ಆರ್ಕುಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Expression error: Unexpected < operator.

Orkut
ಚಿತ್ರ:Orkut - login.png
The new Orkut interface
URLhttp://www.orkut.com/
ಧ್ಯೇಯWho do you know?
ವಾಣಿಜ್ಯದ?Yes
ತಾಣದ ಗುಂಪುSocial Network Service
ದಾಖಲಿಸಿದrequired
ಲಭ್ಯವಾದlanguage(s)Portuguese
ಹಿಂದಿ
Marathi
English
Tamil
ಸ್ಪ್ಯಾನಿಷ್
French
Malayalam
Kannada and other 38 languages
ಮಾಲೀಕGoogle
ನಿರ್ಮಾತೃರುOrkut Büyükkökten
ಪ್ರಾರಂಭಿಸಿದ22 January 2004
Alexa rank107[೧]
ಸಧ್ಯದ ಸ್ತಿತಿActive
Visual appearance of the "New Orkut".

ಆರ್ಕುಟ್ ಎಂಬುದು ಉಚಿತವಾಗಿ ಬಳಸಬಹುದಾದ ಸಾಮಾಜಿಕ ಜಾಲ ತಾಣವಾಗಿದ್ದು, ಇದನ್ನು ಗೂಗಲ್ ಸಂಸ್ಥೆಯು ಇದರ ಮಾಲೀಕತ್ವ ಹೊಂದಿದ್ದು, ಇದನ್ನು ನಿರ್ವಹಿಸುತ್ತಿದೆ. ಬಳಕೆದಾರರು ಹೊಸ ಸ್ನೇಹಿತರನ್ನು ಹೊಂದಲು ಮತ್ತು ಇರುವ ಸಂಬಂಧಗಳನ್ನು ಕಾಪಾಡಿಕೊಂಡು ಹೋಗಲು ಅನುಕೂಲಕರವಾಗುವ ರೀತಿಯಲ್ಲಿ ಈ ಸೇವೆಯು ರಚನೆಗೊಂಡಿದೆ. ಈ ಜಾಲತಾಣಕ್ಕೆ ಇದರ ಸೃಷ್ಟಿಕರ್ತ ಹಾಗೂ Googleನ ಉದ್ಯೋಗಿ ಆರ್ಕುಟ್ ಬಯುಕ್ಕುಟಿನ್ ಅವರ ಹೆಸರನ್ನೇ ಇಡಲಾಗಿದೆ. ಫೇಸ್‌ಬುಕ್ ಮತ್ತು ಮೈಸ್ಪೇಸ್ಗಳ ಪ್ರತಿಸ್ಪರ್ಧೆಯ ಕಾರಣದಿಂದಾಗಿ ಆರ್ಕುಟ್ ಸಂಯುಕ್ತ ಸಂಸ್ಥಾನದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆಯಲಿಲ್ಲವಾದರೂ ಭಾರತ ಮತ್ತು ಬ್ರೆಜಿಲ್‌‌ಗಳಲ್ಲಿ ಹೆಚ್ಚು ವೀಕ್ಷಿಸುವ ಜಾಲತಾಣಗಳಲ್ಲಿ ಇದು ಒಂದಾಗಿದೆ[೨]. ವಾಸ್ತವವಾಗಿ, ಮೇ 2009ರ ಪ್ರಕಾರ ಆರ್ಕುಟ್ ಬಳಕೆದಾರರಲ್ಲಿ 49.83% ಬ್ರೆಜಿಲ್‌ನವರಾದರೆ, ಅನುಗುಣವಾಗಿ 17.51% ಬಳಕೆದಾರರು ಭಾರತದವರಾಗಿದ್ದಾರೆ[೩]. ಆರ್ಕುಟ್‌ ಮೂಲತ: ಪ್ರಾರಂಭವಾಗಿದ್ದು ಕ್ಯಾಲಿಫೋರ್ನಿಯಾದಲ್ಲಿ. ಆಗಸ್ಟ್ 2008ರಲ್ಲಿ ಆರ್ಕುಟ್ ತಾಣವನ್ನು ಬ್ರೆಜಿಲ್‌ಬೆಲೊ ಹಾರಿಜೊಂಟೆಯಲ್ಲಿನ Google Brazil ಪೂರ್ಣಪ್ರಮಾಣದಲ್ಲಿ ನಿರ್ವಹಣೆ ಮಾಡಲಿದೆ ಎಂದು Google ಘೋಷಿಸಿತು. ಬ್ರೆಜಿಲ್‌ನಲ್ಲಿ ಬಳಕೆದಾರರು ಹೆಚ್ಚಿದ್ದರಿಂದ ಮತ್ತು ಕಾನೂನು ಸಂಬಂಧಿ ವಿವಾದಗಳು ಹೆಚ್ಚಿದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.[೪][೫][೬][೭]

ಇತಿಹಾಸ[ಬದಲಾಯಿಸಿ]

ಟರ್ಕಿ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಆರ್ಕುಟ್‌ ಬಯುಕ್ಕುಟಿನ್‌ ಅವರ ಸ್ವತಂತ್ರ ಯೋಜನೆಯಾಗಿ ಜನವರಿ ೨೨, ೨೦೦೪ರಂದು ಆರ್ಕುಟ್‌ ಅನ್ನು ಉಧ್ಘಾಟನೆ ಮಾಡಲಾಯಿತು. ಈ ಸಮುದಾಯದ ಸದಸ್ಯತ್ವವು ಆರಂಭದಲ್ಲಿ ಕೇವಲ ಆಮಂತ್ರಣವಿದ್ದರೆ ಮಾತ್ರ ಪಡೆಯಬಹುದಾಗಿತ್ತು. ಮೊದಲ ವರ್ಷದಲ್ಲಿ, ಸಂಯುಕ್ತ ಸಂಸ್ಥಾನವು ಹೆಚ್ಚು ಬಳಕೆದಾರರನ್ನು ಹೊಂದಿತ್ತು. ಬಾಯಿ ಮಾತಿನ ಪ್ರಚಾರದಿಂದ ಇದನ್ನು ಅಳವಡಿಸಿಕೊಂಡ ಅನೇಕ ಬ್ರೆಜಿಲಿಯನ್ನರು ಬ್ಲಾಗ್‌ಗಳ ಗುಂಪಿ(blogosphere)ನಲ್ಲಿಯ ಶೀಘ್ರ ಚಟುವಟಿಕೆಯ ಮೂಲಕ ಅನೇಕ ಸ್ನೇಹಿತರನ್ನು ಆಮಂತ್ರಿಸತೊಡಗಿದರು. ಅಲ್ಪ ಸಮಯದಲ್ಲೇ ಬ್ರೆಜಿಲ್‌ನಲ್ಲಿ ಆರ್ಕುಟ್‌ ಬಳಕೆದಾರರ ಸಂಖ್ಯೆಯು ಯು.ಎಸ್‌ಗಿಂತ ಹೆಚ್ಚಾಯಿತು ಹಾಗೂ ಇದು ಬ್ರೆಜಿಲ್‌ನಲ್ಲಿ ತುಂಬಾ ಜನಪ್ರಿಯತೆಯನ್ನು ಗಳಿಸಿತು. ಆಗ ಅಮೇರಿಕನ್ನರು ಈ ಸೇವೆ ಬಳಸುವುದನ್ನು ನಿಲ್ಲಿಸಿ, ಇದೇ ರೀತಿಯ ಬೇರೆ ತಾಣಗಳಾದ MySpace ಮತ್ತು ಫ್ರೆಂಡ್‌ಸ್ಟರ್‌‍ ಗಳನ್ನು ಬಳಸಲು ಆರಂಭಿಸಿದರು. ಬ್ರೆಜಿಲಿಯನ್ನರ[೮][೯][೧೦] ಬಗೆಗಿನ ಕೆಲವು ವಿಮರ್ಶೆಯನ್ನೊಳಗೊಂಡ ಈ ಸಂಗತಿಯನ್ನು ಇಂಗ್ಲೀಷ್ ಬ್ಲಾಗೋಸ್ಪಿಯರ್ ಒಳಗೊಂಡಿತ್ತು. ಏಕೆಂದರೆ ಅವರು ಇಂಗ್ಲೀಷ್‌ಗಿಂತ ಹೆಚ್ಚಾಗಿ ತಮ್ಮ ಸ್ಥಳೀಯ ಭಾಷೆಯಾದ ಪೋರ್ಚುಗೀಸ್‌ನಲ್ಲಿ ಸಂವಹನವನ್ನು ನಡೆಸುತ್ತಿದ್ದರು. ಆ ಸಮಯದಲ್ಲಿ, ಬ್ರೆಜಿಲಿಯನ್ ಬಳಕೆದಾರರಿಂದ ಆರ್ಕುಟ್‌‍ ಬೆಳವಣಿಗೆ ಹೊಂದಿತ್ತು, ಆರಂಭದಲ್ಲಿ ಮೊದಲಿಗೆ ಎಲ್ಲಾ ಬಳಕೆದಾರರಿಗೂ ನೊಂದಣಿ ಮುಕ್ತವಾಗಿತ್ತು ಮತ್ತು ಇದು ಬ್ರೆಜಿಲ್‌ನಲ್ಲಿರುವ ಹೆಚ್ಚು ಪ್ರಸಿದ್ದಿ ಪಡೆದ ಜಾಲತಾಣಗಳಲ್ಲಿ ಒಂದಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಸೃಷ್ಟಿಕರ್ತ ಆರ್ಕುಟ್ ಬಯುಕ್ಕುಕ್ಟಿನ್‌‍ರವರು ಈ ತಾಣವು ಬ್ರೆಜಿಲ್ನಲ್ಲಿ ಇಷ್ಟೊಂದು ಯಶಸ್ವಿಯಾಗಲು ಕಾರಣವೆನೆಂದು ತಿಳಿಯಲು ಆ ದೇಶಕ್ಕೆ 2007[೧೧] ರಲ್ಲಿ ಭೇಟಿ ನೀಡಿದ್ದರು. 2007ರ ಹೊತ್ತಿಗೆ ಈ ತಾಣದಲ್ಲಿ ಅಧಿಕ ಸಂಖ್ಯೆಯಲ್ಲಿದ್ದ ಬ್ರೆಜಿಲಿಯನ್ನರಿಂದ ಯಾವುದೇ ಭಯ ಹುಟ್ಟಿಸದ ರೀತಿಯಲ್ಲಿ ಆರ್ಕುಟ್ ಹೆಚ್ಚು ಭಾರತೀಯರನ್ನು ತನ್ನತ್ತ ಸೆಳೆಯಲು ಪ್ರಾರಂಭಿಸಿತು.

ಇಂದಿನ ಪ್ರಕಾರ ಒಂದುಕಡೆಯಿಂದ ಇನ್ನೊಂದು ಕಡೆಗೆ ಚಲಿಸುವ ಬಳಕೆದಾರರಿಗೆ ಆರ್ಕುಟ್ ಒಂದು ಸರಳೀಕೃತ ತಾಣವಾದ "m.orkut.com" ನ್ನು ಒದಗಿಸಿದೆ. 2008 ರಲ್ಲಿ "ವ್ಯೂ ಆರ್ಕುಟ್‌ ಇನ್‌ ಲೈಟರ್ ಆವೃತ್ತಿ‍" ಆವರಣದ ಬಳಕೆಯೊಂದಿಗೆ ನಿಧಾನ ಗತಿಯ ಅಂತರ್ಜಾಲ ಸಂಪರ್ಕದ ಮೂಲಕ ಬಳಕೆದಾರರು ಬಳಸಿಕೊಳ್ಳಬಹುದಾದ ಆರ್ಕುಟ್‌ನ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಯಿತು.

ವೈಶಿಷ್ಟ್ಯಗಳು[ಬದಲಾಯಿಸಿ]

ಮಾರ್ಚ 31, 2004ರಲ್ಲಿ ಆರ್ಕುಟ್‌ನಲ್ಲಿ ಜನದಟ್ಟಣೆ
ಸಂಯುಕ್ತ ಸಂಸ್ಥಾನ
51.36%
ಜಪಾನ್
7.74%
ಬ್ರೆಜಿಲ್
5.16%
ನೆದರ್ಲ್ಯಾಂಡ್ಸ್
4.10%
ಯುನೈಟೆಡ್ ಕಿಂಗ್‌ಡಂ
3.72%
ಟೆಂಪ್ಲೇಟು:Country data World ಇತರೆ
27.92%
ಮೇ 13, 2009ರಲ್ಲಿ ಆರ್ಕುಟ್‌ನಲ್ಲಿ ಸಂಚಾರ [೧೨]
ಬ್ರೆಜಿಲ್
50%
ಭಾರತ
15%
ಸಂಯುಕ್ತ ಸಂಸ್ಥಾನ
8.9%
ಜಪಾನ್
8.8%
ಪಾಕಿಸ್ತಾನ
6.9%
ಟೆಂಪ್ಲೇಟು:Country data World ಇತರೆ
29.6%

ಬಳಕೆದಾರ ಮೊದಲು ತನ್ನ ವ್ಯಕ್ತಿಚಿತ್ರ ಸೃಷ್ಟಿಸುತ್ತಾನೆ, ಅದರಲ್ಲಿ ಬಳಕೆದಾರನು "ಸಾಮಾಜಿಕ", "ಔದ್ಯೋಗಿಕ" ಮತ್ತು "ವೈಯಕ್ತಿಕ" ವಿವರಗಳನ್ನು ಒದಗಿಸಿರುತ್ತಾನೆ. ಬಳಕೆದಾರ ತನ್ನ ಆರ್ಕುಟ್ ವ್ಯಕ್ತಿಚಿತ್ರದಲ್ಲಿ ಒಂದು ತಲೆಬರಹದೊಂದಿಗೆ ಛಾಯಚಿತ್ರವನ್ನು ಅಪ್‌ಲೋಡ್‌ ಮಾಡಬಹುದು. ಹೆಚ್ಚುವರಿ ಅವಕಾಶಗಳೊಂದಿಗೆ ಬಳಕೆದಾರರು ತಮ್ಮ ವ್ಯಕ್ತಿಚಿತ್ರಕ್ಕೆ ಯುಟ್ಯೂಬ್‌‍ ಅಥವಾ Google ವಿಡಿಯೋಗಳ ಮೂಲಕ ವಿಡಿಯೋಗಳನ್ನು ಸೇರಿಸಿಕೊಳ್ಳಬಹುದು, ಒಂದು ಕಮ್ಯುನಿಟಿ ಬಳಕೆದಾರರ ಅಭಿಪ್ರಾಯದಂತೆ ಅವುಗಳನ್ನು ಸೃಷ್ಟಿಸುವಾಗ ನಿರ್ಬಂಧಿಸಬಹುದು ಅಥವ ಬಳಸಬಹುದಾಗಿದೆ. ಆರ್ಕುಟ್‌‍ನಲ್ಲಿ ಸಂಭಾಷಣೆ ನಡೆಸಲು ಮತ್ತು ಕಡತ ವಿನಿಮಯ ಮಾಡಿಕೊಳ್ಳಲು ಅನುಕೂಲವಾಗುವಂತೆ ಸಂಯೋಜಿತ GTalk (Google‌ನ ತತ್‌ಕ್ಷಣದ ಒಂದು ಸಂದೇಶವಾಹಕ) ಎಂಬ ಆಯ್ಕೆಯನ್ನು ನೀಡಲಾಗಿದೆ. ಬಳಕೆದಾರರು ಆರ್ಕುಟ್ ಪುಟದಿಂದಲೇ ನೇರವಾಗಿ ಸಂಭಾಷಣೆ ನಡೆಸಬಹುದು.

ಥೀಮ್‌ಗಳು[ಬದಲಾಯಿಸಿ]

ಆರ್ಕುಟ್‌‍ನಲ್ಲಿರುವ ಹೊಸ ಲಕ್ಷಣವೆಂದರೆ ಅದು ಥೀಮ್‌ಗಳು‌. ವರ್ಣಮಯ ಥೀಮ್ ಕಡತಮನೆಯ ವಿಸ್ತಾರವಾದ ಕಾರ್ಯವ್ಯಾಪ್ತಿಯ ಮೂಲಕ ಬಳಕೆದಾರರು ತಮ್ಮ ಅಂತರ ಸಂಪರ್ಕ ಸಾಧನವನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಥೀಮ್‌ಗಳು ಪ್ರಸ್ತುತ ಭಾರತ ಮತ್ತು ಬ್ರೆಜಿಲ್‌ನಲ್ಲಿ ಮಾತ್ರ ಲಭ್ಯವಿವೆ.

ಇತರ ವೈವಿಧ್ಯಮಯ ವೈಶಿಷ್ಟ್ಯಗಳು[ಬದಲಾಯಿಸಿ]

ಅವರವರ ಇಚ್ಛೆಯನುಸಾರವಾಗಿ ಸದಸ್ಯರು ತಮ್ಮ ಸ್ನೇಹಿತರನ್ನು ಸೇರಿಕೊಳ್ಳಲು ಗುಂಪುಗಳನ್ನು ರಚಿಸಿಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೆ ಪ್ರತಿ ಸದಸ್ಯರು ತಮ್ಮ ಪಟ್ಟಿಯಲ್ಲಿರುವ ಯಾವುದೇ ಸ್ನೇಹಿತರ ಅಭಿಮಾನಿಯಾಗಬಹುದಾಗಿದೆ ಮತ್ತು ಇದರ ಜೊತೆಗೆ ಅವರ ಸ್ನೇಹಿತ "ಟ್ರಸ್ಟ್‌ವರ್ಥಿ", "ಕೂಲ್‌", "ಸೆಕ್ಸಿ" ಎಂದು 1 ರಿಂದ 3 ಎಂದು ಅಳತೆ ಪಟ್ಟಿಯ ಆಧಾರದ ಮೇಲೆ ಶೇಕಡಾವಾರು ಮೌಲ್ಯಮಾಪನ ಮಾಡಬಹುದಾಗಿದೆ. Facebook ‍ನಲ್ಲಿನ ಯಾವುದೇ ಸದಸ್ಯನು ತನ್ನ ನೆಟ್‌ವರ್ಕ್‌ನಲ್ಲಿರುವ ಬೇರೆಯವರ ವ್ಯಕ್ತಿಚಿತ್ರದ ವಿವರಗಳನ್ನು ಮಾತ್ರ ನೋಡಬಹುದಾಗಿದೆ, ಆದರೆ ಆರ್ಕುಟ್ ನಿಮ್ಮ"ಅಗೋಚರ ಪಟ್ಟಿ"ಯಲ್ಲಿನ ಗುಪ್ತ ಭೇಟಿಕಾರನನ್ನು ಹೊರತುಪಡಿಸಿ ಯಾವುದೇ ಸದಸ್ಯನಾದರು ಯಾವುದೇ ವ್ಯಕ್ತಿಯ ವ್ಯಕ್ತಿಚಿತ್ರವನ್ನು ನೋಡಲು ಆವಕಾಶ ನೀಡಿದೆ. (ಈ ವೈಶಿಷ್ಟ್ಯ ಇತ್ತೀಚೆಗೆ ಸ್ವಲ್ಪ ಬದಲಾವಣೆಗೊಂಡಿದ್ದು ತಮಗೆ ಬೇಕಾದ ಜಾಲದವರು ಮತ್ತು ನಿರ್ಧಿಷ್ಟಪಡಿಸಿದ ವರ್ಗದವರು ಮಾತ್ರ ನೋಡಬಹುದಾಗಿದೆ). ಮುಖ್ಯವಾಗಿ, ಪ್ರತಿಯೊಬ್ಬ ಸದಸ್ಯನು ಸಹ ತನಗೆ ಬೇಕಾದ ರೀತಿಯಲ್ಲಿ ವ್ಯಕ್ತಿಚಿತ್ರವನ್ನು ರೂಪಿಸಿಕೊಳ್ಳಬಹುದು ಮತ್ತು ತಮ್ಮ ಸ್ನೇಹಿತರು ಹಾಗೂ ಇತರ ಸದಸ್ಯರಿಂದ ತಮ್ಮ ವ್ಯಕ್ತಿಚಿತ್ರದಲ್ಲಿ ಗೋಚರಿಸುವ ಮಾಹಿತಿಯನ್ನು ಕಾಣದಂತೆ ನಿರ್ಭಂಧಿಸಬಹುದಾಗಿದೆ (ಸ್ನೇಹಿತರ ಪಟ್ಟಿಯಲ್ಲಿ ಅಲ್ಲ). ಮತ್ತೊಂದು ವೈಶಿಷ್ಟ್ಯವೆಂದರೆ, ಯಾವುದೇ ಒಬ್ಬ ಸದಸ್ಯ ಆರ್ಕುಟ್‌ನ ಬೇರೆ ಯಾವುದೇ ಸದಸ್ಯ ಅವನು/ಅವಳನ್ನು "ಕ್ರಷ್‌ ಲಿಸ್ಟ್‌" ಗೆ ಸೇರಿಸಬಹುದು ಮತ್ತು ಇಬ್ಬರೂ ಪರಸ್ಪರ "ಕ್ರಷ್‌ ಲಿಸ್ಟ್"ಗೆ ತಮ್ಮ ಹೆಸರನ್ನು ಸೇರಿಸಿದಾಗ ಈ ವಿಷಯ ಅನಾವರಣಗೊಳ್ಳುತ್ತದೆ. ಬಳಕೆದಾರ ಆರ್ಕುಟ್‌ ಪ್ರವೇಶ ಮಾಡಿದಾಗ, ಅವನ ಜಾಲತಾಣಕ್ಕೆ ಸರತಿಯ ಪ್ರಕಾರ ಭೇಟಿ ನೀಡಿರುವ ಸ್ನೇಹಿತರ ಪಟ್ಟಿ ಗೋಚರಿಸುತ್ತದೆ, ಪಟ್ಟಿಯಲ್ಲಿ ಗೋಚರಿಸುವ ಮೊದಲ ವ್ಯಕ್ತಿ ಮೊದಲು ಭೇಟಿ ನೀಡಿದವನಾಗಿರುತ್ತಾನೆ[೧೩]. MySpace‌ ಮತ್ತು Facebook ಒಳಗೊಂಡಂತೆ ಇತರೆ ಸಾಮಾಜಿಕ ಜಾಲತಾಣಗಳು ಆರ್ಕುಟ್‌ನ ಸ್ಪರ್ಧಿಗಳಾಗಿದ್ದಾರೆ. ನಿಂಗ್‌ ಜಾಲತಾಣವು ಇದರ ಪ್ರಬಲ ನೇರ ಸ್ಪರ್ಧಿ, ಅವರು ಸೃಷ್ಟಿಸಲು ಅವಕಾಶ ಕಲ್ಪಿಸಿರುವ ಸಾಮಾಜಿಕ ಜಾಲವು ಆರ್ಕುಟ್‌ನ ಸಮುದಾಯಗಳಿಗೆ ಹೋಲಿಕೆಯಾಗುತ್ತದೆ..

ಆರ್ಕುಟ್‌ನ ಮರು ವಿನ್ಯಾಸ[ಬದಲಾಯಿಸಿ]

ಆಗಸ್ಟ್‌ 24, 2007 ರಂದು ಆರ್ಕುಟ್‌ ಒಂದು ಮರುವಿನ್ಯಾಸವನ್ನು ಘೋಷಿಸಿತು. ಹೊಸ UI ಗೋಲಾಕಾರದ ಅಂಚುಗಳನ್ನು ಹೊಂದಿದೆ ಮತ್ತು ಮೃದು ಬಣ್ಣದ ಅಂಶಗಳ ಜೊತೆಗೆ ಮೇಲಿನ ಎಡಭಾಗದ ಮೂಲೆಯಲ್ಲಿ ಸಣ್ಣ ಲೊಗೊವನ್ನು ಹೊಂದಿದೆ. ಮರು‍ವಿನ್ಯಾಸದ ಕುರಿತು ಅಧಿಕೃತವಾಗಿ ಆರ್ಕುಟ್ ಬ್ಲಾಗ್‌ನಲ್ಲಿ ಘೋಷಿಸಲಾಯಿತು.

ಆಗಸ್ಟ್‌ 30, 2007ರ ಹೊತ್ತಿಗೆ, ಆರ್ಕುಟ್‌ನ ಹೊಸ ಮರುವಿನ್ಯಾಸದ ಕಾರಣ ಬಹಳಷ್ಟು ಬಳಕೆದಾರರು ತಮ್ಮ ವ್ಯಕ್ತಿಚಿತ್ರ ಪುಟಗಳಲ್ಲಿ ಬದಲಾವಣೆ ಕಂಡರು. ಆಗಸ್ಟ್‌ 31, 2007 ರಂದು, ಆರ್ಕುಟ್‌ ನಿಮ್ಮ ಸ್ನೇಹಿತರನ್ನು ನೀವು ನೋಡುವ ವಿಧಾನದಲ್ಲಿನ ಸುಧಾರಣೆಗಳು ಸೇರಿದಂತೆ ಇತರ ಹೊಸ ಲಕ್ಷಣವನ್ನು ಘೋಷಿಸಿತ್ತು, ನಿಮ್ಮ ಮುಖಪುಟ ಮತ್ತು ವ್ಯಕ್ತಿಚಿತ್ರ ಪುಟಗಳಲ್ಲಿ 8 ರಿಂದ 9 ಸ್ನೇಹಿತರು ಕಾಣಿಸುತ್ತಿದ್ದು ಮತ್ತು ನಿಮ್ಮ ವಿವಿಧ ಸ್ನೇಹಿತರ ವ್ಯಕ್ತಿಚಿತ್ರಗಳ ವೀಕ್ಷಣೆ ಮಾಡುತ್ತಿದ್ದಂತೆ ಅವರ ವ್ಯಕ್ತಿಚಿತ್ರಗಳ ಕೇಳಗೆ ಅವರ ವಿವರದ ಕೊಂಡಿಗಳು ಗೋಚರಿಸುತ್ತವೆ.. ಆರಂಭದಲ್ಲಿ ಆರ್ಕುಟ್‌‌ನ್ನು 6 ಹೊಸ ಭಾಷೆಗಳಲ್ಲಿ ಪರಿಚಯಿಸಲಾಗುವುದು ಎಂದು ಘೋಷಿಸಿತ್ತು::ಹಿಂದಿ, ಬೆಂಗಾಳಿ, ಮರಾಠಿ, ತಮಿಳು, ಕನ್ನಡ ಮತ್ತು ತೆಲುಗು. ವ್ಯಕ್ತಿಚಿತ್ರದ ಕೆಳಗಿರುವ ಸೆಟ್ಟಿಂಗ್‌ ಬಟನ್‌ ಕ್ಲಿಕಿಸುವುದರ ಮೂಲಕ ವ್ಯಕ್ತಿ ವಿವರದ ಪರಿಷ್ಕರಣೆ ಮಾಡಬಹುದು (ಅಥವಾ ಪರ್ಯಾಯವಾಗಿ, ಯಾವುದೇ ಪುಟದ ಮೇಲಿರುವ ಬ್ಲ್ಯೂಸೆಟ್ಟಿಂಗ್‌ ಲಿಂಕನ್ನು ಕ್ಲಿಕ್ಕಿಸಿದರಾಯಿತು). ಸೆಪ್ಟೆಂಬರ್ 4, 2007ರಂದು ಮತ್ತೊಂದು ಹೊಸ ವೈಶಿಷ್ಟ್ಯವನ್ನು ಆರ್ಕುಟ್‌ ಘೋಷಿಸಿತ್ತು. ಬಳಕೆದಾರ ಮುಖಪುಟದ ಮೇಲಿನ ಬಾಕ್ಸ್‌ನಲ್ಲಿ ನಿಮ್ಮ ಸ್ನೇಹಿತರ ಕಾರ್ಯ ಚಟುವಟಿಕೆಗಳನ್ನು ಕಾಣಲು ಸಾಧ್ಯವಿದ್ದು, ಅವರು ತಮ್ಮ ವ್ಯಕ್ತಿಚಿತ್ರದಲ್ಲಿ ಮಾಡುವ ಬದಲಾವಣೆಗಳನ್ನು, ಪೋಟೋಸ್‌ ಮತ್ತು ವಿಡಿಯೋಗಳನ್ನು ನವೀಕರಣ ಮಾಡಿದ ತಕ್ಷಣವೇ ನೋಡಲು ಸಾಧ್ಯವಿದೆ. ಅಷ್ಟೇ ಅಲ್ಲದೇ, ಕೆಲವು ವಿಷಯಗಳನ್ನು ತಮ್ಮ ವ್ಯಕ್ತಿಚಿತ್ರದಲ್ಲಿ ಖಾಸಗಿಯಾಗಿರಲು ಬಯಸುವವರಿಗಾಗಿ, ಆರ್ಕುಟ್‌ ಹೊಸ ಆಯ್ಕೆಯ ಗುಂಡಿಯನ್ನು ಸೆಟ್ಟಿಂಗ್ಸ್‌ ಪುಟದಲ್ಲಿ ಸೇರಿಸಿದೆ. ಸ್ಕ್ರ್ಯಾಪ್ಗಳು HTML ಸೌಲಭ್ಯ ಹೊಂದಿರುವುದರಿಂದ ಬಳಕೆದಾರರು ವಿಡಿಯೋಗಳು ಮತ್ತು ಚಿತ್ರಗಳನ್ನು ತಮ್ಮ ವ್ಯಕ್ತಿಚಿತ್ರದಲ್ಲಿ ಸೇರಿಸಬಹುದಾಗಿದೆ. ನವೆಂಬರ್ 8, 2007ರಲ್ಲಿ ಕೆಂದು ಬಣ್ಣದ ದೀಪಾವಳಿಯ ವಿಶೇಷ ಥೀಮ್‌ನಲ್ಲಿ ತಮ್ಮ ಆರ್ಕುಟ್‌ನ ನೋಟವನ್ನು ಬದಲಾಯಿಸಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಆರ್ಕುಟ್ ಭಾರತಿಯ ಬಳಕೆದಾರರಿಗೆ ದೀಪಾವಳಿ ಶುಭಾಶಯವನ್ನು ಕೋರಿತ್ತು. ಏಪ್ರಿಲ್‌ 2008ರ ಮೂರ್ಖರ ದಿನದಂದು, ಆರ್ಕುಟ್‌ ಸಹಜ ಚೇಷ್ಟೆಗಾಗಿ ತಾತ್ಕಾಲಿಕವಾಗಿ ತನ್ನ ಜಾಲತಾಣದ ಹೆಸರನ್ನು ಯೋಗರ್ಟ್‌‍ ಎಂದು ಬದಲಾಯಿಸಿತ್ತು. ಜೂನ್‌‍ 8, 2008ರಂದು ಆರ್ಕುಟ್‌‍ ಪೂರ್ವ ನಿಯೋಜಿತ ಥೀಮ್‌ಗಳ‌ ಸಣ್ಣ ಗುಂಪಿನೊಂದಿಗೆ ತನ್ನ ಥೀಮಿಂಗ್‌ ಇಂಜಿನ್‌ ಆರಂಭಿಸಿತು,[೧೪] ಇದರ ಜೊತೆಗೆ ಪೋಟೋ ಸೇರಿಸುವುದು ಸಹ ಆರ್ಕುಟ್‌‍ನಲ್ಲಿ ಕಂಡುಬಂದಿತ್ತು.

ವಿವಾದ[ಬದಲಾಯಿಸಿ]

ನಕಲಿ ವ್ಯಕ್ತಿಚಿತ್ರಗಳು[ಬದಲಾಯಿಸಿ]

ಇತರೆ ಅಂತರ್ಜಾಲ ಸಾಮಾಜಿಕ ಜಾಲಗಳ ಸಮುದಾಯದಲ್ಲಿರುವಂತೆ, ಆರ್ಕುಟ್‌ನಲ್ಲಿಯೂ ಕೂಡ ಬಹು ಸಂಖ್ಯಾತ ನಕಲಿ ಮತ್ತು ಸುಳ್ಳು ವ್ಯಕ್ತಿಚಿತ್ರಗಳು ಅಸ್ಥಿತ್ವದಲ್ಲಿವೆ.[೧೫]. ಬಹುಸಂಖ್ಯೆಯ ಬಳಕೆದಾರರ ಕಾರಣದಿಂದ ಮತ್ತು ಮತ್ತು ಜೈಲು ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿರುವುದರಿಂದ, ವ್ಯಕ್ತಿಚಿತ್ರಗಳು ಕೆಲವೊಮ್ಮೆ ತೆಗೆಯಲ್ಪಡದೇ ಇರಬಹುದು ಅಥವಾ ತೆಗೆದು ಹಾಕಿದ ನಂತರ ಮತ್ತೆ ಸುಲಭವಾಗಿ ಮರುಸೃಷ್ಟಿಸಬಹುದು. ಈ ವ್ಯಕ್ತಿಚಿತ್ರಗಳನ್ನು ಸಾಮಾನ್ಯವಾಗಿ ಟ್ರೋಲ್‌ಗಾಗಿ, ಸ್ಪ್ಯಾಮ್‌ಗಾಗಿ, ಅಧಿಕ ಸೃಷ್ಟಿಗಾಗಿ ಅಥವಾ ತಮಾಷೆಗಾಗಿ ರಚಿಸಿರುತ್ತಾರೆ. ಒಂದಕ್ಕಿಂತ ಹೆಚ್ಚು ವ್ಯಕ್ತಿಚಿತ್ರವನ್ನು ಹೊಂದಿರುವ ಬಳಕೆದಾರರನ್ನು ಹುಡುಕುವುದು ಕಷ್ಟವೇನಲ್ಲ, ಜೊತೆಗೆ ಅವರು ತನ್ನದೇ ಆದ ನೂರಾರು ವ್ಯಕ್ತಿಚಿತ್ರಗಳನ್ನು ಆರಂಭಿಸಿರುತ್ತಾರೆ. ಹೆಚ್ಚು ವ್ಯಕ್ತಿಚಿತ್ರಗಳು ಜನರಿಗೆ ಮನಸಿಗೆ ಬಂದಂತೆ ಸ್ನೇಹದ ಮನವಿಯನ್ನು ಕಳುಹಿಸಲು ಮತ್ತು ಕೇವಲ ಅವರನ್ನು ತಮಾಷೆಯಿಂದ ಪೀಡಿಸಲು ರೂಪಗೊಂಡಿವೆ. ಭಾರತೀಯ ಮತ್ತು ದಕ್ಷಿಣ ಏಷ್ಯಾದ ಆರ್ಕುಟ್‌ ಬಳಕೆದಾರರು ಇಂತಹ ಬಳಕೆದಾರರನ್ನು "ದಿ ಪ್ರಾಂಡ್‌ಶಿಪ್ಪರ್ಸ್‌" ಎಂದು ಉಲ್ಲೇಖಿಸುತ್ತಾರೆ, ಹಲವು ವ್ಯಕ್ತಿಗಳು ಇಂಥಹ ವ್ಯಕ್ತಿಚಿತ್ರದ ಸಂಗಾತಿಗಳೊಂದಿಗೆ ತಮಾಷೆಯ ಮಾತುಗಳನ್ನಾಡಿಕೊಳ್ಳುವುದರ ಮೂಲಕ ನಿಜವಾದ ಆನಂದವನ್ನು ಪಡೆಯುತ್ತಾರೆ, ಉದಾಹರಣೆಗೆ ಇಂಥಹ ಕೆಲವು ಪ್ರಸಿದ್ದ ವ್ಯಕ್ತಿಚಿತ್ರಗಳೆಂದರೆ ನಜೀಮ್‌ ಹಕೀಮ್‌, ಬಟ್ಲೆಸ್‌ ಚಾಪ್ಸ್‌, ಹೋಪ್ಪೆಶ್‌ ಹಟ್ಟ್‌ಬಾಲಾ ಮತ್ತು ಜೂಬಿ.[ಸೂಕ್ತ ಉಲ್ಲೇಖನ ಬೇಕು]

ಅಗೋಚರ ವ್ಯಕ್ತಿಚಿತ್ರಗಳು[ಬದಲಾಯಿಸಿ]

2005ರಲ್ಲಿ ಅಗೋಚರ ವ್ಯಕ್ತಿಚಿತ್ರಗಳು, ಸಮುದಾಯಗಳು ಮತ್ತು ವಿಷಯಗಳು ಆರ್ಕುಟ್‌ನಲ್ಲಿ ಕಾಣಿಸಲು ಆರಂಭವಾದವು. HTMLನಲ್ಲಿರುವ ಎಸ್ಕೇಪಿಂಗ್ ಸಂಕೇತಗಳನ್ನು ಮತ್ತು 1x1ಪಿಕ್ಸೆಲ್‌ ಫೋಟೊಗಳನ್ನು ಬಳಸಿಕೊಳ್ಳುವ ಮೂಲಕ ತಾಣದ ಹಿಂದಿರುವ ಇಂಜಿ‌ನನ್ನು ವಂಚಿಸಿ ಇದನ್ನು ಸಾಧಿಸಬಹುದಾಗಿದೆ.[೧೬] ಇವೆಲ್ಲವನ್ನು ನಿಧಾನವಾಗಿ ನಂತರದಲ್ಲಿ ಅಳವಡಿಸಲಾಯಿತು ಮತ್ತು ಪ್ರಸ್ತುತದಲ್ಲಿ ವ್ಯಕ್ತಿ ಚಿತ್ರದ ವಿವಿಧ ಆಯಾಮಗಳ ಮೇಲೆ ಕಡಿಮೆ ನಿಯಂತ್ರಣ ಇದೆ.

ಫ್ಲಡರ್ಸ್‌[ಬದಲಾಯಿಸಿ]

ಆಗಸ್ಟ್‌‍ 2005ರಲ್ಲಿ ನಿರ್ದಿಷ್ಟವಾಗಿ ಫ್ಲಡಿಂಗ್‌ ಆರ್ಕುಟ್‌ಗೆ ಸಂಬಂಧಿಸಿದಂತೆ ಪ್ರೀವೇರ್ ಪ್ರೊಗ್ರಾಮ್‌ವೊಂದನ್ನು ಡೆಲ್ಫಿಯಲ್ಲಿ ತಯಾರಿಸಲಾಯಿತು, ಇದನ್ನು Floodtudo ಎಂದು ಕರೆದರು.(ಪೋರ್ಚುಗೀಸ್‌ ಭಾಷೆಯಲ್ಲಿ "ಟುಡೊ" ಎಂದರೆ "ಎಲ್ಲಾ" ಎಂದು ಅರ್ಥ. ಇದು ಒಬ್ಬ ಬ್ರೆಜಿಲಿಯನ್‌ನಿಂದ ಅಭಿವೃದ್ಧಿಯಾಯಿತು) ಇದು ಅತ್ಯಂತ ವೇಗವಾಗಿ ಎಲ್ಲಾ ಬಳಕೆದಾರರಿಗೂ ತಿಳಿಯಿತು ಮತ್ತು ಇದನ್ನು ಎಲ್ಲರೂ ಸುಲಭವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿತ್ತು. ಬಹು ಸಾಮಾನ್ಯವಾದ ಫ್ಲಡ್‌‍ಟುಡೊ ಆವೃತ್ತಿಗಳೆಂದರೆ 1.2, 1.5, 2.0 ಮತ್ತು 2.2. ಸಾವಿರಾರು ಸ್ಪ್ಯಾಮರ್‌ಗಳಿಂದ ಈ ಪ್ರೊಗ್ರಾಮ್‌ ದೊಡ್ಡ ಪ್ರಮಾಣದಲ್ಲಿ ಬಳಸಲ್ಪಟ್ಟಿತ್ತು, ಸೆಪ್ಟೆಂಬರ್ ಮತ್ತು ಅಕ್ಟೋಬರ್ 2005ರಲ್ಲಿ ಅರ್ಕುಟ್‌ನ ಒಂದು ದೊಡ್ಡ ಸ್ಪಾಮ್‌ ಅಲೆ ತಡೆಯೊಡ್ಡಿತ್ತು. ಎಲ್ಲರೂ ಸಾಮಾನ್ಯವಾಗಿ ಬಳಸುವ ಇನ್ನೊಂದು ಸ್ಕ್ರಾಪ್‌ ಫ್ಲಡರ್ "ಕಾರ್ಬನ್‌ ಕಾಪಿ ಸ್ಕ್ರಾಪರ್‌" ಮತ್ತು "ಬ್ಲೈಂಡ್‌ ಕಾರ್ಬನ್‌ ಕಾಪಿ ಸ್ಕ್ರಾಫ‍ರ್‌" (ಸಾಮಾನ್ಯವಾಗಿ ಸಿಸಿಎಸ್‌ ಮತ್ತು ಬಿಸಿಸಿಎಸ್‌ ಎಂದು ಕರೆಯುತ್ತಾರೆ) ಇವು ಜಾವಾಸ್ಕ್ರಿಪ್ಟ್ ಆಧಾರಿತವಾಗಿದ್ದು (ಪ್ರಸಿದ್ಧವಾದ ಆವೃತ್ತಿಗಳೆಂದರೆ 2.4, 3.3,ಮತ್ತು 5.1), ಸಾಮಾನ್ಯವಾಗಿ ಎಲ್ಲಾ ಪ್ರಸಿದ್ಧ ಆರ್ಕುಟ್‌ ಸಮದಾಯಗಳಲ್ಲಿ ಲಭ್ಯವಿವೆ. ಈ ಯೋಜನೆಯ ಹಿಂದಿನ ಮುಖ್ಯ ಉದ್ದೇಶ ಬಳಕೆದಾರರು ಒಂದು ಸ್ಕ್ರಾಪನ್ನು ತನ್ನ ಬೇರೆ ಬೇರೆ ಸ್ನೇಹಿತರಿಗೆ ಒಟ್ಟಿಗೇ ಕಳುಹಿಸುವುದು, ಆದರೆ ಇದು ಸ್ಪ್ಯಾಮರ್‌ ಗಳಿಂದ ದುರ್ಬಳಕೆಯಾಗುತ್ತಿದೆ. ಆರ್ಕುಟ್‌ ಫ್ಲಡಿಂಗ್‌ ನಿಯಂತ್ರಣವನ್ನು ಮೀರುತ್ತಿರುವುದರಿಂದ, ಇದನ್ನು ಅಭಿವೃದ್ಧಿಪಡಿಸುವವರು ಅದರ ಕಾರ್ಯವನ್ನು ನಿಲ್ಲಿಸಲು ಕೆಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದಾರೆ.

