ಚಿಲುಮೆ ಬಾವಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಮೆಸೆಲ್‌ ಪಿಟ್‌ನಲ್ಲಿರುವ ಚಿಲುಮೆ ಬಾವಿ
ಭೌಗೋಳಿಕ ಸ್ತರದ ರಚನೆಯು ಚಿಲುಮೆ ಬಾವಿಯ ರಚನೆಗೆ ಕಾರಣವಾಗುತ್ತದೆ.
ಚಿಲುಮೆ ಬಾವಿಯ ರೂಪ ರೇಶೆಗಳು
ಪೈಪ್ ಹೊಂದಿರುವ ರಸ್ತೆ ಬದಿಯ ಚಿಲುಮೆ ಬಾವಿಗಳು
ಆಸ್ಟ್ರೇಲಿಯಾದ ನೀರಿನ ಮೂಲಕ್ಕಾಗಿ ಮಹಾ ಚಿಲುಮೆ ಕಟ್ಟೆಯನ್ನು ನೋಡಿ.

ಇತಿವೃತ್ತ[ಬದಲಾಯಿಸಿ]

 • ಚಿಲುಮೆ ಜಲಮೂಲ ವೆಂದರೆ ಒಂದು ಪರಿಮಿತ ಜಲಮೂಲವಾಗಿದ್ದು, ಅದು ಧನಾತ್ಮಕ ಒತ್ತಡವನ್ನು ಹೊಂದಿರುವ ಅಂತರ್ಜಲವನ್ನು ಹೊಂದಿರುತ್ತದೆ. ಇದು ಬಾವಿಯಲ್ಲಿನ ಜಲಮೂಲದ ಮಟ್ಟವನ್ನು ದ್ರವಸ್ಥಿತಿಯ ಸಮತೋಲನ ಬಿಂದುವನ್ನು ತಲುಪುವವರೆಗೆ ಏರಿಸುತ್ತದೆ. ಈ ರೀತಿಯ ಬಾವಿಯನ್ನು ಚಿಲುಮೆ ಬಾವಿ ಎಂದು ಕರೆಯುತ್ತಾರೆ. ಕೆಲವೊಮ್ಮೆ ನೈಸರ್ಗಿಕ ಒತ್ತಡವು ಹೆಚ್ಚಿನದಾಗಿದ್ದರೆ, ನೀರು ಭೂಮಟ್ಟವನ್ನು ಸಹಾ ತಲುಪಬಹುದಾಗಿದೆ.
 • ಅಂತಹ ಸಂದರ್ಭದಲ್ಲಿ ಅಂತಹ ಬಾವಿಯನ್ನು ಉಕ್ಕುವ ಚಿಲುಮೆ ಬಾವಿ ಎಂದು ಕರೆಯುತ್ತಾರೆ. ಜಲಮೂಲ ಎಂದರೆ ಮರಳು ಮತ್ತು ಜಲ್ಲಿ, ಸುಣ್ಣದ ಕಲ್ಲು, ಅಥವಾ ಮರಳುಶಿಲೆ ಮುಂತಾದ ನೀರನ್ನು ತನ್ನ ಮೂಲಕ ಹರಿಯ ಬಿಡುವ ವಸ್ತುಗಳಿಂದ ಮಾಡಲ್ಪಟ್ಟ ಒಂದು ಭೌಗೋಳಿಕ ಮಟ್ಟವಾಗಿದ್ದು, ನೀರು ಅಲ್ಲಿ ಶೇಖರಗೊಂಡಿರುತ್ತದೆ. ಒಂದು ಚಿಲುಮೆ ಜಲಮೂಲವು ಅಪಾರಕ ಕಲ್ಲುಗಳು ಅಥವಾ ಮಣ್ಣಿನ ನಡುವೆ ನಿಯಂತ್ರಿಸಲ್ಪಟ್ಟಿರುವುದು ಇಂತಹ ಧನಾತ್ಮಕ ಒತ್ತಡವನ್ನು ಉಂಟುಮಾಡುತ್ತದೆ.
 • ಅಂತರ್ಜಲ ಮಟ್ಟವು ಅದರ ಮರುಪೂರಣ ವಲಯದಲ್ಲಿ ಬಾವಿಯ ಶಿರಕ್ಕಿಂತ ಹೆಚ್ಚಿನ ಎತ್ತರದ ಸ್ಥಿತಿಯಲ್ಲಿದ್ದರೆ ಜಲಮೂಲಗಳ ಮರುಪೂರಣ ಉಂಟಾಗುತ್ತದೆ. ಪಳೆಯುಳಿಕೆ ಜಲದ ಜಲಮೂಲಗಳು ಸುತ್ತಲಿನ ಕಲ್ಲುಗಳಿಂದ ಅಗತ್ಯ ಒತ್ತಡವನ್ನು ಹೊಂದಿದ್ದರೆ ಅವುಗಳೇ ಚಿಲುಮೆಗಳಾಗಬಹುದು. ಇದು ಇತ್ತೀಚೆಗೆ ಹೊಸತಾಗಿ ಕಂಡುಹಿಡಿಯಲಾದ ಎಣ್ಣೆ ಬಾವಿಗಳಂತೆ ಒತ್ತಡಕ್ಕೆ ಒಳಗಾಗುತ್ತವೆ.

ಹೆಸರಿನ ಮೂಲ[ಬದಲಾಯಿಸಿ]

ಚಿಲುಮೆ ಬಾವಿಗಳಿಗೆ ಆರ್ಟೇಸಿಯನ್ ವೆಲ್ಸ್ ಎಂಬ ಹೆಸರು ಫ್ರಾನ್ಸ್‌ನ ಆರ್ಟೋಯಿಸ್ ಪ್ರಾಂತ್ಯದ ಹೆಸರಿನಿಂದ ಬಂದಿದೆ, ಏಕೆಂದರೆ ಅಲ್ಲಿ ಅನೇಕ ಚಿಲುಮೆ ಬಾವಿಗಳನ್ನು ಕಾರ್ತೂಸಿಯನ್ ಸನ್ಯಾಸಿಗಳು ೧೧೨೬ ರ ವರ್ಷದಿಂದ ತೋಡಿದ್ದರು.[೧]

ಚಿಲುಮೆ ಬಾವಿಗಳ ಉದಾಹರಣೆಗಳು[ಬದಲಾಯಿಸಿ]

ಆಸ್ಟ್ರೇಲಿಯಾ[ಬದಲಾಯಿಸಿ]

 • ದ ಗ್ರೇಟ್ ಆರ್ಟೇಸಿಯನ್ ಬೇಸಿನ್ ಎಂಬುದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಹಾಗೂ ಆಳವಾದ ಚಿಲುಮೆ ಕಟ್ಟೆಯಾಗಿದ್ದು, ಅದು ಇಡೀ ಆಸ್ಟ್ರೇಲಿಯಾ ಖಂಡದ ೨೩% ಭಾಗವನ್ನು ಆವರಿಸಿಕೊಂಡಿದೆ.

ಸಂಯುಕ್ತ ಸಂಸ್ಥಾನ[ಬದಲಾಯಿಸಿ]

ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಕೆಲವು ಪಟ್ಟಣಗಳಿಗೆ, ಅವುಗಳ ಹತ್ತಿರದಲ್ಲಿ ಚಿಲುಮೆ ಬಾವಿಗಳಿರುವ ಕಾರಣದಿಂದಾಗಿ ಆರ್ಟೇಸಿಯಾ ಎಂದು ಕರೆಯಲಾಗುತ್ತದೆ. ಇತರೆ ಚಿಲುಮೆ ಬಾವಿಗಳಿರುವ ಸ್ಥಳಗಳೆಂದರೆ:

 • ಆಶ್‌ಲ್ಯಾಂಡ್, ವಿಸ್ಕೊನ್‌ಸಿನ್
 • ಬೀವರ್ ಕ್ರೀಕ್ ಪಾರ್ಕ್, ಹಿಲ್ ಕೌಂಟಿ, ಹಾವ್ರೆ, ಮೊಂಟಾನಾ
 • ಬ್ಲ್ಯಾಕ್ ಬೆಲ್ಟ್‌ (ಪ್ರದೇಶ), ಅಲಬಾಮಾ
 • ಬೊಯಲಿಂಗ್ ಸ್ಪ್ರಿಂಗ್ಸ್, ಪೆನ್‌ಸಿಲ್ವೇನಿಯಾ
 • ಬ್ರೌನ್ ಪ್ಯಾಲೆಸ್ ಹೊಟೆಲ್‌, ಡೆನ್ವರ್, ಕೊಲರಾಡೊ
 • ಕ್ಯಾಂಪ್ ಲೆವಿಸ್, ನ್ಯೂಜರ್ಸಿ
 • ಕಾರ್ಮೆಲ್, ಇಂಡಿಯಾನಾ
 • ಚಟಾವಾ, ಮಿಸಿಸ್ಸಿಪ್ಪಿ
 • ಚೆಸ್ಟರ‍್ಟೌನ್, ನ್ಯೂಯಾರ್ಕ್
 • ಡಲ್ಲಾಸ್, ಒರೆಗಾಂ
 • ಡಾಯ್ ರನ್, ಮಸ್ಸೂರಿ
 • ಇವಾಮೊರ್ , ಗುಡ್ ಬಿ, ಲೂಸಿಯಾನಾ
 • ಫೌಂಟೇನ್ ಪಾಯಿಂಟ್‌, ಮಿಚಿಗನ್
 • ಗೇಜ್, ಒಕ್ಲಾಹಾಮಾ
 • ಗಿಲ್ಲಿಸ್ ಸ್ಪ್ರಿಂಗ್ಸ್, ಟ್ರೌಟ್‌ಲೆನ್ ಕೌಂಟಿ, ಜಾರ್ಜಿಯಾ
 • ಹಿಕ್ಸ್‌ವಿಲ್ಲೆ, ಒಹಿಯೊ
 • ಜೆರೊಮ್, ಮಸ್ಸೂರಿ
 • ಕೆಂಟ್‌ವುಡ್, ಲೂಸಿಯಾನಾ
 • ಲಾ ಕ್ರಾಸ್ಸೆ, ವಿಸ್ಕಾಸಿನ್
 • ಲೆಂಕ್ಸಿಂಗ್‌ಟನ್, ಕೆಂಟುಕಿ
 • ಲಾಂಗ್ ಐಲಂಡ್, ನ್ಯೂಯಾರ್ಕ್
 • ಲಿನ್‌ವುಡ್, ವಾಶಿಂಗ್‌ಟನ್
 • ಮೆಂಫಿಸ್, ಟೆನ್ನೆಸೆ
 • ಮೊನ್ಯುಮೆಂಟ್‌ ವ್ಯಾಲಿ, ಉಟಾ
 • ಒಲಂಪಿಯಾ, ವಾಶಿಂಗ್‌ಟನ್
 • ಪಾಹ್‌ರುಂಪ್, ನೆವಾಡಾ
 • ಪಾಮ್ ಸ್ಪ್ರಿಂಗ್ಸ್‌, ಕ್ಯಾಲಿಫೋರ್ನಿಯಾ
 • ಪೊಟೊಮ್ಯಾಕ್, ಇಲಿನಾಯ್ಸ್
 • ಪ್ರಾಟ್‌ವಿಲೆ, ಅಲಬಾಮಾ
 • ಸ್ಯಾಂಡ್‌ವಿಚ್‌, ಮೆಸ್ಸಾಚ್ಯುಸೆಟ್ಸ್
 • ಸಾಲ್ಟ್ ಲೇಕ್ ಸಿಟಿ, ಉಟಾ
 • ಸಿಯೆರ್ರಾ ಮ್ಯಾಡ್ರೆ, ಕ್ಯಾಲಿಫೋರ್ನಿಯಾ
 • ಸಿಲ್ವರ್ ಸ್ಪ್ರಿಂಗ್ಸ್, ಫ್ಲೊರಿಡಾ, ಚಿಲುಮೆ ಕಾರಂಜಿಯಿರುವ ಪ್ರಪಂಚದ ಅತಿ ದೊಡ್ಡ ಪ್ರದೇಶ.
 • ಸಿಟ್ಕಾ, ಅಲಾಸ್ಕಾ
 • ಸ್ಮೋಕ್ ಹೋಲ್ ಕಾವರ್ನ್ಸ್, ಸೆನೆಕಾ ರಾಕ್ಸ್, ವೆಸ್ಟ್ ವರ್ಜಿನಿಯಾ
 • ಸೌತ್‌ ಡಕೊಟಾ (ಇದರ ಹೆಚ್ಚಿನ ಪ್ರದೇಶಗಳು ಮಸ್ಸೂರಿ ನದಿಯ ಪೂರ್ವ ಭಾಗದವಾಗಿವೆ.
 • ಟೆಲ್‌ಫೇರ್ ಕೌಂಟಿ, ಜಾರ್ಜಿಯಾ (ಕನಿಷ್ಠ ೫೦ ಬಾವಿಗಳು)
 • ವಾಶ್ ಬರ್ನ್, ವಿಸ್ಕಾಸಿನ್
 • ವಾಟರ್‌ವ್ಲೈಟ್‌ ಮಿಚಿಗನ್
 • ವಿಲಿಯಮ್ಸ್‌ಟೌನ್, ಮೆಸ್ಸಾಚ್ಯೂಸೆಟ್ಸ್
 • ವುಡ್‌ವರ್ಡ್, ಒಕ್ಲಾಹಾಮಾ

