ವಿಷಯಕ್ಕೆ ಹೋಗು

ಗಿನಿ (ಪ್ರದೇಶ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
"ಐರೋಪ್ಯ ವಸಾಹತುಗಳೊಂದಿಗೆ ನೀಗ್ರೊಲ್ಯಾಂಡ್ ಮತ್ತು ಗಿನಿ", ಹರ್ಮಾನ್ ಮೋಲ್, 1727

ಪಶ್ಚಿಮ ಆಫ್ರಿಕದಲ್ಲಿ ಉ.ಅ. 150, ದ.ಅ. 150 ನಡುವೆ-ಕೇಪ್ ವರ್ಡ್‌ನಿಂದ ಆಂಗೋಲದ ಮೋಕಮಿಡಿಸ್‌ವರೆಗೆ-ಹಬ್ಬಿರುವ ಕರಾವಳಿ ಪ್ರದೇಶಕ್ಕೆ ಸ್ಥೂಲವಾಗಿ ಈ ಹೆಸರಿದೆ. ಗಿನಿ ಖಾರಿಯಲ್ಲಿರುವ ಅನೊಬಾನ್ ದ್ವೀಪದಿಂದ ಸೌ ತೂಮೇ ದ್ವೀಪದ ಮೂಲಕ ಹಾಯ್ದು ಕ್ಯಾಮರೂನ್ ಪರ್ವತದವರೆಗೆ ಇರುವ ಜ್ವಾಲಾಮುಖೀಯ ಶಿಖರಗಳ ಸಾಲಿಗೆ ಪಶ್ಚಿಮದಲ್ಲಿರುವ ಪ್ರದೇಶ ಮೇಲಣ ಗಿನಿ; ಅದಕ್ಕೆ ದಕ್ಷಿಣದಲ್ಲಿರುವ ಪ್ರದೇಶ ಕೆಳಗಣ ಗಿನಿ. ಈ ಕರಾವಳಿಯ ಮಗ್ಗುಲಿಗೆ ಗಿನಿ ಖಾರಿಯಿದೆ.

ಶಬ್ದ ವ್ಯುತ್ಪತ್ತಿ

[ಬದಲಾಯಿಸಿ]

ಇದು ಅಟ್ಲಾಂಟಿಕ್ ಸಾಗರದ ಭಾಗ 8ನೆಯ ಶತಮಾನದಲ್ಲಿ ಮೇಲಣ ನೈಜರ್ ನದೀ ಪ್ರದೇಶದಲ್ಲಿದ್ದ (Upper Niger river basin), ಘಿನಿ, ಗೆನಿ, ಜೆನಿ, ಡ್ಜೆನಿ ಎಂದು ಕರೆಯಲಾಗುತ್ತಿದ್ದ ರಾಜ್ಯದಿಂದಲೋ,[] ಪಶ್ಚಿಮ ಸೂಡಾನಿನ ಅತ್ಯಂತ ಪ್ರಾಚೀನ ದೇಶವೆಂದು ಭಾವಿಸಲಾಗಿರುವ ಘಾನದಿಂದಲೋ ಗಿನಿ ಎಂಬ ಹೆಸರು ಬಂದಿರಬೇಕೆಂದು ಊಹಿಸಲಾಗಿದೆ.

ಇತಿಹಾಸ

[ಬದಲಾಯಿಸಿ]

ಸುಮಾರು 1350ರಿಂದಲೇ ಗಿನಿಯ ಹೆಸರು ಭೂಪಟಗಳ ಮೇಲೆ ಕಾಣಬರುತ್ತದೆ. 1364-65ರಷ್ಟು ಹಿಂದೆಯೇ ಉತ್ತರ ಫ್ರಾನ್ಸಿನ ಡಿಯೆಪ್ ಬಂದರಿನಿಂದ ಹೊರಟ ಹಡಗುಗಳು ಗಿನಿ ತೀರವನ್ನು ಮುಟ್ಟಿದ್ದುವೆಂದೂ, ಘಾನದವರೆಗೂ ಫ್ರೆಂಚ್ ವರ್ತಕರು ತಮ್ಮ ವ್ಯಾಪಾರ ಕೇಂದ್ರಗಳನ್ನು ತೆರೆದಿದ್ದರೆಂದೂ ಫ್ರೆಂಚರು ಹೇಳಿಕೊಳ್ಳುತ್ತಾರೆ. ಆದರೆ ಇದಕ್ಕೆ ಖಚಿತವಾದ ಆಧಾರಗಳಿಲ್ಲ. ಪೋರ್ಚುಗೀಸ್ ನಾವಿಕರು ಉ.ಅ. 260 ಯಲ್ಲಿರುವ ಬಾಜಡಾರ್ ಭೂಶಿರವನ್ನು 1434ರಲ್ಲಿ ಬಳಸಿದರು.[] ಕೆಲವು ವರ್ಷಗಳ ಅನಂತರ ಈ ಪ್ರದೇಶದಿಂದ ಸರಕುಗಳನ್ನೂ ಗುಲಾಮರನ್ನೂ ಲಿಸ್ಬನಿಗೆ ಮೊಟ್ಟಮೊದಲಿಗೆ ತರಲಾಯಿತು. ಪೋರ್ಚುಗೀಸರು 1471ರಲ್ಲಿ ಸಮಭಾಜಕವನ್ನು ತಲಪಿದರು. ಕಾಂಗೋದ ಆವಿಷ್ಕಾರವಾದ್ದು 1482ರಲ್ಲಿ.[] ಇತರ ಐರೋಪ್ಯ ದೇಶಗಳವರು ಈ ಪ್ರದೇಶಕ್ಕೆ ಬಂದದ್ದು 1530ರಲ್ಲಿ ಅನಂತರ. ಅವರೆಲ್ಲ ಇಲ್ಲಿ ವ್ಯಾಪಾರ ಕೇಂದ್ರಗಳನ್ನು ತೆರೆದರು.

