ವಿಷಯಕ್ಕೆ ಹೋಗು

ಜಲ ಮೂಲಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಲ ಮೂಲಗಳು : ಮಾನವನ ಬಳಕೆಗೆಗಾಗಿ ಬೇಕಿರುವ ನೀರನ್ನು ಒದಗಿಸುವ ಮೂಲವೇ ಜಲಮೂಲ. ಕೃಷಿ, ಉದ್ಯಮ, ಮನೆ, ಮನರಂಜನೆ ಮತ್ತು ಪರಿಸರಾತ್ಮಕ ಚಟುವಟಿಕೆಗಳಿಗಾಗಿ ಬೇಕಿರುವ ಸಾಧನ ಈ ನೀರು. ಮಾನವನ ಈ ಎಲ್ಲ ಚಟುವಟಿಕೆಗಳಿಗೂ ವಾಸ್ತವವಾಗಿ ಸಿಹಿ ನೀರು ಅವಶ್ಯವಾಗಿ ಬೇಕು.

ಜಲ ಮೂಲಗಳು

[ಬದಲಾಯಿಸಿ]
  • ಭೂಮಿಯ ಮೇಲಿರುವ ಒಟ್ಟು ನೀರಿನಲ್ಲಿ 97% ಉಪ್ಪು ನೀರು, ಮಿಕ್ಕ 3% ಮಾತ್ರ ಸಿಹಿ ನೀರಾಗಿದ್ದು ಇದರಲ್ಲಿನ ಮೂರನೆ ಎರಡರಷ್ಟು ಭಾಗ ಧ್ರುವ ಪ್ರದೇಶದಲ್ಲಿ ಹೆಪ್ಪುಗಟ್ಟಿರುವ ನೀರ್ಗಲ್ಲಾಗಿದೆ.[] ಮಿಕ್ಕದ್ದು ದ್ರವ ರೂಪದಲ್ಲಿರುವ ಅಂತರ್ಜಲ ವಾಗಿದ್ದು ಇದರಲ್ಲಿನ ಅತ್ಯಲ್ಪ ಪ್ರಮಾಣದ ನೀರು ಭೂಮಿಯ ಮೇಲೆ ಹಾಗೂ ವಾತಾವರಣದಲ್ಲಿ ಕಾಣಬರುತ್ತದೆ.[]
  • ಸಿಹಿ ನೀರಿನ ಮೂಲ ಮರುಪೂರಣ ಗುಣವುಳ್ಳದ್ದಾದರೂ, ಜಗತ್ತಿಗೆ ಪೂರೈಕೆಯಾಗುತ್ತಿರುವ ಶುದ್ಧ ಸಿಹಿ ನೀರಿನ ಪ್ರಮಾಣ ಕ್ರಮೇಣ ಕುಸಿಯುತ್ತಿದೆ. ಜಗತ್ತಿನ ಅನೇಕ ಭಾಗಗಳಲ್ಲಿ ನೀರಿನ ಬೇಡಿಕೆ ಈಗಾಗಲೇ ಪೂರೈಕೆಯನ್ನು ಮೀರಿದ್ದು; ಪ್ರಪಂಚದ ಜನ ಸಂಖ್ಯೆ ಏರಿದಂತೆಲ್ಲಾ ನೀರಿನ ಬೇಡಿಕೆ ಹೆಚ್ಚುತ್ತಿದೆ. ಜಗತ್ತಿನ ಅರ್ಧ ಭಾಗದಷ್ಟು ನೀರ್ಬಸಿಯುವ (=ಜೌಗು ಭೂಮಿ) ಜಮೀನು ಮತ್ತು ಪರಿಸರ ವ್ಯವಸ್ಥೆ 20ನೇ ಶತಮಾನದಲ್ಲಿ ಇಲ್ಲವಾಯಿತು. ಇದಾದ ನಂತರ ಪರಿಸರ ವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ಜಲ ಸಂರಕ್ಷಣೆಯ ಜಾಗೃತಿ ಹೊಮ್ಮಿದ್ದು ತೀರಾ ಇತ್ತೀಚಿನ ಸಂಗತಿ.
  • ಕಡಲು ಅಥವಾ ಭೂಮಿಯಲ್ಲಿನ ಪರಿಸರ ವ್ಯವಸ್ಥೆಗಿಂತಲೂ ಸಿಹಿ ನೀರಿನ ಜೀವ ವೈವಿಧ್ಯ ಪರಿಸರ ವ್ಯವಸ್ಥೆ ಈಗ ಶೀಘ್ರ ಗತಿಯಲ್ಲಿ ಕ್ಷೀಣಿಸುತ್ತಿದೆ. ಹೊಯೆಕ್ಸತ್ರ, A.Y. 2006. ನೀರು ಆಡಳಿತದ ಬಗ್ಗೆ ಜಾಗತಿಕ ಆಯಾಮ: ಸ್ಥಳೀಯ ಸಮಸ್ಯೆಗಳನ್ನು ನಿಭಾಯಿ ಸುವ ನಿಟ್ಟಿನ ಜಾಗತಿಕ ವ್ಯವಸ್ಥೆಗೆ ಒಂಭತ್ತು ಕಾರಣಗಳು ವ್ಯಾಲ್ಯೂ ಆಫ್ ವಾಟರ್ ರಿಸರ್ಚ್ ರಿಪೋರ್ಟ್ ಸೀರಿಸ್ ನಂ. 20 UNESCO-IHE ಇನ್ಸ್‌ಟಿಟ್ಯೂಟ್ ಫಾರ್ ವಾಟರ್ ಎಜುಕೇಷನ್.</ref> ನೀರನ್ನು ಬಳಕೆ ಮಾಡುವವರಿಗಾಗಿ ನಿಯಮಾವಳಿಯನ್ನು ರೂಪಿಸಿ(ನಿಯಮಾವಳಿ ಇದ್ದಲ್ಲಿ) ಅದನ್ನು ನೀರಿನ ಹಕ್ಕು ಎಂದು ಕರೆದಿದ್ದೇವೆ.

ಸಿಹಿ ನೀರಿನ ಮೂಲಗಳು

[ಬದಲಾಯಿಸಿ]

ಮೇಲ್ಮೈ ನೀರು

[ಬದಲಾಯಿಸಿ]
  • ನದೀ, ಸರೋವರ ಮತ್ತು ಜೌಗು ಭೂಮಿದಲ್ಲಿರುವ ಸಿಹಿ ಜಲ ಸಂಪತ್ತಿಗೆ ಮೇಲ್ಮೈ ನೀರು ಎನ್ನಲಾಗಿದೆ. ಮಳೆ ಬೀಳುವುದರಿಂದ ಭರ್ತಿಯಾಗುವ ಭೂಮಿಯ ಮೇಲ್ಮೈ ನೀರು ಹರಿದು ಕಡಲನ್ನೂ, ಆವಿಯಾಗಿ ವಾತಾವರಣವನ್ನೂ ಸೇರುವುದರಿಂದ ಅದರ ಪ್ರಮಾಣ ಕಡಿಮೆಯಾಗುವುದು ನೈಸರ್ಗಿಕ. ಮೇಲ್ಮೈ ನೀರು ಸಂಗ್ರಹವಾಗಲು ಪ್ರಾಕೃತಿಕವಾಗಿ ಜಲಾನಯನ ಪ್ರದೇಶದಲ್ಲಿ ಬೀಳುವ ಮಳೆಯೊಂದರಿಂದಲೇ ಸಾಧ್ಯವಾಗುವುದಾದರೂ, ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಪ್ರಮಾಣದ ನೀರು ವ್ಯವಸ್ಥೆಯಲ್ಲಿ ಇರಬೇಕೆಂಬ ನಿರೀಕ್ಷೆ ಅನ್ಯ ಕಾರಣಗಳನ್ನೂ ಅವಲಂಬಿಸಿದೆ.
  • ಸರೋವರ, ಜೌಗು ಭೂಮಿ ಮತ್ತು ಅಣೆಕಟ್ಟುಗಳಿಗಿರುವ ಜಲ ಸಂಗ್ರಹಣಾ ಸಾಮರ್ಥ್ಯ, ಇವುಗಳ ತಳದಲ್ಲಿನ ಮಣ್ಣಿಗಿರುವ ಅಂತರ್ವ್ಯಾಪಕತೆಯ ಗುಣ, ಜಲ ಸಂಗ್ರಹಾಗಾರಗಳ ಅಡಿಯ ಮಣ್ಣಿಗಿರುವ ನೀರ್ಬಸಿಯುವ ಲಕ್ಷಣ, ಮಳೆ ಬೀಳುವ ಅವಧಿ ಮತ್ತು ಆವಿಯಾಗಲು ಹಿಡಿಯುವ ಸಮಯ- ಈ ಎಲ್ಲ ಅಂಶಗಳ ಮೇಲೆ ಅದು ಅವಲಂಬಿತ. ಲಭ್ಯವಾಗದೇ ಕಳೆದು ಹೋಗುವ ನೀರಿನ ಮೇಲೂ ಈ ಎಲ್ಲ ಅಂಶಗಳು ಪ್ರಭಾವ ಬೀರುತ್ತದೆ.
  • ಈ ಎಲ್ಲ ಅಂಶಗಳ ಮೇಲೆ ಮಾನವನ ಚಟುವಟಿಕೆಗಳು ಭಾರೀ ಪ್ರಭಾವವನ್ನು ಬೀರುತ್ತವೆ, ಕೆಲವೊಮ್ಮೆ ಅದು ವಿಪರೀತ ಹಾನಿಕಾರಕವಾಗಿರುವುದೂ ಉಂಟು. ಅಣೆಕಟ್ಟುಗಳನ್ನು ಕಟ್ಟುವ ಮೂಲಕ ಜಲ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವ ಮಾನವ ಜೌಗು ಜಮೀನಿನಿಂದ ನೀರೆಳೆದು ಅದರ ಪ್ರಮಾಣವನ್ನು ಕುಗ್ಗಿಸುತ್ತಾನೆ. ಕಾಲುವೆಗಳ ಮೂಲಕ ಅಧಿಕ ಪ್ರಮಾಣದಲ್ಲಿ ಹಾಗೂ ವೇಗವಾಗಿ ನೀರನ್ನು ಹರಿ ಬಿಡುವ ಕಾಯಕದಲ್ಲಿ ಮಾನವ ಆಗಾಗ ತೊಡಗುತ್ತಾನೆ.
  • ಯಾವುದಾದರೂ ನಿರ್ದಿಷ್ಟ ಅವಧಿಯಲ್ಲಿ ದೊರೆಯುವ ನೀರಿನ ಪ್ರಮಾಣ ಎಷ್ಟು ಎಂಬುದು ಗಮನಾರ್ಹ ಸಂಗತಿ. ಆಗಾಗ್ಗೆ ವಿರಾಮಕೊಟ್ಟು ನೀರನ್ನು ಉಪಯೋಗಿಸುವುದು ಮಾನವನ ಅಗತ್ಯ. ಉದಾಹರಣೆಗೆ, ವಸಂತ ಋತುವಿನಲ್ಲಿ ಬಹುಪಾಲು ಹೊಲಗದ್ದೆಗಳು ಹೆಚ್ಚಿನ ಪ್ರಮಾಣ ದಲ್ಲಿ ನೀರನ್ನು ಬೇಡಿದರೆ ಚಳಿಗಾಲದಲ್ಲಿ ಅವಕ್ಕೆ ನೀರೇ ಬೇಡ. ಅಲ್ಪಾವಧಿಯಲ್ಲೇ ಹೊಲ ಗದ್ದೆಗಳಿಗೆ ಭಾರೀ ಪ್ರಮಾಣದಲ್ಲಿ ನೀರನ್ನು ಪೂರೈಕೆ ಮಾಡಬೇಕೆಂದರೆ ವರ್ಷವಿಡೀ ಸಮೃದ್ಧವಾಗಿ ನೀರು ಸಂಗ್ರಹಿಸುವ ಮೇಲ್ಮೈ ನೀರಿನ ವ್ಯವಸ್ಥೆ ಇರಬೇಕು.
  • ವಿದ್ಯುತ್ ಪೂರೈಸುವ ಘಟಕಗಳಂಥ ಕೆಲವಕ್ಕೆ ನಿರಂತರ ನೀರಿನ ಅವಶ್ಯವಿದೆ.ತಂಪಾಗಿರಿಸುವುದಕ್ಕಾಗಿ ಅವಕ್ಕೆ ನೀರು ಬೇಕೇ ಬೇಕು. ನೀರಿನ ಸಹಜ ಹರಿವು ವಿದ್ಯುತ್ ಪೂರೈಸುವ ಘಟಕಗಳ ಅಗತ್ಯಕ್ಕಿಂತಲೂ ಕೆಳ ಮಟ್ಟಕ್ಕಿಳಿದಾಗ ಅವುಗಳಿಗಾಗಿ ನೀರಿನ ಪೂರೈಕೆ ಮಾಡಬೇಕಾ ದ ಅಗತ್ಯ ಬೀಳುತ್ತದೆ, ಇಂಥ ಸನ್ನಿವೇಶಗಳನ್ನು ಎದುರಿಸಲು ಸಾಕಷ್ಟು ಮೇಲ್ಮೈ ನೀರಿನ ಸಂಗ್ರಹಣೆಯ ಅವಶ್ಯವಿದೆ.
  • ದೀರ್ಘಾವಧಿಯಲ್ಲಿ, ನಿಸರ್ಗ ದತ್ತವಾದ ಮೇಲ್ಮೈ ಜಲಾನಯನದಲ್ಲಾಗುವ ಸರಾಸರಿ ನೀರಿನ ಬಳಕೆ ಆ ನಿರ್ದಿಷ್ಟ ಜಲಾನಯನದಲ್ಲಿ ಬೀಳುವ ಸರಾಸರಿ ಮಳೆಯ ಪ್ರಮಾಣವನ್ನು ಅವಲಂಬಿಸಿದೆ. ಕಾಲುವೆ ಅಥವಾ ಕೊಳವೆ ಮೂಲಕ ಬೇರೊಂದು ಜಲಾನಯನ ಪ್ರದೇಶದಿಂದ ನೀರು ಹಾಯಿಸಿಕೊಂಡು ಮತ್ತೊಂದು ಜಲಾನಯನ ಪ್ರದೇಶದಲ್ಲಿ ಜಲವರ್ಧನೆ ಮಾಡುವುದು ಸಾಧ್ಯವಿದೆ.
  • ಕೆಳಗೆ ತಿಳಿಸಲಾಗಿರುವ ಯಾವುದೇ ಮೂಲದಿಂದ ನೀರನ್ನು ಹಾಯಿಸಿಕೊಂಡು ಜಲ ವರ್ಧನೆ ಮಾಡುವುದು ಸಾಧ್ಯವಿದೆಯಾದರೂ, ವಾಸ್ತವವಾಗಿ ಹೀಗೆ ಮಾಡುವುದರ ಪ್ರಮಾಣ ನಗಣ್ಯ. ನೀರನ್ನು ಮಲಿನಗೊಳಿಸುವ ಮಾನವನು ಒಂದಷ್ಟು ಪ್ರಮಾಣದ ಮೇಲ್ಮೈ ನೀರನ್ನು "ಕಳೆದು ಕೊಳ್ಳುತ್ತಾನೆ"(ಅಂದರೆ ಉಪಯೋಗಕ್ಕೆ ಬಾರದಂತೆ ಮಾಡುತ್ತಾನೆ). ಜಗತ್ತಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಿಹಿ ನೀರನ್ನು ಪೂರೈಸುವ ರಾಷ್ಟ್ರವೆಂದರೆ ಬ್ರೆಜಿಲ್.ನಂತರದ ಸ್ಥಾನ ರಷ್ಯ ಮತ್ತು ಕೆನಡಾ ಪಾಲಿನದ್ದು.