 • 2 ಅಥವಾ ಹೆಚ್ಚಿನ ಅಕ್ಷರಶಃ ವಿಷಯಗಳು ಅಥವಾ ಮಂಡನೆಯಾದ ಸ್ಕ್ರಾಪ್‌ಬುಕ್‌ ದಾಖಲೆಗೆ ಅವಕಾಶ ನೀಡಬಾರದು.
 • ಇನ್ನೊಂದು ಮಾಹಿತಿಯನ್ನು ಅಥವಾ ಸ್ಕ್ರಾಪ್‌ಬುಕ್‌ ನಮೂದಿಸುವ ಮುನ್ನ ಕೆಲ ಸಮಯ ಬಳಕೆದಾರರನ್ನು ಕಾಯುವಂತೆ ಮಾಡುವುದು.
 • ಸ್ಕ್ರಾಫ್‌ ಎಂಟ್ರಿ ಹೈಪರ್‌ಲಿಂಕ್ಡ್‌ ಆಗಿದ್ದಾಗ ಕ್ಯಾಪ್ಚಾಗಳ ಅಗತ್ಯವಿದೆ.

ಅಭಿವೃದ್ಧಿಪಡಿಸುವವರಿಗೆ ನಂಬಿಕೊಳ್ಳುವುದಕ್ಕೆ ಬದಲಾಗಿ ಸಮುದಾಯದ ನಿಯಂತ್ರಕರಿಗೆ ಮಾತ್ರ ಬಳಕೆದಾರರನ್ನು ಸಂಪೂರ್ಣವಾಗಿ ನಿಷೇಧಿಸುವ ಜವಾಬ್ಧಾರಿಯನ್ನು ನೀಡಲಾಗಿದೆ.

ಎಲೆಕ್ಟ್ರಾನಿಕ್‌ ಸ್ಪ್ಯಾಮ್‌[ಬದಲಾಯಿಸಿ]

ಇತ್ತೀಚೆಗೆ, ಆರ್ಕುಟ್‌ ಸ್ವಯಂ-ತಾಂತ್ರಿಕ ವ್ಯವಸ್ಥೆಯಾದ ಸ್ಪ್ಯಾಮ್‌ನ್ನು ಪರಿಚಯಿಸಿದೆ. ಆರ್ಕುಟ್‌ ಬಳಕೆದಾರರು ಕಡಿಮೆ ಸಮಯದಲ್ಲಿ ಹೆಚ್ಚು ಸ್ನೇಹಿತರ ಮನವಿಗಳನ್ನು ಅಥವಾ ಸ್ಕ್ರಾಪ್‌ಗಳನ್ನು ಕಳುಹಿಸುವುದು ಅಸಾಧ್ಯ. ಹಾಗೇನಾದರೂ ಮಾಡಿದರೆ ಬಳಕೆದಾರನ ಚಟುವಟಿಕೆಗಳಿಗೆ ಅನುಗುಣವಾಗಿ ಬಳಕೆದಾರನನ್ನು 24 ಗಂಟೆಯಿಂದ 1 ವಾರದವರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ.

ವಿರೋಧಿ ಗುಂಪುಗಳು[ಬದಲಾಯಿಸಿ]

ಇತ್ತೀಚೆಗೆ ವಿವಿಧ ವಿರೋಧಿ ಗುಂಪುಗಳಿಂದ ಆರ್ಕುಟ್‌ನ ಬಳಕೆಯು ವಿವಾದಿತ ವಿಷಯವಾಗಿದೆ. ವೈರತ್ವದ ಜನಾಂಗಗಳು ಮತ್ತು ಧರ್ಮಾಂಧರು ನಿರಂತರವಾಗಿ ಆರ್ಕುಟ್‌ನ್ನು ಹಿಂಬಾಲಿಸುತ್ತಿದ್ದಾರೆ. ಕೆಲವು ವಿರೋಧಿ ಸಮುದಾಯಗಳು ಜನಾಂಗೀಯತೆ,ನಾಜಿಜಂ ಮತ್ತು ಬಿಳಿಯರ ಮೇಲ್ಮೆಗೆ ಸಂಬಂಧಿಸಿದ್ದು, ನಿಯಮಾವಳಿಗಳ ಹಿಂಸಾತ್ಮಕ ಉಲ್ಲಂಘನೆ ಎಂದು ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು] 2005ರಲ್ಲಿ ವಿವಿಧಜನಾಂಗೀಯತೆ ಗೆ ಸಂಬಂಧಿಸಿದ ಘಟನೆಗಳನ್ನು ಪೊಲೀಸರ ಗಮನಕ್ಕೆ ತರಲಾಯಿತು ಮತ್ತು ಇದನ್ನು ಬ್ರೆಜಿಲಿಯನ್‌ ಮಾಧ್ಯಮಗಳಲ್ಲಿ ವರದಿ ಮಾಡಲಾಯಿತು.[೧೭] 2006 ರಲ್ಲಿ, 20 ವರ್ಷದ ವಿದ್ಯಾರ್ಥಿಯು ಕಪ್ಪು ಆಫ್ರಿಕನ್ನರ ಸಂತತಿಯ ವಿರುದ್ಧ ಜನಾಂಗೀಯವಾಗಿ ನಿಂದಿಸಿದ ಮತ್ತು ಮಾನನಷ್ಟ ವಿಚಾರವನ್ನು ಆರ್ಕುಟ್‌ನಲ್ಲಿ ಹರಡುತ್ತಿರುವುದನ್ನು ಬ್ರೆಜಿಲ್‌ ಫೆಡರಲ್‌ ನ್ಯಾಯಾಧೀಶರು ಬಹಿರಂಗಪಡಿಸಿ ಒಂದು ನ್ಯಾಯಿಕ ಮಾಪನವನ್ನು ಪ್ರಾರಂಭಿಸಿದರು.[೧೮] ಮಾರ್ಚ್‌ 2006 ರಲ್ಲಿ ಬ್ರೆಜಿಲಿಯನ್‌ ಫೆಡರಲ್‌ ನ್ಯಾಯಾಲಯವು ಆರ್ಕುಟ್‌ನಲ್ಲಿ ಅಡಕವಾಗಿರುವ ಅಪರಾಧಗಳ ಬಗ್ಗೆ ವಿವರಿಸಲು Google ಅನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರಿತ್ತು.[೧೯] ಧರ್ಮ ವಿರೋಧಿ, ರಾಷ್ಟ್ರ ವಿರೋಧಿ ಮತ್ತು ಜನಾಂಗೀಯ ವಿರೋಧಿ ಗುಂಪುಗಳನ್ನು ಸಹ ಆರ್ಕುಟ್‌ನಲ್ಲಿ ಗುರುತಿಸಲಾಯಿತು. ಇತ್ತೀಚೆಗೆ ಭಾರತೀಯ ಕೋರ್ಟ್‌ ಕೆಲವು ಗುಂಪುಗಳ ಮೇಲೆ Google‌ಗೆ ನೊಟೀಸ್‌ ಜಾರಿ ಮಾಡಿದೆ. ಮುಂಬಯಿ ಪೊಲೀಸರು ಆರ್ಕುಟ್‌ ಪೋಸ್ಟನ್ನು ನಿಷೇದಿಸಲು ಪ್ರಯತ್ನಿಸಿದಾಗ ರಾಜಕೀಯ ಗುಂಪುಗಳಿಂದ ಆಕ್ಷೇಪಣೆಗಳು ಉಂಟಾದವು. ರಾಜಕೀಯ ವ್ಯಕ್ತಿಗಳ ಮತ್ತು ಕೆಲವು ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಕೆಡಿಸುವ ಗುಂಪುಗಳೂ ಕೂಡ ಬೆಳಕಿಗೆ ಬಂದವು. 2005ರ ವರದಿಯಲ್ಲಿ ಜನಾಂಗೀಯ ಗುಂಪುಗಳನ್ನು ಸಹ ವರದಿಮಾಡಲಾಗಿದೆ. ಅವು ತಮಿಳು ವಿರೋಧಿ ಗುಂಪುಗಳಾಗಿದ್ದವು.

ರಾಷ್ಟ್ರ ಪೂರ್ವಪರಿವೀಕ್ಷಣೆ[ಬದಲಾಯಿಸಿ]

ಇರಾನ್‌ನಲ್ಲಿ[ಬದಲಾಯಿಸಿ]

ಆರ್ಕುಟ್‌ ಇರಾನ್‌ನಲ್ಲಿ ಹೆಚ್ಚು ಪ್ರಸಿದ್ಧಿಯಾಗಿತ್ತು, ಆದರೆ ಈಗ ಈ ಜಾಲತಾಣವು ಸರ್ಕಾರದಿಂದ ತಡೆಹಿಡಿಯಲ್ಪಟ್ಟಿದೆ. ಅಧಿಕೃತ ವರದಿಗಳ ಪ್ರಕಾರ, ಇದು ಡೇಟಿಂಗ್‌‍ ಮತ್ತು ಹೊಂದಾಣಿಕೆ ಮಾಡಿಕೊಳ್ಳುವದಕ್ಕೆ ಸಂಬಂಧಿಸಿದ ದೇಶದ ರಕ್ಷಣೆ ವಿಷಯಗಳು ಮತ್ತು ಇಸ್ಲಾಮಿನೈತಿಕತೆಯ ವಿಷಯಗಳಿಗೆ ಸಂಬಂಧಿಸಿದೆ. ಈ ತಡೆಹಿಡಿಯುವಿಕೆಗೆ ಸಂಬಂಧಿಸಿದಂತೆ ಇರಾನ್ ಬಳಕೆದಾರರಿಗಾಗಿ ಇರುವ ಇತರ ಕೆಲವು ತಾಣಗಳೆಂದರೆ orkutproxy.com (ಈಗ ನಿಷ್ಕ್ರಿಯವಾಗಿದೆ). ಇರಾನ್‌ನ ಆರ್ಕುಟ್‌‍ ಪ್ರತಿನಿಧಿಯ ಮೂಲಕ ನವೀಕರಣಗಳನ್ನು ಪಡೆಯಲು ಇನ್ನಿತರ ಜಾಲತಾಣಗಳಾದ Yahoo! Groups ಮತ್ತು Google Groups ಸಮೂದಾಯಗಳನ್ನು ಮೀಸಲಿಟ್ಟಿವೆ. ಒಂದೇ ಸಮಯದಲ್ಲಿ ಆರ್ಕುಟ್‌ನ ಸರ್ಕಾರಿ ರದ್ದತಿಯಯನ್ನು ಉಪಮಾರ್ಗವಾಗಿಸಲು ಸಾಧ್ಯವಿತ್ತು, ಆದರೆ ಎಲ್ಲ ಅನಾಮಿಕ ಬದಲಿ ಪ್ರಾತಿನಿಧಿತ್ವದ ಕಾರಣದಿಂದ ಈ ತಾಣ ತನ್ನ HTTPS‌ ಪುಟಗಳನ್ನು ನಿಷ್ಕ್ರಿಯಗೊಳಿಸಿದೆ. ಈಗ ಸಾಮಾನ್ಯ ಬಳಕೆದಾರರು ಇರಾನ್‌ನಲ್ಲಿ ಈ ತಾಣಕ್ಕೆ ಭೇಟಿಕೊಡಲು ಹೆಚ್ಚಿನ ಪಕ್ಷ ಸಾಧ್ಯವಿಲ್ಲ.[೨೦] ಆರ್ಕುಟ್‌ನ ನಿಷೇಧದಿಂದಾಗಿ ಇರಾನ್‌ನಲ್ಲಿ ಅದೇ ರೀತಿಯ ಸಾಮಾಜಿಕ ಜಾಲತಾಣ ಮಾದರಿಯಲ್ಲಿ ಅನೇಕ ಇತರ ತಾಣಗಳು ಪ್ರಕಟಗೊಂಡವು - ಉದಾಹರಣೆಗೆ MyPardis ಸೇರಿದಂತೆ, Cloob‌ ಮತ್ತು Bahaneh.[೨೧]

ಅರಬ್‌ ಸಂಯುಕ್ತ ಒಕ್ಕೂಟ[ಬದಲಾಯಿಸಿ]

ಆಗಸ್ಟ್‌ 2006ರ ಹೊತ್ತಿಗೆ ಅರಬ್‌ ಸಂಯುಕ್ತ ಒಕ್ಕೂಟವು ತಾಣದ ಮೇಲೆ ಪ್ರತಿಬಂಧಕ ಹೇರಲು ಇರಾನ್‌ನ ಹಾದಿಯನ್ನೇ ಅನುಸರಿಸಿತು. ಈ ನಿಷೇಧವನ್ನು ತದನಂತರ ಅಕ್ಟೋಬರ್ 2006 ರಲ್ಲಿ ತೆಗೆದುಹಾಕಲಾಯಿತು. ಜುಲೈ 3, 2007ರಲ್ಲಿ ಗಲ್ಫ್ ಸುದ್ದಿಗಳು ಈ ವಿಷಯದ ಬಗ್ಗೆ ಮತ್ತೆ ಗಮನಹರಿಸಿದವು, "ದುಬೈ ಸೆಕ್ಸ್‌" ಎಂಬ ಆರ್ಕುಟ್‌ ಸಮುದಾಯಗಳ ವಿರುದ್ಧ ಸಾರ್ವಜನಿಕರಿಂದ ಬಂದಂತಹ ದೂರುಗಳನ್ನು ಪ್ರಸಾರ ಮಾಡಲಾಯಿತು ಮತ್ತು ಅಧಿಕೃತವಾಗಿ ಸ್ವೀಕರಿಸಿದ ದೂರುಗಳು ರಾಜ್ಯ ಏಕಸ್ವಾಮ್ಯ ಟೆಲಿಕಾಂ Etisalatನ ಗಮನ ಸೆಳೆದವು.[೨೨] ಜುಲೈ 4, 2007ರಲ್ಲಿ ಮತ್ತೆ ಈ ಬಗ್ಗೆ Google UAEಯೊಂದಿಗೆ ನಡೆಸಿದ ಪರಿಣಾಮಕಾರಿ ಸಂಧಾನದ ಹೊರತಾಗಿಯೂ,[೨೩] Etisalat ಈ ತಾಣವನ್ನು ನಿಷೇಧಿಸಿತ್ತು.[೨೪]

ಸೌದಿ ಅರೇಬಿಯಾ[ಬದಲಾಯಿಸಿ]

ಆರ್ಕುಟ್‌ ಬಳಕೆಯನ್ನು ನಿಷೇಧಿಸಿದ ಮತ್ತೊಂದು ದೇಶ ಸೌದಿ ಅರೇಬಿಯಾ, ಇದೇ ಬೇಡಿಕೆಯ ಒತ್ತಡದಲ್ಲಿ ಬಹ್ರೈನ್‌ನ ಮಾಹಿತಿ ಇಲಾಖೆಯೂ ಕೂಡ ಇದೆ.[೨೫]

ಗೌಪ್ಯತೆ[ಬದಲಾಯಿಸಿ]

ಮೊದಲಿಗೆ ಆರ್ಕುಟ್‌ನಲ್ಲಿ ಯಾರು ಬೇಕಾದರು ಬೇರೆಯವರ ಚಿತ್ರಗಳನ್ನು, ಸ್ಕ್ರಾಪ್‌ಗಳಲ್ಲಿನ ವಿಡಿಯೋಗಳನ್ನು ನೋಡಲು ಸಾಧ್ಯವಿತ್ತು, ಆದರೆ ಕೆಲವು ಜನರು ಪೋಟೊಗಳು ಮತ್ತು ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳಲು ಮತ್ತು ಸುಳ್ಳು ವಿವರಗಳನ್ನು ಅಂತರ್ಜಾಲದಲ್ಲಿ ಸ್ಥಳಾಂತರಿಸಲು ಆರಂಭಿಸಿದರು. ಅವುಗಳಲ್ಲಿ ಕೆಲವು, ವಿಶೇಷವಾಗಿ ಮಹಿಳೆಯರ ಚಿತ್ರಗಳು ತೀರಾ ಅಸಭ್ಯವಾಗಿದ್ದವು. ಅಷ್ಟೆ ಅಲ್ಲದೇ, ಸ್ಕ್ರಾಪ್‌ಗಳನ್ನು ಸುಲಭವಾಗಿ ಓದಬಹುದಾಗಿತ್ತು. ಪ್ರಸ್ತುತದಲ್ಲಿ ಗೌಪ್ಯತೆಯು ಕೆಲವು ಲಕ್ಷಣಗಳಾದ ಸ್ಕ್ರಾಪ್ಸ್‌(ಪ್ರತ್ಯೇಕವಾಗಿ ಓದುವ ಮತ್ತು ಬರೆಯುವ ಕಾರ್ಯ), ವಿಡಿಯೋಗಳು, ಪೋಟೊ ಆಲ್ಬಮ್ಸ್‌, ಟೆಸ್ಟಿಮೊನಿಯಲ್ಸ್‌ ಮತ್ತು ಅಪ್ಲಿಕೇಷನ್ಸ್‌ಗಳನ್ನು ಒಳಗೊಂಡಿರುತ್ತದೆ. ಈ ಗೌಪ್ಯತಾ ಹಂತಗಳು ಬಳಕೆದಾರರಿಗೆ ಲಭ್ಯವಿವೆ. ಡಿಸೆಂಬರ್ 2008 ರಲ್ಲಿ ಆರ್ಕುಟ್‌ ಡೆವಲಪರ್ಸ್‌ ಬೇರೆ ರೀತಿಯ ನವೀಕೃತ ಗೌಪ್ಯತೆಯನ್ನು ಪರಿಚಯಿಸಿದೆ, ಅದು ಬಳಕೆದಾರರಿಗೆ ಕೆಲವು ನಿರ್ದಿಷ್ಟ ಸಂಖ್ಯೆಯ ಸ್ನೇಹಿತರು ಮತ್ತು ಆಯ್ಕೆಗೊಂಡ ಇ-ಮೇಲ್‌ ಸಂಪರ್ಕಗಳು ಮಾತ್ರ ಅವರ ಆಲ್ಬಂಗಳನ್ನು ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಬಳಕೆದಾರನು ಅವನ/ಅವಳ ವ್ಯಕ್ತಿಚಿತ್ರಗಳ ವೀಕ್ಷಣೆಯನ್ನು ಒಂದು ನಿರ್ದಿಷ್ಟ ವಲಯ ಅಥವಾ ವಲಯದ ಗುಂಪುಗಳಿಗೆ("ಜಾಲತಾಣ" ಎಂದು ಪರಿಚಿತವಾಗಿರುವ) ಮಾತ್ರ ಗೋಚರಿಸುವಂತೆ ನಿಗದಿಗೊಳಿಸಬಹುದು, ಇಂತಹ ಸಮಯಗಳಲ್ಲಿ ಈ ವಲಯದ ಹೊರಗಡೆ ಬಳಕೆದಾರನ ಮಾಹಿತಿ ಲಭ್ಯವಾಗುವುದಿಲ್ಲ.

ಭದ್ರತೆ ಮತ್ತು ಸುರಕ್ಷತೆ[ಬದಲಾಯಿಸಿ]

ಡಿಸೆಂಬರ್ 2007 ರಲ್ಲಿ ಬೇರೆ XSS‌ ಸಾಮರ್ಥ್ಯ ಮತ್ತು ವರ್ಮ್‌ವೊಂದರ ಬಳಕೆಯು ನೂರಾರು, ಸಾವಿರಾರು ಬಳಕೆದಾರರ ಖಾತೆಗಳ ಮೇಲೆ ಪರಿಣಾಮ ಬೀರಿತು.[ಸೂಕ್ತ ಉಲ್ಲೇಖನ ಬೇಕು] ಬಳಕೆದಾರ ಸುಮ್ಮನೆ ಒಬ್ಬ ಬಳಕೆದಾರನ ತೊಂದರೆಗೀಡಾದ ಖಾತೆಯ ನಿರ್ದಿಷ್ಟವಾದ ಸ್ಕ್ರಾಪ್‌ನ ಅಂಶಗಳನ್ನು ಓದಿದಾಗ, ಯಾವುದೇ ಒಪ್ಪಿಗೆ ಇಲ್ಲದೇ ಬಳಕೆದಾರನು ತಾನಾಗಿಯೇ ಆ ತಾಣದ ಸಮುದಾಯದ ಒಂದು ಭಾಗವಾಗಿ ಬಿಡುತ್ತಾನೆ. ಈ ರೀತಿ ತೊಂದರೆಗೀಡಾದ ಸ್ಕ್ರಾಪ್‌ನ್ನು ಪ್ರತ್ಯಿಯೊಬ್ಬರಿಗೂ ಕಳುಹಿಸಲು ಬಳಕೆದಾರನ ಖಾತೆಯು ಬಳಕೆಯಾದಾಗ ಈ ಪ್ರಸ್ತುತ ಬಳಕೆದಾರನ ಪಟ್ಟಿಯು ಒಂದು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಾ ಹೋಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

MW.Orc worm[ಬದಲಾಯಿಸಿ]

ಜೂನ್ 19, 2006ರಲ್ಲಿ ಫೆಸ್‌ಟೈಮ್ ಸೆಕ್ಯುರಿಟಿ ಲ್ಯಾಬ್ಸ್‌ನ ಸೆಕ್ಯುರಿಟಿ ರಿಸರ್ಚರ್‌ಗಳಾದ ಕ್ರಿಸ್ತೋಪರ್ ಬಾಯ್ಡ್ ಮತ್ತು ವೆಯ್ನ್ ರವರು ವರ್ಮ್‌ವೊಂದನ್ನು ಕಂಡು ಹಿಡಿದು ಅದಕ್ಕೆ MW.Orc. ಎಂದು ಹೆಸರಿಸಿದರು.[೨೬] ಈ ವರ್ಮ್ ಆರ್ಕುಟ್‌ನ್ನು ಪ್ರಚಾರ ಮಾಡುತ್ತಾ ಬಳಕೆದಾರರ ಬ್ಯಾಂಕಿನ ವಿವರವನ್ನು, ಬಳಕೆದಾರರ ಹೆಸರುಗಳನ್ನು ಮತ್ತು ಸಂಕೇತ ನುಡಿಯನ್ನು ಕದಿಯುತಿತ್ತು. ಈ ದಾಳಿಯನ್ನು ತಪ್ಪಿಸಲು ಬಳಕೆದಾರರು JPEG ಮಾದರಿಯ ವಿಸ್ತರಿಸಬಹುದಾದ ಕಡತವೊಂದನ್ನು ಹುದುಗಿಸಿಟ್ಟರು. ಪ್ರಾರಂಭಿಕ ವಿಸ್ತರಿಸಬಹುದಾದ ಸೋಂಕಿಗೆ ಕಾರಣವಾದ ಕಡತವನ್ನು ಬಳಕೆದಾರನ ಗಣಕಯಂತ್ರದಲ್ಲಿ ಅಳವಡಿಸಲು ಎರಡು ಹೆಚ್ಚುವರಿ ಕಡತಗಳನ್ನು ಸೇರಿಸಬೇಕಿತ್ತು. ಸೋಂಕಿಗೆ ತುತ್ತಾದ ಬಳಕೆದಾರರು ಈ ಕಡತವನ್ನು ಬಳಸಿ "My Computer" ಚಿತ್ರಾತ್ಮಕ ಸಂಕೇತವನ್ನು ಒತ್ತಿದಾಗ ಅನಾಮಧೇಯ ಸೃಷ್ಟಿಕರ್ತರು ವರ್ಮ್ಸ್‌ನ್ನು ಬಳಸಿಕೊಂಡು ಈ-ಮೇಲ್ ಬ್ಯಾಂಕಿನ ವಿವರಗಳನ್ನು ಮತ್ತು ಸಂಕೇತ ನುಡಿಗಳನ್ನು ಬಳಸಿಕೊಳ್ಳುತ್ತಾರೆ . ಸೋಂಕಿಗೆ ತುತ್ತಾದ URLಗಳನ್ನು ಇನ್ನೊಂದು ಆರ್ಕುಟ್ ಸ್ಕ್ರ್ಯಾಪ್ ಬುಕ್‌ಗಳಿಗೆ ಪೋಸ್ಟ್ ಮಾಡಿದಾಗ ಮತ್ತು ಬಳಕೆದಾರನ ಕಣ್ಣಿಗೆ ಕಾಣಬಹುದಾದ ಪೂಟಗಳಲ್ಲಿ ಸಂದರ್ಶಕರ ಅಭಿಪ್ರಾಯಗಳನ್ನು ಪೋಸ್ಟ್ ಮಾಡಿದಾಗ ಸಹಜವಾಗಿ ಈ ಸೊಂಕುಗಳು ಹರಡುತ್ತವೆ. ಈ ಲಿಂಕ್ ಸಂದರ್ಶಕರನ್ನು ಅಕರ್ಷಿಸುವಂತಹ ಪೋರ್ಚುಗಲ್ ಭಾಷೆಯ ಸಂದೇಶಗಳನ್ನು ಹೊಂದಿರುತ್ತದೆ, ಹೆಚ್ಚುವರಿಯಾಗಿ ಪೋಟೊಗಳನ್ನು ಹಾಕಬಹುದು ಎಂಬತಹ ಸುಳ್ಳು ಭರವಸೆಗಳನ್ನು ನೀಡುತ್ತದೆ. ಪಠ್ಯ ರೀತಿಯ ಸಂದೇಶಗಳನ್ನು ಹೊಂದಿರುವ ಸೋಂಕಗೊಂಡ ಕೊಂಡಿಗಳು ಸನ್ನಿವೇಶದಿಂದ ಸನ್ನಿವೇಶಕ್ಕೆ ಬದಲಾಗುತ್ತದೆ. ವಯಕ್ತಿಕ ವಿವರಗಳನ್ನು ಕದಿಯುವದರ ಜೊತೆಗೆ, malware ದೂರದ ಬಳಕೆದಾರರಿಗೆ ಗಣಕಯಂತ್ರವನ್ನು ನಿಯಂತ್ರಿಸಲು ಮತ್ತು botnetನ ಭಾಗವಾಗಿ ಸೋಂಕುಗೊಂಡ ಗಣಕಯಂತ್ರಗಳ ಜಾಲದ ಕೊಂಡಿಯಾಗಿರಲು ಅನುವುಮಾಡಿಕೊಟ್ಟಿದೆ. ಈ ಸಮಯದಲ್ಲಿ botnetಗಳು ಸೋಂಕಿಗೆ ಒಳಗಾದ ಗಣಕಯಂತ್ರಗಳ bandwidthಗಳನ್ನು ವಿಶಾಲವಾದ ಕೃತಿ ಚೌರ್ಯಮಾಡಿರುವ ಸಿನಿಮಾ ಕಡತಗಳನ್ನು ದೊಡ್ಡಪ್ರಮಾಣದಲ್ಲಿ ಹಂಚುತ್ತವೆ, ಕೃತಿಚೌರ್ಯ ಮಾಡಿರುವ ಚಲನಚಿತ್ರದ ಕಡತಗಳು, ಇವು ಸಂಭವನೀಯವಾಗಿ, ನಿಧಾನವಾಗಿ ಕೊನೆಯ ಬಳಕೆದಾರನ ಸಂಪರ್ಕದ ವೇಗವನ್ನೆ ಕಡಿಮೆ ಮಾಡುತ್ತದೆ. ಪ್ರಾರಂಭಿಕ ವಿಸ್ತರಿಸಬಹುದಾದ ಕಡತವನ್ನು (Minhasfotos.exe) ಕ್ರಿಯಾಶೀಲ ಗೊಳಿಸಿದಾಗ ಅದು winlogon_.jpg ಮತ್ತು wzip32.exe ಎಂಬ ಎರಡು ಹೆಚ್ಚುವರಿ ಕಡತಗಳನ್ನು ಸೃಷ್ಟಿಸುತ್ತದೆ (ಅವು [[ ಸಿಸ್ಟಮ್‌32|(System32]] ಪೊಲ್ಡರ್ ನಲ್ಲಿ ನೆಲೆಗೊಳ್ಳುತ್ತದೆ). ಬಳಕೆದಾರ ಯಾವಾಗ "My Compuetr" ಚಿತ್ರಾತ್ಮಕ ಗುಂಡಿಯನ್ನು ಒತ್ತುತ್ತಾನೊ ಆಗ ವೈಯಕ್ತಿಕ ವಿವರವನ್ನು ಒಳಗೊಂಡಿರುವ ಅಂಚೆಯು ರವಾನೆಯಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ಅವ XDCC Botnetಗಳನ್ನು ಪ್ರಾಯಶಃ ಸೇರಿಸಬಹುದು (ಕಡತ ಗಳನ್ನು ಹಂಚಿಕೊಳ್ಳಲು ಬಳಸುತ್ತಾರೆ), ಮತ್ತು ಸೋಂಕಿಗೆ ಒಳಪಟ್ಟಿರುವ ಲಿಂಕ್‌ಗಳು ಬಹುಶಃ ಬೇರೆ ಬಳಕೆದಾರರಿಗೆ ಕಳುಹಿಸಲ್ಪಡಬಹುದು, ಅವರು ಅದನ್ನು ಆರ್ಕುಟ್‌ನ ಜಾಲದಲ್ಲಿ ತಿಳಿಯಬಹುದು. ಸೋಂಕನ್ನು ಮನುಷ್ಯನ ಚಟುವಟಿಕೆಯಿಂದ ಕೂಡ ಹರಡಬಹುದು, ಅಲ್ಲದೆ ಇದು "back dated" ನ ಸೋಂಕಿತ ಕೊಂಡಿಗಳನ್ನು ಸೋಂಕಿತ ಬಳಕೆದಾರನ "ಸ್ನೇಹಿತರ ಪಟ್ಟಿ"ಯಲ್ಲಿನ ಜನರಿಗೆ ಕಳುಹಿಸಬಹುದಾದ ಅಧಿಕಾರವನ್ನು ಹೊಂದಿದೆ. Google ‌ನ ಹೇಳಿಕೆಯ ಪ್ರಕಾರ, ಪ್ರಸಿದ್ಧವಾದ facetime's Greynetನ ಬ್ಲಾಗ್‌ನಲ್ಲಿ ತಿಳಿಸಿರುವಂತೆ, ಸಂಸ್ಥೆಯು ಅಪಾಯಕಾರಿ ವರ್ಮ್‌ಗಾಗಿ ತಾತ್ಕಲಿಕ ಉಪಕರಣವೊಂದನ್ನು ಅಣಿಗೊಳಿಸಿದೆ.[೨೬]

HTTPS Not Obvious[ಬದಲಾಯಿಸಿ]

ಏಪ್ರಿಲ್ 17,2007ರ ಹೊತ್ತಿಗೆ, ಆರ್ಕುಟ್ ಲಾಗ್‌ಇನ್ ಸರ್ವರ್‌ಗಳ ಸುರಕ್ಷಿತ (https) ಬಳಕೆ ಹೆಚ್ಚಿನ ಕಾಲದವರೆಗೆ ಲಭ್ಯವಾಗುವುದಿಲ್ಲವೆಂದು ಬಳಕೆದಾರರು ವರದಿ ಮಾಡಲು ಆರಂಭಿಸಿದರು. Google ತಮ್ಮ ಮುಖ್ಯ ಲಾಗ್‌ಇನ್ ಆಗುವ ಪುಟವನ್ನು ದಕ್ಷತೆಯನ್ನು ಸುಧಾರಿಸುವ ಸಲುವಾಗಿ httpಗೆ ಬದಲಾಯಿಸಿತು, ಆದರೆ ನಿಜವಾದ ಲಾಗ್‌ಇನ್ httpsಯನ್ನು ಬಳಸಿಕೊಂಡು ಸುರಕ್ಷಿತವಾಗಿ ಹಾಗೆಯೇ iframeನಲ್ಲಿ ಉಳಿದಿತ್ತು.[೨೭] ಈ ಮಾಹಿತಿಗೆ Google ನಿಂದ ಸಾಕಷ್ಟು ಪ್ರಮಾಣದಲ್ಲಿ ಪ್ರಸಾರ ದೊರೆಯಲಿಲ್ಲ, ಮತ್ತು ಬಳಕೆದಾರರಿಗೆ ಜಾಲತಾಣದಲ್ಲಿ ನೋಡಬಹುದಾದ "ಸುರಕ್ಷಿತ ಕೊಂಡಿಯ" ಬೀಗವನ್ನು ಒದಗಿಸುವ ಯಾವುದೇ ಧೈರ್ಯವನ್ನು ನೀಡಲಿಲ್ಲ. ಜುಲೈ 17, 2007ರಂದು https ಮುಖಾಂತರ ವಿತರಿಸಲಾದ ನವೀಕೃತ ಲಾಗ್‌ಇನ್ ಪುಟಗಳು ಈ ವಿಷಯವನ್ನು ವಿವರಿಸಿತು.

ಚಟುವಟಿಕೆ ನಿರ್ವಹಣೆ ಮತ್ತು ಅಧಿಕೃತತೆ[ಬದಲಾಯಿಸಿ]

ಜೂನ್ 22, 2007ರಂದು ಸುಸಮ್ ಪಾಲ್ ಮತ್ತು ವಿಪುಲ್ ಅಗರ್ವಾಲ್ ಆರ್ಕುಟ್‌ನ ಭೇದ್ಯತೆಗೆ ಸಂಬಂಧ ಪಟ್ಟಂತಹ ಅಧಿಕೃತತೆ ವಿಷಯವನ್ನು ಕುರಿತು ಭದ್ರತಾ ಸಲಹೆಯನ್ನು ಪ್ರಕಟಿಸಿದರು.[೨೮] ಭೇದ್ಯತೆಯೆಂಬುದನ್ನು ಸೈಬರ್ ಕೆಫೆ ವಿಷಯದಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ, ಅಥವಾ ಸಮಾವೇಶ ಅಪಹರಣಕ್ಕೆ ಕಾರಣವಾಗಬಹುದಾದ ಮತ್ತು ಸಮರ್ಥವಾದ ಖಾತೆಗಳನ್ನು ದುರುಪಯೋಗಪಡಿಸಿಕೊಳ್ಳಬಹುದಾದ ದಾಳಿನಡೆಸುವಂತೆ ಮೂಗು ತೂರಿಸುವ ಚಟುವಟಿಕೆಯ ಸಂದರ್ಭದಲ್ಲಿ ಇದು ಅಪಾಯಕಾರಿಯಾಗಿದೆ. ಅಭೇದ್ಯತೆ ಎಂಬುದು ನಿಗಧಿಯಾಗಿದೆಯೋ ಇಲ್ಲವೊ ಎಂಬುದು ಇದುವರೆಗೂ ತಿಳಿದಿಲ್ಲ ಮತ್ತು ಇದರಿಂದ ಆರ್ಕುಟ್ ಬಳಕೆದಾರರು ಭೀತಿಕರವಾಗಿದೆ. ಒಂದು ವಾರದ ನಂತರ, ಅಂದರೆ ಜೂನ್ 29, 2007ರಂದು, Google ಮತ್ತು ಜಿಮೇಲ್ ನ ಅವಧಿಯನ್ನು ಅಪಹರಣಮಾಡುವಾಗ ಹೇಗೆ ಆರ್ಕುಟ್‌ನ ಅಧೀಕೃತೆಯ ವಿಷಯಗಳು ಶೋಷಣೆಗೊಳಗಾಗುತ್ತವೆ ಮತ್ತು ನಿರ್ಧಿಷ್ಟ ಕರಾರಿಗನುಗುಣವಾಗಿ ಅಧೀಕೃತ ಬಳಕೆದಾರರ ರಾಜಿಗೊಂಡ ಖಾತೆಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ವಿವರಿಸುವ ಇನ್ನೊಂದು ಭದ್ರತಾ ಶಿಫಾರಸ್ಸನ್ನು ಸುಸಮ್ ಪಾಲ್ ಪ್ರಕಟಿಸಿದರು. ಬಳಕೆದಾರರು ಲಾಗ್‌ಔಟ್ ಆದ ನಂತರವೂ ಎಸ್ಟು ಸಮಯಗಳವರೆಗೆ ಅವಧಿಯು ಜೀವಂತವಾಗಿರುತ್ತದೆ ಎಂಬುದನ್ನು ಪರೀಕ್ಷೆ ಮಾಡುವುದಕ್ಕೋಸ್ಕರ ಸುಸಮ್‌ ಪಾಲ್‌ ಅವರಿಂದ ಪ್ರಕಟಗೊಂಡ ಶಿಪಾರಸ್ಸನ್ನು ಆಧಾರವಾಗಿಟ್ಟುಕೊಂಡು ಜೋಸೆಫ್ ಹಿಕ್ ಒಂದು ಪ್ರಯೋಗವನ್ನು ಮಾಡಿದರು.[೨೯] ಬಳಕೆದಾರ ಲಾಗ್‌ಔಟ್ ಆದ ನಂತರದ 14 ದಿನಗಳವರೆವಿಗೂ ಚಟುವಟಿಕೆ ಕ್ರಿಯಾಶೀಲವಾಗಿರುತ್ತದೆ ಎಂಬುದನ್ನು ಅವರ ಪ್ರಯೋಗವು ಧೃಢೀಕರಿಸಿತು. ಲಾಗ್‌ಔಟ್ ನಂತರವೂ ಚಟುವಟಿಕೆಯು ನಿಷ್ಕ್ರಿಯಗೊಂಡಿಲ್ಲದ ಕಾರಣ ಅನಧಿಕೃತವಾಗಿ ನಿಯಂತ್ರಣ ಸಾಧಿಸಲ್ಪಟ್ಟ ಚಟುವಟಿಕೆಯನ್ನು ಚಟುವಟಿಕೆಯ ಅಪಹರಣಕಾರ ಇನ್ನು 14 ದಿನಗಳವರೆಗೂ ಬಳಸಬಹುದು ಎಂಬುದನ್ನು ಇದು ಪರೋಕ್ಷವಾಗಿ ತಿಳಿಸುತ್ತಿತು.[೩೦]

W32/KutWormer[ಬದಲಾಯಿಸಿ]

ಡಿಸೆಂಬರ್ 19,2007ರಂದು ಜಾವಸ್ಕ್ರಿಪ್ಟ್‌ನ ಆಧಾರದ ಮೇಲೆ ರೂಪುಗೊಂಡಿದ್ದ ವರ್ಮ್‌ವೊಂದು ವ್ಯಾಪಕವಾಗಿ ಹಾವಳಿಯನ್ನುಂಟು ಮಾಡಿತು. ಬ್ರೆಜಿಲ್‌ನ "ರೊಡ್ರಿಗೊ ಲ್ಯಾರ್ಕಡ" ಎಂಬ ಬಳಕೆದಾರ ಇದರ ಸೃಷ್ಟಿಕರ್ತ, ಬಳಕೆದಾರನನ್ನು ಇದು ಸ್ವಯಂ ಚಾಲಿತವಾಗಿ ವೈರಸ್ ಸಂಬಂಧಿ ಕಮ್ಯುನಿಟಿಗೆ ಸೇರಿಸುತ್ತದೆ ಮತ್ತು ಸ್ನೇಹಿತರ ಎಲ್ಲಾ ಸ್ಕ್ರ್ಯಾಪ್‌ಬುಕ್‌ಗಳ ಪ್ರತಿಗಳನ್ನು ಕಲುಷಿತಗೊಳಿಸುತ್ತದೆ, 700,000ಕ್ಕೂ ಅಧಿಕ ಆರ್ಕುಟ್ ಬಳಕೆದಾರರನ್ನು ಈ ವರ್ಮ್ ವ್ಯಾಪಿಸಿದೆ, ಇದು ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದ ವರ್ಮ್ ಆಗಿದೆ. ಈ ವರ್ಮ್ ಆರ್ಕುಟ್‌ನಿಂದ ಇತ್ತೀಚಿಗೆ ಪರಿಚಯಿಸಲಾದ ಸಾಧನದ ಮೂಲಕ ಹರಡುತ್ತದೆ ಇದು ಬಳಕದಾರರಿಗೆ HTMLಸಂಕೇತವನ್ನು ಬಳಸಿ ಸಂದೇಶವನ್ನು ಬರೆಯಬಹುದಾದ ಅವಕಾಶವನ್ನು ಒದಗಿಸುತ್ತದೆ. Flash/Javascript ವಿಷಯಗಳನ್ನು ಆರ್ಕುಟ್‌ನ ಸ್ಕ್ರ್ಯಾಪ್‌ಗಳಲ್ಲಿ ಬಳಸಬಹುದಾದ ಸಾಮರ್ಥ್ಯವನ್ನು ಇತ್ತೀಚೆಗಷ್ಟೆ ಪರಿಚಯಿಸಲಾಯಿತು.[೩೧][೩೨]

W32/Scrapkut worm[ಬದಲಾಯಿಸಿ]

ಮಾರ್ಚ್ 3, 2008ರಂದು w32/scapkut.worm ಎನ್ನುವ ವರ್ಮ್‌ವೊಂದು ಕಂಡು ಬಂದಿತು. ಈ ವರ್ಮ್ ಆರ್ಕುಟ್ ಬಳಕೆದಾರರ ಸ್ಕ್ರ್ಯಾಪ್‌ಗಳ ಮುಖಾಂತರ ತಾನೇತಾನಾಗಿ ಹರಡಲು ಪ್ರಯತ್ನಿಸಿತು, ಅದು ಯಾವ ರೀತಿ ಎಂದರೆ ಆ ಸ್ಕ್ರ್ಯಾಪ್‌ಗಳು ಈ ವರ್ಮ್‌ಗೆ ತಾನೇತಾನಾಗಿ ಲಿಂಕ್ ಆಗುವಂತೆ ಮಾಡುವ ಅಂಶಗಳನ್ನು ಒಳಗೊಂಡಿದ್ದವು. ಅಲಿಯಾಸಿಸ್ ಇದು ಒಂದು Downloader. Banload.ONK (GRISoft)

 • TR/Dldr.

Orkut. A (Avira)

 • Trojan-Downloader.Win32.

Banload.auf (IKARUS)

 • Trojan.DL.Win32.

Banload.dzm (Rising)

 • W32.

Scrapkut (Symantec)

ಇತರ ದಾಳಿಗಳು[ಬದಲಾಯಿಸಿ]

ಖಾಸಗಿ ಚಿತ್ರಸಂಪುಟದಲ್ಲಿನ ಬಿರುಕು[ಬದಲಾಯಿಸಿ]

2007ರ ಡಿಸೆಂಬರ್ ನಲ್ಲಿ "ರೊಡ್ರಿಗೊ ಲ್ಯಾರ್ಕಡ" ಎಂಬ ಹೆಸರಿನ ಬ್ರೆಜಿಲ್ ದೇಶದ ಗಣಕಯಂತ್ರ ನಾಶಕನೊಬ್ಬ ಹಸ್ತ ಪ್ರತಿಯೊಂದನ್ನು ಪ್ರಕಟಿಸಿದನು ಅದು ಬೇರೆ ಬಳಕೆದಾರರ ಖಾಸಗಿ ಛಾಯಾಚಿತ್ರಗಳನ್ನು ಹಾಳು ಮಾಡಲು ಎಡೆಮಾಡಿಕೊಟ್ಟಿತ್ತು. ಛಾಯಾಚಿತ್ರಗಳ urlಗಳನ್ನು ಸಹ ನಾಶ ಮಾಡುವಷ್ಟು, ಸರಳವಾಗಿ ಅವುಗಳು ರಚನೆಗೊಂಡಿದ್ದವು. ಈ ಕನ್ನಹಾಕುವ ಪ್ರಕ್ರಿಯೆಯಿಂದಾಗಿ ಆರ್ಕುಟ್ ತಂಡವು ಛಾಯಾಚಿತ್ರಗಳನ್ನು ಭದ್ರಪಡಿಸುವ ಹೊಸ ಸಲಕರಣೆಗಳನ್ನು ಕಾರ್ಯಗತಗೊಳಿಸುವಂತಾಯಿತು.[ಸೂಕ್ತ ಉಲ್ಲೇಖನ ಬೇಕು]

ಕಾನೂನು ಬದ್ಧ ವಿವಾದಗಳು[ಬದಲಾಯಿಸಿ]

ಭಾರತ[ಬದಲಾಯಿಸಿ]

ಅಕ್ಟೋಬರ್ 10, 2006ರಲ್ಲಿ ಬಾಂಬೆ ಹೈಕೋರ್ಟಿನ ಔರಂಗಬಾದ್‌‍ ಪೀಠವು ಭಾರತದ ವಿರುದ್ಧ ವೈರತ್ವವನ್ನು ಕೂಡಿಸುವ ಅಭಿಯಾನಕ್ಕೆ ಸಂಬಂಧಿಸಿದಂತೆ Googleಗೆ ಒಂದು ಆದೇಶ ಹೊರಡಿಸಿತ್ತು.[೩೩] ಆರ್ಕುಟ್‌ನ ಒಂದು ಸಮುದಾಯದಲ್ಲಿ ’ನಾವು ಭಾರತವನ್ನು ದ್ವೇಷಿಸುತ್ತೇವೆ’ ಎಂಬ ಕರೆಯನ್ನು ಇದು ಸೂಚಿಸುತ್ತಿದ್ದು, ಮೊದಲಿನಿಂದಲೂ ಭಾರತೀಯ ಧ್ವಜ ಸುಟ್ಟಿರುವ ಒಂದು ಚಿತ್ರಣ ಮತ್ತು ಕೆಲವು ಭಾರತ ವಿರೋಧಿ ಅಂಶವನ್ನು ಹೊಂದಿತ್ತು.[೩೪] ಔರಂಗಬಾದ್‌ನ ವಕೀಲನಿಂದ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯಿಸಿ ಹೈಕೋರ್ಟ್‌ ಆದೇಶ ಹೊರಡಿಸಿತ್ತು. Google‌ ಪ್ರತಿಕ್ರಿಯಿಸಲು ಆರು ವಾರಗಳನ್ನು ತೆಗೆದುಕೊಂಡಿತ್ತು. ಮನವಿ ಸಲ್ಲಿಸುವುದಕ್ಕೂ ಮುನ್ನ, ಅನೇಕ ಆರ್ಕುಟ್‌ ಬಳಕೆದಾರರು ಈ ಸಮುದಾಯವನ್ನು ಗಮನಿಸಿ ಅರ್ಜಿಯನ್ನು ದಾಖಲಿಸಲಾಗಿತ್ತು ಮತ್ತು ಆರ್ಕುಟ್‌ನಲ್ಲಿನ ಅವರ ಸಂಪರ್ಕಗಳನ್ನು ಮೇಲ್‌ ಅಥವಾ ಮೇಸೇಜ್‌ ಮಾಡುವ ಮೂಲಕ ಈ ಸಮುದಾಯ ನಕಲಿಯಾಗಿದೆ ಎಂದು ತಿಳಿಸಲಾಗಿತ್ತು, ಅದು ಆರ್ಕುಟ್‌ನ್ನು ತೆಗೆದುಹಾಕುವಲ್ಲಿ ಮಹತ್ತರ ಪರಿಣಾಮವನ್ನು ಬೀರಿತ್ತು. ಈಗ ಈ ಸಮುದಾಯವನ್ನು ತೆಗೆದುಹಾಕಲಾಗಿದೆ, ಆದರೆ ’ಯಾರೂ ಭಾರತವನ್ನು ದ್ವೇಷಿಸುತ್ತಾರೋ ನಾವು ಅವರನ್ನು ದ್ವೇಷಿಸುತ್ತೇವೆ’ ಎಂಬ ಅನೇಕ ಸಮುದಾಯಗಳು ಹುಟ್ಟಿಕೊಂಡವು. ಭಾರತದ 60ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅರ್ಕುಟ್‌ನ ಮುಖಪುಟ ಹೆಚ್ಚು ಆಕರ್ಷಿತವಾಗಿತ್ತು. ಈ ವಿಭಾಗವು ಸಾಮಾನ್ಯವಾಗಿ ವಿವಿಧ ಜನರ ಫೋಟೊಗಳನ್ನು ಪ್ರದರ್ಶಿಸುತ್ತಿತ್ತು, ಒಂದು ಸುಂದರವಾದ ಆರ್ಕುಟ್‌‍ ಲೊಗೊವನ್ನು ತೋರಿಸುತ್ತಿತ್ತು. ಆರ್ಕುಟ್‌ ಪದವು ದೇವನಾಗರಿ ಲಿಪಿಯಲ್ಲಿ ಬರೆಯಲ್ಪಟ್ಟಿತ್ತು ಮತ್ತು ಭಾರತದ ರಾಷ್ಟ್ರೀಯ ಬಣ್ಣದಲ್ಲಿ ವರ್ಣ ಹೊಂದಿತ್ತು. ಆ ಲೊಗೊ ಮೇಲೆ ನೇರವಾಗಿ ಕ್ಲಿಕ್‌ ಮಾಡಿದರೆ ಆರ್ಕುಟ್‌ ಇಂಡಿಯಾ ಪ್ರೊಡಕ್ಟ್‌ ಮ್ಯಾನೇಜರ್‌, ಮೆನು ರೆಕಿ[೩೫] ಅವರ ಆರ್ಕುಟ್‌ ಆಂತರಿಕ ಬ್ಲಾಗ್‌ನಲ್ಲಿನ ಬರಹವೊಂದಕ್ಕೆ ಆ ಲಿಂಕ್ ನಿರ್ದೇಶಿಸುತ್ತಿತ್ತು. ಕೆಲವು ಯುವ ಜನರು ಈ ತಾಣದಲ್ಲಿ ನಕಲಿ ವ್ಯಕ್ತಿಚಿತ್ರಗಳಿಂದ ಆಕರ್ಷಿತರಾಗಿದ್ದು, ನಂತರದಲ್ಲಿ ಅವರ ಹತ್ಯೆಯಾದ ನಂತರ ಕೆಲವು ಮಾಧ್ಯಮಗಳು ಆರ್ಕುಟ್‌‍ ವಿರುದ್ಧ ಬೊಬ್ಬೆಯಿಟ್ಟವು.[೩೬] ನವೆಂಬರ್ 24ರಂದು ಸಾಮಾಜಿಕ ಜಾಲತಾಣ ಆರ್ಕುಟ್‌ನಲ್ಲಿನ, ಶಿವಾಜಿ ವಿರೋಧಿ ಅಂತರ್ಜಾಲ ಸಮುದಾಯ ಗುಂಪುಗಳನ್ನು ನಿಷೇಧಿಸಲು ಒತ್ತಾಯಿಸಿರುವ ಅರ್ಜಿಗಳ ಸಂಬಂಧವಾಗಿ ದಾಖಲು ಮಾಡುವಂತೆ ಬಾಂಬೇ ಹೈಕೋರ್ಟ್‌ ರಾಜ್ಯ ಸರ್ಕಾರವನ್ನು ಕೇಳಿತ್ತು.[೩೭] ಇತ್ತೀಚೆಗೆ, ಪುಣೆ ಗ್ರಾಮೀಣ ಪೊಲೀಸರು ಮಾದಕವಸ್ತುಗಳಿಂದ ತುಂಬಿರುವ ಒಂದು ರೇವ್‌ಪಾರ್ಟಿಯನ್ನು ಒಡೆದುಹಾಕಿದ್ದರು.[೩೮] ಈ ಆರೋಪವು ಮಾದಕ ವಸ್ತು ವಿರೋಧಿ ಕಾನೂನುಗಳು, ನರ್ಕೋಟಿಕ್‌ ಡ್ರಗ್ಸ್‌ (ಭಾರತೀಯ)ಮತ್ತು ಸೈಕೋಟ್ರೊಪಿಕ್ಸ್‌ ಸಬ್‌ಸ್ಟಾನ್ಸ್‌ ಆಕ್ಟ್‌ 1985(NDPS‌)ಗಳ ಕೆಳಗೆ ಶಿಕ್ಷಾರ್ಹವಾಗುತ್ತದೆ. NDPS ಅಲ್ಲದೇ, ಕೆಲವು ಮಾದ್ಯಮ ವರದಿಗಳ ಪ್ರಕಾರ, ಇಂತಹ ವಿವಿಧ ಡ್ರಗ್‌ ನಿಂದನೆಗಳಿಗೆ ಆರ್ಕುಟ್‌‌ನ್ನು ಸಂವಹನ ಮಾಧ್ಯಮವಾಗಿ ನಂಬಿದ್ದ ಕಾರಣದಿಂದಾಗಿ ಪೊಲೀಸರು ಶಿಕ್ಷಾರ್ಹ ವಿಷಯಗಳನ್ನು ಮಾಹಿತಿ ತಂತ್ರಜ್ಞಾನ ಕಾಯಿದೆ 2000 ಅಡಿಯಲ್ಲಿ ಪೂರ್ವನಿಯೋಜಿತವಾಗಿ ಆರೋಪಿಸಿದ್ದಾರೆ.[೩೯] ಆರ್ಕುಟ್‌ನಲ್ಲಿರುವ ಸೌಲಭ್ಯಗಳ ಆಕರ್ಷಣೆ ಮತ್ತು ಆರ್ಕುಟ್‌ ದುರ್ಬಳಕೆಯಿಂದ ದೂರುಗಳು ಹೆಚ್ಚಾದರೆ ಕಾನೂನುರೀತ್ಯಾ ಕ್ರಮ ಜರುಗಿಸುವುದಾಗಿ ಆರ್ಕುಟ್‌ ನೊಂದಿಗೆ ಒಪ್ಪಂದ ಮಾಡಿಕೊಂಡು ಸೈಬರ್ ಪೊಲೀಸರು ಭಾರತದಲ್ಲಿ ಪ್ರವೇಶಿಸಿದ್ದಾರೆ.[೪೦]

ಬ್ರೆಜಿಲ್‌[ಬದಲಾಯಿಸಿ]

ಡ್ರಗ್ಸ್‌ ಮಾರಾಟ ಮತ್ತು ಮಕ್ಕಳ ಕಾಮ ಪ್ರಚೋದಕ ಸಾಹಿತ್ಯವನ್ನು ಮಾರಾಟಮಾಡುವಲ್ಲಿ ಆರ್ಕುಟ್ ಅನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ನಂಬಲಾಗಿದ್ದು, ಸೆಪ್ಟೆಂಬರ್ 28ರ ಒಳಗೆ ಎರಡು ಡಜನ್‌ ಬ್ರೆಜಿಲಿಯನ್‌ ಜನಾಂಗದ ಬಗ್ಗೆ ಆರ್ಕುಟ್‌ ಬಳಕೆದಾರರ ಮಾಹಿತಿ ಪಟ್ಟಿಯನ್ನು ಬಿಡುಗಡೆ ಮಾಡುವಂತೆ, ಬ್ರೆಜಿಲಿಯನ್‌ ಫೆಡರಲ್‌ ನ್ಯಾಯಾಧೀಶ ಜೊಸೊ ಮಾರ್ಕೊಸ್‌‍ ಲುನಾರ್ಡೆಲ್ಲಿ Google‌‌ಗೆ ಆಗಸ್ಟ್‌ 22, 2006ರಂದು ಆದೇಶಿಸಿದ್ದರು. ಈ ಮಾಹಿತಿಯು ಬ್ರೆಜಿಲಿಯನ್‌ ಸರ್ಕಾರಕ್ಕೆ ರೂಪಾಂತರ ಹೊಂದುವಷ್ಟರೊಳಗೆ ದಿನಕ್ಕೆ $23,000 ದಂಡ ಪಾವತಿಸುವಂತೆ ನ್ಯಾಯಾಧೀಶರು Google‌‌ಗೆ ಆದೇಶಿಸಿದ್ದರು. ಬ್ರೆಜಿಲಿಯನ್‌ ಸರ್ಕಾರದ ಪ್ರಕಾರ, ಮಕ್ಕಳ ಕಾಮಪ್ರಚೋದಕ ಸಾಹಿತ್ಯ ಮತ್ತು ದ್ವೇಷದ ಹೇಳಿಕೆಯನ್ನು ಹರಡುತ್ತಿದ್ದ ವ್ಯಕ್ತಿಗಳನ್ನು ಗುರುತಿಸಲು ಈ ಮಾಹಿತಿಯನ್ನು ಬಳಸಬಹುದಾಗಿತ್ತು.[೪೧] ಸೆಪ್ಟೆಂಬರ್‌ 27, 2006 ರಂದು ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡುವುದಿಲ್ಲ ಎಂದು Google ಘೋಷಿಸಿತು ಕಾರಣ ಕೇಳಲ್ಪಟ್ಟ ಮಾಹಿತಿಯು U.S.ನ Google‌ ಸೇವೆಗೆ ಸಂಬಂಧಿಸಿತ್ತು ಹೊರತು ಬ್ರೆಜಿಲ್‌ನ Google‌ ಸೇವೆಗೆ ಸಂಬಂಧಿಸಿದ್ದಾಗಿರಲಿಲ್ಲ, ಹಾಗಾಗಿ ಇದು ಬ್ರೆಜಿಲ್‌ನ ಕಾನೂನುಗಳಿಗೆ ಸಂಬಂಧಿಸಿದ ವಿಶಯವಾಗಿರಲಿಲ್ಲ.[೪೨]

ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. "ಆರ್ಕೈವ್ ನಕಲು". Archived from the original on 2007-11-13. Retrieved 2009-11-18.
 2. "ಬ್ರೆಜಿಲ್‌ನಲ್ಲಿ ಆರ್ಕುಟ್‌ ಮೊದಲನೆಯದು". Archived from the original on 2010-05-13. Retrieved 2009-11-18.
 3. "Orkut Demographics". orkut. Archived from the original on 2010-05-05. Retrieved 2009-05-13.
 4. Folha Online - Informática - Orkut passa para as mãos do ; empresa muda diretoria no país - 07/08/2008
 5. "Estadao.com.br :: Tecnologia:: Google Brasil assumirá o controle mundial do Orkut". Archived from the original on 2009-12-08. Retrieved 2009-11-18.
 6. "ಆರ್ಕೈವ್ ನಕಲು". Archived from the original on 2011-09-27. Retrieved 2009-11-18.
 7. G1 > Tecnologia - NOTÍCIAS - Filial brasileira do Google vai assumir controle mundial do Orkut
 8. http://community.livejournal.com/blog_sociology/90186.html
 9. http://www.boingboing.net/2004/07/18/brazilians-outnumber.html
 10. http://slashdot.org/article.pl?sid=04/07/17/2243232
 11. "ಆರ್ಕೈವ್ ನಕಲು". Archived from the original on 2009-02-01. Retrieved 2009-11-18.
 12. "ದೇಶದ ಪ್ರಕಾರ ಆರ್ಕುಟ್‌ನ ಬಳಕೆದಾರರ ದಟ್ಟಣೆ". Archived from the original on 2014-05-30. Retrieved 2009-11-18.
 13. ""How are the friends on my homepage ordered?"". Archived from the original on 2006-10-23.
 14. ಆರ್ಕುಟ್‌ ಬ್ಲಾಗ್‌: ನೀವು ಭಾರತದಲ್ಲಿದ್ದರೆ ಮತ್ತು ನೋಟದ ಪರಿವರ್ತನೆಯ ಭಾವನೆಯನ್ನು ಅನುಭವಿಸಿ
 15. "Fake Orkut profile of schoolgirl posted". Rediff. February 6, 2007. Retrieved 2007-07-10.
 16. "Invisible picture on orkut: become invisible". Orkut proxy and tricks. June 19, 2007. Archived from the original on 2007-07-06. Retrieved 2007-07-10.
 17. ಬ್ರೆಜಿಲಿಯನ್‌ ಆರ್ಕುಟ್‌ನಲ್ಲಿ ಜನಾಂಗೀಯತೆ
 18. "Racismo na internet chega à Justiça" (in Portuguese). Estadão. February 1, 2006. Archived from the original on 2007-06-25. Retrieved 2007-07-10.{{cite news}}: CS1 maint: unrecognized language (link)
 19. "Ministério Público pede que Google explique crimes no Orkut" (in Portuguese). Folha Online. March 10, 2006. Retrieved 2007-07-10.{{cite news}}: CS1 maint: unrecognized language (link)
 20. "ಆರ್ಕುಟ್‌ ಮತ್ತು ಇರಾನ್‌". Archived from the original on 2010-09-09. Retrieved 2009-11-18.
 21. "ಆರ್ಕುಟ್‌ ಬಗ್ಗೆ". Archived from the original on 2010-09-21. Retrieved 2009-11-18.
 22. "ಗ‍ಲ್ಫ್‌ನ್ಯೂಸ್: Orkut.com 'ಬೀಯಿಂಗ್ ಯೂಸ್ಡ್ ಫಾರ್ ಇಮ್ಮಾರಲ್ ಆ‍ಯ್‌ಕ್ಟಿವಿಟೀಸ್". Archived from the original on 2009-05-02. Retrieved 2009-11-18.
 23. "ಗಲ್ಫ್‌ನ್ಯೂಸ್ : Orkut.com ಬ್ಯಾನ್ಡ್ ಇನ್ UAE ". Archived from the original on 2009-02-28. Retrieved 2009-11-18.
 24. ಆರ್ಕುಟ್‌ ಬ್ಲಾಕ್ಡ್ ಇನ್ ಸೆಕ್ಸ್ ರೋ ಮೀಡಿಯಾ ಅಂಡ್ ಅಡ್ವರ್ಟೈಸಿಂಗ್.
 25. "ಗಲ್ಫ್ ಡೈಲಿ ನ್ಯೂಸ್". Archived from the original on 2007-10-26. Retrieved 2023-12-05.
 26. ೨೬.೦ ೨೬.೧ "Data-Theft Worm Targets Google's Orkut". SpywareGuide. June 16, 2006. Archived from the original on 2007-06-23. Retrieved 2007-07-10.
 27. http://groups.google.com/group/orkut-help-profiles/browse_frm/thread/8fd95fe3aae5b839/204595c9069fb9d9?lnk=gst&q=https+login&rnum=1#204595c9069fb9d9
 28. "Orkut Authentication Issues - Full Disclosure".
 29. "Google/Orkut Authentication Issue PoC".
 30. "Google/Orkut Session Expiry PoC - Results".
 31. ವರ್ಮ್ ಸ್ಕ್ವಿರ್ಮ್ಸ್ ಥ್ರೂ Google ಆರ್ಕುಟ್ [ಶಾಶ್ವತವಾಗಿ ಮಡಿದ ಕೊಂಡಿ]
 32. ವರ್ಮ್ ಹಿಟ್ಸ್ Google ಆರ್ಕುಟ್ - washingtonpost.com
 33. "Google's social networking site in trouble". ದಿ ಟೈಮ್ಸ್ ಆಫ್‌ ಇಂಡಿಯಾ. October 10, 2006. Retrieved 2007-07-10.
 34. "Police planning to ban Orkut in India". February 22, 2007. Retrieved 2007-07-10.
 35. ಆರ್ಕು‌ಟ್‌ ಬ್ಲಾಗ್‌: ಪೋಸ್ಟ್ ಟು ಕಮೆಮೊರೇಟ್ 60 ಇಯರ್ಸ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್.
 36. "ಇಂಡಿಯಾ ಪಿಆರ್ ವೈರ್- ಫ್ರೆಂಡ್ಸ್ ಆಫ್ ಸ್ಲೈನ್ ಟೀನ್ ಅರೆಸ್ಟೆಡ್, ಆರ್ಕುಟ್ ಆ‍ಯ್‌೦ಗಲ್ ಬೀಯಿಂಗ್ ಪ್ರೋಬ್ಡ್". Archived from the original on 2007-09-26. Retrieved 2009-11-18.
 37. "File reply on plea for ban on Orkut: HC". Rediff. November 23, 2006. Retrieved 2007-07-10.
 38. "Pune rural police crack a rave party". March 5, 2007. Retrieved 2007-07-10.
 39. "Pune rave party breached IT Act?". Ciol. March 6, 2007. Archived from the original on 2007-03-08. Retrieved 2007-07-10.
 40. "Police tie up with Orkut". The Hindu. November 20, 2007. Archived from the original on 2007-12-02. Retrieved 2007-11-29.
 41. "Meninas a um clique do abuso sexual com fotos sensuais em blogs e no orkut". Revista Orkut.etc.br. May 10, 2006. Archived from the original on 2007-07-15. Retrieved 2007-07-10.
 42. ಆರ್ಕುಟ್‌ ಮತ್ತು ಬ್ರೆಜಿಲಿಯನ್‌ ಕಾನೂನುಗಳು

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಆರ್ಕುಟ್&oldid=1201644" ಇಂದ ಪಡೆಯಲ್ಪಟ್ಟಿದೆ