ವಿಷಯಕ್ಕೆ ಹೋಗು

ಅಶ್ವಿನೀ ದೇವತೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಶ್ವಿನೀ ದೇವತೆಗಳು

ಅಶ್ವಿನೀ ದೇವತೆಗಳು ದೇವತೆಗಳ ವೈದ್ಯರೆಂದೆನಿಸಿದ್ದಾರೆ. ಇವರಿಗೆ ಅಶ್ವಿನೀ ಕುಮಾರರೆಂದೂ ಹೆಸರಿದೆ.

ಸೂರ್ಯಪತ್ನಿಯಾದ ಸಂಜ್ಞಾದೇವಿ ಕುದುರೆಯ ರೂಪ ತಾಳಿದ್ದ ಸಮಯದಲ್ಲಿ ಸೂರ್ಯನಿಂದ ಜನಿಸಿದ ಕಾರಣ, ಅವಳಿ ಮಕ್ಕಳಾದ ಇವರಿಗೆ ಈ ಹೆಸರು. ಇವರು ಮಹಾ ರೂಪ ವಂತರೆಂದು ಮಹಾಭಾರತ, ಭಾಗವತ, ವಿಷ್ಣುಪುರಾಣಗಳು ಹೇಳುತ್ತವೆ.

ದೇವತಾ ವರ್ಣವ್ಯವಸ್ಥೆಯಲ್ಲಿ ಇವರು ಶೂದ್ರ ದೇವತೆಗಳು.

ಚ್ಯವನ ಮುನಿಯ ಪತ್ನಿಯಾದ ಸುಕನ್ಯೆಯ ಪಾತಿವ್ರತ್ಯಕ್ಕೆ ಮೆಚ್ಚಿ, ಅವನಿಗೆ ಸೌಂದರ್ಯ, ತಾರುಣ್ಯಗಳನ್ನು ಅನುಗ್ರಹಿಸಿ, ಆತನ ಮೂಲಕ ಶರ್ಯಾತಿ ಮಹಾರಾಜ ಮಾಡಿದ ಯಜ್ಞದಲ್ಲಿ ಇತರ ದೇವತೆಗಳಂತೆಯೇ ಇವರೂ ಹವಿರ್ಭಾಗವನ್ನು ಪಡೆದರು ಎಂಬ ಕಥಾಭಾಗ ಪ್ರಸಿದ್ಧವಾಗಿದೆ.

ಆಪೋದನೆಂಬ ಧೌಮ್ಯ ಮುನಿಯ ಅಂಧಶಿಷ್ಯನಾದ ಉಪಮನ್ಯು ಇವರನ್ನಾಶ್ರಯಿಸಿ ಮತ್ತೆ ದೃಷ್ಟಿಯನ್ನು ಪಡೆದಿದ್ದು, ಪಾಂಡು ಮಹಾರಾಜನ ಎರಡನೆಯ ಹೆಂಡತಿ ಮಾದ್ರಿಯಲ್ಲಿ ನಕುಲ ಸಹದೇವರು ಇವರ ವರಪ್ರಸಾದದಿಂದ ಜನಿಸಿದ ವಿಚಾರ-ಈ ಪ್ರಸಂಗಗಳು ಅಶ್ವಿನೀ ದೇವತೆಗಳ ಮಹಿಮೆಗಳನ್ನು ತಿಳಿಸುತ್ತವೆ.

ಅಶ್ವಿನೀ ದೇವತೆಗಳು ಸದಾ ಎಲ್ಲ ಕಡೆಯು ನೆಲೆಸಿ ಜನರಾಡುವ ಒಳ್ಳೆಯ, ಕೆಟ್ಟ ಮಾತುಗಳಿಗೆಲ್ಲಾ ಅಸ್ತು ಎನ್ನುತ್ತಾರೆಂದು ನಂಬಲಾಗಿದೆ. ಹಾಗಾಗಿ ಮನುಷ್ಯ ತನ್ನ ಜೀವನದುದ್ದಕ್ಕೂ ಒಳ್ಳೆಯ ಮಾತುಗಳನ್ನಾಡುತ್ತಾ ಆರೋಗ್ಯಕರವಾಗಿ ಬದುಕಬೇಕೆನ್ನುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. http://www.healthepic.com/ayurveda/rasayana/chyavanaprasha.htm
  2. http://www.heritageinstitute.com/zoroastrianism/ranghaya/suppiluliuma_shattiwaza_treaty.htm
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: