ದೇಸಿ ಸಸ್ಯ ಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಮಾರು ೨೦ ಲಕ್ಷ ವರ್ಷಗಳಿಂದ ಆಧುನಿಕ ಮಾನವ ಜೀವಿಸುತ್ತಿದ್ದಾನೆ. ಇವನು ಮೊದಲು ಜಾಡಮಾಲಿ ಎಂದು ಮಾನವ ವಿಜ್ಞಾನ ತೋರಿಸುತ್ತಿದೆ, ನಂತರ ಬೇಟೆಯಾಡುವುದನ್ನು ಶುರುಮಾಡಿ ಅದನ್ನು ಒಟ್ಟುಗೊಳಿಸಿ ತಾತ್ಪರ್ಯವಾಗಿ ತಿನ್ನುತ್ತ ಮತ್ತು ಕೇವಲ ೧೦,೦೦ ವರ್ಷಗಳ ಹಿಂದೆಯೇ ವ್ಯವಸಾಯವನ್ನು ಮಾಡಲು ಶುರುಮಾಡಿದ್ದಾನೆ. ವ್ಯವಸಾಯದ ಪ್ರಗತಿಯಿಂದ ಮಾನವನ ಜೀವನ ಇನ್ನಷ್ಟು ಸುಲಭವಾಗಿ ವಿಕಸಿತಗೊಂಡಿದೆ, ಅರ್ಥಾತ್ ಜನಸಾಮಾನ್ಯರಿಗೆ ಮತ್ತಷ್ಟು ಆಹಾರ ದೊರೆಯುತ್ತಿತ್ತು ಹೇಗೆಂದರೆ ಒಂದೇ ಜಾಗದಲ್ಲಿ ವಿಧ ವಿಧವಾದ ಬೆಳೆಯನ್ನು ಬೆಳೆಯಲು ಸಾದ್ಯವಾಗುತ್ತಿತ್ತು. ಪೂರ್ತಿ ಮಾನವನ ನಾಗರೀಕತೆಯ ಕಾರ್ಯಕರ್ತ ಸಸಿಗಳು ಎಂದು ಹೇಳಬಹುದು. ಪ್ರಾರಂಬದ ನಾಗರಿಕತೆಯಲ್ಲಿ ಮಾನವನು ಸಸಿಗಳನ್ನು ಔಷದಿಯಾಗಿ ಬಳಸಿದನು. ೧೭೭೦ ಬಿ.ಸಿ ಬೇಬಿಲಾನ್ ನಲ್ಲಿ, ಅತೀ ಶೀಘ್ರದಲ್ಲಿ ಇದರ ಬಳಕೆಯಾಗಿದೆ ಎಂದು ಕಂಡುಬಂದಿದೆ. ದೇಸಿ ಸಸ್ಯಶಾಸ್ತ್ರವು ಸಾಮಾನ್ಯವಾಗಿ, ಪ್ರತ್ಯೇಕ ಸಂಸೃತಿ ಮತ್ತು ಪ್ರಾಂತದ ಜನರು ಹೇಗೆ ಸ್ಥಳೀಯ ಸಸ್ಯಗಳನ್ನು ಹೇಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಬಹುದು ಎಂದು ತಿಳಿಯಪಡಿಸುತ್ತದೆ.

ಭಾರತದಲ್ಲಿ ಪಾರಂಪರಿಕ ಚಿಕಿತ್ಸೆಯು ರೂಡಿಯಲ್ಲಿದೆ ಇದರಲ್ಲಿ ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೊಪತಿ ಒಳಗೊಳ್ಳುತ್ತದೆ, ಇದನ್ನು ಸಾಮುದಾಯಕವಾಗಿ AYUSH ಎಂದು ಕರೆಯುತ್ತಾರೆ.

