ಬುಗ್ಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬುಗ್ಗೆಯು ಒಂದು ಜಲಕುಹರದಿಂದ ಭೂಮಿಯ ಮೇಲ್ಮೈಗೆ ನೀರು ಹರಿಯುವ ಯಾವುದೇ ನೈಸರ್ಗಿಕ ಸನ್ನಿವೇಶ. ಇದು ಜಲಗೋಳದ ಒಂದು ಘಟಕವಾಗಿದೆ. ಒಂದು ಬುಗ್ಗೆಯು ಕಾರ್ಸ್ಟ್ ಸ್ಥಳಾಕೃತಿಯ ಪರಿಣಾಮವಿರಬಹುದು. ಇದರಲ್ಲಿ ಮೇಲ್ಮೈಯ ನೀರು ಭೂಮಿಯ ಮೇಲ್ಮೈಯ (ಪುನರ್ಭರ್ತಿ ಪ್ರದೇಶ) ಒಳಹರಿದು ಪ್ರದೇಶದ ಅಂತರ್ಜಲದ ಭಾಗವಾಗುತ್ತದೆ. ನಂತರ, ಅಂತರ್ಜಲವು ಬಿರುಕುಗಳು ಮತ್ತು ಕಂದರ ರಂಧ್ರಗಳ ಜಾಲದ ಮೂಲಕ ಸಂಚರಿಸುತ್ತದೆ. ಇವುಗಳ ಗಾತ್ರ ಅಂತರಕಣ ಜಾಗಗಳಿಂದ ಹಿಡಿದು ಬೃಹತ್ ಗುಹೆಗಳವರೆಗೆ ವಿಸ್ತರಿಸುತ್ತವೆ. ಅಂತಿಮವಾಗಿ ಮೇಲ್ಮೈಯ ಕೆಳಗಿಂದ ಕಾರ್ಸ್ಟ್ ಬುಗ್ಗೆಯ ರೂಪದಲ್ಲಿ ನೀರು ಹೊರಬರುತ್ತದೆ.

ಮೇಲ್ಮೈಗೆ ಬುಗ್ಗೆಯ ಒತ್ತಾಯದ ಹೊರಬರುವಿಕೆಯು ಸೀಮಿತ ಜಲಕುಹರದ ಪರಿಣಾಮವಿರಬಹುದು. ಇದರಲ್ಲಿ ಬುಗ್ಗೆಜಲದ ಮಟ್ಟದ ಪುನರ್ಭರ್ತಿ ಪ್ರದೇಶವು ಹೊರದಾರಿಗಿಂತ ಎತ್ತರದಲ್ಲಿ ಇರುತ್ತದೆ. ಎತ್ತರದ ಮೂಲಗಳಿಂದ ಮೇಲ್ಮೈಗೆ ಒತ್ತಾಯದಿಂದ ಪುಟಿಯುವ ಬುಗ್ಗೆ ಜಲವು ಚಿಲುಮೆ ಬಾವಿಗಳಾಗಿರುತ್ತವೆ. ಹೊರದಾರಿಯು ೩೦೦ ಅಡಿ ಆಳದ ಗುಹೆಯ ರೂಪದಲ್ಲಿದ್ದರೂ ಇದು ಸಾಧ್ಯವಿದೆ. ಈ ಸಂದರ್ಭದಲ್ಲಿ, ಗುಹೆಯು ನೀರ್ಕೊಳವೆಯಂತೆ ಬಳಸಲ್ಪಡುತ್ತದೆ. ಅಂತರ್ಜಲದ ಎತ್ತರದ ಪುನರ್ಭರ್ತಿ ಪ್ರದೇಶವು ಗುಹೆಯನ್ನು ಕಡಿಮೆ ಎತ್ತರದ ಬಿರುಕಿನಿಂದ ಹೊರಬರಲು ಬಳಸುತ್ತದೆ.

