ತುಂಬೆಗಿಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತುಂಬೆ ಗಿಡ
Leucas aspera at Gandipet, Hyderabad, AP W2 IMG 9054.jpg
ತುಂಬೆ ಗಿಡ
Egg fossil classification
Kingdom:
Plantae
Division:
Order:
Family:
Genus:
Species:
L. aspera
Binomial nomenclature
Leucas aspera
Leucas aspera in Kerala
Flower of Leucas aspera, Hyderabad, India

ಪರಿಚಯ[ಬದಲಾಯಿಸಿ]

 • ತುಂಬೆಯು ಒಂದು ಪುಟ್ಟ ಗಿಡ. ಇದು ಹೆಚ್ಚಾಗಿ ಬಿಳಿಯ ಬಣ್ಣದ ಹೂಗಳನ್ನು ಬಿಡುತ್ತದೆ ಜೊತೆಗೆ ಅಪರೂಪಕ್ಕೆ ಬಣ್ಣದ ತುಂಬೆ ಹೂಗಳೂ ಅಲ್ಲಲ್ಲಿ ಕಂಡುಬರುತ್ತವೆ. ಇದರ ರೆಂಬೆ ಮತ್ತು ಕಾಂಡವು ತುಂಬ ಮೃದುವಾಗಿದ್ದು ಸಲೀಸಾಗಿ ಬಾಗುವಂತಹ ರಚನೆಯಿರುತ್ತದೆ. ಇದರ ಎಲೆಗಳು ತೆಳುವಾಗಿದ್ದು ಉದ್ದವಾಗಿರುತ್ತವೆ. ಇದರ ಬೇರುಗಳು ಭೂಮಿಯಲ್ಲಿ ಹೆಚ್ಚು ಆಳಕ್ಕಿಳಿಯದೆ ಮೇಲ್ಮಟ್ಟದಲ್ಲೇ ಇರುತ್ತವೆ.
 • ಇದು ಸದಾಕಾಲದಲ್ಲಿಯು ಹೆಚ್ಚು ನೀರಿನ ಒರತೆಯಿಲ್ಲದಿದ್ದರೂ ತಾನಾಗೇ ಯಥೇಚ್ಛವಾಗಿ ಹುಟ್ಟಿ ಬೆಳೆಯುತ್ತದೆ. ಇದು ವೈಜ್ಞಾನಿಕ ಮತ್ತು ಸಾಮಾಜಿಕವಾಗಿ ಔಷಧೀಯ ಸಸ್ಯವಾಗಿ ಗಣಿಸಲ್ಪಟ್ಟಿದೆ. ಈ ಸಸ್ಯವು ಸಾಮಾನ್ಯವಾಗಿ ಭಾರತದಾದ್ಯಂತ ಮತ್ತು ಜಾವಾ, ಮಾರಿಷಸ್, ಫಿಲಿಪೈನ್ಸ್, ಶ್ರೀಲಂಕ ಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ[೧].

ತುಂಬೆಯ ವಿವಿಧ ಹೆಸರುಗಳು[ಬದಲಾಯಿಸಿ]

 1. ಸಂಸ್ಕೃತ - ದ್ರೋಣ ಪುಷ್ಪ, ಚಿತ್ರಪತ್ರಿಕಾ, ಚಿತ್ರ ಕ್ಷುಪ
 2. ಪಂಜಾಬಿ - ಗುಲ್ಡೋರ್
 3. ಬೆಂಗಾಲಿ - ದರುಣಫುಲಾ, ಹಲ್ಕಷ್
 4. ಗುಜರಾತಿ - ಕುಲನ್ ಫೂಲ್
 5. ಹಿಂದಿ - ಗೋಮ ಮಧುಪತಿ
 6. ಸಿಂಧಿ - ಕುಬೊ
 7. ಮರಾಠಿ - ಬಹುಫೂಲ್
 8. ಮುಂಬಯಿ - ತುಂಬಾ
 9. ತೆಲುಗು - ತುಮ್ಮಿಚಿಟ್ಟು

ವಿವರಣೆ[ಬದಲಾಯಿಸಿ]