ನದಿಗಳ ಭೂಗತ ಹರಿವು

[ಬದಲಾಯಿಸಿ]
  • ನದಿಯ ತಳದೊಳಗಿರುವ(=ಉಪ ಮೇಲ್ಮೈ) ಬಂಡೆ ಮತ್ತು ಜಲ್ಲಿಸ್ತರದ ನಡುವಿನಿಂದ ನುಗ್ಗಿ ಬರುವ ಗಣನೀಯ ಪ್ರಮಾಣದ ನೀರು ಕಣ್ಣಿಗೆ ಕಾಣದಂತೆ ನದಿಯ ಕೆಳ ಹರಿವಿಗೆ ಸಾಗಲ್ಪಡುವ ನೀರಿನ ಒಟ್ಟು ಪ್ರಮಾಣದ ಜೊತೆಗೆ ಮಿಳಿತವಾಗುತ್ತದೆ; ಪ್ರವಾಹೋಪಾದಿಯಲ್ಲಿ ಹೀಗೆ ಹರಿಯುವ ನೀರಿನ ಮೊತ್ತಕ್ಕೆ ನೆಲಜಲ ವಲಯ ಎನ್ನಲಾಗಿದೆ. ಬೃಹತ್ ಕಣಿವೆಗಳ ನಡುವೆ ಹರಿಯುವ ನದಿಗಳಲ್ಲಿ ನೀರಿನ ಸಂಗಡ ಅಗೋಚರವಾಗಿ ಮಿಳಿತವಾಗುವ ಇಂಥ ನೀರಿನ ಪ್ರಮಾಣ ಗೋಚರಿಸಿ ಹರಿಯುವ ಪ್ರಮಾಣವನ್ನು ಮೀರಿರುತ್ತದೆ.
  • ನೆಲಜಲ ವಲಯವು ಮೇಲ್ಮೈ ಜಲ ಮತ್ತು ನೈಜ ಅಂತರ್ಜಲದ ನಡುವಿನ ಕ್ರಿಯಾಶೀಲ ಸಂಪರ್ಕ ಸೇತುವಿನಂತೆ ಅನೇಕ ವೇಳೆ ಕಾರ್ಯ ನಿರ್ವಹಿಸುತ್ತದೆ, ಮತ್ತು ಅಂತರ್ಜಲ ಕ್ಷೀಣಿಸಿದಾಗ ಇದೇ ತೆರನಾಗಿ ಅಲ್ಲಿಗೆ ನೀರೊದಗಿಸುತ್ತದೆ. ನೆಲದಡಿ ಕಲ್ಲು ಕರಗಿ ಆದ ಪೊಟರೆಗಳಲ್ಲಿ ಮತ್ತು ಭೂಗತ ನದಿಗಳ ಹರಿವಿನಲ್ಲಿ ಈ ಪ್ರಕ್ರಿಯೆಗೆ ವಿಶೇಷ ಮಹತ್ವ.

ಅಂತರ್ಜಲ

[ಬದಲಾಯಿಸಿ]
  • ರಂಧ್ರಗಳನ್ನುಳ್ಳ ಬಂಡೆ ಮತ್ತು ಸೂಕ್ಷ್ಮ ರಂಧ್ರಿತ ನೆಲದಲ್ಲಿರುವಂಥ ಉಪಮೇಲ್ಮೈ ನೀರು ಅಥವಾ ಅಂತರ್ಜಲವು ಸಿಹಿ ನೀರು ಎನಿಸಿಕೊಳ್ಳುತ್ತದೆ. ನೀರಿನ ಮಟ್ಟದ ಕೆಳಗಿರುವ ಜಲಕುಹರದೊಳಗೆ ಹರಿಯುವ ನೀರೂ ಸಹ ಸಿಹಿ ನೀರೇ. ಉಪಮೇಲ್ಮೈ ನೀರಿನೊಂದಿಗೆ ಅತಿ ನಿಕಟತೆಯುಳ್ಳ ಮೇಲ್ಮೈ ನೀರು ಮತ್ತು ಜಲಕುಹರದ(=ನೀರ್ಪೊಟರೆ) ಆಳದಲ್ಲಿರುವ ನೀರಿನ ನಡುವೆ ಪ್ರತ್ಯೇಕತೆಯನ್ನು ಗುರುತಿಸುವುದು ಕೆಲವೊಮ್ಮೆ ಉಪಯುಕ್ತವಾಗುತ್ತದೆ.("ಭೂಸ್ತರದಲ್ಲೇ ಉಳಿದ ನೀರಿನ ಅವಶೇಷ"ಎಂದು ಕೆಲವೊಮ್ಮೆ ಹೇಳಲಾಗಿದೆ)
  • ಒಳಹರಿವು, ಹೊರಹವು ಮತ್ತು ಸಂಗ್ರಹವಾಗುವುದು :ಈ ಎಲ್ಲ ದೃಷ್ಟಿಯಿಂದಲೂ ಉಪಮೇಲ್ಮೈ ನೀರನ್ನು ಮೇಲ್ಮೈ ನೀರಿನಂತೆಯೇ ಪರಿಗಣಿಸಬಹುದು. ಉಪಮೇಲ್ಮೈ ನೀರಿನ ಸಂಗ್ರಹ ಸಾಮರ್ಥ್ಯ ಮೇಲ್ಮೈ ನೀರಿಗೆ ಇರುವುದಕ್ಕಿಂತಲೂ ಅತ್ಯಂತ ಅಧಿಕ. ಮೇಲ್ಮೈ ನೀರಿಗಿರುವ ಒಟ್ಟಾರೆ ಯ ಒಳ-ಹೊರ ಹರಿವು, ಕೊಡು-ಕೂಡುವಿಕೆಯ ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಈ ಪ್ರಕ್ರಿಯೆಯಿಂದ ಯಾವುದೇ ಘೋರ ಪರಿಣಾಮ ಇಲ್ಲದಿರುವುದರಿಂದ ಉಪಮೇಲ್ಮೈ ನೀರನ್ನು ದೀರ್ಘಾವಧೀ ಉಪಯೋಗಿಸುವುದು ಮಾನವನಿಗೆ ಸುಲಭ ಸಾಧ್ಯ.
  • ಉಪಮೇಲ್ಮೈ ನೀರಿನ ಮಟ್ಟದ ಮೇಲ್ಪದರಿನಲ್ಲಿ ಒಸರುವ ನೀರಿನ ಮೂಲ ಸಾಧಾರಣವಾಗಿ ಬಳಸಲು ಯೋಗ್ಯವಾದ ನೀರಿನ ಒಂದು ಎಲ್ಲೆ ಎನ್ನಬಹುದಾಗಿದೆ. ಮೇಲ್ಮೈ ನೀರಿನ ಸೆಳವು ಉಪಮೇಲ್ಮೈ ನೀರಿಗೆ ಸೇರಿಕೊಳ್ಳುವುದೇ ಅದರ ಒಳ ಹರಿವಿನ ಮೂಲ. ಬುಗ್ಗೆಗಳೇಳುವುದು ಮತ್ತು ಸಾಗರಗಳಿಗೆ ನೀರು ಸೇರುವುದು ಉಪಮೇಲ್ಮೈ ನೀರಿನ ನೈಸರ್ಗಿಕ ಹೊರ ಹರಿವು. ಮೇಲ್ಮೈ ನೀರಿನ ಮೂಲ ಗಣನೀಯ ಪ್ರಮಾಣದಲ್ಲಿ ಆವಿಯಾಗುವ ಪ್ರಕ್ರಿಯೆಗೆ ಒಳಪಟ್ಟರೆ ಉಪಮೇಲ್ಮೈ ನೀರಿನ ಮೂಲ ಲವಣಾಂಶ ಭರಿತವಾಗುತ್ತದೆ.
  • ನೀರಾವರಿ ಜಮೀನನ್ನಾಗಿ ಪರಿವರ್ತಿಸಿ ಕೃತಕವಾಗಿಯೂ ಅಥವಾ ನೀರ್ಬತ್ತುವುದರಿಂದಾಗಿ ನೈಸರ್ಗಿಕವಾಗಿಯೂ ಇಂಥ ಪರಿಸ್ಥಿತಿ ಉದ್ಭವಿಸುತ್ತದೆ. ಉಪಮೇಲ್ಮೈ ಜಲ ಮೂಲವನ್ನು ಕರಾವಳಿ ಪ್ರದೇಶದಲ್ಲಿ ಮಾನವನು ಉಪಯೋಗಿಸಲು ತೊಡಗಿದಾಗ ಸಾಗರಕ್ಕೆ ನೀರ್ಬಸಿದು ಮಣ್ಣು ಉಪ್ಪಾಗಲು ಕಾರಣವಾಗುತ್ತದೆ. ಜಲ ಮಾಲಿನ್ಯ ಮಾಡುವ ಮೂಲಕ ಮಾನವನು ಉಪಮೇಲ್ಮೈ ನೀರನ್ನು ಕಳೆದುಕೊಳ್ಳಲು ಕಾರಣಕರ್ತನಾಗುತ್ತಾನೆ(ಅಂದರೆ ಉಪಯೋಗಕ್ಕೆ ಬಾರದಂತೆ ಮಾಡುತ್ತಾನೆ). ಅಣೆಕಟ್ಟುಗಳನ್ನು ಕಟ್ಟುವುದರಿಂದ ಅಥವಾ ಒಡ್ಡುಗಳನ್ನು ಹಾಕಿಕೊಳ್ಳ ಗಳನ್ನು ನಿರ್ಮಿಸುವುದರಿಂದ ಉಪಮೇಲ್ಮೈ ಜಲ ಮೂಲಕ್ಕೆ ಮಾನವನು ನೀರಿನ ಒಳ ಹರಿವನ್ನು ರೂಪಿಸುವುದು ಸಾಧ್ಯವಿದೆ.

ನಿರ್ಲವಣೀಯ ಪ್ರಕ್ರಿಯೆ

[ಬದಲಾಯಿಸಿ]
  • ಕ್ಷಾರ ಭರಿತ ನೀರಿನಿಂದ (ಸಾಮಾನ್ಯವಾಗಿ ಸಮುದ್ರದ ನೀರು) ಲವಣಾಂಶವನ್ನು ಬೇರ್ಪಡಿಸಿ ಸಿಹಿ ನೀರನ್ನಾಗಿ ಪರಿವರ್ತಿಸುವ ಕ್ರಮಕ್ಕೆ ನಿರ್ಲವಣೀಯ ಪ್ರಕ್ರಿಯೆ ಎನ್ನಲಾಗಿದೆ. ಬಟ್ಟಿ ಇಳಿಸುವಿಕೆ ಮತ್ತು ವಿಲೋಮ ಪರಾಸರಣ(=ಅರೆ ಪಾರಕ ಪೊರೆಯ ಮೂಲಕ ಹರಿದು ಹೆಚ್ಚು ಸಾರಯುತ ದ್ರಾವಣವನ್ನು ಸೇರುವುದರ ವಿರುದ್ಧದ ಕ್ರಮ)-ಇವು ಬಹುವಾಗಿ ಬಳಕೆಯಲ್ಲಿರುವ ನಿರ್ಲವಣೀಯ ಪ್ರಕ್ರಿಯೆ.
  • ಇರುವ ವಿವಿಧ ಜಲ ಮೂಲಗಳಿಗೆ ಹೋಲಿಸಿದಲ್ಲಿ ನಿರ್ಲವಣೀಯ ಪ್ರಕ್ರಿಯೆ ಸದ್ಯಕ್ಕಂತೂ ಭಾರೀ ವೆಚ್ಚದಾಯಕ, ಮತ್ತು ಈ ಕ್ರಮದಿಂದ ದೊರಕುವ ನೀರು ಮಾನವನ ಅತಿ ಕನಿಷ್ಠ ಮಟ್ಟದ ಬಳಕೆಯನ್ನು ಮಾತ್ರ ನೀಗಿಸಬಲ್ಲದು. ನಿರಾರ್ದ್ರ ಪ್ರದೇಶಗಳಲ್ಲಿ ಭಾರೀ ಬೆಲೆ ತೆತ್ತು ಬಳಸುವಂಥವರಿಗೆ(ಮನೆ ಮತ್ತು ಉದ್ಯಮ ಬಳಕೆದಾರರು) ಮಾತ್ರ ಇದು ಆರ್ಥಿಕವಾಗಿ ಸಾಧ್ಯವಾಗುವಂಥದ್ದು. ಪ್ರಸ್ತುತ ಪರ್ಷಿಯಾ ಕೊಲ್ಲಿ ರಾಷ್ಟ್ರದಲ್ಲಿ ಇದರ ಬಳಕೆ ವ್ಯಾಪಕವಾಗಿದೆ.

ಘನೀಕೃತ ನೀರು

[ಬದಲಾಯಿಸಿ]
  • ನೀರ್ಗಲ್ಲುಗಳನ್ನು ಜಲಮೂಲವನ್ನಾಗಿ ಬಳಸಿಕೊಳ್ಳಬೇಕು ಎಂಬ ಹಲವಾರು ಯೋಜನೆಗಳನ್ನು ಪ್ರಸ್ತಾಪಿಲ್ಪಟ್ಟಿವೆಯಾದರೂ ಈ ತನಕ ನವೀನ ಮಾದರಿ ಎಂಬುದಕ್ಕಷ್ಟೇ ಇದು ಸೀಮಿತವಾಗಿದೆ. ನೀರ್ಗಲ್ಲಿನ ಕೆಳಗಿನಿಂದ ಹರಿದು ಬರುವ ನೀರನ್ನು ಮೇಲ್ಮೈ ನೀರು ಎಂದೇ ಪರಿಗಣಿಸಲಾಗಿದೆ. ಪೃಥ್ವಿಯ ಮೇಲಿರುವ ಅತ್ಯುನ್ನತ ಶಿಖರಗಳಲ್ಲಿ ಒಂದಾದ "ಜಗತ್ತಿನ ಮೇಲ್ಚಾವಣಿ" ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿಮಾಲಯ, ಉತ್ತರ ಧ್ರುವ ಪ್ರದೇಶದಲ್ಲಿ ಘನೀಕೃತಗೊಳ್ಳುವ ಹಿಮಕ್ಕೂ ಮಿಗಿಲಾದ ತಂಪನ್ನು ಹೊಂದಿರುವ ಭಾರೀ ಪ್ರಮಾಣದ ನೀರ್ಗಲ್ಲು ಪ್ರದೇಶವನ್ನು ಒಳಗೊಂಡಿದೆ.
  • ಏಷ್ಯದ ಹತ್ತು ಬೃಹತ್ ನದಿಗಳ ಉಗಮ ಸ್ಥಾನ ಇದಾಗಿದ್ದು, ಒಂದು ಶತಕೋಟಿಗೂ ಅಧಿಕ ಮಂದಿಯ ಬದುಕು ಈ ನದಿಗಳ ಮೇಲೆ ಅವಲಂಬಿಸಿದೆ. ಜಾಗತಿಕ ಮಟ್ಟದಲ್ಲಿ ಇರುವುದಕ್ಕಿಂಲೂ ಹೆಚ್ಚಿನ ವೇಗದಲ್ಲಿ ಇಲ್ಲಿಯ ಉಷ್ಣತೆ ಏರುತ್ತಿರುವುದೊಂದು ಕಳವಳದ ಸಂಗತಿ. ಜಾಗತಿಕ ಮಟ್ಟದ ಉಷ್ಣತೆಯ ಹೆಚ್ಚಳ ಈಚಿನ ಶತಕದಲ್ಲಿ 0.7 ಡಿಗ್ರಿ ಸುತ್ತಮುತ್ತ ಇದ್ದರೆ ನೇಪಾಳದಲ್ಲಿ ಅದು ಈಚಿನ ದಶಕದಲ್ಲೇ 0.6 ಡಿಗ್ರಿಯಷ್ಟು ಏರಿದೆ.

ಸಿಹಿ ನೀರಿನ ಉಪಯೋಗಗಳು

[ಬದಲಾಯಿಸಿ]
  • ಎರಡು ಬಗೆಯಾಗಿ ಸಿಹಿ ನೀರಿನ ಉಪಯೋಗವನ್ನು ವಿಂಗಡಿಸಲಾಗಿದೆ. ಒಂದು ವ್ಯಯಿಸಬಹುದಾದ್ದು ಮತ್ತೊಂದು ವ್ಯಯಿಸಲಾಗದ್ದು ("ಮರು ಬಳಕೆಗೆ ಯೋಗ್ಯ"ವಾದದ್ದು ಎಂದು ಕೆಲವೊಮ್ಮೆ ಹೇಳಲಾಗುತ್ತದೆ). ಬೇರೊಂದು ಬಳಕೆಗಾಗಿ ಕೂಡಲೇ ದೊರಕದಿರುವ ನೀರು ವ್ಯಯಿಸ ಬಹುದಾದ ವರ್ಗಕ್ಕೆ ಸೇರಿದೆ. ನೀರನ್ನು ಒಂದು ಉತ್ಪನ್ನ ಎಂದು ಬಗೆದರೆ(ಉದಾ: ಕೃಷಿ ಉತ್ಪನ್ನ), ಉಪಮೇಲ್ಮೈ ಪದರಿಗೆ ನುಸುಳುವ ಮತ್ತು ಆವಿಯಾಗಿ ಹೋಗುವ ನೀರು ವ್ಯಯಿಸಬಹುದಾದದ್ದು ಎಂಬ ವರ್ಗಕ್ಕೆ ಸೇರುತ್ತದೆ.
  • ಕೊಳಚೆ ನೀರು ಅಥವಾ ಹೀಗೆ ಕಲುಶಿತಗೊಂಡಿರುವ ನೀರನ್ನು ಶುದ್ಧೀಕರಣ ಪ್ರಕ್ರಿಯೆಗೆ ಒಳಪಡಿಸಿ ಮೇಲ್ಮೈ ನೀರಿಗೆ ಹರಿ ಬಿಟ್ಟು, ಆ ನೀರನ್ನು ಅನ್ಯೋಪಯೋಗ ಮಾಡಿದರೆ ಆಗ ಆ ನೀರು ವ್ಯಯಿಸಲಾಗದ್ದು ಎಂಬ ವರ್ಗಕ್ಕೆ ಸೇರುತ್ತದೆ.

ಸಿಹಿ ನೀರಿನ ಮೂಲಗಳು

[ಬದಲಾಯಿಸಿ]
  • ನೀರಾವರಿ ಚಟುವಟಿಕೆಗಾಗಿ ಜಗತ್ತಿನಾದ್ಯಂತ 69% ನೀರನ್ನು ಬಳಸಲಾಗುತ್ತದೆ ಎಂಬುದೊಂದು ಅಂದಾಜಿದೆ. ಇದರಲ್ಲಿ 15-35% ನಷ್ಟು ನೀರು ವ್ಯರ್ಥವಾದದ್ದೂ, ಸಮರ್ಥನೀಯವಲ್ಲದ್ದೂ ಆಗಿದೆ.[] ಯಾವುದೇ ಬೆಳೆಯನ್ನು ಬೆಳೆಯಲು ಪ್ರಪಂಚದ ಕೆಲವೆಡೆ ನೀರಾವರಿ ಸೌಕರ್ಯದ ಅಗತ್ಯವಿದ್ದರೆ ಇನ್ನು ಕೆಲವು ಪ್ರದೇಶಗಳಲ್ಲಿ ಲಾಭದಾಯಕ ಬೆಳೆಗಾಗಿಯೋ ಅಥವಾ ಇಳುವರಿಯನ್ನು ವೃದ್ಧಿಸಲೋ ನೀರಾವರಿ ಬೇಕೆನಿಸಿದೆ.
  • ಬೆಳೆ ಇಳುವರಿ, ನೀರಿನ ಬಳಕೆ, ಮೂಲ ಸೌಲಭ್ಯ ಮತ್ತು ಉಪಕರಣಗಳ ಮೇಲೆ ಹೂಡಲಾದ ಬಂಡವಾಳ ಇವೆಲ್ಲವುಗಳ ಜೊತೆ ಬೇರೆ ಬೇರೆ ನೀರಾವರಿ ವಿಧಾನಗಳು ರಾಜಿ ವಿನಿಮಯ ಮಾಡಿಕೊಳ್ಳುತ್ತವೆ. ಉಳುಮೆಯ ಸಾಲಿನ ಗುಂಟ ನೀರು ಹಾಯಿಸುವುದು ಮತ್ತು ಸಿಂಪರ ಣೆ ಎಂಬ ನೀರಾವರಿ ವಿಧಾನಗಳಿಗೆ ತಗಲುವ ವೆಚ್ಚ ಹೇಗೆ ಕಡಿಮೆಯೋ ಹಾಗೇ ಅವಕ್ಕಿರುವ ಸಾಮರ್ಥ್ಯ ಕೂಡಾ ಅಲ್ಪ.
  • ಯಾಕೆಂದರೆ ಹೆಚ್ಚಿನ ಪ್ರಮಾಣದ ನೀರು ಆವಿಯಾಗುವುದರಿಂದ, ಹರಿದು ಹೋಗುವುದರಿಂದ ಮತ್ತು ಬೇರು ಮಟ್ಟದಿಂದ ಕೆಳಕ್ಕಿಳಿಯುವುದರಿಂದ ನೀರು ಕೈ ತಪ್ಪಿ ಹೋಗುತ್ತದೆ. ಹನಿ ನೀರಾವರಿ, ಹಾಯಿ ನೀರಾವರಿ ಮತ್ತು ನೆಲ ಮಟ್ಟದಲ್ಲೇ ಕಾರ್ಯನಿರ್ವಹಿಸುವ ಸಿಂಪರಣಾ ವ್ಯವಸ್ಥೆಯ ನೀರಾವರಿಯು ಇನ್ನುಕೆಲವು ಸಮರ್ಥ ವಿಧಾನಗಳಾಗಿವೆ. ಈ ವ್ಯವಸ್ಥೆಗಳು ಕೊಂಚ ವೆಚ್ಚದಾಯಕ ಎನಿಸಿದರೂ ಹರಿದು ಹೋಗುವ, ಇಳಿದು ಕಾಣೆಯಾಗುವ ಮತ್ತು ಆವಿಯಾಗಿ ವಾತಾವರಣದಲ್ಲಿ ಐಕ್ಯವಾಗುವುದನ್ನು ಕನಿಷ್ಠ ಪ್ರಮಾಣಕ್ಕೆ ತಗ್ಗಿಸುತ್ತದೆ.
  • ಸೂಕ್ತ ನಿರ್ವಹಣೆ ಇಲ್ಲದ ಯಾವುದೇ ನೀರಾವರಿ ವ್ಯವಸ್ಥೆಯು ಹೇಗೆ ನಿಷ್ಪ್ರಯೋಜಕವೋ ಹಾಗೆಯೇ ಸನ್ನಿವೇಶಕ್ಕೆ ತಕ್ಕಂತೆ ಸಕಾಲದಲ್ಲಿ ನೀರೊದಗಿಸುವಂಥ ಜವಾಬ್ದಾರಿಯುತವಾದ ಯಾವುದೇ ಬಗೆಯ ನೀರಾವರಿ ವ್ಯವಸ್ಥೆಗೆ ತನ್ನದೇ ಆದ ಗರಿಷ್ಠ ಸಾಮರ್ಥ್ಯ ಇರುತ್ತದೆ. ಉಪಮೇಲ್ಮೈ ನೀರಿನ ಕ್ಷಾರ ಗುಣ ಮಾತ್ರ ಅಷ್ಟಾಗಿ ಪರಿಗಣನೆಗೆ ಬಂದಿಲ್ಲ.
  • ಜಲ ಕೃಷಿ(=ಮಣ್ಣಿನಲ್ಲಿ ಪೌಷ್ಟಿಕಾಂಶ ಕರಗಿರುವ ನೀರಿನಲ್ಲಿ ಬೇಸಾಯ)ಎಂಬುದು ಪುಟ್ಟದಾದರೂ ಸಹಾ ವಿಕಸನ ಹೊಂದುತ್ತಿರುವ ನೀರಿನ ಮತ್ತೊಂದು ಉಪಯೋಗ. ಮತ್ಸ್ಯೋದ್ಯಮಕ್ಕಾಗಿ ಬಳಸಲಾಗುವ ಸಿಹಿ ನೀರನ್ನು(=ಮೀನು ಸಾಕಾಣಿಕೆ) ಕೃಷಿಗಾಗಿ ಬಳಸಲಾಗುವ ನೀರು ಎಂದು ಪರಿಗಣಿಸಲಾಗಿದೆ. ಆದರೆ ನೀರಾವರಿಗೆ ಕೊಟ್ಟಿರುವ ಆದ್ಯತೆಯನ್ನು ಇದಕ್ಕೆ ನೀಡಿಲ್ಲ.(ನೋಡಿ: ಅರಳ್ ಸೀ ಮತ್ತು ಪಿರಮಿಡ್‌ ಲೇಕ್).
  • ಜಾಗತಿಕ ಮಟ್ಟದಲ್ಲಿನ ಜನ ಸಂಖ್ಯಾ ಸ್ಫೋಟ ಆಹಾರ ಪದಾರ್ಥಗಳ ಬೇಡಿಕೆಯನ್ನು ಹೆಚ್ಚಿಸಿದೆ, ಸರಬರಾಜಾಗುವ ನೀರಿನ ಪ್ರಮಾಣ ಮಾತ್ರ ಸ್ಥಿರವಾಗಿದೆ.ಹೀಗಾಗಿ ಸುಧಾರಿತ ಬೇಸಾಯ ಪದ್ಧತಿ ಮತ್ತು ತಂತ್ರಜ್ಞಾನ, ಕೃಷಿ ನೀರಿನ[] ಸಮರ್ಥ ನಿರ್ವಹಣೆ, ಬೆಳೆ ವೈವಿಧ್ಯ,ನೀರನ್ನು ನಿಭಾಯಿಸುವಿಕೆ-ಇವೆಲ್ಲವನ್ನೂ ಅಳವಡಿಸಿಕೊಂಡು ಅಲ್ಪ ನೀರಿನಲ್ಲಿ ಅಧಿಕ ಇಳುವರಿ ತೆಗೆಯುವ ವಿಧಾನ[] ವನ್ನು ಅರಸಲಾಗುತ್ತಿದೆ.