ಕೆನಡಾ[ಬದಲಾಯಿಸಿ]

 • ವೈಟ್‌ ರಾಕ್, ಬ್ರಿಟೀಶ್‌ ಕೊಲಂಬಿಯಾ.
 • ವಾಟರ್‌ಶೆಡ್ ಪಾರ್ಕ್, ಬ್ರಿಟೀಷ್ ಕೊಲಂಬಿಯಾ
 • ಪೆಂಬರ್ಟನ್ ಬ್ರಿಟೀಷ್ ಕೊಲಂಬಿಯಾ
 • ಆರ್ನ್ಸ್, ಮ್ಯಾನಿಟೊಬಾ
 • ಟಿನಿ, ಒಂಟಾರಿಯೊ
 • ವಸಾಗಾ ಬೀಚ್, ಒಂಟಾರಿಯೊ
 • ಬ್ರೊಕ್‌ಟಾನ್, ಒಂಟಾರಿಯೊ, ಪ್ರಸ್ತುತ ವಾಕರ್‌ಟನ್ಸ್ ನೀರು ವಾಕರ್‌ಟನ್ ಟ್ರಾಜಿಡಿಯ ದಾರಿ ಹಿಡಿದಿದೆ.
 • ಟೆಸ್‌ವಾಟರ್, ಒಂಟಾರಿಯೊ
 • ಸ್ಟ್ರಾಟ್‌ಫರ್ಡ್, ಒಂಟಾರಿಯೊ
 • ಅರ್ಡೊಯ್ಸ್, ನೊವಾ ಸ್ಕೊಟಿಯಾ
 • ವೇ ಮೌತ್, ನೊವಾ ಸ್ಕೊಟಿಯಾ

ಇಟಲಿ[ಬದಲಾಯಿಸಿ]

 • ಅಕ್ವಿಲಿಯಾ, ಫ್ರ್ಯೂಲಿ ವೆನೆಜಿಯಾ, ಗಿಲಿಯಾ

ಫಿಜಿ[ಬದಲಾಯಿಸಿ]

 • ಯಕ್ವಾರಾ ವಾಲಿ, ವಿಟಿ ಲೆವು [೨]

ಸ್ಪೇನ್[ಬದಲಾಯಿಸಿ]

 • ಸೆಲ್ಲಾ, ಟೆರ್ಯೂಲ್, ಅರಾಗಾನ್

ಯುನೈಟೆಡ್‌ ಕಿಂಗ್‌ಡಮ್‌[ಬದಲಾಯಿಸಿ]

 • ಟ್ರಾಫಲ್ಗರ್ ಸ್ಕ್ವೈರ್ ಚಿಲುಮೆಗಳು, ಲಂಡನ್ (೧೮೪೪ ರಿಂದ ಸುಮಾರು ೧೮೯೦ರ ವರೆಗೆ) ಈ ಬಾವಿಗಳು ಸುಮಾರು ೧೩೦ಮೀ. ಆಳವಾಗಿದ್ದವು.