ಆಯುರ್ವೇದ:[ಬದಲಾಯಿಸಿ]

ಇದು ಅತೀ ಪುರಾತನ ಹಾಗು ಐತಿಹ್ಯ ರೀತಿಯಾದ ಔಷಧಿ ಅಂದರೆ ಜೀವನದ ಅರಿವು ಎಂದು ಹೇಳಬಹುದು. ಆಯುರ್ ಎಂದರೆ ಜೀವ ಮತ್ತು ವೇದ ಎಂದರೆ ಜ್ಞಾನ ಅಥವಾ ವಿಜ್ಞಾನ. ಆಯುರ್ವೇದ ಮನುಷ್ಯನ ದೇಹ, ಮನಸ್ಸು ಮತ್ತು ಜೀವಾತ್ಮದ ರೋಗಗಳನ್ನು ನಿವಾರಿಸಲು ಸಾದ್ಯ ಎಂದು ನಂಬುತ್ತದೆ. ಇದನ್ನು ಜಗತ್ಕರ್ತನಾದ ಬ್ರಹ್ಮನು ಸೃಷ್ಟಿಸಿದನೆಂಬ ನಂಬಿಕೆ. ಇವನು ಆಯುರ್ವೇದ ವಿಜ್ಞಾನವನ್ನು ಪ್ರಜಾಪತಿಗೆ ಬೋಧಿಸಿದನು, ಪ್ರಜಾಪತಿಯು ಅಶ್ವಿನಿ ದೇವತೆಗಳಿಗೆ, ಇವರು ಆತ್ರೇಯನಿಗೆ ಹೀಗೆ ಈ ಬೋಧನ ಮುಂದುವರೆದಿದೆ ಎಂಬ ನಂಬಿ ಜನ ಸಾಮಾನ್ಯರಲ್ಲಿದೆ. ಆಯುರ್ವೇದ ಮೊದಲು ರೋಗಿಯ ಸ್ವಭಾವವನ್ನು ವಿಂಗಡಿಸಿ ನಂತರ ಅವನ ಬಳಕೆ, ಜೀವನದ ಶೈಲಿ, ಕಾಯಿಲೆಯ ವಿಸ್ತಾರವನ್ನು ಆಯಿದರ್ವೇದ ೮ ವಿಭಾಗಗಳಲ್ಲಿ ಒಳಗೊಂಡಿದೆ.

  1. ಕಾಯ ಚಿಕಿತ್ಸ (General Medicine)
  2. ಕೌಮಾರ ಭೃತ್ಯ (Paediatrics)
  3. ಭೂತ ವಿದ್ಯ (Psychiatry)
  4. ಶಾಲಾಕ್ಯ (ENT, Ophthalmology and Dentistry)
  5. ಶಲ್ಯ (Surgery)
  6. ಅಗದ ತಂತ್ರ (Toxicology)
  7. ರಸಾಯನ (Rejuvenation Therapy)
  8. ವಾಜೀಕರಣ (Aphrodisiac Therapy)

ಆಯುರ್ವೇದದ ತತ್ವಜ್ಞಾನ:[ಬದಲಾಯಿಸಿ]

ಆಯುರ್ವೇದದ ಚಿಕಿತ್ಸೆ ವಾಡಿಕೆಯಲ್ಲಿರುವ ಚಿಕಿತ್ಸೆಗಿಂತ ಗುಣಮಾಡುವುದರಲ್ಲಿ ಬಹಳ ಬಿನ್ನವಾದ ಪದ್ದತಿಯನ್ನು ಒಳಗೊಂಡಿದೆ.

“ಸಮದೋಷ ಸಮಾಗ್ನಿಶ್ಚ ಸಮಧಾತುಮಲಕ್ರಿಯಾಃ|

ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೆ ||”

