ಓಝೋನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಓಝೋನ್
Skeletal formula of ozone with partial charges shown
Ball and stick model of ozone
Ball and stick model of ozone
Spacefill model of ozone
Spacefill model of ozone
ಹೆಸರುಗಳು
ಐಯುಪಿಎಸಿ ಹೆಸರು
Trioxygen
Other names
4-trioxidiene; catena-trioxygen
Identifiers
3D model (JSmol)
ChEBI
ChemSpider
ECHA InfoCard 100.030.051
EC Number 233–069–2
1101
MeSH Ozone
RTECS number RS8225000
UNII
  • InChI=1S/O3/c1-3-2 checkY
    Key: CBENFWSGALASAD-UHFFFAOYSA-N checkY
  • InChI=1/O3/c1-3-2
    Key: CBENFWSGALASAD-UHFFFAOYAY
  • [O-][O+]=O
ಗುಣಗಳು
ಆಣ್ವಿಕ ಸೂತ್ರ O3
ಮೋಲಾರ್ ದ್ರವ್ಯರಾಶಿ ೪೮�00 g mol−1
Appearance Colourless to pale blue gas[೧]
Odor Pungent[೧]
ಸಾಂದ್ರತೆ 2.144 mg cm−3 (at 0 °C)
ಕರಗು ಬಿಂದು

-192 °C, 81 K, -314 °F

ಕುದಿ ಬಿಂದು

-112 °C, 161 K, -170 °F

ಕರಗುವಿಕೆ ನೀರಿನಲ್ಲಿ 1.05 g L−1 (at 0 °C)
ಕರಗುವಿಕೆ other solvents Very soluble in CCl4, sulfuric acid
Vapor pressure 55.7 atm[೨] (−12.15 °C or 10.13 °F or 261.00 K)[lower-alpha ೧]
+6.7·10−6 cm3/mol
ವಕ್ರೀಕಾರಕ ಸೂಚಿ (nD) (ರಿಫ್ರಾಕ್ಟಿವ್ ಇಂಡೆಕ್ಸ್) 1.2226 (liquid), 1.00052 (gas, STP, 546 nm — note high dispersion)[೩]
ರಚನೆ
C2v
Digonal
Dihedral
Hybridisation sp2 for O1
ದ್ವಿಧ್ರುವ ಚಲನೆ 0.53 D
ಉಷ್ಣರಸಾಯನಶಾಸ್ತ್ರ
ರೂಪಗೊಳ್ಳುವ
ಸ್ಟ್ಯಾಂಡರ್ಡ್ ಶಾಖಪ್ರಮಾಣ
ΔfHo298
142.67 kJ mol−1
ಸ್ಟ್ಯಾಂಡರ್ಡ್
ಮೋಲಾರ್ ಎಂಟ್ರಪಿ
So298
238.92 J K−1 mol−1
Hazards
GHS pictograms GHS09: Environmental hazardGHS03: OxidizingGHS08: Health hazardGHS05: CorrosiveGHS06: Toxic
GHS Signal word
H270, H314, H318
NFPA 704
Lethal dose or concentration (LD, LC):
12.6 ppm (mouse, 3 hr)
50 ppm (human, 30 min)
36 ppm (rabbit, 3 hr)
21 ppm (mouse, 3 hr)
21.8 ppm (rat, 3 hr)
24.8 ppm (guinea pig, 3 hr)
4.8 ppm (rat, 4 hr)[೪]
US health exposure limits (NIOSH):
PEL (Permissible)
TWA 0.1 ppm (0.2 mg/m3)[೧]
REL (Recommended)
C 0.1 ppm (0.2 mg/m3)[೧]
IDLH (Immediate danger)
5 ppm[೧]
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ಓಝೋನ್‌‌' ('O3 ), ಅಥವಾ ಟ್ರೈಆಕ್ಸಿಜನ್‌ ಎಂಬುದು ಒಂದು ತ್ರಿಪರಮಾಣ್ವಕ ಅಣುವಾಗಿದ್ದು, ಮೂರು ಆಮ್ಲಜನಕ ಪರಮಾಣುಗಳನ್ನು ಇದು ಒಳಗೊಂಡಿದೆ. ದ್ವಿಪರಮಾಣ್ವಕ ಭಿನ್ನರೂಪಕ್ಕಿಂತ (O2) ಸಾಕಷ್ಟು ಕಡಿಮೆ ಸ್ಥಿರವಾಗಿರುವ ಆಮ್ಲಜನಕದ ಒಂದು ಭಿನ್ನರೂಪ ಇದಾಗಿದೆ. ಕೆಳಮಟ್ಟದ ವಾತಾವರಣದಲ್ಲಿರುವ ಓಝೋನ್‌‌ ಒಂದು ವಾಯು ಮಾಲಿನ್ಯಕಾರಕವಾಗಿದ್ದು, ಪ್ರಾಣಿಗಳ ಉಸಿರಾಟದ ವ್ಯವಸ್ಥೆಗಳ ಮೇಲೆ ಇದು ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ ಮತ್ತು ಸೂಕ್ಷ್ಮ ಸ್ವಭಾವದ ಸಸ್ಯಗಳನ್ನು ಸುಡುತ್ತದೆ; ಆದಾಗ್ಯೂ, ಮೇಲುಮಟ್ಟದ ವಾತಾವರಣದಲ್ಲಿನ ಓಝೋನ್‌‌ ಪದರವು ಪ್ರಯೋಜನಕಾರಿಯಾಗಿದ್ದು, ಹಾನಿಕಾರಕ ನೇರಳಾತೀತ ಬೆಳಕು ಭೂಮಿಯ ಮೇಲ್ಮೈಯನ್ನು ತಲುಪುವುದನ್ನು ಸಮರ್ಥವಾಗಿ ತಡೆಗಟ್ಟುತ್ತದೆ. ಭೂಮಿಯ ವಾತಾವರಣದಾದ್ಯಂತ ಕಡಿಮೆ ಮಟ್ಟದ ಸಾಂದ್ರತೆಗಳಲ್ಲಿ ಓಝೋನ್‌‌ನ ಅಸ್ತಿತ್ವವಿರುತ್ತದೆ. ಇದು ಅನೇಕ ಕೈಗಾರಿಕಾ ಮತ್ತು ಗ್ರಾಹಕ ಬಳಕೆಯ ಉಪಯೋಗಗಳನ್ನು ಹೊಂದಿದೆ.

ಇತಿಹಾಸ[ಬದಲಾಯಿಸಿ]

ರಾಸಾಯನಿಕ ಧಾತುವೊಂದರ ಭಿನ್ನರೂಪವಾಗಿ ಮೊಟ್ಟಮೊದಲಬಾರಿಗೆ ಗುರುತಿಸಲ್ಪಟ್ಟ ಓಝೋನ್‌‌, ಒಂದು ಭಿನ್ನವಾದ ರಾಸಾಯನಿಕ ಸಂಯುಕ್ತವಾಗಿ ಕ್ರಿಸ್ಟಿಯನ್‌ ಫ್ರೆಡ್ರಿಕ್‌ ಸ್ಕಾನ್‌ಬೀನ್‌‌‌ ಎಂಬಾತನಿಂದ 1840ರಲ್ಲಿ ಸೂಚಿಸಲ್ಪಟ್ಟಿತು. ಮಿಂಚಿನ ಬಿರುಗಾಳಿಗಳಲ್ಲಿನ ಒಂದು ವಿಲಕ್ಷಣವಾದ ವಾಸನೆಗೆ ಉಲ್ಲೇಖಿಸಲಾಗುವ ಓಝೀನ್‌ (ὄζειν, "ವಾಸನೆ ಬೀರುವುದು") ಎಂಬ ಗ್ರೀಕ್‌ ಕ್ರಿಯಾಪದದ ಹೆಸರನ್ನು ಅವನು ಓಝೋನ್‌ಗೆ ಇರಿಸಿದ.[೫][೬] ಓಝೋನ್‌‌ಗೆ ಸಂಬಂಧಿಸಿದ ಸೂತ್ರವಾದ O3 ಎಂಬುದು, ಜಾಕ್ವೆಸ್‌-ಲೂಯಿಸ್‌ ಸೋರೆಟ್‌[೭] ಎಂಬಾತನಿಂದ 1865ರಲ್ಲಿ ನಿರ್ಣಯಿಸಲ್ಪಡುವವರೆಗೆ ಮತ್ತು ಸ್ಕಾನ್‌ಬೀನ್‌ ಎಂಬಾತನಿಂದ 1867ರಲ್ಲಿ ದೃಢೀಕರಿಸಲ್ಪಡುವವರೆಗೆ ತೀರ್ಮಾನಿಸಲ್ಪಟ್ಟಿರಲಿಲ್ಲ.[೫][೮]

ಭೌತಿಕ ಗುಣಗಳು[ಬದಲಾಯಿಸಿ]

ಓಝೋನ್‌‌ ಒಂದು ನಸುನೀಲಿ ಬಣ್ಣದ ಅನಿಲವಾಗಿದ್ದು, ನೀರಿನಲ್ಲಿ ಕೊಂಚಮಟ್ಟಿಗೆ ಕರಗುತ್ತದೆ ಮತ್ತು ಇಂಗಾಲದ ಟೆಟ್ರಾಕ್ಲೋರೈಡ್‌ ಅಥವಾ ಫ್ಲೂರೋಕಾರ್ಬನ್‌ಗಳಂಥ ರಾಸಾಯನಿಕ ಪಟುತ್ವವಿಲ್ಲದ ವಿದ್ಯುದ್ವೇಲೆನ್ಸೀಯವಲ್ಲದ ದ್ರಾವಕಗಳಲ್ಲಿ ಹೆಚ್ಚು ಕರಗುತ್ತದೆ. ಇಂಥ ದ್ರಾವಕಗಳಲ್ಲಿ ಅದು ಒಂದು ನೀಲಿ ದ್ರಾವಣವನ್ನು ರೂಪಿಸುತ್ತದೆ. –112 °C ತಾಪಮಾನದಲ್ಲಿ, ಇದು ಬಾಷ್ಪೀಕರಿಸಲ್ಪಟ್ಟು ಒಂದು ಕಡುನೀಲಿ ದ್ರವವನ್ನು ರೂಪಿಸುತ್ತದೆ. ಸಾಂದ್ರೀಕರಿಸಿದ ಅನಿಲ ರೂಪದ ಓಝೋನ್‌‌ ಮತ್ತು ದ್ರವ ಓಝೋನ್‌‌ಗಳೆರಡೂ ಆಸ್ಫೋಟಿಸಬಲ್ಲವಾದ್ದರಿಂದ, ಈ ದ್ರವವನ್ನು ಕುದಿಯುವ ಬಿಂದುವಿನವರೆಗೆ ಬಿಸಿಯಾಗಲು ಅವಕಾಶ ನೀಡುವುದು ಅಪಾಯಕರ. –193 °Cಗಿಂತ ಕಡಿಮೆಯಿರುವ ತಾಪಗಳಲ್ಲಿ ಇದು ಒಂದು ನೇರಳೆ-ಕಪ್ಪು ಘನವಸ್ತುವಾಗಿ ರೂಪುಗೊಳ್ಳುತ್ತದೆ.[೯]

ವಾಯುವಿನಲ್ಲಿ ಸುಮಾರು 0.01 ppmನಷ್ಟು ಪ್ರಮಾಣದಲ್ಲಿ ಓಝೋನ್‌ನ್ನು ಬಹುತೇಕ ಜನರು ಪತ್ತೆಹಚ್ಚಬಲ್ಲವರಾಗಿದ್ದು, ಇಲ್ಲಿ ಅದು ಕ್ಲೋರೀನ್‌ ಚೆಲುವೆಕಾರಿಯನ್ನು ಕೊಂಚಮಟ್ಟಿಗೆ ಹೋಲುವಂಥ ಒಂದು ಅತ್ಯಂತ ತೀಕ್ಷ್ಣವಾದ ವಿಶಿಷ್ಟ ವಾಸನೆಯನ್ನು ಹೊಂದಿರುತ್ತದೆ. 0.1ರಿಂದ 1 ppmನಷ್ಟು ಪ್ರಮಾಣದ ಓಝೋನ್‌ಗೆ ಒಡ್ಡಿಕೊಳ್ಳುವುದರಿಂದಾಗಿ ಅದು ತಲೆನೋವುಗಳು, ಉರಿಯುವ ಕಣ್ಣುಗಳು, ಮತ್ತು ಶ್ವಾಸೋಚ್ಛ್ವಾಸದ ಸಾಗುನಾಳಗಳಿಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ.[೧೦] ವಾಯುವಿನಲ್ಲಿನ ಓಝೋನ್‌‌ನ ತೀರಾ ಕಡಿಮೆ ಸಾಂದ್ರತೆಗಳು ಕೂಡಾ ಲ್ಯಾಟೆಕ್ಸ್‌‌, ಪ್ಲಾಸ್ಟಿಕ್ಕುಗಳು, ಮತ್ತು ಶ್ವಾಸಕೋಶಗಳಂಥ ಸಾವಯವ ವಸ್ತುಗಳಿಗೆ ಅತ್ಯಂತ ಮಾರಕವಾಗಿದೆ.

ಓಝೋನ್‌‌ ಒಂದು ಪಾರಕಾಂತೀಯ ಪದಾರ್ಥವಾಗಿದ್ದು, ಇದರ ಇಲೆಕ್ಟ್ರಾನುಗಳೆಲ್ಲವೂ ಜೋಡಿಯಾಗಿರುತ್ತವೆ ಎಂಬುದನ್ನು ಇದು ಸೂಚಿಸುತ್ತದೆ. ಇದಕ್ಕೆ ಪ್ರತಿಯಾಗಿ, O2 ಒಂದು ಅನುಕಾಂತೀಯ ಪದಾರ್ಥವಾಗಿದ್ದು, ಜೋಡಿಯಾಗಿರದ ಎರಡು ಇಲೆಕ್ಟ್ರಾನುಗಳನ್ನು ಇದು ಒಳಗೊಂಡಿರುತ್ತದೆ.ಓಝೋನ್ ಅನ್ನು ರಕ್ಷಿಸುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ

ರಚನಾ ಸ್ವರೂಪ[ಬದಲಾಯಿಸಿ]

ಮೈಕ್ರೋತರಂಗ ರೋಹಿತದರ್ಶನದಿಂದ ಪಡೆಯಲಾದ ಪ್ರಾಯೋಗಿಕ ಪುರಾವೆಯ ಅನುಸಾರ ಓಝೋನ್‌‌ ಎಂಬುದು ಒಂದು ಬಗ್ಗಿರುವ ಅಣುವಾಗಿದ್ದು, C2v ಸಮಪಾರ್ಶ್ವತೆಯನ್ನು (ನೀರಿನ ಅಣುವನ್ನು ಹೋಲುವ ರೀತಿಯಲ್ಲಿ) ಅದು ಹೊಂದಿದೆ. O – O ಅಂತರಗಳು 127.2 pmನಷ್ಟಿವೆ. O – O – O ಕೋನವು 116.78°ಯಷ್ಟಿದೆ.[೧೧] sp ² ಎಂಬುದು ಕೇಂದ್ರಭಾಗದ ಪರಮಾಣುವಾಗಿದ್ದು, ಅದು ಒಂದು ಏಕಾಂಗಿ ಜೋಡಿಯೊಂದಿಗೆ ಸಂಕರೀಕರಿಸಲ್ಪಟ್ಟಿದೆ. ಓಝೋನ್‌‌ ಎಂಬುದು ಒಂದು ವಿದ್ಯುದ್ವೇಲೆನ್ಸೀಯ ಅಣುವಾಗಿದ್ದು, 0.5337 Dಯಷ್ಟಿರುವ ಒಂದು ಅಂತರದಲ್ಲಿರುವ ಅಣುವಿನ ಚಲನೆಯನ್ನು ಹೊಂದಿದೆ..[೧೨] ಬಂಧಕತೆಯನ್ನು ಒಂದು ಅನುರಣನ ಸಂಕರವಾಗಿ ವ್ಯಕ್ತಪಡಿಸಬಹುದಾಗಿದ್ದು, ಇದರ ಒಂದು ಪಾರ್ಶ್ವದಲ್ಲಿ ಒಂದು ಏಕಬಂಧವಿದ್ದರೆ, ಮತ್ತೊಂದು ಪಾರ್ಶ್ವದಲ್ಲಿ ಒಂದು ಜೋಡಿಬಂಧವಿದೆ. ಇದರಿಂದಾಗಿ ತಲಾ ಪಾರ್ಶ್ವದಲ್ಲಿ 1.5ನಷ್ಟಿರುವ ಒಂದು ಒಟ್ಟಾರೆ ಬಂಧದ ಅನುಕ್ರಮವು ರೂಪುಗೊಳ್ಳುತ್ತದೆ.

ಓಝೋನ್‌‌ ಅಣುವಿನ ಅನುರಣನ ಲೆವಿಸ್‌ ರಚನೆಗಳು

ರಾಸಾಯನಿಕ ಕ್ರಿಯೆಗಳು[ಬದಲಾಯಿಸಿ]

ಓಝೋನ್‌‌, O2ಗಿಂತ ತುಂಬಾ ಬಲವಾಗಿರುವ ಒಂದು ಪ್ರಬಲವಾದ ಉತ್ಕರ್ಷಣಕಾರಕ ವಸ್ತುವಾಗಿದೆ. ಇದು ಉನ್ನತ ಸಾಂದ್ರತೆಗಳಲ್ಲಿ ಅಸ್ಥಿರವೂ ಆಗಿದ್ದು, ಸಾಧಾರಣ ದ್ವಿಪರಮಾಣ್ವಕ ಆಮ್ಲಜನಕವಾಗಿ ಪರಿವರ್ತನೆಗೊಳ್ಳುತ್ತದೆ ಅಥವಾ ಹ್ರಾಸಗೊಳ್ಳುತ್ತದೆ (ವಾತಾವರಣದ ಸ್ಥಿತಿಗತಿಗಳಲ್ಲಿ ಸುಮಾರು ಅರ್ಧಗಂಟೆಯ ಒಂದು ಅರ್ಧ-ಜೀವಿತವು ಇರುತ್ತದೆ):[೧೩]

2 O3 → 3 O2

ಹೆಚ್ಚುತ್ತಿರುವ ತಾಪ ಮತ್ತು ಹೆಚ್ಚಿಸಲ್ಪಟ್ಟ ಒತ್ತಡದೊಂದಿಗೆ ಈ ರಾಸಾಯನಿಕ ಕ್ರಿಯೆಯು ಮುಂದುವರಿಯುತ್ತದೆ. ಓಝೋನ್‌ನ ಥಟ್ಟನೆ ಸುಟ್ಟುಹೋಗುವಿಕೆಯನ್ನು ಒಂದು ಕಿಡಿಯಿಂದ ಪ್ರಚೋದಿಸಲು ಸಾಧ್ಯವಿದೆ, ಮತ್ತು 10 wt% ಅಥವಾ ಅದಕ್ಕಿಂತ ಹೆಚ್ಚಿರುವ ಓಝೋನ್‌‌ ಸಾಂದ್ರತೆಗಳಲ್ಲಿ ಇದು ಸಂಭವಿಸಬಹುದಾಗಿರುತ್ತದೆ.[೧೪]

ಲೋಹಗಳೊಂದಿಗೆ[ಬದಲಾಯಿಸಿ]

ಬಹುಪಾಲು ಲೋಹಗಳನ್ನು (ಬಂಗಾರ, ಪ್ಲಾಟಿನಂ, ಮತ್ತು ಇರಿಡಿಯಂನ್ನು ಹೊರತುಪಡಿಸಿ) ಅವುಗಳ ಅತ್ಯುನ್ನತ ಉತ್ಕರ್ಷಣ ಸ್ಥಿತಿಯಲ್ಲಿ ಲೋಹಗಳ ಆಕ್ಸೈಡುಗಳಾಗಿ ಓಝೋನ್‌‌ ಉತ್ಕರ್ಷಿಸುತ್ತದೆ. ಉದಾಹರಣೆಗೆ:

2 Cu+ + 2 H3O+ + O3 → 2 Cu2+ + 3 H2O + O2

ಸಾರಜನಕ ಮತ್ತು ಇಂಗಾಲದ ಸಂಯುಕ್ತಗಳೊಂದಿಗೆ[ಬದಲಾಯಿಸಿ]

ನೈಟ್ರಿಕ್‌ ಆಕ್ಸೈಡನ್ನು ಸಾರಜನಕದ ಡೈಯಾಕ್ಸೈಡ್‌ ಆಗಿಯೂ ಸಹ ಓಝೋನ್‌‌ ಉತ್ಕರ್ಷಿಸುತ್ತದೆ:

NO + O3 → NO2 + O2

ಈ ರಾಸಾಯನಿಕ ಕ್ರಿಯೆಗೆ ರಾಸಾಯನಿಕ ದೀಪ್ತಿಯ ಜೊತೆಗೂಡುವಿಕೆಯೂ ದೊರೆಯುತ್ತದೆ. NO2ವನ್ನು ಮತ್ತಷ್ಟು ಉತ್ಕರ್ಷಿಸಲು ಸಾಧ್ಯವಿದೆ:

NO2 + O3 → N2O3 + O2

ಹೀಗೆ ರೂಪುಗೊಂಡ N2O3ಯು NO2 ಜೊತೆಯಲ್ಲಿ ರಾಸಾಯನಿಕ ಕ್ರಿಯೆಯಲ್ಲಿ ತೊಡಗಿಕೊಂಡು N2O5ನ್ನು ರೂಪಿಸಬಲ್ಲದು:

ಘನರೂಪದ ನೈಟ್ರೈಲ್‌ ಪರ್‌‌ಕ್ಲೋರೇಟ್‌‌ನ್ನು NO2, ClO2, ಹಾಗೂ O3 ಅನಿಲಗಳಿಂದ ಉತ್ಪಾದಿಸಬಹುದು:

2 NO2 + 2 ClO2 + 2 O3 → 2 NO2ClO4 + O2

ಅಮೋನಿಯಂ ಲವಣಗಳ ಜೊತೆಯಲ್ಲಿ ಓಝೋನ್‌‌ ರಾಸಾಯನಿಕ ಕ್ರಿಯೆಯಲ್ಲಿ ತೊಡಗುವುದಿಲ್ಲವಾದರೂ, ಇದು ಅಮೋನಿಯಾದೊಂದಿಗೆ ಉತ್ಕರ್ಷಿಸಿ ಅಮೋನಿಯಂ ನೈಟ್ರೇಟನ್ನು ತಯಾರಿಸುತ್ತದೆ:

2 NH3 + 4 O3 → NH4NO3 + 4 O2 + H2O

ಕೋಣೆ ತಾಪದಲ್ಲೂ ಸಹ ಓಝೋನ್‌‌ ಇಂಗಾಲದೊಂದಿಗೆ ರಾಸಾಯನಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡು ಇಂಗಾಲದ ಡೈಯಾಕ್ಸೈಡನ್ನು ರೂಪಿಸುತ್ತದೆ:

C + 2 O3 → CO2 + 2 O2

ಗಂಧಕದ ಸಂಯುಕ್ತಗಳೊಂದಿಗೆ[ಬದಲಾಯಿಸಿ]

ಸಲ್ಫೈಡುಗಳನ್ನು ಸಲ್ಫೇಟುಗಳಾಗಿ ಓಝೋನ್‌‌ ಉತ್ಕರ್ಷಿಸುತ್ತದೆ. ಉದಾಹರಣೆಗೆ, ಸೀಸದ(II) ಸಲ್ಫೈಡು ಸೀಸದ(II) ಸಲ್ಫೇಟಾಗಿ ಉತ್ಕರ್ಷಿಸಲ್ಪಡುತ್ತದೆ:

PbS + 4 O3 → PbSO4 + 4 O2

ಓಝೋನ್‌‌ ಜೊತೆಯಲ್ಲಿ ಧಾತುರೂಪದ ಗಂಧಕ ಅಥವಾ ಗಂಧಕದ ಡೈಯಾಕ್ಸೈಡು ಇವುಗಳಲ್ಲಿ ಒಂದನ್ನು ಬಳಸಿಕೊಂಡು ಗಂಧಕಾಮ್ಲವನ್ನು ತಯಾರಿಸಬಹುದು:

S + H2O + O3 → H2SO4
3 SO2 + 3 H2O + O3 → 3 H2SO4

ಅನಿಲದ ಸ್ಥಿತಿಯಲ್ಲಿರುವಾಗ, ಓಝೋನ್‌‌ ಜಲಜನಕದ ಸಲ್ಫೈಡಿನ ಜೊತೆಯಲ್ಲಿ ಸಂಯೋಗಹೊಂದಿ ಗಂಧಕದ ಡೈಯಾಕ್ಸೈಡನ್ನು ರೂಪಿಸುತ್ತದೆ:

H2S + O3 → SO2 + H2O

ಆದಾಗ್ಯೂ, ಒಂದು ಜಲೀಯ ದ್ರಾವಣದಲ್ಲಿ, ಎರಡು ಪೈಪೋಟಿಯ ಏಕಕಾಲಿಕ ರಾಸಾಯನಿಕ ಕ್ರಿಯೆಗಳು ಸಂಭವಿಸುತ್ತವೆ, ಅವುಗಳಲ್ಲಿ ಒಂದು ಧಾತುರೂಪದ ಗಂಧಕವನ್ನು ಉತ್ಪಾದಿಸುವುದಕ್ಕೆ ಸಂಬಂಧಿಸಿದರೆ, ಮತ್ತೊಂದು ಗಂಧಕಾಮ್ಲವನ್ನು ಉತ್ಪಾದಿಸುವುದಕ್ಕೆ ಸಂಬಂಧಿಸಿರುತ್ತದೆ:

H2S + O3 → S + O2 + H2O
3 H2S + 4 O3 → 3 H2SO4

ಇತರ ತಲಾಧಾರಗಳು[ಬದಲಾಯಿಸಿ]

ಓಝೋನ್‌‌ನ ಎಲ್ಲಾ ಮೂರು ಪರಮಾಣುಗಳು ಕೂಡಾ ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸಬಹುದು. ಹೈಡ್ರೋಕ್ಲೋರಿಕ್‌ ಆಮ್ಲ ಹಾಗೂ ಓಝೋನ್ ಜೊತೆಗಿನ ತವರದ(II) ಕ್ಲೋರೈಡಿನ ರಾಸಾಯನಿಕ ಕ್ರಿಯೆಯಲ್ಲಿ ಇದನ್ನು ಕಾಣಬಹುದು:

3 SnCl2 + 6 HCl + O3 → 3 SnCl4 + 3 H2O

ತಂಪಾದ ಜಲರಹಿತ ಪರ್‌‌ಕ್ಲೋರಿಕ್‌ ಆಮ್ಲದಲ್ಲಿ ಕರಗಿಸಲ್ಪಟ್ಟ ಅಯೋಡೀನ್‌‌ನ್ನು ಓಝೋನ್‌‌ ಜೊತೆಯಲ್ಲಿ ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸುವ ಮೂಲಕ ಅಯೋಡೀನ್‌‌ ಪರ್‌‌ಕ್ಲೋರೇಟ್‌‌ನ್ನು ತಯಾರಿಸಬಹುದು.

