ಆರ್ಥಿಕ ರಕ್ಷಣಾ ನೀತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರ್ಥಿಕ ರಕ್ಷಣಾ ನೀತಿ ಎಂಬುದು, ರಾಷ್ಟ್ರಗಳ ನಡುವಿನ ವಹಿವಾಟಿನ ಮೇಲೆ ನಿಯಂತ್ರಣ ಹೇರುವ ಆರ್ಥಿಕ ನೀತಿಯಾಗಿದೆ. ಆಮದು ಮಾಡಲಾದ ಸರಕುಗಳ ಮೇಲೆ ಸುಂಕಗಳು, ನಿರ್ಬಂಧದ ಕೋಟಾಗಳು ಹಾಗೂ ಆಮದಿನ ಮೇಲೆ ನಿಗಾ ವಹಿಸುವ ಇತರೆ ಸರ್ಕಾರೀ ನಿಯಂತ್ರಣಗಳು, ಜೊತೆಗೆ ವಿದೇಶೀಯ ಉದ್ದಿಮೆಗಳು ಸ್ಥಳೀಯ ಮಾರುಕಟ್ಟೆ ಮತ್ತು ಸಂಸ್ಥೆಗಳನ್ನು ತಮ್ಮ ಸ್ವಾಮ್ಯಕ್ಕೆ ತೆಗೆದುಕೊಳ್ಳುವುದನ್ನು ತಡೆಗಟ್ಟುವ ಯತ್ನಗಳೂ ಇದರಲ್ಲಿ ಸೇರಿವೆ.

ಈ ನೀತಿಯು ಜಾಗತೀಕರಣ-ವಿರೋಧದೊಂದಿಗೆ ಬೆಸೆದುಕೊಂಡಿದೆ. ಬಂಡವಾಳ ಚಲಾವಣೆ ಮತ್ತು ವಹಿವಾಟಿಗೆ ಸರ್ಕಾರದ ಅಡೆತಡೆಗಳನ್ನು ಕನಿಷ್ಠ ಮಟ್ಟಕ್ಕಿಡುವ ಮುಕ್ತ ವಹಿವಾಟಿಗೆ ತದ್ವಿರುದ್ಧವಾಗಿದೆ. ಈ ಪದವನ್ನು ಹೆಚ್ಚಾಗಿ ಅರ್ಥಶಾಸ್ತ್ರದ ದೃಷ್ಟಿಯಿಂದ ಬಳಸಲಾಗಿದೆ. ಇದರಲ್ಲಿ, ವಿದೇಶದೊಂದಿಗಿನ ವಹಿವಾಟನ್ನು ನಿರ್ಬಂಧಿಸುವ ಅಥವಾ ನಿಯಂತ್ರಿಸುವ ಮೂಲಕ ಸ್ವದೇಶದೊಳಗಿನ ಉದ್ದಿಮೆಗಳು ಹಾಗೂ ಉದ್ಯೋಗಿಗಳನ್ನು ರಕ್ಷಣೆ ನೀಡುವುದು ಆರ್ಥಿಕ ರಕ್ಷಣಾ ನೀತಿ ಯ ಧ್ಯೇಯವಾಗಿದೆ.

ಇತಿಹಾಸ[ಬದಲಾಯಿಸಿ]

ಐತಿಹಾಸಿಕವಾಗಿ, ಆರ್ಥಿಕ ರಕ್ಷಣಾ ನೀತಿಯನ್ನು, (ಎಂದಿಗೂ ವಹಿವಾಟು ಸಮತೋಲನವನ್ನು ಧನಾತ್ಮಕವಾಗಿ ಕಾಯ್ದುಕೊಳ್ಳುವುದು ಅನುಕೂಲಕರ ಎಂದು ನಂಬಿದ) ವಾಣಿಜ್ಯ ಸಿದ್ಧಾಂತ ಮತ್ತು ಆಮದು ಬದಲಿಕೆಯಂತಹ ಆರ್ಥಿಕ ಸಿದ್ಧಾಂತದೊಂದಿಗೆ ಸಂಬಂಧಿತವಾಗಿತ್ತು. ಆ ಸಮಯದಲ್ಲಿ, ಬಳಕೆದಾರರ ವಿರುದ್ಧ ಕುತರ್ಕಗಳನ್ನು ಬಳಸಿ ಮೇಲುಗೈ ಸಾಧಿಸಲು ಯತ್ನಿಸುವ ಕೈಗಾರಿಕೆಗಳ ವಿರುದ್ಧ ಆಡಮ್‌ ಸ್ಮಿತ್ ಎಚ್ಚರಿಕೆಯ ಕರೆ ನೀಡಿರುವುದು ಬಹಳಷ್ಟು ಸುದ್ದಿಯಾಗಿತ್ತು.‌ [೧] ಆರ್ಥಿಕ ರಕ್ಷಣಾ ನೀತಿಯು ಹಾನಿಕಾರಕ, ಅದರ ವೆಚ್ಚಗಳು ಅನುಕೂಲಗಳಿಗಿಂತಲೂ ಹೆಚ್ಚಾಗಿರುತ್ತವೆ, ಜೊತೆಗೆ ಅದು ಅರ್ಥಿಕ ಬೆಳವಣಿಗೆಗೆ ವಿಘ್ನವೊಡ್ಡುತ್ತದೆ, ಎಂದು ಇಂದಿನ ಹಲವು ಆರ್ಥಶಾಸ್ತ್ರಜ್ಞರು ಒಪ್ಪಿದ್ದಾರೆ.[೨][೩] ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಪಾಲ್‌ ಕ್ರುಗ್ಮನ್‌ ಒಮ್ಮೆ ಹೀಗೆ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು: 'ಅರ್ಥಶಾಸ್ತ್ರಜ್ಞನ ಸಿದ್ಧಾಂತವೊಂದಿದ್ದಲ್ಲಿ, ಅದು ಖಂಡಿತವಾಗಿಯೂ 'ನಾನು ಸಮರೂಪಗಳ ಅನುಕೂಲಗಳ ತತ್ತ್ವಗಳು ಅರ್ಥೈಸಿರುವೆ; ನಾನು ಮುಕ್ತ ವಹಿವಾಟನ್ನು ಸಮರ್ಥಿಸುವೆ' [೪] ಶ್ರೀಮಂತ ದೇಶಗಳಲ್ಲಿ ಆರ್ಥಿಕ ರಕ್ಷಣಾ ನೀತಿಯ ಇತ್ತೀಚೆಗಿನ ಉದಾಹರಣೆಗಳು, ಮಾದರಿಯಾಗಿ, ರಾಜಕೀಯವಾಗಿ ಮುಖ್ಯವಾದ ಸ್ಥಳೀಯ ಕೈಗಾರಿಕೆಗಳಲ್ಲಿ ವ್ಯಕ್ತಿಗಳ ಜೀವನವನ್ನು ರಕ್ಷಿಸುವ ಆಶಯದಿಂದ ಪ್ರೇರಿತವಾಗಿತ್ತು. [ಸೂಕ್ತ ಉಲ್ಲೇಖನ ಬೇಕು] ಮುಂಚೆ ಕಾರ್ಮಿಕರ ಕೆಲಸಗಳು ವಿದೇಶೀ ಪೈಪೋಟಿಯ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ಇಲ್ಲವಾಗುತ್ತಿದ್ದವು, ಇತ್ತೀಚೆಗೆ, ಹೊರಗುತ್ತಿಗೆ ಮತ್ತು ಗುಮಾಸ್ತೆ/ಆಡಳಿತ ಕೆಲಸಗಳು ಕೈಬಿಟ್ಟು ಹೋಗುತ್ತಿರುವುದರಿಂದ, ಆರ್ಥಿಕ ರಕ್ಷಣಾ ನೀತಿಯ ಕುರಿತು ವಿಸ್ತರಿತ ಚರ್ಚೆ ನಡೆಯುತ್ತಿದೆ.

(ಯುನೈಟೆಡ್ ಸ್ಟೇಟ್ಸ್ )ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಆರ್ಥಿಕ ರಕ್ಷಣಾ ನೀತಿ[ಬದಲಾಯಿಸಿ]