ಕೈಗಾರಿಕಾ ಕ್ರಾಂತಿ

[ಬದಲಾಯಿಸಿ]
  • ಜಗತ್ತಿನಾದ್ಯಂತ ಕೈಗಾರಿಕಾ ರಂಗಕ್ಕೆಂದು ಬಳಸಲಾಗುವ ನೀರಿನ ಪ್ರಮಾಣ 15% ಎಂಬುದೊಂದು ಅಂದಾಜು. ವಿದ್ಯುತ್ ಉತ್ಪಾದನೆಗಾಗಿಯೂ(ಜಲ ವಿದ್ಯುತ್ ಘಟಕ),ವಿದ್ಯುತ್ ಪೂರೈಕಾ ಘಟಕಗಳಿಂದ ಶೈತ್ಯಾ ಸಾಧನವಾಗಿಯೂ,ಅದಿರು ಮತ್ತು ತೈಲ ಸಂಸ್ಕರಣೆ ಯಲ್ಲಿ ರಾಸಾಯನಿಕ ಪ್ರಕ್ರಿಯೆಗಾಗಿಯೂ ಹಾಗೂ ಉತ್ಪಾದನಾ ಘಟಕಗಳೂ ದ್ರಾವಣವಾಗಿ ನೀರನ್ನು ಭಾರೀ ಪ್ರಮಾಣದಲ್ಲಿ ಉಪಯೋಗಿಸುತ್ತವೆ.
  • ಕೈಗಾರಿಕಾ ಕ್ಷೇತ್ರದಲ್ಲಿನ ನೀರಿನ ಬಳಕೆ ಭಾರೀ ವ್ಯತ್ಯಾಸಕ್ಕೆ ಒಳಪಟ್ಟಿರುತ್ತದೆಯಾದರೂ ಅದರ ಒಟ್ಟಾರೆ ಉಪಯೋಗ ಬೇಸಾಯಕ್ಕೆ ಬೇಕಾಗುವ ಪ್ರಮಾಣಕ್ಕಿಂತಲೂ ಅಲ್ಪದ್ದು.
    ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ನೀರಿನ ಬಳಕೆಯಾಗುತ್ತದೆ. ಜಲ ವಿದ್ಯುತ್ತನ್ನು ಜಲ ಶಕ್ತಿಯಿಂದ ಪಡೆಯಲಾಗುತ್ತದೆ. ಉತ್ಪಾದನಾ ಸಾಧನವೊಂದಕ್ಕೆ ಜೋಡಿಸಲಾದ ರೆಕ್ಕೆಗಳುಳ್ಳ ಜಲ ಚಕ್ರಕ್ಕೆ ರಭಸದಿಂದ ನೀರು ಹಾಯಿಸಿದಾಗ ವಿದ್ಯುತ್ ಉತ್ಪಾದನೆಯಾಗುತ್ತದೆ. ಜಲ ವಿದ್ಯುತ್ತು ಮಿತ ವ್ಯಯದ,ಮಲಿನ ಮಾಡದ,ಪುನರ್ಬಳಕೆ ಮಾಡಬಹುದಾದ ಶಕ್ತಿ ಮೂಲ.
  • ಸೂರ್ಯನಿಂದ ಶಕ್ತಿ ಪೂರೈಕೆಯಾಗುತ್ತದೆ. ಸೂರ್ಯ ಬಿಡುವ ಉಷ್ಣದಿಂದ ನೀರು ಆವಿಯಾಗುತ್ತದೆ. ಹೀಗೆ ಆವಿಯಾದ ನೀರು ಬಾಷ್ಪೀಕರಣ ಪ್ರಕ್ರಿಯೆಗೆ ಒಳಪಟ್ಟು ಎತ್ತರದ ಪ್ರದೇಶದಲ್ಲಿ ಹನಿ ಹನಿಯಾಗಿ ಬೀಳುವುದೇ ಮಳೆ,ಅಲ್ಲಿ ಬಿದ್ದ ಮಳೆ ಕೆಳಕ್ಕೆ ಹರಿದು ಬರುತ್ತದೆ. ತ್ರೀ ಜಾರ್ಜ್ಸ್‌ ಡ್ಯಾಮ್‌ ಅತ್ಯಂತ ಬೃಹತ್ ಜಲ ವಿದ್ಯುತ್‌ ಉತ್ಪಾದನಾ ಕೇಂದ್ರ. ಪ್ರಚಂಡ ಒತ್ತಡದಲ್ಲಿ, ಅಂದರೆ ಜಲಸ್ಫೋಟದ ರೀತಿಯಲ್ಲಿ ನೀರನ್ನು ಹರಿಬಿಡಲಾಗುವುದು. ನೀರುಗನ್ನುಗಳ ಮೂಲಕ ಭಾರೀ ಒತ್ತಡದಲ್ಲಿ ನೀರು ಬಿಡುವ ಮತ್ತು ನೀರು ನಿಲ್ಲಿಸುವ ವ್ಯವಸ್ಥೆಯನ್ನೂ ದುಡಿಸಿಕೊಳ್ಳಲಾಗುವುದು. *ಸುರಕ್ಷಿತ ಕ್ರಮದಲ್ಲೂ, ಮತ್ತು ಪರಿಸರಕ್ಕೆ ಹಾನಿಯಾಗದಂತೆಯೂ ಇದು ಕಾರ್ಯ ನಿರ್ವಹಿಸುತ್ತದೆ. ಯಂತ್ರೋಪಕರಣಗಳು ಅನಪೇಕ್ಷಿತ ಉಷ್ಣಕ್ಕೆ ಏರದಂತೆಯೂ, ಗರಗಸ ಅತ್ಯುಷ್ಣತೆಯ ಮಿತಿ ಮೀರದಂತೆ ನೋಡಿಕೊಳ್ಳಲೂ ಇದನ್ನು ಬಳಸಲಾಗುತ್ತದೆ. ರಾಸಾಯನಿಕ ದ್ರಾವಣವನ್ನಾಗಿ ಉಪಯೋಗಿಸುವುದರ ಜೊತೆಗೆ ಹಬೆಯಿಂದ ಜಲಚಕ್ರ ತಿರುಗಿಸಲು ಮತ್ತು ಉಷ್ಣತೆಯನ್ನು ತಗ್ಗಿಸುವಂಥ ಅನೇಕ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ನೀರನ್ನು ಬಳಸಲಾಗುತ್ತದೆ.
  • ಶುದ್ಧೀಕರಣ ಪ್ರಕ್ರಿಯೆಗೆ ಒಳಪಡಿಸದೆ ಕೈಗಾರಿಕಾ ಘಟಕಗಳಿಂದ ಹೊರ ಬಿಡುವ ನೀರು ಮಾಲಿನ್ಯವನ್ನು ಉಂಟು ಮಾಡುತ್ತದೆ. ಹೀಗೆ ಹೊರ ಚೆಲ್ಲಲಾದ ದ್ರವ (ರಾಸಾಯನಿಕ ಮಾಲಿನ್ಯ)ಮತ್ತು ಉಷ್ಣ ನಿವಾರಕ ತ್ಯಾಜ್ಯ(ಶಾಖ ಮಾಲಿನ್ಯ)ವನ್ನು ಒಳಗೊಂಡಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಉಪಯೋಗಿಸುವುದಕ್ಕಾಗಿ ಶುದ್ಧ ನೀರಿನ ಅಗತ್ಯವಿದೆ.ಇದಕ್ಕಾಗಿ ಅವು ನೀರಿನ ಶುದ್ಧೀಕರಣಕ್ಕಾಗಿ ಹಲವಾರು ತಂತ್ರೋಪಾಯಗಳನ್ನು ಬಳಸುತ್ತವೆ, ಪೂರೈಕೆ ಹಾಗೂ ಹೊರ ಬಿಡುವುದು-ಎರಡಕ್ಕೂ ಇದು ಅನ್ವಯ.

ಮನೆಯಲ್ಲಿ ನೀರಿನ ಬಳಕೆ

[ಬದಲಾಯಿಸಿ]
  • ಅಂದಾಜೊಂದರ ಪ್ರಕಾರ ಪ್ರಪಂಚದಾದ್ಯಂತ ಮನೆಗೆಂದು ಬಳಸುವ ಒಟ್ಟು ನೀರಿನ ಪ್ರಮಾಣ 15%. ಕುಡಿಯಲು,ಸ್ನಾನ ಮಾಡಲು,ಅಡಿಗೆ ತಯಾರಿಸಲು,ನಿರ್ಮಲಿನೀಕರಣಕ್ಕಾಗಿ ಮತ್ತು ತೋಟಗಾರಿಕೆಗಾಗಿ ಬಳಸಲಾಗುವ ಒಟ್ಟು ನೀರು ಇದರಲ್ಲಿ ಸೇರಿದೆ. ತೋಟಗಾರಿಕೆಯನ್ನು ಹೊರತು ಪಡಿಸಿ ಮನೆ ಬಳಕೆಗಾಗಿ ಪ್ರತಿ ಮನುಷ್ಯನ ಪ್ರತಿ ದಿನದ ಮೂಲಭೂತ ನೀರಿನ ಅವಶ್ಯಕತೆ ಸರಿಸುಸಮಾರು 50 ಲೀಟರ್‌ ಎಂದು ಪೀಟರ್‌ ಗ್ಲೀಕ್‌ ಎಂಬುವರು ಅಂದಾಜಿಸಿದ್ದಾರೆ.
  • ಸೇವಿಸುವುದರಿಂದ ಅಥವಾ ಬಳಸುವುದರಿಂದ ತತ್‌ಕ್ಷಣದಲ್ಲಾಗಲೀ ಅಥವಾ ಕೆಲವು ದಿನಗಳ ನಂತರವಾಗಲೀ ಅಡ್ಡ ಪರಿಣಾಮ ಬೀರದಂಥ ಉತ್ಕೃಷ್ಟ ಗುಣ ಮಟ್ಟದ ನೀರೇ ಕುಡಿಯುವ ನೀರು. ಇಂಥ ನೀರನ್ನು ಕುಡಿಯಲು ಯೋಗ್ಯವಾದ ನೀರು ಎನ್ನಲಾಗಿದೆ. ಸೇವಿಸಲು ಮತ್ತು ಅಡಿಗೆ ಮಾಡಲು ವಾಸ್ತವವಾಗಿ ಕನಿಷ್ಠ ಪ್ರಮಾಣದ ನೀರು ಬಳಕೆಯಾಗುವುದಾದರೂ ಅಭಿವೃದ್ಧಿ ಹೊಂದಿದ ಬಹುಪಾಲು ದೇಶಗಳಲ್ಲಿ ಮನೆ ಬಳಕೆ, ವಾಣಿಜ್ಯ ಮತ್ತು ಕೈಗಾರಿಕೆಗಳಲ್ಲಿನ ಉಪಯೋಗಕ್ಕೂ ಕುಡಿಯುವ ನೀರಿನ ಗುಣ ಮಟ್ಟದ ನೀರನ್ನೇ ಪೂರೈಕೆ ಮಾಡಲಾಗುತ್ತದೆ.

ಮನರಂಜನೆ

[ಬದಲಾಯಿಸಿ]
ನದಿಯ ಕಡಿದಾದ ಇಳಿಜಾರಿನಲ್ಲಿ ಜಲ ಸಾಹಸ
  • ಮನರಂಜನೆಯ ಉದ್ದೇಶಕ್ಕಾಗಿ ಬಳಸಲಾಗುವ ನೀರಿನ ಪ್ರಮಾಣ ಕಡಿಮೆಯೇ ಆದರೂ ಶೇಖಡಾವಾರು ಲೆಕ್ಕದಲ್ಲಿ ಅದರ ಬಳಕೆ ಏರುಮುಖದಲ್ಲಿದೆ. ಮನರಂಜನೆಯ ಉದ್ದೇಶಕ್ಕೆ ಬಳಸಲಾಗುವ ನೀರಿನ ನೆಂಟಸ್ತಿಕೆ ಹೆಚ್ಚಾಗಿ ಅಣೆಕಟ್ಟುಗಳ ಹಿನ್ನೀರಿನ ಜೊತೆ ಇರುತ್ತದೆ. ಜಲಾನಯನ ಗಳಲ್ಲಿನ ನೀರು ಭರ್ತಿ ಇದ್ದಾಗಲೂ ಹರಿ ಬಿಡದೇ ಅದನ್ನು ಹಿಡಿದಿಟ್ಟರೆ ಅಂಥದ್ದನ್ನು ಮನರಂಜನೋದ್ದೇಶದ ನೀರು ಎಂದು ವರ್ಗಿಕರಿಸಬಹುದು.
  • ಕೆಲವು ಜಲಾನಯನಗಳಿಂದ ನೀರನ್ನು ಬಿಡುಗಡೆ ಮಾಡಿದಾಗ ಸಾಹಸಮಯ ದೋಣಿ ಕ್ರೀಡೆಯನ್ನು ಅದು ಉತ್ತೇಜಿಸುತ್ತದೆ.ಇದು ಕೂಡಾ ಮನರಂಜನೆಯ ಉದ್ದೇಶದ್ದೇ. ಗಾಳಹಾಕಿ ಮೀನು ಹಿಡಿಯುವುದು,ವಾಟರ್‌ ಸ್ಕೀಯಿಂಗ್‌ ಕ್ರೀಡೆಯಲ್ಲಿ ತೊಡಗುವುದು,ನಿಸರ್ಗೋತ್ಸಾಹ ಮತ್ತು ಈಜುವುದು ಇನ್ಕೆಲವು ಉದಾಹರಣೆಗಳು.
  • ಮನರಂಜನೆಗಾಗಿ ಬಳಸುವ ನೀರು ಸಾಮಾನ್ಯವಾಗಿ ಸೇರುವುದು ವ್ಯಯಿಸಲಾಗದ ವರ್ಗಕ್ಕೆ. ಗಾಲ್ಫ್‌ ಆಟದ ಮೈದಾನ ಅತಿ ಹೆಚ್ಚು ಪ್ರಮಾಣದ ನೀರನ್ನು ಕುಡಿಯುತ್ತದೆ, ವಿಶೇಷವಾಗಿ ಒಣ ಪ್ರದೇಶಕ್ಕೆ ಇದು ಅನ್ವಯ. ಮೋಜಿನ ತೋಟಗಾರಿಕೆಗಾಗಿ(ಖಾಸಗಿಯದನ್ನೂ ಒಳಗೊಂಡು) ಹಾಯಿಸಲಾಗುವ ನೀರು, ಜಲ ಮೂಲದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ವಿಶ್ವಾಸನೀಯ ದತ್ತಾಂಶ ದೊರಕದಿರುವುದೇ ಇದಕ್ಕೆ ಕಾರಣ.
  • ನೀರು ಪೋಲಾಗುತ್ತಿದೆ ಎಂಬ ಪರಿಸರವಾದಿಗಳ ಕೂಗನ್ನು ದಿಕ್ಚ್ಯುತಗೊಳಿಸುವ ಉದ್ದೇಶದಿಂದ ಕ್ಯಾಲಿಫೋರ್ನಿಯಾ ಸರಕಾರವೂ ಸೇರಿದಂತೆ ಕೆಲವು ಸರಕಾರಗಳು ಗಾಲ್ಫ್‌ ಮೈದಾನಕ್ಕೆ ಹರಿಸಲಾಗುವ ನೀರು ಕೃಷಿ ಉದ್ದೇಶದ್ದೆಂಬ ಹಣೆ ಪಟ್ಟಿ ಹಚ್ಚಿ ಕಾಯಿದೆ ರೂಪಿಸಿವೆ. ಮೇಲಿನ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕಿದರೆ ಪುನರ್ವಿತರಣೆಯ ನೈಜ ಅಂಕಿಅಂಶ ಶೂನ್ಯದ ಸಮೀಪಕ್ಕೆ ಬರಬಹುದು.
  • ನಿಗದಿತ ಸಮಯ ಮತ್ತು ಸ್ಥಳದಲ್ಲಿ ಅನ್ಯ ಬಳಕೆದಾರರಿಗೆ ದೊರಕಬೇಕಾದ ನೀರಿನ ಪ್ರಮಾಣ ಮನರಂಜನಾ ಬಳಕೆಯಿಂದಾಗಿ ಕಡಿಮೆಯಾಗಬಹುದು. ಉದಾಹರಣಗೆ: ನಾಟಿ ಮಾಡುವ ಚೈತ್ರ ಮಾಸದ ಸಂದರ್ಭದಲ್ಲಿ ರೈತರಿಗೆ ಸಿಗಬೇಕಾದ ನೀರು, ಬೇಸಿಗೆಯ ಅಂತ್ಯದಲ್ಲಿ ದೋಣಿ ವಿಹಾರಕ್ಕೆಂದು ನೀರನ್ನು ಅಣೆಕಟ್ಟೆಗಳಲ್ಲಿ ಹಿಡಿದಿಡುವುದರಿಂದಾಗಿ ರೈತರಿಗೆ ದೊರಕದಿರಬಹುದು. ವಿದ್ಯುತ್‌ ಶಕ್ತಿಯ ತೀವ್ರ ಬೇಡಿಕೆ ಇರುವಾಗ ಜಲ ಸಾಹಸ ಕ್ರೀಡೆಗೆಂದು ನೀರನ್ನು ಹರಿ ಬಿಟ್ಟರೆ ಆ ನೀರು ಜಲ ವಿದ್ಯುತ್‌ ಉತ್ಪಾದನೆಗೆ ಲಭ್ಯವಾಗದಿರಬಹುದು.