ಉಪವಿಭಾಗಗಳು

[ಬದಲಾಯಿಸಿ]

ಈ ಪ್ರದೇಶದ ಒಂದೊಂದು ಭಾಗಕ್ಕೂ ಅಲ್ಲಿಯ ಪ್ರಧಾನ ವಸ್ತುವಿಗೆ ಅನುಗುಣವಾದ ಹೆಸರು ಬಂತು. ಸಿಯೆರ ಲಿಯೋನಿನಿಂದ ಪಾಲ್ಮಾಸ್‍ವರೆಗಿನ ಪ್ರದೇಶ ಗ್ರೇನ್ ಕೋಸ್ಟ್ (ಧಾನ್ಯ ಕರಾವಳಿ) ಎನಿಸಿಕೊಂಡಿದೆ. ಸ್ವರ್ಗದ ಧಾನ್ಯವೆಂದು ಕರೆಯಲಾದ ಗಿನಿ ಪೆಪರ್ ಇಲ್ಲಿಯ ಮುಖ್ಯ ವಸ್ತು.[] ಪಾಲ್ಮಾಸ್‌ನಿಂದ ಆಚೆಗಿನ ಪ್ರದೇಶ ಐವರಿ ಕೋಸ್ಟ್ (ದಂತ ಕರಾವಳಿ). ವೋಲ್ಟ ನದಿಯಿಂದ ನೈಜರ್ ನದೀಮುಖಜಭೂಮಿಯವರೆಗಿನದು ಸ್ಲೇವ್ ಕೋಸ್ಟ್ (ಗುಲಾಮ ಕರಾವಳಿ). ತ್ರೀ ಪಾಯಿಂಟ್ಸ್ ಭೂಶಿರಕ್ಕೆ ಪೂರ್ವದ ಪ್ರದೇಶ ಗೋಲ್ಡ್ ಕೋಸ್ಟ್ (ಚಿನ್ನದ ಕರಾವಳಿ). ಗಿನಿ ಗಣರಾಜ್ಯ, ಸೆಯೆರ ಲಿಯೋನ್, ಲೈಬೀರಿಯ, ಐವರಿ ಕೋಸ್ಟ್ ಗಣರಾಜ್ಯ, ಉತ್ತರ ವೋಲ್ಟ, ಘಾನ, ಟೋಗೋ, ದಹೋಮಿ ಗಣರಾಜ್ಯ, ನೈಜೀರಿಯ, ಕ್ಯಾಮರೂನ್, ಸಮಭಾಜಕೀಯ ಗಿನಿ, ಗ್ಯಾಬನ್, ಗ್ಯಾಂಬಿಯ, ಪೋರ್ಚುಗೀಸ್ ಗಿನಿ-ಇವು ಗಿನಿ ಪ್ರದೇಶದಲ್ಲಿರುವ ಮುಖ್ಯ ದೇಶಗಳು.

ಉಲ್ಲೇಖಗಳು

[ಬದಲಾಯಿಸಿ]
  1. Leo Africanus uses the word "Ghinea" for both a village and a large kingdom.
  2. Samuel Morison (1974)
  3. Cana 1911, p. 917.
  4. Laurie's Sailing Directory for the Ethiopic or Southern Atlantic Ocean to the Rio de la Plata, Cape Horn, and the Cape of Good Hope etc., including the Islands between the two coasts (4th ed.). 1855.

ಗ್ರಂಥಸೂಚಿ

[ಬದಲಾಯಿಸಿ]
  • Morison, Samuel Eliot (1974), The European Discovery of America: The Southern Voyages, 1492–1616, New York: Oxford University Press
  •  Cana, Frank Richardson (1911). "Congo" . In Chisholm, Hugh (ed.). Encyclopædia Britannica. Vol. 6 (11th ed.). Cambridge University Press. pp. 914–917. {{cite encyclopedia}}: Cite has empty unknown parameters: |HIDE_PARAMETER= and |separator= (help)



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: