ವಿಷಯಕ್ಕೆ ಹೋಗು

ಲೇಸರ್‌ ಮುದ್ರಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
HP ಲೇಸರ್‌ಜೆಟ್‌ 4200 ಸರಣಿಯ ಮುದ್ರಕ
HP ಲೇಸರ್‌ಜೆಟ್‌ 1200 ಮುದ್ರಕ

ಟೆಂಪ್ಲೇಟು:History of printing ಲೇಸರ್‌ ಮುದ್ರಕ ವೊಂದು ಸಾಮಾನ್ಯ ಬಗೆಯ ಕಂಪ್ಯೂಟರ್‌ ಮುದ್ರಕವಾಗಿದ್ದು, ಸಾದಾ ಕಾಗದದ ಮೇಲೆ ಉನ್ನತ ಗುಣಮಟ್ಟದ ಪಠ್ಯ ಹಾಗೂ ರೇಖಾಚಿತ್ರಗಳನ್ನು ಅದು ಕ್ಷಿಪ್ರವಾಗಿ ಮೂಡಿಸುತ್ತದೆ. ಅಂಕೀಯ ಛಾಯಾನಕಲು ಯಂತ್ರಗಳು ಹಾಗೂ ಬಹುಕ್ರಿಯಾತ್ಮಕ ಮುದ್ರಕಗಳಲ್ಲಿ (ಮಲ್ಟಿಫಂಕ್ಷನ್‌ ಪ್ರಿಂಟರ್ಸ್‌-MFPಗಳು) ಇರುವಂತೆ, ಲೇಸರ್‌ ಮುದ್ರಕಗಳು ಒಂದು ಶುಷ್ಕಲೇಖನದ ಮುದ್ರಣ ಪ್ರಕ್ರಿಯೆಯನ್ನು ಬಳಸಿಕೊಳ್ಳುತ್ತವೆಯಾದರೂ, ಇದರಲ್ಲಿ ಮುದ್ರಕದ ದ್ಯುತಿಗ್ರಾಹಿಯ ಅಡ್ಡಲಾಗಿ ಒಂದು ಲೇಸರ್‌ ಕಿರಣವನ್ನು ನೇರವಾಗಿ ಹಾಯಿಸುವುದರಿಂದ ಬಿಂಬ ಅಥವಾ ಪ್ರತಿಕೃತಿಯು ಉಂಟಾಗುತ್ತದೆ ಎಂಬ ವಿಶಿಷ್ಟತೆಯಿಂದಾಗಿ ಇದು ಸದೃಶಿ ಛಾಯಾನಕಲು ಯಂತ್ರಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ.

ಸ್ಥೂಲ ಅವಲೋಕನ

[ಬದಲಾಯಿಸಿ]

ಸೆಲೆನಿಯಂನಿಂದ ಲೇಪಿಸಲ್ಪಟ್ಟಿರುವ ಒಂದು ವಿದ್ಯುತ್‌ ಪೂರಿತ ಸುತ್ತುವ ಉರುಳೆಯ ಮೇಲೆ ಮುದ್ರಿಸಬೇಕಾದ ಪುಟದ ಒಂದು ಪ್ರತಿಕೃತಿಯನ್ನು ಒಂದು ಲೇಸರ್‌ ಕಿರಣವು ಪ್ರಕ್ಷೇಪಿಸುತ್ತದೆ. ಬೆಳಕಿಗೆ ಒಡ್ಡಿಕೊಂಡಿರುವ ಪ್ರದೇಶಗಳಿಂದ ವಿದ್ಯುದಾವೇಶವನ್ನು ದ್ಯುತಿವಾಹಕತ್ವವು ತೆಗೆದುಹಾಕುತ್ತದೆ. ಶುಷ್ಕ ಶಾಯಿ (ಟೋನರು) ಕಣಗಳು ಆಗ ಸ್ಥಾಯೀವಿದ್ಯುತ್ತಿನ ಸ್ವರೂಪದಲ್ಲಿ ಉರುಳೆಯ ವಿದ್ಯುತ್‌ ಪೂರಿತ ಪ್ರದೇಶಗಳಿಂದ ಹಿಡಿದೆತ್ತಲ್ಪಡುತ್ತವೆ. ಆಗ ಉರುಳೆಯು ನೇರ ಸಂಪರ್ಕ ಮತ್ತು ಶಾಯಿಯನ್ನು ಕಾಗದಕ್ಕೆ ಬೆಸೆಯುವ ಶಾಖದ ಮೂಲಕ ಪ್ರತಿಕೃತಿಯನ್ನು ಕಾಗದದ ಮೇಲೆ ಮುದ್ರಿಸುತ್ತದೆ.

ಇತರ ಬಗೆಯ ಮುದ್ರಕಗಳಿಗೆ ಹೋಲಿಸಿದಾಗ ಲೇಸರ್‌ ಮುದ್ರಕಗಳು ಗಮನಾರ್ಹವಾದ ಅನೇಕ ಪ್ರಯೋಜನಗಳನ್ನು ಹೊಂದಿವೆ. ಸಂಘಟ್ಟನ ಮುದ್ರಕಗಳಿಗಿಂತ ಭಿನ್ನವಾಗಿರುವ ಲೇಸರ್‌ ಮುದ್ರಕದ ವೇಗವು ವ್ಯಾಪಕವಾಗಿ ಬದಲಾಗಬಲ್ಲದು. ಪ್ರಕ್ರಿಯೆಗೆ ಒಳಗಾಗಿರುವ ಮುದ್ರಣದ ಗ್ರಾಫಿಕ್‌ ತೀವ್ರತೆಯೂ ಸೇರಿದಂತೆ ಅನೇಕ ಅಂಶಗಳನ್ನು ಈ ವೇಗವು ಅವಲಂಬಿಸುತ್ತದೆ. ಅತಿವೇಗದ ಮಾದರಿಗಳು ಪ್ರತಿ ನಿಮಿಷಕ್ಕೆ 200ಕ್ಕೂ ಹೆಚ್ಚಿನ ಏಕವರ್ಣದ ಪುಟಗಳನ್ನು ಮುದ್ರಿಸಬಲ್ಲವು (ಪ್ರತಿ ಗಂಟೆಗೆ 12,000 ಪುಟಗಳು). ಅತಿವೇಗದ ಬಣ್ಣದ ಲೇಸರ್‌ ಮುದ್ರಕಗಳು ಪ್ರತಿ ನಿಮಿಷಕ್ಕೆ 100ಕ್ಕೂ ಹೆಚ್ಚಿನ ಪುಟಗಳನ್ನು ಮುದ್ರಿಸಬಲ್ಲವು (ಪ್ರತಿ ಗಂಟೆಗೆ 6000 ಪುಟಗಳು). ಕ್ರೆಡಿಟ್‌ ಕಾರ್ಡು ಅಥವಾ ಸಾರ್ವಜನಿಕ ನಿತ್ಯೋಪಯುಕ್ತ ವಿವರಪಟ್ಟಿಗಳಂಥ (ಅಂದರೆ ಬಿಲ್ಲುಗಳಂಥ) ವೈಯಕ್ತಿಕೀಕರಿಸಿದ ದಸ್ತಾವೇಜುಗಳನ್ನು ಅಂಚೆಯ ಮೂಲಕ ಸಾಮೂಹಿಕವಾಗಿ ರವಾನೆ ಮಾಡುವ ಉದ್ದೇಶಕ್ಕಾಗಿ, ಅತ್ಯಂತ ಹೆಚ್ಚಿನ-ವೇಗದ ಲೇಸರ್‌ ಮುದ್ರಕಗಳು ಬಳಸಲ್ಪಡುತ್ತಿವೆ, ಮತ್ತು ಕೆಲವೊಂದು ವಾಣಿಜ್ಯ ಅನ್ವಯಿಕೆಗಳಲ್ಲಿ ಶಿಲಾಮುದ್ರಣ ಕಲೆಯೊಂದಿಗೆ ಅವು ಸ್ಪರ್ಧಿಸುತ್ತಿವೆ.

ಈ ತಂತ್ರಜ್ಞಾನದ ಮೌಲ್ಯವು ಕಾಗದದ, ಟೋನರ್‌ನ ಮೌಲ್ಯ, ಮತ್ತು ವಿರಳವಾಗಿರುವ ಉರುಳೆ ಬದಲಾಯಿಸುವಿಕೆಯೂ ಸೇರಿದಂತೆ ಅನೇಕ ಅಂಶಗಳ ಒಂದು ಸಂಯೋಜನೆಯ ಮೇಲೆ ಅವಲಂಬಿತವಾಗಿದೆ. ಅಷ್ಟೇ ಅಲ್ಲ, ಸಂಯೋಜಕ ಜೋಡಣೆ ಮತ್ತು ವರ್ಗಾಯಿಸಲಾಗುವ ಮಾದರಿ ಜೋಡಣೆಯಂಥ ಇತರ ಉಪಭೋಗ್ಯ ವಸ್ತುಗಳ ಬದಲಾಯಿಸುವಿಕೆಯನ್ನೂ ಇದು ಅವಲಂಬಿಸಿದೆ. ಮೃದುವಾದ ಪ್ಲಾಸ್ಟಿಕ್‌ ಉರುಳೆಗಳೊಂದಿಗಿನ ಮುದ್ರಕಗಳು ಅದರ ಮಾಲೀಕನಿಗೆ ಹಲವು ವೇಳೆ ಅತ್ಯಂತ ವೆಚ್ಚದಾಯಕವಾಗಿ ಪರಿಣಮಿಸಬಹುದು. ಉರುಳೆಯನ್ನು ಬದಲಾಯಿಸಬೇಕಾದ ಅಗತ್ಯ ಕಂಡುಬರುವವರೆಗೂ ಈ ವೆಚ್ಚವು ಸ್ಪಷ್ಟವಾಗಿ ಕಾಣುವುದಿಲ್ಲ.

ಡ್ಯೂಪ್ಲೆಕ್ಸಿಂಗ್‌ ಮುದ್ರಕ ಎಂದು ಕರೆಯಲ್ಪಡುವ ಇಮ್ಮುಖ ಮುದ್ರಣದ ಮುದ್ರಕವೊಂದು (ಕಾಗದದ ಎರಡೂ ಮಗ್ಗುಲುಗಳ ಮೇಲೂ ಮುದ್ರಿಸಬಲ್ಲ ಮುದ್ರಕ) ಕಾಗದದ ವೆಚ್ಚಗಳನ್ನು ಅರ್ಧಕ್ಕಿಳಿಸಬಲ್ಲದು ಮತ್ತು ಉಜ್ಜಿ ನಯಮಾಡುವಿಕೆಯ ಪ್ರಮಾಣಗಳನ್ನು ತಗ್ಗಿಸಬಲ್ಲದು. ಹಿಂದೆಲ್ಲಾ ಕೇವಲ ಮೇಲ್ಮಟ್ಟದ ಮುದ್ರಕಗಳಲ್ಲಿ ಮಾತ್ರವೇ ಲಭ್ಯವಿದ್ದ ಡ್ಯೂಪ್ಲೆಕ್ಸರ್‌ಗಳು ಈಗ ಮಧ್ಯಮ-ಶ್ರೇಣಿಯ ಕಚೇರಿ ಮುದ್ರಕಗಳಲ್ಲೂ ಸಾಮಾನ್ಯವಾಗಿವೆಯಾದರೂ, ಎಲ್ಲಾ ಮುದ್ರಕಗಳೂ ಒಂದು ಇಮ್ಮುಖ ಮುದ್ರಣದ ಘಟಕವನ್ನು ಒಳಗೊಳ್ಳಲಾಗುವುದಿಲ್ಲ. ಇಮ್ಮುಖ ಮುದ್ರಣ ವ್ಯವಸ್ಥೆಯು ಸುದೀರ್ಘವಾದ ಕಾಗದದ ಪಥವನ್ನು ಹೊಂದಿರುತ್ತದೆಯಾದ್ದರಿಂದ, ಅದರ ಪುಟ-ಮುದ್ರಣದ ವೇಗವು ನಿಧಾನಗತಿಯಿಂದ ಕೂಡಿರುತ್ತದೆ.

ಲೇಸರ್‌ ಮುದ್ರಕದೊಂದಿಗೆ ಹೋಲಿಸಿದಾಗ, ಬಹುಪಾಲು ಇಂಕ್‌ಜೆಟ್‌ ಮುದ್ರಕಗಳು ಮತ್ತು ಡಾಟ್‌-ಮ್ಯಾಟ್ರಿಕ್ಸ್‌ ಮುದ್ರಕಗಳು ಒಳಬರುವ ದತ್ತಾಂಶದ ಒಂದು ಹರಿವನ್ನು ಸರಳವಾಗಿ ತೆಗೆದುಕೊಳ್ಳುತ್ತವೆ ಮತ್ತು ಒಂದು ನಿಧಾನವಾದ ತತ್ತರಿಸುವ ಪ್ರಕ್ರಿಯೆಯಲ್ಲಿ ಅದನ್ನು ನೇರವಾಗಿ ಮುದ್ರಿಸುತ್ತವೆ. ಮುದ್ರಕವು ಹೆಚ್ಚಿನ ದತ್ತಾಂಶಕ್ಕಾಗಿ ಕಾಯುವುದರಿಂದ ಈ ಪ್ರಕ್ರಿಯೆಯು ತಾತ್ಕಾಲಿಕ ನಿಲುಗಡೆಗಳನ್ನು ಒಳಗೊಳ್ಳಬಹುದು. ಲೇಸರ್‌ ಮುದ್ರಕವೊಂದು ಈ ವಿಧಾನದಲ್ಲಿ ಕಾರ್ಯನಿರ್ವಹಿಸುವಲ್ಲಿ ಅಸಮರ್ಥವಾಗಿರುತ್ತದೆ. ಏಕೆಂದರೆ ಇಂಥದೊಂದು ದೊಡ್ಡ ಪ್ರಮಾಣದ ದತ್ತಾಂಶವು ಒಂದು ಕ್ಷಿಪ್ರವಾದ, ನಿರಂತರವಾಗಿರುವ ಪ್ರಕ್ರಿಯೆಯಲ್ಲಿ ಮುದ್ರಣ ಸಾಧನಕ್ಕೆ ಒದಗಿಸಲ್ಪಡಬೇಕಾದ ಅಗತ್ಯವು ಅಲ್ಲಿರುತ್ತದೆ. ಹೆಚ್ಚಿನ ಪ್ರಮಾಣದ ದತ್ತಾಂಶವು ಬರುವವರೆಗೂ ಕರಾರುವಾಕ್ಕಾಗಿ ಕಾಯುವಂತೆ ಇಲ್ಲಿನ ಯಾಂತ್ರಿಕ ಕೌಶಲವನ್ನು ಮುದ್ರಕವು ತಡೆಯಲಾರದು. ಒಂದು ದೃಷ್ಟಿಗೋಚರ ಅಂತರ ಅಥವಾ ಮುದ್ರಿತ ಪುಟದ ಮೇಲಿನ ಚುಕ್ಕೆಗಳ ತಪ್ಪುಜೋಡಣೆಯನ್ನು ಇದು ಸೃಷ್ಟಿಸುವುದಿಲ್ಲ ಎಂಬುದು ಇದರ ವಿಶೇಷ.

ಅದರ ಬದಲಿಗೆ ಪ್ರತಿಕೃತಿಯ ದತ್ತಾಂಶವು ಸ್ಮೃತಿಯ ಒಂದು ದೊಡ್ಡ ಸಂಗ್ರಹದಲ್ಲಿ ನಿರ್ಮಿಸಲ್ಪಡುತ್ತದೆ ಮತ್ತು ಸಂಗ್ರಹಿಸಲ್ಪಡುತ್ತದೆ. ಸದರಿ ಸ್ಮೃತಿಯು ಪುಟದ ಮೇಲೆ ಪ್ರತಿಯೊಂದು ಚುಕ್ಕೆಯನ್ನೂ ಮೂಡಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ. ಮುದ್ರಿಸುವುದಕ್ಕೆ ಮುಂಚಿತವಾಗಿ ಎಲ್ಲಾ ಚುಕ್ಕೆಗಳನ್ನೂ ಶೇಖರಿಸಿಡುವ ಅವಶ್ಯಕತೆಯಿಂದಾಗಿ, ಲೆಟರ್‌ ಅಥವಾ A4 ಮಾದರಿಯಂಥ ಚಿಕ್ಕ ನಿಶ್ಚಿತ ಗಾತ್ರಗಳ ಕಾಗದಗಳಿಗೆ ಲೇಸರ್‌ ಮುದ್ರಕಗಳು ಪರಂಪರಾನುಗತವಾಗಿ ಸೀಮಿತಗೊಳ್ಳುವಂತಾಗಿದೆ. ಎರಡು ಮೀಟರುಗಳಷ್ಟು ಉದ್ದವಿರುವ ಕಾಗದದ ಒಂದು ಹಾಳೆಯನ್ನು ಆಕ್ರಮಿಸುವ ನಿರಂತರವಾದ ಬ್ಯಾನರ್‌ಗಳನ್ನು ಬಹುಪಾಲು ಲೇಸರ್‌ ಮುದ್ರಕಗಳು ಮುದ್ರಿಸಲಾರವು. ಏಕೆಂದರೆ ಮುದ್ರಣ ಕಾರ್ಯವು ಶುರುವಾಗುವುದಕ್ಕೆ ಮುಂಚಿತವಾಗಿ ಇಂಥದೊಂದು ಬೃಹತ್‌ ಪ್ರತಿಕೃತಿಯನ್ನು ಶೇಖರಿಸಿಡಬಲ್ಲ ಸಾಕಷ್ಟು ದೊಡ್ಡ ಸ್ಮೃತಿಯು ಮುದ್ರಕದಲ್ಲಿ ಇರುವುದಿಲ್ಲ.

ಇತಿಹಾಸ

[ಬದಲಾಯಿಸಿ]
ಲೇಸರ್‌ ಮುದ್ರಕದ ಆವಿಷ್ಕಾರಕನಾದ ಗ್ಯಾರಿ ಸ್ಟಾರ್ಕ್‌ವೆದರ್‌, 2009ನಲ್ಲಿ.

1969ರಲ್ಲಿ ಕ್ಸೆರಾಕ್ಸ್‌ ಕಂಪನಿಯಲ್ಲಿ ಗ್ಯಾರಿ ಸ್ಟಾರ್ಕ್‌ವೆದರ್‌ ಎಂಬ ಸಂಶೋಧಕನಿಂದ ಲೇಸರ್‌ ಮುದ್ರಕವು ಆವಿಷ್ಕರಿಸಲ್ಪಟ್ಟಿತು. ಈತ 1971ರ ವೇಳೆಗೆ[] ಕೆಲಸಮಾಡಬಲ್ಲ ಒಂದು ಸುಧಾರಿತ ಮುದ್ರಕವನ್ನು ಹೊಂದಿದ್ದ ಮತ್ತು ಒಂದು ವರ್ಷದ ನಂತರ ಸಂಪೂರ್ಣವಾಗಿ ಕಾರ್ಯಾತ್ಮಕವಾಗಿರುವ, ಜಾಲಕಲ್ಪಿಸಲ್ಪಟ್ಟ ಒಂದು ಮುದ್ರಕ ವ್ಯವಸ್ಥೆಯೊಳಗೆ ಇದನ್ನು ಆತ ಸಂಯೋಜಿಸಿದ.[] ಅಸ್ತಿತ್ವದಲ್ಲಿದ್ದ ಶುಷ್ಕಲೇಖನದ ನಕಲುಯಂತ್ರವೊಂದನ್ನು ಮಾರ್ಪಡಿಸುವ ಮೂಲಕ ಮೂಲಮಾದರಿಯನ್ನು ನಿರ್ಮಿಸಲಾಯಿತು. ಪ್ರತಿಕೃತಿಯನ್ನು ಚಿತ್ರಿಸುವ ವ್ಯವಸ್ಥೆಯನ್ನು ಅಸಮರ್ಥಗೊಳಿಸಿದ ಸ್ಟಾರ್ಕ್‌ವೆದರ್‌, 8 ಕನ್ನಡಿಗಳಿಂದ ಮಾಡಲ್ಪಟ್ಟ ಪಾರ್ಶ್ವಗಳೊಂದಿಗಿನ ಹಾಗೂ ಉರುಳೆಯ ಮೇಲೆ ಕೇಂದ್ರೀಕರಿಸಲ್ಪಟ್ಟ ಲೇಸರ್‌ ಸಾಧನದೊಂದಿಗಿನ ಸುತ್ತುವ ಉರುಳೆಯೊಂದನ್ನು ಸೃಷ್ಟಿಸಿದ. ಲೇಸರ್‌ ಸಾಧನದಿಂದ ಬರುತ್ತಿದ್ದ ಬೆಳಕು, ಸುತ್ತುವ ಉರುಳೆಯಿಂದ ಪುಟಿಸಲ್ಪಟ್ಟು ನಕಲುಯಂತ್ರದ ಮೂಲಕ ಪುಟವು ಸಾಗುವಾಗ ಅದಕ್ಕೆ ಅಡ್ಡಲಾಗಿ ಹೊಡೆದುಕೊಂಡು ಹೋಗುವುದು ಇದರಲ್ಲಿನ ವಿಶೇಷತೆಯಾಗಿತ್ತು. ಯಂತ್ರಾಂಶವನ್ನು ಕೇವಲ ಒಂದು ಅಥವಾ ಎರಡು ವಾರದ ಹಿಂದಷ್ಟೇ ಸಂಪೂರ್ಣಗೊಳಿಸಲಾಗಿತ್ತಾದರೂ, ಕಂಪ್ಯೂಟರ್‌ ಇಂಟರ್‌ಫೇಸ್‌ ಹಾಗೂ ತಂತ್ರಾಂಶವು ಸಂಪೂರ್ಣಗೊಳ್ಳಲು ಹೊತ್ತಿಗೆ ಹೆಚ್ಚೂಕಮ್ಮಿ 3 ತಿಂಗಳನ್ನು ತೆಗೆದುಕೊಂಡವು.[ಸೂಕ್ತ ಉಲ್ಲೇಖನ ಬೇಕು]

1976ರಲ್ಲಿ ಬಂದ IBM ಮಾದರಿ 3800 ಎಂಬುದು ಲೇಸರ್‌ ಮುದ್ರಕವೊಂದರ ಮೊಟ್ಟಮೊದಲ ವಾಣಿಜ್ಯ ಸ್ವರೂಪದ ಕಾರ್ಯಗತಗೊಳಿಸುವಿಕೆ ಅಥವಾ ನೆರವೇರಿಸುವಿಕೆಯಾಗಿತ್ತು. ಖರೀದಿಪಟ್ಟಿ ಹಾಗೂ ಅಂಚೆಮೂಲಕದ ರವಾನೆಯ ಲೇಬಲ್ಲುಗಳಂಥ ದಸ್ತಾವೇಜುಗಳ ಬೃಹತ್‌-ಪ್ರಮಾಣದ ಮುದ್ರಣಕ್ಕೆ ಇದನ್ನು ಬಳಸಲಾಯಿತು. ಈ ಮುದ್ರಕವು "ಒಂದಿಡೀ ಕೋಣೆಯನ್ನು ಆಕ್ರಮಿಸಿಕೊಳ್ಳುತ್ತದೆ" ಎಂದು ಇದರ ಕುರಿತು ಆಗಿಂದಾಗ್ಗೆ ಉಲ್ಲೇಖಿಸಲಾಗುತ್ತಿತ್ತು. ಇದು ನಂತರ ಒಂದು ವೈಯಕ್ತಿಕ ಕಂಪ್ಯೂಟರ್‌ ಜೊತೆಯಲ್ಲಿ ಬಳಸಲಾಗುತ್ತಿದ್ದ ಸುಪರಿಚಿತ ಸಾಧನದ ಒಂದು ಮೂಲರೂಪದ ಆವೃತ್ತಿಯಾಗಿತ್ತು ಎಂಬುದನ್ನು ಈ ಉಲ್ಲೇಖವು ಸೂಚಿಸುತ್ತಿತ್ತು. ದೊಡ್ಡ ಗಾತ್ರದಲ್ಲಿರುವಾಗ, ಒಂದು ಸಂಪೂರ್ಣ ವಿಭಿನ್ನವಾದ ಉದ್ದೇಶಕ್ಕೆ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಅನೇಕ 3800 ಮುದ್ರಕ ಮಾದರಿಗಳು ಇನ್ನೂ ಬಳಕೆಯಲ್ಲಿವೆ.[ಸೂಕ್ತ ಉಲ್ಲೇಖನ ಬೇಕು]

ಒಂದು ಕಚೇರಿ ವ್ಯವಸ್ಥೆಯಲ್ಲಿನ ಬಳಕೆಗಾಗಿ ವಿನ್ಯಾಸಗೊಳಿಸಲಾದ ಮೊದಲ ಲೇಸರ್‌ ಮುದ್ರಕವು ಕ್ಸೆರಾಕ್ಸ್‌ ಸ್ಟಾರ್‌ 8010 ಜೊತೆಯಲ್ಲಿ 1981ರಲ್ಲಿ ಬಿಡುಗಡೆಗೊಂಡಿತು. ಇದು ನಾವೀನ್ಯತೆಯನ್ನು ಹೊಂದಿತ್ತಾದರೂ, ಸ್ಟಾರ್‌ ಮುದ್ರಕವು ಒಂದು ದುಬಾರಿ ($17,000) ಯಂತ್ರವಾಗಿದ್ದರಿಂದ ಕೇವಲ ಕೆಲವೇ ಸಂಖ್ಯೆಯ ವ್ಯಾಪಾರೀ ಸಂಘಟನೆಗಳು ಮತ್ತು ಸಂಸ್ಥೆಗಳಿಂದ ಇದು ಖರೀದಿಸಲ್ಪಟ್ಟಿತು. ವೈಯಕ್ತಿಕ ಕಂಪ್ಯೂಟರ್‌ಗಳು ಹೆಚ್ಚು ವ್ಯಾಪಕವಾಗಿ ಹಬ್ಬಿಕೊಂಡ ನಂತರ, ಒಂದು ಸಮೂಹ ಮಾರುಕಟ್ಟೆಗಾಗಿ ಉದ್ದೇಶಿಸಲಾಗಿದ್ದ ಮೊದಲ ಲೇಸರ್‌ ಮುದ್ರಕವಾದ HP ಲೇಸರ್‌ಜೆಟ್‌ 8ppmನ್ನು 1984ರಲ್ಲಿ ಬಿಡುಗಡೆ ಮಾಡಲಾಯಿತು. HP ತಂತ್ರಾಂಶದಿಂದ ನಿಯಂತ್ರಿಸಲ್ಪಡುತ್ತಿದ್ದ ಕೆನನ್‌ ಎಂಜಿನ್‌ ಒಂದನ್ನು ಇದರಲ್ಲಿ ಬಳಸಲಾಗಿತ್ತು. HP ಲೇಸರ್‌ಜೆಟ್‌ ಮುದ್ರಕವನ್ನು ಬ್ರದರ್‌ ಇಂಡಸ್ಟ್ರೀಸ್‌, IBM, ಹಾಗೂ ಇತರ ಕಂಪನಿಗಳಿಂದ ತಯಾರಿಸಲ್ಪಟ್ಟ ಲೇಸರ್‌ ಮುದ್ರಕಗಳು ಕ್ಷಿಪ್ರವಾಗಿ ಅನುಸರಿಸಿದವು. ಮೊದಲನೇ-ಪೀಳಿಗೆಯ ಯಂತ್ರಗಳು ದೊಡ್ಡದಾಗ ದ್ಯುತಿಸಂವೇದಿ ಉರುಳೆಗಳನ್ನು ಹೊಂದಿದ್ದವು. ಈ ಉರುಳೆಗಳು ಕಾಗದದ ಉದ್ದಕ್ಕಿಂತ ದೊಡ್ಡದಾಗಿರುವ ಪರಿಧಿಯನ್ನು ಹೊಂದಿದ್ದವು. ವೇಗವಾಗಿ-ಪೂರ್ವಸ್ಥಿತಿಗೆ ಬರುವ ಲೇಪಗಳು ಅಥವಾ ಹೊದಿಕೆಗಳು ಒಮ್ಮೆಗೆ ಅಭಿವೃದ್ಧಿಗೊಂಡಾಗ, ಉರುಳೆಗಳು ಒಂದು ಹಾಯುವಿಕೆಯಲ್ಲಿ ಕಾಗದವನ್ನು ಅನೇಕ ಬಾರಿ ಸ್ಪರ್ಶಿಸಲು ಸಾಧ್ಯವಾಯಿತು, ಮತ್ತು ಈ ಕಾರಣದಿಂದಾಗಿ ವ್ಯಾಸದಲ್ಲಿ ಇನ್ನೂ ಚಿಕ್ಕದಾಗುವಲ್ಲಿ ನೆರವಾಯಿತು.

ಬಹುತೇಕ ವಿದ್ಯುನ್ಮಾನದ ಸಾಧನಗಳೊಂದಿಗೆ ಆಗುವಂತೆ, ಲೇಸರ್‌ ಮುದ್ರಕಗಳ ಬೆಲೆಯು ವರ್ಷಗಳಾಗುತ್ತಿದ್ದಂತೆ ಗಮನಾರ್ಹವಾಗಿ ಕುಸಿದಿದೆ. 1984ರಲ್ಲಿ, 3500 $ನಷ್ಟು[] ಬೆಲೆಗೆ ಮಾರಾಟವಾಗಿದ್ದ HP ಲೇಸರ್‌ಜೆಟ್‌ ಮುದ್ರಕವು ಅದಕ್ಕಿಂತ ಚಿಕ್ಕದಾಗಿದ್ದ, ಕಡಿಮೆ ಪೃಥಕ್ಕರಣ ಸಾಮರ್ಥ್ಯದ ಗ್ರಾಫಿಕ್ಸ್‌ನೊಂದಿಗಿನ, ಮತ್ತು 71 ಪೌಂಡುಗಳಷ್ಟು (32 kg) ತೂಗುತ್ತಿದ್ದ ಮುದ್ರಕದಿಂದ ಸಮಸ್ಯೆಯನ್ನು ಎದುರಿಸಬೇಕಾಯಿತು. 2008ರ ವೇಳೆಗೆ ಇದ್ದಂತೆ, ಕಡಿಮೆ ದರ್ಜೆಯ ಏಕವರ್ಣದ ಲೇಸರ್‌ ಮುದ್ರಕಗಳು 75 $ಗಿಂತಲೂ ಕಡಿಮೆ ಬೆಲೆಯಲ್ಲಿ ಹಲವು ವೇಳೆ ಮಾರಾಟವಾಗುತ್ತಿವೆ. ಈ ಮುದ್ರಕಗಳು ಸಮೀಪದಲ್ಲಿನ ಸಂಸ್ಕರಣೆಯನ್ನು ಹೊಂದದಿರುವುದರ ಕಡೆಗೆ ಒಲವನ್ನು ಹೊಂದಿದ್ದು, ಒಂದು ರ್ಯಾಸ್ಟರ್‌ ಬಿಂಬವನ್ನು (ನೋಡಿ: ವಿನ್‌ ಮುದ್ರಕ) ಸೃಷ್ಟಿಸಲು ಆಶ್ರಯದಾತ ಕಂಪ್ಯೂಟರ್‌ನ್ನು ಅವಲಂಬಿಸುತ್ತದೆ, ಆದರೆ ಇಷ್ಟಾಗಿಯೂ ಹೆಚ್ಚೂಕಮ್ಮಿ ಬೇರೆಲ್ಲಾ ಸನ್ನಿವೇಶಗಳಲ್ಲೂ ಲೇಸರ್‌ಜೆಟ್‌ ಕ್ಲಾಸಿಕ್‌ ಮುದ್ರಕವನ್ನು ಇವು ಕಾರ್ಯಚಟುವಟಿಕೆಯಲ್ಲಿ ಮೀರಿಸುತ್ತವೆ.

ಇದು ಹೇಗೆ ಕೆಲಸ ಮಾಡುತ್ತದೆ

[ಬದಲಾಯಿಸಿ]

ಲೇಸರ್‌ ಮುದ್ರಣದ ಪ್ರಕ್ರಿಯೆಯಲ್ಲಿ ವಿಶಿಷ್ಟ ರೀತಿಯ ಏಳು ಹಂತಗಳು ಸೇರಿಕೊಂಡಿವೆ:

ರ್ಯಾಸ್ಟರ್‌ ಬಿಂಬ ಸಂಸ್ಕರಣೆ

[ಬದಲಾಯಿಸಿ]
ರ್ಯಾಸ್ಟರ್‌ ಬಿಂಬ ದತ್ತಾಂಶವನ್ನು ಸೃಷ್ಟಿಸುವುದು

ಪುಟಕ್ಕೆ ಅಡ್ಡಲಾಗಿರುವ ಚುಕ್ಕೆಗಳ ಪ್ರತಿ ಅಡ್ಡವಾದ ಪಟ್ಟಿಯನ್ನು ಒಂದು ರ್ಯಾಸ್ಟರ್‌ ಗೆರೆ ಅಥವಾ ಸ್ಕ್ಯಾನ್‌ ಗೆರೆ ಎಂದು ಕರೆಯಲಾಗುತ್ತದೆ. ಮುದ್ರಣಗೊಳ್ಳಬೇಕಿರುವ ಪ್ರತಿಕೃತಿಯ ಸೃಷ್ಟಿಸುವಿಕೆಯನ್ನು ಲೇಸರ್‌ ಮುದ್ರಕದೊಳಗೆ ವಿಶಿಷ್ಟವಾಗಿ ನಿರ್ಮಿಸಲಾಗಿರುವ ಒಂದು ರ್ಯಾಸ್ಟರ್‌ ಬಿಂಬ ಸಂಸ್ಕಾರಕವು (ರ್ಯಾಸ್ಟರ್‌ ಇಮೇಜ್‌ ಪ್ರೊಸೆಸರ್‌-RIP) ಮಾಡುತ್ತದೆ. ಅಡೋಬ್‌ ಪೋಸ್ಟ್‌ಸ್ಕ್ರಿಪ್ಟ್‌ (PS) , HP ಪ್ರಿಂಟರ್‌ ಕಮ್ಯಾಂಡ್‌ ಲಾಂಗ್ವೇಜ್‌ (PCL), ಅಥವಾ ಮೈಕ್ರೋಸಾಫ್ಟ್‌ XML ಪೇಜ್‌ ಸ್ಪೆಸಿಫಿಕೇಷನ್‌ನಂಥ (XPS) ಎಷ್ಟು ಬೇಕಾದರೂ ವಿಶೇಷ ಪುಟ ವಿವರಣೆಯ ಭಾಷೆಗಳಲ್ಲಷ್ಟೇ ಅಲ್ಲದೇ, ಫಾರ್ಮ್ಯಾಟ್‌ ಮಾಡಿರದ ಪಠ್ಯವೊಂದನ್ನೇ-ಒಳಗೊಂಡಿರುವ ದತ್ತಾಂಶದಲ್ಲಿ ಆಕರ ಸಾಮಗ್ರಿಯನ್ನು ಸಂಕೇತ ಭಾಷೆಯಲ್ಲಿ ಬರೆಯಬಹುದು. ಅಂತಿಮ ಪುಟದ ಒಂದು ಬಿಟ್‌ಮ್ಯಾಪ್‌ನ್ನು ರ್ಯಾಸ್ಟರ್‌ ಸ್ಮೃತಿಯಲ್ಲಿ ಸೃಷ್ಟಿಸಲು ಪುಟ ವಿವರಣೆಯ ಭಾಷೆಯನ್ನು RIP ಬಳಸುತ್ತದೆ. ರ್ಯಾಸ್ಟರ್‌ ಸ್ಮೃತಿಯಲ್ಲಿ ಒಮ್ಮೆಗೆ ಸಂಪೂರ್ಣ ಪುಟವು ಸಲ್ಲಿಸಲ್ಪಟ್ಟರೆ, ಒಂದು ನಿರಂತರವಾದ ಧಾರೆಯಲ್ಲಿ ಚುಕ್ಕೆಗಳ ರ್ಯಾಸ್ಟರೀಕೃತ ಹರಿವನ್ನು ಕಾಗದಕ್ಕೆ ಕಳುಹಿಸುವ ಪ್ರಕ್ರಿಯೆಯನ್ನು ಶುರುಮಾಡಲು ಮುದ್ರಕವು ಸಿದ್ಧವಾಗಿರುತ್ತದೆ.

ಹೆವ್ಲೆಟ್‌ ಪ್ಯಾಕರ್ಡ್‌ನ ಮೊದಲ ಲೇಸರ್‌ಜೆಟ್‌ ಮುದ್ರಕವು ಕೇವಲ 128 ಕಿಲೋಬೈಟ್‌ಗಳಷ್ಟು ಸ್ಮೃತಿ ಸಾಮರ್ಥ್ಯವನ್ನು ಹೊಂದಿತ್ತು. ಇದನ್ನು ಕೇವಲ ಪಠ್ಯಭಾಗಗಳನ್ನಷ್ಟೇ ಮುದ್ರಿಸಲು ವಿಶಿಷ್ಟವಾಗಿ ಬಳಸಲಾಗುತ್ತಿತ್ತೇ ಹೊರತು, ಆಧುನಿಕ ರೇಖಾಚಿತ್ರದ ಮುದ್ರಕಗಳಂತೆ ಇದು ಕಾರ್ಯನಿರ್ವಹಿಸುತ್ತಿರಲಿಲ್ಲ. ಪುಟದ ಅಕ್ಷರ ಮಾಹಿತಿಯನ್ನು ಕೇವಲ ಕೆಲವೇ ಕಿಲೋಬೈಟ್‌ಗಳಲ್ಲಿ ಶೇಖರಿಸಿಡಲಾಗುತ್ತಿತ್ತು, ಮತ್ತು ಮುದ್ರಣದ ಅವಧಿಯಲ್ಲಿ ಪ್ರತಿ ರ್ಯಾಸ್ಟರ್‌ ಸ್ಕ್ಯಾನ್‌ ಗೆರೆಗೆ ಸಂಬಂಧಿಸಿದ ವಾಸ್ತವಿಕ ಚುಕ್ಕೆಯ ಮಾದರಿಗಳು, ರೀಡ್‌ ಓನ್ಲಿ ಮೆಮರಿಯಲ್ಲಿ (ROM) ಶೇಖರಿಸಲ್ಪಟ್ಟ ಅಕ್ಷರ ಮಾದರಿಯ ಬಿಟ್‌ಮ್ಯಾಪ್‌ ಕೋಷ್ಟಕಗಳಲ್ಲಿ ಹುಡುಕುತ್ತಿದ್ದವು. ಹೆಚ್ಚುವರಿ ಅಕ್ಷರ ಮಾದರಿಗಳು ವಿಸ್ತರಣಾ ಸೀಳುಗುಂಡಿಗಳೊಳಗೆ (ಸ್ಲಾಟ್‌) ತೂರಿಸಲ್ಪಡುವ ROM ಕಾರ್ಟ್ರಿಜ್‌ಗಳ ಮೇಲೆ ಶೇಖರಿಸಿಡಲ್ಪಟ್ಟಿದ್ದವು.

ಪುಟ ವಿವರಣೆಯ ಭಾಷೆಯೊಂದನ್ನು ಬಳಸಿಕೊಂಡು ಸಂಪೂರ್ಣವಾದ ರೇಖಾಚಿತ್ರದ ಮುದ್ರಿತಪ್ರತಿಯನ್ನು ನೀಡುವುದಕ್ಕಾಗಿ 300 dpiನಷ್ಟು ಚುಕ್ಕೆಗಳ ಏಕವರ್ಣದ ಲೆಟರ್‌/A4 ಗಾತ್ರದ ಒಂದು ಸಮಗ್ರ ಪುಟವನ್ನು ಶೇಖರಿಸಿಡಲು ಕನಿಷ್ಟಪಕ್ಷ 1 ಮೆಗಾಬೈಟ್‌ನಷ್ಟು ಸ್ಮೃತಿ ಅಗತ್ಯವಾಗಿರುತ್ತದೆ. 300 dpiನಲ್ಲಿ, ಪ್ರತಿ ಚದರ ಇಂಚಿನಷ್ಟು ಅಳತೆಯಲ್ಲಿ 90,000 ಚುಕ್ಕೆಗಳಿರುತ್ತವೆ (ಪ್ರತಿ ರೇಖೀಯ ಇಂಚಿಗೆ 300 ಚುಕ್ಕೆಗಳು). ಒಂದು ವಿಶಿಷ್ಟವಾದ 8.5 x 11 ಗಾತ್ರದ ಕಾಗದದ ಹಾಳೆಯು 0.25 ಇಂಚಿನಷ್ಟು ಅಂಚುಗಳನ್ನು ಹೊಂದಿರುತ್ತದೆ. ಇದರಿಂದಾಗಿ ಮುದ್ರಣಾರ್ಹ ಪ್ರದೇಶವು 8.0 x 10.5 ಇಂಚುಗಳಷ್ಟು ಅಥವಾ 84 ಚದರ ಇಂಚುಗಳಷ್ಟು ಅಳತೆಗೆ ಕಡಿಮೆಯಾಗುತ್ತದೆ. 84 ಚದರ ಇಂಚು x ಪ್ರತಿ ಚದರ ಇಂಚಿಗೆ 90,000 ಚುಕ್ಕೆಗಳು = 7,560,000 ಚುಕ್ಕೆಗಳು. ಅದೇ ವೇಳೆಗೆ 1 ಮೆಗಾಬೈಟ್‌ = 1048576 ಬೈಟ್‌ಗಳಷ್ಟು, ಅಥವಾ 8,388,608 ಬಿಟ್‌ಗಳಷ್ಟು ಇದ್ದು, ಇದು ಸಮಗ್ರ ಪುಟವನ್ನು 300 dpiನಲ್ಲಿ ಹಿಡಿದಿಡುವಲ್ಲಿ ಸ್ವಲ್ಪವೇ ದೊಡ್ಡ ಗಾತ್ರದ್ದಾಗಿರುತ್ತದೆ. ಇದರಿಂದಾಗಿ ಸುಮಾರು 100 ಕಿಲೋಬೈಟ್‌ಗಳಷ್ಟು ಜಾಗವು ಉಳಿದು, ಅದು ರ್ಯಾಸ್ಟರ್‌ ಬಿಂಬ ಸಂಸ್ಕಾರಕದಿಂದ ಬಳಸಲ್ಪಡಲು ಮೀಸಲಾಗುತ್ತದೆ.

ಬಣ್ಣದ ಮುದ್ರಕವೊಂದರಲ್ಲಿ, ನಾಲ್ಕು CYMK ಟೋನರು ಪದರಗಳ ಪೈಕಿ ಪ್ರತಿಯೊಂದೂ ಒಂದು ಪ್ರತ್ಯೇಕ ಬಿಟ್‌ಮ್ಯಾಪ್ ರೀತಿಯಲ್ಲಿ ಶೇಖರಿಸಲ್ಪಟ್ಟಿರುತ್ತದೆ ಮತ್ತು ಮುದ್ರಣಕಾರ್ಯವು ಪ್ರಾರಂಭವಾಗುವುದಕ್ಕೆ ಮೊದಲು ಎಲ್ಲಾ ನಾಲ್ಕೂ ಪದರಗಳು ವಿಶಿಷ್ಟವಾದ ರೀತಿಯಲ್ಲಿ ಪೂರ್ವಭಾವಿಯಾಗಿ ಸಂಸ್ಕರಿಸಲ್ಪಡುತ್ತವೆ. ಆದ್ದರಿಂದ 300 dpiನಲ್ಲಿರುವ ಒಂದು ನಾಲ್ಕು-ವರ್ಣದ ಲೆಟರ್‌-ಗಾತ್ರದ ಪುಟಕ್ಕಾಗಿ ಕನಿಷ್ಟಪಕ್ಷ 4 ಮೆಗಾಬೈಟ್‌ಗಳಷ್ಟು ಸ್ಮೃತಿಯ ಅಗತ್ಯವಿರುತ್ತದೆ.

dpiನ ಚದರಳತೆಯೊಂದಿಗೆ ಸ್ಮೃತಿಯ ಅವಶ್ಯಕತೆಗಳೂ ಹೆಚ್ಚಾಗುತ್ತವೆ. ಆದ್ದರಿಂದ 600 dpiನಲ್ಲಿರುವ ಏಕವರ್ಣದ ಮುದ್ರಣಕ್ಕಾಗಿ ಕನಿಷ್ಟಪಕ್ಷ 4 ಮೆಗಾಬೈಟ್‌ಗಳು ಅಗತ್ಯವಾಗಿರುತ್ತವೆ, ಮತ್ತು ವರ್ಣದಲ್ಲಿರುವ ಮುದ್ರಣಕ್ಕಾಗಿ 16 ಮೆಗಾಬೈಟ್‌ಗಳು ಅಗತ್ಯವಾಗಿರುತ್ತವೆ. ಕೆಲವೊಂದು ಮುದ್ರಕಗಳು ಬದಲಾಯಿಸಬಹುದಾದ ಗಾತ್ರದ ಚುಕ್ಕೆಗಳು ಮತ್ತು ತೆರಪನ್ನು ಉಂಟುಮಾಡುವ ಚುಕ್ಕೆಗಳನ್ನು ಮೂಡಿಸಬಲ್ಲವಾಗಿರುತ್ತವೆ; ಈ ಹೆಚ್ಚುವರಿ ಕಾರ್ಯನಿರ್ವಹಣೆಗಳಿಗಾಗಿ ಅನೇಕ ವೇಳೆ ಇಲ್ಲಿ ವಿವರಿಸಲಾಗಿರುವ ಕನಿಷ್ಟತಮ ಅಗತ್ಯಗಳಿಗಿಂತ ಹೆಚ್ಚಿನ ಪ್ರಮಾಣದ ಸ್ಮೃತಿ ಸಾಮರ್ಥ್ಯಗಳ ಅಗತ್ಯ ಕಂಡುಬರಬಹುದು.

ಟ್ಯಾಬ್ಲಾಯ್ಡ್‌ ಮತ್ತು ಅದಕ್ಕಿಂತ ದೊಡ್ಡ ಗಾತ್ರದ ಸಾಮರ್ಥ್ಯವನ್ನು ಹೊಂದಿರುವ ಮುದ್ರಕಗಳು ಸ್ಮೃತಿ ವಿಸ್ತರಣಾ ಸೀಳುಗುಂಡಿಗಳನ್ನು ಒಳಗೊಳ್ಳಬಹುದು. ಒಂದು ವೇಳೆ ಲಭ್ಯವಿರುವ ಸ್ಮೃತಿಯು ಸಾಕಷ್ಟಿಲ್ಲದಿದ್ದರೆ, ಲೆಟರ್‌ ಗಾತ್ರದಲ್ಲಾದರೆ ವರ್ಣದಲ್ಲಿ, ಟ್ಯಾಬ್ಲಾಯ್ಡ್‌ ಗಾತ್ರದಲ್ಲಾದರೆ ಕೇವಲ ಏಕವರ್ಣದಲ್ಲಿ ಮುದ್ರಿಸಲು ಸಾಧ್ಯವಾಗುವಂತೆ ಮುದ್ರಣದ ಕೆಲವೊಂದು ಲಕ್ಷಣಗಳನ್ನು ಅನರ್ಹಗೊಳಿಸಬೇಕಾಗಬಹುದು.

ಹೆಚ್ಚುವರಿ ಸ್ಮೃತಿಯ ಖರೀದಿಸುವಿಕೆಯು ಒಂದು ದೊಡ್ಡಗಾತ್ರದಲ್ಲಿ ವರ್ಣದಲ್ಲಿ ಮುದ್ರಿಸಲು ಅವಕಾಶವನ್ನು ಕಲ್ಪಿಸಬಹುದು.

ಶಕ್ತಿ ಸಂಚಯಿಸುವಿಕೆ

[ಬದಲಾಯಿಸಿ]
ದ್ಯುತಿಸಂವೇದಿ ಉರುಳೆಗೆ ಋಣಾತ್ಮಕ ವಿದ್ಯುದಾವೇಶವನ್ನು ಅನ್ವಯಿಸುವುದು

ಹಳೆಯ ಮುದ್ರಕಗಳಲ್ಲಿ ಉರುಳೆಗೆ ಸಮಾನಾಂತರವಾಗಿ ಇರಿಸಲಾಗಿರುವ ಒಂದು ಕರೋನಾ ತಂತಿಯು, ಅಥವಾ ತೀರಾ ಇತ್ತೀಚಿನ ಮುದ್ರಕಗಳಲ್ಲಾದರೆ, ಒಂದು ಪ್ರಾಥಮಿಕ ವಿದ್ಯುತ್‌ ಪೂರಣದ ರೋಲರು, ದ್ಯುತಿಗ್ರಾಹಿಯ (ಇಲ್ಲದಿದ್ದರೆ ಇದಕ್ಕೆ ಒಂದು ದ್ಯುತಿವಾಹಕ ಘಟಕ ಎಂದು ಹೆಸರಿಸಲಾಗುತ್ತದೆ) ಮೇಲೆ ಒಂದು ಸ್ಥಾಯೀವಿದ್ಯುತ್ತಿನ ವಿದ್ಯುದಾವೇಶವನ್ನು ಹರಿಸುತ್ತದೆ. ದ್ಯುತಿಗ್ರಾಹಿಯು ಒಂದು ಸುತ್ತುತ್ತಿರುವ ದ್ಯುತಿಸಂವೇದಿ ಉರುಳೆ ಅಥವಾ ಪಟ್ಟಿಯಾಗಿದ್ದು, ತಾನು ಕತ್ತಲೆಯಲ್ಲಿರುವಾಗ ತನ್ನ ಮೇಲ್ಮೈಯಲ್ಲಿನ ಒಂದು ಸ್ಥಾಯೀವಿದ್ಯುತ್ತಿನ ವಿದ್ಯುದಾವೇಶ ಅಥವಾ ವಿದ್ಯುತ್‌ ಪೂರಣವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಅದು ಹೊಂದಿರುತ್ತದೆ.

ಹಿಂದಿನ ಪ್ರತಿಕೃತಿಗಳಿಂದ ಬಿಡಲ್ಪಟ್ಟಿರುವ ಯಾವುದೇ ಉಳಿದಿರುವ ಉಳಿಕೆಯ ವಿದ್ಯುದಾವೇಶಗಳನ್ನು ತೆಗೆದುಹಾಕುವ ಸಲುವಾಗಿ, ಪ್ರಾಥಮಿಕ ವಿದ್ಯುತ್‌ಪೂರಣದ ರೋಲರಿಗೆ ಒಂದು AC ವಕ್ರಗತಿಯ ಸಂಪರ್ಕವನ್ನು ಕಲ್ಪಿಸಲಾಗುತ್ತದೆ. ಒಂದು ಸಮನಾದ ಋಣಾತ್ಮಕ ಸಾಮರ್ಥ್ಯವನ್ನು ಖಾತ್ರಿಪಡಿಸಿಕೊಳ್ಳುವ ಸಲುವಾಗಿ ಉರುಳೆಯ ಮೇಲ್ಮೈನ ಮೇಲೆ ಒಂದು DC ವಕ್ರಗತಿಯ ಸಂಪರ್ಕವನ್ನು ಸಹ ರೋಲರು ಕಲ್ಪಿಸುತ್ತದೆ. ಬಯಸಿದ ಮುದ್ರಣದ ಸಾಂದ್ರತೆಯು ಈ DC ವಕ್ರಗತಿ ಸಂಪರ್ಕದಿಂದ ಸಮನ್ವಯಗೊಳಿಸಲ್ಪಡುತ್ತದೆ.[]

ಹಲವಾರು ಸ್ವಾಮ್ಯದ ಹಕ್ಕುಪತ್ರಗಳು[specify] ದ್ಯುತಿಸಂವೇದಿ ಉರುಳೆ ಲೇಪನವನ್ನು, ಒಂದು ದ್ಯುತಿ ಶಕ್ತಿಸಂಚಯಿಸುವಿಕೆ ಪದರ, ಒಂದು ವಿದ್ಯುತ್‌ ಪೂರಣ ಸೋರಿಕೆಯ ತಡೆಗೋಡೆ ಪದರವಷ್ಟೇ ಅಲ್ಲದೇ, ಒಂದು ಮೇಲ್ಮೈ ಪದರದೊಂದಿಗಿನ ಒಂದು ಸಿಲಿಕಾನ್‌ ಮಿಶ್ರಣ ಎಂದು ವರ್ಣಿಸುತ್ತವೆ. ಒಂದು ರೂಪಾಂತರವು[specify] ಜಲಜನಕವನ್ನು ಒಳಗೊಂಡಿರುವ ಅಸ್ಫಟಿಕೀಯ ಸಿಲಿಕಾನ್‌ನ್ನು ಬೆಳಕು ಸ್ವೀಕರಿಸುವ ಪದರವಾಗಿ, ಬೋರಾನ್‌ ನೈಟ್ರೈಡ್‌‌ನ್ನು ವಿದ್ಯುತ್‌ ಪೂರಣ ಸೋರಿಕೆ ತಡೆಗೋಡೆಯ ಪದರವಾಗಿ ಬಳಸುತ್ತದೆ. ಅಷ್ಟೇ ಅಲ್ಲ, ಕಲಬೆರಕೆ ಮಾಡಲಾದ ಸಿಲಿಕಾನ್‌‌ನ ಒಂದು ಮೇಲ್ಮೈ ಪದರವನ್ನೂ ಇದು ಬಳಸುತ್ತದೆ. ಕಲಬೆರಕೆ ಮಾಡಲಾದ ಸಿಲಿಕಾನ್‌ ಪದರವು ಗಮನಾರ್ಹವಾಗಿ ಆಮ್ಲಜನಕ ಅಥವಾ ಸಾರಜನಕದೊಂದಿಗಿನ ಸಿಲಿಕಾನ್‌ ಆಗಿದ್ದು, ಇದು ಸಾಕಷ್ಟಿರುವ ಸಾಂದ್ರತೆಯಲ್ಲಿ ಯಂತ್ರಬಳಕೆಗೆ ಒಳಗಾಗುವ ಸಿಲಿಕಾನ್‌ ನೈಟ್ರೈಡ್‌‌ನ್ನು ಹೋಲುತ್ತದೆ; ಇದರ ಪರಿಣಾಮವಾಗಿ ಒಂದು ಬೆಳಕನ್ನು ಪೂರಣಮಾಡಬಲ್ಲ, ಕನಿಷ್ಟತಮ ಸೋರಿಕೆ ಹಾಗೂ ಉಜ್ಜಿಕೊಂಡು ಹೋಗುವಿಕೆಗೆ ಒಂದು ಪ್ರತಿರೋಧಕತೆಯನ್ನು ಒಡ್ಡುವ ಡಯೋಡು ಹೊರಹೊಮ್ಮುತ್ತದೆ.

ಒಡ್ಡುವಿಕೆ

[ಬದಲಾಯಿಸಿ]
ದ್ಯುತಿಸಂವೇದಿ ಉರುಳೆಗೆ ಬಿಟ್‌ಮ್ಯಾಪ್‌ನ್ನು ಹೇಗೆ ಬರೆಯಲಾಗುತ್ತದೆ.

ತಿರುಗುತ್ತಿರುವ ಒಂದು ಬಹುಕೋನೀಯ ಕನ್ನಡಿಯೆಡೆಗೆ ಲೇಸರ್‌ ಸಾಧನವು ತಿರುಗಿಸಲ್ಪಟ್ಟಿರುತ್ತದೆ. ಈ ಕನ್ನಡಿಯು ಲೇಸರ್‌ ಕಿರಣವನ್ನು ಮಸೂರಗಳು ಹಾಗೂ ಕನ್ನಡಿಗಳ ಒಂದು ವ್ಯವಸ್ಥೆಯ ಮೂಲಕ ದ್ಯುತಿಗ್ರಾಹಿಯೆಡೆಗೆ ನಿರ್ದೇಶಿಸುತ್ತದೆ. ಪುಟಕ್ಕೆ ಅಡ್ಡಲಾಗಿ ಉಜ್ಜುವಿಕೆಯು ನೇರವಾಗಿರುವಂತೆ ಮಾಡಲು ಕಿರಣವು ದ್ಯುತಿಗ್ರಾಹಿಗೆ ಒಂದು ಕೋನದಲ್ಲಿ ಅಡ್ಡಲಾಗಿ ಉಜ್ಜುತ್ತದೆ; ಉಜ್ಜುವಿಕೆಯ ಅವಧಿಯಲ್ಲಿ ಉರುಳೆಯು ತಿರುಗುವುದನ್ನು ಮುಂದುವರಿಸುತ್ತದೆ ಮತ್ತು ಈ ಚಲನೆಗೆ ಉಜ್ಜುವಿಕೆಯ ಕೋನವು ಸರಿದೂಗಿಸುವಂತಿರುತ್ತದೆ. ಉರುಳೆಯ ಮೇಲೆ ಚುಕ್ಕೆಗಳನ್ನು ರೂಪಿಸುವ ಸಲುವಾಗಿ, ಸ್ಮೃತಿಯಲ್ಲಿ ಹಿಡಿದಿಡಲ್ಪಟ್ಟಿರುವ ರ್ಯಾಸ್ಟರೀಕೃತ ದತ್ತಾಂಶದ ಹರಿವು ಲೇಸರ್‌ನ್ನು ಹರಿಸಲು ಬಿಡುತ್ತದೆ ಮತ್ತು ನಿಲ್ಲಿಸುತ್ತದೆ. (ಕೆಲವೊಂದು ಮುದ್ರಕಗಳು ಪುಟದ ಅಗಲದಾದ್ಯಂತ ವ್ಯಾಪಿಸುವ ಬೆಳಕನ್ನು ಹೊರಹೊಮ್ಮಿಸುವ ಡಯೋಡುಗಳ ಒಂದು ಶ್ರೇಣಿಯನ್ನು ಬದಲಾಯಿಸುತ್ತವೆ, ಆದರೆ ಈ ಸಾಧನಗಳು "ಲೇಸರ್‌ ಮುದ್ರಕಗಳು" ಎನಿಸಿಕೊಳ್ಳುವುದಿಲ್ಲ.) ಲೇಸರ್‌ ಸಾಧನಗಳು ಅಧಿಕ ಅಂತರದವರೆಗೆ ಒಂದು ಕಿರಿದಾದ ಕಿರಣವನ್ನು ಸೃಷ್ಟಿಸುತ್ತವೆಯಾದ್ದರಿಂದ ಅವುಗಳನ್ನು ಬಳಸಲಾಗುತ್ತದೆ. ಲೇಸರ್‌ ಕಿರಣವು ಪ್ರತಿಕೃತಿಯ ಕಪ್ಪುಭಾಗಗಳ ಮೇಲಿನ ವಿದ್ಯುದಾವೇಶವನ್ನು ತಟಸ್ಥೀಕರಿಸುತ್ತದೆ (ಅಥವಾ ಹಿಮ್ಮುಖಗೊಳಿಸುತ್ತದೆ). ಇದರಿಂದಾಗಿ ಟೋನರು ಕಣಗಳನ್ನು ಮೇಲೆತ್ತುವ ಸಲುವಾಗಿ ದ್ಯುತಿಗ್ರಾಹಿಯ ಮೇಲ್ಮೈ ಮೇಲೆ ಒಂದು ಸ್ಥಾಯೀ ವಿದ್ಯುತ್‌‌ನ ಋಣಾತ್ಮಕ ಪ್ರತಿಕೃತಿಯು ಉಳಿಯುತ್ತದೆ.

ಉಜ್ಜುವಿಕೆಯ ಪ್ರತಿಯೊಂದು ಆವರ್ತನದ ಅಂತ್ಯದಲ್ಲಿ ಲೇಸರ್‌ ಉಜ್ಜುವಿಕೆಯ ಪ್ರಕ್ರಿಯೆಯನ್ನು ಏಕಕಾಲಿಕವಾಗಿಸಲು, ಕಿರಣವನ್ನು ಪತ್ತೆಹಚ್ಚುವ (ಬೀಮ್‌ ಡಿಟೆಕ್ಟರ್‌-BD) ಒಂದು ಸಂವೇದಕವನ್ನು ಬಳಸಲಾಗುತ್ತದೆ.[]

ಸ್ಫುಟಗೊಳಿಸುವಿಕೆ

[ಬದಲಾಯಿಸಿ]

ಇಂಗಾಲಗಪ್ಪು ಅಥವಾ ವರ್ಣದ್ರವ್ಯಗಳೊಂದಿಗೆ ಮಿಶ್ರಣಗೊಳಿಸಿದ ಶುಷ್ಕ ಪ್ಲಾಸ್ಟಿಕ್‌ ಪೌಡರಿನ ಸೂಕ್ಷ್ಮ ಕಣಗಳಿಂದ ಮಾಡಲ್ಪಟ್ಟ ಟೋನರ್‌‌ಗೆ ಗುಪ್ತ ಬಿಂಬದೊಂದಿಗಿನ ಮೇಲ್ಮೈಯನ್ನು ಒಡ್ಡಲಾಗುತ್ತದೆ. ವಿದ್ಯುತ್‌ ಪೂರಿತ ಟೋನರು ಕಣಗಳಿಗೆ ಒಂದು ಋಣಾತ್ಮಕ ವಿದ್ಯುದಾವೇಶವನ್ನು ನೀಡಲಾಗುತ್ತದೆ, ಮತ್ತು ಲೇಸರ್‌‌ನಿಂದ ಸ್ಪರ್ಶಿಸಲ್ಪಡುವ ಪ್ರದೇಶಗಳಾದ ದ್ಯುತಿಗ್ರಾಹಿಯ ಗುಪ್ತ ಬಿಂಬದೆಡೆಗೆ ಅವುಗಳನ್ನು ಸ್ಥಾಯೀವಿದ್ಯುತ್ತಿನ ಸ್ವರೂಪದಲ್ಲಿ ಆಕರ್ಷಿಸಲಾಗುತ್ತದೆ. ಸಜಾತೀಯ ವಿದ್ಯುದಾವೇಶಗಳು ವಿಕರ್ಷಿಸುತ್ತವೆಯಾದ್ದರಿಂದ, ಋಣಾತ್ಮಕ ವಿದ್ಯುದಾವೇಶವು ಉಳಿದುಕೊಂಡಿರುವ ಉರುಳೆಯ ಭಾಗವನ್ನು ಋಣಾತ್ಮಕವಾಗಿ ವಿದ್ಯುತ್‌ ಪೂರಿತವಾಗಿರುವ ಟೋನರು ಸ್ಪರ್ಶಿಸುವುದಿಲ್ಲ.

ಮುದ್ರಿತ ಪ್ರತಿಕೃತಿಯ ಒಟ್ಟಾರೆ ಗಾಢತೆಯನ್ನು, ಪೂರೈಕೆಯ ಟೋನರಿಗೆ ಸಂಪರ್ಕಿಸಲಾದ ಉನ್ನತ ವೋಲ್ಟೇಜಿನ ವಿದ್ಯುತ್‌ಪೂರಣವು ನಿಯಂತ್ರಿಸುತ್ತದೆ. ಉರುಳೆಯ ಮೇಲ್ಮೈಯೆಡೆಗಿನ ಅಂತರವನ್ನು ವಿದ್ಯುತ್‌ ಪೂರಿತ ಟೋನರು ಒಮ್ಮೆಗೆ ನೆಗೆಯಿತೆಂದರೆ, ಸ್ವತಃ ಟೋನರ್‌ ಮೇಲಿರುವ ಋಣಾತ್ಮಕ ವಿದ್ಯುದಾವೇಶವು ಪೂರೈಕೆಯ ಟೋನರನ್ನು ವಿಕರ್ಷಿಸುತ್ತದೆ ಮತ್ತು ಉರುಳೆಯೆಡೆಗೆ ಹೆಚ್ಚಿನ ಟೋನರು ನೆಗೆಯದಂತೆ ಅದನ್ನು ತಡೆಯುತ್ತದೆ. ಒಂದುವೇಳೆ ವೋಲ್ಟೇಜು ಕಡಿಮೆಯಿದ್ದರೆ, ಹೆಚ್ಚಿನ ಟೋನರು ವರ್ಗಾವಣೆಯಾಗದಂತೆ ತಡೆಗಟ್ಟಲು ಟೋನರಿನ ಕೇವಲ ಒಂದು ತೆಳುವಾದ ಲೇಪ ಅಥವಾ ಹೊದಿಕೆಯು ಅಗತ್ಯವಾಗಿರುತ್ತದೆ. ಒಂದು ವೇಳೆ ವೋಲ್ಟೇಜು ಹೆಚ್ಚು ಇದ್ದರೆ, ಆಗ ಉರುಳೆಯೆಡೆಗೆ ಹೆಚ್ಚಿನ ಟೋನರು ವರ್ಗಾವಣೆಯಾಗದಂತೆ ಅದನ್ನು ತಡೆಯುವಲ್ಲಿ ಉರುಳೆಯ ಮೇಲಿನ ಒಂದು ತೆಳುವಾದ ಹೊದಿಕೆಯು ತುಂಬಾ ದುರ್ಬಲವಾಗಿರುತ್ತದೆ. ಪೂರೈಕೆಯ ಟೋನರನ್ನು ವಿಕರ್ಷಿಸಲು ಸಾಕಾಗುವಷ್ಟು ಪ್ರಮಾಣದಲ್ಲಿ ಉರುಳೆಯ ಮೇಲಿನ ವಿದ್ಯುದಾವೇಶಗಳು ಮತ್ತೆ ಹೆಚ್ಚಾಗುವವರೆಗೂ, ಹೆಚ್ಚು ಪೂರೈಕೆಯ ಟೋನರು ಉರುಳೆಯೆಡೆಗೆ ನೆಗೆಯುವುದನ್ನು ಮುಂದುವರಿಸುತ್ತದೆ. ಅತ್ಯಂತ ಗಾಢವಾಗಿರುವ ವ್ಯವಸ್ಥೆಗಳಲ್ಲಿ ಪೂರೈಕೆಯ ಟೋನರಿನ ವೋಲ್ಟೇಜು ಹೆಚ್ಚಿದ್ದು, ದಾಖಲಿಸಲ್ಪಡದ ಅಥವಾ ಅಲಿಖಿತವಾಗಿರುವ ಉರುಳೆಯ ಆರಂಭಿಕ ವಿದ್ಯುದಾವೇಶವು ಇನ್ನೂ ಇರುವ ಉರುಳೆಯ ಭಾಗಗಳಿಗೆ ಲೇಪಿಸಲೂ ಸಹ ಅದು ಶುರುಮಾಡುತ್ತದೆ, ಮತ್ತು ಸಮಗ್ರ ಪುಟಕ್ಕೆ ಒಂದು ಗಾಢಗೊಳಿಸಿದ ಪ್ರತಿಬಿಂಬವನ್ನು ಅದು ಕೊಡುತ್ತದೆ. [ಸೂಕ್ತ ಉಲ್ಲೇಖನ ಬೇಕು]

ವರ್ಗಾಯಿಸುವಿಕೆ

[ಬದಲಾಯಿಸಿ]

ಪ್ರತಿಕೃತಿಯನ್ನು ವರ್ಗಾಯಿಸುವಾಗ, ಕಾಗದದ ಮೇಲೆ ದ್ಯುತಿಗ್ರಾಹಿಯು ಒತ್ತಲ್ಪಡುತ್ತದೆ ಇಲ್ಲವೇ ಉರುಳಿಸಲ್ಪಡುತ್ತದೆ. ಉನ್ನತ-ಮಟ್ಟದ ಯಂತ್ರಗಳು, ದ್ಯುತಿಗ್ರಾಹಿಯಿಂದ ಕಾಗದದ ಕಡೆಗೆ ಟೋನರನ್ನು ಎಳೆಯುವ ಸಲುವಾಗಿ ಧನಾತ್ಮಕವಾಗಿ ವಿದ್ಯುತ್‌ ಪೂರಿತಗೊಂಡಿರುವ ವರ್ಗಾಯಿಸಲಾಗುವ ಮಾದರಿಯ ಒಂದು ರೋಲರನ್ನು ಕಾಗದದ ಹಿಂಭಾಗದಲ್ಲಿ ಬಳಸುತ್ತವೆ.

ಬೆಸೆಯುವಿಕೆ

[ಬದಲಾಯಿಸಿ]
ಶಾಖ ಮತ್ತು ಒತ್ತಡವನ್ನು ಬಳಸಿಕೊಂಡು ಕಾಗದದ ಮೇಲೆ ಟೋನರನ್ನು ಕರಗಿಸುವುದು.

ಕಾಗದಕ್ಕೆ ಪ್ಲಾಸ್ಟಿಕ್‌ ಪೌಡರನ್ನು ಸೇರಿಸುವ ಶಾಖ (200 ಸೆಲ್ಷಿಯಸ್‌ವರೆಗೆ) ಮತ್ತು ಒತ್ತಡವಿರುವ ಸಂಯೋಜಕ ಜೋಡಣೆಯಲ್ಲಿನ ರೋಲರುಗಳ ಮೂಲಕ ಕಾಗದವು ಹಾದುಹೋಗುತ್ತದೆ.

ಒಂದು ರೋಲರು ಸಾಮಾನ್ಯವಾಗಿ ಒಂದು ಟೊಳ್ಳಾದ ಕೊಳವೆಯಾಗಿರುತ್ತದೆ (ಶಾಖದ ರೋಲರು) ಮತ್ತು ಇನ್ನೊಂದು ಒಂದು ರಬ್ಬರ್‌ ಆಧಾರದ ರೋಲರು (ಒತ್ತಡ ರೋಲರು) ಆಗಿರುತ್ತದೆ. ಟೊಳ್ಳಾದ ಕೊಳವೆಯ ಮಧ್ಯಭಾಗದಲ್ಲಿ ಒಂದು ಪ್ರಕಾಶಮಾನವಾದ ಶಾಖದ ದೀಪವನ್ನು ತೂಗಾಡಿಸಲಾಗಿರುತ್ತದೆ, ಮತ್ತು ಇದರ ಅವರೋಹಿತ ಶಕ್ತಿಯು ರೋಲರನ್ನು ಒಳಭಾಗದಿಂದ ಸಮಾನ ರೂಪದಲ್ಲಿ ಬಿಸಿಮಾಡುತ್ತದೆ. ಟೋನರು ಸೂಕ್ತ ರೀತಿಯಲ್ಲಿ ಸಂಯೋಜನೆಗೊಳ್ಳಲು, ಸಂಯೋಜಕ ರೋಲರನ್ನು ಸಮಾನವಾಗಿ ಬಿಸಿಯಾಗಿರಬೇಕಾಗುತ್ತದೆ.

ಮುದ್ರಕವೊಂದು ಬಳಸುವ ವಿದ್ಯುತ್ತಿನ ಪೈಕಿ ಸಂಯೋಜಕದ ಪಾಲು 90%ವರೆಗೆ ಇರುತ್ತದೆ. ಸಂಯೋಜಕ ಜೋಡಣೆಯಿಂದ ಬರುವ ಶಾಖವು ಮುದ್ರಕದ ಇತರ ಭಾಗಗಳಿಗೆ ಹಾನಿಯುಂಟುಮಾಡಬಹುದು. ಆದ್ದರಿಂದ ಮುದ್ರಕದ ಒಳಾವರಣದಿಂದ ಶಾಖವನ್ನು ಆಚೆಗೆ ಕಳಿಸಲು, ಅನೇಕವೇಳೆ ಮುದ್ರಕದಲ್ಲಿ ವಿದ್ಯುತ್‌ ಪಂಖಗಳ ನೆರವಿನಿಂದ ಗಾಳಿಯಾಡುವ ವ್ಯವಸ್ಥೆ ಮಾಡಲಾಗಿರುತ್ತದೆ. ಸಂಯೋಜಕವನ್ನು ಸ್ಥಗಿತಗೊಳಿಸುವುದು ಹಾಗೂ ಅದನ್ನು ತಣ್ಣಗಾಗಲು ಬಿಡುವುದು ಬಹುಪಾಲು ನಕಲುಯಂತ್ರಗಳು ಮತ್ತು ಲೇಸರ್‌ ಮುದ್ರಕಗಳ ವಿದ್ಯುತ್‌ ಉಳಿಸುವಿಕೆಯ ಪ್ರಧಾನ ಲಕ್ಷಣವಾಗಿದೆ. ಎಂದಿನ ಕಾರ್ಯಚಟುವಟಿಕೆಗೆ ಮರಳಬೇಕೆಂದರೆ, ಮುದ್ರಣ ಕಾರ್ಯವು ಶುರುವಾಗುವುದಕ್ಕೆ ಮುಂಚಿತವಾಗಿ ಕಾರ್ಯನಿರ್ವಹಿಸುವ ಉಷ್ಣತೆಗೆ ಸಂಯೋಜಕವು ಮರಳುವುದನ್ನು ಕಾಯುವುದು ಅಗತ್ಯವಾಗಿರುತ್ತದೆ.

ಕೆಲವೊಂದು ಮುದ್ರಕಗಳು ಅತ್ಯಂತ ತೆಳುವಾದ, ಬಾಗುವ ಲೋಹದ ಒಂದು ಸಂಯೋಜಕ ರೋಲರನ್ನು ಬಳಸುತ್ತವೆ. ಆದ್ದರಿಂದ ಬಿಸಿಗೆ ಒಡ್ಡಿಕೊಳ್ಳುವ ಭಾಗದ ಪ್ರಮಾಣವು ಕಡಿಮೆಯಿರುತ್ತದೆ ಹಾಗೂ ಕಾರ್ಯನಿರ್ವಹಣೆಯ ಉಷ್ಣತೆಗೆ ಸಂಯೋಜಕವು ಕ್ಷಿಪ್ರವಾಗಿ ತಲುಪಲು ಸಾಧ್ಯವಾಗುತ್ತದೆ. ಇದು ಒಂದು ಜಡಸ್ಥಿತಿಯಿಂದ ಮುದ್ರಣ ಕಾರ್ಯವನ್ನು ತ್ವರಿತಗೊಳಿಸುವುದಷ್ಟೇ ಅಲ್ಲದೇ, ವಿದ್ಯುತ್ತನ್ನು ಉಳಿಸುವ ದೃಷ್ಟಿಯಿಂದ ಸಂಯೋಜಕವನ್ನು ಆಗಿಂದಾಗ್ಗೆ ಸ್ಥಗಿತಗೊಳಿಸಲು ಅವಕಾಶ ನೀಡುತ್ತದೆ.

ಒಂದು ವೇಳೆ ಕಾಗದವು ಸಂಯೋಜಕದ ಮೂಲಕ ತುಂಬಾ ನಿಧಾನವಾಗಿ ಸಾಗಿದರೆ, ಟೋನರು ಕರಗುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಮಾಣದಲ್ಲಿ ರೋಲರು ಸಂಪರ್ಕದ ಸಮಯವು ದೊರೆಯುತ್ತದೆ, ಮತ್ತು ಒಂದು ಕೆಳಮಟ್ಟದ ಉಷ್ಣತೆಯಲ್ಲಿ ಕಾರ್ಯನಿರ್ವಹಿಸಲು ಸಂಯೋಜಕಕ್ಕೆ ಸಾಧ್ಯವಾಗುತ್ತದೆ. ಶಕ್ತಿಯನ್ನು-ಉಳಿಸುವ ಈ ವಿನ್ಯಾಸದ ಕಾರಣದಿಂದಾಗಿ ಚಿಕ್ಕದಾದ, ದುಬಾರಿಯಲ್ಲದ ಲೇಸರ್‌ ಮುದ್ರಕಗಳು ವಿಶಿಷ್ಟವೆನಿಸುವಂತೆ ನಿಧಾನವಾಗಿ ಮುದ್ರಿಸುತ್ತವೆ. ಆದರೆ ಬೃಹತ್ತಾದ, ಹೆಚ್ಚಿನ ವೇಗದ ಮುದ್ರಕಗಳಲ್ಲಿ ಒಂದು ಉನ್ನತ-ಉಷ್ಣತೆಯ ಸಂಯೋಜಕದ ಮೂಲಕ, ಒಂದು ಅತ್ಯಂತ ಕಡಿಮೆ ಸಂಪರ್ಕ ಸಮಯದೊಂದಿಗೆ ಕಾಗದವು ಅತ್ಯಂತ ಕ್ಷಿಪ್ರವಾಗಿ ಚಲಿಸುತ್ತದೆ.

ಸ್ವಚ್ಛಗೊಳಿಸುವುದು

[ಬದಲಾಯಿಸಿ]

ಮುದ್ರಣವು ಸಂಪೂರ್ಣಗೊಂಡಾಗ, ವಿದ್ಯುತ್ತಿನ ರೀತಿಯಲ್ಲಿ ತಟಸ್ಥವಾಗಿರುವ ಒಂದು ಮೃದುವಾದ ಪ್ಲಾಸ್ಟಿಕ್‌ನ ಚಪ್ಪಟೆ ಫಲಕವು ದ್ಯುತಿಗ್ರಾಹಿಯಲ್ಲಿ ಏನಾದರೂ ಹೆಚ್ಚುವರಿ ಟೋನರು ಉಳಿದಿದ್ದರೆ ಅದನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅದನ್ನು ಒಂದು ತ್ಯಾಜ್ಯ ಸಂಗ್ರಾಹಕ ಕೋಶದೊಳಗೆ ಸಂಚಯಿಸುತ್ತದೆ, ಮತ್ತು ಹೊರಸೂಸುವಿಕೆಯ ದೀಪವೊಂದು ದ್ಯುತಿಗ್ರಾಹಿಯಿಂದ ಉಳಿದ ವಿದ್ಯುದಾವೇಶವನ್ನು ತೆಗೆದುಹಾಕುತ್ತದೆ.

ಕಾಗದವೊಂದರ ಸಿಕ್ಕಿಹಾಕಿಕೊಳ್ಳುವಿಕೆಯಂಥ ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ದ್ಯುತಿಗ್ರಾಹಿಯ ಮೇಲೆ ಆಗೊಮ್ಮೆ-ಈಗೊಮ್ಮೆ ಟೋನರು ಉಳಿದುಬಿಡಬಹುದು. ಸಂಪರ್ಕಕ್ಕೆ ಸಿದ್ಧವಾದ ದ್ಯುತಿವಾಹಕದ ಮೇಲೆ ಟೋನರು ಇರುತ್ತದೆಯಾದರೂ, ಅದಕ್ಕೆ ಸಂಪರ್ಕವು ದೊರೆಯುವುದಕ್ಕೆ ಮುಂಚೆಯೇ ಕಾರ್ಯಚಟುವಟಿಕೆಯು ವಿಫಲಗೊಳ್ಳುತ್ತದೆ. ಆದ್ದರಿಂದ ಟೋನರನ್ನು ಚೆನ್ನಾಗಿ ಒರೆಸಬೇಕು ಮತ್ತು ಪ್ರಕ್ರಿಯೆಯನ್ನು ಪುನರಾರಂಭಿಸಬೇಕು.

ಬಳಸಿ ಮಿಕ್ಕಿಹೋದ ಟೋನರನ್ನು ಮುದ್ರಣಕಾರ್ಯಕ್ಕಾಗಿ ಮತ್ತೆ ಉಪಯೋಗಿಸಲಾಗುವುದಿಲ್ಲ. ಏಕೆಂದರೆ ಧೂಳು ಮತ್ತು ಕಾಗದದ ಎಳೆಗಳಿಂದ ಅದು ನಿರುಪಯುಕ್ತಗೊಂಡಿರುವ ಸಾಧ್ಯತೆಗಳಿರುತ್ತವೆ. ಒಂದು ಉತ್ತಮ ಗುಣಮಟ್ಟದ ಪ್ರತಿಕೃತಿ ಅಥವಾ ಬಿಂಬವನ್ನು ಪಡೆಯಲು, ಒಂದು ಅಪ್ಪಟವಾದ, ಸ್ವಚ್ಛವಾದ ಟೋನರನ್ನು ಬಳಸುವುದು ಅಗತ್ಯ. ನಿರುಪಯುಕ್ತವಾಗಿರುವ ಅಥವಾ ಹಾಳಾಗಿರುವ ಟೋನರನ್ನು ಮರುಬಳಸುವುದರಿಂದಾಗಿ, ಮುದ್ರಿತ ಭಾಗಗಳಲ್ಲಿ ಪಟ್ಟೆಪಟ್ಟೆಯಾಗಿರುವಿಕೆ ಕಂಡುಬರಬಹುದು ಅಥವಾ ಕಾಗದದ ಮೇಲೆ ಕಳಪೆ ಮಟ್ಟದಲ್ಲಿನ ಟೋನರಿನ ಬೆಸೆಯುವಿಕೆಯು ಕಂಡುಬರಬಹುದು. ಆದಾಗ್ಯೂ ಇಲ್ಲಿ ಕೆಲವೊಂದು ಅಪವಾದಗಳಿದ್ದು, ಅವುಗಳ ಪೈಕಿ ಅತ್ಯಂತ ಗಮನಾರ್ಹವಾಗಿರುವ ಬ್ರದರ್‌ ಮತ್ತು ತೋಷಿಬಾ ಕಂಪನಿಯ ಕೆಲವೊಂದು ಮುದ್ರಕಗಳು ಬಳಸಿ ಮಿಕ್ಕಿಹೋದ ಟೋನರನ್ನು ಸ್ವಚ್ಛಗೊಳಿಸಲು ಮತ್ತು ಮರುಬಳಕೆ ಮಾಡಲು ಸ್ವಾಮ್ಯದ ಹಕ್ಕುಪತ್ರ ಪಡೆದ ಒಂದು ವಿಧಾನವನ್ನು ಬಳಸುತ್ತವೆ.[][]

ಒಂದೇ ಸಲ ಸಂಭವಿಸುವ ಅನೇಕ ಹಂತಗಳು

[ಬದಲಾಯಿಸಿ]

ರ್ಯಾಸ್ಟರ್‌ ಬಿಂಬದ ಸೃಷ್ಟಿಯು ಒಮ್ಮೆಗೆ ಸಂಪೂರ್ಣವಾಯಿತೆಂದರೆ, ಮುದ್ರಣ ಪ್ರಕ್ರಿಯೆಯ ಎಲ್ಲಾ ಹಂತಗಳು ಒಂದಾದ ಮೇಲೆ ಮತ್ತೊಂದರಂತೆ ಕ್ಷಿಪ್ರ ಅನುಕ್ರಮದಲ್ಲಿ ಸಂಭವಿಸಲು ಸಾಧ್ಯವಾಗುತ್ತದೆ. ಅತ್ಯಂತ ಚಿಕ್ಕದಾದ ಮತ್ತು ಅಡಕವಾಗಿರುವ ಘಟಕವೊಂದರ ಬಳಸುವಿಕೆಗೆ ಇದು ಅವಕಾಶ ಮಾಡಿಕೊಡುತ್ತದೆ. ಈ ಘಟಕದಲ್ಲಿ ದ್ಯುತಿಗ್ರಾಹಿಯು ವಿದ್ಯುತ್‌ ಪೂರಿತವಾಗಿದ್ದು ಕೆಲವೊಂದು ಡಿಗ್ರಿಗಳವರೆಗೆ ಸುತ್ತುತ್ತದೆ ಮತ್ತು ಕಿರಣಾವಳಿಯನ್ನು ಹಾಯಿಸಲ್ಪಡುತ್ತದೆ, ಮತ್ತಷ್ಟು ಡಿಗ್ರಿಗಳಷ್ಟು ಸುತ್ತುತ್ತದೆ ಮತ್ತು ಸ್ಫುಟಗೊಳಿಸಲ್ಪಡುತ್ತದೆ, ಮತ್ತು ಅದರ ಕೆಲಸವು ಹೀಗೆಯೇ ಸಾಗುತ್ತದೆ. ಉರುಳೆಯು ಒಂದು ಆವರ್ತನವನ್ನು ಸಂಪೂರ್ಣಗೊಳಿಸುವುದಕ್ಕೆ ಮುಂಚಿತವಾಗಿ ಈ ಸಮಗ್ರ ಪ್ರಕ್ರಿಯೆಯು ಸಂಪೂರ್ಣಗೊಳ್ಳಲು ಸಾಧ್ಯವಿರುತ್ತದೆ.

ವಿಭಿನ್ನ ಮುದ್ರಕಗಳು ಈ ಹಂತಗಳನ್ನು ಬೇರೆಬೇರೆಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತರುತ್ತವೆ. ಕೆಲವೊಂದು "ಲೇಸರ್‌" ಮುದ್ರಕಗಳು ಉರುಳೆಯ ಮೇಲೆ ಬೆಳಕನ್ನು "ಬರೆಯಲು" ಬೆಳಕನ್ನು-ಸೂಸುವ ಡಯೋಡುಗಳ ಒಂದು ರೇಖೀಯ ಶ್ರೇಣಿಯನ್ನು ವಾಸ್ತವವಾಗಿ ಬಳಸುತ್ತವೆ (ನೋಡಿ: LED ಮುದ್ರಕ). ಮೇಣ ಅಥವಾ ಪ್ಲಾಸ್ಟಿಕ್‌‌ನ ಮೇಲೆ ಟೋನರು ಆಧರಿಸಿರುತ್ತದೆ. ಇದರಿಂದಾಗಿ ಸಂಯೋಜಕ ಜೋಡಣೆಯ ಮೂಲಕ ಕಾಗದವು ಹಾದುಹೋದಾಗ ಟೋನರಿನ ಕಣಗಳು ಕರಗುತ್ತವೆ. ಕಾಗದವು ವಿರುದ್ಧ ರೀತಿಯಲ್ಲಿ ವಿದ್ಯುತ್‌ ಪೂರಿತವಾಗಿರಬಹುದು ಅಥವಾ ಆಗದಿರಬಹುದು. ಸಂಯೋಜಕವು ಒಂದು ಅವರೋಹಿತ ಒಲೆಯಾಗಿರಬಹುದು, ಬಿಸಿಮಾಡಲಾದ ಒಂದು ಒತ್ತಡದ ರೋಲರು ಆಗಿರಬಹುದು, ಅಥವಾ (ಕೆಲವೊಂದು ಅತ್ಯಂತ ವೇಗದ, ದುಬಾರಿ ಮುದ್ರಕಗಳ ಮೇಲೆ) ಒಂದು ಕ್ಸೆನಾನ್‌ ಫ್ಲಾಶ್‌ ದೀಪವಾಗಿರಬಹುದು. ಲೇಸರ್‌ ಮುದ್ರಕವೊಂದಕ್ಕೆ ಆರಂಭದಲ್ಲಿ ವಿದ್ಯುತ್‌ ಸಂಪರ್ಕವನ್ನು ನೀಡಿದಾಗ ಅದು ಸಾಗುವ ಬೆಚ್ಚಗಾಗುವ ಪ್ರಕ್ರಿಯೆಯು ಮುಖ್ಯವಾಗಿ ಸಂಯೋಜಕದ ತಾಪಕ ಸುರುಳಿಯನ್ನು ಬಿಸಿಮಾಡುವುದನ್ನು ಒಳಗೊಂಡಿರುತ್ತದೆ. ಅನೇಕ ಮುದ್ರಕಗಳು ಒಂದು ಟೋನರು-ರಕ್ಷಣಾ ವಿಧಾನವನ್ನು ಹೊಂದಿರುತ್ತವೆ. ಇದನ್ನು ಹೆವ್ಲೆಟ್‌-ಪ್ಯಾಕರ್ಡ್‌ "ಎಕನೊಮೋಡ್‌" ಎಂದು ಕರೆಯುತ್ತದೆ. ಈ ವಿಧಾನವು ಸುಮಾರು ಅರ್ಧದಷ್ಟು ಟೋನರನ್ನು ಬಳಸಿದರೂ ಒಂದು ಲಘುವಾದ ಕರಡು-ಗುಣಮಟ್ಟದ ಮುದ್ರಿತ ಪ್ರತಿಯನ್ನು ನೀಡುತ್ತದೆ.

