ವಿಷಯಕ್ಕೆ ಹೋಗು

ಬಹುಸಾಂಸ್ಕೃತಿಕತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಹುಸಾಂಸ್ಕೃತಿಕತೆ ಎಂಬುದು ಬಹು ವಿಧವಾದ ಜನಾಂಗೀಯ ಸಂಸ್ಕೃತಿಗಳ ಅಂಗೀಕಾರ ಅಥವಾ ಪ್ರವರ್ತನೆಯಾಗಿದ್ದು, ನಿರ್ದಿಷ್ಟ ಸ್ಥಳವೊಂದರ ಜನಸಂಖ್ಯಾಶಾಸ್ತ್ರದ ಸ್ವರೂಪಕ್ಕೆ, ಸಾಮಾನ್ಯವಾಗಿ ಸಾಂಸ್ಥಿಕ ಮಟ್ಟದಲ್ಲಿ ಇದನ್ನು ಅನ್ವಯಿಸಲಾಗುತ್ತದೆ; ಶಾಲೆಗಳು, ವ್ಯವಹಾರದ ಅಸ್ತಿತ್ವಗಳು, ನೆರೆಹೊರೆಗಳು, ನಗರಗಳು ಅಥವಾ ರಾಷ್ಟ್ರಗಳು ಹೀಗೆ ಅನ್ವಯಿಕೆಗೊಳಗಾಗುವ ಉದಾಹರಣೆಗಳಾಗಿವೆ. ಈ ಸಂದರ್ಭದಲ್ಲಿ, ಯಾವುದೇ ನಿರ್ದಿಷ್ಟವಾದ ಜನಾಂಗೀಯ, ಧಾರ್ಮಿಕ, ಮತ್ತು/ಅಥವಾ ಸಾಂಸ್ಕೃತಿಕ ಸಮುದಾಯದ ಮೌಲ್ಯಗಳನ್ನು ಪ್ರಧಾನವಾಗಿ ಪ್ರವರ್ತಿಸದೆಯೇ, ವಿಶಿಷ್ಟವಾದ ಜನಾಂಗೀಯ ಮತ್ತು ಧಾರ್ಮಿಕ ಸಮೂಹಗಳಿಗೆ ಧರ್ಮಸಮ್ಮತವಾದ ಸ್ಥಾನಮಾನವು ವಿಸ್ತರಿಸುವುದನ್ನು ಬಹುಸಂಸ್ಕೃತಿವಾದಿಗಳು ಸಮರ್ಥಿಸುತ್ತಾರೆ.[]

ಬಹುಸಾಂಸ್ಕೃತಿಕತೆಯ ಕಾರ್ಯನೀತಿಯು ವಿಭಿನ್ನ ಸಂಸ್ಕೃತಿಗಳ ವಿಲೀನತೆ ಮತ್ತು ಸಾಮಾಜಿಕ ಏಕೀಕರಣದ ಪರಿಕಲ್ಪನೆಗಳೊಂದಿಗೆ ಅನೇಕ ವೇಳೆ ವೈಲಕ್ಷಣ್ಯವನ್ನು ತೋರಿಸುತ್ತದೆ ಅಥವಾ ಅವಕ್ಕೆ ತದ್ವಿರುದ್ಧವಾಗಿರುತ್ತದೆ.

ಬಹುಸಾಂಸ್ಕೃತಿಕತೆಗಾಗಿರುವ ಬೆಂಬಲ

[ಬದಲಾಯಿಸಿ]

ಬಹುಸಾಂಸ್ಕೃತಿಕತೆಯನ್ನು ಅದರ ಬೆಂಬಲಿಗರು ಒಂದು ನ್ಯಾಯೋಚಿತವಾದ ವ್ಯವಸ್ಥೆಯಾಗಿ ನೋಡುತ್ತಾರೆ; ಒಂದು ಸಮಾಜದ ಒಳಗಡೆ ಜನರು ತಾವ್ಯಾರು ಎಂಬುದನ್ನು ನಿಜವಾಗಿ ಅಭಿವ್ಯಕ್ತಿಸುವಲ್ಲಿ ಅವರಿಗೆ ಅವಕಾಶ ಕಲ್ಪಿಸುವ ಈ ನ್ಯಾಯೋಚಿತವಾದ ವ್ಯವಸ್ಥೆಯು, ಹೆಚ್ಚು ಸಹಿಷ್ಣುವಾಗಿದೆ ಹಾಗೂ ಸಾಮಾಜಿಕ ವಿಷಯಗಳಿಗೆ ಉತ್ತಮವಾಗಿ ಅದು ಹೊಂದಿಕೊಳ್ಳುತ್ತದೆ.[] ಅವರು ವಾದಿಸುವ ಪ್ರಕಾರ, ಸಂಸ್ಕೃತಿ ಎಂಬುದು ಒಂದು ಜನಾಂಗ ಅಥವಾ ಧರ್ಮವನ್ನು ಆಧರಿಸಿ ವ್ಯಾಖ್ಯಾನಿಸಬಹುದಾದ ಒಂದು ವಸ್ತು-ವಿಷಯವಲ್ಲ, ಆದರೆ ಅದು ಪ್ರಪಂಚವು ಬದಲಾದಂತೆ ಬದಲಾವಣೆ ಹೊಂದುವ ಬಹು ವಿಧದ ಅಂಶಗಳ ಒಂದು ಫಲಿತಾಂಶವಾಗಿದೆ.

ಬಹುಸಾಂಸ್ಕೃತಿಕತೆಗಿರುವ ವಿರೋಧ

[ಬದಲಾಯಿಸಿ]

ಬಹುಸಾಂಸ್ಕೃತಿಕತೆಯನ್ನು ಟೀಕಿಸುವಾಗ, ಸದರಿ ಪರಿಭಾಷೆಯನ್ನು ಮೊದಲು ವ್ಯಾಖ್ಯಾನಿಸುವುದು ಮುಖ್ಯ ಸಂಗತಿಯಾಗಿದೆ. ಆಂಡ್ರ್ಯೂ ಹೇವುಡ್‌ ಎಂಬಾತ ಬಹುಸಾಂಸ್ಕೃತಿಕತೆಯ ಎರಡು ಒಟ್ಟಾರೆ ಸ್ವರೂಪಗಳ ನಡುವೆ ವೈಲಕ್ಷಣ್ಯವನ್ನು ಕಲ್ಪಿಸುತ್ತಾನೆ. ಅವೆಂದರೆ: ವಿವರಣಾತ್ಮಕ ಮತ್ತು ಪ್ರಮಾಣಕ ಸ್ವರೂಪಗಳು. "'ಬಹುಸಾಂಸ್ಕೃತಿಕತೆ' ಎಂಬ ಶಬ್ದವು ವಿವರಣಾತ್ಮಕ ಮತ್ತು ಪ್ರಮಾಣಕ ಈ ಎರಡೂ ಆಗಿರುವ ವೈವಿಧ್ಯಮಯ ವಿಧಗಳಲ್ಲಿ ಬಳಸಲ್ಪಟ್ಟಿದೆ. ಒಂದು ವಿವರಣಾತ್ಮಕ ಶಬ್ದವಾಗಿ ಇದು ಸಾಂಸ್ಕೃತಿಕ ವೈವಿಧ್ಯತೆಗೆ ಉಲ್ಲೇಖಿಸಲ್ಪಡಲು ತೆಗೆದುಕೊಳ್ಳಲ್ಪಟ್ಟಿದೆ... ಒಂದು ಪ್ರಮಾಣಕ ಶಬ್ದವಾಗಿ ಬಹುಸಾಂಸ್ಕೃತಿಕತೆಯು ಸಾಮುದಾಯಿಕ ವೈವಿಧ್ಯತೆಯ ಒಂದು ಗುಣಾತ್ಮಕ ಅನುಮೋದನೆಯನ್ನು, ಅಷ್ಟೇ ಏಕೆ ಅದರ ಆಚರಣೆಯನ್ನು ಸೂಚಿಸುತ್ತದೆ; ವಿಶಿಷ್ಟವೆಂಬಂತೆ ಇದು, ಗೌರವ ಮತ್ತು ಮಾನ್ಯತೆಗೆ ಸಂಬಂಧಿಸಿದಂತೆ ವಿಭಿನ್ನ ಸಮೂಹಗಳು ಹೊಂದಿರುವ ಹಕ್ಕಿನ ಮೇಲೆ ಆಧರಿಸಿದೆ, ಅಥವಾ ಬೃಹತ್‌ ಸಮಾಜಕ್ಕೆ ದೊರೆತಿವೆಯೆಂದು ಆರೋಪಿಸಲ್ಪಟ್ಟ ನೈತಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಪ್ರಯೋಜನಗಳನ್ನು ಆಧರಿಸಿದೆ".[]

ಪರಸ್ಪರ ಸಂಬಂಧವುಂಟುಮಾಡುವ ಮತ್ತು ಒಂದನ್ನೊಂದು ಪ್ರಭಾವಿಸುವ, ಅಷ್ಟಾಗಿಯೂ ವಿಶಿಷ್ಟವಾಗಿ ಉಳಿದುಕೊಳ್ಳುವ, ಹಿತಕರವಾಗಿ ಜೊತೆಜೊತೆಯಾಗಿರುವ ಸಂಸ್ಕೃತಿಗಳ ಬಹುಸಾಂಸ್ಕೃತಿಕ ಆದರ್ಶವು ಸಮರ್ಥನೀಯವೇ, ವಿರೋಧಾಭಾಸದ್ದೇ ಅಥವಾ ಅಷ್ಟೇ ಏಕೆ ಅದು ಅಪೇಕ್ಷಣೀಯವೇ ಎಂಬುದನ್ನು ಬಹುಸಾಂಸ್ಕೃತಿಕತೆಯ ಟೀಕೆಯು ಅನೇಕ ವೇಳೆ ಚರ್ಚಿಸುತ್ತದೆ.[] ತಮ್ಮದೇ ಆದಂಥ ಒಂದು ವಿಶಿಷ್ಟವಾದ ಸಾಂಸ್ಕೃತಿಕ ಗುರುತಿನೊಂದಿಗೆ ಸಮಾನಾರ್ಥಕವಾಗಿ ಹಿಂದೆ ಗುರುತಿಸಿಕೊಂಡಿದ್ದ ರಾಷ್ಟ್ರದ ಸಂಸ್ಥಾನಗಳು ನಿರ್ಬಂಧದ ಬಹುಸಾಂಸ್ಕೃತಿಕತೆಗೆ ಸೋತಿವೆ ಮತ್ತು ಇದು ಅಂತಿಮವಾಗಿ ಆಶ್ರಯದಾತ ರಾಷ್ಟ್ರಗಳ ವಿಶಿಷ್ಟ ಸಂಸ್ಕೃತಿಗಳನ್ನು ಸವೆಸಿಬಿಡುತ್ತದೆ ಎಂಬುದಾಗಿ ವಾದಿಸಲಾಗುತ್ತದೆ.[][][]

ಸುಸಾನ್‌ ಮೊಲ್ಲರ್ ಓಕಿನ್‌‌ ಎಂಬಾಕೆಯು "ಈಸ್‌ ಮಲ್ಟಿಕಲ್ಚರಲಿಸಂ ಬ್ಯಾಡ್‌ ಫಾರ್‌ ವುಮೆನ್‌?" ಎಂಬ ಶೀರ್ಷಿಕೆಯ ತನ್ನ ಪ್ರೌಢಪ್ರಬಂಧದಲ್ಲಿ ಈ ಪ್ರಶ್ನೆಯ ಕುರಿತು ಬರೆದಳು. (1999).[]

ಸಾಮಾಜಿಕ ನಂಬುಗೆ ಅಥವಾ ವಿಶ್ವಾಸದ ಮೇಲೆ ಬಹುಸಾಂಸ್ಕೃತಿಕತೆಯು ಹೇಗೆ ಪರಿಣಾಮಬೀರುತ್ತದೆ ಎಂಬುದರ ಕುರಿತಾಗಿ ರಾಜ್ಯಶಾಸ್ತ್ರ ವಿಷಯದಲ್ಲಿನ ಹಾರ್ವರ್ಡ್‌ ಪ್ರಾಧ್ಯಾಪಕನಾದ ರಾಬರ್ಟ್‌ D. ಪಟ್ನಾಮ್‌‌ ಎಂಬಾತ ಸರಿಸುಮಾರು ಒಂದು ದಶಕದಷ್ಟು ಸುದೀರ್ಘವಾದ ಅಧ್ಯಯನವನ್ನು ನಡೆಸಿದ.[] ಅಮೆರಿಕಾದ 40 ಸಮುದಾಯಗಳಲ್ಲಿನ 26,200 ಜನರ ಸಮೀಕ್ಷೆಯನ್ನು ಅವನು ನಡೆಸಿದಾಗ, ವರ್ಗ, ಆದಾಯ ಮತ್ತು ಇತರ ಅಂಶಗಳಿಗೆ ಸಂಬಂಧಿಸಿದಂತೆ ದತ್ತಾಂಶಗಳು ಹೊಂದಿಸಲ್ಪಟ್ಟಾಗ, ಸಮುದಾಯವೊಂದು ಜನಾಂಗೀಯವಾಗಿ ಹೆಚ್ಚು ಭಿನ್ನವಾದಷ್ಟೂ, ನಂಬಿಕೆಯ ಅಥವಾ ವಿಶ್ವಾಸದ ನಷ್ಟವು ಮಹತ್ತರವಾದ ಪ್ರಮಾಣದಲ್ಲಿದ್ದುದು ಅವನಿಗೆ ಕಂಡುಬಂತು. ಭಿನ್ನವಾದ ಸಮುದಾಯಗಳಲ್ಲಿನ ಜನರು "ಸ್ಥಳೀಯ ಮಹಾಪೌರನನ್ನು ನಂಬುವುದಿಲ್ಲ, ಸ್ಥಳೀಯ ಪತ್ರಿಕೆಯನ್ನು ಅವರು ನಂಬುವುದಿಲ್ಲ, ಇತರ ಜನರನ್ನು ಅವರು ನಂಬುವುದಿಲ್ಲ ಮತ್ತು ಸಂಸ್ಥೆಗಳನ್ನು ಅವರು ನಂಬುವುದಿಲ್ಲ" ಎಂದು ಪಟ್ನಾಮ್ ಬರೆಯುತ್ತಾನೆ‌.[೧೦] ಇಂಥ ಜನಾಂಗೀಯ ವೈವಿಧ್ಯತೆಯ ಹಾಜರಿಯಲ್ಲಿ, ಪಟ್ನಾಮ್‌‌ ಸಮರ್ಥಿಸುವುದು ಹೀಗೆ:

ನಾವು ಕಾಲುಮುದುರಿಕೊಂಡು ಕೂರುತ್ತೇವೆ. ನಾವು ಆಮೆಗಳಂತೆ ವರ್ತಿಸುತ್ತೇವೆ. ವೈವಿಧ್ಯತೆಯ ಪರಿಣಾಮವು ಕಲ್ಪಿಸಿಕೊಂಡಿದ್ದಕ್ಕಿಂತ ಕೆಟ್ಟದಾಗಿದೆ. ಮತ್ತು ನಮ್ಮಂತಿರದ ಜನರನ್ನು ನಾವು ನಂಬುವುದಿಲ್ಲ ಎಂದಷ್ಟೇ ಅಲ್ಲ. ಭಿನ್ನವಾದ ಸಮುದಾಯಗಳಲ್ಲಿ, ನಮ್ಮಂತೆಯೇ ಕಾಣುವ ಜನರನ್ನು ನಾವು ನಂಬುವುದಿಲ್ಲ.[]

ಫ್ರಾಂಕ್‌‌ ಸಾಲ್ಟರ್‌‌ ಎಂಬ ವರ್ತನೆಶಾಸ್ತ್ರಜ್ಞ ಹೀಗೆ ಬರೆಯುತ್ತಾನೆ:

