅವರು ಡೀಪ್ ಥ್ರೋಟ್ (ಗುಪ್ತ ದನಿ ಅರ್ಥಾತ್ ಹಗರಣದಲ್ಲಿ ಗುಪ್ತವಾಗಿ ಶಾಮೀಲಾದವರು) ಇರಬಹುದೆಂದು ಶಂಕಿಸಿದರೂ, ಯಾವುದೇ ಆರೋಪವೂ ಅವರ ಮೇಲೆ ಹೊರಿಸಲ್ಪಡಲಿಲ್ಲ. ಕಡೆಗೆ, 2005ರಲ್ಲಿ, ರಹಸ್ಯ ಬಯಲಾಗಿ ನಿಜವಾದ ತಪ್ಪಿತಸ್ಥ FBIನ ಸಹಾಯಕ ನಿರ್ದೇಶಕರಾಗಿದ್ದ ಮಾರ್ಕ್ ಫೆಲ್ಟ್ ಎಂದು ಬಹಿರಂಗವಾದಾಗ ಬ್ಯೂಕ್ಯಾನನ್ ಅವರನ್ನು "ನುಸುಳಿಗ", "ಅಪ್ರಾಮಾಣಿಕ" ಮತ್ತು "ಅಪರಾಧಿ" ಎಂದು ಜರೆದರು.[೧೨] ನಿಕ್ಸನ್ ರ ಪ್ರಚಾರದ "ಆಕ್ರಮಣಕಾರಿ ತಂಡ"ದಲ್ಲಿನ ಇವರ ಪಾತ್ರವು ಇವರು ಸೆಪ್ಟೆಂಬರ್ 26, 1973ರಂದು ಸೆನೇಟ್ ವಾಟರ್ ಗೇಟ್ ಸಮಿತಿಯ ಮುಂದೆ ಹಾಜರಾಗುವಂತಾಗಿಸಿತು. ನಿಕ್ಸನ್ 1974ರಲ್ಲಿ ರಾಜೀನಾಮೆ ನೀಡಿದಾಗ ಬ್ಯೂಕ್ಯಾನನ್ ಕೆಲಕಾಲ ಆಗಮಿಸಿದ ಅಧ್ಯಕ್ಷರಾದ ಜೆರಾಲ್ಡ್ ಫೋರ್ಡ್ ರಿಗೆ ವಿಶೇಷ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಸಿಬ್ಬಂದಿಯ ಮುಖ್ಯಸ್ಥರಾದ ಅಲೆಕ್ಸಾಂಡರ್ ಹೇಯ್ಗ್ ಬ್ಯೂಕ್ಯಾನನ್ ದಕ್ಷಿಣ ಆಫ್ರಿಕಾಗೆ ರಾಯಭಾರಿಯಾಗಿ ಹೋಗುವುದನ್ನು ಅನುಮೋದಿಸಿದರೂ. ಫೋರ್ಡ್ ಅದನ್ನು ತಿರಸ್ಕರಿಸಿದರು.[೧೦]
ಬ್ಯೂಕ್ಯಾನನ್ ವಾಟರ್ ಗೇಟ್ ಬಗ್ಗೆ ಹೀಗೆ ಪ್ರತಿಕ್ರಿಯಿಸಿದರು:
“ | The lost opportunity to move against the political forces frustrating the expressed national will ... To effect a political counterrevolution in the capital—... there is no substitute for a principled and dedicated man of the Right in the Oval Office.[೧೦] | ” |
ಅವರು ರಾಜೀನಾಮೆ ನೀಡಿದ ಬಹುದಿನಗಳ ನಂತರ, ನಿಕ್ಸನ್ ಬ್ಯೂಕ್ಯಾನನ್ ಒಬ್ಬ ಆಪ್ತಮಿತ್ರನೆಂದೂ, ಅವರು ಸೆಮೈಟ್ ಗಳ ವಿರೋಧಿಯೂ ಅಲ್ಲ ಅಥವಾ "ದ್ವೇಷಿ"ಯೂ ಅಲ್ಲ, ಅದರ ಹೊರತಾಗಿ ಒಬ್ಬ "ಸಭ್ಯ, ದೇಶಪ್ರೇಮಿ ಅಮೆರಿಕನ್" ಎಂದು ಹೇಳಿದರು. ಬ್ಯೂಕ್ಯಾನನ್ "ಪ್ರತ್ಯೇಕಗೊಳಿಸುವಿಕೆ"ಯಂತಹ ವಿದೇಶಾಂಗ ನೀತಿಯ ರೀತಿಯ ಕೆಲವು ತೀವ್ರತರ ದೃಷ್ಟಿಕೋನಗಳನ್ನು ಹೊಂದಿದ್ದಾರೆ, ಅವುಗಳ ಬಗ್ಗೆ ನನಗೆ ಸಹಮತವಿಲ್ಲ ಎಂದೂ ನಿಕ್ಸನ್ ನುಡಿದರು. ಬ್ಯೂಕ್ಯಾನನ್ ಅಧ್ಯಕ್ಷರಾಗಬೇಕೆಂದು ಮಾಜಿ ಅಧ್ಯಕ್ಷರು ಅಭಿಪ್ರಾಯಪಡದಿದ್ದರೂ, ಈ ವಿಶ್ಲೇಷಕರ ಮಾತುಗಳಿಗೆ "ಖಂಡಿತ ಕಿವಿ ನೀಡಬೇಕು" ಎಂದು ನುಡಿದರು.[೧೩]
ವಾರ್ತಾ ವಿವರಣಕಾರ
[ಬದಲಾಯಿಸಿ]ಬ್ಯೂಕ್ಯಾನನ್ ತಮ್ಮ ಅಂಕಣಕ್ಕೆ ಮರಳಿಸರು ಮತ್ತು ಪ್ರಸರಣ ಅತಿಥಿ ಮತ್ತು ರಾಜಕೀಯ ವಿಶ್ಲೇಷಣಕಾರರಾಗಿ ನಿಯತವಾಗಿ ಕಾಣಿಸಿಕೊಳ್ಳಲಾರಂಭಿಸಿದರು. ಲಿಬರಲ್ ನ ಅಂಕಣಕಾರರಾದ ಟಾಮ್ ಬ್ರಾಡೆನ್ ರೊಡಗೂಡಿ ದಿನವೂ ಮೂರು ಗಂಟೆಗಳ ಅವಧಿಯ ಬ್ಯೂಕ್ಯಾನನ್-ಬ್ರಾಡೆನ್ ಕಾರ್ಯಕ್ರಮ ನಡೆಸಿಕೊಡತೊಡಗಿದರು. 1978ರಿಂದ 1984ರವರೆಗೂ ಅವರು NBCಯಲ್ಲಿ ದೈನಂದಿನ ವಿಶ್ಲೇಷಣಕಾರರಾಗಿದ್ದರು. ಬ್ಯೂಕ್ಯಾನನ್ ತಮ್ಮ ಟಿವಿ ವೃತ್ತಿಬದುಕನ್ನು ದ ಮ್ಯಾಕ್ ಲಾಲಿನ್ ಗ್ರೂಪ್ ನಲ್ಲಿ ಅನೂಚಾನವಾಗಿ ಕಾಣಿಸಿಕೊಳ್ಳುವುದರ ಮೂಲಕ ಆರಂಭಿಸಿ, CNNನ ಕ್ರಾಸ್ ಫೈರ್ (ಬ್ಯೂಕ್ಯಾನನ್-ಬ್ರಾಡೆನ್ ನಿಂದ ಪ್ರೇರಿತ) ಮತ್ತು ದ ಕ್ಯಾಪಿಟಲ್ ಗ್ಯಾಂಗ್ ನಲ್ಲಿನ ಪಾತ್ರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟರು. ಕ್ರಾಸ್ ಫೈರ್ ನಲ್ಲಿನ ಅವರ ಅವಧಿಗಳು 1982ರಿಂದ 1999ರವರೆಗೂ ಜರುಗಿದವು; ಅವರೊಡನೆ ಚರ್ಚೆಗೆ ತೊಡಗಿದವರಲ್ಲಿ ಬ್ರಾಡೆನ್, ಮೈಕಲ್ ಕಿಂಸ್ಲೇ, ಜುವಾನ್ ವಿಲಿಯಮ್ಸ್ ಮತ್ತು ಬಿಲ್ ಪ್ರೆಸ್ ಪ್ರಮುಖರು.
ಬ್ಯೂಕ್ಯಾನನ್ ಮೆಕ್ ಲಾಲಿನ್ ತಂಡದ ಮಂಡಳಿಯ ಖಾಯಂ ಸದಸ್ಯರು. ಹಲವಾರು ಭಾನುವಾರಗಳಂದು ಅವರು ಜಾನ್ ಮೆಕ್ ಲಾಲಿನ್, ಲಿಬರಲ್ ನ್ಯೂಸ್ ವೀಕ್ ಪತ್ರಕರ್ತ ಎಲೇನರ್ ಕ್ಲಿಫ್ಟ್ ಮತ್ತು ನಿಯೋ-ಕನ್ಸರ್ವೇಟಿವ್ ಮೋನಿಕಾ ಕ್ರೌಲೀಯರೊಡನೆ ಕಾಣಿಸಿಕೊಳ್ಳುತ್ತಾರೆ.
ರೇಗನ್ ರ ವೈಟ್ ಹೌಸ್ ನಲ್ಲಿ ಕಾರ್ಯ
[ಬದಲಾಯಿಸಿ]ಬ್ಯೂಕ್ಯಾನನ್ 1985ರಿಂದ 1987ರವರೆಗೂ ವೈಟ್ ಹೌಸ್ ನ ಸಂಪರ್ಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ನಿಕಾರಾಗ್ವಾದ ಸ್ಯಾಂಡಿನಿಸ್ಟಾ ಸರ್ಕಾರದ ವಿರುದ್ಧ ಬೆಂಬಲ ಗಳಿಸಲು ಮತ್ತು ಅದರ ವಿರೋಧವಾಗಿ ದಂಗೆಯೆದ್ದವರನ್ನು ಬೆಂದಲಿಸಲು ಅವರು ಐ ಆಮ್ ಎ ಕಾಂಟ್ರಾ ಟೂ ಎಂಬ ನುಡಿಗಟ್ಟನ್ನು ಬಳಸಿದರು. ಬ್ಯೂಕ್ಯಾನನ್ ಅಧ್ಯಕಷ್ ರೇಗನ್ ರು ವೆಹರ್ ಮ್ಯಾಕ್ಟ್ ಸೈನಿಕರನ್ನಲ್ಲದೆ 48 ವ್ಯಾಫೆನ್ ಎಸ್ ಎಸ್ ಸದಸ್ಯರನ್ನೂ ಸಹ ಹೂತಿದ್ದಂತಹ, ಬಿಟ್ ಬರ್ಗ್ ನಲ್ಲಿರುವ ಜರ್ಮನ್ ಸೇನಾ ಸಮಾಧಿಗೆ 1985ರಲ್ಲಿ ಭೇಟಿ ನೀಡಲು ಬಯಸಿದಾಗ ಅದನ್ನು ಬೆಂಬಲಿಸಿದರು. ಯಹೂದಿ ತಂಡಗಳ ಮೌಖಿಕ ವಿರೋಧಗಳ ನಡುವೆಯೂ ಈ ಪ್ರಯಾಣವು ಜರುಗಿತು. ಒಂದು ಸಂದರ್ಶನದಲ್ಲಿ, ಲೇಖಕ ಎಲೀ ವೀಸೆಲ್ ವೈಟ್ ಹೌಸ್ ನ ಯಹೂದಿ ಪ್ರಮುಖರ ಸಮಾವೇಶಕ್ಕೆ ಈ ಪ್ರಯಾಣದ ಬಗ್ಗೆ ವಿವರಣೆ ನೀಡಿದರು:
“ | The only one really defending the trip, was Pat Buchanan, saying, 'We cannot give the perception of the President being subjected to Jewish pressure.'[೧೪] | ” |
1992ರಲ್ಲಿ ABCಗೆ ನೀಡಿದ ಸಂದರ್ಶನದಲ್ಲಿ ಬ್ಯೂಕ್ಯಾನನ್ ವೀಸೆಲ್ ರದು ಕಟ್ಟುಕಥೆ ಎಂದು ಆರೋಪಿಸಿದರು:
“ | I didn't say it and Elie Wiesel wasn't even in the meeting. [...] that meeting was held three weeks before the Bitburg summit was held. If I had said that, it would have been out of there within hours and on the news.[೧೫] | ” |
ರಾಷ್ಟ್ರೀಯ ಧರ್ಮಬದ್ಧ ಪ್ರಸರಣಕಾರರಿಗೆಂದು ನೀಡಿದ 1986ರ ಭಾಷಣದಲ್ಲಿ ಬ್ಯೂಕ್ಯಾನನ್ "ರೇಗನ್ ಕ್ರಾಂತಿ"ಯ ಬಗ್ಗೆ ಮಾತನಾಡಿದರು.