ಮುಕ್ತ ವಹಿವಾಟು ಮತ್ತು ಆರ್ಥಿಕ ರಕ್ಷಣಾ ನೀತಿ ವಲಯವಾರು ವಿಚಾರಗಳಾಗಿವೆ. ಅಮೆರಿಕಾದಲ್ಲಿ ಮುಕ್ತ ವಹಿವಾಟು ಅಮೆರಿಕಾದ ಜೀತದಾಳುಗಳುಳ್ಳ ರಾಜ್ಯಗಳ ನೀತಿಯಾಗಿದೆ. ಆರ್ಥಿಕ ರಕ್ಷಣಾ ನೀತಿಯು ಅಮರಿಕಾದ ಉತ್ತರ ಭಾಗದ, ತಯಾರಿಕಾ ಉದ್ದಿಮೆಗಳ ವಿಚಾರವಾಗಿದೆ. ಜೀತದಾಳುತ್ವದಷ್ಟು ಗಹನ ವಿಚಾರವಲ್ಲದಿದ್ದರೂ, ಇವೆರಡೂ ವಲಯಗಳ ನಡುವೆ ವಹಿವಾಟುಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡಿ, ಅಂತರ್ಯುದ್ಧಕ್ಕೆ ಕಾರಣವಾಯಿತು. ಇದು ಇಂದಿಗೂ ಸಹ ಒಂದು ರಾಷ್ಟ್ರೀಯ ಮಟ್ಟದ ಭಿನ್ನಾಭಿಪ್ರಾಯವಾಗಿ ಉಳಿದಿದೆ. ಐತಿಹಾಸಿಕವಾಗಿ, ದಕ್ಷಿಣ ಭಾಗದಲ್ಲಿರುವ, ಜೀತದಾಳುಗಳನ್ನು ಬಳಸಿದ ರಾಜ್ಯಗಳಲ್ಲಿ, ಮಾನವ ಶ್ರಮಿಕ ವೆಚ್ಚವು ಅಗ್ಗವಾಗಿದ್ದರಿಂದ, ಯಂತ್ರಗಳ ಅಗತ್ಯವೇ ಕಂಡುಬರಲಿಲ್ಲ. ಯಾವುದೇ ರಾಷ್ಟ್ರದಿಂದಲೂ ತಾವು ತಯಾರಿಸಲಾದ ಸರಕನ್ನು ಕೊಂಡುಕೊಳ್ಳುವ ಹಕ್ಕನ್ನು ಸಮರ್ಥಿಸಿದವು. ಹಾಗಾಗಿ, ಅವುಗಳು ತಮ್ಮನ್ನು ಮುಕ್ತ ವಹಿವಾಟುದಾರರೆಂದು ಕರೆದುಕೊಂಡರು. ಇನ್ನೊಂದೆಡೆ, ಉತ್ತರ ರಾಜ್ಯಗಳು ತಯಾರಿಕೆಯ ಕ್ಷಮತೆಯನ್ನು ಬೆಳೆಸಿಕೊಳ್ಳಲು ಬಯಸಿದವು. ಉತ್ತರ ಭಾಗದ ತಯಾರಕ ಉದ್ದಿಮೆಗಳು ತಮ್ಮ ದಕ್ಷ ಬ್ರಿಟಿಷ್‌ ಪ್ರತಿಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಲು ಸಹಾಯಾರ್ಥವಾಗಿ, ಅವುಗಳು ಸುಂಕ ದರಗಳನ್ನು ಹೆಚ್ಚಿಸಿದವು. U.S.ನ ಮೊದಲ ಖಜಾಂಚಿ ಕಾರ್ಯದರ್ಶಿ ಅಲೆಕ್ಸಾಂಡರ್‌ ಹ್ಯಾಮಿಲ್ಟನ್‌ ತಮ್ಮ ವರದಿ 'ರಿಪೋರ್ಟ್‌ ಆನ್‌ ಮ್ಯಾನುಫ್ಯಾಕ್ಚರ್ಸ್‌'ನಲ್ಲಿ ಉದಯೋನ್ಮುಖ ಕೈಗಾರಿಕೆಗಳನ್ನು ರಕ್ಷಿಸಲು ಸುಂಕಗಳು ಮತ್ತು ಆ ಸುಂಕಗಳ ಭಾಗದಿಂದ ಪಡೆದ ಅನುದಾನಗಳ ಪ್ರಸ್ತಾಪಗಳಿಂದ ಹಿಡಿದು, ಅಮೆರಿಕಾ ಸಂಯುಕ್ತ ಸಂಸ್ಥಾನವು ಮುಕ್ತ ವಹಿವಾಟು ಸಿದ್ಧಾಂತವನ್ನು ವಿರೋಧಿಸುವುದರಲ್ಲಿ ಪ್ರಮುಖ ರಾಷ್ಟ್ರವಾಗಿತ್ತು. ಹತ್ತೊಂಬತ್ತನೆಯ ಶತಮಾನದುದ್ದಕ್ಕೂ, ಸೆನೇಟರ್‌ ಹೆನ್ರಿ ಕ್ಲೇ ಸೇರಿದಂತೆ, U.S.ನ ಪ್ರಮುಖ ರಾಜಕಾರಣಿಗಳು ವ್ಹಿಗ್‌ ಪಾರ್ಟಿಯೊಳಗೆ ಹ್ಯಾಮಿಲ್ಟನ್‌ರ ಪ್ರಸ್ತಾಪವನ್ನು 'ಅಮೆರಿಕನ್‌ ವ್ಯವಸ್ಥೆ' ಎಂಬ ಹೆಸರಡಿ ಮುಂದುವರೆಸುತ್ತಾ ಬಂದರು. ಇದಕ್ಕೆ ವಿರೋಧಿಗಳಾದ ಸದರ್ನ್‌ ಡೆಮೊಕ್ರಾಟಿಕ್‌ ಪಾರ್ಟಿ, ಸುಂಕ ಮತ್ತು ಕೈಗಾರಿಕೆಗಳಿಗೆ ರಕ್ಷಣೆ ಕುರಿತು, 1830, 1840 ಮತ್ತು 1850ರ ದಶಕಗಳುದ್ದಕ್ಕೂ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದವು. ಆದರೂ, ಸದರ್ನ್‌ ಡೆಮೊಕ್ರಾಟ್‌ಗಳು ಅಮೆರಿಕಾದ ಸದನದಲ್ಲಿ ಹೆಚ್ಚು ಜನನಿಬಿಡ ಉತ್ತರ ಭಾಗದ ಪ್ರತಿನಿಧಿಗಳಷ್ಟು ಪ್ರಬಲರಾಗಿರಲಿಲ್ಲ. ದಕ್ಷಿಣದವರ ವಿರೋಧವನ್ನು ಲೆಕ್ಕಿಸದೆ, ನಾರ್ದರ್ನ್‌ ವ್ಹಿಗ್ಸ್‌ನವರು ಹೆಚ್ಚಿನ ಸುಂಕಗಳನ್ನು ಬೇಡಿ ಪಡೆದುಕೊಂಡರು. ಸುಂಕದ ವಿಚಾರವಾಗಿ, ದಕ್ಷಿಣದ ರಾಜ್ಯವೊಂದು ಶೂನ್ಯಕರಣ ಬಿಕ್ಕಟ್ಟನ್ನು ಎದುರಿಸಿತು. ರಾಜ್ಯಗಳು ಸಂಯುಕ್ತತೆಯ ನಿಯಮ-ಕಾನೂನುಗಳನ್ನು ಪಾಲಿಸದಿರುವ ಬಗ್ಗೆ ಎಲ್ಲಾ ಹಕ್ಕುಗಳಿವೆಯೆಂದು ವಾದಿಸಿತು. ಜೀತಪದ್ಧತಿ ನಿರ್ಮೂಲನ ಮತ್ತು ಇತರೆ ವಿವಾದಗಳ ಕುರಿತು ವ್ಹಿಗ್ಸ್‌ ಅಂತಿಮವಾಗಿ ಕುಸಿದುಬಿದ್ದು ಒಂದು ಖಾಲಿ ಕಂದರವನ್ನು ಬಿಟ್ಟುಹೋಯಿತು. ಅಬ್ರಹಾಮ್‌ ಲಿಂಕನ್‌ ನಾಯಕತ್ವದ ರಿಪಬ್ಲಿಕನ್‌ ಪಾರ್ಟಿಯು ಈ ಜಾಗವನ್ನು ತುಂಬುವುದಾಗಿತ್ತು. ತನ್ನನ್ನು ತಾನು ಹೆನ್ರಿ ಕ್ಲೇ ಟ್ಯಾರಿಫ್‌ ವ್ಹಿಗ್‌' ಎಂದು ಕರೆದ ಲಿಂಕನ್‌ ಮುಕ್ತ ವ್ಯಾಪಾರ ವಿರೋಧಿಸಿದರು. ಅಂತರ್ಯುದ್ಧ ನಡೆಯುತ್ತಿದ್ದ ಸಮಯ, ಯೂನಿಯನ್‌ ಪೆಸಿಫಿಕ್‌ ರೇಲ್‌ರೋಡ್‌ನ ನಿರ್ಮಾಣ, ಯುದ್ಧ ಧನ ಮತ್ತು ಅಮೆರಿಕಾದ ಕೈಗಾರಿಕೆಗಳ ರಕ್ಷಣೆಗಾಗಿ, ಅಬ್ರಹಾಮ್‌ ಲಿಂಕನ್‌ 44%ರಷ್ಟು ಸುಂಕವನ್ನು ಭಾಗಶಃ ಜಾರಿಗೊಳಿಸಿದರು.[೫] ಉತ್ತರ ಭಾಗದಲ್ಲಿರುವ ಕೈಗಾರಿಕೆಗಳಿಗೆ ಬೆಂಬಲವು ಅಂತಿಮವಾಗಿ ಸಫಲವಾಯಿತು. ರಾಷ್ಟ್ರಾಧ್ಯಕ್ಷ ಅಬ್ರಹಾಮ್‌ ಲಿಂಕನ್‌ರ ಅವಧಿಯ ಹೊತ್ತಿಗೆ, ಕೈಗಾರಿಕೆಗಳನ್ನು ಹೊಂದಿದ್ದ ಉತ್ತರ ಭಾಗದ ರಾಜ್ಯಗಳು ದಕ್ಷಿಣ ರಾಜ್ಯಗಳಿಗಿಂತಲೂ ಹತ್ತು ಪಟ್ಟು ಹೆಚ್ಚು GDP ಹೊಂದಿದ್ದವು. ಈ ಆರ್ಥಿಕ ಅನುಕೂಲಗಳನ್ನು ಹೊಂದಿದ ಉತ್ತರ ಭಾಗದ ರಾಜ್ಯಗಳು ದಕ್ಷಿಣ ರಾಜ್ಯಗಳಿಗೆ ಯಾವುದೇ ಶಸ್ತ್ರಗಳು ತಲುಪದಂತೆ ನೋಡಿಕೊಂಡು, ಸಂಪೂರ್ಣ ನಿರ್ಬಂಧ ಹೇರಿದ್ದಲ್ಲದೆ, ತಮ್ಮದೇ ಸೇನೆಗೆ ಭಾರೀ ಶಸ್ತ್ರಾಸ್ತ್ರ ಮತ್ತು ಹೆನ್ರಿ ರೈಫಲ್‌ಗಳನ್ನು ಪೂರೈಸಿದವು. ಉತ್ತರ ಭಾಗದ ರಾಜ್ಯಗಳು ಅಂತರ್ಯುದ್ಧದಲ್ಲಿ ಜಯಗಳಿಸುವುದರೊಂದಿಗೆ, ಡೆಮೊಕ್ರಾಟ್‌ ವಿರುದ್ಧ ರಿಪಬ್ಲಿಕನ್‌ರ ಪ್ರಾಬಲ್ಯ ಖಚಿತವಾಗಿತ್ತು. ಇಪ್ಪತ್ತನೆಯ ಶತಮಾನದ ಆರಂಭದ ವರೆಗೂ, ರಿಪಬ್ಲಿಕನ್ನರು ಅಮೆರಿಕನ್‌ ರಾಜಕೀಯ ರಂಗದ ಮೇಲೆ ತಮ್ಮ ಬಿಗಿ ಹಿಡಿತ ಸಾಧಿಸಿದ್ದರು. ರಿಪಬ್ಲಿಕನ್‌ ಪಕ್ಷದ ಆಳ್ವಿಕೆಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ನಿಲುವನ್ನು ರಾಷ್ಟ್ರಾಧ್ಯಕ್ಷ ವಿಲಿಯಮ್‌ ಕಿನ್ಲೇ ವಿವರಿಸಿದ್ದು ಹೀಗೆ:

"ಮುಕ್ತ ವ್ಯಾಪಾರದಡಿ, ವರ್ತಕರು ಮಾಲೀಕರು ಹಾಗೂ ತಯಾರಕರು ಜೀತದಾಳುಗಳಾಗಿರುತ್ತಾರೆ. ರಕ್ಷಣೆಯೆಂಬುದು ಪ್ರಕೃತಿಯ ನಿಯಮ, ಸ್ವಯಂ-ಸಂರಕ್ಷಣೆಯೂ ಒಂದು ನಿಯಮ, ಆತ್ಮವಿಕಾಸದ, ಹಾಗೂ ಮಾನವ ಕುಲಕ್ಕೆ ಅತ್ಯುತ್ತಮ ನೀತಿಯನ್ನು ತಮ್ಮದಾಗಿಸಿಕೊಳ್ಳುವ ಒಂದು ಯೋಜನೆ. ರಕ್ಷಣೆ ಅನೈತಿಕ ಎಂದು ಭಾವಿಸಲಾಗಿದೆ... ಜನಸಂಖ್ಯೆ ಹೆಚ್ಚಾಗಿ, ರಕ್ಷಣಾ ನೀತಿಯು 63,000,000 [U.S. ಜನಸಂಖ್ಯೆ] ಜನರಿಗೆ ಅನುಕೂಲ ಮಾಡಿದರೆ, ಈ 63,000,000 ಜನರ ಪ್ರಭಾವವು ಉಳಿದ ಭಾಗದ ಜನರನ್ನು ಉದ್ಧಾರ ಮಾಡಬಲ್ಲವು. ಎಲ್ಲೆಡೆಯೂ ಮಾನವ ಕುಲದ ಉದ್ಧಾರ ಮಾಡದೆ ನಾವು ಪ್ರಗತಿಪಥದಲ್ಲಿ ಹೆಜ್ಜೆ ಹಾಕಲು ಸಾಧ್ಯವಾಗದು. 'ಅತಿ ಅಗ್ಗ ಬೆಲೆಗೆ ಅದೆಲ್ಲಿ ಸಿಗುತ್ತೋ ಕೊಂಡುಕೊಳ್ಳಿ' ಎಂದು ಹೇಳಬಹುದು... ಉಳಿದೆಲ್ಲಕ್ಕೂ ಅನ್ವಯಿಸುವಂತೆ, ದುಡಿಮೆಗೂ ಸಹ ಅನ್ವಯಿಸುತ್ತದೆ. ಅದಕ್ಕಿಂತಲೂ ಇನ್ನೂ ಸಾವಿರ ಪಟ್ಟು ಉತ್ತಮ ಸೂತ್ರವಾಕ್ಯವನ್ನು ಹೇಳುವೆ; ಅದು ರಕ್ಷಣಾ ನೀತಿಯ ಸೂತ್ರವಾಕ್ಯ: 'ಸುಲಭವಾಗಿ ಪಾವತಿ ಮಾಡುವಲ್ಲಿ ಕೊಂಡುಕೊಳ್ಳಿ.' ಭೂಮಿ ಮೇಲಿನ ಆ ಜಾಗವೇ ದುಡಿಮೆಗೆ ಅತ್ಯುತ್ತಮ ಪ್ರತಿಫಲ ಲಭಿಸುವ ಜಾಗವಾಗಿದೆ." [೬]

ದಕ್ಷಿಣದ ಡೆಮೊಕ್ರಾಟ್‌ಗಳು ಹಂತ-ಹಂತವಾಗಿ ತಮ್ಮ ಪಕ್ಷವನ್ನು ಕಟ್ಟಿ ದೃಢಗೊಳಿಸಿದರು. ಅವರು ನಾರ್ದರ್ನ್‌ ಪ್ರೊಗ್ರೆಸಿವ್ಸ್‌ ಪಕ್ಷದೊಂದಿಗೆ ಮಿತೃತ್ವ ಬೆಳೆಸಿಕೊಂಡರು. ಅವರ ನಡುವೆ ಬಹಳಷ್ಟು ಭಿನ್ನಾಭಿಪ್ರಾಯಗಳಿದ್ದರೂ, ಎರಡೂ ಪಕ್ಷಗಳು ಕುದುರಿಕೊಂಡಿದ್ದ ಸಾಂಸ್ಥಿಕ ದತ್ತಿಗಳ ವಿರೋಧಿಗಳಾಗಿದ್ದರು. ರಿಪಬ್ಲಿಕನ್‌ ಪಕ್ಷದಲ್ಲಿ ಭ್ರಷ್ಟಾಚಾರ ನೆಲೆಯೂರಿತ್ತು. ಒಂದೇ ಎದುರಾಳಿಯನ್ನು ಎದುರಿಸಲು ಅನುಕೂಲಕರವಾದ ಈ ಜೊತೆಗೂಡುವಿಕೆಯು ಡೆಮೊಕ್ರಾಟಿಕ್‌ ಪಾರ್ಟಿಗೆ ಅಗತ್ಯ ಚೇತರಿಕೆ ನೀಡಿತು. ಇದರಿಂದಾಗಿ ದೆಮೊಕ್ರಾಟಿಕ್‌ ಪಕ್ಷವು ಅಧಿಕಾರಕಕ್ಕೆ ಮರಳಿತು. ರಿಪಬ್ಲಿಕನ್ನರ ಪ್ರಾಬಲ್ಯವನ್ನು ದುರ್ಬಲಗೊಳಿಸಲು, ನಾರ್ದರ್ನ್‌ ಪ್ರೊಗ್ರೆಸಿವ್ಸ್‌ ಮುಕ್ತ ವ್ಯಾಪಾರಕ್ಕಾಗಿ ಆಗ್ರಹ ಪಡಿಸಿದರು - ಇದರ ಕುರಿತು ವುಡ್ರೊ ವಿಲ್ಸನ್‌ ಕಾಂಗ್ರೆಸ್‌ ಸಭೆಯಲ್ಲಿ ತಮ್ಮ ಭಾಷಣದಲ್ಲಿ ಈ ವಿಚಾರವನ್ನು ಒಪ್ಪಿಕೊಂಡರು. 1920ರ ದಶಕದಲ್ಲಿ ರಿಪಬ್ಲಿಕನ್ನರ ಪುನರುತ್ಥಾನದ ಕ್ಷಿಪ್ರ ಯತ್ನವು ಅವರಿಗೆ ತೀವ್ರ ಹಾನಿಯೊಡ್ಡಿತು. ವುಡ್ರೊ ವಿಲ್ಸನ್‌ರ ಸೈದ್ಧಾಂತಿಕ ಶಿಷ್ಯ [ಸೂಕ್ತ ಉಲ್ಲೇಖನ ಬೇಕು] ಫ್ರ್ಯಾಂಕ್ಲಿನ್‌ ರೂಸ್ವೆಲ್ಟ್‌ ಹಿಂದಿನ ರಿಪಬ್ಲಿಕನ್‌ ರಾಷ್ಟ್ರಾಧ್ಯಕ್ಷ ಹರ್ಬರ್ಟ್ ಹೂವರ್‌ನ ಆರ್ಥಿಕ ರಕ್ಷಣಾ ನೀತಿಗಳಿಗೆ ಇದೊಂದು 'ಗ್ರೇಟ್‌ ಡಿಪ್ರೆಷನ್‌' ಎಂದು ಟೀಕಿಸಿದರು. [ಸೂಕ್ತ ಉಲ್ಲೇಖನ ಬೇಕು] ಪಕ್ಷದ ದಕ್ಷಿಣ-ಭಾಗದಲ್ಲಿರುವ ಬಣದ ಕೃಪಾಕಟಾಕ್ಷ ಪಡೆಯಲು, ಡೆಮೊಕ್ರಾಟಿಕ್‌ ಪಾರ್ಟಿ ಮುಕ್ತ ವ್ಯಾಪಾರದ ಪರ ಹಲವು ನಿರ್ಧಾರಗಳನ್ನು ಕೈಗೊಂಡಿದ್ದುಂಟು. ಪಕ್ಷದ ಶ್ರಮಿಕ-ಪರ ಗುಂಪುಗಳಿಂದ ಹೆಚ್ಚಾಗುತ್ತಿರುವ ಸಂಯಮದ ಕರೆಗಳ ನಡುವೆ ಬಹಳ ಎಚ್ಚರಿಕೆಯಿಂದ ನಡೆದುಹೋಗುತ್ತಿತ್ತು. ಎರಡನೆಯ ಮಹಾಯುದ್ಧ ನಂತರದ(ಅಲೈಸ್‌) ಮುಕ್ತ ವ್ಯಾಪಾರವು, ಮೈತ್ರಿಕೂಟಕ್ಕಿರುವ ಧ್ಯೇಯವಾಗಿತ್ತು. ಇದರತ್ತ ಹಂತ-ಹಂತವಾಗಿ ಸಾಗಲು ಹಲವು ಸುತ್ತುಗಳ ಚರ್ಚೆಗಳು ಮತ್ತು ಒಪ್ಪಂದಗಳು ನಡೆದವು. ಗ್ರೇಟ್‌ ಡಿಪ್ರೆಷನ್‌ಗೆ ಕಾರಣರಾಗಿ, ಎಲ್ಲರಿಂದಲೂ ತೀವ್ರ ಟೀಕೆಗೊಳಗಾದ ರಿಪಬ್ಲಿಕನ್ನರು ಹಂತ-ಹಂತವಾಗಿ ಮುಕ್ತ ವಹಿವಾಟಿನ ಪರ ವಹಿಸುವವರಾದರು. ಇಂದಿಗೂ ಸಹ ರಿಪಬ್ಲಿಕನ್‌ ಪಕ್ಷವು ಮುಕ್ತ ವಹಿವಾಟಿನ ಪರ ವಹಿಸುತ್ತಿದೆ. 1960ರ ದಶಕದಲ್ಲಿ, ಉತ್ತರ ಭಾಗದ ರಿಪಬ್ಲಿಕನ್ನರ ಬೆಂಬಲದೊಂದಿಗೆ ಹಲವು ನಾಗರಿಕ ಹಕ್ಕು ಸುಧಾರಣಾ ಮಸೂದೆಗಳನ್ನು ಅಂಗೀಕರಿಸಿದ ಡೆಮೋಕ್ರಾಟಿಕ್‌ ಪಾರ್ಟಿ, ತನ್ನ ದಕ್ಷಿಣ ವಲಯದ ಬೆಂಬಲವನ್ನು ಕಳೆದುಕೊಂಡಿತು. ಆ ದಕ್ಷಿಣ ವಲಯದ ಮತಗಳನ್ನು ತಮ್ಮದಾಗಿಸಿಕೊಳ್ಳಲು, ರಿಪಬ್ಲಿಕನ್‌ ಪಾರ್ಟಿಯು ತಮ್ಮ ಮುಕ್ತ ವಹಿವಾಟಿನ ಸಮರ್ಥನೆ ಮತ್ತು ನಾಗರಿಕ ಹಕ್ಕು ಸುಧಾರಣೆಯ ಅಸಮ್ಮತಿಯನ್ನು ಬಹಳ ಚಾಣಾಕ್ಷತನದಿಂದ ನಿರ್ವಹಿಸಿತು. ಈ ರೀತಿ ರಿಪಬ್ಲಿಕನ್‌ ಪಾರ್ಟಿಯು ಡೆಮೊಕ್ರಾಟಿಕ್‌ ಪಾರ್ಟಿಯೊಂದಿಗೆ ವಲಯಗಳ 'ವಿನಿಮಯ' ಮಾಡಿಕೊಂಡಿತ್ತು. ವಿಪರ್ಯಾಸವೆಂಬಂತೆ, ಹರ್ಬರ್ಟ್‌ ಹೂವರ್‌ರ ಸಹಚರರೆಂಬ ಹಣೆಪಟ್ಟಿ ಹೊತ್ತಿದ್ದ ರಿಪಬ್ಲಿಕನ್ನರು, ಮುಕ್ತ ವಹಿವಾಟಿನ ದೃಢ ಸಮರ್ಥಕರಾದರೂ ಸಹ, ಆರ್ಥಿಕ ರಕ್ಷಣಾ ನೀತಿಯ ಪರವಾಗಿ ನಿಲ್ಲದಿದ್ದ ಕಾರಣ 2008ರಲ್ಲಿ ನಡೆದ ಚುನಾವಣೆಗಳಲ್ಲಿ ಸೋಲುಣ್ಣಬೇಕಾಯಿತು.