I2 + 6 HClO4 + O3 → 2 I(ClO4)3 + 3 H2O

ದಹನ[ಬದಲಾಯಿಸಿ]

ದಹನ ರಾಸಾಯನಿಕ ಕ್ರಿಯೆಗಳಿಗೆ ಮತ್ತು ಅನಿಲಗಳನ್ನು ದಹನಕ್ಕೊಳಪಡಿಸುವುದಕ್ಕೆ ಸಂಬಂಧಿಸಿದಂತೆ ಓಝೋನ್‌‌ನ್ನು ಬಳಸಬಹುದು; ದ್ವಿ-ಆಮ್ಲಜನಕದಲ್ಲಿ (O2) ದಹನಕ್ಕೊಳಪಡಿಸುವುದರಲ್ಲಿ ಇರುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿರುವ ತಾಪಗಳನ್ನು ಓಝೋನ್‌‌ ಒದಗಿಸುತ್ತದೆ.

ಈ ಕೆಳಗೆ ನೀಡಿರುವುದು ಇಂಗಾಲ ಸಬ್‌ನೈಟ್ರೈಡಿನ ದಹನಕ್ಕೆ ಸಂಬಂಧಿಸಿದ ಒಂದು ರಾಸಾಯನಿಕ ಕ್ರಿಯೆಯಾಗಿದ್ದು, ಇದು ಕೂಡಾ ಕಡಿಮೆ ಮಟ್ಟದ ತಾಪಗಳನ್ನು ಉಂಟುಮಾಡಬಲ್ಲುದಾಗಿದೆ:

3 C4N2 + 4 O3 → 12 CO + 3 N2

ಶೈತ್ಯಜನಕ ತಾಪಗಳಲ್ಲಿ ಓಝೋನ್‌‌ ರಾಸಾಯನಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಲ್ಲದು. 77 K (−196 °C) ತಾಪಮಾನದಲ್ಲಿ, ಪರಮಾಣು ಸ್ಥಿತಿಯ ಜಲಜನಕವು ದ್ರವ ಓಝೋನ್‌‌ ಜೊತೆಯಲ್ಲಿ ಕ್ರಿಯೆಯಲ್ಲಿ ತೊಡಗಿ ಜಲಜನಕದ ಒಂದು ಸೂಪರ್‌‌‌ ಆಕ್ಸೈಡು ಪರಮಾಣುಗುಚ್ಛವನ್ನು ರೂಪಿಸುತ್ತದೆ, ಇದು ದ್ವಯಾಣುವಿನ ರೂಪತಳೆಯುತ್ತದೆ:[೧೫]

H + O3 → HO2 + O
2 HO2 → H2O4

ಓಝೋನೈಡುಗಳಿಗೆ ಅಪಕರ್ಷಣವಾಗುವಿಕೆ[ಬದಲಾಯಿಸಿ]

ಓಝೋನ್‌‌ನ ಅಪಕರ್ಷಣವು ಓಝೋನೈಡ್‌ ಋಣ ಅಯಾನನ್ನು, ಅಂದರೆ O3ನ್ನು ನೀಡುತ್ತದೆ. ಈ ಋಣ ಅಯಾನಿನ ಉತ್ಪನ್ನಗಳು ಸ್ಫೋಟಕ ಸ್ವಭಾವವನ್ನು ಹೊಂದಿರುವುದರಿಂದ, ಅವುಗಳನ್ನು ಶೈತ್ಯಜನಕ ತಾಪಗಳಲ್ಲಿ ಶೇಖರಿಸಿಡಬೇಕಾಗುತ್ತದೆ. ಎಲ್ಲಾ ಕ್ಷಾರೀಯ ಲೋಹಗಳಿಗೆ ಸಂಬಂಧಿಸಿದ ಓಝೋನೈಡುಗಳು ಚಿರಪರಿಚಿತವಾಗಿವೆ. KO3, RbO3, ಮತ್ತು CsO3ಗಳನ್ನು ಅವುಗಳ ಅದರದರ ಸೂಪರ್‌‌‌ ಆಕ್ಸೈಡುಗಳಿಂದ ತಯಾರಿಸಬಹುದು:

KO2 + O3 → KO3 + O2

ಮೇಲೆ ಸೂಚಿಸಲಾಗಿರುವಂತೆ KO3ನ್ನು ರೂಪಿಸಬಹುದಾದರೂ, ಇದನ್ನು ಪೊಟಾಷಿಯಂ ಹೈಡ್ರಾಕ್ಸೈಡು ಮತ್ತು ಓಝೋನ್‌‌ನಿಂದಲೂ ರೂಪಿಸಬಹುದಾಗಿದೆ:[೧೬]

2 KOH + 5 O3 → 2 KO3 + 5 O2 + H2O

Na+ ಅಥವಾ Li+ ಅಯಾನುಗಳನ್ನು ಒಳಗೊಂಡಿರುವ ಒಂದು ಅಯಾನು ವಿನಿಮಯ ರಾಳದ ಮೇಲೆ ದ್ರವ NH3ನಲ್ಲಿನ CsO3ನ ಕ್ರಿಯೆಯಿಂದ NaO3 ಹಾಗೂ LiO3ನ್ನು ತಯಾರಿಸಬೇಕು:[೧೭]

CsO3 + Na+ → Cs+ + NaO3

ಅಮೋನಿಯಾದಲ್ಲಿನ ಕ್ಯಾಲ್ಷಿಯಂನ ಒಂದು ದ್ರಾವಣವು ಓಝೋನ್‌‌ನೊಂದಿಗೆ ರಾಸಾಯನಿಕ ಕ್ರಿಯೆಯಲ್ಲಿ ತೊಡಗಿ ಅಮೋನಿಯಂ ಓಝೋನೈಡನ್ನು ನೀಡುತ್ತದೆಯೇ ಹೊರತು ಕ್ಯಾಲ್ಷಿಯಂ ಓಝೋನೈಡನ್ನು ಅಲ್ಲ:[೧೫]

3 Ca + 10 NH3 + 6 O3 → Ca·6NH3 + Ca(OH)2 + Ca(NO3)2 + 2 NH4O3 + 2 O2 + H2

ಉಪಯೋಗಗಳು[ಬದಲಾಯಿಸಿ]

ನೀರಿನಿಂದ ಮ್ಯಾಂಗನೀಸ್‌‌ನ್ನು ತೆಗೆದು ಶೋಧಿಸಬಹುದಾದ ಒಂದು ಅವಕ್ಷೇಪವನ್ನು ರೂಪಿಸಲು ಓಝೋನ್‌‌ನ್ನು ಬಳಸಬಹುದಾಗಿದೆ:

2 Mn2+ + 2 O3 + 4 H2O → 2 MnO(OH)2 (s) + 2 O2 + 4 H+

ಸೈನೈಡುಗಳನ್ನು ಸೈನೇಟು ಆಗಿಯೂ ಓಝೋನ್‌ ನಿರ್ವಿಷಗೊಳಿಸುತ್ತದೆ. ಸದರಿ ಸೈನೇಟು ಸಾವಿರಪಟ್ಟಿನಷ್ಟು ಕಡಿಮೆ ವಿಷಕಾರಿಯಾಗಿದೆ.

CN- + O3CNO
+ O2

ಯೂರಿಯಾವನ್ನು ಓಝೋನ್‌‌ ಸಂಪೂರ್ಣವಾಗಿ ವಿಘಟಿಸುತ್ತದೆ:[೧೮]

(NH2)2CO + O3 → N2 + CO2 + 2 H2O

ಓಝೋನ್‌ ವಿಶ್ಲೇಷಣೆ ಪ್ರಕ್ರಿಯೆಯಲ್ಲಿ ಓಝೋನ್‌‌ ಆಲ್ಕೀನುಗಳನ್ನು ಸೀಳಿಬಿಟ್ಟು ಕಾರ್ಬನಿಲ್‌ ಸಂಯುಕ್ತಗಳನ್ನು ರೂಪಿಸುತ್ತದೆ.

ಓಝೋನ್‌ ವಿಶ್ಲೇಷಣೆಯ ಒಂದು ಸಾಮಾನ್ಯೀಕರಿಸಿದ ಯೋಜನೆ
ಓಝೋನ್‌ ವಿಶ್ಲೇಷಣೆಯ ಒಂದು ಸಾಮಾನ್ಯೀಕರಿಸಿದ ಯೋಜನೆ

ಭೂಮಿಯ ವಾತಾವರಣದಲ್ಲಿನ ಓಝೋನ್‌‌[ಬದಲಾಯಿಸಿ]

ಉನ್ನತಿಯ ಒಂದು ಕಾರ್ಯಚಟುವಟಿಕೆಯಾಗಿ ಆಂಶಿಕ ಒತ್ತಡದಲ್ಲಿನ ವಾತಾವರಣದ ಓಝೋನ್‌ನ ವಿತರಣೆ.
ನಿಂಬಸ್‌-7 ಉಪಗ್ರಹದಿಂದ ಅಳೆಯಲ್ಪಟ್ಟಂತೆ ಓಝೋನ್‌‌ನ ಸಾಂದ್ರತೆ.
EP-TOMS ಉಪಗ್ರಹದ ಸಾಧನದಿಂದ 2000ದ ಜೂನ್‌ನಲ್ಲಿ ಅಳೆಯಲ್ಪಟ್ಟಂತೆ ಒಟ್ಟು ಓಝೋನ್‌‌ ಸಾಂದ್ರತೆ.

ವಾತಾವರಣದಲ್ಲಿನ ಒಟ್ಟು ಓಝೋನ್‌‌ ಮಟ್ಟಗಳನ್ನು (ಒಂದು ಲಂಬವಾದ ಸ್ತಂಭದಲ್ಲಿನ ಓಝೋನ್‌ ಪ್ರಮಾಣ) ವ್ಯಕ್ತಪಡಿಸಲು ಡಾಬ್ಸನ್‌ ಏಕಮಾನಗಳನ್ನು ಬಳಸುವುದು ಪ್ರಮಾಣಕ ವಿಧಾನವಾಗಿದೆ. ಒಂದು ಬಿಂದುವಿನಲ್ಲಿನ ಸರಾಸರಿ ಸಾಂದ್ರತೆಯನ್ನು ಪ್ರತಿ ಶತಕೋಟಿಗಿರುವ ಭಾಗಗಳು (ppb) ಅಥವಾ μg/m3ಗಳಲ್ಲಿ ಅಳೆಯಲಾಗುತ್ತದೆ.

ಓಝೋನ್‌‌ ಪದರ[ಬದಲಾಯಿಸಿ]

ವಾತಾವರಣದಲ್ಲಿನ ಓಝೋನ್‌‌ನ ಅತ್ಯುನ್ನತ ಮಟ್ಟಗಳು ವಾಯುಮಂಡಲದಲ್ಲಿದ್ದು, ಅದು ಭೂಮಿಯ ಮೇಲ್ಮೈನಿಂದ ಸುಮಾರು 10 ಕಿಮೀ ಹಾಗೂ 50 ಕಿಮೀ ನಡುವಿನ (ಅಥವಾ ಸುಮಾರು 6 ಮತ್ತು 31 ಮೈಲುಗಳ ನಡುವಿನ)ಓಝೋನ್‌‌ ಪದರ ಎಂದೂ ಕರೆಯಲಾಗುವ ಒಂದು ವಲಯದಲ್ಲಿದೆ. UV ಕಿರಣಗಳು ಎಂದೂ ಕರೆಯಲ್ಪಡುವ, ಸೂರ್ಯನಿಂದ ಬರುವ ನೇರಳಾತೀತ ಬೆಳಕಿನ ಅಲ್ಪ ತರಂಗಾಂತರಗಳೊಂದಿಗಿನ (320 nmಗಿಂತ ಕಡಿಮೆ) ಫೋಟಾನುಗಳನ್ನು ಇಲ್ಲಿ ಅದು ಶೋಧಿಸುತ್ತದೆ. ಈ UV ಕಿರಣಗಳು ಶೋಧಿಸಲ್ಪಡದಿದ್ದರೆ ಭೂಮಿಯ ಮೇಲಿನ ಬಹುತೇಕ ಜೀವ ಸ್ವರೂಪಗಳಿಗೆ ಬೃಹತ್‌‌ ಪ್ರಮಾಣಗಳಲ್ಲಿ ಅಪಾಯಕಾರಿಯಾಗಿರುತ್ತವೆ. ಮಾನವರಲ್ಲಿನ D ಜೀವಸತ್ತ್ವದ ಉತ್ಪಾದನೆಗೆ ಸಂಬಂಧಿಸಿದಂತೆ ಇದೇ ತರಂಗಾಂತರಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ. ಆಮ್ಲಜನಕದೊಂದಿಗೆ ನೇರಳಾತೀತ ಕಿರಣಗಳು ರಾಸಾಯನಿಕ ಕ್ರಿಯೆಯಲ್ಲಿ ತೊಡಗುವುದರಿಂದಾಗಿ ವಾಯುಮಂಡಲದಲ್ಲಿನ ಓಝೋನ್‌‌ ಬಹುತೇಕವಾಗಿ ಉತ್ಪಾದಿಸಲ್ಪಡುತ್ತದೆ:

O2 + ಫೋಟಾನು (ವಿಕಿರಣ < 240 nm) → 2 O
O + O2 → O3

ಆಮ್ಲಜನಕದೊಂದಿಗೆ ನೇರಳಾತೀತ ಕಿರಣಗಳು ರಾಸಾಯನಿಕ ಕ್ರಿಯೆಯಲ್ಲಿ ತೊಡಗುವುದರಿಂದಾಗಿ ವಾಯುಮಂಡಲದಲ್ಲಿನ ಓಝೋನ್‌‌ ಬಹುತೇಕವಾಗಿ ಉತ್ಪಾದಿಸಲ್ಪಡುತ್ತದೆ:

O3 + O → 2 O2

ಎರಡನೆಯ ರಾಸಾಯನಿಕ ಕ್ರಿಯೆಯು ನಿರ್ದಿಷ್ಟ ಮುಕ್ತ ಪರಮಾಣುಗುಚ್ಛಗಳ ಹಾಜರಿಯಿಂದ ವೇಗವರ್ಧನೆಗೀಡಾಗುತ್ತದೆ. ಹೈಡ್ರಾಕ್ಸಿಲ್‌ (OH), ನೈಟ್ರಿಕ್‌ ಆಕ್ಸೈಡು (NO) ಹಾಗೂ ಪರಮಾಣು ಸ್ಥಿತಿಯ ಕ್ಲೋರೀನ್‌ (Cl) ಮತ್ತು ಬ್ರೋಮೀನ್‌ (Br) ಈ ಪರಮಾಣುಗುಚ್ಛಗಳಲ್ಲಿ ಮುಕ್ತವಾದವುಗಳಾಗಿವೆ. ಇತ್ತೀಚಿನ ದಶಕಗಳಲ್ಲಿ ವಾಯುಮಂಡಲದಲ್ಲಿನ ಓಝೋನ್‌‌ನ ಪ್ರಮಾಣವು CFCಗಳ ಹಾಗೂ ಕ್ಲೋರೀನ್‌ ಸೇರಿಸಲ್ಪಟ್ಟ ಮತ್ತು ಬ್ರೋಮೀನ್‌ ಸೇರಿಸಲ್ಪಟ್ಟ ಇದೇ ಥರದ ಸಾವಯವ ಅಣುಗಳ ಉತ್ಸರ್ಜನಗಳ ಕಾರಣದಿಂದಾಗಿ ಬಹುಪಾಲು ಕುಸಿಯುತ್ತಾ ಬಂದಿದ್ದು, ಇವು ಸ್ವಾಭಾವಿಕ ಹಿನ್ನೆಲೆಗಿಂತ ಮೇಲ್ಮಟ್ಟದಲ್ಲಿ ಓಝೋನ್‌‌-ಬರಿದುಮಾಡುವ ವೇಗವರ್ಧಕಗಳ ಸಾಂದ್ರತೆಯನ್ನು ಹೆಚ್ಚಿಸಿವೆ. ವಾತಾವರಣದಲ್ಲಿ ಓಝೋನ್‌‌ನ ಪಾಲು ಕೇವಲ 0.00006%ನಷ್ಟಿರುತ್ತದೆ.

ಕೆಳಮಟ್ಟದ ಓಝೋನ್‌‌[ಬದಲಾಯಿಸಿ]

ಕೆಳಮಟ್ಟದ ಓಝೋನ್‌ನ್ನು‌ (ಅಥವಾ ಹವಾಗೋಲದ ಓಝೋನ್‌ನ್ನು‌) ವಿಶ್ವ ಆರೋಗ್ಯ ಸಂಸ್ಥೆ[೧೯] ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಪರಿಸರೀಯ ಸಂರಕ್ಷಣಾ ಸಂಸ್ಥೆಗಳು (ಎನ್ವಿರಾನ್ಮೆಂಟಲ್‌ ಪ್ರೊಟೆಕ್ಷನ್‌ ಏಜೆನ್ಸಿ-EPA) ಒಂದು ಮಾಲಿನ್ಯಕಾರಕ ಎಂದು ಪರಿಗಣಿಸಿವೆ. ಇದು ಕಾರಿನ ಎಂಜೀನುಗಳಿಂದ ಅಥವಾ ಕೈಗಾರಿಕಾ ಕಾರ್ಯಾಚರಣೆಗಳಿಂದ ನೇರವಾಗಿ ಹೊರಸೂಸಲ್ಪಡುವುದಿಲ್ಲ, ಬದಲಿಗೆ ಹೈಡ್ರೋಕಾರ್ಬನ್‌‌ಗಳು ಮತ್ತು ಸಾರಜನಕ ಆಕ್ಸೈಡುಗಳನ್ನು ಒಳಗೊಂಡಿರುವ ವಾಯುವಿನ ಮೇಲೆ ಸೂರ್ಯಬೆಳಕಿನ ರಾಸಾಯನಿಕ ಕ್ರಿಯೆಯಿಂದ ರೂಪುಗೊಳ್ಳುತ್ತದೆ. ಈ ರಾಸಾಯನಿಕ ಕ್ರಿಯೆಯಿಂದ ಓಝೋನ್‌‌ ಮಾಲಿನ್ಯದ ಮೂಲದಲ್ಲಿ ನೇರವಾಗಿ ಅಥವಾ ಗಾಳಿಬೀಸುವ ದಿಕ್ಕಿನಲ್ಲಿ ಅನೇಕ ಕಿಲೋಮೀಟರುಗಳವರೆಗೆ ರೂಪುಗೊಳ್ಳುತ್ತದೆ.

