ಕೋಟಿಗೊಬ್ಬ-3 (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kotigobba 3
ನಿರ್ದೇಶನಶಿವ ಕಾರ್ತಿಕ್
ನಿರ್ಮಾಪಕಸೂರಪ್ಪ ಬಾಬು[೧]
ಲೇಖಕಶಿವ ಕಾರ್ತಿಕ್
ಕಥೆಸುದೀಪ್[೨]
ಪಾತ್ರವರ್ಗಸುದೀಪ್
ಮಡೋನಾ ಸೆಬಾಸ್ಟಿಯನ್
ಸಂಗೀತಅರ್ಜುನ್ ಜನ್ಯ[೩]
ಛಾಯಾಗ್ರಹಣಶೇಖರ್ ಚಂದ್ರು[೪]
ಸಂಕಲನಗೋರನ್ ಇವಾನೊವಿಕ್ [೫]
ಸ್ಟುಡಿಯೋರಾಮ್ ಬಾಬು ಪ್ರೊಡಕ್ಷನ್ಸ್
ವಿತರಕರುರಾಕ್ ಲೈನ್ ಎಂಟರ್ಟೈನ್ಮೆಂಟ್ಸ್
ಬಿಡುಗಡೆಯಾಗಿದ್ದು೧೫-ಅಕ್ಟೋಬರ್-೨೦೨೧
ಅವಧಿ೧೪೦ ನಿಮಿಷಗಳು
ಬಂಡವಾಳ70 ಕೋಟಿ [೨]
ಬಾಕ್ಸ್ ಆಫೀಸ್ 40.5 ಕೋಟಿ (4 ದಿನಗಳಲ್ಲಿ) [೬][೭]

ಕೋಟಿಗೊಬ್ಬ 3 ಶಿವ ಕಾರ್ತಿಕ್ ನಿರ್ದೇಶನದ 2021 ರ ದರೋಡೆ ಕುರಿತಾದ ಆಕ್ಷನ್ ಚಿತ್ರವಾಗಿದೆ. [೮] ಈ ಚಿತ್ರದಲ್ಲಿ ಸುದೀಪ್, ಮಡೋನಾ ಸೆಬಾಸ್ಟಿಯನ್ , ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ ಮತ್ತು ಪಿ. ರವಿಶಂಕರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. [೯] [೧೦] [೧೧] ಇದು 2016 ರ ಕೋಟಿಗೊಬ್ಬ 2 ಚಿತ್ರದ ಮುಂದುವರಿದ ಭಾಗವಾಗಿದ್ದು, ಸುದೀಪ್ ಮತ್ತು ರವಿಶಂಕರ್ ಹಿಂದಿನ ಚಿತ್ರದಿಂದ ತಮ್ಮ ಪಾತ್ರಗಳನ್ನು ಪುನರಾವರ್ತಿಸಿದ್ದಾರೆ. [೧೨] ಚಿತ್ರವು ಅಕ್ಟೋಬರ್ 15, 2021 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಪಾತ್ರವರ್ಗ[ಬದಲಾಯಿಸಿ]