ಅಗ್ನಿ (digestive fire), ಧಾತು (tissues), ಸರಳವಾದ ಮಲ ಕ್ರಿಯೆ (waste products), ಸಂತೋಷ ಸ್ಥಿತಿಯುಳ್ಳ ಆತ್ಮ (soul), ಪಂಚೇಂದ್ರಿಯಗಳು ಮತ್ತು ಮನಸ್ಸು ಇವೆಲ್ಲವು ಸಮತೋಲನ ಸ್ಥಿತಿಯಲ್ಲಿ ಇದ್ದಲ್ಲಿ ಮಾನವನ ಜೀವನ ಆರೋಗ್ಯಕರವಾಗಿರುತ್ತದೆ. ಆಯುರ್ವೇದ ಚಿಕಿತ್ಸೆ ದೇಹ ಮತ್ತು ಮನಸ್ಸಿನ ಸಮತೋಲನೆಯನ್ನು ಕಾಪಾಡುವುದರಲ್ಲಿ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತದೆ, ಹೇಗೆಂದರೆ ಜೀವನ ಶೈಲಿ, ಆಹಾರ ಸೇವನೆ, ಪ್ರಾಕೃತಿಕ ಕಾರ್ಯಗಳಲ್ಲಿ ತೊಡಗುವುದು, ಯೋಗ, ಅಥವಾ ಧ್ಯಾನ ಮತ್ತು ಗಿಡ ಮೂಲಿಕೆಗಳ ವೈದ್ಯ ಇವೆಲ್ಲವುದರಿಂದ ದೇಹ ಮತ್ತು ಮನಸ್ಸಿನಲ್ಲಿ ನಿಶ್ಚಿತವಾದ ಬದಲಾವಣೆ ಉಂಟಾಗುತ್ತದೆ. ಆಯುರ್ವೇದ ಚಿಕಿತ್ಸೆ ಒಬ್ಬ ವ್ಯಕ್ತಿಯು ಮುಂದುವರೆಯುವದಕ್ಕಿಂತ ಮೊದಲು ಆ ವ್ಯಕ್ತಿಯ ದೋಷಗಳನ್ನು ಪರೀಕ್ಷಿಸುವಲ್ಲಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತದೆ. ಆಯುರ್ವೇದ ಮಾನವನ ದೇಹ ಮತ್ತು ಪ್ರಕೃತಿಯ ಬಹಳ ವ್ಯಾಪಕವಾದಂತ ಚಿತ್ರವನ್ನು ಸೆಳೆದಿದೆ. ನೈಸರ್ಗಿಕ ಮೂಲಧಾತು ಪಂಚಮಹಾಭೂತಗಳಾದ-

  • ಕ್ಷಿತ (Earth)
  • ಜಲ (Water)
  • ಮಾರುತಿ (Air)
  • ತೇಜಸ್ಸು (Fire)
  • ವ್ಯೋಮ (Space or Ether or Akash)

ಇವೆಲ್ಲವು ಕೂಡ ಮಾನವನ ದೇಹದ ಅಂಗಾಂಗಳಾಗಿವೆ ಎಂದು ಆಯುರ್ವೇದ ತಿಳಿಸುತ್ತದೆ. ಇವುಗಳು ಸ್ಪಷ್ಟವಾದ ಮೂರು ದೇಹದ ರಚನೆಯಲ್ಲಿ ತೊಡಗಿಕೊಂಡಿದೆ-

  • ಕಫ (water/earth)
  • ಪಿತ್ತ (fire)
  • ವಾತ (ether/air)

ಈ ಮೂರು ವಿಧಗಳು ಆಯುರ್ವೇದದಲ್ಲಿ ತ್ರಿದೋಷಗಳಾಗಿ ಪರಿಶೀಲಿಸಿದ್ದಾರೆ.

ದೋಷಗಳು:[ಬದಲಾಯಿಸಿ]

೧. ಕಫ ಪ್ರಕೃತಿ[ಬದಲಾಯಿಸಿ]

ಕಫ ಪ್ರಕೃತಿ ಪೃಥ್ವಿ ಮತ್ತು ಜಲವನ್ನು ಒಳಗೊಂಡಿದೆ. ಜೀವನದ ಪೋಷಣಶಕ್ತಿಗಾಗಿ ಜಲ ಬಹಳ ಅವಶ್ಯಕ. ಪಥ್ವಿ ವಸ್ತುಗಳ ವಿನ್ಯಾಸ ಉಂಟುಮಾಡುವುದರಲ್ಲಿ ಹೊಣೆಯಾಗಿದೆ. ಕಫ ದೇಹದ ಆಕೃತಿ ಮತ್ತು ರಚನೆ ( ಕೊಬ್ಬು, ಸ್ನಾಯು, ಮೂಳೆ)ಯಾಗುವುದರ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ಕಫದ ತಣ್ಣನೆಯ ಗುಣ, ಸಾರವಿಲ್ಲದ ಹಸಿವನ್ನು ಫಲಿಸುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿಯಲ್ಲಿ ಅಸಮತೋಲನೆ ಉಂಟಾದಲ್ಲಿ ಶ್ವಾಶಕೋಶದಲ್ಲಿ ಅವ್ಯವಸ್ಥೆ ಸಂಭವಿಸುತ್ತದೆ. ಈ ಗದ್ದಲ ಮೇಲಿನ ಮೈ ಭಾಗದಲ್ಲಿ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಬಾಲ್ಯಾವಸ್ಥೆಯಲ್ಲಿ ಸಂಭವಿಸುತ್ತದೆ ಮತ್ತು ಇದನ್ನು ಕಫಕಾಲ ಎಂದು ಕರೆಯುತ್ತಾರೆ.