ಆಲ್ಡಿಹೈಡ್‌‌ಗಳಂಥ ಕೆಲವೊಂದು ಹೈಡ್ರೋಕಾರ್ಬನ್‌ಗಳೊಂದಿಗೆ ಓಝೋನ್‌‌ ನೇರವಾಗಿ ರಾಸಾಯನಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ ಮತ್ತು ತನ್ಮೂಲಕ ವಾಯುವಿನಿಂದ ಅವುಗಳ ನಿರ್ಮೂಲನವನ್ನು ಪ್ರಾರಂಭಿಸುತ್ತದೆ, ಆದರೆ, ಸದರಿ ಕ್ರಿಯೆಯ ಉತ್ಪನ್ನಗಳು ಸ್ವತಃ ಹೊಗೆ ಮಂಜಿನ ಪ್ರಮುಖ ಘಟಕಗಳಾಗಿರುತ್ತವೆ. UV ಬೆಳಕಿನಿಂದಾಗುವ ಓಝೋನ್‌‌ ದ್ಯುತಿವಿಭಜನೆಯು ಹೈಡ್ರಾಕ್ಸಿಲ್‌ ಪರಮಾಣುಗುಚ್ಛವಾದ OHನ ಉತ್ಪಾದನೆಗೆ ಕಾರಣವಾಗುತ್ತದೆ ಮತ್ತು ಇದು ವಾಯುವಿನಿಂದ ಹೈಡ್ರೋಕಾರ್ಬನ್‌ಗಳ ನಿರ್ಮೂಲನವಾಗುವಲ್ಲಿ ಒಂದು ಪಾತ್ರವನ್ನು ವಹಿಸುತ್ತದೆಯಾದರೂ, ಕಣ್ಣಿನ ಪ್ರಬಲವಾದ ಉದ್ರೇಕಕಾರಿಗಳಾಗಿ ವರ್ತಿಸಬಲ್ಲ ಪೆರಾಕ್ಸಿಅಸೈಲ್‌ ನೈಟ್ರೇಟುಗಳಂಥ ಹೊಗೆ ಮಂಜಿನ ಘಟಕಗಳ ಸೃಷ್ಟಿಯಲ್ಲಿಯೂ ಇದು ಮೊದಲ ಹಂತವಾಗಿರುತ್ತದೆ. ಹವಾಗೋಲದ ಓಝೋನ್‌‌ನ ವಾತಾವರಣದ ಜೀವಿತಾವಧಿಯು ಸುಮಾರು 22 ದಿನಗಳಷ್ಟಿರುತ್ತದೆ; ಇದರ ಪ್ರಮುಖ ನಿರ್ಮೂಲನ ಕಾರ್ಯವಿಧಾನಗಳು ನೆಲದ ಮೇಲೆ ಸಂಚಯಗೊಳ್ಳುತ್ತಿದ್ದು, ಅದು ಮೇಲೆ ನಮೂದಿಸಲಾದ OHನ್ನು ನೀಡುವ ರಾಸಾಯನಿಕ ಕ್ರಿಯೆಯಾಗಿದೆ ಮತ್ತು ಅದು OH ಹಾಗೂ ಪೆರಾಕ್ಸಿ ಪರಮಾಣುಗುಚ್ಛವಾದ HO2ನೊಂದಿಗಿನ ರಾಸಾಯನಿಕ ಕ್ರಿಯೆಗಳಿಂದ ನಡೆಯುತ್ತದೆ (ಸ್ಟೀವನ್‌ಸನ್‌ ಮತ್ತು ಇತರರು, 2006).[೨೦]

ಕೆಲವೊಂದು ಸಸ್ಯ ಜಾತಿಗಳ ಒಟ್ಟಾರೆ ಬೆಳವಣಿಗೆಯನ್ನು ಮೊಟಕುಗೊಳಿಸುವ ಹಾಗೂ ದ್ಯುತಿಸಂಶ್ಲೇಷಣೆಯೊಂದಿಗೆ ಹಸ್ತಕ್ಷೇಪಮಾಡುವ ಮಾಲಿನ್ಯ ಹಾಗೂ ನೆಲ-ಮಟ್ಟದ ಓಝೋನ್‌ನ ಹೆಚ್ಚಳದ ಕಾರಣದಿಂದಾಗಿ, ವ್ಯಾವಸಾಯಿಕ ಇಳುವರಿಗಳಲ್ಲಿ ಗಮನಾರ್ಹವಾದ ಅಪಕರ್ಷಣವು ಕಂಡುಬರುತ್ತದೆ ಎಂಬುದಕ್ಕೆ ಪುರಾವೆಯು ಲಭ್ಯವಿದೆ.[೨೧][೨೨]

ಮೇಲಕ್ಕೇರಿಸಲ್ಪಟ್ಟ ಓಝೋನ್‌‌ ಸೂಚ್ಯಂಕಗಳೊಂದಿಗಿನ ನಿರ್ದಿಷ್ಟ ಉದಾಹರಣೆಗಳಲ್ಲಿ ಟೆಕ್ಸಾಸ್‌ನ ಹೂಸ್ಟನ್‌, ಹಾಗೂ ಮೆಕ್ಸಿಕೋದ ಮೆಕ್ಸಿಕೋ ನಗರ ಇವು ಸೇರಿವೆ. ಹೂಸ್ಟನ್‌ ನಗರವು ಸುಮಾರು 41 ppbಯಷ್ಟು ಸೂಚ್ಯಂಕವನ್ನು ಹೊಂದಿದ್ದರೆ, ಮೆಕ್ಸಿಕೋ ನಗರ ಅದಕ್ಕಿಂತ ಹೆಚ್ಚು ಅಪಾಯಕಾರಿಯಾದ ಪ್ರಮಾಣವನ್ನು ಹೊಂದಿದ್ದು, ಅದು ಸುಮಾರು 125 ppbಯಷ್ಟು ಎಂದು ತಿಳಿದುಬಂದಿದೆ.[೨೨]

ಓಝೋನ್‌‌ ಭಂಜಿಸುವಿಕೆ[ಬದಲಾಯಿಸಿ]

ನೈಸರ್ಗಿಕ ರಬ್ಬರ್‌‌ ಕೊಳವೆಗಳನ್ನು ಅಳವಡಿಸುವಿಕೆಯಲ್ಲಿನ ಓಝೋನ್‌‌ ಭಂಜಿಸುವಿಕೆ

ತನ್ನ ಸರಪಳಿ ರಚನೆಯಲ್ಲಿ ನೈಸರ್ಗಿಕ ರಬ್ಬರ್‌‌, ನೈಟ್ರೈಲ್‌ ರಬ್ಬರ್‌, ಮತ್ತು ಸ್ಟೈರೀನ್‌-ಬ್ಯೂಟಾಡಯೀನ್‌ ರಬ್ಬರ್‌‌ನಂಥ ಓಲಿಫಿನಿಕ್‌ ಅಥವಾ ಜೋಡಿಬಂಧಗಳನ್ನು ಹೊಂದಿರುವ ಯಾವುದೇ ಪಾಲಿಮರ್‌‌‌ನ ಮೇಲೆ ಓಝೋನ್‌‌ ಅನಿಲವು ದಾಳಿಮಾಡುತ್ತದೆ. ಈ ಪಾಲಿಮರ್‌ಗಳನ್ನು ಬಳಸಿಕೊಂಡು ರೂಪುಗೊಂಡಿರುವ ಉತ್ಪನ್ನಗಳು ವಿಶೇಷವಾಗಿ ದಾಳಿಗೆ ಈಡಾಗುತ್ತವೆ. ಇದರಿಂದಾಗಿ ಬಿರುಕುಗಳು ಕಾಲಕ್ಕನುಗುಣವಾಗಿ ಉದ್ದವಾಗಿ ಮತ್ತು ಆಳವಾಗಿ ಬೆಳೆಯಲು ಅವಕಾಶ ಸಿಕ್ಕಿದಂತಾಗುತ್ತದೆ. ಬಿರುಕು ಬೆಳವಣಿಗೆಯ ಪ್ರಮಾಣವು ಉತ್ಪನ್ನದಿಂದ ಒಯ್ಯಲ್ಪಟ್ಟ ಹೊರೆಯ ಮೇಲೆ ಮತ್ತು ವಾತಾವರಣದಲ್ಲಿನ ಓಝೋನ್‌ನ ಸಾಂದ್ರತೆಯ ಮೇಲೆ ಅವಲಂಬಿತವಾಗಿರುತ್ತದೆ. ಮೇಣಗಳಂಥ ಓಝೊನೆಂಟ್‌ ನಿರೋಧಕಗಳನ್ನು ಸೇರಿಸುವುದರಿಂದ ಇಂಥ ವಸ್ತುಗಳನ್ನು ಸಂರಕ್ಷಿಸಬಹುದಾಗಿದ್ದು, ಇವು ಮೇಲ್ಮೈಗೆ ಅಂಟಿಕೊಂಡು ಒಂದು ಸಂರಕ್ಷಣಾತ್ಮಕ ಹೊದಿಕೆಯನ್ನು ಸೃಷ್ಟಿಸುತ್ತವೆ ಅಥವಾ ಆ ಭೌತದ್ರವ್ಯದೊಂದಿಗೆ ಸಂಯೋಜನೆಗೊಂಡು ದೀರ್ಘಾವಧಿ ರಕ್ಷಣೆಯನ್ನು ಒದಗಿಸುತ್ತವೆ. ಉದಾಹರಣೆಗೆ, ಓಝೋನ್‌‌ ಭಂಜಿಸುವಿಕೆಯು ಕಾರಿನ ಟೈರುಗಳಲ್ಲಿ ಒಂದು ಗಂಭೀರ ಸಮಸ್ಯೆಯಾಗಿಬಿಟ್ಟಿದೆಯಾದರೂ, ಅತ್ಯಂತ ಹಳೆಯ ಟೈರುಗಳಲ್ಲಿ ಮಾತ್ರವೇ ಅದನ್ನು ನೋಡಲಾಗುತ್ತಿದೆ. ಮತ್ತೊಂದೆಡೆ, ಗ್ಯಾಸ್ಕೆಟ್ಟುಗಳು ಮತ್ತು O-ವರ್ತುಲಗಳಂಥ ಅನೇಕ ನಿರ್ಣಾಯಕ ಉತ್ಪನ್ನಗಳು ಸಂಪೀಡಿತ ವಾಯು ವ್ಯವಸ್ಥೆಗಳೊಳಗಡೆ ಉತ್ಪಾದಿಸಲ್ಪಟ್ಟ ಓಝೋನ್‌‌ನಿಂದ ದಾಳಿಗೊಳಗಾಗಬಹುದಾಗಿದೆ. ಇಂಧನ ಕೊಳವೆ ಮಾರ್ಗಗಳನ್ನು ಅನೇಕವೇಳೆ ಬಲವರ್ಧಿತ ರಬ್ಬರ್‌‌ ಕೊಳವೆಗಳ ಅಳವಡಿಕೆಯಿಂದ ಮಾಡಲಾಗಿರುತ್ತದೆ ಮತ್ತು ಇವೂ ಸಹ ದಾಳಿಗೆ ಈಡಾಗಬಹುದಾಗಿರುತ್ತದೆ, ಅದರಲ್ಲೂ ವಿಶೇಷವಾಗಿ ವಿದ್ಯುತ್‌ ಉಪಕರಣದಿಂದ ಕಡಿಮೆ ಮಟ್ಟಗಳ ಓಝೋನ್‌ ಉತ್ಪತ್ತಿಯಾಗುವ ಎಂಜಿನು ಅಂಕಣಗಳಲ್ಲಿ ಇದು ಕಂಡುಬರುತ್ತದೆ. DC ವಿದ್ಯುತ್‌ ಮೋಟಾರುಗಳ ನಿಕಟ ಸಾಮೀಪ್ಯದಲ್ಲಿ ರಬ್ಬರ್‌‌ ಉತ್ಪನ್ನಗಳನ್ನು ಸಂಗ್ರಹಿಸಿಡುವುದು ಓಝೋನ್‌‌ ಭಂಜಿಸುವಿಕೆಯು ಸಂಭವಿಸುವ ಪ್ರಮಾಣವನ್ನು ಚುರುಕುಗೊಳಿಸಬಲ್ಲದು. ಮೋಟಾರಿನ ದಿಕ್ಪರಿವರ್ತಕವು ಸೃಷ್ಟಿಸುವ ಕಿಡಿಗಳು ಪ್ರತಿಯಾಗಿ ಓಝೋನ್‌ನ್ನು ಉತ್ಪಾದಿಸುತ್ತವೆ‌.

ಒಂದು ಹಸಿರುಮನೆ ಅನಿಲವಾಗಿ ಓಝೋನ್‌‌[ಬದಲಾಯಿಸಿ]

ಕೈಗಾರಿಕಾ ಕ್ರಾಂತಿಗೆ ಮುಂಚಿತವಾಗಿ ಓಝೋನ್‌‌ ನೆಲ ಮಟ್ಟದಲ್ಲಿ ಇತ್ತಾದರೂ, ಅತ್ಯುಚ್ಚ ಸಾಂದ್ರತೆಗಳು ಕೈಗಾರಿಕಾ-ಪೂರ್ವ ಮಟ್ಟಗಳಲ್ಲಿ ಇದ್ದುದಕ್ಕಿಂತ ಈಗ ಬಹಳ ಉನ್ನತಮಟ್ಟದಲ್ಲಿವೆ, ಮತ್ತು ಮಾಲಿನ್ಯದ ಮೂಲಗಳಿಂದ ಸಾಕಷ್ಟು ದೂರದಲ್ಲಿರುವ ಹಿನ್ನೆಲೆ ಸಾಂದ್ರತೆಗಳು ಸಹ ಗಣನೀಯವಾಗಿ ಉನ್ನತಮಟ್ಟದಲ್ಲಿವೆ.[೨೩][೨೪] ಮೇಲ್ಮಟ್ಟದ ಹವಾಗೋಲದಲ್ಲಿರುವ ಓಝೋನ್‌‌, ಭೂಮಿಯಿಂದ ಹೊರಸೂಸಲ್ಪಟ್ಟ ಅವರೋಹಿತ ಶಕ್ತಿಯ ಪೈಕಿ ಕೆಲಭಾಗವನ್ನು ಹೀರಿಕೊಂಡು ಒಂದು ಹಸಿರುಮನೆ ಅನಿಲವಾಗಿ ವರ್ತಿಸುವುದರಿಂದ ಓಝೋನ್‌‌ನಲ್ಲಿನ ಈ ಹೆಚ್ಚಳವು ಮತ್ತಷ್ಟು ಕಳವಳಕಾರಿಯಾಗಿದೆ. ಓಝೋನ್‌‌ನ ಹಸಿರುಮನೆ ಅನಿಲದ ಸಾಮರ್ಥ್ಯವನ್ನು ಪರಿಮಾಣಿಸುವುದು ಕಷ್ಟಕರ, ಏಕೆಂದರೆ ಭೂಮಂಡಲದಾದ್ಯಂತ ಇದು ಏಕರೂಪದ ಸಾಂದ್ರತೆಗಳಲ್ಲಿ ಇರುವುದಿಲ್ಲ. ಆದಾಗ್ಯೂ, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅತ್ಯಂತ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ವೈಜ್ಞಾನಿಕ ನಿರ್ಧಾರಣೆಗಳು (ಉದಾಹರಣೆಗೆ IPCC ಮೂರನೇ ನಿರ್ಧಾರಣಾ ವರದಿ[೨೫]) ಸೂಚಿಸುವ ಪ್ರಕಾರ, ಹವಾಗೋಲದ ಓಝೋನ್‌‌ನ ವಿಕಿರಣ ಒತ್ತಡಗೊಳಿಸುವಿಕೆಯು ಇಂಗಾಲದ ಡೈಯಾಕ್ಸೈಡ್‌‌ನ ಸುಮಾರು 25%ನಷ್ಟಿದೆ.

ಆರೋಗ್ಯದ ಮೇಲಿನ ಪರಿಣಾಮಗಳು[ಬದಲಾಯಿಸಿ]

ವಾಯು ಮಾಲಿನ್ಯ[ಬದಲಾಯಿಸಿ]

ಓಝೋನ್‌‌ ಮಾಲಿನ್ಯದಿಂದ ಉಂಟಾದ ವಿಶಿಷ್ಟ ಬಣ್ಣಗೆಡಿಸುವಿಕೆಯನ್ನು ತೋರಿಸುತ್ತಿರುವ ಕೆಂಪು ಭೂರ್ಜಮರದ ಎಲೆ.[೨೬]

ಮಾಲಿನ್ಯದ ಉನ್ನತ ಸಾಂದ್ರತೆಗಳು ಹಾಗೂ ಭೂಮಿಯ ಮೇಲ್ಮೈಯಲ್ಲಿನ ಸೂರ್ಯಪ್ರಕಾಶದ UV ಕಿರಣಗಳಿಂದ ಸೃಷ್ಟಿಸಲ್ಪಟ್ಟ ಓಝೋನ್‌‌ನ ಉನ್ನತ ಸಾಂದ್ರತೆಗಳು, ಶ್ವಾಸಕೋಶದ ಕಾರ್ಯಚಟುವಟಿಕೆಗೆ ಹಾನಿಯುಂಟುಮಾಡಬಲ್ಲವು ಮತ್ತು ಶ್ವಾಸೋಚ್ಛ್ವಾಸದ ವ್ಯವಸ್ಥೆಗೆ ಕಿರಿಕಿರಿಯನ್ನು ಉಂಟುಮಾಡಬಲ್ಲವು ಎಂಬುದನ್ನು ತೋರಿಸಲು ದೊಡ್ಡ ಪ್ರಮಾಣದ ಪುರಾವೆಯೇ ಇದೆ.[೧೯][೨೭] ಚಂಡಮಾರುತಗಳಿಂದ ಉಂಟಾದ ಓಝೋನ್‌‌ ಪ್ರಮಾಣದಲ್ಲಿನ ಹೆಚ್ಚಳ ಹಾಗೂ ಅಸ್ತಮಾದಿಂದ ನರಳುವವರ ಆಸ್ಪತ್ರೆ ದಾಖಲಾತಿಗಳ ನಡುವೆ ಒಂದು ಸಂಬಂಧವಿರುವುದು ಕೂಡಾ ತಿಳಿದುಬಂದಿದೆ.[೨೮] ವಿಶ್ವ ಆರೋಗ್ಯ ಸಂಸ್ಥೆಯಿಂದ ನೀಡಲ್ಪಟ್ಟಂಥ ವಾಯು ಗುಣಮಟ್ಟದ ಮಾರ್ಗದರ್ಶಿ ಸೂತ್ರಗಳು, ಅಳೆಯಬಹುದಾದ ಆರೋಗ್ಯದ ಪರಿಣಾಮಗಳನ್ನು ಯಾವ ಮಟ್ಟಗಳು ಉಂಟುಮಾಡಬಲ್ಲವು ಎಂಬುದರ ಕುರಿತಾದ ವಿಸ್ತೃತ ಅಧ್ಯಯನಗಳನ್ನು ಅವಲಂಬಿಸಿವೆ. ಓಝೋನ್‌ಗೆ ಮತ್ತು ಅದು ಉತ್ಪಾದಿಸುವ ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವಿಕೆಯು, ಅಕಾಲಿಕ ಸಾವು, ಅಸ್ತಮಾ, ಶ್ವಾಸನಾಳಗಳ ಒಳಪೊರೆಗಳ ಉರಿಯೂತ, ಹೃದಯಾಘಾತ, ಹಾಗೂ ಹೃದಯ-ಶ್ವಾಸಕೋಶಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳೊಂದಿಗೆ ಸಂಬಂಧವನ್ನು ಹೊಂದಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಪರಿಸರೀಯ ಸಂರಕ್ಷಣಾ ಸಂಸ್ಥೆಯೊಂದಿಗಿನ (EPA) ವಿಜ್ಞಾನಿಗಳ ಪ್ರಕಾರ, ಇಂಥ ಸಮಸ್ಯೆಗಳಿಗೆ ಈಡಾಗುವ ಜನರು 40 ppbಯಷ್ಟು ಕಡಿಮೆಯಿರುವ ಓಝೋನ್‌‌ ಮಟ್ಟಗಳಿಂದ ವ್ಯತಿರಿಕ್ತವಾದ ಪರಿಣಾಮಗಳಿಗೆ ಸಿಲುಕಬಲ್ಲರು.[೨೯]

ನೆಲ-ಮಟ್ಟ ಓಝೋನ್ ಸೇರಿದಂತೆ ಹಲವಾರು ಮಾಲಿನ್ಯಕಾರಕಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ವಾಯುಮಂಡಲದ ಗಾಳಿಯ ಗುಣಮಟ್ಟ ಪ್ರಮಾಣಕಗಳನ್ನು ಸ್ಥಾಪಿಸಲು ಶುದ್ಧ ಗಾಳಿಯ ಕಾಯಿದೆಯು EPAನ್ನು ನಿರ್ದೇಶಿಸುತ್ತದೆ ಮತ್ತು ಈ ಪ್ರಮಾಣಕಗಳ ಅನುಸರಣೆಯಿಂದ ಆಚೆನಿಲ್ಲುವ ಪ್ರಾಂತ್ಯಗಳು ತಮ್ಮ ಮಟ್ಟಗಳನ್ನು ತಗ್ಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿರುತ್ತದೆ. 2008ರ ಮೇ ತಿಂಗಳಲ್ಲಿ, EPA ಸಂಸ್ತೆಯು ತನ್ನ ಓಝೋನ್‌‌ ಪ್ರಮಾಣಕವನ್ನು 80 ppbಯಿಂದ 75 ppbಗೆ ತಗ್ಗಿಸಿತು. ಸದರಿ ಪ್ರಮಾಣಕವನ್ನು 60 ppbಗೆ ತಗ್ಗಿಸುವಂತೆ ಸಂಸ್ಥೆಯದೇ ವಿಜ್ಞಾನಿಗಳು ಹಾಗೂ ಸಲಹಾ ಮಂಡಳಿಯು ಶಿಫಾರಸು ಮಾಡಿದ್ದರಿಂದ, ಹಾಗೂ ವಿಶ್ವ ಆರೋಗ್ಯ ಸಂಸ್ಥೆಯು 51 ppbಯನ್ನು ಶಿಫಾರಸು ಮಾಡುತ್ತದೆಯಾದ್ದರಿಂದ ಇದು ವಿವಾದಾತ್ಮಕವೆನಿಸಿಕೊಂಡಿತು. ಅನೇಕ ಸಾರ್ವಜನಿಕ ಆರೋಗ್ಯ ಮತ್ತು ಪರಿಸರೀಯ ಗುಂಪುಗಳು ಕೂಡಾ 60 ppb ಪ್ರಮಾಣಕವನ್ನು ಬೆಂಬಲಿಸಿದವು. ಮತ್ತೊಂದೆಡೆ, 300ಕ್ಕೂ ಹೆಚ್ಚಿನ ಬಹುಪಾಲು ನಗರ ಪ್ರದೇಶದ ಪ್ರಾಂತಗಳು ಅನುಸರಣೆಯಿಂದ ಆಚೆಗಿವೆ ಎಂಬುದಾಗಿ EPAಯು ಈಗಾಗಲೇ ನಿಷ್ಕೃಷ್ಟವಾಗಿ ಸೂಚಿಸಿದೆ, ಮತ್ತು ಪ್ರಮಾಣಕವನ್ನು 75 ppbಗೆ ತಗ್ಗಿಸಿರುವುದರಿಂದಾಗಿ ಮತ್ತೆ ನೂರಾರು ನಗರಗಳು ಅನನುವರ್ತನೆಯ ವ್ಯಾಪ್ತಿಯೊಳಗೆ ಬಂದಂತಾಗಿವೆ. ಪ್ರಮಾಣಕವನ್ನು ಮತ್ತೆ 60 ppbಗೆ ತಗ್ಗಿಸಿದಲ್ಲಿ USನ ಬಹುಪಾಲು ನಗರಗಳು ಅನನುವರ್ತನೆಯ ವ್ಯಾಪ್ತಿಯಲ್ಲಿ ಉಳಿಯುವ ಸಂಭವ ಕಂಡುಬರುತ್ತದೆ. ಕಡಿಮೆ ಮಟ್ಟದ ಪ್ರಮಾಣಕದೊಂದಿಗಿನ ಅನುಸರಣೆಯ ವೆಚ್ಚವು ಪ್ರತಿಬಂಧಕವಾಗಿರುತ್ತದೆ ಎಂದು ತಯಾರಕರು, ನೌಕರರು, ಮತ್ತು ಇತರರು ವಾದಿಸಿದ್ದಾರೆ.[೨೯] ವಾಯು ಮಾಲಿನ್ಯ ಮಟ್ಟಗಳನ್ನು ಸಾರ್ವಜನಿಕರಿಗೆ ವಿವರಿಸುವಲ್ಲಿ ನೆರವಾಗುವ ಸಲುವಾಗಿ, EPAಯು ಒಂದು ವಾಯು ಗುಣಮಟ್ಟ ಸೂಚಿಯನ್ನು ಕೂಡಾ ಅಭಿವೃದ್ಧಿಪಡಿಸಿದೆ. 85ರಿಂದ 104 ppbವರೆಗಿನ ಎಂಟು-ಗಂಟೆಯ ಸರಾಸರಿ ಓಝೋನ್‌‌ ಸಾಂದ್ರತೆಗಳು "ಸೂಕ್ಷ್ಮ ಸ್ವಭಾವದ ಗುಂಪುಗಳಿಗೆ ಸಂಬಂಧಿಸಿದಂತೆ ಅನಾರೋಗ್ಯಕರ" ಎಂದು ವಿವರಿಸಲ್ಪಟ್ಟಿದ್ದರೆ, 105 ppbಯಿಂದ 124 ppbವರೆಗಿನ ಸಾಂದ್ರತೆಗಳು "ಅನಾರೋಗ್ಯಕರ" ಎಂದು ಹಾಗೂ 125 ppbಯಿಂದ 404 ppbವರೆಗಿನ ಸಾಂದ್ರತೆಗಳು "ಅತ್ಯಂತ ಅನಾರೋಗ್ಯಕರ"ವೆಂದು ವಿವರಿಸಲ್ಪಟ್ಟಿವೆ.[೩೦]

ಛಾಯಾ ನಕಲುಯಂತ್ರಗಳಂಥ ವಿದ್ಯುನ್ಮಾನ ಉಪಕರಣದ ಒಂದು ಭಾಗಶಃ ಕಾರಣದಿಂದಾಗಿ, ಒಳಾಂಗಣ ವಾಯು ಮಾಲಿನ್ಯದಲ್ಲಿಯೂ ಸಹ ಓಝೋನ್‌‌ ಇರಲು ಸಾಧ್ಯವಿದೆ.

