ಧನಾಶ್ರೀ

ವಿಕಿಪೀಡಿಯ ಇಂದ
Jump to navigation Jump to search

ಧನಾಶ್ರೀ ಒಂದು ಭಾರತೀಯ ಶಾಸ್ತ್ರೀಯ ಪದ್ಧತಿಯ ಸಂಗೀತದ  ರಾಗ.ಇದು ಸಂಪ್ರದಾಯದ ಗುರು ಗ್ರಂಥ ಸಾಹಿಬ್‍ನಲ್ಲಿ ಉಲ್ಲೇಖಿತವಾಗಿದೆ. ಗುರು ನಾನಕ್, ಗುರು ಅಮರದಾಸ,ಗುರು ರಾಮದಾಸ, ಗುರು ಅರ್ಜುನ್, ಗುರು ತೇಜ್ ಬಹಾದೂರ್ ಈ  ರಾಗದಲ್ಲಿ ೧೦೧ ಸ್ತುತಿಗಳ ರಚನೆಯನ್ನು ಮಾಡಿದ್ದಾರೆ.

ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ[ಬದಲಾಯಿಸಿ]

ರಾಗ ಧನಾಶ್ರೀ ರಾಗಮಾಲಾದಲ್ಲಿ ಮಾಲ್‍ಕೌನ್ಸ್ ರಾಗದ ರಾಗಿಣಿ ಎಂದು ಪರಿಗಣಿತವಾಗಿದೆ. ಇದು ಕಾಫಿ ಥಾಟ್‍ಗೆ ಸೇರಿದ ರಾಗ.  ಇದು ರಾಗ ಬೀಮ್‍ಪಲಾಸಿಗೆ ನಿಕಟವಾಗಿ ಹೋಲುತ್ತಿದ್ದರೂ ಇದರ ವಾದಿ ಮತ್ತು ಭಾವ ಭಿನ್ನವಾಗಿದೆ.ಇದು ಮುಸ್ಸಂಜೆಯ ವೇಳೆಯಲ್ಲಿ ಹಾಡಲ್ಪಡುವ  ರಾಗ. ಇದರ ಭಾವ ಸಂತೋಷ.

ಆರೋಹ ಮತ್ತು ಅವರೋಹ[ಬದಲಾಯಿಸಿ]

ಈ ರಾಗದ ಆರೋಹ ಮತ್ತು ಅವರೋಹಗಳು ಇಂತಿವೆ.

  • ಆರೋಹ: ಸ ಗ ಮ ಪ ನಿ ಸಾ
  • ಅವರೋಹ: ಸ ನಿ ಧ ಪ ಮ ಪ ಗ ರಿ ಸ
  • ವಾದಿ: ಪ
  • ಸಂವಾದಿ: ಸ

ಈ ರಾಗದಲ್ಲಿ ಪ ಸ್ವರಕ್ಕೆ ಹೆಚ್ಚಿನ ಒತ್ತು ಕೊಡುತ್ತಾರೆ. ಇದರಲ್ಲಿ ಹಲವಾರು ಮಾಧುರ್ಯಭರಿತ ಹಾಡುಗಳಿವೆ.

ಇದನ್ನೂ ನೋಡಿ[ಬದಲಾಯಿಸಿ]

  • Ragas in the Guru Granth Sahib
  • Kirtan

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಧನಾಶ್ರೀ&oldid=789060" ಇಂದ ಪಡೆಯಲ್ಪಟ್ಟಿದೆ