ಬಣ್ಣದ ಲೇಸರ್‌ ಮುದ್ರಕಗಳು

[ಬದಲಾಯಿಸಿ]
ಫ್ಯೂಜಿ ಕ್ಸೆರಾಕ್ಸ್‌ ಬಣ್ಣದ ಲೇಸರ್‌ ಮುದ್ರಕ C1110B

ಬಣ್ಣದ ಲೇಸರ್‌ ಮುದ್ರಕಗಳು ಬಣ್ಣವನ್ನೊಳಗೊಂಡಿರುವ ಅಂದರೆ, ಹಸಿರುನೀಲಿ ಬಣ್ಣ, ಕೆನ್ನೇರಳೆ ಬಣ್ಣ, ಹಳದಿ, ಮತ್ತು ಕಪ್ಪು (CMYK) ಟೋನರನ್ನು (ಶುಷ್ಕ ಶಾಯಿ) ವಿಶಿಷ್ಟವಾಗಿ ಬಳಸುತ್ತವೆ.

ಏಕವರ್ಣದ ಮುದ್ರಕಗಳು ಕೇವಲ ಒಂದು ಲೇಸರ್‌ ಸ್ಕ್ಯಾನರ್‌ ಜೋಡಣೆಯನ್ನು ಬಳಸಿದರೆ, ಬಣ್ಣದ ಮುದ್ರಕಗಳು ಅನೇಕವೇಳೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸ್ಕ್ಯಾನರ್‌ ಜೋಡಣೆಗಳನ್ನು ಹೊಂದಿರುತ್ತವೆ.

ಬಣ್ಣದ ಮುದ್ರಣವು ಮುದ್ರಣ ಪ್ರಕ್ರಿಯೆಗೆ ಸಂಕೀರ್ಣತೆಯನ್ನು ಸೇರಿಸುತ್ತದೆ. ಏಕೆಂದರೆ, ದಾಖಲಿಸುವಿಕೆಯ ತಪ್ಪುಗಳು ಎಂದು ಕರೆಯಲಾಗುವ ಕೊಂಚಮಟ್ಟಿಗಿನ ತಪ್ಪುಜೋಡಣೆಗಳು ಪ್ರತೀ ಬಣ್ಣವನ್ನು ಮುದ್ರಿಸುವ ನಡುವಿನ ಅವಧಿಯಲ್ಲಿ ಸಂಭವಿಸಬಹುದು. ಇದರಿಂದಾಗಿ ಆಶಿಸದ ಬಣ್ಣದ ಅಂಚುಕಟ್ಟುವಿಕೆ, ಮಸುಕಾಗಿರುವಿಕೆ, ಅಥವಾ ಬಣ್ಣಗೊಳಿಸಲಾದ ಭಾಗಗಳ ಅಂಚುಗಳ ಉದ್ದಕ್ಕೂ ತೆಳು/ಗಾಢವಾದ ಪಟ್ಟೆಪಟ್ಟೆ ಮೂಡುವಿಕೆ ಕಂಡುಬರುತ್ತದೆ. ದಾಖಲಿಸುವಿಕೆಯ ಉನ್ನತವಾದ ನಿಖರತಗೆ ಅನುವುಮಾಡಿಕೊಡಲು ಕೆಲವೊಂದು ಬಣ್ಣದ ಲೇಸರ್‌ ಮುದ್ರಕಗಳು ಒಂದು "ವರ್ಗಾಯಿಸುವ ಪಟ್ಟಿ" ಎಂದು ಕರೆಯಲಾಗುವ ತಿರುಗುತ್ತಿರುವ ಬೃಹತ್‌ ಪಟ್ಟಿಯೊಂದನ್ನು ಬಳಸುತ್ತವೆ. ವರ್ಗಾಯಿಸುವ ಪಟ್ಟಿಯು ಎಲ್ಲಾ ಟೋನರು ಕಾರ್ಟ್ರಿಜ್‌ಗಳ ಮುಂಭಾಗದಲ್ಲಿ ಹಾದುಹೋಗುತ್ತವೆ ಮತ್ತು ಟೋನರು ಪದರಗಳ ಪೈಕಿ ಪ್ರತಿಯೊಂದೂ ಸದರಿ ಪಟ್ಟಿಗೆ ಕರಾರುವಾಕ್ಕಾಗಿ ಸಂಪರ್ಕಿಸಲ್ಪಟ್ಟಿರುತ್ತವೆ. ನಂತರ ಒಂದು ಸಮರೂಪದ ಏಕ ಹಂತದಲ್ಲಿ ಸಂಯೋಜಿತ ಪದರಗಳು ಕಾಗದಕ್ಕೆ ಸಂಪರ್ಕಿಸಲ್ಪಡುತ್ತವೆ.

ಬಣ್ಣದ ಮುದ್ರಕಗಳು ಏಕವರ್ಣದ ಮುದ್ರಕಗಳಿಗಿಂತ ಸಾಮಾನ್ಯವಾಗಿ ಹೆಚ್ಚಿನ "ಪ್ರತಿ-ಪುಟಕ್ಕೂ-ಚಿಕ್ಕಾಸುಗಳಷ್ಟಿರುವ" ತಯಾರಿಕಾ ವೆಚ್ಚವನ್ನು ಹೊಂದಿರುತ್ತವೆ.

DPI ಪೃಥಕ್ಕರಣ

[ಬದಲಾಯಿಸಿ]

1200 DPI ಮುದ್ರಕಗಳು 2008ರ ಅವಧಿಯಲ್ಲಿ ಸಾಮಾನ್ಯವಾಗಿ ಲಭ್ಯವಾಗಿದ್ದವು.

2400 DPI ವಿದ್ಯುತ್‌ಛಾಯಾಚಿತ್ರೀಯ ಮುದ್ರಣದ ಹಾಳೆಗಳ ತಯಾರಕ ಘಟಕಗಳು, ಅತ್ಯವಶ್ಯವಾಗಿ ಪ್ಲಾಸ್ಟಿಕ್‌ ಹಾಳೆಗಳ ಮೇಲೆ ಮುದ್ರಿಸುವ ಲೇಸರ್‌ ಮುದ್ರಕಗಳಾಗಿದ್ದು, ಇವು ಕೂಡಾ ಲಭ್ಯವಿವೆ.

ಲೇಸರ್‌ ಮುದ್ರಕದ ನಿರ್ವಹಣೆ

[ಬದಲಾಯಿಸಿ]

ಗ್ರಾಹಕ ಬಳಕೆಯ ಮತ್ತು ಸಣ್ಣ ವ್ಯವಹಾರಗಳಲ್ಲಿ ಬಳಕೆಯಾಗುವ ಬಹುಪಾಲು ಲೇಸರ್‌ ಮುದ್ರಕಗಳು, ಟೋನರು ಪೂರೈಕೆಯ ತೊಟ್ಟಿ, ನಿರುಪಯುಕ್ತ ಟೋನರಿನ ಲಾಳಿಕೆ ತೊಟ್ಟಿ, ಮತ್ತು ಒರೆಸುವ ಹಲವಾರು ಫಲಕಗಳೊಂದಿಗೆ ದ್ಯುತಿಗ್ರಾಹಿಯನ್ನು (ಕೆಲವೊಮ್ಮೆ ಇದನ್ನು "ದ್ಯುತಿವಾಹಕ ಘಟಕ" ಅಥವಾ "ಬಿಂಬಿಸುವ ಉರುಳೆ" ಎಂದು ಕರೆಯಲಾಗುತ್ತದೆ) ಸಂಯೋಜಿಸುವ ಒಂದು ಟೋನರು ಕಾರ್ಟ್ರಿಜ್‌ನ್ನು ಬಳಸುತ್ತವೆ. ಟೋನರು ಪೂರೈಕೆಯು ಬಳಕೆಯಾದಾಗ, ಟೋನರು ಕಾರ್ಟ್ರಿಜ್‌ನ ಬದಲಾಯಿಸುವಿಕೆಯು ಬಿಂಬಿಸುವ ಉರುಳೆ, ನಿರುಪಯುಕ್ತ ಟೋನರಿನ ಲಾಳಿಕೆ ತೊಟ್ಟಿ, ಮತ್ತು ಒರೆಸುವ ಫಲಕಗಳನ್ನು ತಾನೇತಾನಾಗಿ ಬದಲಾಯಿಸುತ್ತದೆ.

ಕೊನೆಯ ನಿರ್ವಹಣೆಯಾದಾಗಿನಿಂದ ಎಷ್ಟು ಸಂಖ್ಯೆಯಲ್ಲಿ ಪುಟಗಳು ಮುದ್ರಣಗೊಂಡಿವೆ ಎಂಬುದರ ಕುರಿತಾದ ಒಂದು ಪುಟಗಣತಿಯನ್ನು ಕೆಲವೊಂದು ಲೇಸರ್‌ ಮುದ್ರಕಗಳು ನಿರ್ವಹಿಸುತ್ತವೆ. ಈ ಮಾದರಿಗಳಲ್ಲಿ ಕಾಣಿಸಿಕೊಳ್ಳುವ ಒಂದು ನೆನಪುಕೊಡುವ ಸಂದೇಶವು, ಪ್ರಮಾಣಕ ನಿರ್ವಹಣಾ ಭಾಗಗಳನ್ನು ಬದಲಾಯಿಸುವ ಸಮಯವು ಸಮೀಪಿಸುತ್ತಿದೆ ಎಂದು ಬಳಕೆದಾರನಿಗೆ ಸೂಚಿಸುತ್ತದೆ. ಇತರ ಮಾದರಿಗಳಲ್ಲಿ, ಪುಟಗಣತಿಯ ಅಥವಾ ಜ್ಞಾಪನಾ ಪ್ರದರ್ಶಿಕೆಯ ವ್ಯವಸ್ಥೆಯ ಅಳವಡಿಕೆಯು ಇರುವುದಿಲ್ಲ. ಆದ್ದರಿಂದ ಎಷ್ಟು ಪುಟಗಳು ಮುದ್ರಣಗೊಂಡಿವೆ ಎಂದು ಬಳಕೆದಾರನು ಸ್ವತಃ ಲೆಕ್ಕ ಇಟ್ಟುಕೊಳ್ಳಬೇಕಾಗುತ್ತದೆ ಅಥವಾ ಕಾಗದವನ್ನು ಪೂರೈಸುವಾಗ ಕಂಡುಬರುವ ಸಮಸ್ಯೆಗಳು ಮತ್ತು ಮುದ್ರಣದ ನ್ಯೂನತೆಗಳಂಥ ಎಚ್ಚರಿಕೆಯ ಸಂಜ್ಞೆಗಳನ್ನು ಗಮನಿಸುತ್ತಿರಬೇಕಾಗುತ್ತದೆ.

ಸಾಮಾನ್ಯವಾದ ಮುದ್ರಕ ಭಾಗಗಳು ಹಾಗೂ ಉಪಭೋಗ್ಯ ವಸ್ತುಗಳಿಗೆ ಸಂಬಂಧಿಸಿದಂತೆ ಅವುಗಳ ತಯಾರಕರು ಸಾಮಾನ್ಯವಾಗಿ ಬಾಳಿಕೆ ಬರುವಿಕೆಯ ಕುರಿತಾದ ಕೋಷ್ಟಕಗಳನ್ನು ಒದಗಿಸುತ್ತಾರೆ. ಸಮಯದ ಏಕಮಾನಗಳಿಗಿಂತ ಹೆಚ್ಚಾಗಿ "ನಿರೀಕ್ಷಿತ ಪುಟ-ಮುದ್ರಣದ ಅವಧಿಯ" ಪರಿಭಾಷೆಯಲ್ಲಿ ತಯಾರಕರು ತಮ್ಮ ಮುದ್ರಕ ಭಾಗಗಳ ಬಾಳಿಕೆಯ ಪ್ರಮಾಣವನ್ನು ಲೆಕ್ಕಾಚಾರ ಹಾಕುತ್ತಾರೆ.

ವ್ಯವಹಾರೀ-ವರ್ಗದ ಮುದ್ರಕಗಳಿಗೆ ಸಂಬಂಧಿಸಿದ ಉಪಭೋಗ್ಯ ವಸ್ತುಗಳು ಹಾಗೂ ನಿರ್ವಹಣಾ ಭಾಗಗಳು, ವೈಯಕ್ತಿಕ ಮುದ್ರಕಗಳಿಗಾಗಿರುವ ಭಾಗಗಳಿಗಿಂತ ಹೆಚ್ಚಾಗಿ ಒಂದು ಹೆಚ್ಚಿನ ಮಟ್ಟದ ಪುಟ-ಮುದ್ರಣದ ನಿರೀಕ್ಷೆ ಅಥವಾ ಬಾಳಿಕೆಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಲೆಕ್ಕಾಚಾರ ಮಾಡಲ್ಪಡುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಟೋನರು ಕಾರ್ಟ್ರಿಜ್‌ಗಳು ಮತ್ತು ಸಂಯೋಜಕಗಳು ಸಾಮಾನ್ಯವಾಗಿ ವೈಯಕ್ತಿಕ ಬಳಕೆಯ-ವರ್ಗದ ಮುದ್ರಕಗಳಿಗಿಂತ ವ್ಯವಹಾರೀ-ವರ್ಗದ ಮುದ್ರಕಗಳಲ್ಲಿ ಹೆಚ್ಚಿನ ಪ್ರಮಾಣದ ಪುಟ-ಮುದ್ರಣದ ಬಾಳಿಕೆಯನ್ನು ಹೊಂದಿರುತ್ತವೆ. ಏಕವರ್ಣದ ಲೇಸರ್‌ ಮುದ್ರಕಗಳಿಗೆ ಹೋಲಿಸಿದಾಗ, ಬಣ್ಣದ ಲೇಸರ್‌ ಮುದ್ರಕಗಳಿಗೆ ನಿರ್ವಹಣೆ ಮತ್ತು ಭಾಗಗಳ ಬದಲಾಯಿಸುವಿಕೆಯ ಅವಶ್ಯಕತೆ ಹೆಚ್ಚು ಕಂಡುಬರುತ್ತದೆ. ಏಕೆಂದರೆ ಬಣ್ಣದ ಮುದ್ರಕಗಳು ಹೆಚ್ಚಿನ ಪ್ರಮಾಣದಲ್ಲಿ ಬಿಂಬಿಸುವ ಬಿಡಿಭಾಗಗಳನ್ನು ಹೊಂದಿರುತ್ತವೆ.

ಕಾಗದವನ್ನು ಎತ್ತಿಕೊಳ್ಳುವ ಪಥ ಮತ್ತು ಕಾಗದವನ್ನು ಪೂರೈಸುವ ಪಥದಲ್ಲಿ ಒಳಗೊಂಡಿರುವ ರೋಲರುಗಳು ಮತ್ತು ಜೋಡಣೆಗಳಿಗೆ ಸಂಬಂಧಿಸಿದಂತೆ ಇರುವ ವಿಶಿಷ್ಟವಾದ ನಿರ್ವಹಣಾ ವಿಧಾನಗಳಲ್ಲಿ, ನಿರ್ವಾಯು ಮಾರ್ಜಕವನ್ನು ಬಳಸಿ ಟೋನರನ್ನು ಸ್ವಚ್ಛಗೊಳಿಸುವುದು ಮತ್ತು ಯಂತ್ರವಿನ್ಯಾಸಗಳಿಂದ ಧೂಳನ್ನು ತೆಗೆಯುವುದು, ಮತ್ತು ರಬ್ಬರಿನ ಪೇಪರ್‌-ನಿರ್ವಹಣೆಯ ರೋಲರುಗಳನ್ನು ಬದಲಾಯಿಸುವುದು, ಸ್ವಚ್ಛಗೊಳಿಸುವುದು, ಅಥವಾ ಮರುಸ್ಥಾಪಿಸುವುದು ಇವೇ ಮೊದಲಾದವು ಸೇರಿರುತ್ತವೆ. ಎತ್ತಿಕೊಳ್ಳುವ, ಪೂರೈಸುವ, ಮತ್ತು ಪ್ರತ್ಯೇಕಿಸುವ ಬಹುಪಾಲು ರೋಲರುಗಳು ಒಂದು ರಬ್ಬರ್‌ ಲೇಪನವನ್ನು ಹೊಂದಿದ್ದು, ಅದು ಅಂತಿಮವಾಗಿ ಸವೆಯುವಿಕೆಗೆ ಈಡಾಗುತ್ತದೆ ಮತ್ತು ಜಾರುವಂತಿರುವ ಕಾಗದದ ಧೂಳಿನಿಂದ ಆವರಿಸಲ್ಪಡುತ್ತವೆ. ಬದಲಾಯಿಸುವಿಕೆಯ ರೋಲರುಗಳು ಮುಂದುವರಿಸಲ್ಪಡದೇ ಇರುವ ಅಥವಾ ಅಲಭ್ಯವಾಗಿರುವ ನಿದರ್ಶನಗಳಲ್ಲಿ, ರಬ್ಬರ್‌‌ ರೋಲರುಗಳನ್ನು ಒಂದು ಒದ್ದೆಯಾದ ಕಸರಹಿತ ಚಿಂದಿಬಟ್ಟೆಯಿಂದ ಸ್ವಚ್ಛಗೊಳಿಸಬಹುದು. ವಾಣಿಜ್ಯಸ್ವರೂಪದ ರಾಸಾಯನಿಕ ದ್ರಾವಣಗಳೂ ಸಹ ಲಭ್ಯವಿದ್ದು, ರಬ್ಬರ್‌ನ ಸಂಕೋಚನವನ್ನು ತಾತ್ಕಾಲಿಕವಾಗಿ ಮರುಸ್ಥಾಪಿಸುವಲ್ಲಿ ಇದು ನೆರವಾಗಬಹುದು.

ಬೆಸೆಯುವಿಕೆಯ ಜೋಡಣೆಯು (ಇದನ್ನು ಒಂದು "ಸಂಯೋಜಕ" ಎಂದೂ ಕರೆಯಲಾಗುತ್ತದೆ) ಸಾಮಾನ್ಯವಾಗಿ ಲೇಸರ್‌ ಮುದ್ರಕಗಳಲ್ಲಿನ ಒಂದು ಬದಲಾಯಿಸಬಹುದಾದ ಉಪಭೋಗ್ಯ ವಸ್ತುವಿನ ಭಾಗವಾಗಿ ಪರಿಗಣಿಸಲ್ಪಡುತ್ತದೆ. ಬೆಸೆಯುವಿಕೆಯ ಜೋಡಣೆಯು, ಕಾಗದಕ್ಕೆ ಟೋನರನ್ನು ಕರಗಿಸುವುದಕ್ಕೆ ಮತ್ತು ಸೇರಿಸುವುದಕ್ಕೆ ಸಂಬಂಧಿಸಿದಂತೆ ಹೊಣೆಗಾರನಾಗಿರುತ್ತದೆ. ಬೆಸೆಯುವಿಕೆಯ ಜೋಡಣೆಗಳಿಗೆ ಸಂಬಂಧಿಸಿದಂತೆ ಅನೇಕ ಸಂಭವನೀಯ ನ್ಯೂನತೆಗಳು ಅಸ್ತಿತ್ವದಲ್ಲಿವೆ. ಅವುಗಳೆಂದರೆ: ಸವೆದಿರುವ ಪ್ಲಾಸ್ಟಿಕ್‌ ಡ್ರೈವ್‌ ಗಿಯರುಗಳು, ಕಾಯಿಸುವ ಬಿಡಿಭಾಗಗಳ ವಿದ್ಯುನ್ಮಾನ ವೈಫಲ್ಯ, ಸ್ಥಿರೀಕರಿಸುವ ಹಾಳೆಯ ಸುತ್ತುಕೊಳವೆಗಳು ಹರಿದಿರುವುದು, ಸವೆದಿರುವ ಒತ್ತಡದ ರೋಲರುಗಳು, ಕಾಯಿಸುವ ರೋಲರುಗಳು ಮತ್ತು ಒತ್ತಡದ ರೋಲರುಗಳಲ್ಲಿ ಟೋನರು ಕಟ್ಟಿಕೊಳ್ಳುವಿಕೆ, ಸವೆದಿರುವ ಅಥವಾ ಗೀರುಬಿದ್ದಿರುವ ರೋಲರುಗಳು, ಮತ್ತು ಹಾನಿಗೊಂಡಿರುವ ಕಾಗದ ಸಂವೇದಕಗಳು.

ಕೆಲವೊಂದು ತಯಾರಕರು ಪ್ರತಿಯೊಂದು ಮುದ್ರಕ ಮಾದರಿಗೂ ನಿರ್ದಿಷ್ಟವಾಗಿ ಹೊಂದಿಕೊಳ್ಳುವ ಮುನ್ನೆಚ್ಚರಿಕೆಯ ನಿರ್ವಹಣಾ ಕಿಟ್‌ಗಳನ್ನು ನೀಡುತ್ತಾರೆ; ಇಂಥ ಕಿಟ್‌ಗಳು ಸಾಮಾನ್ಯವಾಗಿ ಒಂದು ಸಂಯೋಜಕವನ್ನು ಒಳಗೊಂಡಿರುತ್ತವೆ. ಅಷ್ಟೇ ಅಲ್ಲ, ಎತ್ತಿಕೊಳ್ಳುವ ರೋಲರುಗಳು, ಪೂರೈಕೆ ಮಾಡುವ ರೋಲರುಗಳು, ವರ್ಗಾಯಿಸುವ ರೋಲರುಗಳು, ವಿದ್ಯುತ್‌ ಪೂರಣದ ರೋಲರುಗಳು, ಮತ್ತು ಪ್ರತ್ಯೇಕಿಸುವ ಪ್ಯಾಡ್‌ಗಳನ್ನು ಕೂಡಾ ಇವು ಒಳಗೊಂಡಿರಲು ಸಾಧ್ಯವಿದೆ.

ಸ್ಟೆಗ್ಯಾನೋಗ್ರಾಫಿಕ್‌ ನಕಲುನಿರ್ಮಾಣ-ನಿರೋಧಕ ("ರಹಸ್ಯ") ಗುರುತುಗಳು

[ಬದಲಾಯಿಸಿ]
ಒಂದು ಬಣ್ಣದ ಲೇಸರ್‌ ಮುದ್ರಕದಿಂದ ಉಂಟುಮಾಡಲ್ಪಟ್ಟ, ಬಿಳಿಯ ಕಾಗದದ ಮೇಲಿನ ಸಣ್ಣ ಹಳದಿ ಚುಕ್ಕೆಗಳ ಒಂದು ಸಚಿತ್ರ ವಿವರಣೆ.

ಅನೇಕ ಆಧುನಿಕ ಬಣ್ಣದ ಲೇಸರ್‌ ಮುದ್ರಕಗಳು ಗುರುತಿಸುವಿಕೆಯ ಉದ್ದೇಶಕ್ಕಾಗಿರುವ ಒಂದು ಹೆಚ್ಚೂಕಮ್ಮಿ ಕಾಣದಿರುವ ಚುಕ್ಕೆಯಾದ ರ್ಯಾಸ್ಟರ್‌‌ನಿಂದ ಮುದ್ರಿತಪ್ರತಿಗಳನ್ನು ಗುರುತುಮಾಡುತ್ತವೆ. ಈ ಚುಕ್ಕೆಗಳು ಹಳದಿಬಣ್ಣದಲ್ಲಿದ್ದು, ಸುಮಾರು 0.1 ಮಿ.ಮೀ.ಯಷ್ಟು ಗಾತ್ರವನ್ನು ಹೊಂದಿದ್ದರೆ, ಒಂದು ರ್ಯಾಸ್ಟರ್‌ ಸುಮಾರು 1 ಮಿ.ಮೀ.ಯಷ್ಟಿರುತ್ತದೆ. ಇದು ಸ್ಪಷ್ಟವಾಗಿ ತಿಳಿಸುವಂತೆ ನಕಲುಗಾರರನ್ನು ಪತ್ತೆಹಚ್ಚುವುದಕ್ಕಾಗಿ U.S. ಸರ್ಕಾರ ಹಾಗೂ ಮುದ್ರಕ ತಯಾರಕರ ನಡುವೆಯಿರುವ ಒಂದು ಗುಪ್ತವ್ಯವಹಾರದ ಪರಿಣಾಮವಾಗಿದೆ.

ಈ ಚುಕ್ಕೆಗಳು ಮುದ್ರಣದ ದಿನಾಂಕ, ಸಮಯ, ಮತ್ತು ಮುದ್ರಕದ ಕ್ರಮಸಂಖ್ಯೆ ಇವೇ ಮೊದಲಾದ ದತ್ತಾಂಶಗಳನ್ನು ದ್ವಿಮಾನ-ಸಂಕೇತಭಾಷೆಯ ದಶಾಂಶದಲ್ಲಿ ಮುದ್ರಣಗೊಂಡ ಪ್ರತಿ ಕಾಗದದ ಹಾಳೆಯ ಮೇಲೆ ಸಂಕೇತ ಭಾಷೆಯಲ್ಲಿ ಬರೆಯುತ್ತವೆ. ಇದರಿಂದಾಗಿ ಖರೀದಿಯ ಸ್ಥಳವನ್ನು, ಮತ್ತು ಕೆಲವೊಮ್ಮೆ ಖರೀದಿದಾರನನ್ನು ಗುರುತಿಸುವುದಕ್ಕಾಗಿ ಸದರಿ ಕಾದದ ತುಣುಕುಗಳ ಜಾಡುಹಿಡಿದು ಹೋಗಲು ತಯಾರಕರಿಗೆ ಅನುವುಮಾಡಿಕೊಟ್ಟಂತಾಗುತ್ತದೆ. ಇಲೆಕ್ಟ್ರಾನಿಕ್‌ ಫ್ರಾಂಟಿಯರ್‌ ಫೌಂಡೇಷನ್‌‌ನಂಥ ಅಂಕೀಯ ಹಕ್ಕುಗಳ ಸಮರ್ಥನಾ ಗುಂಪುಗಳು, ಇವನ್ನು ಮುದ್ರಿಸುವರ ಗೋಪ್ಯತೆ ಮತ್ತು ಅನಾಮಕತೆಯ ಈ ಕೊರೆದುಹಾಕುವಿಕೆಯ ಕುರಿತು ಕಾಳಜಿಗಳನ್ನು ಹೊಂದಿವೆ.[]

ಸುರಕ್ಷತಾ ಅಪಾಯಗಳು, ಆರೋಗ್ಯದ ಅಪಾಯಗಳು, ಹಾಗೂ ಮುನ್ನೆಚ್ಚರಿಕೆಗಳು

[ಬದಲಾಯಿಸಿ]

ಆಘಾತದ ಅಪಾಯಗಳು

[ಬದಲಾಯಿಸಿ]

ಆಧುನಿಕ ಮುದ್ರಕಗಳು ಅನೇಕ ಸುರಕ್ಷತಾ ಕೂಡಿಕೆಗಳು ಮತ್ತು ರಕ್ಷಣಾ ಮಂಡಲಗಳನ್ನು ಒಳಗೊಂಡಿರುತ್ತವೆಯಾದರೂ, ಲೇಸರ್‌ ಮುದ್ರಕವೊಂದರೊಳಗಿರುವ ಹಲವಾರು ರೋಲರುಗಳು, ತಂತಿಗಳು, ಮತ್ತು ಲೋಹದ ಸಂಪರ್ಕಗಳಲ್ಲಿ ಒಂದು ಉನ್ನತ ಮಟ್ಟದ ವೋಲ್ಟೇಜು ಅಥವಾ ಒಂದು ಉಳಿಕೆಯ ವೋಲ್ಟೇಜು ಇರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ನೋವಿನಿಂದ ಕೂಡಿದ ವಿದ್ಯುದಾಘಾತದ ಸಂಭವನೀಯತೆಯನ್ನು ತಗ್ಗಿಸುವ ಸಲುವಾಗಿ, ಈ ಬಿಡಿಭಾಗಗಳನ್ನು ಅನಾವಶ್ಯಕವಾಗಿ ಮುಟ್ಟುವುದನ್ನು ತಪ್ಪಿಸುವುದರ ಕಡೆ ಎಚ್ಚರಿಕೆ ವಹಿಸಬೇಕು.

ಟೋನರನ್ನು ಸ್ವಚ್ಛಗೊಳಿಸುವಿಕೆ

[ಬದಲಾಯಿಸಿ]

ಟೋನರು ಕಣಗಳು ಸ್ಥಾಯೀವಿದ್ಯುತ್ತಿನ ಗುಣಲಕ್ಷಣಗಳನ್ನು ಹೊಂದಿರುವಂತೆ ವಿನ್ಯಾಸಗೊಳಿಸಲ್ಪಟ್ಟಿರುತ್ತವೆ ಮತ್ತು ಇತರ ಕಣಗಳು, ವಸ್ತುಗಳು, ಅತಥವಾ ಸಾಗಣಾ ವ್ಯವಸ್ಥೆಗಳು ಹಾಗೂ ನಿರ್ವಾಯು ಮಾರ್ಜಕ ಮೃದುಕೊಳವೆಗಳಿಗೆ ಅವು ಉಜ್ಜಲ್ಪಟ್ಟಾಗ, ಸ್ಥಾಯೀ-ವಿದ್ಯುತ್ತಿನ ವಿದ್ಯುದಾವೇಶಗಳನ್ನು ಅವು ಬೆಳೆಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಈ ಕಾರಣದಿಂದಾಗಿ ಮತ್ತು ಇವುಗಳ ಸಣ್ಣ ಕಣದ ಗಾತ್ರದಿಂದಾಗಿ, ಒಂದು ಸಾಂಪ್ರದಾಯಿಕವಾದ ಮನೆಬಳಕೆಯ ನಿರ್ವಾಯು ಮಾರ್ಜಕವನ್ನು ಬಳಸಿ ಟೋನರನ್ನು ನಿರ್ವಾತ ಶುದ್ಧೀಕರಣ ಪ್ರಕ್ರಿಯೆಗೆ ಈಡುಮಾಡಬಾರದು. ವಿದ್ಯುತ್‌ ಪೂರಿತ ಟೋನರು ಕಣಗಳಿಂದ ಬರುವ ಸ್ಥಾಯೀ-ಹೊರಸೂಸುವಿಕೆಯು, ನಿರ್ವಾಯು ಮಾರ್ಜಕದ ಶುದ್ಧೀಕರಣದ ಚೀಲದಲ್ಲಿನ ಧೂಳಿಗೆ ಬೆಂಕಿಹೊತ್ತಿಸಬಲ್ಲದು ಅಥವಾ ಒಂದು ವೇಳೆ ಸಾಕಷ್ಟು ಪ್ರಮಾಣದಲ್ಲಿರುವ ಟೋನರು ವಾಯುವಾಹಿತವಾಗಿದ್ದಲ್ಲಿ ಒಂದು ಸಣ್ಣ ಸ್ಫೋಟವನ್ನು ಸೃಷ್ಟಿಸಬಹುದು. ಇದು ನಿರ್ವಾಯು ಮಾರ್ಜಕದ ಸ್ವಚ್ಛಕಾರಕವನ್ನು ಹಾನಿಗೊಳಿಸಬಹುದು ಅಥವಾ ಬೆಂಕಿಯನ್ನು ಹೊತ್ತಿಸಬಹುದು. ಇದರ ಜೊತೆಗೆ, ಟೋನರು ಕಣಗಳು ತುಂಬಾ ಸೂಕ್ಷ್ಮವಾಗಿರುವುದರಿಂದ, ಅವು ಸಾಂಪ್ರದಾಯಿಕ ಗೃಹಬಳಕೆಯ ನಿರ್ವಾಯು ಮಾರ್ಜಕದ ಶುದ್ಧೀಕರಣ ಸೋಸುಗ ಚೀಲಗಳಿಂದ ಕಳಪೆಮಟ್ಟದಲ್ಲಿ ಸೋಸಲ್ಪಡುತ್ತವೆ ಮತ್ತು ಮೋಟಾರಿನ ಮೂಲಕ ಬೀಸುತ್ತವೆ ಇಲ್ಲವೇ ಮತ್ತೆ ಕೋಣೆಯೊಳಗೆ ಜಮಾವಣೆಗೊಳ್ಲುತ್ತವೆ.

ಟೋನರು ಕಣಗಳನ್ನು ಬೆಚ್ಚಗಾಗಿಸಿದಾಗ ಅವು ಕರಗುತ್ತವೆ (ಅಥವಾ ಬೆಸೆದುಕೊಳ್ಳುತ್ತವೆ). ಸಣ್ಣಪ್ರಮಾನದ ಟೋನರು ಸುರಿತಗಳನ್ನು ಒಂದು ತಣ್ಣಗಿನ, ಒದ್ದೆಬಟ್ಟೆಯೊಂದಿಗೆ ಒರೆಸಿಹಾಕಬಹುದು.

ಒಂದು ವೇಳೆ ಟೋನರು ಸುರಿತಗಳು ಲೇಸರ್‌ ಮುದ್ರಕದೊಳಗೆ ಸೇರಿಕೊಂಡರೆ, ಅದನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ಒಂದು ವಿಶೇಷ ಬಗೆಯ ನಿರ್ವಾಯು ಮಾರ್ಜಕದ ಶುಭ್ರಕಾರಿಯನ್ನು ಬಳಸಬೇಕಾಗಬಹುದು. ಈ ಉಪಕರಣವು ವಿದ್ಯುತ್ತಿನಿಂದ ವಹನೀಯವಾಗಿರುವ ಮೆದುಗೊಳವೆ ಹಾಗೂ ಒಂದು ಹೆಚ್ಚಿನ ಕಾರ್ಯಪಟುತ್ವದ (HEPA) ಸೋಸುಗವನ್ನು ಒಳಗೊಂಡಿರುತ್ತದೆ. ಇವು ESD-ಸುರಕ್ಷಿತ (ಇಲೆಕ್ಟ್ರೋಸ್ಟಾಟಿಕ್‌-ಡಿಸ್‌ಚಾರ್ಜ್‌-ಸೇಫ್‌) ಅಥವಾ ಟೋನರು ನಿರ್ವಾಯು ಮಾರ್ಜಕಗಳೆಂದು ಕರೆಯಲ್ಪಡುತ್ತವೆ. ದೊಡ್ಡ ಪ್ರಮಾಣದ ಟೋನರು ಸುರಿತಗಳನ್ನು ಸ್ವಚ್ಛಗೊಳಿಸುವುದಕ್ಕಾಗಿ ಇದೇ ಬಗೆಯ HEPA-ಸೋಸುಗದಿಂದ ಒಡಗೂಡಿದ ನಿರ್ವಾಯು ಮಾರ್ಜಕಗಳನ್ನು ಬಳಸಬೇಕು.