ವಿಕ್ಟೋರಿಯಾ ಯುಗದಷ್ಟು ಹಳೆಯ ಕಾಲಕ್ಕೆ ಸೇರಿದ ಒಂದು ಸಾಮಾನ್ಯವಾದ ಬ್ರಿಟಿಷ್‌ ಜಾನಪದ ಕಲ್ಪಿತ ಕಥೆಯು ತಿಳಿಸುವ ಪ್ರಕಾರ, ಓಝೋನ್‌‌ನಿಂದ ಸಮುದ್ರಕ್ಕೆ ವಾಸನೆಯು ಬಂದಿತು, ಮತ್ತು ಈ ವಾಸನೆಯು "ಉತ್ತೇಜಿಸುವ" ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.[೩೧] ಇವುಗಳ ಪೈಕಿ ಯಾವುದೂ ನಿಜವಲ್ಲ. ವಿಶಿಷ್ಟವಾಗಿರುವ "ಸಮುದ್ರದ ವಾಸನೆಯು" ಓಝೋನ್‌‌ನಿಂದ ಉಂಟಾಗಿರುವಂಥದ್ದಲ್ಲ; ಬದಲಿಗೆ ತೇಲುಸಸ್ಯದಿಂದ ಉತ್ಪಾದಿಸಲ್ಪಟ್ಟ ಡೈಮೀಥೈಲ್‌ ಸಲ್ಫೈಡಿನ ಹಾಜರಿಯಿಂದಾಗಿ ಈ ವಾಸನೆ ಬಂದಿದೆ. ಓಝೋನ್‌‌ನಂತೆ ಡೈಮೀಥೈಲ್‌ ಸಲ್ಫೈಡು ಕೂಡಾ ಉನ್ನತ ಸಾಂದ್ರತೆಗಳಲ್ಲಿ ವಿಷಕಾರಿಯಾಗಿರುತ್ತದೆ.[೩೨]

ಓಝೋನ್‌ಗೆ ದೀರ್ಘ‌ಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಶ್ವಾಸೋಚ್ಛ್ವಾಸದ ಅಸ್ವಸ್ಥತೆಯಿಂದಾಗಿ ಸಾವಿನ ಅಪಾಯವು ಹೆಚ್ಚಾಗುತ್ತದೆ ಎಂದು ಕಂಡುಬಂದಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನಗರಗಳಲ್ಲಿ ವಾಸಿಸುತ್ತಿರುವ 450,000 ಜನರ ಒಂದು ಅಧ್ಯಯನವು ತೋರಿಸಿರುವ ಪ್ರಕಾರ, 18-ವರ್ಷಗಳ ಮುಂಬರಿಕೆಯ ಅವಧಿಯಲ್ಲಿ ಓಝೋನ್‌‌ ಮಟ್ಟಗಳು ಹಾಗೂ ಶ್ವಾಸೋಚ್ಛ್ವಾಸದ ಅಸ್ವಸ್ಥತೆಯ ನಡುವೆ ಒಂದು ಗಮನಾರ್ಹ ಪರಸ್ಪರ ಸಂಬಂಧವಿದೆ. ಹೂಸ್ಟನ್‌ ಅಥವಾ ಲಾಸ್‌ ಏಂಜಲೀಸ್‌ನಂಥ ಉನ್ನತ ಓಝೋನ್‌‌ ಮಟ್ಟಗಳೊಂದಿಗಿನ ನಗರಗಳಲ್ಲಿ ವಾಸಿಸುತ್ತಿರುವ ಜನರು, ಶ್ವಾಸಕೋಶ ಕಾಯಿಲೆಯಿಂದ ಸಾಯುವುದರ ಕುರಿತಾದ ಒಂದು 30%ಗಿಂತ ಹೆಚ್ಚಿನ ಅಪಾಯವನ್ನು ಹೊಂದಿದ್ದರು.[೩೩][೩೪]

ಸಹಜಕ್ರಿಯೆ[ಬದಲಾಯಿಸಿ]

ಸೂಪರ್‌‌‌ ಆಕ್ಸೈಡು, ಏಕಕ ಆಮ್ಲಜನಕ, ಜಲಜನಕದ ಪೆರಾಕ್ಸೈಡು, ಮತ್ತು ಹೈಪೋಕ್ಲೋರೈಟ್‌ ಅಯಾನುಗಳಂಥ ಆಮ್ಲಜನಕದ ಕ್ರಿಯಾಪಟು ಸ್ವರೂಪಗಳ ಜೊತೆಗೆ ಓಝೋನ್‌, ಹೊರಗಿನ ವಸ್ತುಗಳ‌ನ್ನು ನಾಶಪಡಿಸುವ ಒಂದು ವಿಧಾನವಾಗಿ ಬಿಳಿಯ ರಕ್ತ ಕಣಗಳು ಮತ್ತು ಇತರ ಜೈವಿಕ ವ್ಯವಸ್ಥೆಗಳಿಂದ (ಚೆಂಡುಮಲ್ಲಿಗೆ ಗಿಡಗಳ ಬೇರುಗಳಂಥವು) ನೈಸರ್ಗಿಕವಾಗಿ ಉತ್ಪಾದಿಸಲ್ಪಡುತ್ತದೆ. ಸಾವಯವ ಜೋಡಿಬಂಧಗಳೊಂದಿಗೆ ಓಝೋನ್‌‌ ನೇರವಾಗಿ ರಾಸಾಯನಿಕ ಕ್ರಿಯೆಯಲ್ಲಿ ತೊಡಗುತ್ತದೆ. ಅಷ್ಟೇ ಅಲ್ಲ, ದ್ವಿ-ಆಮ್ಲಜನಕವಾಗಿ ಓಝೋನ್‌‌ ವಿಘಟಿಸಲ್ಪಟ್ಟಾಗ, ಅದು ಆಮ್ಲಜನಕ ಮುಕ್ತ ಪರಮಾಣುಗುಚ್ಛಗಳನ್ನು ನೀಡುತ್ತದೆ. ಈ ಪರಮಾಣು ಗುಚ್ಛಗಳು ಅತೀವವಾಗಿ ಕ್ರಿಯಾಪಟುಗಳಾಗಿದ್ದು, ಅನೇಕ ಸಾವಯವ ಅಣುಗಳನ್ನು ಹಾನಿಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ರಕ್ತಪ್ರವಾಹದಲ್ಲಿನ ಕೊಲೆಸ್ಟೆರಾಲ್‌‌ನ್ನು ಕೊಬ್ಬಿನ ಶೇಖರಣೆಯಾಗಿ (ಅಪಧಮನಿಗಳ ಗಡಸಾಗುವಿಕೆ ಮತ್ತು ಕಿರಿದಾಗುವಿಕೆಯನ್ನು ಇದು ಉಂಟುಮಾಡುತ್ತದೆ) ಓಝೋನ್‌‌ ಪರಿವರ್ತಿಸುತ್ತದೆ ಎಂದು ಕಂಡುಬಂದಿದೆ. ಮೇಲಾಗಿ, ಓಝೋನ್‌‌ನ ಪ್ರಬಲವಾದ ಉತ್ಕರ್ಷಣಕಾರಕ ಗುಣಗಳು ಉರಿಯೂತಕ್ಕೆ ಕಾರಣವಾಗುವ ಒಂದು ಪ್ರಮುಖ ಅಂಶವಾಗಿರಬಹುದು ಎಂದು ನಂಬಲಾಗಿದೆ. ಶರೀರದಲ್ಲಿ ಓಝೋನ್‌‌ ಹೇಗೆ ಸೃಷ್ಟಿಸಲ್ಪಟ್ಟಿದೆ ಮತ್ತು ಅದು ಏನು ಮಾಡುತ್ತದೆ ಎಂಬುದರ ಕುರಿತಾದ ಕಾರಣ-ಮತ್ತು-ಪರಿಣಾಮ ಸಂಬಂಧವು ಇನ್ನೂ ಪರಿಗಣನೆಯಲ್ಲಿದೆ. ಅಷ್ಟೇ ಅಲ್ಲ, ಶರೀರದ ಇತರ ರಾಸಾಯನಿಕ ಪ್ರಕ್ರಿಯೆಗಳು ಇದೇ ಸ್ವರೂಪದ ಕೆಲವೊಂದು ರಾಸಾಯನಿಕ ಕ್ರಿಯೆಗಳನ್ನು ಪ್ರಚೋದಿಸಬಲ್ಲವಾದ್ದರಿಂದ, ಈ ಸಂಬಂಧವು ಈಗಲೂ ಹಲವಾರು ಅರ್ಥವಿವರಣೆಗಳಿಗೆ ವಸ್ತುವಾಗಿದೆ. ಸ್ಕ್ರಿಪ್ಸ್‌ ರಿಸರ್ಚ್‌ ಇನ್‌‌ಸ್ಟಿಟ್ಯೂಟ್‌‌‌ನಲ್ಲಿನ ರಸಾಯನಶಾಸ್ತ್ರ ವಿಭಾಗದ ಡಾ.ಪಾಲ್‌ ವೆಂಟ್‌ವರ್ತ್‌ ಜೂನಿಯರ್‌ Archived 2007-06-09 ವೇಬ್ಯಾಕ್ ಮೆಷಿನ್ ನಲ್ಲಿ. ನೇತೃತ್ವದ ಒಂದು ತಂಡವು ಪುರಾವೆಯೊಂದನ್ನು ತೋರಿಸಿದ್ದು, ಅದು ಮಾನವ ಪ್ರತಿರಕ್ಷಣಾ ಪ್ರತಿಕ್ರಿಯೆಯ ಪ್ರತಿಕಾಯ-ವೇಗವರ್ಧಿಸಲ್ಪಟ್ಟ ನೀರು-ಉತ್ಕರ್ಷಣ ಪ್ರತಿಕ್ರಿಯಾಸರಣಿಯನ್ನು ಓಝೋನ್‌‌ನ ಉತ್ಪಾದನೆಯೊಂದಿಗೆ ಸಂಬಂಧ ಕಲ್ಪಿಸಿದೆ. ಈ ವ್ಯವಸ್ಥೆಯಲ್ಲಿ, ನೀರು ಮತ್ತು ನ್ಯೂಟ್ರೋಫಿಲ್‌ನಿಂದ-ಉತ್ಪಾದಿಸಲ್ಪಟ್ಟ ಏಕಕ ಆಮ್ಲಜನಕದಿಂದ ಬಂದ, ಪ್ರತಿಕಾಯದಿಂದ-ವೇಗವರ್ಧಿಸಲ್ಪಟ್ಟ ಟ್ರೈಯಾಕ್ಸಿಡೇನ್‌‌ನ ಉತ್ಪಾದನೆಯಿಂದ ಓಝೋನ್‌‌ ತಯಾರಿಸಲ್ಪಡುತ್ತದೆ.[೩೫]

ಓಝೋನ್‌‌ನ್ನು ಒಳಕ್ಕೆಳೆದುಕೊಂಡಾಗ ಅದು ಶ್ವಾಸಕೋಶಗಳನ್ನು ವ್ಯಾಪಿಸಿರುವ ಒಳಪದರದ ಸಂಯುಕ್ತಗಳೊಂದಿಗೆ ರಾಸಾಯನಿಕ ಕ್ರಿಯೆಯಲ್ಲಿ ತೊಡಗಿ ವಿಶಿಷ್ಟವಾದ, ಕೊಲೆಸ್ಟೆರಾಲ್‌‌-ಜನ್ಯ ಚಯಾಪಚಯ ಕ್ರಿಯೆಯ ಉತ್ಪನ್ನಗಳನ್ನು ರೂಪಿಸುತ್ತದೆ. ಈ ಉತ್ಪನ್ನಗಳು ಅಪಧಮನಿಯ ಪೆಡುಸಿನ ಕೊಬ್ಬಿನ ಶೇಖರಣೆಗಳ (ಹೃದಯದ ಕಾಯಿಲೆಯ ಒಂದು ಸ್ವರೂಪ) ಸಂಚಯವಾಗುವಿಕೆ ಮತ್ತು ರೋಗೋತ್ಪತ್ತಿಯನ್ನು ಸುಗಮಗೊಳಿಸುತ್ತವೆ ಎಂದು ಭಾವಿಸಲಾಗಿದೆ. ಈ ಚಯಾಪಚಯ ಕ್ರಿಯೆಯ ಉತ್ಪನ್ನಗಳು ಮಾನವರಲ್ಲಿ ಕಂಡುಬರುವ ಪೆಡುಸಿನ ಅಪಧಮನಿಗಳಲ್ಲಿ ಸ್ವಾಭಾವಿಕವಾಗಿ ಸಂಭವಿಸುತ್ತವೆ ಎಂದು ದೃಢೀಕರಿಸಲ್ಪಟ್ಟಿವೆ ಮತ್ತು ಅಥೆರೊನಾಲ್ಸ್‌‌ ಎಂದು ಹೆಸರಾದ ಸೆಕೋಸ್ಟೆರಾಲ್‌ಗಳ ಒಂದು ವರ್ಗವಾಗಿ ಅವು ವರ್ಗೀಕರಿಸಲ್ಪಟ್ಟಿವೆ. ಈ ಅಥೆರೊನಾಲ್‌ಗಳು ಕೊಲೆಸ್ಟೆರಾಲ್‌‌ನ ಜೋಡಿಬಂಧದ ಓಝೋನ್‌ ವಿಶ್ಲೇಷಣೆಯಿಂದ ಉತ್ಪಾದಿಸಲ್ಪಟ್ಟಿದ್ದು, ಒಂದು 5,6 ಸೆಕೊಸ್ಟೆರಾಲ್‌‌ನ್ನಷ್ಟೇ[೩೬] ಅಲ್ಲದೇ, ಅಲ್ಡಾಲೀಕರಣದ ಮೂಲಕ ಒಂದು ದ್ವಿತೀಯಕ ಸಲಿಲೀಕರಣ ಉತ್ಪನ್ನವನ್ನು ರೂಪಿಸುತ್ತದೆ.[೩೭]

ಸಸ್ಯ ಬೆಳವಣಿಗೆಯ ಮೇಲೆ ಒಂದು ವ್ಯತಿರಿಕ್ತ ಪರಿಣಾಮವನ್ನು ಓಝೋನ್‌‌ ಹೊಂದಿದೆ ಎಂದು ಸೂಚಿಸಲ್ಪಟ್ಟಿದೆ: "... ಒಟ್ಟಾರೆ ಹರಿತ್ತುಗಳು, ಕ್ಯಾರೊಟಿನಾಯ್ಡ್‌‌ ಮತ್ತು ಶರ್ಕರಪಿಷ್ಟ ಸಾಂದ್ರತೆ, ಹಾಗೂ ಹೆಚ್ಚಿಸಲ್ಪಟ್ಟ 1-ಅಮೈನೋಸೈಕ್ಲೋಪ್ರೊಪೇನ್‌-1-ಕಾರ್ಬಾಕ್ಸಿಲಿಕ್‌ ಆಮ್ಲದ (ACC) ಅಂಶವನ್ನು ಮತ್ತು ಎಥಿಲೀನ್‌ ಉತ್ಪಾದನೆಯನ್ನು ಓಝೋನ್‌‌ ತಗ್ಗಿಸುತ್ತದೆ. ಇದರಿಂದ ಸಂಸ್ಕರಿಸಲ್ಪಟ್ಟ ಸಸ್ಯಗಳಲ್ಲಿ, ಆಸ್ಕಾರ್ಬೇಟ್‌ ಎಲೆಯ ರಾಶಿಯು ತಗ್ಗಿಸಲ್ಪಟ್ಟರೆ, ಮೇದಸ್ಸಿನ ಸಂಪೂರ್ಣ ಉತ್ಕರ್ಷಣ ಹಾಗೂ ದ್ರಾವ್ಯ ಸೋರಿಕೆಗಳು ಓಝೋನ್‌‌-ಮುಕ್ತ ನಿಯಂತ್ರಣಗಳಲ್ಲಿ ಇದ್ದುದಕ್ಕಿಂತ ಗಮನಾರ್ಹವಾಗಿ ಉನ್ನತವಾಗಿದ್ದವು. ನಿಂಬೆಕುಲದಲ್ಲಿನ ಉತ್ಕರ್ಷಣಕಾರಿ ಒತ್ತಡಕ್ಕೆ ಪ್ರತಿಯಾಗಿರುವ ಸಂರಕ್ಷಣಾತ್ಮಕ ಕಾರ್ಯವಿಧಾನಗಳನ್ನು ಓಝೋನ್‌‌ ಪ್ರಚೋದಿಸುತ್ತದೆ ಎಂಬುದನ್ನು ಸದರಿ ದತ್ತಾಂಶವು ಸೂಚಿಸಿತು."[೩೮]

ಸುರಕ್ಷತಾ ಕಟ್ಟುಪಾಡುಗಳು[ಬದಲಾಯಿಸಿ]

ಪ್ರಬಲವಾಗಿ ಉತ್ಕರ್ಷಣಕಾರಕವಾಗಿರುವ ಗುಣಗಳಿಂದಾಗಿ, ಓಝೋನ್‌‌ ಒಂದು ಪ್ರಧಾನವಾದ ಉದ್ರೇಕಕಾರಿಯಾಗಿದ್ದು, ವಿಶೇಷವಾಗಿ ಕಣ್ಣುಗಳು ಹಾಗೂ ಉಸಿರಾಟದ ವ್ಯವಸ್ಥೆಗಳಿಗೆ ಹಾನಿಯನ್ನುಂಟುಮಾಡುತ್ತದೆ ಮತ್ತು ಕಡಿಮೆ ಸಾಂದ್ರತೆಗಳಲ್ಲೂ ಸಹ ಅದು ಹಾನಿಕರವಾಗಬಲ್ಲವಾಗಿದೆ. ಉದ್ಯೋಗ ಸುರಕ್ಷತೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಕೆನಡಿಯನ್‌ ಕೇಂದ್ರವು ಈ ರೀತಿ ವರದಿಮಾಡುತ್ತದೆ:

"ಅತ್ಯಂತ ಕಡಿಮೆ ಸಾಂದ್ರತೆಗಳಲ್ಲಿನ ಓಝೋನ್‌‌ ಕೂಡಾ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶ ಹಾಗೂ ಶ್ವಾಸಕೋಶಗಳಿಗೆ ಅಪಾಯಕಾರಿಯಾಗಬಲ್ಲದು. ಗಾಯದ ತೀವ್ರತೆಯು ಓಝೋನ್‌‌ ಸಾಂದ್ರತೆ ಹಾಗೂ ಒಡ್ಡುವಿಕೆಯ ಕಾಲಾವಧಿಗಳೆರಡರ ಮೇಲೂ ಅವಲಂಬಿತವಾಗಿದೆ. ತುಲನಾತ್ಮಕವಾಗಿ ಕಡಿಮೆ ಮಟ್ಟದಲ್ಲಿರುವ ಸಾಂದ್ರತೆಗಳಿಗೆ ಅತ್ಯಂತ ಅಲ್ಪಾವಧಿಗೆ ಒಡ್ಡಿಕೊಳ್ಳುವುದರಿಂದಲೂ ಸಹ ತೀವ್ರವಾದ ಮತ್ತು ಕಾಯಂ ಆದ ಶ್ವಾಸಕೋಶ ಗಾಯ ಅಥವಾ ಸಾವು ಸಂಭವಿಸಬಹುದು." [೩೯]

ಓಝೋನ್‌‌ಗೆ ಸಂಭವನೀಯವಾಗಿ ಒಡ್ಡಿಕೊಳ್ಳುವ ಕೆಲಸಗಾರರನ್ನು ರಕ್ಷಿಸುವ ಸಲುವಾಗಿ, 0.1 ppmನಷ್ಟಿರುವ (29 CFR 1910.1000 ಕೋಷ್ಟಕ Z-1) ಒಂದು ಅನುಜ್ಞಾರ್ಹ ಒಡ್ಡುವಿಕೆಯ ಮಿತಿಯನ್ನು (ಪರ್ಮಿಸಿಬಲ್‌ ಎಕ್ಸ್‌ಪೋಷರ್‌ ಲಿಮಿಟ್‌-PEL) OSHA ಪ್ರಮಾಣೀಕರಿಸಿದ್ದು, ಇದನ್ನು ಒಂದು 8 ಗಂಟೆ ಅವಧಿಯ ಅನುಸಾರದ ಸರಾಸರಿಯಾಗಿ ಲೆಕ್ಕಹಾಕಲಾಗಿದೆ. ಹೆಚ್ಚಿನ ಮಟ್ಟದಲ್ಲಿರುವ ಸಾಂದ್ರತೆಗಳು ವಿಶೇಷವಾಗಿ ಹಾನಿಕಾರಕವಾಗಿರುತ್ತವೆ ಮತ್ತು ಜೀವಿ ಹಾಗೂ ಆರೋಗ್ಯಕ್ಕೆ ಪ್ರತ್ಯಕ್ಷವಾಗಿ ಅಂದರೆ ತತ್‌ಕ್ಷಣಕ್ಕೆ ಅಪಾಯಕರವಾಗಿರುವ 5 ppmನಷ್ಟಿರುವ ಮಿತಿಯನ್ನು (ಇಮ್ಮಿಡಿಯೆಟಲಿ ಡೇಂಜರಸ್‌ ಟು ಲೈಫ್‌ ಅಂಡ್‌ ಹೆಲ್ತ್‌‌-IDLH) NIOSH ಪ್ರಮಾಣೀಕರಿಸಿದೆ.[೪೦] ಓಝೋನ್‌‌ ಬಳಸಲ್ಪಡುತ್ತಿರುವ ಕಾರ್ಯಪರಿಸರಗಳು ಅಥವಾ ಅದು ಉತ್ಪಾದಿಸಲ್ಪಡಬೇಕಾದ ಅಗತ್ಯವಿರುವ ಸ್ಥಳಗಳು ಬೇಕಾಗುವಷ್ಟು ಗಾಳಿ-ಬೆಳಕಿನ ವ್ಯವಸ್ಥೆಯನ್ನು ಹೊಂದಿರಬೇಕು ಮತ್ತು ಒಂದು ವೇಳೆ ಸಾಂದ್ರತೆಯು OSHA PELನ್ನು ಮೀರಿದಲ್ಲಿ, ಆ ಕುರಿತು ಎಚ್ಚರಿಸುವಂಥ ಓಝೋನ್‌‌ಗೆ ಸಂಬಂಧಿಸಿದ ಒಂದು ಎಚ್ಚರಿಕೆಯ ಸಾಧನವನ್ನು ಹೊಂದುವುದು ವಿವೇಕಯುತ ನಿರ್ಧಾರವೆನಿಸಿಕೊಳ್ಳುತ್ತದೆ. ಓಝೋನ್‌‌ಗೆ ಸಂಬಂಧಿಸಿದ ನಿರಂತರವಾದ ಎಚ್ಚರಿಕೆಯ ಸಾಧನಗಳು ಹಲವಾರು ಪೂರೈಕೆದಾರರಿಂದ ಲಭ್ಯವಿವೆ.