 • ಸುದೀಪ್ ಸತ್ಯ / ಶಿವ ಅಥವಾ ಪ್ರೇತ (ದ್ವಿಪಾತ್ರ)ವಾಗಿ
 • ಪ್ರಿಯಾ ಪಾತ್ರದಲ್ಲಿ ಮಡೋನಾ ಸೆಬಾಸ್ಟಿಯನ್
 • ಕಂಗನಾ, ಇಂಟರ್‌ಪೋಲ್ ಅಧಿಕಾರಿಯಾಗಿ ಶ್ರದ್ಧಾ ದಾಸ್
 • ಕಿಶೋರ್ ಪಾತ್ರದಲ್ಲಿ ಪಿ. ರವಿಶಂಕರ್
 • ಶರತ್, ಇಂಟರ್‌ಪೋಲ್ ಅಧಿಕಾರಿಯಾಗಿ ಅಫ್ತಾಬ್ ಶಿವದಾಸನಿ
 • ಅಭಿರಾಮಿ ಸತ್ಯ ಮತ್ತು ಶಿವನ ತಾಯಿ ದುರ್ಗಾ IAS ಆಗಿ
 • ದೇವೇಂದ್ರನಾಗಿ ನವಾಬ್ ಶಾ
 • ಬಶೀರ್ ಭಾಯಿ ಪಾತ್ರದಲ್ಲಿ ದಾನಿಶ್ ಅಖ್ತರ್ ಸೈಫಿ
 • ದೊಡ್ಡಣ್ಣ ಪೊಲೀಸ್ ಕಮಿಷನರ್ ಆಗಿ
 • ಪೊಲೀಸ್ ಅಧಿಕಾರಿಯಾಗಿ ಓಂ ಪ್ರಕಾಶ್ ರಾವ್
 • ಇಂಟರ್‌ಪೋಲ್‌ನಿಂದ ಪ್ರಿಯಾಳ ಗಾರ್ಡ್ ಆಗಿ ತಬಲಾ ನಾನಿ
 • ಶೋಬರಾಜ್ ಎಸಿಪಿಯಾಗಿ
 • ರವಿಶಂಕರ್ ಗೌಡ ಸುಂದರ್ ಪ್ರಿಯಾ ಅವರ ಸಂಬಂಧಿ ಪಾತ್ರದಲ್ಲಿ
 • ಪ್ರಿಯಾ ಅವರ ತಾತನಾಗಿ ರಮೇಶ್ ಭಟ್
 • ಪ್ರಿಯಾಳ ಅಜ್ಜಿಯಾಗಿ ಕವಿತಾ
 • ದುರ್ಗೆಯ ಸಹೋದರ ಡಾಕ್ಟರ್ ಅನಂತಕೃಷ್ಣನಾಗಿ ರಾಜೇಶ್ ನಟರಂಗ,
 • ದುರ್ಗೆಯ ಅತ್ತಿಗೆಯಾಗಿ ಸಂಗೀತಾ
 • ಜಾನು ಪಾತ್ರದಲ್ಲಿ ಬೇಬಿ ಆದ್ಯ
 • ದೇವೇಂದ್ರನ ಸಹಾಯಕನಾಗಿ ರಂಗಾಯಣ ರಘು
 • ದೇವೇಂದ್ರನ ಮಗನಾಗಿ ತಾರಕ್ ಪೊನ್ನಪ್ಪ
 • ರಾಜ್ ದೀಪಕ್ ಶೆಟ್ಟಿ ದೇವೇಂದ್ರನ ಸಹಾಯಕ ಮೈಕೆಲ್ ಆಗಿ,
 • ಸತ್ಯನ ಸ್ನೇಹಿತನಾಗಿ ದಿನೇಶ್
 • ಶ್ರೀ ಮಹಾದೇವ ಸತ್ಯನ ಗೆಳೆಯನಾಗಿ
 • ಪತ್ರಿಕಾ ವರದಿಗಾರ ರಮೇಶನಾಗಿ ಕಾರ್ತಿ ಸೌಂದರಂ
 • ಶಿವರಾಜ್ ಕೆ ಆರ್ ಪೇಟೆ ಕುಡುಕನಾಗಿ
 • "ಆಕಾಶನೇ ಆದರಿಸುವ" ಹಾಡಿನಲ್ಲಿ ಕೃಷ್ಣ ವಿಶೇಷ ಪಾತ್ರದಲ್ಲಿ
 • "ಆಕಾಶನೇ ಆದರಿಸುವ" ಹಾಡಿನಲ್ಲಿ ಪ್ರದೀಪ್ ಬೋಗಾದಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
 • ಆಶಿಕಾ ರಂಗನಾಥ್ "ಪಟಾಕಿ ಪೋರಿಯೋ" ಹಾಡಿನಲ್ಲಿ ವಿಶೇಷ ಪಾತ್ರ ಚಮೇಲಿಯಾಗಿ

ನಿರ್ಮಾಣ[ಬದಲಾಯಿಸಿ]

ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣ ಜೂನ್ 2018 ರಲ್ಲಿ ಬೆಲ್‌ಗ್ರೇಡ್‌ನಲ್ಲಿ ಪ್ರಾರಂಭವಾಯಿತು . [೧೩] [೧೪] ಪೈಲ್ವಾನ್ ಚಿತ್ರದ ಕಮಿಟ್‌ಮೆಂಟ್‌ಗಳನ್ನು ಮುಗಿಸಿದ ನಂತರ ನಾಯಕ ನಟ ಸುದೀಪ್ ಮಾರ್ಚ್ 2019 ರಲ್ಲಿ ಮತ್ತೆ ಇದರ ನಿರ್ಮಾಣದಲ್ಲಿ ಸೇರಿಕೊಂಡರು. [೧೫] ನಾಯಕಿ ಮಡೋನಾ ಸೆಬಾಸ್ಟಿಯನ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. [೧೬] ಕೋಟಿಗೊಬ್ಬ -3 ದ ಚಿತ್ರೀಕರಣವು ಸುದೀಪ್ ಅವರ ತೆಲುಗು ಚಿತ್ರ ಸೈರಾ ನರಸಿಂಹ ರೆಡ್ಡಿದ ಚಿತ್ರೀಕರಣ [೧೭] ಮತ್ತು ಹೈದರಾಬಾದಿನ ಸೆಟ್ ಒಂದರಲ್ಲಿ ಅವರಿಗಾದ ಗಾಯ [೧೮] ಈ ಕಾರಣಗಳಿಂದಾಗಿ ಚಿತ್ರೀಕರಣ ತಡೆದು ತಡೆದು ಮುಂದುವರೆಯಿತು. ಚಿತ್ರದ ಭಾಗಗಳನ್ನು ಸೆರ್ಬಿಯಾ, ಮಲೇಷಿಯಾ, ಥೈಲ್ಯಾಂಡ್ ಮತ್ತು ಪೋಲೆಂಡ್ ಸೇರಿದಂತೆ ಇತರ ದೇಶಗಳಲ್ಲಿ ಚಿತ್ರೀಕರಿಸಲಾಗಿದೆ . [೧೯] ಚಿತ್ರೀಕರಣವು ಜನವರಿ 2020 ರಲ್ಲಿ ಪೂರ್ಣಗೊಂಡಿತು, [೨೦] ನಂತರ ಪುದುಚೇರಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಹಾಡಿನ ದೃಶ್ಯಗಳ ಚಿತ್ರೀಕರಣವನ್ನು ನಡೆಸಲಾಯಿತು.

ಮಾರ್ಕೆಟಿಂಗ್ ಮತ್ತು ಬಿಡುಗಡೆ[ಬದಲಾಯಿಸಿ]

ಹಕ್ಕುಸ್ವಾಮ್ಯ ಉಲ್ಲಂಘನೆಯ ಕ್ಲೈಮ್‌ನಿಂದಾಗಿ ಮಾರ್ಚ್ 2020 ರಲ್ಲಿ ಚಿತ್ರದ ಟೀಸರ್ ಟ್ರೇಲರ್ ಅನ್ನು ಯೂಟ್ಯೂಬ್ ನಿಂದ ತೆಗೆದುಹಾಕಲಾಯಿತು [೨೧] ಮತ್ತು ಆನಂದ್ ಆಡಿಯೊ ರೆಕಾರ್ಡಿಂಗ್ ಕಂಪನಿ ಪ್ರತಿ ದೂರನ್ನು ಸಲ್ಲಿಸಿದ ನಂತರ ಕೆಲವು ದಿನಗಳ ನಂತರ ಮರುಸ್ಥಾಪಿಸಲಾಗಿದೆ. [೨೨]

ಚಿತ್ರದ ಸ್ಯಾಟಲೈಟ್, ಡಿಜಿಟಲ್ ಮತ್ತು ಹಿಂದಿ ಡಬ್ಬಿಂಗ್ ರೈಟ್ಸ್ 27 ಕೋಟಿಗೆ ಮಾರಾಟವಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಚಿತ್ರದ 30 ಏಪ್ರಿಲ್ 2020 ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. [೨೩] ಚಿತ್ರವು 14 ಅಕ್ಟೋಬರ್ 2021 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿತ್ತು. [೨೪]