“ | Whether President Reagan has charted a new course that will set our compass for decades—or whether history will see him as the conservative interruption in a process of inexorable national decline—is yet to be determined. | ” |
ಒಂದು ವರ್ಷದ ನಂತರ, ಅವರು ಇಂತೆಂದರು "ಅಮೆರಿಕದ ರಾಜಕೀಯದಲ್ಲಿನ ಮಹತ್ತರ ಶೂನ್ಯತೆಯು ರೊನಾಲ್ಡ್ ರೇಗನ್ ರ ಬಲಭಾಗದಲ್ಲಿದೆ."[೧೦] ರೇಗನ್ ರಿಗೆ ತನ್ನ ಸಹೋದರ ಸೇವೆ ಸಲ್ಲಿಸುತ್ತಿರುವಾಗಲೇ ತಂಗಿ ಬೇ ಬ್ಯೂಕ್ಯಾನನ್ "ಅಧ್ಯಕ್ಷಸ್ಥಾನಕ್ಕೆ ಬ್ಯೂಕ್ಯಾನನ್" ಎಂಬ ಚಳುವಳಿಯನ್ನು 1086ರ ಜೂನ್ ನಲ್ಲಿ ಆರಂಭಿಸಿದರು. ಕನ್ಸರ್ವೇಟಿವ್ ಚಳುವಳಿಗೆ ಒಬ್ಬ ಮುಖಂಡ ಬೇಕಾಗಿದ್ದಾನೆಂದು ಆಕೆ ಅಭಿಪ್ರಾಯ ಪಟ್ಟರಾದರೂ, ಬ್ಯೂಕ್ಯಾನನ್ ಮೊದಲಿಗೆ ಯಾವುದೇ ನಿರ್ಧಾರಕ್ಕೆ ಬಾರದವರಾಗಿದ್ದರು.[೧೦] ವೈಟ್ ಹೌಸ್ ಬಿಟ್ಟ ನಂತರ ಅವರು ತಮ್ಮ ಅಂಕಣ ಹಾಗೂ ಕ್ರಾಸ್ ಫೈರ್ ಗೆ ಮರಳಿದರು. ಜ್ಯಾಕ್ ಕೆಂಪ್ ರ ಮೇಲಿನ ಗೌರವದಿಂದ 1988ರ ಸ್ಪರ್ಧೆಯಿಂದ ಅವರು ಹೊರಗುಳಿದರು; ವಿಪರ್ಯಾಸವೆಂದರೆ ಕೆಂಪ್ ಮುಂದಿನ ದಿನಗಳಲ್ಲಿ ಇವರಿಗೇ ಪ್ರತಿಸ್ಪರ್ಧಿಯಾದರು.[೧೧]
ರಾಜಕೀಯ ಜೀವನ
[ಬದಲಾಯಿಸಿ]1992ರ ಅಧ್ಯಕ್ಷೀಯ ಪ್ರಮುಖರು
[ಬದಲಾಯಿಸಿ]1990ರಲ್ಲಿ ಬ್ಯೂಕ್ಯಾನನ್ ಪ್ಯಾಟ್ರಿಕ್ ಜೆ. ಬ್ಯೂಕ್ಯಾನನ್; ಫ್ರಂ ದ ರೈಟ್; ಎಂಬ ಒಂದು ವಾರ್ತಾಪತ್ರವನ್ನು ಪ್ರಕಟಿಸಿದರು. ಆ ಪತ್ರವು ಚಂದಾದಾರರಿಗೆ "ರೀಡ್ ಅವರ್ ಲಿಪ್ಸ್! ನೋ ನ್ಯೂ ಟ್ಯಾಕ್ಸಸ್(ನಮ್ಮ ತುಟಿಗಳನ್ನು ಓದಿರಿ; ಯಾವುದೇ ಹೊಸ ತೆರಿಗೆ ಇಲ್ಲ." ಎಂಬ ಬಂಪರ್ ಗೆ ಅಳವಡಿಸಬಹುದಾದ ಸ್ಟಿಕ್ಕರ್ ಒಂದನ್ನು ರವಾನಿಸಿತು. "[೧೬]
1992ರಲ್ಲಿ, ಬ್ಯೂಕ್ಯಾನನ್ ತಾವು ಆಡಳಿತದಲ್ಲಿದ್ದ ಅಧ್ಯಕ್ಷ ಜಾರ್ಜ್ ಹೆಚ್.ಡಬ್ಲ್ಯೂ ಬುಷ್ ವಿರುದ್ಧ ಕಣಕ್ಕಿಳಿದುದಕ್ಕೆ ಕಾರಣಗಳನ್ನು ವಿವರಿಸಿದರು:
“ | If the country wants to go in a liberal direction, if the country wants to go in the direction of [Democrats] George Mitchell and Tom Foley, it doesn't bother me as long as I've made the best case I can. What I can't stand are the back-room deals. They're all in on it, the insider game, the establishment game—this is what we're running against.[೬] | ” |
ಅವರು ವಿದೇಶಿ ವಲಸಿಗರ ಕುಂಠಿತಗೊಳಿಸುವಿಕೆ ಮತ್ತು ಸಾಮಾಜಿಕ ಸಂಪ್ರದಾಯಶರಣತೆಯ ನೆಲೆಗಟ್ಟಿನ ಮೇಲೆ ಹಾಗೂ ಬಹುಸಾಂಸ್ಕೃತಿಕತೆ, ಭ್ರೂಣಹತ್ಯೆ ಮತ್ತು ಸಲಿಂಗಿಗಳ ಹಕ್ಕುಗಳ ವಿರುದ್ಧವಾಗಿ ಚುನಾವಣೆಗೆ ನಿಂತರು. ಮೂಲ ಚುನಾವಣೆಯಾದ ನ್ಯೂ ಹ್ಯಾಂಪ್ ಷೈರ್ ಪ್ರಾಥಮಿಕ ಹಂತದಲ್ಲೇ 38 ಪ್ರತಿಶತ ಮತಗಳಿಸುವುದತ ಮೂಲಕ (ಆಗಾಗಲೇ ಜನಪ್ರಿಯತೆ ಕಳೆದುಕೊಳ್ಳುತ್ತಿದ್ದ) ಬುಷ್ ರಿಗೆ ಇವರು ತೀವ್ರ ಪ್ರತಿಸ್ಪರ್ಧಿಯಾದರು. ಪ್ರಾಥಮಿಕ ಚುನಾವಣೆಗಳಲ್ಲಿ ಬ್ಯೂಕ್ಯಾನನ್ ಒಟ್ಟಾರೆ ಮೂರು ಮಿಲಿಯನ್ ಮತಗಳನ್ನು ಗಳಿಸಿದರು.
ಬ್ಯೂಕ್ಯಾನನ್ ನಂತರ ಬುಷ್ ರನ್ನು ಬೆಂಬಲಿಸಿದರು ಮತ್ತು 1992ರಲ್ಲಿ ಒಂದು ಪ್ರಾಸ್ತಾವಿಕ ನುಡಿಯನ್ನು ರಿಪಬ್ಲಿಕನ್ ನ್ಯಾಷನಲ್ ಕಂವೆಂಷನ್ ನಲ್ಲಿ ಮಂಡಿಸಿದರು; 'ಸಂಸ್ಕೃತಿ ಯುದ್ಧ'ವೆಂದೇ ಹೆಸರಾದ ಈ ಭಾಷಣದಲ್ಲಿ ಅವರು "ನಮ್ಮ ದೇಶದಲ್ಲಿ ಅಮೆರಿಕದ ಆತ್ಮವನ್ನು ಹೊಂದಲಿಕ್ಕಾಗಿ ನಡೆಯುತ್ತಿರುವ ಒಂದು ಧಾರ್ಮಿಕ ಯುದ್ಧ" ಎಂದು ಬಣ್ಣಿಸಿದರು. ಆ ಭಾಷಣದಲ್ಲಿ ಅವರು ಬಿಲ್ ಮತ್ತು ಹಿಲೆರಿ ಕ್ಲಿಂಟನ್ ಬಗ್ಗೆ ಹೀಗೆ ನುಡಿದರು:
“ | The agenda Clinton & Clinton would impose on America—abortion on demand, a litmus test for the Supreme Court, homosexual rights, discrimination against religious schools, women in combat units—that's change, all right. But it is not the kind of change America needs. It is not the kind of change America wants. And it is not the kind of change we can abide in a nation we still call God's country.[೧೭] | ” |
ಅವರು ಪಡೆದ ಉತ್ಸಾಹಭರಿತ ಚಪ್ಪಾಳೆಯನ್ನು ಕೇಳಿದ ಅವರ ವಿರೋಧಿಗಳು ಆ ಭಾಷಣವು ಮಾಡರೇಟ್ ಪಕ್ಷದವರನ್ನು ಬುಷ್/ಕ್ವೇಯ್ಲ್ ಟಿಕೆಟ್ ನಿಂದ ದೂರೀಕರಿಸಿತು ಎಂದು ದೂರಲು ಪ್ರೇರಕವಾಯಿತು.[೧೮]
ಪ್ರಚಾರ ಪಥದಿಂದ ಹೊರಕ್ಕೆ
[ಬದಲಾಯಿಸಿ]ಬ್ಯೂಕ್ಯಾನನ್ ತಮ್ಮ ಅಂಕಣ ಮತ್ತು ಕ್ರಾಸ್ ಫೈರ್ ಗೆ ಹಿಂದಿರುಗಿದರು. ಸಂಯುಕ್ತ ಸಂಸ್ಥಾನದ ಸಿದ್ಧಾಂತಗಳನ್ನು, ಸಾಂಪ್ರದಾಯಿಕ ಮೌಲ್ಯಗಳನ್ನು ಮತ್ತು ಮಧ್ಯಸ್ಥಿಕೆ-ವಿರೋಧವನ್ನು ಪ್ರಚುರಪಡಿಸಲು ಅವರು ದ ಅಮೆರಿಕನ್ ಕಾಝ್ ಎಂಬ ಒಂದು ಸಂಪ್ರದಾಯಬದ್ಧ ಶಿಕ್ಷಣ ಸಂಸ್ಥೆಯನ್ನು 1993ರಲ್ಲಿ ಸ್ಥಾಪಿಸಿದರು. ಬೇ ಬ್ಯೂಕ್ಯಾನನ್ ಈ ವಿಯೆನ್ನಾ, ವರ್ಜೀನಿಯಾದಲ್ಲಿ ಸ್ಥಾಪಿತವಾಗಿರುವ ಸಂಸ್ಥೆಯ ಅಧ್ಯಕ್ಷೆಯಾಗಿದ್ದಾರೆ ಮತ್ತು ಪ್ಯಾಟ್ ಅದರ ಚೇರ್ಮನ್ ಆಗಿದ್ದಾರೆ.[೧೯]
ಮ್ಯೂಚುಯಲ್ ಬ್ರಾಡ್ ಕ್ಯಾಸ್ಟಿಂಗ್ ಸಿಸ್ಟಂನವರ ಬ್ಯೂಕ್ಯಾನನ್ ಎಂಡ್ ಕಂಪನಿ ಎಂಬ ಮೂರುಗಂಟೆಗಳ ಟಾಕ್ ಷೋ ದ ಅತಿಥೇಯರಾಗಿ ಜುಲೈ 5, 1993ರಂದು ಬ್ಯೂಕ್ಯಾನನ್ ರೇಡಿಯೋಗೆ ಮರಳಿದರು. ಅಲ್ಲಿ ಅವರು ಸಹ-ಅತಿಥೇಯರಾದ ಲಿಬರಲ್ ರೊಡನೆ ಸ್ಪರ್ಧಿಸುವ ಸಂದರ್ಭಗಳಿದ್ದು, ಅವರಲ್ಲಿ ಬ್ಯಾರಿ ಲಿನ್, ಬಾಬ್ ಬೆಕೆಲ್ ಮತ್ತು ಕ್ರಿಸ್ ಮ್ಯಾಥ್ಯೂಸ್ ಇದ್ದು, ಕಾರ್ಯಕ್ರಮದ ಪ್ರಸರಣ ಅವಧಿಯು ರಷ್ ಲ್ಯಾಂಬರ್ಗ್ ರ ಕಾರ್ಯಕ್ರಮದೊಡನೆ ಪೈಪೋಟಿ ನಡೆಸುವಂತಿತ್ತು. ತಮ್ಮ 1996ರ ಚುನಾವಣಾ ಕಾರ್ಯವನ್ನು ಆರಂಭಿಸುವ ಸಲುವಾಗಿ ಬ್ಯೂಕ್ಯಾನನ್ ಈ ಕಾರ್ಯಕ್ರಮದಿಂದ ಮಾರ್ಚ್ ೨೦, 1995ರಂದು ಹೊರನಡೆದರು.
1996ರ ಅಧ್ಯಕ್ಷೀಯ ಪ್ರಾಥಮಿಕಗಳು
[ಬದಲಾಯಿಸಿ]1996ರಲ್ಲಿ ಬ್ಯೂಕ್ಯಾನನ್ ರಿಪಬ್ಲಿಕನ್ ನೇಮಕಾತಿಯನ್ನು ಪಡೆಯಲು ಮಾಡಿದ ಯತ್ನಗಳು ಬಹಳ ಮೆಚ್ಚತಕ್ಕವಾಗಿದ್ದವು. ಡೆಮೋಕ್ರಾಟಿಕ್ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಮರು-ಆಯ್ಕೆಯಾಗಲು ಯತ್ನಿಸುತ್ತಿದ್ದ ಆ ಸಂದರ್ಭದಲ್ಲಿ ಟಿಕೆಟ್ ಮೇಲೆ ಭದ್ರ ಹಿಡಿತ ಹೊಂದಿದ್ದ ಯಾವುದೇ ಆಡಳಿತಾರೂಢ ರಿಪಬ್ಲಿಕನ್ ಇರಲಿಲ್ಲ. ನಿಜಕ್ಕೂ, ಸೋಲುಂಡಿದ್ದ ಮಾಜಿ ಅಧ್ಯಕ್ಷ ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ ತಮಗೆ ಮತ್ತೊಮ್ಮೆ ಸ್ಪರ್ಧಿಸುವ ಬಯಕೆಯಿಲ್ಲವೆಂದು ಹೇಳಿದ್ದುದರಿಂದ, ಆ ಪಕ್ಷದ ಬಾವುಟ ಹಿಡಿಯಲು ಅತ್ಯಂತ ನಿಕಟವಾಗಿದ್ದವರೆಂದರೆ ಕಾನ್ಸಾಸ್ ನ ಸೆನೇಟ್ ಮೆಜಾರಿಟಿ ಮುಖಂಡರಾದ ಸೆನೇಟರ್ ರಾಬರ್ಟ್ ಡೋಲ್; ಆದರೆ ಅವರಿಗೆ ಬಹಳ ದೌರ್ಬಲ್ಯಗಳಿದ್ದವು. ಬ್ಯೂಕ್ಯಾನನ್ ಡೋಲ್ ರ ಬಲಪಂಥದಿಂದ ರಿಪಬ್ಲಿಕನ್ ನೇಮಕಾತಿಯನ್ನು ಕೋರುತ್ತಾ, ಉತ್ತರ ಅಮೆರಿಕದ ಮುಕ್ತ ವ್ಯಾಪಾರ ಒಡಂಬಡಿಕೆ(NAFTA)ಯ ವಿರುದ್ಧ ತಮ್ಮ ದನಿಯೆತ್ತಿದರು. ನಾಮಕಾತಿ ಬಯಸಿದ ಇತರ ಉಮೇದುವಾರರ ಪೈಕಿ ಟೆಕ್ಸಾಸ್ ನ ಸೆನೇಟರ್ ಫಿಲ್ ಗ್ರಾಮ್, ಟೆನೆಸ್ಸಿಯ ಮಾಜಿ ರಾಜ್ಯಪಾಲ ಲಾಮಾರ್ ಅಲೆಕ್ಸಾಂಡರ್ ಮತ್ತು ಬಹುಪಟ್ಟು-ಮಿಲಯನ್ ಗಳ ಶ್ರೀಮಂತ ಪ್ರಕಾಶಕ ಸ್ಟೀವ್ ಫೋರ್ಬ್ಸ್ ಇದ್ದರು.