ಏರಿಸಲ್ಪಟ್ಟ ಓಝೋನ್‌‌ ಒಡ್ಡುವಿಕೆಯು ಪ್ರಯಾಣಿಕರ ವಿಮಾನಗಳಲ್ಲಿ ಸಂಭವಿಸಬಹುದಾಗಿದ್ದು, ಹಾರಾಟದ ಉನ್ನತಿ ಹಾಗೂ ವಾತಾವರಣದ ಪ್ರಕ್ಷುಬ್ಧ ಸ್ಥಿತಿಯ ಮೇಲೆ ಅದರ ಮಟ್ಟಗಳು ಅವಲಂಬಿತವಾಗಿರುತ್ತವೆ.[೪೧] 100 ppbಯಷ್ಟಿರುವ ಒಂದು ಗರಿಷ್ಟ ನಾಲ್ಕು-ಗಂಟೆ ಸರಾಸರಿಯೊಂದಿಗಿನ 250 ppbಯ ಒಂದು ಮಿತಿಯನ್ನು U.S. FAA ಕಟ್ಟುಪಾಡುಗಳು ನಿಗದಿಗೊಳಿಸಿವೆ.[೪೨] ಪ್ರಯಾಣಿಕರ ಒಡ್ಡುವಿಕೆಯನ್ನು ತಗ್ಗಿಸುವ ಸಲುವಾಗಿ ಕೆಲವೊಂದು ವಿಮಾನಗಳು ಗಾಳಿ-ಬೆಳಕು ವ್ಯವಸ್ಥೆಗಳಲ್ಲಿ ಓಝೋನ್‌‌ ಪರಿವರ್ತಕಗಳನ್ನು ಅಳವಡಿಸಿಕೊಂಡಿವೆ.[೪೧]

ಉತ್ಪಾದನೆ[ಬದಲಾಯಿಸಿ]

ರಾಸಾಯನಿಕವಾಗಿ O2 ಪಾಲ್ಗೊಳ್ಳದ ಸ್ಥಿತಿಗತಿಗಳ ಅಡಿಯಲ್ಲಿ, ಓಝೋನ್‌‌ ಪ್ರಕೃತಿಯಲ್ಲಿ ಅನೇಕ ವೇಳೆ ರೂಪುಗೊಳ್ಳುತ್ತದೆ.[೧೦] ಕೈಗಾರಿಕೆಯಲ್ಲಿ ಬಳಸಲಾಗುವ ಓಝೋನ್‌ನ್ನು ppm(ಪ್ರತಿ ದಶಲಕ್ಷಕ್ಕಿರುವ ಭಾಗಗಳು), ppb, μg/m3, mg/hr (ಪ್ರತಿ ಗಂಟೆಗಿರುವ ಮಿಲಿಗ್ರಾಂಗಳು) ಅಥವಾ ಪ್ರತಿಶತ ತೂಕದಲ್ಲಿ ಅಳೆಯಲಾಗುತ್ತದೆ. ಅನ್ವಯಿಸಲಾದ ಸಾಂದ್ರತೆಗಳ ಪರಿಸ್ಥಿತಿಯ ವ್ಯಾಪ್ತಿಯು ವಾಯುವಿನಲ್ಲಿ 1ರಿಂದ 5ರಷ್ಟು ಪ್ರತಿಶತ ತೂಕದವರೆಗೆ ಹಾಗೂ ಆಮ್ಲಜನಕದಲ್ಲಿ 6ರಿಂದ 14ರಷ್ಟು ಪ್ರತಿಶತ ತೂಕದವರೆಗೆ ಇರುತ್ತದೆ.

ಎಷ್ಟು ಪ್ರಮಾಣದಲ್ಲಿ ಓಝೋನ್‌ ಉತ್ಪಾದಿಸಲ್ಪಡುತ್ತಿದೆ ಎಂಬುದರಲ್ಲಿ ತಾಪ ಹಾಗೂ ಆರ್ದ್ರತೆ ಒಂದು ಬೃಹತ್‌‌ ಪಾತ್ರವನ್ನು ವಹಿಸುತ್ತವೆ. ಅತೀವ ಆರ್ದ್ರತೆಯಿಂದ ತುಂಬಿರುವ ವಾಯುವಿನಲ್ಲಿ ಯಾವುದೇ ಓಝೋನ್‌‌ ಯಂತ್ರವು ನಡೆಸಲ್ಪಟ್ಟಾಗ, ಅತೀವ ಶುಷ್ಕತೆಯಿಂದ ತುಂಬಿರುವ ವಾಯುವಿನಲ್ಲಿ ಯಂತ್ರವು ನಡೆಸಲ್ಪಟ್ಟಾಗಿನ ಸಂದರ್ಭದಲ್ಲಿ ಉತ್ಪಾದಿಸಲ್ಪಟ್ಟಿದ್ದಕ್ಕಿಂತ 50%ನಷ್ಟು ಕಡಿಮೆ ಮಟ್ಟದ ತನಕ ಉತ್ಪಾದಿಸುತ್ತದೆ.

ಪರಿವೇಷ ಹೊರಹಾಕುವ ವಿಧಾನ[ಬದಲಾಯಿಸಿ]

ಇದು ಬಹುಪಾಲು ಕೈಗಾರಿಕಾ ಮತ್ತು ವೈಯಕ್ತಿಕ ಬಳಕೆಗಳಿಗೆ ಸಂಬಂಧಿಸಿದಂತಿರುವ ಅತ್ಯಂತ ಜನಪ್ರಿಯ ಬಗೆಯ ಓಝೋನ್‌‌ ಉತ್ಪಾದಕವಾಗಿದೆ.

ಔಷಧೀಯ ದರ್ಜೆಯ ಮತ್ತು ಕೈಗಾರಿಕಾ ದರ್ಜೆಯ ಓಝೋನ್‌‌ ಉತ್ಪಾದಕಗಳನ್ನು ಒಳಗೊಂಡಂತೆ ಓಝೋನ್‌‌ ಉತ್ಪಾದನೆಯ "ಬಿಸಿ ಕಿಡಿ"ಯ ಪರಿವೇಷ ಹೊರಹಾಕುವ ವಿಧಾನದ ರೂಪಾಂತರಗಳು ಅಸ್ತಿತ್ವದಲ್ಲಿರುವಾಗಲೇ, ಈ ಘಟಕಗಳು ಒಂದು ಪರಿವೇಷ ಹೊರಹಾಕುವ ಕೊಳವೆಯ ಮೂಲಕ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ.[೪೩] ಅವು ವಿಶಿಷ್ಟವಾಗಿ ಅತ್ಯಂತ ವೆಚ್ಚ-ಪರಿಣಾಮಕವಾಗಿದ್ದು, ಸುತ್ತುವರಿದ ವಾಯುವನ್ನು ಹೊರತುಪಡಿಸಿದ ಒಂದು ಆಮ್ಲಜನಕ ಮೂಲವನ್ನು ಬಯಸುವುದಿಲ್ಲ. ಆದಾಗ್ಯೂ, ಒಂದು ಉಪೋತ್ಪನ್ನವಾಗಿ ಅವು ಸಾರಜನಕ ಆಕ್ಸೈಡುಗಳನ್ನೂ ಸಹ ಉತ್ಪಾದಿಸುತ್ತವೆ. ಒಂದು ವಾಯು ಶುಷ್ಕಕಾರಿಯ ಬಳಕೆಯು ನೀರಿನ ಆವಿಯನ್ನು ನಿರ್ಮೂಲಗೊಳಿಸುವ ಮೂಲಕ, ನೈಟ್ರಿಕ್‌ ಆಮ್ಲದ ರೂಪುಗೊಳ್ಳುವಿಕೆಯನ್ನು ತಗ್ಗಿಸಬಲ್ಲದು ಅಥವಾ ತೆಗೆದುಹಾಕಬಲ್ಲದು ಮತ್ತು ಇದರಿಂದಾಗಿ ಓಝೋನ್‌‌ ಉತ್ಪಾದನೆಯು ಹೆಚ್ಚಾಗುತ್ತದೆ.

ಒಂದು ಆಮ್ಲಜನಕ ಸಾರೀಕಾರಕದ ಬಳಕೆಯು ಓಝೋನ್‌‌ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಬಲ್ಲದು ಮತ್ತು ನೀರಿನ ಆವಿಯನ್ನಷ್ಟೇ ಅಲ್ಲದೇ ಸಾರಜನಕದ ಅಧಿಕಾಂಶವನ್ನು ನಿರ್ಮೂಲಗೊಳಿಸುವ ಮೂಲಕ ಇದು ನೈಟ್ರಿಕ್‌ ಆಮ್ಲದ ರೂಪುಗೊಳ್ಳುವಿಕೆಯ ಅಪಾಯವನ್ನು ಮತ್ತಷ್ಟು ತಗ್ಗಿಸಬಲ್ಲದು.

ನೇರಳಾತೀತ ಬೆಳಕು[ಬದಲಾಯಿಸಿ]

UV ಓಝೋನ್‌‌ ಉತ್ಪಾದಕಗಳು, ಅಥವಾ ನಿರ್ವಾತ-ನೇರಳಾತೀತ (VUV) ಓಝೋನ್‌‌ ಉತ್ಪಾದಕಗಳು, ಒಂದು ಕಿರಿದಾದ-ರೋಹಿತದ ನೇರಳಾತೀತ ಬೆಳಕನ್ನು ಉತ್ಪಾದಿಸುವ ಬೆಳಕಿನ ಮೂಲವೊಂದನ್ನು ಬಳಸಿಕೊಳ್ಳುತ್ತವೆ. ಇದು ಸೂರ್ಯನಿಂದ ಉತ್ಪಾದಿಸಲ್ಪಡುವ ಬೆಳಕಿನ ಒಂದು ಉಪವರ್ಗವಾಗಿದೆ. ಸೂರ್ಯನ UVಯು ಭೂಮಿಯ ವಾಯುಮಂಡಲದಲ್ಲಿನ ಓಝೋನ್‌‌ ಪದರವನ್ನು ಧರಿಸುತ್ತದೆ.[೪೪]

ಶಿಷ್ಟ UV ಓಝೋನ್‌‌ ಉತ್ಪಾದಕಗಳು ಕಡಿಮೆ ದುಬಾರಿ[clarification needed] ಆಗಿರುವೆಡೆ ಒಲವು ತೋರುವ ಸಮಯದಲ್ಲೇ, ಅವು ಸಾಮಾನ್ಯವಾಗಿ ಸುಮಾರು 0.5% ಅಥವಾ ಕಡಿಮೆಯಿರುವ ಒಂದು ಸಾಂದ್ರತೆಯೊಂದಿಗಿನ ಓಝೋನ್‌‌ನ್ನು ಉತ್ಪಾದಿಸುತ್ತವೆ. ಈ ವಿಧಾನದ ಮತ್ತೊಂದು ಅನನುಕೂಲವೆಂದರೆ, UV ಮೂಲಕ್ಕೆ ವಾಯುವು (ಆಮ್ಲಜನಕ) ಒಂದು ಸುದೀರ್ಘ ಪ್ರಮಾಣದ ಕಾಲದವರೆಗೆ ಒಡ್ಡಿಕೊಂಡಿರಬೇಕೆಂದು ಇದು ಬಯಸುತ್ತದೆ, ಮತ್ತು UV ಮೂಲಕ್ಕೆ ಒಡ್ಡಲ್ಪಡದ ಯಾವುದೇ ಅನಿಲವು ಸಂಸ್ಕರಿಸಲ್ಪಡುವುದಿಲ್ಲ. ಇದರಿಂದಾಗಿ ಕ್ಷಿಪ್ರವಾಗಿ ಚಲಿಸುತ್ತಿರುವ ವಾಯು ಅಥವಾ ನೀರಿನ ಹರಿವುಗಳ ಸನ್ನಿವೇಶಗಳೊಂದಿಗೆ (ಉದಾಹರಣೆಗೆ ಕೊಳವೆಯೊಳಗಿನ ವಾಯು ಕ್ರಿಮಿಶುದ್ಧೀಕರಣ) ಕಾರ್ಯನಿರ್ವಹಿಸುವಲ್ಲಿನ ಬಳಕೆಗೆ ಸಂಬಂಧಿಸಿದಂತೆ ಈ UV ಉತ್ಪಾದಕಗಳು ಕಾರ್ಯಸಾಧ್ಯವಲ್ಲದವುಗಳಾಗಿ ಪರಿಣಮಿಸುತ್ತವೆ. ಓಝೋನ್‌‌ನ ಉತ್ಪಾದನೆಯು ನೇರಳಾತೀತ ರೋಗಾಣುಹಾರಕ ವಿಕಿರಣಕ್ಕೀಡಾಗುವಿಕೆಸಂಭವನೀಯ ಅಪಾಯಗಳಲ್ಲಿ ಒಂದಾಗಿದೆ. ದಶಲಕ್ಷಗಳಷ್ಟು ಗ್ಯಾಲನ್ನುಗಳ ಪ್ರಮಾಣದಲ್ಲಿ ನೀರಿನ ಬಳಕೆಯ ವ್ಯಾಪ್ತಿಯಿರುವ ಈಜುಕೊಳ ಹಾಗೂ ಖನಿಜ ಜಲಧಾಮ ಅನ್ವಯಿಕೆಗಳಲ್ಲಿ VUV ಓಝೋನ್‌‌ ಉತ್ಪಾದಕಗಳು ಬಳಸಲ್ಪಡುತ್ತವೆ. ಪರಿವೇಷ ಹೊರಹಾಕುವ ಉತ್ಪಾದಕಗಳಿಗಿಂತ ಭಿನ್ನವಾಗಿರುವ VUV ಓಝೋನ್‌‌ ಉತ್ಪಾದಕಗಳು ಅಪಾಯಕಾರಿ ಸಾರಜನಕ ಉಪೋತ್ಪನ್ನಗಳನ್ನು ಉತ್ಪಾದಿಸುವುದಿಲ್ಲ ಮತ್ತು ಪರಿವೇಷ ಹೊರಹಾಕುವ ವ್ಯವಸ್ಥೆಗಳಿಗಿಂತ ಭಿನ್ನವಾಗಿ VUV ಓಝೋನ್‌‌ ಉತ್ಪಾದಕಗಳು ಆರ್ದ್ರ ವಾಯು ಪರಿಸರಗಳಲ್ಲಿ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಅನಿಲದಾಚೆಗಿನ ದುಬಾರಿ ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ಅಲ್ಲಿ ಸಾಮಾನ್ಯವಾಗಿ ಒಂದು ಅಗತ್ಯವು ಕಂಡುಬರುವುದಿಲ್ಲ, ಮತ್ತು ಹೆಚ್ಚುವರಿ ವೆಚ್ಚಗಳು ಮತ್ತು ನಿರ್ವಹಣೆಯನ್ನು ಬಯಸುವ ವಾಯು ಶುಷ್ಕಕಾರಿಗಳು ಅಥವಾ ಆಮ್ಲಜನಕ ಸಾರೀಕಾರಕಗಳಿಗೆ ಸಂಬಂಧಿಸಿದ ಅಗತ್ಯವು ಕಂಡುಬರುವುದಿಲ್ಲ.

ತಂಪಾದ ತೇಲಾಡುವ ಸ್ಥಿತಿ[ಬದಲಾಯಿಸಿ]

ತಂಪಾದ ತೇಲಾಡುವ ಸ್ಥಿತಿಯ ವಿಧಾನದಲ್ಲಿ, ಪರಿಶುದ್ಧ ಆಮ್ಲಜನಕ ಅನಿಲವು ಒಂದು ತೇಲಾಡುವ ಸ್ಥಿತಿಗೆ ಒಡ್ಡಲ್ಪಡುತ್ತದೆ. ಅವಾಹಕ ತಡೆಗೋಡೆ ಹೊರಸೂಸುವಿಕೆಯಿಂದ ಈ ಸ್ಥಿತಿಯು ಸೃಷ್ಟಿಸಲ್ಪಟ್ಟಿರುತ್ತದೆ. ದ್ವಿಪರಮಾಣ್ವಕ ಆಮ್ಲಜನಕವು ಏಕ ಪರಮಾಣುಗಳಾಗಿ ವಿಭಜನೆಗೊಂಡು, ಅದು ನಂತರ ಮುಕ್ಕೂಟಗಳಲ್ಲಿ ಮರುಸಂಯೋಜನೆಗೊಂಡು ಓಝೋನ್‌ನ್ನು ರೂಪಿಸುತ್ತವೆ.

ತಂಪಾದ ತೇಲಾಡುವ ಸ್ಥಿತಿಯ ಯಂತ್ರಗಳು ಪ್ರದಾನದ ಮೂಲವಾಗಿ ಪರಿಶುದ್ಧ ಆಮ್ಲಜನಕವನ್ನು ಬಳಸಿಕೊಳ್ಳುತ್ತವೆ ಮತ್ತು ಸುಮಾರು 5%ನಷ್ಟು ಒಂದು ಗರಿಷ್ಟ ಸಾಂದ್ರತೆಯ ಓಝೋನ್‌ನ್ನು ಉತ್ಪಾದಿಸುತ್ತವೆ. ನೇರಳಾತೀತ ಉತ್ಪಾದನೆಗೆ ಹೋಲಿಸಿದಾಗ ಸಮಯದ ಒಂದು ನಿರ್ದಿಷ್ಟ ಅವಕಾಶದಲ್ಲಿ ಅತೀವ ಪರಿಮಾಣಗಳಲ್ಲಿ ಓಝೋನ್‌‌ನ್ನು ಅವು ಉತ್ಪಾದಿಸುತ್ತವೆ. ಆದಾಗ್ಯೂ, ತಂಪಾದ ತೇಲಾಡುವ ಸ್ಥಿತಿಯ ಓಝೋನ್‌‌ ಉತ್ಪಾದಕಗಳು ಅತ್ಯಂತ ದುಬಾರಿಯಾಗಿರುವುದರಿಂದ, ಹಿಂದಿನ ಎರಡು ಬಗೆಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಅವು ಕಂಡುಬರುತ್ತವೆ.

ಎರಡು ವಿದ್ಯುದ್ವಾಹಕಗಳ ಮಧ್ಯದಲ್ಲಿನ ಒಂದು ಅಂತರದಲ್ಲಿ ಇಲೆಕ್ಟ್ರಾನುಗಳ (ಅಲ್ಪ ಹೊರಸೂಸುವಿಕೆಗಳು) ತಂತುರೂಪದ ವರ್ಗಾವಣೆಯಾಗಿ ಹೊರಸೂಸುವಿಕೆಗಳು ಕಾಣಿಸಿಕೊಳ್ಳುತ್ತವೆ. ಅಲ್ಪ ಹೊರಸೂಸುವಿಕೆಗಳನ್ನು ಸಮನಾಗಿ ವಿತರಿಸುವ ದೃಷ್ಟಿಯಿಂದ, ಲೋಹೀಯ ವಿದ್ಯುದ್ವಾಹಕಗಳನ್ನು ಪ್ರತ್ಯೇಕಿಸಲು ಮತ್ತು ಕಮಾನಾಗುವಿಕೆಯನ್ನು ತಡೆಗಟ್ಟಲು ಒಂದು ಅವಾಹಕ ನಿರೋಧಕವನ್ನು ಬಳಸಬೇಕಾಗುತ್ತದೆ.

ತಂಪಾದ ತೇಲಾಡುವ ಸ್ಥಿತಿಯ ಕೆಲವೊಂದು ಘಟಕಗಳು ಆಮ್ಲಜನಕದ ಅಲ್ಪ-ಜೀವಿತಾವಧಿಯ ಭಿನ್ನರೂಪಗಳನ್ನು ತಯಾರಿಸುವ ಸಾಮರ್ಥ್ಯವನ್ನೂ ಹೊಂದಿದ್ದು ಈ ಭಿನ್ನರೂಪಗಳಲ್ಲಿ O4, O5, O6, O7, ಇತ್ಯಾದಿಗಳು ಸೇರಿರುತ್ತವೆ. ಈ ಜಾತಿಗಳು ಸಾಧಾರಣ O3ಗಿಂತ ಇನ್ನೂ ಹೆಚ್ಚು ಕ್ರಿಯಾಪಟುವಾಗಿರುತ್ತವೆ.[ಸೂಕ್ತ ಉಲ್ಲೇಖನ ಬೇಕು]

ವಿಶೇಷ ಪರಿಗಣನೆಗಳು[ಬದಲಾಯಿಸಿ]

ಇತರ ಕೈಗಾರಿಕಾ ಅನಿಲಗಳಂತೆ ಓಝೋನ್‌‌ನ್ನು ಶೇಖರಿಸಲಾಗುವುದಿಲ್ಲ ಮತ್ತು ಸಾಗಾಣಿಕೆ ಮಾಡಲಾಗುವುದಿಲ್ಲ (ಏಕೆಂದರೆ ಅದು ದ್ವಿಪರಮಾಣ್ವಕ ಆಮ್ಲಜನಕವಾಗಿ ಕ್ಷಿಪ್ರವಾಗಿ ಪರಿವರ್ತನೆಯಾಗುತ್ತದೆ) ಮತ್ತು ಈ ಕಾರಣದಿಂದಾಗಿ ಅದನ್ನು ಅಗತ್ಯವಿರುವ ಸ್ಥಳದಲ್ಲೇ ಉತ್ಪಾದಿಸಬೇಕಾಗುತ್ತದೆ. ಲಭ್ಯವಿರುವ ಓಝೋನ್‌‌ ಉತ್ಪಾದಕಗಳು ಉನ್ನತ-ವೋಲ್ಟೇಜಿನ ವಿದ್ಯುದ್ವಾಹಕಗಳ ವ್ಯವಸ್ಥೆ ಮತ್ತು ವಿನ್ಯಾಸದಲ್ಲಿ ಬದಲಾಗುತ್ತವೆ. ಪ್ರತಿ ಗಂಟೆಗೆ 20 ಕೆ.ಜಿ.ಗಿಂತ ಹೆಚ್ಚಿನ ಪ್ರಮಾಣದ ಉತ್ಪಾದನಾ ಸಾಮರ್ಥ್ಯಗಳಲ್ಲಿ, ಒಂದು ಅನಿಲ/ನೀರು ಕೊಳವೆಯ ತಾಪ-ವಿನಿಮಯಕಾರಕವು ನೆಲ ವಿದ್ಯುದ್ವಾಹಕವಾಗಿ ಬಳಸಲ್ಪಡಬಹುದು ಮತ್ತು ಅನಿಲದ-ಪಾರ್ಶ್ವದಲ್ಲಿ ಕೊಳವೆಯಾಕಾರದ ಉನ್ನತ-ವೋಲ್ಟೇಜಿನ ವಿದ್ಯುದ್ವಾಹಕಗಳೊಂದಿಗೆ ಜೋಡಿಸಲ್ಪಡಬಹುದು. ವಿಶಿಷ್ಟವಾದ ಅನಿಲದ ಒತ್ತಡಗಳ ಪರಿಸ್ಥಿತಿಯು ಆಮ್ಲಜನಕದಲ್ಲಿ ಸುಮಾರು 2 ಬಾರ್‌‌ನಷ್ಟು ಸ್ವತಂತ್ರಮೌಲ್ಯವನ್ನು ಹೊಂದಿದ್ದರೆ, ವಾಯುವಿನಲ್ಲಿ 3 ಬಾರ್‌‌ನಷ್ಟು ಸ್ವತಂತ್ರಮೌಲ್ಯವನ್ನು ಹೊಂದಿರುತ್ತದೆ. ಹಲವಾರು ಮೆಗಾವ್ಯಾಟ್‌ಗಳಷ್ಟು ವಿದ್ಯುತ್‌ ಶಕ್ತಿಯನ್ನು ಬೃಹತ್‌‌ ಸೌಕರ್ಯಗಳಲ್ಲಿ ನೆಲೆಗೊಳಿಸಬಹುದು, 50ರಿಂದ 8000 Hzವರೆಗಿನ ಒಂದು ಮಜಲಿನ AC ಪ್ರವಾಹವಾಗಿ ಅನ್ವಯಿಸಬಹುದು ಮತ್ತು 3,000ದಿಂದ 20,000 ವೋಲ್ಟ್‌ಗಳ ನಡುವಿನ ಅತ್ಯುಚ್ಚ ವೋಲ್ಟೇಜುಗಳಾಗಿ ಅನ್ವಯಿಸಬಹುದು. ಅನ್ವಯಿಸಲ್ಪಟ್ಟ ವೋಲ್ಟೇಜು, ಅನ್ವಯಿಸಲ್ಪಟ್ಟ ಕಂಪನಾಂಕದೊಂದಿಗೆ ಸಾಮಾನ್ಯವಾಗಿ ವಿಲೋಮವಾಗಿ ಸಂಬಂಧವನ್ನು ಹೊಂದಿರುತ್ತದೆ.