ನಿರ್ಮಾಪಕರು ಮತ್ತು ಹಣಕಾಸುದಾರರ ನಡುವಿನ ಜಗಳದಿಂದಾಗಿ ಚಿತ್ರದ ಬಿಡುಗಡೆಯು ಒಂದು ದಿನ ವಿಳಂಬವಾಯಿತು. [೨೫]

ಬಾಕ್ಸ್ ಆಫೀಸ್[ಬದಲಾಯಿಸಿ]

ಚಿತ್ರ ಬಿಡುಗಡೆಯಾದ ಮೊದಲ ದಿನವೇ ೧8 ಕೋಟಿಗೂ ಹೆಚ್ಚು ಗಳಿಸಿದೆ. [೨೬] [೨೭] ೩ ದಿನದಲ್ಲಿ ₹೪0.06 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿತ್ತು. [೨೮] [೨೯]

ಚಿತ್ರಸಂಗೀತ[ಬದಲಾಯಿಸಿ]

ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಆಕಾಶವನ್ನೇ ಆದರಿಸುವ"ವಿ. ನಾಗೇಂದ್ರ ಪ್ರಸಾದ್ವ್ಯಾಸರಾಜ್ ಸೋಸಲೆ03:36
2."ಪಟಾಕಿ ಪೋರಿಯೊ"ಅನೂಪ್ ಭಂಡಾರಿವಿಜಯ್ ಪ್ರಕಾಶ್
ಅನುರಾಧಾ ಭಟ್
03:37
3."ನೀ ಕೋಟಿಯಲಿ ಒಬ್ಬನೇ"ಯೋಗರಾಜ್ ಭಟ್ಶ್ರೇಯಾ ಘೋಷಾಲ್03:43
4."ಕಂಡ ಕಂಡ"ವಿ. ನಾಗೇಂದ್ರ ಪ್ರಸಾದ್ಕೆ. ಎಸ್. ಚಿತ್ರಾ03:53
ಒಟ್ಟು ಸಮಯ:14.09


ಚಿತ್ರದ ಮೊದಲ ಟ್ರ್ಯಾಕ್, "ಆಕಾಶನೇ ಆದರಿಸುವ", 27 ಏಪ್ರಿಲ್ 2020 ರಂದು ಬಿಡುಗಡೆಯಾಯಿತು ಮತ್ತು ಮೊದಲ 3 ಗಂಟೆ 20 ನಿಮಿಷಗಳಲ್ಲಿ ಯೂಟ್ಯೂಬ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆಯಿತು. [೩೦]

ಉಲ್ಲೇಖಗಳು[ಬದಲಾಯಿಸಿ]