 • ತುಂಬೆಗಿಡವನ್ನು ಸಾಮಾನ್ಯವಾಗಿ leucas aspera ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಇದರಲ್ಲಿ ಹೆಚ್ಚು ಔಷಧೀಯ ಗುಣಗಳು ಕಂಡುಬಂದಿರುವುದರಿಂದ ಇದನ್ನು ಕೀಟನಾಶಕವಾಗಿ ಮತ್ತು ಜ್ವರ ನಿವಾರಕವಾಗಿ ಹೆಚ್ಚು ಬಳಸಲಾಗುತ್ತಿದೆ. ತುಂಬೆಯು ಸದಾಕಾಲ ಇರುವ ಸಸ್ಯವಾಗಿದ್ದು ೧೫ ರಿಂದ ೬೦ ಸೆಂ.ಮೀ. ವರೆಗೆ ಉದ್ದವಾಗಿ ಬೆಳೆಯಬಲ್ಲದು.
 • ಇದರ ಎಲೆಗಳು ನೀಳವಾಗಿದ್ದು ೮ ಸೆಂ.ಮೀ. ಉದ್ದ ಮತ್ತು ೧.೨೫ ಸೆಂ.ಮೀ. ಅಗಲವಿರುತ್ತದೆ. ಇದರ ಹೂವುಗಳು ತೆಳುವಾಗಿದ್ದು ಒಳಭಾಗದಲ್ಲಿ ಸಣ್ಣಸಣ್ಣ ರೇಖೆಯಂತಹ ರಚನೆಯನ್ನು ಹೊಂದಿರುತ್ತದೆ[೨].

ಲಕ್ಷಣಗಳು[ಬದಲಾಯಿಸಿ]

 • ಎಲೆ

ಈ ಸಸ್ಯದ ಎಲೆಗಳು ಅಭಿಮುಖ, ರೇಖಾತ್ಮಕ ಹಾಗೂ ಚೂಪು ತುದಿಯನ್ನು ಹೊಂದಿದೆ. ಹಾಗೂ ತಳಭಾಗದಲ್ಲಿ ಕಿರಿದಾಗಿದೆ. ಇದು ಸಾಮಾನ್ಯವಾಗಿ 8 ಸೆಂ.ಮೀ ಉದ್ದ ಹಾಗೂ 1.25ಸೆಂ.ಮೀ ಅಗಲವಾಗಿರಬಹುದು. ತೊಟ್ಟುಗಳ ಉದ್ದವು ಸಾಮಾನ್ಯವಾಗಿ 2.5 ಮಿ.ಮೀ ಉದ್ದವನ್ನು ಹೊಂದಿರುತ್ತದೆ. ಎಲೆಗಳು ದಪ್ಪ ಮೇಣದ ಕೋಶಗಳಿಂದ ಮುಚ್ಚಲ್ಪಟ್ಟಿರುತ್ತವೆ.

 • ಕಾಂಡ

ಕಾಂಡವು ಚತುರ್ಭುಜ, ಹೆಚ್ಚು ಕವಲೊಡೆದ ರೀತಿಯಲ್ಲಿ ಇರುತ್ತದೆ. ಎಪಿಡರ್ಮಿಸ್ ಮೇಣದ ಕೋಶಗಳಿಂದ ಮುಚ್ಚಲ್ಪಟ್ಟಿರುತ್ತದೆ. ಹಾಗು ಕೆಲವು ಅಡ್ಡ ಹಾಯುವ ಸ್ಟೊಮಾಟಾಗಳನ್ನು ಹೊಂದಿರುತ್ತದೆ. ಕಿರಿಯ ಕಾಂಡಗಳಲ್ಲಿ ವಿಶಿಷ್ಟವಾದ ಕ್ಸೈಲಂಗಳು ಸಂಘಟಿತವಾಗಿರುತ್ತದೆ. ಕಾಂಡ ಬಹಳ ಕಿರಿದಾಗಿದೆ. ಕಾಂಡದ ವಯಸ್ಸು ಹೆಚ್ಚಿದಂತೆ, ಅಂಗಾಂಶವು ವಿಸ್ತಾರಗೊಳ್ಳುತ್ತ ಹೋಗುತ್ತದೆ.