ತುಲನಾತ್ಮಕವಾಗಿ ಏಕರೂಪದ್ದಾಗಿರುವ ಸಮಾಜಗಳು ಸಾರ್ವಜನಿಕ ಪ್ರಯೋಜನಗಳಲ್ಲಿ ಹೆಚ್ಚು ವಿನಿಯೋಗಿಸುತ್ತವೆ; ಇದು ಒಂದು ಉನ್ನತ ಮಟ್ಟದಲ್ಲಿರುವ ಸಾರ್ವಜನಿಕ ಪರಹಿತಚಿಂತನೆಯನ್ನು ಸೂಚಿಸುತ್ತದೆ. ಉದಾಹರಣೆಗೆ, ಜನಾಂಗೀಯ ಏಕರೂಪತೆಯ ಮಟ್ಟವು ಸಮಗ್ರ ದೇಶೀಯ ಉತ್ಪನ್ನಕ್ಕೆ ಸಂಬಂಧಿಸಿದಂತಿರುವ ಸರ್ಕಾರದ ಪಾಲಿನೊಂದಿಗೆ ಮಾತ್ರವೇ ಅಲ್ಲದೇ ನಾಗರಿಕರ ಸರಾಸರಿ ಸಂಪತ್ತಿನೊಂದಿಗೆ ಪರಸ್ಪರ ಸಂಬಂಧಿಸಿರುತ್ತದೆ. ಅಮೆರಿಕಾ ಸಂಯುಕ್ತ ಸಂಸ್ಥಾನ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ಸನ್ನಿವೇಶದ ಅಧ್ಯಯನಗಳು ಕಂಡುಕೊಂಡಿರುವ ಪ್ರಕಾರ, ಬಹು-ಜನಾಂಗೀಯ ಸಮಾಜಗಳು ಕಡಿಮೆ ದಾನಶೀಲವಾಗಿವೆ ಮತ್ತು ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದರೆಡೆಗೆ ಸಹಕಾರ ನೀಡುವಲ್ಲಿ ಅವು ಅಷ್ಟೊಂದು ಸಮರ್ಥವಾಗಿಲ್ಲ. ಮಾಸ್ಕೋ ಭಿಕ್ಷುಕರು ಇತರ ಜನಾಂಗೀಯ ಗುಂಪುಗಳಿಗಿಂತ ಹೆಚ್ಚಾಗಿ ಸಹವರ್ತಿ ಜನಾಂಗೀಯರಿಂದ ಹೆಚ್ಚಿನ ಕೊಡುಗೆಗಳನ್ನು ಸ್ವೀಕರಿಸುತ್ತಾರೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಸಾರ್ವಜನಿಕ ಪ್ರಯೋಜನಗಳ ಮೇಲಿನ ಪುರಸಭಾ ಖರ್ಚುಮಾಡುವಿಕೆಯ ಕುರಿತಾದ ಒಂದು ಇತ್ತೀಚಿನ ಬಹು-ನಗರ ಅಧ್ಯಯನವು ಕಂಡುಕೊಂಡ ಪ್ರಕಾರ, ಏಕರೂಪದ ನಗರಗಳು ಮಾಡುವುದಕ್ಕೆ ಹೋಲಿಸಿದಾಗ, ಜನಾಂಗ ಶಾಸ್ತ್ರೀಯವಾಗಿ ಅಥವಾ ಜನಾಂಗೀಯವಾಗಿ ಭಿನ್ನವಾದ ನಗರಗಳು ಸಾರ್ವಜನಿಕ ಸೇವೆಯ ಮೇಲೆ ತಮ್ಮ ಖರ್ಚಿನ ಹಣದ ಪೈಕಿ ಒಂದು ಸಣ್ಣ ಭಾಗವನ್ನು ಮತ್ತು ಪ್ರತಿ ವ್ಯಕ್ತಿಗೆ ಕಡಿಮೆ ಮೊತ್ತವನ್ನು ಖರ್ಚುಮಾಡುತ್ತವೆ.[೧೧]

ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿನ ಬಹುಸಾಂಸ್ಕೃತಿಕತೆ

[ಬದಲಾಯಿಸಿ]
ಕೆನಡಾದ ಟೊರೊಂಟೊದಲ್ಲಿ ಫ್ರಾನ್ಸೆಸ್ಕೊ ಪೈರೆಲ್ಲಿ ವತಿಯಿಂದ ಬಹುಸಾಂಸ್ಕೃತಿಕತೆ ನೀಡಲಾಗಿರುವ ಸ್ಮಾರಕ.ನಾಲ್ಕು ತದ್ರೂಪಿ ಶಿಲ್ಪಗಳು ಈ ಪ್ರದೇಶಗಳಲ್ಲಿ ನೆಲೆಗೊಂಡಿವೆ: ಬಫೆಲೊ ನಗರ, ದಕ್ಷಿಣ ಆಫ್ರಿಕಾ; ಚಾಂಗ್‌ಚುನ್‌‌, ಚೀನಾ; ಸರಜೆವೋ, ಬೋಸ್ನಿಯಾ ಮತ್ತು ಸಿಡ್ನಿ, ಆಸ್ಟ್ರೇಲಿಯಾ.

ದೇಶದಿಂದ ದೇಶಕ್ಕೆ ಬದಲಾಗುತ್ತಾ ಹೋದ ಕಾರಣಗಳಿಂದಾಗಿ, ಹಲವಾರು ಪಾಶ್ಚಾತ್ಯ ರಾಷ್ಟ್ರಗಳಲ್ಲಿ 1970ರ ದಶಕದ ನಂತರ ಬಹುಸಾಂಸ್ಕೃತಿಕತೆಯು ಅಧಿಕೃತ ಕಾರ್ಯನೀತಿಯಾಗಿ ಅಳವಡಿಸಿಕೊಳ್ಳಲ್ಪಟ್ಟಿತು.[೧೨][೧೩][೧೪] ಪಾಶ್ಚಾತ್ಯ ಪ್ರಪಂಚದ ಮಹಾನ್‌ ನಗರಗಳು ವೈವಿಧ್ಯಮಯ ಸಂಸ್ಕೃತಿಗಳಿಂದ ಮಾಡಲ್ಪಟ್ಟಿವೆ.[೧೫]

ಏಕಸಾಂಸ್ಕೃತಿಕತೆಗೆ ಪರಿಚಯಾತ್ಮಕವಾಗಿ ಬಹುಸಾಂಸ್ಕೃತಿಕತೆ

[ಬದಲಾಯಿಸಿ]

ಸಾಮಾನ್ಯವಾಗಿ ಅರ್ಥೈಸಿಕೊಂಡಂತೆ ಬಹುಸಾಂಸ್ಕೃತಿಕತೆಯು, ಪಾಶ್ಚಾತ್ಯ ರಾಷ್ಟ್ರ-ಸಂಸ್ಥಾನಗಳಲ್ಲಿ ಅಳವಡಿಸಿಕೊಳ್ಳಲಾದ ಒಂದು ಸೈದ್ಧಾಂತಿಕ ವಿಧಾನ ಹಾಗೂ ಅನೇಕ ಕಾರ್ಯನೀತಿಗಳ ಕುರಿತು ಉಲ್ಲೇಖಿಸುತ್ತದೆ; ಈ ರಾಷ್ಟ್ರ-ಸಂಸ್ಥಾನಗಳು 18ನೇ ಮತ್ತು/ಅಥವಾ 19ನೇ ಶತಮಾನಗಳ ಅವಧಿಯಲ್ಲಿ ಕಾರ್ಯತಃ ಏಕೈಕವಾಗಿದ್ದ ಒಂದು ರಾಷ್ಟ್ರೀಯ ಗುರುತನ್ನು ಹೊರತೋರಿಕೆಯಲ್ಲಿ ಸಾಧಿಸಿದ್ದವು. ಆಫ್ರಿಕಾ, ಏಷ್ಯಾ, ಮತ್ತು ಅಮೆರಿಕಾ ಖಂಡಗಳಲ್ಲಿನ ಅನೇಕ ರಾಷ್ಟ್ರ-ಸಂಸ್ಥಾನಗಳು ಸಾಂಸ್ಕೃತಿಕವಾಗಿ ಭಿನ್ನವಾಗಿವೆ ಮತ್ತು ಒಂದು ವಿವರಣಾತ್ಮಕ ಅರ್ಥದಲ್ಲಿ ಅವು 'ಬಹು-ಸಾಂಸ್ಕೃತಿಕ'ವಾಗಿವೆ. ಕೆಲವೊಂದು ಸಂಸ್ಥಾನಗಳಲ್ಲಿ, ಸಾಮುದಾಯಿಕ ಸಿದ್ಧಾಂತವು ಒಂದು ಪ್ರಮುಖ ರಾಜಕೀಯ ವಿಷಯವಾಗಿದೆ. ಈ ಸಂಸ್ಥಾನಗಳಿಂದ ಅಳವಡಿಸಿಕೊಳ್ಳಲ್ಪಟ್ಟ ಕಾರ್ಯನೀತಿಗಳು ಪಾಶ್ಚಾತ್ಯ ಪ್ರಪಂಚದಲ್ಲಿ ಬಹುಸಾಂಸ್ಕೃತಿಕ-ವಾದಿ ಕಾರ್ಯನೀತಿಗಳೊಂದಿಗೆ ಅನೇಕವೇಳೆ ಸಾದೃಶ್ಯಗಳನ್ನು ಹೊಂದಿವೆಯಾದರೂ, ಐತಿಹಾಸಿಕ ಹಿನ್ನೆಲೆಯು ವಿಭಿನ್ನವಾಗಿದೆ, ಮತ್ತು ಒಂದು ಏಕ-ಸಾಂಸ್ಕೃತಿಕ ಅಥವಾ ಏಕ-ಜನಾಂಗೀಯ ರಾಷ್ಟ್ರ-ನಿರ್ಮಾಣವು ಇಲ್ಲಿನ ಗುರಿಯಾಗಿರಲು ಸಾಧ್ಯವಿದೆ - 2020ರ ವೇಳೆಗೆ ಒಂದು 'ಮಲೇಷಿಯಾದ ಜನಾಂಗ'ವನ್ನು ಸೃಷ್ಟಿಸುವುದರೆಡೆಗಿನ ಮಲೇಷಿಯಾದ ಸರ್ಕಾರದ ಪ್ರಯತ್ನವು ಇದಕ್ಕೊಂದು ನಿದರ್ಶನವಾಗಿದೆ.[೧೬]

ಕೆನಡಾ

[ಬದಲಾಯಿಸಿ]
1911ರಲ್ಲಿ ಕ್ಯೂಬೆಕ್‌‌ ನಗರದಲ್ಲಿರುವ ಜರ್ಮನ್‌ ವಲಸೆಗಾರರು

ಕೆನಡಾಗೆ ಆದ ವಲಸೆಯು ಆರ್ಥಿಕ ಕಾರ್ಯನೀತಿ ಮತ್ತು ಕುಟುಂಬದ ಪುನರೇಕೀಕರಣದಿಂದ ಪ್ರೇರೇಪಿಸಲ್ಪಟ್ಟಿದೆ. 2001ರಲ್ಲಿ, ಸರಿಸುಮಾರಾಗಿ 250,640 ಜನರು ಕೆನಡಾಗೆ ವಲಸೆ ಹೋದರು. ಹೊಸದಾಗಿ ಬರುವವರು ಬಹುತೇಕವಾಗಿ ಟೊರೊಂಟೊ, ವ್ಯಾಂಕೂವರ್‌ ಮತ್ತು ಮಾಂಟ್ರಿಯಲ್‌‌‌ ಇವೇ ಮೊದಲಾದ ಪ್ರಮುಖ ನಗರ ಪ್ರದೇಶಗಳಲ್ಲಿ ನೆಲೆಗೊಳ್ಳುತ್ತಾರೆ.[೧೭] 1990ರ ದಶಕ ಮತ್ತು 2000ರ ದಶಕದ ವೇಳೆಗೆ, ಕೆನಡಾಕ್ಕೆ ಬಂದ ವಲಸೆಗಾರರ ಪೈಕಿಯ ಅತಿದೊಡ್ಡ ಭಾಗವು ಏಷ್ಯಾಕ್ಕೆ ಸೇರಿದ್ದು, ಅವುಗಳಲ್ಲಿ ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಪೂರ್ವ ಏಷ್ಯಾ ಪ್ರದೇಶಗಳು ಸೇರಿದ್ದವು.[೧೮] ಕೆನಡಾದ ಸಮಾಜವು ಅತ್ಯಂತ ಪ್ರಗತಿಪರವಾಗಿರುವ, ಭಿನ್ನವಾಗಿರುವ, ಮತ್ತು ಬಹುಸಾಂಸ್ಕೃತಿಕವಾಗಿರುವ ರೀತಿಯಲ್ಲಿ ಅನೇಕವೇಳೆ ಚಿತ್ರಿಸಲ್ಪಟ್ಟಿದೆ. ವರ್ಣಭೇದ ನೀತಿಯ ಕಾರಣದಿಂದಾಗಿ ಓರ್ವ ವ್ಯಕ್ತಿಯನ್ನು ದೂಷಿಸುವುದು ಕೆನಡಾದಲ್ಲಿ ಸಾಮಾನ್ಯವಾಗಿ ಒಂದು ಗಂಭೀರ ಆರೋಪವಾಗಿ ಪರಿಗಣಿಸಲ್ಪಡುತ್ತದೆ.[೧೯] ಕೆನಡಾದ ರಾಜಕೀಯ ಪಕ್ಷಗಳು ತಮ್ಮ ದೇಶದ ಉನ್ನತ ಮಟ್ಟದಲ್ಲಿನ ವಲಸೆಯನ್ನು ಟೀಕಿಸುವಾಗ ಈಗ ಜಾಗರೂಕವಾಗಿರುತ್ತವೆ; ಏಕೆಂದರೆ, ಗ್ಲೋಬ್‌ ಅಂಡ್‌ ಮೇಲ್‌‌ನಿಂದ ಸೂಚಿಸಲ್ಪಟ್ಟಿರುವಂತೆ, "1990ರ ದಶಕದ ಆರಂಭದಲ್ಲಿ, ಹಳೆಯ ರಿಫಾರ್ಮ್‌ ಪಾರ್ಟಿಗೆ 'ವರ್ಣಭೇದ ನೀತಿಯ' ಪಕ್ಷ ಎಂಬ ಹಣೆಪಟ್ಟಿಯನ್ನು ನೀಡಲಾಗಿತ್ತು; ವಲಸೆಯ ಮಟ್ಟಗಳನ್ನು 250,000ದಿಂದ 150,000ಕ್ಕೆ ಇಳಿಸಲಾಗುತ್ತದೆ ಎಂದು ಅದು ಸೂಚನೆ ನೀಡಿದ್ದೇ ಇದಕ್ಕೆ ಕಾರಣ."[೨೦]

1911ರಿಂದ ಇರುವ, ಕೆನಡಾದ ಬಹುಸಾಂಸ್ಕೃತಿಕ ಗುರುತಿನ ಕುರಿತಾದ ರಾಜಕೀಯ ವ್ಯಂಗ್ಯಚಿತ್ರ

ಅರ್ಜೈಂಟೈನಾ

[ಬದಲಾಯಿಸಿ]

ಹಿಂದೆ ಸೂಚಿಸಿದಂತೆ ಬಹುಸಾಂಸ್ಕೃತಿಕತೆ ಎಂದು ಕರೆದಿಲ್ಲವಾದರೂ, ಅರ್ಜೆಂಟೈನಾದ ಸಂವಿಧಾನದ ಪೀಠಿಕೆಯು ವಲಸೆಯನ್ನು ಸ್ಪಷ್ಟವಾಗಿ ಉತ್ತೇಜಿಸುತ್ತದೆ ಮತ್ತು ಇತರ ದೇಶಗಳಿಗೆ ಸೇರಿದ ವ್ಯಕ್ತಿಯ ಬಹು ಪೌರತ್ವವನ್ನು ಗುರುತಿಸುತ್ತದೆ. ಅರ್ಜೆಂಟೈನಾದ ಜನಸಂಖ್ಯೆಯ 86%ನಷ್ಟು ಭಾಗವು ಇಂದಿನವರೆಗೂ ತನ್ನನ್ನು ಐರೋಪ್ಯ ಪೀಳಿಗೆಯಾಗಿ[೨೧][೨೨] ಸ್ವತಃ ಗುರುತಿಸಿಕೊಳ್ಳುತ್ತದೆಯಾದರೂ, ಒಂದು ಉನ್ನತ ಮಟ್ಟದ ಬಹುಸಾಂಸ್ಕೃತಿಕತೆಯು ಅರ್ಜೆಂಟೈನಾ ದೇಶದ ಸಂಸ್ಕೃತಿಯ[೨೩] ಒಂದು ಲಕ್ಷಣವಾಗಿ ಉಳಿದುಕೊಂಡಿದೆ; ಇದರಿಂದಾಗಿ, ವಿದೇಶಿ ಉತ್ಸವಗಳು ಮತ್ತು ರಜಾದಿನಗಳಿಗೆ (ಉದಾಹರಣೆಗೆ: ಸೇಂಟ್‌ ಪ್ಯಾಟ್ರಿಕ್‌‌ನ ಜಯಂತಿ) ಅವಕಾಶ ಸಿಕ್ಕಿದಂತಾಗಿದೆ. ಅಷ್ಟೇ ಅಲ್ಲ, ಅಲ್ಪಸಂಖ್ಯಾತರ ವಲಯಕ್ಕೆ ಸೇರಿದ ಎಲ್ಲ ಬಗೆಯ ಕಲೆಗಳು ಅಥವಾ ಸಾಂಸ್ಕೃತಿಕ ಅಭಿವ್ಯಕ್ತಿಗೆ ಇಲ್ಲಿ ಬೆಂಬಲ ಸಿಕ್ಕಿರುವುದಲ್ಲದೇ, ಮಾಧ್ಯಮದಲ್ಲಿನ ಒಂದು ಮುಖ್ಯ ಬಹುಸಾಂಸ್ಕೃತಿಕ ಹಾಜರಿಯ ಮೂಲಕ ಅವುಗಳ ಪ್ರಸಾರವಾಗುವುದೂ ಸಾಧ್ಯವಾಗಿದೆ; ಉದಾಹರಣೆಗೆ, ಅರ್ಜೆಂಟೈನಾದಲ್ಲಿ ಇಂಗ್ಲಿಷ್‌, ಜರ್ಮನ್‌, ಇಟಾಲಿಯನ್‌ ಅಥವಾ ಗೌರಾನಿ ಭಾಷೆಗಳಲ್ಲಿ ವೃತ್ತಪತ್ರಿಕೆಗಳು[೨೪] ಅಥವಾ ರೇಡಿಯೋ ಕಾರ್ಯಕ್ರಮಗಳನ್ನು ಕಾಣುವುದು ಸಾಮಾನ್ಯವಾಗಿದೆ.