ಫೆಬ್ರವರಿಯಲ್ಲಿ, ಲಿಬರಲ್ ಸಾರ್ವಜನಿಕ ಘನತೆಯ ಕೇಂದ್ರವು ಬ್ಯೂಕ್ಯಾನನ್ ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಹ-ಅಧ್ಯಕ್ಷರಾದ ಲ್ಯಾರಿ ಪ್ರ್ಯಾಟ್ ಶ್ವೇತ ಶ್ರೇಷ್ಠತಾಸಂಘ(ಸುಪ್ರೀಮಾಸಿಸ್ಟ್) ಮತ್ತು ಸೇನೆಯ ಮುಖಂಡರು ನಡೆಸಿದ ಎರಡು ಕೂಟಗಳಲ್ಲಿ ಭಾಗವಹಿಸಿದರು ಎಂದು ವರದಿ ಮಾಡಿತು. ಪ್ರ್ಯಾಟ್ ಯಾವುದೇ ವರ್ಣೀಯ ಪಂಥದೊಡನೆ ಸಂಬಂಧವಿರಿಸಿಕೊಂಡಿರುವುದನ್ನು ನಿರಾಕರಿಸಿದರು ಮತ್ತು ನ್ಯೂ ಹ್ಯಾಂಪ್ ಷೈರ್ ನಲ್ಲಿ ನಡೆಯಬೇಕಾದ ಪ್ರಾಥಮಿಕ ಹಂತದ ಚುನಾವಣೆಯ ಕಾಲದಲ್ಲಿ ಬೇಕೆಂದೇ ತಮಗೆ ಮಸಿ ಬಳಿಯಲು ನಡೆಸಿದ ಷಡ್ಯಂತ್ರವದೆಂದು ಹೇಳಿದರು. ಬ್ಯೂಕ್ಯಾನನ್ ತಾವು ಪ್ರ್ಯಾಟ್ ರನ್ನು ನಂಬುವುದಾಗಿ ಮ್ಯಾಂಚೆಸ್ಟರ್ ಯೂನಿಯನ್ ಲೀಡರ್ ಗೆ ಹೇಳಿದರು. ಪ್ರ್ಯಾಟ್ "ಈ ಆರೋಪಗಳಿಗೆ ಉತ್ತರಿಸಲು" ಹಾಗೂ "ಚುನಾವಣಾ ಪ್ರಚಾರದ ಸಮಯದಲ್ಲಿ ಯಾವುದೇ ವಿಮುಖತೆ ಉಂಟಾಗದಿರಲು" ಈ ಪ್ರಚಾರದಿಂದ ರಜೆ ತೆಗೆದುಕೊಂಡು ಹೋದರು.[೨೦]
ಬ್ಯೂಕ್ಯಾನನ್ ಸೆನೇಟರ್ ಬಾಬ್ ಡೋಲ್ ರನ್ನು ಸುಮಾರು 3000 ಮತಗಳ ಅಂತರದಿಂದ ಸೋಲಿಸುವುದರ ಮೂಲಕ ನ್ಯೂ ಹ್ಯಾಂಪ್ ಷೈರ್ ಪ್ರಾಥಮಿಕದಲ್ಲಿ ಜಯಗಳಿಸಿ ತಮ್ಮ ಚುನಾವಣಾ ಕಾರ್ಯಕ್ರಮಕ್ಕೆ ಪ್ರಬಲವಾದ ಚಾಲನೆ ನೀಡಿದರು. ಅವರು ಇನ್ನೂ ಮೂರು ರಾಜ್ಯ(ಅಲಾಸ್ಕಾ, ಮಿಸೌರಿ ಮತ್ತು ಲೂಯಿಸೀನಿಯಾ)ಗಳಲ್ಲಿ ಜಯಗಳಿಸಿ ಲೋವಾ ಕಾಕಸ್ ನಲ್ಲಿ ಮಾತ್ರ ಡೋಲ್ ಗಿಂತಲೂ ಕೊಂಚ ಹಿಂದೆ ಬಿದ್ದರು. ಅವರ ಕ್ರಾಂತಿಕಾರಿ ಪ್ರಚಾರವು ಅವರ ಮೇಲೇರುತ್ತಿದ್ದ ವಾಗ್ಧಾಳಿಯನ್ನು ಉಪಯೋಗಿಸಿಕೊಳ್ಳುತ್ತಾ ವರ್ಷಗಳಿಂದಲೂ ಪಕ್ಷದ ಮೇಲೆ ಹತೋಟಿ ಹೊಂದಿದ್ದುದೆಂದು ಬ್ಯೂಕ್ಯಾನನ್ ನಂಬಿದ್ದ ಶೂನ್ಯತರವಾದ ವಾಷಿಂಗ್ಟನ್ ವ್ಯವಸ್ಥೆ(ಅದರ ಸಾಕಾರದಂತಿದ್ದ ಡೋಲ್)ಯ ವಿರುದ್ಧ ತೃಣಮೂಲ ಬಲಪಂಥೀಯ ಅಭಿಪ್ರಾಯಗಳನ್ನು ತಿರುಗಿಸುವಲ್ಲಿ ಸಹಕಾರಿಯಾಯಿತು. ನಂತರ ನಷುವಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಇಂತೆಂದರು:
“ | We shocked them in Alaska. Stunned them in Louisiana. Stunned them in Iowa. They are in a terminal panic. They hear the shouts of the peasants from over the hill. All the knights and barons will be riding into the castle pulling up the drawbridge in a minute. All the peasants are coming with pitchforks. We're going to take this over the top.[೨೧] | ” |
ಪ್ರಚಾರಕಾರ್ಯದಲ್ಲಿ ತೊಡಗಿದ್ದಾಗ ಅವರು ಅವರ ಬೆಂಬಲಿಗರೊಂದಿಗೆ ಒಂದು ಘೋಷಣೆಯನ್ನು ಹಂಚಿಕೊಳ್ಳುತ್ತಿದ್ದರು, "ರೈತರು ಪಿಚ್ ಫೋರ್ಕ್ (ಕೃಷಿ ಸಾಧನ)ಗಳೊಡನೆ ಬರುತ್ತಿದ್ದಾರೆ", ಕೆಲವೊಮ್ಮೆ ಆ ಕೃಷಿಸಾಧನದ ಲಾಂಛನದೊಂದಿಗೂ ಕಾಣಿಸಿಕೊಳ್ಳುತ್ತಿದ್ದರು.
ಆದರೆ ಸೂಪರ್ ಮಂಗಳವಾರದ ಪ್ರಾಥಮಿಕಗಳಲ್ಲಿ ಡೋಲ್ ಬ್ಯೂಕ್ಯಾನನ್ ರನ್ನು ದೊಡ್ಡ ಅಂತರಗಳಿಂದ ಸೋಲಿಸಿದರು. ರಿಪಬ್ಲಿಕನ್ ಪ್ರಾಥಮಿಕದ ಹಂತದಲ್ಲಿ ಕೇವಲ ಇಪ್ಪತ್ತೊಂದು ಪ್ರತಿಶತ ಮತಗಳನ್ನು ಗಳಿಸಿದ ಬ್ಯೂಕ್ಯಾನನ್ ಮಾರ್ಚ್ ನಲ್ಲಿ ತಮ್ಮ ಚುನಾವಣಾ ಕಾರ್ಯವನ್ನು ರದ್ದುಗೊಳಿಸಿದರು. ಆದಾಗ್ಯೂ ಡೋಲ್ ಪರ-ಆಯ್ಕೆಗಾಗಿ ಬ್ಯೂಕ್ಯಾನನ್ ಸಹ-ಸ್ಪರ್ಧಿಸುವುದನ್ನು ಇಚ್ಛಿಸಿದಲ್ಲಿ [ಸೂಕ್ತ ಉಲ್ಲೇಖನ ಬೇಕು]ತಾನು ಯು.ಎಸ್.ಟ್ಯಾಕ್ಸ್ ಪೇಯರ್ಸ್ ಪಕ್ಷ(ಈಗ ಕಾಂಸ್ಟಿಟ್ಯೂಷನ್ ಪಕ್ಷ)ದ ಅಭ್ಯರ್ಥಿಯಾಗಿ ನಿಲ್ಲುವುದಾಗಿ ಘೋಷಿಸಿದರು. ಆದರೆ ಡೋಲ್ ಜ್ಯಾಕ್ ಕೆಂಪ್ ರನ್ನು ಆಯ್ಕೆ ಮಾಡಿಕೊಂಡರು ಮತ್ತು ಬ್ಯೂಕ್ಯಾನನ್ ಅದನ್ನು ಅನುಮೋದಿಸಿದರು. 1996ರ ಚುನಾವಣಾಕಾರ್ಯದ ನಂತರ ಬ್ಯೂಕ್ಯಾನನ್ ತಮ್ಮ ಅಂಕಣ ಮತ್ತು ಕ್ರಾಸ್ ಫೈರ್ ಗೆ ಮರಳಿದರು. ಅಲ್ಲದೆ 1998ರ ದ ಗ್ರೇಟ್ ಬಿಟ್ರೇಯಲ್ ನೊಂದಿಗೆ ಪುಸ್ತಕಗಳ ಸರಮಾಲೆಯನ್ನೇ ಆರಂಭಿಸಿದರು.
2000ದ ಅಧ್ಯಕ್ಷೀಯ ಚುನಾವಣಾಕಾರ್ಯ
[ಬದಲಾಯಿಸಿ]ಬ್ಯೂಕ್ಯಾನನ್ ತಾವು ರಿಪಬ್ಲಿಕನ್ ಪಕ್ಷದಿಂದ ಹೊರಹೋಗುತ್ತಿರುವುದಾಗಿ 1999ರಲ್ಲಿ ಘೋಷಿಸುತ್ತಾ ಆ ಪಕ್ಷವು (ಡೆಮೋಕ್ರಾಟ್ ಗಳಂತೆಯೇ) "ಬೆಲ್ಟ್ ವೇ ಪಕ್ಷ"ವೆಂದು ಲೇವಡಿ ಮಾಡಿದರು. ರಿಫಾರ್ಮ್ ಪಕ್ದದಿಂದ ನೇಮಕಾತಿಯನ್ನು ಅವರು ಬಯಸಿದರು. ಹಲವಾರು ರಿಪಾರ್ಮರ್ ಗಳು ಉತ್ಕೃಷ್ಟ ಧ್ಯಾನವನ್ನೇ ತಮ್ಮ ನೆಲೆಗಟ್ಟಾಗಿರಿಸಿಕೊಂಡಿದ್ದ ಲೋವಾದ ಭೌತಶಾಸ್ತ್ರಜ್ಞ ಜಾನ್ ಹ್ಯಾಗೆಲಿನ್ ರನ್ನು ಬೆಂಬಲಿಸಿದರು. ಪಕ್ಷದ ಸ್ಥಾಪಕರಾದ ರಾಸ್ ಪೆರೋಟ್ ಯಾವುದೇ ಅಬ್ಯರ್ಥಿಯನ್ನು ಸೂಚಿಸಲಿಲ್ಲ, ಆದರೆ ಅವರ ಮಾಜಿ ಸಹ-ಸ್ಪರ್ಧಿ ಪ್ಯಾಟ್ ಷೊಯೇಟ್ ಬ್ಯೂಕ್ಯಾನನ್ ರನ್ನು ಬೆಂಬಲಿಸಿದರು.
ಬಹಳ ದೊಡ್ಡ ಅಂತರದಿಂದ ಬ್ಯೂಕ್ಯಾನನ್ ರ ಪರವಾಗಿದ್ದ ಪಕ್ಷದ ಮುಕ್ತ ಪ್ರಾಥಮಿಕ(ಚುನಾವಣೆ)ದ ಫಲಿತಾಂಶವನ್ನು ಹ್ಯಾಗೆಲಿನ್ ನ ಬೆಂಬಲಿಗರು ನಿರಾಕರಿಸುತ್ತಾ ಅದು "ಕಲುಷಿತವಾದುದು" ಎಂದು ಆರೋಪಿಸಿದರು. ರಿಫಾರ್ಮ್ ಪಕ್ಷದ ವಿಭಾಗಗಳು ಲಾಂಗ್ ಬೀಚ್ ಕಂವೆಂಷನ್ ಸೆಂಟರ್ ನ ಸಂಕೀರ್ಣದ ಹಲವಾರು ಭಾಗಗಳಲ್ಲಿ ಏಕಕಾಲದಲ್ಲಿ ವಿವಿಧ ಸಭೆಗಳನ್ನು ನಡೆಸಿದವು. ಎಲ್ಲಾ ಸಭೆಗಳ ಪ್ರಮುಖರೂ ಪ್ರಾಥಮಿಕ ಆಯ್ಕೆಯ ಫಲಿತಾಂಶಗಳನ್ನು ಬದಿಗೊತ್ತಿ, ಮತ್ತೆ ತಮ್ಮ ಅಧ್ಯಕ್ಷೀಯ ಅಭ್ಯರ್ಥಿಯನ್ನು ವೇದಿಕೆಯಲ್ಲೇ, ರಿಪಬ್ಲಿಕನ್ ಹಾಗೂ ಡೆಮೋಕ್ರಾಟಿಕ್ ಸಭೆಗಳ ಮಾದರಿಯಲ್ಲಿಯೇ, ಚುನಾಯಿಸಲು ನಿರ್ಧರಿಸಿದರು. ಒಂದು ಸಭೆಯು ಬ್ಯೂಕ್ಯಾನನ್ ರನ್ನು ನೇಮಿಸಿದರೆ ಮತ್ತೊಂದು ಹ್ಯಾಗೆಲಿನ್ ರನ್ನು ಬೆಂಬಲಿಸಿತು, ಮತ್ತು ಎರಡೂ ಸಭೆಗಳು ತಾವೇ ಕಾನೂನುಬದ್ಧ ರಿಪಾರ್ಮ್ ಪಕ್ಷವೆಂದು ಸಾರಿಕೊಳ್ಳಲಾರಂಭಿಸಿದವು.
ಕಡೆಗೆ, ಸಂಯುಕ್ತ ಸಂಸ್ಥಾನ ಚುನಾವಣಾ ಆಯೋಗವು ಬ್ಯೂಕ್ಯಾನನ್ ರಿಫಾರ್ಮ್ ಪಕ್ಷದಿಂದ ಚುನಾವಣಾ ಅಭ್ಯರ್ಥಿಯ ಸ್ಥಾನವನ್ನು ಪಡೆಯಬೇಕೆಂದು ತೀರ್ಪು ನೀಡುತ್ತಾ 1996ರ ಚುನಾವಣೆಯಲ್ಲಿ ಪೆರೋಟ್ ರ ಪ್ರದರ್ಶನದಿಂದ ಸಂದಾಯವಾದ ಸಂಯುಕ್ತ ಪ್ರಚಾರ ವಿತ್ತದಿಂದ $12.6 ಮಿಲಿಯನ್ ಹಣವನ್ನೂ ಪಡೆಯಬೇಕೆಂದು ತೀರ್ಪು ನೀಡಿತು; ಬ್ಯೂಕ್ಯಾನನ್ ನಾಮಕಾತಿಯನ್ನು ಜಯಿಸಿದರು. ತಮ್ಮ ಸ್ವೀಕೃತಿ ಭಾಷಣದಲ್ಲಿ ಬ್ಯೂಕ್ಯಾನನ್ ಯುನೈಟೆಡ್ ನೇಷನ್ಸ್ ನಿಂದ ಯು.ಎಸ್. ಹೊರಬರಬೇಕೆಂಬ ಅಭಿಪ್ರಾಯ ಮಂಡಿಸುತ್ತಾ ಯು.ಎನ್ ಅನ್ನು ನ್ಯೂ ಯಾರ್ಕ್ ನಿಂದ ಉಚ್ಛಾಟಿಸಬೇಕು, ಆಂತರಿಕ ತೆರಿಗೆ ವ್ಯವಸ್ಥೆಯನ್ನು ಬಹಿಷ್ಕರಿಸಬೇಕು, ಶಿಕ್ಷಣ ಇಲಾಖೆ, ಶಕ್ತಿ ಇಲಾಖೆ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಗಳನ್ನು ವೃದ್ಧಿಗೊಳಿಸಬೇಕು, ವಂಶಪಾರಂಪಾರಿಕ ಹಾಗೂ ಬಂಡವಾಳಗಳ ಮೇಲಿನ ಆದಾಯದ ಮೇಲೆ ತೆರಿಗೆ ವಿಧಿಸಬೇಕು ಮತ್ತು ಸಕಾರಾತ್ಮಕವಾದ ಕಾರ್ಯಗಳನ್ನು ಹಮ್ಮಿಕೊಳ್ಳಬೇಕೆಂದು ಯೋಜನೆಯ ಪಟ್ಟಿಯನ್ನೇ ಸಾರಿದರು.
ಅವರ ಸಹ-ಸ್ಪರ್ಧಿಯಾಗಿ ಲಾಸ್ ಏಂಜಲೀಸ್ ನ ಆಫ್ರಿಕನ್-ಅಮೆರಿಕನ್ ಚಟುವಟಿಕೆಗಳಲ್ಲಿ ನಿರತರಾದ ಮತ್ತು ವಿಶ್ರಾಂತ ಶಿಕ್ಷಕರಾದ ಎಝೋಲಾ ಬಿ. ಫೋಸ್ಟರ್ ರನ್ನು ಆಯ್ದುಕೊಂಡರು. ಈ ಚುನಾವಣಾ ಓಟದಲ್ಲಿ ಅವರನ್ನು ಸೋಷಿಯಲಿಸ್ಟ್ ಪಕ್ದ ಯುಎಸ್ ಎ ಯಿಂದ ಮುಂದಿನ ದಿನಗಳಲ್ಲಿ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಿದ ಬ್ರಿಯಾನ್ ಮೂರ್ ರವರ ಬೆಂಬಲ ದೊರೆಯಿತು; 2008ರಲ್ಲಿ ಮೂರ್ ಮಾತನಾಡುತ್ತಾ ಅವರು 2000ದಲ್ಲಿ ಬ್ಯೂಕ್ಯಾನನ್ ರನ್ನು ಬೆಂಬಲಿಸಲು ಕಾರಣ "ಅವರು ಮುಕ್ತ ವ್ಯಾಪಾರಕ್ಕಿಂತಲೂ ನ್ಯಾಯಯುತ ವ್ಯಾಪಾರದ ಪರವಾಗಿದ್ದರು. ಅವರಲ್ಲಿ ಕೆಲವು ಅಭಿವೃದ್ಧಿಕಾರಕ ವ್ಯವಸ್ಥೆಗಳಿದ್ದು ಅವು ಸಾಮಾನ್ಯ ಜನರಿಗೆ ಅನುಕೂಲಕರವಾಗುವುವೆಂದು ನನಗೆನ್ನಿಸಿತ್ತು" ಎಂದು ನುಡಿದರು.[೨೨] ಆಗಸ್ಟ್ 19ರಂದು ದ ನ್ಯೂ ಯಾರ್ಕ್ ರೈಟ್ ಟು ಲೈಫ್ ಪಕ್ಷವು, ತಾತ್ವಿಕವಾಗಿ, ಬ್ಯೂಕ್ಯಾನನ್ ರನ್ನು ತಮ್ಮ ಪಕ್ಷದಿಂದ ನೇಮಕಾತಿ ಮಾಡಿತು; ಆ ಜಿಲ್ಲೆಯ 90% ಜನರು ಇದರ ಪರವಾಗಿ ಮತ ಚಲಾಯಿಸಿದ್ದರು.[೨೩]
2000ದ ಅಧ್ಯಕ್ಷೀಯ ಚುನಾವಣೆಯಲ್ಲಿ ಬ್ಯೂಕ್ಯಾನನ್ ಜನಪ್ರಿಯ ಮತದ 0.4% ಮತವಾದ 449,895 ಮತಗಳನ್ನು ಗಳಿಸಿ ನಾಲ್ಕನೆಯ ಸ್ಥಾನ ಪಡೆದರು. (ಹ್ಯಾಗೆಲಿನ್ ನ್ಯಾಚುರಲ್ ಲಾ ಪಕ್ಷದ ಅಭ್ಯರ್ಥಿಯಾಗಿ 0.1 ಪ್ರತಿಶತ ಮತವನ್ನು ಪಡೆದರು.) ಫ್ಲೋರಿಡಾದ ಪಾಮ್ ಬೀಚ್ ಕೌಂಟಿಯಲ್ಲಿ ಬ್ಯೂಕ್ಯಾನನ್ 3407 ಮತ—ಗಳನ್ನು ಗಳಿಸಿದುದು ಪಾಮ್ ಬೀಚ್ ಕೌಂಟಿಯ ಸ್ವತಂತ್ರ ಕಲಿಕೆ, ಅದರ ಬೃಹತ್ ಯಹೂದಿ ಜನಸಂಖ್ಯೆ ಮತ್ತು ಬ್ಯೂಕ್ಯಾನನ್ ರ ರಾಜ್ಯದ ಇತರ ಪ್ರದೇಶಗಳಿಗೆ ಹೋಲಿಕೆಯಾಗುವ ರೀತಿಯಲ್ಲಿಲ್ಲವೆಂದು ಕೆಲವರು ಅಭಿಪ್ರಾಯ ಪಟ್ಟರು. ಈಗ ಕುಖ್ಯಾತವಾಗಿರುವ ಕೌಂಟಿಯ "ಬಟರ್ ಫ್ಲೈ ಬ್ಯಾಲಟ್" ನ ಪರಿಣಾಮವಾಗಿ ಅವರಿಗೆ ಅಲಕ್ಷ್ಯದ ಕಾರಣ ಅಷ್ಟೊಂದು ಮತಗಳು ಬಿದ್ದವೆಂದು ಶಂಕಿಸಲಾಯಿತು. ಬುಷ್ ರ ಬಾತ್ಮೀದಾರ ಆರಿ ಫ್ಲೀಷರ್ "ಪಾಮ್ ಬೀಚ್ ಕೌಂಟಿಯು ಬ್ಯೂಕ್ಯಾನನ್ ರ ಪ್ರಬಲ ಸ್ಥಾನವಾಗಿದೆಯಾದ್ದರಿಂದ ಅವರಿಗೆ 3407 ಮತಗಳು ದೊರೆತವು" ಎಂದರು. ಆದರೆ ರಿಫಾರ್ಮ್ ಪಕ್ಷದ ಅಧಿಕಾರಿಗಳು ಇದನ್ನು ಬಲವಾಗಿ ನಿರಾಕರಿಸುತ್ತಾ ಆ ಕೌಂಟಿಯಲ್ಲಿ ಇವರಿಗೆ 400ರಿಂದ 500 ಬೆಂಬಲಿಗರಿರಬಹುದಷ್ಟೆ ಎಂದರು. ದ ಟುಡೇ ಷೋ ನಲ್ಲಿ ಕಾಣಿಸಿಕೊಂಡ ಬ್ಯೂಕ್ಯಾನನ್ ಇಂತೆಂದರು:
“ | When I took one look at that ballot on Election Night. . . it's very easy for me to see how someone could have voted for me in the belief they voted for Al Gore.[೨೪] | ” |
ಕೆಲವು ವೀಕ್ಷಣಕಾರರು ಅವರ ಚುನಾವಣಾಕಾರ್ಯವು ಅವರ ಸಂದೇಶಗಳು ಬಿಳಿಯರ ನೆಲೆಗಟ್ಟನ್ನು ದಾಟಿ ಹೋಗಲು ಗುರಿ ಇರಿಸಿದಂತಿದ್ದವು, ಆದರೆ ಅವರ ದೃಷ್ಟಿಕೋನ ಬದಲಾಗಿರಲಿಲ್ಲ ಎಂದರು.[೨೫]
2000ದ ಚುನಾವಣೆಗಳ ನಂತರ ರಿಫಾರ್ಮರ್ ಗಳು ಬ್ಯೂಕ್ಯಾನನ್ ರನ್ನು ಪಕ್ಷದೊಳಗೆ ಸಕ್ರಿಯವಾದ ಪಾತ್ರ ವಹಿಸಲು ಒತ್ತಾಯಿಸಿದರು. ಬ್ಯೂಕ್ಯಾನನ್ ನಿರಾಕರಿಸಿದರಾದರೂ 2001ರ ಸಮಾವೇಶದಲ್ಲಿ ಹಾಜರಿದ್ದರು. ಮುಂದಿನ ಕೆಲವು ವರ್ಷಗಳಲ್ಲಿ ಅವರು ತಮ್ಮನ್ನು ರಾಜಕೀಯವಾಗಿ ಸ್ವತಂತ್ರರೆಂದು ಗುರುತಿಸಿಕೊಂಡರು, ನಿಯೋ-ಕನ್ಸರ್ವೇಟಿವ್ ರಿಪಬ್ಲಿಕನ್ ಪಕ್ಷವೆಂದು ಅವರು ಕರೆಯುತ್ತಿದ್ದ ಪಕ್ಷದ ಮುಖಂಡತ್ವಕ್ಕೆ ಅಂಟಿಕೊಳ್ಳದೆ ಪಕ್ಷಗಳಿಂದ ದೂರವಿರಲು ನಿರ್ಧರಿಸಿದರು. 2004ರ ಚುನಾವಣೆಗಳಿಗೆ ಮುಂಚೆ, ಬ್ಯೂಕ್ಯಾನನ್ ಅವರು ಮತ್ತೆ ತಮ್ಮನ್ನು ರಿಪಬ್ಲಿಕನ್ ಎಂದು ಘೋಷಿಸಿಕೊಂಡರು, ಮತ್ತೆ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಲು ತಮಗೆ ಬಯಕೆಯಿಲ್ಲವೆಂದು ಸಾರಿದರು ಮತ್ತು ಮನಸ್ಸಿಲ್ಲದ ಮನಸ್ಸಿನಿಂದ ಬುಷ್ ರ 2004ರ ಮರು-ಆಯ್ಕೆಯನ್ನು ಅನುಮೋದಿಸುತ್ತಾ, ಹೀಗೆ ಬರೆದರು:
“ | Bush is right on taxes, judges, sovereignty, and values. Kerry is right on nothing.[೨೬] | ” |
ಮರಳಿ ಖಾಸಗಿ ಜೀವನಕ್ಕೆ
[ಬದಲಾಯಿಸಿ]MSNBC ವಿವರಣಕಾರ
[ಬದಲಾಯಿಸಿ]CNN ಅವರನ್ನು ಮತ್ತೆ ಬರಮಾಡಿಕೊಳ್ಳಲು ಬಯಸದಿದ್ದರೂ, ಬ್ಯೂಕ್ಯಾನನ್ ರ ಅಂಕಣ ಪುನರಾರಂಭವಾಯಿತು.[೨೭] ಕ್ರಾಸ್ ಫೈರ್ ನ ದೀರ್ಘವಾದ ಅವತರಣಿಕೆಯನ್ನು MSNBCಯು ಬ್ಯೂಕ್ಯಾನನ್ ಎಂಡ್ ಪ್ರೆಸ್ ಎಂಬ ಹೆಸರಿನಲ್ಲಿ ಜುಲೈ ೧೫, 2002ರಂದು ಪ್ರಸಾರ ಮಾಡಿ, ಬ್ಯೂಕ್ಯಾನನ್ ಮತ್ತು ಪ್ರೆಸ್ ರನ್ನು ಮತ್ತೆ ಒಂದಾಗಿಸಿತು. "ಸ್ಮಾರ್ಟೆಸ್ಟ್ ಅವರ್ ಆನ್ ಟೆಲಿವಿಷನ್" ಎಂದೇ ಖ್ಯಾತವಾದ ಬ್ಯೂಕ್ಯಾನನ್ ಎಂಡ್ ಪ್ರೆಸ್ ಕಾರ್ಯಕ್ರಮವು ಈರ್ವರೂ ಅತಿಥಿಗಳನ್ನು ಸಂದರ್ಶಿಸುವುದು ಮತ್ತು ಪ್ರಮುಖ ಹೊಸ ಸುದ್ದಿಗಳ ಬಗ್ಗೆ ವಾದಿಸುವುದನ್ನು ಒಳಗೊಂಡಿತ್ತು. ಇರಾಕ್ ಯುದ್ಧವು ಸಮೀಪಿಸಿದಂತೆ, ಬ್ಯೂಕ್ಯಾನನ್ ಮತ್ತು ಪ್ರೆಸ್ ತಮ್ಮ ವೈರವನ್ನು ತಗ್ಗಿಸಿಕೊಂಡರು; ಇದಕ್ಕೆ ಕಾರಣವೆಂದರೆ ಇಬ್ಬರೂ ಆ ಆಕ್ರಮಣದ ವಿರೋಧಿಗಳೇ ಆಗಿದ್ದರು. ಆ ಯೋಜಿತ ಆಕ್ರಮಣದ ಬಗ್ಗೆ ಚರ್ಚಿಸಿದ ಮೊದಲ ಕೇಬಲ್ ಅತಿಥೇಯರು ತಾವೇ ಎಂದು ಪ್ರೆಸ್ ಹೇಳುತ್ತಾರೆ.[೨೮] MSNBCಯ ಮುಖ್ಯ ಸಂಪಾದಕರಾದ ಜೆರಿ ನಾಚ್ ಮನ್ ಒಮ್ಮೆ ವಿನೋದವಾಗಿ ಈ ಅಸಾಮಾನ್ಯ ಪರಿಸ್ಥಿತಿಯ ಬಗ್ಗೆ ಪೇಚಾಡುತ್ತಾ ಹೀಗೆ ಹೇಳಿದರು:
“ | So the point is why does only Fox [News Channel] get this? At least, we work at the perfect place, the place that's fiercely independent. We try to have balance by putting you two guys together and then this Stockholm syndrome love fest set in between the two of you, and we no longer even have robust debate.[೨೯] | ” |
ಅವರ ಚೊಚ್ಚಲ ಟಾಕ್ ಷೋ ಆದ ಕೆಲವೇ ಗಂಟೆಗಳಲ್ಲಿ, ಬ್ಯೂಕ್ಯಾನನ್ MSNBCಯ ದೌರ್ಭಾಗ್ಯ-ಭರಿತ ಡೋನಾಹ್ಯೂ ಕಾರ್ಯಕ್ರಮದ ಪ್ರಥಮ ಪ್ರದರ್ಶನದಲ್ಲಿ ಅತಿಥಿಯಾಗಿ ಕಾಣಿಸಿಕೊಂಡರು. ಅತಿಥೇಯ ಫಿಲ್ ಡೋನಾಹ್ಯೂ ಮತ್ತು ಬ್ಯೂಕ್ಯಾನನ್ ಚರ್ಚ್ ಮತ್ತು ರಾಜ್ಯದ ವಿಭಜನೆಯ ಬಗ್ಗೆ ಚರ್ಚಿಸಿದರು. ಬ್ಯೂಕ್ಯಾನನ್ ಡೋನಾಹ್ಯೂರನ್ನು "ಡಿಕ್ಟೇಟೋರಿಯಲ್" [೩೦] ಎಂದು ಕರೆದರು ಮತ್ತು ಅವರು ತಮ್ಮ ಕೆಲಸವನ್ನು ಸಕಾರಾತ್ಮಕ ಕ್ರಿಯೆಗಳಿಂದ ಗಿಟ್ಟಿಸಿದರು ಎಂದು ಲೇವಡಿ ಮಾಡಿದರು.[೩೧]
MSNBCಯ ಅಧ್ಯಕ್ಷ ಎರಿಕ್ ಸೋರೆನ್ಸನ್ ಬ್ಯೂಕ್ಯಾನನ್ ಎಂಡ್ ಪ್ರೆಸ್ ಅನ್ನು ನವೆಂಬರ್ 26, 2003ರಂದು ನಿಲ್ಲಿಸಿದ ಮೇಲೆ, ಬ್ಯೂಕ್ಯಾನನ್ MSNBCಯಲ್ಲಿ ರಾಜಕೀಯ ವಿಶ್ಲೇಷಕರಾಗಿ ಮುಂದುವರಿದರು. ಆ ನೆಟ್ ವರ್ಕ್ ನ ಟಾಕ್ ಷೋಗಳಲ್ಲಿ ಬ್ಯೂಕ್ಯಾನನ್ ನಿಯತವಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಸಂದರ್ಭ ಬಿದ್ದಾಗ, MSNBCಯಲ್ಲಿದ್ದಾಗ, ರಾತ್ರಿಯ ಕಾರ್ಯಕ್ರಮವಾದ ಸ್ಕಾರ್ಬೊರೋ ಕಂಟ್ರಿ ಯಲ್ಲಿ ಪಾತ್ರವಹಿಸುತ್ತಿದ್ದರು. ಬ್ಯೂಕ್ಯಾನನ್ ಈಗ ಆಗಾಗ್ಗೆ ಅತಿಥಿ ಮತ್ತು ಸಹ-ಅತಿಥೇಯರಾಗಿ ಮಾರ್ನಿಂಗ್ ಜೋ ಹಾಗೂ ಹಾರ್ಡ್ ಬಾಲ್ ಗಳಲ್ಲಿ, 1600 ಪೆನ್ಸಿಲ್ವೇನಿಯಾ ಅವಿನ್ಯೂ , ಮತ್ತು ರಾಷೆಲ್ ಮ್ಯಾಡ್ಡೋ ಷೋ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಸೆಪ್ಟೆಂಬರ್ 2009ರಲ್ಲಿ MSNBCಯು ಯಹೂದಿ ಸಂಸ್ಥೆಗಳಿಂದ ದೂರುಗಳು ಬಂದುದರಿಂದ ಬ್ಯೂಕ್ಯಾನನ್ ರ ಅಭಿಪ್ರಾಯಗಳ ಅಂಕಣವೊಂದನ್ನು ಜಾಲತಾಣದಿಂದ ತೆಗೆದುಹಾಕಿತು.[೩೨] ಬ್ಯೂಕ್ಯಾನನ್ ಜರ್ಮನಿಯು ಪೋಲ್ಯಾಂಡ್ ನ ಮೇಲೆ ಆಕ್ರಮಣ ಮಾಡಿದ 70ನೆಯ ವಾರ್ಷಿಕಾಚರಣೆಯ ಸಂದರ್ಭವನ್ನು ಉಪಯೋಗಿಸಿಕೊಂಡು ಬ್ರಿಟನ್ ಜರ್ಮನಿಯ ಮೇಲೆ ಯುದ್ಧ ಸಾರಬಾರದಿತ್ತೆಂಬ ವಾದವನ್ನು ಮಂಡಿಸಿದ್ದರು.[೩೩]
ದ ಅಮೆರಿಕನ್ ಕನ್ಸರ್ವೇಟಿವ್ ಪತ್ರಿಕೆ
[ಬದಲಾಯಿಸಿ]ಆರ್ಥಿಕ, ವಿದೇಶ ಪ್ರಯಾಣ ಕಾಯಿದೆ ಮತ್ತು ವಿದೇಶಾಂಗ ನೀತಿಯ ಬಗ್ಗೆ ಕನ್ಸರ್ವೇಟಿವ್ ಪಕ್ಷೆ ಹೊಂದಿರುವ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸಲು ಬ್ಯೂಕ್ಯಾನನ್ ಮಾಜಿ ನ್ಯೂ ಯಾರ್ಕ್ ಪೋಸ್ಟ್ ಸಂಪಾದಕೀಯ ಪುಟದ ಸಂಪಾದಕ ಸ್ಕಾಟ್ ಮೆಕ್ಕಾನೆಲ್ ಮತ್ತು ಆರ್ಥಿಕ ವ್ಯವಹಾರಸ್ಥ ಟಾಕಿ ಥಿಯೊಡೊರಾಕೋಪ್ಯುಲಸ್ ರೊಡಗೂಡಿ 2002ರಲ್ಲಿ ಒಂದು ಹೊಸ ಪತ್ರಿಕೆಯನ್ನು ಹೊರಡಿಸಲು ನಿರ್ಧರಿಸಿದರು. ದ ಅಮೆರಿಕನ್ ಕನ್ಸರ್ವೇಟಿವ್ ನ ಮೊದಲ ಸಂಚಿಕೆಯು ಅಕ್ಟೋಬರ್ 7, 2002ರಂದು ಹೊರಬಂದಿತು . ಈ ಪತ್ರಿಕೆಯೊಡಗಿನ ಬ್ಯೂಕ್ಯಾನನ್ ರ ಸಂಬಂಧ 2007ರಲ್ಲಿ ಕೊನೆಗೊಂಡಿತು.