೨. ಪಿತ್ತ ಪ್ರಕೃತಿ[ಬದಲಾಯಿಸಿ]

ಪಿತ್ತ ಪ್ರಕೃತಿ ಅಗ್ನಿ ಅಥವಾ ತೇಜವನ್ನು ಒಳಗೊಂಡಿದೆ, ಶಾಖ ಸಾಮರ್ಥ್ಯದ ಮೂಲಧಾತು. ಇದು ದೇಹದ ಶಾಖವನ್ನು ಪೋಷಣೆಮಾಡುವುದರಲ್ಲಿ ಹೊಣೆಯಾಗಿದೆ. ಪಿತ್ತ ರಂಧ್ರಗಳ ಹಾಗು ಅಂಗಾಂಶಗಳನ್ನು ಪರಿವರ್ತನಾ ಕ್ರಿಯೆಯನ್ನು ನಿಭಾಯಿಸುತ್ತದೆ. ಈ ವ್ಯಕ್ತಿಗಳು ಬಹಳ ಚುರುಕಾಗಿ ಮತ್ತು ಬಹುಬೇಗನೆ ಗ್ರಹಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಪೈತ್ತಿಕ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಇದು ಯೌವನಾವಸ್ಥೆಯಲ್ಲಿ ಕಂಡು ಬರುತ್ತದೆ, ಇದನ್ನು ಪಿತ್ತಕಾಲ ಎಂದು ಕರೆಯುತ್ತಾರೆ.

೩.ವಾತ ಪ್ರಕೃತಿ[ಬದಲಾಯಿಸಿ]

ವಾತ ಪ್ರಕೃತಿ ವಾಯು ಮತ್ತು ಆಕಾಶವನ್ನು ಹೊಂದಿರುತ್ತದೆ, ಇದು ಉಸಿರಾಟ ಮತ್ತು ಚಲನಾ ಕಾರ್ಯಗಳನ್ನು ಹತೋಟಿಯಲ್ಲಿಡುತ್ತದೆ. ದೇಹದ ಮುಖ್ಯ ಕ್ರಿಯೆಗಳನ್ನು (ನರಗಳ ಒತ್ತಡ, ಉಸಿರಾಟ) ನಿರ್ಭಧನದಲ್ಲಿಡುತ್ತದೆ. ಒಂದು ವೇಳೆ ವಾತ ಪ್ರಕೃತಿಯ ಅಸಮತೋಲನೆ ಉಂಟಾದಲ್ಲಿ ಮಾನಸಿಕ ತೊಂದರೆಗೆ ಒಳಗಾಗುತ್ತಾರೆ ಹಾಗು ನರ ಕಾಯಿಲೆಗಳು ಸಂಭವಿಸುತ್ತದೆ. ಇವು ವೃದ್ಧಾವಸ್ಥೆಯಲ್ಲಿ ಕಾಣಿಸಿಕೊಳ್ಳುತ್ತದೆ.

ಔಷದೀಯ ಮೂಲಿಕೆಗಳನ್ನು ಸಮಯಕ್ಕೆ ತಕ್ಕಂತೆ ಬಳಸಿದರೆ ಒಬ್ಬ ವ್ಯಕ್ತಿಯ ಆರೋಗ್ಯ ಸಮತೋಲನೆಯಲ್ಲಿರುತ್ತದೆ.

ಕೆಲವು ಮುಖ್ಯವಾದ ಔಷದೀಯ ಗಿಡಗಳು
ಸಾಮಾನ್ಯ ಹೆಸರು ವೈಜ್ಞಾನಿಕ ಹೆಸರು ವಿಧ ಭಾಗದ ಬಳಕೆ ರೋಗದ ಪರಿಹಾರ
ಶ್ರೀಗಂಧ ಸಾಂಟಾಲಮ್ ಆಲ್ಬಮ್ ಮರ ತೊಗಟೆ/ಚಕ್ಕೆ ಚರ್ಮ ರೋಗ, ಕೆಮ್ಮು, ಜಾಂಡಿಸ್
ತುಳಸಿ ಒಸಿಮಮ್ ಸಾಂಕ್ಟಮ್ ಸಸಿ ಎಲೆಗಳು ಕೆಮ್ಮು, ಶೀತ, ಗಂಟಲು ರೋಗ
ಗೋರಂಟಿ ಲವ್ಸೋನಿಯ ಐರ್ಮಿಸ್ ಕುರುಚಲ ಗಿಡ ಎಲೆ, ಹೂ, ಬೀಜ ಉರಿಯುವಿಕೆ
ಕತ್ತಾಳೆ ಆಲೋ ವೆರ ಸಸಿ ಕಾಂಡ ಚರ್ಮ ಉರಿ, ವ್ರಣ
ವಿಂಕ ವಿಂಕ ರೋಸಿಯ ಸಸಿ ಪೂರ್ತಿ ಗಿಡ ರಕ್ತಕ್ಷಯ
ಬೇವು ಅಜಾರ್ಡಿಚಾಟ ಇಂಡಿಕ ಮರ ಶಾಖಾಕಾಂಡ ಮಲರೋಗ, ಶೀತಲ
ವಸ ಅಡತೋಡ ವಸಿಕ ಸಸಿ ಪೂರ್ತಿ ಗಿಡ ಶ್ವಾಶಣೆಯ ಉತ್ತೇಜಕ
ಬ್ರಾಹ್ಮಿ ಸೆಂಟೆಲ್ಲ ಏಷ್ಯಾಟಿಕ ಸಸಿ ಪೂರ್ತಿ ಗಿಡ ಜಾಂಡಿಸ್, ಮೂತ್ರವರ್ದಕ, ಅತಿಸಾರ
ಎಕ್ಕದ ಗಿಡ ಕ್ಯಾಲೊಟ್ರೊಪಿಸ್ ಜೈಜಾಂಟಿಕಮ್ ಕುರುಚಲ ಗಿಡ ಪೂರ್ತಿ ಗಿಡ ಆಸ್ತಮ, ಕೆಮ್ಮು, ಪಕ್ಷವಾತ
ದಾಸವಾಳ ಹೈಬಿಸ್ಕಸ್ ರೋಸಸೈನೆನ್ಸಿಸ್ ಕುರುಚಲ ಗಿಡ ಬೇರು, ಎಲೆ, ಹೂ ಉರಿಯುವಿಕೆ, ಜ್ವರ
ತುಂಬಿ ಲ್ಯುಕಸ್ ಆಸ್ಪೆರ ಸಸಿ ಎಲೆ, ಹೂ ವ್ರಣ, ಕೆಮ್ಮು, ಕಣ್ಣು ಚುಕ್ಕೆ
ಮುಟ್ಟಿದರೆ ಮುನಿ ಮೈಮೋಸ ಪುಡಿಕ ಕುರುಚಲ ಗಿಡ ಬೇರು, ಎಲೆ ಜ್ವರ, ವ್ರಣ, ಉರಿಯುವಿಕೆ, ಆಸ್ತ್ಮ, ಜಾಂಡಿಸ್, ಸಿಡುಬು, ಆಮಶಂಕೆ
ಕರಿಬೇವು ಮುರ್ರ್ಯ ಕೊಇನಿಗಿ ಮರ ಬೇರು, ಚಕ್ಕೆ, ಎಲೆ ಕಫ, ಪಿತ್ತ, ಓಕರಿಕೆ, ಉರಿಯುವಿಕೆ, ಸಿಡುಬು, ಚರ್ಮ ರೋಗ