ಅನಿಲ ತಾಪವು ಓಝೋನ್‌‌ ಉತ್ಪಾದನೆಯ ಕಾರ್ಯಪಟುತ್ವದ ಮೇಲೆ ಪ್ರಭಾವ ಬೀರುತ್ತಿರುವ ಪ್ರಧಾನವಾದ ಮಾಪನ ಲಕ್ಷಣವಾಗಿದ್ದು, ಇದು ನೀರಿನ ತಾಪವನ್ನು ತಂಪಾಗಿಸುವುದರಿಂದ ಮತ್ತು/ಅಥವಾ ಅನಿಲ ವೇಗದಿಂದ ನಿಯಂತ್ರಿಸಲ್ಪಡುತ್ತದೆ. ನೀರು ತಣ್ಣಗಿದ್ದಷ್ಟೂ ಓಝೋನ್‌‌ ಸಂಶ್ಲೇಷಣೆಯು ಉತ್ತಮವಾಗಿರುತ್ತದೆ. ಅನಿಲ ವೇಗವು ಕಡಿಮೆಯಿದ್ದಷ್ಟೂ, ಸಾಂದ್ರತೆಯು ಉನ್ನತ ಮಟ್ಟದಲ್ಲಿರುತ್ತದೆ (ಆದರೆ, ಉತ್ಪಾದನೆಗೊಂಡ ನಿವ್ವಳ ಓಝೋನ್‌‌ ಪ್ರಮಾಣ ಕಡಿಮೆಯಿರುತ್ತದೆ). ವಿಶಿಷ್ಟ ಕೈಗಾರಿಕಾ ಸ್ಥಿತಿಗತಿಗಳಲ್ಲಿ, ಪರಿಣಾಮಕ ವಿದ್ಯುತ್ತಿನ ಸರಿಸುಮಾರು 90%ನಷ್ಟು ಭಾಗವು ಶಾಖವಾಗಿ ಪೋಲಾಗುತ್ತದೆ ಮತ್ತು ಒಂದು ಸಾಕಷ್ಟು ಪ್ರಮಾಣದಲ್ಲಿರುವ ತಂಪಾಗಿಸುವ ನೀರಿನ ಹರಿವಿನಿಂದ ಇದನ್ನು ನಿವಾರಿಸುವುದು ಅಗತ್ಯವಾಗಿರುತ್ತದೆ.

ಓಝೋನ್‌‌ನ ಉನ್ನತ ಪ್ರತಿಕ್ರಿಯಾತ್ಮಕತೆಯ ಕಾರಣದಿಂದಾಗಿ, ಕ್ರೋಮಿಯಂ ಸೇರಿಸಿದ ಉಕ್ಕು (ಗುಣಮಟ್ಟ 316L), ಟೈಟಾನಿಯಂ, ಅಲ್ಯೂಮೀನಿಯಂ (ಎಲ್ಲಿಯವರೆಗೆ ಯಾವುದೇ ತೇವಾಂಶವು ಇರುವುದಿಲ್ಲವೋ ಅಲ್ಲಿಯವರೆಗೆ), ಗಾಜು, ಪಾಲಿಟೆಟ್ರಾಫ್ಲೂರೆಥಿಲೀನ್‌‌, ಅಥವಾ ಪಾಲಿವಿನೈಲಿಡೀನ್‌ ಫ್ಲೂರೈಡ್‌‌ನಂಥ ಕೇವಲ ಕೆಲವೇ ವಸ್ತುಗಳನ್ನು ಬಳಸಬಹುದಾಗಿರುತ್ತದೆ. ಸ್ಥಿರವಾದ ಯಾಂತ್ರಿಕ ಬಲಗಳು ಹಾಗೂ ಆರ್ದ್ರತೆಯ ಗೈರುಹಾಜರಿಯ ನಿರ್ಬಂಧದೊಂದಿಗೆ (ಆರ್ದ್ರತೆಯ ಮಿತಿಗೊಳಿಸುವಿಕೆಗಳ ಸೂತ್ರೀಕರಣವನ್ನು ಆಧರಿಸಿ ಅನ್ವಯಿಸುತ್ತವೆ) ವೈಟಾನ್‌‌ನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿರುವ ವಾತಾವರಣದ ಮಟ್ಟಗಳಿಗೆ ಸಂಬಂಧಿಸಿರುವುದನ್ನು ಹೊರತುಪಡಿಸಿ, ಹೈಪಲಾನ್‌‌‌ನ್ನು ಅದಕ್ಕೆ ನೀರಿನ ಯಾವುದೇ ಸಂಪರ್ಕವಿರುವುದಿಲ್ಲ ಎಂಬ ನಿರ್ಬಂಧದೊಂದಿಗೆ ಬಳಸಬಹುದಾಗಿರುತ್ತದೆ. ಓಝೋನ್‌‌ಗೆ ಒಡ್ಡಲ್ಪಡುವುದರೊಂದಿಗೆ ಭಿದುರತೆ ಅಥವಾ ಕುಗ್ಗುವಿಕೆಯು ಕೃತಕ ರಬ್ಬರ್‌ಗಳ ವೈಫಲ್ಯದ ಸಾಮಾನ್ಯ ವಿಧಾನವಾಗಿದೆ. ಓಝೋನ್‌‌ ಭಂಜಿಸುವಿಕೆಯು O-ವರ್ತುಲಗಳಂಥ ಕೃತಕ ರಬ್ಬರ್‌ ಮೊಹರುಗಳ ವೈಫಲ್ಯದ ಸಾಮಾನ್ಯ ವಿಧಾನವಾಗಿದೆ.

‌ರಬ್ಬರ್‌‌ ಮಾದರಿಗಳ ಚುರುಕುಗೊಳಿಸಿದ ಬಲವರ್ಧನೆಗೆ ಸಂಬಂಧಿಸಿದಂತಿರುವ ಉಪಕರಣಗಳಲ್ಲಿರುವಂತೆ 1 wt%ಗಿಂತ ಕೆಳಗೆ ಇರುವ ಓಝೋನ್‌‌ ಸಾಂದ್ರತೆಗಳಲ್ಲಿ ಗ್ಯಾಸ್ಕೆಟ್ಟುಗಳಂತೆ ಬಳಸುವುದಕ್ಕೆ ಸಂಬಂಧಿಸಿದಂತೆ ಸಿಲಿಕೋನ್ ರಬ್ಬರ್‌‌‌ಗಳು ಸಾಮಾನ್ಯವಾಗಿ ಬೇಕಾದಷ್ಟಾಗುತ್ತವೆ.

ಪ್ರಾಸಂಗಿಕ ಉತ್ಪಾದನೆ[ಬದಲಾಯಿಸಿ]

ವಿದ್ಯುತ್ತಿನ ಹೊರಸೂಸುವಿಕೆಗಳ ಮೂಲಕ ಮತ್ತು ಉನ್ನತ ಶಕ್ತಿಯ ವಿದ್ಯುತ್ಕಾಂತೀಯ ವಿಕಿರಣದ ಕ್ರಿಯೆಯ ಮೂಲಕ O2ನಿಂದ ಓಝೋನ್‌‌ನ್ನು ರೂಪಿಸಬಹುದು. ನಿರ್ದಿಷ್ಟ ವಿದ್ಯುತ್‌ ಉಪಕರಣವು ಗಮನಾರ್ಹ ಮಟ್ಟಗಳಲ್ಲಿ ಓಝೋನ್‌‌ನ್ನು ಉತ್ಪಾದಿಸುತ್ತದೆ. ಅಯಾನಿನ ವಾಯು ಶುದ್ಧಿಕಾರಿಗಳು, ಲೇಸರ್‌ ಮುದ್ರಕಗಳು, ಛಾಯಾ ನಕಲುಯಂತ್ರಗಳು, ಟೇಸರುಗಳು ಮತ್ತು ಚಾಪ ಬೆಸುಗೆಗಾರಗಳಂಥ ಉನ್ನತ ವೋಲ್ಟೇಜುಗಳನ್ನು ಬಳಸುವ ಉಪಕರಣಗಳಿಗೆ ಸಂಬಂಧಿಸಿದಂತೆ ಇದು ವಿಶೇಷವಾಗಿ ನಿಜವಾಗಿದೆ. ಬ್ರಷ್ಷುಗಳನ್ನು ಬಳಸುವ ವಿದ್ಯುತ್‌ ಮೋಟಾರುಗಳು, ಘಟಕದ ಒಳಗಡೆ ಪುನರಾವರ್ತಿತವಾಗಿ ಕಿಡಿಯನ್ನು ಉಂಟುಮಾಡುವುದರಿಂದ ಓಝೋನ್‌‌ನ್ನು ಉತ್ಪಾದಿಸಬಲ್ಲವು. ಎತ್ತುಗಗಳು ಅಥವಾ ಹೈಡ್ರಾಲಿಕ್‌‌ ಪಂಪುಗಳಿಂದ ಬಳಸಲ್ಪಡುವ ಬ್ರಷ್ಷುಗಳಂಥ ಬ್ರಷ್ಷುಗಳನ್ನು ಬಳಸುವ ಬೃಹತ್‌‌ ಮೋಟಾರುಗಳು, ಸಣ್ಣಗಾತ್ರದ ಮೋಟಾರುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಓಝೋನ್‌ನ್ನು ಉತ್ಪಾದಿಸುತ್ತವೆ. ವೆನಿಝುವೆಲಾದಲ್ಲಿನ ಕ್ಯಾಟಾಟಂಬೊ ನದಿಯ ಮೇಲಿನ ಕ್ಯಾಟಾಟಂಬೊ ಮಿಂಚಿನ ಬಿರುಗಾಳಿಗಳ ವಿದ್ಯಮಾನದಲ್ಲಿ ಓಝೋನ್‌‌ ಇದೇ ರೀತಿಯಲ್ಲಿ ರೂಪುಗೊಳ್ಳುತ್ತದೆ. ಇದು ಮೇಲ್ಮಟ್ಟದ ಹವಾಗೋಲದಲ್ಲಿ ಓಝೋನ್‌‌ನ್ನು ಮತ್ತೆ ತುಂಬಲು ನೆರವಾಗುತ್ತದೆ. ಇದು ವಿಶ್ವದ ಅತ್ಯಂತ ಬೃಹತ್ತಾದ, ಓಝೋನ್‌‌ನ ಏಕಮಾತ್ರದ ಸ್ವಾಭಾವಿಕ ಉತ್ಪಾದಕವಾಗಿದ್ದು‌‌, ಒಂದು UNESCO ವಿಶ್ವ ಪರಂಪರೆಯ ತಾಣವಾಗಿ ಸೂಚಿಸಲು ಕರೆಗಳನ್ನು ನೀಡುತ್ತಿದೆ.[೪೫]

ಪ್ರಯೋಗಾಲಯದಲ್ಲಿನ ಉತ್ಪಾದನೆ[ಬದಲಾಯಿಸಿ]

ಒಂದು 9 ವೋಲ್ಟ್‌ ಬ್ಯಾಟರಿ, ಒಂದು ಸೀಸದ ಕಡ್ಡಿಯ ಗ್ರಾಫೈಟು ಸಲಾಕೆಯ ಋಣವಿದ್ಯುತ್‌‌ ದ್ವಾರ, ಒಂದು ಪ್ಲಾಟಿನಂ ತಂತಿಯ ಧನವಿದ್ಯುತ್‌‌ ದ್ವಾರ ಹಾಗೂ 3 ಮೋಲಾರ್‌ ಅಳತೆಯ ಒಂದು ಗಂಧಕಾಮ್ಲ ವಿದ್ಯುದ್ವಿಚ್ಛೇದ್ಯ ಇವುಗಳನ್ನು ಬಳಸಿಕೊಂಡು ವಿದ್ಯುದ್ವಿಚ್ಛೇದನದ ಮೂಲಕ ಪ್ರಯೋಗಾಲಯದಲ್ಲಿ ಓಝೋನ್‌‌ನ್ನು ತಯಾರಿಸಬಹುದು.[೪೬] ಈ ಸಂದರ್ಭದಲ್ಲಿ ನಡೆಯುವ ಅರ್ಧ ಕೋಶ ರಾಸಾಯನಿಕ ಕ್ರಿಯೆಗಳು ಈ ರೀತಿ ಇರುತ್ತವೆ:

3 H2O → O3 + 6 H+ + 6 e (ΔEo = −1.53 V)
6 H+ + 6 e → 3 H2 (ΔEo = 0 V)
2 H2O → O2 + 4 H+ + 4 e (ΔEo = −1.23 V)

ನಿವ್ವಳ ರಾಸಾಯನಿಕ ಕ್ರಿಯೆಯಲ್ಲಿ, ಮೂರು ಸಮಾನ ಪರಿಮಾಣಗಳಷ್ಟು ನೀರು ಒಂದು ಸಮಾನ ಪರಿಮಾಣದಷ್ಟು ಓಝೋನ್‌‌ ಹಾಗೂ ಮೂರು ಸಮಾನ ಪರಿಮಾಣಗಳಷ್ಟು ಜಲಜನಕವಾಗಿ ಪರಿವರ್ತಿಸಲ್ಪಡುತ್ತದೆ. ಆಮ್ಲಜನಕ ರೂಪುಗೊಳ್ಳುವಿಕೆಯು ಒಂದು ಪೈಪೋಟಿಯ ರಾಸಾಯನಿಕ ಕ್ರಿಯೆಯಾಗಿದೆ.

ಶುಷ್ಕ O2ನ ಮೂಲಕ 10,000-20,000 ವೋಲ್ಟ್‌ಗಳಷ್ಟು DCಯನ್ನು ಹಾಯಿಸುವ ಮೂಲಕವೂ ಇದನ್ನು ತಯಾರಿಸಬಹುದಾಗಿದೆ. ಮೇಲ್ಭಾಗದಲ್ಲಿ ಒಟ್ಟಾಗಿ ಮುಚ್ಚಲ್ಪಟ್ಟಿರುವ ಎರಡು ಏಕಕೇಂದ್ರಕ ಗಾಜಿನ ಕೊಳವೆಗಳನ್ನು ಒಳಗೊಂಡಿರುವ, ಕೊಳವೆಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಒಳಬರುವ ಮತ್ತು ಹೊರಹೋಗುವ ತಿರುಪಿನ ಬಿರಡೆಗಳನ್ನು ಹೊಂದಿರುವ ಒಂದು ವೈಜ್ಞಾನಿಕ ಸಲಕರಣೆಯನ್ನು ಬಳಸುವ ಮೂಲಕ ಇದನ್ನು ಕೈಗೊಳ್ಳಬಹುದಾಗಿದೆ. ಒಳಗಿನ ತಿರುಳುಭಾಗವು ತನ್ನೊಳಗೆ ತೂರಿಸಲ್ಪಟ್ಟಿರುವ ಲೋಹದ ಹಾಳೆಯ ಒಂದು ನೀಳವ್ಯಾಪ್ತಿಯನ್ನು ಹೊಂದಿರಬೇಕಿದ್ದು, ವಿದ್ಯುತ್‌‌ ಮೂಲದ ಒಂದು ಪಾರ್ಶ್ವದೊಂದಿಗೆ ಅದು ಸಂಪರ್ಕವನ್ನು ಹೊಂದಿರಬೇಕಾಗುತ್ತದೆ. ವಿದ್ಯುತ್‌‌ ಮೂಲದ ಮತ್ತೊಂದು ಪಾರ್ಶ್ವವು ಹೊರಗಿನ ಕೊಳವೆಯ ಸುತ್ತಲೂ ಸುತ್ತಲ್ಪಟ್ಟ ಮತ್ತೊಂದು ಹಾಳೆಯ ತುಣುಕಿನೊಂದಿಗೆ ಸಂಪರ್ಕವನ್ನು ಹೊಂದಿರಬೇಕಾಗುತ್ತದೆ. ಒಂದು ಬಿರಡೆಯಲ್ಲಿನ ಕೊಳವೆಯ ಮೂಲಕ ಶುಷ್ಕ O2ವನ್ನು ಹಾಯಿಸಬೇಕಾಗುತ್ತದೆ. ಒಂದು ಬಿರಡೆಯ ಮೂಲಕ ವೈಜ್ಞಾನಿಕ ಸಲಕರಣೆಯೊಳಗೆ O2ವು ಹಾಯಿಸಲ್ಪಟ್ಟಾಗ ಮತ್ತು ಹಾಳೆಯ ವಾಹಕಗಳಿಗೆ 10,000-20,000 ವೋಲ್ಟ್‌ಗಳಷ್ಟು DCಯನ್ನು ಪ್ರಯೋಗಿಸಲ್ಪಟ್ಟಾಗ, ಮಧ್ಯದಲ್ಲಿರುವ ಶುಷ್ಕ ದ್ವಿ-ಆಮ್ಲಜನಕದ ನಡುವೆ ವಿದ್ಯುಚ್ಚಕ್ತಿಯು ಹೊರಹಾಕಲ್ಪಡುತ್ತದೆ ಮತ್ತು ಮತ್ತೊಂದು ಬಿರಡೆಯಿಂದ ಹೊರಗೆ O3 ಮತ್ತು O2ವನ್ನು ರೂಪಿಸುತ್ತದೆ. ಇದರ ರಾಸಾಯನಿಕ ಕ್ರಿಯೆಯನ್ನು ಈ ಕೆಳಕಂಡಂತೆ ಸಂಕ್ಷೇಪಿಸಿ ಹೇಳಬಹುದು:[೧೦]

3 O2ವಿದ್ಯುಚ್ಚಕ್ತಿ → 2 O3

ಅಯಾನಿನ ವಾಯು ಶುದ್ಧಿಕಾರಿಗಳು[ಬದಲಾಯಿಸಿ]

ಕೆಲವೊಂದು ವಾಯು ಶುದ್ಧಿಕಾರಿಗಳು ಓಝೋನ್‌‌ನ್ನು ಸೃಷ್ಟಿಸುತ್ತವೆ.[೪೭]

ಉಪಯೋಗಗಳು[ಬದಲಾಯಿಸಿ]

ಉದ್ಯಮ[ಬದಲಾಯಿಸಿ]

ಓಝೋನ್‌‌ನ ಅತ್ಯಂತ ಬೃಹತ್ತಾದ ಬಳಕೆಯು ಔಷಧ ವಸ್ತುಗಳು, ಸಂಶ್ಲೇಷಿತ ಕೀಲೆಣ್ಣೆಗಳ ತಯಾರಿಕೆಯಲ್ಲಿ, ಮತ್ತು ವಾಣಿಜ್ಯ ಸ್ವರೂಪದಲ್ಲಿ ಪ್ರಯೋಜನಕರವಾಗಿರುವ ಇತರ ಅನೇಕ ಸಾವಯವ ಸಂಯುಕ್ತಗಳ ತಯಾರಿಕೆಯಲ್ಲಿ ಕಂಡುಬರುತ್ತದೆ. ಇಂಥ ಸಂದರ್ಭಗಳಲ್ಲಿ ಇಂಗಾಲ-ಇಂಗಾಲ ಬಂಧಗಳನ್ನು ಪ್ರತ್ಯೇಕಿಸಲು ಓಝೋನ್‌ ಬಳಸಲ್ಪಡುತ್ತದೆ.[೧೦] ಚೆಲುವೆ ಮಾಡುವಿಕೆಯ ವಸ್ತುಗಳಿಗೆ ಸಂಬಂಧಿಸಿದಂತೆ ಮತ್ತು ವಾಯು ಹಾಗೂ ನೀರಿನ ಮೂಲಗಳಲ್ಲಿರುವ ಸೂಕ್ಷ್ಮ ಜೀವಿಗಳನ್ನು ಸಾಯಿಸುವ ಸಲುವಾಗಿಯೂ ಇದನ್ನು ಬಳಸಬಹುದಾಗಿರುತ್ತದೆ.[೪೮] ಅನೇಕ ನಗರಾಡಳಿತದ ಕುಡಿಯುವ ನೀರಿನ ವ್ಯವಸ್ಥೆಗಳು ಬ್ಯಾಕ್ಟೀರಿಯಾವನ್ನು ಸಾಯಿಸಲು ಹೆಚ್ಚು ಸಾಮಾನ್ಯವಾಗಿರುವ ಕ್ಲೋರೀನ್‌ ಬದಲಿಗೆ ಓಝೋನ್‌‌ನ್ನು ಬಳಸುತ್ತವೆ.[೪೯] ಓಝೋನ್‌‌ ಒಂದು ಅತ್ಯಂತ ಉನ್ನತವಾದ ಉತ್ಕರ್ಷಣ ಸಾಮರ್ಥ್ಯವನ್ನು ಹೊಂದಿದೆ.[೫೦] ಓಝೋನ್‌‌ ಕಾರ್ಬನಿಕ ಕ್ಲೋರೀನ್‌ ಸಂಯುಕ್ತಗಳನ್ನು ರೂಪಿಸುವುದಿಲ್ಲ, ಅಥವಾ ಸಂಸ್ಕರಣೆಯ ನಂತರ ಅದು ನೀರಿನಲ್ಲಿ ಉಳಿದುಕೊಳ್ಳುವುದಿಲ್ಲ. ಸುರಕ್ಷಿತವಾದ ಕುಡಿಯುವ ನೀರಿನ ಕಾಯಿದೆಯು ಆದೇಶಿಸುವ ಪ್ರಕಾರ, ಕ್ರಮಬದ್ಧವಾದ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಕೊಳವೆಗಳಲ್ಲಿ 0.2 ppmನಷ್ಟು ಒಂದು ಕನಿಷ್ಟ ಪ್ರಮಾಣದಲ್ಲಿರುವ ಶೇಷಾತ್ಮಕ ಮುಕ್ತ ಕ್ಲೋರೀನ್‌ನ್ನು ಕಾಯ್ದುಕೊಂಡು ಹೋಗಲು ಅನುವಾಗುವಂಥ ಕ್ಲೋರೀನ್‌ನ ಒಂದು ಪ್ರಮಾಣವನ್ನು ಈ ವ್ಯವಸ್ಥೆಗಳು ಬಳಸುವುದು ಅಗತ್ಯವಾಗಿದೆ. ವಿದ್ಯುತ್‌ ಶಕ್ತಿಯು ಹೇರಳವಾಗಿರುವೆಡೆಗಳಲ್ಲಿ, ನೀರನ್ನು ಸಂಸ್ಕರಿಸುವುದಕ್ಕೆ ಸಂಬಂಧಿಸಿದಂತೆ ಓಝೋನ್‌ ಒಂದು ವೆಚ್ಚ-ಪರಿಣಾಮಕ ವಿಧಾನವಾಗಿದೆ. ಏಕೆಂದರೆ, ಬೇಡಿಕೆಯ ಮೇರೆಗೆ ಇದು ಉತ್ಪಾದಿಸಲ್ಪಡುತ್ತದೆ ಮತ್ತು ಹಾನಿಕರವಾದ ರಾಸಾಯನಿಕಗಳ ಸಾಗಾಣಿಕೆ ಹಾಗೂ ಸಂಗ್ರಹಣೆಯನ್ನು ಇದು ಬಯಸುವುದಿಲ್ಲ. ಒಮ್ಮೆಗೆ ಇದು ಕ್ಷಯಿಸಿತೆಂದರೆ, ಕುಡಿಯುವ ನೀರಿನಲ್ಲಿ ಇದು ಯಾವುದೇ ರುಚಿ ಅಥವಾ ವಾಸನೆಯನ್ನು ಉಳಿಸುವುದಿಲ್ಲ.