ಇತರ ಚಟುವಟಿಕೆಗಳು
[ಬದಲಾಯಿಸಿ]ಪತ್ರಕರ್ತ ಮತ್ತು ಚಲನಚಿತ್ರ ನಿರ್ಮಾಪಕ ಅಲೆಕ್ಸ್ ಜೋನ್ಸ್ ರ ರೇಡಿಯೋ ಕಾರ್ಯಕ್ರಮದಲ್ಲಿ ಅವರನ್ನು ಸಂದರ್ಶಿಸಲಾಗಿತ್ತು.[೩೪]
ರಾಜಕೀಯ ಸ್ಥಾನಗಳು
[ಬದಲಾಯಿಸಿ]ಚುನಾವಣಾ ಇತಿಹಾಸ
[ಬದಲಾಯಿಸಿ]ಇವನ್ನೂ ಗಮನಿಸಿ
[ಬದಲಾಯಿಸಿ]- ಕಾಂಸ್ಟಿಟ್ಯೂಷನ್ ಪಕ್ಷ (ಯುನೈಟೆಡ್ ಸ್ಟೇಟ್ಸ್)
- ಸಾಂಸ್ಕೃತಿಕ ಕಾಳಗ
- ಇಝೋಲಾ ಬಿ. ಫಾಸ್ಟರ್
- ಗ್ಲೋಬ್-ಡೆಮೋಕ್ರಾಟ್
- ಅ-ಮಧ್ಯಸ್ಥಿಕೆ
- ಹಳೆಯ ಹಕ್ಕು (ಯುನೈಟೆಡ್ ಸ್ಟೇಟ್ಸ್)
- ಪ್ಯಾಲಿಯೋಕನ್ಸರ್ವೇಟಿಸಂ
- Populism
- ಆರ್ಥಿಕ ರಕ್ಷಣಾ ನೀತಿ
- ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ರಿಫಾರ್ಮ್ ಪಕ್ಷ
ಆಕರಗಳು
[ಬದಲಾಯಿಸಿ]- ↑ Foley, Michael (2007). American credo : the place of ideas in US politics. Oxford University Press US. p. 318. ISBN 0199232679.
- ↑ ೨.೦ ೨.೧ ದ ಆನ್ಸೆಸ್ಟ್ರಿ ಆಫ್ ಪ್ಯಾಟ್ ಬ್ಯೂಕ್ಯಾನನ್
- ↑ "Pat Buchanan Biography". Thomson Gale. Retrieved 2006-11-01.
- ↑ "Pat Buchanan". NNDB. Retrieved 2006-11-01.
- ↑ "ವೈ ಡೂ ದ ನಿಯೋಕಾನ್ಸ್ ಹೇಟ್ ಡಿಕ್ಸೀಸ್ ಸೋ?". Archived from the original on 2009-03-25. Retrieved 2010-06-07.
- ↑ ೬.೦ ೬.೧ ೬.೨ "The Iron Fist of Pat Buchanan". The Washington Post. 1992-02-17.
- ↑ "About Pat Bunchanan". Creators Syndicate. Retrieved 2007-01-21.
- ↑ "Buchanan Is Right On Trade Sanctions". Daily Policy Digest. National Center for Policy Analysis. 2000-01-03. Archived from the original on 2006-06-16. Retrieved 2010-06-07.
{{cite web}}
: Unknown parameter|=
ignored (help) - ↑ Bruan, Stephen (1994-12-18). "A Trial By Fire In The '60s". Los Angeles Times.
- ↑ ೧೦.೦ ೧೦.೧ ೧೦.೨ ೧೦.೩ ೧೦.೪ ೧೦.೫ Blumenthal, Sidney (1987-01-08). "Pat Buchanan and the Great Right Hope". Washington Post. p. C01. Retrieved 2006-11-01.
- ↑ ೧೧.೦ ೧೧.೧ Paulsen, Monte (1999-11-22). "Buchanan Inc". Nation. Retrieved 2006-11-01.
- ↑ "Nixon aides say Felt is no hero". MSNBC. 2005-06-01. Archived from the original on 2006-08-20. Retrieved 2006-11-01.
- ↑ 1992ರ ನಿಕ್ಸನ್ ಸಂದರ್ಶನ - ಭಾಗ 2, ಬುಷ್ ರ ವಿದೇಶಾಂಗ ನೀತಿ, CNN, ಏಪ್ರಿಲ್ 23, 1994 ಮತ್ತು ಲ್ಯಾರಿ ಕಿಂಗ್ ಲೈವ್ ಲೇಖನ #1102 (R-#469), CNN, ಏಪ್ರಿಲ್ 23, 1994.
- ↑ Is Buchanan Courting Bias? The Washington Post, February 29, 1992.
- ↑ quoted by Crossfire, CNN, February 24, 1992, Transcript # 514
- ↑ ಚಾರ್ಲೊಟ್ಟೆ ಹೇಯ್ಸ್ ಅಂಕಣ, ದ ವಾಷಿಂಗ್ಟನ್ ಟೈಮ್ಸ್ , ಜುಲೈ 27, 1990.
- ↑ Buchanan, Pat (1992-08-17). "1992 Republican National Convention Speech". Internet Brigade. Archived from the original on 2007-10-18. Retrieved 2006-11-04.
- ↑ Kuhn, David Paul (2004-10-18). "Buchanan Reluctantly Backs Bush". CBSNews.com. Archived from the original on 2006-12-14. Retrieved 2006-12-06.
- ↑ "The American Cause: About the Cause". The American Cause. Archived from the original on 2006-11-10. Retrieved 2006-11-04.
- ↑ ಆಪಾದನೆಗಳನ್ನು ಹೊತ್ತ ಬ್ಯೂಕ್ಯಾನನ್ ರ ಸಹಾಯಕ ಚುನಾವಣಾ ಪ್ರಚಾರದಿಂದ ಹೊರಹೋಗುತ್ತಾರೆ, ದ ಯೂನಿಯನ್ ಲೀಡರ್ " ಫೆಬ್ರವರಿ 16, 1996
- ↑ Republicans Wind Up Bare-Fisted Donnybrook in New Hampshire Archived 2012-01-11 ವೇಬ್ಯಾಕ್ ಮೆಷಿನ್ ನಲ್ಲಿ., by Brian Knowlton, International Herald Tribune, Tuesday, February 20, 1996
- ↑ "Q&A with Socialist Party presidential candidate Brian Moore". Independent Weekly. 2008-10-08. Archived from the original on 2016-01-04. Retrieved 2010-06-07.
- ↑ (2000-08-01) ರೈಟ್ ಟು ಲೈಫ್ ಪಕ್ಷವು ಬ್ಯೂಕ್ಯಾನನ್ ರನ್ನು ಆರಿಸಿತು, ಬ್ಯಾಲೆಟ್ ಆಕ್ಸಸ್ ನ್ಯೂಸ್.
- ↑ Tapper, Jake (2000-11-10). "Buchanan camp: Bush claims are "nonsense"". Salon. Archived from the original on 2008-10-11. Retrieved 2008-11-30.
Both McConnell and Cunningham say that they agree with the comments of Buchanan himself on Thursday's "Today" show
{{cite web}}
: Italic or bold markup not allowed in:|publisher=
(help) - ↑ "ಸಾಲನ್ ನ್ಯೂಸ್| ನಾಟ್ ಸ್ಟ್ಯಾಂಡಿಂಗ್ ಪ್ಯಾಟ್". Archived from the original on 2008-04-23. Retrieved 2010-06-07.
- ↑ Third parties seen as thread to Bush, Steve Miller, Washington Times September 10, 2004
- ↑ Kurtz, Howard (2006-05-01). "Tony Snow's Washington Merry-Go-Round". Washington Post. p. C01. Retrieved 2006-12-05.
- ↑ Bill Press. "Making Air-Waves". Archived from the original on 2006-11-07. Retrieved 2006-12-05.
- ↑ Buchanan and Press, November 19, 2002 broadcast.
- ↑ ಪೂರ್ಣ ಹೇಳಿಕೆ: "ಕಟ್ ಇಟ್ ಔಟ್, ಫಿಲ್. ವಾಟ್ ಯೂ ವಾಂಟ್ ಡನ್ ಈಸ್, ಐ ಸೇ ನೋ ಜ್ಯೂಯಿಷ್ ಕಿಡ್ ಕ್ಯಾನ್ ಬಿ ಪುಟ್ ಇನ್ ಎ ನೇಟಿವಿಟಿ ಪ್ಲೇ. ವಾಟ್ ಯೂ ವಾಂಟ್ ಡನ್ ಈಸ್ ನೋ ನೇಟಿವಿಟಿ ಪ್ಲೇ, ನೋ ಪ್ಲೆಡ್ಜ್ ಆಫ್ ಅಲಿಜಿಯೆನ್ಸ್, ನೋ ಬೈಬಲ್ ಇನ್ ಸ್ಕೂಲ್, ನೋ ಟೆನ್ ಕಮ್ಯಾಂಡ್ಮೆಂಟ್ಸ್. ಯೂ ಆರ್ ಡಿಕ್ಟೇಟೋರಿಯಲ್, ಫಿಲ್. ಯೂ ಆರ್ ಎ ಡಿಕ್ಟೇಟೋರಿಯಲ್ ಲಿಬರಲ್ ಎಂಡ್ ಯೂ ಡೋಟ್ ಈವನ್ ನೋ ಇಟ್."
- ↑ Acosta, Belinda (2002-07-26). "The Phil-ing Station". Austin Chronicle. Retrieved 2006-12-05.
- ↑ MSNBC ಹಿಟ್ಲರ್ ನನ್ನು ಸಮರ್ಥಿಸಿದ್ದ ಬ್ಯೂಕ್ಯಾನನ್ ರ ಅಂಕಣವನ್ನು ತೆಗೆದುಹಾಕುತ್ತದೆ Archived 2012-06-09 ವೇಬ್ಯಾಕ್ ಮೆಷಿನ್ ನಲ್ಲಿ. ಜ್ಯೂಯಿಷ್ ಟೆಲಿಗ್ರಾಫಿಕ್ ಏಜೆನ್ಸಿ 3 ಸೆಪ್ಟೆಂಬರ್ 2009
- ↑ MSNBC ಬ್ಯಾಕ್ಯಾನನ್ ರ ಅಂಕಣವನ್ನು ತಾಣದಿಂದ ತೆಗೆದುಬಿಡುತ್ತದೆ POLITICO 3 ಸೆಪ್ಟೆಂಬರ್ 2009.
- ↑ ""Alex Jones Interviews Pat Buchanan"". Archived from the original on ನವೆಂಬರ್ 19, 2009. Retrieved October 13, 2009.