ಪರಿಸರೀಯ

[ಬದಲಾಯಿಸಿ]
  • ಶೇಕಡಾ ವಾರು ಪ್ರಮಾಣದಲ್ಲಿ ವೃದ್ಧಿಯಾಗುತ್ತಿರುವುದನ್ನು ಬಿಟ್ಟರೆ ಪರಿಸರಕ್ಕೆಂದೇ ಖಚಿತವಾಗಿ ಬಳಸಲಾಗುವ ನೀರಿನ ಪ್ರಮಾಣ ಅತ್ಯಲ್ಪ. ಕೃತಕ ಜೌಗು ಭೂಮಿಯ ನಿರ್ಮಾಣ, ವನ್ಯ ಮೃಗಗಳು ವಾಸಿಸಲು ಅನುವಾಗುವಂತೆ ನಿರ್ಮಾಣ ಮಾಡಲಾಗುವ ಸರೋವರಗಳು, ಜಲಾನ ಯನ ಪ್ರದೇಶದ ಸುತ್ತ ಕಟ್ಟಲಾಗುವ ಮೀನು ಸಾಕಣೆ ಸೋಪಾನಗಳು, ಮೀನು ಮೊದಲಾದ ಜಲಚರಗಳು ಮೊಟ್ಟೆ ಒಡೆದು ಹೊರ ಬರುವಂತೆ ಸಂದರ್ಭೋಚಿತವಾಗಿ ನೀರು ಬಿಡುವುದು-ಇವೆಲ್ಲಾ ಪರಿಸರಕ್ಕಾಗಿ ನೀರನ್ನು ಬಳಸುವುದರಲ್ಲಿ ಸೇರಿವೆ.
  • ಪರಿಸರಕ್ಕಾಗಿ ಬಳಸುವ ನೀರು ಕೂಡಾ ಮನರಂಜನೆ ಉದ್ದೇಶಕ್ಕೆ ಬಳಸುವ ನೀರಿನಂತೆ ವ್ಯಯವಾಗದ ವರ್ಗಕ್ಕೆ ಸೇರಿದೆ.ಆದರೂ ನಿಗದಿತ ಸ್ಥಳ ಹಾಗೂ ಸಮಯದಲ್ಲಿ ಅನ್ಯರ ಬಳಕೆಗಾಗಿ ದಕ್ಕುವುದರ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಉದಾಹರಣೆಗೆ: ಮೀನು ಮೊಟ್ಟೆ ಒಡೆಯಲೆಂದು ಅಣೆಕಟ್ಟೆಯಿಂದ ನೀರು ಹೊರ ಬಿಟ್ಟರೆ ಮೇಲ್ದಂಡೆಯಲ್ಲಿರುವ ಹೊಲಗಳಿಗೆ ನೀರು ದೊರೆಯದೇ ಇರಬಹುದು.

ನೀರಿನ ಬಿಕ್ಕಟ್ಟು

[ಬದಲಾಯಿಸಿ]
1970–2000ರ ಅವಧಿಯಲ್ಲಿ ಅಭಿವೃದ್ಧಿಶೀಲ ದೇಶಗಳಲ್ಲಿ ಜನರ ನಡುವೆ ಕುಡಿಯುವ ನೀರು ಹಂಚಿಕೆಯ ಅತ್ಯುತ್ತಮ ಅಂದಾಜು.
  • ನೀರಿನ ಬಿಕ್ಕಟ್ಟು ಎಂಬುದು ಸಾಪೇಕ್ಷವೂ ಹಾಗೂ ಸರಳವೂ ಆದ ಒಂದು ಕಲ್ಪನೆ: ಕೃಷಿ, ಕೈಗಾರಿಕೆ ಅಥವಾ ಮನೆ ಬಳಕೆಗಾಗಿ ಸಾಕಷ್ಟು ನೀರು ದೊರೆಯದಂಥ ಒಂದು ಸನ್ನಿವೇಶ ಉದ್ಭವಿಸಿದಾಗಿನ ಸ್ಥಿತಿಯೇ ನೀರಿನ ಒತ್ತಡ ಎಂದು ವರ್ಲ್ಡ್‌ ಬ್ಯುಸಿನೆಸ್‌ ಕೌನ್ಸಿಲ್‌(=ವಿಶ್ವ ವಾಣಿಜ್ಯ ಪರಿಷತ್ತು)ಅಭಿಪ್ರಾಯ ಪಟ್ಟಿದೆ. ನೀರಿನ ಬಳಕೆ ಹಾಗೂ ಅದರ ಗುಣ ಮಟ್ಟದ ಊಹಾಫೋಹ ಏನೇ ಇರಲಿ ಲಭ್ಯವಿರುವ ನೀರನ್ನು ಪ್ರತಿಯೊಬ್ಬರಿಗೂ ತಲಪಿಸುವಂಥ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂದು ವಿವರಿಸುವುದು ಜಟಿಲ.
  • ವಾರ್ಷಿಕವಾಗಿ ತಲಾ ದೊರೆಯುವ ಸಿಹಿ ನೀರಿನ ಪ್ರಮಾಣ 1,700 ಕ್ಯುಬಿಕ್‌ ಮೀಟರ್‌ಗೂ ಕಡಿಮೆ ಇದ್ದರೆ ಆಗ ಆ ದೇಶ ನೀರಿನ ಬಿಕ್ಕಟ್ಟಿಗೆ ಸಿಕ್ಕಿ ಬೀಳುತ್ತದೆ. 1,000 ಕ್ಯುಬಿಕ್‌ ಮೀಟರ್‌ಗೂ ಕೆಳಕ್ಕಿಳಿದರೆ ನೀರಿನ ಕೊರತೆಯ ಬಿಸಿ ತಟ್ಟಿ ಆರ್ಥಿಕ ಅಭಿವೃದ್ಧಿಯ ಮೇಲೆ ಮತ್ತು ಮಾನವನ ಆರೋಗ್ಯದ ಮೇಲೆ ದುಃಪರಿಣಾಮ ಬೀರುತ್ತದೆ.

ಏರಿದ ಜನಸಂಖ್ಯೆ

[ಬದಲಾಯಿಸಿ]

ವರ್ಷ 2000ದಲ್ಲಿ, ವಿಶ್ವ ಜನಸಂಖ್ಯೆ 6.2 ಶತ ಕೋಟಿ ಇತ್ತು. ಈಗಾಗಲೇ ನೀರಿನ ಬಿಕ್ಕಟ್ಟಿಗೆ ಸಿಕ್ಕಿ ನರಳುತ್ತಿರುವ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ 2050ರ ಹೊತ್ತಿಗೆ ಈಗಿರುವ ಸಂಖ್ಯೆಗೆ 3.5 ಶತ ಕೋಟಿ ಜನ ಸೇರುತ್ತಾರೆ ಎಂದು UN ಅಂದಾಜು ಮಾಡಿದೆ.[] ಜೀವನಾಧಾರವೂ, ಅತಿ ಮುಖ್ಯವೂ ಆದ ಜಲ ಮೂಲದ ಸಂರಕ್ಷಣೆ ಹಾಗೂ ಮರುಪೂರಣ ವ್ಯವಸ್ಥೆಯೂ ಜೊತೆಜೊತೆಗೆ ನೆರವೇರದಿದ್ದಲ್ಲಿ ನೀರಿನ ಹಪಾಹಪಿ ಶುರುವಾಗುತ್ತದೆ.

ಏರಿದ ಮಹಾಪೂರ

[ಬದಲಾಯಿಸಿ]

ಚೀನಾ ಮತ್ತು ಭಾರತ ಎಂಬೆರಡು ಜನಸಂಖ್ಯಾ ದೈತ್ಯ ದೇಶಗಳಲ್ಲಿ ಬಡತನ ತಗ್ಗಿಸುವ ಪ್ರಕ್ರಿಯೆ ಭರದಿಂದ ಸಾಗಿದೆ. ಜನಸಂಖ್ಯಾ ಪ್ರವಾಹ ಏರುತ್ತಿದೆ ಎಂದರೆ ನೀರಿನ ಬಳಕೆ ಹೆಚ್ಚುತ್ತಿದೆ ಎಂದೇ ಅರ್ಥ: ಶೌಚೋಪಯೋಗಕ್ಕೆ, ಗಿಡಗಳಿಗೆ, ಕಾರು ತೊಳೆಯಲಿಕ್ಕೆ, ಸ್ನಾನದ ನೀರಿನ ತೊಟ್ಟಿಗೆ ಅಥವಾ ಖಾಸಗಿ ಈಜು ಕೊಳಗಳಿಗೆ ವಾರದ 7 ದಿನ ಮತ್ತು ಮೂಲ ನೈರ್ಮಲ್ಯಕ್ಕೆ, ನಿತ್ಯದ 24 ಘಂಟೆ ಶುದ್ಧ ನೀರು ಬೇಕಾಗಿದೆ.

ವಾಣಿಜ್ಯ ಚಟುವಟಿಕೆಯ ವಿಸ್ತರಣೆ

[ಬದಲಾಯಿಸಿ]

ಪ್ರವಾಸೋದ್ಯಮ ಮತ್ತು ಮನರಂಜನೆಯಂಥ ಉದ್ದಿಮೆ ಅಥವಾ ಸೇವಾ ಕ್ಷೇತ್ರದ ವಿಸ್ತರಣೆ ಕ್ಷಿಪ್ರ ಗತಿಯಲ್ಲಿ ಸಾಗುತ್ತಲೇ ಇದೆ. ಇಂಥ ವಿಸ್ತರಣೆಗೆ ಯತೇಚ್ಛ ನೀರಿನ ಅವಶ್ಯವಿದೆ; ನೈರ್ಮಲ್ಯ ಪಾಲನೆಗೂ ಬೇಕು,ಪೂರೈಕೆ ಗೂ ಬೇಕು.ಇದು ಜಲ ಮೂಲದ ಮೇಲೆ ಮತ್ತು ನೈಸರ್ಗಿಕ ವ್ಯವಸ್ಥೆಯ ಮೇಲೆ ಗಾಢ ಒತ್ತಡ ಹೇರುತ್ತದೆ.

ಕ್ಷಿಪ್ರಗತಿಯ ನಗರೀಕರಣ

[ಬದಲಾಯಿಸಿ]
  • ನಗರೀಕರಣದ ಮೇಲಿನ ವ್ಯಾಮೋಹ ವೇಗೋತ್ಕರ್ಷಕ್ಕೆ ಒಳಗಾಗಿದೆ. ಜನ ಸಾಂದ್ರತೆ ಹೆಚ್ಚಿಲ್ಲದ ಪ್ರದೇಶಗಳಲ್ಲಿ ಸಾಕಾಗುವಂಥ ಪುಟ್ಟದೊಂದು ಬಾವಿ ಮತ್ತು ಇಂಗು ಗುಂಡಿ ಜನ ದಟ್ಟಣೆ ಹೆಚ್ಚಿರುವ ನಗರ ಪ್ರದೇಶಗಳಿಗೆ ಒಗ್ಗುವುದಿಲ್ಲ. ಪ್ರತಿ ವ್ಯಕ್ತಿಗೂ ನೀರು ತಲಪುವ ವ್ಯವಸ್ಥೆ ಮಾಡಬೇಕಿರುವುದರಿಂದ ನಗರೀಕರಣವು ನೀರಿನ ಮೂಲ ಸೌಲಭ್ಯ ಕಲ್ಪಿಸಲು ಭಾರೀ ಬಂಡವಾಳವನ್ನು ಬೇಡುತ್ತದೆ. ಇದಲ್ಲದೆ,ವ್ಯಕ್ತಿಗಳಿಂದ ಹಾಗೂ ವಾಣಿಜ್ಯೋದ್ಯಮಿಗಳಿಂದ ಬಿಡುಗಡೆಯಾದ ತ್ಯಾಜ್ಯ ನೀರಿನ ಸಂಸ್ಕರಣೆಯೂ ಆಗಬೇಕಿದೆ.
  • ಹೀಗೆ ಕಲುಶಿತಗೊಂಡ ನೀರಿನ ಸಂಸ್ಕರಣೆ ಮಾಡದಿದ್ದಲ್ಲಿ ಜನ ಸಮುದಾಯದ ಆರೋಗ್ಯದ ಮೇಲೆ ಅನಪೇಕ್ಷಿತ ಗಂಡಾಂತರವನ್ನು ಅದು ತಂದೊಡ್ಡುತ್ತದೆ. 100,000 ಕ್ಕೂ ಅಧಿಕ ಜನಸಂಖ್ಯೆಯುಳ್ಳ 60% ಯುರೋಪ್‌ ನಗರಗಳಲ್ಲಿ ಮರುಪೂರಣಕ್ಕೆ ತಗಲುವ ಅವಧಿಗಿಂತಲೂ ಅಧಿಕ ವೇಗದಲ್ಲಿ ಅಂತರ್ಜಲವನ್ನು ಬಳಕೆ ಮಾಡಲಾಗುತ್ತಿದೆ.[] ಒಂದು ವೇಳೆ ನೀರು ದೊರೆಯುವಂತಿದ್ದರೂ ಕೈಗೆಟಗುವಂತಾಗಲು ಹೆಚ್ಚು ವೆಚ್ಚ ಭರಿಸಬೇಕಾಗುತ್ತದೆ.