ಆಸ್ಟ್ರೇಲಿಯಾ

[ಬದಲಾಯಿಸಿ]

ಆಸ್ಟ್ರೇಲಿಯಾವು ಕೆನಡಾದ-ಶೈಲಿಯ ಬಹುಸಾಂಸ್ಕೃತಿಕತೆಯನ್ನು ಅತ್ಯಂತ ಪರಿಪೂರ್ಣವಾಗಿ ಅಳವಡಿಸಿಕೊಂಡಿರುವ ಮತ್ತೊಂದು ದೇಶವೆನಿಸಿಕೊಂಡಿದ್ದು, ಇದೇ ರೀತಿಯ ಅನೇಕ ಕಾರ್ಯನೀತಿಗಳು ಅದರಲ್ಲಿ ಸೇರಿವೆ; ವಿಶೇಷ ಪ್ರಸಾರ ಸೇವೆಯ ರೂಪಿಸುವಿಕೆಯು ಇದಕ್ಕೊಂದು ಉದಾಹರಣೆಯೆನ್ನಬಹುದು.[೨೫]

2006ರ ಜನಗಣತಿಯ ಅನುಸಾರ, ಜನಸಂಖ್ಯೆಯ ಐದನೇ ಒಂದಕ್ಕೂ ಹೆಚ್ಚು ಭಾಗದಷ್ಟು ಜನರು ಕಡಲಾಚೆಯಲ್ಲಿ ಜನಿಸಿದವರಾಗಿದ್ದರು.[೨೫] ಮೇಲಾಗಿ, ಜನಸಂಖ್ಯೆಯ ಹೆಚ್ಚೂಕಮ್ಮಿ 50%ನಷ್ಟು ಭಾಗದ ಜನರು ಇವುಗಳ ಪೈಕಿ ಒಂದು ವರ್ಗಕ್ಕೆ ಸೇರಿದವರಾಗಿದ್ದರು:

1. ಕಡಲಾಚೆಯಲ್ಲಿ ಜನಿಸಿದವರಾಗಿದ್ದರು; ಅಥವಾ

2. ಅವರ ಹೆತ್ತವರ ಪೈಕಿ ಒಬ್ಬರು ಅಥವಾ ಇಬ್ಬರೂ ಸಹ ಕಡಲಾಚೆಯಲ್ಲಿ ಜನಿಸಿದವರಾಗಿದ್ದರು[೨೫]

ಪ್ರತಿ ವ್ಯಕ್ತಿಯ ನಿವ್ವಳ ವಲಸೆಯ ಪರಿಭಾಷೆಯಲ್ಲಿ ಹೇಳುವುದಾದರೆ, ಆಸ್ಟ್ರೇಲಿಯಾವು 18ನೇ ಸ್ಥಾನದಲ್ಲಿದ್ದು (2008ರ ದತ್ತಾಂಶ), ಕೆನಡಾ, USA ಮತ್ತು ಯುರೋಪ್‌‌ನ ಬಹುಭಾಗಗಳಿಗಿಂತ ಅದು ಮುಂದಿದೆ‌‌.[೨೬]

ಅಮೆರಿಕಾ ಸಂಯುಕ್ತ ಸಂಸ್ಥಾನ

[ಬದಲಾಯಿಸಿ]

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಒಕ್ಕೂಟ ಮಟ್ಟದಲ್ಲಿನ ಕಾರ್ಯನೀತಿಯಲ್ಲಿ ಬಹುಸಾಂಸ್ಕೃತಿಕತೆಯು ನಿಚ್ಚಳವಾಗಿ ನೆಲೆಗೊಂಡಿಲ್ಲ.

ಮಲ್ಬರಿ ಸ್ಟ್ರೀಟ್‌; ಇದರ ಜೊತೆಯಲ್ಲಿ ಮ್ಯಾನ್‌ಹಾಟನ್‌‌ನ ಲಿಟ್ಲ್‌ ಇಟಲಿಯು ಕೇಂದ್ರೀಕರಿಸಲ್ಪಟ್ಟಿರುವುದು.ಲೋಯರ್‌ ಈಸ್ಟ್‌ ಸೈಡ್‌, ಸುಮಾರು 1900.

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, 19ನೇ ಶತಮಾನದ ಪ್ರಥಮಾರ್ಧದ ಅವಧಿಯಿಂದಲೂ ನಿರಂತರ ಸಾಮೂಹಿಕ ವಲಸೆಯು ಆರ್ಥಿಕತೆ ಮತ್ತು ಸಮಾಜದ ಒಂದು ಲಕ್ಷಣವಾಗಿತ್ತು.[೨೭] ಸ್ವತಃ ತನ್ನಲ್ಲಿ ವಲಸೆಗಾರರ ಹರಿವಿನ ಒಳಸೇರಿಸಿಕೊಳ್ಳುವಿಕೆಯು ಅಮೆರಿಕಾದ ರಾಷ್ಟ್ರೀಯ ನಂಬಿಕೆಯ ಒಂದು ಎದ್ದುಕಾಣುವ ಲಕ್ಷಣವಾಗಿ ಪರಿಣಮಿಸಿತು. ಸಮ್ಮಿಳನ ಸ್ಥಾನದ ಪರಿಕಲ್ಪನೆಯು ಒಂದು ರೂಪಕವಾಗಿದ್ದು, ಎಲ್ಲಾ ವಲಸೆಗಾರ ಸಂಸ್ಕೃತಿಗಳು ಸಮ್ಮಿಶ್ರಿತವಾಗಿವೆ ಮತ್ತು ಸಂಸ್ಥಾನದ ಹಸ್ತಕ್ಷೇಪವಿಲ್ಲದೆಯೇ ಅವು ಒಂದಾಗಿಸಲ್ಪಟ್ಟಿವೆ ಎಂಬುದನ್ನು ಅದು ಸೂಚಿಸುತ್ತದೆ.[೨೮] ಸಮ್ಮಿಳನ ಸ್ಥಾನ‌ವು ಸೂಚಿಸಿದ ಪ್ರಕಾರ, ಪ್ರತಿ ವಲಸೆಗಾರ ವ್ಯಕ್ತಿ ಹಾಗೂ ವಲಸೆಗಾರರ ಪ್ರತಿ ಸಮೂಹವು ತಮ್ಮದೇ ಆದ ಗತಿಯಲ್ಲಿ ಅಮೆರಿಕಾದ ಸಮಾಜದೊಳಗಡೆ ಮಿಳಿತವಾದವು; ಇದು ಮೇಲೆ ವ್ಯಾಖ್ಯಾನಿಸಲ್ಪಟ್ಟಂತೆ ಬಹುಸಾಂಸ್ಕೃತಿಕತೆ ಎನಿಸಿಕೊಳ್ಳುವುದಿಲ್ಲ. ಏಕೆಂದರೆ ಇದು ಬೆರೆತು ಹೋಗುವಿಕೆ ಮತ್ತು ಏಕೀಕರಣಕ್ಕೆ ವ್ಯತಿರಿಕ್ತವಾದುದಾಗಿದೆ. ಮೂಲ ರಾಷ್ಟ್ರದ ಪಾಕಪದ್ಧತಿಯ, ಮತ್ತು ಅದರ ರಜಾದಿನಗಳ ಒಂದು ಅಮೆರಿಕೀಕರಿಸಿದ (ಮತ್ತು ಅನೇಕವೇಳೆ ರೂಢಮಾದರಿಯ) ಆವೃತ್ತಿಯು ಉಳಿದುಕೊಂಡಿತು. ಅಮೆರಿಕಾದ ಸಂಸ್ಥಾಪಕ ಜನಕರರ ಕಾಲದಿಂದಲೂ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಒಗ್ಗಟ್ಟಿನಲ್ಲಿನ ಒಂದು ನಂಬಿಕೆಯೊಂದಿಗೆ ಸಮ್ಮಿಳನ ಸ್ಥಾನ‌ದ ಸಂಪ್ರದಾಯವು ಜೊತೆಜೊತೆಯಾಗಿದೆ:

"ಈ ಒಂದು ಸುಸಂಗತ ದೇಶವನ್ನು ಒಂದು ಏಕೀಕೃತ ಜನರಿಗೆ ನೀಡಲು ಭಗವಂತನು ಸಂತೋಷಗೊಂಡಿರುತ್ತಾನೆ - ಈ ಜನರು ಅದೇ ಪೂರ್ವಜರಿಂದ ಹುಟ್ಟಿದವರಾಗಿದ್ದಾರೆ, ಅದೇ ಭಾಷೆಯನ್ನು ಅವರು ಮಾತನಾಡುತ್ತಿದ್ದಾರೆ, ಅದೇ ಧರ್ಮದಲ್ಲಿ ತಮಗಿರುವ ಶ್ರದ್ಧಾಭಕ್ತಿಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ, ಸರ್ಕಾರದ ಅದೇ ತತ್ತ್ವಗಳಿಗೆ ಅಂಟಿಕೊಂಡಿದ್ದಾರೆ, ಅವರ ರೀತಿನೀತಿಗಳು ಮತ್ತು ಸಂಪ್ರದಾಯಾಚಾರಣೆಗಳು ಅದೇ ರೀತಿಯವಾಗಿವೆ... ಈ ದೇಶ ಮತ್ತು ಈ ಜನರು ಪರಸ್ಪರ ಒಬ್ಬರಿಗೊಬ್ಬರು ಹುಟ್ಟಿಕೊಂಡಂತೆ ಅನಿಸುತ್ತದೆ, ಮತ್ತು ಇದು ಭಗವಂತನದೇ ವಿನ್ಯಾಸವೇ ಆಗಿತ್ತೇನೋ ಎಂಬ ರೀತಿಯಲ್ಲಿ ಇದು ಕಂಡುಬರುತ್ತದೆ; ಇದು ಎಷ್ಟರಮಟ್ಟಿಗಿದೆಯೆಂದರೆ, ಅತ್ಯಂತ ಬಲವಾದ ಬಂಧಗಳಿಂದ ಪರಸ್ಪರರೊಂದಿಗೆ ಒಗ್ಗಟ್ಟಿನಿಂದ ಕೂಡಿರುವ ಸೋದರರ ಒಂದು ಗುಂಪಿಗೆ ಸಂಬಂಧಿಸಿದಂತೆ ಒಂದು ಆನುವಂಶಿಕ ಲಕ್ಷಣವು ಇಲ್ಲಿ ಸೂಕ್ತವಾಗಿ ಮತ್ತು ಅನುಕೂಲಕರವಾಗಿ ಮಿಳಿತಗೊಂಡಿದೆ; ಈ ಬಂಧಗಳು ಹಲವಾರು ಸಮಾಜಕಂಟಕ, ಅಸೂಯಾಪರ, ಮತ್ತು ಪರಕೀಯ ಪರಮಾಧಿಕಾರಗಳಾಗಿ ಎಂದಿಗೂ ಒಡೆದುಹೋಗಬಾರದು."[೨೯]

ಯುರೋಪ್‌‌ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಹತ್ತೊಂಬತ್ತನೇ ಶತಮಾನದ ಅಂತ್ಯಭಾಗದಲ್ಲಿ ಕಂಡುಬಂದ ವ್ಯವಹಾರ ಸಿದ್ಧಾಂತ ಆಂದೋಲನದ ಭಾಗವಾಗಿ, ಬಹುಸಾಂಸ್ಕೃತಿಕತೆಯು ಒಂದು ತತ್ತ್ವವಾಗಿ ಶುರುವಾಯಿತು. ಆಮೇಲೆ ಇಪ್ಪತ್ತನೇ ಶತಮಾನದ ದ್ವಿತೀಯಾರ್ಧದಲ್ಲಿ ರಾಜಕೀಯ ಮತ್ತು ಸಾಂಸ್ಕೃತಿಕ ಬಹುಸಾಂಸ್ಕೃತಿಕತೆಯಾಗಿ ಅದು ಹೊರಹೊಮ್ಮಿತು. ಭಾಗಶಃ ಇದು, ಸಹರಾ ಮರುಭೂಮಿಯ ದಕ್ಷಿಣಕ್ಕಿರುವ ಆಫ್ರಿಕಾದಲ್ಲಿನ ಐರೋಪ್ಯ ಸಾಮ್ರಾಜ್ಯಶಾಹಿಯ ಒಂದು ಹೊಸ ಅಲೆಗೆ ಪ್ರತಿಕ್ರಿಯೆಯಾಗಿ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ಹಾಗೂ ಲ್ಯಾಟಿನ್‌ ಅಮೆರಿಕಾಗೆ ದಕ್ಷಿಣದ ಮತ್ತು ಪೂರ್ವದ ಯುರೋಪಿಯನ್ನರ ಅತಿ ಹೆಚ್ಚಿನ ವಲಸೆಗೆ ಪ್ರತಿಕ್ರಿಯೆಯಾಗಿ ಕಂಡುಬಂದಿತು. ಚಾರ್ಲ್ಸ್‌ ಸ್ಯಾಂಡರ್ಸ್‌ ಪೀರ್ಸ್‌, ವಿಲಿಯಂ ಜೇಮ್ಸ್‌, ಜಾರ್ಜ್‌ ಸ್ಯಾಂಟಾಯನಾ, ಹೊರೇಸ್‌ ಕಲ್ಲೆನ್‌‌, ಜಾನ್‌‌ ಡೆವೆ, W. E. B. ಡು ಬೋಯಿಸ್‌ ಮತ್ತು ಅಲೈನ್‌‌ ಲಾಕೆ ಇವರೇ ಮೊದಲಾದ ದಾರ್ಶನಿಕರು, ಮನಶ್ಯಾಸ್ತ್ರಜ್ಞರು ಮತ್ತು ಇತಿಹಾಸಕಾರರು ಹಾಗೂ ಆರಂಭಿಕ ಸಮಾಜಶಾಸ್ತ್ರಜ್ಞರು ಸಾಂಸ್ಕೃತಿಕ ಬಹುಸಾಂಸ್ಕೃತಿಕತೆಯ ಪರಿಕಲ್ಪನೆಗಳನ್ನು ಅಭಿವೃದ್ಧಿಪಡಿಸಿದರು; ಇದರಿಂದಲೇ ಇಂದು ನಾವು ಬಹುಸಾಂಸ್ಕೃತಿಕತೆ ಎಂದು ಅರ್ಥಮಾಡಿಕೊಂಡಿರುವ ಪರಿಕಲ್ಪನೆಯು ಹೊರಹೊಮ್ಮಿತು. ಪ್ಲೂರಲಿಸ್ಟಿಕ್‌ ಯೂನಿವರ್ಸ್‌ (1909) ಎಂಬ ಕೃತಿಯಲ್ಲಿ ವಿಲಿಯಂ ಜೇಮ್ಸ್‌ ಎಂಬಾತ "ಬಹುತ್ವ ಸಮಾಜ"ವೊಂದರ ಪರಿಕಲ್ಪನೆಯನ್ನು ಎತ್ತಿಹಿಡಿದ. ಒಂದು ಉತ್ತಮವಾದ, ಹೆಚ್ಚು ಸಮಾನತಾವಾದದ ಸಮಾಜವನ್ನು ನಿರ್ಮಿಸುವಲ್ಲಿ ನೆರವಾಗುವ ತಾತ್ತ್ವಿಕ ಮತ್ತು ಸಾಮಾಜಿಕ ಮಾನವತಾವಾದದ ರೂಪಿಸುವಿಕೆಯಲ್ಲಿ, ಬಹುಸಾಂಸ್ಕೃತಿಕತೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಜೇಮ್ಸ್‌ ಕಂಡುಕೊಂಡ.[೩೦]

ಯುನೈಟೆಡ್‌ ಕಿಂಗ್‌ಡಂ

[ಬದಲಾಯಿಸಿ]

1970ರ ದಶಕದಿಂದ ಪ್ರಾರಂಭಗೊಂಡು ಮತ್ತು ಮುಂದಕ್ಕೆ 1980ರ ದಶಕದ ಅವಧಿಯಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಗಳು ಬಹುಸಾಂಸ್ಕೃತಿಕ ಕಾರ್ಯನೀತಿಗಳನ್ನು ಅಳವಡಿಸಿಕೊಂಡವು; ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ, ಟೋನಿ ಬ್ಲೇರ್‌ [೩೧][೩೨] ನೇತೃತ್ವದ ಕಾರ್ಮಿಕ ಪಕ್ಷದ ಸರ್ಕಾರವು ಇದಕ್ಕೆ ಬದ್ಧವಾಗಿತ್ತು. ರಾಷ್ಟ್ರೀಯ ಕಾರ್ಯನೀತಿಯಲ್ಲಿ, ಶಾಸನವು 1948ರ ಬ್ರಿಟಿಷ್‌ ರಾಷ್ಟ್ರೀಯತೆ ಕಾಯಿದೆ ಹಾಗೂ ಜನಾಂಗ ಸಂಬಂಧಗಳ ಕಾಯಿದೆ ಗಳನ್ನು ಒಳಗೊಂಡಿದೆ. ಕೊನೆಯ ದಶಕಗಳಿಗೆ ಸೇರಿದ ಬಹುತೇಕ ವಲಸೆಗಾರರು ಭಾರತೀಯ ಉಪಖಂಡದಿಂದ ಅಥವಾ ಕೆರಿಬಿಯನ್‌ ವಲಯದಿಂದ, ಅಂದರೆ ಹಿಂದಿನ ಬ್ರಿಟಿಷ್‌ ವಸಾಹತುಗಳಿಂದ ಬಂದರು. 2004ರಲ್ಲಿ ಬ್ರಿಟಿಷ್‌ ನಾಗರಿಕರಾಗಿ ಮಾರ್ಪಟ್ಟ ಜನರ ಸಂಖ್ಯೆಯು ದಾಖಲಾರ್ಹವೆನ್ನಬಹುದಾದ 140,795ರಷ್ಟಕ್ಕೆ ಏರಿತು; ಹಿಂದಿನ ವರ್ಷಕ್ಕೆ ಹೋಲಿಸಿದಾಗ ಇದು 12%ನಷ್ಟು ಹೆಚ್ಚಳವನ್ನು ದಾಖಲಿಸಿತ್ತು. 2000ನೇ ಇಸವಿಯಿಂದೀಚೆಗೆ ಈ ಸಂಖ್ಯೆಯು ನಾಟಕೀಯವಾಗಿ ಏರಿತ್ತು. ಹೊಸ ನಾಗರಿಕರ ಅಗಾಧ ಬಾಹುಳ್ಯವು ಆಫ್ರಿಕಾ (32%) ಮತ್ತು ಏಷ್ಯಾದಿಂದ (40%) ಬಂದಿದ್ದರೆ, ಅವುಗಳ ಪೈಕಿಯ ಅತಿದೊಡ್ಡ ಮೂರು ಸಮೂಹಗಳು ಪಾಕಿಸ್ತಾನ, ಭಾರತ ಮತ್ತು ಸೊಮಾಲಿಯಾದಿಂದ ಬಂದಿದ್ದ ಜನರದಾಗಿದ್ದವು.[೩೩]

ಇಂಗ್ಲಿಷ್‌-ಮಾತನಾಡುವ ಪಾಶ್ಚಾತ್ಯ ದೇಶಗಳಲ್ಲಿ, ಬಹುಸಾಂಸ್ಕೃತಿಕತೆಯು ಒಂದು ಅಧಿಕೃತ ರಾಷ್ಟ್ರೀಯ ಕಾರ್ಯನೀತಿಯಾಗಿ ಕೆನಡಾದಲ್ಲಿ 1971ರಲ್ಲಿ ಆರಂಭವಾದರೆ, ಇದನ್ನು ಅನುಸರಿಸಿಕೊಂಡು ಆಸ್ಟ್ರೇಲಿಯಾದಲ್ಲಿ 1973ರಲ್ಲಿ ಆರಂಭವಾಯಿತು.[೩೪] ಐರೋಪ್ಯ ಒಕ್ಕೂಟದ ಬಹುಪಾಲು ಸದಸ್ಯ-ಸಂಸ್ಥಾನಗಳು ಇದನ್ನು ಅಧಿಕೃತ ಕಾರ್ಯನೀತಿಯಾಗಿ ಶೀಘ್ರವಾಗಿ ಅಳವಡಿಸಿಕೊಂಡವು. ಇತ್ತೀಚಿಗೆ, ಹಲವಾರು ಐರೋಪ್ಯ ಸಂಸ್ಥಾನಗಳಲ್ಲಿನ, ಅದರಲ್ಲೂ ಗಮನಾರ್ಹವಾಗಿ ನೆದರ್ಲೆಂಡ್ಸ್‌ ಮತ್ತು ಡೆನ್ಮಾರ್ಕ್‌ ದೇಶಗಳಲ್ಲಿನ ಬಲಪಂಥೀಯ ಸರ್ಕಾರಗಳು ರಾಷ್ಟ್ರೀಯ ಕಾರ್ಯನೀತಿಯನ್ನು ಪೂರ್ತಿ ಬದಲಾಯಿಸಿವೆ ಮತ್ತು ಒಂದು ಅಧಿಕೃತವಾದ ಏಕಸಾಂಸ್ಕೃತಿಕತೆಗೆ ಹಿಂದಿರುಗಿವೆ.[೩೪] ಯುನೈಟೆಡ್‌ ಕಿಂಗ್‌ಡಂನಲ್ಲಿ, ಇದೇ ರೀತಿಯ ಬದಲಾವಣೆಯು ಇತರ ವಿಷಯಗಳ ಪೈಕಿಯ ಒಂದು ಚರ್ಚಾ ವಿಷಯವಾಗಿದ್ದು, "ಸ್ವದೇಶದಲ್ಲಿ-ಬೆಳೆದ" ಭಯೋತ್ಪಾದನೆಯ ಕುರಿತಾದ ಪ್ರಥಮಾವಸ್ಥೆಯ ಪ್ರತ್ಯೇಕತಾ ನೀತಿ ಮತ್ತು ತಳಮಳಗಳ ಪುರಾವೆಯು ಇದಕ್ಕೆ ಕಾರಣವಾಗಿದೆ.[೩೫]

ಯುರೋಪ್‌ ಖಂಡ

[ಬದಲಾಯಿಸಿ]
1910ರಲ್ಲಿದ್ದಂತೆ ಆಸ್ಟ್ರಿಯಾ–ಹಂಗರಿಯ ಜನಾಂಗ-ಭಾಷಾಧ್ಯಯನದ ನಕ್ಷೆ. ಜರ್ಮನ್‌-ಪ್ರಾಬಲ್ಯದ ಹಬ್ಸ್‌‌ಬರ್ಗ್‌ ಸಂಸ್ಥಾನದ ಆಡಳಿತವನ್ನು ಇಟಾಲಿಯನ್ನರು, ಸ್ಲಾವನ್ನರು ಮತ್ತು ಹಂಗರಿಯನ್ನರು ಪ್ರತಿರೋಧಿಸಿದ್ದರಿಂದಾಗಿ ಜನಾಂಗೀಯ ರಾಷ್ಟ್ರೀಯತೆಯು ಪರಮ ಪ್ರಾಮುಖ್ಯತೆಯ ವಿಷಯವಾಗಿ ಮಾರ್ಪಟ್ಟಿತು.
1937ರಲ್ಲಿದ್ದಂತೆ, ಎರಡನೇ ಪೋಲಿಷ್‌ ಗಣರಾಜ್ಯದ ಜನಾಂಗ-ಭಾಷಾಧ್ಯಯನದ ನಕ್ಷೆ. ಪೋಲಿಷ್‌-ಉಕ್ರೇನಿಯನ್ನರ ಬದ್ಧದ್ವೇಷವು 1943-44ರ ಜನಾಂಗೀಯ ಹತ್ಯಾಕಾಂಡಗಳಿಗೆ ಕಾರಣವಾಗಿ, ಇದರಲ್ಲಿ 100,000ದಷ್ಟು ಪೋಲೆಂಡಿನ ಜನರು ಅಸುನೀಗಿದರು.[೩೬]
ಕ್ಲುಜ್‌‌ನಲ್ಲಿ (ಟ್ರಾನ್ಸಿಲ್ವೇನಿಯಾ, ರೊಮೇನಿಯಾ) ಪ್ರಕಟಗೊಂಡ ಹಂಗರಿಯ ಭಾಷೆಯ ಮತ್ತು ರೊಮೇನಿಯನ್‌‌ ಭಾಷೆ ವೃತ್ತಪತ್ರಿಕೆಗಳು.

ಐತಿಹಾಸಿಕವಾಗಿ ಹೇಳುವುದಾದರೆ, ಯುರೋಪ್‌‌ ಖಂಡವು ಎಲ್ಲ ಕಾಲಗಳಲ್ಲಿಯೂ ಬಹು-ಸಾಂಸ್ಕೃತಿಕ ಸ್ವರೂಪವನ್ನು ಕಾಯ್ದುಕೊಂಡು ಬಂದಿದೆ. ಇದು ಲ್ಯಾಟಿನ್‌, ಸ್ಲಾವಿಕ್‌‌, ಜರ್ಮನ್ನರ ಮತ್ತು ಕೆಲ್ಟರ ಸಂಸ್ಕೃತಿಗಳ ಒಂದು ಮಿಶ್ರಣವಾಗಿದ್ದು, ಯೆಹೂದ್ಯರ, ಗ್ರೀಕರ ಮತ್ತು ಅಷ್ಟೇ ಏಕೆ ಮುಸ್ಲಿಂ ನಂಬಿಕೆಯ ಪದ್ಧತಿಗಳ ಅಳವಡಿಕೆಯಿಂದ ಪ್ರಭಾವಿಸಲ್ಪಟ್ಟಿದೆ; ಸಾಮಾನ್ಯವಾಗಿ ಭಾವಿಸಿರುವಂತೆ ಈ ಖಂಡವು ರೋಮನ್‌ ಕ್ಯಾಥಲಿಕ್‌ ಕ್ರೈಸ್ತಪ್ರಪಂಚದ ಪರಮೋಚ್ಛ-ಸ್ಥಾನದಿಂದ ಏಕೀಕರಿಸಲ್ಪಟ್ಟಿದೆಯಾದರೂ, ಭೌಗೋಳಿಕ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳು ಪ್ರಾಚೀನ ಕಾಲದಿಂದ ಆಧುನಿಕ ಯುಗದವರೆಗೂ ಮುಂದುವರಿದಿವೆ ಎಂಬ ಅಂಶವು ಅಂಗೀಕರಿಸಲ್ಪಟ್ಟಿದೆ.[ಸೂಕ್ತ ಉಲ್ಲೇಖನ ಬೇಕು]

ಅದರಲ್ಲೂ ವಿಶೇಷವಾಗಿ 19ನೇ ಶತಮಾನದಲ್ಲಿ, ರಾಷ್ಟ್ರೀಯತೆಯ ಸಿದ್ಧಾಂತವು ಸಂಸ್ಥಾನದ ಕುರಿತಾದ ಯುರೋಪಿಯನ್ನರ ಆಲೋಚನಾ ವಿಧಾನವನ್ನು ರೂಪಾಂತರಿಸಿತು.[ಸೂಕ್ತ ಉಲ್ಲೇಖನ ಬೇಕು] ಅಸ್ತಿತ್ವದಲ್ಲಿದ್ದ ಸಂಸ್ಥಾನಗಳು ಒಡೆಯಲ್ಪಟ್ಟಿದ್ದವು ಮತ್ತು ಹೊಸ ಸಂಸ್ಥಾನಗಳು ಸೃಷ್ಟಿಸಲ್ಪಟ್ಟಿದ್ದವು; ಪ್ರತಿ ರಾಷ್ಟ್ರವೂ ತನ್ನದೇ ಆದ ಪರಮಾಧಿಕಾರವುಳ್ಳ ಸಂಸ್ಥಾನಕ್ಕೆ ಸಂಬಂಧಿಸಿದ ಅಧಿಕಾರವನ್ನು ಹೊಂದಿದೆ ಮತ್ತು ತನ್ನದೇ ಆದ ಅನನ್ಯ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಜನ್ಮಕೊಡುವ, ಅದನ್ನು ಸಂರಕ್ಷಿಸು, ಹಾಗೂ ಜೋಪಾನವಾಗಿಡುವ ಅಧಿಕಾರವನ್ನು ಹೊಂದಿದೆ ಎಂಬ ತತ್ತ್ವದ ಮೇಲೆ ಹೊಸ ರಾಷ್ಟ್ರ-ಸಂಸ್ಥಾನಗಳು ಸಂಸ್ಥಾಪಿಸಲ್ಪಟ್ಟಿದ್ದವು. ಈ ಸಿದ್ಧಾಂತದ ಅಡಿಯಲ್ಲಿ ಐಕ್ಯತೆಯನ್ನು ರಾಷ್ಟ್ರದ ಹಾಗೂ ರಾಷ್ಟ್ರ-ಸಂಸ್ಥಾನದ ಒಂದು ಅವಶ್ಯಕ ಲಕ್ಷಣವಾಗಿ ನೋಡಲಾಗಿದೆ; ಅಂದರೆ ಪೀಳಿಗೆಯ ಐಕ್ಯತೆ, ಸಂಸ್ಕೃತಿಯ ಐಕ್ಯತೆ, ಭಾಷೆಯ ಐಕ್ಯತೆ ಮತ್ತು ಅನೇಕವೇಳೆ ಧರ್ಮದ ಐಕ್ಯತೆ ಎಂಬುದು ಇದರಲ್ಲಿನ ಹೂರಣವಾಗಿದೆ. ರಾಷ್ಟ್ರ-ಸಂಸ್ಥಾನ ವ್ಯವಸ್ಥೆಯು ಸಾಂಸ್ಕೃತಿಕವಾಗಿ ಏಕರೂಪದ್ದಾಗಿರುವ ಒಂದು ಸಮಾಜವನ್ನು ರೂಪಿಸುತ್ತದೆಯಾದರೂ, ಕೆಲವೊಂದು ರಾಷ್ಟ್ರೀಯ ಆಂದೋಲನಗಳು ಪ್ರಾದೇಶಿಕ ವ್ಯತ್ಯಾಸಗಳನ್ನು ಗುರುತಿಸುತ್ತವೆ.

ಸಾಂಸ್ಕೃತಿಕ ಐಕ್ಯತೆಯು ಸಾಕಷ್ಟಿಲ್ಲದಿದ್ದಾಗ, ಅದಕ್ಕೆ ಸಂಸ್ಥಾನವು ಉತ್ತೇಜನ ನೀಡುತ್ತಿತ್ತು ಮತ್ತು ಅದನ್ನು ವಿಧಿಸುತ್ತಿತ್ತು. 19ನೇ-ಶತಮಾನದ ರಾಷ್ಟ್ರ-ಸಂಸ್ಥಾನಗಳು ಕಾರ್ಯನೀತಿಗಳ ಒಂದು ಶ್ರೇಣಿಯನ್ನು ಅಭಿವೃದ್ಧಿಪಡಿಸಿದವು; ರಾಷ್ಟ್ರೀಯ ಭಾಷೆಯಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ನೀಡುವುದು ಅವುಗಳಲ್ಲಿ ಅತ್ಯಂತ ಮುಖ್ಯ ಕಾರ್ಯನೀತಿಯಾಗಿತ್ತು. ಸ್ವತಃ ಭಾಷೆಯು ಭಾಷಾಶಾಸ್ತ್ರದ ಅಕಾಡೆಮಿಯೊಂದರಿಂದ ಅನೇಕಬಾರಿ ಪ್ರಮಾಣಕವಾಗಿಸಲ್ಪಟ್ಟಿತು, ಮತ್ತು ಪ್ರಾದೇಶಿಕ ಭಾಷೆಗಳು ಉಪೇಕ್ಷಿಸಲ್ಪಟ್ಟವು ಅಥವಾ ದಮನಮಾಡಲ್ಪಟ್ಟವು. ಸಾಂಸ್ಕೃತಿಕವಾಗಿ ಬೆರೆತು ಹೋಗುವ ಹಾಗೂ ಅಷ್ಟೇ ಏಕೆ ಜನಾಂಗೀಯವಾಗಿ ಪಾವನಗೊಳಿಸುವ ಹಿಂಸಾತ್ಮಕ ಕಾರ್ಯನೀತಿಗಳನ್ನು ಕೆಲವೊಂದು ರಾಷ್ಟ್ರ-ಸಂಸ್ಥಾನಗಳು ಮುಂದುವರೆಸಿದವು.

"ಸಾಮಾಜಿಕ ಐಕ್ಯತೆ", "ಏಕೀಕರಣ", ಮತ್ತು (ಕೆಲವೊಮ್ಮೆ) "ಬೆರೆತು ಹೋಗುವಿಕೆ" ಇವೇ ಮೊದಲಾದವುಗಳಿಗೆ ಸಂಬಂಧಿಸಿದ ಕಾರ್ಯನೀತಿಗಳನ್ನು ಐರೋಪ್ಯ ಒಕ್ಕೂಟದ ಕೆಲವೊಂದು ದೇಶಗಳು ಪರಿಚಯಿಸಿವೆ. ಸದರಿ ಕಾರ್ಯನೀತಿಗಳು ಕೆಳಕಂಡ ಅಂಶಗಳನ್ನು ಒಳಗೊಂಡಿವೆ:

  • ರಾಷ್ಟ್ರೀಯ ಇತಿಹಾಸದ ಮೇಲಿನ, ಸಂವಿಧಾನ ಮತ್ತು ಕಾನೂನು ವ್ಯವಸ್ಥೆಯ ಮೇಲಿನ ಕಡ್ಡಾಯ ಶಿಕ್ಷಣ ಕ್ರಮಗಳು ಮತ್ತು/ಅಥವಾ ಪರೀಕ್ಷೆಗಳು (ಉದಾಹರಣೆಗೆ: UKಯಲ್ಲಿ ರಾಷ್ಟ್ರೀಯತಾ ಸ್ವೀಕರಣೆಯನ್ನು ಬಯಸುತ್ತಿರುವ ವ್ಯಕ್ತಿಗಳಿಗಾಗಿರುವ, ಲೈಫ್‌ ಇನ್‌ ದಿ ಯುನೈಟೆಡ್‌ ಕಿಂಗ್‌ಡಂ ಟೆಸ್ಟ್‌‌ ಎಂಬ ಹೆಸರಿನ ಕಂಪ್ಯೂಟರ್‌-ಆಧರಿತ ಪರೀಕ್ಷೆ)
  • ನೆದರ್ಲೆಂಡ್ಸ್‌ಗಾಗಿ ವಾನ್‌ ಊಸ್ಟ್ರೋಮ್‌ ಆಯೋಗದಿಂದ[೩೭] ವ್ಯಾಖ್ಯಾನಿಸಲ್ಪಟ್ಟ ರಾಷ್ಟ್ರೀಯ ಸಾಮಾನ್ಯ ನಿಯಮದಂಥ ಅಧಿಕೃತ ರಾಷ್ಟ್ರೀಯ ಇತಿಹಾಸವೊಂದರ ಪರಿಚಯ ಮತ್ತು ಆ ಇತಿಹಾಸದ ಪ್ರವರ್ತನೆ (ಉದಾಹರಣೆಗೆ: ರಾಷ್ಟ್ರೀಯ ಧೀರೋದಾತ್ತ ನಾಯಕರ ಕುರಿತಾದ ಪ್ರದರ್ಶನಗಳ ಮೂಲಕ)
  • "ಸ್ವೀಕಾರಾರ್ಹವಲ್ಲದ" ಮೌಲ್ಯಗಳನ್ನು ಹೊರಸೆಳೆಯಲೆಂದು ವಿನ್ಯಾಸಗೊಳಿಸಲ್ಪಟ್ಟ ಪರೀಕ್ಷೆಗಳು. ಒಂದು ವೇಳೆ ವಲಸೆಗಾರರ ಮಗನು ತಾನೋರ್ವ ಸಲಿಂಗಕಾಮಿ ಎಂದು ಹೇಳಿದರೆ, ಅವರೇನು ಮಾಡುತ್ತಾರೆ ಎಂಬುದಾಗಿ ಬಾಡೆನ್‌-ವುರ್ಟೆಂಬರ್ಗ್‌‌‌‌ನಲ್ಲಿ ವಲಸೆಗಾರರನ್ನು ಕೇಳಲಾಗುತ್ತದೆ. (ಅದನ್ನು ಅವರು ಸ್ವೀಕರಿಸುತ್ತಾರೆ ಎಂಬುದು ನಿರೀಕ್ಷಿತ ಉತ್ತರವಾಗಿರುತ್ತದೆ).[೩೮]
  • ಮಹಮ್ಮದೀಯ ದಿರಿಸಿನ ಮೇಲಿನ, ಅದರಲ್ಲೂ ವಿಶೇಷವಾಗಿ ನಿಕಾಬ್‌ (ಬುರ್ಖಾ ಎಂಬುದಾಗಿ ಇದು ಅನೇಕಬಾರಿ ತಪ್ಪಾಗಿ ಹೆಸರಿಸಲ್ಪಟ್ಟಿದೆ) ಮೇಲಿನ ನಿಷೇಧಗಳು.[೩೯]

ನೆದರ್ಲೆಂಡ್ಸ್‌

[ಬದಲಾಯಿಸಿ]

1950ರ ದಶಕದಲ್ಲಿ, ನೆದರ್ಲೆಂಡ್ಸ್‌ ಸಾಮಾನ್ಯವಾಗಿ ಒಂದು ಏಕ-ಜನಾಂಗೀಯ ಮತ್ತು ಏಕಸಾಂಸ್ಕೃತಿಕ ಸಮಾಜವಾಗಿತ್ತು: ಇದು ಸ್ಪಷ್ಟವಾಗಿ ಏಕಭಾಷೀಯವಾಗಿರಲಿಲ್ಲವಾದರೂ, ಹೆಚ್ಚೂಕಮ್ಮಿ ಪ್ರತಿಯೊಬ್ಬರೂ ಶಿಷ್ಟ ಡಚ್‌ ಭಾಷೆಯನ್ನು ಮಾತನಾಡಬಲ್ಲವರಾಗಿದ್ದರು; ಫ್ರಿಸ್‌ಲಂಡ್‌ ಭಾಷೆ, ಲಿಂಬರ್ಗಿಷ್‌ ಮತ್ತು ಡಚ್‌ ಲೋ ಸ್ಯಾಕ್ಸನ್‌ ಭಾಷೆಗಳು ಮಾತ್ರವೇ ಸ್ಥಳೀಕ ಅಲ್ಪಸಂಖ್ಯಾತ ಭಾಷೆಗಳಾಗಿದ್ದವು. ಡಚ್‌ ಸುವರ್ಣ ಯುಗಕ್ಕೆ ಹಾಗೂ ಅಡ್ಮಿರಲ್‌‌ ಮೈಕೇಲ್‌ ಡೆ ರಯ್ಟರ್‌‌‌ನಂಥ ರಾಷ್ಟ್ರೀಯ ಧೀರೋದಾತ್ತ ನಾಯಕರಿಗೆ ಒತ್ತು ನೀಡುವ ರಾಷ್ಟ್ರೀಯ ಪುರಾಣ ಕಥೆಗಳ ನೆರವಿನೊಂದಿಗೆ ಇದರ ನಿವಾಸಿಗಳು ಒಂದು ಶ್ರೇಷ್ಠವಾದ ರಾಷ್ಟ್ರೀಯ ಗುರುತನ್ನು ಹಂಚಿಕೊಂಡರು. ಸಾಮಾಜಿಕ ವರ್ಗ ಮತ್ತು ಜೀವನಶೈಲಿಯಲ್ಲಿನ ವ್ಯತ್ಯಾಸಗಳೊಂದಿಗೆ ಕೆಲವೊಮ್ಮೆ ಸಹವ್ಯಾಪಿಸುತ್ತಿದ್ದ ಧಾರ್ಮಿಕ ಮತ್ತು ಸೈದ್ಧಾಂತಿಕ ರೂಪರೇಖೆಗಳ ಉದ್ದಕ್ಕೂ ಡಚ್‌ ಸಮಾಜವು ಪ್ರತ್ಯೇಕಿಸಲ್ಪಟ್ಟಿತ್ತು. 19ನೇ ಶತಮಾನದ ಅಂತ್ಯಭಾಗದಿಂದ ಈ ಖಂಡೀಕರಣವು, ಆಸರೆ ಕೊಡುವಿಕೆ ಎಂದು ಕರೆಯಲ್ಪಡುತ್ತಿದ್ದ ಅನನ್ಯವಾದ ರೀತಿಯಲ್ಲಿನ ಒಂದು ಡಚ್‌ ರೂಪಾಂತರವಾಗಿ ರೂಪತಳೆದಿತ್ತು; ಹಲವಾರು "ಆಧಾರಸ್ತಂಭಗಳ" ನಾಯಕರ ನಡುವೆ ಶಾಂತಿಯುತ ಸಹಕಾರಕ್ಕೆ ಅನುವು ಮಾಡಿಕೊಡುವ ಲಕ್ಷಣವನ್ನು ಇದು ಹೊಂದಿದ್ದ ಸಂದರ್ಭದಲ್ಲೇ, ಅವರ ಕ್ಷೇತ್ರಗಳು ಬಹುಮಟ್ಟಿಗೆ ಪ್ರತ್ಯೇಕಿಸಲ್ಪಟ್ಟ ಸ್ಥಿತಿಯಲ್ಲಿ ಉಳಿದುಕೊಳ್ಳುವುದು ಇದರಿಂದ ಸಾಧ್ಯವಾಯಿತು. 2000ರ ದಶಕದಲ್ಲಿ ಪಿಮ್‌ ಫೋರ್ಟುಯಿನ್‌ ಮತ್ತು ಗೀರ್ಟ್‌ ವೈಲ್ಡರ್ಸ್‌‌‌ರಂಥ ರಾಜಕಾರಣಿಗಳು ರಾಜಕೀಯ ಯಶಸ್ಸನ್ನು ಗಳಿಸುವುದಕ್ಕೆ ಈ ಪ್ರತ್ಯೇಕತಾ ನೀತಿಯು ಕಾರಣವಾಗಿತ್ತು ಎಂದು ಪರಿಗಣಿಸಲ್ಪಟ್ಟಿದೆ.

ರಷ್ಯಾ

[ಬದಲಾಯಿಸಿ]

ವಸಾಹತು ನೀತಿ ಮತ್ತು ಹಲವಾರು ಶತಮಾನಗಳವರೆಗಿನ ಭೂಮಿಯ ಅನುಕ್ರಮಿಕ ಸಂಚಯನದ ಕಾರಣದಿಂದಾಗಿ, 150ಕ್ಕೂ ಹೆಚ್ಚಿನ ವಿಭಿನ್ನ ಜನಾಂಗೀಯ ಸಮೂಹಗಳನ್ನು ರಷ್ಯಾ ಹೊಂದಿದೆ. ಜನಾಂಗೀಯ ಸಮೂಹಗಳ ನಡುವಿನ, ಅದರಲ್ಲೂ ನಿರ್ದಿಷ್ಟವಾಗಿ ಕಾಕಸಸ್‌ ಪ್ರದೇಶದಲ್ಲಿ ಕಂಡುಬರುತ್ತಿದ್ದ ಬಿಕ್ಕಟ್ಟುಗಳು ಆಗೊಮ್ಮೆ ಈಗೊಮ್ಮೆ ಸಶಸ್ತ್ರ ತಿಕ್ಕಾಟಗಳಾಗಿ ಬೆಳವಣಿಗೆಯನ್ನು ಕಂಡಿವೆ.

ಬೆಲ್ಜಿಯಂ

[ಬದಲಾಯಿಸಿ]

ಈ ಕ್ಷೇತ್ರದಲ್ಲಿ, ಬಹುಸಾಂಸ್ಕೃತಿಕತೆ ಮತ್ತು ಅಂತರ-ಸಾಂಸ್ಕೃತಿಕತೆಗಳ ನಡುವಿನ ಬೃಹತ್‌ ವ್ಯತ್ಯಾಸಗಳನ್ನು ಬೆಲ್ಜಿಯಂ ತೋರಿಸುತ್ತದೆ. ಫ್ಲೆಮಿಷ್‌ ಭಾಗವಾಗಿರುವ ಫ್ಲಾಂಡರ್ಸ್‌ ದೇಶದಲ್ಲಿ ಅಧಿಕೃತ ಕಾರ್ಯನೀತಿಯು (ಇದು ಅತೀವವಾಗಿ-ಬಲಪಂಥೀಯವಾಗಿರುವ ಒಂದು ಪಕ್ಷವನ್ನು ಹೊರತುಪಡಿಸಿ ಎಲ್ಲಾ ಮುಖ್ಯ ರಾಜಕೀಯ ಪಕ್ಷಗಳಿಂದ ಬೆಂಬಲಿಸಲ್ಪಟ್ಟಿದೆ) ನಿಚ್ಚಳವಾಗಿ ಅಂತರ-ಸಂಸ್ಕೃತಿವಾದಿ ಸ್ವರೂಪವನ್ನು ಹೊಂದಿದೆ. ಆದಾಗ್ಯೂ, ಫ್ರೆಂಚ್‌-ಮಾತನಾಡುವ ಪಕ್ಷಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಹುಸಂಸ್ಕೃತಿವಾದಿಗಳಾಗಿವೆ.

ಜರ್ಮನಿ

[ಬದಲಾಯಿಸಿ]

ಮಲ್ಟಿಕಲ್ಟಿ ಸ್ವರೂಪವು ಒಂದು ವಿಫಲಗೊಂಡ ವ್ಯವಸ್ಥೆ ಎಂಬುದಾಗಿ ಏಂಜೆಲಾ ಮೆರ್ಕೆಲ್‌ ಅಭಿಪ್ರಾಯಪಟ್ಟಿದ್ದಾಳೆ.[೪೦][೪೧]

ಪೂರ್ವದ ಸಮಕಾಲೀನ ಸಮಾಜದಲ್ಲಿನ ಬಹುಸಾಂಸ್ಕೃತಿಕತೆ

[ಬದಲಾಯಿಸಿ]

ಭಾರತದ ಸಂಸ್ಕೃತಿಯು ಅದರ ಸುದೀರ್ಘ ಇತಿಹಾಸ, ಅನನ್ಯ ಭೌಗೋಳಿಕ ಸ್ವರೂಪ ಮತ್ತು ಭಿನ್ನವಾದ ಜನಸಂಖ್ಯಾ ಸ್ವರೂಪಗಳಿಂದ ರೂಪಿಸಲ್ಪಟ್ಟಿದೆ. ಭಾರತದ ಭಾಷೆಗಳು, ಧರ್ಮಗಳು, ನೃತ್ಯ, ಸಂಗೀತ, ವಾಸ್ತುಶಿಲ್ಪ ಮತ್ತು ಸಂಪ್ರದಾಯಾಚಾರಣೆಗಳು ದೇಶದೊಳಗಿನ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತಾ ಹೋಗುತ್ತವೆಯಾದರೂ, ಒಂದು ಸಮಾನಗುಣತ್ವವನ್ನು ಅವು ಹೊಂದಿವೆ. ಭಾರತದ ಸಂಸ್ಕೃತಿಯು, ಭಾರತೀಯ ಉಪಖಂಡದ ಉದ್ದಗಲಕ್ಕೂ ಹರಡಿಕೊಂಡಿರುವ ಈ ಭಿನ್ನವಾದ ಉಪ-ಸಂಸ್ಕೃತಿಗಳ ಮತ್ತು ಹಲವಾರು ಸಹಸ್ರಮಾನಗಳಷ್ಟು ಹಳೆಯದಾಗಿರುವ ಸಂಪ್ರದಾಯಗಳ ಒಂದು ಸಮ್ಮಿಳನವಾಗಿದೆ.[೪೨]

ಧಾರ್ಮಿಕವಾಗಿ, ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಮುಸ್ಲಿಂ ಜನಾಂಗದವರದ್ದು ನಂತರದ ಸ್ಥಾನವಾಗಿದೆ. ವಾಸ್ತವಿಕ ಅಂಕಿ-ಅಂಶಗಳು ಹೀಗಿವೆ: ಹಿಂದೂ (80.5%), ಮುಸ್ಲಿಂ (13.4%), ಕ್ರೈಸ್ತ (2.3%), ಸಿಖ್‌ (2.1%), ಬೌದ್ಧ, ಬಹಾಯಿ, ಅಹ್ಮದಿ, ಜೈನ, ಯೆಹೂದಿ ಮತ್ತು ಪಾರ್ಸಿ ಜನಸಮುದಾಯಗಳು.[೪೩] ಭಾರತದ ಗಣರಾಜ್ಯದ ರಾಜ್ಯಗಳ ಎಲ್ಲೆಗೆರೆಗಳು ಬಹುಮಟ್ಟಿಗೆ ಭಾಷಿಕ ಗುಂಪುಗಳನ್ನು ಆಧರಿಸಿ ಎಳೆಯಲ್ಪಟ್ಟಿವೆ; ಈ ನಿರ್ಣಯವು ಸ್ಥಳೀಯ ಜನಾಂಗೀಯ-ಭಾಷಿಕ ಸಂಸ್ಕೃತಿಗಳ ಜೋಪಾನಮಾಡುವಿಕೆ ಮತ್ತು ಮುಂದುವರಿಕೆಗೆ ಕಾರಣವಾಗಿದೆ. ಈ ರೀತಿಯಲ್ಲಿ, ಭಾಷೆ, ಸಂಸ್ಕೃತಿ, ಪಾಕಪದ್ಧತಿ, ವಸ್ತ್ರಶೈಲಿ, ಸಾಹಿತ್ಯಿಕ ಶೈಲಿ, ವಾಸ್ತುಶಿಲ್ಪ, ಸಂಗೀತ ಮತ್ತು ಉತ್ಸವಾಚರಣೆಗಳಿಗೆ ಸಂಬಂಧಿಸಿದಂತೆ ರಾಜ್ಯಗಳು ಒಂದು ಮತ್ತೊಂದರಿಂದ ವಿಭಿನ್ನವಾಗಿರುವುದು ಸಾಧ್ಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಭಾರತದ ಸಂಸ್ಕೃತಿಯನ್ನು ನೋಡಿ.

