ಗಣಪತಿ ಭಟ್ಟ ಹಾಸಣಗಿ

ವಿಕಿಪೀಡಿಯ ಇಂದ
Jump to navigation Jump to search
ಪಂಡಿತ್ ಗಣಪತಿ ಭಟ್ಟ

ಗಣಪತಿ ಭಟ್ಟ ಹಾಸಣಗಿ ಸುಪ್ರಸಿದ್ಧ ಹಿಂದುಸ್ತಾನಿ ಶಾಸ್ತ್ರೀಯ ಶೈಲಿಯ ಗಾಯಕರು. ಚಿಕ್ಕಂದಿನಿಂದಲೇ ಇವರಿಗೆ ಸಂಗೀತದ ಕಡೆಗೆ ಒಲವಿತ್ತು. ಇವರ ಆರನೇಯ ವಯಸ್ಸಿನಲ್ಲಿ ಪೌರೋಹಿತ್ಯ ಮಾಡುತ್ತಿದ್ದ ಭಟ್ಟರು ಇವರನ್ನು ದತ್ತಕ ಪುತ್ರನನ್ನಾಗಿ ಮಾಡಿಕೊಂಡರು. ಹತ್ತಿರದ ಮಂಚಿಕೇರಿಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆ ಮುಂದಿನ ಶಿಕ್ಷಣದ ಪ್ರಶ್ನೆಯೆ ಇರಲಿಲ್ಲ. ತಲೆತಲಾಂತರಗಳಿಂದ ಬಂದ ಪೌರೋಹಿತ್ಯವನ್ನು ಮುಂದುವರೆಸಲು ವೇದ ಪಾಠಶಾಲೆಯನ್ನು ಸೇರಬೇಕೋ ಅಥವಾ ಸಂಗೀತ ಕಲೆಯಲು ಬೇರೆಡೆಗೆ ಹೋಗಬೇಕೋ ಎಂಬುದು ಪ್ರಶ್ನೆಯಾಗಿತ್ತು. ಇದೇ ಪ್ರಶ್ನೆಯೊಂದಿಗೆ ಧಾರವಾಡಕರ್ನಾಟಕ ಕಾಲೇಜಿಗೆ ಸಂಗೀತದ ಒಂದು ಅಲ್ಪಾವಧಿ ತರಬೇತಿಗಾಗಿ ಬಂದಿಳಿದರು. ಭಟ್ ಸಿತಾರ್ ವಾದಕ ಸಂಗೀತ ತರಬೇತಿ ಪ್ರಾರಂಭವಾಯಿತು, ಆದರೆ ಹಿಂದೂಸ್ತಾನಿ ಗಾಯನ ಸಂಗೀತ ಎಳೆದುಕೊಂಡರು. ಅವರು ಹಾಸನಗಿ, ಭಾರತದ ಕರ್ನಾಟಕ ರಾಜ್ಯದ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದರು. ಅವರು ಬಸವರಾಜ ರಾಜಗುರು ಶಿಷ್ಯ.