ಆರ್ಥಿಕ ರಕ್ಷಣಾ ನೀತಿಗಳು[ಬದಲಾಯಿಸಿ]

ಆರ್ಥಿಕ ರಕ್ಷಣಾ ಧ್ಯೇಯಗಳನ್ನು ಪಡೆಯಲು ವಿವಿಧ ನೀತಿಗಳನ್ನು ಬಳಸಬಹುದಾಗಿದೆ. ಅವುಗಳಲ್ಲಿ:

 1. ಸುಂಕಗಳು : ಮಾದರಿಯಾಗಿ, ಆಮದಾದ ಸಾಮಗ್ರಿಗಳ ಮೇಲೆ ಸುಂಕಗಳನ್ನು (ತೆರಿಗೆಗಳು) ವಿಧಿಸಲಾಗುತ್ತದೆ.
ಸಾಮಾನ್ಯವಾಗಿ, ಸಾಮಗ್ರಿಗಳ ವಿಧಗಳನ್ನು ಲೆಕ್ಕಹಾಕಿ, ಸುಂಕದ ದರಗಳು ವ್ಯತ್ಯಾಸವಾಗುತ್ತವೆ. ಆಮದು ಸುಂಕಗಳು ಆಮದುದಾರರಿಗೆ ಖರ್ಚು-ವೆಚ್ಚವನ್ನು ಹೆಚ್ಚಿಸುತ್ತವೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಆಮದಾದ ಸಾಮಗ್ರಿಗಳ ಬೆಲೆಗಳನ್ನು ಹೆಚ್ಚಿಸಿ, ಆಮದಾಗುವ ಸಾಮಗ್ರಿಗಳ ಪರಿಮಾಣವನ್ನು ಕಡಿಮೆಗೊಳಿಸುತ್ತದೆ. ರಫ್ತುಗಳ ಮೇಲೂ ಸಹ ಸುಂಕಗಳನ್ನು ವಿಧಿಸಬಹುದು. ಅಸ್ಥಿರ ವಿನಿಮಯ ದರಗಳುಳ್ಳ ಆರ್ಥಿಕತೆಯಲ್ಲಿ, ರಫ್ತು ಸುಂಕಗಳು ಆಮದು ಸುಂಕಗಳಂತೆಯೇ ಪ್ರಭಾವ ಹೊಂದಿರುತ್ತವೆ. ಆದರೂ, ರಫ್ತು ಸುಂಕಗಳು ದೇಶೀಯ ಕೈಗಾರಿಕೆಗಳಿಗೆ ಹಾನಿಯೊಡ್ಡಬಹುದು. ಅಲ್ಲದೇ ಆಮದು ಸುಂಕಗಳು ದೇಶೀಯ ಕೈಗಾರಿಕೆಗಳಿಗೆ ಸಹಾಯಕರವಾಗಬಹುದು; ಎಂಬ ಕಾರಣಕ್ಕೆ, ರಫ್ತು ಸುಂಕವನ್ನು ಜಾರಿಗೊಳಿಸುವುದು ಅತಿ ವಿರಳ. 
 1. ಆಮುದು ಕೋಟಾಗಳು : ಪರಿಮಾಣವನ್ನು ಕಡಿಮೆಗೊಳಿಸಿ ಆಮುದಾದ ಸಾಮಗ್ರಿಗಳ ಮಾರುಕಟ್ಟೆ ಬೆಲೆಯನ್ನು ಏರಿಸುವುದು. ಆಮದು ಕೋಟಾದ ಆರ್ಥಿಕ ಪ್ರಭಾವವು ಸುಂಕದಷ್ಟೇ ಪರಿಣಾಮಕಾರಿಯಾಗಿದೆ; ವ್ಯತ್ಯಾಸವೇನೆಂದರೆ ಸುಂಕದಿಂದ ತೆರಿಗೆ ಆದಾಯ ಲಾಭನ್ನು ಆಮದು ಅನೂಜ್ಞಾಪತ್ರಗಳನ್ನು ಪಡೆಯುವವರಿಗೆ ಹಂಚಲಾಗುತ್ತದೆ. ಆಮದು ಅನೂಜ್ಞಾಪತ್ರಗಳನ್ನು ಅತಿ ಹೆಚ್ಚು ಅರ್ಜಿದಾರರಿಗೆ ಹರಾಜು ಮಾಡುವುದು, ಅಥವಾ ಆಮದು ಕೋಟಾಗಳ ಬದಲಿಗೆ ಸಮನಾದ ಸುಂಕವನ್ನು ಜಾರಿಗೊಳಿಸುವುದು, ಎಂದು ಆರ್ಥಶಾಸ್ತ್ರಜ್ಞರು ಆಗಾಗ್ಗೆ ಸೂಚಿಸುತ್ತಾರೆ
 2. ಆಡಳಿತದ ಅಡೆತಡೆಗಳು : ದೇಶಗಳು ಕೆಲವೊಮ್ಮೆ ಹಲವು ಆಡಳಿತದ ನಿಯಮಗಳ ಮೂಲಕ (ಉದಾಹರಣೆಗೆ, ಆಹಾರ ಸುರಕ್ಷತೆ, ಪರಿಸರೀಯ ಗುಣಮಟ್ಟ, ವಿದ್ಯುತ್‌ ಸುರಕ್ಷತೆ ಇತ್ಯಾದಿ) ಆಮದುಗಳಿಗೆ ವಿಘ್ನಗಳನ್ನು ಒಡ್ಡುತ್ತಿವೆ, ಎಂಬ ಆರೋಪಗಳು ಕೇಳಿಬರುತ್ತಿವೆ.
 3. 'ಅಗ್ಗ ಬೆಲೆ-ಮಾರಾಟ-ವಿರೋಧಿ‌' ಶಾಸನ 'ಅಗ್ಗ ಬೆಲೆ-ಮಾರಾಟ-ವಿರೋಧಿ‌' ಕಾನೂನು-ನಿಯಮಗಳ ಸಮರ್ಥಕರು ವಾದಿಸುವುದೇನೆಂದರೆ, ಅಗ್ಗದ ಬೆಲೆಯ ವಿದೇಶೀ ಸರಕನ್ನು ತಮ್ಮ ದೇಶದೊಳಗೆ ತಳ್ಳುವುದರಿಂದ, ಸ್ಥಳೀಯ ಉದ್ದಿಮೆಗಳಿಗೆ ನಷ್ಟವಾಗುವುದು; ಇಂತಹ ಕಾನೂನು ಅದನ್ನು ತಡೆಗಟ್ಟುವುದು. ಆದರೆ, ಪ್ರಾಯೋಗಿಕವಾಗಿ, ವಿದೇಶಿ ರಫ್ತುದಾರರಿಗೆ ವಹಿವಾಟು ಸುಂಕಗಳನ್ನು ವಿಧಿಸಲು ಅಗ್ಗ ಬೆಲೆ-ಮಾರಾಟ-ವಿರೋಧಿ ಕಾನೂನುಗಳನ್ನು ಸಾಮಾನ್ಯವಾಗಿ ಬಳಸಲಾಗಿದೆ.
 4. ನೇರ ಅನುದಾನಗಳು: ಕೆಲವೊಮ್ಮೆ, ವಿದೇಶೀ ಆಮದುಗಳ ವಿರುದ್ಧ ಪೈಪೋಟಿ ನಡೆಸಲಾಗದ ಸ್ಥಳೀಯ ಉದ್ದಿಮೆಗಳಿಗೆ ಸರ್ಕಾರಿ ಅನುದಾನಗಳನ್ನು ಬೃಹತ್ ಮೊತ್ತದ ಪಾವತಿ ಅಥವಾ ಅಗ್ಗದ ಸಾಲಗಳ ರೂಪದಲ್ಲಿ ಪೂರೈಸಲಾಗುತ್ತದೆ. ಸ್ಥಳೀಯ ಉದ್ಯೋಗವಕಾಶಗಳನ್ನು ರಕ್ಷಿಸಲು ಹಾಗೂ ಸ್ಥಳೀಯ ಉದ್ದಿಮೆಗಳು ಜಾಗತಿಕ ಮಾರುಕಟ್ಟೆಗಳಿಗೆ ಸರಿಹೊಂದಿಕೊಳ್ಳುವಂತೆ ನೆರವಾಗಲು ಈ ಅನುದಾನಗಳನ್ನು ನೀಡಲಾಗಿದೆ.
 5. ರಫ್ತು ಅನುದಾನಗಳು : ಸರ್ಕಾರಗಳು ರಫ್ತುಗಳನ್ನು ಹೆಚ್ಚಿಸಲು ರಫ್ತು ಅನುದಾನಗಳನ್ನು ಆಗಾಗ್ಗೆ ಬಳಸಿಕೊಳ್ಳುತ್ತವೆ. ರಫ್ತು ಅನುದಾನಗಳು ರಫ್ತು ಸುಂಕಗಳಿಗೆ ತದ್ವಿರುದ್ಧವಾಗಿವೆ. ರಫ್ತುದಾರರಿಗೆ ತಮ್ಮ ರಫ್ತು ಮೌಲ್ಯಗಳಲ್ಲಿ ಶೇಕಡಾವಾರು ಮೊತ್ತವನ್ನು ನೀಡಲಾಗುತ್ತದೆ. ರಫ್ತು ಅನುದಾನಗಳು ವಹಿವಾಟಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಸ್ಥಿರವಾದ ವಿನಿಮಯ ದರಗಳಿರುವ ದೇಶದಲ್ಲಿ, ಇದು ಆಮದು ಅನುದಾನಗಳಂತೆಯೇ ಪ್ರಭಾವಗಳನ್ನು ಹೊಂದಿರುತ್ತವೆ.
 6. ವಿನಿಮಯ ದರ ಕುಶಲಬಳಕೆ: ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಸರ್ಕಾರವು ತನ್ನ ಕರೆನ್ಸಿಯನ್ನು ಮಾರಿ, ತನ್ನ ಕರೆನ್ಸಿಯ ಮೌಲ್ಯವನ್ನು ತಗ್ಗಿಸುವುದರ ಮೂಲಕ ಮಧ್ಯಪ್ರವೇಶಿಸಬಹುದು. ಈ ರೀತಿ ಮಾಡುವುದರ ಮೂಲಕ ಆಮದುಗಳ ಬೆಲೆ ಹೆಚ್ಚಾಗಿ ರಫ್ತುಗಳ ಬೆಲೆಯನ್ನು ತಗ್ಗಿಸಿ, ವಹಿವಾಟು ಸಮತೋಲನದಲ್ಲಿ ಚೇತರಿಕೆಯಾಗುವುದು. ಆದರೆ, ಇಂತಹ ನೀತಿಯು ಕೇವಲ ಅಲ್ಪಾವಧಿಯ ವರೆಗೆ ಉಪಯುಕ್ತವಾಗಿರುತ್ತದೆ. ಆನಂತರ, ಇದು ದೇಶದಲ್ಲಿ ಹಣದುಬ್ಬರಕ್ಕೆ ಕಾರಣವಾಗಿ, ರಫ್ತುಗಳ ವೆಚ್ಚವನ್ನು ಏರಿಸಿ, ತತ್ಸಂಬಂಧಿತ ಆಮದುಗಳ ಬೆಲೆಗಳನ್ನು ಕಡಿಮೆಗೊಳಿಸುತ್ತದೆ.

ವಸ್ತುತಃ ಆರ್ಥಿಕ ರಕ್ಷಣಾ ನೀತಿ[ಬದಲಾಯಿಸಿ]

ಇಂದಿನ ವಹಿವಾಟು ಕ್ಷೇತ್ರದಲ್ಲಿ, ಸುಂಕಗಳಲ್ಲದೆ, ಹಲವು ಯತ್ನಗಳನ್ನು ಆರ್ಥಿಕ ರಕ್ಷಣಾ ಯತ್ನಗಳೆಂದು ಪರಿಗಣಿಸಲಾಗಿದೆ. ಉದಾಹರಣೆಗೆ, ಜಗದೀಶ್‌ ಭಾಗವತಿಯವರಂತಹ ವಿಮರ್ಶಕರು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮದೇ ಆದ ಶ್ರಮಿಕ ಅಥವಾ ಪರಿಸರೀಯ ಮಾನದಂಡಗಳನ್ನು ಜಾರಿಗೊಳಿಸುವುದನ್ನು 'ಆರ್ಥಿಕ ರಕ್ಷಣಾ ನೀತಿ' ಎಂದು ಪರಿಗಣಿಸಿದ್ದಾರೆ. ಜೊತೆಗೆ, ಆಮದುಗಳ ಮೇಲೆ ನಿರ್ಬಂಧಿಸುವಂತಹ ಪ್ರಮಾಣೀಕರಣ ವಿಧಾನಗಳ ಜಾರಿಗೊಳಿಸುವಿಕೆಯನ್ನೂ ಸಹ ಆರ್ಥಿಕ ರಕ್ಷಣಾ ನೀತಿ ಎಂದು ಪರಿಗಣಿಸಲಾಗಿದೆ. ಇಷ್ಟೇ ಅಲ್ಲ, ಮುಕ್ತ ವಹಿವಾಟು ಒಪ್ಪಂದಗಳಲ್ಲಿ ಆಗಾಗ್ಗೆ ಆರ್ಥಿಕ ರಕ್ಷಣಾ ನೀತಿಯಂತಹ ವಿಧಿಗಳಿವೆ - ಉದಾಹರಣೆಗೆ ಬೌದ್ಧಿಕ ಸ್ವತ್ತು, ಕೃತಿಸ್ವಾಮ್ಯ ಹಾಗೂ ಬೃಹತ್‌ ಉದ್ದಿಮೆಗಳಿಗೆ ಅನುಕೂಲಕರವಾಗುವಂತಹ ಹಕ್ಕುಸ್ವಾಮ್ಯ ನಿರ್ಬಂಧಗಳು. ಈ ವಿಧಿಗಳು ಸಂಗೀತ, ಚಲನಚಿತ್ರಗಳು, ಔಷಧಿಗಳು, ತಂತ್ರಾಂಶಗಳು ಮತ್ತು ಇತರೆ ಸಿದ್ದಪಡಿಸಿದ ವಸ್ತುಗಳನ್ನು ಹೆಚ್ಚಿನ ವೆಚ್ಚದ ತಯಾರಕರಿಗೆ ನಿರ್ಬಂಧಿಸಿ, ಕಡಿಮೆ ವೆಚ್ಚದ ತಯಾರಕರಿಗಾಗಿ ಕೋಟಾಗಳನ್ನು ಸೊನ್ನೆಗೆ ಹೊಂದಿಸುತ್ತವೆ.[೭][೮]

ಆರ್ಥಿಕ ರಕ್ಷಣಾ ನೀತಿಯ ಪರವಾಗಿ ವಾದಗಳು[ಬದಲಾಯಿಸಿ]

ತಮ್ಮ ದೇಶದ ಆರ್ಥಿಕತೆ ಮತ್ತು ತಮ್ಮ ಜನತೆಯ ಜೀವನದ ಗುಣಮಟ್ಟದ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರವು ಮುಕ್ತ ವಹಿವಾಟಿನ ಮೇಲೆ ಸರ್ಕಾರಿ ನಿರ್ಬಂಧ ಹೇರಲು ನ್ಯಾಯಸಮ್ಮತ ಅಗತ್ಯವಿದೆ.

'ಹೋಲಿಕೆಯ ಅನುಕೂಲ' ವಾದವು ತನ್ನ ನ್ಯಾಯಸಮ್ಮತತೆಯನ್ನು ಕಳೆದುಕೊಂಡಿದೆ.[ಬದಲಾಯಿಸಿ]

ಬಂಡವಾಳವು ಅಂತರರಾಷ್ಟ್ರೀಯವಾಗಿ, ಜಾಗತಿಕವಾಗಿ ಒಂದಾಗಿರುವ ಪ್ರಪಂಚದಲ್ಲಿ ಹೋಲಿಕೆಯ ಅನುಕೂಲದ ವಾದವು ನೈತಿಕತೆಯನ್ನು ಕಳೆದುಕೊಂಡಿದೆಯೆಂದು ಮುಕ್ತ ವ್ಯಾಪಾರ ನೀತಿಯ ವಿರೋಧಿಗಳು ವಾದಿಸುತ್ತಾರೆ. ಆರ್ಥಿಕತೆಯಲ್ಲಿ ರಿಕಾರ್ಡೊರ ಹೋಲಿಕೆಯ ಅನುಕೂಲವು ಸುಲಲಿತವಾದ ಸಿದ್ಧಾಂತವಾದರೂ, ಇಂದಿನ ಆರ್ಥಿಕತೆಗೆ ಅದನ್ನು ಅನ್ವಯಿಸಲು ಯತ್ನಿಸುವುದು ತರ್ಕಸಮ್ಮತವಲ್ಲ, ಎಂದು ಪರಿಸರ ವಿಜ್ಞಾನದ ಅರ್ಥಿಕತೆ ಕ್ಷೇತ್ರದಲ್ಲಿ ಚಿರಪರಿಚಿತ ವ್ಯಕ್ತಿ ಹರ್ಮನ್‌ ಡಾಲಿ ಒತ್ತಿ ಹೇಳಿದ್ದಾರೆ. 'ಮುಕ್ತ ಬಂಡವಾಳ ಚಲನವಲನವು ಸಂಪೂರ್ಣವಾಗಿ ರಿಕಾರ್ಡೊರ ಹೋಲಿಕೆಯ ಅನುಕೂಲ ವಾದವನ್ನು ತಳ್ಳಿಹಾಕುತ್ತದೆ. ಏಕೆಂದರೆ ಈ ವಾದವು ಸ್ಪಷ್ಟ ಮತ್ತು ಅಗತ್ಯವಾಗಿರುವ ರಾಷ್ಟ್ರಗಳ ನಡುವೆ ಚಲಿಸದಿರುವ ಬಂಡವಾಳ ಮತ್ತು ಇತರೆ ಕಾರಣಗಳನ್ನು ಆಧರಿಸಿದೆ. ನೂತನ ಜಾಗತಿಕ ಆರ್ಥಿಕತೆಯಲ್ಲಿ, ಬಂಡವಾಳವು ಒಟ್ಟಾರೆ ಕಡಿಮೆ ವೆಚ್ಚಗಳುಳ್ಳ ಕ್ಷೇತ್ರಗಳೆಡೆ ಮಾತ್ರ ಹೋಗುತ್ತದೆ, ಅರ್ಥಾತ್‌ ಸ್ಪಷ್ಟ ಅನುಕೂಲಗಳನ್ನು ಹುಡುಕಿಕೊಂಡು ಹೋಗುತ್ತದೆ.' [೯] ಈ ವಾದವನ್ನು ಸಮರ್ಥಿಸಲು, ರಕ್ಷಣಾವಾದಿಗಳು ಕೈಗಾರಿಕಾ ಘಟಕಗಳು ಮತ್ತು ತಯಾರಿಕೆಯ ಘಟಕಗಳನ್ನು ಮೆಕ್ಸಿಕೋಗೆ ಸ್ಥಳಾಂತರಿಸಿದ GE, GM ಹಾಗೂ ಹರ್ಷ್ಲೇ ಚಾಕಲೇಟ್‌ನಂತಹ ಅಮೆರಿಕನ್‌ ಉದ್ದಿಮೆಗಳತ್ತ ಬೆಟ್ಟು ಮಾಡುತ್ತಾರೆ.

ದೇಶೀಯ ತೆರಿಗೆ ನೀತಿಗಳು ವಿದೇಶೀ ಸಾಮಗ್ರಿಗಳ ಪರವಾಗಿರಬಹುದು[ಬದಲಾಯಿಸಿ]

ಸ್ವದೇಶದ ಮಾರುಕಟ್ಟೆಗಳಲ್ಲಿ ವಿದೇಶಿ ಸರಕುಗಳಿಗೆ ಯಾವುದೇ ಸುಂಕ ಅಥವಾ ಇತರೆ ತೆರಿಗೆಗಳಿಲ್ಲದೆ ಮಾರಾಟಕ್ಕೆ ಅವಕಾಶ ನೀಡಿದರೆ, ಸ್ವದೇಶೀ ಸರಕುಗಳು ಪೈಪೊಟಿ ಪರಿಸ್ಥಿತಿಯನ್ನು ಎದುರಿಸುತ್ತವೆ. ಇದು ಒಂದು ರೀತಿಯ ಹಿಮ್ಮೊಗವಾದ ಆರ್ಥಿಕ ರಕ್ಷಣಾ ನೀತಿ ಎಂದು ಆರ್ಥಿಕ ರಕ್ಷಣಾ ನೀತಿಯ ಸಮರ್ಥಕರು ನಂಬಿದ್ದಾರೆ. ವಿದೇಶೀ ಉತ್ಪಾದನೆಗಳ ಮೇಲೆ ಆದಾಯ ಸುಂಕಗಳನ್ನು ರದ್ದುಗೊಳಿಸುವುದರ ಮೂಲಕ, ಸರ್ಕಾರಗಳು ಆದಾಯಕ್ಕಾಗಿ ಇಡಿಯಾಗಿ ದೇಶೀಯ ತೆರಿಗೆಯನ್ನು ಅವಲಂಬಿಸಬೇಕಾಗುವುದು. ಇದು ದೇಶೀಯ ಉತ್ಪಾದನೆಯ ಮೇಲೆ ಅಸಮತುಲನಾತ್ಮಕ ಪ್ರಭಾವ ಬೀರುತ್ತದೆ. ಪಾಲ್‌ ಕ್ರೇಗ್‌ ರಾಬರ್ಟ್ಸ್‌ ಟಿಪ್ಪಣಿಯ ಪ್ರಕಾರ, 'US ಉತ್ಪಾದನೆಗಳ ವಿರುದ್ಧ ವಿದೇಶೀ ತಾರತಮ್ಯಕ್ಕೆ US ತೆರಿಗೆ ವ್ಯವಸ್ಥೆಯೇ ಕಾರಣವಾಗಿದೆ. ಇದು ವಿದೇಶೀ ಸರಕು ಮತ್ತು ಸೇವೆಗಳ ಮೇಲೆ ಯಾವುದೇ ತೆರಿಗೆ ವಿಧಿಸುವುದಿಲ್ಲ; ಆದರೆ US ಉತ್ಪಾದಕರ ಮೇಲೆ ಭಾರೀ ತೆರಿಗೆ ವಿಧಿಸುತ್ತದೆ. ಸರಕುಗಳ ಮಾರಾಟ ಅಥವಾ ಸೇವೆ USನಲ್ಲೇ ಆಗಲಿ ಅಥವಾ ವಿದೇಶಗಳಿಗೆ ರಫ್ತಾಗಲಿ ಯಾವುದೇ ವ್ಯತ್ಯಾಸವಾಗದು.' [೧೦] ಈ ಹಿಮ್ಮೊಗ ಆರ್ಥಿಕ ರಕ್ಷಣಾ ನೀತಿಯು, VAT (ಮೌಲ್ಯವರ್ಧಿತ ತೆರಿಗೆ) ವ್ಯವಸ್ಥೆಯಲ್ಲಿ ಭಾಗವಹಿಸಿದ USನಂತಹ ದೇಶಗಳಿಗೆ ಅನನುಕೂಲಕರ ಸ್ಥಿತಿ ತಂದೊಡ್ಡುತ್ತದೆಯೆಂದು ಆರ್ಥಿಕ ರಕ್ಷಣಾ ನೀತಿ ಸಮರ್ಥಕರು ವಾದಿಸುತ್ತಾರೆ. ದೇಶೀಯ ಅಥವಾ ವಿದೇಶೀಯ ಸರಕು ಅಥವಾ ಸೇವೆಯಾಗಲಿ, ಇವುಗಳ ಮೇಲಿನ ತೆರಿಗೆಯ ಮೂಲಕ ಆದಾಯ ಗಳಿಸುತ್ತದೆ. ವ್ಯಾಟ್‌ನಲ್ಲಿ ಭಾಗವಹಿಸುವ ದೇಶದೊಂದಿಗೆ ವಹಿವಾಟು ನಡೆಸುವ ವ್ಯಾಟ್‌-ರಹಿತ ದೇಶವು, ಅನನುಕೂಲಕರ ಸ್ಥಿತಿಯಲ್ಲಿರುತ್ತದೆ; ಎಂದು ಆರ್ಥಿಕ ರಕ್ಷಣಾ ನೀತಿಯ ಸಮರ್ಥಕರು ವಾದಿಸುತ್ತಾರೆ. ಹಾಗಾಗಿ, ವ್ಯಾಟ್‌ ವಿಧಿಸುವ ದೇಶದಲ್ಲಿ, ವ್ಯಾಟ್‌-ರಹಿತ ದೇಶದ ಉತ್ಪನ್ನದ ಅಂತಿಮ ಮಾರಾಟ ಬೆಲೆಯು, ತನ್ನ ಮೂಲ ದೇಶದ ತೆರಿಗೆಯನ್ನಷ್ಟೇ ಅಲ್ಲ, ಮಾರಾಟ ಮಾಡಲಾದ ದೇಶದಲ್ಲಿಯೂ ಸಹ ತೆರಿಗೆ ಹೊರೆ ಈ ಉತ್ಪನ್ನದ ಮೇಲಿರುತ್ತದೆ. ವಿಲೋಮವಾಗಿ, ವ್ಯಾಟ್‌ ವಿಧಿಸದ ದೇಶದಲ್ಲಿ, ವ್ಯಾಟ್‌ ವಿಧಿಸುವ ದೇಶದ ಉತ್ಪನ್ನದ ಮಾರಾಟ ಬೆಲೆಯು, (ದೇಶೀಯ ಉತ್ಪನ್ನಗಳಿಗೆ ಹೋಲಿಸಿದರೆ) ಯಾವುದೇ ತೆರಿಗೆಯನ್ನು ಒಳಗೊಂಡಿರುವುದಿಲ್ಲ. ಇನ್ನೂ ಹೆಚ್ಚಿಗೆ, ಉತ್ಪನ್ನವೊಂದು ವ್ಯಾಟ್‌-ರಹಿತ ದೇಶದಲ್ಲಿ ಮಾರಾಟವಾದಲ್ಲಿ, ಭಾಗವಹಿಸುವ ದೇಶವು ಆ ಉತ್ಪನ್ನದ ತಯಾರಿಕೆಯಲ್ಲಿ ವಸೂಲು ಮಾಡಿದ ವ್ಯಾಟ್‌ ತೆರಿಗೆಗಳಿಗೆ ವಿನಾಯತಿ ನೀಡುತ್ತದೆ. ವ್ಯಾಟ್‌ ರಹಿತ ದೇಶಗಳಲ್ಲಿ ಮಾರಾಟವಾದ ವ್ಯಾಟ್‌ ವಿಧಿಸುವ ದೇಶಗಳ ಸರಕಿನ ರಫ್ತುದಾರರಿಗೆ ಆ ಸರಕಿನ ಬೆಲೆಯನ್ನು ಕಡಿಮೆಗೊಳಿಸಲು ಅವಕಾಶ ನೀಡುತ್ತದೆ. ಸುಂಕಗಳ ಮೂಲಕ ಸರ್ಕಾರಗಳು ಈ ಅಸಾಮ್ಯತೆಯನ್ನು ಬಗೆಹರಿಸಬೇಕೆಂದು ಆರ್ಥಿಕ ರಕ್ಷಣಾ ನೀತಿ ಸಮರ್ಥಕರು ನಂಬಿದ್ದಾರೆ.

ಹೊಸ ಕೈಗಾರಿಕೆಗಳ ವಾದ[ಬದಲಾಯಿಸಿ]

ಹೊಸದಾಗಿ ಆರಂಭಗೊಂಡ ಕೈಗಾರಿಕೆಗಳನ್ನು ರಕ್ಷಿಸಲು ಜಾರಿಗೊಳಿಸಲಾದ ಸುಂಕಗಳು, ಇಂತಹ ದೇಶೀಯ ಕೈಗಾರಿಕೆಗಳು ಅಭಿವೃದ್ಧಿ ಪಡೆದು, ಅವು ವಿಸ್ತಾರಗೊಂಡಾಗ ಅಂತರರಾಷ್ಟ್ರೀಯ ಆರ್ಥಿಕತೆಯೊಳಗೆ ಸ್ವಾವಲಂಬನೆ ಪಡೆಯಲು ನೆರವಾಗುತ್ತವೆ, ಎಂದು ಆರ್ಥಿಕ ರಕ್ಷಣಾ ನೀತಿ ಪ್ರಸ್ತಾಪಿಸುವವರು ಹೇಳಿಕೊಂಡಿದ್ದಾರೆ.

ಆರ್ಥಿಕ ರಕ್ಷಣಾ ನೀತಿ ವಿರುದ್ಧದ ವಾದ[ಬದಲಾಯಿಸಿ]

ಆರ್ಥಿಕ ರಕ್ಷಣಾ ನೀತಿ ಸಹಾಯ ಮಾಡಬೇಕಾದವರಿಗೆ ತೊಂದರೆ ನೀಡುವಂತಹ ನೀತಿಯಾಗಿದೆ, ಎಂದು ಅದನ್ನು ಪದೇ ಪದೇ ಟೀಕಿಸಲಾಗಿದೆ. ಹಲವು ಮುಖ್ಯವಾಹಿನಿಯ ಆರ್ಥಶಾಸ್ತ್ರಜ್ಞರು ಮುಕ್ತ ವಹಿವಾಟಿನ ಪರ ವಾದಿಸುತ್ತಾರೆ.[೧][೪] ಮುಕ್ತ ವಹಿವಾಟಿನಿಂದ ಪಡೆಯಲಾದ ಲಾಭಗಳು ಯಾವುದೇ ನಷ್ಟವನ್ನು ಮೀರಿಸುತ್ತವೆ, ಏಕೆಂದರೆ, ಅವು ಹೋಲಿಕೆಯ ಅನುಕೂಲವನ್ನು ಹೊಂದಿರುವ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ತೊಡಗಲು ದೇಶಗಳಿಗೆ ಅವಕಾಶ ನೀಡುತ್ತವೆ, ಎಂದು ಹೋಲಿಕೆಯ ಅನುಕೂಲದ ತತ್ವದಡಿ, ಆರ್ಥಿಕ ಸಿದ್ಧಾಂತವು ಸಾಧಿಸಿ ತೋರಿಸುತ್ತದೆ.[೧೧] ಆರ್ಥಿಕ ರಕ್ಷಣಾ ನೀತಿಯು ಜಡತೂಕದ ನಷ್ಟದಲ್ಲಿ ಪರಿಣಮಿಸುತ್ತದೆ; ಈ ನಷ್ಟವು ಯಾರಿಗೂ ಎಂತಹ ಅನುಕೂಲವನ್ನೂ ನೀಡುವುದಿಲ್ಲ. ಆದರೆ ಮುಕ್ತ ವಹಿವಾಟಿನಲ್ಲಿ ಇಂತಹ ಯಾವುದೇ ನಷ್ಟವಿರುವುದಿಲ್ಲ. ಆರ್ಥಶಾಸ್ತ್ರಜ್ಞ ಸ್ಟೀಫೆನ್‌ ಪಿ. ಮ್ಯಾಗೀ ಪ್ರಕಾರ, ಮುಕ್ತ ವಹಿವಾಟುಗಳ ಅನುಕೂಲಗಳು ನಷ್ಟವನ್ನು 100:1ರ ನಿಷ್ಪತ್ತಿಯಲ್ಲಿ ಮೀರಿಸುತ್ತವೆ.[೧೨] ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ಕಟ್ಟುನಿಟ್ಟಾದ ಆರೋಗ್ಯ ಮತ್ತು ಶ್ರಮ ಗುಣಮಟ್ಟಗಳಿಗೆ ಒಳಪಡದಿದ್ದರೂ ಸಹ, ಮುಕ್ತ ವಹಿವಾಟು ಅಭಿವೃದ್ಧಿಶೀಲ ದೇಶಗಳ ಉದ್ಯೋಗಿಗಳಿಗೆ ನೆರವಾಗುತ್ತದೆ, ಎಂದು ನೊಬೆಲ್‌ ಪ್ರಶಸ್ತಿ ವಿಜೇತರಾದ ಮಿಲ್ಟನ್‌ ಫ್ರೈಡ್ಮನ್‌ ಮತ್ತು ಪಾಲ್‌ ಕ್ರುಗ್ಮನ್‌ ಸೇರಿದಂತೆ ಹಲವು ಅರ್ಥಶಾಸ್ತ್ರಜ್ಞರು ನಂಬಿದ್ದಾರೆ. ಇದಕ್ಕೆ ಕಾರಣ, 'ತಯಾರಿಕೆಯ ಕ್ಷೇತ್ರದ ಹಾಗೂ ನೂತನ ರಫ್ತು ಕ್ಷೇತ್ರವು ಸೃಷ್ಟಿಸಿದಂತಹ ಹಲವು ಇತರೆ ಉದ್ಯೋಗಗಳ ಅಭಿವೃದ್ಧಿಯು ಆರ್ಥಿಕತೆಯುದ್ದಕ್ಕೂ ಅಲೆಗಳನ್ನು ಸೃಷ್ಟಿಸಿದೆ,' ಉತ್ಪಾದಕರ ನಡುವೆ ಪೈಪೋಟಿಗೆ ಕಾರಣವಾಗಿದೆ. ವೇತನಗಳು ಮತ್ತು ಜೀವನಮಟ್ಟವನ್ನೂ ಸಹ ಉತ್ತಮಗೊಳಿಸಿದೆ.[೧೩] ಮೂರನೆಯ ವಿಶ್ವದ ಹಿತಾಸಕ್ತಿಗಳನ್ನು ವೃದ್ಧಿಸಲೆಂದು ಆರ್ಥಿಕ ರಕ್ಷಣಾ ನೀತಿಯ ಪರವಾಗಿ ನಿಲುವು ಹೊಂದಿರುವವರು, ಗೂಢೋದ್ದೇಶವುಳ್ಳವರಾಗಿರುತ್ತಾರೆ, ಕೇವಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ಉದ್ಯೋಗಗಳನ್ನು ರಕ್ಷಿಸುವುದೇ ಅವರ ಧ್ಯೇಯವಾಗಿದೆ ಎಂದು ಅರ್ಥಶಾಸ್ತ್ರಜ್ಞರು ಸೂಚಿಸಿದ್ದಾರೆ.[೧೪] ಇನ್ನೂ ಹೆಚ್ಚಿಗೆ, ಮೂರನೆಯ ಪ್ರಪಂಚದ ಉದ್ಯೋಗಿಗಳು ಅತ್ಯುತ್ತಮ ಪ್ರಸ್ತಾಪವಿದ್ದರೆ ಮಾತ್ರ ಆ ಉದ್ಯೋಗವನ್ನು ಒಪ್ಪುವರು, ಏಕೆಂದರೆ ಎಲ್ಲಾ ಪರಸ್ಪರ ಒಪ್ಪಂದಗಳು ಉಭಯ ಪಕ್ಷಗಳಿಗೆ ಸರಿಹೊಂದಬೇಕು. ಇಲ್ಲದಿದ್ದಲ್ಲಿ ಈ ಒಪ್ಪಂದವು ಅಂಗೀಕೃತವಾಗುತ್ತಿರಲಿಲ್ಲ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮುಂದಿಡುವ ಕಡಿಮೆ ವೇತನದ ಉದ್ಯೋಗಗಳನ್ನು ಅವರು ಒಪ್ಪುವುದು, ಅವರ ಇತರೆ ಔದ್ಯೋಗಿಕ ಅವಕಾಶಗಳು ಅದಕ್ಕಿಂತಲೂ ಕಳಪೆಯೆಂಬುದನ್ನು ಸಾಬೀತುಪಡಿಸುತ್ತದೆ. ಅಮೆರಿಕನ್‌ ಫೆಡರಲ್‌ ರಿಸರ್ವ್‌ನ ಮಾಜಿ ಅಧ್ಯಕ್ಷ ಅಲ್ಯಾನ್‌ ಗ್ರೀನ್‌ಸ್ಪ್ಯಾನ್‌ ರಕ್ಷಣಾ ನೀತಿ ಪ್ರಸ್ತಾಪಗಳನ್ನು ಟೀಕಿಸಿ, 'ನಮ್ಮ ಸ್ಪರ್ಧಾತ್ಮಕ ಕ್ಷಮತೆಯ ಬಲದ ಧಕ್ಕೆಗೆ ಕಾರಣವಾಗುತ್ತದೆ... ಆರ್ಥಿಕ ರಕ್ಷಣಾ ನೀತಿಯನ್ನು ಅನುಸರಿಸಿದಲ್ಲಿ, ನೂತನ, ಹೆಚ್ಚು ದಕ್ಷ ಕೈಗಾರಿಕೆಗಳಿಗೆ ವಿಕಸನ ಹೊಂದಲು ಯಾವುದೇ ಅವಕಾಶವಿರುವುದಿಲ್ಲ, ಒಟ್ಟಾರೆ ಉತ್ಪಾದಕತೆ ಮತ್ತು ಆರ್ಥಿಕ ಯೋಗಕ್ಷೇಮಕ್ಕೆ ನಷ್ಟವಾಗುತ್ತದೆ.' [೧೫] ಯುದ್ಧಗಳ ಹಿಂದಿನ ಪ್ರಮುಖ ಕಾರಣಗಳಲ್ಲಿ ಆರ್ಥಿಕ ರಕ್ಷಣಾ ನೀತಿಯೂ ಸಹ ಒಂದು ಎಂಬ ಆರೋಪವಿದೆ. ಈ ಸಿದ್ಧಾಂತದ ಪ್ರತಿಪಾದಕರು ವಿವರಿಸುವ ಪ್ರಕಾರ, 17ನೆಯ ಮತ್ತು 18ನೆಯ ಶತಮಾನಗಳಲ್ಲಿ ಯುರೋಪೀಯ ದೇಶಗಳ ನಡುವೆ ಯುದ್ಧ-ಘರ್ಷಣೆಗಳು ನಡಯುತ್ತಿದ್ದವು. ಕೆಲವು ಯುರೋಪೀಯ ದೇಶದ ಸರ್ಕಾರಗಳು ವ್ಯಾಪಾರ-ಪರವಿದ್ದರೆ, ಇನ್ನು ಕೆಲವು ಸರ್ಕಾರಗಳು ಆರ್ಥಿಕ ರಕ್ಷಣಾ ನೀತಿಯತ್ತ ಒಲವು ತೋರಿಸುತ್ತಿದ್ದವು. ಬ್ರಿಟಿಷರು ವಿಧಿಸುತ್ತಿದ್ದ ಸುಂಕಗಳು ಮತ್ತು ತೆರಿಗೆಗಳು ಅಮೆರಿಕನ್‌ ಕ್ರಾಂತಿಗೆ ಕಾರಣವಾದವು. ಇದಲ್ಲದೆ, ಮೊದಲನೆಯ ಹಾಗೂ ಎರಡನೆಯ ವಿಶ್ವ ಸಮರಗಳ ಮುಂಚೆಯ ಆರ್ಥಿಕ ರಕ್ಷಣಾ ನೀತಿಗಳು ಸಹ ಪ್ರಬಲ ಕಾರಣಗಳಾಗಿದ್ದವು. ಫ್ರೆಡ್ರಿಕ್‌ ಬಸ್ಟಿಯಟ್‌ ಹೇಳಿದಂತೆ, 'ಸರಕು ಗಡಿಯ ದಾಟದಿದ್ದರೆ, ಸೇನೆಗಳು ದಾಟುತ್ತವೆ!' ಮುಕ್ತ ವಹಿವಾಟು ದೇಶೀಯ ಹಾಗೂ ವಿದೇಶೀಯ ಭಾಗೀದಾರರಿಗೆ ದೇಶೀಯ ಸಂಪನ್ಮೂಲಗಳತ್ತ (ಮಾನವ ಶಕ್ತಿ, ನೈಸರ್ಗಿಕ, ಬಂಡವಾಳ ಇತ್ಯಾದಿ) ಅವಕಾಶ ನೀಡುತ್ತದೆ. ಮುಕ್ತ ವಹಿವಾಟಿನಡಿ ಭಾಗವಹಿಸುವ ದೇಶಗಳ ನಾಗರೀಕರಿಗೆ ಸಂಪನ್ಮೂಲಗಳು ಹಾಗೂ ಸಾಮಾಜಿಕ ಯೋಗಕ್ಷೇಮ ಕ್ಷೇತ್ರಗಳಲ್ಲಿ (ಶ್ರಮಿಕರ ಕಾನೂನುಗಳು, ಶಿಕ್ಷಣ ಇತ್ಯಾದಿ) ಸಮನಾದ ಪ್ರವೇಶಾನುಮತಿ ನೀಡುತ್ತದೆ; ಎಂದು ಕೆಲವು ಚಿಂತಕರು ಅಭಿಪ್ರಾಯಪಟ್ಟಿದ್ದಾರೆ. ವೀಸಾ ಪ್ರವೇಶ ನೀತಿಗಳು ಹಲವು ದೇಶಗಳ ನಡುವಿನ ಮುಕ್ತ ಪುನರ್ವಿಂಗಡನೆಗೆ ಅಸಮ್ಮತಿ ಸೂಚಿಸಿ ಇನ್ನೂ ಕೆಲವರೊಂದಿಗೆ ಉತ್ತೇಜಿಸುತ್ತವೆ. ಹಲವು ವಿಚಾರಗಳಲ್ಲಿ, ನೆರವು ಯೋಜನೆಗಳಿಗಿಂತಲೂ, ಹೆಚ್ಚಿನ ಸ್ವಾತಂತ್ರ್ಯ ಮತ್ತು ಚಲನಶೀಲತೆಯು ಇನ್ನೂ ಹೆಚ್ಚು ಅಭಿವೃದ್ಧಿಗೆ ಕಾರಣವಾಗುತ್ತದೆ. ಉದಾಹರಣೆಗೆ ಯುರೋಪ್‌ ಒಕ್ಕೂಟದಲ್ಲಿ ಪೂರ್ವ ಯುರೋಪಿಯನ್‌ ದೇಶಗಳು. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ, ವೀಸಾ ಪ್ರವೇಶ ಅಗತ್ಯಗಳು ಒಂದು ರೀತಿಯ ಸ್ಥಳೀಯ ಆರ್ಥಿಕ ರಕ್ಷಣಾ ನೀತಿ.