 1. "Want to continue 'Kotigobba' franchise with Sudeep till it lasts: Producer Soorappa Babu". The New Indian Express. Retrieved 26 February 2020.
 2. ೨.೦ ೨.೧ "'Kotigobba 3' has potential to make Rs 150-200 crore if released in theatres: Surappa Babu". The New Indian Express. 17 May 2021. Archived from the original on 20 ಮೇ 2021. Retrieved 20 May 2021.{{cite web}}: CS1 maint: bot: original URL status unknown (link)
 3. "Kotigobba 3 talkie portions over, team prepares for song shoots". The New Indian Express. Retrieved 26 February 2020.
 4. "Actor Sudeep sports his signature avatar for 'Kotigobba 3'". The New Indian Express. Retrieved 26 February 2020.
 5. "OD INĐIJE DO INDIJE: Petar Milićević o svojim glumačkim poduhvatima". Espreso. Retrieved 26 February 2020.
 6. "40.5 ಕೋಟಿ ಗಳಿಕೆ ದಾಖಲಿಸಿದ ಕೋಟಿಗೊಬ್ಬ 3: ಸುದೀಪ್‌ ಟ್ವೀಟ್‌ | Kannada Kotigobba 3 film collection 40.5 crores says Kiccha Sudeep VCS".
 7. "'ಕೋಟಿಗೊಬ್ಬ 3' ಈವರೆಗೂ ಮಾಡಿದ ಕಲೆಕ್ಷನ್‌ ಎಷ್ಟು? ಬಾಕ್ಸ್ ಆಫೀಸ್‌ನಲ್ಲಿ 'ಕಿಚ್ಚ'ನ ಹೊಸ ದಾಖಲೆ!".
 8. "Grand sets built for Sudeep's 'Kotigobba 3'". The News Minute. Retrieved 26 February 2020.
 9. "Kichcha Sudeep wraps up Kotigobba 3 shoot at Poland". Times of India. Retrieved 28 October 2019.
 10. "Sudeep and Ravishankar to reunite for 'Kotigobba-3'". Times of India. Retrieved 28 October 2019.
 11. "Pailwaan hero resumes shoot for Kotigobba 3". The New Indian Express. Retrieved 28 October 2019.
 12. "Makers of 'Kotigobba 3' spend a whopping amount of Rs. 2 crores for an action sequence". Times of India. Retrieved 28 October 2019.
 13. "Arriving today; first look of Kotigobba 3 starring Sudeep". Bangalore Mirror. Retrieved 16 May 2020.
 14. "Kotigobba 3 hero gets a warm welcome at Belgrade". The New Indian Express. Retrieved 16 May 2020.
 15. "Sudeep resumes shooting for Kotigobba 3". Indian Express. Retrieved 9 May 2020.
 16. "Madonna Sebastian joins cast of Sudeep's 'Kotigobba 3'". The News Minute (in ಇಂಗ್ಲಿಷ್). 2018-06-07. Retrieved 2021-07-13.
 17. "Third schedule of Sudeep's 'Kotigobba 3' wrapped up". The News Minute. Retrieved 9 May 2020.
 18. "Kichcha Sudeep injured during shooting of Kotigobba 3". India Today. Retrieved 9 May 2020.
 19. "Kichcha Sudeep wraps up Kotigobba 3 shoot at Poland". Times of India. Retrieved 9 May 2020.
 20. "Kiccha Sudeep wraps up 'Kotigobba 3' shooting". Times of India. Retrieved 9 May 2020.
 21. "Kichcha Sudeep's Kotigobba 3 teaser removed from YouTube due to copyright claim". India Today. Retrieved 16 April 2020.
 22. "Kotigobba 3 teaser to be back online on Monday". The New Indian Express. Retrieved 9 May 2020.
 23. "Title track of Kichcha Sudeep's 'Kotigobba 3' to be out on April 27". New Indian Express. Retrieved 9 May 2020.
 24. "Kotigobba 3 and Salaga to clash on October 14, Bhajarangi 2 to hit theatres on October 29". The New Indian Express. 27 September 2021. Retrieved 10 October 2021.
 25. Ratda, Kushboo (14 October 2021). "Kotigobba 3: Release of Kiccha Sudeep's film delayed for a day; Producer shares an update as fans go berserk". Pinkvilla. Archived from the original on 14 ಅಕ್ಟೋಬರ್ 2021. Retrieved 14 October 2021.
 26. "Dussehra box office winners and losers: Doctor, Most Eligible Bachelor, Kotigobba 3". Indian Express. 18 October 2021. Retrieved 19 October 2021.
 27. "ಬಾಕ್ಸ್ ಆಫೀಸ್‌ನಲ್ಲಿ 'ಕಿಚ್ಚ' ಸುದೀಪ್ ಜಾದೂ; 'ಕೋಟಿಗೊಬ್ಬ 3' ಕಲೆಕ್ಷನ್‌ ರಿಪೋರ್ಟ್‌ ಇಲ್ಲಿದೆ!". Vijaya Karnataka. Retrieved 19 October 2021.
 28. "Kichcha Sudeep: ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ 'ಕೋಟಿಗೊಬ್ಬ 3'; ನಾಲ್ಕು ದಿನದ ಕಲೆಕ್ಷನ್ ಎಷ್ಟು ಗೊತ್ತಾ?". TV9 Karnataka. 20 October 2021. Retrieved 20 October 2021.
 29. "Telugu version of 'Kotigobba 3' to release in November". Indian Express. Retrieved 20 October 2021.
 30. "Sudeep's 'Kotigobba 3' first single 'Aakashane Adarisuva' crosses 3.5 million views". The News Minute. Retrieved 9 May 2020.