 • ಬೇರು

ಈ ಗಿಡದ ಬೇರುಗಳು ಎಪಿಡರ್ಮಲ್ ಕೋಶಗಳನ್ನು ಹೊಂದಿದ್ದು, ಅವು ಅತ್ಯಂತ ಕಿರಿದಾದ ಮತ್ತು ಒಟ್ಟಿಗೆ ಜೋಡಿಸಲ್ಪಟ್ಟಿರುತ್ತವೆ. ಇದರ ಜೀವಕೋಶದ ಗೋಡೆಗಳು ತುಂಬಾ ತೆಳು, ಚಪ್ಪಟೆ ಹಾಗೂ ನೇರವಾಗಿರುತ್ತದೆ.

 • ಹೂ ಮತ್ತು ಹಣ್ಣುಗಳು

ಹೂಗಳು ಬಿಳಿ ಬಣ್ಣದ್ದಾಗಿದ್ದು ನೇರವಾಗಿರುತ್ತವೆ. ಇವು ಕಂದು ಬಣ್ಣದ ಕಣಗಳನ್ನು ಹೊಂದಿರುತ್ತವೆ. ಇವು ಸಂಪೂರ್ಣವಾಗಿ ಉಭಯಲಿಂಗಿಗಳಾಗಿರುತ್ತವೆ. ಈ ಸಸ್ಯದ ಹಣ್ಣುಗಳು 2.5 ಮಿ.ಮೀ ಉದ್ದವಾಗಿವೆ. ಕಂದು ಬಣ್ಣವನ್ನು ಹೊಂದಿದ್ದು ನಯವಾಗಿರುತ್ತದೆ. ಆಕಾರದಲ್ಲಿ ಚಪ್ಪಟೆಯಾಗಿರುತ್ತವೆ. ಆಂತರಿಕ ಭಾಗ ಕೋನೀಯವಾಗಿದ್ದು ಹಣ್ಣಿನ ಹೊರಭಾಗವು ದುಂಡಾಗಿರುತ್ತದೆ.


ಬಳಕೆಗಳು[ಬದಲಾಯಿಸಿ]

 • ಇದರ ಎಲೆಯ ರಸವನ್ನು ಕೀಟನಾಶಕ ಮತ್ತು ಜ್ವರನಿವಾರಕವಾಗಿ ಹೆಚ್ಚು ಬಳಸಲಾಗುತ್ತದೆ
 • ಉತ್ಕರ್ಷಣ ನಿರೋಧಕ ಮತ್ತು ಸೂಕ್ಷ್ಮಜೀವಿ ಪ್ರತಿರೋಧಕವಾಗಿ ಆಯುರ್ವೇದ ದಲ್ಲಿ ಬಳಸುವ ವಾಡಿಕೆಯಿದೆ.
 • ಇದರ ಎಲೆಗಳನ್ನು ಬಹಳ ಕಾಲದವರೆಗೆ ಹಾವು ಕಡಿತಕ್ಕೆ ಔಷಧವಾಗಿ ಬಳಸುವುದೂ ವಾಡಿಕೆಯಲ್ಲಿತ್ತು
 • ಸಂಧಿವಾತ, ಚರ್ಮರೋಗ, ಕೆಮ್ಮು, ಗಂಟಲುಬೇನೆ, ನೆಗಡಿ ಮುಂತಾದವುಗಳಿಗೆ ಮನೆಮದ್ದಾಗಿ ಬಳಸುವ ವಾಡಿಕೆ ಇಂದಿಗೂ ಇದೆ[೩].

ಉಲ್ಲೇಖನಗಳು[ಬದಲಾಯಿಸಿ]

 1. ತುಂಬೆಗಿಡದ ಪರಿಚಯ
 2. ತುಂಬೆಗಿಡದ ವೈಜ್ಞಾನಿಕ ಮಹತ್ವ
 3. http://goodhealthytipsforall.blogspot.com/2014/09/blog-post_86.html