ವಿಶ್ವಾದ್ಯಂತ ಪ್ರಚಲಿತ ವಿದ್ಯಮಾನಗಳು[ಬದಲಾಯಿಸಿ]

ಎರಡನೆಯ ಮಹಾಯುದ್ಧ ಅಂತ್ಯಗೊಂಡಾಗಿನಿಂದಲೂ, ವಿಶ್ವ ವಹಿವಾಟು ಸಂಘಟನೆಯಂತಹ ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ಸಂಘಟನೆಗಳು, ಜಾರಿಗೊಳಿಸಿರುವ ಮುಕ್ತ ವಹಿವಾಟು ನೀತಿಗಳ ಮೂಲಕ ಆರ್ಥಿಕ ರಕ್ಷಣಾ ನೀತಿಗಳನ್ನು ನಿರ್ಮೂಲಗೊಳಿಸುವುದು, ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನೀತಿಯಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸರ್ಕಾರಗಳ ಕೆಲವು ನೀತಿಗಳನ್ನು ರಕ್ಷಣಾ ನೀತಿಗಳೆಂದು ಟೀಕಿಸಲಾಗಿವೆ; ಉದಾಹರಣೆಗೆ; ಯುರೋಪಿಯನ್‌ ಒಕ್ಕೂಟದಲ್ಲಿ ಸಮಾನ ಕೃಷಿ ನೀತಿ,[೧೬] ಹಾಗೂ, ಅಮೆರಿಕಾ ಸಂಯುಕ್ತ ಸಂಸ್ಥಾನದ ಆರ್ಥಿಕ ಪುನಶ್ಚೇತನಾ ಯೋಜನೆಗಳಡಿ ಪ್ರಸ್ತಾಪಿಸಲಾದ 'ಅಮೆರಿಕಾದಲ್ಲೇ ತಯಾರಿಸಲಾದ ಸರಕನ್ನೇ ಕೊಳ್ಳಿ' ವಿಧಿ.[೧೭] ವಿಶ್ವ ವಹಿವಾಟು ಸಂಘಟನೆ ನಡೆಸುತ್ತಿರುವ ಸದ್ಯದ ವಹಿವಾಟಿನ ಮಾತುಕತೆಗಳಲ್ಲಿ ದೊಹಾ ಡೆವೆಲಪ್ಮೆಂಟ್‌ ರೌಂಡ್‌ ಮತ್ತು ಕೊನೆಯ ಮಾತುಕತೆಗಳ ಸಭೆಯು ಸ್ವಿಟ್ಜರ್ಲೆಂಡ್‌ನ ಜಿನಿವಾದಲ್ಲಿ ನಡೆದು, ಯಾವುದೇ ನಿರ್ಣಯಕ್ಕೆ ಬರಲಾರದೆ ಮುಗಿದುಹೋಯಿತು. ಇಸವಿ 2009ರ ಆರಂಭದಲ್ಲಿ ಲಂಡನ್‌ನಲ್ಲಿ ನಡೆದ G20 ಸಭೆಯಲ್ಲಿ ನಾಯಕರ ಹೇಳಿಕೆಯಲ್ಲಿ ದೊಹಾ ಮಾತುಕತೆಗಳನ್ನು ಮುಂದುವರೆಸುವ ಭರವಸೆಯಿತ್ತು.

ಇಸವಿ 2008ರ ಹಣಕಾಸಿನ ಬಿಕ್ಕಟ್ಟಿನ ನಂತರ ಆರ್ಥಿಕ ರಕ್ಷಣಾ ನೀತಿ[ಬದಲಾಯಿಸಿ]

ಇತ್ತೀಚೆಗೆ ಲಂಡನ್‌ನಲ್ಲಿ ನಡೆದ G20 ಶೃಂಗಸಭೆಯಲ್ಲಿ ಭಾಗವಹಿಸಿದ ರಾಷ್ಟ್ರದ ಮುಖ್ಯಸ್ಥರು, ತಾವು ಯಾವುದೇ ವಹಿವಾಟು ರಕ್ಷಣಾ ನೀತಿಯಂತಹ ಕ್ರಮ ಕೈಗೊಳ್ಳುವುದಿಲ್ಲ; ಎಂಬ ಭರವಸೆ ನೀಡಿದ್ದರು. ಕಳೆದ ನವೆಂಬರ್‌ನಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ಸಭೆಯಲ್ಲಿ ಈ ಮುಖ್ಯಸ್ಥರು ಮೊದಲೇ ಬದ್ಧರಾಗಿದ್ದ ವಚನವನ್ನು ಪುನರುಚ್ಚರಿಸಿದರೂ, ಈ 20 ದೇಶಗಳಲ್ಲಿ 17 ದೇಶಗಳು ವಹಿವಾಟು ನಿರ್ಬಂಧ ಕ್ರಮ ಕೈಗೊಂಡಿದ್ದವೆಂದು ವಿಶ್ವ ಬ್ಯಾಂಕ್‌ ವರದಿ ಮಾಡಿತ್ತು. ಜಾಗತಿಕ ಆರ್ಥಿಕ ಹಿಂಜರಿಕೆಯು ತನ್ನ ಪ್ರಭಾವ ಬೀರಿದಾಗ, ವಿಶ್ವದ ಪ್ರಮುಖ ಆರ್ಥಿಕತೆಗಳು ಆರ್ಥಿಕ ರಕ್ಷಣಾ ನೀತಿಗಳನ್ನು ಜಾರಿಗೊಳಿಸಿವೆಯೆಂದು ವಿಶ್ವ ಬ್ಯಾಂಕ್‌ ತನ್ನ ವರದಿಯಲ್ಲಿ ತಿಳಿಸಿದೆ.

ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. ೧.೦ ೧.೧ ಫ್ರೀ ಟು ಚೂಸ್‌, ಮಿಲ್ಟನ್‌ ಫ್ರೀಡ್ಮನ್‌
 2. Bhagwati, Jagdish. "CEE:Protectionism". Concise Encyclopedia of Economics. Library of Economics and Liberty. Retrieved 2008-09-06.
 3. Mankiw, N. Gregory. "Smart Taxes: An Open Invitation to Join the Pigou Club" (PDF). Archived (PDF) from the original on 2008-09-10. Retrieved 2008-09-06.
 4. ೪.೦ ೪.೧ Krugman, Paul R. (1987). "Is Free Trade Passe?". The Journal of Economic Perspectives. 1 (2): 131–144.
 5. [೧] ಲಿಂಡ್‌, ಮೈಕಲ್‌. ನ್ಯೂ ಅಮೆರಿಕಾ ಫೌಂಡೇಷನ್‌.
 6. ಬೋಸ್ಟನ್‌ (MA)ನಲ್ಲಿ 4 ಅಕ್ಟೋಬರ್‌ 1892ರಂದು ವಿಲಿಯಮ್‌ ಮೆಕಿನ್ಲೇ ಭಾಷಣ; ವಿಲಿಯಮ್‌ ಮೆಕಿನ್ಲೇ ಪೇಪರ್ಸ್‌ (ಲೈಬ್ರೆರಿ ಆಫ್‌ ಕಾಂಗ್ರೆಸ್‌)
 7. "ಆರ್ಕೈವ್ ನಕಲು". Archived from the original on 2014-08-09. Retrieved 2010-05-12.
 8. "ದಿ ಕನ್ಸರ್ವೇಟಿವ್‌ ನ್ಯಾನಿ ಸ್ಟೇಟ್‌". Archived from the original on 2017-02-20. Retrieved 2010-05-12.
 9. Daly, Herman (2007). Ecological Economics and Sustainable Development, Selected Essays of Herman Daly. Northampton MA: Edward Elgar Publishing.
 10. Paul Craig Roberts (July 26, 2005). "US Falling Behind Across the Board". VDARE.com. Archived from the original on 2012-09-14. Retrieved 2008-10-08.
 11. ಕ್ರುಗ್ಮನ್‌, ಪಾಲ್‌ (24 ಜನವರಿ 1997). ದಿ ಆಕ್ಸಿಡೆಂಟಲ್‌ ಥಿಯರಿಸ್ಟ್‌. ಸ್ಲೇಟ್‌
 12. Magee, Stephen P. (1976). International Trade and Distortions In Factor Markets. New York: Marcel-Dekker.
 13. ಕ್ರುಗ್ಮನ್‌, ಪಾಲ್‌ (21 ಮಾರ್ಚ್‌ 1997). ಇನ್‌ ಪ್ರೇಯ್ಸ್‌ ಆಫ್‌ ಚೀಪ್‌ ಲೇಬರ್‌. ಸ್ಲೇಟ್‌
 14. ಕ್ರುಗ್ಮನ್‌, ಪಾಲ್‌ (21 ನವೆಂಬರ್‌ 1997). ಎ ರಾಸ್ಪ್‌ಬೆರಿ ಫಾರ್‌ ಫ್ರೀ ಟ್ರೇಡ್‌. ಸ್ಲೇಟ್‌
 15. ಸಿಸಿಲಿಯಾ, ಡೇವಿಡ್‌ ಬಿ. & ಕ್ರುಯಿಕ್ಷಾಂಕ್‌, ಜೆಫ್ರಿ ಎಲ್‌. (2000). ದಿ ಗ್ರೀನ್‌ಸ್ಪ್ಯಾನ್‌ ಇಫೆಕ್ಟ್‌ , ಪಿ. 131. ನ್ಯೂಯಾರ್ಕ್‌: ಮೆಗ್ರಾ-ಹಿಲ್‌. ISBN 0-471-80580-7.
 16. https://www.nytimes.com/2003/08/31/opinion/a-french-roadblock-to-free-trade.html
 17. http://www.dw-world.de/dw/article/0,,3988551,00.html

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Trade