ಆರ್ಟೇಸಿಯನ್ ಅಲ್ಲದ ಬುಗ್ಗೆಗಳು ಸರಳವಾಗಿ ಭೂಮಿಯ ಮೂಲಕ ಎತ್ತರದ ಸ್ಥಳದಿಂದ ಕಡಿಮೆ ಎತ್ತರದ ಸ್ಥಳಕ್ಕೆ ಹರಿಯಬಹುದು ಮತ್ತು ಬುಗ್ಗೆಯ ರೂಪದಲ್ಲಿ ಹೊರಬರಬಹುದು, ಮತ್ತು ನೆಲವನ್ನು ಚರಂಡಿ ಕೊಳವೆಯಂತೆ ಬಳಸುತ್ತದೆ. ಇನ್ನೂ ಇತರ ಬುಗ್ಗೆಗಳು ಭೂಮಿಯಲ್ಲಿನ ನೆಲದಡಿಯ ಮೂಲದಿಂದ ಒತ್ತಡದ ಪರಿಣಾಮವಾಗಿರುತ್ತವೆ, ಜ್ವಾಲಾಮುಖಿ ಚಟುವಟಿಕೆಯ ರೂಪದಲ್ಲಿ. ಪರಿಣಾಮವಾಗಿ ನೀರು ಹೆಚ್ಚಿನ ಉಷ್ಣಾಂಶದಲ್ಲಿರಬಹುದು, ಉದಾಹರಣೆಗೆ ಬಿಸಿನೀರಿನ ಚಿಲುಮೆ. ಅಂತರ್ಜಲದ ಕ್ರಿಯೆಯು ನಿರಂತರವಾಗಿ ಸುಣ್ಣದಕಲ್ಲು ಮತ್ತು ಡಾಲಮೈಟ್‍ನಂತಹ ಪ್ರವೇಶಸಾಧ್ಯ ಆಧಾರಶಿಲೆಯನ್ನು ಕರಗಿಸುತ್ತದೆ, ಮತ್ತು ಅಗಾಧ ಗುಹಾವ್ಯವಸ್ಥೆಗಳನ್ನು ಸೃಷ್ಟಿಸುತ್ತದೆ.[೧]

ಬುಗ್ಗೆಯ ಸ್ರಾವವು ಬುಗ್ಗೆಯ ಪುನರ್ಭರ್ತಿ ಜಲಾನಯನ ಭೂಮಿಯಿಂದ ನಿರ್ಧಾರಿತವಾಗಿರುತ್ತದೆ. ಪುನರ್ಭರ್ತಿ ಮೇಲೆ ಪ್ರಭಾವ ಬೀರುವ ಅಂಶಗಳಲ್ಲಿ ಅಂತರ್ಜಲವು ಸೆರೆಯಾಗಿರುವ ಪ್ರದೇಶದ ಗಾತ್ರ, ಅವಕ್ಷೇಪಣದ ಪ್ರಮಾಣ, ಸೆರೆ ಬಿಂದುಗಳ ಗಾತ್ರ, ಮತ್ತು ಬುಗ್ಗೆಯ ಹೊರದಾರಿಯ ಗಾತ್ರ ಸೇರಿವೆ. ನೆಲದಡಿಯ ವ್ಯವಸ್ಥೆಯೊಳಗೆ ನೀರು ಅನೇಕ ಮೂಲಗಳಿಂದ ಸೋರಿಕೆಯಾಗಬಹುದು. ಇವುಗಳಲ್ಲಿ ಪ್ರವೇಶಸಾಧ್ಯ ನೆಲ, ಬತ್ತುಕುಳಿಗಳು, ಮತ್ತು ಅಂತರ್ವಾಹಿನಿ ಹೊಳೆಗಳು ಸೇರಿವೆ.

ಉಲ್ಲೇಖಗಳು[ಬದಲಾಯಿಸಿ]

  1. "Springs - The Water Cycle, from USGS Water-Science School". ga.water.usgs.gov. Archived from the original on 9 ಮೇ 2009. {{cite web}}: Unknown parameter |deadurl= ignored (help)
"https://kn.wikipedia.org/w/index.php?title=ಬುಗ್ಗೆ&oldid=854335" ಇಂದ ಪಡೆಯಲ್ಪಟ್ಟಿದೆ