ಪುಸ್ತಕಗಳು ಮತ್ತು ಲೇಖನಗಳು
[ಬದಲಾಯಿಸಿ]ಪುಸ್ತಕಗಳು
[ಬದಲಾಯಿಸಿ]- [[ಚರ್ಚಿಲ್, ಹಿಟ್ಲರ್, ಎಂಡ್ ದ ಅನ್ ನೆಸೆಸರಿ ವಾರ್: ಹೌ ಬ್ರಿಟನ್ ಲಾಸ್ಟ್ ಇಟ್ಸ್ ಎಂಪೈರ್ ಎಂಡ್ ದ ವೆಸ್ಟ್ ಲಾಸ್ಟ್ ದ ವರ್ಲ್ಡ್]] (ಮೇ 27, 2008) ISBN 0-307-40515-X
- ಡೇ ಆಫ್ ರೆಕನಿಂಗ್: ಹೌ ಹ್ಯುಬ್ರಿಸ್, ಐಡಿಯಾಲಜಿ, ಎಂಡ್ ಗ್ರೀಡ್ ಆರ್ ಟೇರಿಂಗ್ ಅಮೆರಿಕ ಅಪಾರ್ಟ್ (ನವೆಂಬರ್ 27, 2007) ISBN 0-312-37696-೦
- ಸ್ಟೇಟ್ ಆಫ್ ಎಮರ್ಜೆನ್ಸಿ: ದ ಥರ್ಡ್ ವರ್ಲ್ಡ್ ಇಂವೇಷನ್ ಎಂಡ್ ಕಾಂಕ್ವೆಸ್ಟ್ ಆಫ್ ಅಮೆರಿಕ (ಆಗಸ್ಟ್ 22, 2006) ISBN 0-312-36003-7
- ವೇರ್ ದ ರೈಟ್ ವೆಂಟ್ ರಾಂಗ್: ಹೌ ನಿಯೋಕನ್ಸರ್ವೇಟಿವ್ಸ್ ಸಬ್ವರ್ಟೆಡ್ ದ ರೇಗನ್ ರೆವಲ್ಯೂಷನ್ ಎಂಡ್ ಹೈಜ್ಯಾಕ್ಡ್ ದ ಬುಷ್ ಪ್ರೆಸಿಡೆನ್ಸಿ (2004) ISBN 0-312-34115-6
- ದ ಡೆತ್ ಆಫ್ ದ ವೆಸ್ಟ್: ಹೌ ಡೈಯಿಂಗ್ ಪಾಪ್ಯುಲೇಷನ್ಸ್ ಎಂಡ್ ಇಮ್ಮಿಗ್ರೆಂಟ್ ಇನ್ವೇಷನ್ಸ್ ಇಂಪೆರಿಲ್ ಅವರ್ ಕಂಟ್ರಿ ಎಂಡ್ ಸಿವಿಲಿಝೇಷನ್ (2002) ISBN 0-312-28548-6
- A Republic, Not an Empire: Reclaiming America's Destiny (1999) ISBN 0-89526-272-X
- ದ ಗ್ರೇಟ್ ಬಿಟ್ರೇಯಲ್: ಹೌ ಅಮೆರಿಕನ್ ಸಾವೆರಿನ್ಟಿ ಎಂಡ್ ಸೋಷಿಯಲ್ ಜಸ್ಟಿಸ್ ಆರ್ ಬೀಯಿಂಗ್ ಸ್ಯಾಕ್ರಿಫೈಸ್ಡ್ ಟು ದ ಗಾಡ್ಸ್ ಆಫ್ ದ ಗ್ಲೋಬಲ್ ಎಕಾನಮಿ (1998) ISBN 0-316-11518-5
- ರೈಟ್ ಫ್ರಂ ದ ಬಿಗಿನಿಂಗ್ (1988) ISBN 0-316-11408-1
- ಕನ್ಸರ್ವೇಟಿವ್ ವೋಟ್ಸ್, ಲಿಬರಲ್ ವಿಕ್ಟರೀಸ್: ವೈ ದ ರೈಟ್ ಹ್ಯಾಸ್ ಫೇಯ್ಲ್ಡ್ (1975) ISBN 0-8129-0582-2
- ದ ನ್ಯೂ ಮೆಜಾರಿಟಿ: ಪ್ರೆಸಿಡೆಂಟ್ ನಿಕ್ಸನ್ ಎಟ್ ಮಿಡ್-ಪ್ಯಾಸೇಜ್ (1973)
ಪ್ರಮುಖ ಭಾಷಣಗಳು
[ಬದಲಾಯಿಸಿ]- 1992ರ ರಿಪಬ್ಲಿಕನ್ ನ್ಯಾಷನಲ್ ಕಂವೆನ್ಷನ್ ನಲ್ಲಿನ ಪ್ರಾಸ್ತಾವಿಕ ನುಡಿ Archived 2007-10-18 ವೇಬ್ಯಾಕ್ ಮೆಷಿನ್ ನಲ್ಲಿ., ಆಗಸ್ಟ್ 17, 1992
- 1996ರ (ಚುನಾವಣಾ) ಪ್ರಚಾರದ ಘೋಷಣೆ, ಮಾರ್ಚ್ 20, 1995
- 1996ರ ಪ್ರಚಾರ ಭಾಷಣ, ಜಾರ್ಜಿಯಾ ಪ್ರೈಮರಿ ಸ್ಟಂಪ್ ಭಾಷಣ ಫೆಬ್ರವರಿ 29, 1996
- 2000ದ ಪ್ರಚಾರ ಘೋಷಣೆ Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ., ಮಾರ್ಚ್ 2, 1999
- 2000ರಲ್ಲಿ ರಿಫಾರ್ಮ್ ಪಕ್ಷದ ನೇಮಕಾತಿಯ ಸ್ವೀಕಾರ Archived 2008-10-09 ವೇಬ್ಯಾಕ್ ಮೆಷಿನ್ ನಲ್ಲಿ., ಆಗಸ್ಟ್ 12, 2000
- ಅಮೆರಿಕದ ಆತ್ಮಕ್ಕಾಗಿ ನಡೆದ ಸಾಂಸ್ಕೃತಿಕ ಯುದ್ಧ Archived 2011-07-30 ವೇಬ್ಯಾಕ್ ಮೆಷಿನ್ ನಲ್ಲಿ., ಸೆಪ್ಟೆಂಬರ್ 14, 1992
- ಡೆತ್ ಆಫ್ ದ ವೆಸ್ಟ್ Archived 2009-01-16 ವೇಬ್ಯಾಕ್ ಮೆಷಿನ್ ನಲ್ಲಿ., ಕಾಮನ್ ವೆಲ್ತ್ ಕ್ಲಬ್ ಭಾಷಣ ಜನವರಿ 14, 2002
- ಮುಕ್ತ ವ್ಯಾಪಾರ Archived 2012-03-21 ವೇಬ್ಯಾಕ್ ಮೆಷಿನ್ ನಲ್ಲಿ., ಚಿಕಾಗೋ ಸಂಪುಟದ ವಿದೇಶೀ ಸಂಬಂಧಗಳ ಕುರಿತಾದ ಭಾಷಣ ನವೆಂಬರ್ 18, 1998
- ಎ ಟೈಂ ಫಾರ್ ಟ್ರೂತ್ ಎಬೌಟ್ ಚೈನಾ Archived 2008-10-08 ವೇಬ್ಯಾಕ್ ಮೆಷಿನ್ ನಲ್ಲಿ. (ಚೀನಾದ ಬಗ್ಗೆ ನಿಜ ಅರಿಯಲೊಂದು ಸಮಯ), ಕಾಮನ್ ವೆಲ್ತ್ ಭಾಷಣ ಏಪ್ರಿಲ್ 5, 1999
- To Reunite a Nation Archived 2011-08-05 ವೇಬ್ಯಾಕ್ ಮೆಷಿನ್ ನಲ್ಲಿ., Richard Nixon Library speech on immigration January 18, 2000
ಆಯ್ದ ಲೇಖನಗಳು
[ಬದಲಾಯಿಸಿ]- ಬ್ಲೋಬ್ಯಾಕ್ ಫ್ರಂ ಬೇರ್ ಬೇಯ್ಟಿಂಗ್, ಅಂಕಣ ಆಗಸ್ಟ್ 15, 2008
- ಪಿಜೆಬಿ: ಎ ಬ್ರೀಫ್ ಫಾರ್ ವಿಟ್ನೀ Archived 2008-08-22 ವೇಬ್ಯಾಕ್ ಮೆಷಿನ್ ನಲ್ಲಿ., ಅಂಕಣ ಮಾರ್ಚ್ 21, 2008
- ದ ಡಾರ್ಕ್ ಸೈಡ್ ಆಫ್ ಡೈವರ್ಸಿಟಿ Archived 2008-04-24 ವೇಬ್ಯಾಕ್ ಮೆಷಿನ್ ನಲ್ಲಿ. ಅಂಕಣ ಮೇ 1, 2007
- ದ ಅಗ್ರೆಸರ್ಸ್ ಇನ್ ದ ಕಲ್ಚರ್ ವಾರ್ಸ್ Archived 2006-10-04 ವೇಬ್ಯಾಕ್ ಮೆಷಿನ್ ನಲ್ಲಿ., ಅಂಕಣ ಮಾರ್ಚ್ 8, 2004.
- ದ ಡೆತ್ ಆಫ್ ಮ್ಯಾನುಫ್ಯಾಕ್ಚರಿಂಗ್ Archived 2008-07-20 ವೇಬ್ಯಾಕ್ ಮೆಷಿನ್ ನಲ್ಲಿ., ಅಮೆರಿಕನ್ ಕನ್ಸರ್ವೇಟಿವ್ ಆಗಸ್ಟ್ 11, 2003.
- ದ ಡೆತ್ ಆಪ್ ದ ವೆಸ್ಟ್ Archived 2010-07-08 ವೇಬ್ಯಾಕ್ ಮೆಷಿನ್ ನಲ್ಲಿ., ಪುಸ್ತಕದಿಂದ ಪಡೆದದ್ದು MSNBC.com ನಲ್ಲಿ, ಅಕ್ಟೋಬರ್ 30, 2003.
- ಘೋಸ್ಟ್ ಬಸ್ಟಿಂಗ್ ದ ಸ್ಮೂಟ್-ಹಾಲೇ ಓಗ್ರೆ, ಅಂಕಣ ಅಕ್ಟೋಬರ್ 20, 1993.
- 'ಐವಾನ್ ದ ಟೆರಿಬಲ್' - ಮೋರ್ ಡೌಟ್ಸ್, ಅಂಕಣ ಮಾರ್ಚ್ 17, 1990.
- ಎ ಲೆಸನ್ ಇನ್ ಟೈರನಿ ಟೂ ಸೂನ್ ಫರ್ಗಾಟನ್, ಅಂಕಣ ಆಗಸ್ಟ್ 25, 1977
- ದ ಓಲ್ಡ್ ರೈಟ್ ಎಂಡ್ ದ ಫ್ಯೂಚರ್ ಆಫ್ ಕನ್ಸರ್ವೇಟಿಸಂ, ಲೇಖಕ ಪ್ಯಾಟ್ರಿಕ್ ಜೆ. ಬ್ಯೂಕ್ಯಾನನ್. ಜಸ್ಟಿನ್ ರಾಯ್ಮೊಂಡೋರ 1993ರ ಪುಸ್ತಕ ರೀಕ್ಲೈಮಿಂಗ್ ದ ಅಮೆರಿಕನ್ ರೈಟ್ ನ ಎರಡನೆಯ ಆವೃತ್ತಿಗೆ ಮುನ್ನುಡಿ.
- ದ ಸ್ಯಾಡ್ ಸೂಯಿಸೈಡ್ ಆಫ್ ಅಡ್ಮಿರಲ್ ನಿಮಿಟ್ಝ್ Archived 2011-02-12 ವೇಬ್ಯಾಕ್ ಮೆಷಿನ್ ನಲ್ಲಿ., ಅಂಕಣ ಜನವರಿ 18, 2002
- ರೆಸ್ಪಾನ್ಸ್ ಟು ನಾರ್ಮನ್ ಪಾಡ್ಹೋರೆಟ್ಝ್ Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ., ದ ವಾಲ್ ಸ್ಟ್ರೀಟ್ ಜರ್ನಲ್ ಗೆ ಬರೆದ ಕಾಗದ, ನವೆಂಬರ್ 5, 1999.
- ಟೈಮ್ ಫಾರ್ ಎಕನಾಮಿಕ್ ನ್ಯಾಷನಲಿಸಂ Archived 2008-10-08 ವೇಬ್ಯಾಕ್ ಮೆಷಿನ್ ನಲ್ಲಿ., ಅಂಕಣ ಜೂನ್ ೧೨, 1995
- ಟ್ರೂ ಫ್ಯಾಸಿಸ್ಟ್ಸ್ ಆಫ್ ದ ನ್ಯೂ ಯೂರೋಪ್ Archived 2011-05-18 ವೇಬ್ಯಾಕ್ ಮೆಷಿನ್ ನಲ್ಲಿ., ಅಂಕಣ ಏಪ್ರಿಲ್ ೩೦, 2002
- ವಾಟ್ ಡೂ ವೀ ಆಫರ್ ದ ವರ್ಲ್ಡ್? Archived 2009-12-28 ವೇಬ್ಯಾಕ್ ಮೆಷಿನ್ ನಲ್ಲಿ., ಅಂಕಣ ಮೇ 19, 2004
- ಹೂಸ್ ವಾರ್ Archived 2009-01-05 ವೇಬ್ಯಾಕ್ ಮೆಷಿನ್ ನಲ್ಲಿ.?, ಅಮೆರಿಕನ್ ಕನ್ಸರ್ವೇಟಿವ್ ಮಾರ್ಚ್ 24, 2003
- ವೇರ್ ಆರ್ ದ ಕ್ರಿಶ್ಚಿಯನ್ಸ್? Archived 2011-07-25 ವೇಬ್ಯಾಕ್ ಮೆಷಿನ್ ನಲ್ಲಿ., ಅಂಕಣ ಜುಲೈ 18, 2006
ದ ಅಮೆಇಕನ್ ಕಾಝ್ ಸಂಗ್ರಹಗಳು ಬ್ಯೂಕ್ಯಾನನ್ ರ ಹಲವಾರು ವರ್ಷಗಳ ಪತ್ರಿಕಾ ಅಂಕಣಬರಹಗಳು Archived 2018-06-03 ವೇಬ್ಯಾಕ್ ಮೆಷಿನ್ ನಲ್ಲಿ.. VDARE ಸಂಗ್ರಹಗಳು ಬ್ಯೂಕ್ಯಾನನ್ ಬರೆದ ಹಲವಾರು ಲೇಖನಗಳು Archived 2011-04-27 ವೇಬ್ಯಾಕ್ ಮೆಷಿನ್ ನಲ್ಲಿ..
ಸಂದರ್ಶನಗಳು
[ಬದಲಾಯಿಸಿ]- ಪ್ಯಾಟ್ ಬ್ಯೂಕ್ಯಾನನ್ ಗೆ ಹತ್ತು ಪ್ರಶ್ನೆಗಳು Archived 2007-09-30 ವೇಬ್ಯಾಕ್ ಮೆಷಿನ್ ನಲ್ಲಿ. ಜೆಫ್ ಚೂ ರಿಂದ, ಟೈಂ , ಆಗಸ್ಟ್ 20, 2006
- ಈಸ್ ದಿಸ್ ದ ಫೇಸ್ ಆಫ್ ದ ಟ್ವೆಂಟಿಫಸ್ಟ್ ಸೆಂಚುರಿ? Archived 2006-01-05 ವೇಬ್ಯಾಕ್ ಮೆಷಿನ್ ನಲ್ಲಿ., ಲೇಖಕ ಬಿಲ್ಲಿ ಕಾಫ್ ಮನ್, ದ ಅಮೆರಿಕನ್ ಎಂಟರ್ಪ್ರೈಸ್ , ಜುಲೈ/ಆಗಸ್ಟ್ 1998 .
- ಪ್ಯಾಟ್ ಬ್ಯೂಕ್ಯಾನನ್ ಡಿಫೆಂಡ್ಸ್ ಕಾಂಟ್ರೊವರ್ಸಿಯಲ್ ಇಮ್ಮಿಗ್ರೇಷನ್ ಕಾಮೆಂಟ್ಸ್, ಫಾಕ್ಸ್ ನ್ಯೂಸ್ ನ ಭಾಗಶಃ ಲೇಖನ, "ಹಾನ್ನಿಟಿ & ಕೋಲ್ಮ್ಸ್", ಆಗಸ್ಟ್ 22, 2006
- ರಿಪಬ್ಲಿಕನ್ಸ್: ವಿಟ್ ಮನ್, ಬ್ಯೂಕ್ಯಾನನ್ ಎಂಡ್ ಟೆರರ್, "ಒಪನ್ ಸೋರ್ಸ್" ಸಾರ್ವಜನಿಕ ರೇಡಿಯೋ ಕಾರ್ಯಕ್ರಮ.(ಶ್ರಾವ್ಯ)
- ಪ್ಯಾಟ್ ಬ್ಯೂಕ್ಯಾನನ್ ಡಿಸ್ಕಸಸ್ ಹಿಸ್ ಬುಕ್ ಸ್ಟೇಟ್ ಆಫ್ ಎಮರ್ಜೆನ್ಸಿ ಆನ್ ಬುಕ್ ಟಿವಿ Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ., ಆಗಸ್ಟ್ 24, 2006(ದೃಶ್ಯ)
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಈ ಲೇಖನದಲ್ಲಿ ಬಳಸಿದ ಬಾಹ್ಯಸಂಪರ್ಕ ವಿಕಿಪೀಡಿಯದ ನೀತಿ ನಿಯಮಗಳಿಗೆ ಬಾಹಿರವಾಗಿದೆ. |
ಬ್ಯೂಕ್ಯಾನನ್-ಸಂಬಂಧಿತ
[ಬದಲಾಯಿಸಿ]- Buchanan.org Archived 2011-07-25 ವೇಬ್ಯಾಕ್ ಮೆಷಿನ್ ನಲ್ಲಿ.
- Buchanan blog Archived 2010-08-18 ವೇಬ್ಯಾಕ್ ಮೆಷಿನ್ ನಲ್ಲಿ.
- ಬ್ಯೂಕ್ಯಾನನ್ ರ ದ್ವೈಸಾಪ್ತಾಹಿಕ ಅಂಕಣ Archived 2018-06-03 ವೇಬ್ಯಾಕ್ ಮೆಷಿನ್ ನಲ್ಲಿ.
- ಪ್ಯಾಟ್ ಬ್ಯೂಕ್ಯಾನನ್ ಆರ್ಕೈವ್ LewRockwell.comನಲ್ಲಿ
- ಬ್ಯೂಕ್ಯಾನನ್ ರ ಇತ್ತೀಚಿನ ಲೇಖನಗಳ ಪಾಡ್ ಕ್ಯಾಸ್ಟ್ ಗಳು. Archived 2021-02-11 ವೇಬ್ಯಾಕ್ ಮೆಷಿನ್ ನಲ್ಲಿ.
- ಪ್ಯಾಟ್ ಬ್ಯೂಕ್ಯಾನನ್ ಪಾಡ್ ಕ್ಯಾಸ್ಟ್ ಸಂದರ್ಶನ ಪ್ರೆಡ್ ಫ್ಲಾನಿಗನ್ ರೊಡನೆ WKRSನಿಂದ 1220AM WKRS.com Archived 2007-02-13 ವೇಬ್ಯಾಕ್ ಮೆಷಿನ್ ನಲ್ಲಿ.
- ಪ್ಯಾಟ್ ಬ್ಯೂಕ್ಯಾನನ್ ಪಾಡ್ ಕ್ಯಾಸ್ಟ್ ಸಂದರ್ಶನ ದ ರೈಟ್ ಪರ್ಸ್ಪೆಕ್ಟಿವ್ ನೊಂದಿಗೆ
- ದ ಅಮೆರಿಕನ್ ಕಾಝ್
- [೧]ಪ್ಯಾಟ್ ಬ್ಯೂಕ್ಯಾನನ್ ಫೀಚರ್ಸ್, ಕ್ರಿಯೇಟರ್ಸ್ ಸಿಂಡಿಕೇಟ್ ನಿಂದ, ಬ್ಯೂಕ್ಯಾನನ್ ರ ಅಂಕಣಗಳ ವಿತರಕರು
- ಸಾಂಪ್ರದಾಯಿಕ ಅಮೆರಿಕನ್ನರು ತಮ್ಮ ದೇಶವನ್ನು ಕಳೆದುಕೊಳ್ಳುತ್ತಿದ್ದಾರೆ ಲೇಖಕ ಪ್ಯಾಟ್ ಬ್ಯೂಕ್ಯಾನನ್, ಅಕ್ಟೋಬರ್ ೨೦, 2009
ವಾರ್ತೆಗಳು ಮತ್ತು ವಿಶ್ಲೇಷಣೆ
[ಬದಲಾಯಿಸಿ]- ರೈಟ್ ವಿಂಗ್ ಪಾಪ್ಯುಲಿಸ್ಟ್, ಇಯಾಲ್ ಪ್ರೆಸ್, ದ ಅಟ್ಲಾಂಟಿಕ್ ಮಂತ್ಲಿ , ಫೆಬ್ರವರಿ, 1996.
- ದ ವಾಯ್ಸ್ ಆಫ್ ಎಕನಾಮಿಕ್ ನ್ಯಾಷನಲಿಸಂ Archived 2008-09-07 ವೇಬ್ಯಾಕ್ ಮೆಷಿನ್ ನಲ್ಲಿ., ಲೇಖಕ ಸ್ಟೀವನ್ ಸ್ಟಾರ್ಕ್, ದ ಅಟ್ಲಾಂಟಿಕ್ ಮಂತ್ಲಿ , ಜುಲೈ, 1998.
- ಬ್ಯೂಕ್ಯಾನನ್ ಕ್ಲೈಮ್ಸ್ ರಿಫಾರ್ಮ್ ಪಾರ್ಟಿ ನಾಮಿನೇಷನ್ Archived 2008-04-23 ವೇಬ್ಯಾಕ್ ಮೆಷಿನ್ ನಲ್ಲಿ., CNN.com ಆಗಸ್ಟ್ 12, 2000
- ಬ್ಯೂಕ್ಯಾನನ್ ಮತ್ತು ಪಾಮ್ ಬೀಚ್ ಕೌಂಟಿ ಹಗರಣ Archived 2010-05-06 ವೇಬ್ಯಾಕ್ ಮೆಷಿನ್ ನಲ್ಲಿ., Salon.com .
- ಬ್ಯೂಕ್ಯಾನನ್ ಮೇಲೆ ಸಲಾಡ್ ಡ್ರೆಸಿಂಗ್ ನಿಮದ ಆಕ್ರಮಣ Archived 2008-10-18 ವೇಬ್ಯಾಕ್ ಮೆಷಿನ್ ನಲ್ಲಿ., ವಿಡಿಯೋ ಏಪ್ರಿಲ್ 1, 2005
- ಬ್ಯೂಕ್ಯಾನನ್ ಕಂಸರ್ವೇಟಿಸಂನೊಳಗೆ 'ಯುದ್ಧ' ಕಾಣುತ್ತಿದ್ದಾರೆ, ರಾಲ್ಫ್ ಝೆಡ್. ಹ್ಯಾಲೋ. ವಾಷಿಂಗ್ಟನ್ ಟೈಮ್ಸ್ , ಮೇ 17, 2005.
- ಬ್ಯೂಕ್ಯಾನನ್ ಕಾನೂನು ಬಾಹಿರರ ಅಲೆಗಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ, ಎರಿಕ್ ಪ್ಫೀಫರ್. ವಾಷಿಂಗ್ಟನ್ ಟೈಮ್ಸ್ , ಆಗಸ್ಟ್ 22, 2006.
- ಪ್ಯಾಟ್ ಬ್ಯೂಕ್ಯಾನನ್ ಮತ್ತು ಮಹತ್ತರವಾದ ಬಲಪಂಥದ ಭರವಸೆ, ಸಿಡ್ನೀ ಬ್ಲ್ಯೂಮೆಂಥಾಲ್, ''ದ ವಾಷಿಂಗ್ಟನ್ ಪೋಸ್ಟ್ , ಜನವರಿ 8, 1987.
- ಪ್ಯಾಟ್ ಬ್ಯೂಕ್ಯಾನನ್ ರ ಪುಸ್ತಕ ಅಮೆಝಾನ್ ನ ನಂ.1 ಸ್ಥಾನವನ್ನು ತಲುಪಿದೆ Archived 2009-01-07 ವೇಬ್ಯಾಕ್ ಮೆಷಿನ್ ನಲ್ಲಿ., ನ್ಯೂಸ್ ಮ್ಯಾಕ್ಸ್ , ಆಗಸ್ಟ್ 23, 2006.
- [೨] Archived 2015-03-16 ವೇಬ್ಯಾಕ್ ಮೆಷಿನ್ ನಲ್ಲಿ.ಪ್ಯಾಟ್ ಬ್ಯೂಕ್ಯಾನನ್, ಜನಪ್ರಿಯ ರಿಪಬ್ಲಿಕನ್ Archived 2015-03-16 ವೇಬ್ಯಾಕ್ ಮೆಷಿನ್ ನಲ್ಲಿ., ರಾಬರ್ಟ್ ನೋವಾಕ್, ನ್ಯಾಷನಲ್ ರಿವ್ಯೂ , ಆಗಸ್ಟ್ 14, 1995
- ರಿಫಾರ್ಮ್ ಪಕ್ಷದ ಭಿನ್ನತೆ ಹೆಚ್ಚುತ್ತಿದೆ, ಬಿಬಿಸಿ ನ್ಯೂಸ್ , ಆಗಸ್ಟ್ 12, 2000
- 2000ದ ಮೂರನೆಯ ಪಕ್ಷದ ಅಧ್ಯಕ್ಷೀಯ ಆಭ್ಯರ್ಥಿಗಳು, PBS.org
- ಎಝೋಲಾ ಫೋಸ್ಟರ್: ಪ್ಯಾಟ್ ಬ್ಯೂಕ್ಯಾನನ್ ರ ದೂರದ ಬಲಗೈ, ಪೀಟರ್ ಕಾರ್ಲ್ ಸನ್, ದ ವಾಷಿಂಗ್ಟನ್ ಪೋಸ್ಟ್ , ಸೆಪ್ಟೆಂಬರ್ 13, 2000
- ರೇಗನ್ ಕೋಹ್ಲ್ ರನ್ನು ಬಿಟ್ ಬರ್ಗ್ ಗ್ರೇವ್ಸ್ ನ ಬ್ರೀಫ್ ಮೆಮೋರಿಯಲ್ ನಲ್ಲಿ ಸೇರಿದರು, ಬರ್ನಾರ್ಡ್ ವೀಯ್ನ್ ರಾಬ್, ದ ನ್ಯೂ ಯಾರ್ಕ್ ಟೈಮ್ಸ್ , ಮೇ 6, 19985
ಪ್ರಚಾರ ಸಾಮಗ್ರಿಗಳು
[ಬದಲಾಯಿಸಿ]- ಲೇಖನಗಳು, ಪ್ರಬಂಧಗಳು ಮತ್ತು ಬಾಷಣಗಳು Archived 2008-10-08 ವೇಬ್ಯಾಕ್ ಮೆಷಿನ್ ನಲ್ಲಿ., 1991ರಿಂದ 2000ದ ವರೆಗೆ
- ಬ್ಯೂಕ್ಯಾನನಿಸಂ ಅಥವಾ ಬಾರ್ಬಾರಿಸಂ Archived 2008-10-08 ವೇಬ್ಯಾಕ್ ಮೆಷಿನ್ ನಲ್ಲಿ., ಜಸ್ಟಿನ್ ರೈಮೊಂಡೋ, ರಿಫಾರ್ಮ್ ಪಕ್ಷದ ನೇಮಕಾತಿ ಸಭೆಯ ಭಾಷಣ, ಆಗಸ್ಟ್ 12, 2000
- ವಿಷಯಗಳ ಕುರಿತು Archived 2008-10-08 ವೇಬ್ಯಾಕ್ ಮೆಷಿನ್ ನಲ್ಲಿ. ಬ್ಯೂಕ್ಯಾನನ್ ರ 2000ದ ಪ್ರಚಾರದಿಂದ.
- ಪತ್ರಿಕಾ ಬಿಡುಗಡೆಗಳು Archived 2008-10-08 ವೇಬ್ಯಾಕ್ ಮೆಷಿನ್ ನಲ್ಲಿ. ಬ್ಯೂಕ್ಯಾನನ್ ರ 2000ದ ಪ್ರಚಾರದಿಂದ.
- ರೀಕ್ಲೈಮಿಂಗ್ ಅಮೆರಿಕಾಸ್ ಡೆಸ್ಟಿನಿ Archived 2010-05-14 ವೇಬ್ಯಾಕ್ ಮೆಷಿನ್ ನಲ್ಲಿ., ಪ್ಯಾಟ್ ಬ್ಯೂಕ್ಯಾನನ್ ಫಾರ್ ಪ್ರೆಸಿಡೆಂಟ್ 2000ದ ಪ್ರಚಾರ ಕರಪತ್ರದಲ್ಲಿ.
- ಸೆಮಿಟಿಸಂ-ವಿರೋಧದ ಬಗ್ಗೆ ದಾಖಲೆಗಳನ್ನು ಸರಿಪಡಿಸುವುದು, Archived 2010-06-21 ವೇಬ್ಯಾಕ್ ಮೆಷಿನ್ ನಲ್ಲಿ. (ತಪ್ಪು ಕಲ್ಪನೆ ಹೋಗಲಾಡಿಸುವುದು), ಬ್ಯೂಕ್ಯಾನನ್ ರ ಚುನಾವಣಾ ಪ್ರಚಾರ ಪತ್ರಿಕಾ ವರದಿ ಮಾರ್ಚ್ 1, 1996.
ಪರ ಅಭಿಪ್ರಾಯಗಳು
[ಬದಲಾಯಿಸಿ]- ವ್ಯಾಪಾರ ನಿಷೇಧದ ಬಗ್ಗೆ ಬ್ಯೂಕ್ಯಾನನ್ ನಿಲುವು ಸರಿ, ಬ್ರೂಸ್ ಬಾರ್ಟ್ಲೆಟ್, ಅ<ಕಣ ಜನವರಿ 3. 2000
- ಪ್ಯಾಟ್ ಬ್ಯೂಕ್ಯಾನನ್ ರನ್ನು ಪ್ರೀತಿಸಲು ಕಲಿಯುವಿಕೆ Archived 2015-03-16 ವೇಬ್ಯಾಕ್ ಮೆಷಿನ್ ನಲ್ಲಿ., ನ್ಯೂಟ್ ಬೆರ್ಗರ್, ಸಿಯಟ್ಟೆಲ್ ವೀಕ್ಲಿ , ಅಕ್ಟೋಬರ್ 13, 2004.
- ಬ್ಯೂಕ್ಯಾನನ್ ವಿರುದ್ಧದ ಹಿಸ್ಟೀರಿಯಾ Archived 2010-01-24 ವೇಬ್ಯಾಕ್ ಮೆಷಿನ್ ನಲ್ಲಿ., ಬರ್ಟನ್ ಎಸ್.ಬ್ಲೂಮರ್ಟ್, LewRockwell.com , ನವೆಂಬರ್ 1, 1999.
- ಬ್ಯೂಕ್ಯಾನನ್ ಬಲದ ಬಗ್ಗೆ ಸರಿ, ಡ್ಯಾರೆಲ್ ಡೌ.
- ಪ್ಯಾಟ್ ಬ್ಯೂಕ್ಯಾನನ್, ಯುದ್ಧವಿರೋಧಿ ಅಭ್ಯರ್ಥಿ Archived 2008-04-30 ವೇಬ್ಯಾಕ್ ಮೆಷಿನ್ ನಲ್ಲಿ. ಲಿಯೋನಾರಾ ಫುಲಾನಿ, ವರ್ಲ್ಡ್ ನೆಟ್ ಡೈಲಿ , ಡಿಸೆಂಬರ್ 28, 1999.
- ಮೈ ಗೈ: ಪ್ಯಾಟ್ರಿಕ್ ಬ್ಯೂಕ್ಯಾನನ್ ಬಗ್ಗೆ ಪಾಲ್ ಗಾಟ್ಟ್ ಫ್ರೀಡ್ Archived 2006-02-22 ವೇಬ್ಯಾಕ್ ಮೆಷಿನ್ ನಲ್ಲಿ., ಪಾಲಿಸಿ ರಿವ್ಯೂ , ಬೇಸಿಗೆ 1995.