ಇಂಡೊನೇಷಿಯಾ

[ಬದಲಾಯಿಸಿ]

700ಕ್ಕೂ ಹೆಚ್ಚಿನ ಜೀವಂತ ಭಾಷೆಗಳು ಇಂಡೋನೇಷಿಯಾದಲ್ಲಿ[೪೪] ಮಾತನಾಡಲ್ಪಡುತ್ತವೆ ಮತ್ತು ಅದು ಪ್ರಧಾನವಾಗಿ ಮುಸ್ಲಿಂ ಪ್ರಾಬಲ್ಯದ ದೇಶವಾದರೂ, ಬೃಹತ್‌ ಪ್ರಮಾಣದ ಕ್ರೈಸ್ತ ಮತ್ತು ಹಿಂದೂ ಜನಸಮುದಾಯಗಳನ್ನು ಹೊಂದಿದೆ. ಇಂಡೋನೇಷಿಯಾದ "ಭಿನ್ನೇಕ ತುಂಗ್ಗಲ್‌ ಇಕಾ" ("ವಿವಿಧತೆಯಲ್ಲಿ ಏಕತೆ"; ಅಕ್ಷರಶಃ ಅರ್ಥ: "ಅನೇಕ, ಆದರೂ ಏಕ") ಎಂಬ ರಾಷ್ಟ್ರೀಯ ಧ್ಯೇಯವಾಕ್ಯವು, ದೇಶಕ್ಕೆ ಆಕಾರವನ್ನು ನೀಡುವ ವೈವಿಧ್ಯತೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ಇಂಡೋನೇಷಿಯಾದ ಒಳಗಡೆಯೇ ಕಂಡುಬರುವ ವಲಸೆಯ ಕಾರಣದಿಂದಾಗಿ (ಸರ್ಕಾರದ ವಲಸೆ ಹೋಗುವ ಕಾರ್ಯಕ್ರಮಗಳ ಭಾಗವಾಗಿ ಅಥವಾ ಬೇರಾವುದೇ ಕಾರಣಗಳ ಭಾಗವಾಗಿ), ಜನಾಂಗೀಯ ಸಮೂಹಗಳಿಗೆ ಸೇರಿದ ಗಮನಾರ್ಹ ಪ್ರಮಾಣದ ಜನಸಮುದಾಯವು ಅಲ್ಲಿ ಕಂಡುಬರುತ್ತದೆ ಹಾಗೂ ಈ ಜನರು ತಮ್ಮ ಸಾಂಪ್ರದಾಯಿಕ ಪ್ರದೇಶಗಳ ಆಚೆಗೆ ವಾಸಿಸುತ್ತಾರೆ. 1999ರಲ್ಲಿ ಅಬ್ದುರ್‌‌ರಹಮಾನ್‌‌ ವಹೀದ್‌ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ಜನಾಂಗಗಳ ನಡುವಿನ ಬಾಂಧವ್ಯಗಳನ್ನು ಸುಧಾರಿಸುವ ಪ್ರಯತ್ನಗಳಲ್ಲಿ ಕೆಲವೊಂದು ತಾರತಮ್ಯದ ಕಾನೂನುಗಳನ್ನು ಅವನು ಶೀಘ್ರವಾಗಿ ರದ್ದುಮಾಡಿದ. ಚೀನಾ ಮೂಲದ ಇಂಡೋನೇಷಿಯನ್‌‌ ಜನರು ಈಗ ಪುನಶ್ಯೋಧನದ ಯುಗದಲ್ಲಿದ್ದಾರೆ. ದಶಕಗಳ ಹಿಂದೆಯೇ ನಿಷೇಧ ಹೇರಿದ್ದ ಕಾರಣದಿಂದಾಗಿ ಮ್ಯಾಂಡರಿನ್‌‌ ಭಾಷೆಯನ್ನು ಮಾತನಾಡಲಾಗದ ಅನೇಕ ಕಿರಿಯ ಪೀಳಿಗೆಗಳು, ಮ್ಯಾಂಡರಿನ್ ಕಲಿಕೆಯನ್ನು ಆಯ್ಕೆಮಾಡಿಕೊಂಡಿದ್ದಾರೆ; ದೇಶದ ಉದ್ದಗಲಕ್ಕೂ ಅನೇಕ ಕಲಿಕಾಕೇಂದ್ರಗಳು ಪ್ರಾರಂಭವಾಗಿರುವುದು ಇದಕ್ಕೆ ಕಾರಣವೆನ್ನಬಹುದು. ಮಾಲುಕುವಿನ ಅಂಬಾನ್‌ ಪ್ರದೇಶವು, 1999 ಮತ್ತು 2002ರ ನಡುವೆ ಮಾಲುಕು ದ್ವೀಪಗಳನ್ನು ಭದ್ರವಾಗಿ ಹಿಡಿದುಕೊಂಡಿದ್ದ ಕ್ರೈಸ್ತ ಮತ್ತು ಮುಸ್ಲಿಂ ಸಮೂಹಗಳ ನಡುವಿನ ಕೆಲವೊಂದು ತೀರಾ ಕೆಟ್ಟದಾದ ಹಿಂಸೆಯ ತಾಣವೆನಿಸಿಕೊಂಡಿತ್ತು.[೪೫]

ಜಪಾನ್‌

[ಬದಲಾಯಿಸಿ]

ಜಪಾನಿಯರ ಸಮಾಜವು ತನ್ನ ಏಕರೂಪತೆಯ ಸಿದ್ಧಾಂತದಿಂದಾಗಿ, ಜಪಾನ್‌‌ನಲ್ಲಿನ ಜನಾಂಗೀಯ ವ್ಯತ್ಯಾಸಗಳನ್ನು ಗುರುತಿಸುವುದಕ್ಕೆ ಸಂಬಂಧಿಸಿದ ಯಾವುದೇ ಅಗತ್ಯವನ್ನು ಸಾಂಪ್ರದಾಯಿಕವಾಗಿ ತಿರಸ್ಕರಿಸಿದೆ; ಅಷ್ಟೇ ಅಲ್ಲ, ಇಂಥ ಸಮರ್ಥನೆಗಳು ಐನುವಿನಂಥ ಜನಾಂಗೀಯ ಅಲ್ಪಸಂಖ್ಯಾತರಿಂದ ತಿರಸ್ಕರಿಸಲ್ಪಟ್ಟಿವೆ.[೪೬] ಜಪಾನಿನ ಮಂತ್ರಿಯಾದ ಟಾರೋ ಅಸೊ, ಜಪಾನ್‌ ದೇಶವನ್ನು ಒಂದು "ಏಕ ಜನಾಂಗದ" ರಾಷ್ಟ್ರ ಎಂಬುದಾಗಿ ಕರೆದಿದ್ದಾನೆ.[೪೭] ಆದಾಗ್ಯೂ, ಸ್ಥಳೀಯ ಸರ್ಕಾರಗಳಿಂದ ಸಹಾಯಧನವನ್ನು ಪಡೆದಿರುವ "ಇಂಟರ್‌ನ್ಯಾಷನಲ್‌ ಸೊಸೈಟಿ" NPOಗಳು ಜಪಾನ್‌‌ನ ಉದ್ದಗಲಕ್ಕೂ ಕಂಡುಬರುತ್ತವೆ‌‌.[೪೮]

ಮಲೇಷಿಯಾ

[ಬದಲಾಯಿಸಿ]

ಮಲೇಷಿಯಾವು ಒಂದು ಬಹುಜನಾಂಗೀಯ ದೇಶವಾಗಿದ್ದು, ಮಲಯ ಜನಾಂಗದವರು ಇಲ್ಲಿನ ಜನಸಂಖ್ಯೆಯ ಸುಮಾರು 52%ನಷ್ಟು ಭಾಗವನ್ನು ಆಕ್ರಮಿಸಿಕೊಳ್ಳುವ ಮೂಲಕ ಬಾಹುಳ್ಯವನ್ನು ಮೆರೆದಿದ್ದಾರೆ. ಜನಸಂಖ್ಯೆಯ ಸುಮಾರು 30%ನಷ್ಟು ಭಾಗದ ಜನರು ಚೀನಾದ ಸಂತತಿಯ ಮಲೇಷಿಯನ್ನರಾಗಿದ್ದಾರೆ. ಭಾರತೀಯ ಸಂತತಿಯ ಮಲೇಷಿಯನ್ನರು ಜನಸಂಖ್ಯೆಯ ಸುಮಾರು 8%ನಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಉಳಿದಿರುವ 10%ನಷ್ಟು ಭಾಗವು ಒಳಗೊಂಡಿರುವ ಜನಾಂಗಗಳೆಂದರೆ:

  • ಸ್ಥಳೀಕ ಪೂರ್ವ ಮಲೇಷಿಯನ್‌‌ ಜನಾಂಗಗಳಾದ ಬಜಾವು, ಬಿದಾಯುಹ್‌, ದುಸುನ್‌, ಇಬಾನ್‌, ಕಡಜಾನ್‌, ಮೆಲನೌ, ಒರಾಂಗ್‌ ಉಲು, ಸರವಾಕಿಯನ್‌ ಮಲಯ ಜನಾಂಗದವರು, ಇತ್ಯಾದಿ.
  • ಒರಾಂಗ್‌ ಅಸ್ಲಿ ಮತ್ತು ಸಿಯಾಮೀಸ್‌ ಜನರಂಥ ಮಲೇಷಿಯಾ ಪರ್ಯಾಯ ದ್ವೀಪದ ಇತರ ಸ್ಥಳೀಕ ಬುಡಕಟ್ಟುಗಳು, ಹಾಗೂ
  • ಚೆಟ್ಟಿಯಾರ್‌‌‌‌‌ಗಳು, ಪೆರಾನಕಾನ್‌ ಜನರು ಮತ್ತು ಪೋರ್ಚುಗೀಸರಂಥ ಮಲೇಷಿಯಾ ಪರ್ಯಾಯ ದ್ವೀಪದ ಸ್ಥಳೀಕವಲ್ಲದ ಬುಡಕಟ್ಟುಗಳು.

ಮಲೇಷಿಯಾದ ಹೊಸ ಆರ್ಥಿಕ ಕಾರ್ಯನೀತಿ ಅಥವಾ NEPಯು ಸಮರ್ಥಿಸುವ ಕ್ರಮದ ಒಂದು ಸ್ವರೂಪವಾಗಿ ಕಾರ್ಯನಿರ್ವಹಿಸುತ್ತದೆ (ನೋಡಿ: ಬೂಮಿಪುತೆರಾ).[೪೯] ಶಿಕ್ಷಣದಿಂದ ಮೊದಲ್ಗೊಂಡು ಆರ್ಥಿಕ ಕ್ಷೇತ್ರದವರೆಗಿನ, ಅಲ್ಲಿಂದ ಸಾಮಾಜಿಕ ಏಕೀಕರಣದವರೆಗಿನ, ಜೀವನದ ಹಲವಾರು ಮಗ್ಗುಲುಗಳಲ್ಲಿ ಕಂಡುಬರುವ ರಾಚನಿಕ ಬದಲಾವಣೆಗಳನ್ನು ಇದು ಉತ್ತೇಜಿಸುತ್ತದೆ. 1969ರ ಮೇ 13ರಂದು ನಡೆದ ಜನಾಂಗದ ಹಿಂಸಾಕಾಂಡಗಳ ನಂತರದಲ್ಲಿ ಅಸ್ತಿತ್ವಕ್ಕೆ ಬಂದ ಇದು, ಆರ್ಥಿಕ ವಲಯದಲ್ಲಿನ ಗಮನಾರ್ಹ ಅಸಮತೋಲನವನ್ನು ಪರಿಹರಿಸಲು ಬಯಸಿತು; ದೇಶದ ಆರ್ಥಿಕ ವಲಯದಲ್ಲಿನ ವಾಣಿಜ್ಯ ಚಟುವಟಿಕೆಯ ಮೇಲೆ ಚೀನಿಯರ ಅಲ್ಪಸಂಖ್ಯಾತ ಜನಸಂಖ್ಯೆಯು ಗಣನೀಯ ಹತೋಟಿಯನ್ನು ಹೊಂದಿದ್ದುದು ಅಂದಿನ ಸನ್ನಿವೇಶವಾಗಿತ್ತು.

ಮಲಯ ಪರ್ಯಾಯದ್ವೀಪವು ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದಗಳ ಒಂದು ಸುದೀರ್ಘ ಇತಿಹಾಸವನ್ನು ಹೊಂದಿದ್ದು, ಇದು ಅಲ್ಲಿನ ಜನಾಂಗೀಯ ಮತ್ತು ಧಾರ್ಮಿಕ ಸಂಯೋಜನೆಯ ಮೇಲೆ ಮಹತ್ವದ ಪ್ರಭಾವವನ್ನು ಹೊಂದಿದೆ. 18ನೇ ಶತಮಾನಕ್ಕೆ ಮುಂಚಿತವಾಗಿ ಪ್ರಧಾನವಾಗಿ ಮಲಯ ಜನಾಂಗದವರಿಂದ ತುಂಬಿಕೊಂಡಿದ್ದ ಜನಾಂಗೀಯ ಸಂಯೋಜನೆಯು, ಬ್ರಿಟಿಷರು ಹೊಸ ಉದ್ಯಮಗಳನ್ನು ಪರಿಚಯಿಸಿ ಚೀನೀ ಮತ್ತು ಭಾರತೀಯ ಕಾರ್ಮಿಕರನ್ನು ಅಲ್ಲಿಗೆ ಆಮದುಮಾಡಿಕೊಂಡಾಗ, ನಾಟಕೀಯವಾಗಿ ಬದಲಾಯಿತು. ಆಗಿನ ಬ್ರಿಟಿಷ್‌ ಮಲಯದಲ್ಲಿದ್ದ ಪೆನಾಂಗ್‌, ಮಲಾಕ್ಕಾ ಮತ್ತು ಸಿಂಗಪೂರ್‌‌‌ನಂಥ ಹಲವಾರು ಪ್ರದೇಶಗಳು ಚೀನಿಯರ ಪ್ರಾಬಲ್ಯಕ್ಕೆ ಸಾಕ್ಷಿಯಾದವು. ಮಲಯ ಜನಾಂಗದವರ ಜನಸಂಖ್ಯಾ ಸ್ವರೂಪ ಮತ್ತು ಸಾಂಸ್ಕೃತಿಕ ಸ್ಥಾನದ ಮೇಲೆ ವಲಸೆಯು ಪರಿಣಾಮವು ಉಂಟಾಯಿತು ಎಂಬ ವಾಸ್ತವಾಂಶದ ಹೊರತಾಗಿಯೂ, ಮೂರು ಜನಾಂಗೀಯತೆಗಳ (ಮತ್ತು ಇತರ ಸಣ್ಣ ಸಮೂಹಗಳ) ನಡುವಿನ ಸಹಜೀವನವು ಬಹುಮಟ್ಟಿಗೆ ಶಾಂತಿಯುತವಾಗಿತ್ತು.

ಮಲಯದ ಒಕ್ಕೂಟದ ಸ್ವಾತಂತ್ರ್ಯಕ್ಕೆ ಪೂರ್ವಭಾವಿಯಾಗಿ, ಹೊಸ ಸಮಾಜವೊಂದರ ಆಧಾರವಾಗಿ ಒಂದು ಸಾಮಾಜಿಕ ಒಡಂಬಡಿಕೆಯನ್ನು ನೆರವೇರಿಸಲಾಯಿತು. 1957ರ ಮಲಯಾದ ಸಂವಿಧಾನ ಮತ್ತು 1963ರ ಮಲೇಷಿಯಾದ ಸಂವಿಧಾನಗಳಲ್ಲಿ ಪ್ರತಿಬಿಂಬಿಸಲ್ಪಟ್ಟಿರುವಂತೆ ಸದರಿ ಒಡಂಬಡಿಕೆಯು, ವಲಸೆಗಾರ ಸಮೂಹಗಳಿಗೆ ಪೌರತ್ವವನ್ನು ನೀಡಲಾಗುತ್ತದೆ, ಮತ್ತು ಮಲಯ ಜನಾಂಗದವರ ವಿಶೇಷ ಹಕ್ಕುಗಳಿಗೆ ಖಾತರಿ ನೀಡಲಾಗುತ್ತದೆ ಎಂದು ತಿಳಿಸಿದೆ. ಇದನ್ನು ಬೂಮಿಪುತ್ರ ಕಾರ್ಯನೀತಿ ಎಂಬುದಾಗಿ ಅನೇಕವೇಳೆ ಉಲ್ಲೇಖಿಸಲಾಗುತ್ತದೆ.

ಮಲಯದ ಹಕ್ಕುಗಳ ಗ್ರಹಿಸಲ್ಪಟ್ಟ ಬುಡಮೇಲು ಮಾಡುವಿಕೆಯನ್ನು ವಿರೋಧಿಸುವ ವರ್ಣಭೇದ ನೀತಿವಾದಿ ಮಲಯ ಪಕ್ಷಗಳಿಂದ ಬಂದ ಒತ್ತಡದ ಅಡಿಯಲ್ಲಿ, ಬಹುತ್ವ ಸಿದ್ಧಾಂತದ ಈ ಕಾರ್ಯನೀತಿಗಳು ಹೊರಹೊಮ್ಮಿವೆ. ಮಲೇಷಿಯಾದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಸ್ಥಾನಮಾನ ವಿವಾದಕ್ಕೂ ಹಾಗೂ ಈ ಸಮಸ್ಯೆಗೂ ಕೆಲವೊಮ್ಮೆ ಸಂಬಂಧ ಕಲ್ಪಿಸಲಾಗುತ್ತದೆ.