ನೀರಿನಿಂದ-ತೊಳೆಯಬಹುದಾದ ಬಹುತೇಕ ವಸ್ತ್ರದಿಂದ ಟೋನರನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿರುತ್ತದೆ. ಟೋನರು ಒಂದು ಮೇಣದ ಅಥವಾ ಪ್ಲಾಸ್ಟಿಕ್‌ ಪೌಡರಾಗಿದ್ದು ಕಡಿಮೆ ಮಟ್ಟದ ಕರಗುವಿಕೆಯ ಉಷ್ಣತೆಯನ್ನು ಹೊಂದಿರುವುದರಿಂದ, ಸ್ವಚ್ಛಗೊಳಿಸುವ ಪ್ರಕ್ರಿಯೆಯ ಅವಧಿಯಲ್ಲಿ ಇದುನ್ನು ತಂಪಾಗಿರಿಸಿರಬೇಕು. ಒಂದು ಟೋನರಿನಿಂದ ಕಲೆಯಾಗಿರುವ ಉಡುಪನ್ನು ತಣ್ಣಗಿನ ನೀರಿನಲ್ಲಿ ಒಗೆಯುವುದು ಅನೇಕ ವೇಳೆ ಯಶಸ್ವೀ ಪ್ರಯತ್ನವಾಗಿ ಪರಿಣಮಿಸುತ್ತದೆ. ಬೆಚ್ಚಗಿನ ನೀರೂ ಸಹ ಒಂದು ಕಾಯಂ ಕಲೆಯುಂಟುಮಾಡುವ ಸಂಭವವಿರುತ್ತದೆ. ಉಡುಪನ್ನು ಬಟ್ಟೆ ಒಗೆಯುವ ಯಂತ್ರಕ್ಕೆ ಹಾಕುವುದಕ್ಕೆ ಮುಂಚಿತವಾಗಿ ಅದರೊಳಗೆ ತಣ್ಣಗಿನ ನೀರನ್ನು ತುಂಬಿಸಬೇಕು. ಎರಡು ಆವರ್ತನಗಳ ಮೂಲಕ ಒಗೆಯುವುದರಿಂದ ಯಶಸ್ಸಿನ ಅವಕಾಶಗಳು ಸುಧಾರಿಸುತ್ತವೆ. ಮೊದಲ ಆವರ್ತನದಲ್ಲಿ ಕೈಯಲ್ಲಿ ಒಗೆಯುವ ಬಿಲ್ಲೆ ಮಾರ್ಜಕವನ್ನು ಬಳಸಬಹುದು ಮತ್ತು ಎರಡನೇ ಆವರ್ತನದಲ್ಲಿ ಎಂದಿನ ದೋಬಿಖಾನೆ ಮಾರ್ಜಕವನ್ನು ಬಳಸಬಹುದು. ಮೊದಲ ಆವರ್ತನದ ಜಾಲಾಡುವಿಕೆಯ ನೀರಿನಲ್ಲಿ ತೇಲುತ್ತಿರುವ ಉಳಿಕೆಯ ಟೋನರು ಉಡುಪಿನಲ್ಲೇ ಉಳಿದುಬಿಡುತ್ತದೆ ಮತ್ತು ಇದು ಕಾಯಮ್ಮಾಗಿ ಬೂದುಬಣ್ಣಕ್ಕೆ ತಿರುಗಲು ಕಾರಣವಾಗಬಹುದು. ಎಲ್ಲಾ ಟೋನರು ಅಂಶವೂ ತೊಡೆದುಹಾಕಲ್ಪಟ್ಟಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವವರೆಗೂ ಬಟ್ಟೆಗಳ ಶುಷ್ಕಕಾರಿಯೊಂದನ್ನು ಬಳಸಬಾರದು ಅಥವಾ ಇಸ್ತ್ರಿಯನ್ನು ಮಾಡಬಾರದು.

ಓಝೋನ್‌ ಅಪಾಯಗಳು

[ಬದಲಾಯಿಸಿ]

ಮುದ್ರಣ ಪ್ರಕ್ರಿಯೆಯ ಒಂದು ಸ್ವಾಭಾವಿಕ ಭಾಗವಾಗಿರುವ ಮುದ್ರಕದೊಳಗಿನ ಉನ್ನತ ವೋಲ್ಟೇಜುಗಳು, ಒಂದು ಪರಿವೇಷದ ಹೊರಸೂಸುವಿಕೆಯನ್ನು ಉಂಟುಮಾಡಬಲ್ಲವಾಗಿರುತ್ತವೆ. ಇದು ಅಯಾನೀಕೃತ ಆಮ್ಲಜನಕ ಮತ್ತು ಸಾರಜನಕದ ಒಂದು ಸಣ್ಣ ಪ್ರಮಾಣದ ಹುಟ್ಟುವಿಕೆಗೆ ಕಾರಣವಾಗಿ, ಅದು ಓಝೋನ್‌ ಮತ್ತು ಸಾರಜನಕದ ಆಕ್ಸೈಡುಗಳನ್ನು ರೂಪಿಸುವಂತಾಗುತ್ತದೆ. ಬೃಹತ್‌ ಗಾತ್ರದ ವಾಣಿಜ್ಯ ಮುದ್ರಕಗಳು ಮತ್ತು ನಕಲುಯಂತ್ರಗಳಲ್ಲಿರುವ ವಾಯು ನಿಷ್ಕಾಸ ಹರಿವಿನಲ್ಲಿರುವ ಒಂದು ಇಂಗಾಲದ ಸೋಸುಗವು, ಕಚೇರಿಯ ಪರಿಸರದ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಈ ಆಕ್ಸೈಡುಗಳನ್ನು ಒಡೆಯುತ್ತವೆ.

ಆದಾಗ್ಯೂ, ವಾಣಿಜ್ಯ ಮುದ್ರಕಗಳಲ್ಲಿನ ಸೋಸುವಿಕೆಯ ಪ್ರಕ್ರಿಯೆಯಿಂದ ಒಂದಷ್ಟು ಓಝೋನ್‌ ತಪ್ಪಿಸಿಕೊಳ್ಳುತ್ತದೆ ಮತ್ತು ಅನೇಕ ಚಿಕ್ಕಗಾತ್ರದ ಗ್ರಾಹಕ-ಬಳಕೆಯ ಮುದ್ರಕಗಳಲ್ಲಿ ಓಝೋನ್‌ ಸೋಸುಗಗಳನ್ನು ಬಳಸಲಾಗುವುದಿಲ್ಲ. ಒಂದು ಚಿಕ್ಕದಾದ, ಕಳಪೆ-ಮಟ್ಟದಲ್ಲಿ ಗಾಳಿ ಬೆಳಕಿನ ವ್ಯವಸ್ಥೆಯಿರುವ ಜಾಗದಲ್ಲಿ ಒಂದು ಸುದೀರ್ಘ ಅವಧಿಯವರೆಗೆ ಒಂದು ಲೇಸರ್‌ ಮುದ್ರಕ ಅಥವಾ ನಕಲುಯಂತ್ರವನ್ನು ಬಳಸಿದಾಗ, ಓಝೋನ್‌ನ ಘಾಟುವಾಸನೆ ಅಥವಾ ಕಿರಿಕಿರಿಯು ಗಮನಕ್ಕೆ ಬರುವಷ್ಟು ಮಟ್ಟಕ್ಕೆ ಈ ಅನಿಲಗಳು ರೂಪುಗೊಳ್ಳಬಹುದು. ಆರೋಗ್ಯಕ್ಕೆ ಹಾನಿಕಾರಕವಾಗಿರುವ ಒಂದು ಅಂಶವನ್ನು ಸೃಷ್ಟಿಸುವುದಕ್ಕಾಗಿರುವ ಸಂಭವನೀಯತೆಯು ಪರಮಾವಧಿಯ ನಿದರ್ಶನಗಳಲ್ಲಿ ತಾತ್ತ್ವಿಕವಾಗಿ ಸಾಧ್ಯವಿದೆ.[]

ಉಸಿರಾಟದ ಆರೋಗ್ಯದ ಅಪಾಯಗಳು

[ಬದಲಾಯಿಸಿ]

ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್‌ನಲ್ಲಿ ಇತ್ತೀಚೆಗೆ ನಡೆಸಲಾದ ಒಂದು ಅಧ್ಯಯನದ ಅನುಸಾರ, ಕೆಲವೊಂದು ಮುದ್ರಕಗಳು ಮೈಕ್ರೋಮೀಟರ್‌‌‌‌ಗಿಂತ ಕೆಳಗಿನ ಕಣಗಳನ್ನು ಹೊರಸೂಸುತ್ತವೆ. ಈ ಕಣಗಳು ಉಸಿರಾಟದ ಕಾಯಿಲೆಗಳೊಂದಿಗೆ ಸಂಬಂಧವನ್ನು ಹೊಂದಿರಬಹುದೆಂದು ಕೆಲವರು ಸಂಶಯಿಸುತ್ತಾರೆ.[] ಕ್ವೀನ್ಸ್‌ಲೆಂಡ್‌ ಯೂನಿವರ್ಸಿಟಿ ಆಫ್‌ ಟೆಕ್ನಾಲಜಿಯ ಅಧ್ಯಯನದಲ್ಲಿ ಮೌಲ್ಯಮಾಪನಮಾಡಲಾದ 63 ಮುದ್ರಕಗಳ ಪೈಕಿ, 17 ಸದೃಢವಾದ ಮುದ್ರಕಗಳ ಸೂಸುಗಗಳು ಹೆವ್ಲೆಟ್‌-ಪ್ಯಾಕರ್ಡ್‌ ಕಂಪನಿಯಿಂದ ತಯಾರಿಸಲ್ಪಟ್ಟಿದ್ದರೆ, ಒಂದನ್ನು ತೋಷಿಬಾ ಕಂಪನಿಯು ತಯಾರಿಸಿದ್ದುದು ಕಂಡುಬಂತು. ಆದಾಗ್ಯೂ, ಅಧ್ಯಯನಕ್ಕೆ ಒಳಪಡಿಸಲಾದ ಯಂತ್ರಗಳ ಸಂಖ್ಯೆಯು ಸದರಿ ಕಟ್ಟದಲ್ಲಿನ ಸ್ಥಳದಲ್ಲಿ ಲಭ್ಯವಿದ್ದ ಯಂತ್ರಗಳು ಮಾತ್ರವೇ ಆಗಿದ್ದವು ಮತ್ತು ನಿರ್ದಿಷ್ಟ ತಯಾರಕರೆಡೆಗೆ ಪಕ್ಷಪಾತವನ್ನು ಅವು ತೋರುವಂತೆ ಕಂಡವು. ಲೇಖಕರು ಅಭಿಪ್ರಾಯ ವ್ಯಕ್ತಪಡಿಸಿರುವ ಪ್ರಕಾರ, ಕಣದ ಹೊರಸೂಸುವಿಕೆಗಳು ಒಂದೇ ಮಾದರಿಯ ಯಂತ್ರಗಳ ನಡುವಣ ಗಣನೀಯವಾಗಿ ಬದಲಾಗುತ್ತಾ ಹೋದವು. ಕ್ವೀನ್ಸ್‌ಲೆಂಡ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಮೊರಾವ್ಸ್ಕಾ ಎಂಬಾತನ ಪ್ರಕಾರ, ಒಂದು ಉರಿಯುತ್ತಿರುವ ಸಿಗರೇಟು ಹೊಮ್ಮಿಸುವ ಪ್ರಮಾಣದಷ್ಟೇ ಕಣಗಳನ್ನು ಒಂದು ಮುದ್ರಕವು ಹೊರಸೂಸಿತು.[೧೦]

"ಅತಿಸೂಕ್ಷ್ಮ ಕಣಗಳನ್ನು ಒಳಗೆಳೆದುಕೊಳ್ಳುವುದರಿಂದ ಉಂಟಾಗುವ ಆರೋಗ್ಯದ ಪರಿಣಾಮಗಳು ಕಣದ ಸಂಯೋಜನೆಯ ಮೇಲೆ ಅವಲಂಬಿತವಾಗಿರುತ್ತವೆ. ಆದರೆ ಉಸಿರಾಟದ ಕಿರಿಕಿರಿಯಿಂದ ಮೊದಲ್ಗೊಂಡು, ಹೃದಯರಕ್ತನಾಳದ ಸಮಸ್ಯೆಗಳು ಅಥವಾ ಕ್ಯಾನ್ಸರ್‌‌‌‌ನಂಥ ಹೆಚ್ಚು ತೀವ್ರಸ್ವರೂಪದ ಕಾಯಿಲೆಗಳವರೆಗೂ ಇದರ ಫಲಿತಾಂಶಗಳ ವ್ಯಾಪ್ತಿಯಿರುತ್ತದೆ." (ಕ್ವೀನ್ಸ್‌ಲೆಂಡ್‌ ಯೂನಿವರ್ಸಿಟಿ ಆಫ್‌ ಟೆಕ್ನಾಲಜಿ).[೧೧]

ಜಪಾನ್‌ನಲ್ಲಿ 2006ರಲ್ಲಿ ಕೈಗೊಳ್ಳಲಾದ ಒಂದು ಅಧ್ಯಯನವು ಕಂಡುಕೊಂಡ ಪ್ರಕಾರ, ಲೇಸರ್‌ ಮುದ್ರಕಗಳು ಸ್ಟೈರೀನ್‌, ಕ್ಸೈಲೀನ್‌ಗಳು, ಮತ್ತು ಓಝೋನ್‌‌ನ ಸಾಂದ್ರತೆಗಳನ್ನು ಹೆಚ್ಚಿಸುತ್ತವೆ, ಮತ್ತು ಇಂಕ್‌-ಜೆಟ್‌ ಮುದ್ರಕಗಳು ಪೆಂಟನಾಲ್‌ನ್ನು ಹೊರಹೊಮ್ಮಿಸುತ್ತವೆ.[೧೨]

ಮುಹ್ಲೆ ಮತ್ತು ಇತರರು (1991) ವರದಿ ಮಾಡಿದ ಪ್ರಕಾರ, ನಕಲುಮಾಡುವ ಟೋನರು, ಇಂಗಾಲಗಪ್ಪು, ಟೈಟಾನಿಯಂ ಡೈಯಾಕ್ಸೈಡ್‌ ಮತ್ತು ಸಿಲಿಕಾದಿಂದ ರೂಪುಗೊಂಡಿದ್ದ ಪ್ಲಾಸ್ಟಿಕ್‌ ಧೂಳು ಇವುಗಳನ್ನು ದೀರ್ಘಕಾಲದಿಂದ ಒಳಗೆಳೆದುಕೊಂಡಿದ್ದಕ್ಕೆ ಸಂಬಂಧಿಸಿದ ಪ್ರತಿಸ್ಪಂದನೆಗಳು ಅಥವಾ ಪ್ರತಿಕ್ರಿಯೆಗಳು, ಟೈಟಾನಿಯಂ ಡೈಯಾಕ್ಸೈಡ್‌ ಮತ್ತು ಡೀಸೆಲ್‌ ನಿಷ್ಕಾಸವನ್ನು ಗುಣಾತ್ಮಕವಾಗಿ ಹೋಲುವಂತಿದ್ದವು.[೧೩]

ಇವನ್ನೂ ನೋಡಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. Edwin D. Reilly (2003). Milestones in Computer Science and Information Technology. Greenwood Press. ISBN 1573565210.
  2. Roy A. Allan (2001). A History of the Personal Computer: The People and the Technology. Allan Publishing. ISBN 0968910807.
  3. HP ವರ್ಚುಯಲ್‌ ಮ್ಯೂಸಿಯಂ: ಹೆವ್ಲೆಟ್‌-ಪ್ಯಾಕರ್ಡ್‌ ಲೇಸರ್‌ಜೆಟ್‌ ಪ್ರಿಂಟರ್‌‌, 1984
  4. ೪.೦ ೪.೧ HP LaserJet 3050/3052/3055 All-in-One Service Manual (4 ed.). United States: Hewlett Packard. 2006. p. 99.
  5. U.S. ಸ್ವಾಮ್ಯದ ಹಕ್ಕುಪತ್ರ 5231458 - ಹಿಂದೆ ಉಪಯೋಗಿಸಲ್ಪಟ್ಟ ಸ್ಫುಟೀಕಾರಕವನ್ನು ಬಳಸಿಕೊಳ್ಳುವ ಮುದ್ರಕ
  6. "fixyourownprinter.comನಲ್ಲಿರುವ ಸಹಜನ್ಯ ತ್ಯಾಜ್ಯದ ಟೋನರಿನ ಮರುಬಳಕೆಯ ಪ್ರಕ್ರಿಯೆಯ ಸರಳೀಕೃತ ವಿವರಣೆ". Archived from the original on 2010-06-19. Retrieved 2010-05-13.
  7. ಗೋಪ್ಯತೆಗೆಯೆಡೆಗಿನ ಇಲೆಕ್ಟ್ರಾನಿಕ್‌ ಫ್ರಾಂಟಿಯರ್‌ ಫೌಂಡೇಷನ್‌ ಬೆದರಿಕೆ
  8. "Photocopiers and Laser Printers Health Hazards".
  9. "Particle Emission Characteristics of Office Printers" (PDF). Archived from the original (PDF) on 2007-09-28. Retrieved 2010-05-13.
  10. "Particle Emission Characteristics of Office Printers".
  11. "Study reveals the dangers of printer pollution".
  12. "Are Laser Printers Hazardous to Your Health? - Yahoo! News".[ಶಾಶ್ವತವಾಗಿ ಮಡಿದ ಕೊಂಡಿ]
  13. "11.6 METALS" (PDF). 070821 epa.gov

ಬಾಹ್ಯ ಕೊಂಡಿಗಳು

[ಬದಲಾಯಿಸಿ]