ಹವಾಮಾನ ಬದಲಾವಣೆ

[ಬದಲಾಯಿಸಿ]
  • ಜಲ ಚಕ್ರ ಮತ್ತು ಹವಾಮಾನದ ನಡುವೆ ನಿಕಟ ಸಂಬಂಧ ಇರುವುದರಿಂದ ಜಗತ್ತಿನ ಜಲ ಮೂಲಗಳ ಮೇಲೆ ಹವಾಮಾನದ ಪ್ರಭಾವ ತೀವ್ರ ಗಾಢವಾದದ್ದಾಗಿದೆ. ಮಳೆ ಬೀಳುವ ಪ್ರಮಾಣ ಪ್ರದೇಶವಾರು ಲೆಕ್ಕದಲ್ಲಿ ವ್ಯತ್ಯಾಸ ಇರುವುದಾದರೂ,ಉಷ್ಣತೆ ಏರಿದಂತೆಲ್ಲಾ ಆವಿಯಾಗುವ ಪ್ರಕ್ರಿಯೆ ಅಧಿಕಗೊಳ್ಳುತ್ತದೆ ಮತ್ತು ಇದು ಮಳೆ ಪ್ರಮಾಣವನ್ನೂ ಹೆಚ್ಚಿಸುತ್ತದೆ. ಒಟ್ಟಾರೆ ಸಿಹಿ ನೀರಿನ ಜಾಗತಿಕ ಪೂರೈಕೆಯನ್ನು ವರ್ಧಿಸುತ್ತದೆ.
  • ಕ್ಷಾಮಡಾಮರವಾಗಲಿ ಅಥವಾ ಪ್ರವಾಹವಾಗಲಿ ಸಂದರ್ಭ ಸನ್ನಿವೇಶಕ್ಕೆ ತಕ್ಕಂತೆ ಕೆಲವೊಮ್ಮೆ ಮೇಲಿಂದ ಮೇಲೆ ಒದ್ದುಕೊಂಡು ಬರುವುದುಂಟು.ಇದೇ ರೀತಿಯಲ್ಲಿ ಪರ್ವತ ಪ್ರದೇಶಗಳಲ್ಲಿ ಹಿಮಪಾತ ಮತ್ತು ಮೇಘ ಕರಗುವಿಕೆ ಸಂಭವಿಸುತ್ತಿರುತ್ತದೆ. ಅತ್ಯುಷ್ಣತೆ ನೀರಿನ ಗುಣ ಮಟ್ಟದ ಮೇಲೆ ಪ್ರಭಾವ ಬೀರುತ್ತದೆಯಾದರೂ, ಅದು ಹೇಗೆ ಎಂತು ಎಂಬ ಬಗ್ಗೆ ನಿಖರವಾಗಿ ತಿಳಿಯಲಾಗಿಲ್ಲ.
  • ಸಸ್ಯಗಳು ಸಮೃದ್ಧವಾಗಿ ಬೆಳೆಯುವಷ್ಟರ ಮಟ್ಟಿಗೆ ನೀರು ಫಲವತ್ತಾಗುವುದರಿಂದ, ಜಲಚರಗಳು ಆಮ್ಲಜನಕವಿಲ್ಲದೇ ಸಾಯುವಂಥ ಸನ್ನಿವೇಶ ಉದ್ಭವವಾಗುವುದೂ ಸಾಧ್ಯತೆಗಳಲ್ಲಿ ಒಂದು. ನೀರಾವರಿ ಜಮೀನು,ತೋಟಗಾರಿಕೆಯ ಸಿಂಪರಣಾ ವ್ಯವಸ್ಥೆ ಜೊತೆಗೆ ಈಜುಗೊಳಗಳು ಕೂಡಾ ಬದಲಾದ ಹವಾಮಾನದಿಂದಾಗಿ ಹೆಚ್ಚು ನೀರನ್ನು ಬೇಡುತ್ತವೆ.

ಜಲ ಕುಹರಗಳ ಬತ್ತುವಿಕೆ

[ಬದಲಾಯಿಸಿ]
  • ಒಂದೆಡೆ ಜನಸಂಖ್ಯಾ ಸ್ಫೋಟ ಇನ್ನೊಂದೆಡೆ ಅಧಿಕ ನೀರಿಗಾಗಿ ಪೈಪೋಟಿ-ಇವೆರಡರ ಮಧ್ಯೆ ಪ್ರಪಂಚದ ಪ್ರಧಾನ ಜಲ ಕುಹರಗಳು ಬತ್ತಿ ಹೋಗುತ್ತಿವೆ. ನೀರನ್ನು ಮಾನವನು ನೇರವಾಗಿ ಬಳಕೆ ಮಾಡುತ್ತಿರುವುದು ಮತ್ತು ಬೇಸಾಯಕ್ಕಾಗಿ ಅಂತರ್ಜಲವನ್ನು ದುಡಿಸಿಕೊಳ್ಳುತ್ತಿರುವುದು ಇದಕ್ಕೆ ಕಾರಣವಾಗಿದೆ. ಜಗತ್ತಿನಾದ್ಯಂತ ಸದ್ಯಕ್ಕೆ ಲಕ್ಷಾಂತರ ಪಂಪುಗಳು ಅಂತರ್ಜಲವನ್ನು ಎತ್ತುವ ಕಾಯಕದಲ್ಲಿ ತೊಡಗಿವೆ.
  • ಚೀನಾ ಮತ್ತು ಭಾರತದಂಥ ದೇಶಗಳಲ್ಲಿ ತಡೆಯಲಸಾಧ್ಯವಾದ ವೇಗದಲ್ಲಿ ಅಂತರ್ಜಲವನ್ನು ತೆಗೆದು ನೀರಾವರಿ ಉದ್ದೇಶಕ್ಕೆಂದು ಪುರೈಸಲಾಗುತ್ತಿದೆ. ಮೆಕ್ಸಿಕೊ ನಗರ, ಬ್ಯಾಂಕಾಕ್‌, ಮನಿಲಾ, ಬೀಜಿಂಗ್‌, ಮಡ್ರಾಸ್‌ ಮತ್ತು ಶಾಂಘೈ-ಇವುಗಳೆಲ್ಲಾ 10 ರಿಂದ 50 ಮೀಟರ್‌ ಜಲ ಕುಹರ ಬತ್ತುವಿಕೆಯಿಂದ ಬಳಲುತ್ತಿರುವ ಪಟ್ಟಣಗಳು.

ಜಲ ಮಾಲಿನ್ಯ ಮತ್ತು ಜಲ ಸಂರಕ್ಷಣೆ

[ಬದಲಾಯಿಸಿ]

jalasmarakshane

  • ಇಂದಿನ ಜಗತ್ತಿಗೆ ಭಾರೀ ತಳಮಳದ ಸಂಗತಿ ಎಂದರೆ ಜಲ ಮಾಲಿನ್ಯ. ಈ ಜಲ ಮಾಲಿನ್ಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅನೇಕ ರಾಷ್ಟ್ರಗಳ ಸರಕಾರಗಳು ಹೆಣಗಾಡುತ್ತಿವೆ. ಹಲವಾರು ಮಲಿನ ಪದಾರ್ಥಗಳು ನೀರಿನ ಪೂರೈಕೆ ಮಾಡುವಲ್ಲಿ ಬೆದರಿಕೆಯನ್ನೇ ಒಡ್ಡುತ್ತಿವೆ. ಮಲ ಮೂತ್ರಾದಿಯಾಗಿ ಊರಿನ ರೊಚ್ಚನ್ನು ಯಾವ ಸಂಸ್ಕರಣೆಗೂ ಒಳಪಡಿಸದೇ ನಿಸರ್ಗ ದತ್ತ ಸ್ವಚ್ಛ ನೀರಿಗೆ ಹರಿ ಬಿಡುವುದು ಇವುಗಳಲ್ಲೆಲ್ಲಾ ಅತ್ಯಂತ ಭಯಾನಕ.
  • ಅತಿಯಾಗಿ ವ್ಯಾಪಿಸಿಕೊಂಡಿರುವ ಈ ಭೀಕರ ಸಮಸ್ಯೆ ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಂಡುಬರುವುದು ಹೆಚ್ಚು.ಅಭಿವೃದ್ಧಿ ಹೊಂದದ ದೇಶಗಳಲ್ಲಂತೂ ಊರಿನ ಹೊಲಸನ್ನು ಈ ರೀತಿಯಾಗಿ ಬಿಡುಗಡೆ ಮಾಡುವುದು ಸರ್ವೇಸಾಮಾನ್ಯ; ಈ ಬಗೆಯಲ್ಲಿ ತ್ಯಾಜ್ಯ ಬಿಡುಗಡೆ ಮಾಡುವುದನ್ನು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಚೀನಾ,ಭಾರತ ಮತ್ತು ಇರಾನ್‌ಗಳೂ ರೂಢಿಸಿಕೊಂಡಿವೆ.
  • ಊರಿನ ಹೊಲಸು, ಜಿಗುಟು ರಾಡಿ, ಕಸ ಮತ್ತು ವಿಷಯುಕ್ತ ಪದಾರ್ಥಗಳನ್ನೂ ನೀರಿಗೆ ಎಸೆಯಲಾಗುತ್ತದೆ. ಊರಿನ ಹೊಲಸನ್ನು ಸಂಸ್ಕರಿಸಿದರೂ ಸಮಸ್ಯೆ ಮತ್ತೆ ಉದ್ಭವಿಸುತ್ತದೆ. ಸಂಸ್ಕರಣೆಯ ನಂತರ ದೊರೆಯುವ ಹೊಲಸು ಗಟ್ಟಿಗಳು ಅಥವಾ ಪುಡಿ ಪದಾರ್ಥವನ್ನು ಗುಂಡಿಗಳಲ್ಲಿ ತುಂಬಬೇಕು, ಇಲ್ಲವೇ ನೆಲದ ಮೇಲೆ ಹರಡ ಬೇಕು ಅಥವಾ ಸಮುದ್ರಕ್ಕೆ ಎಸೆಯಬೇಕು.[]
  • ಊರಿನ ಹೊಲಸಷ್ಟೇ ಅಲ್ಲದೇ ಜಮೀನುಗಳಿಂದ ಕೊಚ್ಚಿ ಹರಿದು ಬರುವ ಮಾಲಿನ್ಯ,ಚಂಡಮಾರುತದಿಂದ ಅಪ್ಪಳಿಸುವ ಭಾರೀ ಮಳೆಯಿಂದ ಹರಿದು ಬರುವ ಮಲಿನ ಪದಾರ್ಥ, ಮತ್ತು ಸರಕಾರ ಹಾಗೂ ಕೈಗಾರಿಕೆಗಳಿಂದ ರಾಸಾಯನಿಕ ತ್ಯಾಜ್ಯದ ಸುರಿತ-ಇವೆಲ್ಲವೂ ಜಲ ಮೂಲಿನ್ಯಕ್ಕೆ ಕಾರಣವಾಗುವ ಪ್ರಮುಖ ಅಂಶಗಳು.

ನೀರು ಮತ್ತು ಸಂಘರ್ಷ

[ಬದಲಾಯಿಸಿ]
  • 2500-2350 BCಯಲ್ಲಿ ಸುಮೇರಿಯಾದ ರಾಜ್ಯಗಳಾದ ಲಗಾಷ್‌ ಮತ್ತು ಉಮ್ಮಾ ರಾಜ್ಯಗಳ ನಡುವೆ ನಡೆದ ಅಂತಾರಾಜ್ಯ ಜಲ ಸಂಘರ್ಷವೇ ತಿಳಿಯಲಾಗಿರುವ ಏಕೈಕ ನಿದರ್ಶನ.[] ನೀರಿಗಾಗಿಯೇ ನಡೆದಿರಬಹುದಾದ ಕಾದಾಟದ ವಿವರಗಳ ಆಧಾರಗಳು ಅಂತಾರಾಷ್ಟ್ರೀಯ ಯುದ್ಧದಿಂದಾಗಿ ಅಲಭ್ಯವಾದರೂ ಇತಿಹಾಸದುದ್ದಕ್ಕೂ ನೀರಿನ ಮೂಲಕ್ಕಾಗಿ ಹೋರಾಟಗಳು ನಡೆದಿರುವುದು ದಿಟ. ಜಲ ಅಭಾವದಿಂದ ರಾಜಕೀಯ ಬಿಕ್ಕಟ್ಟು ತಲೆ ಎತ್ತುವಂಥ ಪರಿಸ್ಥಿತಿ ನಿರ್ಮಾಣವಾದರೆ ಅಂಥ ಸ್ಥಿತಿಯನ್ನು ನೀರಿನ ಬಿಕ್ಕಟ್ಟು ಎಂದು ಉಲ್ಲೇಖಿಸಲಾಗುತ್ತದೆ. ಅನೇಕ ವೇಳೆ ಈ ನೀರಿನ ಬಿಕ್ಕಟ್ಟು ಸ್ಥಳೀಯ ಮತ್ತು ಪ್ರಾದೇಶಿಕ ಮಟ್ಟದ ಸಂಘರ್ಷಗಳನ್ನು ಹುಟ್ಟಿ ಹಾಕುತ್ತದೆ.[೧೦] ನೀರಿನ ಕೊರತೆ ಮತ್ತು ಲಭ್ಯವಿರುವ ಕೃಷಿಯೋಗ್ಯ ಜಮೀನಿನ ಮಧ್ಯೆ ಪರಸ್ಪರ ಸಂಬಂಧ ಕಲ್ಪಿಸಿ, ಶುದ್ಧಾಂಗ ಪರಿಮಾಣಾತ್ಮಕ ವಿಧಾನವನ್ನು ಅನುಸರಿಸಿರುವ ಥಾಮಸ್‌ ಹೋಮರ್‌-ಡಿಕ್ಸನ್‌, ಹಿಂಸಾತ್ಮಕ ಸಂಘರ್ಷಣೆ ಹೆಚ್ಚಾಗಲು ಈ ಸ್ಥಿತಿ ಹೇಗೆ ಇಂಬು ನೀಡುತ್ತದೆ ಎಂಬುದನ್ನು ನಿರೂಪಿಸಿದ್ದಾನೆ.[೧೧] ನೀರು ನೇರವಾಗಿ ಕಾರಣವಾಗಿರದಿದ್ದರೂ ರಾಜಕೀಯ ಬಿಕ್ಕಟ್ಟನ್ನು ಉಂಟು ಮಾಡುವ ಮತ್ತು ಸಂಘರ್ಷಣೆಯನ್ನು ಉಲ್ಬಣಿಸುವ ಶಕ್ತಿ ನೀರಿನ ಬಿಕ್ಕಟ್ಟಿಗಿದೆ. ಸಿಹಿ ನೀರಿನ ಗುಣ ಮಟ್ಟ ಹಾಗೂ ಪ್ರಮಾಣ ಕ್ರಮೇಣವಾಗಿ ಕಡಿಮೆ ಆದಂತೆಲ್ಲಾ ಅಲ್ಲಿನ ನಿವಾಸಿಗಳ ಆರೋಗ್ಯವನ್ನು ಹಾಳುಗೆಡವುತ್ತದೆ,ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ.
  • ಸಂಘರ್ಷದ ಕೋಪೋದ್ರಿಕ್ತತೆಯನ್ನು ಕೆರಳಿಸಿ ಆ ಪ್ರದೇಶದ ಸ್ಥಿರತೆಯನ್ನು ಅಲುಗಾಡಿಸುತ್ತದೆ.[೧೨]

ದೇಶದ ಗಡಿ ಭಾಗದಲ್ಲಿರುವ ನದಿಯ ಕೆಳ ದಂಡೆ ಪ್ರದೇಶಗಳು ದುರ್ದೆಸೆಗೆ ತುತ್ತಾದಾಗ ನೀರಿನ ಹಾಹಾಕರ ಉಲ್ಭಣಿಸಿ ಆ ಪ್ರದೇಶಗಳಲ್ಲಿ ಬಿಕ್ಕಟ್ಟು, ಸಂಘರ್ಷ ತಲೆ ಎತ್ತುತ್ತವೆ.

ವಿಶ್ವಕ್ಕೆ ಜಲ ಪೂರೈಕೆ ಮತ್ತು ವಿತರಣೆ

[ಬದಲಾಯಿಸಿ]

ಆಹಾರ ಮತ್ತು ನೀರು ಮಾನವನ ತಳ ಮಟ್ಟದ ಅವಶ್ಯಕತೆ. ವರ್ಷ 2002ರಿಂದ ಜಾಗತಿಕ ಮಟ್ಟದಲ್ಲಿ ಕಲೆಹಾಕಲಾಗಿರುವ ಅಂಕಿಅಂಶದ ಪ್ರಕಾರ ಪ್ರತಿ 10 ಮಂದಿಯಲ್ಲಿ:

  • ಅಂದಾಜು 5 ಜನರು ನೀರಿನ ಸಂಪರ್ಕ ಪಡೆದಿದ್ದಾರೆ (ತಮ್ಮ ಮನೆಯಲ್ಲಿ,ಅಂಗಳದಲ್ಲಿ ಅಥವಾ ಹೊಲದಲ್ಲಿ)
  • 3 ಮಂದಿ ಸಂರಕ್ಷಿಸಲ್ಪಟ್ಟ ಬಾವಿ ಅಥವಾ ಬೀದಿ ನಲ್ಲಿಯಲ್ಲಿ ದೊರೆಯುವಂಥ ಇತರ ಸುಧಾರಿತ ಜಲ ಮೂಲವನ್ನು ಆಶ್ರಯಿಸಿದ್ದಾರೆ;
  • 2 ಜನಕ್ಕೆ ಇಂಥ ಯಾವುದೇ ಸೇವೆ ಇಲ್ಲದೇ ವಂಚಿತರಾಗಿದ್ದಾರೆ;
  • 10 ರಲ್ಲಿ 4 ಮಂದಿ ಸುಧಾರಿತ ಶೌಚಾಲಯ ಸೌಲಭ್ಯವಿಲ್ಲದೇ ಬದುಕುತ್ತಿದ್ದಾರೆ.[]

ವರ್ಷ 2002ರ ಭೂಶೃಂಗದಲ್ಲಿ ಪಾಲ್ಗೊಂಡ ಸರಕಾರಗಳು ಈ ಕೆಳಗಿನ ಕ್ರಿಯಾ ಯೋಜನೆಗೆ ಅಂಗೀಕಾರ ನೀಡಿದವು:

  • ವರ್ಷ 2015ರ ವೇಳೆಗೆ ಕುಡಿಯುವ ನೀರು ಸಿಕ್ಕದೇ ಪರದಾಡುತ್ತಿರುವ ಮಂದಿಗೆ ಸಮಪಾಲು ನೀಡುವುದು. ವಿಶ್ವ ಜಲ ಪೂರೈಕೆ ಮತ್ತು ಶುಚಿತ್ವದ ಮೌಲ್ಯ ಮಾಪನ ವರದಿ-2000 ([http:// www.who.int /water_sanitation _health/monitoring / globalassess/en/ ಗ್ಲೋಬಲ್ ವಾಟರ್ ಸಪ್ಲೈ ಅಂಡ್ ಸ್ಯಾನಿಟೇಷನ್ ರಿಪೋರ್ಟ್ ೨೦೦೦ = GWSSAR]) ಬಳಕೆದಾರನ ಮನೆ ಹಾಗೂ ಜಲ ಮೂಲದ ನಡುವಿನ ಅಂತರ ಒಂದು ಕಿಲೋಮೀಟರ್‌ ಒಳಗಿದ್ದು ಪ್ರತಿ ವ್ಯಕ್ತಿಗೆ ನಿತ್ಯವೂ ಕನಿಷ್ಠ 20 ಲೀಟರ್‌ ನೀರು "ಸಿಕ್ಕುವಂತಿರುವುದು ನ್ಯಾಯೋಚಿತ" ಎಂದು ವರದಿಯಲ್ಲಿ ವಿವರಿಸಲಾಗಿದೆ.
  • ಶೌಚಾಲಯದ ಮೂಲ ಸೌಕರ್ಯವಿಲ್ಲದ ಜನಕ್ಕೆ ಅದನ್ನು ಒದಗಿಸುವುದು. "ಶೌಚಾಲಯದ ಮೂಲ ಸೌಕರ್ಯ" ಖಾಸಗಿಯದೇ ಇರಬಹುದು ಅಥವಾ ಪಾಲುದಾರಿಕೆಯದ್ದೇ ಆಗಿರಬಹುದು, ಆದರೆ ಅದು ಮಾನವನ ಶರೀರದಿಂದ ಹೊರಬಂದಿರುವ ತ್ಯಾಜ್ಯಕ್ಕೆ ಮಾತ್ರ ಅನ್ವಯಿಸುತ್ತದೆ.

ಸಂಪನ್ಮೂಲದ ಕೊರತೆ ಹಾಗೂ ಕ್ಷಿಪ್ರಗತಿಯಲ್ಲಿ ಏರುತ್ತಿರುವ ಜನಸಂಖ್ಯೆ ಸಮಸ್ಯೆಯನ್ನು ಎದುರಿಸುತ್ತಿರುವ ಮಧ್ಯ ಪ್ರಾಚ್ಯ,ಆಫ್ರಿಕ, ಮತ್ತು ಏಷ್ಯದಂಥ ಕೆಲ ಭಾಗದ ಬಡದೇಶಗಳು 2025ರ ವೇಳೆಗೆ ನೀರಿನ ಕೊರತೆಯಿಂದ ನರಳುವ ಚಿತ್ರ ಕಣ್ಣಿಗೆ ಕಟ್ಟುತ್ತಿದೆ.

  • ಬೃಹತ್‌ ನಗರ ಮತ್ತು ನಗರ ಎಂದು ಗುರುತಿಸಿಕೊಳ್ಳುವುದಕ್ಕೆ ಅತಿ ಸಮೀಪಕ್ಕೆ ಬಂದ ಪ್ರದೇಶಗಳಿಗಾಗಿ 2025ರ ವೇಳೆಗೆ ಸುರಕ್ಷಿತ ನೀರು ಒದಗಿಸುವುದು ಹಾಗೂ ಸಾಕಷ್ಟು ಶೌಚಾಲಯಗಳ ನವೀನ ಮೂಲ ಸೌಕರ್ಯ ಕಲ್ಪಿಸುವುದು ಅಗತ್ಯವೆನಿಸಿದೆ. ಮಾನವನು ಬಳಸುತ್ತಿರುವ ನೀರಿನ ಸಿಂಹ ಪಾಲು ಪ್ರಸ್ತುತ ಕೃಷಿ ಕ್ಷೇತ್ರದ್ದಾಗಿದ್ದು,ಇದು ಇತರ ಉದ್ದೇಶದ ಬಳಕೆದಾರರೊಂದಿಗೆ ಏರುಗತಿಯಲ್ಲಿರುವ ಸಂಘರ್ಷವನ್ನು ಸೂಚಿಸುತ್ತದೆ.
  • ಅಭಿವೃದ್ಧಿ ಹೊಂದಿರುವ ದೇಶಗಳಾದ ಉತ್ತರ ಅಮೆರಿಕ, ಯುರೋಪ್‌ ಮತ್ತು ರಷ್ಯ 2025ರ ಹೊತ್ತಿಗೆ ತೀರ ಗಂಭೀರ ಸ್ವರೂಪದ ಜಲ ಕೊರತೆಯನ್ನು ಎದುರಿಸುವಂಥ ಸ್ಥಿತಿ ನಿರ್ಮಾಣವಾಗುವುದಿಲ್ಲ. ಇದಕ್ಕೆ ಕಾರಣ ಅವು ಸಂಪದ್ಭರಿತ ರಾಷ್ಟ್ರಗಳೆಂದಲ್ಲ,ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಜನಸಂಖ್ಯೆಯನ್ನು ಕಾಪಾಡಿಕೊಳ್ಳುತ್ತಿರುವುದೇ ಇಲ್ಲಿ ಅಡಗಿರುವ ಪ್ರಮುಖ ಅಂಶ.
  • ನೀರಿನ ಪೂರೈಕೆಗೆ ಅನುಗುಣವಾಗಿಲ್ಲದ ಜನ ದಟ್ಟಣೆ ಮತ್ತು ಜಲಾಭಾವದ ಕಾರಣದಿಂದಾಗಿ ಉತ್ತರ ಆಫ್ರಿಕ, ಮಧ್ಯ ಪ್ರಾಚ್ಯ,ದಕ್ಷಿಣ ಆಪ್ರಿಕ ಮತ್ತು ಉತ್ತರ ಚೀನಾ ತೀವ್ರ ಸ್ವರೂಪದ ಜಲ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ದಕ್ಷಿಣ ಅಮೆರಿಕ,ಆಫ್ರಿಕದ ಉಪ-ಸಹರಾ ಪ್ರದೇಶ,ದಕ್ಷಿಣ ಚೀನಾ ಮತ್ತು ಭಾರತ 2025ರ ಹೊತ್ತಿಗೆ ಭಾರೀ ಪ್ರಮಾಣದಲ್ಲಿ ನೀರಿನ ಕೊರತೆಯನ್ನು ಎದುರಿಸಬೇಕಾದ ಸನ್ನಿವೇಶ ಉದ್ಭವಿಸುತ್ತದೆ.
  • ಅತ್ಯಧಿಕ ಪ್ರಮಾಣದ ಜನಸಂಖ್ಯೆ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಪೂರೈಸಲು ಇರುವ ಆರ್ಥಿಕ ಅಡಚಣೆ ಯಿಂದಾಗಿ ಮೇಲೆ ಹೇಳಿದ ಕೊನೆಯ ಎರಡು ದೇಶಗಳು ತತ್ತರಿಸಲಿವೆ. 1990ರಿಂದ 1.6 ಶತಕೋಟಿ ಜನ ಸುರಕ್ಷಿತ ನೀರಿನ ಸಂಪರ್ಕ ಪಡೆದಿದ್ದಾರೆ. [೧] Archived 2010-08-27 ವೇಬ್ಯಾಕ್ ಮೆಷಿನ್ ನಲ್ಲಿ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಜನತೆಯ ನೀರಿನ ಸಂಪರ್ಕ ಸಾಧನೆ ಪ್ರಗತಿ ಪಥದಲ್ಲಿದೆ.1970[೧೩] ರಲ್ಲಿ 30% ಇದ್ದದ್ದು 1990ರಲ್ಲಿ 71%ಕ್ಕೆ ಏರಿತು,2000ದಲ್ಲಿ 79%ಇದ್ದದ್ದು 2004ಕ್ಕೆ 84%ಗೆ ತಲಪಿತು. ಇದೇ ರೀತಿಯ ಬೆಳವಣಿಗೆ ಮುಂದುವರಿಯುವ ಸಾಧ್ಯತೆ ಗೋಚರಿಸುತ್ತಿದೆ.[೧೪]