ಮಾರಿಷಸ್

[ಬದಲಾಯಿಸಿ]

ಬಹುಸಾಂಸ್ಕೃತಿಕತೆಯು ಮಾರಿಷಸ್‌‌ ದ್ವೀಪದ ಒಂದು ವಿಶಿಷ್ಟ ಲಕ್ಷಣವಾಗಿದೆ. ಮಾರಿಷಿಯನ್ನರ ಸಮಾಜವು ಅನೇಕ ವಿಭಿನ್ನ ಜನಾಂಗೀಯ ಮತ್ತು ಧಾರ್ಮಿಕ ಸಮೂಹಗಳಿಗೆ ಸೇರಿದ ಜನರನ್ನು ಒಳಗೊಳ್ಳುತ್ತದೆ. ಅವರೆಂದರೆ: ಹಿಂದೂ, ಮುಸ್ಲಿಂ ಮತ್ತು ಸಿಖ್‌ ಇಂಡೊ-ಮಾರಿಷಿಯನ್‌‌ ಜನರು, ಮಾರಿಷಿಯನ್ನರ ಮಿಶ್ರಸಂತತಿಯವರು (ಅಂದರೆ ಆಫ್ರಿಕನ್ನರು ಮತ್ತು ಮ್ಯಾಲಗಾಸಿ ಪೀಳಿಗೆಗೆ ಸೇರಿದವರು), ಬೌದ್ಧ ಮತ್ತು ರೋಮನ್‌ ಕ್ಯಾಥಲಿಕ್‌ ಸೈನೊ-ಮಾರಿಷಿಯನ್‌ ಜನರು ಮತ್ತು ಫ್ರಾಂಕೊ-ಮಾರಿಷಿಯನ್‌‌‌ ಜನರು (ಮೂಲ ಫ್ರೆಂಚ್‌ ವಸಾಹತುವಾದಿಗಳ ಪೀಳಿಗೆಯವರು).[೫೦]

ಫಿಲಿಪ್ಪೈನ್ಸ್

[ಬದಲಾಯಿಸಿ]

ಫಿಲಿಪ್ಪೈನ್ಸ್‌ ದೇಶವು ಪ್ರಪಂಚದಲ್ಲಿನ 8ನೇ ಅತ್ಯಂತ ಬಹುಜನಾಂಗೀಯ ರಾಷ್ಟ್ರವೆನಿಸಿಕೊಂಡಿದೆ.[೫೧] ಇದು ಪ್ರಮುಖವಾಗಿರುವ 10 ವಿಶಿಷ್ಟ ಸ್ಥಳೀಕ ಜನಾಂಗೀಯ ಸಮೂಹಗಳನ್ನು ಹೊಂದಿದೆ. ಅವುಗಳೆಂದರೆ: ಬಿಕೊಲ್ಯಾನೊ, ಇಬನಾಗ್‌, ಇಲೊಕ್ಯಾನೊ, ಇವತಾನ್‌, ಕಪಂಪಂಗಾನ್‌‌, ಮೋರೋ, ಪಾಂಗಸಿನೆನ್ಸ್‌, ಸಂಬಾಲ್‌, ಟ್ಯಾಗಲಾಗ್‌‌ ಮತ್ತು ವಿಸಯಾನ್‌. ಬಡ್‌ಜಾವೊ, ಇಗೊರಾಟ್‌, ಲುಮಾಡ್‌, ಮಾಂಗ್ಯಾನ್‌ ಮತ್ತು ನೆಗ್ರಿಟೋಸ್‌ ಇವೇ ಮೊದಲಾದ ಹಲವಾರು ಮೂಲನಿವಾಸಿ ಜನಾಂಗಗಳನ್ನೂ ಸಹ ಫಿಲಿಪ್ಪೈನ್ಸ್‌ ಹೊಂದಿದೆ. ಅಮೆರಿಕನ್ನರ, ಅರೇಬಿಕ್‌‌‌ ಜನರ, ಚೀನಿಯರ, ಭಾರತೀಯರ ಮತ್ತು ಹಿಸ್ಪ್ಯಾನಿಕ್‌‌ ಪೀಳಿಗೆಗಳ ಮತ್ತು ಇನ್ನೂ ಅನೇಕ ಜನಾಂಗಗಳ ಪರಿಗಣನಾರ್ಹ ಸಮುದಾಯಗಳನ್ನೂ ಸಹ ಈ ದೇಶವು ಹೊಂದಿದೆ. ರಾಷ್ಟ್ರದ ಜನಾಂಗೀಯ ವೈವಿಧ್ಯತೆಯನ್ನು ಬೆಂಬಲಿಸುವ ಮತ್ತು ಜೋಪಾನ ಮಾಡುವ ಹಲವಾರು ಕಾರ್ಯಕ್ರಮಗಳನ್ನು ಫಿಲಿಪ್ಪೈನ್‌ ಸರ್ಕಾರವು ಹೊಂದಿದೆ.[೫೨]

ಸಿಂಗಪೂರ್‌‌

[ಬದಲಾಯಿಸಿ]

ಸಿಂಗಪೂರ್‌‌ ದೇಶವು ಇತರ ಮೂರು ಭಾಷೆಗಳನ್ನು ತನ್ನ ಅಧಿಕೃತ ಭಾಷೆಗಳಾಗಿ ಗುರುತಿಸುತ್ತದೆ. ಅವುಗಳೆಂದರೆ: ಮ್ಯಾಂಡರಿನ್‌‌ ಚೀನೀ, ತಮಿಳು ಮತ್ತು ಮಲಯ; ಮಲಯ ಭಾಷೆಯು ರಾಷ್ಟ್ರೀಯ ಭಾಷೆಯಾಗಿ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಸಿಂಗಪೂರ್‌‌ ಒಂದು ಬಹುಭಾಷೀಯ ದೇಶವಾಗಿರುವುದರ ಜೊತೆಗೇ, ಈ ಮೂರು ಜನಾಂಗೀಯ ಸಮುದಾಯಗಳಿಂದ ಆಚರಿಸಲ್ಪಡುವ ಉತ್ಸವಗಳಿಗೂ ಸಹ ತನ್ನ ಅಂಗೀಕಾರದ ಮುದ್ರೆಯನ್ನೊತ್ತಿದೆ.

ನಿರ್ದಿಷ್ಟ ಜನಾಂಗೀಯ ಸಮೂಹಗಳ ಒಂದು ಬೃಹತ್‌ ಜನಸಂಖ್ಯೆಯನ್ನು ಒಳಗೊಂಡಿರುವ ಪರಾವೃತಭಾಗಗಳಾಗಿರುವ ಪ್ರದೇಶಗಳು, ಸಿಂಗಪೂರ್‌‌ನಲ್ಲಿನ ಚೈನಾಟೌನ್‌, ಗೇಲ್ಯಾಂಗ್‌ ಮತ್ತು ಲಿಟ್ಲ್‌ ಇಂಡಿಯಾದಂಥ ಪ್ರದೇಶಗಳಲ್ಲಿ ಅಸ್ತಿತ್ವವನ್ನು ಕಂಡುಕೊಂಡಿವೆ.

ದಕ್ಷಿಣ ಕೊರಿಯಾ

[ಬದಲಾಯಿಸಿ]

ಜನಾಂಗಶಾಸ್ತ್ರೀಯವಾದ ರೀತಿಯಲ್ಲಿನ ಪ್ರಪಂಚದ ಅತ್ಯಂತ ಏಕರೂಪದ ರಾಷ್ಟ್ರಗಳ ಪೈಕಿ ದಕ್ಷಿಣ ಕೊರಿಯಾವೂ ಸೇರಿಕೊಂಡಿದೆ.[೫೩] ಇಂಥ ಲಕ್ಷಣಗಳನ್ನು ಹಂಚಿಕೊಳ್ಳದವರು ಕೊರಿಯಾದ ಸಮಾಜದಿಂದ ಅನೇಕವೇಳೆ ತಿರಸ್ಕರಿಸಲ್ಪಟ್ಟಿದ್ದಾರೆ, ಇಲ್ಲವೇ ಭೇದಭಾವವನ್ನು ಎದುರಿಸುತ್ತಾರೆ.[೫೪]

ಇವನ್ನೂ ನೋಡಿ

[ಬದಲಾಯಿಸಿ]
  • ಬಹುಸಾಂಸ್ಕೃತಿಕತೆಯ ಟೀಕೆ
  • ACE ಫೌಂಡೇಷನ್‌‌
  • ಬಿಫೋರ್‌ ಕೊಲಂಬಸ್‌ ಫೌಂಡೇಷನ್‌‌
  • ವಿಶ್ವರಾಷ್ಟ್ರೀಯತೆ
  • ಮಿಶ್ರ-ಸಾಂಸ್ಕೃತಿಕತೆ
  • ಸಾಂಸ್ಕೃತಿಕ ಸಾಮರ್ಥ್ಯ
  • ಯುರೋಪ್‌ನಲ್ಲಿರುವ ಮಾಧ್ಯಮಗಳಲ್ಲಿನ ಸಾಂಸ್ಕೃತಿಕ ವೈವಿಧ್ಯತೆ
  • ಸಾಂಸ್ಕೃತಿಕ ವೈವಿಧ್ಯ
  • ಸಾಂಸ್ಕೃತಿಕ ಬಹುಸಾಂಸ್ಕೃತಿಕತೆ
  • ಜನಾಂಗೀಯ ಹುಟ್ಟು
  • ಜನಾಂಗೀಯ ಮಧ್ಯಮಾರ್ಗ
  • ಐರೋಪ್ಯತೆ
  • ಗ್ಲೋಬಲ್‌ ಸೆಂಟರ್‌ ಫಾರ್‌ ಪ್ಲೂರಲಿಸಂ (ಕೆನಡಾ)
  • ಜಾಗತಿಕ ನ್ಯಾಯ
  • ಅಂತರ್‌ಸಂಸ್ಕೃತಿಯ ಸಾಮರ್ಥ್ಯ
  • ಅಂತರ-ಸಾಂಸ್ಕೃತಿಕತೆ
  • ವರ್ಣಸಂಕರ
  • ಮಲ್ಟಿಕಲ್ಚರಲಿಸಂ ವಿಥೌಟ್‌ ಕಲ್ಚರ್ (ಪುಸ್ತಕ)
  • ಮಲ್ಟಿಕಲ್ಟಿ
  • ಬಹುರಾಷ್ಟ್ರೀಯ ಸಂಸ್ಥಾನ
  • ರಾಷ್ಟ್ರ-ನಿರ್ಮಾಣ
  • ರಾಷ್ಟ್ರೀಯತೆ
  • ಬಹುತ್ವ ಸಮಾಜ
  • ರಾಜಕೀಯ ಯಥಾರ್ಥತೆ
  • ಬಹುಜನಾಂಗೀಯತೆ
  • ಸುಸಂಘಟಿತ ಸಂಸ್ಥೆಯಾಗಿರುವ ಸೈ ಸಿಗ್ಮ ಫೈ ಬಹುಸಾಂಸ್ಕೃತಿಕ ಕೂಟ
  • ಜನಾಂಗದ ಏಕೀಕರಣ
  • ಸಾಮಾಜಿಕತೆ
  • ಸೊಸೈಟಿ ಫಾರ್‌ ದಿ ಸ್ಟಡಿ ಆಫ್‌ ಮಲ್ಟಿ-ಎತ್ನಿಕ್‌ ಲಿಟರೇಚರ್‌ ಆಫ್‌ ದಿ ಯುನೈಟೆಡ್‌ ಸ್ಟೇಟ್ಸ್‌ (MELUS)
  • ಸಾಮಾಜಿಕ ನ್ಯಾಯಕ್ಕಾಗಿ ಬೋಧನೆ
  • ಮಿಶ್ರಸಾಂಸ್ಕೃತೀಕರಣ
  • Unrooted Childhoods: Memoirs of Growing up Global (ಪುಸ್ತಕ)
  • ಶ್ವೇತತ್ವದ ಅಧ್ಯಯನಗಳು
  • ಪರಕೀಯ-ಮಧ್ಯಮಾರ್ಗ