ಫ್ರಾನ್ಸ್‌‌[ಬದಲಾಯಿಸಿ]

 • ಪ್ಯಾರಿಸ್‌ನ ಗ್ರೀನಿಲ್ಲೆ ಬಾವಿ(೧೮೪೧ ರಂದು ತೆರೆಯಲಾಯಿತು) ಇದು ಸುಮಾರು ೬೦೦ಮೀ ಆಳವಿದೆ.
 • ಪಾಸ್ಸೀ ಬಾವಿ, ಫ್ರಾನ್ಸ್ (೧೮೬೦ರಂದು ತೆರೆಯಲಾಯಿತು)
 • ಅನೇಕ ವರ್ಷಗಳವರೆಗೆ, ಓಲಂಪಿಯಾ ಬಿಯರ್ ಗಾಗಿ (ಟಮ್‌ವಾಟರ್, ವಾಶಿಂಗ್‌ಟನ್) ಚಿಲುಮೆ ಬಾವಿಯ ನೀರನ್ನೇ ಸರಬರಾಜು ಮಾಡಲಾಗುತ್ತಿತ್ತು. ಚಿಲುಮೆ ಮದ್ಯ ತಯಾರಿಕೆಯ ಪ್ರಕ್ರಿಯೆಯಲ್ಲಿ ಈ ಚಿಲುಮೆಯನ್ನು ಬಳಸಿಕೊಂಡಿದ್ದನ್ನು ಸಹಾ ತನ್ನ ಪ್ರಚಾರದಲ್ಲಿ ಈ ಸಂಸ್ಥೆಯು ಬಳಸಿಕೊಂಡಿತು, ಆದರೆ, ಜಾಹೀರಾತುಗಳು ಚಿಲುಮೆ ನೀರು ಅಂದರೆ ಏನೆಂದು ಹೇಳಲಿಲ್ಲ, ಆದರೆ "ಚಿಲುಮೆಗಳ" ಗುಂಪುಗಳು ಈ ನೀರನ್ನು ನಿಯಂತ್ರಿಸುತ್ತವೆ ಎಂದು ಹೇಳಿತು.[೩] ಮದ್ಯ ತಯಾರಿಕಾ ಘಟಕವನ್ನು ಇನ್ನೊಂದು ಕಂಪನಿ ಕೊಂಡ ನಂತರದಲ್ಲಿ, ಈ ಚಿಲುಮೆ ನೀರಿನ ಬಳಕೆ ನಿಂತು ಹೋಯಿತು, ಮತ್ತು ಜಾಹೀರಾತು ಕೂಡಾ.[೪]
 • ಕೆನಡಾದ ಒಂಟಾರಿಯೋನ ಕ್ರೀಮೊರ್ ನಗರದಲ್ಲಿರುವ ಕ್ರೀಮೊರ್ ಸ್ಪ್ರಿಂಗ್ಸ್ ಮದ್ಯ ಘಟಕವು ತನ್ನ ಎಲ್ಲಾ ಮದ್ಯ ತಯಾರಿಕೆಗೆ ವಿಶೇಷವಾಗಿ ಚಿಲುಮೆ ಬಾವಿಯನ್ನೇ ಬಳಸುತ್ತದೆ. ಇದಕ್ಕೆ ಈ ಕಂಪನಿಯ ಮಾಲೀಕರೊಬ್ಬರ ಆಸ್ತಿಯಲ್ಲಿರು ನೀರು ಕ್ರೀಮೊರ್ ಚಿಲುಮೆಯಿಂದ ಬರುತ್ತದೆ. ಪ್ರತಿದಿನ ೧೦,೦೦೦ಲೀ ಟ್ರಕ್ ಲೋಡ್‌ಗಳಷ್ಟು ನೀರನ್ನು ಬಾವಿಯಿಂದ ಮದ್ಯ ಘಟಕ್ಕೆ ಸರಬರಾಜು ಮಾಡಲಾಗುತ್ತದೆ; ಮತ್ತು ಪ್ರತಿಯೊಂದು ಟ್ರಕ್ ಲೋಡ್ ಒಂದು ಬಾರಿಯ ತಯಾರಿಕೆಗೆ ಸಾಕಾಗುತ್ತದೆ.
 • ಓಲಂಪಿಯಾ ಮಧ್ಯಭಾಗದಲ್ಲಿ, ಉಳಿದ ಒಂದು ಸಾರ್ವಜನಿಕ ಬಾವಿಯಲ್ಲಿ ಚಿಲುಮೆ ನೀರಿನ ಬಳಕೆಯನ್ನು ಉಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನವನ್ನು ಎಚ್೨ಒಲಂಪಿಯಾ: ಚಿಲುಮೆ ವೆಲ್ ಅಡ್ವೊಕೇಟ್ಸ್.[೫]