ಆರ್ಥಿಕ ಪರಿಗಣನೆಗಳು

[ಬದಲಾಯಿಸಿ]
  • ನೀರು ಪೂರೈಕೆ ಮತ್ತು ಊರಿನ ಹೊಲಸನ್ನು ಹೊರದಬ್ಬುವ ವ್ಯವಸ್ಥೆಗಾಗಿ ಕೊಳವೆಗಳ ಜಾಲ ನಿರ್ಮಾಣ, ನೀರೆತ್ತುವ ಸ್ಥಾವರಗಳ ಸ್ಥಾಪನೆ ಮತ್ತು ಜಲ ಸಂಸ್ಕರಣೆಯಂಥ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಾಗುತ್ತದೆ,ಇದಕ್ಕೆ ಭಾರೀ ಬಂಡವಾಳದ ಅಗತ್ಯ ಬೀಳುತ್ತದೆ. ನೀರಿನ ಗುಣಮಟ್ಟ ಕಾಪಾಡಲು,ಸೋರಿಕೆಯನ್ನು ತಪ್ಪಿಸಲು ಮತ್ತು ಪೂರೈಕೆಯನ್ನು ಖಾತರಿಪಡಿಸಲು, ಮುಪ್ಪಡರಿ ಸವಕಲಾಗಿರುವ ಜಲ ಸಂಪರ್ಕ ಸಾಧನಗಳ ನವೀಕರಣಕ್ಕಾಗಿ ಸದಸ್ಯ ರಾಷ್ಟ್ರಗಳು ವಾರ್ಷಿಕವಾಗಿ 200 ಶತಕೋಟಿ ಡಾಲರ್‌ ಅನ್ನು ಹೂಡಿಕೆ ಮಾಡಬೇಕೆಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ(=ಆರ್ಗನೈಸೇಷನ್ ಫಾರ್ ಇಕಾನಾಮಿಕ್ ಕೋಪರೇಷನ್ ಅಂಡ್ ಡೆವಲಪ್‌ಮೆಂಟ್ = OECD)ಅಂದಾಜು ಮಾಡಿದೆ.[೧೫]
  • ಅಭಿವೃದ್ಧಿಶೀಲ ದೇಶಗಳ ಈ ಅಗತ್ಯವನ್ನು ಅಂತಾರಾಷ್ಟ್ರೀಯ ಮಟ್ಟದ ಗಮನವನ್ನು ಸೆಳೆದಿದೆ. ವರ್ಷ 2015ರ ವೇಳೆಗೆ ಕೈಗೆಟುಕುವಂತೆ ಸುರಕ್ಷಿತ ನೀರು ಒದಗಿಸುವುದು ಮತ್ತು ಹೊಲಸು ಹೊರ ದಬ್ಬಲು ಬೇಕಿರುವ ಮೂಲಸೌಕರ್ಯ ಕಲ್ಪಿಸುವುದು ಈ ಸಹಸ್ರಮಾನದ ಅಭಿವೃದ್ಧಿಯ ಗುರಿಯಾಗಿದೆ.ಈಗ ವಾರ್ಷಿಕವಾಗಿ ಹೂಡಲಾಗುತ್ತಿರುವ 10 ರಿಂದ 15 USD ಶತಕೋಟಿ ದುಪ್ಪಟ್ಟಾಗಬೇಕಿರುವ ಅಗತ್ಯವನ್ನೂ ಅದು ಹೇಳಿದೆ. ಚಾಲ್ತಿಯಲ್ಲಿರುವ ಮೂಲಸೌಕರ್ಯಕ್ಕೆ ಬೇಕಿರುವ ನಿರ್ವಹಣಾ ಬಂಡವಾಳವನ್ನು ಇದು ಒಳಗೊಂಡಿಲ್ಲ.[೧೬]
  • ನೀರು ಪೂರೈಕೆ ಮತ್ತು ಚರಂಡಿಯಂಥ ಮೂಲ ಸೌಕರ್ಯಗಳು ಒಮ್ಮೆ ಸ್ಥಾಪಿತವಾದರೆ ಅದನ್ನು ನಿಭಾಯಿಸಲು ಬೇಕಾದ ಸಿಬ್ಬಂದಿ,ವಿದ್ಯುತ್‌ ಶಕ್ತಿ,ರಾಸಾಯನಿಕ ಪದಾರ್ಥ ಮತ್ತು ನಿರ್ವಹಣೆಯಂಥ ಮೊದಲಾದ ವೆಚ್ಚಗಳನ್ನು ನಿರಂತರ ಭರಿಸಬೇಕಾಗುತ್ತದೆ. ಇದಕ್ಕಾಗಿ ಹೂಡಲಾದ ಬಂಡವಾಳ ಮತ್ತು ಕಾರ್ಯಾಚರಣೆಗಾಗಿ ಮಾಡಲಾಗುವ ವೆಚ್ಚವನ್ನು ಬಳಕೆದಾರನು ಶುಲ್ಕದ ರೂಪದಲ್ಲಿಯೋ, ಸಾರ್ವಜನಿಕ ನಿಧಿಯಿಂದಲೋ ಅಥವಾ ಈ ಎರಡರ ಸಮ್ಮಿಶ್ರಣದಿಂದಲೋ ಭರಿಸಬೇಕಾಗುತ್ತದೆ. ಇಲ್ಲಿ ಎದುರಾಗುತ್ತದೆ ನೀರಿನ ನಿರ್ವಹಣೆಯ ಆರ್ಥಿಕ ಸಮಸ್ಯೆ.
  • ಸಾರ್ವಜನಿಕ ಮತ್ತು ವಿಶಾಲ ಆರ್ಥಿಕ ನೀತಿ-ಇವುಗಳಿಗೆ ಅಡ್ಡ ಬರುವ ಜಲ ನಿರ್ವಹಣೆಯ ಉಸ್ತುವಾರಿಕೆಯ ನಿಭಾವಣೆ ತೀವ್ರ ಜಟಿಲವಾಗುತ್ತದೆ. ನೀರಿನ ಲಭ್ಯತೆ ಮತ್ತು ಉಪಯೋಗದಂಥ ಮೂಲಭೂತ ಮಾಹಿತಿಯ ಮೇಲಷ್ಟೇ ಕೇಂದ್ರೀಕರಿಸಲಾಗಿರುವುದರಿಂದ ನೀತಿ ನಿಯಮಾವಳಿಯ ಪ್ರಶ್ನೆ ಈ ಲೇಖನದ ವ್ಯಾಪ್ತಿಯ ಹೊರಗೆ ಉಳಿಯುತ್ತದೆ. ವಾಣಿಜ್ಯ ಮತ್ತು ವ್ಯವಹಾರದ ಮೇಲೆ ಅವಕಾಶ ಮತ್ತು ಆಪತ್ತುಗಳೆಂಬ ಎರಡು ಅಂಶಗಳಿಂದಲೂ ನೀರು ಎಷ್ಟರ ಮಟ್ಟಿಗೆ ಪರಿಣಾಮ ಬೀರಬಲ್ಲದು ಎಂಬುದನ್ನು ಸಮಗ್ರವಾಗಿ ಅರಿಯಲು ಎಲ್ಲ ಸಂಗತಿಗಳ ತಿಳಿವೂ ಅತ್ಯವಶ್ಯ.

ವಾಣಿಜ್ಯೋದ್ಯಮದ ಪ್ರತಿಕ್ರಿಯೆ

[ಬದಲಾಯಿಸಿ]

ಮುಂಬರುವ ಘಟನಾವಳಿಗಳ ದೃಶ್ಯವನ್ನು ಕಟ್ಟಿಕೊಡುವ Archived 2012-01-11 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರಕ್ರಿಯೆಯಲ್ಲಿ ದಿ ವರ್ಲ್ಡ್‌ ಬ್ಯುಸಿನೆಸ್‌ ಕೌನ್ಸಿಲ್‌ ಫಾರ್‌ ಸಸ್ಟೇನಬಲ್‌ ಡೆವಲಪ್‌ಮೆಂಟ್‌ ಸಂಸ್ಥೆ ತನ್ನ H2Oಸಿನಾರಿಯೋಸ್ Archived 2012-01-11 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ ಯೋಜನೆಯಲ್ಲಿ ತೊಡಗಿದೆ. ಅದರಲ್ಲಿ ಅಡಕವಾಗಿರುವ ಅಂಶಗಳು ಹೀಗಿವೆ:

  • ನೀರಿನ ಹರಿವಿಗೆ ಸಂಬಂಧ ಪಟ್ಟ ಮುಖ್ಯಾಂಶಗಳ ವ್ಯಾವಹಾರಿಕ ಜ್ಞಾನಾಭಿವೃ ದ್ಧಿ ಮತ್ತು ಸ್ಪಷ್ಟೀಕರಣ.
  • ನೀರಿನ ನಿರ್ವಹಣೆ ಕುರಿತಂತೆ ವಾಣಿಜ್ಯ ಮತ್ತು ವಾಣಿಜ್ಯೇತರರ ನಡುವೆ ಪರಸ್ಪರ ತಿಳುವಳಿಕೆಯ ವರ್ಧನೆ.
  • ತಡೆದುಕೊಳ್ಳಬಹುದಾದ ನೀರಿನ ನಿರ್ವಹಣೆಯ ಅಂಗವಾಗಿ ಪರಿಣಾಮಕಾರಿಯಾಗಿ ಕ್ರಿಯಾತ್ಮಕ ಬೆಂಬಲ ನೀಡುವುದು.

ಅದು ಇವುಗಳನ್ನು ಒಳಗೊಂಡಿದೆ:

  • ಬಾಯಾರಿದ ಸಮಾಜದಲ್ಲಿ ವ್ಯವಹಾರ ಏಳಿಗೆಯಾಗದು.
  • ಯಾರೂ ಜಲ ವ್ಯವಹಾರದಲ್ಲಿ ತೊಡಗಬಾರದು, ತೊಡಗಿದರೆ ನೀರಿನ ಅಭಾವ ಕಟ್ಟಿಟ್ಟ ಬುತ್ತಿ.
  • ವ್ಯವಹಾರ ಎಂಬುದೊಂದು ಪರಿಹಾರದ ಅಂಶ, ಅದನ್ನು ಮುನ್ನಡೆಸುವುದರಲ್ಲಿ ಅದರ ಶಕ್ತಿ ಅಡಗಿದೆ.
  • ನೀರಿನ ಸಂಗತಿ ಮತ್ತು ಸಂಕೀರ್ಣತೆ ವೆಚ್ಚವನ್ನು ಹೆಚ್ಚಿಸುತ್ತದೆ.

ಚಿತ್ರಗಳು

[ಬದಲಾಯಿಸಿ]

ಇದನ್ನೂ ನೋಡಿರಿ

[ಬದಲಾಯಿಸಿ]

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]
  1. [http: // ga. water.usgs.gov/edu/waterdistribution.html "Earth's water distribution"]. United States Geological Survey. Retrieved 2009-05-13. {{cite web}}: Check |url= value (help)
  2. "Scientific Facts on Water: State of the Resource". GreenFacts Website. Retrieved 2008-01-31.
  3. "Water Development and Management Unit - Topics - Irrigation". FAO. Retrieved 2009-03-12.
  4. "FAO Water Unit | Water News: water scarcity". Fao.org. Retrieved 2009-03-12.
  5. "World population to reach 9.1 billion in 2050, UN projects". Un.org. 2005-02-24. Retrieved 2009-03-12.
  6. "Europe's Environment: The Dobris Assessment". Reports. eea.europa. eu. 1995-05-20. Archived from the original on 2008-09-22. Retrieved 2009-03-12.
  7. ಸಾಗರದಲ್ಲಿ ಜಿಡ್ಡುಗಟ್ಟಿದ ಹೊಲಸು ಹಾಕುವುದನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಮೆರೈನ್ ಪ್ರೊಟೆಕ್ಷನ್ ರಿಸರ್ಚ್, ಅಂಡ್ ಸ್ಯಾಂಕ್ಚುವರೀಸ್ ಆಕ್ಟ್‌ ನಿಷೇಧಿಸಿದೆ (MPRSA).
  8. ರಾಸ್ಲೆರ್, ಕರೆನ್ A. ಮತ್ತು W. R. ಥಾಪ್ಸನ್. "ಕಂಟೆಸ್ಟೆಡ್ ಟೆರ್ರಿಟರಿ, ಸ್ಟ್ರೇಟಜಿಕ್ ರೈವಲ್ರೀಸ್, ಮತ್ತು ಕಾನ್‌ಫ್ಲಿಕ್ಟ್‌ ಎಸ್ಕಲೇಷನ್." ಇಂಟರ್ನ್ಯಾಷನಲ್‌ ಸ್ಟಡೀಸ್ ಕ್ವಾರ್ಟರ್ಲಿ.
    • [50] ^ ಇಪಿಎ. " 1. (2006): 145-168.
    • ವೋಲ್ಫ್, ಆರನ್ T. “ವಾಟರ್ ಮತ್ತು ಹ್ಯೂಮನ್ ಭದ್ರತೆ.” ಸಮಕಾಲೀನ ನೀರು ಸಂಶೋಧನೆ ಮತ್ತು ಶಿಕ್ಷಣ ಕುರಿತ ಪತ್ರಿಕೆ 118. (2001): 29
  9. ಹೊಮರ್-ಡಿಕ್ಸನ್,.
    • "ಎನ್‌ವಯರ್ನ್‌ಮೆಂಟ್ ಸ್ಕೇರ್ಸಿಟಿ, ಮತ್ತು ವಯೊಲೆನ್ಸ್." ಪ್ರಿನ್ಸ್‌ಟನ್, ಎನ್‌ಜೆ: ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್. (1999).
  10. ೧೨.೦ ೧೨.೧ ಪೋಸ್ಟಲ್,. L. ಮತ್ತು A. T. ವೋಲ್ಫ್. “ಡಿಹೈಡ್ರೇಟಿಂಗ್ ಕಾನ್‌ಫ್ಲಿಕ್ಟ್.” ವಿದೇಶೀ ಕಾರ್ಯನೀತಿ ಆಫ್ರಿಕಾ XI[126] (2001): 60-67.
  11. ಬ್ಜೋರ್ನ್ ಲಾಂಬರ್ಗ್ (2001), ದಿ ಸ್ಕೆಪ್ಟಿಕಲ್ ಎನ್ವಯರ್ನ್‌ಮೆಂಟಲಿಸ್ಟ್ (ಕ್ಯಾಂಬ್ರಿಡ್ಸ್ ಯುನಿವರ್ಸಿಟಿ ಪ್ರೆಸ್), ISBN 0521010683, p. 22 Archived 2013-07-25 ವೇಬ್ಯಾಕ್ ಮೆಷಿನ್ ನಲ್ಲಿ.
  12. "ಆರ್ಕೈವ್ ನಕಲು" (PDF). Archived from the original (PDF) on 2010-08-27. Retrieved 2009-11-17.
  13. "The cost of meeting the Johannesburg targets for drinking water". Water-academy.org. 2004-06-22. Retrieved 2009-03-12.
  14. ಫಿನಾನ್ಸಿಂಗ್ ವಾಟರ್ ಫಾರ್ ಅಲ್

ಆಕರಗಳು

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]