ಕಡಿಮೆ ಮಟ್ಟಗಳಲ್ಲಿರುವ ಓಝೋನ್‌, ಗೃಹವಾಸದ ಮನೆಗಳಲ್ಲಿ ಒಂದಷ್ಟು ಸೋಂಕುಗಳೆಯುವ ಪ್ರಯೋಜನಗಳನ್ನು ಹೊಂದಿವೆ ಎಂದು ಪ್ರಚುರಪಡಿಸಲ್ಪಟ್ಟಿದೆಯಾದರೂ, ವಾಯುಗಾಮಿ ರೋಗಕಾರಕಗಳ ಮೇಲೆ ಒಂದು ಕ್ಷಿಪ್ರ, ಗಮನಾರ್ಹ ಪರಿಣಾಮವನ್ನು ಹೊಂದುವಲ್ಲಿ ಅಗತ್ಯವಾಗಿರುವ ಶುಷ್ಕ ವಾಯುವಿನಲ್ಲಿನ ಓಝೋನ್‌‌ನ ಸಾಂದ್ರತೆಯು U.S. ಉದ್ಯೋಗದ ಸುರಕ್ಷತಾ ಮತ್ತು ಆರೋಗ್ಯ ಆಡಳಿತ ಹಾಗೂ ಪರಿಸರೀಯ ರಕ್ಷಣೆ ಸಂಸ್ಥೆಗಳಿಂದ ಶಿಫಾರಸು ಮಾಡಲ್ಪಟ್ಟಿರುವ ಸುರಕ್ಷತಾ ಮಟ್ಟಗಳನ್ನು ಮೀರುತ್ತದೆ. ರೋಗಕಾರಕಗಳನ್ನು ಸಾಯಿಸುವ ಓಝೋನ್‌‌ನ ಶಕ್ತಿ ಮತ್ತು ಆಮ್ಲಜನಕಕ್ಕೆ ಅದು ಮರಳಿ ಪರಿವರ್ತನೆಯಾಗುವಲ್ಲಿನ ಪ್ರಮಾಣಗತಿ ಈ ಎರಡನ್ನೂ ಆರ್ದ್ರತೆಯ ನಿಯಂತ್ರಣವು ವ್ಯಾಪಕವಾಗಿ ಸುಧಾರಿಸಬಲ್ಲದು (ಹೆಚ್ಚ ಆರ್ದ್ರತೆಯಿದ್ದಲ್ಲಿ ಹೆಚ್ಚು ಪರಿಣಾಮಶೀಲತೆಗೆ ಅವಕಾಶ ದೊರೆಯುತ್ತದೆ). ಬಹುಪಾಲು ರೋಗಕಾರಕಗಳ ಬೀಜಕ ಸ್ವರೂಪಗಳು ಸಾಂದ್ರತೆಗಳಲ್ಲಿನ ವಾತಾವರಣದ ಓಝೋನ್‌‌ಗೆ ಸಂಬಂಧಿಸಿದಂತೆ ಅತ್ಯಂತ ಸಹಿಷ್ಣುಗಳಾಗಿದ್ದು, ಇಂಥ ಸನ್ನಿವೇಶದಲ್ಲಿ ಅಸ್ತಮಾ ರೋಗಿಗಳಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ.

ಔದ್ಯಮಿಕವಾಗಿ, ಓಝೋನ್‌‌ ಈ ಕೆಳಕಂಡ ವಿಧಗಳಲ್ಲಿ ಬಳಕೆಯಾಗುತ್ತದೆ:

  • ಆಸ್ಪತ್ರೆಗಳು, ಆಹಾರ ಕಾರ್ಖಾನೆಗಳು, ಆರೈಕೆ ಗೃಹಗಳು ಇತ್ಯಾದಿಗಳಲ್ಲಿನ ದೋಭಿಖಾನೆಗಳ ಸೋಂಕು ನಿವಾರಿಸಲು;[೫೧]
  • ನೀರಿನ ಸೋಂಕು ನಿವಾರಕವಾಗಿ ಕ್ಲೋರೀನ್‌[೧೦] ಬದಲಿಗೆ ಉಪಯೋಗಿಸಲು
  • ಒಂದು ಬೆಂಕಿಯ ಘಟನೆಯ ನಂತರ ವಾಯು ಹಾಗೂ ವಸ್ತುಗಳ ವಾಸನೆಯನ್ನು ಕಳೆಯಲು. ನೆಯ್ದ ಬಟ್ಟೆಯ ನವೀಕರಣದ ಸಂದರ್ಭದಲ್ಲಿ ಈ ಪ್ರಕ್ರಿಯೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
  • ಆಹಾರದ ಮೇಲಿರುವ ಅಥವಾ ಸಂಪರ್ಕದ ಮೇಲ್ಮೈಗಳ ಮೇಲಿರುವ ಬ್ಯಾಕ್ಟೀರಿಯಾವನ್ನು ಸಾಯಿಸಲು;[೫೨]
  • ಈಜುಕೊಳಗಳು ಮತ್ತು ಖನಿಜ ಜಲಧಾಮಗಳನ್ನು ನಿರ್ಮಲಗೊಳಿಸಲು
  • ಶೇಖರಿಸಿಡಲ್ಪಟ್ಟ ಕಾಳುಗಳಲ್ಲಿನ[೫೩] ಕೀಟಗಳನ್ನು ಸಾಯಿಸಲು
  • ಆಹಾರ ಸಂಸ್ಕರಣಾ ಘಟಕಗಳಲ್ಲಿನ ವಾಯುವಿನಿಂದ ಬರುವ ಹುದುಗು ಮತ್ತು ಬೂಸ್ಟು ಬೀಜಕಗಳನ್ನು ಉಜ್ಜಿಹಾಕಲು;
  • ಹುದುಗು, ಬೂಸ್ಟು ಹಾಗೂ ಬ್ಯಾಕ್ಟೀರಿಯಾವನ್ನು ಸಾಯಿಸುವುದಕ್ಕಾಗಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆಯಲು;[೫೨]
  • ನೀರಿನಲ್ಲಿರುವ ಮಾಲಿನ್ಯಕಾರಕಗಳ ಮೇಲೆ (ಕಬ್ಬಿಣ, ಆರ್ಸೆನಿಕ್‌, ಜಲಜನಕದ ಸಲ್ಫೈಡು, ನೈಟ್ರೈಟ್‌‌‌ಗಳು, ಮತ್ತು "ಬಣ್ಣ" ಎಂಬುದಾಗಿ ಒಟ್ಟಾಗಿ ರಾಶಿಹಾಕಲ್ಪಟ್ಟ ಸಂಕೀರ್ಣ ಸಾವಯವ ಪದಾರ್ಥಗಳು) ರಾಸಾಯನಿಕವಾಗಿ ದಾಳಿಮಾಡಲು;
  • ಕುಚ್ಚಾಗುವಿಕೆಗೆ ಒಂದು ನೆರವನ್ನು ಒದಗಿಸಲು (ಸೋಸುವಿಕೆಯಲ್ಲಿ ನೆರವಾಗುವ ಅಣುಗಳ ಒಟ್ಟುಗೂಡುವಿಕೆ, ಇಲ್ಲಿ ಕಬ್ಬಿಣ ಮತ್ತು ಆರ್ಸೆನಿಕ್‌ನ್ನು ನಿವಾರಿಸಲಾಗುತ್ತದೆ);
  • ರಾಸಾಯನಿಕ ಸಂಶ್ಲೇಷಣೆಯ[೫೪] ಮೂಲಕ ರಾಸಾಯನಿಕ ಸಂಯುಕ್ತಗಳನ್ನು ತಯಾರಿಸಲು
  • ನೆಯ್ದ ಬಟ್ಟೆಗಳನ್ನು ಚೊಕ್ಕಮಾಡಲು ಮತ್ತು ಚೆಲುವೆ ಮಾಡಲು (ಮೊದಲ ಬಳಕೆಯು ನೆಯ್ದ ಬಟ್ಟೆಯ ನವೀಕರಣದಲ್ಲಿ ಬಳಕೆಯಾಗುತ್ತದೆ; ಎರಡನೆಯ ಬಳಕೆಯು ಸ್ವಾಮ್ಯದ ಹಕ್ಕುಪತ್ರ ಪಡೆದಿದೆ);
  • ಶಾಯಿಗಳ ಅಂಟಿಕೊಳ್ಳುವಿಕೆಗೆ ಅವಕಾಶ ಮಾಡಿಕೊಡಲು ಪ್ಲಾಸ್ಟಿಕ್ಕುಗಳ ಸಂಸ್ಕರಣೆಯಲ್ಲಿ ನೆರವಾಗಲು;
  • ರಬ್ಬರ್‌‌ನ ಒಂದು ವರ್ಗದ ಪ್ರಯೋಜನಕಾರಿ ಬಾಳಿಕೆಯನ್ನು ನಿರ್ಣಯಿಸುವಲ್ಲಿ ರಬ್ಬರ್‌‌ ಮಾದರಿಗಳನ್ನು ಹದವಾಗಿಸಲು‌‌;
  • ನೀರಿನ ಸಂಸ್ಕರಣಾ ಘಟಕಗಳಲ್ಲಿ ಗಿಯಾರ್ಡಿಯಾ ಲ್ಯಾಂಬ್ಲಿಯಾ ಮತ್ತು ಕ್ರಿಪ್ಟೋಸ್ಪೊರಿಡಿಯಂ ನಂಥ ನೀರುವಾಹಿ ಪರೋಪಜೀವಿಗಳನ್ನು ನಿರ್ಮೂಲಗೊಳಿಸಲು.

ಪ್ರಯೋಗಾಲಯದಲ್ಲಿ ಮತ್ತು ಉದ್ಯಮದಲ್ಲಿ ನಡೆಯುವ ಅನೇಕ ಸಾವಯವ ರಾಸಾಯನಿಕ ಕ್ರಿಯೆಗಳಲ್ಲಿ ಓಝೋನ್‌‌ ಒಂದು ಕಾರಕವಾಗಿದೆ. ಒಂದು ಆಲ್ಕೀನ್‌‌‌ನ್ನು ಕಾರ್ಬನಿಲ್‌ ಸಂಯುಕ್ತಗಳಾಗಿ ಸೀಳಿಕೆ ಮಾಡುವುದು ಓಝೋನ್‌ ವಿಶ್ಲೇಷಣೆ ಎನಿಸಿಕೊಳ್ಳುತ್ತದೆ.

U.S. ಹಾಗೂ ವಿಶ್ವಾದ್ಯಂತವಿರುವ ಅನೇಕ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆಗಳ ನಡುವಿನ ಅವಧಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ಕೋಣೆಗಳನ್ನು ನಿರ್ಮಲಗೊಳಿಸಲು ಬೃಹತ್‌‌ ಪ್ರಮಾಣದಲ್ಲಿ ಓಝೋನ್‌‌ ಉತ್ಪಾದಕಗಳನ್ನು ಬಳಸುತ್ತವೆ. ಕೋಣೆಗಳನ್ನು ಚೊಕ್ಕಮಾಡಲಾಗುತ್ತದೆ ಮತ್ತು ಓಝೋನ್‌‌ನಿಂದ ತುಂಬಿಸಲ್ಪಡುವುದಕ್ಕೆ ಮುಂಚಿತವಾಗಿ ಗಾಳಿಹೋಗದಂತೆ ಕೋಣೆಗಳನ್ನು ಮೊಹರುಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಉಳಿದಿರುವ ಎಲ್ಲಾ ಬ್ಯಾಕ್ಟೀರಿಯಾ ಪರಿಣಾಮಕಾರಿಯಾಗಿ ಸಾಯಿಸಲ್ಪಡುತ್ತವೆ ಅಥವಾ ತಟಸ್ಥೀಕರಿಸಲ್ಪಡುತ್ತವೆ.[೫೫]

ಮರದ ತಿರುಳಿನ ಚೆಲುವೆ ಮಾಡುವಿಕೆಯಲ್ಲಿ ಕ್ಲೋರೀನ್‌ ಅಥವಾ ಕ್ಲೋರೀನ್‌ ಡೈಯಾಕ್ಸೈಡ್‌‌‌‌ಗೆ ಒಂದು ಪರ್ಯಾಯವಾಗಿ ಓಝೋನ್‌‌ ಬಳಸಲ್ಪಡುತ್ತದೆ.[೫೬] ಉನ್ನತ-ಗುಣಮಟ್ಟದ, ಬಿಳಿ ಕಾಗದದ ತಯಾರಿಕೆಯಲ್ಲಿರುವ ಕ್ಲೋರೀನ್‌-ಒಳಗೊಂಡಿರುವ ಸಂಯುಕ್ತಗಳಿಗೆ ಸಂಬಂಧಿಸಿದ ಅಗತ್ಯವನ್ನು ತೆಗೆದುಹಾಕಲು, ಆಮ್ಲಜನಕ ಮತ್ತು ಜಲಜನಕದ ಪೆರಾಕ್ಸೈಡ್‌‌ನ ಜೊತೆಯಲ್ಲಿ ಇದನ್ನು ಅನೇಕವೇಳೆ ಬಳಸಲಾಗುತ್ತದೆ.[೫೭]

ಸೈನೈಡನ್ನು ಸೈನೇಟ್‌‌‌ ಆಗಿ ಹಾಗೂ ಅಂತಿಮವಾಗಿ ಇಂಗಾಲದ ಡೈಯಾಕ್ಸೈಡ್‌‌ ಆಗಿ ಉತ್ಕರ್ಷಿಸುವ ಮೂಲಕ, ಸೈನೈಡು ತ್ಯಾಜ್ಯಗಳನ್ನು (ಉದಾಹರಣೆಗೆ ಬಂಗಾರ ಮತ್ತು ಬೆಳ್ಳಿ ಗಣಿಗಾರಿಕೆಯಿಂದ ಬರುವಂಥವು) ನಿರ್ವಿಷಗೊಳಿಸಲು ಓಝೋನ್‌‌ನ್ನು ಬಳಸಬಹುದು.[೫೮]

ಬಳಕೆದಾರರು[ಬದಲಾಯಿಸಿ]

ಉನ್ನತ ಮಟ್ಟಗಳಲ್ಲಿನ ಓಝೋನ್‌ನ್ನು ಉತ್ಪಾದಿಸುವ ಉಪಕರಣಗಳು, ಅವುಗಳ ಪೈಕಿ ಅಯಾನೀಕರಣವನ್ನು ಬಳಕೆಮಾಡಿಕೊಳ್ಳುವ ಉಪಕರಣಗಳು, ಜನವಾಸವಿಲ್ಲದ ಕಟ್ಟಡಗಳು, ಕೋಣೆಗಳು, ಕೊಳವೆರಚನೆ, ಕಟ್ಟಿಗೆ ಸಂಗ್ರಹಿಸುವ ಕೊಟ್ಟಿಗೆಗಳು, ಹಾಗೂ ದೋಣಿಗಳು ಮತ್ತು ಇತರ ವಾಹನಗಳನ್ನು ನಿರ್ಮಲಗೊಳಿಸಲು ಹಾಗೂ ವಾಸನೆಯನ್ನು ಕಳೆಯಲು ಬಳಸಲ್ಪಡುತ್ತವೆ.

U.S.ನಲ್ಲಿ, ಕಡಿಮೆ ಮಟ್ಟಗಳಲ್ಲಿನ ಓಝೋನ್‌‌ನ್ನು ಹೊರಸೂಸುವ ವಾಯು ಶುದ್ಧಿಕಾರಿಗಳು ಮಾರಾಟಗೊಂಡಿವೆ. ವಾಯುವನ್ನು ಮತ್ತು ಮನೆಬಳಕೆಯ ಮೇಲ್ಮೈಗಳನ್ನು ನಿರ್ಮಲಗೊಳಿಸುವಲ್ಲಿನ ಮತ್ತು ಶೋಧಕಗಳಿಲ್ಲದೆಯೇ ವಾಯುವನ್ನು[೫೯] ಶುದ್ಧೀಕರಿಸುವಲ್ಲಿನ ಪ್ರಕೃತಿಯ ವಿಧಾನವನ್ನು ಈ ಬಗೆಯ ವಾಯು ಶುದ್ಧಿಕಾರಿಯು ಕೆಲವೊಮ್ಮೆ ಅನುಕರಿಸುತ್ತದೆ ಎಂದು ಸಮರ್ಥಿಸಲಾಗುತ್ತದೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಪರಿಸರೀಯ ಸಂರಕ್ಷಣಾ ಸಂಸ್ಥೆಯು (EPA) ಘೋಷಿಸಿರುವ ಪ್ರಕಾರ, "ಸಾರ್ವಜನಿಕ ಆರೋಗ್ಯ ಪ್ರಮಾಣಕಗಳನ್ನು ಮೀರದ ಸಾಂದ್ರತೆಗಳಲ್ಲಿರುವ ಓಝೋನ್‌, ವಾಸನೆ-ಉಂಟುಮಾಡುವ ಅನೇಕ ರಾಸಾಯನಿಕಗಳು ಅಥವಾ ವೈರಸ್‌ಗಳು, ಬ್ಯಾಕ್ಟೀರಿಯಾ, ಬೂಸ್ಟು, ಅಥವಾ ಇತರ ಜೈವಿಕ ಮಾಲಿನ್ಯಕಾರಕಗಳನ್ನು ನಿರ್ಮೂಲಗೊಳಿಸುವಷ್ಟು ಪರಿಣಾಮಕಾರಿಯಾಗಿಲ್ಲ ಎಂಬುದನ್ನು ತೋರಿಸಲು ಪುರಾವೆಯಿದೆ." ಇಷ್ಟೇ ಅಲ್ಲದೇ, ಇದರ ವರದಿಗಳು ಹೇಳುವ ಪ್ರಕಾರ "ಕೆಲವೊಂದು ನಿಯಂತ್ರಿತ ಅಧ್ಯಯನಗಳ ಫಲಿತಾಂಶಗಳು ತೋರಿಸುವಂತೆ ಈ [ಮಾನವ ಸುರಕ್ಷತಾ] ಪ್ರಮಾಣಕಗಳಿಗಿಂತ ಗಣನೀಯವಾಗಿ ಉನ್ನತ ಮಟ್ಟದಲ್ಲಿರುವ ಓಝೋನ್‌‌ ಸಾಂದ್ರತೆಗಳು, ತಯಾರಕರ ನಿರ್ವಹಣಾ ಸೂಚನೆಗಳನ್ನು ಓರ್ವ ಬಳಕೆದಾರನು ಅನುಸರಿಸಿದ ನಂತರವೂ ಇರುವ ಸಾಧ್ಯತೆಯಿರುತ್ತದೆ."[೬೦] 1995ರಲ್ಲಿ ಸರ್ಕಾರವು ಒಂದು ಕಂಪನಿಯ ಮೇಲೆ ಯಶಸ್ವಿಯಾಗಿ ಮೊಕದ್ದಮೆ ಹೂಡಿತು ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಆಧಾರವಾಗಿ ನೀಡದ ಹೊರತು ಆರೋಗ್ಯಸಂಬಂಧಿ ಹಕ್ಕಿನ-ಸಮರ್ಥನೆಗಳನ್ನು ಪುನರಾವರ್ತಿಸುವುದನ್ನು ನಿಲ್ಲಿಸುವಂತೆ ಅದಕ್ಕೆ ಆದೇಶ ನೀಡಿತು.

ಬಟ್ಟೆಗಳನ್ನು ಮಡಿಮಾಡಲು ಹಾಗೂ ಆಹಾರ, ಕುಡಿಯುವ ನೀರು, ಮತ್ತು ಮನೆಯಲ್ಲಿನ ಮೇಲ್ಮೈಗಳನ್ನು ನಿರ್ಮಲಗೊಳಿಸಲು ಓಝೋನ್‌ಯುಕ್ತವಾಗಿರುವ ನೀರನ್ನು ಬಳಸಲಾಗುತ್ತದೆ. U.S. ಆಹಾರ ಮತ್ತು ಔಷಧ ಆಡಳಿತದ ಅನುಸಾರ (ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌-FDA), "ಓಝೋನ್‌‌ನ್ನು ಅನಿಲ ರೂಪದ ಮತ್ತು ಜಲೀಯ ಸ್ಥಿತಿಗಳಲ್ಲಿ, ಮಾಂಸ ಹಾಗೂ ಸಾಕುಕೋಳಿ ಜಾತಿಗಳು ಸೇರಿದಂತೆ ಆಹಾರದ ಕುರಿತಾದ ಒಂದು ಸೂಕ್ಷ್ಮಜೀವಿ ನಿರೋಧಕ ವಸ್ತುವಾಗಿ ಸುರಕ್ಷಿತವಾಗಿ ಬಳಸುವುದಕ್ಕೆ ಸಂಬಂಧಿಸಿದಂತೆ ಅವಕಾಶ ಕಲ್ಪಿಸಲು ಆಹಾರ ಸಂಯೋಜನೀಯ ಕಟ್ಟುಪಾಡುಗಳನ್ನು ಅದು ತಿದ್ದುಪಡಿ ಮಾಡುತ್ತಿದೆ." ಕ್ಯಾಲಿಫೋರ್ನಿಯಾ ಪಾಲಿಟೆಕ್ನಿಕ್‌ ಯೂನಿವರ್ಸಿಟಿಯಲ್ಲಿನ ಅಧ್ಯಯನಗಳು ನಿರೂಪಿಸಿರುವ ಪ್ರಕಾರ, ಶೋಧಿಸಲ್ಪಟ್ಟ ಕೊಳಾಯಿ ನೀರಿನಲ್ಲಿ ಕರಗಿಸಲಾಗಿರುವ 0.3 ppm ಮಟ್ಟಗಳಲ್ಲಿನ ಓಝೋನ್‌‌, ಸಾಲ್ಮೋನೆಲ್ಲಾ, E. ಕೋಲಿ 0157:H7, ಮತ್ತು ಕ್ಯಾಂಪೈಲೋಬ್ಯಾಕ್ಟರ್‌‌ನಂಥ ಆಹಾರ-ವಾಹಿ ಸೂಕ್ಷ್ಮ ಜೀವಿಗಳಲ್ಲಿ 99.99%ಗಿಂತಲೂ ಹೆಚ್ಚಿನ ಒಂದು ಅಪಕರ್ಷಣವನ್ನು ಉತ್ಪಾದಿಸಬಲ್ಲದು. ಈ ಪರಿಮಾಣವು ಮೇಲೆ ಉಲ್ಲೇಖಿಸಲಾದ WHO ಶಿಫಾರಿತ ಮಿತಿಗಳಿಗಿಂತಲೂ 20,000 ಪಟ್ಟು ಹೆಚ್ಚಿದೆ.[೫೨][೬೧] ಹಣ್ಣುಗಳು ಮತ್ತು ತರಕಾರಿಗಳಿಂದ ಬರುವ ಕೀಟನಾಶಕ ಅವಶೇಷಗಳನ್ನು ನಿರ್ಮೂಲಗೊಳಿಸಲು ಓಝೋನ್‌ನ್ನು ಬಳಸಬಹುದಾಗಿದೆ.[೬೨][೬೩]

ನೀರಿನಲ್ಲಿರುವ ಬ್ಯಾಕ್ಟೀರಿಯಾವನ್ನು ಸಾಯಿಸಲು ಮತ್ತು ಕ್ಲೋರೀನ್‌ ಅಥವಾ ಬ್ರೋಮೀನ್‌ಗಳನ್ನು ಅವುಗಳ ಮುಕ್ತಸ್ಥಿತಿಗೆ ಪುನಃಸಕ್ರಿಯಗೊಳಿಸುವ ಮೂಲಕ ಅಗತ್ಯವಿರುವ ಕ್ಲೋರೀನ್‌ ಅಥವಾ ಬ್ರೋಮೀನ್‌ ಪ್ರಮಾಣವನ್ನು ತಗ್ಗಿಸಲು ಮನೆಗಳು ಹಾಗೂ ಬಿಸಿನೀರಿನ ತೊಟ್ಟಿಗಳಲ್ಲಿ ಓಝೋನ್‌‌ ಬಳಸಲ್ಪಡುತ್ತದೆ. ನೀರಿನಲ್ಲಿ ಓಝೋನ್‌ ದೀರ್ಘಕಾಲದವರೆಗೆ ಉಳಿದುಕೊಳ್ಳುವುದಿಲ್ಲವಾದ್ದರಿಂದ, ಮುಳುಗು ಮೀಯುವವರ ನಡುವೆ ಅಡ್ಡ-ಕಶ್ಮಲೀಕರಣವನ್ನು ತಡೆಯುವಲ್ಲಿ ಓಝೋನ್‌‌ ಸ್ವತಃ ನಿಷ್ಪರಿಣಾಮಕಾರಿಯಾಗಿದೆ ಮತ್ತು ಈ ಕಾರಣದಿಂದಾಗಿ ಅದನ್ನು ಹ್ಯಾಲೋಜೆನ್ನುಗಳ ಜೊತೆಯಲ್ಲಿ ಬಳಸುವುದು ಅಗತ್ಯ. ನೇರಳಾತೀತ ಬೆಳನಿಂದ ಅಥವಾ ಪರಿವೇಷದ ಹೊರಸೂಸುವಿಕೆಯಿಂದ ಸೃಷ್ಟಿಸಲ್ಪಟ್ಟ ಅನಿಲ ರೂಪದ ಓಝೋನ್‌‌ನ್ನು ನೀರಿನೊಳಗೆ ಹೊಗಿಸಲಾಗುತ್ತದೆ.[೬೪]