ಇವನ್ನೂ ನೋಡಿ[ಬದಲಾಯಿಸಿ]

 • ಕುಡಿಯುವ ನೀರು
 • ದ್ರವ ಯಂತ್ರಶಾಸ್ತ್ರ‌
 • ಗ್ರೇಟ್‌ ಆರ್ಟಿಸಾನ್ ಬೇಸನ್
 • ಹೈಡ್ರೊಜಿಯಾಲಜಿ
 • ಕ್ವಾನಟ್‌
 • ಅಲ್ಫ್ರೆಡಿನೊ ರಾಂಪಿ

ಟಿಪ್ಪಣಿಗಳು[ಬದಲಾಯಿಸಿ]

 1. ಫ್ರಾನ್ಸಿಸ್ ಗೈಸ್ ಆಂಡ್‌ ಜೊಸೆಫ್‌ ಗೈಸ್ , ಕ್ಯಾಥಡ್ರೆಲ್, ಫೋರ್ಜ್ ಆಂಡ್ ವಾಟರ್ ವೀಲ್ ಅಡಿಬರಹ- ’ಟೆಕ್ನಾಲಜಿ ಆಂಡ್ ಇನ್‌ವೆನ್ಷನ್ ಇನ್ ದಿ ಮಿಡ್ಲ್ ಏಜಸ್". ಹಾರ್ಪರ್, ಪೆರಿನಿಯಲ್, ೧೯೯೫ ISBN ೦-೦೬-೦೧೬೫೯೦-೧, ಪುಟ ೧೧೨.
 2. http://www.npr.org/templates/story/story.php?storyId=೧೩೧೬೫೬೫೨೩[permanent dead link]
 3. ಕೆಲ್ಲಿ ಅಡ್ವರ್ಟೈಸಿಂಗ್‌ ಆಂಡ್‌ ಮಾರ್ಕೆಟಿಂಗ್‌: ಒಲಂಪಿಯಾ ಬೀರ್ : ಎ ಗುಡ್‌ ಕ್ಯಾಂಪೇನ್ ಎಕ್ಸಲರೇಟ್‌ ದಿ ಡೆತ್ ಆಫ್ ಬ್ರಾಂಡ್ ಲಭ್ಯವಾದದ್ದು ೨೦೦೮.೧೧.೦೭.
 4. ಬಿಯರ್ ಅಡ್ವೊಕೇಟ್‌: ಒಲಂಪಿಯಾ ಬಿಯರ್ ಲಭ್ಯವಾದದ್ದು ೨೦೦೮.೧೧.೦೭.
 5. "ಇಟ್ ಈಸ್ ಸ್ಟಿಲ್ ದಿ ವಾಟರ್" ಥರ್ಸ್‌ಸ್ಟನ್ ಕೌಂಟಿ ಪಿಯಡಿ ರಿಪೋರ್ಟ್‌ - ಕನೆಕ್ಷನ್ಸ್‌, ಸಮರ್ ೨೦೦೯, ೩ ನೇ ಆವೃತ್ತಿ, ನಂ.೩ - http://www.wpuda.org/PDF_files/Connections/Summer2009final.pdf Archived 2011-10-08 at the Wayback Machine.