ಉಲ್ಲೇಖಗಳು

[ಬದಲಾಯಿಸಿ]
  1. Dictionary.Reference.com
  2. Guardian.co.uk
  3. ‌ಹೇವುಡ್, ಪೊಲಿಟಿಕಲ್‌ ಐಡಿಯಾಲಜೀಸ್‌, 4ನೇ ಆವೃತ್ತಿ, ಪಾಲ್‌ಗ್ರೇವ್‌ ಮ್ಯಾಕ್‌ಮಿಲನ್‌‌ 2007: 313
  4. ದಿ ಪ್ರಾಬ್ಲಂ ಆಫ್‌ ನಾರ್ಮೇಟಿವ್‌ ಮಲ್ಟಿಕಲ್ಚರಾಲಿಸಂ
  5. "ಸ್ಪೈಕ್ಡ್‌-ಕಲ್ಚರ್‌ | ಆರ್ಟಿಕಲ್‌ | ಬ್ಯಾಕ್‌ಲ್ಯಾಶ್‌ ಎಗೇನ್ಸ್ಟ್‌ ಮಲ್ಟಿಕಲ್ಚರಾಲಿಸಂ?". Archived from the original on 2004-05-10. Retrieved 2010-10-29.
  6. "ಸ್ಪೈಕ್ಡ್‌-ಪಾಲಿಟಿಕ್ಸ್‌ | ಆರ್ಟಿಕಲ್‌ | ದಿ ಟ್ರಬಲ್‌ ವಿತ್‌ ಮಲ್ಟಿಕಲ್ಚರಾಲಿಸಂ". Archived from the original on 2002-01-02. Retrieved 2010-10-29.
  7. ರಿಪೋರ್ಟ್‌ ಅಟ್ಯಾಕ್ಸ್‌ ಮಲ್ಟಿಕಲ್ಚರಾಲಿಸಂ
  8. ‌‌ಓಕಿನ್, "ಈಸ್‌ ಮಲ್ಟಿಕಲ್ಚರಾಲಿಸಂ ಬ್ಯಾಡ್‌ ಫಾರ್‌ ವುಮೆನ್‌?" Archived 2008-09-28 ವೇಬ್ಯಾಕ್ ಮೆಷಿನ್ ನಲ್ಲಿ., ಬಾಸ್ಟನ್‌ ರಿವ್ಯೂ 1999.
  9. ೯.೦ ೯.೧ ಪಟ್ನಾಮ್‌‌, ರಾಬರ್ಟ್‌ D., "E ಪ್ಲೂರಿಬಸ್‌ ಯೂನಮ್‌‌: ಡೈವರ್ಸಿಟಿ ಅಂಡ್‌ ಕಮ್ಯುನಿಟಿ ಇನ್‌ ದಿ ಟ್ವೆಂಟಿ-ಫಸ್ಟ್‌ ಸೆಂಚುರಿ -- ದಿ 2006 ಜೋಹನ್‌ ಸ್ಕೈಟ್‌ ಪ್ರೈಜ್‌‌," ಸ್ಕ್ಯಾಂಡಿನೇವಿಯನ್‌ ಪೊಲಿಟಿಕಲ್‌ ಸ್ಟಡೀಸ್‌ 30 (2), ಜೂನ್‌‌ 2007.
  10. ಸೈಲರ್‌‌, ಸ್ಟೀವ್‌‌, "ಫ್ರಾಗ್ಮೆಂಟೆಡ್‌ ಫ್ಯೂಚರ್‌‌," Archived 2011-06-04 ವೇಬ್ಯಾಕ್ ಮೆಷಿನ್ ನಲ್ಲಿ. ಅಮೆರಿಕನ್‌ ಕನ್ಸರ್ವೆಟಿವ್‌‌ , ಜನವರಿ 15, 2007.
  11. ಸಾಲ್ಟರ್‌‌, ಫ್ರಾಂಕ್‌‌, ಆನ್‌ ಜೆನೆಟಿಕ್‌ ಇಂಟರೆಸ್ಟ್ಸ್‌ , ಪುಟ 146.
  12. ಪಾಲಿಸಿ ಪೇಪರ್‌ ನಂ. 4 - ಮಲ್ಟಿಕಲ್ಚರಾಲಿಸಂ: ನ್ಯೂ ಪಾಲಿಸಿ ರೆಸ್ಪಾನ್ಸಸ್‌ ಟು ಡೈವರ್ಸಿಟಿ
  13. "ಮಲ್ಟಿಕಲ್ಚರಾಲಿಸಂ ಇನ್‌ ಕೆನಡಾ". Archived from the original on 2011-06-10. Retrieved 2010-10-29.
  14. "ಇಮಿಗ್ರೇಷನ್‌ ಅಂಡ್‌ ಮಲ್ಟಿಕಲ್ಚರಾಲಿಸಂ". Archived from the original on 2011-02-19. Retrieved 2010-10-29.
  15. "ಮಲ್ಟಿಕಲ್ಚರಾಲಿಸಂ ಅಂಡ್‌ ದಿ ಡೈನಮಿಕ್ಸ್‌ ಆಫ್‌ ಮಾಡರ್ನ್‌ ಸಿವಿಲಿಸೇಷನ್ಸ್‌" (PDF). Archived from the original (PDF) on 2010-06-02. Retrieved 2010-10-29.
  16. ದಿ ಇಕನಾಮಿಸ್ಟ್‌‌: ದಿ ಚೇಂಜಿಂಗ್‌ ಆಫ್‌ ದಿ ಗಾರ್ಡ್‌ , 3ನೇ ಏಪ್ರಿಲ್‌‌ 2003.
  17. "Section 1: Census metropolitan areas". Annual Demographic Estimates. Statistics Canada. 1 July 2009. Retrieved 2010-04-04. As in prior years, the Toronto CMA was the first destination for international immigrants, 92,652 of whom moved to the Canadian metropolis. It was followed by the Montréal (38,898) and Vancouver (33,021) CMAs.
  18. ಇನ್‌ಫ್ಲೋ ಆಫ್‌ ಫಾರಿನ್‌-ಬಾರ್ನ್‌ ಪಾಪ್ಯುಲೇಷನ್‌ ಬೈ ಕಂಟ್ರಿ ಆಫ್‌ ಬರ್ತ್‌, ಬೈ ಇಯರ್‌‌
  19. Fontaine, Phil (April 24, 1998). "Modern Racism in Canada by Phil Fontaine" (PDF). Queen's University. Archived from the original (PDF) on 2008-06-26.
  20. ಈಸ್‌ ದಿ ಕರೆಂಟ್‌ ಮಾಡೆಲ್‌ ಆಫ್‌ ಇಮಿಗ್ರೇಷನ್‌ ದಿ ಬೆಸ್ಟ್‌ ಒನ್‌ ಫಾರ್‌‌ ಕೆನಡಾ? Archived 2008-12-26 ವೇಬ್ಯಾಕ್ ಮೆಷಿನ್ ನಲ್ಲಿ., ಗ್ಲೋಬ್‌ ಅಂಡ್‌ ಮೇಲ್‌, 12 ಡಿಸೆಂಬರ್‌‌ 2005, URLನ್ನು 2006ರ ಆಗಸ್ಟ್‌ 16ರಂದು ಸಂಪರ್ಕಿಸಲಾಯಿತು
  21. ಅರ್ಜೆಂಟೈನಾ
  22. "CIA - ದಿ ವರ್ಲ್ಡ್‌ ಫ್ಯಾಕ್ಟ್‌ಬುಕ್‌ - ಅರ್ಜೆಂಟೈನಾ". Archived from the original on 2009-05-13. Retrieved 2010-10-29.
  23. ಅರ್ಜೆಂಟೈನ್‌ ಕಲ್ಚರ್‌ ರಿಚ್‌ ಅಂಡ್‌ ಡೈವರ್ಸ್‌
  24. *ಬ್ಯೂನೋಸ್‌ ಐರ್ಸ್‌ ಹೆರಾಲ್ಡ್‌, ಅರ್ಜೆಂಟೈನ್‌-ಇಂಗ್ಲಿಷ್‌ ಭಾಷೆಯ ವೃತ್ತಪತ್ರಿಕೆ
  25. ೨೫.೦ ೨೫.೧ ೨೫.೨ IMMI.gov.au
  26. Nationmaster.com
  27. ಹಸಿಯಾ ಡೈನರ್‌‌, "ಇಮಿಗ್ರೇಷನ್‌ ಅಂಡ್‌ U.S. ಹಿಸ್ಟರಿ", ಇ-ಜರ್ನಲ್‌‌ USA , ಫೆಬ್ರುವರಿ 2008 Archived 2008-11-12 ವೇಬ್ಯಾಕ್ ಮೆಷಿನ್ ನಲ್ಲಿ.
  28. ‌ಝಾಂಗ್ವಿಲ್, ಇಸ್ರೇಲ್‌. ದಿ ಮೆಲ್ಟಿಂಗ್‌ ಪಾಟ್‌, 1908.
  29. ಜಾನ್‌‌ ಜೇ, ಫಸ್ಟ್‌ ಅಮೆರಿಕನ್‌ ಸುಪ್ರೀಂ ಕೋರ್ಟ್‌ ಚೀಫ್‌ ಜಸ್ಟೀಸ್‌ , ಫೆಡರಲಿಸ್ಟ್‌ ಪೇಪರ್‌ ನಂ. 2'
  30. Boening, Astrid B. (May 2007). "Euro-Islam – A Constructivist Idea or a Concept of the English School?" (pdf). European Union Miami Analysis (EUMA). Vol. 4, no. 12. Miami-Florida European Union Center of Excellence. pp. 3–10. Retrieved 30 September 2009. {{cite news}}: Cite has empty unknown parameter: |coauthors= (help)
  31. Timesonline.co.uk
  32. Guardian.co.uk
  33. BBC ಥೌಸಂಡ್ಸ್‌ ಇನ್‌ UK ಸಿಟಜನ್‌ಷಿಪ್‌ ಕ್ಯೂ
  34. ೩೪.೦ ೩೪.೧ ಬಿಸ್ಸೂನ್‌ದಾತ್‌, ನೀಲ್‌‌. 2002. ಸೆಲ್ಲಿಂಗ್‌ ಇಲ್ಯೂಷನ್ಸ್‌: ದಿ ಮಿಥ್‌ ಆಫ್‌ ಮಲ್ಟಿಕಲ್ಚರಾಲಿಸಂ . ಟೊರೊಂಟೊ: ಪೆಂಗ್ವಿನ್‌‌. ISBN 978-0-14-100676-5.
  35. ಫ್ಯಾಕ್ಟ್‌ ಆರ್‌ ಫಿಕ್ಷನ್‌ ಇನ್‌ ದಿ ಗ್ರೇಟ್‌ UK ಇಮಿಗ್ರೇಷನ್‌ ಡಿಬೇಟ್‌. workpermit.com. ನ್ಯೂಸ್‌ ಏಪ್ರಿಲ್‌‌ 26, 2005. 2007ರ ಅಕ್ಟೋಬರ್‌ 21ರಂದು ಮರುಸಂಪಾದಿಸಲಾಯಿತು.
  36. "ಪೋಲೆಂಡ್‌ ಅಂಡ್‌ ಉಕ್ರೇನ್‌‌ ರಿಸಾಲ್ವ್‌ ಮ್ಯಾಸಕರ್‌ ರೋ". ಬಿಬಿಸಿ ನ್ಯೂಸ್.ಜುಲೈ 11, 2003.
  37. ಅಧಿಕೃತ ವೆಬ್‌ಸೈಟ್
  38. BBC ರಿಪೋರ್ಟ್‌ ಅಟ್‌ News.BBC.co.uk, ಫುಲ್‌ ಲಿಸ್ಟ್‌ ಆಫ್‌ ಕ್ವೆಶ್ಚನ್ಸ್‌ ಇನ್‌ ಜರ್ಮನ್‌ ಅಟ್‌ TAZ.de
  39. ನೆದರ್ಲೆಂಡ್ಸ್‌ ಮೂವ್ಸ್‌ ಟುವರ್ಡ್‌ ಟೋಟಲ್‌ ಬ್ಯಾನ್‌ ಆನ್‌ ಮುಸ್ಲಿಂ ವೇಲ್ಸ್‌ , ಗಾರ್ಡಿಯನ್‌‌, ನವೆಂಬರ್‌‌ 11, 2006.
  40. "Merkel says German multicultural society has failed". BBC. Retrieved 2010-10-16.
  41. "Germans argue over integration". BBC. Retrieved 2010-10-18.
  42. Mohammada, Malika. The foundations of the composite culture in India. Aakar Books, 2007. ISSN 9788189833183 8189833189, 9788189833183. {{cite book}}: Check |issn= value (help)
  43. ಭಾರತೀಯ ಜನಗಣತಿ
  44. ಎತ್ನೊಲಾಗ್‌ ರಿಪೋರ್ಟ್‌ ಫಾರ್‌ ಇಂಡೋನೇಷ್ಯಾ
  45. ರಿಲಿಜಿಯಸ್‌ ವಯಲೆನ್ಸ್‌ ಎರಪ್ಟ್ಸ್‌ ಇನ್‌ ಮೊಲಕ್ಕಾಸ್‌, BBC ನ್ಯೂಸ್‌
  46. "Abe fine with 'homogeneous' remark". Kyodo News. 2007-02-27. Archived from the original on 2012-07-15. Retrieved 2009-08-10.
  47. "ಎಎಸ್‌ಒ ಸೇಸ್‌ ಜಪಾನ್‌ ಈಸ್‌ ನೇಷನ್‌ ಆಫ್‌ 'ಒನ್‌ ರೇಸ್‌'". ದಿ ಜಪಾನ್‌ ಟೈಮ್ಸ್‌‌. 2005ರ ಅಕ್ಟೋಬರ್‌ 18
  48. "ಜಪಾನ್‌ನಲ್ಲಿರುವ ಅಂತರರಾಷ್ಟ್ರೀಯ ಸಂಘಗಳು". Archived from the original on 2012-02-26. Retrieved 2010-10-29.
  49. ಮಲೇಷಿಯಾ ಫ್ಯೂರಿ ಅಟ್‌ EU ಎನ್ವಾಯ್‌ ರಿಮಾರ್ಕ್ಸ್‌, BBC ನ್ಯೂಸ್‌
  50. ಸಮ್‌ ಫ್ಯಾಕ್ಟ್ಸ್‌ ಎಬೌಟ್ ಮಾರಿಷಸ್‌‌ Archived 2010-08-21 ವೇಬ್ಯಾಕ್ ಮೆಷಿನ್ ನಲ್ಲಿ.
  51. ದಿ ಫಿಲಿಪ್ಪೈನ್ಸ್‌ ರ್ಯಾಂಕ್ಸ್‌ 8ತ್‌ ಅಮಾಂಗ್‌ 240 ಕಂಟ್ರೀಸ್‌ ಇನ್‌ ಟರ್ಮ್ಸ್‌ ಆಫ್‌ ಎತ್ನಿಕ್‌ ಡೈವರ್ಸಿಟಿ. YEOH ಕೊಕ್‌ ಖೆಂಗ್‌, ಟುವರ್ಡ್ಸ್‌ ಆನ್‌ ಇಂಡೆಕ್ಸ್‌ ಆಫ್‌ ಎತ್ನಿಕ್‌ ಫ್ರಾಕ್ಷನಲೈಸೇಷನ್‌ Archived 2009-11-22 ವೇಬ್ಯಾಕ್ ಮೆಷಿನ್ ನಲ್ಲಿ. , ಕೋಷ್ಟಕ 1.
  52. ಸಂಸ್ಥಾನ.gov
  53. "ಕೊರಿಯಾ'ಸ್‌ ಎತ್ನಿಕ್‌ ನ್ಯಾಷನಲಿಸಂ ಈಸ್‌ ಎ ಸೋರ್ಸ್‌ ಆಫ್‌ ಬೋತ್‌ ಪ್ರೈಡ್‌ ಅಂಡ್‌ ಪ್ರಿಜುಡೀಸ್‌, ಅಕಾರ್ಡಿಂಗ್‌ ಟು ಗಿ-ವೂಕ್‌ ಷಿನ್‌‌". ದಿ ಕೊರಿಯಾ ಹೆರಾಲ್ಡ್‌. ಆಗಸ್ಟ್‌‌ 2, 2006.
  54. "ದಿ ಲೈಫ್‌ ಇನ್‌‌ಸ್ಟೆಬಿಲಿಟಿ ಆಫ್‌ ಇಂಟರ್‌ಮ್ಯಾರೀಡ್‌ ಜಪಾನೀಸ್‌ ವುಮೆನ್‌ ಇನ್‌ ಕೊರಿಯಾ Archived 1999-10-13 ವೇಬ್ಯಾಕ್ ಮೆಷಿನ್ ನಲ್ಲಿ.", ಯುಂಗ್‌-ರೈಯುಲ್‌ ಕಿಮ್‌ (ಕೊರಿಯಾ ವಿಶ್ವವಿದ್ಯಾಲಯ ಮತ್ತು ಯೂನಿವರ್ಸಿಟಿ ಆಫ್‌ ಸದರ್ನ್‌ ಕ್ಯಾಲಿಫೋರ್ನಿಯಾ, ದಿ ಸೆಂಟರ್‌ ಫಾರ್‌ ಮಲ್ಟಿಎತ್ನಿಕ್‌ ಅಂಡ್‌ ಟ್ರಾನ್ಸ್‌ನ್ಯಾಷನಲ್‌ ಸ್ಟಡೀಸ್‌)

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • Ankerl, Guy (2000) [2000]. Global communication without universal civilization (Coexisting contemporary civilizations: Arabo-Muslim, Bharati, Chinese, and Western). INU societal research. Vol. 1. Geneva: INU Press. ISBN 2-88155-004-5.
  • ಆಂಕೆರ್ಲ್‌, ಗೈ. ‌ಕೋಎಕ್ಸಿಸ್ಟಿಂಗ್‌ ಕಾಂಟೆಂಪರರಿ ಸಿವಿಸೇಷನ್ಸ್‌: ಅರಬೊ-ಮುಸ್ಲಿಮ್‌, ಭಾರತಿ, ಚೈನೀಸ್‌, ಅಂಡ್‌ ವೆಸ್ಟರ್ನ್ . INU ಪ್ರೆಸ್‌, ಜಿನಿವಾ 2000, ISBN 2-88155-004-5 .
  • ಬಿಡ್‌ಮೀಡ್‌, ಆಂಡ್ರ್ಯೂ 'ದಿ ಲಾಸ್ಟ್‌ ಆಫ್‌ ಇಂಗ್ಲಂಡ್‌' ಲೆಜೆಂಡ್‌ ಪ್ರೆಸ್‌ 2010 ISBN 9781907461330
  • ಎಲ್ಲಿಸ್‌, ಫ್ರಾಂಕ್‌‌ . ಮಲ್ಟಿಕಲ್ಚರಲಿಸಂ ಅಂಡ್‌ ಮಾರ್ಕ್ಸಿಸಂ ಅಮೆರಿಕನ್‌ ರೆನಸಾನ್ಸ್‌, ನವೆಂಬರ್‌‌ 1999
  • ಬಾರ್ಜಿಲಾಯಿ, ಗ್ಯಾಡ್‌. (2003). ಕಮ್ಯುನಿಟೀಸ್‌ ಅಂಡ್‌ ಲಾ: ಪಾಲಿಟಿಕ್ಸ್‌ ಅಂಡ್‌ ಕಲ್ಚರ್ಸ್‌ ಆಫ್‌ ಲೀಗಲ್‌ ಐಡೆಂಟಿಟೀಸ್‌. ಆ‍ಯ್‌ನ್ ಆರ್ಬರ್: ಯೂನಿವರ್ಸಿಟಿ ಆಫ್‌ ಮಿಚಿಗನ್‌ ಪ್ರೆಸ್‌, 2000
  • ಚಿಯು, C.-Y. & ಲುಯೆಂಗ್‌, A. (2007). ಡೂ ಮಲ್ಟಿಕಲ್ಚರಲ್‌ ಎಕ್ಸ್‌ಪೀರಿಯೆನ್ಸಸ್‌ ಮೇಕ್‌ ಪೀಪಲ್‌ ಮೋರ್‌ ಕ್ರಿಯೇಟಿವ್‌? Archived 2010-01-31 ವೇಬ್ಯಾಕ್ ಮೆಷಿನ್ ನಲ್ಲಿ. ಇನ್‌-ಮೈಂಡ್‌ ಮ್ಯಾಗಜೀನ್‌‌.
  • ಫಿಲಿಯನ್‌‌, R. (2009) ಮಲ್ಟಿಕಲ್ಚರಲ್‌ ಡೈನಮಿಕ್ಸ್‌ ಅಂಡ್‌ ದಿ ಎಂಡ್ಸ್‌ ಆಫ್‌ ಹಿಸ್ಟರಿ . ಒಟ್ಟಾವಾ: ಯೂನಿವರ್ಸಿಟಿ ಆಫ್‌ ಒಟ್ಟಾವಾ ಪ್ರೆಸ್‌, 2008.
  • ಗಾಟ್‌ಫ್ರೀಡ್‌, ಪಾಲ್‌ ಎಡ್ವರ್ಡ್‌. (2002) "ಮಲ್ಟಿಕಲ್ಚರಲಿಸಂ ಅಂಡ್‌ ದಿ ಪಾಲಿಟಿಕ್ಸ್‌ ಆಫ್‌ ಗಿಲ್ಟ್‌: ಟುವರ್ಡ್‌ ಎ ಸೆಕ್ಯುಲರ್‌ ಥಿಯರೆಸಿ," (ಮಿಸ್ಸೌರಿ ವಿಶ್ವವಿದ್ಯಾಲಯ).
  • ಗ್ರೇಸ್‌ ಹುಯಿ ಚಿನ್‌ ಲಿನ್‌‌ & ಪೆಟ್ರೀಷಿಯಾ J. ಲಾರ್ಕೆ (2007). ದಿ ಚಾಪ್ಟರ್‌ ಆಫ್‌ ಗ್ರೇಟ್‌ ಹಾರ್ಮೊನಿ ಇನ್‌ ಕನ್‌ಫ್ಯೂಷಿಯನಿಸಂ

<http://taiwanaggies.com/node/519 Archived 2008-08-25 ವೇಬ್ಯಾಕ್ ಮೆಷಿನ್ ನಲ್ಲಿ.>

  • ಗ್ರೇಸ್‌ ಹುಯಿ ಚಿನ್‌ ಲಿನ್‌‌ & ಪೆಟ್ರೀಷಿಯಾ J. ಲಾರ್ಕೆ (2007). ಮೈ ಫೀಲಿಂಗ್ಸ್‌ ಟುವರ್ಡ್‌ ಆಫ್ರೊಸೆಂಟ್ರಿಕ್‌ ಎಪಿಸ್ಟೆಮಾಲಜಿ

<http://taiwanaggies.com/node/517 Archived 2008-08-25 ವೇಬ್ಯಾಕ್ ಮೆಷಿನ್ ನಲ್ಲಿ.>

ಬಾಹ್ಯ ಕೊಂಡಿಗಳು

[ಬದಲಾಯಿಸಿ]