- ಬ್ಯೂಕ್ಯಾನನ್: ಹಿನ್ನುಡಿ Archived 2010-06-16 ವೇಬ್ಯಾಕ್ ಮೆಷಿನ್ ನಲ್ಲಿ., ಸ್ಕಾಟ್ ಮೆಕ್ ಕಾನ್ನೆಲ್, VDARE, ನವೆಂಬರ್ 26, 2000.
- ಪೋರ್ಟ್ರೈಟ್ ಆಫ್ ಎನ್ ಅಮೆರಕನ್ ನ್ಯಾಷನಲಿಸ್ಟ್, ಜಸ್ಟಿನ್ ರೈಮೋಂಡೋ, Antiwar.com , ಆಗಸ್ಟ್ 16, 1999.
- ಪ್ಯಾಟ್ ಬ್ಯೂಕ್ಯಾನನ್ ಮತ್ತು ಭಯ Archived 2013-05-16 ವೇಬ್ಯಾಕ್ ಮೆಷಿನ್ ನಲ್ಲಿ., ಮರ್ರೆ ರಾಥ್ಬಾರ್ಡ್, 1990ರ ಲಿಬರೇಷನ್ ರವರ ಬ್ಯೂಕ್ಯಾನನ್ ಪರತೆ.
- ಪ್ಯಾಟ್ರಿಕ್ ಬ್ಯೂಕ್ಯಾನನ್ ಸೆಮೈಟ್ ಗಳ ವಿರೋಧಿಯೇನು?, ಜಾರ್ಜ್ ಝಾಮುಯೆಲಿ, ನ್ಯೂ ಯಾರ್ಕ್ ಪ್ರೆಸ್ , ನವೆಂಬರ್ 4, 1999.
- ಸುಳ್ಳುಗಳು, ವದಂತಿಗಳು ಮತ್ತು ಕ್ರೂರ ಅಪವಾದಗಳು, ಸಂಗ್ರಹ "ಸ್ಟೂಡೆಂಟ್ಸ್ ಫಾರ್ ಬ್ಯೂಕ್ಯಾನನ್" ಇಲಿನಾಯ್ಸ್ ತಾಣ 2000ದಿಂದ; ಸಂಪರ್ಕಗಳ ಸಂಗ್ರಹವನ್ನು ಹೊಂದಿದೆ.
- ಪ್ಯಾಟ್ ಬ್ಯೂಕ್ಯಾನನ್ Archived 2011-07-28 ವೇಬ್ಯಾಕ್ ಮೆಷಿನ್ ನಲ್ಲಿ. ಚಿತ್ರಣ ಡೆರೆಕ್ ವ್ಯಾಲೇಸ್, virtuemag.org .
ವಿರೋಧಿ ಅಭಿಪ್ರಾಯಗಳು
[ಬದಲಾಯಿಸಿ]- ನಿಮ್ಮ ಬಲಪಂಥದ ವಾಗ್ಮಿಗಳನ್ನು ಅರಿಯಿರಿ: ಪ್ಯಾಟ್ ಬ್ಯೂಕ್ಯಾನನ್ Archived 2012-07-31 at Archive.is, CampusProgress.org
- ಪ್ಯಾಟ್ ಬ್ಯೂಕ್ಯಾನನ್ ರ ಅಸ್ಥಿಪಂಜರದ ಕ್ಲಾಸೆಟ್, RealChange.org .
- ಬ್ಯೂಕ್ಯಾನನ್ ರ ಡೀಸಲ್ ಎಂಜಿನ್ ದೃಢೀಕರಣದ ಮೇಲ್ನೋಟ ಮತ್ತು ಟೀಕೆ Archived 2012-03-03 ವೇಬ್ಯಾಕ್ ಮೆಷಿನ್ ನಲ್ಲಿ.
- ಯಹೂದಿಗಳು ಮತ್ತು ಇಸ್ರೇಲ್ ಬಗ್ಗೆ ಪ್ಯಾಟ್ ಬ್ಯೂಕ್ಯಾನನ್ Archived 2010-11-08 ವೇಬ್ಯಾಕ್ ಮೆಷಿನ್ ನಲ್ಲಿ., ಮಾನನಷ್ಟ-ವಿರೋಧಿ ತಂಡ, ಸೆಪ್ಟೆಂಬರ್, 1999.
- ತನ್ನದೇ ಪದಗಳಲ್ಲಿ ಪ್ಯಾಟ್ ಬ್ಯೂಕ್ಯಾನನ್, FAIR ಪತ್ರಿಕಾ ಪ್ರಕಟಣೆ, ಫೆಬ್ರವರಿ ೨೬, 1996
- ಬ್ಯೂಕ್ಯಾನನ್ ಒಂದು ಬಿಳಿ ತಿಮಿಂಗಲ[ಶಾಶ್ವತವಾಗಿ ಮಡಿದ ಕೊಂಡಿ], ಲಾರೆನ್ಸ್ ಆಸ್ಟರ್, Frontpagemag.com ಮಾರ್ಚ್ 19, 2004
- ನಿಜವಾದ ಪ್ಯಾಟ್ ಬ್ಯೂಕ್ಯಾನನ್ ದಯವಿಟ್ಟಿ ಎದ್ದು ನಿಲ್ಲುವರೇ?, ಬಿಲ್ ಬಾರ್ನ್ವೆಲ್, Lew Rockwell.com , ಮೇ 15, 2000.
- ಚರಿತ್ರೆಯಲ್ಲಿ ವ್ಯಾಪಾರದ ಬಗ್ಗೆ ಸತ್ಯ, ಬ್ರೂಸ್ ಬಾರ್ಟ್ಲೆಟ್, ಕ್ಯಾಟೋಸ್ ಸೆಂಟರ್ ಫಾರ್ ಟ್ರೇಡ್ ಪಾಲಿಸಿ ಸ್ಟಡೀಸ್, n.d.
- ಬ್ಯೂಕ್ಯಾನನ್ ಮತ, ಜಾನ್ ಜ್ಯುಡಿಸ್ , ನ್ಯೂ ಯಾರ್ಕ್ ಟೈಮ್ಸ್, ಅಕ್ಟೋಬರ್ 3, 1999.
- ಬ್ಯೂಕ್ಯಾನನ್ ಗೆ ಯಾರು ಹೆದರುತ್ತಾರೆ? Archived 2010-10-25 ವೇಬ್ಯಾಕ್ ಮೆಷಿನ್ ನಲ್ಲಿ., ಜೇಕ್ ಟ್ಯಾಪ್ಪರ್, ಸಲೋನ್, ಸೆಪ್ಟೆಂಬರ್ 4, 1999.
- ಬ್ಯೂಕ್ಯಾನನ್ ಮತ್ತು ಮಾರುಕಟ್ಟೆ, ಜೆಫ್ರಿ ಎ. ಟಕ್ಕರ್, Lew Rockwell.com , ಮಾರ್ಚ್ 23, 2002.
- ವಿನಾಶದ ಸುಳಿವುಗಳು ಬ್ಯೂಕ್ಯಾನನ್ ರ ಯುವ ಬೆಂಬಲಿಗರನ್ನೊಳಗೊಂಡ ಚಿತ್ರಪ್ರಬಂಧ, ಜುಲೈ/ಆಗಸ್ಟ್ 1996
- ವರ್ಣಭೇದದ ಮಾರಾಟ -- ಪ್ಯಾಟ್ ಬ್ಯೂಕ್ಯಾನನ್ ರ ಇತ್ತೀಚಿನ ಪುಸ್ತಕವು ಬಿಳಿಯ ರಾಷ್ಟ್ರೀಯನ ದೂರುಗಳ ಸರಮಾಲೆ, ಅಲೆಕ್ಸಾಂಡರ್ ಝೈಟ್ಚಿಕ್, ಆಫ್ರೋ ಆರ್ಟಿಕಲ್ಸ್ ಗಾಗಿ, ಮಾರ್ಚ್ 12, 2007.
- ಯುವ ಟರ್ಕ್ ನ ಕಾಮೆಂಟ್ರಿ 'ಪ್ಯಾಟ್ ಬ್ಯೂಕ್ಯಾನನ್ ಹಿಟ್ಲರ್ ನನ್ನು ಸಮರ್ಥಿಸಿಕೊಂಡರು'.
ಇತರೆ
[ಬದಲಾಯಿಸಿ]- ಬ್ಯೂಕ್ಯಾನನ್ ವಂಶಾವಳಿ ಒಂಬತ್ತು ತಲೆಮಾರಿನವರೆಗೆ.
- ಡ್ರ್ಯಾಫ್ಟ್ ಬ್ಯೂಕ್ಯಾನನ್ Archived 2012-11-01 ವೇಬ್ಯಾಕ್ ಮೆಷಿನ್ ನಲ್ಲಿ. 2008
- ವಿಷಯಗಳನ್ನು ಕುರಿತು ಬ್ಯೂಕ್ಯಾನನ್ ರ ಡಝನ್ ಗಟ್ಟಲೆ ಹೇಳಿದ ಸ್ಥಳಗಳನ್ನು ಕೇಳುತ್ತಾರೆ.
- ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಬ್ಯೂಕ್ಯಾನನ್
- NNDB.com ಚಿತ್ರಣ
- ಪ್ಯಾಟ್ ಬ್ಯೂಕ್ಯಾನನ್ ತಮ್ಮ ಪುಸ್ತಕ ಸ್ಟೇಟ್ ಆಫ್ ಎಮರ್ಜೆನ್ಸಿಯ ಬಗ್ಗೆ ಮಾತನಾಡುತ್ತಾರೆ: ದ ಥರ್ಡ್ ವರ್ಲ್ಡ್ ಇಂವೇಷನ್ ಮತ್ತು ಕಾಂಕ್ವೆಸ್ಟ್ ಆಫ್ ಅಮೆರಿಕ Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ. ವಿಡಿಯೋ
Party political offices | ||
---|---|---|
ಪೂರ್ವಾಧಿಕಾರಿ Ross Perot |
Reform Party Presidential candidate 2000 (4th) |
ಉತ್ತರಾಧಿಕಾರಿ Ralph Nader |
ಟೆಂಪ್ಲೇಟು:United States presidential election candidates, 2000 ಟೆಂಪ್ಲೇಟು:MSNBC Personalities
- CS1 errors: unsupported parameter
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: markup
- Pages using duplicate arguments in template calls
- Pages using infobox person with multiple parents
- Pages using infobox person with unknown parameters
- Articles with hCards
- Articles with unsourced statements from February 2007
- Articles with invalid date parameter in template
- Articles with hatnote templates targeting a nonexistent page
- Wikipedia external links cleanup
- Wikipedia spam cleanup
- Webarchive template archiveis links
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- 1986ರಲ್ಲಿ ಜನಿಸಿದವರು
- ಜೀವಿತ ಜನರು
- ಅಮೆರಿಕದ ಕಮ್ಯುನಿಸ್ಟ್-ವಿರೋಧಿಗಳು
- ಅಮೆರಿಕದ ಕಾನೂನುಬಾಹಿರ ವಿದೇಶ ಪ್ರಯಾಣ ಕಾಯಿದೆ ವಿರೋಧಿ ಚಳುವಳಿಕಾರರು
- ಅಮೆರಿಕಾದ ಇರಾಕ್ ಯುದ್ಧ-ವಿರೋಧಿ ಚಳುವಳಿಗಾರರು.
- ಅಮೆರಿಕದ ಅಂಕಣಕಾರರು
- ಅಮೆರಿಕದ ವಿದೇಶಾಂಗ ನೀತಿ ರಚಿಸಿದವರು
- ಅಮೆರಿಕದ ನಿಯತಕಾಲಿಕಗಳ ಸಂಪಾದಕರು
- ಅಮೆರಿಕದ ರಾಜಕೀಯ ಬರಹಗಾರರು
- ಅಮೆರಿಕದ ರಾಜಕೀಯ ಪರಿಣಿತರು
- ಅಮೆರಿಕದ ಜೀವ-ಪರ ಚಳುವಳಿಕಾರರು
- ಅಮೆರಿಕದ ಭಾಷಣಬರಹಗಾರರು
- ಅಮೆರಿಕದ ಸಾಂಪ್ರದಾಯಿಕ ಕ್ಯಾಥೋಲಿಕ್ಕರು
- ಗ್ಲೋಬಲಿಸ್ಟ್ ವಿರೋಧಿ ಚಳುವಳಿಗಾರರು
- ಯುನೈಟೆಡ್ ಸ್ಟೇಟ್ಸ್ ನ ಅಧ್ಯಕ್ಷರುಗಳ ಸಹಾಯಕರು
- ಯುನೈಟೆಡ್ ಸ್ಟೇಟ್ಸ್ ನ ಸಂಪ್ರದಾಯಶರಣತೆ(ಕನ್ಸರ್ವೇಟಿಸಂ)
- ಫೋರ್ಡ್ ಆಡಳಿತಾತ್ಮಕ ವ್ಯಕ್ತಿಗಳು
- ಜಾರ್ಜ್ ಟೌನ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ
- ಯುನೈಟೆಡ್ ಸ್ಟೇಟ್ಸ್ ನ ಐಸೊಲೇಷನಿಸಂ(ಒತ್ತಟ್ಟಾಗಿಸುವಿಕೆ)ನ ಇತಿಹಾಸ
- ಹ್ಯೂಮನ್ ಈವೆಂಟ್ಸ್ ಜನರು
- ಇಂಟೆಲಿಜೆಂಟ್ ದಿಸೈನ್ ಅಡ್ವೊಕೇಟ್ ಗಳು
- ಐರಿಷ್ ಪೀಳಿಗೆಯ ಅಮೆರಿಕದ ರಾಜಕಾರಣಿಗಳು
- ಮಾಲ್ಟಾದ ರಾಜರು
- ನ್ಯಾಷನಲ್ ರಿವ್ಯೂ ಜನರು
- ನಿಕ್ಸನ್ ಆಡಳಿತಮಂಡಳಿಯ ವ್ಯಕ್ತಿಗಳು
- ರೇಗನ್ ಆಡಳಿತಮಂಡಳಿಯ ವ್ಯಕ್ತಿಗಳು
- ರಿಫಾರ್ಮ್ ಪಕ್ಷ (ಯುನೈಟೆಡ್ ಸ್ಟೇಟ್ಸ್)ದ ರಾಜಕಾರಣಿಗಳು
- ರಿಪಬ್ಲಿಕನ್ ಪಕ್ಷ (ಯುನೈಟೆಡ್ ಸ್ಟೇಟ್ಸ್)ದ ರಾಜಕಾರಣಿಗಳು
- ರೋಮನ್ ಕ್ಯಾಥೋಲಿಕ್ ಬರಹಗಾರರು
- ಸಂಪ್ರದಾಯಬದ್ಧ ಕ್ಯಾಥೋಲಿಕ್ ಬರಹಗಾರರು
- ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷಾಕಾಂಕ್ಷಿ ಅಭ್ಯರ್ಥಿಗಳು, 1992
- ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷಾಕಾಂಕ್ಷಿ ಅಭ್ಯರ್ಥಿಗಳು, 1996
- ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷಾಕಾಂಕ್ಷಿ ಅಭ್ಯರ್ಥಿಗಳು, 2000
- ವಾಟರ್ ಗೇಟ್ ಅಂಕಿಅಂಶಗಳು
- ವೈಟ್ ಹೌಸ್ ಸಂಪರ್ಕ ನಿರ್ದೇಶಕರು
- ವರ್ಜೀನಿಯಾದ ಬರಹಗಾರರು
- ವಾಷಿಂಗ್ಟನ್, ಡಿ.ಸಿ. ಯ ಬರಹಗಾರರು
- Pages using ISBN magic links