ಜಲಜೀವಿ ತೊಟ್ಟಿಗಳು ಮತ್ತು ಮೀನಿನ ಕೊಳಗಳಲ್ಲಿನ ನೀರಿನ ಸಂಸ್ಕರಣೆಯಲ್ಲೂ ಓಝೋನ್‌‌ನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಬಳಕೆಯು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕನಿಷ್ಟಗೊಳಿಸಬಲ್ಲದು, ಪರೋಪಜೀವಿಗಳನ್ನು ನಿಯಂತ್ರಿಸಬಲ್ಲದು, ಕೆಲವೊಂದು ಕಾಯಿಲೆಗಳ ಹರಡುವಿಕೆಯನ್ನು ನಿವಾರಿಸಬಲ್ಲದು, ಮತ್ತು ನೀರಿನ "ಹಳದಿಯಾಗುವಿಕೆಯನ್ನು" ತಗ್ಗಿಸಬಲ್ಲದು ಅಥವಾ ನಿವಾರಿಸಬಲ್ಲದು. ಮೀನಿನ ಕಿವಿರು ರಚನೆಗಳೊಂದಿಗೆ ಓಝೋನ್‌‌ನ ಸಂಪರ್ಕವಾಗಬಾರದು. ಓಝೋನ್‌ನ ನಿಯಂತ್ರಿತ ಪ್ರಮಾಣಗಳು ಬ್ರೋಮೈಡ್‌ ಅಯಾನನ್ನು ಹೈಪೋಬ್ರೋಮಸ್‌ ಆಮ್ಲವಾಗಿ ಸಕ್ರಿಯಗೊಳಿಸಲು ಸಾಕಾಗುವಷ್ಟಿರುವ "ತತ್‌ಕ್ಷಣದ ಬೇಡಿಕೆಯನ್ನು" ಸ್ವಾಭಾವಿಕವಾದ ಲವಣದ ನೀರು (ಜೀವಿಯ ಸ್ವರೂಪಗಳೊಂದಿಗೆ) ಒದಗಿಸುತ್ತದೆ, ಮತ್ತು ಕೆಲವೇ ಸೆಕೆಂಡುಗಳಿಂದ ನಿಮಿಷಗಳವರೆಗಿನ ಅವಧಿಯಲ್ಲಿ ಓಝೋನ್‌‌ ಸಮಗ್ರವಾಗಿ ಪರಿವರ್ತನೆಯಾಗುತ್ತದೆ. ಒಂದುವೇಳೆ ಆಮ್ಲಜನಕದಿಂದ ಪೂರೈಸಲ್ಪಟ್ಟ ಓಝೋನ್‌ನ್ನು ಬಳಸಿದಲ್ಲಿ, ಕರಗಿಸಲ್ಪಟ್ಟಿರುವ ಆಮ್ಲಜನಕವನ್ನು ನೀರು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ, ಮೀನಿನ ಕಿವಿರು ರಚನೆಗಳು ಕ್ಷೀಣವಾಗುತ್ತವೆ ಮತ್ತು ಉನ್ನತ ಮಟ್ಟದಲ್ಲಿರುವ ಕರಗಿಸಲ್ಪಟ್ಟ ಆಮ್ಲಜನಕದ ಮೇಲೆ ಅವು ಅವಲಂಬಿತವಾಗಿ ಉಳಿದುಬಿಡುತ್ತವೆ.

ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ ಟೆಂಪ್ಲೇಟು:PGCH
  2. Gas Encyclopedia; Ozone
  3. Cuthbertson, Clive; Cuthbertson, Maude (1914). "On the Refraction and Dispersion of the Halogens, Halogen Acids, Ozone, Steam Oxides of Nitrogen, and Ammonia". Philosophical Transactions of the Royal Society A. 213 (497–508): 1–26. Bibcode:1914RSPTA.213....1C. doi:10.1098/rsta.1914.0001. Retrieved 4 February 2016.
  4. "Ozone". Immediately Dangerous to Life and Health Concentrations (IDLH). National Institute for Occupational Safety and Health (NIOSH).
  5. ೫.೦ ೫.೧ Rubin, Mordecai B. (2001). "The History of Ozone. The Schönbein Period, 1839–1868" (PDF). Bull. Hist. Chem. 26 (1). Retrieved 2008-02-28.
  6. "Today in Science History". Retrieved 2006-05-10.
  7. Jacques-Louis Soret (1865). "Recherches sur la densité de l'ozone". Comptes rendus de l'Académie des sciences. 61: 941.
  8. "Ozone FAQ". Global Change Master Directory. Archived from the original on 2006-06-01. Retrieved 2006-05-10.
  9. "Oxygen". WebElements. Retrieved 2006-09-23.
  10. ೧೦.೦ ೧೦.೧ ೧೦.೨ ೧೦.೩ ೧೦.೪ Nicole Folchetti, ed. (2003). "22". Chemistry: The Central Science (9th ed.). Pearson Education. pp. 882–883. ISBN 0-13-066997-0. {{cite book}}: |first= missing |last= (help); Unknown parameter |coauthors= ignored (|author= suggested) (help); Unknown parameter |origdate= ignored (|orig-year= suggested) (help)
  11. ಟಕೆಹಿಕೊ ಟನಾಕಾ; ಯೊನೆಝೊ ಮೊರಿನೊ. ಕೋರಿಯೋಲಿಸ್‌ ಇಂಟರಾಕ್ಷನ್‌ ಅಂಡ್‌ ಅನ್‌ಹಾರ್ಮೋನಿಕ್‌ ಪೊಟೆನ್ಷಿಯಲ್‌ ಫಂಕ್ಷನ್‌ ಆಫ್‌ ಓಝೋನ್‌ ಫ್ರಂ ದಿ ಮೈಕ್ರೋವೇವ್‌ ಸ್ಪೆಕ್ಟ್ರಾ ಇನ್‌ ದಿ ಎಕ್ಸೈಟೆಡ್‌ ವೈಬ್ರೇಷನಲ್‌ ಸ್ಟೇಟ್ಸ್‌, ಜರ್ನಲ್‌ ಆಫ್‌ ಮಾಲ್‌ಕ್ಯುಲರ್‌ ಸ್ಪೆಕ್ಟ್ರೋಸ್ಕೋಪಿ 1970 , 33 , 538–551.
  12. ಕೆನ್ನೆತ್‌ M. ಮ್ಯಾಕ್‌; J. S. ಮೂಯೆಂಟರ್‌. ಸ್ಟಾರ್ಕ್‌ ಅಂಡ್‌ ಝೀಮನ್‌ ಪ್ರಾಪರ್ಟೀಸ್‌ ಆಫ್‌ ಓಝೋನ್‌‌ ಫ್ರಂ ಮಾಲ್‌ಕ್ಯುಲರ್‌ ಬೀಮ್‌ ಸ್ಪೆಕ್ಟ್ರೋಸ್ಕೋಪಿ. ಜರ್ನಲ್‌ ಆಫ್‌ ಕೆಮಿಕಲ್‌ ಫಿಸಿಕ್ಸ್‌ 1977 , 66 , 5278–5283. doi:10.1063/1.433909
  13. ಅರ್ತ್‌ ಸೈನ್ಸ್‌ FAQ: ವೇರ್‌ ಕೆನ್‌ ಐ ಫೈಂಡ್‌ ಇನ್ಫರ್ಮೇಷನ್‌ ಎಬೌಟ್‌ ದಿ ಓಝೋನ್‌‌ ಹೋಲ್‌ ಅಂಡ್‌ ಓಝೋನ್‌‌ ಡಿಪ್ಲೀಷನ್‌? Archived 2006-06-01 ವೇಬ್ಯಾಕ್ ಮೆಷಿನ್ ನಲ್ಲಿ. ಗೊಡಾರ್ಡ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ , ನ್ಯಾಷನಲ್‌ ಏರೋನಾಟಿಕ್ಸ್‌ ಅಂಡ್‌ ಸ್ಪೇಸ್ ಅಡ್ಮಿನಿಸ್ಟ್ರೇಷನ್‌, ಮಾರ್ಚ್‌ 2008.
  14. Koike, K; Nifuku, M; Izumi, K; Nakamura, S; Fujiwara, S; Horiguchi, S (2005). "Explosion properties of highly concentrated ozone gas" (PDF). Journal of Loss Prevention in the Process Industries. 18: 465. doi:10.1016/j.jlp.2005.07.020. Archived from the original (PDF) on 2009-03-27.
  15. ೧೫.೦ ೧೫.೧ Horvath M., Bilitzky L., Huttner J. (1985). Ozone. pp. 44–49.{{cite book}}: CS1 maint: multiple names: authors list (link)
  16. Housecroft, C. E.; Sharpe, A. G. (2004). Inorganic Chemistry (2nd ed.). Prentice Hall. p. 439. ISBN 978-0130399137.
  17. Housecroft, C. E.; Sharpe, A. G. (2004). Inorganic Chemistry (2nd ed.). Prentice Hall. p. 265. ISBN 978-0130399137.
  18. Horvath M., Bilitzky L., Huttner J. (1985). Ozone. pp. 259, 269–270.{{cite book}}: CS1 maint: multiple names: authors list (link)
  19. ೧೯.೦ ೧೯.೧ WHO-ಯುರೋಪ್‌ ರಿಪೋರ್ಟ್ಸ್‌: ಹೆಲ್ತ್‌ ಆಸ್ಪೆಕ್ಟ್ಸ್‌ ಆಫ್‌ ಏರ್‌ ಪಲೂಷನ್‌ (2003) (PDF)
  20. Stevenson; et al. (2006). "Multimodel ensemble simulations of present-day and near-future tropospheric ozone". American Geophysical Union. Archived from the original on 2011-11-04. Retrieved 2006-09-16. {{cite web}}: Explicit use of et al. in: |author= (help)
  21. "Rising Ozone Levels Pose Challenge to U.S. Soybean Production, Scientists Say". NASA Earth Observatory. 2003-07-31. Retrieved 2006-05-10.
  22. ೨೨.೦ ೨೨.೧ Mutters, Randall (1999). "Statewide Potential Crop Yield Losses From Ozone Exposure". California Air Resources Board. Archived from the original on 2004-02-17. Retrieved 2006-05-10. {{cite web}}: Unknown parameter |month= ignored (help)
  23. "Tropospheric Ozone in EU - The consolidated report". European Environmental Agency. 1998. Archived from the original on 2006-08-24. Retrieved 2006-05-10.
  24. "Atmospheric Chemistry and Greenhouse Gases". Intergovernmental Panel on Climate Change. Archived from the original on 2006-07-10. Retrieved 2006-05-10.
  25. "Climate Change 2001". Intergovernmental Panel on Climate Change. 2001. Archived from the original on 2006-09-27. Retrieved 2006-09-12.
  26. [49]
  27. ಆನ್ಸರ್‌ ಟು ಫಾಲೋ-ಅಪ್‌ ಕ್ವೆಶ್ಚನ್ಸ್‌ ಫ್ರಂ CAFE (2004) (PDF)
  28. Anderson, W. (2001). "Asthma admissions and thunderstorms: a study of pollen, fungal spores, rainfall, and ozone". QJM: an International Journal of Medicine. Oxford Journals. 94 (8): 429–433. doi:10.1093/qjmed/94.8.429. PMID 11493720. {{cite journal}}: Unknown parameter |coauthors= ignored (|author= suggested) (help)
  29. ೨೯.೦ ೨೯.೧ Weinhold B (2008). "Ozone nation: EPA standard panned by the people". Environ. Health Perspect. 116 (7): A302–A305. doi:10.1289/ehp.116-a302. PMC 2453178. PMID 18629332.
  30. "Smog - Who does it hurt? What You Need to Know About Ozone and Your Health". AIRNow.gov. Retrieved 2007-07-10.
  31. ಆಶ್‌ಫೀಲ್ಡ್‌ ಜಿಲ್ಲಾ ಪರಿಷತ್ತು: ನಿಯಂತ್ರಿಸಲ್ಪಟ್ಟ ವಾಯು ಮಾಲಿನ್ಯಕಾರಕಗಳು Archived 2009-06-10 ವೇಬ್ಯಾಕ್ ಮೆಷಿನ್ ನಲ್ಲಿ., 2007ರ ಫೆಬ್ರವರಿ 2ರಂದು ಡೌನ್‌ಲೋಡ್‌ ಮಾಡಲಾಯಿತು
  32. ಯೂನಿವರ್ಸಿಟಿ ಆಫ್‌ ಈಸ್ಟ್‌ ಆಂಗ್ಲಿಯಾದ ಪತ್ರಿಕಾ ಹೇಳಿಕೆ, ಕ್ಲೋನಿಂಗ್‌ ಆಫ್‌ ಸ್ಮೆಲ್‌ ಆಫ್‌ ದಿ ಸೀಸೈಡ್‌ Archived 2007-10-11 ವೇಬ್ಯಾಕ್ ಮೆಷಿನ್ ನಲ್ಲಿ., 2007ರ ಫೆಬ್ರವರಿ 2
  33. Jerrett, Michael (March 12, 2009). "Long-Term Ozone Exposure and Mortality". N. Engl. J. Med. 360 (11): 1085–1095. doi:10.1056/NEJMoa0803894. PMID 19279340. {{cite journal}}: Unknown parameter |coauthors= ignored (|author= suggested) (help)
  34. Wilson, Elizabeth K. (March 16, 2009). "Ozone's Health Impact". Chemical & Engineering News. American Chemical Society Publications. 87 (11): 9.
  35. Hoffmann, Roald (2004). "The Story of O". American Scientist. 92 (1): 23. doi:10.1511/2004.1.23. Archived from the original on 2006-09-25. Retrieved 2006-10-11. {{cite journal}}: Unknown parameter |month= ignored (help)
  36. Smith, LL (2004). "Oxygen, oxysterols, ouabain, and ozone: a cautionary tale". Free radical biology & medicine. 37 (3): 318–24. doi:10.1016/j.freeradbiomed.2004.04.024.
  37. Paul Wentworth; Nieva, J; Takeuchi, C; Galve, R; Wentworth, AD; Dilley, RB; Delaria, GA; Saven, A; Babior, BM (2003). "Evidence for Ozone Formation in Human Atherosclerotic Arteries". Science. 302 (5647): 1053. doi:10.1126/science.1089525. PMID 14605372.
  38. Iglesias, Domingo J. (2006). "Responses of citrus plants to ozone: leaf biochemistry, antioxidant mechanisms and lipid peroxidation". Plant Physiology and Biochemistry. 44 (2–3): 125–131. doi:10.1016/j.plaphy.2006.03.007. PMID 16644230. {{cite journal}}: Unknown parameter |coauthors= ignored (|author= suggested) (help)
  39. 2-ಹೆಲ್ತ್‌ ಎಫೆಕ್ಟ್ಸ್‌ ಆಫ್‌ ಓಝೋನ್‌‌ Archived 2010-07-06 ವೇಬ್ಯಾಕ್ ಮೆಷಿನ್ ನಲ್ಲಿ., ಕೆನಡಿಯನ್‌ ಸೆಂಟರ್‌ ಫಾರ್‌ ಆಕ್ಯುಪೇಷನಲ್‌ ಹೆಲ್ತ್‌ ಅಂಡ್‌ ಸೇಫ್ಟಿ
  40. ಡಾಕ್ಯುಮೆಂಟೇಷನ್‌ ಫಾರ್‌ ಇಮ್ಮಿಡಿಯೆಟಲಿ ಡೇಂಜರಸ್‌ ಟು ಲೈಫ್‌ ಆರ್‌ ಹೆಲ್ತ್‌ ಕಾನ್ಸೆಂಟ್ರೇಷನ್ಸ್‌ (IDLH): NIOSH ಕೆಮಿಕಲ್‌ ಲಿಸನಿಂಗ್‌ ಅಂಡ್‌ ಡಾಕ್ಯುಮೆಂಟೇಷನ್‌ ಆಫ್‌ ರಿವೈಸ್ಡ್‌ IDLH ವ್ಯಾಲ್ಯೂಸ್‌ (3/1/95ರಂದು ಇದ್ದಂತೆ)
  41. ೪೧.೦ ೪೧.೧ http://www.portfolio.com/views/blogs/daily-brief/2008/05/08/airplane-air-heavy-on-the-ozone‌
  42. https://www.sciencedaily.com/releases/2007/09/070905140105.htm
  43. ಆರ್ಗ್ಯಾನಿಕ್‌ ಸಿಂಥಸಿಸ್‌, ಸಂಗ್ರಹ. ಸಂಪುಟ 3, ಪುಟ 673 (1955); ಸಂಪುಟ 26, ಪುಟ 63 (1946). (ಲೇಖನ)
  44. Dohan, J. M. (1987). "Photochemical Generation of Ozone: Present State-of-the-Art". Ozone Sci. Eng. 9: 315–334. {{cite journal}}: Unknown parameter |coauthors= ignored (|author= suggested) (help)
  45. "Fire in the Sky". Archived from the original on 2011-07-21. Retrieved 2008-08-16.
  46. Ibanez, Jorge G. (2005). "Laboratory Experiments on the Electrochemical Remediation of the Environment. Part 7: Microscale Production of Ozone". Journal of Chemical Education. 82 (10): 1546. doi:10.1021/ed082p1546. Archived from the original on 2006-06-30. Retrieved 2006-05-10. {{cite journal}}: Unknown parameter |coauthors= ignored (|author= suggested) (help)
  47. Phillips, TJ (1999 Nov-Dec). "Ozone emissions from a "personal air purifier"". J Expo Anal Environ Epidemiol. 6: 9: 594–601. Retrieved 29 May 2009. {{cite journal}}: Check date values in: |date= (help); Unknown parameter |coauthors= ignored (|author= suggested) (help)CS1 maint: location (link)
  48. "Ozone and Color Removal". Ozone Information. Archived from the original on 2011-07-15. Retrieved 2009-01-09.
  49. Hoigné, J. (1998). Handbook of Environmental Chemistry, Vol. 5 part C. Berlin: Springer-Verlag. pp. 83–141.
  50. "Oxidation Potential of Ozone". Ozone-Information.com. Archived from the original on 2008-04-19. Retrieved 2008-05-17.
  51. "Decontamination: Ozone scores on spores". Hospital Development. Wilmington Media Ltd. 2007-04-01. Archived from the original on 2007-09-29. Retrieved 2007-05-30.
  52. ೫೨.೦ ೫೨.೧ ೫೨.೨ Montecalvo, Joseph. "Application of Ozonation in Sanitizing Vegetable Process Washwaters" (PDF). California Polytechnic State University. Archived from the original (PDF) on 2006-10-17. Retrieved 2008-03-24. {{cite web}}: Unknown parameter |coauthors= ignored (|author= suggested) (help)
  53. Steeves, Susan A. (January 30, 2003). "Ozone may provide environmentally safe protection for grains". Purdue News.
  54. "Chemical Synthesis with Ozone". Ozone-Information.com. Archived from the original on 2008-04-10. Retrieved 2008-05-17.
  55. de Boer, Hero E. L. (2006). "Use of Gaseous Ozone for Eradication of Methicillin-Resistant Staphylococcus aureus From the Home Environment of a Colonized Hospital Employee". Infection Control and Hospital Epidemiology. 27 (10): 1120–1122. doi:10.1086/507966. PMID 17006820. {{cite journal}}: Unknown parameter |coauthors= ignored (|author= suggested) (help)
  56. Sjöström, Eero (1993). Wood Chemistry: Fundamentals and Applications. San Diego, CA: Academic Press, Inc. ISBN 0126474818.
  57. Su, Yu-Chang; Chen, Horng-Tsai (2001). "Enzone Bleaching Sequence and Color Reversion of Ozone-Bleached Pulps". Taiwan Journal of Forest Science. 16 (2): 93–102. Archived from the original on 2010-10-14. Retrieved 2010-07-22.
  58. Bollyky, L. J. (1977). Ozone Treatment of Cyanide-Bearing Wastes, EPA Report 600/2-77-104. Research Triangle Park, N.C.: U.S. Environmental Protection Agency.
  59. "The Unknown Truth Regarding Ozone!". Retrieved 2006-09-16.
  60. ಗ್ರಾಹಕ ಬಳಕೆಯ ಓಝೋನ್‌‌ ವಾಯು ಶುದ್ಧಿಕಾರಿಗಳ ಕುರಿತಾದ EPA ವರದಿ
  61. Long, Ron (2008). "POU Ozone Food Sanitation: A Viable Option for Consumers & the Food Service Industry" (PDF). Archived from the original (pdf) on 2011-07-15. Retrieved 2010-07-22. (ಲೆಟಿಸ್‌ ಸೊಪ್ಪಿನಿಂದ 99.95%ನಷ್ಟು ರೋಗಕಾರಕಗಳನ್ನು ಕೊಳಾಯಿ ನೀರು ನಿರ್ಮೂಲಗೊಳಿಸುತ್ತದೆ ಎಂಬುದನ್ನೂ ವರದಿಯು ತೋರಿಸುತ್ತದೆ; ಮಾದರಿಗಳನ್ನು ಸಂಸ್ಕರಿಸುವುದಕ್ಕೆ ಮುಂಚಿತವಾಗಿ ಅದರೊಳಗೆ ರೋಗಕಾರಕಗಳನ್ನು ಒಳಹೊಗಿಸಲಾಯಿತು)
  62. Tersano Inc (2007). "lotus Sanitises Food without Chemicals". Archived from the original on 2007-02-11. Retrieved 2007-02-11.{{cite web}}: CS1 maint: bot: original URL status unknown (link)
  63. Jongen, W (2005). Improving the Safety of Fresh Fruit and Vegetables. Boca Raton: Woodhead Publishing Ltd. ISBN 1855739569.
  64. "Alternative Disinfectants and Oxidant Guidance Manual" (PDF). United States Environmental Protection Agency. Archived from the original (PDF) on 2008-04-11. Retrieved 2008-01-14.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • ಸೀರೀಸ್‌ ಇನ್‌ ಪ್ಲಾಸ್ಮಾ ಫಿಸಿಕ್ಸ್‌: ನಾನ್‌-ಈಕ್ವಲಿಬ್ರಿಯಂ ಏರ್‌ ಪ್ಲಾಸ್ಮಾಸ್‌ ಅಟ್‌ ಅಟ್ಮಾಸ್ಫಿಯರಿಕ್‌ ಪ್ರೆಷರ್‌‌. K.H. ಬೆಕರ್‌, U. ಕೊಗೆಲ್‌ಷಾಟ್ಜ್‌‌, K.H. ಸ್ಕೋಯೆನ್‌ಬ್ಯಾಕ್‌, R.J. ಬಾರ್ಕರ್‌‌‌ ಇವರಿಂದ ಸಂಪಾದಿತ; ಬ್ರಿಸ್ಟಲ್‌ ಮತ್ತು ಫಿಲಡೆಲ್ಫಿಯಾ: ಇನ್‌‌ಸ್ಟಿಟ್ಯೂಟ್‌ ಆಫ್‌ ಫಿಸಿಕ್ಸ್‌ ಪಬ್ಲಿಷಿಂಗ್‌ ಲಿಮಿಟೆಡ್‌; ISBN 0-7503-0962-8; 2005

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉತ್ತರ ಧ್ರುವದಲ್ಲಿನ ಓಝೋನ್‌‌ನ ಬಿಸಿಯಾಗಿಸುವ ಪರಿಣಾಮವನ್ನು ತೋರಿಸುತ್ತದೆ.


ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found

"https://kn.wikipedia.org/w/index.php?title=ಓಝೋನ್&oldid=1189281" ಇಂದ ಪಡೆಯಲ್ಪಟ್ಟಿದೆ